Remove ads
ಭಾರತೀಯ ರಾಜಕಾರಣಿ From Wikipedia, the free encyclopedia
ಎಚ್.ಡಿ. ದೇವೇಗೌಡ (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು ಭಾರತದ ೧೨ ನೆಯ ಪ್ರಧಾನ ಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು. [೩][೪][೫] 'ಮಣ್ಣಿನ ಮಗ' ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು.
ಹೆಚ್. ಡಿ. ದೇವೇಗೌಡ | |
---|---|
ಅಧಿಕಾರ ಅವಧಿ ೧ ಜೂನ್ ೧೯೯೬ – ೨೧ ಎಪ್ರಿಲ್ ೧೯೯೭ | |
ರಾಷ್ಟ್ರಪತಿ | ಶಂಕರ್ ದಯಾಳ್ ಶರ್ಮಾ |
ಪೂರ್ವಾಧಿಕಾರಿ | ಅಟಲ್ ಬಿಹಾರಿ ವಾಜಪೇಯಿ |
ಉತ್ತರಾಧಿಕಾರಿ | ಇಂದ್ರಕುಮಾರ್ ಗುಜ್ರಾಲ್ |
ರಾಜ್ಯಸಭಾ ಸದಸ್ಯ | |
ಹಾಲಿ | |
ಅಧಿಕಾರ ಸ್ವೀಕಾರ ೨೬ ಜೂನ್ ೨೦೨೦ | |
ಪೂರ್ವಾಧಿಕಾರಿ | ಡಿ. ಕುಪ್ಪೇಂದ್ರ ರೆಡ್ಡಿ |
ಮತಕ್ಷೇತ್ರ | ಕರ್ನಾಟಕ |
ಅಧಿಕಾರ ಅವಧಿ ೨೩ ಸೆಪ್ಟೆಂಬರ್ ೧೯೯೬ – ೨ ಮಾರ್ಚ್ ೧೯೯೮ | |
ಪೂರ್ವಾಧಿಕಾರಿ | ಲೀಲಾದೇವಿ ಆರ್. ಪ್ರಸಾದ್ |
ಉತ್ತರಾಧಿಕಾರಿ | ಎ. ಲಕ್ಷ್ಮೀಸಾಗರ್ |
ಮತಕ್ಷೇತ್ರ | ಕರ್ನಾಟಕ |
ಗೃಹ ಮಂತ್ರಿ | |
ಅಧಿಕಾರ ಅವಧಿ ೧ ಜೂನ್ ೧೯೯೬ – ೨೮ ಜೂನ್ ೧೯೯೬ | |
ಪೂರ್ವಾಧಿಕಾರಿ | ಮುರಳಿ ಮನೋಹರ ಜೋಶಿ |
ಉತ್ತರಾಧಿಕಾರಿ | ಇಂದ್ರಜಿತ್ ಗುಪ್ತಾ |
ಕರ್ನಾಟಕ ರಾಜ್ಯದ ೮ನೇ ಮುಖ್ಯಮಂತ್ರಿ | |
ಅಧಿಕಾರ ಅವಧಿ ೧೧ ಡಿಸೆಂಬರ್ ೧೯೯೪ – ೩೧ ಮೇ ೧೯೯೬ | |
ರಾಜ್ಯಪಾಲ | ಖುರ್ಷಿದ್ ಅಲಮ್ ಖಾನ್ |
ಪೂರ್ವಾಧಿಕಾರಿ | ವೀರಪ್ಪ ಮೊಯ್ಲಿ |
ಉತ್ತರಾಧಿಕಾರಿ | ಜೆ. ಹೆಚ್. ಪಟೇಲ್ |
ಜನತಾ ದಳ (ಜಾತ್ಯಾತೀತ) ಪಕ್ಷದ ಅಧ್ಯಕ್ಷ | |
ಹಾಲಿ | |
ಅಧಿಕಾರ ಸ್ವೀಕಾರ ಜುಲೈ ೧೯೯೯ | |
ಪೂರ್ವಾಧಿಕಾರಿ | ಪ್ರಥಮ ಅಧ್ಯಕ್ಷ |
ಲೋಕಸಭಾ ಸದಸ್ಯ | |
ಅಧಿಕಾರ ಅವಧಿ ೧೭ ಮೇ ೨೦೦೪ – ೨೩ ಮೇ ೨೦೧೯ | |
ಪೂರ್ವಾಧಿಕಾರಿ | ಜಿ. ಪುಟ್ಟಸ್ವಾಮಿ ಗೌಡ |
ಉತ್ತರಾಧಿಕಾರಿ | ಪ್ರಜ್ವಲ್ ರೇವಣ್ಣ |
ಮತಕ್ಷೇತ್ರ | ಹಾಸನ |
ಅಧಿಕಾರ ಅವಧಿ ೨ ಫೆಬ್ರವರಿ ೨೦೦೨ – ೧೬ ಮೇ ೨೦೦೪ | |
ಪೂರ್ವಾಧಿಕಾರಿ | ಎಮ್. ವಿ. ಚಂದ್ರಶೇಖರಮೂರ್ತಿ |
ಉತ್ತರಾಧಿಕಾರಿ | ತೇಜಸ್ವಿನಿ ಶ್ರೀರಮೇಶ್ |
ಮತಕ್ಷೇತ್ರ | ಕನಕಪುರ |
ಅಧಿಕಾರ ಅವಧಿ ೧೦ ಮಾರ್ಚ್ ೧೯೯೮ – ೨೬ ಎಪ್ರಿಲ್ ೧೯೯೯ | |
ಪೂರ್ವಾಧಿಕಾರಿ | ರುದ್ರೇಶ್ ಗೌಡ |
ಉತ್ತರಾಧಿಕಾರಿ | ಜಿ. ಪುಟ್ಟಸ್ವಾಮಿಗೌಡ |
ಮತಕ್ಷೇತ್ರ | ಹಾಸನ |
ಅಧಿಕಾರ ಅವಧಿ ೨೦ ಜೂನ್ ೧೯೯೧ – ೧೧ ಡಿಸೆಂಬರ್ ೧೯೯೪ | |
ಪೂರ್ವಾಧಿಕಾರಿ | ಹೆಚ್. ಸಿ. ಶ್ರಿಕಂಠಯ್ಯ |
ಉತ್ತರಾಧಿಕಾರಿ | ರುದ್ರೇಶ್ ಗೌಡ |
ಮತಕ್ಷೇತ್ರ | ಹಾಸನ |
ಕರ್ನಾಟಕ ವಿಧಾನಸಭಾ ಸದಸ್ಯ | |
ಅಧಿಕಾರ ಅವಧಿ ೧೯೯೪ – ೧೯೯೬ | |
ಪೂರ್ವಾಧಿಕಾರಿ | ಸಿ. ಎಮ್. ಲಿಂಗಪ್ಪ |
ಉತ್ತರಾಧಿಕಾರಿ | ಸಿ. ಎಮ್. ಲಿಂಗಪ್ಪ |
ಮತಕ್ಷೇತ್ರ | ರಾಮನಗರ |
ಅಧಿಕಾರ ಅವಧಿ ೧೯೬೨ – ೧೯೮೯ | |
ಪೂರ್ವಾಧಿಕಾರಿ | ವೈ. ವೀರಪ್ಪ |
ಉತ್ತರಾಧಿಕಾರಿ | ಜಿ. ಪುಟ್ಟಸ್ವಾಮಿಗೌಡ |
ಮತಕ್ಷೇತ್ರ | ಹೊಳೆನರಸೀಪುರ |
ವೈಯಕ್ತಿಕ ಮಾಹಿತಿ | |
ಜನನ | ಆಗಿನ ಬ್ರಿಟೀಷ್ ಆಡಳಿತದ ಹರದನಹಳ್ಳಿ, ಮೈಸೂರು ರಾಜ್ಯ, (ಈಗಿನ ಕರ್ನಾಟಕ ರಾಜ್ಯ, ಭಾರತ) | ೧೮ ಮೇ ೧೯೩೩
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಜಾತ್ಯಾತೀತ ಜನತಾದಳ (೧೯೯೯ರಿಂದ) |
ಇತರೆ ರಾಜಕೀಯ ಸಂಲಗ್ನತೆಗಳು |
*ಜನತಾದಳ (೧೯೯೦–೧೯೯೯)
|
ಸಂಗಾತಿ(ಗಳು) |
ಚೆನ್ನಮ್ಮ (Married:25 May 1954) |
ಮಕ್ಕಳು | ಮಕ್ಕಳು ೬ |
ಅಭ್ಯಸಿಸಿದ ವಿದ್ಯಾಪೀಠ | ಎಲ್. ವಿ. ಪಾಲಿಟೆಕ್ನಿಕ್ |
ಉದ್ಯೋಗ | ರಾಜಕಾರಿಣಿ, ಕೃಷಿಕ, ಅಭಿಯಂತರ |
ಸಹಿ | |
ಜಾಲತಾಣ | hddevegowda |
ಅಡ್ಡಹೆಸರು(ಗಳು) | ಮಣ್ಣಿನ ಮಗ ದೊಡ್ ಗೌಡ್ರು |
ದೇವೇಗೌಡರು ಮೇ ೧೮, ೧೯೩೩ ರಂದು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪಡೆದ ಬಳಿಕ, ದೇವೇಗೌಡ ಅವರು ಹಾಸನ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿಯ ಚೆನ್ನಮ್ಮ ಅವರನ್ನು 1954ರಲ್ಲಿ ವಿವಾಹವಾದರು. ಅವರಿಗೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಸೇರಿದಂತೆ ನಾಲ್ಕು ಜನ ಗಂಡು ಮಕ್ಕಳೂ, ಇಬ್ಬರು ಹೆಣ್ಣು ಮಕ್ಕಳೂ ಇದ್ದಾರೆ.[೬][೭][೮] ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಎಚ್.ಡಿ. ರೇವಣ್ಣ ಅವರು ಕರ್ನಾಟಕ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರು ದೇವೇಗೌಡರ ಅಳಿಯ . ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆ ಯವರನ್ನು ಮಿತ್ರರನ್ನಾಗಿಸಿ ಕೊಂಡರು.
೧೯೫೩ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದರು. ೧೯೬೨ ರವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದು ನಂತರ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ವಿಧಾನ ಸಭೆಗೆ ಚುನಾಯಿತರಾದರು.[೯]
ಮುಂದಿನ ಮೂರು ಚುನಾವಣೆಗಳಲ್ಲಿ ಸತತವಾಗಿ ಹೊಳೆನರಸೀಪುರ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾದರು. ೧೯೭೨ ರಿಂದ ೧೯೭೬ ರವರೆಗೆ ಮತ್ತು ನವೆಂಬರ್ ೧೯೭೬ ರಿಂದ ೧೯೭೭ ರ ವರೆಗೆ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು. ೧೯೭೫-೭೬ರ ತುರ್ತು ಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾಗಿದ್ದ ದೇವೇಗೌಡರು ನಂತರ ಕರ್ನಾಟಕ ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಖಾತೆಗಳ ಸಚಿವರಾದರು. ೧೯೮೭ರಲ್ಲಿ ನೀರಾವರಿ ಖಾತೆಗೆ ಸಾಕಷ್ಟು ಹಣ ಮಂಜೂರು ಮಾಡದೆ ಇದ್ದುದರ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. ೧೯೯೧ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದರು.
ಇದರ ನಂತರ ಜನತಾ ದಳಕ್ಕೆ ರಾಜ್ಯಾಧ್ಯಕ್ಷರಾದ ದೇವೇಗೌಡರು ೧೯೯೪ ರಲ್ಲಿ ಕರ್ನಾಟಕ ರಾಜ್ಯದ ೧೪ ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.[೧೦][೧೧][೧೨]
೧೯೯೬ ರಲ್ಲಿ ಯಾವ ಒಂದು ರಾಜಕೀಯ ಪಕ್ಷಕ್ಕೂ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವಿರಲಿಲ್ಲ. ಆಗ ಯುನೈಟೆಡ್ ಫ್ರಂಟ್ (ಕಾಂಗ್ರೆಸ್ ಹೊರತು ಮತ್ತು ಬಿಜೆಪಿ ಹೊರತುಪಡಿಸಿದ ಪ್ರಾದೇಶಿಕ ಪಕ್ಷಗಳ ಒಂದು ಸಂಘ) ಕಾಂಗ್ರೆಸ್ ಬೆಂಬಲದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲು ನಿರ್ಧರಿಸಿದರು. ಅನಿರೀಕ್ಷಿತವಾಗಿ, ದೇವೇಗೌಡರು ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾದರು ಮತ್ತು ಭಾರತದ 11 ನೇ ಪ್ರಧಾನಿಯಾದರು. ಅವರು 1 ಜೂನ್ 1996 ರಂದು ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು ಮತ್ತು 1997 ರ ಏಪ್ರಿಲ್ 21 ರವರೆಗೆ ಅಧಿಕಾರದಲ್ಲಿ ಮುಂದುವರೆದರು. ಅಲ್ಲದೆ, ಅವರು ಯುನೈಟೆಡ್ ಫ್ರಂಟ್‌ನ ಸ್ಟೀರಿಂಗ್ ಕಮಿಟಿಯ ಅಧ್ಯಕ್ಷರಾಗಿದ್ದರು.[೧೩] ದೆಹಲಿ ಮೆಟ್ರೋ ಯೋಜನೆಯ ಕೀರ್ತಿ ಅವರು ಸಲ್ಲುತ್ತದೆ.[೧೪] ನಂತರದ ವರ್ಷಗಳಲ್ಲಿ ಜಾತ್ಯತೀತ ಜನತಾ ದಳದ ರಾಷ್ಟ್ರಾಧ್ಯಕ್ಷರಾಗಿದ್ದಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.