ಕ್ರಮಶಾಸ್ತ್ರ
From Wikipedia, the free encyclopedia
ಕ್ರಮಶಾಸ್ತ್ರವು ಒಂದು ಅಧ್ಯಯನ ಕ್ಷೇತ್ರಕ್ಕೆ ಅನ್ವಯಿಸಲಾದ ವಿಧಾನಗಳ ವ್ಯವಸ್ಥಿತ, ಸೈದ್ಧಾಂತಿಕ ವಿಶ್ಲೇಷಣೆ. ಇದು ಜ್ಞಾನದ ಒಂದು ಶಾಖೆಗೆ ಸಂಬಂಧಿಸಿದ ವಿಧಾನಗಳು ಮತ್ತು ತತ್ವಗಳ ಮಂಡಲದ ಸೈದ್ಧಾಂತಿಕ ವಿಶ್ಲೇಷಣೆಯನ್ನು ಒಳಗೊಳ್ಳುತ್ತದೆ. ಸಾಮಾನ್ಯವಾಗಿ, ಇದು ರೂಪಿಕೆ, ಸೈದ್ಧಾಂತಿಕ ಮಾದರಿ, ಹಂತಗಳು ಮತ್ತು ಪರಿಮಾಣಾತ್ಮಕ ಅಥವಾ ಗುಣಾತ್ಮಕ ಕಾರ್ಯವಿಧಾನಗಳಾಂತಹ ಪರಿಕಲ್ಪನೆಗಳನ್ನು ಒಳಗೊಳ್ಳುತ್ತದೆ.
![]() |
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಕ್ರಮಶಾಸ್ತ್ರವು ಪರಿಹಾರಗಳನ್ನು ಒದಗಿಸಲು ಹೊರಡುವುದಿಲ್ಲ , ಆದ್ದರಿಂದ, ಇದು ವಿಧಾನಕ್ಕೆ ಸಮಾನವಲ್ಲ. ಬದಲಿಗೆ, ಕ್ರಮಶಾಸ್ತ್ರವು ಯಾವ ವಿಧಾನ, ವಿಧಾನಗಳ ವರ್ಗ, ಅತ್ಯುತ್ತಮ ಆಚರಣೆಗಳನ್ನು ಒಂದು ನಿರ್ದಿಷ್ಟ ಸಂದರ್ಭಕ್ಕೆ, ಉದಾಹರಣೆಗೆ, ಒಂದು ನಿರ್ದಿಷ್ಟ ಪರಿಣಾಮವನ್ನು ಕಂಡುಹಿಡಿಯಲು, ಅನ್ವಯಿಸಬಹುದು ಎಂದು ತಿಳಿಯಲು ಸೈದ್ಧಾಂತಿಕ ಆಧಾರವನ್ನು ನೀಡುತ್ತದೆ.
ಇದನ್ನು ಕೆಳಗಿನಂತೆಯೂ ವ್ಯಾಖ್ಯಾನಿಸಲಾಗಿದೆ:
- ಒಂದು ವಿಭಾಗದಿಂದ ಬಳಸಲ್ಪಟ್ಟ ವಿಧಾನಗಳು, ನಿಯಮಗಳು, ಮತ್ತು ಆಧಾರಸೂತ್ರಗಳ ತತ್ವಗಳ ವಿಶ್ಲೇಷಣೆ
- ಒಂದು ವಿಭಾಗದಲ್ಲಿ ಅನ್ವಯಿಸಲಾಗುವ, ಅನ್ವಯಿಸಬಲ್ಲ, ಅನ್ವಯಿಸಲ್ಪಟ್ಟ ವಿಧಾನಗಳ ಕ್ರಮಬದ್ಧವಾದ ಅಧ್ಯಯನ
- ವಿಧಾನಗಳ ಅಧ್ಯಯನ ಅಥವಾ ವಿವರಣೆ