![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/e/e6/COLLECTIE_TROPENMUSEUM_Houten_wajangpop_voorstellende_Trijata_TMnr_4283-4.jpg/640px-COLLECTIE_TROPENMUSEUM_Houten_wajangpop_voorstellende_Trijata_TMnr_4283-4.jpg&w=640&q=50)
ತ್ರಿಜಟಾ
From Wikipedia, the free encyclopedia
ತ್ರಿಜಟ ರಾಮಾಯಣದಲ್ಲಿ ಬರುವ ಈ ರಾಕ್ಷಸಿಯು ಅಶೋಕವನದಲ್ಲಿದ್ದ ಸೀತೆಯನ್ನು ಕಾಯುವ ಕೆಲಸವನ್ನು ಮಾಡುತ್ತಿದ್ದಳು [1] ರಾಮಾಯಣದ ನಂತರದ ಕೆಲವು ರೂಪಾಂತರಗಳಲ್ಲಿ ತ್ರಿಜಟೆಯನ್ನು ರಾವಣನ ಸಹೋದರ ವಿಭೀಷಣನ ಮಗಳು ಎಂದು ವಿವರಿಸಲಾಗಿದೆ.
ತ್ರಿಜಟಾ | |
---|---|
![]() ವಯಾಂಗ್ ಗೋಲೆಕ್ ಸಂಸ್ಕೃತಿಯಲ್ಲಿ ವಿಭೀಷಣನ ಮಗಳಂತೆ ಚಿತ್ರಿತಳಾದ ತ್ರಿಜಟೆಯ ಗೊಂಬೆ | |
ಸಂಲಗ್ನತೆ | ರಾಕ್ಷಸಿ |
ನೆಲೆ | ಲಂಕೆ |
ಒಡಹುಟ್ಟಿದವರು | ತರಣಿಸೇನ |
ತಂದೆತಾಯಿಯರು |
|
ಮೂಲ ರಾಮಾಯಣದಲ್ಲಿ ಬರುವ ತ್ರಿಜಟಾ ರಾಕ್ಷಸಿಯು ಒಬ್ಬ ಬುದ್ಧಿವಂತ ವೃದ್ಧೆ ರಾಕ್ಷಸಿಯಾಗಿದ್ದು ಆಕೆಗೆ ರಾವಣನ ವಿನಾಶದ ಕನಸು ಬೀಳುತ್ತದೆ. ಆಕೆಯ ಕನಸಿನಲ್ಲಿ ಸೀತೆಯನ್ನು ರಕ್ಷಿಸಲು ರಾವಣನ ವಿರುದ್ಧ ಯುದ್ಧ ಮಾಡುವ ರಾಮ ಕಾಣುತ್ತಾನೆ. ರಾಮ ಮತ್ತು ರಾವಣರ ನಡುವಿನ ಯುದ್ಧದ ಸಂದರ್ಭದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ರಾಮನನ್ನು ನೋಡಿ ಆತ ಸತ್ತನೆಂದು ಸೀತೆ ಭಾವಿಸಿದ್ದಾಗ ಆತನ ಯೋಗಕ್ಷೇಮದ ಬಗ್ಗೆ ತ್ರಿಜಟೆಯೇ ಸೀತೆಗೆ ಭರವಸೆ ನೀಡುತ್ತಾಳೆ. ನಂತರದ ರಾಮಾಯಣ ರೂಪಾಂತರಗಳಲ್ಲಿ, ತ್ರಿಜಟೆ ರಾಮನ ಪರವಾಗಿರುವ ರಾವಣನ ಸಹೋದರ ವಿಭೀಷಣನ ಮಗಳಾಗಿ ಕಾಣಿಸಿಕೊಳ್ಳುತ್ತಾಳೆ . ಆಗ್ನೇಯ ಏಷ್ಯಾದಲ್ಲಿರುವ ರಾಮಾಯಣದ ನಂತರದ ಆವೃತ್ತಿಗಳಲ್ಲಿ ತ್ರಿಜಟೆ ಹೆಚ್ಚಿನ ಪಾತ್ರವನ್ನು ವಹಿಸುತ್ತಾಳೆ.
ತ್ರಿಜಟಾ ರಾವಣನನ್ನು ಪ್ರತಿನಿಧಿಸಿದ ಕೆಲವು ಸಂದರ್ಭಗಳನ್ನು ಹೊರತುಪಡಿಸಿ ಆಕೆಯನ್ನು ಸಾಮಾನ್ಯವಾಗಿ ಸೀತೆಯ ಸ್ನೇಹಿತೆ ಮತ್ತು ನಿಷ್ಠಾವಂತ ಒಡನಾಡಿಯಾಗಿಯೇ ರಾಮಾಯಣದಲ್ಲಿ ಚಿತ್ರಿಸಲಾಗಿದೆ. ಹಲವಾರು ಸಂದರ್ಭಗಳಲ್ಲಿ, ಅವಳು ಸೀತೆಗೆ ಸಾಂತ್ವನವನ್ನು ನೀಡುತ್ತಾಳೆ ಮತ್ತು ಹೊರಗಿನ ಪ್ರಪಂಚದಿಂದ ಸುದ್ದಿಯನ್ನು ತರುತ್ತಾಳೆ. ಅವಳು ಸೀತೆಯನ್ನು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುತ್ತಾಳೆ. ರಾಮನ ವಿಜಯ ಮತ್ತು ರಾವಣನ ಮರಣದ ನಂತರ, ತ್ರಿಜಟಾಗೆ ಸೀತೆ ಮತ್ತು ರಾಮರಿಂದ ಸಮೃದ್ಧವಾಗಿ ಬಹುಮಾನ ನೀಡಲಾಗುತ್ತದೆ. ಕೆಲವು ರಾಮಾಯಣ ರೂಪಾಂತರಗಳು ಆಕೆ ರಾಮನ ಭಕ್ತೆ ಎಂದು ಉಲ್ಲೇಖಿಸಿದರೆ, ಆಗ್ನೇಯ ಏಷ್ಯಾದ ಆವೃತ್ತಿಗಳು ಆಕೆಯನ್ನು ರಾಮನ ವಾನರ ಸೇನಾಪತಿ ಹನುಮಂತನ ಹೆಂಡತಿಯಾಗಿ ಚಿತ್ರಿಸುತ್ತವೆ. ಆಗ್ನೇಯ ಏಷ್ಯಾದ ರಾಮಾಯಣದ ಆವೃತ್ತಿಗಳನ್ನು ಹನುಮಂತ-ತ್ರಿಜಟೆಯರ ಪುತ್ರನನ್ನೂ ಚಿತ್ರಿಸಲಾಗಿದೆ. . ವಾರಣಾಸಿ ಮತ್ತು ಉಜ್ಜಯಿನಿಯಲ್ಲಿ ಆಕೆಯನ್ನು ಸ್ಥಳೀಯ ದೇವತೆಯಾಗಿ ಪೂಜಿಸಲಾಗುತ್ತದೆ.