Remove ads
ಭಾರತದ ಒಂದು ರಾಜ್ಯ From Wikipedia, the free encyclopedia
ಕರ್ನಾಟಕವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ. ೨೦೦೧ ರ ಜನಗಣತಿಯಂತೆ, ೫ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಮಾತ್ರ ೧.೩೦ ಕೋಟಿಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರ. ಇತರ ಪ್ರಮುಖ ನಗರಗಳೆಂದರೆ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬಳ್ಳಾರಿ, ಕಲಬುರಗಿ, ವಿಜಯಪುರ, ಕಾರವಾರ ಮತ್ತು ಬೆಳಗಾವಿ.
ಕರ್ನಾಟಕ | |
---|---|
ರಾಜ್ಯ | |
ಕರ್ನಾಟಕ ರಾಜ್ಯ | |
ಮೇಲಿಂದ, ಎಡದಿಂದ ಬಲಕ್ಕೆ: ಬೆಂಗಳೂರು, ಗಗನ ಮಹಲ್, ಗೊಮ್ಮಟೇಶ್ವರ ವಿಗ್ರಹ, ಗೋಲ್ ಗುಂಬಜ್, ಶಿವನ ಸಮುದ್ರ ಜಲಪಾತ, ಬೀದರ್ ಕೋಟೆ, ಮುರುಡೇಶ್ವರ, ಹಂಪಿ ವಿರೂಪಾಕ್ಷ ದೇವಾಲಯ, ಹಾರಂಗಿ ಜಲಾಶಯ ಮತ್ತು ತಡಿಯಂಡಮೊಳ್ | |
Etymology: ಕನ್ನಡಿಗರು ಇರುವ ಪ್ರದೇಶ | |
Nickname: ಭಾರತದ ಐಟಿ ರಾಜಧಾನಿ | |
Motto: | |
Anthem: ಜೈ ಭಾರತ ಜನನಿಯ ತನುಜಾತೆ [೧] | |
Coordinates: 12.97°N 77.50°E | |
Country | India |
Region | ದಕ್ಷಿಣ ಭಾರತ |
Before was | ಮೈಸೂರು ರಾಜ್ಯ |
Formation | ೧ನೇ ನವೆಂಬರ್ ೧೯೫೬ |
Capital | [[ಬೆಂಗಳೂರು]] |
Largest city | ರಾಜಧಾನಿ |
Largest metro | ಬೆಂಗಳೂರು |
Districts | ೩೧ ಜಿಲ್ಲೆಗಳು (೪ ವಿಭಾಗ) |
Government | |
• Body | Government of ಕರ್ನಾಟಕ |
• Governor | ಥಾವರ್ ಚಂದ್ ಗೆಹ್ಲೊಟ್ |
• Chief minister | ಸಿದ್ಧರಾಮಯ್ಯ (ಕಾಂಗ್ರೆಸ್) |
• Deputy chief minister | ಡಿ. ಕೆ. ಶಿವಕುಮಾರ್ (ಕಾಂಗ್ರೆಸ್) |
• Chief secretary | ರಜನೀಶ್ ಗೋಯಲ್ (ಭಾ.ಆ.ಸೇ.)[೩] |
Legislature | ದ್ವಿಸದನ ಪದ್ಧತಿ |
• Council | Karnataka Legislative Council (೭೫ ಸ್ಥಾನಗಳು) |
• Assembly | ಕರ್ನಾಟಕ ವಿಧಾನಸಭೆ (೨೨೪ ಸ್ಥಾನಗಳು) |
National Parliament | Parliament of India |
• Rajya Sabha | ೧೨ ಸ್ಥಾನಗಳು |
• Lok Sabha | ೨೮ ಸ್ಥಾನಗಳು |
High Court | ಕರ್ನಾಟಕ ಉಚ್ಛ ನ್ಯಾಯಾಲಯ |
Area | |
• Total | ೧,೯೧,೭೯೧ km೨ (೭೪,೦೫೧ sq mi) |
• Rank | ೬ನೇ |
Dimensions | |
• Length | ೭೫೦ km (೪೭೦ mi) |
• Width | ೪೦೦ km (೨೦೦ mi) |
Elevation | ೪೬೦ m (೧,೫೧೦ ft) |
Highest elevation | ೧,೯೨೫ m (೬,೩೧೬ ft) |
Lowest elevation | -೧ m (−೩ ft) |
Population (೨೦೧೧)[೬] | |
• Total | ಟೆಂಪ್ಲೇಟು:IncreaseNeutral ೬೧೧೩೦೭೦೪ |
• Rank | ೮ನೆ |
• Density | ೩೨೦/km೨ (೮೦೦/sq mi) |
• Urban | ೩೮.೬೭% |
• Rural | ೬೧.೩೩% |
Demonym(s) | ಕನ್ನಡಿಗ (ಪುರುಷವಾಚಕ ಮತ್ತು ಬಹುವಚನ) ಕನ್ನಡತಿ (ಸ್ತ್ರೀವಾಚಕ) |
Language | |
• Official | ಕನ್ನಡ[೭][೮] |
• Official script | ಕನ್ನಡ ಲಿಪಿ |
GDP | |
• Total (೨೦೨೪-೨೫) | ₹28.09 ಟ್ರಿಲಿಯನ್ ಯುಎಸ್$೬೨೩.೬ ಶತಕೋಟಿ) |
• Rank | ೫ |
• Per capita | ₹೩,೩೨,೯೨೬ (ಯುಎಸ್$೭,೩೯೦.೯೬) (೫) |
Time zone | UTC+05:30 (IST) |
ISO 3166 code | IN-KA |
Vehicle registration | KA |
HDI (೨೦೨೨) | ೦.೭೦೬ High[೧೦] (೧೫) |
Literacy (೨೦೧೧) | ೭೫.೩೬%[೧೧] (೨೩) |
Sex ratio (೨೦೧೧) | ೯೭೩♀/.೧೦೦೦ ♂ (೬) |
Website | www |
Symbols of ಕರ್ನಾಟಕ | |
Song | ಜೈ ಭಾರತ ಜನನಿಯ ತನುಜಾತೆ [೧೨] |
ಪಕ್ಷಿ | Indian roller |
Flower | ಕಮಲದ ಹೂ |
Tree | ಗಂಧದ ಮರ |
State highway mark | |
State highway of ಕರ್ನಾಟಕ KA SH1 - KA SH188 | |
List of Indian state and union territory symbols |
೧೯೭೩ಕ್ಕೆ ಮೊದಲು ಕರ್ನಾಟಕದ ಹೆಸರು ಮೈಸೂರು ರಾಜ್ಯ ಎಂದಿತ್ತು.ಇದಕ್ಕೆ ಕಾರಣ ಕರ್ನಾಟಕ ಏಕೀಕರಣದ ಮೊದಲ ಸೃಷ್ಟಿ ಮೈಸೂರು ಮಹಾಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತ-ಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು. "ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ ಕಪ್ಪು ಮಣ್ಣಿನ ನಾಡು, ಅಥವಾ "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.[೧೩]
ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳಿಗೆ ನೆಲೆಬೀಡಾಗಿತ್ತು. ಈ ಸಾಮ್ರಾಜ್ಯಗಳಿಂದ ಆಶ್ರಯ ಪಡೆದಿದ್ದ ಅನೇಕ ತತ್ವಜ್ಞಾನಿಗಳು ಮತ್ತು ಕವಿಗಳಿಂದ ಆರಂಭಿಸಲ್ಪಟ್ಟಿರುವ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯಕ ಚಳುವಳಿಗಳು ಇಂದಿನವರೆಗೂ ನಡೆದುಕೊಂಡು ಬಂದಿವೆ. ಕನ್ನಡ ಭಾಷೆಯ ಸಾಹಿತಿಗಳು ಭಾರತದಲ್ಲಿ ಅತಿ ಹೆಚ್ಚು (ಹಿಂದಿ ಭಾಷೆಯಲ್ಲಿ ಬಿಟ್ಟು) ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ.[೧೪]
Bengaluru city ,Karnataka state, India
ಕರ್ನಾಟಕ ರಾಜ್ಯದ ಚಿಹ್ನೆಗಳು | |
ಭಾಷೆ | ಕನ್ನಡ |
ಚಿಹ್ನೆ | ಗಂಡಬೇರುಂಡ |
ನಾಡಗೀತೆ | ಜಯ ಭಾರತ ಜನನಿಯ ತನುಜಾತೆ ಕವಿ:ಕುವೆಂಪು |
ಕರ್ನಾಟಕದ ಹೆದ್ದಾರಿಗಳು : ಕರ್ನಾಟಕ ರಾಜ್ಯದ ಹೆದ್ದಾರಿಗಳು ರಾಜ್ಯದ ಪ್ರಮುಖ ಮಾರ್ಗಗಳಾಗಿದ್ದು, ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರ ಹಾಗೂ ಪಟ್ಟಣಗಳನ್ನು ಸಂಪರ್ಕಿಸುತ್ತವಲ್ಲದೆ, ರಾಜ್ಯದಲ್ಲಿನ ಮತ್ತು ನೆರೆಯ ರಾಜ್ಯಗಳಲ್ಲಿನ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತವೆ. ಅವುಗಳನ್ನು ೫ ಭಾಗಗಳಾಗಿ ವಿಂಗಡಿಸಲಾಗಿದೆ.
ವಾಯುವ್ಯ ಕರ್ನಾಟಕದ ಎಲ್ಲ ಜಿಲ್ಲೆಗಳು ಬಾಂಬೆ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದರೆ ಈಶಾನ್ಯ ಕರ್ನಾಟಕದ ಬಹುತೇಕ ಜಿಲ್ಲೆಗಳು ಹೈದರಾಬಾದ್ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿವೆ, ತುಳುನಾಡಿನ ಜಿಲ್ಲೆಗಳು ಮದ್ರಾಸ್ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದರೆ ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. ೧೯೫೬ ರಲ್ಲಿ ಬಾಂಬೆ, ಹೈದರಾಬಾದ್, ಮದ್ರಾಸ್ ರಾಜ್ಯಗಳಿಂದ ಬೇರ್ಪಟ್ಟ ಜಿಲ್ಲೆಗಳು ಹಾಗೂ ಕೊಡಗು, ಮೈಸೂರು ರಾಜ್ಯಕ್ಕೆ ಸೇರಿಕೊಂಡು ವಿಶಾಲ ಮೈಸೂರು ರಾಜ್ಯ ಉದಾಯವಾಯಿತು. ಹಾಗೂ ಕಾಲಾನಂತರದಲ್ಲಿ ಮೈಸೂರು ರಾಜ್ಯ ಕರ್ನಾಟಕವಾಯಿತು.
ಈಶಾನ್ಯ ಕರ್ನಾಟಕ:
ವಾಯುವ್ಯ ಕರ್ನಾಟಕ:
ಹಳೇ ಮೈಸೂರು:
ತುಳುನಾಡು:
ಕೊಡಗು:
ರಾಜ್ಯದ ೬೦% ಭಾಗ ನಯಿಸ್ (gneiss) ಗಳು, ಪೆಡಸುಕಲ್ಲುಗಳು (ಗ್ರಾನೈಟ್) ಹಾಗು ಚಾರ್ನೊಕೈಟ್ ಬಂಡೆಗಳಿಂದ ಕೂಡಿರುವ ಆರ್ಕಿಯನ್ ಸಂಕೀರ್ಣದಿಂದ ಆವೃತವಾಗಿದೆ. ಭೂರಚನೆಯ ತೃತೀಯ ಅವಧಿಯ ಆದಿಯಲ್ಲಿ ಜ್ವಾಲಾಮುಖಿ ಚಟುವಟಿಕೆಯ ನಿಲುಗಡೆಯ ನಂತರ ನಿರ್ಮಾಣ ವಾದ ಲ್ಯಾಟರೈಟ್ ಹೊದಿಕೆಗಳನ್ನು ದಖನ್ ಟ್ರ್ಯಾಪ್ಸಲ್ಲಿರುವ ಹಲವು ಜಿಲ್ಲೆಗಳಲ್ಲಿ ಕಾಣಬಹುದು.
ಕೃಷಿ ಸಾಮರ್ಥ್ಯದ ಆಧಾರದ ಮೇಲೆ ಕರ್ನಾಟಕದಲ್ಲಿರುವ ಮಣ್ಣನ್ನು ಆರು ಪ್ರಕಾರಗಳಾಗಿ ವಿಂಗಡಿಸಬಹುದು:
ಜಿಲ್ಲಾ | ಜಿಲ್ಲಾ ಸರಾಸರಿ ವಾರ್ಷಿಕ ಮಳೆ (ಮಿಮೀ) |
---|---|
ಬೆಂಗಳೂರು ನಗರ | 978 |
ಬೆಂಗಳೂರು ಗ್ರಾಮೀಣ | 885 |
ಚಿತ್ರದುರ್ಗ | 573 |
ದಾವಣಗೆರೆ | 700 |
ಕೋಲಾರ | 744 |
ಶಿವಮೊಗ್ಗಾ | 1813 |
ತುಮಕೂರು | 688 |
ಬಾಗಲಕೋಟೆ | 562 |
ಬೆಳಗಾವಿ | 808 |
ವಿಜಾಪುರ | 578 |
ಧಾರವಾಡ | 772 |
ಗದಗ | 612 |
ಹಾವೇರಿ | 753 |
ಉತ್ತರ ಕನ್ನಡ | 2835 |
ಬಳ್ಳಾರಿ | 636 |
ಬೀದರ್ | 847 |
ಗುಲ್ಬರ್ಗಾ | 777 |
ಕೊಪ್ಪಳ | 572 |
ರಾಯಚೂರು | 621 |
ಚಾಮರಾಜನಗರ | 751 |
ಚಿಕ್ಕಮಗಳೂರು | 1925 |
ದಕ್ಷಿಣ ಕನ್ನಡ | 3975 |
ಹಾಸನ | 1031 |
ಕೊಡಗು | 2718 |
ಮಂಡ್ಯ | 806 |
ಮೈಸೂರು | 798 |
ಉಡುಪಿ | 4119[೧೮] |
ಒಟ್ಟು ೩೧ ಜಿಲ್ಲೆಗಳು
ಕನ್ನಡ ಮಾತನಾಡುವವರು ಎಂದು ಜನಗಣತಿ ನೀಡಿರುವ ಅಂಕಿ-ಅಂಶಗಳಲ್ಲಿ ಬಡಗ ಭಾಷಿಗರು (1,33,550 ಜನ), ಕುರುಂಬ ಭಾಷಿಗರು (24,189 ಜನ), "ಇತರ ಭಾಷಿಗರು" (30,244 ಜನ) ಕೂಡ ಸೇರಿದ್ದಾರೆ. ಹಾಗೆಯೇ, ಜನಗಣತಿಯು "ಪ್ರಾಕೃತ" (?) ಎಂದು ಕರೆದಿರುವ 12,257 ಜನ ಕೂಡ ಸೇರಿದ್ದಾರೆ. ಇವನ್ನೆಲ್ಲ ಪರಿಗಣಿಸಿದಾಗ, ಕನ್ನಡವನ್ನೇ ಮಾತನಾಡುವವರ ಸಂಖ್ಯೆ 4,35,06,272ಕ್ಕೆ (4.35 ಕೋಟಿ) ಇಳಿಯುತ್ತದೆ.[೨೧]
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಗಳನ್ನು ಭಾರತದ ಬ್ಯಾಂಕಿಂಗ್ನ ತೊಟ್ಟಿಲು ಅಂತ ಕರೆಯುತ್ತಾರೆ. 1880 ಮತ್ತು 1935 ರ ನಡುವೆ, ಕರಾವಳಿ ಕರ್ನಾಟಕದಲ್ಲಿ 22 ಬ್ಯಾಂಕುಗಳನ್ನು ಸ್ಥಾಪಿಸಲಾಯಿತು, ಅವುಗಳಲ್ಲಿ ಒಂಬತ್ತು ಮಂಗಳೂರು ನಗರದಲ್ಲೇ ಇದ್ದವು.
ಕರ್ನಾಟಕ ಅನೇಕ ಅಭಯಾರಣ್ಯಗಳ ತವರು. ಇವು ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯ, ಬೆಂಗಳೂರು ಜಿಲ್ಲೆಯ ಬನ್ನೇರುಘಟ್ಟ ಅಭಯಾರಣ್ಯ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ನಾಗರಹೊಳೆ ಅಭಯಾರಣ್ಯ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕುದುರೆಮುಖ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಶಿ ಅಭಯಾರಣ್ಯ. ಅನೇಕ ವನ್ಯ ಮೃಗಧಾಮಗಳು ಸಹ ಕರ್ನಾಟಕದಲ್ಲಿ ಇವೆ.
# ನಂದಿ ಬೆಟ್ಟ, ಭೋಗ ನಂದೀಶ್ವರ ದೇವಸ್ಥಾನ,ಯೋಗ ನಂದೀಶ್ವರ ದೇವಸ್ಥಾನ,
ಕರ್ನಾಟಕದ ಕೆಲವು ಜನಪ್ರಿಯ ಸಾಂಸ್ಕೃತಿಕ ಕಲೆಗಳು:
ಬಿದರಿ ಕಲೆ ಸುಮಾರು ೧೪ನೆ ಶತಮಾನ್ ದಲ್ಲಿ ಬೀದರ್ ಜಿಲ್ಲೆಯಲ್ಲಿ ಜನಿಸಿದ ಪ್ರಾಚಿನ ಕಲೆ ಯಲ್ಲಿ ಒಂದು. ಇವತ್ತಿಗೂ ಈ ಕಲೆಯ ಬೇಡಿಕೆ ದೇಶ-ವಿದೇಶದಲ್ಲಿ ತುಂಬಾ ಇದೆ. ಇತ್ತೀಚಿನ ಕಾಮ್ಮೊನ್ ವೆಅಲ್ಥ್ ಗೇಮ್ಸ್ ನ ಅತಿ ಪ್ರಮುಖ ಗಣ್ಯರಿಗೆ ಭಾರತ ದೇಶದಿಂದ ಬಿದರಿ ಕಲೆ ಉಡುಗೊರೆ ಕೊಡಲಾಗಿತ್ತು. ಮತ್ತೆ ಬಿದರಿ ಕಲೆಯ ಊಡುಗೋರೆ USA ಊ ಎಸ್ ನ ವೈಟ್ ಹೌಸ್ನಲ್ಲಿ ಕೂಡ ಇಡಲಾಗಿದೆ. ಇವು ಬಿದರಿ ಕಲೆಯ ಕೆಲವು ಉಪಾದಿಗಳು.ಇತ್ತೀಚೆಗೆ ಬಿದರಿಕಲೆಗೆ ಹೊಸ ಆಯಾಮಗಳನ್ನು ನೀಡಲಾಗಿದೆ. ಬುದ್ಧನ ರೂಪ ವನ್ನು ಹಿಂದಿ ಗಿಂತಲೂ ವಿಭಿನ್ನವಾಗಿ ಗ್ರಹಿಸಿದ ಶಿಲ್ಪಗಳು ಸಮಕಾಲೀನ ಕುಶಲಿಗಳಿಂದ ಮೂಡಿ ಬಂದಿವೆ.
ಕರ್ನಾಟಕ: ಕೆರೆಸಂತೆ ಶ್ರೀ ಮಹಾಲಕ್ಷ್ಮೀ ಲಕ್ಕಮ್ಮ ದೇವಿ ದೇವಸ್ಥಾನ . ಸಾಗರ, ಗಾಣಗಾಪುರ, ಧರ್ಮಸ್ಥಳ, ಶೃಂಗೇರಿ, ಉಡುಪಿ, ಮೇಲುಕೋಟೆ, ಬಸವಕಲ್ಯಾಣ, ಆದಿಚುಂಚನಗಿರಿ, ಬಾಳೆ ಹೊನ್ನೂರು, ಹೊರನಾಡು, ಕಟೀಲು, ಗೋಕರ್ಣ, ಸಿದ್ಧಗಂಗಾ ಮಠ, ದ್ಯಾವನುರು, ಕೊಲ್ಲೂರು, ಮುರುಡೇಶ್ವರ, ಸಿರ್ಸಿ, ಕುಕ್ಕೆ ಸುಬ್ರಹ್ಮಣ್ಯ, ಕೂಡಲ ಸಂಗಮ, ಬನವಾಸಿ, ಸವದತ್ತಿ, ಗೋಲಗುಮ್ಮಟ, ಬಾದಾಮಿ, ಗುರಗುಂಜಿ, ಚಾಮುಂಡಿ ಬೆಟ್ಟ, ನಂಜನಗೂಡು, ನ೦ಬಿನಾಯಕನಹಳ್ಳಿ, ವೈದ್ಯನಾಥೇಶ್ವರ-ವೈದ್ಯನಾಥಪುರ, ಶ್ರೀ ವೈದ್ಯನಾಥೇಶ್ವರ ಸ್ವಾಮಿ, ಅರೆಯೂರು, ತುಮಕೂರು ಉಗ್ರ ನರಸಿಂಹ ಸ್ವಾಮಿ, ಮದ್ದೂರಮ್ಮ-ಮದ್ದೂರು. ಬನಶಂಕರಿ ದೇವಿ – ಬನಶಂಕರಿ,ಝರಣಿ ನೃಸಿಂಹಸ್ವಾಮಿ – ಬೀದರ್, ಗುರುದ್ವಾರ ನಾನಕ್ ಝೀರಾ ಸಾಹಿಬ್ – ಬೀದರ್, ಖಿಳೆಗಾಂವ ಬಸವಣ್ಣ, ಮೂಡಬೂಳ ವೇಣುಗೋಪಾಲ ಸ್ವಾಮಿ ದೇವಾಲಯ, ಗುಲ್ಬರ್ಗಾದ ಕೋಟೆ, ಶರಣಬಸವೇಶ್ವರ ದೇವಾಲಯ, ಬಂದೇನವಾಜ್ ದರ್ಗ, ಬುದ್ಧವಿಹಾರ, ದೇವರಗುಡ್ಡ, ಮೈಲಾರ, ಮಲೆಮಹದೇಶ್ವರ, ನಂಜವದೂತ ಮಠ ಸಿರಾ ಯಲಗೂರು, ಹುಲಿಗಿಯ ಹುಲಿಗೆಮ್ಮ ದೇವಿ. ಇಟಗಿಯ ಭಿಮಕ್ಕನ ಗುಡಿ, ಬೆಂಗಳೂರಿನ ಮೂಡಲಪಾಳ್ಯದ ಭತ್ತಿಲಿಂಗೇಶ್ದವರ ದೇವಾಲಯ ಹಲವು ಧಾರ್ಮಿಕ ಕ್ಷೇತ್ರಗಳಿಂದ ಕೂಡಿದೆ.ಕೆಂಕೆರೆ ಪುರದಮಠದ ಶ್ರೀ ಚನ್ನಬಸವೇಶ್ವರ ದೇವಾಲಯ,
ಕರ್ನಾಟಕದಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ.
ಮುಖ್ಯ ಭಾಷೆಗಳೆ೦ದರೆ
ಇತರೆ ಕಡಿಮೆ ಜನ ಬಳಸುವ ಭಾಷೆಗಳು.
ಕರ್ನಾಟಕದಲ್ಲಿ ನೈಸರ್ಗಿಕ ಸೌಂದರ್ಯಯುಕ್ತ ಪ್ರದೇಶಗಳು, ಹಾಗು ಐತಿಹಾಸಿಕ ಸ್ಥಳಗಳು ಪ್ರವಾಸೋದ್ಯಮವನ್ನು ಒದಗಿಸುತ್ತವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.