Remove ads
From Wikipedia, the free encyclopedia
ಮಹರ್ಷಿಗಳು ಕಂಡರುಹಿದ ನಾಟ್ಯಕಲೆ
ಇತ್ತೀಚಿನ ದಿನಗಳಲ್ಲಿ ನಾಟ್ಯವು ಹಲವು ಬಗೆಗಳಲ್ಲಿ ಬೆಳೆದು ಬಂದಿದೆ. ನಾಟ್ಯರಂಗಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುವುದು ಹಿಂದಿನ ಕಾಲದಲ್ಲಿ ನಟರ ವಾಡಿಕೆಯಾದರೆ, ಇದನ್ನು ಪ್ರದರ್ಶಿಸಲು ಇಂದು ಕಲಾ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳು ಹೊಸದಾಗಿ ಸೇರ್ಪಡೆಯಾಗಿವೆ. ಇಂದಿನ ನಾಟ್ಯಕಲಾ ಪ್ರದರ್ಶನದ ಮೂಲ ಉದ್ದೇಶವು ಬಹುಮಟ್ಟಿಗೆ ಮನೋರಂಜನೆ, ಕಲಾಪ್ರದರ್ಶನ, ಕೀರ್ತಿ ಸಂಪಾದನೆ ಹಾಗೂ ಧನ ಸಂಪಾದನೆಯೇ ಆಗಿದೆ. ಆಧುನಿಕ ಡ್ಯಾನ್ಸ್ ನ ಭರಾಟೆಯಲ್ಲಿ ಪ್ರಾಚೀನ ನಾಟ್ಯ ಪದ್ಧತಿಗಳಾದಂತಹ ಭರತನಾಟ್ಯವೇ ಮೊದಲಾದ ಭಾರತೀಯ ನಾಟ್ಯಪರಂಪರೆಗಳ ಜನಪ್ರಿಯತೆ ಕಡಿಮೆಯಾಗುತ್ತಿದೆಯೇನೋ ಎನ್ನಿಸುವಂತಿದೆ. ನಾಟ್ಯ, ಸಂಗೀತ, ನಾಟಕ ಮುಂತಾದ ದೃಶ್ಯ ಕಲೆಗಳು ಬಹಳ ಪ್ರಭಾವಶಾಲಿ ಮಾಧ್ಯಮಗಳು. ಅವುಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಮನೋರಂಜನೆಯನ್ನಷ್ಟೆ ಅಲ್ಲದೆ, ಲೋಕಕ್ಕೆ ಶಿಕ್ಷಣವನ್ನು ನೀಡುವಲ್ಲೂ, ನಮ್ಮ ಸಂಸ್ಕೃತಿ ಪ್ರಸಾರದಲ್ಲೂ ಮುಖ್ಯಪಾತ್ರ ವಹಿಸಬಲ್ಲವು.
ಇಂದಿನ ಕಾಲದಲ್ಲಿ ಕೆಲ ಯುವಕರು ಅತ್ಯಾಧುನಿಕ ಬೈಕುಗಳನ್ನು ಖರೀದಿಸಿ ಮಾಡುವ ವಿವಿಧ ಪ್ರದರ್ಶನಗಳನ್ನು ಗಮನಿಸಬಹುದು. ಉದಾಹರಣೆಗೆ, ಇದರಲ್ಲಿನ ಅತ್ಯುತ್ತಮ, ಬಲಿಷ್ಠ ಇಂಜಿನ್ ಶಕ್ತಿಯನ್ನು ಬಳಸಿಕೊಂಡು ಅತಿವೇಗವಾಗಿ ಗಾಡಿಗಳನ್ನು ಚಲಾಯಿಸುವುದು, ವ್ಹೀಲಿಂಗ್ ಮಾಡುವುದು ಇತ್ಯಾದಿಗಳಿಂದ ಜನರ ಮನಸ್ಸನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಯಾವುದೇ ಗಾಡಿಯನ್ನು ತೆಗೆದುಕೊಂಡು ಮನೆಯಿಂದ ಹೊರಟರೂ ಪುನಃ ಕ್ಷೇಮವಾಗಿ ಮನೆಯನ್ನು ತಲುಪುವ ಜವಾಬ್ದಾರಿಯೂ ಇರಬೇಕು. ಈ ವಿಷಯವನ್ನು ಮರೆತು ಕ್ಷಣಿಕ ಸಂತೋಷಕ್ಕೆ ಒಳಗಾಗಿ ಮೈಮರೆತರೆ ಅಪಘಾತವಾಗುವುದುಂಟು. ನಾವು ತಿನ್ನುವ ಆಹಾರವು ನಾಲಿಗೆಗೆ ರುಚಿಯನ್ನು ಕೊಡುವುದರಲ್ಲಿ ಮಾತ್ರ ಸೀಮಿತವಾಗಿರದೆ ದೇಹದ ಅರೋಗ್ಯವನ್ನು ಕಾಪಾಡುವಂತಿರಬೇಕು. ಊಟವಾಗಲಿ, ನೋಟವಾಗಲಿ ರಸಭರಿತವಾಗಿರಬೇಕು. ಇಲ್ಲವಾದರೆ ಜೀವನ ಸಪ್ಪೆ. ಆದರೆ ನಾಲಿಗೆ, ಕಣ್ಣು ಮುಂತಾದ ಇಂದ್ರಿಯಗಳ ಕೈಯಲ್ಲೇ ಲಗಾಮನ್ನು ಕೊಟ್ಟುಬಿಟ್ಟರೆ ಈ ಶರೀರಕ್ಕೆ ತೊಂದರೆಯಾಗುವುದು ಕಟ್ಟಿಟ್ಟಿದ್ದು. ಈ ಮಾತು ಕಲಾಪ್ರದರ್ಶನಗಳಿಗೂ ಅನ್ವಯಿಸುತ್ತದೆ.
ಭಾರತದೇಶದಲ್ಲಿ ಮಹರ್ಷಿಗಳು ತಂದ ನಾಟ್ಯಕಲೆಯಲ್ಲಿ ಇಂದ್ರಿಯಗಳು ಮೆಚ್ಚುವ ಕಲೆ, ಸೌಂದರ್ಯ, ಮುಂತಾದ ಅಂಶಗಳು ಪುಷ್ಕಳವಾಗಿಯೇ ಇವೆ. ಆದರೆ ಮನೋರಂಜನೆಯೊಡನೆ ಆತ್ಮರಂಜನೆಗೂ ಬೇಕಾದ ರಸ, ಭಾವಗಳನ್ನು ಸೇರಿಸಿಟ್ಟಿದ್ದಾರೆ. ಭಾರತೀಯ ನಾಟ್ಯವು ಮೇಲ್ನೋಟಕ್ಕೆ ಮೈ ಕುಣಿಸುವಂತೆ ಕಂಡರೂ ಅಷ್ಟೇ ಅದರ ಉದ್ದೇಶವಲ್ಲ. ಭರತಮುನಿಗಳು ತಂದ ನಾಟ್ಯದಲ್ಲಿ ಭಾವ-ರಾಗ-ತಾಳಗಳ ಒಂದು ಪಾಕವಿದೆ. ಅದು ನಮ್ಮ ಮೈ-ಮನಗಳನ್ನು ಹದವಾಗಿಸಿ ನಮ್ಮನ್ನು ಧನ್ಯರನ್ನಾಗಿ ಮಾಡುತ್ತದೆ. ಅಂತರಂಗದ ಆನಂದವನ್ನು ನಾಟ್ಯದ ಮೂಲಕ ಹೊರತಂದು, ಅದನ್ನು ಆಸ್ವಾದಿಸುವವರನ್ನು ಅಂತರಂಗಕ್ಕೆ ಒಯ್ಯುವ ಜಾಣ್ಮೆ ನಮ್ಮ ನಾಟ್ಯಕಲೆಯಲ್ಲಿದೆ. ಅಲ್ಲಿ ದೇವಿಯ ಸೌಂದರ್ಯವೂ ಉಂಟು, ಶಿವನ ಗಾಂಭೀರ್ಯವೂ ಉಂಟು. ಶಿವೆಯ ಲಾಸ್ಯ- ಶಿವನ ತಾಂಡವಗಳೆರಡೂ ಉಂಟು. ಅದು ಒಳತಾಪಗಳನ್ನು ತಣಿಸುವುದು. ನಮ್ಮ ದೇಶದ ಸಂಸ್ಕೃತ ವ್ಯಾಕರಣ ಶಾಸ್ತ್ರದ ಆರಂಭದಲ್ಲಿ ಮಾಹೇಶ್ವರ ಸೂತ್ರಗಳ ಪ್ರಸ್ತಾಪವಿದೆ. ಆ ಪ್ರಕರಣದಲ್ಲಿ ನಟರಾಜನು ನೃತ್ತವನ್ನು ಮಾಡಿ ಅದರ ಅಂತ್ಯದಲ್ಲಿ ಢಕ್ಕೆಯನ್ನು ಹದಿನಾಲ್ಕು ಬಾರಿ ಬಾರಿಸಿದುದರಿಂದ ಸನಕಾದಿಸಿದ್ಧರ ಉದ್ಧಾರವಾಯಿತೆಂಬ ಮಾತಿದೆ. ಇಂತಹ ಅದ್ಭುತ ಪರಿಣಾಮ ಹೇಗಾಗಬಹುದೆಂಬ ಬಗ್ಗೆ ಬಹಳ ಜನರಲ್ಲಿ ಕುತೂಹಲವೇಳುವುದು ಸಹಜವೇ. ಭಾರತೀಯ ವಿದ್ಯೆ ಹಾಗೂ ಕಲೆಗಳ ಆಳವನ್ನು ಅರಿತಿದ್ದ ಶ್ರೀರಂಗ ಮಹಾಗುರುಗಳು ಈ ನೃತ್ತದ ಮರ್ಮವನ್ನು ಹೀಗೆ ಬಿಚ್ಚಿಟ್ಟಿದ್ದಾರೆ - “ನಟರಾಜನು, (ತನ್ನ) ನಾಟ್ಯಚೇಷ್ಟೆಯಿಂದ ಸೃಷ್ಟಿ ಸ್ಥಿತಿಗಳು ಆಗಿ, ತಿರುಗಿ ಲೀನವಾಗಿಸಲು ಉಂಟಾಗುವ ಆನಂದದ ಗುಟ್ಟನ್ನು ಸನಕಾದಿಸಿದ್ಧರಿಗೆ ಉಪದೇಶ ಮಾಡುತ್ತಾನೆ”. ಸನಕಾದಿಸಿದ್ಧರು ಅಂತರಂಗಕ್ಷೇತ್ರದ ಸಾಧನೆಯಿಂದ ನಾಟ್ಯಕಲಾಚಾರ್ಯನಾದ ನಟರಾಜನ ದೈವೀ ವಿಲಾಸಗಳನ್ನು ಅರ್ಥಮಾಡಿಕೊಳ್ಳಬಲ್ಲ ಶುದ್ಧಪ್ರಕೃತಿಯುಳ್ಳವರಾಗಿದ್ದರು. ನಾವೂ ಅಂತಹ ಪ್ರಕೃತಿಯವರಾಗಿದ್ದಾಗಷ್ಟೆ ನಟರಾಜನ ನಾಟ್ಯದ ಮರ್ಮವನ್ನು ಅರಿಯಬಹುದಷ್ಟೆ.
ಭಾರತೀಯ ನಾಟ್ಯವು ಮನೋರಂಜನೆಗೆ ಮಾತ್ರ ಸೀಮಿತವಾಗದೆ ಆತ್ಮರಂಜನೆಯವರೆಗಿನ ವಿಷಯವನ್ನಿಟ್ಟುಕೊಂಡಿದೆ. ಆದರೆ ಇಂದು ಋಷಿಗಳು ನಾಟ್ಯಕಲೆಗೆ ಹಾಕಿಕೊಟ್ಟ ಹಾದಿಯನ್ನು ಬಿಟ್ಟು ಕಲಾಪ್ರದರ್ಶನಗಳು ಎಷ್ಟೋ ಕಡೆಗಳಲ್ಲಿ ಸ್ವತಂತ್ರವಾಗಿ ಬೆಳೆದುಬಿಟ್ಟಿರುವುದೂ ಉಂಟು. ಅಂತಹ ದೋಷಗಳನ್ನು ಜ್ಞಾನಿಗಳ ದಿಗ್ದರ್ಶನದಂತೆ ಸರಿಪಡಿಸಿಕೊಂಡಲ್ಲಿ ಈ ಕಲೆಯು ನಮ್ಮನ್ನು ಋಷಿಗಳು ಕಂಡುಕೊಂಡ ಜೀವನದ ಮೂಲೋದ್ದೇಶವಾದ ಪರಮಾತ್ಮಸಾಕ್ಷಾತ್ಕಾರದವರೆಗೆ ತಲುಪಿಸುವುದರಲ್ಲಿ ಸಂಶಯವಿಲ್ಲ.
ಯೋಗಾಯತನವೂ ಮತ್ತು ಭೋಗಾಯತನವೂ ಆಗಿರುವ ಈ ನಾಟ್ಯಕಲೆಯ ಪರಿಪೂರ್ಣ ಪ್ರಯೋಜನವನ್ನು ಪಡೆಯೋಣ. ನಮ್ಮ ಭಾರತೀಯ ಮಹರ್ಷಿಗಳು ಕಂಡರುಹಿದ ಸತ್ಯವನ್ನು ನಾವೂ ಸಹ ಅನುಭವಿಸುವಂತಾಗಲಿ ಎಂದು ಆಶಿಸೋಣ.
--
The neutrality of this article is disputed. |
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ಭರತನಾಟ್ಯವು ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯ ಕಲೆ. ಭರತಮುನಿಯಿಂದ ರಚಿಸಲ್ಪಟ್ಟ ನಾಟ್ಯ ಶಾಸ್ತ್ರ ಕೃತಿಯಲ್ಲಿ ಇದರ ಮೊದಲ ಉಲ್ಲೇಖವಿರುವುದರಿಂದ ಭರತನಾಟ್ಯ ಎಂದು ಕರೆಯಲ್ಪಟ್ಟಿದೆ. ಪುರಂದರ ದಾಸವರೇಣ್ಯರು "ಆಡಿದನೋ ರಂಗ " ಎನ್ನುವ ಪದದಲ್ಲಿ ಭರತನಾಟ್ಯದ ವರ್ಣನೆಯನ್ನು ಮಾಡಿದ್ದಾರೆ. ಇದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪ್ರಚಲಿತವಿದೆ.
ಭರತನಾಟ್ಯ ಪದವು ಭರತ ಎಂಬ ಪದದಿಂದ ಕೂಡಿದೆ. "ಭ"ಎಂದರೆ ಭಾವ, "ರ" ಎಂದರೆ ರಾಗ, "ತ" ಎಂದರೆ ತಾಳ ಎಂದು ಅರ್ಥವಿದೆ. ಅಂದರೆ ಭಾವ, ರಾಗ ಮತ್ತು ತಾಳಯುತವಾದ ನೃತ್ಯಕ್ಕೆ ಭರತನಾಟ್ಯ ಎಂದು ಕರೆಯುವುದು ರೂಢಿ.
ಭಕಾರೋ ಭಾವಸಂಯುಕ್ತೋ, ರೇಕೋ ರಾಗೇಣ ಸಂಶ್ರೀತಃ, ತಕಾರಸ್ ತಾಳ ಇತ್ಯಾಹುಹು ಭರತಾರ್ಥ ವಿಚಕ್ಶಣೈ ಹಿ
ಭರತನಾಟ್ಯವು ತನ್ನದೆ ಆದ ಶೈಲಿಗಳನ್ನು ಹೊಂದಿದೆ. ಅವುಗಳೇಂದರ
ದೇವದಾಸಿಯರು ನರ್ತಿಸುತ್ತಿದ್ದಾಗ ಉಪಯೋಗಿಸುತ್ತಿದ್ದ ಉಡುಗೆ-ತೊಡುಗೆಗಳು ಪರಿಷ್ಕಾರವಾಗುತ್ತಲೇ ಬಂದು, ಇಂದು ನಾವು ಹೊಲಿದ ರೀತಿಯ ಉಡುಪನ್ನು ನೋಡಬದುದಾಗಿದೆ. ಸಾಂಪ್ರದಾಯಿಕ ಬಣ್ಣಗಳಾದ ಹಸಿರು, ಹಳದಿ, ಕೆಂಪು ಮತ್ತು ಕಿತ್ತಳೆ ಬಣ್ಣಗಳ ಉಡುಪುಗಳನ್ನು ಕಾಣಬಹುದು. ಹಿಂದೆ ಒಂಭತ್ತು ಗಜದ ಸೀರೆಯನ್ನು ಉಡುತಿದ್ದರು. ಪೈಜಾಮದ ಮೇಲೆ ಈ ಸೀರೆಯನ್ನು ಕಚ್ಚೆ ಕಟ್ಟುತ್ತಿದ್ದು, ಸೀರೆಯ ಸೆರಗನ್ನು ಉದ್ದವಾಗಿ ಬಿಟ್ಟು ಒಂದು ಬಾರಿ ಸೊಂಟಕ್ಕೆ ಅದನ್ನು ಸುತ್ತಿ ತದನಂತರ ಅದನ್ನು ಅನೇಕ ನೆರಿಗೆಗಳು ಬರುವಂತೆ ಸೊಂಟಕ್ಕೆ ಮಧ್ಯದಿಂದ ಬೀಸಣಿಗೆಯಂತೆ ಅಗಲಿಸುತ್ತಿದ್ದರು. ಮೇಲೆ ಉದ್ದಕ್ಕೆ ಸೊಂಟದವರೆಗೂ ಚೋಲಿಯನ್ನು ಧರಿಸಿ, ಚೋಲಿಯ ತೋಳುಗಳು ಮೊಣಕೈವರೆಗೂ ಬರುವಂತೆ ಇರುತ್ತಿತ್ತು. ಇದಕ್ಕೆ ತುಯ್ಯ ಸೀರೆ ಎಂದು ಕರೆಯುತ್ತಿದ್ದರು. ಇದರೊಂದಿಗೆ ಕಂಠಕ್ಕೆ ಸಣ್ಣ ಹಾರ ಹಾಗೂ ಉದ್ದನೆಯ ಇನ್ನೊಂದು ಹಾರವನ್ನು ಹಾಕುತ್ತಿದ್ದರು. ಸೊಂಟಕ್ಕೆ ಗೆಜ್ಜೆಡಾಬು, ಕೈಗಳಿಗೆ ಕುಸುರಿ ಕೆಲಸ ಮಾಡಿದ ಬಳೆಗಳು, ಕಿವಿಗೆ ಓಲೆ-ಝುಮುಕಿ. ಕೆನ್ನೆ ಸರಪಳಿ, ಮೂಗಿಗೆ ಮೂಗುನತ್ತು ಹಾಗೂ ಬುಲ್ಲಾಕು, ತೊಳ ಬಂದಿಗಳು, ಕಾಲಿಗೆ ಕಾಲಂದುಗೆ, ಕೈಗಳ ಬೇರಳುಗಳಿಗೆ ಉಂಗುರಗಳು, ಕಾಲಲ್ಲಿ ಬೆಳ್ಳಿ ಗೆಜ್ಜೆಗಳು, ಜಡೆ ಬಿಲ್ಲೆ ಹಾಗೂ ಕುಚ್ಚುಗಳನ್ನು ಧರಿಸುತ್ತಿದ್ದರು.
ಇದರಲ್ಲಿ ಹಲವಾರು ವಿಧಗಳಿವೆ.
ಅಂಗ ಸಾಧನೆಯಿಂದ ಆರಂಭವಾಗಿ ತಿಲ್ಲಾನದೊಂದಿಗೆ ಮುಗಿಯುತ್ತದೆ
ನಂದಿಕೇಶ್ವರನ ಅಭಿನಯದರ್ಪಣದಪ್ರಕಾರ ಭರತನಾಟ್ಯದಲ್ಲಿ ೨ ವಿಧವಾದ ಹಸ್ತಮುದ್ರೆಗಳಿವೆ.
ಒಂದು ಕೈಯಿಂದ ಮಾಡುವ ಹಸ್ತಗಳು.ಇದು ೨೮ ಹಸ್ತಗಳಿವೆ.ಅವುಗಳು
ಎರಡು ಕೈಗಳನ್ನು ಉಪಯೋಗಿಸಿ ಮಾಡುವ ಹಸ್ತಗಳು. ಇವು ೨೪ ಹಸ್ತಗಳಿವೆ.
ಅಭಿ ಎಂದರೆ ಮನಸ್ಸಿನ ಭಾವ, ನಯ ಎಂದರೆ ಪ್ರದರ್ಶಿಸು ಎಂದು ಅರ್ಥ. ಒಟ್ಟಾರೆಯಾಗಿ ಅಭಿನಯ ಎಂದರೆ ಮನಸ್ಸಿನ ಭಾವನೆಗಳನ್ನು ಮುಖದ ಮೂಲಕ ಪ್ರೇಕ್ಷಕರಿರ ಮುಂದೆ ಪ್ರದರ್ಶಿಸುವು ಎಂದು ಅರ್ಥ. ಅಭಿನಯದಲ್ಲಿ ನಾಲ್ಕು ವಿಧಗಳು, ಅವುಗಳೆಂದರೆ
ಆಂಗಿಕಾಭಿನಯ ದಲ್ಲಿ ಎರಡು ವಿಧಗಳು
ನರ್ತಕರು ನೃತ್ಯ ಪ್ರದರ್ಶಿಸುವಾಗ ಅವರ ಚಲನ ಮತ್ತು ಭಾವಸೂಚನೆಗಳು ಪ್ರೇಕ್ಷಕನ ಮನಸ್ಸನ್ನು ಸುಲಭವಾಗಿ ಆಕರ್ಷಿಸುತ್ತದೆ. ಇದಕ್ಕೆ ಮಾನವನ ದೇಹದ ಭಾಗಗಳು ಮುಖ್ಯವಾಗುತ್ತದೆ. ಈ ದೇಹದ ಭಾಗಗಳಲ್ಲಿ ಮೂರು ವಿಧಗಳು. ಅವುಗಳೆಂದರೆ,
ಇವುಗಳ ಸಹಾಯದಿಂದ ಆಂಗಿಕಾಭಿನಯ ಸಾಧ್ಯ.
ಶಿರ, ಹಸ್ತ, ವಕ್ಷ, ಪಾರ್ಶ್ವ, ಕಟಿ ಮತ್ತು ಪಾದಗಳು.
ಸ್ಕಂದ, ಬಾಹು, ಪೃಷ್ಠ, ಉದರ, ಊರು ಮತ್ತು ಜಂಘೆ.
ದೃಷ್ಠಿ, ಭ್ರೂಪುಟ, ತಾರಾ, ಕಪೋಲ, ನಾಸಿಕ, ಹನು, ಅಧರ, ದಶನಾ, ಜಿಹ್ವಾ, ಚುಬಕ ಮತ್ತು ವದನ. ಇದರೊಂದಿಗೆ ಹಿಮ್ಮಡಿ, ಹರಡು, ಕಾಲು, ಕೈಬೆರಳುಗಳು, ಅಂಗಾಲು ಮತ್ತು ಅಂಗೈಗಳು ಅಂಗಾಂತರಗಳೆನಿಸಿವೆ. ಆಂಗಿಕ ಅಭಿನಯಕ್ಕೆ ಸಹಾಯಕವಾಗುವ ದೈಹಿಕಭಾಗಗಳಿಗೆ ಶಾರೀರಕ, ಮುಖಜ ಮತ್ತು ಚೇಷ್ಟಾಕೃತ ಎಂಬ ವಿಧಗಳಿವೆ. ಶಾರೀರಿಕ ಅಭಿನಯ ದೇಹದ ಭಾಗಗಳಿಗೆ ಸಂಬಂಧಿಸಿದೆ, ಮುಖಜ ಅಭಿನಯ ಮುಖಕ್ಕೆ ಸಂಬಂಧಿಸಿದರೆ, ಚೇಷ್ಟಾಕೃತ ಅಭಿನಯ ದೇಹದ ಚಲನವಲನಗಳಿಗೆ ಸಂಬಂಧಿಸಿದೆ.
ನೃತ್ಯದಲ್ಲಿ ಹಾಡುಗಳು ಸೇರಿದಾಗ ವಾಚಿಕಾಭಿನಯವಾಗುತ್ತದೆ. ಹಾಡುಗಾರನ ಸಂಗೀತದಿಂದ ಪ್ರೇಕ್ಷಕರಲ್ಲಿ ರಸವು ಸೃಷ್ಠಿಯಾಗುತ್ತದೆ. ಭರತನಾಟ್ಯಕ್ಕೆ ಹೊಂದುವುದು ಕರ್ನಾಟಕ ಶಾಸ್ತ್ರೀ ಸಂಗೀತ. ಹಂಸಧ್ವನಿ, ಆರಭಿ, ಮೋಹನ, ಹಂಸಾನಂದಿ ಮೂಂತಾದ ರಾಗಗಳ ಕೃತಿಗಳನ್ನು, ದೇವರನಾಮಗಳನ್ನು, ಭಜನೆಗಳನ್ನು ಹಾಡುತ್ತಾರೆ. ಕಲ್ಯಾಣಿ, ವಸಂತ, ತೋಡಿ, ಹೇಮಾವತಿ ರಾಗಗಳನ್ನು ಜತಿಸ್ವರದಲ್ಲಿ ಬಳಸುತ್ತಾರೆ. ನಾಯಕ - ನಾಯಕಿಯರಿಗೆ ಸಂಬಂಧಿಸಿರುವ ಪದಂ, ಜಾವಳಿ, ಅಷ್ಟಪದಿಗಳಿಗೆ ಸರಿಯಾಗಿ ರಾಗ ಮತ್ತು ತಾಳವನ್ನು ಸಂಯೋಜಿಸಿರುತ್ತಾರೆ. ಮನಸ್ಸಿನಲ್ಲಿ ಉಕ್ಕಿ ಬರುವ ಎಲ್ಲಾ ಭಾವನೆಗಳಿಗೂ ದೈಹಿಕಪ್ರತಿಕ್ರಿಯೆಗಳು ಆಂಗಿಕವಾಗಿದ್ದಾಗ ಅದು ನರ್ತನ,ಲಯಬದ್ಧವಾದ ನಾದ ವಿನ್ಯಾಸವಾಗಿದ್ದಾಗ ಅದು ಸಂಗೀತ.
ನವರಸಗಳು ೯, ಅವುಗಳೆಂದರೆ
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.