ಪುಲಾವ್
ಅನ್ನದ ಖಾದ್ಯ / From Wikipedia, the free encyclopedia
ಪುಲಾವ್ ಒಂದು ರೀತಿಯ ಅಕ್ಕಿಯಿಂದ ತಯಾರಿಸಿದ ಖಾದ್ಯ . ಅಥವಾ ಕೆಲವು ಪ್ರದೇಶಗಳಲ್ಲಿ, ಗೋಧಿಯಿಂದಲೂ ತಯಾರಿಸುತ್ತಾರೆ.[1] ಇದರ ಪಾಕವಿಧಾನವು ಸಾಮಾನ್ಯವಾಗಿ ಸ್ಟಾಕ್ ನಲ್ಲಿ ಅಡುಗೆ ಮಾಡುವುದು , ಮಸಾಲೆಗಳು ಮತ್ತು ತರಕಾರಿಗಳು ಅಥವಾ ಮಾಂಸದಂತಹ ಇತರ ಪದಾರ್ಥಗಳನ್ನು ಸೇರಿಸುವುದು , ಕೆಲವು ಸಂದರ್ಭಗಳಲ್ಲಿ, ಅಕ್ಕಿಯು ಬೆಂದ ಈರುಳ್ಳಿಯ ಚೂರುಗಳು, ಜೊತೆಗೆ ಸಂಬಾರ ಪದಾರ್ಥಗಳ ಮಿಶ್ರಣದೊಂದಿಗೆ ಕಲಸಿದ ಕಾರಣದಿಂದ ಕಂದು ಬಣ್ಣವನ್ನೂ ಪಡೆಯಬಹುದು. ಸ್ಥಳೀಯ ಪಾಕಶೈಲಿಯನ್ನು ಆಧರಿಸಿ, ಪುಲಾವ್ ಮಾಂಸ, ಮೀನು, ತರಕಾರಿಗಳು, ಆರ್ಜ಼ೊ, ಮತ್ತು ಒಣಹಣ್ಣುಗಳನ್ನೂ ಒಳಗೊಳ್ಳಬಹುದು.
ಅಬ್ಬಾಸಿದ್ ಖಲೀಫೇಟ್ ನ ಸಮಯದಲ್ಲಿ, ಅಕ್ಕಿ ಬೇಯಿಸುವ ಇಂತಹ ವಿಧಾನಗಳು ಮೊದಲಿಗೆ ಭಾರತದಿಂದ ಸ್ಪೇನ್ಗೆ ಮತ್ತು ಅಂತಿಮವಾಗಿ ಇಡೀ ಜಗತ್ತಿಗೆ ಹರಡಿತ್ತು . ಸ್ಪ್ಯಾನಿಷ್ ಪೆಯೆಲ್ಲಾ ಮತ್ತು ದಕ್ಷಿಣ ಏಷ್ಯಾದ ಪಿಲಾವ್ ಅಥವಾ ಪುಲಾವ್ ಮತ್ತು ಬಿರಿಯಾನಿ ಇಂತಹ ಭಕ್ಷ್ಯಗಳಿಂದ ವಿಕಸನಗೊಂಡಿತು. ಇದು ಅಫ್ಘಾನಿಸ್ತಾನ, ಅರ್ಮೇನಿಯಾ, ಅಜೆರ್ಬೈಜಾನ್, ಬಾಂಗ್ಲಾದೇಶ, ಚೀನಾ (ಮುಖ್ಯವಾಗಿ ಕ್ಸಿನ್ಜಿಯಾಂಗ್ನಲ್ಲಿ), ಸೈಪ್ರಸ್, ಜಾರ್ಜಿಯಾ, ಗ್ರೀಸ್ (ಮುಖ್ಯವಾಗಿ ಕ್ರೀಟ್ನಲ್ಲಿ), ಭಾರತ, ಇರಾಕ್ (ಮುಖ್ಯವಾಗಿ ಕುರ್ದಿಸ್ತಾನದಲ್ಲಿ), ಇರಾನ್, ಇಸ್ರೇಲ್, ಕೀನ್ಯಾ, ಕಿರ್ಗಿಸ್ತಾನ್, ನೇಪಾಳ, ಪಾಕಿಸ್ತಾನ, ರೊಮೇನಿಯಾ, ರಷ್ಯಾ, ಟಾಂಜಾನಿಯಾ (ಮುಖ್ಯವಾಗಿ ಜಾಂಜಿಬಾರ್ನಲ್ಲಿ), ತಜಿಕಿಸ್ತಾನ್, ಟರ್ಕಿ, ತುರ್ಕಮೆನಿಸ್ತಾನ್, ಉಗಾಂಡ ಮತ್ತು ಉಜ್ಬೇಕಿಸ್ತಾನ್ ನಂತಹ ಪ್ರದೇಶಗಳಲ್ಲಿ ಜನಪ್ರಿಯ ಖಾದ್ಯವಾಗಿದೆ .