![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/e/eb/Supply-demand-right-shift-demand.svg/langkn-640px-Supply-demand-right-shift-demand.svg.png&w=640&q=50)
ಸೂಕ್ಷ್ಮ ಅರ್ಥಶಾಸ್ತ್ರ
From Wikipedia, the free encyclopedia
ಸಣ್ಣ ಪ್ರಮಾಣದ ಗ್ರಾಹಕರ, ವ್ಯಕ್ತಿಗಳ ಮತ್ತು ಚಿಕ್ಕ ಕಂಪನಿಗಳ ಆರ್ಥಿಕ ವಹಿವಾಟೇ ಸೂಕ್ಷ್ಮ ಅರ್ಥಶಾಸ್ತ್ರ . ( ಗ್ರೀಕ್ ನ ಪೂರ್ವಪ್ರತ್ಯಯ ಮೈಕ್ರೋ- ಅರ್ಥ "ಚಿಕ್ಕ" + "ಎಕನಾಮಿಕ್ಸ್"(ಅರ್ಥಶಾಸ್ತ್ರ) ಎಂಬುದರಿಂದ ಹುಟ್ಟಿಕೊಂಡಿದೆ.) ಇದು ಅರ್ಥಶಾಸ್ತ್ರದ ಶಾಖೆಯಾಗಿದ್ದು, ಇದು ಸೀಮಿತ ಮೂಲಗಳ ವಿಂಗಡಣೆಯಲ್ಲಿ ಆಧುನಿಕ ಕುಟುಂಬದ ವ್ಯಕ್ತಿಯ ನಡವಳಿಕೆ ಮತ್ತು ವ್ಯಾಪಾರೀ ಸಂಸ್ಥೆ ತೆಗೆದುಕೊಳ್ಳುವ ನಿರ್ಧಾರವನ್ನು ಅಧ್ಯಯನ ಮಾಡುತ್ತದೆ.[1] ಸಾಮಾನ್ಯವಾಗಿ, ಇದು ಸರಕು ಮತ್ತು ಸೇವೆಗಳ ಖರೀದಿ ಮತ್ತು ಮಾರಾಟದ ಮಾರುಕಟ್ಟೆಗೆ ಅನ್ವಯವಾಗುತ್ತದೆ. ವಹಿವಾಟಿನ ನಿರ್ಧಾರಗಳು ಮತ್ತು ನಡವಳಿಕೆಗಳು ಸರಕು ಮತ್ತು ಸೇವೆಗಳಿಗಾಗಿ ಪೂರೈಕೆ, ಸರಬರಾಜು ಮತ್ತು ಬೇಡಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ, ಎಂಬುದನ್ನು ಸೂಕ್ಷ್ಮ ಅರ್ಥಶಾಸ್ತ್ರ, ಪರಿಶೀಲಿಸುತ್ತದೆ. ಇದು ಬೆಲೆಯ ಪ್ರಮಾಣವನ್ನು ನಿರ್ಧರಿಸುತ್ತದೆ. ಅಲ್ಲದೇ ಸರಬರಾಜು ಮಾಡಲಾದ ಸರಕಿನ ಪರಿಮಾಣ ಮತ್ತು ಬೇಡಿಕೆಯಿರುವ ಸರಕು ಮತ್ತು ಸೇವೆಗಳ ಪರಿಮಾಣವನ್ನೂ ನಿರ್ಧರಿಸುತ್ತದೆ.[2][3]
![Thumb image](http://upload.wikimedia.org/wikipedia/commons/thumb/e/eb/Supply-demand-right-shift-demand.svg/270px-Supply-demand-right-shift-demand.svg.png)
ಅರ್ಥಶಾಸ್ತ್ರ |
ಅರ್ಥವ್ಯವಸ್ಥೆಗಳು ಪ್ರದೇಶ ಕ್ರಮದಲ್ಲಿ ಆಫ಼್ರಿಕಾ · ಉತ್ತರ ಅಮೇರಿಕಾ |
ವಿಷಯಗಳ ರೂಪರೇಖೆ |
---|
ಸಾಮಾನ್ಯ ವರ್ಗೀಕರಣಗಳು |
ಸೂಕ್ಷ್ಮ ಅರ್ಥಶಾಸ್ತ್ರ · ಸ್ಥೂಲ ಅರ್ಥಶಾಸ್ತ್ರ |
ಕಾರ್ಯವಿಧಾನಗಳು |
ಗಣಿತ ·
ಅರ್ಥಶಾಸ್ತ್ರ ಮಾಪನ ಪದ್ಧತಿ
|
ಕ್ಷೇತ್ರ ಮತ್ತು ಉಪಕ್ಷೇತ್ರಗಳು |
ವರ್ತನೆ · ಸಾಂಸ್ಕೃತಿಕ · ವಿಕಾಸವಾದಿ |
ಪಟ್ಟಿಗಳು |
ನಿಯತಕಾಲಿಕಗಳು · ಪ್ರಕಟಣೆಗಳು |
ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರಪರಂಪರೆಗಳು ಅರಾಜಕತಾವಾದಿ · ಬಂಡವಾಳಶಾಹಿ |
ಇತರ ಅರ್ಥವ್ಯವಸ್ಥೆಗಳು ಆಂಗ್ಲ-ಸ್ಯಾಕ್ಸನ್ · ಊಳಿಗಮಾನ್ಯ |
ಇದು ಬೃಹದರ್ಥಶಾಸ್ತ್ರಕ್ಕೆ ತದ್ವಿರುದ್ಧವಾಗಿದ್ದು,ಅಭಿವೃದ್ಧಿ, ಹಣದುಬ್ಬರ ಮತ್ತು ನಿರುದ್ಯೋಗದ ವಿಷಯಗಳೊಂದಿಗೆ ವ್ಯವಹರಿಸುವ ಮೂಲಕ "ಸಮಗ್ರ ಆರ್ಥಿಕತೆಯ ನಿರ್ವಹಣೆಯಾಗಿದೆ.[2] ಸೂಕ್ಷ್ಮ ಅರ್ಥಶಾಸ್ತ್ರ, ಮೇಲೆ ತಿಳಿಸಲಾದ ಆರ್ಥಿಕ ಅಂಶಗಳ ಮೇಲೆ ರಾಷ್ಟ್ರೀಯ ಆರ್ಥಿಕ ನೀತಿಗಳು ಬೀರುವ (ಉದಾಹರಣೆಗೆ ತೆರಿಗೆಯ ಬದಲಾಗುತ್ತಿರುವ ಹಂತಗಳು) ಪರಿಣಾಮಗಳೊಂದಿಗೂ ವ್ಯವಹರಿಸುತ್ತದೆ.[4] ವಿಶೇಷವಾಗಿ ಲ್ಯೂಕಾಸ್ ವಿಶ್ಲೇಷಣೆಯ ಜಾಗೃತಿಯಲ್ಲಿ, ಬಹುಪಾಲು ಆಧುನಿಕ ಬೃಹದರ್ಥಶಾಸ್ತ್ರದ ಸಿದ್ಧಾಂತವನ್ನು 'ಸೂಕ್ಷ್ಮ ಅಡಿಪಾಯ'ದ ಮೇಲೆ ಸೃಷ್ಟಿಸಲಾಗಿದೆ— ಉದಾಹರಣೆಗೆ ಸೂಕ್ಷ್ಮ ಹಂತದ ನಡವಳಿಕೆ ಮೇಲೆ ಮಾಡಲಾದ ಊಹೆಗಳನ್ನು ಆಧರಿಸಿ ಎನ್ನಬಹುದು.
ಮಾರುಕಟ್ಟೆ ಕಾರ್ಯಾಚರಣೆಯನ್ನು ವಿಶ್ಲೇಷಿಸುವುದು, ಸೂಕ್ಷ್ಮ ಅರ್ಥಶಾಸ್ತ್ರದ ಗುರಿಗಳಲ್ಲಿ ಒಂದಾಗಿದೆ. ಇದು ಸರಕು ಮತ್ತು ಸೇವೆಗಳ ನಡುವೆ ಹತ್ತಿರದ ಬೆಲೆಯನ್ನು ನಿರ್ಧರಿಸುತ್ತದೆ. ಅಲ್ಲದೇ ಅನೇಕ ಪರ್ಯಾಯ ಬಳಕೆಗಳ ನಡುವೆ ಸೀಮಿತ ಸಂಪನ್ಮೂಲಗಳನ್ನು ವಿಂಗಡಿಸುತ್ತದೆ. ಸೂಕ್ಷ್ಮ ಅರ್ಥಶಾಸ್ತ್ರವು, ಮಾರುಕಟ್ಟೆಯ ದಕ್ಷ ಫಲಿತಾಂಶ ನೀಡುವಲ್ಲಿ ವಿಫಲವಾದಾಗ ಮಾರುಕಟ್ಟೆ ವಿಫಲತೆಯನ್ನು ವಿಶ್ಲೇಷಿಸುತ್ತದೆ. ಅಲ್ಲದೇ ಪರಿಪೂರ್ಣ ಸ್ಪರ್ಧೆಗೆ ಅಗತ್ಯವಿರುವ ಸೈದ್ಧಾಂತಿಕ ಸ್ಥಿತಿಗತಿಗಳನ್ನು ವಿವರಿಸುತ್ತದೆ. ಸೂಕ್ಷ್ಮ ಅರ್ಥಶಾಸ್ತ್ರದಲ್ಲಿ ಅಧ್ಯಯನದ ಪ್ರಮುಖ ಕ್ಷೇತ್ರಗಳು ಕೆಳಕಂಡಂತಿವೆ: ಸಾಮಾನ್ಯ ಸಮತೋಲನ ಸಿದ್ಧಾಂತ,(ಕುಶಲತೆ ಕಾರ್ಯ) ಅಸಮ ಕೆಲಸದ ಮಾಹಿತಿಯ ಅಂತರ್ಗತ ಮಾರುಕಟ್ಟೆಗಳು, ಅನಿಶ್ಚಿತತೆಯ ಅಂತರ್ಗತ ವಿಕಲ್ಪ ಹಾಗು ಕ್ರೀಡಾ ಸಿದ್ಧಾಂತದ ಆರ್ಥಿಕ ಅನ್ವಯಿಕೆಗಳು. ಇವುಗಳ ಜೊತೆಯಲ್ಲಿ ಮಾರುಕಟ್ಟೆ ವ್ಯವಸ್ಥೆಯೊಳಗೆ ಉತ್ಪನ್ನಗಳ ಸ್ಥಿತಿಸ್ಥಾಪಕತ್ವತೆಯ ಬಗ್ಗೆಯೂ ವಿಚಾರ ಮಾಡಲಾಗುತ್ತದೆ.