ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ
ಅತಿ ವಿಸ್ತಾರವಾದ ಮ್ಯಾಂಗ್ರೋವ್ ಅರಣ್ಯ / From Wikipedia, the free encyclopedia
ಸುಂದರಬನ ಅಥವಾ ಸುಂದರ್ಬನ್ಸ್ ವಿಶ್ವದ ಅತಿ ವಿಸ್ತಾರವಾದ ಮ್ಯಾಂಗ್ರೋವ್ ಅರಣ್ಯಗಳಲ್ಲಿ ಒಂದಾಗಿದೆ. ಸುಂದರಬನ ಹೆಸರಿನ ಅರ್ಥ ಸುಂದರವಾದ ಕಾಡು ಎಂಬುದಾಗಿದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಕಾಣ ಬರುವ ಸುಂದರಿ ಮರಗಳಿಂದ ಸಹ ಈ ಹೆಸರು ಬಂದಿರಬಹುದಾಗಿದೆ. ಸುಂದರಬನ ಅರಣ್ಯವು ಗಂಗಾನದಿಯ ಸಾಗರಮುಖದಲ್ಲಿದ್ದು ಬಾಂಗ್ಲಾದೇಶ ಮತ್ತು ಭಾರತ ದೇಶಗಳಲ್ಲಿ ಹರಡಿದೆ. ನದಿಯ ಮುಖಜಭೂಮಿಯ ಸಾಗರದಂಚಿನಲ್ಲಿ ವ್ಯಾಪಿಸಿರುವ ಸುಂದರಬನದ ಒಟ್ಟು ವಿಸ್ತೀರ್ಣ ೧೦೦೦೦ ಚ. ಕಿ.ಮೀ. ಗಳಷ್ಟಿದೆ.
ಸುಂದರ್ಬನ್ಸ್ ರಾಷ್ಟ್ರೀಯ ಉದ್ಯಾನ* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಭಾರತ |
ತಾಣದ ವರ್ಗ | ಪ್ರಾಕೃತಿಕ |
ಆಯ್ಕೆಯ ಮಾನದಂಡಗಳು | ix, x |
ಆಕರ | 452 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1997 (21ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಸುಂದರಬನವು ಅತಿ ಸಂಕೀರ್ಣವಾದ ಕಡಲ್ಗಾಲುವೆಗಳನ್ನು ಹೊಂದಿದೆ. ಜೊತೆಗೆ ಕೆಸರಂಗಳಗಳು ಮತ್ತು ಮ್ಯಾಂಗ್ರೋವ್ ಅರಣ್ಯಗಳಿಂದ ಕೂಡಿದ ಸಣ್ಣಸಣ್ಣ ದ್ವೀಪಗಳನ್ನು ಬೃಹತ್ ಸಂಖ್ಯೆಯಲ್ಲಿ ಒಳಗೊಂಡಿದೆ. ಇಲ್ಲಿನ ಮ್ಯಾಂಗ್ರೋವ್ ಅರಣ್ಯಗಳು ಸಮುದ್ರದ ಉಪ್ಪುನೀರನ್ನು ಸಹಿಸಿಕೊಂಡು ಬೆಳೆಯಬಲ್ಲವಾಗಿವೆ. ಸುಂದರಬನವು ಬಂಗಾಳದ ಹುಲಿಯ ತವರು. ಜೊತೆಗೆ ಜಿಂಕೆ, ಮೊಸಳೆ, ಉರಗಗಳು ಮತ್ತು ಹಲವು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ಇಲ್ಲಿ ಸುಮಾರು ೫೦೦ ಬಂಗಾಳ ಹುಲಿ (ರಾಯಲ್ ಬೆಂಗಾಲ್ ಟೈಗರ್) ಗಳಿವೆಯೆಂದು ಅಂದಾಜು ಮಾಡಲಾಗಿದೆ.