ಚಳುವಳಿಯಾಗಿತ್ತು.[೧] ೧೯ ನೇ ಶತಮಾನದ ಉತ್ತರಾರ್ಧದಿಂದ ಮತ್ತು ವಿಶೇಷವಾಗಿ ೧೯೨೦ರ ನಂತರ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ, ಭಾರತೀಯ ಸ್ವಾತಂತ್ರ್ಯ ಚಳವಳಿಯ ನಾಯಕತ್ವ ಪಡೆಯಿತು.[೨] ಕಾಂಗ್ರೆಸ್ ಗ್ರೇಟ್ ಬ್ರಿಟನ್`ನಿಂದ ಭಾರತಕ್ಕೆ ಸ್ವಾತಂತ್ರ್ಯವನ್ನು ಪಡೆಯಲು ಮುಖ್ಯಪಾತ್ರ ವಹಿಸಿತು, ಮತ್ತು ಬ್ರಿಟಿಷ್ ಸಾಮ್ರಾಜ್ಯದಲ್ಲಿ ಇತರ ವಸಾಹತುಶಾಹಿ- ವಿರೋಧಿ ರಾಷ್ಟ್ರೀಯತಾವಾದಿ ಚಳುವಳಿಗಳನ್ನು ಪ್ರಬಲವಾಗಿ ಪ್ರಭಾವಿಸಿತು.[೩]
- ಕಾಂಗ್ರೆಸ್ ಒಂದು ಜಾತ್ಯತೀತ ಪಕ್ಷವಾಗಿದ್ದು, ಅವರ ರಾಜಕೀಯ ನೀತಿಯು ಪ್ರಜಾಪ್ರಭುತ್ವದ ವೇದಿಕೆಯುಲ್ಲಿ “ಭಾರತೀಯ ರಾಜಕೀಯ ನೀತಿಯಲ್ಲ“ ಮಧ್ಯಮಮಾರ್ಗದ-ಎಡಪಕ್ಷದ ನೀತಿಯನ್ನು ಅನುಸರಿಸುವುದೆಂದು ಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿದೆ.[೪] ಕಾಂಗ್ರೆಸ್`ನ ಸಾಮಾಜಿಕ ನೀತಿ ಗಾಂಧೀಜಿಯವರ ಸರ್ವೋದಯದ ತತ್ವವನ್ನು ಆಧರಿಸಿದೆ-ಸಮಾಜದ ಎಲ್ಲಾ ವರ್ಗಗಳನ್ನೂ ಮೇಲಕ್ಕೆತ್ತುವುದು-ಆರ್ಥಿಕವಾಗಿ ದುರ್ಬಲ ಮತ್ತು ಸಾಮಾಜಿಕವಾಗಿ ಅಂಚಿನಲ್ಲಿರುವ ಜನರ ಜೀವನವನ್ನು ಸುಧಾರಿಸುವ ಗುರಿಹೊಂದಿದೆ.[೫][೬] ಪಕ್ಷವು ಪ್ರಾಥಮಿಕವಾಗಿ ಸಾಮಾಜಿಕ ಪ್ರಜಾಪ್ರಭುತ್ವವನ್ನು ಉತ್ತೇಜಿಸುತ್ತದೆ- ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ, ಕಲ್ಯಾಣ ಮತ್ತು ಜಾತ್ಯತೀತತೆಗಳನ್ನು ಸಮತೋಲನಗೊಳಿಸುವ ಉದ್ದೇಶದಿಂದ-ಧಾರ್ಮಿಕ ಆಡಳಿತ ಮತ್ತು ಬೋಧನೆಗಳಿಂದ ಮುಕ್ತವಾಗಿರವ ಹಕ್ಕು ನೀಡುತ್ತದೆ.[೭]
- ೧೯೪೭ ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಕಾಂಗ್ರೆಸ್ ಭಾರತದ ಕೇಂದ್ರ ಸರ್ಕಾರವನ್ನು ಮತ್ತು ಅನೇಕ ಪ್ರಾದೇಶಿಕ ರಾಜ್ಯ ಸರ್ಕಾರಗಳನ್ನು ರಚಿಸಿತು. ಕಾಂಗ್ರೆಸ್ ಭಾರತದ ಪ್ರಬಲ ರಾಜಕೀಯ ಪಕ್ಷವಾಯಿತು; ೨೦೧೫ ರ ವೇಳೆಗೆ ಇದ್ದಂತೆ, ಸ್ವಾತಂತ್ರ್ಯಾನಂತರದ ೧೫ ಸಾರ್ವತ್ರಿಕ ಚುನಾವಣೆಗಳಲ್ಲಿ ಆರು ಸಂದರ್ಭಗಳಲ್ಲಿ ಅದು ಸಂಪೂರ್ಣ ಬಹುಮತವನ್ನು ಗಳಿಸಿದೆ ಮತ್ತು ಇತರ ಪಕ್ಷಗಳೊಂದಿಗೆ ಆಡಳಿತಾತ್ಮಕ ಒಕ್ಕೂಟವನ್ನು ನಾಲ್ಕು ಬಾರಿ ಮುನ್ನಡೆಸಿದೆ, ಕೇಂದ್ರ ಸರ್ಕಾರವನ್ನು ೪೯ ವರ್ಷಗಳ ಕಾಲ ನೇತೃತ್ವ ವಹಿಸಿತು. ಏಳು ಕಾಂಗ್ರೆಸ್ ಪ್ರಧಾನ ಮಂತ್ರಿಗಳು ಸರ್ಕಾರವನ್ನು ಮುನ್ನಡೆಸಿದರು, ಮೊದಲು ಜವಾಹರಲಾಲ್ ನೆಹರು (೧೯೪೭-೧೯೬೪) ಮತ್ತು ಇತ್ತೀಚಿನವರು ಮನಮೋಹನ್ ಸಿಂಗ್ (೨೦೦೪-೨೦೧೪). ೨೦೧೪ ರಲ್ಲಿ ಭಾರತದಲ್ಲಿ ನಡೆದ ಕೊನೆಯ ಸಾರ್ವತ್ರಿಕ ಚುನಾವಣೆಗಳಲ್ಲಿ ಅದು ಉತ್ತಮವಾಗಿ ತೋರಿಬರಲಿಲ್ಲವಾದರೂ, ಬಲಪಂಥೀಯ, ಹಿಂದೂ ರಾಷ್ಟ್ರೀಯತಾವಾದಿಯಾದ, ಭಾರತೀಯ ಜನತಾ ಪಕ್ಷ (ಬಿಜೆಪಿ) ಜೊತೆಗೆ, ಭಾರತದಲ್ಲಿ ಎರಡು ಪ್ರಮುಖ ರಾಷ್ಟ್ರವ್ಯಾಪಿ, ರಾಜಕೀಯ ಪಕ್ಷಗಳಲ್ಲಿ ಒಂದಾಗಿದೆ. ೨೦೧೪ ರ ಸಾರ್ವತ್ರಿಕ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ನಂತರದ ಸಾರ್ವತ್ರಿಕ ಚುನಾವಣೆಯ ಪ್ರದರ್ಶನಗಳಲ್ಲಿ ಅತ್ಯಂತ ದುರ್ಬಲ ಸ್ಥಿತಿಯನ್ನ ಹೊಂದಿತ್ತು, 543 ಸದಸ್ಯರುಳ್ಳ ಲೋಕಸಭೆಯಲ್ಲಿ ಕೇವಲ ೪೪ ಸ್ಥಾನಗಳನ್ನು ಗೆದ್ದಿದೆ.[೮]
- ೨೦೦೪ ರಿಂದ ೨೦೧೪ ರವರೆಗೂ, ಹಲವಾರು ಪ್ರಾದೇಶಿಕ ಪಕ್ಷಗಳೊಂದಿಗೆ ಕಾಂಗ್ರೆಸ್` “ಸಂಯುಕ್ತ ಪ್ರಗತಿಶೀಲ ಒಕ್ಕೂಟ”(ಯು.ಪಿ.ಎ. United Progressive Alliance,) ಎಂಬ ಒಕ್ಕೂಟವನ್ನು ರಚಿಸಿತು. ಒಕ್ಕೂಟದ ಸರ್ಕಾರದ ಮುಖ್ಯಸ್ಥರಾಗಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ನೇತೃತ್ವದ ಭಾರತೀಯ ಸರ್ಕಾರವನ್ನು ರಚಿಸಿದರು. ಆ ಅವಧಿಯಲ್ಲಿ ಪಕ್ಷದ ನಾಯಕಿ, ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ ದೀರ್ಘಾವಧಿಯ ಸೇವೆ ಸಲ್ಲಿಸಿದರು. ಡಿಸೆಂಬರ್ ೨೦೧೮ ರ ವೇಳೆಗೆ ಕರ್ನಾಟಕವು ಸೇರಿ ಆರು ಶಾಸಕಾಂಗ ಸಭೆಗಳಲ್ಲಿ ಅಧಿಕಾರದಲ್ಲಿದೆ: (ಮಹಾರಾಷ್ತ್ರದಲ್ಲಿ ಮಹಾ ವಿಕಾಸ ಅಗಾಢಿ), ಅದು ಅಧಿಕಾರ ಹೊಂದಿದ ಇತರ ರಾಜ್ಯಗಳು ಪಂಜಾಬ್, ರಾಜಸ್ಥಾನ, ಛತ್ತೀಸ್ಗಢ, ಮತ್ತು ಪುದುಚೇರಿಯ ಕೇಂದ್ರಾಡಳಿತ ಪ್ರದೇಶ (ಡಿಎಂಕೆ ಜೊತೆ ಮೈತ್ರಿ) [೯]
- ಸ್ಥಾಪನೆ - 28 ಡಿಸೆಂಬರ್ 1885
- ಪ್ರಧಾನ ಕಚೇರಿ- 24, ಅಕ್ಬರ್ ರಸ್ತೆ, ನವದೆಹಲಿ 110001
- ವೃತ್ತಪತ್ರಿಕೆ= ಕಾಂಗ್ರೆಸ್ ಸಂದೇಶ.
- ವಿದ್ಯಾರ್ಥಿ ವಿಂಗ್= ರಾಷ್ಟ್ರೀಯ ವಿದ್ಯಾರ್ಥಿ ಸಂಘದ ಒಕ್ಕೂಟ.
- ಯೂತ್ ವಿಂಗ್= ಇಂಡಿಯನ್ ಯೂತ್ ಕಾಂಗ್ರೆಸ್.
- ಮಹಿಳಾ ವಿಂಗ್= ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್.
- ಲೇಬರ್ ವಿಂಗ್= ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್.
- ಐಡಿಯಾಲಜಿ- ಧ್ಯೇಯೋದ್ದೇಶಗಳು:
- ಸಾಮಾಜಿಕ ಪ್ರಜಾಪ್ರಭುತ್ವ
- ಡೆಮಾಕ್ರಟಿಕ್ ಸಮಾಜವಾದ
- ಸಾಮಾಜಿಕ ಉದಾರವಾದ
- ಭಾರತೀಯ ರಾಷ್ಟ್ರೀಯತೆ
- ಹಿಂದೂ ರಾಷ್ಟ್ರೀಯತೆ- ಎಡ
- ಸ್ವದೇಶಿ ಚಳುವಳಿ
- ಗಾಂಧಿಯನ್ ಸಮಾಜವಾದ
- ಜಾತ್ಯತೀತತೆ
- ಪ್ರಗತಿಶೀಲತೆ
- ರಾಜಕೀಯ ಸ್ಥಾನ= ಮಧ್ಯಮ-ಎಡ
- ಅಂತರಾಷ್ಟ್ರೀಯ ಸದಸ್ಯತ್ವ
- ಪ್ರಗತಿಪರ ಒಕ್ಕೂಟ
- ಸಮಾಜವಾದಿ- ಅಂತರರಾಷ್ಟ್ರೀಯ
- ಬಣ್ಣ - ಆಕಾಶ ನೀಲಿ
- ಚುನಾವಣೆಆಯೋಗ ಸ್ಥಿತಿ: ರಾಷ್ಟ್ರೀಯ ಪಕ್ಷ
- ಒಕ್ಕೂಟ= ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ)
- ಲೋಕಸಭೆಯಲ್ಲಿ ಸ್ಥಾನಗಳು- 102 / 543
- ರಾಜ್ಯಸಭೆಯಲ್ಲಿ ಸ್ಥಾನಗಳು- 30 / 245
- ಸರಕಾರದಲ್ಲಿ ರಾಜ್ಯ & ಪ್ರದೇಶಗಳ ಸಂಖ್ಯೆ= 6 / 31
ಭಾರತದ ಬಹುತೇಕ ಕಾಂಗ್ರೆಸ್ ಅಲ್ಲದ ಪ್ರಧಾನಿಗಳು ತಮ್ಮ ವೃತ್ತಿಜೀವನದಲ್ಲಿ ಮೊದಲು ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು.
More information ನಂ, ಪ್ರಧಾನಿಗಳು ...
Close