ಪಾಕಿಸ್ತಾನ
ದಕ್ಷಿಣ ಏಷ್ಯಾದ ದೇಶ / From Wikipedia, the free encyclopedia
ಪಾಕಿಸ್ತಾನ - ಭಾರತೀಯ ಉಪಖಂಡದಲ್ಲಿನ ದೇಶಗಳಲ್ಲೊಂದು. ದಕ್ಷಿಣ ಏಷ್ಯದ ಒಂದು ದೇಶ. ಪಾಕಿಸ್ತಾನ್ ಇಸ್ಲಾಮಿಕ್ ಗಣರಾಜ್ಯವೆಂದು ಇದರ ಅಧಿಕೃತ ಹೆಸರು. ಪೂರ್ವ ಪಶ್ಚಿಮ ವಾಯವ್ಯ ಹಾಗೂ ಉತ್ತರದಲ್ಲಿ ಇರಾನ್ ಮತ್ತು ಆಫ್ಘಾನಿಸ್ತಾನ, ಈಶಾನ್ಯದಲ್ಲಿ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಭಾರತದ ಜಮ್ಮು-ಕಾಶ್ಮೀರ ಪ್ರದೇಶ, ಪೂರ್ವ ಮತ್ತು ಆಗ್ನೇಯದಲ್ಲಿ ಭಾರತ, ದಕ್ಷಿಣದಲ್ಲಿ ಅರಬ್ಬಿ ಸಮುದ್ರ ಇವೆ. ಉ.ಅ.240 -370 ನಡುವೆ ಹಬ್ಬಿರುವ ಈ ದೇಶದ ವಿಸ್ತೀರ್ಣ 7,96,095 ಚ.ಕಿ.ಮೀ. ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿ ಕೊಂಡಿರುವ ಜಮ್ಮು ಮತ್ತು ಕಾಶ್ಮೀರ ಭಾಗವನ್ನು ಇದರಲ್ಲಿ ಸೇರಿಸಿಲ್ಲ. ಪೂರ್ವ ಪಶ್ಚಿಮವಾಗಿ 1287ಕಿ,ಮೀ., ಉತ್ತರ ದಕ್ಷಿಣವಾಗಿ 1505 ಕಿ.ಮೀ. ಇದೆ. ಇದರ ಭೂವಿಸ್ತೀರ್ಣ 778,720 ಚ.ಕಿ.ಮೀ. ಇದ್ದು ಜಲಭಾಗದ ವಿಸ್ತೀರ್ಣ 25,220ಚ.ಕಿ.ಮೀ. ಒಟ್ಟು 803,940 ಚ.ಕಿ.ಮೀ. ಭೂವಿಸ್ತೀರ್ಣವಿರುವ ಇದಕ್ಕೆ 1046 ಚ.ಕಿ.ಮೀ. ಸಮುದ್ರ ತೀರವಿದೆ. ಜನಸಂಖ್ಯೆ 16,24,19,946 (ಜುಲೈ 2005) ರಾಜಧಾನಿ ಇಸ್ಲಾಮಾಬಾದ್. ಪಾಕಿಸ್ತಾನದಲ್ಲಿ ನಾಲ್ಕು ಪ್ರಾಂತ್ಯಗಳಿವೆ :
- ಬಲೂಚಿಸ್ತಾನ ( ರಾಜಧಾನಿ ಕ್ವೆಟ್ಟ)
- ವಾಯುವ್ಯ ಸರಹದ್ದು ಪ್ರಾಂತ್ಯ (ಕೇಂದ್ರಾಡಳಿತ ಪಂಗಡ ಪ್ರದೇಶಗಳ ಹೊರತು) ರಾಜಧಾನಿ ಪೆಷಾವರ್
- ಪಂಜಾಬ್ ( ರಾಜಧಾನಿ ಲಾಹೋರ್)
- ಸಿಂಧ್ ( ರಾಜಧಾನಿ ಕರಾಚಿ)
ಪಾಕಿಸ್ತಾನ ಇಸ್ಲಾಮಿ ಗಣರಾಜ್ಯ اسلامی جمہوریۂ پاکستان ಇಸ್ಲಾಮಿ ಜಮ್ಹೂರಿಯ-ಇ-ಪಾಕಿಸ್ತಾನ್ | |
---|---|
Motto: ಇಮಾನ್, ಇತ್ತೆಹಾದ್, ತನ್ಜೀಮ್ (ಉರ್ದು ಭಾಷೆಯಲ್ಲಿ: "Faith, Unity, Discipline") | |
Anthem: Qaumi Tarana | |
Capital | ಇಸ್ಲಾಮಾಬಾದ್ |
Largest city | ಕರಾಚಿ |
Official languages | ಉರ್ದು, ಆಂಗ್ಲ |
Government | Islamic Federal Republic |
Independence From United Kingdom | |
• Water (%) | ೩.೧ |
Population | |
• ೨೦೦೪ estimate | ೧೬೩,೯೮೫,೩೭೩[1] (೬th) |
GDP (PPP) | ೨೦೦೫ estimate |
• Total | $೪೦೪.೬ billion (೨೬th) |
• Per capita | $೨,೬೨೮ (೧೨೮th) |
HDI (೨೦೦೧) | ೦.೫೨೭ Error: Invalid HDI value · ೧೩೫th |
Currency | Rupee (Rs.) (PKR) |
Time zone | UTC+೫:೦೦ (PST) |
• Summer (DST) | UTC+೬:೦೦ (not observed) |
Calling code | ೯೨ |
Internet TLD | .pk |
ಈ ಪ್ರಾಂತ್ಯಗಳಲ್ಲಿ ಒಟ್ಟು 13 ವಿಭಾಗಗಳು. 51 ಜಿಲ್ಲೆಗಳು ಮತ್ತು ಪಂಗಡ ಪ್ರದೇಶಗಳು ಇವೆ.