From Wikipedia, the free encyclopedia
ಬಂಜಾರ ಅಥವಾ ಲಂಬಾಣಿ ಅಥವಾ ನಾಯ್ಕ ಅಥವಾ ಗೋರ್ ಮಾಟಿ. ಗುಜರಾತ್, ರಾಜಾಸ್ಥಾನ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳು ನಾಡುಗಳಲ್ಲಿ ಪ್ರಮುಖವಾಗಿ ನಿವಾಸಿಸುವ ಒಂದು ಜನಾಂಗ. ಮೂಲತಃ ರಾಜಸ್ಥಾನ ಮತ್ತು ಗುಜರಾತ್ ಮೂಲದ ಇವರು ಲಂಬಾಣಿ ಭಾಷೆಯನ್ನು ಮಾತನಾಡುತ್ತಾರೆ. ಬಂಜಾರ್ ಸಮುದಾಯವು ತನ್ನದೇ ಅದಾ ವೇಷ ಭೂಷಣದಿಂದ ಭಾರತೀಯ ಶ್ರೀಮಂತ ಕಲಾ ಸಂಸ್ಕೃತಿಗೆ ಅಪಾರವಾದ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಇವರನ್ನು 'ಜಿಪ್ಸಿ'ಗಳೆಂದು ಕರೆಯುತ್ತಿದ್ದರು. ಭಾರತೀಯ ಸಂವಿಧಾನವು ಇವರನ್ನು ಅಧಿಸೂಚಿತ 'ಬುಡಕಟ್ಟು ಜನಾಂಗ'ವೆಂದು ಪರಿಗಣಿಸಿ ವಿವಿಧ ರಾಜ್ಯಗಳಲ್ಲಿ ಈ ಕೆಳಕಂಡಂತೆ ಗುರುತಿಸಿದೆ.[೧][೨]
![]() ಸಾಂಪ್ರದಾಯಿಕ ಉಡುಗೆಯಲ್ಲಿ ಒಂದು ಲಂಬಾಣಿ ಮಹಿಳೆ | |
Regions with significant populations | |
---|---|
ಆಂಧ್ರ ಪ್ರದೇಶ ಮತ್ತು ತೆಲಂಗಾಣ | ೩.೨ ಹತ್ತುಲಕ್ಷ |
ಕರ್ನಾಟಕ | ೧.೧ ಹತ್ತುಲಕ್ಷ |
ಮಹಾರಾಷ್ಟ್ರ | ೨.೪ ಹತ್ತುಲಕ್ಷ |
ರಾಜಸ್ಥಾನ್ | ೨.೩ ಹತ್ತುಲಕ್ಷ |
ಮಧ್ಯ ಪ್ರದೇಶ | ೨.೨ ಹತ್ತುಲಕ್ಷ |
ಪಂಜಾಬ್ | ೨.೦ ಹತ್ತುಲಕ್ಷ |
Languages | |
ಲಂಬಾಣಿ | |
Religion | |
ಹಿಂದು ಧರ್ಮ |
ಹೀಗೆ ಬೇರೆ ಬೇರೆ ರಾಜ್ಯಗಳಲ್ಲಿ ಹರಡಿರುವ ಇವರು ೬ ಕೋಟಿ ೮೪ ಲಕ್ಷ ಜನಸಂಖ್ಯೆಯನ್ನು ಹೊಂದಿದ್ದಾರೆ. ಇವರು ಮೂಲತಃ ಉತ್ತರ ಹಿಂದೂ ಆರ್ಯಾ ಸಂಸ್ಕೃತಿಯವರಾಗಿದ್ದು, ತಮ್ಮನ್ನು ತಾವು ಗೋರ್ ಭಾಯ್ ಅಥವಾಾ ಗೋರ್ ಮಾಟಿ ಎಂದು ಕರೆದುಕೊಳ್ಳುತ್ತಾರೆ. ಇವರ ಮಾತೃ ಭಾಷೆ ಲಂಬಾಣಿಯಾಗಿದ್ದು, ಈ ಭಾಷೆಗೆ ಲಿಪಿ ಇಲ್ಲ ಹಾಗೂ ಹಿಂದಿ, ಉರ್ದು, ರಾಜಸ್ಠಾನಿ ಮತ್ತು ಸಂಸ್ಕೃತ ಭಾಷೆಗಳ ಸಂಮಿಶ್ರಣವಿದೆ. ಇವರು ವಾಸಿಸುವ ರಾಜ್ಯಗಳ ಭಾಷೆಯನ್ನು ಎರಡನೇಯ ಭಾಷೆಯಾಗಿ ಬಳಸುತ್ತಿದ್ದಾರೆ.ಇವರ ಮುಖ್ಯ ದೈವ ಸೇವಾಲಾಲ್. ಇವರ ಆರಾಧ್ಯ ದೈವದ ದೇವಾಸ್ಥನ ಕನಾ೯ಟಕ ರಾಜ್ಯದ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೂರುಗೊಂಡನಕೊಪ್ಪದಲ್ಲಿದೆ.ಇತ್ತೀಚಿಗೆ ಹೊಸ ದಾಗಿ ರಚನೆಗೊಂಡ ನ್ಯಾಮತಿ ತಾಲ್ಲೂಕಿಗೆ ಈ ಗ್ರಾಮಸೇರುತ್ತದೆ. ಶಿವರಾತ್ರಿ ದಿನಂದ೦ದು ಆಪಾರ ಪ್ರಮಾಣದಲ್ಲಿ ದೂರ ದೂರದ ಊರುಗಳಿಂದ ಈ ಪುಣ್ಯಕ್ಷೇತ್ರಕ್ಕೆ ಲಂಬಾಣಿ ಬಂಧುಗಳು ಆಗಮಿಸುತ್ತಾರೆ.ಇತ್ತೀಚಿಗೆ ಚಿಕ್ಕದಾಗಿದ್ದ ದೇವಸ್ಥಾನವನ್ನು ಬಹುದೊಡ್ಡ ಪ್ರಮಾಣದಲ್ಲಿ ಪ್ರವಾಸಿ ಕೇಂದ್ರ ಮತ್ತು ಪುಣ್ಯಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ.[೩][೪][೫]
ಕುಲ ಕಸಬು ಇವರ ಕುಲ ಕಸಬು ವ್ಯಾಪಾರ ಹಾಗೂ ಪಶುಸಂಗೋಪನೆ. ಇವರು ಕಷ್ಟ ಜೀವಿಗಳು, ಸ್ವಾಭಿಮಾನಿಗಳು ಅಷ್ಟೇ ಪ್ರಾಮಾಣಿಕರು, ಮೊದಲು ಅಲೆಮಾರಿಗಳಾಗಿದ್ದು ಇತ್ತೀಚಿಗೆ ನಾಗರೀಕತೆ ಬೆಳೆದಂತೆ ಗ್ರಾಮಗಳಲ್ಲಿ/ಊರುಗಳಲ್ಲಿ ವಾಸವಾಗಿದ್ದಾರೆ. ತಮ್ಮ ಊರುಗಳಿಗೆ ತಾಂಡಗಳೆಂದು ಕರೆದು ಕೊಳ್ಳುತ್ತಾರೆ. ಸಾಮಾನ್ಯವಾಗಿ ತಾಂಡಗಳು ಊರಿನ ಹೊರಭಾಗದಲ್ಲಿರುತ್ತವೆ. ಇವರು ಪೂರ್ವದಲ್ಲಿ ವ್ಯಾಪಾರಿಗಳಗಿದ್ದರು.ಇವರು ವಿಜಯ ನಗರ ಸಾಮ್ರಾಜ್ಯದಲ್ಲಿ ಮುತ್ತು,ರತ್ನ,ಬೆಳ್ಳಿ,ಬಂಗಾರವನ್ನು ಮಾರುತಿದ್ದರು ಅಂತ (ಸೂರಗೊಂಡನಕೊಪ್ಪ) ಸೇವಲಾಲ್ ಜನ್ಮಸ್ಥಳದಲ್ಲಿ ಮಾಡಿರುವ ಆಕೃತಿಗಳಲ್ಲಿ ತೋರಿಸಿದರೆ. ಬ್ರಿಟಿಷರ ವ್ಯಾಪಾರಕ್ಕೆ ಪೈಪೋಟಿ ನೀಡುತ್ತಿದ್ದರು ಎನ್ನುವ ಕಾರಣಕ್ಕೆ ಇವರನ್ನು ನಿಷೇಧಿತ ಜನಾಂಗಕ್ಕೆ ಸೇರಿಸಿ ಇವರನ್ನು ಮೂಲೆಗುಂಪಾಗಿಸಿದರು ನಂತರ ಇವರ ಕುಲಕಸುಬು ವ್ಯಾಪಾರ ಆಗಿದ್ದರಿಂದ ಅಲೆಮಾರಿಗಳಾಗಿ ಉಪ್ಪು ಸುಣ್ಣ ಮತ್ತು ಗೆಣಸು ಮಾರುತ್ತಾ ದೇಶಲಲ್ಲೆಲ್ಲ ನೆಲಸಿದ್ದಾರೆ.
ಬಂಜಾರ್ ರರು ತಮ್ಮ ಊರುಗಳಿಗೆ ತಾಂಡಗಳೆಂದು ಕರೆದು ಕೊಳ್ಳುತ್ತಾರೆ. ಸಾಮಾನ್ಯವಾಗಿ ತಾಂಡಗಳು ಊರಿನ ಹೊರಭಾಗದಲ್ಲಿರುತ್ತವೆ. ತಾಂಡಾದಲ್ಲಿ ಹಿರಿಯಾನಾದ ದಕ್ಷ ಹಾಗೂ ಸಮರ್ಥನಾದ ನಾಯಕನಿರುತ್ತಾನೆ. ಅವರಿಗೆ ನಾಯಕ್ಎಂದು ಇವರಿಗೆ ಸಹಾಯಕ ರಾಗಿ ಡಾವ್ಹಾಗೂ ಕಾರಬಾರಿಗಳಿರುತ್ತಾರೆ. ತಾಂಡಾದಲ್ಲ್ಲಿ ಎಂತಹುದೇ ಕ್ಲಿಷ್ಟ ಸಮಸ್ಯೆ ಎದುರಾದರು ಸಹ ಇವರುಗಳು ಬಗೆಹರಿಸಬಲ್ಲರು, ಈ ತಾಡಗಳಲ್ಲಿ ಯಾವುದೆ ತರಹದ ತೂಂದರೆಯಾದರೆ ಊರಿನ ಮುಖಮಂಡರು ಒಂದೇಡೆ ಸೇರಿ ಚರ್ಚಿಸಿ ಬಗೆಹರಿಸುತ್ಟಾರೆ.
ಹಾಡುವುದು ಲಂಬಾಣಿ ವರ್ಗದ ಒಂದು ಜನಪದಪ್ರಕಾರವಾದರೆ, ಮತ್ತೊಂದು ಪ್ರಸಿದ್ಧ ಜನಪದ ಪ್ರಕಾರವೆಂದರೆ ನೃತ್ಯ. ಲಂಬಾಣಿ ನೃತ್ಯ ಅಲ್ಲಿನ ಮಹಿಳೆಯರಿಗೆ ಮಾತ್ರ ಸಂಬಂಧಿಸಿದ್ದು. ಮುಂಗೈ ಮತ್ತು ಕಾಲುಗಳಿಗೆ ದಪ್ಪನೆಯ ಬೆಳ್ಳಿ ಕಡಗ, ಕಿವಿಯಲ್ಲಿ ಜೋತು ಬೀಳುವಷ್ಟು ಆಭರಣ, ರ್ತಕೆಂಪಿನ ಬನಾತು, ತುಂಬಿದ ನೆರಿಗೆಗಳಿಂದ ಕೂಡಿದ ತುಂಡು ಲಂಗ, ಲಂಗದ ಮೇಲೆ ಅಂಗೈಯಗಲದ ಕನ್ನಡಿಗಳು ಹಾಗೂ ಅಡವಿಯಿಂದ ಸಂಗ್ರಹಿಸಿದ ಮಣಿಗಳ ಚಿತ್ತಾರ, ಕುತ್ತಿಗೆಯಲ್ಲಿ ಇಳಿಬಿಟ್ಟ ಆರೇಳು ಮಣಿಸರ, ತೋಳುಬಂದಿ, ಬೆರಳುಗಳಿಗೆ ತಾಮ್ರದ ಹಾಗೂ ಹಿತ್ತಾಳೆ ಉಂಗುರ ಧರಿಸಿದ ಲಂಬಾಣಿ ಸ್ತ್ರೀಯರು ಆರ್ಭಟ, ಭಾವಾವೇಶಗಳಿಲ್ಲದಂತೆ ನರ್ತಿಸುತ್ತಾರೆ. ಸಮೂಹ ಗಾಯನದಲ್ಲಿ ನಡು ನಡುವೆ ಚಪ್ಪಾಳೆ ಹಾಕಿಕೊಳ್ಳುತ್ತಾ, ಲಯಭರಿತವಾಗಿ ಗಂಟೆಗಟ್ಟಲೆ ಕುಣಿಯುತ್ತಾರೆ.
Seamless Wikipedia browsing. On steroids.