From Wikipedia, the free encyclopedia
ತಲವಾಟ ದಕ್ಷಿಣ ಭಾರತದ, ಕರ್ನಾಟಕ ರಾಜ್ಯದಲ್ಲಿರುವ ಹಳ್ಳಿ.[1]. ಇದು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿ ಬರುತ್ತದೆ.ಇದರ ತಾಲ್ಲೂಕು ಸಾಗರ.
ಇದು ಮಲೆನಾಡು ಪ್ರದೇಶವಾಗಿರುದರಿಂದ, ನಿತ್ಯಹರಿದ್ವರ್ಣ ಕಾಡು ಮತ್ತು ಬೆಟ್ಟ ಪ್ರದೇಶಗಳಿಂದ ಸುತ್ತುವರೆಯಲ್ಪಟ್ಟಿದೆ. ಇಲ್ಲಿಯ ವಾತಾವರಣ ತಾಪಮಾನ ಬೇಸಿಗೆಕಾಲದಲ್ಲಿ (ಮಾರ್ಚ್ ಇಂದ ಮೇ ವರೆಗೆ) 22 oC ಇಂದ 28 oC ವರೆಗೆ ಇರುತ್ತದೆ. ಜೂನ್ ಇಂದ ಅಕ್ಟೋಬರ್ ಮಳೆಗಾಲದ ಸಮಯವಾಗಿರುತ್ತದೆ. ಚಳಿಗಾಲದಲ್ಲಿ (ನವೆಂಬರ್ ಇಂದ ಫೆಬ್ರುವರೀ), ತಾಪಮಾನ 16 oC ವರೆಗೂ ಇಳಿಯಬಹುದು.
ಈ ಪ್ರದೇಶದ ಮುಖ್ಯ ಉದ್ಯೋಗ ಕೃಷಿಯಾಗಿರುತ್ತದೆ. ಮುಖ್ಯವಾಗಿ, ಅಡಿಕೆ, ಬತ್ತ ಮತ್ತು ಕಬ್ಬು ಬೆಳೆಯಲಾಗುತ್ತದೆ. ಇದು ಕೃಷಿಯೋಗ್ಯ ಪ್ರದೇಶವಾಗಿದೆ. ಇದಲ್ಲದೆ, ಉಪಬೆಳೆಯಾಗಿ ಕರಿ ಮೆಣಸು, ಕಾಫೀ ಮತ್ತು ಇತರೆ ಮಸಾಲೆ ಪದಾರ್ಥಗಳನ್ನು ಬೆಳೆಯಲಾಗುತ್ತದೆ.
ಈ ಪ್ರದೇಶವು ರೈಲ್ವೆ ಮತ್ತು ರಸ್ತೆಗಳೊಂದಿಗೆ ಚೆನ್ನಾಗಿ ಸಂಪರ್ಕಗೊಂಡಿದೆ. ಇದು NH 206 ನ ಪಕ್ಕದಲ್ಲಿಯೇ ಇದೆ. ಇದರ ಹತ್ತಿರದ ರೈಲ್ವೆ ಕೇಂದ್ರವು ತಾಳಗುಪ್ಪವಾಗಿರುತ್ತದೆ. ಇಲ್ಲಿ, ದಾರಿಹೋಕರಿಗೆ ಕೆಲವು ಹೋಂಸ್ಟೇಗಳು ಕೂಡ ಇದೆ.
ಇದರTಹತ್ತಿರದ ಪ್ರೇಕ್ಷಣೀಯ ಸ್ತಳ ಜೋಗ ಜಲಪಾತ ಮತ್ತು ಶರಾವತಿ ನದಿ ಎಂದು ಹೇಳಬಹುದು.ಇದಲ್ಲದೆ, ಭೀಮೇಶ್ವರ, ಕೊಲ್ಲೂರು ಮತ್ತು ಸಿಗಂದೂರು ಕೂಡ ಹತ್ತಿರದಲ್ಲಿ ಇವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.