ಉತ್ಪಾದನೆ, ವಿತರಣೆ, ಹಾಗೂ ಸರಕು ಮತ್ತು ಸೇವಗಳ ಬಳಕೆಯನ್ನು ವಿಶ್ಲೇಷಿಸುವ ಸಾಮಾಜಿಕ ವಿಜ್ಞಾನ From Wikipedia, the free encyclopedia
ಅರ್ಥಶಾಸ್ತ್ರವು ಸರಕುಗಳ ಮತ್ತು ಸೇವೆಗಳ ಉತ್ಪಾದನೆ, ಹಂಚುವಿಕೆ ಮತ್ತು ಬಳಕೆಗಳನ್ನು ಅಧ್ಯಯನ ಮಾಡುವ ಒಂದು ಸಮಾಜ ವಿಜ್ಞಾನ. ಪ್ರಚಲಿತ ಆರ್ಥಿಕ ವಿನ್ಯಾಸಗಳು, ಭೌತಿಕ ವಿಜ್ಞಾನಗಳಿಗೆ ಹೆಚ್ಚಿನ ಸಮಾನ ಧರ್ಮವುಳ್ಳ ಒಂದು ಪ್ರಾಯೋಗಿಕ ಹಾದಿ ಬಳಸುವ ಒಂದು ಅಪೇಕ್ಷೆಗೆ ಬದ್ಧವಾಗಿ, ೧೯ನೇ ಶತಮಾನದಲ್ಲಿ ತಡವಾಗಿ ರಾಜಕೀಯ ಆರ್ಥಿಕ ವ್ಯವಸ್ಥೆಯ ವಿಶಾಲವಾದ ವ್ಯಾಪ್ತಿಯಿಂದ ಹೊರಹೊಮ್ಮಿದವು.[1] ಆಧುನಿಕ ಅರ್ಥಶಾಸ್ತ್ರದ ಬಹಳಷ್ಟನ್ನು ನಿರೂಪಿಸುವ ಒಂದು ವ್ಯಾಖ್ಯಾನ ಲಾಯನಲ್ ರಾಬಿನ್ಸ್ರ ಒಂದು ೧೯೩೨ರ ಪ್ರಬಂಧದಲ್ಲಿದೆ: "ಮಾನವೀಯ ವರ್ತನೆಯನ್ನು ಪರ್ಯಾಯ ಉಪಯುಕ್ತತೆಗಳಿರುವ ಮಿತಿಗಳು ಮತ್ತು ದುರ್ಲಭವಾದ ಸಾಧನಗಳ ನಡುವಣ ಒಂದು ಸಂಬಂಧವಾಗಿ ಅಧ್ಯಯನಮಾಡುವ ವಿಜ್ಞಾನ."[2] ವಿರಳತೆಯು ಲಭ್ಯವಾದ ಸಂಪನ್ಮೂಲಗಳು ಎಲ್ಲ ಬೇಕುಗಳನ್ನು ಮತ್ತು ಆವಶ್ಯಕತೆಗಳನ್ನು ನೆರವೇರಿಸಲು ಸಾಕಾಗುವುದಿಲ್ಲ ಎಂದು ಸೂಚಿಸುತ್ತದೆ. ಕೊರತೆ ಇಲ್ಲದಿದ್ದರೆ ಮತ್ತು ಲಭ್ಯವಾದ ಸಂಪನ್ಮೂಲಗಳ ಪರ್ಯಾಯ ಉಪಯೋಗಗಳಿದ್ದರೆ, ಯಾವುದೇ ಆರ್ಥಿಕ ಸಮಸ್ಯೆ ಇಲ್ಲ. ಈ ಪ್ರಕಾರವಾಗಿ ವ್ಯಾಖ್ಯಾನಿಸಿದ ವಿಷಯ ಆಯ್ಕೆಗಳ (ರ್ಯಾಷನಲ್ ಚಾಯ್ಸ್ ಥೀಯರಿ) ಅಧ್ಯಯನವನ್ನು ಒಳಗೊಂಡಿರುತ್ತದೆ ಏಕೆಂದರೆ ಅವು ಪ್ರೋತ್ಸಾಹಗಳು ಮತ್ತು ಸಂಪನ್ಮೂಲಗಳಿಂದ ಬಾಧಿತವಾಗಿರುತ್ತವೆ. ಅರ್ಥಶಾಸ್ತ್ರವು ಅರ್ಥವ್ಯವಸ್ಥೆಗಳು ಹೇಗೆ ಕೆಲಸಮಾಡುತ್ತವೆ ಮತ್ತು ಆರ್ಥಿಕ ಕಾರ್ಯಭಾರಿಗಳು ಹೇಗೆ ಪರಸ್ಪರ ಪ್ರತಿಕ್ರಿಯಿಸುತ್ತಾರೆಂದು ಸ್ಪಷ್ಟಪಡಿಸುವ ಉದ್ದೇಶ ಹೊಂದಿರುತ್ತದೆ. ಆರ್ಥಿಕ ವಿಶ್ಲೇಷಣೆ ಸಮಾಜದ ಪ್ರತಿ ಅಂಶದಲ್ಲೂ ಪ್ರಯೋಗಿಸಲಾಗುತ್ತದೆ, ವ್ಯಾಪಾರ ಮತ್ತು ಹಣಕಾಸಿನಲ್ಲಿ ಆದರೆ ಅಪರಾಧದಲ್ಲಿ ಕೂಡ,[3] ಶಿಕ್ಷಣದಲ್ಲಿ,[4] ಕುಟುಂಬದಲ್ಲಿ, ಆರೋಗ್ಯದಲ್ಲಿ, ಕಾನೂನಿನಲ್ಲಿ, ರಾಜಕೀಯದಲ್ಲಿ, ಧರ್ಮದಲ್ಲಿ,[5] ಸಾಮಾಜಿಕ ಸಂಸ್ಥೆಗಳಲ್ಲಿ, ಮತ್ತು ಯುದ್ಧದಲ್ಲಿ.[6] ಸಾಮಾಜಿಕ ವಿಜ್ಞಾನಗಳ ಮೇಲೆ ಅರ್ಥಶಾಸ್ತ್ರದ ಈ ಅಧಿಕಾರಯುತ ಪ್ರಭಾವ ಆರ್ಥಿಕ ಸಾಮ್ರಾಜ್ಯಶಾಹಿ (ಎಕನಾಮಿಕ್ ಇಂಪೀರಿಯಲಿಸ಼ಮ್) ಎಂದು ವಿವರಿಸಲಾಗಿದೆ.[7][8]
ಅರ್ಥಶಾಸ್ತ್ರ |
ಅರ್ಥವ್ಯವಸ್ಥೆಗಳು ಪ್ರದೇಶ ಕ್ರಮದಲ್ಲಿ |
ವಿಷಯಗಳ ರೂಪರೇಖೆ |
---|
ಸಾಮಾನ್ಯ ವರ್ಗೀಕರಣಗಳು |
ಸೂಕ್ಷ್ಮ ಅರ್ಥಶಾಸ್ತ್ರ · ಸ್ಥೂಲ ಅರ್ಥಶಾಸ್ತ್ರ |
ಕಾರ್ಯವಿಧಾನಗಳು |
ಗಣಿತ ·
ಅರ್ಥಶಾಸ್ತ್ರ ಮಾಪನ ಪದ್ಧತಿ
|
ಕ್ಷೇತ್ರ ಮತ್ತು ಉಪಕ್ಷೇತ್ರಗಳು |
ವರ್ತನೆ · ಸಾಂಸ್ಕೃತಿಕ · ವಿಕಾಸವಾದಿ |
ಪಟ್ಟಿಗಳು |
ನಿಯತಕಾಲಿಕಗಳು · ಪ್ರಕಟಣೆಗಳು |
ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರಪರಂಪರೆಗಳು |
ಇತರ ಅರ್ಥವ್ಯವಸ್ಥೆಗಳು |
ಒಂದು ಸಾಮಾನ್ಯವಾದ ವ್ಯತ್ಯಾಸ, ಧನಾತ್ಮಕ ಅರ್ಥಶಾಸ್ತ್ರ (ಪಾಸಿಟಿವ್ ಎಕನಾಮಿಕ್ಸ್) ("ಏನಿದೆ" ಎಂದು ವಿವರಿಸುವ) ಮತ್ತು ಗುಣಮಟ್ಟ ಸಂಬಂಧಿತ ಅರ್ಥಶಾಸ್ತ್ರ (ನಾರ್ಮಟಿವ್ ಎಕನಾಮಿಕ್ಸ್) ("ಏನು ಇರಲೇ ಬೇಕು" ಎಂದು ವಾದಿಸುವ) ಅಥವಾ ಮುಖ್ಯ ವಾಹಿನಿ ಅರ್ಥಶಾಸ್ತ್ರ (ಮೇನ್ ಸ್ಟ್ರೀಮ್ ಎಕನಾಮಿಕ್ಸ್) (ಹೆಚ್ಚು "ಸಾಂಪ್ರದಾಯಿಕ") ಮತ್ತು ಅಸಾಂಪ್ರದಾಯಿಕ ಅರ್ಥಶಾಸ್ತ್ರ (ಹೆಟರಡಾಕ್ಸ್ ಎಕನಾಮಿಕ್ಸ್) (ಹೆಚ್ಚು "ತೀವ್ರಗಾಮಿ") ನಡುವಿನದು. ಪ್ರಾಥಮಿಕ ಪಠ್ಯಪುಸ್ತಕ ವ್ಯತ್ಯಾಸವು, ಕಾರ್ಯಭಾರಿಗಳ (ಏಜಂಟ್) (ವ್ಯಕ್ತಿಗಳನ್ನು ಮತ್ತು ವ್ಯಾಪಾರಸಂಸ್ಥೆಗಳನ್ನು ಒಳಗೊಂಡ) ಆರ್ಥಿಕ ವರ್ತನೆಯನ್ನು ಪರಿಶೀಲಿಸುವ ಸೂಕ್ಷ್ಮ ಅರ್ಥಶಾಸ್ತ್ರ (ಮಾಯ್ಕ್ರೊಎಕನಾಮಿಕ್ಸ್) ("ಸಣ್ಣ" ಅರ್ಥಶಾಸ್ತ್ರ) ಮತ್ತು ಒಂದು ಸಂಪೂರ್ಣ ಅರ್ಥವ್ಯವಸ್ಥೆಯ ನಿರುದ್ಯೋಗ, ಹಣದುಬ್ಬರ, ಹಣಕಾಸು ಮತ್ತು ಆದಾಯ ಕಾರ್ಯನೀತಿಯಂಥ ವಿಷಯಗಳ ಬಗ್ಗೆ ಅಭಿಪ್ರಾಯ ತಿಳಿಸುವ "ಸ್ಥೂಲ ಅರ್ಥಶಾಸ್ತ್ರ"ದ (ಮ್ಯಾಕ್ರೊಎಕನಾಮಿಕ್ಸ್) ("ದೊಡ್ಡ" ಅರ್ಥಶಾಸ್ತ್ರ) ನಡುವಿನದು. ಸೂಕ್ಷ್ಮ ಅರ್ಥಶಾಸ್ತ್ರವು, ವಿರಳತೆ ಮತ್ತು ಸರ್ಕಾರಿ ನಿಯಂತ್ರಣ ಇರುವಂಥ ಪ್ರತ್ಯೇಕ ಮಾರುಕಟ್ಟೆಗಳ ಮೂಲಕ ಸಂವಹನಗಳ ಕಡೆ ಗಮನ ಕೊಡುತ್ತದೆ. ಒಂದು ನಿಶ್ಚಿತ ಮಾರುಕಟ್ಟೆ ಒಂದು ಉತ್ಪನ್ನಕ್ಕಾಗಿ ಇರಬಹುದು, ತಾಜಾ ಮುಸುಕಿನ ಜೋಳಕ್ಕಾಗಿ ಎಂದುಕೊಳ್ಳಿ, ಅಥವಾ ಒಂದು ಉತ್ಪಾದನೆಯ ಅಂಶದ ಸೇವೆಗಳಿಗಾಗಿ, ಇಟ್ಟಿಗೆಯಲ್ಲಿ ಕಟ್ಟುವ ಕೆಲಸಕ್ಕಾಗಿ ಎಂದುಕೊಳ್ಳಿ, ಇರಬಹುದು. ಈ ಸಿದ್ಧಾಂತ, ಒಂದು ಏಕಾಂಶದ ಪ್ರತಿಯೊಂದು ಸಂಭವನೀಯ ಬೆಲೆಗೆ ಖರೀದಿದಾರರಿಂದ ಕೋರಿದ ಪ್ರಮಾಣ ಮತ್ತು ಮಾರಾಟಗಾರರಿಂದ ಪೂರೈಕೆಮಾಡಿದ ಪ್ರಮಾಣದ ಮೊತ್ತಗಳನ್ನು ಪರಿಗಣಿಸುತ್ತದೆ. ಮಾರುಕಟ್ಟೆಯು ಬೆಲೆ ಮತ್ತು ಪ್ರಮಾಣಕ್ಕೆ ಸಂಬಂಧಿಸಿದಂತೆ ಹೇಗೆ ಸಮಸ್ಥಿತಿಯನ್ನು ಮುಟ್ಟಬಹುದೆಂದು ಅಥವಾ ಸಮಯ ಬದಲಾದಂತೆ ಆಗುವ ಬದಲಾವಣೆಗಳಿಗೆ ಹೇಗೆ ಪ್ರತಿಕ್ರಿಯಿಸಬಹುದೆಂದು ವಿವರಿಸಲು, ಈ ಸಿದ್ಧಾಂತವು ಇವೆಲ್ಲವುಗಳನ್ನು ಒಟ್ಟಾಗಿ ಜೋಡಿಸುತ್ತದೆ. ಇದನ್ನು ಸ್ಥೂಲವಾಗಿ ಬೇಡಿಕೆ ಮತ್ತು ಪೂರೈಕೆ (ಡಿಮ್ಯಾಂಡ್ ಅಂಡ್ ಸಪ್ಲಾಯ್) ವಿಶ್ಲೇಷಣೆ ಎಂದು ಹೆಸರಿಸಲಾಗುತ್ತದೆ. ಪರಿಪೂರ್ಣ ಪೈಪೋಟಿ (ಪರ್ಫೆಕ್ಟ್ ಕಾಂಪಿಟಿಷನ್) ಮತ್ತು ಏಕಸ್ವಾಮ್ಯತೆಯಂತಹ ಮಾರುಕಟ್ಟೆ ವಿನ್ಯಾಸಗಳನ್ನು ವರ್ತನೆ ಮತ್ತು ಆರ್ಥಿಕ ಫಲದಾಯಕತೆಯ (ಎಕನಾಮಿಕ್ ಇಫಿಷನ್ಸಿ) ಸೂಚ್ಯಾರ್ಥಗಳಿಗಾಗಿ ಪರಿಶೀಲಿಸಲಾಗುತ್ತದೆ. ಹಲವುವೇಳೆ ಒಂದು ಪ್ರತ್ಯೇಕ ಮಾರುಕಟ್ಟೆಯಲ್ಲಿ ಬದಲಾವಣೆಯ ವಿಶ್ಲೇಷಣೆ, ಇತರ ಮಾರುಕಟ್ಟೆಗಳಲ್ಲಿ ವರ್ತನೆಗೆ ಸಂಬಂಧಿಸಿದ ಸಂಬಂಧಗಳು ಹಿಂದಿನಂತೆಯೇ ಇರುತ್ತವೆ, ಅಂದರೆ ಆಂಶಿಕ ಸಮಸ್ಥಿತಿ (ಪಾರ್ಷಿಯಲ್ ಈಕ್ವಲಿಬ್ರಿಯಮ್) ವಿಶ್ಲೇಷಣೆ, ಎಂಬ ಸರಳಗೊಳಿಸಿದ ಪೂರ್ವಾನುಮಾನದಿಂದ ಮುಂದುವರಿಯುತ್ತದೆ. ಸಾಮಾನ್ಯ ಸಮಸ್ಥಿತಿ (ಜೆನರಲ್ ಈಕ್ವಲಿಬ್ರಿಯಮ್) ಸಿದ್ಧಾಂತ ವಿಭಿನ್ನ ಮಾರುಕಟ್ಟೆಗಳಲ್ಲಿ ಬದಲಾವಣೆಗಳಿಗೆ ಆಸ್ಪದನೀಡುತ್ತದೆ ಮತ್ತು, ಸಮತೋಲನದ ದಿಕ್ಕಿನಲ್ಲಿ ಅವುಗಳ ಚಲನೆಗಳು ಮತ್ತು ಸಂವಹನಗಳನ್ನು ಒಳಗೊಂಡಂತೆ, ಎಲ್ಲ ಮಾರುಕಟ್ಟೆಗಳಿಂದ ಒಟ್ಟುಸೇರಿಸುತ್ತದೆ.[9][10] ಇನ್ನೊಂದು ವ್ಯತ್ಯಾಸ ಮುಖ್ಯ ವಾಹಿನಿ ಅರ್ಥಶಾಸ್ತ್ರ ಮತ್ತು ಅಸಾಂಪ್ರದಾಯಿಕ ಅರ್ಥಶಾಸ್ತ್ರಗಳ ನಡುವಿನದು. ಒಂದು ಸ್ಥೂಲವಾದ ಲಕ್ಷಣ ವರ್ಣನೆ, ಮುಖ್ಯ ವಾಹಿನಿ ಅರ್ಥಶಾಸ್ತ್ರ "ವೈಚಾರಿಕತೆ-ವೈಯಕ್ತಿಕತಾ ವಾದ-ಸಮಸ್ಥಿತಿ ಸಂಪರ್ಕ"ದ ಸಂಬಂಧ ಹೊಂದಿರುವುದೆಂದು ಮತ್ತು ಅಸಾಂಪ್ರದಾಯಿಕ ಅರ್ಥಶಾಸ್ತ್ರ ಒಂದು "ಸಂಸ್ಥೆಗಳು-ಚರಿತ್ರೆ-ಸಾಮಾಜಿಕ ರಚನೆ ಸಂಪರ್ಕ"ದ ಮೂಲಕ ವ್ಯಾಖ್ಯಾನಿಸಲಾಗುತ್ತದೆಂದು ವಿವರಿಸುತ್ತದೆ.[11]
ಸೂಕ್ಷ್ಮ ಅರ್ಥಶಾಸ್ತ್ರದಲ್ಲಿ, ಉತ್ಪಾದನೆ ಹೂಡುವಳಿಗಳನ್ನು (ಇನ್ಪುಟ್) ಹುಟ್ಟುವಳಿಗಳಾಗಿ (ಔಟ್ಪುಟ್) ಪರಿವರ್ತಿಸುತ್ತದೆ. ಇದು ವಿನಿಮಯಮಾಡಲು ಯೋಗ್ಯವಾದ ಒಂದು ವ್ಯಾಪಾರದ ವಸ್ತುವನ್ನು ನಿರ್ಮಿಸಲು ಸಂಪನ್ಮೂಲಗಳನ್ನು ಬಳಸುವ ಒಂದು ಆರ್ಥಿಕ ಪ್ರಕ್ರಿಯೆ. ಇದು ತಯಾರಿಕೆ, ಶೇಖರಣೆ, ಹಡಗು ಮೂಲಕ ಸರಕು ಸಾಗಣೆ, ಮತ್ತು ಡಬ್ಬೀಕರಣವನ್ನು (ಪ್ಯಾಕೇಜಿಂಗ್) ಒಳಗೊಳ್ಳಬಹುದು. ಕೆಲವು ಅರ್ಥಶಾಸ್ತ್ರಜ್ಞರು ಸ್ಥೂಲವಾಗಿ ಬಳಕೆಯನ್ನು ಬಿಟ್ಟು ಉಳಿದೆಲ್ಲ ಆರ್ಥಿಕ ಚಟುವಟಿಕೆಯನ್ನು ಉತ್ಪಾದನೆ ಎಂದು ವ್ಯಾಖ್ಯಾನಿಸುತ್ತಾರೆ. ಅವರು ಅಂತಿಮ ಖರೀದಿ ವಸ್ತುವನ್ನು ಬಿಟ್ಟು ಉಳಿದ ಪ್ರತಿಯೊಂದು ವಾಣಿಜ್ಯ ಚಟುವಟಿಕೆಯನ್ನು ಯಾವುದೋ ಸ್ವರೂಪದ ಉತ್ಪಾದನೆಯಾಗಿ ನೋಡುತ್ತಾರೆ. ಉತ್ಪಾದನೆಯು ಒಂದು ಪ್ರಕ್ರಿಯೆ, ಮತ್ತು ಸೂಚಿಸುವಂತೆ ಇದು ಕಾಲ ಮತ್ತು ಸ್ಥಳದ ಕೊನೆತನಕ ಸಂಭವಿಸುತ್ತದೆ. ಅದು ಒಂದು ಹರಿವಿನ ಪರಿಕಲ್ಪನೆ (ಫ಼್ಲೋ ಕಾನ್ಸೆಪ್ಟ್) ಆಗಿರುವುದರಿಂದ, ಉತ್ಪಾದನೆಯನ್ನು ಒಂದು "ಪ್ರತಿ ಕಾಲದ ಅವಧಿಯಲ್ಲಿ ಆಗುವಳಿಯ ಪ್ರಮಾಣ"ವನ್ನಾಗಿ ಅಳತೆಮಾಡಲಾಗುತ್ತದೆ. ಉತ್ಪಾದಿಸಲಾದ ವ್ಯಾಪಾರದ ವಸ್ತುವಿನ ಪ್ರಮಾಣ, ಸೃಷ್ಟಿಸಲಾದ ಸರಕಿನ ರೂಪ ಮತ್ತು ಉತ್ಪಾದಿಸಲಾದ ವ್ಯಾಪಾರದ ವಸ್ತುವಿನ ಕಾಲಸೂಚಕ ಮತ್ತು ಪ್ರಾದೇಶಿಕ ವಿತರಣೆ ಒಳಗೊಂಡಂತೆ, ಉತ್ಪಾದನಾ ಪ್ರಕ್ರಿಯಗಳಿಗೆ ಮೂರು ಅಂಶಗಳಿವೆ. ಅವಕಾಶ ವೆಚ್ಚವು (ಆಪರ್ಟೂನಿಟಿ ಕಾಸ್ಟ್) ಪ್ರತಿಯೊಂದು ಆಯ್ಕೆಗೆ, ವಾಸ್ತವ ಆರ್ಥಿಕ ವೆಚ್ಚ ಸಮೀಪದ ಅತ್ಯುತ್ತಮ ಅವಕಾಶ ಎಂಬ ಎಣಿಕೆಯನ್ನು ನಿರೂಪಿಸುತ್ತದೆ. ಅಪೇಕ್ಷಣೀಯ ಆದರೂ ಪರಸ್ಪರವಾಗಿ ಪ್ರತ್ಯೇಕ (ಮ್ಯೂಚುಯಲಿ ಇಕ್ಸ್ಕ್ಲೂಸಿವ್) ಕ್ರಿಯೆಗಳ ಒಳಗಿನಿಂದ ಆಯ್ಕೆಗಳನ್ನು ಮಾಡಲೇಬೇಕು. ಇದು "ವಿರಳತೆ ಮತ್ತು ಆಯ್ಕೆಯ ನಡುವಣ ಮೂಲಭೂತ ಸಂಬಂಧ"ವನ್ನು ವ್ಯಕ್ತಪಡಿಸುತ್ತದೆ ಎಂದು ವಿವರಿಸಲಾಗಿದೆ.[12] ವಿರಳ ಸಂಪನ್ಮೂಲಗಳು ಸಮರ್ಥವಾಗಿ ಬಳಸಲಾಗುತ್ತವೆಂದು ನಿಶ್ಚಿತಗೊಳಿಸುವಲ್ಲಿ, ಅವಕಾಶದ ಕಲ್ಪನೆ ಒಂದು ನಿರ್ಣಾಯಕ ಪಾತ್ರ ವಹಿಸುತ್ತದೆ.[13] ಹಾಗಾಗಿ, ಅವಕಾಶದ ವೆಚ್ಚಗಳು ವಿತ್ತದ ಅಥವಾ ಹಣಕಾಸು ವೆಚ್ಚಗಳಿಗೆ ಸೀಮಿತವಾಗಿಲ್ಲ: ಬಂದುಹೋಗಿರುವ ಹುಟ್ಟುವಳಿ (ಔಟ್ಪುಟ್ ಫ಼ೋರ್ಗಾನ್) , ವ್ಯರ್ಥವಾದ ಕಾಲ, ಸಂತೋಷ, ಅಥವಾ ಸೌಲಭ್ಯ ಒದಗಿಸುವ ಯಾವುದೇ ಬೇರೆ ಸಹಾಯದ ವಾಸ್ತವಿಕ ವೆಚ್ಚವನ್ನು (ರಿಯಲ್ ಕಾಸ್ಟ್) ಕೂಡ ಪರಿಗಣಿಸಬೇಕು.
ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಸುವ ಹೂಡುವಳಿಗಳು ಅಥವಾ ಸಂಪನ್ಮೂಲಗಳನ್ನು ಉತ್ಪಾದನೆಯ ಅಂಶಗಳು ಎಂದು ಕರೆಯಲಾಗುತ್ತದೆ. ಸಂಭಾವ್ಯ ಹೂಡುವಳಿಗಳನ್ನು ವಿಶಿಷ್ಟವಾಗಿ ಆರು ವರ್ಗಗಳಾಗಿ ಗುಂಪುಮಾಡಲಾಗುತ್ತದೆ. ಈ ಅಂಶಗಳು:
ಅಲ್ಪಕಾಲದಲ್ಲಿ (ಶಾರ್ಟ್-ರನ್), ದೀರ್ಘಕಾಲಕ್ಕೆ (ಲಾಂಗ್-ರನ್) ವಿರೋಧವಾಗಿ, ಈ ಉತ್ಪಾದನಾ ಅಂಶಗಳಲ್ಲಿ ಕನಿಷ್ಠ ಪಕ್ಷ ಒಂದಾದರೂ ಅಂಶ ಸ್ಥಿರವಾಗಿರುತ್ತದೆ. ಉದಾಹರಣೆಗಳು ಸಲಕರಣೆಗಳ ಪ್ರಮುಖ ಭಾಗಗಳು, ಸೂಕ್ತವಾದ ಕಾರ್ಖಾನೆ ಪ್ರದೇಶ, ಮತ್ತು ಬಹುಮುಖ್ಯ ನಿರ್ವಾಹಕ ಸಿಬ್ಬಂದಿಗಳನ್ನು ಒಳಗೊಂಡಿವೆ. ಯಾವ ಒಂದರ ಬಳಕೆ ಪ್ರಮಾಣವನ್ನು ಸುಲಭವಾಗಿ ಬದಲಾಯಿಸಬಹುದೋ ಅದನ್ನು ಒಂದು ಬದಲಾಗುವ (ವೇರಿಯಬಲ್) ಉತ್ಪಾದನಾ ಅಂಶ ಎನ್ನುತ್ತಾರೆ. ಉದಾಹರಣೆಗಳು ವಿದ್ಯುಚ್ಛಕ್ತಿ ಬಳಕೆ, ಸಾಗಣೆ ಸೇವೆಗಳು, ಮತ್ತು ಬಹುತೇಕ ಕಚ್ಚಾ ಸಾಮಗ್ರಿ ಹೂಡುವಳಿಗಳನ್ನು ಒಳಗೊಂಡಿವೆ. "ದೀರ್ಘಕಾಲ"ದಲ್ಲಿ, ನಿರ್ವಾಹಕ ಮಂಡಲಿಯಿಂದ ಈ ಎಲ್ಲ ಉತ್ಪಾದನಾ ಅಂಶಗಳನ್ನು ಹೊಂದಿಸಿಕೊಳ್ಳಬಹುದು. ಅಲ್ಪಕಾಲದಲ್ಲಿ, ಒಂದು ವ್ಯಾಪಾರಸಂಸ್ಥೆಯ "ಕಾರ್ಯಾಚರಣೆಗಳ ಗಾತ್ರ" ಉತ್ಪಾದಿಸಬಹುದಾದ ಹುಟ್ಟುವಳಿಗಳ ಗರಿಷ್ಠ ಸಂಖ್ಯೆಯನ್ನು ನಿರ್ಧರಿಸುತ್ತದೆ, ಆದರೆ ದೀರ್ಘಕಾಲದಲ್ಲಿ, ಯಾವುದೇ ಪ್ರಮಾಣ ಇತಿಮಿತಿಗಳು (ಸ್ಕೇಲ್ ಲಿಮಿಟೇಶನ್) ಇಲ್ಲ. ದೀರ್ಘಕಾಲ ಮತ್ತು ಅಲ್ಪಕಾಲ ವ್ಯತ್ಯಾಸಗಳು ಆರ್ಥಿಕ ವಿನ್ಯಾಸಗಳಲ್ಲಿ ಒಂದು ಪ್ರಮುಖ ಪಾತ್ರವಹಿಸುತ್ತವೆ.
ಆರ್ಥಿಕ ಫಲದಾಯಕತೆ, ಒಂದು ನಿಶ್ಚಿತ ವರ್ಗದ ಹೂಡುವಳಿಗಳು ಮತ್ತು ಲಭ್ಯವಾದ ತಂತ್ರಜ್ಞಾನದಿಂದ ಗರಿಷ್ಠ ಅಪೇಕ್ಷಿತ ಹುಟ್ಟುವಳಿಯನ್ನು ಒಂದು ವ್ಯವಸ್ಥೆ ಎಷ್ಟು ಸಮರ್ಪಕವಾಗಿ ಸೃಷ್ಟಿಸುತ್ತದೆಂದು ನಿರೂಪಿಸುತ್ತದೆ. ಹೂಡುವಳಿಗಳನ್ನು ಬದಲಿಸದೆ, ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, "ಘರ್ಷಣೆ" ಅಥವಾ "ದುರುಪಯೋಗ"ದ ಪರಿಮಾಣ ಕಡಿಮೆ ಮಾಡಿದಾಗ, ಹೆಚ್ಚು ಹುಟ್ಟುವಳಿ ಸೃಷ್ಟಿಯಾದರೆ ಫಲದಾಯಕತೆ ಸುಧಾರಿಸುತ್ತದೆ. ಅರ್ಥಶಾಸ್ತ್ರಜ್ಞರು, ಒಂದು ಬದಲಾವಣೆ ಬೇರೆ ಯಾರಿಗಾದರೂ ಹೆಚ್ಚು ಅಹಿತ ಮಾಡದ ಹೊರತು ಯಾರನ್ನಾದರೂ ಹೆಚ್ಚು ಉತ್ತಮ ಮಾಡಲಾಗುವುದಿಲ್ಲವಾದಾಗ ತಲಪುವ, ಪಾರೇಟೊ ಫಲದಾಯಕತೆಗಾಗಿ (ಪಾರೇಟೊ ಇಫ಼ಿಷನ್ಸಿ) ನೋಡುತ್ತಾರೆ. ಆರ್ಥಿಕ ಫಲದಾಯಕತೆ ಹೆಚ್ಚಿನ ಸಂಖ್ಯೆಯ ಸಂಬಂಧಿತ ಪರಿಕಲ್ಪನೆಗಳನ್ನು ಪ್ರಸ್ತಾಪಿಸಲು ಬಳಸಲಾಗುತ್ತದೆ. ಕೆಳಗಿನವುಗಳನ್ನು ಪಾಲಿಸಿದಾಗ ಒಂದು ವ್ಯವಸ್ಥೆಯನ್ನು ಆರ್ಥಿಕವಾಗಿ ಫಲದಾಯಕವೆಂದು ಕರೆಯಬಹುದು:
ಫಲದಾಯಕತೆಯ ಈ ವ್ಯಾಖ್ಯಾನಗಳು ಸಂಪೂರ್ಣವಾಗಿ ಸಮಾನವಲ್ಲ. ಆದರೆ, ಅವೆಲ್ಲವೂ ಲಭ್ಯವಾದ ಸಂಪನ್ಮೂಲಗಳಿಂದ ಹೆಚ್ಚು ಏನನ್ನೂ ಸಾಧಿಸಲಾಗುವುದಿಲ್ಲವೆಂಬ ಉದ್ದೇಶದಿಂದ ಒಳಗೊಳ್ಳಲ್ಪಟ್ಟಿವೆ.
ತಜ್ಞತೆಯು ಆರ್ಥಿಕ ಫಲದಾಯಕತೆಗೆ ಅತ್ಯಾವಶ್ಯಕವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ವಿಭಿನ್ನ ವ್ಯಕ್ತಿಗಳು ಅಥವಾ ದೇಶಗಳು ವಿಭಿನ್ನ ತುಲನಾತ್ಮಕ ಅನುಕೂಲಗಳನ್ನು (ಕಂಪ್ಯಾರಟಿವ್ ಅಡ್ವ್ಯಾಂಟಿಜ್) ಹೊಂದಿರುತ್ತವೆ. ಒಂದು ದೇಶ ಇತರ ದೇಶಗಳ ಮೇಲೆ ಪ್ರತಿಯೊಂದು ಕ್ಷೇತ್ರದಲ್ಲಿ ಒಂದು ಅಪರಿಮಿತ ಅನುಕೂಲ (ಆಬ್ಸಲೂಟ್ ಅಡ್ವ್ಯಾಂಟಿಜ್) ಹೊಂದಿರಬಹುದು, ಆದಾಗ್ಯೂ ಇತರರಿಗೆ ಹೋಲಿಸಿದರೆ ತುಲನಾತ್ಮಕ ಅನುಕೂಲ ಹೊಂದಿದ ಒಂದು ಕ್ಷೇತ್ರದಲ್ಲಿ ಪ್ರಾವೀಣ್ಯ ಗಳಿಸಬಹುದು, ಮತ್ತು ಅದರಿಂದಾಗಿ ಅಪರಿಮಿತ ಅನುಕೂಲಗಳಿರದ ದೇಶಗಳೊಂದಿಗೆ ವ್ಯಾಪಾರಮಾಡಿ ಲಾಭ ಗಳಿಸಬಹುದು. ಉದಾಹರಣೆಗೆ, ಒಂದು ದೇಶ ಉನ್ನತ ತಂತ್ರಜ್ಞಾನದ ಜ್ಞಾನ ಉತ್ಪನ್ನಗಳ (ನಾಲಿಜ್ ಪ್ರಾಡಕ್ಟ್) ಉತ್ಪಾದನೆಯಲ್ಲಿ ನಿಷ್ಣಾತವಿರಬಹುದು, ಅಭಿವೃದ್ಧಿಹೊಂದಿದ ದೇಶಗಳು ಇರುವಂತೆ, ಮತ್ತು ಅಗ್ಗವಾಗಿ ಮತ್ತು ಹೇರಳವಾಗಿ ಕೆಲಸಗಾರರು ಸಿಗುವ ಅಭಿವೃದ್ಧಿಶೀಲ ದೇಶಗಳೊಂದಿಗೆ ಕಾರ್ಖಾನೆಗಳಲ್ಲಿ ಉತ್ಪಾದಿಸಿದ ಸರಕುಗಳಿಗಾಗಿ ವ್ಯಾಪಾರ ಮಾಡಬಹುದು. ಸಿದ್ಧಾಂತದ ಪ್ರಕಾರ, ಈ ರೀತಿಯಲ್ಲಿ ದೇಶಗಳು ತಮ್ಮ ಸ್ವಂತ ಉನ್ನತ ತಂತ್ರಜ್ಞಾನ ಮತ್ತು ಕೆಳದರ್ಜೆಯ ತಂತ್ರಜ್ಞಾನದ ಉತ್ಪನ್ನಗಳನ್ನು ಉತ್ಪಾದಿಸುವುದಕ್ಕಿಂತ ಹೆಚ್ಚು ಸಮಗ್ರ ಉತ್ಪನ್ನಗಳು ಮತ್ತು ಪ್ರಯೋಜನವನ್ನು ಸಾಧಿಸಬಹುದು. ತುಲನಾತ್ಮಕ ಅನುಕೂಲದ ಸಿದ್ಧಾಂತ ಬಹುಮಟ್ಟಿಗೆ ಮಾದರಿ ಅರ್ಥಶಾಸ್ತ್ರಜ್ಞನ ಮುಕ್ತ ವ್ಯಾಪಾರದ ಲಾಭಗಳಲ್ಲಿನ ನಂಬಿಕೆಗೆ ಆಧಾರ. ಈ ಪರಿಕಲ್ಪನೆಯು ವ್ಯಕ್ತಿಗಳು, ಕೃಷಿಕ್ಷೇತ್ರಗಳು, ತಯಾರಕರು, ಸೇವೆ ಒದಗಿಸುವವರು, ಮತ್ತು ಅರ್ಥವ್ಯವಸ್ಥೆಗಳಿಗೆ ಅನ್ವಯಿಸುತ್ತದೆ. ಈ ಉತ್ಪಾದನಾ ವ್ಯವಸ್ಥೆಗಳ ಪ್ರತಿಯೊಂದರಲ್ಲಿ ಕೆಳಗಿನವು ಇರಬಹುದು:
ಆಡಮ್ ಸ್ಮಿತ್ರ ದ ವೆಲ್ತ್ ಆಫ಼್ ನೇಷನ್ಸ್ (೧೭೭೬) ಕಾರ್ಮಿಕರ ವಿಭಜನೆಯ ಪ್ರಯೋಜನಗಳನ್ನು ಚರ್ಚಿಸುತ್ತದೆ. ಸ್ಮಿತ್, ಒಬ್ಬ ವ್ಯಕ್ತಿ ಅತ್ಯುನ್ನತ ಸಂಭಾವ್ಯವಾದ ಲಾಭವನ್ನು ಗಳಿಸಲು ಒಂದು ಸಂಪನ್ಮೂಲ, ಉದಾಹರಣೆಗೆ, ಭೂಮಿ ಅಥವಾ ಕೆಲಸಗಾರರನ್ನು, ವಿನಿಯೋಗಿಸಬೇಕು ಎಂದು ಗಮನಿಸಿದರು. ಹಾಗಾಗಿ, ಸಂಪನ್ಮೂಲಗಳ ಎಲ್ಲ ಬಳಕೆಗಳು ಒಂದು ಸಮಾನವಾದ ಪ್ರಮಾಣದ ಆದಾಯ ನೀಡಬೇಕು (ಪ್ರತಿ ಉದ್ಯಮದ ತುಲನಾತ್ಮಕ ಅಪಾಯದ ಸ್ಥಿತಿಗೆ ಸರಿಪಡಿಸಿದ). ಇಲ್ಲವಾದರೆ ಪುನರ್ವಿಂಗಡಣೆ ಸಂಭವಿಸುತ್ತದೆ. ಈ ಕಲ್ಪನೆಯು ಆರ್ಥಿಕ ಸಿದ್ಧಾಂತದ ಪ್ರಧಾನ ಪ್ರತಿಪಾದನೆ, ಎಂದು ಜ್ಯಾರ್ಜ್ ಸ್ಟಿಗ್ಲರ್ ಬರೆದರು, ಮತ್ತು ಇಂದು ಇದನ್ನು ಆದಾಯ ವಿತರಣೆಯ ಪರಿಮಿತ ಉತ್ಪಾದಕತೆ ಸಿದ್ಧಾಂತ (ಮಾರ್ಜನಲ್ ಪ್ರಡಕ್ಟಿವಿಟಿ ಥೀಯರಿ ಆಫ಼್ ಇನ್ಕಮ್ ಡಿಸ್ಟ್ರಬ್ಯೂಶನ್) ಎಂದು ಕರೆಯಲಾಗುತ್ತದೆ. ಫ಼್ರಾನ್ಸ್ನ ಅರ್ಥಶಾಸ್ತ್ರಜ್ಞ ಟಿರ್ಗೋ ೧೭೬೬ರಲ್ಲಿ ಅದೇ ತೆರನ ವಿಷಯವನ್ನು ಪ್ರಸ್ತಾಪಿಸಿದ್ದರು.[17] ಹೆಚ್ಚು ಸಾಮಾನ್ಯ ಶಬ್ದಗಳಲ್ಲಿ, ಹುಟ್ಟುವಳಿಗಳ ಬೆಲೆಗಳು ಮತ್ತು ಲಾಭದಾಯಕ ಹೂಡುವಳಿಗಳನ್ನು ಒಳಗೊಂಡಂತೆ, ತುಲನಾತ್ಮಕ ಅನುಕೂಲದ ಮೂಲಕ ಮಾರುಕಟ್ಟೆ ಉತ್ತೇಜನಗಳು ಉತ್ಪಾದನೆಯ ಅಂಶಗಳ ಪಾಲನ್ನು ಆರಿಸುತ್ತವೆಂದು ಸಿದ್ಧಾಂತಿಸಲಾಗುತ್ತದೆ, ಅಂದರೆ, ಒಂದು ನಿಶ್ಚಿತ ಪ್ರಕಾರದ ಹುಟ್ಟುವಳಿಯ ಅವಕಾಶದ ವೆಚ್ಚವನ್ನು ಕೆಳಗೆ ಹಿಡಿದಿಡಲು (ತುಲನಾತ್ಮಕವಾಗಿ) ಅಲ್ಪ-ಬೆಲೆ ಹೂಡುವಳಿಗಳನ್ನು ಬಳಸಿಕೊಳ್ಳಲಾಗುತ್ತದೆ. ಪ್ರಕ್ರಿಯೆ ಮುಂದುವರಿದಂತೆ, ಒಟ್ಟು ಹುಟ್ಟುವಳಿ ಒಂದು ಉಪ ಉತ್ಪನ್ನದ ರೂಪದಲ್ಲಿ ಅಥವಾ ರಚನೆಯ ಮೂಲಕ ಹೆಚ್ಚಾಗುತ್ತದೆ.[18] ಉತ್ಪಾದನೆಯ ಅಂತಹ ತಜ್ಞತೆಯು ವ್ಯಾಪಾರದಿಂದ ಆಗುವ ಲಾಭಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಅದರಿಂದ ಸಂಪನ್ಮೂಲಗಳ ಯಜಮಾನರು ಇತರ, ಹೆಚ್ಚು ಅಧಿಕ ಮೌಲ್ಯದ ಸರಕುಗಳ ಬದಲಾಗಿ ಒಂದು ಪ್ರಕಾರದ ಹುಟ್ಟುವಳಿಯ ಮಾರಾಟ ಮಾಡಿ ವ್ಯಾಪಾರದಿಂದ ಪ್ರಯೋಜನ ಪಡೆಯಬಹುದು. ಉತ್ಪಾದನೆಯಲ್ಲಿ ತಜ್ಞತೆ ಮತ್ತು ಉಂಟಾಗುವ ವ್ಯಾಪಾರದಿಂದ ಹೆಚ್ಚಿದ ಹುಟ್ಟುವಳಿ (ವಿಧ್ಯುಕ್ತವಾಗಿ, ಹೆಚ್ಚಿದ ಗ್ರಾಹಕ ಹೆಚ್ಚಳ "ಕನ್ಸೂಮರ್ ಸರ್ಪ್ಲಸ್" ಮತ್ತು ಉತ್ಪಾದಕ ಲಾಭಗಳ ಒಟ್ಟು ಮೊತ್ತ), ವ್ಯಾಪಾರದಿಂದ ಆಗುವ ಲಾಭಗಳ ಒಂದು ಪರಿಮಾಣ.[19][20][21]
ಪೂರೈಕೆ ಮತ್ತು ಬೇಡಿಕೆ ವಿನ್ಯಾಸವು ಉತ್ಪನ್ನದ ಉಪಲಬ್ಧತೆ ಮತ್ತು ಬೇಡಿಕೆಗಳ ನಡುವಣ ಒಂದು ಸಮತೋಲನದ ಪರಿಣಾಮವಾಗಿ ಬೆಲೆಗಳು ಹೇಗೆ ಬದಲಾಗುತ್ತವೆಂದು ವಿವರಿಸುತ್ತದೆ. ರೇಖಾಚಿತ್ರವು ಪೂರೈಕೆ ವಕ್ರರೇಖೆಯ (ಪೂ) ಮೇಲೆ ಒಂದು ಹೊಸ ಸಮಸ್ಥಿತಿ ಬಿಂದುವನ್ನು ಮುಟ್ಟಲು ಅಗತ್ಯವಾದ ಬೆಲೆ ಮತ್ತು ಪ್ರಮಾಣದ ಹೆಚ್ಚಳದ ಜೊತೆಗೆ ಬೇಡಿಕೆಯಲ್ಲಿ ಒಂದು ಹೆಚ್ಚಳವನ್ನು (ಅಂದರೆ, ಬಲಗಡೆಯ ಬದಲಾವಣೆ) ಚಿತ್ರಿಸುತ್ತದೆ.ಬೇಡಿಕೆ ಮತ್ತು ಪೂರೈಕೆಯ ಸಿದ್ಧಾಂತವು ಮಾರಾಟವಾದ ಸರಕುಗಳ ಬೆಲೆಗಳು ಮತ್ತು ಪ್ರಮಾಣಗಳನ್ನು ಹಾಗೂ ಒಂದು ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ಅದರಿಂದ ಆಗುವ ಬದಲಾವಣೆಗಳನ್ನು ವಿವರಿಸುವ ಒಂದು ಸಂಘಟನಾ ಸೂತ್ರ. ಸೂಕ್ಷ್ಮ ಅರ್ಥಶಾಸ್ತ್ರದ ಸಿದ್ಧಾಂತದಲ್ಲಿ, ಒಂದು ಸಂಪೂರ್ಣವಾಗಿ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಇದು ಬೆಲೆ ಮತ್ತು ಹುಟ್ಟುವಳಿಯ ನಿರ್ಧಾರದ ಕುರಿತು ಹೇಳುತ್ತದೆ. ಇದು ಇತರ ಮಾರುಕಟ್ಟೆ ವಿನ್ಯಾಸಗಳನ್ನು ರೂಪಿಸಲು ಮತ್ತು ಇತರ ಸೈದ್ಧಾಂತಿಕ ರೀತಿಗಳಿಗೆ ಒಂದು ಮೂಲಭೂತ ಅಂಗವಾಗಿ ಕೆಲಸಮಾಡಿದೆ.ಒಂದು ವ್ಯಾಪಾರದ ವಸ್ತುವಿನ ಒಂದು ನಿಶ್ಚಿತ ಮಾರುಕಟ್ಟೆಗೆ, ಬೇಡಿಕೆಯು ಎಲ್ಲ ನಿರೀಕ್ಷಿತ ಖರೀದಿದಾರರು ಪ್ರತಿಯೊಂದು ಏಕಾಂಶ ಬೆಲೆಗೆ ಖರೀದಿಸಲು ಸಿದ್ಧವಿರುತ್ತಾರೆ ಎಂಬ ಪ್ರಮಾಣವನ್ನು ತೋರಿಸುತ್ತದೆ. ಬೇಡಿಕೆಯನ್ನು ಹಲವುವೇಳೆ ಬೆಲೆ ಮತ್ತು ಕೋರಿದ ಪ್ರಮಾಣವನ್ನು ಸಂಬಂಧಿಸುವ ಒಂದು ಕೋಷ್ಟಕ ಅಥವಾ ಒಂದು ರೇಖಾಚಿತ್ರವನ್ನು ಬಳಸಿ ಚಿತ್ರಿಸಲಾಗುತ್ತದೆ. ಬೇಡಿಕೆ ಸಿದ್ಧಾಂತವು (ಡಿಮಾಂಡ್ ಥೀಯರಿ) ಪ್ರತ್ಯೇಕ ಗ್ರಾಹಕರು ನಿಶ್ಚಿತ ಆದಾಯ, ಬೆಲೆಗಳು, ರುಚಿಗಳು, ಇತ್ಯಾದಿಗಳಿಗೆ ಅತಿ ಹೆಚ್ಚು ಇಷ್ಟಪಟ್ಟ ಪ್ರತಿಯೊಂದು ಸರಕಿನ ಪ್ರಮಾಣವನ್ನು ವಿವೇಕಯುಕ್ತವಾಗಿ ಆಯ್ಕೆಮಾಡುತ್ತಾರೆಂದು ವಿವರಿಸುತ್ತದೆ. ಇದಕ್ಕೆ ಒಂದು ಪದ 'ನಿರ್ಬಂಧಿತ ಸೌಲಭ್ಯ ಗರಿಷ್ಠೀಕರಣ' (ಕಂಸ್ಟ್ರೇಯ್ನ್ಡ್ ಯುಟಿಲಿಟಿ ಮ್ಯಾಕ್ಸಮಾಯ್ಜ಼ೇಶನ್) (ಬೇಡಿಕೆಯ ಮೇಲೆ ಆದಾಯದ ನಿರ್ಬಂಧ ಇರುವಂಥ) ಎಂಬುವುದು. ಇಲ್ಲಿ, ಸೌಲಭ್ಯ ಶಬ್ದವು ಪ್ರತ್ಯೇಕ ಗ್ರಾಹಕರ (ಪರಿಕಲ್ಪಿತ) ಇಷ್ಟ ಸಂಬಂಧದ (ಪ್ರೆಫ಼ರನ್ಸ್ ರಿಲೇಶನ್) ಕುರಿತು ಹೇಳುತ್ತದೆ. ಆಮೇಲೆ ಸೌಲಭ್ಯ ಮತ್ತು ಆದಾಯಗಳನ್ನು, ಕೋರಿದ ಪ್ರಮಾಣದ ಮೇಲೆ ಒಂದು ಮೌಲ್ಯ ವ್ಯತ್ಯಾಸದ ಪ್ರಭಾವದ ಬಗ್ಗೆ ಪರಿಕಲ್ಪಿತ ಲಕ್ಷಣಗಳನ್ನು ರೂಪಿಸಲು ಬಳಸಲಾಗುತ್ತದೆ. ಬೇಡಿಕೆಯ ನಿಯಮ (ಲಾ ಆಫ಼್ ಡಿಮಾಂಡ್), ಸಾಮಾನ್ಯವಾಗಿ, ಒಂದು ನಿಶ್ಚಿತ ಮಾರುಕಟ್ಟೆಯಲ್ಲಿ ಮೌಲ್ಯ ಮತ್ತು ಕೋರಿದ ಪ್ರಮಾಣ ವಿಲೋಮವಾಗಿ (ಇನ್ವರ್ಸ್ಲಿ) ಸಂಬಂಧಿತವಾಗಿರುತ್ತವೆ, ಎಂದು ಹೇಳುತ್ತದೆ. ಬೇರೆ ರೀತಿ ಹೇಳುವುದಾದರೆ, ಒಂದು ಉತ್ಪನ್ನದ ಬೆಲೆ ಹೆಚ್ಚಿದಂತೆ, ಜನ ಅದನ್ನು ಕಡಿಮೆ ಪ್ರಮಾಣದಲ್ಲಿ ಖರೀದಿಸಲು ಸಾಮರ್ಥ್ಯವುಳ್ಳವರಾಗಿರುತ್ತಾರೆ ಮತ್ತು ಸಿದ್ಧವಿರುತ್ತಾರೆ (ಬೇರೆ ವಿಷಯಗಳು ಬದಲಾಗದಿದ್ದರೆ). ಒಂದು ವ್ಯಾಪಾರದ ವಸ್ತುವಿನ ಬೆಲೆ ಮೇಲೇರಿದಂತೆ, ಒಟ್ಟು ಕೊಳ್ಳುವ ಶಕ್ತಿ (ಪರ್ಚಿಸಿಂಗ್ ಪಾವರ್) ಕಡಿಮೆಯಾಗುತ್ತದೆ (ಆದಾಯ ಪ್ರಭಾವ "ಇನ್ಕಮ್ ಇಫ಼ೆಕ್ಟ್") ಮತ್ತು ಗ್ರಾಹಕರು ತುಲನಾತ್ಮಕವಾಗಿ ಕಡಮೆ ದುಬಾರಿಯಾದ ಸರಕುಗಳ ಕಡೆಗೆ ವಾಲುತ್ತಾರೆ (ಬದಲಾವಣೆ ಪ್ರಭಾವ "ಸಬ್ಸ್ಟಿಟೂಶನ್ ಇಫ಼ೆಕ್ಟ್"). ಬೇರೆ ಸಂಗತಿಗಳು ಕೂಡ ಬೇಡಿಕೆ ಮೇಲೆ ಪರಿಣಾಮ ಬೀರಬಹುದು; ಉದಾಹರಣೆಗೆ ಆದಾಯದಲ್ಲಿ ಒಂದು ಹೆಚ್ಚಳ ಬೇಡಿಕೆ ವಕ್ರರೇಖೆಯನ್ನು (ಕರ್ವ್) ಉಗಮಕ್ಕೆ ತುಲನಾತ್ಮಕವಾಗಿ ಹೊರಗಡೆಗೆ ಕದಲಿಸುತ್ತದೆ.ಪೂರೈಕೆಯು ಒಂದು ಸರಕಿನ ಬೆಲೆ ಮತ್ತು ಮಾರಾಟಕ್ಕೆ ಆ ಬೆಲೆಗೆ (ಉತ್ಪಾದಕರಂತಹ) ಪೂರೈಕೆದಾರರಿಂದ ಲಭ್ಯವಾದ ಪ್ರಮಾಣದ ನಡುವಣ ಸಂಬಂಧ. ಪೂರೈಕೆಯನ್ನು ಹಲವುವೇಳೆ ಬೆಲೆ ಮತ್ತು ಪೂರೈಕೆಯಾದ ಪ್ರಮಾಣವನ್ನು ಸಂಬಂಧಿಸುವ ಒಂದು ಕೋಷ್ಟಕ ಅಥವಾ ರೇಖಾಚಿತ್ರವನ್ನು ಬಳಸಿ ಚಿತ್ರಿಸಲಾಗುತ್ತದೆ. ಉತ್ಪಾದಕರನ್ನು ಲಾಭವನ್ನು ಗರಿಷ್ಠಕ್ಕೇರಿಸುವವರೆಂದು (ಮ್ಯಾಕ್ಸಮೈಜ಼ರ್) ಪರಿಕಲ್ಪಿಸಲಾಗುತ್ತದೆ, ಅಂದರೆ ಅವರು ತಮಗೆ ಅತಿ ಹೆಚ್ಚು ಲಾಭ ತರುವಂಥ ಸರಕುಗಳ ಪರಿಮಾಣವನ್ನು ಉತ್ಪಾದಿಸಲು ಪ್ರಯತ್ನಿಸುತ್ತಾರೆ. ಪೂರೈಕೆಯನ್ನು ವಿಶಿಷ್ಟವಾಗಿ ಬೆಲೆ ಮತ್ತು ಪೂರೈಕೆಮಾಡಿದ ಪ್ರಮಾಣದ ನಡುವಣ ಒಂದು ನೇರ ಅನುಪಾತ (ಡಿರೆಕ್ಟ್ಲಿ ಪ್ರಪಾರ್ಶನಲ್) ಸಂಬಂಧವಾಗಿ ನಿರೂಪಿಸಲಾಗುತ್ತದೆ (ಬೇರೆ ವಿಷಯಗಳು ಬದಲಾಗದಿದ್ದರೆ). ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ಸರಕನ್ನು ಮಾರಾಟಮಾಡಬಲ್ಲ ಬೆಲೆ ಹೆಚ್ಚಿದಂತೆ, ಉತ್ಪಾದಕರು ಅದನ್ನು ಇನ್ನೂ ಹೆಚ್ಚಾಗಿ ಪೂರೈಕೆಮಾಡುತ್ತಾರೆ. ಹೆಚ್ಚಿದ ಬೆಲೆ ಉತ್ಪಾದನೆಯನ್ನು ಹೆಚ್ಚಿಸಲು ಅನುಕೂಲ ಉಂಟುಮಾಡುತ್ತದೆ. ಸಮಸ್ಥಿತಿಯ ಕೆಳಗೆ ಒಂದು ಬೆಲೆಗೆ, ಬೇಡಿದ ಪ್ರಮಾಣಕ್ಕೆ ಹೋಲಿಸಿದರೆ ಪೂರೈಕೆಮಾಡಿದ ಪ್ರಮಾಣದ ಒಂದು ಕೊರತೆಯಿದೆ. ಇದು ಬೆಲೆಯನ್ನು ಮೇಲೆ ಎಳೆಯುತ್ತದೆ. ಸಮಸ್ಥಿತಿಯನ್ನು ಮೀರಿದ ಒಂದು ಬೆಲೆಗೆ, ಬೇಡಿದ ಪ್ರಮಾಣಕ್ಕೆ ಹೋಲಿಸಿದರೆ ಪೂರೈಕೆಮಾಡಿದ ಪ್ರಮಾಣದ ಒಂದು ಹೆಚ್ಚಳವಿದೆ. ಇದು ಬೆಲೆಯನ್ನು ಕೆಳಗೆ ತಳ್ಳುತ್ತದೆ. ಪೂರೈಕೆ ಮತ್ತು ಬೇಡಿಕೆಯ ವಿನ್ಯಾಸವು ನಿಶ್ಚಿತ ಪೂರೈಕೆ ಮತ್ತು ಬೇಡಿಕೆ ವಕ್ರರೇಖೆಗಳಿಗೆ, ಪೂರೈಕೆಮಾಡಿದ ಪ್ರಮಾಣವನ್ನು ಬೇಡಿದ ಪ್ರಮಾಣಕ್ಕೆ ಸಮ ಮಾಡುವ ಬೆಲೆಗೆ, ಬೆಲೆ ಮತ್ತು ಪ್ರಮಾಣಗಳು ಸ್ಥಿರೀಕರಿಸುತ್ತವೆಂದು ಮುನ್ನುಡಿಯುತ್ತದೆ. ಇದು ಬೇಡಿಕೆ ಮತ್ತು ಪೂರೈಕೆಯ ರೇಖಾಕೃತಿಯ ಎರಡೂ ವಕ್ರರೇಖೆಗಳ ಪ್ರತಿಚ್ಛೇದನದಲ್ಲಿದೆ (ಇಂಟರ್ಸೆಕ್ಷನ್) (ಮಾರುಕಟ್ಟೆ ಸಮಸ್ಥಿತಿ "ಮಾರ್ಕೆಟ್ ಈಕ್ವಲಿಬ್ರಿಯಮ್").ಒಂದು ಸರಕಿನ ಒಂದು ನಿಶ್ಚಿತ ಪ್ರಮಾಣಕ್ಕೆ, ಬೇಡಿಕೆ ವಕ್ರರೇಖೆಯ ಮೇಲಿನ ಮೌಲ್ಯ ಬಿಂದು (ಪ್ರಾಯ್ಸ್ ಪಾಯಿಂಟ್) ಹುಟ್ಟುವಳಿಯ ಆ ಏಕಾಂಶಕ್ಕೆ ಗ್ರಾಹಕರಿಗೆ ಮೌಲ್ಯ, ಅಥವಾ ಪರಿಮಿತ ಪ್ರಯೋಜನವನ್ನು[22] ಕೆಳಗೆ ನಮೂದಿಸಿದ ವರ್ಗಗಳು ಮುಖ್ಯ ಪಠ್ಯಗಳಲ್ಲಿ ಕಾಣಿಸಿಕೊಳ್ಳುತ್ತವೆ .[23]
ಅರ್ಥಶಾಸ್ತ್ರದ ಕೆಲವು ವಿಶಿಷ್ಟ ಕಾರ್ಯಕ್ಷೇತ್ರಗಳು ಉಳಿದವುಕ್ಕಿಂತ ಇನ್ನೂ ಹೆಚ್ಚಾಗಿ ಮಾರುಕಟ್ಟೆ ವೈಫಲ್ಯದ ಕುರಿತು ಸಂಬಂಧಿಸಿರುತ್ತವೆ. ಸಾರ್ವಜನಿಕ ಕ್ಷೇತ್ರದ ಅರ್ಥಶಾಸ್ತ್ರವು (ಪಬ್ಲಿಕ್ ಸೆಕ್ಟರ್ ಎಕನಾಮಿಕ್ಸ್) ಒಂದು ಉದಾಹರಣೆ, ಏಕೆಂದರೆ ಎಲ್ಲಿ ಮಾರುಕಟ್ಟೆ ವಿಫಲವಾಗುತ್ತದೆಯೋ, ಯಾವುದೋ ಒಂದು ಪ್ರಕಾರದ ನಿಯಾಮಕ ಅಥವಾ ಸರ್ಕಾರಿ ಕಾರ್ಯಕ್ರಮವೇ ಪರಿಹಾರೋಪಾಯ. ಪರಿಸರ ಅರ್ಥಶಾಸ್ತ್ರದ (ಎನ್ವಾಯ್ರನ್ಮೆಂಟಲ್ ಎಕನಾಮಿಕ್ಸ್) ಬಹಳಷ್ಟು ಬಾಹ್ಯ ಪ್ರಭಾವಗಳು ಅಥವಾ "ಸಾರ್ವಜನಿಕ ಅಹಿತಗಳ" (ಪಬ್ಲಿಕ್ ಬ್ಯಾಡ್) ಕುರಿತಾಗಿದೆ. ಕಾರ್ಯನೀತಿ ಆಯ್ಕೆಗಳು, ಬೆಲೆ-ಲಾಭ ವಿಶ್ಲೇಷಣೆಯನ್ನು (ಕಾಸ್ಟ್-ಬೆನಫಿಟ್ ಅನ್ಯಾಲಸಿಸ್) ಪ್ರತಿಬಿಂಬಿಸುವ ನಿಬಂಧನೆಗಳು ಅಥವಾ, ಉತ್ಸರ್ಜನ ಶುಲ್ಕಗಳು (ಇಮಿಶನ್ ಫೀ) ಅಥವಾ ಆಸ್ತಿ ಹಕ್ಕುಗಳ ಪುನರ್ವ್ಯಾಖ್ಯಾನದಂತಹ, ಉತ್ತೇಜನಗಳನ್ನು ಪರಿವರ್ತಿಸುವ ಮಾರುಕಟ್ಟೆ ಪರಿಹಾರಗಳನ್ನು ಒಳಗೊಂಡಿವೆ.[27][28] ಪರಿಸರ ಅರ್ಥಶಾಸ್ತ್ರವು ಜೀವಿ ಪರಿಸ್ಥಿತಿ ವಿಜ್ಞಾನದ ಅರ್ಥಶಾಸ್ತ್ರಕ್ಕೆ (ಎಕಾಲಜಿಕಲ್ ಎಕನಾಮಿಕ್ಸ್) ಸಂಬಂಧಿಸಿದೆ ಆದರೆ ವ್ಯತ್ಯಾಸಗಳಿವೆ.[29] ಬಹುತೇಕ ಪರಿಸರ ಅರ್ಥಶಾಸ್ತ್ರಜ್ಞರು ಅರ್ಥಶಾಸ್ತ್ರಜ್ಞರಾಗಿ ತರಬೇತಿ ಪಡೆದಿದ್ದಾರೆ. ಅವರು ಪರಿಸರದ ಸಮಸ್ಯೆಗಳನ್ನು ವಿವರಿಸಲು ಅರ್ಥಶಾಸ್ತ್ರದ ಸಾಧನಗಳನ್ನು ಪ್ರಯೋಗಿಸುತ್ತಾರೆ, ಮತ್ತು ಅವುಗಳಲ್ಲಿ ಹಲವು ಹಾಗೆ-ಕರೆಯಲಾಗುವ ಮಾರುಕಟ್ಟೆ ವೈಫಲ್ಯಗಳಿಗೆ (ಯಾವ ಸಂದರ್ಭಗಳಲ್ಲಿ ಅರ್ಥಶಾಸ್ತ್ರದ "ಕಾಣದ ಕೈ" "ಇನ್ವಿಸಬಲ್ ಹ್ಯಾಂಡ್" ಅವಿಶ್ವಸನೀಯವಾಗುತ್ತದೆಯೋ) ಸಂಬಂಧಿಸಿವೆ.[30] ಬಹುತೇಕ ಜೀವಿ ಪರಿಸ್ಥಿತಿ ವಿಜ್ಞಾನದ ಅರ್ಥಶಾಸ್ತ್ರಜ್ಞರು ಜೀವಿ ಪರಿಸ್ಥಿತಿ ವಿಜ್ಞಾನಿಗಳಾಗಿ ತರಬೇತಿ ಪಡೆದಿದ್ದಾರೆ, ಆದರೆ ಜೀವಿ ಪರಿಸ್ಥಿತಿ ವ್ಯವಸ್ಥೆಗಳು ಮತ್ತು ಸೇವೆಗಳ ಮೇಲೆ ಮನುಷ್ಯರ ಮತ್ತು ಅವರ ಆರ್ಥಿಕ ಚಟುವಟಿಕೆಯ ಪ್ರಭಾವಗಳನ್ನು (ಮತ್ತು ವಿಪರ್ಯಯ ಪ್ರಭಾವ) ಪರಿಗಣಿಸುವಂತೆ ತಮ್ಮ ಕೆಲಸದ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ. ಈ ಕಾರ್ಯಕ್ಷೇತ್ರವು ಅರ್ಥಶಾಸ್ತ್ರವನ್ನು ಜೀವಿ ಪರಿಸ್ಥಿತಿ ವಿಜ್ಞಾನದ ಒಂದು ನಿಖರವಾದ ಉಪಕ್ಷೇತ್ರವೆಂಬುದನ್ನು ತನ್ನ ಆಧಾರ ಪ್ರಮೇಯವಾಗಿ ತೆಗೆದುಕೊಳ್ಳುತ್ತದೆ. ಜೀವಿ ಪರಿಸ್ಥಿತಿ ವಿಜ್ಞಾನದ ಅರ್ಥಶಾಸ್ತ್ರವು ಪರಿಸರದ ಸಮಸ್ಯೆಗಳಿಗೆ ಒಂದು ಹೆಚ್ಚು ಬಹುತತ್ತ್ವವಾದಿ (ಪ್ಲೂರಲಿಸ್ಟಿಕ್) ಹಾದಿ ತೆಗೆದುಕೊಳ್ಳುತ್ತದೆಂದು ಕೆಲವು ಸಲ ವಿವರಿಸಲಾಗುತ್ತದೆ ಮತ್ತು ದೀರ್ಘಾವಧಿಯ ಪರಿಸರದ ನಿರಂತರತೆ ಮತ್ತು ಗಾತ್ರದ ವಿಷಯಗಳ ಮೇಲೆ ಹೆಚ್ಚು ಸ್ಪಷ್ಟವಾಗಿ ಕೇಂದ್ರೀಕರಿಸುತ್ತದೆ. ಕೃಷಿ ಅರ್ಥಶಾಸ್ತ್ರವು ಅರ್ಥಶಾಸ್ತ್ರದ ಒಂದು ಅತ್ಯಂತ ಹಳೆಯ ಮತ್ತು ಅತ್ಯಂತ ಊರ್ಜಿತವಾದ ಕಾರ್ಯಕ್ಷೇತ್ರ. ಅದು ಕೃಷಿ ವಲಯದ ಮೇಲೆ ಪರಿಣಾಮ ಬೀರುವ ಆರ್ಥಿಕ ಶಕ್ತಿಗಳ ಮತ್ತು ಅರ್ಥವ್ಯವಸ್ಥೆಯ ಉಳಿದ ಭಾಗದ ಮೇಲೆ ಕೃಷಿ ಕ್ಷೇತ್ರದ ಪ್ರಭಾವದ ಅಧ್ಯಯನ. ಅದು, ವಾಸ್ತವ ಪ್ರಪಂಚದ ಜಟಿಲ ಪರಿಸ್ಥಿತಿಗಳಿಗೆ ಸೂಕ್ಷ್ಮ ಅರ್ಥಶಾಸ್ತ್ರದ ಸಿದ್ಧಾಂತಗಳನ್ನು ಪ್ರಯೋಗಿಸುವ ಆವಶ್ಯಕತೆಯ ಕಾರಣ, ಹೆಚ್ಚು ಸಾಮಾನ್ಯ ಉಪಯುಕ್ತತೆಯ ಹಲವು ಪ್ರಮುಖ ಪ್ರಗತಿಗಳು ಪ್ರಾರಂಭವಾಗಲು ಕಾರಣವಾದ ಅರ್ಥಶಾಸ್ತ್ರದ ಒಂದು ಕ್ಷೇತ್ರ; ಉದಾಹರಣೆಗೆ ಅಪಾಯ ಮತ್ತು ಅನಿಶ್ಚಿತತೆಯ ಪಾತ್ರ, ಕುಟುಂಬಗಳ ವರ್ತನೆ ಮತ್ತು ಆಸ್ತಿ ಹಕ್ಕುಗಳು ಮತ್ತು ಉತ್ತೇಜನಗಳ ನಡುವಣ ಸಂಪರ್ಕಗಳು. ಬಹಳ ಇತ್ತೀಚೆಗೆ ಅಂತರರಾಷ್ಟ್ರೀಯ ಸರಕುಗಳ ವ್ಯಾಪಾರ ಮತ್ತು ಪರಿಸರದಂತಹ ಕಾರ್ಯನೀತಿ ಕ್ಷೇತ್ರಗಳಿಗೆ ಒತ್ತುಕೊಡಲಾಗಿದೆ.[31]
ಸಂಪೂರ್ಣವಾಗಿ ಸ್ಪರ್ಧಾತ್ಮಕ ಮಾರುಕಟ್ಟೆಗಳ ಒಂದು ಪೂರ್ವಾನುಮಾನ ಹಲವಾರು ಉತ್ಪಾದಕರಿದ್ದಾರೆ ಎಂಬುದು, ಮತ್ತು ಇವರಲ್ಲಿ ಯಾರೂ ಬೆಲೆಗಳ ಮೇಲೆ ಪ್ರಭಾವ ಬೀರಬಲ್ಲವರಾಗಿಲ್ಲ ಅಥವಾ ಮಾರುಕಟ್ಟೆ ಪ್ರಭಾವಗಳಿಂದ ಸ್ವತಂತ್ರವಾಗಿ ಕಾರ್ಯಮಾಡಬಲ್ಲವರಾಗಿಲ್ಲ ಎಂಬುದು. ಆದರೆ ವಾಸ್ತವವಾಗಿ, ಜನರು ಸಂಪೂರ್ಣವಾಗಿ ಮಾರುಕಟ್ಟೆಗಳಲ್ಲೇ ವ್ಯಾಪಾರ ಮಾಡುವುದಿಲ್ಲ, ಅವರು ವ್ಯಾಪಾರಸಂಸ್ಥೆಗಳ ಮೂಲಕ ಕೆಲಸಮಾಡುತ್ತಾರೆ ಮತ್ತು ಉತ್ಪಾದಿಸುತ್ತಾರೆ. ನಿಗಮಗಳು, ಪಾಲುದಾರಿಕೆಗಳು ಮತ್ತು ನ್ಯಾಸಗಳು, ವ್ಯಾಪಾರಸಂಸ್ಥೆಗಳ ಹೆಚ್ಚು ಸ್ಪಷ್ಟ ಪ್ರಕಾರಗಳು. ರಾನಲ್ಡ್ ಕೋಸ್ರ ಪ್ರಕಾರ ವ್ಯಾಪಾರಕ್ಕಾಗಿ ಮಾಡುವ ವೆಚ್ಚಗಳು ಮಾರುಕಟ್ಟೆಯಲ್ಲಿ ಮಾಡುವ ವೆಚ್ಚಕ್ಕಿಂತ ಕಡಮೆಯಾದಾಗ ಜನ ತಮ್ಮ ಉತ್ಪಾದನೆಯನ್ನು ವ್ಯಾಪಾರಸಂಸ್ಥೆಗಳಲ್ಲಿ ಸಂಯೋಜಿಸಲು ಪ್ರಾರಂಭಿಸುತ್ತಾರೆ.[32] ವ್ಯಾಪಾರಸಂಸ್ಥೆಗಳು ದುಡಿಮೆ ಮತ್ತು ಬಂಡವಾಳಗಳನ್ನು ಜತೆಗೂಡಿಸುತ್ತವೆ, ಮತ್ತು ಪ್ರತ್ಯೇಕ ಮಾರುಕಟ್ಟೆ ವ್ಯಾಪಾರಕ್ಕಿಂತ ಅಸಾಧಾರಣ ಮಿತವ್ಯಯಗಳನ್ನು (ಒಂದು ಪದಾರ್ಥಕ್ಕಿಂತ ಎರಡು ಅಥವಾ ಹೆಚ್ಚು ಪದಾರ್ಥಗಳನ್ನು ಉತ್ಪಾದಿಸುವುದು ಲಾಭದಾಯಕವಾದಾಗ) ಸಾಧಿಸಬಲ್ಲವು. ಕಾರ್ಮಿಕ ಅರ್ಥಶಾಸ್ತ್ರವು (ಲೇಬರ್ ಎಕನಾಮಿಕ್ಸ್) ಮಾರುಕಟ್ಟೆಯ ಮತ್ತು ದುಡಿಮೆಗಾಗಿ ಕ್ರಿಯಾ-ಶಾಸ್ತ್ರದ ಕಾರ್ಯವಿಧಾನವನ್ನು ತಿಳಿಯಲು ಪ್ರಯತ್ನಿಸುತ್ತದೆ. ಕಾರ್ಮಿಕ ಮಾರುಕಟ್ಟೆಗಳು ಕೆಲಸಗಾರರ ಮತ್ತು ಉದ್ಯೋಗದಾತರ ಸಂವಹನದ ಮೂಲಕ ಕಾರ್ಯನಿರ್ವಹಿಸುತ್ತವೆ. ಕಾರ್ಮಿಕ ಅರ್ಥಶಾಸ್ತ್ರವು ಕಾರ್ಮಿಕ ಸೇವೆಗಳ ಪೂರೈಕೆದಾರರು (ಕೆಲಸಗಾರರು), ಕಾರ್ಮಿಕ ಸೇವೆಗಳ ಬೇಡಿಕೆದಾರರನ್ನು (ಉದ್ಯೋಗದಾತರು) ಗಮನಿಸುತ್ತದೆ, ಹಾಗೂ ವೇತನಗಳು ಹಾಗೂ ಇತರ ಕಾರ್ಮಿಕ ಆದಾಯ ಮತ್ತು ಉದ್ಯೋಗ ಮತ್ತು ನಿರುದ್ಯೋಗಗಳಿಂದ ಉಂಟಾಗುವ ಸ್ವರೂಪಗಳನ್ನು ತಿಳಿಯಲು ಪ್ರಯತ್ನಿಸುತ್ತದೆ. ವ್ಯಾವಹಾರಿಕವಾದ ಬಳಕೆಗಳು, ಕಾರ್ಯನೀತಿಗಳ ಸಮೃದ್ಧ ಉದ್ಯೋಗದ (ಫ಼ುಲ್ ಎಂಪ್ಲಾಯ್ಮಂಟ್) ಸೂತ್ರೀಕರಣಕ್ಕೆ ನೆರವಾಗುವುದನ್ನು ಒಳಗೊಂಡಿವೆ.[33] ಔದ್ಯೋಗಿಕ ಸಂಘಟನೆಯು ವ್ಯಾಪಾರಸಂಸ್ಥೆಗಳ ಕೌಶಲಯುತ ವರ್ತನೆ, ಮಾರುಕಟ್ಟೆಗಳ ರಚನೆಗಳು ಮತ್ತು ಅವುಗಳ ಸಂವಹನವನ್ನು ಅಧ್ಯಯನಮಾಡುತ್ತದೆ. ಅಧ್ಯಯನಮಾಡಲಾದ ಸಾಮಾನ್ಯವಾದ ಮಾರುಕಟ್ಟೆ ರಚನೆಗಳು, ಪರಿಪೂರ್ಣ ಪೈಪೋಟಿ, ಏಕಸ್ವಾಮ್ಯ ಪೈಪೋಟಿ (ಮನಾಪಲಿಸ್ಟಿಕ್ ಕಾಂಪಿಟಿಶನ್), ಅಲ್ಪಾಧಿಕಾರದ (ಆಲಿಗಾಪಲಿ) ವಿವಿಧ ಸ್ವರೂಪಗಳು, ಮತ್ತು ಏಕಸ್ವಾಮ್ಯತೆಯನ್ನು ಒಳಗೊಂಡಿವೆ.[34] ಹಣಕಾಸು ಅರ್ಥಶಾಸ್ತ್ರವು (ಫ಼ಾಯ್ನ್ಯಾನ್ಷಲ್ ಎಕನಾಮಿಕ್ಸ್), ಹಲವುವೇಳೆ ಸಾಮಾನ್ಯವಾಗಿ ಹಣಕಾಸು ಎಂದು ಉಲ್ಲೇಖಿಸಲಾದ, ಒಂದು ಅನಿಶ್ಚಿತ (ಅಥವಾ ಅಪಾಯಕರ) ಸನ್ನಿವೇಶದಲ್ಲಿ ಹಣಕಾಸು ಸಂಪನ್ಮೂಲಗಳ ಹಂಚಿಕೆಗೆ ಸಂಬಂಧಿಸಿರುತ್ತದೆ. ಈ ಪ್ರಕಾರವಾಗಿ, ಅದರ ದೃಷ್ಟಿ ಹಣಕಾಸು ಮಾರುಕಟ್ಟೆಗಳ ಕ್ರಿಯೆ, ಹಣಕಾಸು ಸಾಧನಗಳ ಮೌಲ್ಯ ನಿರ್ಧಾರ, ಮತ್ತು ಕಂಪನಿಗಳ ಹಣಕಾಸು ರಚನೆಗಳ ಮೇಲಿದೆ.[35] ನಿರ್ವಾಹಕ ಅರ್ಥಶಾಸ್ತ್ರವು (ಮ್ಯಾನಿಜೀರಲ್ ಎಕನಾಮಿಕ್ಸ್) ವ್ಯಾಪಾರಸಂಸ್ಥೆಗಳಲ್ಲಿ ಅಥವಾ ಇತರ ನಿರ್ವಹಣಾ ಘಟಕಗಳಲ್ಲಿ ನಿರ್ದಿಷ್ಟ ನಿರ್ಣಯಗಳಿಗೆ ಸೂಕ್ಷ್ಮ ಅರ್ಥಶಾಸ್ತ್ರದ ವಿಶ್ಲೇಷಣೆಯನ್ನು ಪ್ರಯೋಗಿಸುತ್ತದೆ. ಅದು, ಖಚಿತತೆ ಮತ್ತು ಪರಿಪೂರ್ಣ ಜ್ಞಾನದ ಅನುಪಸ್ಥಿತಿಯಲ್ಲಿ ಕ್ರಿಯಾ ಸಂಶೋಧನೆ (ಆಪರೇಶನ್ಸ್ ರೀಸರ್ಚ್) ಮತ್ತು ಕ್ರಮವಿಧಿಕರಣದಂತಹ (ಪ್ರೋಗ್ರ್ಯಾಮಿಂಗ್) ಪರಿಮಾಣಾತ್ಮಕ (ಕ್ವಾಂಟಿಟೇಟಿವ್) ವಿಧಾನಗಳಿಂದ ಮತ್ತು ನಿವರ್ತನ ವಿಶ್ಲೇಷಣೆಯಂತಹ (ರಿಗ್ರೆಶನ್ ಅನ್ಯಾಲಸಿಸ್) ಸಂಖ್ಯಾಸಂಗ್ರಹಣ (ಸ್ಟಟಿಸ್ಟಿಕಲ್) ವಿಧಾನಗಳಿಂದ ಬಲವಾಗಿ ಆಯ್ಕೆಮಾಡುತ್ತದೆ. ನಿಶ್ಚಿತಗೊಳಿಸಿದ ವ್ಯಾಪಾರಸಂಸ್ಥೆಯ ಗುರಿಗಳು ಮತ್ತು ತಂತ್ರಜ್ಞಾನ ಹಾಗೂ ಮಾರುಕಟ್ಟೆ ಪರಿಸ್ಥಿತಿಗಳಿಂದ ಹೇರಲ್ಪಟ್ಟ ನಿರ್ಬಂಧಗಳಿಗೆ, ಏಕಾಂಶದ ವೆಚ್ಚದ (ಯೂನಿಟ್-ಕಾಸ್ಟ್) ಕನಿಷ್ಠೀಕರಣ (ಮಿನಮಾಯ್ಜ಼ೇಶನ್) ಮತ್ತು ಲಾಭದ ಗರಿಷ್ಠೀಕರಣವನ್ನು ಒಳಗೊಂಡಂತೆ, ವ್ಯಾಪಾರ ನಿರ್ಣಯಗಳನ್ನು ಸಾಧ್ಯವಾದಷ್ಟು ಉತ್ತಮಗೊಳಿಸುವ (ಆಪ್ಟಮಾಯ್ಜ಼್) ಪ್ರಯತ್ನ, ಒಂದು ಏಕೀಕರಿಸುವ ನಿರೂಪಣಾ ವಿಷಯವಾಗಿದೆ.[36][37]
ಸಾರ್ವಜನಿಕ ಹಣಕಾಸು (ಪಬ್ಲಿಕ್ ಪೈನಾನ್ಸ), ಒಂದು ಸಾರ್ವಜನಿಕ ಕ್ಷೇತ್ರದ ಘಟಕದ, ಸಾಮಾನ್ಯವಾಗಿ ಸರ್ಕಾರದ, ವರಮಾನಗಳು ಮತ್ತು ಖರ್ಚುಗಳ ಆಯವ್ಯಯ ತಯಾರಿಕೆ ಬಗ್ಗೆ ವ್ಯವಹರಿಸುವ ಅರ್ಥಶಾಸ್ತ್ರದ ಕಾರ್ಯಕ್ಷೇತ್ರ. ಈ ವಿಷಯ, ತೆರಿಗೆ ಭಾರ (ಟ್ಯಾಕ್ಸ್ ಇನ್ಸಿಡನ್ಸ್) (ಒಂದು ನಿರ್ದಿಷ್ಟ ತೆರಿಗೆಯನ್ನು ವಾಸ್ತವವಾಗಿ ಯಾರು ಸಲ್ಲಿಸುತ್ತಾರೆ), ಸರ್ಕಾರಿ ಯೋಜನೆಗಳ ಬೆಲೆ-ಲಾಭ ವಿಶ್ಲೇಷಣೆ, ಆರ್ಥಿಕ ಫಲದಾಯಕತೆಯ ಮೇಲಿನ ಪರಿಣಾಮಗಳು ಮತ್ತು ವಿಭಿನ್ನ ಪ್ರಕಾರಗಳ ಖರ್ಚು ಹಾಗೂ ತೆರಿಗೆಗಳು, ಹಾಗೂ ಆರ್ಥಿಕ ರಾಜ್ಯಶಾಸ್ತ್ರದ ಆದಾಯ ವಿತರಣೆಯಂತಹ ಸಂಗತಿಗಳ ಬಗ್ಗೆ ಚರ್ಚಿಸುತ್ತದೆ. ಇವುಗಳಲ್ಲಿ ಕೊನೆಯದು, ಸಾರ್ವಜನಿಕ ಆಯ್ಕೆ ಸಿದ್ಧಾಂತದ (ಪಬ್ಲಿಕ್ ಚಾಯ್ಸ್ ಥೀಯರಿ) ಒಂದು ಅಂಶವಾಗಿದೆ, ಮತ್ತು ಸ್ವಾರ್ಥಪರ ಮತದಾರರು, ರಾಜಕಾರಣಿಗಳು, ಮತ್ತು ಅಧಿಕಾರಿಗಳ ಸಂವಹನಗಳನ್ನು ಒಳಗೊಂಡಂತೆ, ಸೂಕ್ಷ್ಮ ಅರ್ಥಶಾಸ್ತ್ರಕ್ಕೆ ಹೋಲುವ ಸಾರ್ವಜನಿಕ ಕ್ಷೇತ್ರದ ವರ್ತನೆಯ ಮಾದರಿಯನ್ನು ರೂಪಿಸುತ್ತದೆ.[38] ಅರ್ಥಶಾಸ್ತ್ರದ ಬಹಳಷ್ಟು ಭಾಗ ಧನಾತ್ಮಕವಾಗಿದೆ, ಮತ್ತು ಆರ್ಥಿಕ ವಿದ್ಯಮಾನಗಳನ್ನು ವಿವರಿಸಲು ಹಾಗೂ ಮುನ್ನುಡಿಯಲು ಪ್ರಯತ್ನಿಸುತ್ತದೆ. ಗುಣಮಟ್ಟ ಸಂಬಂಧಿತ ಅರ್ಥಶಾಸ್ತ್ರವು ಆರ್ಥಿಕವಾಗಿ ಏನು ಒಳ್ಳೆಯದು ಮತ್ತು ಕೆಟ್ಟದೆಂದು ಗುರುತಿಸಲು ಪ್ರಯತ್ನಿಸುತ್ತದೆ. ಸಮಾಜಕಲ್ಯಾಣ ಅರ್ಥಶಾಸ್ತ್ರವು (ವೆಲ್ಫೇರ್ ಎಕನಾಮಿಕ್ಸ್) ಒಂದು ಅರ್ಥವ್ಯವಸ್ಥೆಯ ಒಳಗೆ ವಿಂಗಡಣೆಯ ಫಲದಾಯಕತೆಯನ್ನು (ಅಲಕೇಟಿವ್ ಎಫಿಸಿಯನ್ಸಿ) ಮತ್ತು ಅದಕ್ಕೆ ಸಂಬಂಧಿಸಿದ ಆದಾಯ ವಿತರಣೆಯನ್ನು ಏಕಕಾಲಿಕವಾಗಿ ನಿರ್ಧರಿಸಲು ಸೂಕ್ಷ್ಮ ಅರ್ಥಶಾಸ್ತ್ರದ ತಂತ್ರಗಳನ್ನು ಬಳಸುವ ಅರ್ಥಶಾಸ್ತ್ರದ ಒಂದು ಗುಣಮಟ್ಟ ಸಂಬಂಧಿತ ಶಾಖೆ. ಅದು ಸಮಾಜವು ಒಳಗೊಂಡಿರುವ ವ್ಯಕ್ತಿಗಳ ಆರ್ಥಿಕ ಚಟುವಟಿಕೆಗಳನ್ನು ಪರಿಶೀಲಿಸುವ ಮೂಲಕ ಸಮಾಜ ಕಲ್ಯಾಣವನ್ನು ಅಳೆಯಲು ಪ್ರಯತ್ನಿಸುತ್ತದೆ.[39]
ಸ್ಥೂಲ ಅರ್ಥಶಾಸ್ತ್ರವು ಸ್ಥೂಲವಾದ ಪರಿಮಾಣಗಳು ಮತ್ತು ಅವುಗಳ ಸಂವಹನಗಳನ್ನು "ಮೇಲಿನಿಂದ ಕೆಳಕ್ಕೆ" (ಟಾಪ್-ಡೌನ್) ವಿವರಿಸಲು, ಅಂದರೆ ಸಾಮಾನ್ಯ-ಸಮಸ್ಥಿತಿ ಸಿದ್ಧಾಂತದ ಒಂದು ಸರಳಗೊಳಿಸಿದ ಸ್ವರೂಪವನ್ನು ಬಳಸಿ, ಅರ್ಥವ್ಯವಸ್ಥೆಯನ್ನು ಸಮಗ್ರವಾಗಿ ಪರೀಕ್ಷಿಸುತ್ತದೆ.[40] ಅಂತಹ ಪರಿಮಾಣಗಳು, ದೇಶೀಯ ಆದಾಯ ಮತ್ತು ಹುಟ್ಟುವಳಿ, ನಿರುದ್ಯೋಗ ಪ್ರಮಾಣ, ಹಾಗೂ ಹಣದುಬ್ಬರ ಮತ್ತು ಒಟ್ಟು ಬಳಕೆ ಮತ್ತು ಬಂಡವಾಳ ವೆಚ್ಚಗಳಂತಹ ಉಪಪರಿಮಾಣಗಳು ಮತ್ತು ಅವುಗಳ ಅಂಗಗಳನ್ನು ಒಳಗೊಂಡಿವೆ. ಅದು ಆರ್ಥಿಕ ಕಾರ್ಯನೀತಿ (ಮಾನಿಟೆರಿ ಪಾಲಸಿ) ಮತ್ತು ಆದಾಯ ಕಾರ್ಯನೀತಿಗಳ (ಫ಼ಿಸ್ಕಲ್ ಪಾಲಸಿ) ಪರಿಣಾಮಗಳನ್ನು ಕೂಡ ಪರಿಶೀಲಿಸುತ್ತದೆ. ಕನಿಷ್ಠ ಪಕ್ಷ ೧೯೬೦ರ ದಶಕದಿಂದೀಚೆಗೆ, ಸ್ಥೂಲ ಅರ್ಥಶಾಸ್ತ್ರವನ್ನು, ಪ್ರಮುಖ ಪಾಲುದಾರರ ತರ್ಕಬದ್ಧತೆ (ರ್ಯಾಷನಲ್ ಎಕ್ಸ್ಪೆಕ್ಟೇಶನ್ಸ್), ಮಾರುಕಟ್ಟೆ ಮಾಹಿತಿಯ ಸಮರ್ಥ ಬಳಕೆ, ಮತ್ತು ಅಪೂರ್ಣ ಪೈಪೋಟಿಯನ್ನು (ಇನ್ಕಂಪ್ಲೀಟ್ ಕಾಂಪಿಟಿಶನ್) ಒಳಗೊಂಡಂತೆ, ಕ್ಷೇತ್ರಗಳ ಸೂಕ್ಷ್ಮ ಅರ್ಥಶಾಸ್ತ್ರ ಆಧಾರಿತ ಮಾದರಿ ರಚನೆಯಂಥ, ಮುಂದುವರಿದ ಸಮನ್ವಯದ ಮೂಲಕ ನಿರೂಪಿಸಲಾಗಿದೆ.[41] ಇದು ಇದೇ ವಿಷಯದ ಅಸಮಂಜಸ ಬೆಳವಣಿಗೆಗಳ ಬಗ್ಗೆ ಒಂದು ಬಹು ದೀರ್ಘಕಾಲದ ಕಳವಳವನ್ನು ಬಗೆಹರಿಸಿದೆ.[42] ಸ್ಥೂಲ ಅರ್ಥಶಾಸ್ತ್ರದ ವಿಶ್ಲೇಷಣೆಯು ದೇಶೀಯ ಉತ್ಪತ್ತಿಯ ದೀರ್ಘಾವಧಿಯ ಮಟ್ಟ ಮತ್ತು ಬೆಳವಣಿಗೆಯನ್ನು ಬಾಧಿಸುವ ಸಂಗತಿಗಳನ್ನು ಕೂಡ ಪರಿಗಣಿಸುತ್ತದೆ. ಅಂತಹ ಸಂಗತಿಗಳು, ಬಂಡವಾಳ ಶೇಖರಣೆ, ತಾಂತ್ರಿಕ ಬದಲಾವಣೆ ಮತ್ತು ಕಾರ್ಮಿಕ ಸಮೂಹದ (ಲೇಬರ್ ಫ಼ೋರ್ಸ್) ಬೆಳವಣಿಗೆಯನ್ನು ಒಳಗೊಂಡಿವೆ.[43][44]
ಬೆಳವಣಿಗೆ ಅರ್ಥಶಾಸ್ತ್ರವು (ಗ್ರೋತ್ ಎಕನಾಮಿಕ್ಸ್) ಆರ್ಥಿಕ ಬೆಳವಣಿಗೆಯನ್ನು ವಿವರಿಸುವ ಅಂಶಗಳನ್ನು ಅಧ್ಯಯನಮಾಡುತ್ತದೆ – ದೀರ್ಘ ಕಾಲಾವಧಿಯಲ್ಲಿ ಒಂದು ದೇಶದ ತಲಾ ಹುಟ್ಟುವಳಿಯಲ್ಲಿ ಹೆಚ್ಚಳ. ಅದೇ ಅಂಶಗಳನ್ನು ದೇಶಗಳ ನಡುವೆ ತಲಾ ಹುಟ್ಟುವಳಿಯ ಮಟ್ಟದಲ್ಲಿನ ವ್ಯತ್ಯಾಸಗಳನ್ನು ವಿವರಿಸಲು ಬಳಸಲಾಗುತ್ತದೆ. ಹೆಚ್ಚು ಅಧ್ಯಯನಮಾಡಲಾಗುವ ಅಂಶಗಳು, ಹಣಹೂಡಿಕೆ ದರ, ಜನಸಂಖ್ಯೆಯ ವೃದ್ಧಿ, ಮತ್ತು ತಾಂತ್ರಿಕ ಬದಲಾವಣೆಯನ್ನು ಒಳಗೊಂಡಿವೆ. ಇವುಗಳನ್ನು ಸೈದ್ಧಾಂತಿಕ ಮತ್ತು ಪ್ರಾಯೋಗಿಕ ರೂಪಗಳಲ್ಲಿ (ಬಾಹ್ಯ ಮೂಲದ ಬೆಳವಣಿಗೆ ಮಾದರಿಯಲ್ಲಿನಂತೆ "ಎಕ್ಸಾಜನಸ್ ಗ್ರೋತ್ ಮಾಡಲ್") ಮತ್ತು ಬೆಳವಣಿಗೆ ಲೆಕ್ಕ ವ್ಯವಸ್ಥೆಯಲ್ಲಿ (ಗ್ರೋತ್ ಅಕೌಂಟಿಂಗ್) ನಿರೂಪಿಸಲಾಗುತ್ತದೆ.[45][46]
ಹಣವು ಬಹುತೇಕ ಬೆಲೆ ಪದ್ಧತಿ (ಪ್ರಾಯ್ಸ್ ಸಿಸ್ಟಮ್) ಅರ್ಥವ್ಯವಸ್ಥೆಗಳಲ್ಲಿ ಸರಕುಗಳಿಗೆ ಒಂದು ಅಂತಿಮ ಪಾವತಿಯ ಸಾಧನ ಮತ್ತು ಬೆಲೆಗಳನ್ನು ಪ್ರಾತಿನಿಧಿಕವಾಗಿ ನಮೂದಿಸಲು ಬಳಸಲಾಗುವ ದಾಖಲೆಯ ಏಕಮಾನ (ಯೂನಿಟ್ ಆಫ಼್ ಅಕೌಂಟ್). ಅದು ಬ್ಯಾಂಕುಗಳನ್ನು ಉಪಯೋಗಿಸದ ಜನತೆ ಹೊಂದಿರುವ ಚಲಾವಣೆ (ಕರನ್ಸಿ) ಮತ್ತು ಚಾಲ್ತಿ ಠೇವಣಿ ಖಾತೆಗಳನ್ನು (ಕರಂಟ್ ಅಕೌಂಟ್) ಒಳಗೊಂಡಿದೆ. ಇದನ್ನು, ಭಾಷೆಯಂತೆ, ಬಹುಮಟ್ಟಿಗೆ ಇತರರಿಗೆ ಉಪಯುಕ್ತವಾದ್ದರಿಂದ ಒಬ್ಬರಿಗೆ ಉಪಯುಕ್ತವಾದ ಒಂದು ಸಾಮಾಜಿಕ ಸಂಪ್ರದಾಯವೆಂದು ವಿವರಿಸಲಾಗಿದೆ. ಒಂದು ವಿನಿಮಯ ಸಾಧನವಾಗಿ, ಹಣವು ವ್ಯಾಪಾರವನ್ನು ಸುಗಮವಾಗಿಸುತ್ತದೆ. ಅದರ ಆರ್ಥಿಕ ಕ್ರಿಯೆಯನ್ನು ವಸ್ತು ವಿನಿಮಯದಿಂದ (ಬಾರ್ಟರ್) (ಹಣಕಾಸೇತರ ವಿನಿಮಯ) ವ್ಯತ್ಯಾಸ ಮಾಡಬಹುದು. ಉತ್ಪಾದಿಸಿದ ಸರಕುಗಳ ಒಂದು ತರಹೇವಾರಿ ವ್ಯೂಹವನ್ನು ಕಲ್ಪಿಸಿಕೊಂಡರೆ, ವಸ್ತು ವಿನಿಮಯವು, ಏನು ವಿನಿಮಯ ಮಾಡಿಕೊಳ್ಳಲಾಗುತ್ತದೆಂಬ, ಸೇಬಿನ ಹಣ್ಣು ಮತ್ತು ಒಂದು ಪುಸ್ತಕ ಎಂದುಕೊಳ್ಳಿ, ಒಂದು ಗುರುತಿಸಲು ಕ್ಲಿಷ್ಟವಿರುವ ಅಗತ್ಯಗಳ ಇಮ್ಮಡಿ ಕಾಕತಾಳೀಯತೆಯನ್ನು (ಡಬಲ್ ಕೋಇನ್ಸಿಡನ್ಸ್ ಆಫ಼್ ವಾಂಟ್ಸ್) ವಿಧಿಸಬಹುದು. ಹಣವು ಅದರ ಕ್ಷಿಪ್ರ ಸ್ವೀಕಾರಾರ್ಹತೆಯ ಕಾರಣ ವಿನಿಮಯದ ವಹಿವಾಟು ವೆಚ್ಚವನ್ನು (ಟ್ರ್ಯಾನ್ಸ್ಯಾಕ್ಷನ್ ಕಾಸ್ಟ್) ಕಡಿಮೆ ಮಾಡಬಹುದು. ಆವಾಗ, ಖರೀದಿದಾರ ಉತ್ಪಾದಿಸುವ ಉತ್ಪನ್ನದ ಬದಲಾಗಿ, ವಿನಿಮಯದಲ್ಲಿ ಹಣವನ್ನು ಸ್ವೀಕರಿಸುವುದು ಮಾರಾಟಗಾರನಿಗೆ ಕಡಮೆ ದುಬಾರಿಯಾಗುತ್ತದೆ.[47] ಒಂದು ಅರ್ಥವ್ಯವಸ್ಥೆಯ ಮಟ್ಟದಲ್ಲಿ, ಒಟ್ಟು ಹಣ ಪೂರೈಕೆಯಿಂದ ಒಟ್ಟು ಹುಟ್ಟುವಳಿಯ ವಾಸ್ತವವಲ್ಲದ ಮೌಲ್ಯ (ನಾಮನಲ್ ವ್ಯಾಲ್ಯು) ಹಾಗೂ ಸಾಮಾನ್ಯ ಬೆಲೆಯ ಮಟ್ಟದವರೆಗೆ ಒಂದು ಸಕಾರಾತ್ಮಕ ಸಂಬಂಧದೊಂದಿಗೆ, ಸಿದ್ಧಾಂತ ಮತ್ತು ಪುರಾವೆ ಸಮಂಜಸವಾಗಿವೆ. ಈ ಕಾರಣಕ್ಕಾಗಿ, ಆರ್ಥಿಕ ಕಾರ್ಯನೀತಿಯಲ್ಲಿ ಹಣ ಪೂರೈಕೆಯ ನಿರ್ವಹಣೆ ಒಂದು ಬಹುಮುಖ್ಯ ಅಂಶವಾಗಿದೆ.[48][49]
ರಾಷ್ಟ್ರೀಯ ಹಣಕಾಸು ಲೆಕ್ಕ ವ್ಯವಸ್ಥೆಯು (ನ್ಯಾಶನಲ್ ಅಕೌಂಟಿಂಗ್) ಒಂದು ದೇಶದ ಒಟ್ಟು ಆರ್ಥಿಕ ಚಟುವಟಿಕೆಯನ್ನು ಸಂಕ್ಷೇಪಿಸಲು ಒಂದು ವಿಧಾನ. ರಾಷ್ಟ್ರೀಯ ಲೆಕ್ಕ ದಾಖಲೆಗಳು ಅಂಥ ಮಾಹಿತಿಯ ವಿಸ್ತಾರವಾದ ಸೂಚ್ಯ ಪರಿಮಾಣಗಳನ್ನು ಒದಗಿಸುವ ಇಮ್ಮಡಿ ದಾಖಲೆಯ ಹಣಕಾಸು ಲೆಕ್ಕ (ಡಬಲ್ ಎಂಟ್ರಿ ಅಕೌಂಟಿಂಗ್) ವ್ಯವಸ್ಥೆಗಳು. ಇವು, ಹುಟ್ಟುವಳಿಯ ಧನಮೌಲ್ಯ (ಮನಿ ವ್ಯಾಲ್ಯು) ಮತ್ತು ವಾರ್ಷಿಕ ಅಥವಾ ತ್ರೈಮಾಸಿಕ ಆದಾಯಗಳಿಗೆ ಅಂದಾಜುಗಳನ್ನು ಒದಗಿಸುವ, ರಾಷ್ಟ್ರೀಯ ಆದಾಯ ಮತ್ತು ಉತ್ಪತ್ತಿ ದಾಖಲೆಗಳನ್ನು (ನ್ಯಾಶನಲ್ ಇನ್ಕಮ್ ಅಂಡ್ ಪ್ರಾಡಕ್ಟ್ ಅಕೌಂಟ್ಸ್ "ನೀಪಾ"), ಒಳಗೊಂಡಿವೆ. ನೀಪಾ, ವ್ಯಾಪಾರ ಆವರ್ತಗಳ ಮೂಲಕ ಅಥವಾ ಹೆಚ್ಚು ದೀರ್ಘಾವಧಿಯ ಅದ್ಯಂತ ಒಂದು ಅರ್ಥವ್ಯವಸ್ಥೆ ಮತ್ತು ಅದರ ಅಂಗಗಳ ಸಾಧನೆಯನ್ನು ಗುರುತಿಸಲು ಆಸ್ಪದನೀಡುತ್ತದೆ. ಬೆಲೆ ಮಾಹಿತಿಯು ವಾಸ್ತವವಲ್ಲದ ಪರಿಮಾಣಗಳನ್ನು ವಾಸ್ತವಿಕ ಪರಿಮಾಣಗಳಿಂದ ಭೇದ ಮಾಡಲು ಸಾಧ್ಯಮಾಡಬಹುದು, ಅಂದರೆ, ಕಾಲಕ್ಕೆ ತಕ್ಕಂತೆ ಆಗುವ ಬೆಲೆಯ ವ್ಯತ್ಯಾಸಗಳಿಗೆ ಹಣದ ಮೊತ್ತಗಳನ್ನು ಸರಿಪಡಿಸುವುದು.[50][51] ರಾಷ್ಟ್ರೀಯ ಲೆಕ್ಕ ದಾಖಲೆಗಳು ಬಂಡವಾಳ ಪೂರೈಕೆಯ ಮಾಪನ, ಒಂದು ದೇಶದ ಸಂಪತ್ತು, ಮತ್ತು ಅಂತರರಾಷ್ಟ್ರೀಯ ಬಂಡವಾಳ ಚಲನೆಗಳನ್ನು ಸಹ ಒಳಗೊಂಡಿರುತ್ತವೆ.[52]
ಅಂತರರಾಷ್ಟ್ರೀಯ ವ್ಯಾಪಾರ, ಅಂತರರಾಷ್ಟ್ರೀಯ ಗಡಿಗಳಾದ್ಯಂತ ಸರಕುಗಳು-ಮತ್ತು-ಸೇವೆಗಳ ಚಲನಗಳ ನಿರ್ಣಯ ಸಾಧನಗಳನ್ನು (ಡಿಟರ್ಮನಂಟ್) ಅಧ್ಯಯನಮಾಡುತ್ತದೆ. ಅದು ವ್ಯಾಪಾರದಿಂದಾಗುವ ಲಾಭಗಳ ಗಾತ್ರ ಮತ್ತು ವಿತರಣೆಗೂ ಸಂಬಂಧಿಸಿರುತ್ತದೆ. ಕಾರ್ಯನೀತಿ ಉಪಯೋಗಗಳು, ಬದಲಾಗುತ್ತಿರುವ ಆಮದು ರಫ್ತು ಸುಂಕ (ಟ್ಯಾರಿಫ಼್) ದರಗಳು ಮತ್ತು ವ್ಯಾಪಾರ ಪ್ರತಿಬಂಧಗಳ ಪರಿಣಾಮಗಳನ್ನು ಅಂದಾಜು ಮಾಡುವುದನ್ನು ಒಳಗೊಂಡಿವೆ. ಅಂತರರಾಷ್ಟ್ರೀಯ ಹಣಕಾಸು ಅಂತರರಾಷ್ಟ್ರೀಯ ಗಡಿಗಳಾದ್ಯಂತ ಬಂಡವಾಳದ ಚಲನೆ, ಮತ್ತು ವಿನಿಮಯ ದರಗಳ (ಎಕ್ಸ್ಚೇಂಜ್ ರೇಟ್) ಮೇಲೆ ಈ ಚಲನೆಗಳ ಪ್ರಭಾವಗಳನ್ನು ಪರಿಶೀಲಿಸುವ ಒಂದು ಸ್ಥೂಲ ಅರ್ಥಶಾಸ್ತ್ರದ ಕಾರ್ಯಕ್ಷೇತ್ರ. ದೇಶಗಳ ಮಧ್ಯೆ ಸರಕುಗಳು, ಸೇವೆಗಳು ಮತ್ತು ಬಂಡವಾಳದಲ್ಲಿ ಹೆಚ್ಚಿದ ವ್ಯಾಪಾರವು ಸಮಕಾಲೀನ ಜಾಗತೀಕರಣದ ಒಂದು ಪ್ರಮುಖ ಪ್ರಭಾವ.[53][54][55]
ವಿಶಿಷ್ಟ ಕಾರ್ಯಕ್ಷೇತ್ರವಾದ ಅಭಿವೃದ್ಧಿ ಅರ್ಥಶಾಸ್ತ್ರವು (ಡಿವೆಲಪ್ಮಂಟ್ ಎಕನಾಮಿಕ್ಸ್) ತುಲನಾತ್ಮಕವಾಗಿ ಕಡಿಮೆ ಆದಾಯದ ರಾಷ್ಟ್ರಗಳಲ್ಲಿ ರಚನಾತ್ಮಕ ಪರಿವರ್ತನೆ (ಸ್ಟ್ರಕ್ಚರಲ್ ಚೇಂಜ್), ಬಡತನ, ಮತ್ತು ಆರ್ಥಿಕ ಪ್ರಗತಿಯ ಮೇಲೆ ಕೇಂದ್ರೀಕರಿಸಿ ಅಭಿವೃದ್ಧಿ ಪ್ರಕ್ರಿಯೆಯ ಆರ್ಥಿಕ ಅಂಶಗಳನ್ನು ಪರಿಶೀಲಿಸುತ್ತದೆ. ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿನ ವಿಧಾನಗಳು ಮೇಲಿಂದ ಮೇಲೆ ಸಾಮಾಜಿಕ ಮತ್ತು ರಾಜಕೀಯ ಅಂಶಗಳನ್ನು ಒಟ್ಟುಗೂಡಿಸುತ್ತವೆ.[56][57] ಆರ್ಥಿಕ ವ್ಯವಸ್ಥೆಗಳು (ಎಕನಾಮಿಕ್ ಸಿಸ್ಟಮ್ಸ್), ಸಮಾಜಗಳು ಯಾವುದರಿಂದ ಆರ್ಥಿಕ ಸಂಪನ್ಮೂಲಗಳ ಒಡೆತನ, ನಿರ್ವಹಣೆ, ಮತ್ತು ವಿಂಗಡಣೆಯನ್ನು ನಿರ್ಧರಿಸುತ್ತವೋ ಅಂಥ, ವಿಧಾನಗಳು ಮತ್ತು ಸಂಸ್ಥೆಗಳನ್ನು ಅಧ್ಯಯನಮಾಡುವ ಅರ್ಥಶಾಸ್ತ್ರದ ಶಾಖೆ. ಒಂದು ಆರ್ಥಿಕ ವ್ಯವಸ್ಥೆಯು ಒಂದು ಸಮಾಜದ ವಿಶ್ಲೇಷಣೆಯ ಘಟಕ. ಸಮಕಾಲೀನ ವ್ಯವಸ್ಥೆಗಳ ಸಂಘಟನಾ ವ್ಯಾಪ್ತಿಯ ಪ್ರತ್ಯೇಕ ಎಲ್ಲೆಗಳಲ್ಲಿ, ಸಮಾಜವಾದಿ ವ್ಯವಸ್ಥೆಗಳು ಮತ್ತು ಬಂಡವಾಳಶಾಹಿ ವ್ಯವಸ್ಥೆಗಳಿವೆ, ಮತ್ತು ಇವುಗಳಲ್ಲಿ ಬಹುತೇಕ ಉತ್ಪಾದನೆ ಅನುಕ್ರಮವಾಗಿ ಸರ್ಕಾರಿ ನಿರ್ವಹಣೆಯ ಮತ್ತು ಖಾಸಗಿ ಉದ್ಯಮಗಳಲ್ಲಿ ಆಗುತ್ತವೆ. ಇವುಗಳ ನಡುವೆ ಮಿಶ್ರ ಅರ್ಥವ್ಯವಸ್ಥೆಗಳಿವೆ (ಮಿಕ್ಸ್ಡ್ ಇಕಾನಮಿ). ಸ್ಥೂಲವಾಗಿ ರಾಜಕೀಯ ಆರ್ಥಿಕ ವ್ಯವಸ್ಥೆ ಎಂದು ವಿವರಿಸಲಾದ, ಆರ್ಥಿಕ ಮತ್ತು ರಾಜಕೀಯ ಪ್ರಭಾವಗಳ ಸಂವಹನ ಒಂದು ಸಾಮಾನ್ಯವಾದ ಅಂಶವಾಗಿದೆ. ತುಲನಾತ್ಮಕ ಆರ್ಥಿಕ ವ್ಯವಸ್ಥೆಗಳು (ಕಂಪ್ಯಾರಟಿವ್ ಎಕನಾಮಿಕ್ ಸಿಸ್ಟಮ್ಸ್), ವಿಭಿನ್ನ ಅರ್ಥವ್ಯವಸ್ಥೆಗಳ ಅಥವಾ ಪದ್ಧತಿಗಳ ತುಲನಾತ್ಮಕ ನಿರ್ವಹಣೆ ಮತ್ತು ವರ್ತನೆಯನ್ನು ಅಧ್ಯಯನಮಾಡುತ್ತದೆ.[58][59]
ಸೂಮರ್ನ ಸಾರ್ವಭೌಮ ರಾಜ್ಯಗಳು (ಸಿಟಿ ಸ್ಟೇಟ್), ಆರಂಭದಲ್ಲಿ ಯವೆಯ (ಬಾರ್ಲಿ) ಒಂದು ನಿಶ್ಚಿತ ತೂಕವಾಗಿದ್ದ, ಶೆಕಲ್ನ ದ್ರವ್ಯ ಧನದ (ಕಮಾಡಿಟಿ ಮನಿ) ಮೇಲೆ ಆಧಾರಿತವಾದ ಒಂದು ವ್ಯಾಪಾರ ಮತ್ತು ಮಾರುಕಟ್ಟೆ ಅರ್ಥವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿದವು, ಏತನ್ಮಧ್ಯೆ ಬ್ಯಾಬಲೋನಿಯಾದವರು ಮತ್ತು ಅವರ ಸಾರ್ವಭೌಮ ರಾಜ್ಯದ ನೆರೆಯವರು ನಂತರ, ಒಂದು ಕಾನೂನುಬದ್ಧ ನಿಯಮಾವಳಿಯಲ್ಲಿ ಭದ್ರಪಡಿಸಿದ್ದ ವಿವಿಧ ಸರಕುಗಳ ಒಂದು ಮಾಪನ ಪದ್ಧತಿಯನ್ನು ಬಳಸುವ ಅರ್ಥಶಾಸ್ತ್ರದ ಮೊಟ್ಟಮೊದಲ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿದರು.[60] ಸೂಮರ್ನ ಮುಂಚಿನ ಕಾನೂನು ನಿಯಮಾವಳಿಗಳನ್ನು ಮೊದಲ (ಲಿಖಿತ ರೂಪದ) ಆರ್ಥಿಕ ಸೂತ್ರವೆಂದು ಪರಿಗಣಿಸಬಹುದು, ಮತ್ತು ಇದು ಇಂದಿಗೂ ಪ್ರಚಲಿತ ಬೆಲೆ ವ್ಯವಸ್ಥೆಯಲ್ಲಿ ಬಳಕೆಯಲ್ಲಿರುವ ಅನೇಕ ಲಕ್ಷಣಗಳನ್ನು ಹೊಂದಿತ್ತು... ಉದಾಹರಣೆಗೆ ವ್ಯಾಪಾರ ವ್ಯವಹಾರಗಳಿಗೆ ಹಣದ ಸಂಕೇತೀಕರಿಸಿದ ಮೊತ್ತಗಳು (ಬಡ್ಡಿ ದರಗಳು), 'ತಪ್ಪುನಡತೆ'ಗೆ ಹಣದ ರೂಪದಲ್ಲಿ ದಂಡಗಳು, ವಂಶಾನುಕ್ರಮ ನಿಬಂಧನೆಗಳು, ಖಾಸಗಿ ಆಸ್ತಿಯನ್ನು ಹೇಗೆ ತೆರಿಗೆಗೊಳಪಡಿಸಬೇಕು ಅಥವಾ ಪಾಲು ಮಾಡಬೇಕು ಎಂಬುದಕ್ಕೆ ಸಂಬಂಧಿಸಿದ ಕಾನೂನುಗಳು, ಇತ್ಯಾದಿ.[61][62] ಕಾನೂನುಗಳ ಸಾರಾಂಶಕ್ಕಾಗಿ, ಬ್ಯಾಬಲೋನಿಯಾದ ಕಾನೂನು ಮತ್ತು ಪ್ರಾಚೀನ ಆರ್ಥಿಕ ಚಿಂತನೆ ನೋಡಿ. ಆರ್ಥಿಕ ಚಿಂತನೆಯು ಮುಂಚಿನ ಮೆಸಪಟೇಮಿಯಾದ, ಗ್ರೀಸ್ನ, ರೋಮ್ನ, ಭಾರತೀಯ, ಚೀನೀ, ಪರ್ಶಿಯಾದ ಮತ್ತು ಅರಬ್ ನಾಗರಿಕತೆಗಳ ಕಾಲದಿಂದ ಆರಂಭವಾಯಿತು. ಅರಿಸ್ಟಾಟಲ್, ಚಾಣಕ್ಯ, ಚಿನ್ ಶೀ ಹ್ವಾಂಗ್, ಥಾಮಸ್ ಅಕ್ವಾಯ್ನಸ್ ಮತ್ತು ಇಬನ್ ಖಾಲ್ದೂನ್ ೧೪ನೇ ಶತಮಾನದವರೆಗೆ ಕಾಣಬಹುದಾದ ಕೆಲವು ಪ್ರಸಿದ್ಧ ಲೇಖಕರು. ಪ್ರಾರಂಭದಲ್ಲಿ, ಜೋಸಫ಼್ ಶೂಂಪೇಟರ್ ೧೪ರಿಂದ ೧೭ನೇ ಶತಮಾನದ ತನಕ ಕಾಣಲಾದ ಸೈದ್ಧಾಂತಿಕ ಶಿಕ್ಷಣ ಶಾಸ್ತ್ರದ ವಿದ್ವಾಂಸರನ್ನು (ಸ್ಕಲ್ಯಾಸ್ಟಿಕ್ಸ್), ಒಂದು ಪ್ರಕೃತಿ-ನಿಯಮದ ದೃಷ್ಟಿಕೋನದೊಳಗೆ ಆರ್ಥಿಕ, ಲಾಭ, ಮತ್ತು ಮೌಲ್ಯ ಸಿದ್ಧಾಂತಗಳಿಗೆ ಸಂಬಂಧಿಸಿದಂತೆ, "ಯಾವುದೇ ಬೇರೆ ಗುಂಪಿಗಿಂತ ವೈಜ್ಞಾನಿಕ ಅರ್ಥಶಾಸ್ತ್ರದ 'ಆದ್ಯ ಪ್ರವರ್ತಕರು' ಎಂದು ಕರೆಸಿಕೊಳ್ಳಲು ಅರ್ಹರು" ಎಂದು ಪರಿಗಣಿಸಿದರು.[63] ಆದರೆ, ಇಬನ್ ಖಾಲ್ದೂನ್ರ ಮುಕಾದ್ದಿಮಾವನ್ನು ಶೋಧಿಸಿದ ತರುವಾಯ, ಶೂಂಪೇಟರ್ರು ಇಬನ್ ಖಾಲ್ದೂನ್ರನ್ನು ಆಧುನಿಕ ಅರ್ಥಶಾಸ್ತ್ರದ ಅತ್ಯಂತ ಸಮೀಪದ ಹರಿಕಾರರಾಗಿ ಕಂಡರು,[64] ಏಕೆಂದರೆ ಅವರ ಅನೇಕ ಆರ್ಥಿಕ ಸಿದ್ಧಾಂತಗಳು ಹೆಚ್ಚು ಕಡಿಮೆ ಆಧುನಿಕ ಕಾಲದ ತನಕ ಯೂರಪ್ನಲ್ಲಿ ಪರಿಚಿತವಾಗಿರಲಿಲ್ಲ.[65] ಇತರ ಎರಡು ಗುಂಪುಗಳು, ಆಮೇಲೆ 'ವಾಣಿಜ್ಯ ವ್ಯಾಪಾರ ಪದ್ಧತಿ ಸಿದ್ಧಾಂತ ಅನುಯಾಯಿಗಳು' (ಮರ್ಕಂಟಿಲಿಸ್ಟ್) ಮತ್ತು 'ರಾಜಕೀಯ ಅರ್ಥವ್ಯವಸ್ಥೆ ಅನುಯಾಯಿಗಳು' (ಫ಼ಿಸ಼ಿಯಕ್ರ್ಯಾಟ್) ಎಂದು ಕರೆಯಲಾದ, ಈ ವಿಷಯದ ಅನಂತರದ ವಿಸ್ತರಣೆಯ ಮೇಲೆ ಹೆಚ್ಚು ನೇರವಾಗಿ ಪ್ರಭಾವ ಬೀರಿದವು. ಎರಡೂ ಗುಂಪುಗಳು ಯೂರಪ್ನಲ್ಲಿ ಆರ್ಥಿಕ ರಾಷ್ಟ್ರೀಯತೆ (ಎಕನಾಮಿಕ್ ನ್ಯಾಶನಲಿಸ಼ಮ್) ಮತ್ತು ಆಧುನಿಕ ಬಂಡವಾಳಶಾಹಿಯ ಉನ್ನತಿಯೊಂದಿಗೆ ಸಂಬಂಧ ಹೊಂದಿದ್ದವು. ವಾಣಿಜ್ಯ ವ್ಯಾಪಾರ ಪದ್ಧತಿ ಸಿದ್ಧಾಂತ (ಮರ್ಕಂಟಿಲಿಸ಼ಮ್), ೧೬ರಿಂದ ೧೮ನೇ ಶತಮಾನದವರೆಗೆ, ವರ್ತಕರ ಅಥವಾ ರಾಜಕಾರ್ಯನಿಪುಣರ ಒಂದು ವಿಪುಲ ಕರಪತ್ರ ಸಾಹಿತ್ಯದಲ್ಲಿ ಪ್ರವರ್ಧಮಾನವಾದ ಒಂದು ಆರ್ಥಿಕ ತತ್ವವಾಗಿತ್ತು. ಅದು, ಒಂದು ದೇಶದ ಸಂಪತ್ತು ಅದರ ಚಿನ್ನ ಮತ್ತು ಬೆಳ್ಳಿಯ ಶೇಖರಣೆ ಮೇಲೆ ಅವಲಂಬಿಸಿದೆ ಎಂಬ ಅಭಿಪ್ರಾಯ ಹೊಂದಿತ್ತು. ಗಣಿಗಳ ಬಳಕೆಗೆ ಅವಕಾಶ ಇಲ್ಲದ ದೇಶಗಳು, ಹೊರ ದೇಶಗಳಿಗೆ ಸರಕುಗಳನ್ನು ಮಾರಿ ಮತ್ತು ಚಿನ್ನ ಹಾಗೂ ಬೆಳ್ಳಿಯನ್ನು ಬಿಟ್ಟು ಬೇರೆ ಆಮದುಗಳನ್ನು ನಿರ್ಬಂಧಿಸಿದರೆ ಮಾತ್ರ, ವ್ಯಾಪಾರದಿಂದ ಚಿನ್ನ ಮತ್ತು ಬೆಳ್ಳಿಯನ್ನು ಪಡೆಯಬಲ್ಲವಾಗಿದ್ದವು. ಈ ತತ್ವದ ಪ್ರಕಾರ, ರಫ್ತುಮಾಡಬಹುದಾದ ಸರಕುಗಳ ತಯಾರಿಕೆಗೆ ಬಳಸಲು ಅಗ್ಗವಾದ ಕಚ್ಚಾ ಸಾಮಗ್ರಿಗಳನ್ನು ಆಮದು ಮಾಡುವುದು ಆವಶ್ಯಕವಾಗಿತ್ತು, ಮತ್ತು ವಿದೇಶೀ ತಯಾರಿಕೆಯ ಸರಕುಗಳ ಮೇಲೆ ರಕ್ಷಣೆ ನೀಡುವ ಆಮದು ರಫ್ತು ಸುಂಕಗಳನ್ನು ವಿಧಿಸಲು ಮತ್ತು ವಸಾಹತುಗಳಲ್ಲಿ ತಯಾರಿಕೆಯನ್ನು ನಿಷೇಧಿಸಲು ಸರ್ಕಾರಿ ನಿಯಂತ್ರಣ ಆವಶ್ಯಕವಾಗಿತ್ತು.[66][67] ಪ್ರಕೃತಿ ಸಿದ್ಧ ಆರ್ಥಿಕ ಪದ್ಧತಿ ಅನುಯಾಯಿಗಳು (ಫ಼ಿಸ಼ಿಯಕ್ರ್ಯಾಟ್), ಒಂದು ೧೮ನೇ ಶತಮಾನದ ಫ಼್ರಾನ್ಸ್ನ ಚಿಂತಕರು ಮತ್ತು ಲೇಖಕರ ಗುಂಪು, ಒಂದು ಆದಾಯ ಮತ್ತು ಹುಟ್ಟುವಳಿಯ ವೃತ್ತಾಕಾರ ಚಲನೆಯ ರೂಪದಲ್ಲಿ ಅರ್ಥವ್ಯವಸ್ಥೆಯ ವಿಚಾರವನ್ನು ಅಭಿವೃದ್ಧಿಗೊಳಿಸಿದವು. ಆಡಮ್ ಸ್ಮಿತ್, "ಅದರ ಎಲ್ಲ ಅಪೂರ್ಣತೆಗಳೊಂದಿಗೆ" ಆ ವಿಷಯದ ಮೇಲೆ "ಬಹುಶಃ ಇಲ್ಲಿಯವರೆಗೆ ಪ್ರಚುರಪಡಿಸಿದ ಸತ್ಯಕ್ಕೆ ಅತ್ಯಂತ ಸ್ವಚ್ಛ ಸಾಮೀಪ್ಯ"ವುಳ್ಳದ್ದೆಂದು ಅವರ ಪದ್ಧತಿಯನ್ನು ವರ್ಣಿಸಿದರು. ಈ ಪದ್ಧತಿಯ ಅನುಯಾಯಿಗಳು ಕೇವಲ ಕೃಷಿಯ ಉತ್ಪಾದನೆಯು ವೆಚ್ಚದ ಮೇಲೆ ಒಂದು ಸ್ಪಷ್ಟವಾದ ಹೆಚ್ಚುವರಿಯನ್ನು ನಿರ್ಮಿಸುತ್ತದೆಂದು, ಮತ್ತು ಈ ಪ್ರಕಾರ ಕೃಷಿಯು ಎಲ್ಲ ಸಂಪತ್ತಿನ ಆಧಾರವೆಂದು ನಂಬಿದ್ದರು. ಹೀಗೆ, ಆಮದು ರಫ್ತು ಸುಂಕಗಳ ಸಹಿತ, ಕೃಷಿಗೆ ಬಾಧಕ ತಂದು ತಯಾರಿಕೆ ಮತ್ತು ವ್ಯಾಪಾರಕ್ಕೆ ಪ್ರೋತ್ಸಾಹ ನೀಡುವ ವಾಣಿಜ್ಯ ವ್ಯಾಪಾರ ಪದ್ಧತಿ ಧೋರಣೆಯನ್ನು ಅವರು ವಿರೋಧಿಸಿದರು. ಈ ಪದ್ಧತಿಯ ಅನುಯಾಯಿಗಳು ಆಡಳಿತಾತ್ಮಕವಾಗಿ ದುಬಾರಿಯಾದ ತೆರಿಗೆ ಸಂಹಿತೆಗಳ ಬದಲಾಗಿ ಭೂಮಾಲೀಕರ ಆದಾಯದ ಮೇಲೆ ಒಂದು ಪ್ರತ್ಯೇಕ ತೆರಿಗೆ ಬರಬೇಕೆಂದು ವಾದಿಸಿದರು. ಅಂತಹ ಒಂದು ಭೂತೆರಿಗೆಯ ಮೇಲೆ ಮಾರ್ಪಾಟುಗಳನ್ನು, ತೆರಿಗೆ ವರಮಾನದ ಒಂದು ತುಲನಾತ್ಮಕವಾಗಿ ನಿರ್ವಿಕಾರಿ (ನಾನ್-ಡಿಸ್ಟಾರ್ಶನರಿ) ಮೂಲವಾಗಿ, ಅನಂತರದ (ಒಂದು ಶತಮಾನದ ನಂತರ ಹೆನ್ರಿ ಜ್ಯಾರ್ಜ್ ಸಹಿತ) ಅರ್ಥಶಾಸ್ತ್ರಜ್ಞರು ಪ್ರಾರಂಭಿಸಿದರು. ಸಮೃದ್ಧ ವಾಣಿಜ್ಯ ವ್ಯಾಪಾರ ಪದ್ಧತಿಯ ಉದ್ಯೋಗ ನಿಬಂಧನೆಗಳ ವಿರುದ್ಧ ಪ್ರತಿಕ್ರಿಯೆಯಾಗಿ, ಪ್ರಕೃತಿ ಸಿದ್ಧ ಆರ್ಥಿಕ ಪದ್ಧತಿ ಅನುಯಾಯಿಗಳು, ಅರ್ಥವ್ಯವಸ್ಥೆಯಲ್ಲಿ ಕನಿಷ್ಠಸಾಧ್ಯ ಸರ್ಕಾರಿ ಹಸ್ತಕ್ಷೇಪವನ್ನು ಸೂಚಿಸುವ, ಸರಕಾರದ ತಟಸ್ಥ ನೀತಿಯ (ಲಸೆ-ಫ಼ೇರ್) ಒಂದು ಧೋರಣೆಯ ಪರ ವಾದಿಸಿದರು.[68][69]
೧೭೭೬ರಲ್ಲಿ ಆಡಮ್ ಸ್ಮಿತ್ರ ದ ವೆಲ್ತ್ ಆಫ಼್ ನೇಷನ್ಸ್ನ ಪ್ರಕಟಣೆಯನ್ನು, "ಒಂದು ಪ್ರತ್ಯೇಕ ಅಧ್ಯಯನ ವಿಭಾಗವಾಗಿ ಅರ್ಥಶಾಸ್ತ್ರದ ವಾಸ್ತವಿಕ ಜನನ" ಎಂದು ವರ್ಣಿಸಲಾಗಿದೆ.[70] ಈ ಪುಸ್ತಕವು ಭೂಮಿ, ಕಾರ್ಮಿಕರು, ಹಾಗೂ ಬಂಡವಾಳಗಳನ್ನು ಉತ್ಪಾದನೆಯ ಮೂರು ಅಂಶಗಳು ಮತ್ತು ಒಂದು ದೇಶದ ಸಂಪತ್ತಿನ ಪ್ರಮುಖ ಕೊಡುಗೆದಾತಗಳೆಂದು ಗುರುತಿಸಿತು. ಸ್ಮಿತ್ರ ದೃಷ್ಟಿಯಲ್ಲಿ, ಆದರ್ಶ ಅರ್ಥವ್ಯವಸ್ಥೆಯು ಜನರ ಆರ್ಥಿಕ ಅಗತ್ಯಗಳನ್ನು ಸಹಜವಾಗಿ ಈಡೇರಿಸುವ ಒಂದು ಸ್ವ-ನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆಯಾಗಿದೆ. ಅವರು, ಮಾರುಕಟ್ಟೆ ವ್ಯವಸ್ಥೆಯನ್ನು, ತಮ್ಮ ಸ್ವಂತ ಆತ್ಮಹಿತಗಳ ಅನ್ವೇಷಣೆಯಲ್ಲಿ ತೊಡಗಿರುವ ಎಲ್ಲ ವ್ಯಕ್ತಿಗಳನ್ನು ಸಮಗ್ರ ಸಮಾಜಕ್ಕಾಗಿ ಅತಿ ಭಾರಿ ಲಾಭವನ್ನು ಉತ್ಪಾದಿಸಲು ಕರೆದೊಯ್ಯುವ ಒಂದು "ಕಾಣದ ಕೈ" ಎಂದು ವಿವರಿಸಿದರು. ಸ್ಮಿತ್, ಸರಕಾರದ ತಟಸ್ಥ ನೀತಿ ಸಹಿತ, ಪ್ರಕೃತಿ ಸಿದ್ಧ ಆರ್ಥಿಕ ಪದ್ಧತಿ ಅನುಯಾಯಿಗಳ ಕೆಲವು ಕಲ್ಪನೆಗಳನ್ನು ತಮ್ಮ ಸ್ವಂತ ಆರ್ಥಿಕ ಸಿದ್ಧಾಂತಗಳಲ್ಲಿ ಸೇರಿಸಿಕೊಂಡರು, ಆದರೆ ಕೇವಲ ಕೃಷಿಯೇ ಲಾಭದಾಯಕವೆಂಬ ಕಲ್ಪನೆಯನ್ನು ತಿರಸ್ಕರಿಸಿದರು. ತಮ್ಮ ಪ್ರಸಿದ್ಧ ಕಾಣದ-ಕೈ ಸಾದೃಶ್ಯದಲ್ಲಿ, ಸ್ಮಿತ್ ಅವರು ಹಾಗೆ ಕಾಣುವ, ಹೆಚ್ಚು ಸಂಕುಚಿತ ಸ್ವ-ಹಿತದಿಂದ ಪ್ರಚೋದಿತವಾದರೂ, ಸ್ಪರ್ಧಾತ್ಮಕ ಮಾರುಕಟ್ಟೆಗಳು ಹೆಚ್ಚು ವಿಶಾಲ ಸಾಮಾಜಿಕ ಹಿತಾಸಕ್ತಿಗಳನ್ನು ಮುನ್ನಡೆಸಲು ಪ್ರವೃತ್ತವಾಗುತ್ತವೆಂಬ, ವಿರೋಧಾಭಾಸದ (ಪ್ಯಾರಡಾಕ್ಸ್) ವಿಚಾರವನ್ನು ಪ್ರತಿಪಾದಿಸಿದರು. ಸ್ಮಿತ್ ಶುರುಮಾಡಲು ನೆರವಾದ ಈ ಸಾಮಾನ್ಯ ವಿಧಾನವನ್ನು ರಾಜಕೀಯ ಆರ್ಥಿಕ ವ್ಯವಸ್ಥೆ (ಪಾಲಿಟಿಕಲ್ ಎಕಾನಮಿ) ಮತ್ತು ನಂತರ ಶಾಸ್ತ್ರೀಯ ಅರ್ಥಶಾಸ್ತ್ರ (ಕ್ಲಾಸಿಕಲ್ ಎಕನಾಮಿಕ್ಸ್) ಎಂದು ಕರೆಯಲಾಗಿತ್ತು. ಅದು, ಸುಮಾರು ೧೭೭೦ರಿಂದ ೧೮೭೦ವರೆಗೆ ಕಾಣಲಾದ, ಥಾಮಸ್ ಮ್ಯಾಲ್ಥಸ್, ಡೇವಿಡ್ ರಿಕಾರ್ಡೊ, ಮತ್ತು ಜಾನ್ ಸ್ಟೂಅರ್ಟ್ ಮಿಲ್ರಂತಹ, ಪ್ರಸಿದ್ಧ ವ್ಯಕ್ತಿಗಳನ್ನು ಒಳಗೊಂಡಿತ್ತು.[71] ಆಡಮ್ ಸ್ಮಿತ್ ಆದಾಯದ ಉತ್ಪಾದನೆಗೆ ಪ್ರಾಧಾನ್ಯನೀಡಿದರೆ, ಡೇವಿಡ್ ರಿಕಾರ್ಡೊ ಭೂಮಾಲೀಕರು, ಕೆಲಸಗಾರರು, ಮತ್ತು ಬಂಡವಾಳಶಾಹಿಗಳ ನಡುವೆ ಆದಾಯದ ವಿತರಣೆಯ ಮೇಲೆ ಕೇಂದ್ರೀಕರಿಸಿದರು. ರಿಕಾರ್ಡೊ, ಒಂದೆಡೆ ಭೂಮಾಲೀಕರು ಮತ್ತು ಇನ್ನೊಂದೆಡೆ ಕಾರ್ಮಿಕರು ಹಾಗೂ ಬಂಡವಾಳದ ನಡುವೆ ಒಂದು ಸ್ವಾಭಾವಿಕ ವಿರೋಧವನ್ನು ಕಂಡರು. ಅವರು, ಜಮೀನಿನ ಒಂದು ಸ್ಥಿರವಾದ ಪೂರೈಕೆಯ ಎದುರು ಕೊರತೆಯಿರುವ, ಜನಸಂಖ್ಯೆಯ ಮತ್ತು ಬಂಡವಾಳದ ವೃದ್ಧಿಯು ಬಾಡಿಗೆಗಳನ್ನು ಮೇಲೆ ತಳ್ಳುತ್ತದೆ ಮತ್ತು ವೇತನಗಳು ಹಾಗೂ ಲಾಭಗಳನ್ನು ಕೆಳಗೆ ಹಿಡಿದಿಡುತ್ತದೆಂದು ಭಾವಿಸಿದರು.
ಥಾಮಸ್ ರಾಬರ್ಟ್ ಮ್ಯಾಲ್ಥಸ್ ಕ್ಷೀಣಿಸುವ ಪ್ರತಿಫಲಗಳ ವಿಚಾರವನ್ನು ಕೆಳದರ್ಜೆಯ ಜೀವನ ಮಟ್ಟಗಳನ್ನು ವಿವರಿಸಲು ಬಳಸಿದರು. ಜನಸಂಖ್ಯೆಯು, ಸಂಕಲನಾತ್ಮಕವಾಗಿ (ಅರಿಥ್ಮೆಟಿಕಲಿ) ಹೆಚ್ಚಾಗುವ ಆಹಾರದ ಉತ್ಪಾದನೆಯನ್ನು ಮೀರಿಸಿ, ಗುಣಾಕಾರವಾಗಿ (ಜಿಯಮೆಟ್ರಿಕಲಿ) ಹೆಚ್ಚಾಗಲು ಪ್ರವೃತ್ತವಾಗುತ್ತದೆಂದು ಅವರು ವಾದಿಸಿದರು. ಜಮೀನಿನ ಒಂದು ಸೀಮಿತ ಪರಿಮಾಣದ ವಿರುದ್ಧ ಒಂದು ತ್ವರಿತವಾಗಿ ವೃದ್ಧಿಯಾಗುತ್ತಿರುವ ಜನಸಂಖ್ಯೆಯ ಬಲದ ಅರ್ಥ ಕಾರ್ಮಿಕರಿಗೆ ಕ್ಷೀಣಿಸುವ ಪ್ರತಿಫಲಗಳು. ಇದರ ಪರಿಣಾಮ ಬಹಳ ಕಡಮೆ ವೇತನಗಳು ಎಂದು ಅವರು ಸಾಧಿಸಿದರು, ಮತು ಇದು, ಬಹುತೇಕ ಜನಸಂಖ್ಯೆಯ ಜೀವನ ಮಟ್ಟವನ್ನು ಕನಿಷ್ಠಸಾಧ್ಯ ಜೀವನಾಧಾರದ ಮಟ್ಟವನ್ನು ಮೀರಿ ಏರುವುದನ್ನು ತಡೆಯುತ್ತಿತ್ತು. ಮ್ಯಾಲ್ಥಸ್, ಸಮೃದ್ಧ ಉದ್ಯೋಗವನ್ನು ಸೃಷ್ಟಿಸುವ ಮಾರುಕಟ್ಟೆ ಅರ್ಥವ್ಯವಸ್ಥೆಯ (ಮಾರ್ಕೆಟ್ ಇಕಾನಮಿ) ಒಂದು ಸಹಜವಾದ ಪ್ರವೃತ್ತಿಯನ್ನು ಕೂಡ ಪ್ರಶ್ನಿಸಿದರು. ಅವರು ನಿರುದ್ಯೋಗವನ್ನು, ಅತಿ ಹೆಚ್ಚು ಉಳಿತಾಯ ಮಾಡಿ ತನ್ನ ಖರ್ಚನ್ನು ಸೀಮಿತಗೊಳಿಸುವ ಅರ್ಥವ್ಯವಸ್ಥೆಯ ಪ್ರವೃತ್ತಿಯ ಮೇಲೆ ದೂಷಿಸಿದರು, ಮತ್ತು ನಿರ್ಲಕ್ಷಿಸಲಾಗಿದ್ದ ಈ ಒಂದು ವಿಷಯವನ್ನು ಜಾನ್ ಮೇಯ್ನರ್ಡ್ ಕೇನ್ಸ್ ೧೯೩೦ರ ದಶಕದಲ್ಲಿ ಪುನಶ್ಚೇತನಗೊಳಿಸಿದರು. ಶಾಸ್ತ್ರೀಯ ಪರಂಪರೆಯ ಕೊನೆಯಲ್ಲಿ ಬಂದ, ಜಾನ್ ಸ್ಟೂಅರ್ಟ್ ಮಿಲ್, ಮಾರುಕಟ್ಟೆ ವ್ಯವಸ್ಥೆಯಿಂದ ಸೃಷ್ಟಿಯಾದ ಆದಾಯದ ವಿತರಣೆಯ ಅನಿವಾರ್ಯತೆಯ ವಿಚಾರವಾಗಿ, ಮುಂಚಿನ ಶಾಸ್ತ್ರೀಯ ಅರ್ಥಶಾಸ್ತ್ರಜ್ಞ ಜತೆಗಾರರಿಂದ ಬೇರೆಯಾದರು. ಮಿಲ್, ಮಾರುಕಟ್ಟೆಯ ಎರಡು ಪಾತ್ರಗಳ ನಡುವಿನ ಒಂದು ಸ್ಪಷ್ಟವಾದ ವ್ಯತ್ಯಾಸದತ್ತ ಗಮನ ಸೆಳೆದರು: ಸಂಪನ್ಮೂಲಗಳ ವಿಂಗಡಣೆ ಮತ್ತು ಆದಾಯದ ವಿತರಣೆ. ಮಾರುಕಟ್ಟೆಯು ಸಂಪನ್ಮೂಲಗಳನ್ನು ಹಂಚುವಲ್ಲಿ ಸಮರ್ಥವಿರಬಹುದು ಆದರೆ ಆದಾಯವನ್ನು ಹಂಚುವಲ್ಲಿ ಸಮರ್ಥವಿಲ್ಲದಿರಬಹುದು, ಮತ್ತು ಈ ಕಾರಣದಿಂದ ಸಮಾಜವು ಮಧ್ಯೆ ಪ್ರವೇಶಿಸುವುದು ಅನಿವಾರ್ಯವಾಗುತ್ತದೆಂದು ಅವರು ಬರೆದರು. ಮೌಲ್ಯ ಸಿದ್ಧಾಂತವು (ವ್ಯಾಲ್ಯು ಥೀಯರಿ) ಶಾಸ್ತ್ರೀಯ ಸಿದ್ಧಾಂತದಲ್ಲಿ ಪ್ರಮುಖವಾಗಿತ್ತು. ಒಂದು ವಸ್ತುವಿನ ವಿರಳತೆಯಿಂದ ಪ್ರಭಾವಿತವಾದ "ಪ್ರತಿಯೊಂದು ವಸ್ತುವಿನ ವಾಸ್ತವಿಕ ಮೌಲ್ಯ ... ಅದನ್ನು ಸಂಪಾದಿಸುವಲ್ಲಾಗುವ ಪರಿಶ್ರಮ ಮತ್ತು ಕ್ಲೇಶವಾಗಿದೆ" ಎಂದು ಸ್ಮಿತ್ ಬರೆದರು. ಬಾಡಿಗೆ ಮತ್ತು ಲಾಭಗಳೊಂದಿಗೆ, ವೇತನಗಳ ಜೊತೆಗೆ ಇತರ ವೆಚ್ಚಗಳು ಕೂಡ ಒಂದು ಸರಕಿನ ಬೆಲೆಯನ್ನು ಸೇರಿಕೊಳ್ಳುತ್ತವೆ, ಎಂದು ಸ್ಮಿತ್ ಸಾಧಿಸಿದರು.[72] ಇತರ ಶಾಸ್ತ್ರೀಯ ಅರ್ಥಶಾಸ್ತ್ರಜ್ಞರು ಸ್ಮಿತ್ರ ಸಿದ್ಧಾಂತದ ಬೇರೆ ಭೇದಗಳನ್ನು ತೋರಿಸಿದರು, ಇವನ್ನು 'ಮೌಲ್ಯದ ಕಾರ್ಮಿಕ ಸಿದ್ಧಾಂತ' (ಲೇಬರ್ ಥೀಯರಿ ಆಫ಼್ ವ್ಯಾಲ್ಯು) ಎಂದು ಹೆಸರಿಸಲಾಗಿತ್ತು. ಶಾಸ್ತ್ರೀಯ ಅರ್ಥಶಾಸ್ತ್ರವು ದೀರ್ಘಕಾಲೀನ ಸಮಸ್ಥಿತಿಯತ್ತ ಚಲಿಸುವ ಮಾರುಕಟ್ಟೆಗಳ ಪ್ರವೃತ್ತಿಯ ಮೇಲೆ ಕೇಂದ್ರೀಕರಿಸಿತ್ತು.
ಮಾರ್ಕ್ಸ್ವಾದಿ ಅರ್ಥಶಾಸ್ತ್ರವು ಶಾಸ್ತ್ರೀಯ ಅರ್ಥಶಾಸ್ತ್ರದಿಂದ ಉದ್ಭವಿಸುತ್ತದೆ. ಅದು ಕಾರ್ಲ್ ಮಾರ್ಕ್ಸ್ರ ಗ್ರಂಥದಿಂದ ಪಡೆಯುತ್ತದೆ. ಮಾರ್ಕ್ಸ್ರ ಪ್ರಧಾನ ಗ್ರಂಥವಾದ ದಾಸ್ ಕಾಪಿಟಾಲ್ನ ಮೊದಲ ಸಂಪುಟವನ್ನು ಜರ್ಮನ್ ಭಾಷೆಯಲ್ಲಿ ೧೮೬೭ರಲ್ಲಿ ಪ್ರಕಟಿಸಲಾಗಿತ್ತು. ಅದರಲ್ಲಿ, ಬಂಡವಾಳದ ಮೂಲಕ ಕಾರ್ಮಿಕರ ಶೋಷಣೆಯೆಂದು ಅವರು ಪರಿಗಣಿಸಿದ್ದ ಮೌಲ್ಯದ ಕಾರ್ಮಿಕ ಸಿದ್ಧಾಂತದ ಮೇಲೆ ಮಾರ್ಕ್ಸ್ ಕೇಂದ್ರೀಕರಿಸಿದರು.[73][74] ಮೌಲ್ಯದ ಕಾರ್ಮಿಕ ಸಿದ್ಧಾಂತವು ಒಂದು ಪದಾರ್ಥದ ಮೌಲ್ಯವು ಅದರ ಉತ್ಪಾದನೆಯಲ್ಲಿ ವ್ಯಯವಾದ ದುಡಿಮೆಯಿಂದ ನಿರ್ಧಾರಿತವಾಗಿತ್ತೆಂದು ಅಭಿಪ್ರಾಯಪಡುತ್ತದೆ. ಇದು, ಒಂದು ವಸ್ತುವಿನ ಮೌಲ್ಯವು ಅದನ್ನು ಪಡೆಯಲು ಒಬ್ಬರು ಏನು ತ್ಯಜಿಸಲು ಸಿದ್ಧವಿರುತ್ತಾರೆಂಬುದರಿಂದ ನಿರ್ಧಾರಿತವಾಗುತ್ತದೆಂಬ ಇಂದಿನ ತಿಳಿವಳಿಕೆಗಿಂತ ಭಿನ್ನವಾಗಿದೆ. ಸಿದ್ಧಾಂತದ ಒಂದು ಪ್ರಧಾನಭಾಗ, ಆಮೇಲೆ 'ನವಶಾಸ್ತ್ರೀಯ ಅರ್ಥಶಾಸ್ತ್ರ' ಅಥವಾ 'ಉಪಾಂತ ಪರಿಕಲ್ಪನೆ ಸಿದ್ಧಾಂತ' ಎಂದು ಹೆಸರು ಕೊಡಲಾದ, ಸುಮಾರು ೧೮೭೦ರಿಂದ ೧೯೧೦ರ ದಶಕದವರೆಗೆ ರಚಿಸಲ್ಪಟ್ಟಿತು. 'ಅರ್ಥಶಾಸ್ತ್ರ' ಪದವು ಆಲ್ಫ಼್ರೆಡ್ ಮಾರ್ಷಲ್ ರಂತಹ ನವಶಾಸ್ತ್ರೀಯ ಅರ್ಥಶಾಸ್ತ್ರಜ್ಞರಿಂದ, 'ಆರ್ಥಿಕ ವಿಜ್ಞಾನ'ಕ್ಕೆ ಒಂದು ಸಂಕ್ಷಿಪ್ತ ಸಮಾನಾರ್ಥ ಪದವಾಗಿ, ಮತ್ತು ಮುಂಚಿನ ವಿಶಾಲವಾದ 'ರಾಜಕೀಯ ಆರ್ಥಿಕ ವ್ಯವಸ್ಥೆ' ಪದದ ಒಂದು ಬದಲಿ ಪದವಾಗಿ, ಜನಪ್ರಿಯಗೊಂಡಿತು.[75][76] ಇದು ವಿಷಯದ ಮೇಲೆ ಪ್ರಕೃತಿ ವಿಜ್ಞಾನಗಳಲ್ಲಿ ಬಳಸಲಾದ ಗಣಿತಶಾಸ್ತ್ರದ ವಿಧಾನಗಳ ಪ್ರಭಾವಕ್ಕೆ ಹೊಂದಿಕೆಯಾಗುತ್ತದೆ.[1] ನವಶಾಸ್ತ್ರೀಯ ಅರ್ಥಶಾಸ್ತ್ರವು ಪೂರೈಕೆ ಮತ್ತು ಬೇಡಿಕೆಗಳನ್ನು ಮಾರುಕಟ್ಟೆ ಸಮಸ್ಥಿತಿಯಲ್ಲಿ ಬೆಲೆ ಮತ್ತು ಪ್ರಮಾಣದ ಜಂಟಿ ನಿರ್ಣಯ ಸಾಧನಗಳಾಗಿ ಕ್ರಮಬದ್ಧಗೊಳಿಸಿತು, ಮತ್ತು ಇದು ಹುಟ್ಟುವಳಿಯ ವಿಂಗಡಣೆ ಮತ್ತು ಆದಾಯದ ವಿತರಣೆ ಎರಡರ ಮೇಲೂ ಪರಿಣಾಮ ಬೀರಿತು. ಅದು, ಬೇಡಿಕೆಯ ಕಡೆಗೆ ಒಂದು ಮೌಲ್ಯದ ಪರಿಮಿತ ಪ್ರಯೋಜನ ಸಿದ್ಧಾಂತ ಮತ್ತು ಪೂರೈಕೆಯ ಕಡೆ ಒಂದು ಹೆಚ್ಚು ಪ್ರಚಲಿತ ಬೆಲೆಗಳ ಸಿದ್ಧಾಂತದ ಬೆಂಬಲವಾಗಿ, ಶಾಸ್ತ್ರೀಯ ಅರ್ಥಶಾಸ್ತ್ರದಿಂದ ಪಡೆದ ಮೌಲ್ಯದ ಕಾರ್ಮಿಕ ಸಿದ್ಧಾಂತವನ್ನು ತ್ಯಜಿಸಿತು.[77] ಸೂಕ್ಷ್ಮ ಅರ್ಥಶಾಸ್ತ್ರದಲ್ಲಿ, ನವಶಾಸ್ತ್ರೀಯ ಅರ್ಥಶಾಸ್ತ್ರವು ನಿರ್ಣಯ ರಚನೆ ಪ್ರಕ್ರಿಯೆಯನ್ನು (ಡಿಸಿಝ಼ನ್ ಮೇಕಿಂಗ್) ನಿರ್ದೇಶಿಸುವಲ್ಲಿ ಉತ್ತೇಜನಗಳು ಮತ್ತು ವೆಚ್ಚಗಳನ್ನು ಒಂದು ವ್ಯಾಪಿಸುವ ಪಾತ್ರವಹಿಸುವ ಅಂಶಗಳಾಗಿ ಪ್ರತಿಬಿಂಬಿಸುತ್ತದೆ. ಬೆಲೆಗಳು (ವೆಚ್ಚಗಳಾಗಿ) ಮತ್ತು ಆದಾಯಗಳು ಕೋರಿದ ಪ್ರಮಾಣದ ಮೇಲೆ ಹೇಗೆ ಪರಿಣಾಮ ಬೀರುತ್ತವೆಂದು ಪ್ರತ್ಯೇಕಿಸುವ, ವೈಯಕ್ತಿಕ ಬೇಡಿಕೆಯ ಗ್ರಾಹಕ ಸಿದ್ಧಾಂತವು (ಕನ್ಸೂಮರ್ ಥೀಯರಿ) ಇದರ ಒಂದು ಪ್ರತ್ಯಕ್ಷ ಉದಾಹರಣೆಯಾಗಿದೆ. ಸ್ಥೂಲ ಅರ್ಥಶಾಸ್ತ್ರದಲ್ಲಿ ಇದು ಕೇನ್ಸ್ ಸಂಬಂಧಿತ ಸ್ಥೂಲ ಅರ್ಥಶಾಸ್ತ್ರದೊಂದಿಗೆ ಒಂದು ಮುಂಚಿತವಾದ ಮತ್ತು ದೀರ್ಘಕಾಲಿಕ ನವಶಾಸ್ತ್ರೀಯ ಸಮನ್ವಯವಾಗಿ (ನೀಯೊಕ್ಲಾಸಿಕಲ್ ಸಿಂಥಸಿಸ್) ಪ್ರತಿಬಿಂಬಿತವಾಗುತ್ತದೆ.[78][79] ನವಶಾಸ್ತ್ರೀಯ ಅರ್ಥಶಾಸ್ತ್ರವನ್ನು ಅದರ ವಿಮರ್ಶಕರಿಂದಾಗಲಿ ಅಥವಾ ಸಹಾನುಭೂತಿ ತೋರುವವರಿಂದಾಗಲಿ ಸಾಂದರ್ಭಿಕವಾಗಿ ಸಾಂಪ್ರದಾಯಿಕ ಅರ್ಥಶಾಸ್ತ್ರ ಎಂದು ಉದ್ಧರಿಸಲಾಗುತ್ತದೆ. ಆಧುನಿಕ ಮುಖ್ಯ ವಾಹಿನಿ ಅರ್ಥಶಾಸ್ತ್ರವು ನವಶಾಸ್ತ್ರೀಯ ಅರ್ಥಶಾಸ್ತ್ರವನ್ನು ಆಧಾರವಾಗಿ ಬಳಸುತ್ತದೆ, ಆದರೆ, ಅರ್ಥಶಾಸ್ತ್ರ ಮಾಪನ ಪದ್ಧತಿ (ಇಕಾನಮೆಟ್ರಿಕ್ಸ್), ಕೌಶಲಯುತ ಸಂವಹನ ಸಿದ್ಧಾಂತ (ಗೇಮ್ ಥೀಯರಿ), ಮಾರುಕಟ್ಟೆ ವೈಫಲ್ಯ ಹಾಗೂ ಅಪೂರ್ಣ ಪೈಪೋಟಿಗಳ ವಿಶ್ಲೇಷಣೆ, ಮತ್ತು ರಾಷ್ಟ್ರೀಯ ಉತ್ಪತ್ತಿಯ ಮೇಲೆ ಪರಿಣಾಮ ಬೀರುವ ದೀರ್ಘಕಾಲೀನ ಬದಲಾಗುವ ಅಂಶಗಳನ್ನು ವಿಶ್ಲೇಷಿಸಲು ಬಳಸಲಾಗುವ ಆರ್ಥಿಕ ಪ್ರಗತಿಯ ನವಶಾಸ್ತ್ರೀಯ ವಿನ್ಯಾಸಗಳಂತಹ, ಮುಂಚಿನ ವಿಶ್ಲೇಷಣೆಯನ್ನು ವರ್ಧಿಸುವ ಅಥವಾ ಸಾಮಾನ್ಯೀಕರಿಸುವ ಹಲವು ಪರಿಷ್ಕರಣಗಳ ನಂತರ.
ಕೇನ್ಸ್ ಸಂಬಂಧಿತ ಅರ್ಥಶಾಸ್ತ್ರವು (ಕೇನ್ಜ಼ಿಯನ್ ಎಕನಾಮಿಕ್ಸ್), ಒಂದು ಪ್ರತ್ಯೇಕವಾದ ಕಾರ್ಯಕ್ಷೇತ್ರವಾಗಿ ಸಮಕಾಲೀನ ಸ್ಥೂಲ ಅರ್ಥಶಾಸ್ತ್ರಕ್ಕೆ ದಾರಿತೋರಿದ, ಜಾನ್ ಮೇಯ್ನರ್ಡ್ ಕೇನ್ಸ್ರಿಂದ ಜನಿಸುತ್ತದೆ, ವಿಶೇಷವಾಗಿ ಅವರ ಪುಸ್ತಕ ದ ಜೆನರಲ್ ಥೀಯರಿ ಆಫ಼್ ಎಂಪ್ಲಾಯ್ಮಂಟ್, ಇಂಟರಿಸ್ಟ್ ಅಂಡ್ ಮನಿಯಿಂದ (೧೯೩೬).[80][81] ಈ ಪುಸ್ತಕವು ಅಲ್ಪಕಾಲದಲ್ಲಿ ಬೆಲೆಗಳು ತುಲನಾತ್ಮಕವಾಗಿ ಬದಲಾಯಿಸದೇ ಇರುವಂಥ ಪರಿಸ್ಥಿತಿಯಲ್ಲಿ, ರಾಷ್ಟ್ರೀಯ ಉತ್ಪತ್ತಿಯ ನಿರ್ಣಯ ಸಾಧನಗಳ ಮೇಲೆ ಕೇಂದ್ರೀಕರಿಸಿತು. "ವಾಸ್ತವಿಕ ಬೇಡಿಕೆ"ಯು (ಇಫ಼ೆಕ್ಟಿವ್ ಡಿಮಾಂಡ್) ತಗ್ಗಿದ ಕಾರಣ ಹೆಚ್ಚಾದ ಕಾರ್ಮಿಕ-ಮಾರುಕಟ್ಟೆಯ ನಿರುದ್ಯೋಗವು ಏಕೆ ಸ್ವಯಂ ತಿದ್ದುಪಡಿಗೊಳ್ಳದಿರಬಹುದು ಮತ್ತು ಬೆಲೆಯ ನಮ್ಯತೆ ಹಾಗೂ ಆರ್ಥಿಕ ಕಾರ್ಯನೀತಿ ಸಹ ಏಕೆ ನಿಷ್ಫಲವಾಗಬಹುದೆಂಬುದನ್ನು, ವಿಸ್ತಾರವಾದ ಸೈದ್ಧಾಂತಿಕ ವಿವರದಲ್ಲಿ ತಿಳಿಸಲು ಕೇನ್ಸ್ ಪ್ರಯತ್ನಿಸಿದರು. ಆರ್ಥಿಕ ವಿಶ್ಲೇಷಣೆಯ ಮೇಲೆ ಅದರ ಮಹತ್ವದ ಪ್ರಭಾವದ ವಿಚಾರವಾಗಿ ಈ ಪುಸ್ತಕಕ್ಕೆ "ಕ್ರಾಂತಿಕಾರಿ" ಎಂಬಂತಹ ಪದಗಳನ್ನು ಪ್ರಯೋಗಿಸಲಾಗಿದೆ.[82][83][84] ಕೇನ್ಸ್ ಸಂಬಂಧಿತ ಅರ್ಥಶಾಸ್ತ್ರವು ಎರಡು ಉತ್ತರಾಧಿಕಾರಿಗಳನ್ನು ಹೊಂದಿದೆ. ಕೇನ್ಸ್ ತರುವಾಯದ ಅರ್ಥಶಾಸ್ತ್ರವೂ (ಪೋಸ್ಟ್-ಕೇನ್ಜ಼ಿಯನ್ ಎಕನಾಮಿಕ್ಸ್) ಸ್ಥೂಲ ಆರ್ಥಿಕ ಸೂತ್ರನೇಮಗಳು ಮತ್ತು ಹೊಂದಾಣಿಕೆ ಪ್ರಕ್ರಿಯೆಗಳ ಮೇಲೆ ಕೇಂದ್ರೀಕರಿಸುತ್ತದೆ. ಅವುಗಳ ವಿನ್ಯಾಸಗಳಿಗಾಗಿ ಸೂಕ್ಷ್ಮ ಆರ್ಥಿಕ ಆಧಾರಗಳ ಮೇಲೆ ಸಂಶೋಧನೆಯನ್ನು, ಸರಳವಾದ ಪರಿಪೂರ್ಣಗೊಳಿಸುವ ವಿನ್ಯಾಸಗಳ ಬದಲಾಗಿ, ನಿಜಜೀವನದ ಬಳಕೆಗಳನ್ನು ಆಧರಿಸಿ ನಿರೂಪಿಸಲಾಗುತ್ತದೆ. ಸಾಮಾನ್ಯವಾಗಿ ಅದನ್ನು ಕೇಂಬ್ರಿಜ್ ವಿಶ್ವವಿದ್ಯಾಲಯ ಮತ್ತು ಜೋನ್ ರಾಬಿನ್ಸನ್ರ ವ್ಯಾಸಂಗಕ್ಕೆ ಸಂಬಂಧಿಸಲಾಗುತ್ತದೆ.[85] ನೂತನ ಕೇನ್ಸ್ ಸಂಬಂಧಿತ ಅರ್ಥಶಾಸ್ತ್ರವೂ (ನ್ಯೂ-ಕೇನ್ಜ಼ಿಯನ್ ಎಕನಾಮಿಕ್ಸ್) ಕೇನ್ಸ್ ಸಂಬಂಧಿತ ಅರ್ಥಶಾಸ್ತ್ರದ ಶೈಲಿಯಂತಿರುವ ಬೆಳವಣಿಗೆಗಳಿಗೆ ಸಂಬಂಧಿಸಿದೆ. ಈ ಗುಂಪಿನೊಳಗೆ ಸಂಶೋಧಕರು ಸೂಕ್ಷ್ಮ ಆರ್ಥಿಕ ಆಧಾರಗಳು ಮತ್ತು ಪರಿಣಾಮಕಾರಿ ವರ್ತನೆಯನ್ನು ಉಪಯೋಗಿಸುವ, ಆದರೆ ಬೆಲೆ ಮತ್ತು ವೇತನಗಳ ಅನಮ್ಯತೆಯಂತಹ ಸಾಮಾನ್ಯ ಕೇನ್ಸ್ ಸಂಬಂಧಿತ ವಿಷಯಗಳ ಮೇಲೆ ಒಂದು ಹೆಚ್ಚು ಸಂಕುಚಿತ ಲಕ್ಷ್ಯ ನೀಡುವ, ವಿನ್ಯಾಸಗಳ ಮೇಲಿನ ಪ್ರಾಮುಖ್ಯವನ್ನು ಇತರ ಅರ್ಥಶಾಸ್ತ್ರಜ್ಞರೊಂದಿಗೆ ಹಂಚಿಕೊಳ್ಳಲು ಪ್ರವೃತ್ತರಾಗಿರುತ್ತಾರೆ. ಹಿಂದಿನ ಕೇನ್ಸ್ ಶೈಲಿಯವುಗಳ ಹಾಗೆ ನೇರವಾಗಿ ಭಾವಿಸುವುದರ ಬದಲಾಗಿ, ಸಾಮಾನ್ಯವಾಗಿ ಇವುಗಳನ್ನು ವಿನ್ಯಾಸಗಳ ಅಂತರ್ಲಕ್ಷಣಗಳನ್ನಾಗಿ ರೂಪಿಸಲಾಗುತ್ತದೆ.
ವಿಶ್ವದಾದ್ಯಂತ ಪರಿಚಿತವಾದ ಶಿಕ್ಷಣತಜ್ಞರ ಸುಸ್ಪಷ್ಟ ಗುಂಪುಗಳಿಂದ ಪ್ರಾವೀಣ್ಯ ಗಳಿಸಿಕೊಂಡಿರುವ ಮತ್ತು ವ್ಯಾಪಕವಾದ ಅರ್ಥಶಾಸ್ತ್ರದ ಒಂದು ನಿರ್ದಿಷ್ಟ ಶೈಲಿಯನ್ನು ಪ್ರಸ್ತಾಪಿಸುವ ಇತರ ಹೆಸರುವಾಸಿಯಾದ ಪಂಥಗಳು ಅಥವಾ ಚಿಂತನೆಯ ಪ್ರವೃತ್ತಿಗಳು, ಆಸ್ಟ್ರಿಯಾದ ಪಂಥ (ಆಸ್ಟ್ರಿಯನ್ ಸ್ಕೂಲ್), ಶಿಕಾಗೋ ಅರ್ಥಶಾಸ್ತ್ರ ಪಂಥ (ಶಿಕಾಗೋ ಸ್ಕೂಲ್ ಆಫ಼್ ಎಕನಾಮಿಕ್ಸ್), ಫ಼್ರಾಯ್ಬೂರ್ಕ್ ಪಂಥ (ಫ಼್ರಾಯ್ಬೂರ್ಕ್ ಸ್ಕೂಲ್), ಲೋಸ಼್ಯಾನ್ ಪಂಥ (ಸ್ಕೂಲ್ ಆಫ಼್ ಲೋಸ಼್ಯಾನ್) ಮತ್ತು ಸ್ಟಾಕ್ಹೋಮ್ ಪಂಥಗಳನ್ನು (ಸ್ಟಾಕ್ಹೋಮ್ ಸ್ಕೂಲ್) ಒಳಗೊಂಡಿವೆ. ಸಮಕಾಲೀನ ಮುಖ್ಯ ವಾಹಿನಿ ಅರ್ಥಶಾಸ್ತ್ರವನ್ನು ಕೆಲವೊಮ್ಮೆ ಎಮ್ಆಯ್ಟಿ, ಅಥವಾ ಸಾಲ್ಟ್ವಾಟರ್, ಕಾರ್ಯವಿಧಾನ, ಮತ್ತು ಶಿಕಾಗೋ, ಅಥವಾ ಫ಼್ರೆಶ್ವಾಟರ್, ಕಾರ್ಯವಿಧಾನಗಳಾಗಿ ಪ್ರತ್ಯೇಕಿಸಲಾಗುತ್ತದೆ. ಸ್ಥೂಲ ಅರ್ಥಶಾಸ್ತ್ರದೊಳಗೆ, ಸಾಹಿತ್ಯದಲ್ಲಿ ಅವುಗಳ ಆವಿಷ್ಕರಣದ ಸಾಮಾನ್ಯ ಕ್ರಮದಲ್ಲಿ ಮುಂದಿನವುಗಳಿವೆ; ಶಾಸ್ತ್ರೀಯ ಅರ್ಥಶಾಸ್ತ್ರ, ಕೇನ್ಸ್ ಸಂಬಂಧಿತ ಅರ್ಥಶಾಸ್ತ್ರ, ನವಶಾಸ್ತ್ರೀಯ ಸಮನ್ವಯ, ಕೇನ್ಸ್ ತರುವಾಯದ ಅರ್ಥಶಾಸ್ತ್ರ, ಹಣಕಾಸು ತತ್ವಸಿದ್ಧಾಂತ (ಮಾನಿಟರಿಸ಼ಮ್), ನೂತನ ಶಾಸ್ತ್ರೀಯ ಅರ್ಥಶಾಸ್ತ್ರ (ನ್ಯೂ ಕ್ಲಾಸಿಕಲ್ ಎಕನಾಮಿಕ್ಸ್), ಮತ್ತು ಪೂರೈಕೆ-ಕಡೆಯ ಅರ್ಥಶಾಸ್ತ್ರ (ಸಪ್ಲಾಯ್-ಸಾಯ್ಡ್ ಎಕನಾಮಿಕ್ಸ್). ಪರ್ಯಾಯ ಬೆಳವಣಿಗೆಗಳು, ಜೀವಿ ಪರಿಸ್ಥಿತಿ ವಿಜ್ಞಾನದ ಅರ್ಥಶಾಸ್ತ್ರ, ಸಾಂಸ್ಥಾನಿಕ ಅರ್ಥಶಾಸ್ತ್ರ (ಇನ್ಸ್ಟಿಟೂಶನಲ್ ಎಕನಾಮಿಕ್ಸ್), ವಿಕಾಸವಾದಿ ಅರ್ಥಶಾಸ್ತ್ರ (ಎವಲೂಶನರಿ ಎಕನಾಮಿಕ್ಸ್), ಪಾರತಂತ್ರ್ಯ ಸಿದ್ಧಾಂತ (ಡಿಪೆಂಡನ್ಸಿ ಥೀಯರಿ), ರಚನಾತ್ಮಕ ತತ್ವ ಸಿದ್ಧಾಂತದ ಅರ್ಥಶಾಸ್ತ್ರ (ಸ್ಟ್ರಕ್ಚರಲಿಸ್ಟ್ ಎಕನಾಮಿಕ್ಸ್), ವಿಶ್ವ ವ್ಯವಸ್ಥೆಗಳ ಸಿದ್ಧಾಂತ (ವರ್ಲ್ಡ್ ಸಿಸ್ಟಮ್ಸ್ ಥೀಯರಿ), ಉಷ್ಣ ಅರ್ಥಶಾಸ್ತ್ರ (ಥರ್ಮೊಎಕನಾಮಿಕ್ಸ್), ಭೌತ ಅರ್ಥಶಾಸ್ತ್ರ (ಇಕಾನೋಫ಼ಿಸ಼ಿಕ್ಸ್) ಮತ್ತು ತಂತ್ರಜ್ಞ ಪ್ರಭುತ್ವಗಳನ್ನು (ಟೆಕ್ನಾಕ್ರಸಿ) ಒಳಗೊಂಡಿವೆ.
ಈ ವಿಷಯದ ಮೇಲೆ ಸ್ನಾತಕ ಬೋಧನಾ ಕ್ರಮಗಳ ಬೆಳವಣಿಗೆಯಲ್ಲಿ ಪ್ರತಿಬಿಂಬಿತವಾಗಿರುವ ಅರ್ಥಶಾಸ್ತ್ರದ ವೃತ್ತೀಕರಣ (ಪ್ರಫ಼ೆಶನಲೈಜ಼ೇಶನ್) "ಸರಿಸುಮಾರು ೧೯೦೦ದಿಂದೀಚೆಗೆ ಅರ್ಥಶಾಸ್ತ್ರದಲ್ಲಿನ ಪ್ರಮುಖ ಬದಲಾವಣೆ" ಎಂದು ವಿವರಿಸಲಾಗಿದೆ.[86] ಬಹುತೇಕ ಪ್ರಮುಖ ವಿಶ್ವವಿದ್ಯಾಲಯಗಳು ಮತ್ತು ಹಲವು ಕಾಲೇಜುಗಳು, ಮಾನವಿಕ ಶಾಸ್ತ್ರಗಳು, ಉದ್ಯಮ, ಅಥವಾ ವೃತ್ತಿ ವ್ಯಾಸಂಗಕ್ಕಾಗಲಿ, ಈ ವಿಷಯದಲ್ಲಿ ಶಿಕ್ಷಣ ಪದವಿಗಳನ್ನು ನೀಡುವ, ಒಂದು ಪ್ರಧಾನ ಪಠ್ಯ ವಿಷಯ, ಬೋಧನಾಂಗ, ಅಥವಾ ವಿಭಾಗವನ್ನು ಹೊಂದಿರುತ್ತವೆ. ಆರ್ಥಿಕ ವಿಜ್ಞಾನಗಳಲ್ಲಿ ನೋಬೆಲ್ ಸ್ಮರಣಾರ್ಥ ಪಾರಿತೋಷಕವು (ಆಡುಮಾತಿನಲ್ಲಿ, ಅರ್ಥಶಾಸ್ತ್ರದಲ್ಲಿ ನೋಬೆಲ್ ಪಾರಿತೋಷಕ) ಈ ಕಾರ್ಯಕ್ಷೇತ್ರದಲ್ಲಿ ಮಹೋನ್ನತ ಬೌದ್ಧಿಕ ಕೊಡುಗೆಗಳಿಗಾಗಿ ಪ್ರತಿ ವರ್ಷ ಅರ್ಥಶಾಸ್ತ್ರಜ್ಞರಿಗೆ ನೀಡಲಾಗುವ ಒಂದು ಪಾರಿತೋಷಕ. ಖಾಸಗಿ ವಲಯದಲ್ಲಿ, ಕುಶಲ ಅರ್ಥಶಾಸ್ತ್ರಜ್ಞರನ್ನು ಸಲಹಾಕಾರರಾಗಿ ನೇಮಿಸಿಕೊಳ್ಳಲಾಗುತ್ತದೆ ಮತ್ತು, ಬ್ಯಾಂಕ್ ಹಾಗೂ ಹಣಕಾಸನ್ನು ಒಳಗೊಂಡಂತೆ, ಉದ್ಯಮದಲ್ಲಿ ಕೂಡ. ಅರ್ಥಶಾಸ್ತ್ರಜ್ಞರು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ದಳ್ಳಾಳಿ ಸಂಸ್ಥೆಗಳಿಗಾಗಿ ಕೂಡ ಕೆಲಸಮಾಡುತ್ತಾರೆ, ಉದಾಹರಣೆಗೆ, ರಾಷ್ಟ್ರೀಯ ಖಜಾನೆ, ಕೇಂದ್ರೀಯ ಬ್ಯಾಂಕ್ ಅಥವಾ ಸಂಖ್ಯಾಸಂಗ್ರಹಣ ಇಲಾಖೆ.
ಒಂದು ಶಾಸ್ತ್ರೋಕ್ತ ಗಣಿತಶಾಸ್ತ್ರ ನಿರೂಪಣಾ (ಮ್ಯಾಥಮ್ಯಾಟಿಕಲ್ ಮಾಡಲಿಂಗ್) ಕಾರ್ಯಕ್ಷೇತ್ರವಾಗಿ ಸಮಕಾಲೀನ ಮುಖ್ಯ ವಾಹಿನಿ ಅರ್ಥಶಾಸ್ತ್ರವನ್ನು ಗಣಿತ ಅರ್ಥಶಾಸ್ತ್ರ (ಮ್ಯಾಥಮ್ಯಾಟಿಕಲ್ ಎಕನಾಮಿಕ್ಸ್) ಎಂದು ಸಹ ಕರೆಯಬಹುದು.[87] ಅದು ಕಲನ (ಕ್ಯಾಲ್ಕ್ಯುಲಸ್), ರೇಖಾ ಬೀಜಗಣಿತ (ಲೀನಿಯರ್ ಆಲ್ಜಬ್ರಾ), ಸಂಖ್ಯಾಸಂಗ್ರಹಣ ಶಾಸ್ತ್ರ (ಸ್ಟಟಿಸ್ಟಿಕ್ಸ್), ಕೌಶಲಯುತ ಸಂವಹನ ಸಿದ್ಧಾಂತ, ಮತ್ತು ಗಣಕಯಂತ್ರ ವಿಜ್ಞಾನಗಳ ಸಾಧನಗಳನ್ನು ಬಳಸುತ್ತದೆ.[88] ವೃತ್ತಿನಿರತ ಅರ್ಥಶಾಸ್ತ್ರಜ್ಞರು ಈ ಸಾಧನಗಳಲ್ಲಿ ಪರಿಚಿತವಾಗಿರುವುದನ್ನು ನಿರೀಕ್ಷಿಸಲಾಗುತ್ತದೆ, ಆದರೆ ಎಲ್ಲ ಅರ್ಥಶಾಸ್ತ್ರಜ್ಞರು ಪ್ರಾವೀಣ್ಯ ಗಳಿಸುತ್ತಾರೆ, ಕೆಲವರು ಅರ್ಥಶಾಸ್ತ್ರ ಮಾಪನ ಪದ್ಧತಿ ಹಾಗೂ ಗಣಿತಶಾಸ್ತ್ರ ವಿಧಾನಗಳಲ್ಲಿ ಪ್ರಾವೀಣ್ಯ ಪಡೆಯುತ್ತಾರೆ ಹಾಗೇ ಇತರರು ಕಡಮೆ ಪರಿಮಾಣಾತ್ಮಕ ಕ್ಷೇತ್ರಗಳಲ್ಲಿ ಪ್ರಾವೀಣ್ಯ ಗಳಿಸುತ್ತಾರೆ. ಅಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರು ಗಣಿತಶಾಸ್ತ್ರಕ್ಕೆ ಕಡಮೆ ಪ್ರಾಶಸ್ತ್ಯ ನೀಡುತ್ತಾರೆ, ಹಾಗೂ ಆಡಮ್ ಸ್ಮಿತ್ ಮತ್ತು ಜೋಸಫ಼್ ಶೂಂಪೇಟರ್ರನ್ನು ಒಳಗೊಂಡಂತೆ, ಹಲವು ಪ್ರಮುಖ ಇತಿಹಾಸ ಪ್ರಸಿದ್ಧ ಅರ್ಥಶಾಸ್ತ್ರಜ್ಞರು ಗಣಿತಜ್ಞರಾಗಿರಲಿಲ್ಲ. ಆರ್ಥಿಕ ತರ್ಕಸರಣಿಯು ಆರ್ಥಿಕ ಪರಿಕಲ್ಪನೆಗಳ ವಿಷಯವಾಗಿ ಅಂತರ್ದೃಷ್ಟಿಯನ್ನು ಒಳಗೊಳ್ಳುತ್ತದೆ, ಮತ್ತು ಅರ್ಥಶಾಸ್ತ್ರಜ್ಞರು ಅನುದ್ದೇಶಿತ ಪರಿಣಾಮಗಳನ್ನು ಕಂಡುಕೊಳ್ಳುವ ಘಟ್ಟದವರೆಗೆ ವಿಶ್ಲೇಷಿಸಲು ಪ್ರಯತ್ನಿಸುತ್ತಾರೆ.
ಮುಖ್ಯ ವಾಹಿನಿ ಆರ್ಥಿಕ ಸಿದ್ಧಾಂತವು, ಬೇರೆ ಬೇರೆ ಜಾತಿಯ ಪರಿಕಲ್ಪನೆಗಳನ್ನು ಉಪಯೋಗಿಸುವ, ಪರಿಕಲ್ಪಿತ ಪರಿಮಾಣಾತ್ಮಕ ಆರ್ಥಿಕ ವಿನ್ಯಾಸಗಳನ್ನು ಅವಲಂಬಿಸಿರುತ್ತದೆ. ಸಿದ್ಧಾಂತವು ವಿಶಿಷ್ಟವಾಗಿ ಇತರ ವಿಷಯಗಳು ಸ್ಥಿರವಾಗಿರುವ ಒಂದು ಪೂರ್ವಾನುಮಾನದೊಂದಿಗೆ ಮುಂದುವರಿಯುತ್ತದೆ, ಅಂದರೆ ಪರಿಶೀಲನೆಯಲ್ಲಿರುವ ಅಂಶವನ್ನು ಬಿಟ್ಟು ಉಳಿದೆಲ್ಲ ವಿವರಣಾತ್ಮಕ ಬದಲಾಗುವ ಅಂಶಗಳನ್ನು ಸ್ಥಿರವಾಗಿ ಹಿಡಿದಿಡುವುದು. ಸಿದ್ಧಾಂತಗಳನ್ನು ಕಲ್ಪಿಸುವಾಗ, ಪೂರ್ವದ ಸಿದ್ಧಾಂತಗಳಿಗಿಂತ ಕನಿಷ್ಠ ಪಕ್ಷ ಮಾಹಿತಿ ಆವಶ್ಯಕತೆಗಳಲ್ಲಿ ಸರಳವಾದ, ಭವಿಷ್ಯವಾಣಿಗಳಲ್ಲಿ ಹೆಚ್ಚು ಖಚಿತವಾದ, ಮತ್ತು ಹೆಚ್ಚುವರಿ ಸಂಶೋಧನೆಯನ್ನು ಉಂಟುಮಾಡುವಲ್ಲಿ ಹೆಚ್ಚು ಫಲಕಾರಿಯಾದಂಥವುಗಳನ್ನು ಕಂಡುಹಿಡಿಯುವುದು ಉದ್ದೇಶವಾಗಿರುತ್ತದೆ.[89] ಸೂಕ್ಷ್ಮ ಅರ್ಥಶಾಸ್ತ್ರದಲ್ಲಿ, ಪ್ರಧಾನ ಪರಿಕಲ್ಪನೆಗಳು, ಪೂರೈಕೆ ಮತ್ತು ಬೇಡಿಕೆ, ಉಪಾಂತ ಪರಿಕಲ್ಪನೆ ಸಿದ್ಧಾಂತ, ವಿವೇಕಯುಕ್ತ ಆಯ್ಕೆ ಸಿದ್ಧಾಂತ, ಅವಕಾಶ ವೆಚ್ಚ, ಆಯವ್ಯಯ ನಿರ್ಬಂಧಗಳು (ಬಜಿಟ್ ಕಂಸ್ಟ್ರೇಂಟ್ಸ್), ಸೌಲಭ್ಯ, ಮತ್ತು ವ್ಯಾಪಾರಸಂಸ್ಥೆಯ ಸಿದ್ಧಾಂತವನ್ನು ಒಳಗೊಂಡಿವೆ.[90][91] ಮುಂಚಿನ ಸ್ಥೂಲ ಅರ್ಥಶಾಸ್ತ್ರದ ವಿನ್ಯಾಸಗಳು ಸಂಚಿತ ಬದಲಾಗುವ ಅಂಶಗಳ ನಡುವಣ ಸಂಬಂಧಗಳನ್ನು ರೂಪಿಸುವುದರ ಮೇಲೆ ಕೇಂದ್ರೀಕರಿಸಿದವು, ಆದರೆ ಸಂಬಂಧಗಳು ಕಾಲಕ್ಕೆ ತಕ್ಕಂತೆ ಬದಲಾದಂತೆ ತೋರಿದಾಗ ಸ್ಥೂಲ ಅರ್ಥಶಾಸ್ತ್ರಜ್ಞರು ತಮ್ಮ ವಿನ್ಯಾಸಗಳನ್ನು ಒತ್ತಾಯದ ಕಾರಣ ಸೂಕ್ಷ್ಮ ಆರ್ಥಿಕ ಆಧಾರಗಳ ಮೇಲೆ ಆಧರಿಸಿದರು. ಹಿಂದೆ ಉಲ್ಲೇಖಿಸಲಾದ ಸೂಕ್ಷ್ಮ ಅರ್ಥಶಾಸ್ತ್ರದ ಪರಿಕಲ್ಪನೆಗಳು ಸ್ಥೂಲ ಅರ್ಥಶಾಸ್ತ್ರದ ವಿನ್ಯಾಸಗಳಲ್ಲಿ ಒಂದು ಪ್ರಮುಖವಾದ ಪಾತ್ರವಹಿಸುತ್ತವೆ – ಉದಾಹರಣೆಗೆ, ವಿತ್ತ ಸಿದ್ಧಾಂತದಲ್ಲಿ (ಮಾನಿಟೆರಿ ಥೀಯರಿ), ಹಣದ ಪರಿಮಾಣ ಸಿದ್ಧಾಂತವು (ಕ್ವಾಂಟಿಟಿ ಥೀಯರಿ ಆಫ಼್ ಮನಿ) ಹಣದ ಪೂರೈಕೆಯಲ್ಲಿನ ಹೆಚ್ಚಳಗಳು ಹಣದುಬ್ಬರವನ್ನು ಏರಿಸುತ್ತವೆ ಎಂದು ಮುನ್ನುಡಿಯುತ್ತದೆ, ಮತ್ತು ಹಣದುಬ್ಬರವು ವಿವೇಕಯುಕ್ತ ನಿರೀಕ್ಷಣೆಗಳಿಂದ (ರ್ಯಾಷನಲ್ ಎಕ್ಸ್ಪೆಕ್ಟೇಶನ್ಸ್) ಪ್ರಭಾವಿತವಾಗುತ್ತದೆಂದು ಭಾವಿಸಲಾಗುತ್ತದೆ. ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ, ಅಭಿವೃದ್ಧಿಹೊಂದಿದ ರಾಷ್ಟ್ರಗಳಲ್ಲಿ ಕೆಲವೊಮ್ಮೆ ನಿಧಾನವಾದ ಬೆಳವಣಿಗೆಯು ಹಣಹೂಡಿಕೆ ಮತ್ತು ಬಂಡವಾಳದ ಹೆಚ್ಚುವರಿ ಲಾಭಗಳು ಕ್ಷೀಣಿಸುತ್ತಿರುವುದರಿಂದ ಎಂದು ಮುನ್ನುಡಿಯಲಾಗಿದೆ, ಮತ್ತು ಏಷ್ಯಾದ ನಾಲ್ಕು ಹುಲಿಗಳಿಗೆ (ಫ಼ೋರ್ ಏಷ್ಯನ್ ಟಾಯ್ಗರ್ಸ್) ಸಂಬಂಧಿಸಿದಂತೆ ಇದನ್ನು ಗಮನಿಸಲಾಗಿದೆ. ಕೆಲವೊಮ್ಮೆ ಒಂದು ಆರ್ಥಿಕ ಕಲ್ಪಿತ ಸಿದ್ಧಾಂತವು ಕೇವಲ ಗುಣಾತ್ಮಕವಾಗಿರುತ್ತದೆ, ಪರಿಮಾಣಾತ್ಮಕವಾಗಿರುವುದಿಲ್ಲ.[92] ಆರ್ಥಿಕ ತರ್ಕಸರಣಿಯ ಪ್ರತಿಪಾದನೆಗಳು ಅನೇಕಸಲ ಸೈದ್ಧಾಂತಿಕ ಸಂಬಂಧಗಳನ್ನು ಸ್ಪಷ್ಟಪಡಿಸಲು ಎರಡು ಆಯಾಮದ ರೇಖಾಚಿತ್ರಗಳನ್ನು ಬಳಸುತ್ತವೆ. ಒಂದು ಹೆಚ್ಚಿನ ಮಟ್ಟದ ಸಾಧಾರಣತೆಯಲ್ಲಿ, ಪಾಲ್ ಸ್ಯಾಮ್ಯುಅಲ್ಸನ್ರ ಶಾಸ್ತ್ರಗ್ರಂಥವಾದ ಫ಼ೌಂಡೇಶನ್ಸ್ ಆಫ಼್ ಎಕನಾಮಿಕ್ ಅನ್ಯಾಲಸಿಸ್ (೧೯೪೭) ಸಿದ್ಧಾಂತವನ್ನು ನಿರೂಪಿಸಲು ಗಣಿತಶಾಸ್ತ್ರದ ವಿಧಾನಗಳನ್ನು ಬಳಸಿತು, ವಿಶೇಷವಾಗಿ ಸಮಸ್ಥಿತಿಯನ್ನು ತಲಪುವ ವಸ್ತುಗಳ ವರ್ತನೆಯ ಸಂಬಂಧಗಳನ್ನು ಗರಿಷ್ಠೀಕರಿಸಲು. ಈ ಪುಸ್ತಕವು ಅರ್ಥಶಾಸ್ತ್ರದಲ್ಲಿ, ಪ್ರಾಯೋಗಿಕ ಮಾಹಿತಿಯಿಂದ ಸಂಭಾವ್ಯವಾಗಿ ತಿರಸ್ಕರಿಸಬಹುದಾದಂಥ ಪ್ರಮೇಯಗಳಾಗಿರುವ (ಥೀಯರಮ್), ಕಾರ್ಯಕಾರಿಯಾಗಿ ಅರ್ಥಪೂರ್ಣವಾದ ಸೂತ್ರಗಳು ಎಂದು ಕರೆಯಲಾದ ಹೇಳಿಕೆಗಳ ವರ್ಗದ ಪರಿಶೀಲನೆಯ ಮೇಲೆ ಕೇಂದ್ರೀಕರಿಸಿತು.[93]
ಆರ್ಥಿಕ ಸಿದ್ಧಾಂತಗಳನ್ನು ಕೆಲವೊಮ್ಮೆ ಪ್ರಾಯೋಗಿಕವಾಗಿ (ಎಂಪಿರಿಕಲಿ) ಪರೀಕ್ಷಿಸಲಾಗುತ್ತದೆ, ಬಹುಮಟ್ಟಿಗೆ ಆರ್ಥಿಕ ಮಾಹಿತಿಯನ್ನು ಉಪಯೋಗಿಸುವ ಅರ್ಥಶಾಸ್ತ್ರ ಮಾಪನ ಪದ್ಧತಿಯ ಬಳಕೆಯಿಂದ.[94] ಭೌತಿಕ ವಿಜ್ಞಾನಗಳಿಗೆ ಸಾಮಾನ್ಯವಾದ ನಿಯಂತ್ರಿತ ಪ್ರಯೋಗಗಳು ಅರ್ಥಶಾಸ್ತ್ರದಲ್ಲಿ ಜಟಿಲ ಮತ್ತು ಅಪರೂಪವಾಗಿರುತ್ತವೆ, ಮತ್ತು ಅದರ ಬದಲಾಗಿ ವಿಸ್ತಾರವಾದ ಮಾಹಿತಿಯನ್ನು ಅವಲೋಕನಾತ್ಮಕವಾಗಿ ಪರಿಶೀಲಿಸಲಾಗುತ್ತದೆ; ಈ ಪ್ರಕಾರದ ಪರೀಕ್ಷಾ ಕ್ರಿಯೆಯನ್ನು ವಿಶಿಷ್ಟವಾಗಿ ನಿಯಂತ್ರಿತ ಪ್ರಯೋಗ ಕ್ರಿಯೆಗಿಂತ ಕಡಿಮೆ ಕೂಲಂಕಷವಾದದ್ದೆಂದು ಭಾವಿಸಲಾಗುತ್ತದೆ, ಮತ್ತು ನಿರ್ಣಯಗಳು ವಿಶಿಷ್ಟವಾಗಿ ಹೆಚ್ಚು ತಾತ್ಕಾಲಿಕವಾಗಿರುತ್ತವೆ. ನಿವರ್ತನ ವಿಶ್ಲೇಷಣೆಯಂತಹ ಸಂಖ್ಯಾಸಂಗ್ರಹಣ ವಿಧಾನಗಳು ಸಾಮಾನ್ಯವಾಗಿವೆ. ತನಿಖೆಗಾರರು ಪರಿಕಲ್ಪಿತ ಸಂಬಂಧದ(ಗಳ) ಗಾತ್ರ, ಆರ್ಥಿಕ ಮಹತ್ವ, ಮತ್ತು ಸಂಖ್ಯಾಸಂಗ್ರಹಣ ಮಹತ್ವವನ್ನು ("ಸೂಚನಾ ಸಾಮರ್ಥ್ಯ") ಅಂದಾಜು ಮಾಡಲು ಹಾಗೂ ಇತರ ಬದಲಾಗುವ ಅಂಶಗಳಿಂದಾಗುವ ಅಪ್ರಸ್ತುತತೆಯನ್ನು ಹೊಂದಿಸಿಕೊಳ್ಳಲು ಅಂತಹ ವಿಧಾನಗಳನ್ನು ಬಳಸುತ್ತಾರೆ. ಅಂತಹ ವಿಧಾನಗಳಿಂದ, ಒಂದು ಕಲ್ಪಿತ ಸಿದ್ಧಾಂತವು ಸಮ್ಮತಿಯನ್ನು ಗಳಿಸಬಹುದು, ಆದರೆ, ಖಾತರಿಯಾದ ಅರ್ಥದ ಬದಲು, ಒಂದು ಸಂಭವನೀಯತೆ ಆಧಾರಿತ ಅರ್ಥದಲ್ಲಿ. ಸಮ್ಮತಿಯು ನಿರಾಕರಿಸಬಲ್ಲ ಕಲ್ಪಿತ ಸಿದ್ಧಾಂತವು ಪರೀಕ್ಷೆಗಳನ್ನು ಪಾರಾಗುವುದರ ಮೇಲೆ ಅವಲಂಬಿಸಿದೆ. ವಿಭಿನ್ನ ಪರೀಕ್ಷೆಗಳು, ದತ್ತಾಂಶ ಸಮೂಹಗಳು (ಡೇಟಾ ಸೆಟ್), ಮತ್ತು ಹಿಂದಿನ ನಂಬಿಕೆಗಳನ್ನು ಕಲ್ಪಿಸಿಕೊಂಡರೆ, ಸಾಮಾನ್ಯವಾಗಿ ಅಂಗೀಕರಿಸಲಾದ ವಿಧಾನಗಳ ಬಳಕೆಯು ಒಂದು ಅಂತಿಮ ನಿರ್ಣಯ ಅಥವಾ ಒಂದು ನಿರ್ದಿಷ್ಟ ಸಮಸ್ಯೆಯ ಮೇಲೆ ಒಂದು ಒಮ್ಮತವನ್ನು ಸಹ ತೋರಿಸದಿರಬಹುದು. ಕುಶಲ ಗುಣಮಟ್ಟಗಳು ಮತ್ತು ಪರಿಣಾಮಗಳ ಪುನರಾವರ್ತನಾ ಅಸಾಧ್ಯತೆಯ (ನಾನ್-ರೆಪ್ಲಿಕೇಬಿಲಿಟಿ) ಮೇಲೆ ಆಧರಿಸಿದ ವಿಮರ್ಶೆಯು ಪಕ್ಷಪಾತ, ದೋಷಗಳು, ಮತ್ತು ಮಿತಿಮೀರಿದ ಸಾಮಾನ್ಯೀಕರಣದ ವಿರುದ್ಧ ಮತ್ತಷ್ಟು ನಿಯಂತ್ರಣಗಳನ್ನು ಒದಗಿಸುತ್ತದೆ,[91][95] ಆದರೆ ಬಹಳಷ್ಟು ಆರ್ಥಿಕ ಸಂಶೋಧನೆಯನ್ನು ಪುನರಾವರ್ತಿಸಲಾಗದ್ದೆಂದು ಆಪಾದಿಸಲಾಗಿದೆ, ಮತ್ತು ಪ್ರತಿಷ್ಠಿತ ನಿಯತಕಾಲಿಕಗಳು ನಿಯಮಾವಳಿ ಮತ್ತು ಮಾಹಿತಿಯ ಒದಗಣೆಯ ಮೂಲಕ ನಕಲನ್ನು ಸುಗಮವಾಗಿಸುವುದಿಲ್ಲವೆಂದು ಆಪಾದಿಸಲಾಗಿದೆ.[96] ಸಿದ್ಧಾಂತಗಳಂತೆ, ಪರೀಕ್ಷಾ ಅಂಕಿ ಅಂಶಗಳ ಬಳಕೆಗಳೇ ವಿಮರ್ಶಾತ್ಮಕ ವಿಶ್ಲೇಷಣೆಗೆ ಮುಕ್ತವಾಗಿವೆ,[97][98][99] ಆದರೆ ದಿ ಅಮೇರಿಕನ್ ಎಕನಾಮಿಕ್ ರಿವ್ಯೂದಂತಹ ಅರ್ಥಶಾಸ್ತ್ರದ ಪ್ರತಿಷ್ಠಿತ ನಿಯತಕಾಲಿಕಗಳಲ್ಲಿನ ವಿದ್ವತ್ಪ್ರಬಂಧಗಳ ಮೇಲಿನ ವಿಮರ್ಶಾತ್ಮಕ ವ್ಯಾಖ್ಯೆಯು ಕಳೆದ ೪೦ ವರ್ಷಗಳಲ್ಲಿ ಅನಿರೀಕ್ಷಿತವಾಗಿ ಅವನತಿಗೀಡಾಗಿದೆ.[100] ಇದನ್ನು ಸೋಶಿಯಲ್ ಸಾಯನ್ಸ್ ಸಾಯ್ಟೇಶನ್ ಇಂಡೆಕ್ಸ್ನಲ್ಲಿ (ಎಸ್ಎಸ್ಸಿಆಯ್) ಹೆಚ್ಚು ಉನ್ನತ ಸ್ಥಾನ ಗಳಿಸಲು ಉಲ್ಲೇಖಗಳನ್ನು ಗರಿಷ್ಠೀಕರಿಸುವ ನಿಯತಕಾಲಿಕಗಳ ಉತ್ತೇಜನಗಳಿಗೆ ಆರೋಪಿಸಲಾಗಿದೆ.[101] ವ್ಯಾವಹಾರಿಕ ಅರ್ಥಶಾಸ್ತ್ರದಲ್ಲಿ, ರೇಖಾತ್ಮಕ ಕ್ರಮವಿಧಿಕರಣದ (ಲೀನಿಯರ್ ಪ್ರೋಗ್ರ್ಯಾಮಿಂಗ್) ವಿಧಾನಗಳನ್ನು ಉಪಯೋಗಿಸುವ ಹೂಡುವಳಿ-ಹುಟ್ಟುವಳಿ ವಿನ್ಯಾಸಗಳು (ಇನ್ಪುಟ್-ಔಟ್ಪುಟ್ ಮಾಡಲ್) ಹೆಚ್ಚುಕಡಮೆ ಸಾಮಾನ್ಯವಾಗಿವೆ. ನಿಶ್ಚಿತ ಕಾರ್ಯನೀತಿಗಳ ಪ್ರಭಾವವನ್ನು ವಿಶ್ಲೇಷಿಸಲು ದತ್ತಾಂಶಗಳ ಭಾರಿ ಪರಿಮಾಣಗಳನ್ನು ಗಣಕಯಂತ್ರ ಕ್ರಮವಿಧಿಗಳ ಮುಖಾಂತರ ನಡೆಸಲಾಗುತ್ತದೆ; ಇಂಪ್ಲ್ಯಾನ್ ಒಂದು ಪ್ರಸಿದ್ಧ ಉದಾಹರಣೆಯಾಗಿದೆ. ಪ್ರಾಯೋಗಿಕ ಅರ್ಥಶಾಸ್ತ್ರವು (ಇಕ್ಸ್ಪೆರೆಮೆಂಟಲ್ ಎಕನಾಮಿಕ್ಸ್) ವೈಜ್ಞಾನಿಕವಾಗಿ ನಿಯಂತ್ರಿತ ಪ್ರಯೋಗಗಳ ಬಳಕೆಯನ್ನು ಪ್ರೋತ್ಸಾಹಿಸಿದೆ. ಇದು ದೀರ್ಘಕಾಲದಿಂದ ಗಮನಿಸಲಾದ ಪ್ರಕೃತಿ ವಿಜ್ಞಾನಗಳಿಂದ ಅರ್ಥಶಾಸ್ತ್ರದ ಭಿನ್ನತೆಯನ್ನು ಕಡಿಮೆ ಮಾಡಿತು ಮತ್ತು ಪೂರ್ವದಲ್ಲಿ ಸಿದ್ಧ ನಿಯಮಗಳೆಂದು ಭಾವಿಸಲಾದವುಗಳ ಪ್ರತ್ಯಕ್ಷ ಪ್ರಯೋಗಗಳಿಗೆ ಆಸ್ಪದನೀಡಿತು.[102][103] ಕೆಲವು ಸಂದರ್ಭಗಳಲ್ಲಿ ಆಧಾರ ಸೂತ್ರಗಳು ಸಂಪೂರ್ಣವಾಗಿ ಸರಿಯಲ್ಲವೆಂದು ಕಂಡುಕೊಳ್ಳಲಾಗಿದೆ; ಉದಾಹರಣೆಗೆ, ದೃಢನಿಲುವಿನ ಬೇಡಿಕೆಯ ಕೌಶಲಯುತ ಸಂವಹನವು (ಅಲ್ಟಮೇಟಮ್ ಗೇಮ್) ಜನರು ಸಮಾನತೆಯಿಲ್ಲದ ಪ್ರಸ್ತಾಪಗಳನ್ನು ತಿರಸ್ಕರಿಸುತ್ತಾರೆಂದು ಬಹಿರಂಗಪಡಿಸಿದೆ. ವರ್ತನಾ ಸಂಬಂಧಿತ ಅರ್ಥಶಾಸ್ತ್ರದಲ್ಲಿ (ಬಿಹೇವಿಯರಲ್ ಎಕನಾಮಿಕ್ಸ್), ಮನಃಶಾಸ್ತ್ರಜ್ಞರಾದ ಡ್ಯಾನಿಯಲ್ ಕಾನಮನ್ ಮತ್ತು ಏಮಸ್ ಟವರ್ಸ್ಕಿ ತಮ್ಮ ಹಲವು ಅರಿವಿನ ಪೂರ್ವಗ್ರಹಗಳು (ಕಾಗ್ನಿಟಿವ್ ಬಾಯಸ್) ಮತ್ತು ಶೋಧನಾ ಸಹಾಯಕ ವಿಧಾನಗಳ (ಹ್ಯೂರಿಸ್ಟಿಕ್) ಪ್ರಾಯೋಗಿಕ ಪರಿಶೋಧನೆಗೆ ಅರ್ಥಶಾಸ್ತ್ರದಲ್ಲಿ ನೋಬೆಲ್ ಪಾರಿತೋಷಕ ಪಡೆದಿದ್ದಾರೆ. ಸಮಾನ ರೂಪದ ಪ್ರಾಯೋಗಿಕ ಪರೀಕ್ಷಾ ಕಾರ್ಯ ನರ ಅರ್ಥಶಾಸ್ತ್ರದಲ್ಲಿ (ನ್ಯೂರೋಎಕನಾಮಿಕ್ಸ್) ಸಂಭವಿಸುತ್ತದೆ. ಸ್ವಾರ್ಥಪ್ರೇರಿತ, ಪರಹಿತ ಚಿಂತನೆಯ, ಮತ್ತು ಸಹಕಾರಿ ಇಷ್ಟಗಳನ್ನು ಪರೀಕ್ಷಿಸುವ ಒಂದು ಮಾದರಿಗೆ ಪ್ರತಿಯಾಗಿ ಸಂಕುಚಿತವಾಗಿ ಸ್ವಾರ್ಥಪ್ರೇರಿತ ಇಷ್ಟಗಳ ಪೂರ್ವಾನುಮಾನವು ಇನ್ನೊಂದು ಉದಾಹರಣೆಯಾಗಿದೆ.[104][105] ಈ ಕಾರ್ಯವಿಧಾನಗಳಿಂದಾಗಿ ಅರ್ಥಶಾಸ್ತ್ರವು ಒಂದು "ನೈಜ ವಿಜ್ಞಾನ"ವೆಂದು ಕೆಲವರು ವಾದಿಸುತ್ತಾರೆ.[7]
ಕೌಶಲಯುತ ಸಂವಹನ ಸಿದ್ಧಾಂತವು ಕಾರಣಾಂಶಗಳ ನಡುವಣ ಕೌಶಲಯುತ ಸಂವಹನಗಳನ್ನು ಅಧ್ಯಯನಮಾಡುವ ವ್ಯಾವಹಾರಿಕ ಗಣಿತಶಾಸ್ತ್ರದ ಒಂದು ಶಾಖೆ. ಕೌಶಲಯುತ ಆಟಗಳಲ್ಲಿ (ಸ್ಟ್ರಟೀಜಿಕ್ ಗೇಮ್), ಇತರ ಕಾರಣಾಂಶಗಳು ಆಯ್ಕೆಮಾಡುವ ತಂತ್ರಗಳು ನಿರ್ಧಾರಿತವಾಗಿದ್ದರೆ, ಕಾರಣಾಂಶಗಳು ತಮ್ಮ ಅಂತಿಮ ಸಂದಾಯವನ್ನು (ಪೇಆಫ಼್) ಗರಿಷ್ಠೀಕರಿಸುವ ತಂತ್ರಗಳನ್ನು ಆಯ್ಕೆಮಾಡುತ್ತವೆ. ಅದು, ನಿರ್ಣಯ ಕರ್ತೃಗಳು ಇತರ ಕಾರ್ಯಭಾರಿಗಳೊಂದಿಗೆ ಪ್ರತಿಕ್ರಿಯಿಸುವಂಥ ಸಾಮಾಜಿಕ ಸನ್ನಿವೇಶಗಳಿಗೆ ಒಂದು ವಿಧ್ಯುಕ್ತ ರಚನಾ ಪ್ರಕ್ರಿಯೆಯ ಕಾರ್ಯವಿಧಾನವನ್ನು ಒದಗಿಸುತ್ತದೆ. ಕೌಶಲಯುತ ಸಂವಹನ ಸಿದ್ಧಾಂತವು, ಪೂರೈಕೆ ಮತ್ತು ಬೇಡಿಕೆ ವಿನ್ಯಾಸದಂತಹ, ಮಾರುಕಟ್ಟೆಗಳನ್ನು ವಿಶ್ಲೇಷಿಸಲು ಅಭಿವೃದ್ಧಿಗೊಳಿಸಲಾದ ಗರಿಷ್ಠೀಕರಣ ವಿಧಾನಗಳನ್ನು ಸಾಮಾನ್ಯೀಕರಿಸುತ್ತದೆ. ಈ ಕಾರ್ಯಕ್ಷೇತ್ರವು ಜಾನ್ ವಾನ್ ನೊಯ್ಮನ್ ಮತ್ತು ಆಸ್ಕರ್ ಮೋರ್ಗನ್ಸ್ಟರ್ನ್ರ ೧೯೪೪ರ ಶ್ರೇಷ್ಠಗ್ರಂಥ ಥೀಯರಿ ಆಫ಼್ ಗೇಮ್ಸ್ ಅಂಡ್ ಎಕನಾಮಿಕ್ ಬಿಹೇವಿಯರ್ ಕಾಲದಿಂದ ಆರಂಭವಾಗಿದೆ. ಅದು ಪರಮಾಣು ತಂತ್ರಗಳ (ನ್ಯೂಕ್ಲಿಯರ್ ಸ್ಟ್ರ್ಯಾಟಿಜಿ) ಸೂತ್ರಿಕರಣ, ನೀತಿ ತತ್ವಗಳು, ರಾಜನೀತಿ ವಿಜ್ಞಾನ, ಮತ್ತು ವಿಕಾಸವಾದಿ ಸಿದ್ಧಾಂತವನ್ನು ಒಳಗೊಂಡಂತೆ, ಸಾಮಾನ್ಯವಾಗಿ ಅರ್ಥೈಸಲಾದ ಅರ್ಥಶಾಸ್ತ್ರದ ಹೊರಗಡೆಯ ಹಲವು ಕ್ಷೇತ್ರಗಳಲ್ಲಿ ಮಹತ್ವವುಳ್ಳ ಉಪಯೋಗಗಳನ್ನು ಗಳಿಸಿಕೊಂಡಿದೆ.[106]
ಅರ್ಥಶಾಸ್ತ್ರವು ಹಲವು ವಿಜ್ಞಾನಗಳೊಳಗೆ ಒಂದು ಸಮಾಜ ವಿಜ್ಞಾನ ಮತ್ತು ಆರ್ಥಿಕ ಭೂಗೋಳ (ಎಕನಾಮಿಕ್ ಜಿಯಾಗ್ರಫ಼ಿ), ಆರ್ಥಿಕ ಇತಿಹಾಸ (ಎಕನಾಮಿಕ್ ಹಿಸ್ಟರಿ), ಸಾರ್ವಜನಿಕ ಆಯ್ಕೆ, ಶಕ್ತಿ ಅರ್ಥಶಾಸ್ತ್ರ (ಎನರ್ಜಿ ಎಕನಾಮಿಕ್ಸ್), ಸಾಂಸ್ಕೃತಿಕ ಅರ್ಥಶಾಸ್ತ್ರ, ಮತ್ತು ಸಾಂಸ್ಥಾನಿಕ ಅರ್ಥಶಾಸ್ತ್ರದ ಸಹಿತ, ಇತರ ಕ್ಷೇತ್ರಗಳ ಅಂಚಿನಲ್ಲಿರುವ ಕಾರ್ಯಕ್ಷೇತ್ರಗಳನ್ನು ಹೊಂದಿದೆ. ಕಾನೂನು ಮತ್ತು ಅರ್ಥಶಾಸ್ತ್ರ, ಅಥವಾ ಕಾನೂನಿನ ಆರ್ಥಿಕ ವಿಶ್ಲೇಷಣೆ, ಕಾನೂನಿಗೆ ಅರ್ಥಶಾಸ್ತ್ರದ ವಿಧಾನಗಳನ್ನು ಪ್ರಯೋಗಿಸುವ ಕಾನೂನು ಸಿದ್ಧಾಂತದ ಒಂದು ಕಾರ್ಯವಿಧಾನ. ಅದು ಕಾನೂನುಬದ್ಧ ನಿಬಂಧನೆಗಳ ಪ್ರಭಾವಗಳನ್ನು ವಿವರಿಸಲು, ಯಾವ ಕಾನೂನುಬದ್ಧ ನಿಬಂಧನೆಗಳು ಆರ್ಥಿಕವಾಗಿ ಫಲದಾಯಕವೆಂದು ವಿಮರ್ಶಿಸಲು, ಮತ್ತು ಕಾನೂನುಬದ್ಧ ನಿಬಂಧನೆಗಳು ಏನಾಗಿರುತ್ತವೆಂದು ಮುನ್ನುಡಿಯಲು ಆರ್ಥಿಕ ಪರಿಕಲ್ಪನೆಗಳ ಬಳಕೆಯನ್ನು ಒಳಗೊಂಡಿದೆ.[107][108] ೧೯೬೧ರಲ್ಲಿ ಪ್ರಕಟಿಸಲಾದ ರಾನಲ್ಡ್ ಕೋಸ್ರ ಒಂದು ಪ್ರಭಾವಶಾಲಿ ಲೇಖನವು ಸುಸ್ಪಷ್ಟ ಆಸ್ತಿ ಹಕ್ಕುಗಳು ಬಾಹ್ಯ ಪ್ರಭಾವಗಳ ಸಮಸ್ಯೆಗಳನ್ನು ಪರಿಹರಿಸಬಲ್ಲವೆಂದು ಸೂಚಿಸಿತು.[109] ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರದ ನಡುವಿನ ಸಂಬಂಧ ಸಂಕೀರ್ಣವಾಗಿದೆ. ಅನೇಕ ಅರ್ಥಶಾಸ್ತ್ರಜ್ಞರು, ಯಾವ ಅಗತ್ಯಗಳು ಅಥವಾ ಬೇಕುಗಳು, ಅಥವಾ ಸಮಾಜಕ್ಕೆ ಏನು ಒಳ್ಳೆಯದಾಗಿದೆ ಎಂಬಂತಹ ಗುಣಮಟ್ಟ ಸಂಬಂಧಿತ ಆಯ್ಕೆಗಳು ಮತ್ತು ಮೌಲ್ಯ ಅಭಿಪ್ರಾಯಗಳನ್ನು ಅರ್ಥಶಾಸ್ತ್ರದ ವ್ಯಾಪ್ತಿಯ ಹೊರಗಿನ ರಾಜಕೀಯ ಅಥವಾ ವೈಯಕ್ತಿಕ ಪ್ರಶ್ನೆಗಳೆಂದು ಪರಿಗಣಿಸುತ್ತಾರೆ. ಒಮ್ಮೆ ಒಬ್ಬ ವ್ಯಕ್ತಿ ಅಥವಾ ಸರ್ಕಾರವು ಗುರಿಗಳ ಒಂದು ವರ್ಗವನ್ನು ದೃಢಪಡಿಸಿದ ಮೇಲೆ, ಅರ್ಥಶಾಸ್ತ್ರವು ಅತ್ಯುತ್ತಮ ಮಟ್ಟದಲ್ಲಿ ಅವುಗಳನ್ನು ಹೇಗೆ ಸಾಧಿಸಬಹುದೆಂದು ಒಳನೋಟವನ್ನು ಒದಗಿಸಬಲ್ಲದು. ಇತರರು ಆರ್ಥಿಕ ವಿಚಾರಗಳ ಪ್ರಭಾವವು, ಆಧುನಿಕ ಬಂಡವಾಳಶಾಹಿಗೆ ಆಧಾರವಾದಂಥ, ಅವರು ಒಪ್ಪಬಹುದಾದಂಥ ಅಥವಾ ಒಪ್ಪದಿರುವಂಥ, ತಾತ್ವಿಕ ನಂಬಿಕೆಗಳ ಒಂದು ನಿಶ್ಚಿತ ಪದ್ಧತಿಯನ್ನು ಪ್ರೋತ್ಸಾಹಿಸುವಂತೆ ಕಾಣುತ್ತಾರೆ. (ಉದಾಹರಣೆಗೆ, ಗಿರಾಕಿ ಹಿತರಕ್ಷಣೆ ಮತ್ತು ಕೊಳ್ಳದಿರುವಿಕೆ ದಿನ "ಬಾಯ್ ನಥಿಂಗ್ ಡೇ" ನೋಡಿ.) ಕೆಲವು ಚಿಂತಕರ ಪ್ರಕಾರ, ಅರ್ಥಶಾಸ್ತ್ರದ ಒಂದು ಸಿದ್ಧಾಂತವು ನೈತಿಕತಾ ವಾದದ (ಮಾರಲ್ ರೀಸ಼ನಿಂಗ್) ಒಂದು ಸಿದ್ಧಾಂತ ಸಹ ಆಗಿದೆ, ಅಥವಾ ಪರೋಕ್ಷವಾಗಿ ಅದನ್ನೂ ಸೂಚಿಸುತ್ತದೆ.[110] ಖರೀದಿ ನಿರ್ಧಾರಗಳನ್ನು ಮಾಡುವಾಗ, ಹಣಕಾಸು ಮತ್ತು ಸಾಂಪ್ರದಾಯಿಕ ಆರ್ಥಿಕ ವಿಚಾರಗಳ ಜೊತೆಗೆ, ನೈತಿಕ ಮತ್ತು ಪಾರಿಸರಿಕ ಕಳವಳಗಳನ್ನು ಒಬ್ಬರು ಲೆಕ್ಕಕ್ಕೆ ತೆಗೆದುಕೊಳ್ಳಬೇಕೆಂಬುದು ನೈತಿಕ ಗಿರಾಕಿ ಹಿತರಕ್ಷಣೆಯ (ಎಥಿಕಲ್ ಕನ್ಸೂಮರಿಸ಼ಮ್) ಆಧಾರವಾಕ್ಯವಾಗಿದೆ. ಇನ್ನೊಂದೆಡೆ, ಸಾರ್ವಜನಿಕ ಯೋಗಕ್ಷೇಮ ಮತ್ತು ಸುರಕ್ಷಿತತೆಗೆ ಸಂಬಂಧಪಟ್ಟಂತೆ ಪರಿಮಿತವಾದ ಸಂಪನ್ಮೂಲಗಳ ವಿವೇಚನೆಯಿಂದ ಕೂಡಿದ ವಿಂಗಡಣೆ ಸಹ ಅರ್ಥಶಾಸ್ತ್ರದ ಒಂದು ಕ್ಷೇತ್ರವಾಗಿದೆ. ಆರೋಗ್ಯ ಮತ್ತು ಸುರಕ್ಷಿತತೆ, ಪರಿಸರ, ನ್ಯಾಯ, ಅಥವಾ ಆಪತ್ತು ನೆರವುಗಳಂಥ ಧ್ಯೇಯಗಳಿಗೆ ಸಂಬಂಧಪಟ್ಟಂತೆ ಸಂಪನ್ಮೂಲಗಳನ್ನು ವಿಂಗಡಿಸಲು ಅತ್ಯುತ್ತಮ ವಿಧಾನಗಳನ್ನು ಅಧ್ಯಯನಮಾಡದಿರುವುದು ಒಂದು ಬಗೆಯ ಉದ್ದೇಶಪೂರ್ವಕ ಅಜ್ಞಾನವೆಂದು ಕೆಲವರು ಸೂಚಿಸಿದ್ದಾರೆ ಮತ್ತು ಇದರಿಂದ ಕಡಮೆ ಸಾರ್ವಜನಿಕ ಯೋಗಕ್ಷೇಮ ಅಥವಾ ಇನ್ನೂ ಹೆಚ್ಚಿದ ಬಾಧೆ ಉಂಟಾಗುತ್ತದೆ.[111] ಈ ಅರ್ಥದಲ್ಲಿ, ಅಂತಹ ವಿಷಯಗಳ ಆರ್ಥಿಕ ಅಂಶಗಳನ್ನು ವಿಮರ್ಶಿಸದಿರುವುದು ಅನೈತಿಕವಾಗುತ್ತದೆ. ವಾಸ್ತವವಾಗಿ, ಅಮೇರಿಕದಲ್ಲಿನ ಸಂಘೀಯ ಸಂಸ್ಥೆಗಳನ್ನು ಒಳಗೊಂಡಂತೆ, ವಿಶ್ವದೆಲ್ಲೆಡೆಯೂ ರಾಜ್ಯಾಡಳಿತ ಸಂಸ್ಥೆಗಳು, ಸಾಮಾನ್ಯವಾಗಿ ಆ ದಿಕ್ಕಿನಲ್ಲಿ ಆರ್ಥಿಕ ವಿಶ್ಲೇಷಣಾ ಅಧ್ಯಯನಗಳನ್ನು ನಿರ್ವಹಿಸುತ್ತವೆ. ಉಷ್ಣ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಶಕ್ತಿ ಅರ್ಥಶಾಸ್ತ್ರವು, ಸಮಾಜಗಳಲ್ಲಿ ಶಕ್ತಿಯ ಪೂರೈಕೆ ಮತ್ತು ಬಳಕೆಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿರುವ ಒಂದು ವಿಶಾಲವಾದ ವೈಜ್ಞಾನಿಕ ವಿಷಯಕ್ಷೇತ್ರವಾಗಿದೆ. ಉಷ್ಣ ಅರ್ಥಶಾಸ್ತ್ರಜ್ಞರು, ಆರ್ಥಿಕ ವ್ಯವಸ್ಥೆಗಳು ಎಲ್ಲ ಸಂದರ್ಭಗಳಲ್ಲೂ ಭೌತವಸ್ತು, ಶಕ್ತಿ, ಯಾದೃಚ್ಛಿಕತಾ ಮಾನ (ಎಂಟ್ರಪಿ), ಮತ್ತು ಮಾಹಿತಿಗಳನ್ನು ಒಳಗೊಳ್ಳುತ್ತವೆಂದು ವಾದಿಸುತ್ತಾರೆ.[112] ಉಷ್ಣ ಅರ್ಥಶಾಸ್ತ್ರವು ಜೀವವಿಜ್ಞಾನದ ವಿಕಾಸದಲ್ಲಿ ಶಕ್ತಿಯ ಪಾತ್ರವನ್ನು ಉಷ್ಣಗತಿ ಶಾಸ್ತ್ರದ ಎರಡನೆಯ ಸೂತ್ರದ ಮುಖಾಂತರ ವ್ಯಾಖ್ಯಾನಿಸಬೇಕು ಮತ್ತು ತಿಳಿದುಕೊಳ್ಳಬೇಕೆಂಬ ಪ್ರತಿಪಾದನೆಯನ್ನು ಆಧರಿಸಿದೆ ಆದರೆ ಉತ್ಪಾದಕತೆ, ಫಲದಾಯಕತೆ, ಮತ್ತು ಪ್ರಮುಖವಾಗಿ ಜೀವರಾಶಿ ಬೆಳೆಸಲು ಮತ್ತು ಕೆಲಸ ಮಾಡಲು ಲಭ್ಯವಾದ ಶಕ್ತಿಯನ್ನು ಸೆರೆಹಿಡಿಯಲು ಮತ್ತು ಬಳಸಲು ವಿವಿಧ ಕಾರ್ಯವಿಧಾನಗಳ ಬೆಲೆಗಳು ಹಾಗೂ ಲಾಭಗಳಂಥ ಆರ್ಥಿಕ ಮಾನದಂಡಗಳ ವಿಷಯಗಳಿಗೆ ಸಂಬಂಧಿಸಿದಂತೆ ಮಾತ್ರ.[113][114] ಪರಿಣಾಮವಾಗಿ, ಉಷ್ಣ ಅರ್ಥಶಾಸ್ತ್ರವನ್ನು ಹಲವುವೇಳೆ ಜೀವಿ ಪರಿಸ್ಥಿತಿ ವಿಜ್ಞಾನದ ಅರ್ಥಶಾಸ್ತ್ರದ ಕಾರ್ಯಕ್ಷೇತ್ರದಲ್ಲಿ ಚರ್ಚಿಸಲಾಗುತ್ತದೆ, ಮತ್ತು ಅದು ಸ್ವತಃ ನಿರಂತರತೆ (ಸಸ್ಟೇಯ್ನಬಿಲಿಟಿ) ಹಾಗೂ ಚಿರಸ್ಥಾಯೀ ಅಭಿವೃದ್ಧಿಯ (ಸಸ್ಟೇಯ್ನಬಲ್ ಡಿವೆಲಪ್ಮಂಟ್) ಕಾರ್ಯಕ್ಷೇತ್ರಗಳಿಗೆ ಸಂಬಂಧಿಸಿದೆ. ಜಾರ್ಜೆಸ್ಕು-ರೋಜೆನ್ ಉಷ್ಣಗತಿ ಶಾಸ್ತ್ರದಿಂದ ಯಾದೃಚ್ಛಿಕತಾ ಮಾನದ ಪರಿಕಲ್ಪನೆಯನ್ನು ಅರ್ಥಶಾಸ್ತ್ರದಲ್ಲಿ ಮರುಪರಿಚಯಿಸಿದರು (ನ್ಯೂಟನ್ ಸಂಬಂಧಿತ ಭೌತವಿಜ್ಞಾನದಿಂದ ಬಂದ ನವಶಾಸ್ತ್ರೀಯ ಅರ್ಥಶಾಸ್ತ್ರದ ಯಾಂತ್ರಿಕ ಮೂಲತತ್ವದಿಂದ ಬೇರೆಯಾದ) ಮತ್ತು ನಂತರ ವಿಕಾಸವಾದಿ ಅರ್ಥಶಾಸ್ತ್ರ ಬೆಳೆಯಲು ಕಾರಣವಾದ ಪ್ರಾರಂಭಿಕ ವ್ಯಾಸಂಗವನ್ನು ಮಾಡಿದರು. ಅವರ ವ್ಯಾಸಂಗವು ಪ್ರಮುಖವಾಗಿ ಜೀವ ಅರ್ಥಶಾಸ್ತ್ರ (ಬಾಯೋಎಕನಾಮಿಕ್ಸ್) ಮತ್ತು ಜೀವಿ ಪರಿಸ್ಥಿತಿ ವಿಜ್ಞಾನದ ಅರ್ಥಶಾಸ್ತ್ರಕ್ಕೆ ಸಹಾಯ ಮಾಡಿತು.[115][116][117][118][119] ಕ್ರಿಯೆಯ ವಾಸ್ತವಿಕ ಸಾಮರ್ಥ್ಯದ ಮಾನದ (ಎಕ್ಸರ್ಜಿ) ವಿಶ್ಲೇಷಣೆಯನ್ನು ಔದ್ಯೋಗಿಕ ಪರಿಸರ ವಿಜ್ಞಾನದ (ಇಂಡಸ್ಟ್ರಿಯಲ್ ಇಕಾಲಜಿ) ಕಾರ್ಯಕ್ಷೇತ್ರದಲ್ಲಿ ಶಕ್ತಿಯನ್ನು ಇನ್ನಷ್ಟು ಸಮರ್ಥವಾಗಿ ಬಳಸಲು ನಡೆಸಲಾಗುತ್ತದೆ.[120] ಕ್ರಿಯೆಯ ವಾಸ್ತವಿಕ ಸಾಮರ್ಥ್ಯದ ಮಾನ ಪದವು ಜ಼ಾರಾನ್ ರ್ಯಾಂಟ್ರಿಂದ ೧೯೫೬ರಲ್ಲಿ ಸೃಷ್ಟಿಸಲ್ಪಟ್ಟಿತು, ಆದರೆ ಅದರ ಪರಿಕಲ್ಪನೆಯು ಜೇ. ವಿಲರ್ಡ್ ಗಿಬ್ಸ್ರಿಂದ ವಿಕಸಿಸಲ್ಪಟ್ಟಿತು. ಇತ್ತೀಚಿನ ದಶಕಗಳಲ್ಲಿ, ಕ್ರಿಯೆಯ ವಾಸ್ತವಿಕ ಸಾಮರ್ಥ್ಯದ ಮಾನದ ಉಪಯೋಗ ಭೌತವಿಜ್ಞಾನ ಮತ್ತು ಯಂತ್ರ ವಿಜ್ಞಾನದ ಹೊರಗಡೆ, ಔದ್ಯೋಗಿಕ ಪರಿಸರ ವಿಜ್ಞಾನ, ಜೀವಿ ಪರಿಸ್ಥಿತಿ ವಿಜ್ಞಾನದ ಅರ್ಥಶಾಸ್ತ್ರ, ಮಂಡಲ ಪರಿಸರ ವಿಜ್ಞಾನ (ಸಿಸ್ಟಮ್ಸ್ ಇಕಾಲಜಿ), ಮತ್ತು ಶಕ್ತಿ ವಿಜ್ಞಾನಗಳ (ಎನರ್ಜೆಟಿಕ್ಸ್) ಕಾರ್ಯಕ್ಷೇತ್ರಗಳಿಗೆ ವಿಸ್ತರಿಸಿದೆ.
ನಿರುತ್ಸಾಹದ ವಿಜ್ಞಾನವು (ಡಿಸ಼್ಮಲ್ ಸಾಯನ್ಸ್) ಅರ್ಥಶಾಸ್ತ್ರಕ್ಕೆ ರಾಣಿ ವಿಕ್ಟೋರಿಯಾಳ ಕಾಲದ ಇತಿಹಾಸಕಾರ ಥಾಮಸ್ ಕಾರ್ಲಾಯ್ಲ್ರಿಂದ ೧೯ನೇ ಶತಮಾನದಲ್ಲಿ ಸೃಷ್ಟಿಸಲಾದ ಒಂದು ಅವಹೇಳನಾತ್ಮಕ ಪರ್ಯಾಯವಾದ ಹೆಸರು. ಅರ್ಥಶಾಸ್ತ್ರಕ್ಕೆ "ನಿರುತ್ಸಾಹದ ವಿಜ್ಞಾನ"ವೆಂಬ ಪರಿಹಾಸದ ಹೆಸರನ್ನು, ಯೋಜಿತ ಜನಸಂಖ್ಯೆಯ ವೃದ್ಧಿಯು ಆಹಾರ ಪೂರೈಕೆಯ ಹೆಚ್ಚಳ ಪ್ರಮಾಣವನ್ನು ಮೀರಿದರೆ ಉಪವಾಸ ಉಂಟಾಗುತ್ತದೆಂದು ಕಠೋರವಾಗಿ ಮುನ್ನುಡಿದ, ೧೮ನೇ ಶತಮಾನದ ಕೊನೆಯಲ್ಲಿನ ಮಾನ್ಯ ಥಾಮಸ್ ರಾಬರ್ಟ್ ಮ್ಯಾಲ್ಥಸ್ರ ಬರಹಗಳಿಗೆ ಒಂದು ಪ್ರತಿಕ್ರಿಯೆಯಾಗಿ ಕಾರ್ಲಾಯ್ಲ್ ನೀಡಿದರೆಂದು ಆಗಾಗ ಹೇಳಲಾಗಿದೆ. ಮ್ಯಾಲ್ಥಸ್ರ ತತ್ವಬೋಧನೆಗಳು ಕೊನೆಯಲ್ಲಿ "ಮ್ಯಾಲ್ಥಸ್ರ ವಿಷಾದಕರ ಸೂತ್ರ"ವೆಂಬ (ಮ್ಯಾಲ್ಠಸ್' ಡಿಸ಼್ಮಲ್ ಥೀಯರಮ್) ಅನ್ವಯ ನುಡಿಗಟ್ಟಾಗಿ ಪರಿಚಿತವಾದವು. ಅವರ ಭವಿಷ್ಯವಾಣಿಗಳು ೨೦ನೇ ಶತಮಾನದಲ್ಲಿ ಆಹಾರ ಉತ್ಪಾದನೆಯಲ್ಲಿನ ಫಲದಾಯಕತೆಯ ಅನಿರೀಕ್ಷಿತ ಸುಧಾರಣೆಗಳಿಂದ ಭಗ್ನಗೊಂಡವು; ಆದರೂ, ಮಾನವನ ಹೊಸ ಕಲ್ಪನೆಗಳು ಜನಸಂಖ್ಯೆಯ ವೃದ್ಧಿಯೊಂದಿಗೆ ಸರಿಸಮವಾಗಿ ನಡೆಯಲು ವಿಫಲವಾಗುತ್ತವೆಂದು ಊಹಿಸಿದರೆ, ಅವರು ಸೂಚಿಸಿದ ನಿಸ್ತೇಜ ಅಂತ್ಯವು ಒಂದು ವಿವಾದಿತ ಭವಿಷ್ಯದ ಸಾಧ್ಯತೆಯಾಗಿ ಉಳಿದಿದೆ.[121] ಜಾನ್ ಸ್ಟೂಅರ್ಟ್ ಮಿಲ್ ಅಥವಾ ಲೇಯಾನ್ ವಾಲ್ವಾರಂತಹ ಕೆಲವು ಅರ್ಥಶಾಸ್ತ್ರಜ್ಞರು, ಸಂಪತ್ತಿನ ಉತ್ಪಾದನೆಯನ್ನು ಅದರ ವಿತರಣೆಗೆ ಸೀಮಿತಗೊಳಿಸಬಾರದೆಂದು ಸಮರ್ಥಿಸಿದ್ದಾರೆ. ಇವರಲ್ಲಿ ಮೊದಲಿನವರು "ವ್ಯಾವಹಾರಿಕ ಅರ್ಥಶಾಸ್ತ್ರ"ದ ಕಾರ್ಯಕ್ಷೇತ್ರದಲ್ಲಿದ್ದಾರೆ ಮತ್ತು ಎರಡನೆಯವರು "ಸಾಮಾಜಿಕ ಅರ್ಥಶಾಸ್ತ್ರ"ಕ್ಕೆ ಸೇರಿದ್ದಾರೆ ಮತ್ತು ಇದು ಬಹುಮಟ್ಟಿಗೆ ಅಧಿಕಾರ ಮತ್ತು ರಾಜಕಾರಣದ ಒಂದು ವಿಷಯ.[122] ದ ವೆಲ್ತ್ ಆಫ಼್ ನೇಷನ್ಸ್ನಲ್ಲಿ, ಆಡಮ್ ಸ್ಮಿತ್ ಈಗಲೂ ಚರ್ಚೆ ಮತ್ತು ವಿವಾದದ ವಸ್ತುವಾಗಿರುವ ಅನೇಕ ವಿಷಯಗಳ ಮೇಲೆ ಕೇಂದ್ರಿಕರಿಸಿದರು. ತಮ್ಮ ಆದೇಶಗಳಿಗೆ ವಿಧೇಯವಾಗಿರಲು ಒಂದು ಸರ್ಕಾರವನ್ನು ಸ್ವಾಧೀನ ಮಾಡಿಕೊಳ್ಳಲು ತಮ್ಮ ಸಾಮೂಹಿಕ ಪ್ರಭಾವವನ್ನು ಬಳಸಲು ಪ್ರಯತ್ನಿಸುವ ರಾಜಕೀಯವಾಗಿ ಹೊಂದಾಣಿಕೆಯಿರುವ ವ್ಯಕ್ತಿಗಳ ಗುಂಪುಗಳನ್ನು ಸ್ಮಿತ್ ಮತ್ತೆ ಮತ್ತೆ ಟೀಕಿಸಿದರು. ಸ್ಮಿತ್ರ ದಿನದಲ್ಲಿ, ಇವನ್ನು ಒಳಗುಂಪುಗಳೆಂದು ನಿರ್ದೇಶಿಸಲಾಗುತ್ತಿತ್ತು, ಆದರೆ ಈಗ ಹೆಚ್ಚು ಸಾಮಾನ್ಯವಾಗಿ ವಿಶೇಷ ಹಿತಾಸಕ್ತಿಗಳೆಂದು ಕರೆಯಲಾಗುತ್ತದೆ, ಮತ್ತು ಇದು ಅಂತರರಾಷ್ಟ್ರೀಯ ಬ್ಯಾಂಕರುಗಳು, ಸಂಸ್ಥೆಯ ವಾಣಿಜ್ಯಕೂಟಗಳು, ಸಂಪೂರ್ಣ ಅಲ್ಪಾಧಿಕಾರಗಳು, ಏಕಸ್ವಾಮ್ಯತೆಗಳು, ಕಾರ್ಮಿಕರ ಸಂಘಗಳು ಹಾಗೂ ಇತರ ಗುಂಪುಗಳನ್ನು ಒಳಗೊಳ್ಳಬಲ್ಲ ಒಂದು ಪದವಾಗಿದೆ.[123] ಒಂದು ಸಮಾಜ ವಿಜ್ಞಾನವಾಗಿ ಅರ್ಥಶಾಸ್ತ್ರವು ವಸ್ತುತಃ, ಯಾವುದೇ ಸರ್ಕಾರದ ಅಥವಾ ಇತರ ನಿರ್ಧಾರಕರ್ತೃ ಸಂಸ್ಥೆಯ ರಾಜಕೀಯ ನಿಯಮಗಳ ಮೇಲೆ ನಿಲ್ಲುವುದಿಲ್ಲ, ಆದಾಗ್ಯೂ, ಅನೇಕ ಕಾರ್ಯನೀತಿಕಾರರು ಅಥವಾ ಇತರ ಜನರ ಜೀವನದ ಮೇಲೆ ಪ್ರಭಾವ ಬೀರಬಲ್ಲ ಉನ್ನತವಾದ ಪದವಿಯ ಸ್ಥಾನಗಳನ್ನು ಹೊಂದಿರುವ ವ್ಯಕ್ತಿಗಳು, ಕಾರ್ಯಸೂಚಿಗಳು ಹಾಗೂ ಮೌಲ್ಯ ವ್ಯವಸ್ಥೆಗಳನ್ನು (ವ್ಯಾಲ್ಯು ಸಿಸ್ಟಮ್) ಸಮರ್ಥಿಸಲು ಸಾಧನವಾಗಿ ಆರ್ಥಿಕ ಸಿದ್ಧಾಂತದ ಪರಿಕಲ್ಪನೆಗಳು ಮತ್ತು ಭಾಷಣಕಲೆಯ ಯಥೇಷ್ಟ ಪ್ರಮಾಣವನ್ನು ನಿರಂಕುಶವಾಗಿ ಬಳಸುತ್ತಾರೆಂದು ತಿಳಿದುಬಂದಿದೆ, ಮತ್ತು ತಮ್ಮ ಹೇಳಿಕೆಗಳನ್ನು ತಮ್ಮ ಜವಾಬ್ದಾರಿಗಳಿಗೆ ಸಂಬದ್ಧವಾದ ವಿಷಯಗಳಿಗೆ ಸೀಮಿತಗೊಳಿಸುವುದಿಲ್ಲ.[124] ರಾಜಕಾರಣದೊಂದಿಗೆ ಆರ್ಥಿಕ ಸಿದ್ಧಾಂತ ಮತ್ತು ಆಚರಣೆಯ ನಿಕಟ ಸಂಬಂಧವು[125] ಅರ್ಥಶಾಸ್ತ್ರದ ಅತ್ಯಂತ ನಿರಾಡಂಬರದ ಸ್ವಂತಿಕೆಯುಳ್ಳ ತತ್ವಗಳನ್ನು ಮರೆಮಾಡಬಹುದಾದ ಅಥವಾ ತಿರುಚಬಹುದಾದ ವಾದವಿವಾದದ ಒಂದು ಕೇಂದ್ರಬಿಂದುವಾಗಿದೆ, ಮತ್ತು ಇದನ್ನು ಆಗಾಗ ನಿರ್ದಿಷ್ಟ ಸಾಮಾಜಿಕ ಕಾರ್ಯಸೂಚಿಗಳು ಮತ್ತು ಮೌಲ್ಯ ವ್ಯವಸ್ಥೆಗಳೆಂದು ಭ್ರಮಿಸಲಾಗಿದೆ.[126] ಸ್ಟೆಡಿ ಸ್ಟೇಟ್ ಎಕನಾಮಿಕ್ಸ್ ೧೯೭೭ರಲ್ಲಿ, ಹರ್ಮನ್ ಡೇಲಿ ಆರ್ಥಿಕ ಪ್ರಗತಿಯ ಮೇಲೆ ಇರಿಸಲಾದ ಮಹತ್ವ ಮತ್ತು ನಮ್ಮ ಎದುರಿಗಿರುವ ಶಕ್ತಿ ಹಾಗೂ ಪಾರಿಸರಿಕ ವಾಸ್ತವತೆಗಳ ನಡುವಣ ತಾರ್ಕಿಕ ಅಸಮಂಜಸತೆಗಳನ್ನು ತೋರಿಸುತ್ತಾರೆ.[127] ಫ಼್ರೆಡ್ರಿಕ್ ಸಾಡಿಯವರಂತೆ, ಉಷ್ಣಗತಿ ಶಾಸ್ತ್ರದ ಮೂಲತತ್ವಗಳ ಬದಲು ಹಣಕಾಸು ಚಲನೆಗಳೊಂದಿಗೆ ನಮ್ಮ ಪೂರ್ವಭೋಗವು ತಾಂತ್ರಿಕ ಪ್ರಗತಿಯು ಅಪರಿಮಿತವಾಗಿದೆಯೆಂದು, ಮತ್ತು ನಿರಂತರ ಆರ್ಥಿಕ ಪ್ರಗತಿಯು ಕೇವಲ ಭೌತಿಕವಾಗಿ ಸಾಧ್ಯವಲ್ಲದೇ, ಸದ್ಧರ್ಮವಾಗಿ ಹಾಗೂ ನೈತಿಕವಾಗಿ ಅಪೇಕ್ಷಣೀಯವೆಂದು ನಮ್ಮನ್ನು ನಂಬಿಸಿ ದಾರಿತಪ್ಪಿಸುತ್ತದೆಂದು ಡೇಲಿ ವಾದಿಸಿದರು. ವೆಲ್ತ್, ವರ್ಚುಅಲ್ ವೆಲ್ತ್ ಅಂಡ್ ಡೆಟ್ನಲ್ಲಿ, (ಜ್ಯಾರ್ಜ್ ಆಲನ್ ಮತ್ತು ಅನ್ವಿನ್ ೧೯೨೬), ಫ಼್ರೆಡ್ರಿಕ್ ಸಾಡಿ ತಮ್ಮ ಗಮನವನ್ನು ಆರ್ಥಿಕ ವ್ಯವಸ್ಥೆಗಳಲ್ಲಿ ಶಕ್ತಿಯ ಪಾತ್ರದತ್ತ ತಿರುಗಿಸಿದರು. ಅರ್ಥಶಾಸ್ತ್ರದಲ್ಲಿ ಹಣಕಾಸು ಚಲನೆಗಳ ಮೇಲಿನ ಪ್ರಾಧಾನ್ಯವನ್ನು ಅವರು ಟೀಕಿಸಿದರು, ಮತ್ತು ಮೂಲದ್ರವ್ಯಗಳನ್ನು ಭೌತಿಕ ಸರಕುಗಳು ಹಾಗೂ ಸೇವೆಗಳಾಗಿ ಪರಿವರ್ತಿಸಲು ಶಕ್ತಿಯ ಬಳಕೆಯಿಂದ "ನಿಜವಾದ" ಐಶ್ವರ್ಯವು ಬರುತ್ತದೆಂದು ವಾದಿಸಿದರು. ಸಾಡಿಯವರ ಆರ್ಥಿಕ ಬರಹಗಳನ್ನು ಅವರ ಕಾಲದಲ್ಲಿ ಬಹುಮಟ್ಟಿಗೆ ಕಡೆಗಣಿಸಲಾಗಿತ್ತು, ಆದರೆ ಆಮೇಲೆ ಜೀವ ಭೌತಿಕ ಅರ್ಥಶಾಸ್ತ್ರ (ಬಾಯೊಫ಼ಿಸ಼ಿಕಲ್ ಎಕನಾಮಿಕ್ಸ್) ಮತ್ತು ಜೀವಿ ಪರಿಸ್ಥಿತಿ ವಿಜ್ಞಾನದ ಅರ್ಥಶಾಸ್ತ್ರ ಮತ್ತು ಜೊತೆಗೆ ೨೦ನೇ ಶತಮಾನದ ಕೊನೆಯಲ್ಲಿ ಜೀವ ಅರ್ಥಶಾಸ್ತ್ರದ ವಿಕಾಸಕ್ಕಾಗಿ ಪ್ರಯೋಗಿಸಲಾಯಿತು.[128] ಕೇಂದ್ರೀಯ ಬ್ಯಾಂಕಿನ ಸ್ವಾತಂತ್ರ್ಯ, ಕೇಂದ್ರೀಯ ಬ್ಯಾಂಕಿನ ಕಾರ್ಯನೀತಿಗಳು ಮತ್ತು ಕೇಂದ್ರೀಯ ಬ್ಯಾಂಕಿನ ಮಂಡಲಾಧಿಕಾರಿಯ ಭಾಷಣದಲ್ಲಿ ಡಾಂಭಿಕ ಎನಿಸುವ ಶೈಲಿ ಅಥವಾ ಸಂಸ್ಥಾನಗಳ ಸ್ಥೂಲ ಅರ್ಥಶಾಸ್ತ್ರದ ಕಾರ್ಯನೀತಿಗಳ,[129] (ಹಣಕಾಸು ಮತ್ತು ಆದಾಯ ಕಾರ್ಯನೀತಿ) ಆಧಾರವಾಕ್ಯಗಳಂತಹ ವಿಷಯಗಳು ವಾದವಿವಾದ ಮತ್ತು ಟೀಕೆಯ ಕೇಂದ್ರಬಿಂದುವಾಗಿವೆ.[130][131][132][133] ಹಲವು ಪ್ರಾಯೋಗಿಕ ಆರ್ಥಿಕ ಅಧ್ಯಯನಗಳನ್ನು ಅಸ್ಪಷ್ಟವಾಗಿ ವರದಿ ಮಾಡಲಾಗಿವೆಯೆಂದು ಡಿಯರ್ಡ್ರ ಮಕ್ಲಾಸ್ಕಿ ವಾದಿಸಿದ್ದಾರೆ, ಮತ್ತು ಅವರ ವಿಮರ್ಶಾತ್ಮಕ ಪ್ರಬಂಧವನ್ನು ಚೆನ್ನಾಗಿ ಸ್ವೀಕರಿಸಲಾಗಿದೆಯಾದರೂ, ಪದ್ಧತಿಯು ಸುಧಾರಿಸಿಲ್ಲವೆಂದು ಅವರು ಮತ್ತು ಸ್ಟೀವನ್ ಜ಼ಿಲಿಯಾಕ್ ವಾದಿಸುತ್ತಾರೆ.[134] ಈ ಎರಡನೆಯ ವಿಷಯವು ವಿವಾದಾತ್ಮಕವಾಗಿದೆ.[135]
ಅದು ಅವಾಸ್ತವಿಕ, ಅಸಮರ್ಥನೀಯ, ಅಥವಾ ಅತಿ ಹೆಚ್ಚು ಸರಳಗೊಳಿಸಿದ ಪೂರ್ವಾನುಮಾನಗಳನ್ನು ಅವಲಂಬಿಸಿದೆಯೆಂದು, ಮತ್ತು ಕೆಲವು ಸನ್ನಿವೇಶಗಳಲ್ಲಿ ಈ ಪೂರ್ವಾನುಮಾನಗಳು ನಾಜೂಕಾದ ಗಣಿತಶಾಸ್ತ್ರದ ಪ್ರಯೋಗಕ್ಕೆ ಒದಗಿ ಬರುತ್ತವೆಂಬುದಕ್ಕಾಗಿ, ಅರ್ಥಶಾಸ್ತ್ರವು ಟೀಕೆಗೆ ಒಳಗಾಗಿದೆ. ಉದಾಹರಣೆಗಳು, ಪರಿಪೂರ್ಣ ಮಾಹಿತಿ (ಪರ್ಫ಼ಿಕ್ಟ್ ಇನ್ಫ಼ರ್ಮೇಶನ್), ಲಾಭ ಗರಿಷ್ಠೀಕರಣ (ಪ್ರಾಫ಼ಿಟ್ ಮ್ಯಾಕ್ಸಮಾಯ್ಜ಼ೇಶನ್) ಮತ್ತು ವಿವೇಕಯುಕ್ತ ಆಯ್ಕೆಗಳನ್ನು ಒಳಗೊಂಡಿವೆ.[136][137][138] ಕೆಲವಷ್ಟು ಸಮಕಾಲೀನ ಆರ್ಥಿಕ ಸಿದ್ಧಾಂತವು ಮಾಹಿತಿ ಅರ್ಥಶಾಸ್ತ್ರ, ವರ್ತನಾ ಸಂಬಂಧಿತ ಅರ್ಥಶಾಸ್ತ್ರ, ಮತ್ತು ಸಂಕೀರ್ಣತಾ ಅರ್ಥಶಾಸ್ತ್ರಗಳಂತಹ (ಕಂಪ್ಲೆಕ್ಸಿಟಿ ಎಕನಾಮಿಕ್ಸ್) ಬೆಳಕಿಗೆ ಬರುತ್ತಿರುವ ಉಪ ಶಿಕ್ಷಣ ವಿಷಯಗಳ ಮೂಲಕ ಈ ಸಮಸ್ಯೆಗಳನ್ನು ನಿರ್ವಹಿಸುದರ ಮೇಲೆ ಕೇಂದ್ರೀಕರಿಸಿದೆ, ಮತ್ತು ಅರ್ಥಶಾಸ್ತ್ರಕ್ಕಿರುವ ಮುಖ್ಯ ವಾಹಿನಿ ಕಾರ್ಯವಿಧಾನದಲ್ಲಿ ಒಂದು ಪ್ರಮುಖ ಬದಲಾವಣೆಯನ್ನು ಜೆಫ಼್ರಿ ಹಾಜ್ಸನ್ ಮುಂದಾಗಿ ಹೇಳಿದ್ದಾರೆ.[139] ಆದಾಗ್ಯೂ, ಕೇನ್ಸ್[140] ಮತ್ತು ಜಾಶ್ಕಾವ್ ರಂತಹ ಪ್ರಖ್ಯಾತ ಮುಖ್ಯ ವಾಹಿನಿ ಅರ್ಥಶಾಸ್ತ್ರಜ್ಞರು, ಅಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರೊಂದಿಗೆ, ಅರ್ಥಶಾಸ್ತ್ರದ ಬಹಳಷ್ಟು ಭಾಗ ಪರಿಮಾಣಾತ್ಮಕದ ಬದಲು ಪರಿಕಾಲ್ಪನಿಕವಾಗಿದೆಯೆಂದು, ಮತ್ತು ಪರಿಮಾಣಾತ್ಮಕವಾಗಿ ಮಾದರಿಯನ್ನು ರೂಪಿಸಲು ಹಾಗೂ ವಿಧ್ಯುಕ್ತಗೊಳಿಸಲು ಕಷ್ಟವಾಗಿದೆಯೆಂದು ಗಮನಿಸಿದ್ದಾರೆ. ಅಲ್ಪಾಧಿಕಾರದ ಸಂಶೋಧನೆಯ ಮೇಲಿನ ಒಂದು ಚರ್ಚೆಯಲ್ಲಿ, ಆಚರಣೆಯಲ್ಲಿ, ವಾಸ್ತವಿಕ ಅರ್ಥವ್ಯವಸ್ಥೆಗಳ ವಿಚಾರ ಶೀಲ ವಿದ್ಯಾರ್ಥಿಗಳು ನಿರ್ದಿಷ್ಟ ಕೈಗಾರಿಕೆಗಳಿಗೆ ವಿಶಿಷ್ಟವಾದ ಗುಣಾತ್ಮಕ ಅಂಶಗಳನ್ನು ಆಧರಿಸಿದ "ಅನೌಪಚಾರಿಕ ವಿನ್ಯಾಸ"ಗಳನ್ನು ಬಳಸಲು ಪ್ರವೃತ್ತವಾಗುತ್ತಾರೆಂದು ೧೯೭೫ರಲ್ಲಿ ಪಾಲ್ ಜಾಶ್ಕಾವ್ ತೋರಿಸಿದರು. ಅಲ್ಪಾಧಿಕಾರದಲ್ಲಿ ಹಳೆಯ ಶಾಸ್ತ್ರೋಕ್ತ ಮಾದರಿಗಳನ್ನು ಮತ್ತೆ ಮತ್ತೆ ಬಳಸಲಾಗುತ್ತಿತ್ತಾದರೂ ಪ್ರಮುಖ ಕೆಲಸವು ಅನೌಪಚಾರಿಕ ಅವಲೋಕನಗಳ ಮೂಲಕ ಮಾಡಲಾಗಿತ್ತೆಂಬ ಒಂದು ದೃಢ ಅನಿಸಿಕೆಯನ್ನು ಜಾಶ್ಕಾವ್ ಹೊಂದಿದ್ದರು. ಪ್ರಾಯೋಗಿಕ ಕೆಲಸದಲ್ಲೂ ಶಾಸ್ತ್ರೋಕ್ತ ಮಾದರಿಗಳು ಬಹುಮಟ್ಟಿಗೆ ಮುಖ್ಯವಾಗಿರಲಿಲ್ಲವೆಂದು, ಮತ್ತು ವ್ಯಾಪಾರಸಂಸ್ಥೆಯ ಸಿದ್ಧಾಂತದ ಹಿಂದಿರುವ ಮೂಲಭೂತ ಅಂಶವಾದ ವರ್ತನೆಯನ್ನು ಕಡೆಗಣಿಸಲಾಗಿತ್ತೆಂದು ಅವರು ವಾದಿಸಿದರು.[141] ಈ ಕಳವಳಗಳ ಹೊರತಾಗಿಯೂ, ಮುಖ್ಯ ವಾಹಿನಿ ಸ್ನಾತಕ ಬೋಧನಾ ಕ್ರಮಗಳು ಹೆಚ್ಚೆಚ್ಚಾಗಿ ತಾಂತ್ರಿಕ ಮತ್ತು ಗಣಿತಶಾಸ್ತ್ರಾಧಾರಿತವಾಗಿವೆ.[142] ಇತಿಹಾಸದಲ್ಲಿನ ಅತ್ಯಂತ ನವ್ಯ ವಿಚರಧಾರೆಯ ಆರ್ಥಿಕ ಸಂಶೋಧನೆಯ ಬಹಳಷ್ಟು ಗಣಿತಶಾಸ್ತ್ರದ ಬದಲಾಗಿ ಪರಿಕಲ್ಪನೆಗಳನ್ನು ಒಳಗೊಂಡಿದ್ದರೂ, ಅತ್ಯುಚ್ಚ ಆರ್ಥಿಕ ನಿಯತಕಾಲಿಕಗಳಲ್ಲಿ ಒಂದು ಗಣಿತಶಾಸ್ತ್ರೇತರ ವಿದ್ವತ್ಪ್ರಬಂಧವನ್ನು ಪ್ರಕಟಿಸುವುದು ಇಂದು ಹೆಚ್ಚುಕಡಮೆ ಅಸಾಧ್ಯವಾಗಿದೆ.[143] ಅರ್ಥಶಾಸ್ತ್ರದ ಅಮೂರ್ತವಾದ ಮತ್ತು ತಾಂತ್ರಿಕ ಪ್ರಾಧಾನ್ಯದಿಂದುಂಟಾದ ಕೆಲವು ವಿದ್ಯಾರ್ಥಿಗಳ ಭ್ರಮನಿರಸನವು, ಫ಼್ರಾನ್ಸ್ನಲ್ಲಿ ೨೦೦೦ರಲ್ಲಿ ಆರಂಭವಾದ, ಅವಾಸ್ತವತೆಯ ತರುವಾಯದ ಅರ್ಥಶಾಸ್ತ್ರ (ಪೋಸ್ಟ್-ಆಟಿಸ್ಟಿಕ್ ಎಕನಾಮಿಕ್ಸ್) ಚಳವಳಿಗೆ ದಾರಿ ತೋರಿಸಿದೆ. ಸಂಕೀರ್ಣತಾ ಅರ್ಥಶಾಸ್ತ್ರದ ಒಬ್ಬ ಪ್ರತಿಪಾದಕರಾದ ಡೇವಿಡ್ ಕೊಲ್ಯಾಂಡರ್ರವರೂ, ಶಿಕಾಗೋ ಕಾರ್ಯವಿಧಾನಕ್ಕೆ ತದ್ವಿರುದ್ಧವಾಗಿ, ಅರ್ಥಶಾಸ್ತ್ರದ ಎಮ್ಆಯ್ಟಿ ಕಾರ್ಯವಿಧಾನಕ್ಕೆ ಅವರು ಸಂಬಂಧಿಸುವ, ಅರ್ಥಶಾಸ್ತ್ರದ ಗಣಿತಶಾಸ್ತ್ರದ ವಿಧಾನಗಳ ಬಗ್ಗೆ ವಿಮರ್ಶಾತ್ಮಕವಾಗಿ ಹೇಳಿಕೆ ನೀಡಿದ್ದಾರೆ (ಆದಾಗ್ಯೂ ಶಿಕಾಗೋ ಪಂಥವನ್ನು ಸಹ ಈಗ ಪ್ರತ್ಯಕ್ಷ ಜನಿತವೆಂದು ಕರೆಯಲಾಗುವುದಿಲ್ಲವೆಂದು ಅವರು ಹೇಳುತ್ತಾರೆ). ಶಿಕಾಗೋದ ಪ್ರತ್ಯಕ್ಷ ಜನಿತ ಕಾರ್ಯವಿಧಾನದಿಂದ ಹೊರಹೊಮ್ಮಿದ ಕಾರ್ಯನೀತಿ ಶಿಫಾರಸುಗಳು ಪ್ರತ್ಯಕ್ಷ ಜನಿತ ಅರ್ಥಶಾಸ್ತ್ರದ ಅವನತಿಗೆ ಯಾವುದೋ ರೀತಿಯಲ್ಲಿ ಕಾರಣವಾಗಿದ್ದವೆಂದು ಅವರು ನಂಬುತ್ತಾರೆ. ಒಂದು ಶಾಸ್ತ್ರೋಕ್ತ ಮಾದರಿಯಿಲ್ಲದ ಸ್ವಾರಸ್ಯವಾದ ಅರ್ಥಶಾಸ್ತ್ರವನ್ನು ಚರ್ಚಿಸಲು ಸಾರಾಸಗಟಾಗಿ ನಿರಾಕರಿಸಿರುವ ಸಹೋದ್ಯೋಗಿಗಳನ್ನು ತಾವು ಕಂಡಿದ್ದಾರೆಂದು ಅವರು ಗಮನಿಸುತ್ತಾರೆ, ಮತ್ತು ಮಾದರಿಗಳು ಕೆಲವೊಮ್ಮೆ ಅಂತರ್ದೃಷ್ಟಿಯನ್ನು ಸೀಮಿತಗೊಳಿಸುತ್ತವೆಂದು ಅವರು ನಂಬುತ್ತಾರೆ.[144] ಆದರೂ ಬಹಳ ಇತ್ತೀಚೆಗೆ, ಸಾಮಾನ್ಯವಾಗಿ ಒಂದು ಹೆಚ್ಚು ಪ್ರತ್ಯಕ್ಷ ಜನಿತ ಕಾರ್ಯವಿಧಾನವನ್ನು ಹೊಂದಿರುವ ಅಸಾಂಪ್ರದಾಯಿಕ ಅರ್ಥಶಾಸ್ತ್ರವು, ಗಣಿತಜ್ಞರೊಂದಿಗೆ ಜತೆಗೂಡಬೇಕಾಗಿದೆಯೆಂದು ಮತ್ತು ಇನ್ನಷ್ಟು ಗಣಿತಶಾಸ್ತ್ರವನ್ನು ಬಳಸಬೇಕಾಗಿದೆಯೆಂದು ಅವರು ಬರೆದಿದ್ದಾರೆ.[87] "ಮುಖ್ಯ ವಾಹಿನಿ ಅರ್ಥಶಾಸ್ತ್ರವು ಒಂದು ಶಾಸ್ತ್ರೋಕ್ತವಾದ ವಿನ್ಯಾಸ ನಿರೂಪಣಾ ಕ್ರಿಯೆಯ ಕಾರ್ಯಕ್ಷೇತ್ರ", ಎಂದು ಅವರು ಬರೆಯುತ್ತಾರೆ, ಮತ್ತು ಬೇಕಾಗಿರುವುದು ಕಡಿಮೆ ಪ್ರಮಾಣದಲ್ಲಿ ಗಣಿತಶಾಸ್ತ್ರದ ಪ್ರಯೋಗವಲ್ಲ ಬದಲಾಗಿ ಗಣಿತಶಾಸ್ತ್ರದ ಇನೂ ಹೆಚ್ಚಿನ ಮಟ್ಟ. ಸಂಸ್ಥೆಗಳ ಅಥವಾ ಅನಿಶ್ಚಿತತೆಯ ಪ್ರಾಮುಖ್ಯದಂತಹ, ಅಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರಿಂದ ಎತ್ತಿ ತೋರಿಸಲಾದ ಕೆಲವು ವಿಷಯಗಳು, ಅಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರ ಕೆಲಸವನ್ನು ಉಲ್ಲೇಖಿಸದೆ, ಮುಖ್ಯ ವಾಹಿನಿಯಲ್ಲಿ ಗಣಿತಶಾಸ್ತ್ರದ ವಿನ್ಯಾಸಗಳ ಮೂಲಕ ಈಗ ಅಧ್ಯಯನಮಾಡಲಾಗುತ್ತಿದೆಯೆಂದು ಅವರು ಗಮನಿಸುತ್ತಾರೆ. ಉದಾಹರಣೆಗೆ, ನೂತನ ಸಾಂಸ್ಥಾನಿಕ ಅರ್ಥಶಾಸ್ತ್ರವು (ನ್ಯೂ ಇನ್ಸ್ಟಿಟೂಶನಲ್ ಎಕನಾಮಿಕ್ಸ್), ಬಹುಮಟ್ಟಿಗೆ ಅಸಾಂಪ್ರದಾಯಿಕ ಕಾರ್ಯಕ್ಷೇತ್ರವಾದ ಸಾಂಸ್ಥಾನಿಕ ಅರ್ಥಶಾಸ್ತ್ರಕ್ಕೆ ಬಹಳ ಸಂಬಂಧವಿಲ್ಲದೆಯೇ, ಸಂಸ್ಥೆಗಳನ್ನು ಗಣಿತಶಾಸ್ತ್ರವನ್ನು ಬಳಸಿ ಪರಿಶೀಲಿಸುತ್ತದೆ. ಅಸಾಂಪ್ರದಾಯಿಕ ಪಂಥವಾದ ಆಸ್ಟ್ರಿಯಾದ ಅರ್ಥಶಾಸ್ತ್ರದೊಂದಿಗಿನ ತಮ್ಮ ನಿಕಟ ಸಂಬಂಧಕ್ಕಾಗಿ ಪರಿಚಿತರಾದ ಫ಼್ರೆಡ್ರಿಕ್ ಹಾಯೆಕ್, ತಮ್ಮ ೧೯೭೪ರ ನೋಬೆಲ್ ಪಾರಿತೋಷಕ ಭಾಷಣದಲ್ಲಿ, ಆರ್ಥಿಕ ಸಲಹೆಗಳಲ್ಲಿನ ಕಾರ್ಯನೀತಿ ವೈಫಲ್ಯಗಳಿಗೆ ಭೌತಿಕ ವಿಜ್ಞಾನಗಳಲ್ಲಿ ಬಳಸಲಾಗುವ ಗಣಿತಶಾಸ್ತ್ರದ ವಿಧಾನಗಳನ್ನು ಅನುಕರಿಸುವ ಒಂದು ವಿಮರ್ಶೆಯಿರದ ಮತ್ತು ಅವೈಜ್ಞಾನಿಕ ಪ್ರವೃತ್ತಿಯನ್ನು ಆರೋಪಿಸಿದರು. ಕಾರ್ಮಿಕ ಮಾರುಕಟ್ಟೆಯ ನಿರುದ್ಯೋಗದಂತಹ, ಹೆಚ್ಚು ಅಧ್ಯಯನಮಾಡಲಾದ ಆರ್ಥಿಕ ವಿದ್ಯಮಾನಗಳು ಕೂಡ ಅಂತಹ ವಿಧಾನಗಳನ್ನು ಮೊದಲೇ ರೂಪಿಸಲಾದ ಭೌತಿಕ ವಿಜ್ಞಾನಗಳಲ್ಲಿ ತಮ್ಮ ಪ್ರತಿರೂಪಗಳಿಗಿಂತ ಸ್ವಾಭಾವಿಕವಾಗಿ ಹೆಚ್ಚು ಜಟಿಲವಿವೆಯೆಂದು ಅವರು ವಾದಿಸಿದರು. ಜೊತೆಗೆ, ಸಿದ್ಧಾಂತ ಮತ್ತು ಮಾಹಿತಿಗಳು ಹಲವುವೇಳೆ ಬಹಳ ನಿಖರವಿರುವುದಿಲ್ಲ ಮತ್ತು ಕೇವಲ ಅಗತ್ಯವಾದ ಒಂದು ಬದಲಾವಣೆಯ ದಿಕ್ಕಿಗೆ ಒದಗಿ ಬರುತ್ತವೆ, ಅದರ ಗಾತ್ರಕ್ಕಲ್ಲ.[145] ಭಾಗಶಃ ಟೀಕೆಯ ಕಾರಣವಾಗಿ, ಅರ್ಥಶಾಸ್ತ್ರವು ೧೯೪೦ರಿಂದೀಚೆಗಿನ ಪರಿಕಲ್ಪನೆಗಳ ಮತ್ತು ವಿಧಾನಗಳ ಒಂದು ಆಮೂಲಾಗ್ರ ಸಂಚಿತ ವಿಧ್ಯುಕ್ತೀಕರಣ (ಫ಼ಾರ್ಮಲೈಜ಼ೇಶನ್) ಮತ್ತು ವಿಶದೀಕರಣಕ್ಕೆ ಒಳಗಾಗಿದೆ, ಮತ್ತು ಇವುಗಳಲ್ಲಿ ಕೆಲವು ವಾಸ್ತವಿಕ ಪ್ರಪಂಚದ ವಿದ್ಯಮಾನಗಳನ್ನು ವಿವರಿಸಲು ಕಲ್ಪಿತ-ನಿಗಮನಾತ್ಮಕ ವಿಧಾನದ (ಹಾಯ್ಪಥೆಟಿಕೋ-ಡಿಡಕ್ಟಿವ್ ಮೆಥಡ್) ಬಳಸುವಿಕೆಯ ದಿಕ್ಕಿನಲ್ಲಿವೆ.[146]
|
|
|
|
|
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.