ತುರ್ಕಮೆನಿಸ್ತಾನ್
From Wikipedia, the free encyclopedia
ತುರ್ಕಮೆನಿಸ್ತಾನ್ ಗಣರಾಜ್ಯ [ಸೂಕ್ತ ಉಲ್ಲೇಖನ ಬೇಕು]Turkmen: [Türkmenistan Respublikasy] Error: {{Lang}}: text has italic markup (help)[ಸೂಕ್ತ ಉಲ್ಲೇಖನ ಬೇಕು]ವನ್ನು ತುರ್ಕಮೆನಿಯ Russian: Туркмения ಎಂದೂ ಕರೆಯುತ್ತಾರೆ. ಕೇಂದ್ರ ಏಶಿಯಾದ ತರ್ಕಿಕ್ ರಾಜ್ಯಗಳಲ್ಲಿ ಇದು ಒಂದು. 1991ರ ವರೆಗೆ ಇದು ಸೋವಿಯೆಟ್ ರಶಿಯಾದ ಭಾಗವಾದ ತುರ್ಕಮನ್ ಸೋವಿಯೆಟ್ ಸೋಶಿಯಲಿಸ್ಟ್ ರಿಪಬ್ಲಿಕ್ (ತುರ್ಕಮನ್ SSR) ಗಣರಾಜ್ಯವಾಗಿತ್ತು. ತುರ್ಕಮೆನಿಸ್ತಾನ ಆರು ಸ್ವತಂತ್ರ ತರ್ಕಿಕ್ ರಾಜ್ಯಗಳಲ್ಲಿ ಒಂದು. ಇದರ ಆಗ್ನೇಯ ಗಡಿಯಲ್ಲಿ ಅಫ್ಘಾನಿಸ್ತಾನ್, ದಕ್ಷಿಣ ಮತ್ತು ನೈಋತ್ಯದಲ್ಲಿ ಇರಾನ್, ಪೂರ್ವ ಮತ್ತು ಈಶಾನ್ಯದಲ್ಲಿ ಉಜಬೆಕಿಸ್ತಾನ್ ಮತ್ತು ಉತ್ತರ ಮತ್ತು ವಾಯವ್ಯದಲ್ಲಿ ಕಜಕಿಸ್ತಾನ್ ಪಶ್ಚಿಮದಲ್ಲಿ ಕಾಸ್ಪಿಯನ್ ಸಮುದ್ರಗಳಿವೆ.
Republic of Turkmenistan Türkmenistan Respublikasy | |
---|---|
Anthem: Independent, Neutral, Turkmenistan State Anthem | |
Capital and largest city | Ashgabat |
Official languages | Turkmen |
Language for inter-ethnic communication | Russian |
Demonym(s) | Turkmen |
Government | Presidential republic Single-party state |
• President | Gurbanguly Berdimuhamedow |
Independence from the Soviet Union | |
• Declared | 27 October 1991 |
• Recognized | 25 December 1991 |
Area | |
• Total | 488,100 km2 (188,500 sq mi)[1] (52nd) |
• Water (%) | 4.9 |
Population | |
• 2009 estimate | 5,110,000[2] (112th) |
• Density | 10.5/km2 (27.2/sq mi) (208th) |
GDP (PPP) | 2009 estimate |
• Total | $31.966 billion[3] |
• Per capita | $5,971[3] |
HDI (2007) | 0.739[4] Error: Invalid HDI value · 109th |
Currency | Turkmen new manat (TMT) |
Time zone | UTC+5 (TMT) |
• Summer (DST) | UTC+5 (not observed) |
Driving side | right |
Calling code | 993 |
ISO 3166 code | TM |
Internet TLD | .tm |
ತುರ್ಕಮೆನಿಸ್ತಾನದ ಡಿಜಿಪಿ ಬೆಳವಣಿಗೆ ದರ 2009ರಲ್ಲಿ 6.1 ಇದ್ದು ಜಗತ್ತಿನಲ್ಲಿ 16ನೆ ಸ್ಥಾನದಲ್ಲಿತ್ತು. ಆದರೆ ಈ ಅಂಕಿಗಳು ವ್ಯಾಪಕ ತಪ್ಪುಗಳಿಂದ ಕೂಡಿರುವ ಸಾಧ್ಯತೆ ಇದೆ.[1] ತನ್ನಲ್ಲಿರುವ ನೈಸರ್ಗಿಕ ಅನಿಲ ಸಂಪನ್ಮೂಲದಲ್ಲಿ ಅದು ಜಗತ್ತಿನಲ್ಲಿ ನಾಲ್ಕನೇ ಸ್ಥಾನದಲ್ಲಿ ನಿಲ್ಲುತ್ತದೆ. ಈ ದೇಶದ ಬಹುಭಾಗ ಕರಾಕುಂ (ಕಪ್ಪು ಮರಳು) ಮರುಭೂಮಿಯಿಂದ ಆವೃತ್ತವಾಗಿದ್ದರೂ ಕೆಲವು ಪ್ರದೇಶಗಳಲ್ಲಿ ನೈಸರ್ಗಿಕ ಸಂಪನ್ಮೂಲದಲ್ಲಿ ಇದು ಸಂಪದ್ಭರಿತವಾಗಿದೆ.
ಇತ್ತೀಚಿನವರೆಗೂ ತುರ್ಕಮನ್ ಸರ್ಕಾರ ಏಕಪಕ್ಷ ಪದ್ಧತಿಯನ್ನು ಹೊಂದಿತ್ತು; ಈ ಪದ್ಧತಿಯು ಪ್ರಜಾಪ್ರಭುತ್ವದ ಅತ್ಯಂತ ಕನಿಷ್ಠ ಮಾನದಂಡಗಳನ್ನೂ ಮುಟ್ಟುತ್ತಿಲ್ಲ ಎಂದು ಪರಿಗಣಿಸಲಾಗಿತ್ತು.[5] ಅಧ್ಯಕ್ಷ ಸಪಾರ್ಮುರಾತ್ ನಿಯಾಜೋವ್ ("ತುರ್ಕಮೆನ್ ಬಾಸಿ"- "ತುರ್ಕಮೆನ್ನರ ನಾಯಕ"- ಎಂದು ಕರೆಯುತ್ತಿದ್ದರು). 21 ಡಿಸೆಂಬರ್ 2006ರಂದು ತಾವು ಸಾಯುವ ವರೆಗೂ ತುರ್ಕಮೆನಿಸ್ತಾನವನ್ನು ಆಳಿದರು. ಗುರ್ಬಾಂಗುಲಿ ಬೇರ್ದಿಮುಹಾಮೆದೊವ್ ನೂತನ ಅಧ್ಯಕ್ಷರಾಗಿ 11 ಫೆಬ್ರವರಿ 2007 ರಂದು ಆಯ್ಕೆಯಾದರು.