Remove ads
From Wikipedia, the free encyclopedia
ಚಿತ್ರದುರ್ಗ ನಗರ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಕೇಂದ್ರ ನಗರ. ಈ ನಗರವು ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು 200ಕಿಮೀ ದೂರದಲ್ಲಿದೆ.
ಚಿತ್ರದುರ್ಗ
ಚಿತ್ರದುರ್ಗ | |
---|---|
ನಗರ | |
Population (2019) | |
• Total | ೧,೭೫,೧೭೦ |
Website | http://www.chitradurgacity.gov.in/ |
ಚಿತ್ರದುರ್ಗ ನಗರವು ಪುರಾಣದ ಪ್ರಕಾರ ಶ್ರೀಕೃಷ್ಣ ಜಾಂಬವತಿಯ ಪುತ್ರನಾದ ಚಿತ್ರಕೇತು ಆಳ್ವಿಕೆ ಮಾಡಿದ ಪ್ರದೇಶ. ಚಿತ್ರದುರ್ಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲ್ಲುಬೆಟ್ಟಗಳಿಂದ ಹಾಗೂ ಹುಲ್ಲುಗಾವಲು ಗಳಿಂದ ಕೂಡಿದ ದುರ್ಗಮ ಪ್ರದೇಶವಾಗಿತ್ತು. ಅಂತಹ ದುರ್ಗಮ ಪ್ರದೇಶವನ್ನು ಚಿತ್ರಕೇತು ಆಳ್ವಿಕೆ ಮಾಡಿದ ಕಾರಣದಿಂದ ಚಿತ್ರದುರ್ಗ ಎಂದು ಹೆಸರು ಬರಲು ಕಾರಣವಾಗಿದೆ. ಬ್ರಿಟೀಷರ ಕಾಲದಲ್ಲಿ ಚಿತ್ತಲ್ದ್ರಗ್ ಅಧಿಕೃತ ಹೆಸರಾಗಿತ್ತು. ಇದ್ದರಿಂದ ಚಿತ್ರದುಗ೯ ಎಂದು ಕರೆಯುತ್ತಾರೆ ಇಲ್ಲಿ ಕಲ್ಲಿನ ಕೋಟೆ ಇದೆ
೨೦೧೧ರ ಜನಗಣತಿಯ ಪ್ರಕಾರ,[೧] ಚಿತ್ರದುರ್ಗ ನಗರದ ಜನಸಂಖ್ಯೆ ೧,೨೫,೧೭೦. ಇವರಲ್ಲಿ ಪುರಷರು ಸುಮಾರು ೫೧% ರಷ್ಟು ಇದ್ದರೆ, ಮಹಿಳೆಯರು ಸುಮಾರು ೪೯% ರಷ್ಟು ಇದ್ದಾರೆ. ಚಿತ್ರದುರ್ಗದ ಸರಾಸರಿ ಸಕ್ಷಾರತಾ ಪ್ರಮಾಣ ೭೯%, ರಾಷ್ಟ್ರೀಯ ಸರಾಸರಿಗಿಂತೆ(೫೯.೫%) ಹೆಚ್ಚಾಗಿದೆ. ಪುರುಷರ ಸಕ್ಷಾರತಾ ಪ್ರಮಾಣ ೮೦% ಮತ್ತು ಮಹಿಳೆಯರ ಸಕ್ಷಾರತಾ ಪ್ರಮಾಣ ೭೨%. ಚಿತ್ರದುರ್ಗದಲ್ಲಿ ಸುಮಾರು ೧೧% ರಷ್ಟು ಜನರು ೬ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.
ಚಿತ್ರದುರ್ಗ ನಗರದ ಆಡಳಿತವನ್ನು "ಚಿತ್ರದುರ್ಗ ನಗರ ಮುನ್ಸಿಪಲ್ ಕೌನ್ಸಿಲ್" ನೆಡೆಸುತ್ತದೆ.[೨]
ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು ಮತ್ತು ಚಿತ್ರದುರ್ಗದ ನಾಯಕರು ಸೇರಿದ ಹಲವು ರಾಜರು ಚಿತ್ರದುರ್ಗ ಕೋಟೆಯನ್ನು ಸುಮಾರು ೧೦ರಿಂದ ೧೮ನೇ ಶತಮಾನದವರೆಗೆ ಕಟ್ಟಿದರು.
ಚತ್ರದುರ್ಗ, ಚೋಲಗುಡ್ಡ ಮತ್ತು ಕಿರುಬನಕಲ್ಲು ಗುಡ್ಡಗಳ ನಡುವೆ ಚಂದ್ರವಳ್ಳಿ ಗುಹೆಗಳಿವೆ. ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ದೇವಾಲಯ. JOGIMATTI
ಅಶೋಕ ಸಿದ್ದಾಪುರ :
ಅಶೋಕ ಸಿದ್ದಾಪುರ ಚಿತ್ರದುರ್ಗ ಜಿಲ್ಲೆಯ ಒಂದು ಪ್ರಮುಖ ಪುರಾತತ್ವ ಸ್ಥಳವಾಗಿದ್ದು, ಅಲ್ಲಿಂದ ಅಶೋಕ ಚಕ್ರವರ್ತಿಯ ಶಾಸನಗಳನ್ನು ಉತ್ಖನನ ಮಾಡಲಾಗಿದೆ. ರಾಮಾಯಣದಲ್ಲಿ ಉಲ್ಲೇಖಿಸಲಾದ ರಾಮಗಿರಿ ಎಂಬ ಗುಡ್ಡಗಾಡು ಹತ್ತಿರದಲ್ಲಿದೆ. ರಾವಣನು ಸೀತೆಯನ್ನು ಅಪಹರಿಸಿ ಮತ್ತೆ ಲಂಕಾಕ್ಕೆ ಪ್ರಯಾಣಿಸುತ್ತಿದ್ದಾಗ, ಪೌರಾಣಿಕ ಹದ್ದು ಜಟಾಯು ಇಲ್ಲಿ ಅವನೊಂದಿಗೆ ಹೋರಾಡಿದನೆಂದು ನಂಬಲಾಗಿದೆ. ಜಟಾಯು ಯುದ್ಧದಲ್ಲಿ ಪ್ರಾಣ ಕಳೆದುಕೊಂಡರು ಮತ್ತು ನಂತರ, ಜಟಾಯುವಿನ ಕೊನೆಯ ಆಚರಣೆಗಳನ್ನು ಪೂರ್ಣಗೊಳಿಸಿದ ನಂತರ, ರಾಮನು ಆ ಸ್ಥಳದಲ್ಲಿ ಶಿವಲಿಂಗವನ್ನು ಸ್ಥಾಪಿಸಿದನು. ರಾಮೇಶ್ವಾ ಎಂದು ಕರೆಯಲ್ಪಡುವ ದೇವಾಲಯ
ಚಿತ್ರದುರ್ಗದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
ಅಧಿಕ ಸರಾಸರಿ °C (°F) | 28.9 (84) |
32.1 (89.8) |
35.0 (95) |
36.3 (97.3) |
35.0 (95) |
30.5 (86.9) |
28.1 (82.6) |
28.1 (82.6) |
29.1 (84.4) |
29.5 (85.1) |
28.3 (82.9) |
28.0 (82.4) |
30.74 (87.33) |
ಕಡಮೆ ಸರಾಸರಿ °C (°F) | 16.8 (62.2) |
18.9 (66) |
21.1 (70) |
22.6 (72.7) |
22.3 (72.1) |
21.4 (70.5) |
20.9 (69.6) |
20.5 (68.9) |
20.3 (68.5) |
20.3 (68.5) |
18.2 (64.8) |
16.6 (61.9) |
19.99 (67.97) |
ಸರಾಸರಿ ಮಳೆ mm (inches) | 0 (0) |
1 (0.04) |
4.0 (0.157) |
36 (1.42) |
81 (3.19) |
51 (2.01) |
71 (2.8) |
65 (2.56) |
99 (3.9) |
133 (5.24) |
36 (1.42) |
9 (0.35) |
586 (23.087) |
Source: Climate-data.org,[೩] |
ಒನಕೆ ಓಬವ್ವಳ ಸಾಹಸಗಾಥೆ ಕನ್ನಡ ನಾಡಿನ ಶೌರ್ಯಗಾಥೆಗಳಲ್ಲಿ ಒಂದಾಗಿ ಜನಜನಿತವಾಗಿದೆ. ಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿ, ಹೈದರ-ಅಲಿಯ ಸೈನ್ಯವು ಕೋಟೆಯನ್ನು ಸುತ್ತುವರೆದಿತ್ತು. ಒಬ್ಬ ಮಹಿಳೆಯನ್ನು ಕೋಟೆಯ ಕಿಂಡಿಯಿಂದ ಒಳ ಹೊಗುವುದನ್ನು ಕಂಡ ಹೈದರ-ಅಲಿಯು ತನ್ನ ಸೈನ್ಯವನ್ನು ಆ ಕಂಡಿಯ ಮೂಲಕ ಒಳಗೆ ಕಳುಹಿಸಿ ಕೋಟೆಯನ್ನು ವಶಪಡಿಸಿಕೊಳ್ಳಲು ಸಂಚು ಹೂಡುತ್ತಾನೆ. ಕೋಟೆಯ ಆ ಭಾಗದ (ಹೆಸರು ಗೊತ್ತಿಲ್ಲ) ನ ಹಂಡತಿಯೇ ಓಬವ್ವ. ಅವಳು ಗಂಡನಿಗೆ ಊಟ ತರುತ್ತಾಳೆ. ಗಂಡನನ್ನು ಊಟಕ್ಕೆ ಕೂರಿಸಿ, ನೀರು ತರಲು ಹೋಗುತ್ತಾಳೆ. ಅಲ್ಲಿ ಹೈದರ-ಅಲಿಯ ಸೈನಿಕರನ್ನು ಕಿಂಡಿಯ ಮೂಲಕ ನುಸುಳುವದನ್ನು ಕಾಣುತ್ತಾಳೆ. ಎದೆಗುಂದದೆ ಕೈಯಲ್ಲಿದ್ದ ಒನಕೆಯಿಂದಲೇ ಒಳಗೆ ನುಗ್ಗುತ್ತಿರುವ ಒಬ್ಬೊಬ್ಬ ಸೈನಿಕರನ್ನು ಜಜ್ಜಿ ಕೊಲ್ಲುತ್ತಾಳೆ. ಸತ್ತವರನ್ನು ಸಂಶಯ ಬಾರದ ಹಾಗೆ ದೂರ ಎಳೆದು ಹಾಕುತ್ತಾಳೆ. ಅತ್ತ ಊಟ ಮುಗಿಸಿದ ಕಾವಲುಗಾರ ತುಂಬಾ ಹೊತ್ತಿನವರೆಗೂ ಹೆಂಡತಿಗಾಗಿ ಕಾಯ್ದ ಹುಡುಕುತ್ತ ಬರುತ್ತಾನೆ. ಅಲ್ಲಿ ರಕ್ತಸಿಕ್ತವಾದ ಒನಕೆಯನ್ನು ಕೈಯಲ್ಲಿ ಹಿಡಿದು ರಣಚಂಡಿಯ ಅವತಾರದಲ್ಲಿರುವ ಓಬವ್ವನನ್ನು ಸತ್ತು ಬಿದ್ದಿರುವ ನೂರಾರು ಹೈದರ-ಅಲಿಯ ಸೈನಿಕರನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಕೂಡಲೆ ಕಹಳೆ ಊದಿ ತನ್ನ ಸೇನೆಯನ್ನು ಎಚ್ಚರಗೊಳಿಸುತ್ತಾನೆ ಹಾಗೂ ನಾಯಕನ ಸೇನೆಯು ಕೋಟೆಯನ್ನು ಹೈದರ-ಅಲಿಯ ವಶಕ್ಕೆ ಹೋಗುವದನ್ನು ತಪ್ಪಿಸುತ್ತದೆ. ಓಬವ್ವನ ಸಮಯೋಚಿತ ಯುಕ್ತಿ ಮತ್ತು ಧೈರ್ಯವನ್ನು ಈಗಲೂ ಜನ ನೆನೆಯುತ್ತಾರೆ. ಈ ಘಟನೆಗೆ ಸಾಕ್ಷಿಯಾಗಿ ಈಗಲೂ ಆ ಕಿಂಡಿಯನ್ನು ಏಳು ಸುತ್ತಿನ ಕೋಟೆಯಲ್ಲಿ ಕಾಣಬಹುದು. ಅದು ಚಿತ್ರದುರ್ಗದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ .ಮತ್ತು ಚಿತ್ರದುಗದಲ್ಲಿ
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.