From Wikipedia, the free encyclopedia
ಕೆರೆಸಂತೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಕೆರೆಸಂತೆ ಕಡೂರ್ ತಾಲ್ಲೂಕಿನ ಒಂದು ಪುಣ್ಯ ಕ್ಷೇತ್ರ ಪೌರಾಣಿಕ ವಾಗಿ ಕೆರೆಸಂತೆಯಲ್ಲಿ ಶ್ರೀ ಮಹಾಲಕ್ಷ್ಮೀ ಅಮ್ಮನವರು ಪಾದಸ್ಪರ್ಶ ವಾದ ಕ್ಷೇತ್ರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಕೆರೆಸಂತೆಯಲ್ಲಿ ಶ್ರೀಲಕ್ಷ್ಮೀದೇವಿ ನೆಲೆಗೊಂಡ ರೋಚಕ ಚರಿತೆ 🌺🌷🌺
* ಹಿಂದೆ ಋಷಿಮುನಿಗಳು ಯಜ್ಞವನ್ನು ಮಾಡುವಾಗ ನಾರದ ಮುನಿಗಳು ಅಲ್ಲಿಗೆ ಬಂದು ನೀವು ಈ ಯಜ್ಞಯಾಗಧಿ ಗಳನ್ನು ಯಾರಿಗೆ ಸಮರ್ಪಿಸುತ್ತೀರ ತ್ರಿಮೂರ್ತಿಗಲ್ಲಿ ಯಾರು ಸರ್ವೋತ್ತಮ ಎಂದು ಕೇಳುತ್ತಾರೆ
*ಸತ್ಯಾಂಶವನ್ನು ತಿಳಿಯಲು ಭೃಗು ಮಹರ್ಷಿಗಳು ಕೈಲಾಸಕ್ಕೆ ಹೋದರು ಅಲ್ಲಿ ಮಹೇಶ್ವರ ಮತ್ತು ಪಾರ್ವತಿ ದೇವಿಈರ್ವರು ಏಕಾಂತದಲ್ಲಿ ಇದ್ದರು ಭೃಗುಮಹರ್ಷಿಗಳು ತಾವು ಕೈಲಾಸಕ್ಕೆ ಬಂದರು ರುದ್ರ ದೇವ ಗಮನನೀಡದ್ದರಿಂದ ಈಶ್ವರ ದೇವನಿಗೆ ನಿನ್ನ ರೂಪವನ್ನು ಯಾರು ಪೂಜಿಸದಿರಲಿ ಎಂದು ಶಾಪ ಕೊಟ್ಟು ಬ್ರಹ್ಮ ಲೋಕಕ್ಕೆ ತೆರಳಿದರು ಅಲ್ಲಿ ಬ್ರಹ್ಮ ಮತ್ತು ಸರಸ್ವತಿ ಇಬ್ಬರು ಸಂಗೀತವನ್ನು ಕೇಳುತ್ತಾ ತಲ್ಲೀನರಾಗಿದ್ದರು ಭುಗುವಿನೆಡೆಗೆ ಗಮನ ನೀಡಲಿಲ್ಲ, ಇದರಿಂದ ಕೋಪಗೊಂಡ ಭೃಗು ಮಹರ್ಷಿಯು ಬ್ರಹ್ಮ ದೇವನಿಗೆ ಶಾಪಕೊಟ್ಟು ನಂತರ ವೈಕುಂಠಕ್ಕೆ ಬಂದರು ವೈಕುಂಠ ದಲ್ಲಿ ಮಹಾವಿಷ್ಣು ದೇವನು ಸರ್ಪಶಯನನಾಗಿ ಮಲಗಿದ್ದಾರೆ ; ಶ್ರೀ ಲಕ್ಷ್ಮೀ ದೇವಿಯು ಪಾದಸೇವೆಯಲ್ಲಿ ಮಗ್ನರಾಗಿದ್ದಾರೆ .ಇದನ್ನು ಕಂಡ ಭೃಗು ಋಷಿಯು ತನ್ನೆಡೆಗೆ ವಿಷ್ಣುವು ಸ್ವಲ್ಪವು ಗಮನ ನೀಡಲಿಲ್ಲ ವೆಂದು ಕೋಪದ್ದಿಂದ ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ತನ್ನ ಎಡಗಾಲಿನಿಂದ ಹೊದ್ದರು ,ಹಾಗ ವಿಷ್ಣು ದೇವನು ಎಚ್ಚರಗೊಂಡು ಋಷಿವರ್ಯ ನನ್ನ ಕಲ್ಲಿನಂತಹ ಎದೆಗೆ ನಿಮ್ಮ ಕಮಲದ ಪಾದಗಳು ಸ್ಪರ್ಶವಾಗಿ ಅದೆಷ್ಟು ನೋವಾಗಿತೋ ಎಂದುಹೇಳಿ ಶ್ರೀ ಲಕ್ಷ್ಮೀ ದೇವಿಗೆ ಬಿಸಿನೀರುತರಲು ಹೇಳಿದರು ನಂತರ ಆನೀರಿನಿಂದ ಭೃಗುವಿನ ಪಾದ ತೊಳೆದರು .
ಆಗ ಭೃಗುವಿಗೆ ಹರಿ ಸರ್ವೋತ್ತಮನೆಂದು ಜ್ಞಾನೋದಯವಾಯಿತು. ಆದರೆ ಶ್ರೀ ಲಕ್ಷ್ಮೀ ದೇವಿಯು ತನ್ನ ವಾಸಸ್ಥಳ ವಾಗಿದ್ದ ವಿಷ್ಣುವಿನ ವಕ್ಷಸ್ಥಳಕ್ಕೆ ಭೃಗುವು ಹೊದ್ದರಿಂದ ಹೊರತಾಗಿ ತನ್ನ ಕೈಯಿಂದಲೇ ನೀರುತರಿಸಿ ಆ ಋಷಿಯ ಪಾದ ತೊಳೆದಿದ್ದರಿಂದ ಶ್ರೀದೇವಿಯು ವಿಷ್ಣುವಿನೊಡನೆ ಕೋಪಿಸಿಕೊಂಡು ಭೂಲೋಕಕ್ಕೆ ಬಂದರು.ಭೂಲೋಕದಲ್ಲಿ ಸ್ಥಳವನ್ನು ಹರಸುವ ಸಂದರ್ಭದಲ್ಲಿ ತನ್ನ ಮೊದಲ ಪಾದವನ್ನು ಕಾಶ್ಮೀರದ ವೈಶ್ನೋದೇವಿ ಕ್ಷೇತ್ರದಲ್ಲಿ ಇಟ್ಟು ನಂತರ ದಕ್ಷಿಣದ ಕಡೆಗೆ ಬಂದು *ಮಹಾರಾಷ್ಟ್ರದ_ಕರವೀರಾಪುರ_ಕೋಲ್ಹಾಪುರದ ಚೆಲುವಿಗೆ ಮನಸೋತು ಅಲ್ಲಿ ವಿರಮಿಸಿದ್ದರು. ನಂತರ ಹೀಗೆ ಮುಂದುವರೆದು ತನ್ನ ಮೂರನೇ ಪಾದವನ್ನು ಕರ್ನಾಟಕದ ದಕ್ಷಿಣದ #ಕೆರೆಸಂತೆ_ಪುರವರ್ಗದ_ಚೆಲುವ_ಸಿರಿಗೆ_ಮನಸೋತು ಇಲ್ಲಿ ವಿರಮಿಸಿ ಕೆಲಕಾಲ ಪದ್ಮಾಸನ ರೂಢರಾಗಿ ಧ್ಯಾನಸಕ್ತರಾಗಿದ್ದರೆಂದು ಸ್ಕಂದಪುರಾಣ ರೇವಾಖಂಡದಲ್ಲಿ ತಿಳಿದುಬಂದಿರುತದ್ದೆ. ನಂತರ ತಿರುಪತಿಯ ಅಲಮೇಲುಮಂಗಪುರದ ಕಡೆಗೆ ಪಯಣಿಸುತ್ತಾರೆ.
ನಂತರದ ಕಾಲಘಟ್ಟದಲ್ಲಿ ಹೊಯ್ಸಳ ವಿಷ್ಣುವರ್ಧನನ ರಾಣಿ ಶಾಂತಲಾ ದೇವಿಯ ಕನಸಿನಲ್ಲಿ ದೇವಿ ಪ್ರತ್ಯಕ್ಷಳಾಗಿ ನಾನು ಇಲ್ಲಿ ನೆಲೆಸಿದ್ದೇನೆ ಎಂದು ತಿಳಿಸಿದ ಕಾರಣ ಶಾಂತಲಾ ದೇವಿಯು 1117 ರಲ್ಲಿ ಈ ದೇವಾಲಯ ವನ್ನು ಪುನರ್ನಿರ್ಮಾಣ ಮಾಡಿರುತ್ತಾರೆ . *ಕೆರೆಸಂತೆಯ ಶ್ರೀ ದೇವಿಯ ವಿಗ್ರಹವು ಸುಮಾರು 1500 ವರ್ಷ ಹಳೆಯದ್ದಾಗಿರುತ್ತದೆ.
೯೦೦ವರ್ಷಗಳ ಮಹೋನ್ನತ ಇತಿಹಾಸ ಇರುವ ದೇವಸ್ಥಾನ ಹೊಯ್ಸಳರ ದೊರೆ ರಾಜ ವಿಷ್ಣುವರ್ಧನನಕಾಲದಿಂದ ನಿತ್ಯನೈಮಿತ್ಯಿಕ ಪೂಜಾರಾದನೆನಡೆಯುತ್ತಿದೆ. ಕಡೂರು ತಾಲೋಕಿನ ೧೫ ಕಿ ಮೀ ದೂರದಲ್ಲಿರುವ ಐತಿಹಾಸಿಕ ಮಹತ್ವದ ಶ್ರೀ ಕೆರೆಸಂತೆ ಮಹಾಲಕ್ಷ್ಮೀ ದೇವಸ್ಥಾನ ತಾಯಿಗೆ ಅರಿವೆಲಕ್ಕಮ್ಮ,ಲಕ್ಕಮ್ಮ,ಲಕ್ಷ್ಮಮ್ಮ,ಸೌಭಾಗ್ಯಲಕ್ಷ್ಮಿ ಇನ್ನಿತರ ಹೆಸರುಗಳಿಂದ ಕರೆಯುತ್ತಾರೆ. ಹೊಯ್ಸಳರ ಕಾಲದ ರಾಜ ವಿಷ್ಣುವರ್ಧನ ಹಾಗೂ ಆತನ ಪತ್ನಿ ನಾಟ್ಯರಾಣಿ ಶಾಂತಲೆ ಸ್ವಪ್ನದಲ್ಲಿ ಶ್ರೀ ಮಹಾಲಕ್ಷ್ಮಿದೇವಿಯ ಅಪ್ಪಣೆಯಂತೆ ಕೆರೆಸಂತೆಗ್ರಾಮದಲ್ಲಿ ಈ ದೇಗುಲ ನಿರ್ಮಿಸಿ ಕ್ರಿ ಶ ೧೧೧೭ ರ ಚೈತ್ರಶುದ್ದ ಬಿದಿಗೆಯಂದು ಶ್ರೀ ಮಹಾಲಕ್ಷ್ಮಿಯ ವಿಗ್ರಹ ಪ್ರತಿಷ್ಠಾಪಿಸಲಾಯಿತು ಮಹಾಲಕ್ಷ್ಮಿ ಅಮ್ಮನವರ ಶಿಲಾಮೂರ್ತಿ ಮೂರುವರೆ ಅಡಿ ಎತ್ತರವಿದ್ದು, ತಾಯಿಚತುರ್ಭುಜಳಾಗಿ ನಿಂತ ಭಂಗಿಯಲ್ಲಿ ಶಂಖ,ಚಕ್ರ,ಗದೆ ಮತ್ತು ಅಮೃತ ಕಳಶಗಳನ್ನು ಹಿಡಿದಿರುವ ಸುಂದರ ವಿಶಿಷ್ಟಮೂರ್ತಿಯು ಹೊಯ್ಸಳ ಶೈಲಿಯಲ್ಲಿದೆ, ಮೂರ್ತಿಯ ಹಿಂಭಾಗ ದಲ್ಲಿ ಶ್ರೀಚಕ್ರ ಆಕೃತಿಇದ್ದು, ಪಾದಗಳ ಕೆಳಗೆ ಆನೆಯ ಆಕೃತಿಯ ಕೆತ್ತನೆಯಾಗಿದೆ,
ಕ್ರಿ ಶ ೧೧೩೭ರಲ್ಲಿ ರಾಜ ವಿಜಯ ನರಸಿಂಹ ಕ್ರಿ ಶ ೧೧೭೩ ರಲ್ಲಿ ರಾಜ ಬಲ್ಲಾಳ ಕ್ರಿ ಶ ೧೨೩೫ರಲ್ಲಿ ರಾಜ ಮುಮ್ಮಡಿ ನರಸಿಂಹ ಕ್ರಿ ಶ ೧೪೦೬ರಲ್ಲಿ ರಾಜ ಪ್ರತಾಪ ಬುಕ್ಕರಾಯ ಕ್ರಿ ಶ ೧೫೨೦ರಲ್ಲಿ ರಾಜ ನರಸಿಂಗರಾಯ
ಶ್ರೀ ದೇವಿಯ ಎದುರಿಗೆ ಸುಮಾರು ೨ ಮೈಲಿ ದೂರದಲ್ಲಿ ಇರುವ ಪುರಾತನ ಸುಂದರ ಜನಾರ್ಧನ ಸ್ವಾಮಿ ದೇವಾಲಯವಿದ್ದು ಇಲ್ಲಿನ ವಿಶೇಷವೆನೆಂದರೆ ಸೂರ್ಯೋದಯದ ಕಿರಣಗಳು ಜನಾರ್ಧನಸ್ವಾಮಿಯ ದೇವಾಲಯ ಪ್ರವೇಶಿಸಿ ಅಲ್ಲಿನ ಪಶ್ಚಿಮಗೋಡೆಯಮೂಲಕ ಲಕ್ಷ್ಮಿದೇವಿ ಮೂರ್ತಿಯ ಪಾದಗಳ ಮೇಲೆ ಬೀಳುತ್ತಿತ್ತು.
ಭರತಖಂಡದಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನಗಳಲ್ಲಿ ಭೂಸ್ಪರ್ಷ ಪಾದ ಹೊಂದಿರುವ ಮೂರು ಲಕ್ಷ್ಮೀ ದೇವಸ್ಥಾನಗಳಲ್ಲಿ ಇದು ಕೂಡ ಒಂದಾಗಿದ್ದು ಉಳಿದ ಎರಡು ದೇವಾಲಯಗಳು ಮಹಾರಾಷ್ಟ್ರದ ಕೊಲ್ಲಾಪುರ,ಮತ್ತು ಆಂದ್ರದ ತಿರುಪತಿಯಲ್ಲಿರುವ ಅಲಮೇಲು ಮಂಗಾಪುರದಲ್ಲಿವೆ. ಹೊಯ್ಸಳ ಸಾಮ್ರಾಜ್ಯ ವಿಸ್ತರಣೆಗೆ ಈ ಮಹಾಲಕ್ಷೀ ದೇವಿಯ ಕೃಪಾಕಟಾಕ್ಷವೇ ಕಾರಣ ಎಂದು ನಂಬಿದ್ದ ಹೊಯ್ಸಳರ ರಾಜ ವಿಷ್ಣುವರ್ಧನ ಪ್ರತಿವರ್ಷ ಮಾರ್ಗಶಿರ ಉಣ್ಣಿಮೆ ಯಂದು ಅಮ್ಮನವರಿಗೆ ರತೋತ್ಸವ ಹಾಗೂ ಕಾರ್ತಿಕದೀಪೋತ್ಸವವನ್ನು ನೆಡೆಸಲು ವ್ಯವಸ್ಥೆ ಮಾಡುತ್ತಿದ್ದ, ರಾಜನು ದೇಗುಲದ ಆಗ್ನೇಯ ಭಾಗಕ್ಕೆ ಜನರ ಅನುಕೂಲಕ್ಕಾಗಿ ದೊಡ್ಡಕೆರೆಯ ನಿರ್ಮಾಣಮಾಡಿದ್ದರಿಂದ ಈ ಕೆರೆಗೆ ವಿಷ್ಣುಸಮುದ್ರ ಎಂದು ಕರೆಯುತ್ತಾರೆ.
Seamless Wikipedia browsing. On steroids.