ಉಗಾಂಡ
From Wikipedia, the free encyclopedia
ಉಗಾಂಡ ಗಣರಾಜ್ಯ ಪೂರ್ವ ಆಫ್ರಿಕಾದ ಒಂದು ಭೂಆವೃತ ದೇಶ. ಪೂರ್ವಕ್ಕೆ ಕೀನ್ಯಾ, ಉತ್ತರಕ್ಕೆ ಸುಡಾನ್, ಪಶ್ಚಿಮಕ್ಕೆ ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ, ನೈರುತ್ಯಕ್ಕೆ ರ್ವಾಂಡ ಮತ್ತು ದಕ್ಷಿಣಕ್ಕೆ ತಾಂಜೇನಿಯ ದೇಶಗಳಿವೆ. ಉಗಾಂಡ ತನ್ನ ದಕ್ಷಿಣ ಪ್ರದೇಶದಲ್ಲಿ ವಿಕ್ಟೊರಿಯ ಸರೋವರದ ಬಹುಬಾಗವನ್ನು ಹೊಂದಿದೆ. ಉಗಾಂಡವು ಮಧ್ಯ ಆಫ್ರ್ರಿಕದ ಪೂರ್ವದಲ್ಲಿರುವ ಒಂದು ಗಣರಾಜ್ಯ. ದಕ್ಷಿಣ ಅಕ್ಷಾಂಶ 10 ಯಿಂದ ಉತ್ತರ ಅಕ್ಷಾಂಶ 40 ಮತ್ತು ಪು.ರೇ. 290-350 ಗಳ ನಡುವೆ ಇರುವ ದೇಶ. ಉತ್ತರದಲ್ಲಿ ಸೂಡಾನ್, ಪೂರ್ವದಲ್ಲಿ ಕೀನ್ಯ, ದಕ್ಷಿಣದಲ್ಲಿ ಟಾಂಜಾನಿಯ (ತಾನ್ಜನಿಯ) ಮತ್ತು ರುವಾಂಡ, ಪಶ್ಚಿಮದಲ್ಲಿ ಕಾಂಗೋ ಗಣರಾಜ್ಯ ಇವುಗಳ ನಡುವೆ ಇರುವ ಈ ದೇಶದ ಒಟ್ಟು ವಿಸ್ತೀರ್ಣ 2,36,037 ಚಕಿಮೀ. ಜನಸಂಖ್ಯೆ 22,824,000 (2002). ರಾಜಧಾನಿ ಕಂಪಾಲ ಜನಸಂಖ್ಯೆ 7,73,463 (2002). ಈ ರಾಷ್ಟ್ರದ ಮಧ್ಯದಲ್ಲಿನ ಆಧಿಪತ್ಯದ ಹೆಸರಾದ ಬುಗಾಂಡವೇ 19ನೆಯ ಶತಮಾನದಲ್ಲಿ ಸ್ವಾಹಿಲಿ ಭಾಷೆ ಆಡುವವರ ಬಾಯಲ್ಲಿ ಉಗಾಂಡ ಆಯಿತು.
Quick Facts ಉಗಾಂಡJamhuri ya Ugandaಜಮ್ಹುರಿ ಯ ಉಗಾಂಡ, Capital ...
ಉಗಾಂಡ Jamhuri ya Uganda ಜಮ್ಹುರಿ ಯ ಉಗಾಂಡ | |
---|---|
Motto: "For God and My Country" (ಆಂಗ್ಲ ಭಾಷೆಯಲ್ಲಿ: ದೇವರಿಗೆ ಮತ್ತು ದೇಶಕ್ಕೆ) | |
Anthem: Oh Uganda, Land of Beauty | |
Capital | ಕಂಪಾಲ |
Largest city | ರಾಜಧಾನಿ |
Official languages | ಆಂಗ್ಲ, ಸ್ವಾಹಿಲಿ |
Demonym(s) | Ugandan |
Government | ಪ್ರಜಾತಾಂತ್ರಿಕ ಗಣರಾಜ್ಯ |
• ರಾಷ್ಟ್ರಪತಿ | ಯೊವೆರಿ ಮುಸೆವೆನಿ |
• ಪ್ರಧಾನ ಮಂತ್ರಿ | ಅಪೊಲೊ ನ್ಸಿಬಂಬಿ |
ಸ್ವಾತಂತ್ರ್ಯ | |
• ಗಣರಾಜ್ಯ | ಅಕ್ಟೋಬರ್ ೯ ೧೯೬೨ |
• Water (%) | 15.39 |
Population | |
• ಜುಲೈ ೨೦೦೫ estimate | 27,616,0001 (39th) |
• ೨೦೦೨ census | 24,442,084 |
GDP (PPP) | ೨೦೦೫ estimate |
• Total | $45.97 billion (೮೩ನೇ) |
• Per capita | $1,700 (153rd) |
HDI (೨೦೦೪) | 0.502 low · 145th |
Currency | ಉಗಾಂಡಾದ ಶಿಲ್ಲಿಂಗ್ (UGX) |
Time zone | UTC+3 (EAT) |
• Summer (DST) | UTC+3 (not observed) |
Calling code | 256 |
Internet TLD | .ug |
1 Estimates for this country explicitly take into account the effects of excess mortality due to AIDS; this can result in lower life expectancy, higher infant mortality and death rates, lower population and growth rates, and changes in the distribution of population by age and sex than would otherwise be expected. 2Rank based on 2005 figures. 3 006 from Kenya and Tanzania. |
Close