ಹನುಮಂತ
"ಸಂತಂ ವಂದೇ ಶ್ರೀ ಹನುಮಂತಂ" / From Wikipedia, the free encyclopedia
ಹನುಮಂತ[1] ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.
Quick Facts ಹನುಮಂತ, ಸಂಸ್ಕೃತ ಲಿಪ್ಯಂತರಣ ...
ಹನುಮಂತ | |
---|---|
ಪರ್ವತವನ್ನು ಎತ್ತಿರುವ ಹನುಮಂತ.ರಾಜಾ ರವಿವರ್ಮನ ವರ್ಣಚಿತ್ರ | |
ಸಂಸ್ಕೃತ ಲಿಪ್ಯಂತರಣ | हनुमान् |
ಸಂಲಗ್ನತೆ | ರಾಮ ಭಕ್ತ |
ನೆಲೆ | ಭೂಮಿ |
ಮಂತ್ರ | ರಾಮ ಮಂತ್ರ |
ಆಯುಧ | ಗಧೆ (mace) |
Close
![Thumb image](http://upload.wikimedia.org/wikipedia/commons/thumb/0/0f/Hanuman_in_Terra_Cotta.jpg/640px-Hanuman_in_Terra_Cotta.jpg)
ಹನುಮಂತ ಕಿಷ್ಕಿಂಧೆಯಲ್ಲಿ ಸುಗ್ರೀವನ ಜೊತೆಯಲ್ಲಿರುತ್ತಾನೆ. ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ ಹನುಮಂತನಿಗೆ ರಾಮನೊಡನೆ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.[2]
![Thumb image](http://upload.wikimedia.org/wikipedia/commons/thumb/4/44/Lord_Hanuman_statue_Tagarapuvalasa_Visakhapatnam.jpg/640px-Lord_Hanuman_statue_Tagarapuvalasa_Visakhapatnam.jpg)
![Thumb image](http://upload.wikimedia.org/wikipedia/commons/thumb/2/29/105_Feet_Hanuman_Statue_at_Nandura.jpg/640px-105_Feet_Hanuman_Statue_at_Nandura.jpg)
![Thumb image](http://upload.wikimedia.org/wikipedia/commons/thumb/9/97/Lanka_Dahan.jpg/640px-Lanka_Dahan.jpg)