From Wikipedia, the free encyclopedia
ಜೀವಿಗಳು ಶವವಾಗಿದ್ದರೂ ಅಥವಾ ಬದುಕಿದ್ದರೂ ವ್ಯತ್ಯಾಸವೇ ಇಲ್ಲದಂತೆ ಅವುಗಳ ಜೀವಾಳ(ಸಾಮಾನ್ಯವಾಗಿ ರಕ್ತದ ರೂಪದಲ್ಲಿ)ವನ್ನು ಕುಡಿದು ಜೀವಿಸುವ ಪೌರಾಣಿಕ ಇಲ್ಲವೇ ದಂತಕಥೆಯ ಕಲ್ಪನೆಗಳೇ ರಕ್ತಪಿಶಾಚಿಗ ಳಾಗಿವೆ.[1][2][3][4][5][6] ದಂತಕಥೆಗಳ ಪ್ರಕಾರ, ರಕ್ತಪಿಶಾಚಿಗಳು ಆಗ್ಗಾಗ್ಗೆ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತವಲ್ಲದೇ ತಾವು ಬದುಕಿದ್ದಾಗ ಇದ್ದ ಸ್ಥಳದ ನೆರೆಹೊರೆಯಲ್ಲಿ ಉಪದ್ರವ ಕೊಡುವುದು ಇಲ್ಲವೇ ಸಾವುನೋವು ಉಂಟುಮಾಡುತ್ತಿರುತ್ತವೆ. ಶವಹೊದಿಕೆಗಳನ್ನು ಹೊದೆಯುವ ಅವು ಊದಿಕೊಂಡಿರುತ್ತವೆ ಹಾಗೂ ಕೆಂಪು ಕಳೆಯ ಅಥವಾ ಗಾಢ ಮುಖಚರ್ಯೆಯನ್ನು ಹೊಂದಿರುತ್ತವೆ ಎಂದು ಹೇಳಲಾಗುತ್ತದೆ. ಈ ವಿಚಾರವು 19ನೇ ಶತಮಾನದ ಮೊದಲ ಭಾಗದ ಆಧುನಿಕ ವರ್ಣನೆಯಲ್ಲಿನ ಕಾಲ್ಪನಿಕ ನೀಳವಾಗಿ ಪೇಲವವಾಗಿರುವ ರಕ್ತಪಿಶಾಚಿಗಳಿಗಿಂತ ಗಮನಾರ್ಹವಾಗಿ ಭಿನ್ನವಾಗಿವೆ. ಅನೇಕ ಸಂಸ್ಕೃತಿಗಳಲ್ಲಿ ರಕ್ತಪಿಶಾಚಿಗಳ ಬಗ್ಗೆ ದಾಖಲಾಗಿದ್ದು, ಸಾರಸ್ವತ ಇತಿಹಾಸತಜ್ಞ ಬ್ರಿಯಾನ್ ಫ್ರಾಸ್ಟ್ರ ಊಹನೆಯಾದ “ರಕ್ತಪಿಶಾಚಿಗಳ ಮತ್ತು ರಕ್ತ ಹೀರುವ ಪ್ರೇತಗಳ ಮೇಲಿನ ನಂಬಿಕೆ ಮನುಷ್ಯನಷ್ಟೇ ಹಳೆಯದು" ತರಹದ ನಂಬಿಕೆಗಳಿದ್ದು "ಇತಿಹಾಸಪೂರ್ವ"ದ[7] ಕಡೆ ಗಮನ ಸೆಳೆದರೂ, ರಕ್ತಪಿಶಾಚಿ ದಂತಕಥೆಗಳು ಹೆಚ್ಚು ಪ್ರಚಲಿತವಿದ್ದ ಬಾಲ್ಕನ್ಸ್ ಮತ್ತು ಪೂರ್ವ ಯೂರೋಪ್ಗಳಂತಹಾ[8] ಪ್ರದೇಶಗಳಿಂದ ರಕ್ತಪಿಶಾಚಿ ಮೂಢನಂಬಿಕೆಯು ಪಾಶ್ಚಿಮಾತ್ಯ ಯೂರೋಪ್ನಲ್ಲಿ ಹೆಚ್ಚು ಪ್ರಭಾವ ಬೀರತೊಡಗುವವರೆಗೆ ಎಂದರೆ ರಕ್ತಪಿಶಾಚಿ ಎಂಬ ಪದವು 18ನೇ ಶತಮಾನದ ಪೂರ್ವಾರ್ಧದವರೆಗೆ ಹೆಚ್ಚು ಜನಬಳಕೆಯಲ್ಲಿರಲಿಲ್ಲ. ಸರ್ಬಿಯಾ ಮತ್ತು ಬಲ್ಗೇರಿಯಾದಲ್ಲಿ ವ್ಯಾಂಪಿರ್ (вампир), ಗ್ರೀಸ್ನಲ್ಲಿ ವ್ರಿಕೊಲಕಾಸ್ ಹಾಗೂ ರೊಮೇನಿಯಾದಲ್ಲಿ ಸ್ಟ್ರಿಗೋಯಿ ನಂತೆ ಇದೇ ರೀತಿಯ ಸ್ಥಳೀಯ ಪ್ರೇತಗಳನ್ನು ವಿವಿಧ ಹೆಸರುಗಳಿಂದ ಗುರುತಿಸಲಾಗುತ್ತಿತ್ತು. ಯೂರೋಪ್ನಲ್ಲಿನ ಈ ರೀತಿಯ ರಕ್ತಪಿಶಾಚಿ ಮೂಢನಂಬಿಕೆಯ ಹೆಚ್ಚಳವು ಸಾಮೂಹಿಕ ಉನ್ಮಾದದ ರೂಪ ತಾಳಿದ್ದುದರಿಂದ ಕೆಲವೊಮ್ಮೆ ಶವಗಳನ್ನು ಸುಡುಗಂಬಗಳಲ್ಲಿ ಸುಡುವುದಲ್ಲದೇ, ಇತರರನ್ನು ರಕ್ತಪಿಶಾಚಿಯೆಂದು ಅನುಮಾನಿಸಿ ನಡೆಸಿಕೊಳ್ಳುವುದೂ ಸಹಾ ನಡೆಯುತ್ತಿತ್ತು.
ಆಧುನಿಕ ಕಲ್ಪನೆಯ ವರ್ಚಸ್ವಿ ಮತ್ತು ನವೀನ ತಾಂತ್ರಿಕತೆಯ/ನುರಿತ/ಜಾಣ ರಕ್ತಪಿಶಾಚಿಯ ಜನ್ಮ 1819ರಲ್ಲಿ ಜಾನ್ ಪಾಲಿಡೊರಿರ ‘ದ ವ್ಯಾಂಪೈರ್ ’ ಕಾದಂಬರಿಯ ಪ್ರಕಟಣೆಯೊಂದಿಗೆ ಆಯಿತು. ಈ ಕಥೆಯು ಅತ್ಯಂತ ಯಶಸ್ವಿಯಾದುದಲ್ಲದೇ ಚರ್ಚಾತ್ಮಕವಾಗಿ 19ನೇ ಶತಮಾನ[9] ದ ಪೂರ್ವಾರ್ಧದ ರಕ್ತಪಿಶಾಚಿ ಕುರಿತ ಅತಿ ಪ್ರಭಾವೀ ಕೃತಿಯೆನಿಸಿಕೊಂಡಿತು. ಆದಾಗ್ಯೂ, ಬ್ರಾಮ್ ಸ್ಟಾಕರ್ರ 1897ರ ಕಾದಂಬರಿ ಡ್ರಾಕುಲಾ ವೇ ಇಂದಿಗೂ ನೆನಪಿಸಿಕೊಳ್ಳಬಲ್ಲ ಸರ್ವೋತ್ಕೃಷ್ಟ ರಕ್ತಪಿಶಾಚಿ ಕಾದಂಬರಿ. ಇದು ಆಧುನಿಕ ರಕ್ತಪಿಶಾಚಿ ಕಲ್ಪನೆಗೆ ಮೂಲಭೂತ ರೂಪ ಕಲ್ಪಿಸಿಕೊಟ್ಟಿತು. ಮುಂಚಿನ ಪೌರಾಣಿಕ ಕಥೆಗಳಾದ ತೋಳಮಾನವರು ಮತ್ತು ಅದೇ ತರಹದ ಕಾಲ್ಪನಿಕ ಭೂತಪ್ರೇತಗಳ "ಒಂದು ವಯಸ್ಸಿನ ಕುತೂಹಲಗಳಿಗೆ ಧ್ವನಿಯಾಗುವ," ಮತ್ತು "ಹಳೆಯ ವಿಕ್ಟೋರಿಯನ್ ವ್ಯವಸ್ಥೆಯ ಕಾಲದ ಭಯಗಳ" [10] ಮೇಲೆ ಡ್ರಾಕುಲಾ ಕಲ್ಪನೆ ರೂಪುಗೊಂಡಿತ್ತು.
ಈ ಪುಸ್ತಕದ ಯಶಸ್ಸು ಪುಸ್ತಕಗಳು, ಚಿತ್ರಗಳು, ವಿಡಿಯೋ ಆಟಗಳು ಮತ್ತು ಕಿರುತೆರೆ ಕಾರ್ಯಕ್ರಮಗಳಲ್ಲಿ 21ನೇ ಶತಮಾನದ ಈಗಲೂ ಜನಪ್ರಿಯವಾಗಿರುವ ಪ್ರತ್ಯೇಕ ರಕ್ತಪಿಶಾಚಿ ಪ್ರಭೇದವನ್ನೇ ಹುಟ್ಟು ಹಾಕಿತು. ಭಯಾನಕ ಪ್ರಭೇದದಲ್ಲಿ ಸಾರಸ್ವತ ಇತಿಹಾಸತಜ್ಞೆ ಸೂಸನ್ ಸೆಲ್ಲರ್ಸ್ರ ಪ್ರಸ್ತುತ ರಕ್ತಪಿಶಾಚಿ ಕಲ್ಪನೆಯು "ದುಸ್ವಪ್ನಗಳ ಕಲ್ಪನೆಯ ಸುರಕ್ಷತೆಯ ಹೋಲಿಕೆ"[10] ಯಲ್ಲಿ ರಕ್ತಪಿಶಾಚಿಯು ಪ್ರಧಾನ ಸ್ಥಾನವನ್ನು ಕಾಯ್ದುಕೊಂಡಿದೆ.
ಆಕ್ಸ್ಫರ್ಡ್ ಆಂಗ್ಲ ಪದಕೋಶ ದ ಪ್ರಕಾರ ರಕ್ತಪಿಶಾಚಿ ಪದದ ಆಂಗ್ಲ ರೂಪವು 1734ರಿಂದ ಬಳಕೆಯಲ್ಲಿದ್ದು, 1745ರಲ್ಲಿ ಹರ್ಲೆಯನ್ ಮಿಸೆಲಿನಿ ಯಲ್ಲಿ ಪ್ರಕಟಿತವಾದ ಟ್ರಾವೆಲ್ಸ್ ಆಫ್ ಥ್ರೀ ಇಂಗ್ಲಿಷ್ ಜೆಂಟಲ್ಮೆನ್ ಎಂಬ ಶೀರ್ಷಿಕೆಯ ಪ್ರವಾಸಕಥನದಲ್ಲಿ ಪ್ರಪ್ರಥಮವಾಗಿ ಕಾಣಿಸಿಕೊಂಡಿತು.[11][12] ಜರ್ಮನ್ ಸಾಹಿತ್ಯದಲ್ಲಿ ರಕ್ತಪಿಶಾಚಿಗಳ ಬಗ್ಗೆ ಮುಂಚೆಯೇ ಚರ್ಚಿಸಲಾಗಿತ್ತು.[13] 1718ರಲ್ಲಿ ಆಸ್ಟ್ರಿಯಾವು ಉತ್ತರ ಸರ್ಬಿಯಾ ಮತ್ತು ಒಲ್ಟೇನಿಯಾದ ನಿಯಂತ್ರಣ ಪಡೆದುಕೊಂಡ ನಂತರ, ಅಲ್ಲಿನ ಅಧಿಕಾರಿಗಳು ಶವಗಳನ್ನು ಹೊರತೆಗೆದು "ರಕ್ತಪಿಶಾಚಿಗಳ ಕೊಲ್ಲುವಿಕೆ"ಯ ಸ್ಥಳೀಯ ಆಚರಣೆಗಳನ್ನು ಪತ್ತೆಹಚ್ಚಿದರು.[13] 1725ರಿಂದ 1732ರ ನಡುವಿನಲ್ಲಿ ತಯಾರಾದ ಈ ವರದಿಗಳು ವ್ಯಾಪಕ ಪ್ರಚಾರವನ್ನು ಪಡೆದುಕೊಂಡವು.[13]
18ನೇ ಶತಮಾನದ ಪೂರ್ವಭಾಗದಲ್ಲಿ ಸರ್ಬಿಯನ್ ಭಾಷೆಯ вампир/ವ್ಯಾಂಪಿರ್ [14][15][16][17][18] ಪದದಿಂದ ಜನಿಸಿದ ಜರ್ಮನ್ ಭಾಷೆಯ ವ್ಯಾಂಪಿರ್ ಪದದಿಂದ ಆಂಗ್ಲ ಪದವನ್ನು (ಪ್ರಾಯಶಃ ಫ್ರೆಂಚ್ ವ್ಯಾಂಪೈರ್ ದ ಮೂಲಕ) ನಿಷ್ಪತ್ತಿಗೊಳಿಸಲಾಗಿದೆ. ಸರ್ಬಿಯನ್ ರೂಪವು ಬಹುಪಾಲು ಎಲ್ಲಾ ಸ್ಲಾವಿಕ್ ಭಾಷೆಗಳಲ್ಲಿ ಸಮಾನಾರ್ಥಕ ಪದಗಳನ್ನು ಹೊಂದಿದೆ : ಬಲ್ಗೇರಿಯನ್ ಭಾಷೆಯ вампир (ವ್ಯಾಂಪಿರ್ ), ಝೆಕ್ ಮತ್ತು ಸ್ಲೊವಾಕ್ನ ಉಪಿರ್ , ಪೋಲಿಷ್ ಭಾಷೆಯ ವೇಪೀರಜ್ , ಮತ್ತು (ಬಹುಶಃ ಪೂರ್ವ ಸ್ಲಾವಿಯದಿಂದ ಪ್ರಭಾವಿತವಾದ) ಉಪಿಯೊರ್ , ರಷ್ಯನ್ ಭಾಷೆಯ упырь (ಉಪಿರ್ '), ಬೆಲಾರಷ್ಯನ್ ಭಾಷೆಯ упыр (ಉಪಿರ್ ), ಉಕ್ರೇನ್ ಭಾಷೆಯ упирь (ಉಪಿರ್ '), ಮತ್ತು ಪ್ರಾಚೀನ ರಷ್ಯನ್ ಭಾಷೆಯ упирь (ಉಪಿರ್ '). (ಗಮನಿಸಬೇಕಾದ ವಿಷಯವೆಂದರೆ ಇಲ್ಲಿನ ಅನೇಕ ಭಾಷೆಗಳು ಪಾಶ್ಚಿಮಾತ್ಯ ಜಗತ್ತಿನಿಂದ ಎರವಲು ಪಡೆದ "ವಾಂಪಿರ್/ವ್ಯಾಂಪಿರ್" ರೂಪಗಳನ್ನೂ ಹೊಂದಿದ್ದರೂ ಇವೆಲ್ಲವೂ ಅದನ್ನು ಗುರುತಿಸಲು ಬಳಸುವ ಮೂಲ ಸ್ಥಳೀಯ ಪದಗಳಿಗಿಂತ ಪ್ರತ್ಯೇಕ ಅಸ್ತಿತ್ವವನ್ನೇ ಹೊಂದಿವೆ.) ಇವುಗಳ ನಿಖರ ವ್ಯುತ್ಪತ್ತಿಯು ಅಷ್ಟು ಸ್ಪಷ್ಟವಿಲ್ಲ.[19] ಪ್ರಸ್ತಾಪಿತ ಪ್ರಾಚೀನ-ಸ್ಲಾವಿಕ್ ರೂಪಗಳು *ǫpyrь ಮತ್ತು *ǫpirь.[20] ಒಂದು ಹಳೆಯ ಹಾಗೂ ಹೆಚ್ಚು ಪ್ರಚಲಿತವಲ್ಲದ ಸಿದ್ಧಾಂತದ ಪ್ರಕಾರ ಸ್ಲಾವಿಕ್ ಭಾಷೆಗಳು "ಮಾಟಗಾತಿ"ಗೆ ಬಳಸುವ ಟರ್ಕಿ ಭಾಷೆಯ ಪದದಿಂದ ನಿಷ್ಪತ್ತಿಯಾದ ಪದವನ್ನು ಆಕರವನ್ನಾಗಿ ಹೊಂದಿವೆ (e.g., ಟಾಟಾರ್ ಉಬಿರ್ ).[20][21]
ಪ್ರಾಚೀನ ರಷ್ಯನ್ ರೂಪವಾದ Упирь (ಉಪಿರ್' )ನ ಬಳಕೆಯು ಸಾಮಾನ್ಯ ನಂಬಿಕೆಯ ಪ್ರಕಾರ 6555ನೆಯ (1047 AD)[22] ಇಸವಿಯಲ್ಲಿ ಪ್ರಪ್ರಥಮವಾಗಿ ದಾಖಲಾಗಿದೆ. ಇದು ನವ್ಗೋರೋಡ್ನ ರಾಜಕುಮಾರ ವ್ಲಾಡಿಮಿರ್ ಯಾರೊಸ್ಲಾವೊವಿಚ್[23] ಗೆಂದು ಗ್ಲಾಗೋಲಿಟಿಕ್ ಭಾಷೆಯಿಂದ ಸಿರಿಲಿಕ್ ಭಾಷೆಗೆ ಪುರೋಹಿತನೊಬ್ಬ ತರ್ಜುಮೆ ಮಾಡಿದ ಬುಕ್ ಆಫ್ ಪ್ಸಾಮ್ಸ್ಎಂಬ ಪುಸ್ತಕದ ಹಸ್ತಪ್ರತಿಯ ಮುಕ್ತಾಯಮುದ್ರೆ ಆಗಿತ್ತು. ಪುರೋಹಿತನು ಅದರಲ್ಲಿ ತನ್ನ ಹೆಸರನ್ನು "ದುಷ್ಟ ರಕ್ತಪಿಶಾಚಿ" ಅಥವಾ "ವಿಕಾರ ರಕ್ತಪಿಶಾಚಿ"[24] ಎಂಬರ್ಥ ಬರುವ "ಉಪಿರ್' ಲಿಖ್ಯಿ " (Упирь Лихый), ಎಂದು ಬರೆದುಕೊಳ್ಳುತ್ತಾನೆ. ಈ ತರಹದ ಸುಸ್ಪಷ್ಟ ಅಪರಿಚಿತ ಹೆಸರುಗಳನ್ನು ಬಳಸಿರುವುದು ನಿಸರ್ಗಾರಾಧಕರಿಂದ/ನಾಸ್ತಿಕರಿಂದ ತಪ್ಪಿಸಿಕೊಳ್ಳುವ ಹಾಗೂ ಖಾಸಗಿಯಾಗಿ ಉಪನಾಮವನ್ನಿಟ್ಟುಕೊಳ್ಳುವ ಪರಿಪಾಠಗಳೆರಡಕ್ಕೂ ಉದಾಹರಣೆಯಾಗುತ್ತದೆ.[25]
ಮತ್ತೊಂದು ಹಳೆಯ ರಷ್ಯನ್ ಪದದ ಪ್ರಾಚೀನ ಬಳಕೆಯೆಂದರೆ ನಾಸ್ತಿಕವಿರೋಧಿ ಗ್ರಂಥ "ಸಂತ ಗ್ರಿಗೋರಿಯವರ ಉಪದೇಶ" ನಾಸ್ತಿಕರಿಂದ ಉಪಿರಿ ಆರಾಧನೆಯಿತ್ತೆಂದು ಹೇಳಲಾಗುವ 11ರಿಂದ–13ನೇ ಶತಮಾನದ ವಿವಿಧ ಕಾಲಮಾನಗಳಲ್ಲಿ ಗುರುತಿಸಲಾಗಿರುವ ಪುಸ್ತಕದಲ್ಲಿದೆ.[26][27]
ವ್ಯುತ್ಪತ್ತಿ ಮೂಲದ ಬಗೆಗೆ ಇರುವ ಒಂದು ಸಿದ್ಧಾಂತದ ಪ್ರಕಾರ : ಆಲ್ಬೇನಿಯನ್ ಪದಗಳಾದ ಧೆಂಬ್ {ಹಲ್ಲು} ಮತ್ತು ಪೈರ್ {ಹೀರುವಿಕೆ}ಗಳಿಂದ ರೂಪಿಸಿತ್ತು.
ರಕ್ತಪಿಶಾಚಿತನದ ಕಲ್ಪನೆಯು ಸಹಸ್ರಮಾನಗಳಿಂದಲೇ ಇದೆ, ಮೆಸಪಟೋಮಿಯಾ, ಹೀಬ್ರೂ, ಪ್ರಾಚೀನ ಗ್ರೀಕ್ ಮತ್ತು ರೋಮನ್ ಜನಾಂಗಗಳು ಆಧುನಿಕ ರಕ್ತಪಿಶಾಚಿಗಳ ಪೂರ್ವಭಾವಿ ರೂಪಗಳೆಂದು ಗುರುತಿಸಲಾಗುವ ದೆವ್ವ ಹಾಗೂ ಪ್ರೇತಗಳನ್ನು ಕುರಿತ ಕಥೆಗಳನ್ನು ಹೊಂದಿದ್ದವು. ಈ ಪ್ರಾಚೀನ ನಾಗರೀಕತೆಗಳಲ್ಲಿ ರಕ್ತಪಿಶಾಚಿ-ಮಾದರಿಯ ಜೀವಿಗಳ ಪ್ರಸಕ್ತಿಯಿದ್ದಾಗ್ಯೂ, ರಕ್ತಪಿಶಾಚಿಯೆಂದು ಈಗ ಕರೆಯಲ್ಪಡುವ ಜೀವಿಯ ಬಗೆಗಿನ ಜಾನಪದ ಮೂಲಗಳು ಆಗ್ನೇಯ ಯೂರೋಪ್,[8] ನಲ್ಲಿ ಅನೇಕ ಜನಾಂಗೀಯ ಕಂಠೋಕ್ತ ಸಂಪ್ರದಾಯಗಳನ್ನು ಲಿಖಿತರೂಪದಲ್ಲಿ ದಾಖಲಿಸಿ ಪ್ರಕಟಿಸಲು ಆರಂಭಿಸಿದ 18ನೇ ಶತಮಾನದ ಆದಿಭಾಗವನ್ನು ಆಶ್ರಯಿಸುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ, ರಕ್ತಪಿಶಾಚಿಗಳು ದುಷ್ಟ ವ್ಯಕ್ತಿಗಳ ಪ್ರೇತಗಳೋ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳು ಅಥವಾ ಮಾಟಗಾರರಾಗಿರುತ್ತಿದ್ದರೂ, ದುಷ್ಟ ಪ್ರೇತವೊಂದಕ್ಕೆ ಶವವೊಂದು ಸಿಕ್ಕಿದಾಗ ಅದರಿಂದ ಇಲ್ಲವೇ ರಕ್ತಪಿಶಾಚಿಯಿಂದ ಕೊಲ್ಲಲ್ಪಟ್ಟ ಕಾರಣ ಸಹಾ ರಕ್ತಪಿಶಾಚಿಗಳ ಸೃಷ್ಟಿಗೆ ಕಾರಣವಾಗಬಹುದಿತ್ತು. ಈ ತರಹದ ದಂತಕಥೆಗಳಲ್ಲಿನ ನಂಬಿಕೆ ಎಷ್ಟು ವ್ಯಾಪಕವಾಗಿತ್ತೆಂದರೆ ಕೆಲ ಪ್ರದೇಶಗಳಲ್ಲಿ ಸಾಮೂಹಿಕ ಉನ್ಮಾದವನ್ನುಂಟು ಮಾಡಿ, ಹಲವೊಮ್ಮೆ ರಕ್ತಪಿಶಾಚಿಗಳಾಗಿರಬಹುದೆಂದು ಅನುಮಾನಿತರಾಗಿದ್ದವರನ್ನು ಸಾರ್ವಜನಿಕವಾಗಿ ಕೊಲ್ಲುತ್ತಿದ್ದ ನಿದರ್ಶನಗಳೂ ಇದ್ದವು.[28]
ದಂತಕಥೆಯ ರಕ್ತಪಿಶಾಚಿಯ ಬಗ್ಗೆ ಹೀಗೆಯೇ ಎಂದು ನಿರ್ದಿಷ್ಟ ವಿವರಣೆ ಕೊಡಲು ಕಷ್ಟಸಾಧ್ಯವಾದರೂ ಅನೇಕ ಐರೋಪ್ಯ ದಂತಕಥೆಗಳ ಮಧ್ಯೆ ಸಾಕಷ್ಟು ಸಾಮ್ಯತೆಗಳಿದ್ದವು. ರಕ್ತಪಿಶಾಚಿಗಳು ನೋಡಲು ಸಾಮಾನ್ಯವಾಗಿ ಊದಿಕೊಂಡಂತೆ ಕೆಂಪಗಿನ, ನೇರಳೆ ಬಣ್ಣದ ಅಥವಾ ದಟ್ಟ ವರ್ಣದವಾಗಿರುತ್ತಿದ್ದವು, ಈ ಲಕ್ಷಣಗಳನ್ನು ಸಾಮಾನ್ಯವಾಗಿ ಆಗತಾನೆ ರಕ್ತ ಕುಡಿದಿರುವುದನ್ನು ಸೂಚಿಸುತ್ತದೆ ಎನ್ನಲಾಗುತ್ತಿತ್ತು. ಅದಿದ್ದ ಶವಪೆಟ್ಟಿಗೆ ಇಲ್ಲವೇ ಶವಹೊದಿಕೆಯೊಳಗೆ ನೋಡಿದರೆ ದಿಟವಾಗಿ ಬಾಯಿ ಮತ್ತು ಮೂಗುಗಳಿಂದ ರಕ್ತ ಸೋರುವುದನ್ನು ಹಾಗೂ ಸಾಮಾನ್ಯವಾಗಿ ಅದರ ಎಡಕಣ್ಣು ತೆರೆದಿರುವುದನ್ನು ಕಾಣಬಹುದಿತ್ತು.[29] ಹೂಳುವಾಗ ಹೊದಿಸಿದ್ದ ನಾರಿನ ಶವಹೊದಿಕೆಯನ್ನು ಹೊದ್ದಿರುತ್ತಿದ್ದ ಇವುಗಳ ಹಲ್ಲು,ಕೂದಲು ಮತ್ತು ಉಗುರುಗಳು ಅಸಾಮಾನ್ಯ ಬೆಳವಣಿಗೆಯನ್ನು ಹೊಂದಿರುತ್ತಿದ್ದರೂ ಕೋರೆಹಲ್ಲುಗಳ ಪ್ರಸಕ್ತಿಯಿರಲಿಲ್ಲ.[30]
ರಕ್ತಪಿಶಾಚಿಗಳ ಉಗಮಕ್ಕೆ ಕಾರಣಗಳು ಬಹಳ ವಿಧವಿದ್ದು ಮೂಲ ದಂತಕಥೆಯಲ್ಲಿ ವ್ಯತ್ಯಾಸವಾಗಿವೆ. ಸ್ಲಾವಿಕ್ ಮತ್ತು ಚೀನೀಯ ಸಂಪ್ರದಾಯಗಳಲ್ಲಿ, ಯಾವುದೇ ಪ್ರಾಣಿಗಳಿಂದ ನಿರ್ದಿಷ್ಟವಾಗಿ ನಾಯಿ ಅಥವಾ ಬೆಕ್ಕುಗಳಿಂದ ಆಕ್ರಮಿತವಾಗಿ ಸತ್ತ ವ್ಯಕ್ತಿಯ ಶವವು ರಕ್ತಪಿಶಾಚಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.[31] ಗಾಯಗೊಂಡು ಸತ್ತ ವ್ಯಕ್ತಿಯ ಶವದ ಗಾಯವನ್ನು ಬಿಸಿನೀರಿನಿಂದ ಸ್ವಚ್ಛಗೊಳಿಸದಿದ್ದರೂ ಅಪಾಯ ಖಚಿತ. ರಷ್ಯನ್ ದಂತಕಥೆಯ ಪ್ರಕಾರ, ರಕ್ತಪಿಶಾಚಿಗಳು ಹಿಂದೆ ತಾವು ಬದುಕಿದ್ದಾಗ ಮಾಟಗಾರರು ಇಲ್ಲವೇ ಚರ್ಚ್ನ್ನು ವಿರೋಧಿಸುತ್ತಿದ್ದವರಲ್ಲಿ ಒಬ್ಬರಾಗಿರುತ್ತಿದ್ದರು.[[32]
ಕೆಲದಿನಗಳ ಹಿಂದೆ ಸಾವನ್ನಪ್ಪಿದ ತಮ್ಮ ಪ್ರೀತಿಪಾತ್ರರು ಭೂತಪ್ರೇತಗಳಾಗಿ ಬದಲಾಗದಿರಲು ಅನೇಕ ಸಾಂಸ್ಕೃತಿಕ ಆಚರಣೆಗಳು ಚಾಲ್ತಿಯಲ್ಲಿದ್ದವು. ಶವವನ್ನು ತಲೆಕೆಳಕಾಗಿ ಹೂಳುವುದು ಹೆಚ್ಚು ಬಳಕೆಯಲ್ಲಿತ್ತಾದರೂ, ಇತರೆ ಯಾವುದೇ ಪ್ರೇತ ದೇಹಕ್ಕೆ ಪ್ರವೇಶಿಸದಂತೆ ಸಮಾಧಿಯ ಬಳಿ ಪಿಕಾಸಿ ಅಥವಾ ಗುದ್ದಲಿಗಳಂತಾ[33] ಐಹಿಕ ವಸ್ತುಗಳನ್ನಿಟ್ಟು ಅಥವಾ ಶವಪೆಟ್ಟಿಗೆಯಿಂದ ಹೊರಬರದೇ ಅಲ್ಲೇ ಇರದಂತೆ ಸತ್ತವರನ್ನು ಸಂಪ್ರೀತಿಗೊಳಿಸಲು ಪ್ರಯತ್ನಿಸುವುದೂ ಇತ್ತು. ಈ ವಿಧಾನವು ಪ್ರಾಚೀನ ಗ್ರೀಕ್ ಪಾತಾಳದ ಸ್ಟಿಕ್ಸ್ ನದಿಯನ್ನು ದಾಟಲು ತೆರಬೇಕಾದ ಸುಂಕಕ್ಕೆಂದು ಶವದ ಬಾಯಿಯಲ್ಲಿ ಒಬುಲಸನ್ನು ಇಡುವ ಪ್ರವೃತ್ತಿಯನ್ನು ಹೋಲುತ್ತದಾದರೂ; ಆ ಬಿಲ್ಲೆಯನ್ನು ದುಷ್ಟಶಕ್ತಿಗಳು ದೇಹ ಪ್ರವೇಶಿಸದಂತೆ ತಡೆಯಲು ಇಡುವುದಾಗಿ ವಾದವಿವಾದಗಳಿದ್ದರೂ, ಇದೂ ಸಹಾ ನಂತರ ರಕ್ತಪಿಶಾಚಿ ಬಗೆಗೆ ದಂತಕಥೆಯಲ್ಲಿ ಪ್ರಭಾವ ಬೀರಿದ್ದಿರಬಹುದಾಗಿದೆ. ಇದು ರಿಕೊಲಕಾಸ್, ಎಂದು ಕರೆಸಿಕೊಳ್ಳುವ ರಕ್ತಪಿಶಾಚಿಯಾಗುವುದನ್ನು ತಡೆಯಲು “ಏಸು ಕ್ರಿಸ್ತನು ಜಯಿಸುತ್ತಾನೆ” ಎಂಬ ಬರಹವಿರುತ್ತಿದ್ದ ಮೇಣದ ಶಿಲುಬೆ ಮತ್ತು ಮಡಿಕೆಯನ್ನು ಶವದ ಮೇಲಿಡುತ್ತಿದ್ದ ಸಂಪ್ರದಾಯದ ಮೂಲಕ ಆಧುನಿಕ ಗ್ರೀಕ್ ದಂತಕಥೆಯಲ್ಲಿ ಸಹಾ ಚಾಲ್ತಿಯಲ್ಲಿದೆ.[34] ಯೂರೋಪ್ನಲ್ಲಿ ಚಾಲ್ತಿಯಲ್ಲಿದ್ದ ಇತರೆ ವಿಧಾನಗಳೆಂದರೆ ಮಂಡಿಯ ಬಳಿಯ ಸ್ನಾಯುರಜ್ಜುವನ್ನು ಮುರಿಯುವುದು ಅಥವಾ ಅಫೀಮು ಸಸ್ಯಗಳು, ಸಾಸಿವೆ ಅಥವಾ ಮರಳನ್ನು ರಕ್ತಪಿಶಾಚಿಯಾಗಬಹುದಾದ ವ್ಯಕ್ತಿಯ ಸಮಾಧಿಯ ಪಕ್ಕದಲ್ಲಿಡುವುದು; ಇದರ ಉದ್ದೇಶವೇನೆಂದರೆ ಪಿಶಾಚಿಯು ಅಲ್ಲಿ ಬಿದ್ದಿರುವ ಧಾನ್ಯಕಾಳುಗಳನ್ನು ಎಣಿಸುತ್ತಿದ್ದು ರಾತ್ರಿಯಿಡೀ ಪುರುಸೊತ್ತಿರದಂತೆ ಮಾಡುವುದು.[35] ಇದೇ ಮಾದರಿಯ ಚೀನೀ ಆಖ್ಯಾಯಗಳ ಪ್ರಕಾರ ರಕ್ತಪಿಶಾಚಿಯಂತಹಾ ಜೀವಿ ಅಕ್ಕಿ ಚೀಲವೊಂದನ್ನು ಕಂಡರೆ ಅದು ಪ್ರತಿ ಕಾಳನ್ನು ಎಣಿಸಲೇಬೇಕಿರುತ್ತದೆ; ಈ ಕಲ್ಪನೆಯು ಭಾರತ ಉಪಖಂಡದ ಹಾಗೂ ದಕ್ಷಿಣ ಅಮೇರಿಕಾದ ಮಾಟಗಾರರು ಹಾಗೂ ಇತರ ದುಷ್ಟ ಹಾಗೂ ಉಪದ್ರವಕಾರಿ ಶಕ್ತಿಗಳು ಅಥವಾ ವ್ಯಕ್ತಿಗಳ ಬಗೆಗಿನ ದಂತಕಥೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಷಯವಸ್ತುವಾಗಿದೆ.[36]
ಅನೇಕ ವಿಷದವಾದ ಆಚರಣೆಗಳನ್ನು ರಕ್ತಪಿಶಾಚಿಯನ್ನು ಗುರುತಿಸಲು ಮಾಡಲಾಗುತ್ತದೆ. ರಕ್ತಪಿಶಾಚಿಯ ಸಮಾಧಿಯನ್ನು ಕಂಡುಹಿಡಿಯಲು ಬಳಸುವ ವಿಧಾನಗಳೆಂದರೆ ಅವಿವಾಹಿತ ಬಾಲಕನನ್ನು ಸ್ಮಶಾನದಲ್ಲಿ ಅಥವಾ ಚರ್ಚ್ ಆವರಣದಲ್ಲಿ ಬೀಜದ ಕುದುರೆಯ ಮೇಲೆ ಕುಳ್ಳಿರಿಸಿ ಓಡುವಂತೆ ಮಾಡುವುದು - ಆಗ ಅನುಮಾನಾಸ್ಪದ ಸಮಾಧಿಯ ಮುಂದೆ ಕುದುರೆಯು ಓಡಲು ಅಡ್ಡಿಯಾಗಬಹುದಿರುತ್ತದೆ.[32] ಸಾಮಾನ್ಯವಾಗಿ ಇದಕ್ಕೆ ಕಪ್ಪು ಕುದುರೆ ಅಗತ್ಯ, ಆದರೆ ಆಲ್ಬೇನಿಯಾದಲ್ಲಿ ಇದು ಬಿಳಿಯದೇ ಆಗಿರಬೇಕು.[37] ಸಮಾಧಿಯ ಬಳಿಯ ನೆಲದಲ್ಲಿ ಕಾಣಿಸಿಕೊಳ್ಳುವ ಗುಣಿಗಳನ್ನು ರಕ್ತಪಿಶಾಚಿ ಚಟುವಟಿಕೆಯ ಸೂಚನೆಯೆನ್ನಲಾಗುತ್ತಿತ್ತು.[38]
ರಕ್ತಪಿಶಾಚಿಗಳಾಗಿರಬಹುದೆಂದು ನಂಬಲಾಗುವ ಶವಗಳು ಸಾಮಾನ್ಯವಾಗಿ ಇರಬೇಕಾದುದಕ್ಕಿಂತ ಉತ್ತಮ ದೇಹಸ್ಥಿತಿಯನ್ನು ಕಾಪಾಡಿಕೊಂಡಿದ್ದು, ಅಲ್ಪ ಪ್ರಮಾಣದ ಇಲ್ಲವೇ ಸ್ವಲ್ಪವೂ ಕೊಳೆತಿರದೇ ಇರುತ್ತವೆ.[39] ಕೆಲ ಸಂದರ್ಭಗಳಲ್ಲಿ, ಅನುಮಾನಿತ ಸಮಾಧಿಗಳನ್ನು ತೆರೆದಾಗ, ಹಳ್ಳಿಗರು ಬಲಿಪಶುವಾದ ವ್ಯಕ್ತಿಯ ತಾಜಾ ರಕ್ತ ಮುಖವೆಲ್ಲಾ ಹರಡಿದ್ದುದನ್ನು ನೋಡಿದುದಾಗಿ ವಿವರಿಸುತ್ತಾರೆ.[40] ಆಯಾ ಪ್ರದೇಶದಲ್ಲಿ ರಕ್ತಪಿಶಾಚಿಯು ಚಟುವಟಿಕೆಯಿಂದಿದೆ ಎಂಬುದರ ಸೂಚನೆಗಳೆಂದರೆ ಜಾನುವಾರು,ಕುರಿಗಳು,ಸಂಬಂಧಿಕರು ಅಥವಾ ನೆರೆಹೊರೆಯವರ ಮರಣ. ದಂತಕಥೆಯ ರಕ್ತಪಿಶಾಚಿಗಳು ತಮ್ಮ ಇರುವಿಕೆಯನ್ನು ಸಣ್ಣ ಪ್ರಮಾಣದ ಗಲಾಟೆಯನ್ನು ಎಂದರೆ, ಛಾವಣಿಯ ಮೇಲೆ ಕಲ್ಲು ತೂರುವುದು ಅಥವಾ ಮನೆಯ ವಸ್ತುಗಳನ್ನು ಚಲಿಸುವಂತೆ ಮಾಡುವುದು,[41] ಹಾಗೂ ಜನರು ಮಲಗಿರುವಾಗ ಅವರನ್ನು ಒತ್ತುವುದು/ಅಮುಕುವುದು ಮಾಡುವುದರ ಮೂಲಕ ತೋರುತ್ತವೆ.[42]
ದುರದೃಷ್ಟನಿವಾರಕ — ಭೂತ ಪ್ರೇತಗಳಿಂದ ಕಾಪಾಡಬಲ್ಲ ಐಹಿಕ ಅಥವಾ ದೈವಿಕ ವಸ್ತುಗಳಾದ ಬೆಳ್ಳುಳ್ಳಿ[43] ಅಥವಾ ಪವಿತ್ರ ನೀರು ರಕ್ತಪಿಶಾಚಿ ದಂತಕಥೆಯಲ್ಲಿ ಅತಿ ಸಾಮಾನ್ಯ. ವಸ್ತುಗಳು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸಗೊಳ್ಳುತ್ತವೆ; ಕಾಡುಗುಲಾಬಿಯ ಕೊಂಬೆ ಮತ್ತು ಹಾಥಾರ್ನ್ ಸಸ್ಯಗಳು ರಕ್ತಪಿಶಾಚಿಗಳಿಗೆ ಹಾನಿಯುಂಟು ಮಾಡಬಲ್ಲವು ಎಂದು ನಂಬಲಾಗಿದೆ; ಯೂರೋಪ್ನಲ್ಲಿ, ಮನೆಯ ಛಾವಣಿಯ ಮೇಲೆ ಸಾಸಿವೆಯನ್ನು ಹರಡಿದರೆ ಅವು ದೂರ ಇರುತ್ತವೆ ಎಂಬ ಪ್ರತೀತಿ ಇದೆ.[44] ಇತರೆ ದುರದೃಷ್ಟನಿವಾರಕಗಳೆಂದರೆ ದೈವಿಕ ವಸ್ತುಗಳಾದ ಶಿಲುಬೆ, ರೋಸರಿ ಅಥವಾ ಪವಿತ್ರ ನೀರು. ರಕ್ತಪಿಶಾಚಿಗಳು ಪವಿತ್ರೀಕರಿಸಿದ ಸ್ಥಳಗಳಾದ ಚರ್ಚ್ಗಳು ಅಥವಾ ದೇವಸ್ಥಾನಗಳು ಅಥವಾ ನದಿಸಂಗಮಗಳಲ್ಲಿ ನಡೆಯಲಾರವು ಎಂಬ ನಂಬಿಕೆ ಇದೆ.[45] ಸಾಂಪ್ರದಾಯಿಕವಾಗಿ ದುರದೃಷ್ಟನಿವಾರಕ ಎಂದು ಹೇಳಲಾಗದಿದ್ದರೂ ಕನ್ನಡಿಗಳನ್ನು ರಕ್ತಪಿಶಾಚಿಗಳನ್ನು ದೂರವಿರಿಸಲು, ಅದರಲ್ಲೂ ಬಾಗಿಲಿನಲ್ಲಿ ಹೊರಗಿನ ಕಡೆ ಮುಖ ಮಾಡಿ ಇಡುತ್ತಾರೆ (ಕೆಲ ಸಂಸ್ಕೃತಿಗಳಲ್ಲಿ, ರಕ್ತಪಿಶಾಚಿಗಳಿಗೆ ಪ್ರತಿಬಿಂಬವಿರುವುದಿಲ್ಲ ಮತ್ತು ಕೆಲವೊಮ್ಮೆ ನೆರಳಿರುವುದಿಲ್ಲ, ಇದು ಬಹುಶಃ ರಕ್ತಪಿಶಾಚಿಗಳ ಆತ್ಮರಾಹಿತ್ಯವನ್ನು ಸೂಚಿಸಲಿರಬಹುದು).[46] ಈ ಲಕ್ಷಣವು, ಸಾರ್ವತ್ರಿಕವಲ್ಲದೇ ಇದ್ದರೂ (ಗ್ರೀಕ್ ರಿಕೊಲಕಾಸ್/ಟಿಂಪಾನಿಯೋಸ್ ಗಳು ನೆರಳು ಹಾಗೂ ಪ್ರತಿಬಿಂಬ ಎರಡನ್ನೂ ಹೊಂದಿದ್ದವು), ಡ್ರಾಕುಲಾ ದಲ್ಲಿ ಬ್ರಾಮ್ ಸ್ಟಾಕರ್ರು ಬಳಸಿದ್ದರು, ನಂತರವೂ ಇದು ಸಮಕಾಲೀನ ಲೇಖಕರು ಹಾಗೂ ಚಿತ್ರನಿರ್ಮಾಪಕರಲ್ಲಿ ಜನಪ್ರಿಯವಾಗಿತ್ತು.[47] ಕೆಲ ನಂಬಿಕೆಗಳ ಪ್ರಕಾರ ರಕ್ತಪಿಶಾಚಿಯು ಯಜಮಾನನ ಆಹ್ವಾನವಿಲ್ಲದೇ ಯಾವುದೇ ಮನೆಯನ್ನು ಪ್ರವೇಶಿಸುವಂತಿಲ್ಲ, ಆದರೆ ಒಮ್ಮೆ ಪ್ರವೇಶ ಪಡೆದರೆ ಮತ್ತೆ ತಮ್ಮಿಚ್ಛೆಯಂತೆ ಓಡಾಡಿಕೊಂಡಿರಬಹುದು.[46] ದಂತಕಥೆಯ ರಕ್ತಪಿಶಾಚಿಗಳು ರಾತ್ರಿಯಲ್ಲಿ ಹೆಚ್ಚು ಚಟುವಟಿಕೆಯಿಂದಿರುತ್ತವಾದರೂ, ಸೂರ್ಯನ ಬೆಳಕಿಂದ ಅವಕ್ಕೆ ಅಪಾಯ ಎಂದೇನಿಲ್ಲ.[47]
ಅನುಮಾನಿತ ರಕ್ತಪಿಶಾಚಿಗಳನ್ನು ನಾಶಮಾಡುವ ವಿಧಾನಗಳು ಅನೇಕವಿದ್ದು, ಅದರಲ್ಲಿ ನೇತು ಹಾಕಿ ಸುಡುವುದು ನಿರ್ದಿಷ್ಟವಾಗಿ ದಕ್ಷಿಣ ಸ್ಲಾವಿಕ್ ಸಂಸ್ಕೃತಿಗಳಲ್ಲಿ ಬಹಳ ಸಾಮಾನ್ಯ ಪದ್ಧತಿಯಾಗಿತ್ತು.[48] ಇದಕ್ಕೆ ಆಶ್ ಮರವು ರಷ್ಯಾ ಮತ್ತು ಬಾಲ್ಟಿಕ್ ರಾಜ್ಯ[49] ಗಳಲ್ಲಿ ಬಳಕೆಯಾಗುತ್ತಿದ್ದರೆ, ಸರ್ಬಿಯಾ[50] ದಲ್ಲಿ ಹಾಥಾರ್ನ್ ಹಾಗೂ ಸಿಲೇಶಿಯಾ/ಸಿಲೇಸಿಯಾದಲ್ಲಿ ಓಕ್ ಮರವು ಬಳಕೆಯಾಗುತ್ತಿತ್ತು.[51] ಸಂಭಾವ್ಯ ರಕ್ತಪಿಶಾಚಿಗಳನ್ನು ಬಹಳ ಸಾಮಾನ್ಯವಾಗಿ ಹೃದಯದ ಮೂಲಕ ನೇತುಹಾಕುತ್ತಿದ್ದರೂ, ರಷ್ಯಾ ಮತ್ತು ಉತ್ತರಜರ್ಮನಿ[52][53] ಗಳಲ್ಲಿ ಬಾಯಿಯ ಮೂಲಕ ಹಾಗೂ ಈಶಾನ್ಯ ಸರ್ಬಿಯಾ[54] ಹೊಟ್ಟೆಯ ಮೂಲಕ ನೇತುಹಾಕಲಾಗುತ್ತಿತ್ತು. ಎದೆಯ ಚರ್ಮದ ಮೂಲಕ ಚುಚ್ಚುವುದು ಊದಿಕೊಂಡಿರುವ ರಕ್ತಪಿಶಾಚಿಯನ್ನು ಕುಂದಿಸುವ ವಿಧಾನವಾಗಿದ್ದು; ಪಿಕಾಸಿಗಳಂಥ ಚೂಪಾದ ವಸ್ತುಗಳನ್ನಿಟ್ಟು ಹೂಳುವುದರ ಸಮಾನ ವಿಧಾನವಾಗಿದೆ. ಇದರಿಂದ ಪಿಶಾಚಿಯಾಗಲು ದೇಹವು ಊದಿಕೊಳ್ಳಲು ಆರಂಭಿಸಿದರೆ ಈ ಚೂಪಾದ ವಸ್ತುಗಳು ಅದರ ಮೂಲಕ ತೂರಿಹೋಗಿ ಆ ಯತ್ನವನ್ನು ನಿಷ್ಫಲಗೊಳಿಸುವ ಸಾಧ್ಯತೆ ಇರುತ್ತಿತ್ತು.[55] ಶಿರಚ್ಛೇದನವು ಜರ್ಮನಿ ಹಾಗೂ ಪಶ್ಚಿಮ ಸ್ಲಾವಿಕ್ ಪ್ರದೇಶಗಳಲ್ಲಿ ಹೆಚ್ಚು ಬಳಕೆಯಲ್ಲಿದ್ದ ವಿಧಾನವಾಗಿತ್ತು, ನಂತರ ತಲೆಯನ್ನು ಕಾಲುಗಳ ನಡುವೆ ಇಲ್ಲವೇ ಪೃಷ್ಠದ ಹಿಂದೆ ಅಥವಾ ದೇಹದಿಂದ ದೂರವಾಗಿ ಹೂಳುತ್ತಿದ್ದರು.[48] ಈ ವಿಧಾನವು ಆತ್ಮದ ನಿರ್ಗಮನವನ್ನು ತ್ವರೆಪಡಿಸುವುದೆಂದು ನಂಬಿದ್ದರು, ಕೆಲವೊಂದು ಸಂಸ್ಕೃತಿಗಳಲ್ಲಿ ಶವದಲ್ಲೇ ಆತ್ಮವು ಕಾಲಹರಣ ಮಾಡುತ್ತದೆ ಎಂದು ನಂಬಿದ್ದರು. ರಕ್ತಪಿಶಾಚಿಯ ತಲೆ, ದೇಹ ಅಥವಾ ಬಟ್ಟೆಗಳನ್ನು ಸಹಾ ಮೊಳೆ ಹೊಡೆದು ಏಳಲಾಗದಂತೆ ನೆಲಕ್ಕೆ ಕಚ್ಚಿಕೊಂಡಿರುವ ವಿಧಾನವೂ ಇತ್ತು.[56] ಜಿಪ್ಸಿಗಳು ಉಕ್ಕು ಅಥವಾ ಕಬ್ಬಿಣದ ಸೂಜಿಗಳನ್ನು ಶವದ ಹೃದಯದೊಳಕ್ಕೆ ಚುಚ್ಚಿ ಕಬ್ಬಿಣದ ತುಂಡುಗಳನ್ನು ಬಾಯಿಯಲ್ಲಿ, ಕಣ್ಣು, ಕಿವಿಗಳ ಮೇಲೆ ಮತ್ತು ಬೆರಳುಗಳ ನಡುವೆ ಇಟ್ಟು ಹೂಳುತ್ತಿದ್ದರು. ಅವರು ಹಾಥಾರ್ನ್ಅನ್ನು ಶವದ ಕಾಲುಚೀಲದೊಳಕ್ಕೆ ಇಡುವುದು ಇಲ್ಲವೇ ಕಾಲುಗಳ ಮೂಲಕ ಹಾಥಾರ್ನ್ ಅನ್ನು ನುಗ್ಗಿಸುವುದನ್ನೂ ಮಾಡುತ್ತಿದ್ದರು. ವೆನಿಸ್ ಹತ್ತಿರದ 16ನೇ ಶತಮಾನದ ಸಮಾಧಿಯೊಂದರಲ್ಲಿ ರಕ್ತಪಿಶಾಚಿಯೆಂದು ನಂಬಲಾದ ಮಹಿಳೆಯ ಶವವೊಂದರ ಬಾಯಲ್ಲಿ ಇಟ್ಟಿಗೆಯನ್ನು ಇಟ್ಟಿದ್ದನ್ನು 2006ರಲ್ಲಿ ಪತ್ತೆಹಚ್ಚಿದ ಪ್ರಾಕ್ತನಶಾಸ್ತ್ರಜ್ಞರು ಇದನ್ನು ಕೊಲ್ಲುವ ಆಚರಣೆ ಎಂದು ಮನಗಂಡರು.[57] ಇನ್ನಿತರ ವಿಧಾನಗಳೆಂದರೆ ಸಮಾಧಿಯ ಮೇಲೆಲ್ಲಾ ಕುದಿಯುವ ನೀರನ್ನು ಚೆಲ್ಲುವುದು ಅಥವಾ ಸಂಪೂರ್ಣವಾಗಿ ದೇಹವನ್ನು ದಹಿಸುವುದು. ಬಾಲ್ಕನ್ನಲ್ಲಿ ರಕ್ತಪಿಶಾಚಿಗಳನ್ನು ಗುಂಡು ಹಾರಿಸಿ ಅಥವಾ ಮುಳುಗಿಸಿ, ಅಥವಾ ಶವಯಾತ್ರೆಯನ್ನು ಪುನರಾವರ್ತಿಸಿ, ಪವಿತ್ರ ನೀರನ್ನು ದೇಹಕ್ಕೆ ಪ್ರೋಕ್ಷಿಸುವುದರ ಮೂಲಕ ಅಥವಾ ಭೂತೋಚ್ಚಾಟನೆ ಮೂಲಕ ಕೊಲ್ಲಬಹುದಾಗಿತ್ತು. ರೊಮೇನಿಯಾದಲ್ಲಿ ಬೆಳ್ಳುಳ್ಳಿಯನ್ನು ಬಾಯಲ್ಲಿಡಬಹುದಾಗಿತ್ತು, ಮತ್ತು 19ನೇ ಶತಮಾನದವರೆಗೆ, ಶವಪೆಟ್ಟಿಗೆಯ ಮೂಲಕ ಗುಂಡನ್ನು ಹಾರಿಸುವ ಮುನ್ನೆಚ್ಚರಿಕೆಯ ಪರಿಪಾಠವನ್ನು ಇಟ್ಟುಕೊಳ್ಳಲಾಗುತ್ತಿತ್ತು. ಪ್ರತಿರೋಧದ ಸಂದರ್ಭಗಳಲ್ಲಿ ದೇಹದ ಅಂಗಗಳನ್ನು ಬೇರ್ಪಡಿಸಿ ಅವನ್ನು ಸುಟ್ಟು ನೀರಿನಲ್ಲಿ ಬೆರೆಸಿ ಕುಟುಂಬದವರ ಸುಪರ್ದಿಗೆ ಕೊಡಲಾಗುತ್ತಿತ್ತು. ಜರ್ಮನಿಯ ಸ್ಯಾಕ್ಸನ್ ಪ್ರದೇಶಗಳಲ್ಲಿ ಅನುಮಾನಿತ ರಕ್ತಪಿಶಾಚಿಗಳ ಬಾಯಲ್ಲಿ ನಿಂಬೆಹಣ್ಣು ಇಡಲಾಗುತ್ತಿತ್ತು.[58]
ಅನೇಕ ಶತಮಾನಗಳಿಂದ ವಿಶ್ವದಾದ್ಯಂತ ಪ್ರತಿ ಸಂಸ್ಕೃತಿಯಲ್ಲೂ ಅತಿಮಾನುಷ ಶಕ್ತಿಗಳು ಬದುಕಿರುವ ವ್ಯಕ್ತಿಗಳ ರಕ್ತ ಹೀರುವ ಅಥವಾ ಮಾಂಸ ತಿನ್ನುವ ಕಥೆಗಳಿವೆ.[59] ಇಂದು ನಾವು ಇವುಗಳು ರಕ್ತಪಿಶಾಚಿಗಳಿರಬಹುದು ಎಂದುಕೊಳ್ಳುತ್ತೇವೆ. ಆದರೆ ಪ್ರಾಚೀನ ಕಾಲದಲ್ಲಿ ರಕ್ತಪಿಶಾಚಿ ಎನ್ನುವ ಕಲ್ಪನೆಯೇ ಅಸ್ತಿತ್ವದಲ್ಲಿರಲಿಲ್ಲ; ರಕ್ತ ಕುಡಿಯುವಿಕೆ ಹಾಗೂ ಆ ತರಹದ ಚಟುವಟಿಕೆಗಳನ್ನು ಪ್ರೇತಗಳು ಅಥವಾ ಆ ತರಹದ ಮಾಂಸ ತಿನ್ನುವ ಹಾಗೂ ರಕ್ತ ಕುಡಿಯುವ ಶಕ್ತಿಗಳಿಗೆ ಆರೋಪಿಸುತ್ತಿದ್ದರು; ದೆವ್ವವನ್ನು ಸಹಾ ರಕ್ತ ಪಿಶಾಚಿ[60] ಯಂತೆಯೇ ಪರಿಗಣಿಸಲಾಗುತ್ತಿತ್ತು. ಬಹಳಷ್ಟು ಮಟ್ಟಿಗೆ ಪ್ರತಿ ದೇಶವೂ ಸಹಾ ಒಂದಲ್ಲಾ ಒಂದು ವಿಧದ ಪ್ರೇತ ಅಥವಾ ದೆವ್ವ ಅಥವಾ ಇನ್ನೂ ಕೆಲವು ವಿಷಯಗಳಲ್ಲಿ ದೈವವೂ ಸಹಾ ರಕ್ತಕುಡಿಯುವುದೆಂಬುದಾಗಿ ನಂಬಲಾಗುತ್ತಿತ್ತು. ಭಾರತದಲ್ಲಿ ಉದಾಹರಣೆಗೆ ಬೇತಾಳದ, ಪಿಶಾಚಿಯಂತಹಾ ಶವಗಳಲ್ಲಿ ಆವಾಹನೆಯಾಗುವಂತಹಾ ಶಕ್ತಿಗಳ ಕಥೆಗಳು ಬೇತಾಳ ಪಚೀಸಿ ಎಂಬ ಗ್ರಂಥದಲ್ಲಿ ಮಾಡಲಾಗಿದೆ. ಕಥಾಸರಿತ್ಸಾಗರ ದ ಒಂದು ಪ್ರಮುಖ ಕಥೆಯಲ್ಲಿ ವಿಕ್ರಮಾದಿತ್ಯ ಚಕ್ರವರ್ತಿಯು ರಾತ್ರಿಗಳಲ್ಲಿ ತಪ್ಪಿಸಿಕೊಂಡು ಹೋಗುವ ಬೇತಾಳವೊಂದನ್ನು ವಶಪಡಿಸಿಕೊಳ್ಳುವ ಸಾಹಸಗಳ ಕಥೆಯಿದೆ.[61] ಪಿಶಾಚಿ, ಎಂದೆನಿಸಿಕೊಳ್ಳುವ ದುಷ್ಟರ ಅಥವಾ ಹುಚ್ಚರಾಗಿ ಸತ್ತವರ ಆತ್ಮಗಳು ಸಹಾ ರಕ್ತಪಿಶಾಚಿಗಳ ಲಕ್ಷಣಗಳನ್ನೇ ಹೊಂದಿರುತ್ತವೆ.[62] ಕೋರೆಹಲ್ಲುಗಳನ್ನು ಹೊಂದಿ ಶವಗಳ ಅಥವಾ ಅಸ್ಥಿಪಂಜರಗಳ ಹಾರವನ್ನು ಧರಿಸಿದ ಪ್ರಾಚೀನ ಭಾರತೀಯ ದೇವತೆ ಕಾಳಿಯನ್ನೂ ರಕ್ತ ಕುಡಿಯುವಿಕೆಗೆ ಉದಾಹರಿಸುತ್ತಾರೆ.[63] ಪ್ರಾಚೀನ ಈಜಿಪ್ಟ್ನಲ್ಲಿ ಸೆಖ್ಮೆಟ್ ಎಂಬ ದೇವತೆ ರಕ್ತ ಕುಡಿಯುತ್ತಿದ್ದಳು.[64]
ಪರ್ಷಿಯನ್ನರು ರಕ್ತ ಕುಡಿಯುವ ಪ್ರೇತಗಳ ಕಥೆಯನ್ನು ಹೊಂದಿರುವವ ನಾಗರೀಕತೆಗಳಲ್ಲಿ ಮೊದಲಿಗರು; ಉತ್ಖನನ ಮಾಡಿದಾಗ ಸಿಕ್ಕ ಮಣ್ಣಿನ ಮಡಕೆಗಳಲ್ಲಿ ಮಾನವರ ರಕ್ತ ಕುಡಿಯುವ ಪ್ರಾಣಿಗಳ ಚಿತ್ರಗಳನ್ನು ಮೂಡಿಸಲಾಗಿತ್ತು.[65] ಪ್ರಾಚೀನ ಬ್ಯಾಬಿಲೋನಿಯಾವು ಕಾಲ್ಪನಿಕ ಲಿಲಿಟು[66] ಎಂಬ, ಹೀಬ್ರೂ ದೆವ್ವಗಳ ಕಥೆಯಲ್ಲಿಯ ಲಿಲಿತ್(ಹೀಬ್ರೂ לילית) ಮತ್ತು ಆಕೆಯ ಮಕ್ಕಳಾದ ಲಿಲುಗಳ ಕಥೆಗೆ ಸಮಾನವಾದ ಕಥೆಗಳನ್ನು ಹೊಂದಿತ್ತು. ಲಿಲಿಟುವನ್ನು ಪ್ರೇತವನ್ನಾಗಿ ಹಾಗೂ ಎಳೆ ಮಕ್ಕಳ ರಕ್ತವನ್ನು ಕುಡಿದು ಜೀವಿಸುವದೆಂದು ಪರಿಭಾವಿಸಲಾಗಿತ್ತು. ಯಹೂದ್ಯರ ಪಿಶಾಚಿಗಳು ಗಂಡಸರು ಮತ್ತು ಹೆಂಗಸರ ಜೊತೆಗೆ ಆಗ ತಾನೆ ಜನಿಸಿದ ಮಕ್ಕಳ ರಕ್ತವನ್ನು ಕುಡಿಯುವುದಾಗಿ ಪ್ರತೀತಿ ಇತ್ತು.[66]
ಪ್ರಾಚೀನ ಗ್ರೀಕ್ ಮತ್ತು ರೋಮನ್ ಪುರಾಣಗಳು ಎಂಪುಸೇ[67], ಲಾಮಿಯಾ[68] ಮತ್ತು ಸ್ಟ್ರಿಗಸ್ ಎಂಬ ಮೂರು ಪಿಶಾಚಿಗಳನ್ನು ಹೆಸರಿಸುತ್ತವೆ. ಕಾಲಾಂತರದಲ್ಲಿ ಮೊದಲೆರಡು ಪದಗಳು ಮಾಟಗಾರರನ್ನು ಮತ್ತು ದೆವ್ವಗಳನ್ನು ಹೆಸರಿಸಲು ಬಳಕೆಯಾದವು. ಹೆಕೆಟ್ ಎಂಬ ದೇವತೆಯ ಮಗಳಾದ ಎಂಪುಸೇ ಪಿಶಾಚಿ ಸ್ವಭಾವದ ಕಂಚಿನ ಕಾಲುಗಳನ್ನು ಹೊಂದಿದ್ದ ಜೀವಿಯಾಗಿತ್ತು. ರಕ್ತ ಕುಡಿದು ಬದುಕುತ್ತಿದ್ದ ಆಕೆ ಗಂಡಸರನ್ನು ಆಕರ್ಷಿಸಲು ಯುವತಿಯ ರೂಪ ತಾಳಿ ಅವರು ಮಲಗಿದಾಗ ಅವರ ರಕ್ತ ಕುಡಿಯುತ್ತಿದ್ದಳು.[67] ಲಾಮಿಯಾ ಹಾಗೂ ಗೆಲ್ಲೌಡ್ಸ್ ಅಥವಾ ಗೆಲ್ಲೋಗಳೂ ಕೂಡಾ ಹಸುಗೂಸುಗಳ ಮೇಲೆ ಇದೇ ರೀತಿ ರಾತ್ರಿ ಅವು ಹಾಸಿಗೆ ಮೇಲೆ ಮಲಗಿದಾಗ ಆಕ್ರಮಣ ಮಾಡಿ ಅವುಗಳ ರಕ್ತ ಕುಡಿಯುತ್ತಿದ್ದವು.[68] ಲಾಮಿಯಾನಂತೆ ಸ್ಟ್ರಿಗಸ್ ಕೂಡಾ ಮಕ್ಕಳ ರಕ್ತವನ್ನು ಕುಡಿಯುತ್ತಿದ್ದರೂ ಯುವಕರ ಮೇಲೂ ಸಹಾ ಆಕ್ರಮಣ ಮಾಡುತ್ತಿದ್ದಳು. ಅವರು ಕಾಗೆಗಳ ಅಥವಾ ಪಕ್ಷಿಗಳ ದೇಹವನ್ನು ಹೊಂದಿರುತ್ತಿದ್ದರೆಂದು ಸಾಮಾನ್ಯವಾಗಿ ಪ್ರಚಲಿತವಾಗಿದ್ದರೂ, ನಂತರ ರೋಮನ್ ಪುರಾಣಗಳಲ್ಲಿ ಸ್ಟ್ರಿಕ್ಸ್ ಎಂಬ ಮನುಷ್ಯರ ರಕ್ತ ಮಾಂಸ ತಿಂದು ಬದುಕುವ ನಿಶಾಚರ ಪಕ್ಷಿಯಾಗಿ ಅಳವಡಿಸಿಕೊಳ್ಳಲಾಯಿತು.[69]
ರಕ್ತಪಿಶಾಚಿಗಳ ಬಗೆಗಿನ ಅನೇಕ ಕಲ್ಪನೆಗಳು ಮಧ್ಯಯುಗೀಯ ಅವಧಿಯಲ್ಲಿ ಕಾಣಿಸಿಕೊಂಡವು. 12ನೇ ಶತಮಾನದ ಆಂಗ್ಲ ಇತಿಹಾಸತಜ್ಞರು ಮತ್ತು ಚರಿತ್ರಕಾರರಾದ ವಾಲ್ಟರ್ ಮ್ಯಾಪ್ ಮತ್ತು ನ್ಯೂಬರ್ಗ್ನ ವಿಲಿಯಂ ಪ್ರೇತಗಳ,[28][70] ಬಗ್ಗೆ ದಾಖಲಿಸಿದ್ದರೂ, ಆಂಗ್ಲ ದಂತಕಥೆಗಳಲ್ಲಿ ಇದರ ನಂತರದ ಪುರಾವೆಗಳು ಸಾಕಷ್ಟಿಲ್ಲ.[71] ಈ ಕಥೆಗಳು ನಂತರದ 18ನೇ ಶತಮಾನದಲ್ಲಿ ಪೂರ್ವ ಯುರೋಪ್ನಲ್ಲಿನ ಕಂಡುಬಂದ ಜಾನಪದ ಕಥೆಗಳನ್ನು ಹೋಲುತ್ತವೆ, ಅಲ್ಲದೇ ನಂತರ ಜರ್ಮನಿ ಮತ್ತು ಇಂಗ್ಲೆಂಡ್ಗಳಿಗೆ ಹರಡಿದ ರಕ್ತಪಿಶಾಚಿ ಆಖ್ಯಾಯಿಕೆಗಳ ಮೂಲವಾಗಿತ್ತು. ನಂತರ ಅಲ್ಲೆಲ್ಲಾ ಇದಕ್ಕೆ ಮತ್ತಷ್ಟು ವರ್ಣಮಯಗೊಳಿಸಿ ಮತ್ತಷ್ಟು ಜನಪ್ರಿಯಗೊಳಿಸಲಾಯಿತು.
18ನೇ ಶತಮಾನದಲ್ಲಿ ಪೂರ್ವ ಯುರೋಪ್ನಲ್ಲಿ, ರಕ್ತಪಿಶಾಚಿ ಹುಡುಕಾಟವು ವಿಕೋಪಕ್ಕೆ ಹೋಗಿ ಸಂಭಾವ್ಯ ಪ್ರೇತಗಳನ್ನು ಪತ್ತೆಹಚ್ಚಿ ಕೊಲ್ಲಲು ಅಡಿಗಡಿಗೆ ಶವ ನೇತುಹಾಕುವಿಕೆ ಹಾಗೂ ಸಮಾಧಿ ತೋಡುವಿಕೆಯು ನಡೆಯುತ್ತಿತ್ತು ಹಾಗೂ ಸರ್ಕಾರಿ ಅಧಿಕಾರಿಗಳೂ ಸಹಾ ಈ ರಕ್ತಪಿಶಾಚಿಗಳ ಬೇಟೆಗಳು ಮತ್ತು ನೇತುಹಾಕುವಿಕೆಯಲ್ಲಿ ಸಕ್ರಿಯರಾಗಿದ್ದರು.[72] ಇನ್ನಿತರ ಅನೇಕ ಜಾನಪದ ಕಲ್ಪನೆಗಳನ್ನು ತೊಡೆದು ಹಾಕಿ ಜ್ಞಾನೋದಯ ಯುಗವೆಂದು ಕರೆಸಿಕೊಂಡಿದ್ದರೂ ರಕ್ತಪಿಶಾಚಿಗಳ ಮೇಲಿನ ನಂಬಿಕೆ ನಾಟಕೀಯವಾಗಿ ಹೆಚ್ಚುತ್ತಲೇ ಹೋಗಿ ಅದರ ಪರಿಣಾಮವಾಗಿ ಬಹುಪಾಲು ಯೂರೋಪ್ನಲ್ಲಿ ಸಾಮೂಹಿಕ ಉನ್ಮಾದದ ರೂಪ ತಾಳಿತು.[28] 1721ರಲ್ಲಿ ಪೂರ್ವ ಪ್ರಷ್ಯದಲ್ಲಿ ಹಾಗೂ ಹಬ್ಸ್ಬರ್ಗ್ ಚಕ್ರಾಧಿಪತ್ಯದಲ್ಲಿ 1725ರಿಂದ 1734ರವರೆಗೆ ನಡೆಯಿತೆನ್ನಲಾದ ಹಾಗೂ ನಂತರ ಇತರೆಡೆ ಹರಡಿದ ರಕ್ತಪಿಶಾಚಿ ಆಕ್ರಮಣದ ಪುಕಾರುಗಳೊಂದಿಗೆ ಇದು ವ್ಯಾಪಕವಾಯಿತು. ಎರಡು ಪ್ರಸಿದ್ಧ ರಕ್ತಪಿಶಾಚಿ ಸಂಗತಿಗಳಲ್ಲಿ ಮೊದಲಿಗೆ ಅಧಿಕೃತವಾಗಿ ದಾಖಲಾದ ಸಂಗತಿಯೆಂದರೆ ಸರ್ಬಿಯಾದ ಪೀಟರ್ ಪ್ಲೋಗೋಜೋವಿಟ್ಜ್ ಮತ್ತು ಅರ್ನಾಲ್ಡ್ ಪೌಲೆರದಾಗಿತ್ತು. ತಮ್ಮ 62ನೇ ವಯಸ್ಸಿನಲ್ಲಿ ಮೃತರಾಗಿದ್ದ ಪ್ಲೋಗೋಜೋವಿಟ್ಜ್, ತಮ್ಮ ಸಾವಿನ ನಂತರ ಮತ್ತೆ ತಮ್ಮ ಪುತ್ರನ ಬಳಿ ಬಂದು ಆಹಾರಕ್ಕಾಗಿ ಪೀಡಿಸಿದರು. ಆಗ ಆತ ನಿರಾಕರಿಸಿದ ಕಾರಣ ಮರುದಿನ ಆತನು ಸಾವು ಕಂಡನು. ಪ್ಲೋಗೋಜೋವಿಟ್ಜ್, ಮತ್ತೆ ಹಿಂತಿರುಗಿ ನೆರೆಹೊರೆಯವರ ಮೇಲೆ ಸಹಾ ಆಕ್ರಮಣ ಮಾಡಿದ್ದರೆಂದು ಪ್ರತೀತಿ ಇದೆ. ಅವರೆಲ್ಲಾ ರಕ್ತದ ಕೊರತೆಯಿಂದ ಸತ್ತಿದ್ದರು.[72] ಎರಡನೇ ಸಂಗತಿಯಲ್ಲಿ ಕೃಷಿಕವೃತ್ತಿ ಕೈಗೊಂಡಿದ್ದ ಮಾಜಿಯೋಧ ಪೌಲೆ, ಕೆಲವರ್ಷಗಳ ಹಿಂದೆ ರಕ್ತಪಿಶಾಚಿಯಿಂದ ಆಕ್ರಮಣಕ್ಕೊಳಗಾಗಿದ್ದರು. ಅವರು ಹುಲ್ಲನ್ನು ಒಣಗಿಸುತ್ತಿದ್ದಾಗ/ಹೇ ನೃತ್ಯ ಮಾಡುತ್ತಿದ್ದಾಗ ಮೃತಪಟ್ಟಿದ್ದರು. ಆತನ ಮರಣದ ನಂತರ ಆಸುಪಾಸಿನಲ್ಲಿ ಅನೇಕರು ಸಾವು ಕಂಡರು, ಇದರಿಂದಾಗಿ ಪೌಲೆ ಮರಳಿಬಂದು ನೆರೆಹೊರೆಯವರನ್ನು ಕಾಡುತ್ತಿದ್ದಾನೆ ಎಂಬ ಅಭಿಪ್ರಾಯ ಎಲ್ಲರಲ್ಲೂ ಮೂಡಿತ್ತು.[73] ಮತ್ತೊಂದು ವಿಖ್ಯಾತ ಸರ್ಬಿಯನ್ ರಕ್ತಪಿಶಾಚಿ ದಂತಕಥೆಯ ಪ್ರಕಾರ ಜಲಗಿರಣಿಯಲ್ಲಿ ವಾಸಿಸುತ್ತಿದ್ದ ಹಾಗೂ ಗಿರಣಿಯವರನ್ನು ಕೊಂದು ರಕ್ತ ಕುಡಿಯುತ್ತಿದ್ದ ಸಾವಾ ಸವಾನೊವಿಕ್ ಎಂಬಾತನನ್ನು ಹೆಸರಿಸುತ್ತವೆ. ಸರ್ಬಿಯನ್ ಲೇಖಕ ಮಿಲೊವನ್ ಗಿಲ್ಸಿಕ್ ಬರೆದ ಕಥೆಯೊಂದರಲ್ಲಿ ಈ ದಂತಕಥೆಯ ಪಾತ್ರ ಬಳಸಲಾಗಿತ್ತು ಮತ್ತು ಸರ್ಬಿಯದ 1973ರ ಭಯಾನಕ ಚಿತ್ರ ಲೆಪಿಟಿರಿಕಾ ಇದರ ಮೇಲೆ ಆಧಾರಿತವಾಗಿತ್ತು.
ಈ ಎರಡು ಘಟನೆಗಳಲ್ಲಿ ಉತ್ತಮ ಮಾಹಿತಿ ದಾಖಲಿಸಲಾಗಿತ್ತು : ಸರ್ಕಾರಿ ಅಧಿಕಾರಿಗಳು ದೇಹಗಳನ್ನು ಪರೀಕ್ಷಿಸಿ ವರದಿ ತಯಾರಿಸಿ ಅದನ್ನು ಯುರೋಪ್ನಾದ್ಯಂತ ಪುಸ್ತಕ ರೂಪದಲ್ಲಿ ಪ್ರಕಟಿಸಿದರು.[73] "18ನೇ-ಶತಮಾನದ ರಕ್ತಪಿಶಾಚಿ ವಿವಾದ" ಎಂದು ಹೆಸರಾದ ಈ ಉನ್ಮಾದವು ಒಂದು ಸಂತತಿಯನ್ನು ವಿಕೋಪಕ್ಕೆ ಹೋಗುವಂತೆ ಮಾಡಿತ್ತು. ಈ ಸಮಸ್ಯೆಯು ಗ್ರಾಮೀಣ ಸಮುದಾಯದಲ್ಲಿ ಸಾಮಾನ್ಯವಾದ ಮೂಢನಂಬಿಕೆಗಳ ಕಾರಣವಾಗಿ ರಕ್ತಪಿಶಾಚಿ ಆಕ್ರಮಣಗಳೆಂದು ಮೂಡಿದ ಭಾವನೆ ಸಾಂಕ್ರಾಮಿಕವಾಗಿ ಹರಡಿ ಸ್ಥಳೀಯರು ಸಮಾಧಿಗಳನ್ನು ಹೊರತೆಗೆಯುವುದು ಹಾಗೂ ನೇತು ಹಾಕಿ ಸುಡುವುದು ಮುಂತಾದ ಕಾರ್ಯಗಳನ್ನು ಮಾಡತೊಡಗಿದ್ದರು. ಆಗಿನ ಅನೇಕ ಪ್ರಾಜ್ಞರು ರಕ್ತಪಿಶಾಚಿಗಳು ಅಸ್ತಿತ್ವದಲ್ಲಿಲ್ಲ ಹಾಗೂ ಈ ಸಮಸ್ಯೆಗಳು ಅವಧಿಗೆ ಮುಂಚಿತವಾಗಿ ಹೂಳುವಿಕೆಯಿಂದಾಗಿ ಅಥವಾ ರೇಬೀಸ್ನಿಂದಾಗಿ ಆಗುತ್ತಿರುವುದೆಂದು ಹೇಳಿದರೂ ಈ ಮೂಢನಂಬಿಕೆ ಬೆಳೆಯುತ್ತಲೇ ಹೋಯಿತು. ಡಾಮ್ ಅಗಸ್ಟೀನ್ ಕ್ಯಾಲ್ಮೆಟ್ ಎಂಬ ಗೌರವಾರ್ಹ ಬ್ರಹ್ಮಜ್ಞಾನಿ ಮತ್ತು ಪ್ರಾಜ್ಞರು ವ್ಯಾಪಕವಾದ ವಿವರಗಳುಳ್ಳ ಗ್ರಂಥವನ್ನು 1746ರಲ್ಲಿ ಬರೆದರೂ, ರಕ್ತಪಿಶಾಚಿಗಳ ಅಸ್ತಿತ್ವದ ಬಗೆಗೆ ಅದರಲ್ಲಿ ಖಚಿತತೆಯಿರಲಿಲ್ಲ. ಕಾಲ್ಮೆಟ್ ರಕ್ತಪಿಶಾಚಿ ವೃತ್ತಾಂತಗಳ ಕುರಿತು ಅನೇಕ ಓದುಗರು, ವೊಲ್ಟೇರ್ ಎಂಬ ವಿಮರ್ಶಕ ಹಾಗೂ ಬೆಂಬಲಿಗ ಭೂತಶಾಸ್ತ್ರಜ್ಞರ ವರದಿಗಳನ್ನು ಸಂಗ್ರಹಿಸಿ ರಕ್ತಪಿಶಾಚಿಗಳು ಅಸ್ತಿತ್ವದಲ್ಲಿವೆ ಎಂಬ ಅಭಿಪ್ರಾಯ ಬರುವ ಹಾಗೆ ಗ್ರಂಥವನ್ನು ರಚಿಸಿದರು.[74] ತನ್ನ ತತ್ವಶಾಸ್ತ್ರದ ಪದಕೋಶ ದಲ್ಲಿ ವಾಲ್ಟೇರ್ ಹೀಗೆ ಬರೆದರು :[75]
These vampires were corpses, who went out of their graves at night to suck the blood of the living, either at their throats or stomachs, after which they returned to their cemeteries. The persons so sucked waned, grew pale, and fell into consumption; while the sucking corpses grew fat, got rosy, and enjoyed an excellent appetite. It was in Poland, Hungary, Silesia, Moravia, Austria, and Lorraine, that the dead made this good cheer.
ಆಸ್ಟ್ರಿಯಾದ ಸಾಮ್ರಾಜ್ಞಿ ಮಾರಿಯಾ ಥೆರೆಸಾರು ತಮ್ಮ ಖಾಸಗಿ ವೈದ್ಯ ಗೆರಾರ್ಡ್ ವಾನ್ ಸ್ವಿಟಿಯೆನ್ ಎಂಬುವವರನ್ನು ಪ್ರೇತಗಳ ಅಸ್ತಿತ್ವದ ಬಗ್ಗೆ ತನಿಖೆ ನಡೆಸಲು ಕಳಿಸಿದಾಗ ಈ ವಿವಾದ ಕೊನೆಗೊಂಡಿತು. ಆತನ ವರದಿಯ ಪ್ರಕಾರ ರಕ್ತಪಿಶಾಚಿಗಳು ಅಸ್ತಿತ್ವದಲ್ಲಿರಲಿಲ್ಲ. ಹಾಗಾಗಿ ಸಾಮ್ರಾಜ್ಞಿಯು ಸಮಾಧಿಗಳನ್ನು ತೆರೆಯುವುದು ಹಾಗೂ ದೇಹಗಳನ್ನು ಪವಿತ್ರಗೊಳಿಸುವುದರ ವಿರುದ್ಧ ಕಾನೂನುಗಳನ್ನು ಜಾರಿಗೆ ತಂದು ರಕ್ತಪಿಶಾಚಿ ಸಾಂಕ್ರಾಮಿಕಕ್ಕೆ ಕೊನೆ ಹಾಡಿದಳು. ಈ ಖಂಡನೆಯ ನಂತರವೂ ಕಲಾಕೃತಿಗಳಲ್ಲಿ ಹಾಗೂ ಸ್ಥಳೀಯ ಮೂಢನಂಬಿಕೆಗಳಲ್ಲಿ ರಕ್ತಪಿಶಾಚಿಯ ಪ್ರಸಕ್ತಿಯು ಈಗಲೂ ಮುಂದುವರಿದಿದೆ.[74]
ಆಫ್ರಿಕಾದ ಅನೇಕ ಪ್ರದೇಶಗಳಲ್ಲಿ ಪ್ರೇತಗಳಂತ ಶಕ್ತಿಗಳ ಬಗ್ಗೆ ಕಥೆಗಳಿವೆ: ಪಶ್ಚಿಮ ಆಫ್ರಿಕಾದಲ್ಲಿ ಅಶಾಂತಿ ಜನರು ಕಬ್ಬಿಣದ ಹಲ್ಲಿನ, ಮರದಲ್ಲಿ ವಾಸಿಸುವ ಅಸಾನ್ಬೊಸಮ್ ,[76] ಬಗ್ಗೆ ಹೇಳಿದರೆ ಈವ್ ಜನರು ಮಿಂಚುಹುಳುವಿನ ರೂಪ ತಳೆದು ಮಕ್ಕಳ ಬೇಟೆಯಾಡುವ ಅಡ್ಜೆ, ಯ ಬಗ್ಗೆ ಹೇಳುತ್ತಾರೆ.[77] ಪೂರ್ವ ಕೇಪ್ ಪ್ರದೇಶದಲ್ಲಿ ಉದ್ದನೇ ಉಗುರಿನ ಪಕ್ಷಿಯ ರೂಪ ತಳೆದು ಗುಡುಗು ಹಾಗೂ ಮಿಂಚು ತರಿಸಬಲ್ಲ ಇಂಪುಂಡುಲು, ಇದ್ದರೆ, ಮಡಗಾಸ್ಕರ್ನ ಬೆಟ್ಸಿಲಿಯೊ ಜನರು ರಮಂಗ ಎಂಬ ವಿಲಕ್ಷಣ ರಕ್ತ ಕುಡಿಯುವ ಹಾಗೂ ಸಾತ್ವಿಕರ/ಕುಲೀನರ ಕತ್ತರಿಸಿದ ಉಗುರುಗಳನ್ನು ತಿನ್ನುವ ಜೀವಂತ ರಕ್ತಪಿಶಾಚಿಯ ಬಗ್ಗೆ ಹೇಳುತ್ತಾರೆ.[3]
ಲೂಗರೂ ಎಂಬುದು ರಕ್ತಪಿಶಾಚಿ ನಂಬಿಕೆಯು ಅನೇಕ ನಂಬಿಕೆಗಳ ಸಂಯೋಜನೆಯಾಗಬಲ್ಲದು ಎಂಬುದಕ್ಕೆ ಉತ್ತಮ ಉದಾಹರಣೆ, ಇದು ಫ್ರೆಂಚ್ ಮತ್ತು ಆಫ್ರಿಕಾಗಳ ವೊಡು ಅಥವಾ ವೂಡೂ ಎಂಬುದರ ಸಂಯೋಜನೆ. ಲೂಗರೂ ಎಂಬ ಪದ ಬಹುಶಃ ಫ್ರೆಂಚ್ನ ಲೌಪ್-ಗರೌ ("ತೋಳಮಾನವ" ಎಂಬರ್ಥದಲ್ಲಿ)ನಿಂದಾಗಿದೆ ಹಾಗೂ ಇದು ಮಾರಿಷಸ್ನ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿದೆ. ಆದಾಗ್ಯೂ ಲೂಗರೂ ನ ಕಥೆಗಳು ಕೆರಿಬಿಯನ್ ದ್ವೀಪಗಳು ಮತ್ತು ಯುನೈಟೆಡ್ ಸ್ಟೇಟ್ಸ್ನ ಲೂಸಿಯಾನಾಗಳಲ್ಲಿ ವ್ಯಾಪಕವಾಗಿ ಹರಡಿವೆ.[78] ಇದೇ ಮಾದರಿಯ ರಾಕ್ಷಸಿಯರೆಂದರೆ ಟ್ರಿನಿಡಾಡ್ನ ಸೌಕೌಯಾಂಟ್ ಮತ್ತು ಕೊಲಂಬಿಯಾ ದಂತಕಥೆಯ ಟುಂಡಾ ಮತ್ತು ಪಟಸೋಲಾ . ದಕ್ಷಿಣ ಚಿಲಿಯ ಮಪುಚೆಯು ಪ್ಯೂಚೆನ್ ಎಂಬ ರಕ್ತ ಕುಡಿಯುವ ಹಾವನ್ನು ಹೊಂದಿದೆ.[79] ದಕ್ಷಿಣ ಅಮೇರಿಕಾದ ಮೂಢನಂಬಿಕೆಯ ಪ್ರಕಾರ ಬಾಗಿಲ ಬಳಿ ಇಲ್ಲವೇ ಹಿಂದೆ ಲೋಳಿಸರ ವನ್ನು ತಿರುವುಮುರುವಾಗಿ ನೇತುಹಾಕಿದರೆ ಪ್ರೇತಗಳಂತಹಾ ಶಕ್ತಿಗಳು ಬರದಂತೆ ತಡೆಯಬಹುದು.[36] ಅಜ್ಟೆಕ್ನ ದಂತಕಥೆಯಲ್ಲಿ ಹೆರಿಗೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ಪ್ರೇತಗಳು ಮಕ್ಕಳನ್ನು ಕದಿಯುವ ಹಾಗೂ ಬದುಕಿರುವರೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ಅವರನ್ನು ಹುಚ್ಚರನ್ನಾಗಿ ಮಾರ್ಪಡಿಸುವ ಸಿಹುಆಟೆಟೆವೊ ಎಂಬ ಅಸ್ಥಿಪಂಜರ ಮುಖದ ಶಕ್ತಿಗಳ ಬಗ್ಗೆ ದಾಖಲಿಸುತ್ತವೆ.[32]
18ನೇ ಮತ್ತು 19ನೇ ಶತಮಾನಗಳ ಕೊನೆಯಲ್ಲಿ ನ್ಯೂ ಇಂಗ್ಲೆಂಡ್ನ ಭಾಗಗಳಲ್ಲಿ ಅದರಲ್ಲೂ ರ್ಹೋಡ್/ರೋಡ್ ದ್ವೀಪ ಮತ್ತು ಪೂರ್ವ ಕನೆಕ್ಟಿಕಟ್ಗಳಲ್ಲಿ ರಕ್ತಪಿಶಾಚಿಗಳ ಬಗೆಗಿನ ನಂಬಿಕೆ ಹೆಚ್ಚಾಯಿತು. ಅನೇಕ ಸಂಗತಿಗಳಲ್ಲಿ ಕುಟುಂಬದ ವ್ಯಕ್ತಿಗಳು ಮರಣ ಹೊಂದಿದ ವ್ಯಕ್ತಿ ಓರ್ವ ರಕ್ತಪಿಶಾಚಿಯಾಗಿದ್ದು ಕುಟುಂಬದಲ್ಲಿನ ಅನಾರೋಗ್ಯ ಹಾಗೂ ಸಾವುಗಳಿಗೆ ಕಾರಣವಾಗಿರುವರೆಂಬ ನಂಬಿಕೆಯಿಂದ ತಮ್ಮ ಪ್ರೀತಿಪಾತ್ರರ ಶವಗಳಿಂದ ಅವರ ಹೃದಯವನ್ನು ಬೇರ್ಪಡಿಸುತ್ತಿದ್ದರೂ, ಸತ್ತವರ ಕುರಿತು ರಕ್ತಪಿಶಾಚಿಯೆಂಬ ಪದವನ್ನು ಬಳಸುತ್ತಿರಲಿಲ್ಲ. ಮಾರಣಾಂತಿಕ ರೋಗ ಕ್ಷಯ ಅಥವಾ ಆಗ ಹೇಳುತ್ತಿದ್ದ ಹಾಗೆ "ಶ್ವಾಸಕೋಶದ ರೋಗ"ವು ರಾತ್ರಿ ಹೊತ್ತು ಕ್ಷಯದಿಂದ ಈ ಹಿಂದೆ ಸತ್ತ ಕುಟುಂಬದ ವ್ಯಕ್ತಿಯ ಭೇಟಿ ನೀಡುವಿಕೆಯಿಂದಾಗುತ್ತದೆ ಎಂಬ ನಂಬಿಕೆ ಇತ್ತು.[80] ಅತ್ಯಂತ ಪ್ರಸಿದ್ಧವಾದ ಹಾಗೂ ತೀರ ಇತ್ತೀಚೆಗೆ ದಾಖಲಾಗಿದ್ದ ಶಂಕಿತ ರಕ್ತಪಿಶಾಚಿ ಸಂಗತಿಯೆಂದರೆ 1892ರಲ್ಲಿ ರ್ಹೋಡ್ ದ್ವೀಪದ ಎಕ್ಸಿಟಿರ್ನಲ್ಲಿ ಮರಣಹೊಂದಿದ್ದ ಹತ್ತೊಂಬತ್ತು ವರ್ಷದ ಮರ್ಸಿ ಬ್ರೌನ್ ಎಂಬಾಕೆಯದು. ಆಕೆಯ ತಂದೆ, ಕುಟುಂಬ ವೈದ್ಯರೊಡಗೂಡಿ ಆಕೆಯ ಸಮಾಧಿಯಿಂದ ಆಕೆಯ ದೇಹವನ್ನು ಹೊರತೆಗೆದು ಹೃದಯವನ್ನು ತೆಗೆದುಹಾಕಿ ಸುಟ್ಟಿದ್ದರು.[81]
ಪ್ರಾಚೀನ ದಂತಕಥೆಯ ಮೂಲದೊಂದಿಗೆ, ಆಧುನಿಕ ರಕ್ತಪಿಶಾಚಿಗಳ ಮೇಲಿನ ನಂಬಿಕೆ ಏಷ್ಯಾದ ಪ್ರಮುಖ ಭೂಭಾಗದುದ್ದಕ್ಕೂ ಶವಭಕ್ಷಕ ಪಿಶಾಚಿಗಳ ರೂಪದಲ್ಲಿ ಹಾಗೂ ಆಗ್ನೇಯ ಏಷ್ಯಾದ ದ್ವೀಪಗಳಲ್ಲಿ ರಕ್ತಪಿಶಾಚಿ ರೂಪದಲ್ಲಿ ಕಥೆಗಳಲ್ಲಿ ರಾರಾಜಿಸಿದವು. ಭಾರತವು ಸಹಾ ಇತರ ರಕ್ತಪಿಶಾಚಿ ಕಲ್ಪನೆಗಳನ್ನು ಹುಟ್ಟುಹಾಕಿತು. ಭೂತ ಅಥವಾ ಪ್ರೇತ ಎಂಬುದು ಅಕಾಲದಲ್ಲಿ ಮರಣ ಹೊಂದಿದ ವ್ಯಕ್ತಿಯ ಆತ್ಮ. ಅದು ರಾತ್ರಿ ಹೊತ್ತು ಶವಗಳೊಳಗೆ ಪ್ರವೇಶಿಸಿ ಆ ದೇಹಗಳ ಮೂಲಕ ಜೀವಂತ ವ್ಯಕ್ತಿಗಳನ್ನು ಪಿಶಾಚಿಯ ಮಾದರಿಯಲ್ಲೇ ಕಾಡುತ್ತದೆ.[82] ಉತ್ತರಭಾರತದಲ್ಲಿ ಕರುಳಿನಿಂದ ಸುತ್ತುವರಿದ ತಲೆಯುಳ್ಳ ಹಾಗೂ ಕಪಾಲದ ಮೂಲಕ ರಕ್ತ ಕುಡಿಯುವ ರಕ್ತಪಿಶಾಚಿ ತರಹದ ಶಕ್ತಿಯೊಂದನ್ನು ಬ್ರಹ್ಮರಾಕ್ಷಸ ಎನ್ನುತ್ತಾರೆ. ಜಪಾನೀ ಚಲನಚಿತ್ರಗಳಲ್ಲಿ ರಕ್ತಪಿಶಾಚಿಗಳು 1950ರ ದಶಕದ ಅಂತ್ಯದಲ್ಲೇ ಕಾಣಿಸಿಕೊಂಡರೂ ಅವುಗಳ ದಂತಕಥೆಯ ಮೂಲವು ಪಾಶ್ಚಿಮಾತ್ಯವೇ ಆಗಿದೆ.[83] ಆದಾಗ್ಯೂ ನುಕೇಕುಬಿ ಎಂಬ ಶಕ್ತಿಯ ರುಂಡವು ಮುಂಡದಿಂದ ಬೇರೆಯಾಗಿ ರಾತ್ರಿಹೊತ್ತು ಮಾನವ ಬಲಿಯನ್ನು ಹುಡುಕುತ್ತಿರುತ್ತದೆ.[84]
ತಮ್ಮ ದೇಹದ ಮೇಲ್ಭಾಗವನ್ನು ಪ್ರತ್ಯೇಕಿಸಿಕೊಳ್ಳಬಲ್ಲ ರಕ್ತಪಿಶಾಚಿನಿಯರ ತರಹದ ಶಕ್ತಿಗಳ ಕಥೆಯು ಫಿಲಿಪ್ಪೀನ್ಸ್, ಮಲೇಷಿಯಾ ಮತ್ತು ಇಂಡೋನೇಷ್ಯಾಗಳಲ್ಲೂ ಇವೆ. ಫಿಲಿಪ್ಪೀನ್ಸ್ನಲ್ಲಿ ಪ್ರಮುಖ ಎರಡು ರಕ್ತಪಿಶಾಚಿ-ತರಹದ ಶಕ್ತಿಗಳಿವೆ: ಟಗಲಾಗ್ ಮಂಡುರುಗೊ ("ರಕ್ತ-ಹೀರುವ") ಮತ್ತು ವಿಸಯನ್ ಮನನಂಗ್ಗಲ್ ("ಸ್ವಯಂ-ವಿಭಜನೆಗೊಳ್ಳಬಲ್ಲ"). ಮಂಡುರುಗೊ ಎಂಬುದು ಬೆಳಗಿನ ಸಮಯದಲ್ಲಿ ಆಕರ್ಷಕ ಹುಡುಗಿಯ ರೂಪ ತಳೆದು ರಾತ್ರಿಯ ಹೊತ್ತಿಗೆ ರೆಕ್ಕೆ ಹಾಗೂ ಉದ್ದನೆಯ ಟೊಳ್ಳಾದ ನೂಲಿನ ಮಾದರಿಯ ನಾಲಿಗೆಯನ್ನು ಬೆಳೆಸಿಕೊಳ್ಳಬಲ್ಲ ಅಸವಾಂಗ್ ಪಿಶಾಚಿಯ ಒಂದು ವಿಧವಾಗಿದೆ. ಈ ನಾಲಿಗೆಯಿಂದ ನಿದ್ದೆ ಮಾಡುತ್ತಿರುವ ಬಲಿಯ ರಕ್ತ ಹೀರಲಾಗುತ್ತದೆ. ಮನನಂಗ್ಗಲ್ ಎಂಬುದು ರಾತ್ರಿ ಹೊತ್ತು ಬಾವಲಿ ತರಹದ ದೊಡ್ಡ ಗಾತ್ರದ ರೆಕ್ಕೆಗಳನ್ನು ಮೂಡಿಸಿಕೊಳ್ಳಲು ತನ್ನ ಮುಂಡದ ಮೇಲ್ಭಾಗವನ್ನು ಪ್ರತ್ಯೇಕಿಸಬಲ್ಲ ಹಾಗೂ ತಮ್ಮ ಮನೆಯಲ್ಲಿ ಸುಖನಿದ್ದೆಯಲ್ಲಿರುವ ಗರ್ಭಿಣಿಯರ ಮೇಲೆ ಆಕ್ರಮಣ ಮಾಡಲು ಪ್ರಬುದ್ಧ ವಯಸ್ಸಿನ ಸುಂದರ ಹೆಣ್ಣಿನ ರೂಪದಲ್ಲಿರುವ ಶಕ್ತಿ. ಅವು ಉದ್ದನೆಯ ಸೊಂಡಿಲಿನ ತರಹದ ನಾಲಿಗೆಯನ್ನು ಗರ್ಭಿಣಿಯ ಹೊಟ್ಟೆಯಲ್ಲಿರುವ ಭ್ರೂಣವನ್ನು ಹೀರಲು ಬಳಸುತ್ತವೆ. ಅವು ಕರುಳು (ನಿರ್ದಿಷ್ಟವಾಗಿ ಹೃದಯ ಮತ್ತು ಪಿತ್ತಜನಕಾಂಗ) ಮತ್ತು ರೋಗಿಗಳ ಕಫವನ್ನು ತಿನ್ನಲು ಅಪೇಕ್ಷಿಸುತ್ತವೆ.[85]
ಮಲೇಷ್ಯಾದ ಪೆಲಂಗ್ಗಾಲನ್ ಎಂಬ ದುಷ್ಟಶಕ್ತಿಯು ಸುಂದರ ಪ್ರಬುದ್ಧ ಹೆಣ್ಣು ಇಲ್ಲವೇ ಯುವತಿಯಾಗಿದ್ದು ತನ್ನ ಸೌಂದರ್ಯವನ್ನು ಮಾಟಮಂತ್ರ ಅಥವಾ ಇನ್ನಿತರ ವಾಮಮಾರ್ಗದಿಂದ ಪಡೆದಿದ್ದು ಸ್ಥಳೀಯ ದಂತಕಥೆಯಲ್ಲಿ ದಟ್ಟ ವರ್ಣದವಳ ರೂಪ ಪಡೆದಿರುವ ಅಥವಾ ಪ್ರೇತಸ್ವರೂಪದ ಶಕ್ತಿಯಾಗಿತ್ತು. ಆಕೆ ತನ್ನ ಕೋರೆಹಲ್ಲಿರುವ ರುಂಡವನ್ನು ಪ್ರತ್ಯೇಕಿಸಿ ರಕ್ತಕ್ಕೋಸ್ಕರ ರಾತ್ರಿಹೊತ್ತು ಗರ್ಭಿಣಿಯರನ್ನು ಹುಡುಕಲು ಬಳಸಬಹುದಾದ ಸಾಮರ್ಥ್ಯ ಹೊಂದಿತ್ತು.[86] ಮಲೇಷಿಯನ್ನರು ತನ್ನ ಕರುಳಿಗೆ ಮುಳ್ಳುಗಳು ತಾಕೀತೆಂಬ ಭಯದಿಂದ ಪೆನಂಗ್ಗಾಲನ್ ಮನೆಯೊಳಗೆ ಬರದಿರಬಹುದೆಂಬ ಉದ್ದೇಶದಿಂದ ತಮ್ಮ ಮನೆಯ ಬಾಗಿಲು ಹಾಗೂ ಕಿಟಕಿಗಳ ಸುತ್ತಮುತ್ತಲೂ ಜೆರುಜು (ಬ್ರಹ್ಮದಂಡಿ)ವನ್ನು ನೇತುಹಾಕುತ್ತಿದ್ದರು.[87] ಬಲಿನೀಸ್ ದಂತಕಥೆಯಲ್ಲಿನ ಲೇಯಕ್ ಎಂಬುದು ಇದೇ ರೀತಿಯ ಶಕ್ತಿ.[88] ಇಂಡೋನೇಷ್ಯಾದ ಕುಂಟಿಲಾನಕ್ ಅಥವಾ ಮಟಿಯಾನಕ್ [89] ಅಥವಾ ಮಲೇಷ್ಯಾದ ಪೊಂಟಿಯಾನಕ್ ಅಥವಾ ಲ್ಯಾಂಗ್ಸುಯಿರ್ ,[90] ಎಂಬುದೊಂದು ಹೆರಿಗೆಯಲ್ಲಿ ಸತ್ತ ಮಹಿಳೆಯ ಪ್ರೇತವಾಗಿದ್ದು, ಸೇಡು ತೀರಿಸುವ ಉದ್ದೇಶ ಹೊಂದಿದ್ದ ಹಾಗೂ ಹಳ್ಳಿಗಳನ್ನು ಬೆದರಿಸುವ ಶಕ್ತಿಯಾಗಿತ್ತು. ಆಕೆಯು ಉದ್ದ ಕಪ್ಪು ಕೂದಲಿನ ಸುಂದರ ಹೆಣ್ಣೊಬ್ಬಳ ರೂಪದಲ್ಲಿದ್ದು ಆಕೆಯ ಉದ್ದ ಕೂದಲು ಆಕೆಯು ಮಕ್ಕಳ ರಕ್ತ ಹೀರುತ್ತಿದ್ದ ತನ್ನ ಕತ್ತಿನ ಹಿಂಭಾಗದ ರಂಧ್ರವನ್ನು ಮರೆಮಾಡುತ್ತಿತ್ತು. ಆ ರಂಧ್ರವನ್ನು ಆಕೆಯ ಕೂದಲಿನಿಂದ ತುಂಬಿಸಿದರೆ ಆಕೆಯನ್ನು ನಾಶಪಡಿಸಬಹುದಿತ್ತು. ಶವಗಳ ಬಾಯಿಯಲ್ಲಿ ಗಾಜಿನ ತುಂಡುಗಳನ್ನಿಟ್ಟು ಪ್ರತಿ ಕಂಕುಳಿನಲ್ಲಿ ಮೊಟ್ಟೆಗಳನ್ನು ಹಾಗೂ ಅಂಗೈಯಲ್ಲಿ ಸೂಜಿಗಳನ್ನಿಟ್ಟು ಅವುಗಳನ್ನು ಲ್ಯಾಂಗ್ಸುಯಿರ್ ಆಗದಂತೆ ಮಾಡಲಾಗುತ್ತಿತ್ತು.[91]
ಜಿಯಾಂಗ್ ಷಿ (simplified Chinese: 僵尸; traditional Chinese: 僵屍 or 殭屍; pinyin: jiāngshī; ಅಕ್ಷರಶಃ ಹೇಳಬೇಕೆಂದರೆ "ಮರಗಟ್ಟಿದ ಶವ"), "ಚೀನೀ ರಕ್ತಪಿಶಾಚಿ"ಗಳೆಂದು ಪಾಶ್ಚಿಮಾತ್ಯರಿಂದ ಕೆಲಬಾರಿ ಕರೆಸಿಕೊಳ್ಳುವ ಪ್ರೇತದಿಂದ ಆವಾಹಿತವಾದ ಶವಗಳಾಗಿದ್ದು ಅಲೆದಾಡಿಕೊಂಡಿರುತ್ತಿದ್ದ ಅವು ಜೀವಿಗಳನ್ನು ಆಕ್ರಮಿಸಿ ಅವುಗಳಿಂದ ರಕ್ತ(ಕ್ವಿ)ವನ್ನು ಹೀರುತ್ತಿದ್ದ ಶಕ್ತಿಗಳು. ಆತ್ಮವು (魄 ಪೊ ) ವ್ಯಕ್ತಿಯ ದೇಹದಿಂದ ಹೊರಬರಲಾಗದೇ ಇದ್ದ ಸಂದರ್ಭಗಳಲ್ಲಿ ಅವುಗಳು ಸೃಷ್ಟಿಯಾಗುತ್ತವೆಂದು ಹೇಳಲಾಗುತ್ತಿತ್ತು.[92] ಆದಾಗ್ಯೂ ಕೆಲವರು ರಕ್ತಪಿಶಾಚಿಗಳೊಂದಿಗೆ ಜಿಯಾಂಗ್ ಷಿ ಗಳ ಹೋಲಿಕೆ ಸರಿಯಲ್ಲವೆನ್ನುತ್ತಾ ಜಿಯಾಂಗ್ ಷಿ ಗಳು ಸ್ವಬುದ್ಧಿಯಿಲ್ಲದ ಜೀವಿಗಳೆನ್ನುತ್ತಾರೆ.[93] ಈ ಶಕ್ತಿಯ ವಿಶೇಷವೇನೆಂದರೆ ಅದರ ಹಸಿರುಮಿಶ್ರಿತ ಬಿಳಿ ಬಣ್ಣದ ತುಪ್ಪಳದ ಚರ್ಮ, ಪ್ರಾಯಶಃ ಶವದ ಮೇಲೆ ಬೆಳೆಯುವ ಅಣಬೆ ಅಥವಾ ಮೇಲ್ಮಣ್ಣಿನ ವರ್ಣದಿಂದ ಇದು ಕಲ್ಪಿತವಾಗಿರಬಹುದು.[94]
ಆಧುನಿಕ ಕಾಲ್ಪನಿಕ ಕಥೆಗಳಲ್ಲಿ ರಕ್ತಪಿಶಾಚಿಯನ್ನು ಸಭ್ಯ ವರ್ಚಸ್ಸುಳ್ಳ ದುರುಳ/ಖಳನಾಯಕನೆಂಬ ರೀತಿಯಲ್ಲಿ ಚಿತ್ರಿಸಲಾಗಿರುತ್ತದೆ.[30] ರಕ್ತಪಿಶಾಚಿ ತರಹದ ಶಕ್ತಿಗಳ ಬಗೆಗಿನ ಸಾಮಾನ್ಯ ಅಪನಂಬಿಕೆಯಿದ್ದರೂ ರಕ್ತಪಿಶಾಚಿಗಳ ಅಪರೂಪದ ದರ್ಶನಗಳು ವರದಿಯಾಗಿವೆ. ವಾಸ್ತವಿಕವಾಗಿ, ರಕ್ತಪಿಶಾಚಿಯನ್ನು ಬೇಟೆಯಾಡುವ ಸಮುದಾಯಗಳು ಈಗಲೂ ಇದ್ದು ಸಾಮಾಜಿಕ ಕಾರಣಗಳಿಗೋಸ್ಕರ ಉದಾರವಾದ ಸಂಪ್ರದಾಯಗಳನ್ನು ಪಾಲಿಸುತ್ತಿವೆ.[28] ರಕ್ತಪಿಶಾಚಿ ಆಕ್ರಮಣಗಳ ಆರೋಪಗಳನ್ನು ಆಫ್ರಿಕಾದ ಮಲಾವಿ ದೇಶದಲ್ಲಿ 2002ರ ಕೊನೆಯಲ್ಲಿ ಮತ್ತು 2003ರ ಮೊದಲಭಾಗದಲ್ಲಿ ಸಾರಾಸಗಟಾಗಿ ನಿರಾಕರಿಸಲಾಯಿತು, ಜನರ ಗುಂಪು ಒಬ್ಬ ವ್ಯಕ್ತಿಯನ್ನು ಕಲ್ಲು ಹೊಡೆದು ಸಾಯಿಸಿ ಹಾಗೂ ರಕ್ತಪಿಶಾಚಿಗಳೊಂದಿಗೆ ಸರ್ಕಾರವೂ ಶಾಮೀಲಾಗಿದೆಯೆಂಬ ಅಭಿಪ್ರಾಯದಿಂದ ಗವರ್ನರ್ ಎರಿಕ್ ಚಿವಾಯ ಸೇರಿದಂತೆ ಕನಿಷ್ಟ ಇತರ ನಾಲ್ವರ ಮೇಲೆ ಆಕ್ರಮಣ ಮಾಡಲಾಯಿತು.[95]
1970ರ ಮೊದಲ ಭಾಗದಲ್ಲಿ ಸ್ಥಳೀಯ ಪತ್ರಿಕೆಯೊಂದು ಲಂಡನ್ನ ಹೈಗೇಟ್ ಸಮಾಧಿಸ್ಥಳವನ್ನು ರಕ್ತಪಿಶಾಚಿಗ್ರಸ್ತವಾಗಿದೆ ಎಂಬ ಪುಕಾರನ್ನು ಹಬ್ಬಿಸಿತು. ಹವ್ಯಾಸಿ ರಕ್ತಪಿಶಾಚಿ ಬೇಟೆಗಾರರೆಲ್ಲ ಬಹುಸಂಖ್ಯೆಯಲ್ಲಿ ಸಮಾಧಿಸ್ಥಳದಲ್ಲಿ ಗುಂಪುಗೂಡಿದ್ದರು. ಈ ಸಂಗತಿಯ ಬಗ್ಗೆ ಅನೇಕ ಪುಸ್ತಕಗಳನ್ನು ಬರೆಯಲಾಗಿದ್ದು, ಅದರಲ್ಲಿ ಪ್ರಮುಖವೆಂದರೆ ಸೀನ್ ಮ್ಯಾಂಚೆಸ್ಟರ್ ಎಂಬ ಸ್ಥಳೀಯ "ಹೈಗೇಟ್ ರಕ್ತಪಿಶಾಚಿ"ಯ ಅಸ್ತಿತ್ವವನ್ನು ಮೊದಲು ತಿಳಿಸಿದ್ದ ಹಾಗೂ ನಂತರ ಭೂತೋಚ್ಚಾಟನೆ ಮಾಡಿ ಆ ಸ್ಥಳದಲ್ಲಿದ್ದ ರಕ್ತಪಿಶಾಚಿಗಳ ಪೂರ್ಣ ವ್ಯವಸ್ಥೆಯನ್ನೇ ನಾಶಪಡಿಸಿದೆ ಎಂದು ಹೇಳಿಕೊಂಡ ವ್ಯಕ್ತಿಯ ಕಥೆ.[96] ಜನವರಿ 2005ರಲ್ಲಿ, ಇಂಗ್ಲೆಂಡ್ನ ಬರ್ಮಿಂಗ್ಹ್ಯಾಂನಲ್ಲಿ ಆಕ್ರಮಣಕಾರಿ ಶಕ್ತಿಯೊಂದು ಅನೇಕ ವ್ಯಕ್ತಿಗಳನ್ನು ಕಚ್ಚಿದೆ ಎಂಬ ಪುಕಾರುಗಳ ಹಬ್ಬಿ, ರಕ್ತಪಿಶಾಚಿಯ ರಾಜಾರೋಷದ ಓಡಾಟದ ಬಗ್ಗೆ ಆತಂಕ ವ್ಯಕ್ತವಾಯಿತು. ಆದಾಗ್ಯೂ ಸ್ಥಳೀಯ ಆರಕ್ಷಕರು ಆ ಮಾದರಿಯ ಯಾವುದೇ ಅಪರಾಧವು ವರದಿಯಾಗಿಲ್ಲ ಹಾಗೂ ಇದೊಂದು ನಗರಪ್ರದೇಶದ ದಂತಕಥೆಯಿರಬೇಕೆಂಬ ಅಭಿಪ್ರಾಯ ನೀಡಿದರು.[97]
ರಕ್ತಪಿಶಾಚಿ ಮಾದರಿಯ ಆಧುನಿಕ ಗಮನಾರ್ಹ ಸಂಗತಿಗಳಲ್ಲಿ ಪೋರ್ಟರಿಕೊ ಮತ್ತು ಮೆಕ್ಸಿಕೊನ ಚುಪಾಕಬ್ರಾ (ಮೇಕೆ-ರಕ್ತಹೀರುವ ಶಕ್ತಿ) ಎಂಬ ಸಾಕುಪ್ರಾಣಿಗಳ ರಕ್ತ ಕುಡಿದು ಅಥವಾ ಮಾಂಸ ತಿಂದು ಬದುಕುವ ಪ್ರಾಣಿಯೊಂದು ಕಂಡುಬಂದು ಅದನ್ನು ಕೆಲವರು ಇದೂ ಒಂದು ರಕ್ತಪಿಶಾಚಿಯಿರಬಹುದೆಂದರು. "ಚುಪಾಕಬ್ರಾ ಉನ್ಮಾದ"ವನ್ನು 1990ರ ದಶಕದ ಮಧ್ಯದಲ್ಲಿನ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯ ಪರಿಣಾಮವೆನ್ನುತ್ತಾರೆ.[98]
ರಕ್ತಪಿಶಾಚಿ ಜಾನಪದದ ಹೆಚ್ಚಿನಂಶ ಮೂಲವಾದ ಯುರೋಪ್ನಲ್ಲಿ, ರಕ್ತಪಿಶಾಚಿಯನ್ನು ಕಾಲ್ಪನಿಕ ಶಕ್ತಿಯೆಂದು ಭಾವಿಸಿದ್ದರೂ ಅನೇಕ ಸಮುದಾಯಗಳು ಪ್ರೇತದ ಕಲ್ಪನೆಯನ್ನು ಮಿತವ್ಯಯದ ದೃಷ್ಟಿಯಿಂದ ಅಂಗೀಕರಿಸಿವೆ. ಅನೇಕ ಸಂದರ್ಭಗಳಲ್ಲಿ, ವಿಶಿಷ್ಟವಾಗಿ ಸಣ್ಣ ಪ್ರದೇಶಗಳಲ್ಲಿ ರಕ್ತಪಿಶಾಚಿ ಮೂಢನಂಬಿಕೆಯು ಈಗಲೂ ಮಿತಿಮೀರಿದ್ದು ರಕ್ತಪಿಶಾಚಿ ಆಕ್ರಮಣದ ಸಂಗತಿಗಳು ಹಾಗೂ ಆಪಾದನೆಗಳು ಆಗ್ಗಾಗ್ಗೆ ಆಗುತ್ತಲೇ ಇರುತ್ತವೆ. ರೊಮೇನಿಯಾದಲ್ಲಿ 2004ರ ಫೆಬ್ರವರಿಯಲ್ಲಿ ಟೊಮಾ ಪಿಟ್ರೆ ಎಂಬಾತನ ಅನೇಕ ಸಂಬಂಧಿಕರು ಆತನು ರಕ್ತಪಿಶಾಚಿಯಾಗಿದ್ದಾನೆಂದು ಹೆದರಿದ್ದರು. ಅವರು ಆತನ ಶವವನ್ನು ಹೊರತೆಗೆದು ಹೃದಯವನ್ನು ಬೇರ್ಪಡಿಸಿ ಸುಟ್ಟು ಹಾಕಿ ಅದರ ಬೂದಿಯನ್ನು ಕುಡಿಯುವ ನೀರಿನಲ್ಲಿ ಮಿಶ್ರಣ ಮಾಡಿದರು.[99]
ರಕ್ತಪಿಶಾಚಿಗಳನ್ನು ಕುರಿತ ನಂಬಿಕೆಯು ಆಧುನಿಕ ದಿನಮಾನದ ಇಂದ್ರಜಾಲ ಕಾರ್ಯಾಚರಣೆಗಳ ಸುಸಂಬದ್ಧತೆಯನ್ನು ಸೂಚಿಸುತ್ತದೆ. ರಕ್ತಪಿಶಾಚಿಯ ಬಗೆಗಿನ ಕಾಲ್ಪನಿಕತೆ, ಅದರ ಐಂದ್ರಜಾಲಿಕ ಲಕ್ಷಣಗಳು, ಮೋಹಗೊಳಿಸುವಿಕೆ ಮತ್ತು ಕೊಳ್ಳೆಹೊಡೆಯುವ ಮೂಲರೂಪವು ಆಚರಣೆ, ಶಕ್ತಿಯುತ ಕಾರ್ಯಾಚರಣೆ ಮತ್ತು ಮಾಟಮಂತ್ರ ವ್ಯವಸ್ಥೆಯನ್ನು ಒಂದು ದೈವಿಕ ವ್ಯವಸ್ಥೆಯನ್ನಾಗಿ ಸಹಾ ಅಳವಡಿಸಿಕೊಳ್ಳಬಹುದಾಗಿದೆ.[100] ಯೂರೋಪಿನ ಮಾಂತ್ರಿಕರ ಸಮಾಜದ ಭಾಗವಾಗಿ ರಕ್ತಪಿಶಾಚಿಯು ಶತಮಾನಗಳಿಂದ ಇದ್ದು, ನಂತರ ಅಮೇರಿಕದ ಉಪಸಂಸ್ಕೃತಿಗೆ ದಶಕಕ್ಕೂ ಹೆಚ್ಚಿನ ಕಾಲದಿಂದ ಹರಡಿದ್ದು ನವ್ಯ ಗೋತಿಕ್ ಶೈಲಿಯ ಸೌಂದರ್ಯಶಾಸ್ತ್ರದಿಂದ ಪ್ರಭಾವಿತವಾಗಿ ಹಾಗೂ ಅದರೊಂದಿಗೆ ಒಡಗೂಡಿಕೊಂಡಿದೆ.[101]
ರಕ್ತಪಿಶಾಚಿ ನಂಬಿಕೆಗಳ ಮೂಲದ ಬಗ್ಗೆ ಅನೇಕ ಸಿದ್ಧಾಂತಗಳಿದ್ದು ಮೂಢನಂಬಿಕೆಗಳಿಗೆ ಹಾಗೂ ರಕ್ತಪಿಶಾಚಿಗಳಿಂದಾಗುವ ಕೆಲವೊಮ್ಮೆ ಆಗುವ ಸಾಮೂಹಿಕ ಉನ್ಮಾದಕ್ಕೆ ವಿವರಣೆ ಕೊಡಲು ಶಕ್ತವಾಗಿವೆ. ಅಕಾಲಿಕ ಹೂಳುವಿಕೆಯಿಂದ ಹಿಡಿದು ಸಾವಿನ ನಂತರ ದೇಹದ ಕೊಳೆಯುವಿಕೆಯ ಚಕ್ರದ ಬಗೆಗಿನ ಮೌಢ್ಯವು ರಕ್ತಪಿಶಾಚಿಗಳ ಮೇಲಿನ ನಂಬಿಕೆಗೆ ಕಾರಣವೆನ್ನುತ್ತಾರೆ.
ಅನೇಕ ಸಂಸ್ಕೃತಿಗಳು ಪೂರ್ವ ಯೂರೋಪ್ನ ರಕ್ತಪಿಶಾಚಿಗಳೊಂದಿಗೆ ಹೋಲಿಸಬಲ್ಲ ಪ್ರೇತಗಳ ಬಗೆಗಿನ ಮೂಢನಂಬಿಕೆಗಳನ್ನು ಹೊಂದಿದ್ದರೂ, ಸ್ಲಾವಿಕ್ ರಕ್ತಪಿಶಾಚಿಯ ಮೂಢನಂಬಿಕೆಯು ಜನಪ್ರಿಯ ಸಂಸ್ಕೃತಿಗಳಲ್ಲಿ ರಕ್ತಪಿಶಾಚಿಯ ಕಲ್ಪನೆಯನ್ನು ವ್ಯಾಪಿಸುವಂತೆ ಮಾಡಿತ್ತು. ಸ್ಲಾವಿಕ್ ಸಂಸ್ಕೃತಿಯ ರಕ್ತಪಿಶಾಚಿ ನಂಬಿಕೆಗಳ ಮೂಲ, ಕ್ರೈಸ್ತಮತಾವಲಂಬನೆಗಿಂತ ಹಿಂದಿನ ಸ್ಲಾವಿಕ್ ಜನರ ಆಧ್ಯಾತ್ಮಿಕ ನಂಬಿಕೆಗಳು, ಆಚರಣೆಗಳು ಮತ್ತು ಸಾವಿನ ನಂತರದ ಬದುಕಿನ ಬಗ್ಗೆ ಅವರಿಗಿದ್ದ ಅಭಿಪ್ರಾಯವಾಗಿತ್ತು. ಕ್ರೈಸ್ತಮತಾವಲಂಬನೆಗಿಂತ ಹಿಂದಿನ "ಹಳೆಯ ಧರ್ಮ"ದ ಬಗೆಗಿನ ಸ್ಲಾವಿಕ್ ದಾಖಲೆಗಳು ಲಭ್ಯವಿಲ್ಲದಿದ್ದರೂ, ಆಗಿನ ನಾಸ್ತಿಕರ ಧಾರ್ಮಿಕ ನಂಬಿಕೆಗಳು ಹಾಗೂ ಆಚರಣೆಗಳನ್ನು ತಮ್ಮ ಪ್ರದೇಶವು ಕ್ರೈಸ್ತಧರ್ಮಕ್ಕೆ ಮತಾಂತರಗೊಂಡ ನಂತರವೂ ಸ್ಲಾವಿಕ್ ಜನರು ಉಳಿಸಿಕೊಂಡು ಬಂದಿದ್ದಾರೆ. ಆ ತರಹದ ನಂಬಿಕೆಗಳು ಹಾಗೂ ಆಚರಣೆಗಳೆಂದರೆ ಪೂರ್ವಿಕರ ಆರಾಧನೆ, ಕೌಟುಂಬಿಕ ಶಕ್ತಿಗಳು, ಮತ್ತು ಮರಣಾನಂತರದ ಆತ್ಮದ ಬಗೆಗಿನ ನಂಬಿಕೆ. ಸ್ಲಾವಿಕ್ ಪ್ರದೇಶಗಳಲ್ಲಿನ ರಕ್ತಪಿಶಾಚಿ ನಂಬಿಕೆಗಳ ಮೂಲ ಸ್ಲಾವಿಕ್ ಆತ್ಮವಾದದ ಸಂಕೀರ್ಣತೆಯಿರಬಹುದಾಗಿದೆ.
ದೆವ್ವಗಳು ಮತ್ತು ಆತ್ಮಗಳು ಕೈಗಾರಿಕಾಪೂರ್ವ ಸ್ಲಾವಿಕ್ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸಿದ್ದವಲ್ಲದೇ, ಮಾನವರ ಜೀವನದ ಮೇಲೆ ಪರಸ್ಪರ ಪ್ರಭಾವ ಹೊಂದಿರುತ್ತಿತ್ತು. ಕೆಲ ಶಕ್ತಿಗಳು ಪರೋಪಕಾರಿಯಾಗಿದ್ದು, ಮಾನವ ಕಾರ್ಯಗಳಿಗೆ ಸಹಕಾರಿಯಾಗಿದ್ದರೆ, ಉಳಿದವು ಅಪಾಯಕಾರಿ ಹಾಗೂ ವಿನಾಶಕಾರಿಯಾಗಿದ್ದವು. ಆ ತರಹದ ಶಕ್ತಿಗಳೆಂದರೆ ಡೊಮೊವೊಯ್,ರುಸಾಲ್ಕಾ, ವಿಲಾ, ಕಿಕಿಮೊರಾ, ಪೊಲುಡ್ನಿತ್ಸಾ ಮತ್ತು ವೊಡ್ಯಾನಾಯ್. ಈ ಶಕ್ತಿಗಳು ಪೂರ್ವಿಕರಿಂದ ಜನ್ಯವಾದವು ಇಲ್ಲವೇ ವಿಶೇಷ ಮರಣ ಹೊಂದಿದ ವ್ಯಕ್ತಿಗಳದ್ದು ಎಂಬ ನಂಬಿಕೆಯೂ ಇತ್ತು. ಈ ತರಹದ ಶಕ್ತಿಗಳು ತಮಗೆ ಬೇಕೆಂದ ರೂಪದಲ್ಲಿ ಮನುಷ್ಯರ ಇಲ್ಲವೇ ಪ್ರಾಣಿಗಳ ರೂಪದಲ್ಲಿಯೂ ಸಹಾ ಕಾಣಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದವು. ಇವುಗಳಲ್ಲಿ ಕೆಲ ಶಕ್ತಿಗಳು ಮನುಷ್ಯರಿಗೆ ಉಪದ್ರವ ಕೊಡುವ ಎಂದರೆ ಮನುಷ್ಯರನ್ನು ಮುಳುಗಿಸುವ, ಕೃಷಿಚಟುವಟಿಕೆಗೆ ತೊಂದರೆ ಮಾಡುವ ಅಥವಾ ಜಾನುವಾರುಗಳ ಅಥವಾ ಮನುಷ್ಯರ ರಕ್ತ ಹೀರುವ ದುಷ್ಟ ಕೆಲಸಗಳನ್ನು ಮಾಡುತ್ತಿದ್ದವು. ಆದ್ದರಿಂದ ಸ್ಲಾವಿಕ್ ಜನರು ಸಂಭಾವ್ಯ ದುಷ್ಟಕಾರ್ಯಗಳಲ್ಲಿ ತೊಡಗದಂತೆ ತಡೆಯಲು ಈ ಶಕ್ತಿಗಳನ್ನು ಸುಪ್ರೀತಗೊಳಿಸಲು ತಯಾರಾಗಿರುತ್ತಿದ್ದರು.[102]
ಸಾಮಾನ್ಯ ಸ್ಲಾವಿಕ್ ನಂಬಿಕೆಯೆಂದರೆ ದೇಹ ಮತ್ತು ಆತ್ಮಗಳ ನಡುವಿನ ಪ್ರತ್ಯೇಕತೆಯಾಗಿದೆ. ಆಗ ಆತ್ಮವು ನಶ್ವರವಲ್ಲವೆಂಬ ನಂಬಿಕೆ ಇತ್ತು. ಸ್ಲಾವಿಕರ ನಂಬಿಕೆಯ ಪ್ರಕಾರ ಸಾವಿನ ನಂತರ ಆತ್ಮವು ದೇಹದಿಂದ ಹೊರಬಿದ್ದು ತನ್ನ ನೆರೆಹೊರೆ ಹಾಗೂ ಕಾರ್ಯಸ್ಥಳಗಳಲ್ಲಿ ಸುಮಾರು 40 ದಿನಗಳ ಕಾಲ ಅಲೆದಾಡಿ ನಂತರ ಶಾಶ್ವತ ಬದುಕಿಗೆ ಮರಳುತ್ತದೆ.[102] ಇದರಿಂದಾಗಿ ಆತ್ಮವು ಬೇಕೆಂದಾಗ ಬಂದುಹೋಗಲು ಅನುಕೂಲವಾಗುವಂತೆ ಕಿಟಕಿ ಅಥವಾ ಬಾಗಿಲೊಂದನ್ನು ತೆರೆದೇ ಇಟ್ಟಿರುವುದು ಅಗತ್ಯ ಎಂಬ ನಂಬಿಕೆ ಇತ್ತು. ಈ ಸಮಯದಲ್ಲಿ ಆತ್ಮವು ಸತ್ತ ವ್ಯಕ್ತಿಯ ಶವದೊಳಗೆ ಮರುಪ್ರವೇಶ ಮಾಡುವ ಸಾಮರ್ಥ್ಯ ಪಡೆದಿರುತ್ತದೆ ಎಂಬ ನಂಬಿಕೆಯೂ ಇದೆ. ಈ ಹಿಂದೆ ಚರ್ಚಿಸಿದ ಶಕ್ತಿಗಳ ಹಾಗೆಯೇ ಹೀಗೆ 40 ದಿನಗಳ ಕಾಲ ಓಡಾಡುವ ಆತ್ಮವು ತನ್ನ ಕುಟುಂಬದವರಿಗೆ ಹಾಗೂ ನೆರೆಹೊರೆಯವರಿಗೆ ಒಳ್ಳೆಯದು ಅಥವಾ ಕೆಟ್ಟದು ಮಾಡುವ ಸಾಧ್ಯತೆ ಇರುತ್ತದೆ. ಓರ್ವ ವ್ಯಕ್ತಿಯ ಸಾವಿನ ನಂತರ ಶವಸಂಸ್ಕಾರಗಳನ್ನು ಸರಿಯಾಗಿ ಮಾಡಿದರೆ ಆತ್ಮವು ದೇಹದಿಂದ ಬಿಡುಗಡೆ ಹೊಂದುವಾಗ ಪರಿಶುದ್ಧವಾಗಿ ಶಾಂತಿಯಿಂದಿರುತ್ತದೆ ಎಂಬ ನಂಬಿಕೆಯಿಂದಾಗಿ ಕಾರ್ಯಗಳಿಗೆ ಬಹಳ ಮಹತ್ವ ನೀಡಲಾಗುತ್ತಿತ್ತು. ಜ್ಞಾನಸ್ನಾನ ಮಾಡಿಸದ ಮಗುವಿನ ಮರಣ, ಅಥವಾ ಕ್ರೂರ ಅಥವಾ ಅಕಾಲ ಮರಣ ಅಥವಾ ಪರಮ ಪಾತಕಿಯ ಮರಣ(ಮಾಂತ್ರಿಕ ಇಲ್ಲವೇ ಕೊಲೆಗಡುಕರ ತರಹದ ವ್ಯಕ್ತಿಗಳು) ಮುಂತಾದುವು ಸಾವಿನ ನಂತರ ಆತ್ಮವೊಂದು ಅಶುಚಿಯಾಗಿರಲು ಕಾರಣವಾಗಬಹುದು. ಉಚಿತ ರೀತಿಯಲ್ಲಿ ಶವಸಂಸ್ಕಾರ ನಡೆಸದೇ ಇರುವುದೂ ಆತ್ಮವು ಅಶುಚಿಯಾಗಿರಲು ಕಾರಣವಾಗಬಹುದು. ಬದಲಾಗಿ ಸರಿಯಾಗಿ ಶವಸಂಸ್ಕಾರ ನಡೆಸದ ದೇಹವು ಇನ್ನಿತರ ಅಶುದ್ಧ ಆತ್ಮಗಳ ಇಲ್ಲವೇ ಪ್ರೇತಗಳ ವಶವರ್ತಿಯಾಗಬಹುದು. ಅಶುಚಿಯಾದ ಆತ್ಮವು ಪ್ರತೀಕಾರ ಕೈಗೊಳ್ಳುವ ಸಾಧ್ಯತೆಯು ಸ್ಲಾವಿಕರ ಭಯಕ್ಕೆ ಕಾರಣವಾಗಿತ್ತು.[103]
ಈ ತರಹ ಸಾವು ಹಾಗೂ ಆತ್ಮಗಳೊಂದಿಗೆ ತಳಕು ಹಾಕಿಕೊಂಡ ನಂಬಿಕೆಗಳು ಸ್ಲಾವಿಕರ ವ್ಯಾಂಪಿರ್ ಕುರಿತ ಕಲ್ಪನೆಗೆ ಮೂಲವಾಗಿದೆ. ರಕ್ತಪಿಶಾಚಿಯೆಂದರೆ ಕೊಳೆಯುತ್ತಿರುವ ದೇಹಕ್ಕೆ ಸೇರಿಕೊಂಡಿರುವ ಅಶುಚಿಯಾದ ಆತ್ಮದ ಪ್ರಕಟರೂಪ. ಈ ಪ್ರೇತವು ಪ್ರತೀಕಾರ ಮನೋಭಾವದ್ದಾಗಿದ್ದು ಬದುಕಿರುವವರ ಬಗ್ಗೆ ಅಸೂಯೆಯಿಂದಿದ್ದು, ದೇಹದ ಉಳಿಯುವಿಕೆಗೆ ಜೀವಂತ ವ್ಯಕ್ತಿಯ ರಕ್ತದ ಬೇಟೆಯಾಡತೊಡಗುತ್ತದೆ ಎಂಬ ಅಭಿಪ್ರಾಯವಿತ್ತು.[104] ಈ ರಕ್ತಪಿಶಾಚಿಯ ಕಲ್ಪನೆಯು ಅಲ್ಪಪ್ರಮಾಣದ ವ್ಯತ್ಯಾಸದೊಂದಿಗೆ ಸ್ಲಾವಿಕ್ ದೇಶಗಳಲ್ಲಿ ಹಾಗೂ ಅವುಗಳ ಸ್ಲಾವಿಕೇತರ ನೆರೆಹೊರೆ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿದ್ದರೂ, ಇವುಗಳ ಮೂಲವನ್ನು ಸ್ಲಾವಿಕ್ ಪ್ರದೇಶಗಳಲ್ಲಿ ಮತಾಂತರದ ಮುನ್ನ ಇದ್ದ ಸ್ಲಾವಿಕ್ ಆತ್ಮವಾದ ವ್ಯವಸ್ಥೆಯಲ್ಲಿ ಕಾಣಬಹುದಾಗಿದೆ.
ಪಾಲ್ ಬಾರ್ಬರ್ ರಕ್ತಪಿಶಾಚಿಗಳು, ಸಮಾಧಿಕ್ರಿಯೆ ಮತ್ತು ಮರಣ ಎಂಬ ತನ್ನ ಪುಸ್ತಕದಲ್ಲಿ ರಕ್ತಪಿಶಾಚಿಗಳ ಮೇಲಿನ ನಂಬಿಕೆಯು ಕೈಗಾರಿಕಾಪೂರ್ವ ಸಮಾಜದ ಜನರು ನಿಸರ್ಗದಲ್ಲಿನ ಸಾವಿನ ಹಾಗೂ ದೇಹ ಕೊಳೆಯುವಿಕೆಯ ಪ್ರಕ್ರಿಯೆಯನ್ನು ವಿವರಿಸುವ ಪ್ರಯತ್ನದಲ್ಲಿ ವಿಫಲರಾಗಿ ಕಂಡುಕೊಂಡ ಮಾರ್ಗವಿದು ಎಂದು ವಿವರಿಸಿದ್ದಾರೆ[105]
ಜನರು ಶವವೊಂದನ್ನು ಅಗೆದು ತೆಗೆದಾಗ ಸಾಮಾನ್ಯ ಶವವು ಹೇಗೆ ಕಾಣಬಹುದಿರುತ್ತದೋ ಹಾಗೆ ಇರದಿದ್ದರೆ ರಕ್ತಪಿಶಾಚಿಗಳ ಕಾಟದ ಬಗ್ಗೆ ಅನುಮಾನಿಸುತ್ತಿದ್ದರು. ಕೊಳೆಯುವಿಕೆಯ ವೇಗವು ಉಷ್ಣಾಂಶ ಹಾಗೂ ಮಣ್ಣಿನ ಗುಣಲಕ್ಷಣಗಳ ಮೇಲೆ ವ್ಯತ್ಯಾಸವಾಗುತ್ತಿದ್ದಾಗ್ಯೂ, ಅದರ ಲಕ್ಷಣಗಳ ಬಗ್ಗೆ ವಿವರಗಳು ಲಭ್ಯವಿರಲಿಲ್ಲ. ಇದರಿಂದಾಗಿ ರಕ್ತಪಿಶಾಚಿ ಹಂತಕರಿಗೆ ಶವವು ಕೊಳೆತೇ ಇಲ್ಲ ಅಥವಾ ಕೊಳೆಯುವ ಸಂಜ್ಞೆಗಳನ್ನೇ ವಿರೋಧಾಭಾಸವಾಗಿ ದೇಹವು ಪುನರುಜ್ಜೀವಗೊಂಡಿದೆ ಎಂದು ಅಪಾರ್ಥ ಮಾಡಿಕೊಳ್ಳುವ ಅವಕಾಶ ಮಾಡಿಕೊಡುತ್ತಾ ಇತ್ತು.[106] ಮುಂಡದಲ್ಲಿ ಕೊಳೆತದಿಂದುಂಟಾಗುವ ಅನಿಲಗಳ ಸಂಗ್ರಹದಿಂದ ಶವವು ಊದಿಕೊಂಡು, ಒತ್ತಡ ಹೆಚ್ಚುವುದರಿಂದ ಮೂಗು ಹಾಗೂ ಬಾಯಿಯಿಂದ ರಕ್ತ ಸೋರುತ್ತಿರುತ್ತಿತ್ತು. ಇದು ದೇಹಕ್ಕೆ "ತುಂಬಿಕೊಂಡಿರುವ" "ಉತ್ತಮ ಪೋಷಿತವಾಗಿರುವ" ಮತ್ತು "ಕೆಂಪುವರ್ಣ"ದಿಂದ ಕಂಗೊಳಿಸುವಂತೆ ಮಾಡಿ, ವ್ಯಕ್ತಿಯು ಬದುಕಿದ್ದಾಗ ತೆಳ್ಳಗಿದ್ದರೆ ಇನ್ನಷ್ಟು ಎದ್ದು ಕಾಣುವ ಬದಲಾವಣೆಗಳ ಹಾಗೆ ತೋರುತ್ತಿತ್ತು. ಅರ್ನಾಲ್ಡ್ ಪೌಲೆ ಸನ್ನಿವೇಶದಲ್ಲಿ ವೃದ್ಧೆಯ ಹೊರತೆಗೆದ ಶವ ನೋಡಿದಾಗ ಆಕೆಯ ನೆರೆಹೊರೆಯವರಿಂದ ಆಕೆ ಜೀವಂತವಾಗಿದ್ದಾಗ ಇದ್ದುದಕ್ಕಿಂತ ಹೆಚ್ಚು ದಷ್ಟಪುಷ್ಟವಾಗಿ ಹಾಗೂ ಆರೋಗ್ಯಕರವಾಗಿ ಇದೆ ಎಂಬ ಅಭಿಪ್ರಾಯ ಬಂದಿತ್ತು.[107] ಹೊರಸೂಸಿದ ರಕ್ತವು ಶವವು ರಕ್ತಪಿಶಾಚಿ ತರಹದ ಚಟುವಟಿಕೆಯಲ್ಲಿ ಇತ್ತೀಚೆಗೆ ತೊಡಗಿತ್ತು ಎಂಬ ಅಭಿಪ್ರಾಯ ಮೂಡಿಸುವ ಹಾಗಿರುತ್ತಿತ್ತು.[40] ಕೊಳೆಯುವಿಕೆಯಿಂದ ಚರ್ಮದ ಬಣ್ಣವು ಗಾಢವಾಗುತ್ತದೆ.[108] ಊದಿಕೊಂಡ ಕೊಳೆತ ದೇಹವನ್ನು ನೇತುಹಾಕಿದಾಗ ರಕ್ತವು ಹೊರಗೆ ಜಿನುಗಿ ಸಂಗ್ರಹಗೊಂಡ ಅನಿಲಗಳು ದೇಹದ ಹೊರಗೆ ಹೋಗುವಂತೆ ಒತ್ತಡ ನೀಡುತ್ತದೆ. ಇದರಿಂದಾಗಿ ಅನಿಲಗಳು ಧ್ವನಿಪೆಟ್ಟಿಗೆಯಿಂದ ಹೊರಗೆ ಹೋದಾಗ ಇಲ್ಲವೇ ಗುದದ್ವಾರದಿಂದ ಹೊರಗೆ ಹೋದಾಗ ಪೊಳ್ಳಾದ ವಸ್ತುವಿಂದ ಆಗುವ ಧ್ವನಿಗೆ ಸಮಾನವಾದ ಧ್ವನಿಯು ಕೇಳಿಬಂದು ಅದು ಒಂದು ತರಹದ ನರಳಿಕೆಯಂತಿರುತ್ತದೆ. ಪೀಟರ್ ಪ್ಲೋಗೋಜೊವಿಟ್ಜ್ ಸಂಗತಿಯ ಅಧಿಕೃತ ವರದಿಯು "ಗೌರವದಿಂದ ಹೇಳುವುದಾದರೆ ಇತರ ರೌದ್ರ ಲಕ್ಷಣಗಳ" ಬಗೆಗೆ ಹೇಳುತ್ತದೆ.[109]
ಸಾವಿನ ನಂತರ ಚರ್ಮ ಹಾಗೂ ಒಸಡುಗಳು ದ್ರವವನ್ನು ಕಳೆದುಕೊಂಡು ಕಿರಿದಾಗಿ ಕೂದಲು, ಉಗುರುಗಳು ಮತ್ತು ಹಲ್ಲುಗಳು, ಅದರಲ್ಲೂ ದವಡೆಯಲ್ಲಿ ಹುದುಗಿದ್ದ ಹಲ್ಲನ್ನು ಸಹಾ ಎದ್ದು ಕಾಣುವ ಹಾಗೆ ಮಾಡುತ್ತದೆ. ಇದರಿಂದಾಗಿ ಕೂದಲು, ಉಗುರುಗಳು ಮತ್ತು ಹಲ್ಲು ಬೆಳೆದ ಹಾಗೆ ಭ್ರಮೆ ಉಂಟುಮಾಡುತ್ತದೆ. ಒಂದು ಹಂತದಲ್ಲಿ ಉಗುರುಗಳು ಹೊರಬಿದ್ದು ಚರ್ಮವು ಸುಲಿದುಕೊಂಡು ಬರುತ್ತದೆ, ಪ್ಲೋಗೋವಿಟ್ಜ್ ಸನ್ನಿವೇಶದಲ್ಲಿ ವರದಿಯಾದ ಹಾಗೆ ಒಳಚರ್ಮ ಹಾಗೂ ಉಗುರಿನ ತಳದ ಹೊರಸೂಸುವಿಕೆಯನ್ನು "ಹೊಸ ಚರ್ಮ" ಹಾಗೂ "ಹೊಸ ಉಗುರುಗಳಾಗಿ" ಅರ್ಥೈಸಿದ್ದರು.[109]
ರಕ್ತಪಿಶಾಚಿ ದಂತಕಥೆಗಳು ಆ-ಕಾಲದ ಪ್ರಸಕ್ತ ವೈದ್ಯಕೀಯ ಜ್ಞಾನದ ಕೊರತೆಯಿಂದಾಗಿ ಬದುಕಿದ್ದವರನ್ನೇ ಹೂಳುತ್ತಿದ್ದ ವಿಚಾರದಿಂದಲೂ ಪ್ರಭಾವಿತವಾಗಿರಬಹುದು ಎಂಬ ವಾದಸರಣಿಯೂ ಇದೆ. ಕೆಲ ಸಂದರ್ಭಗಳಲ್ಲಿ ನಿರ್ದಿಷ್ಟ ಶವಪೆಟ್ಟಿಗೆಗಳಿಂದ ಧ್ವನಿಗಳು ಕೇಳಿಬರುತ್ತಿದ್ದು, ನಂತರ ಅಗೆದು ಹೊರತೆಗೆದಾಗ ಬಲಿಯಾದ ವ್ಯಕ್ತಿಯು ತಪ್ಪಿಸಿಕೊಳ್ಳಲು ಮಾಡಿದ ಪ್ರಯತ್ನದ ಕುರುಹಾಗಿ ಶವಪೆಟ್ಟಿಗೆಯ ಒಳಗೆ ಉಗುರಿನ ಗುರುತುಗಳು ಕಾಣಬರುತ್ತಿದ್ದವು. ಇನ್ನಿತರ ಸಂದರ್ಭಗಳಲ್ಲಿ ವ್ಯಕ್ತಿಯು ತಮ್ಮ ತಲೆ ಮೂಗು ಅಥವಾ ಮುಖದಿಂದ ತೆರೆಯಲು ಮಾಡಿದ ಪ್ರಯತ್ನದಿಂದಾಗಿ "ಆಹಾರ ಸೇವನೆ ಮಾಡುತ್ತಿದ್ದ ಭಾವನೆ ಮೂಡುತ್ತವೆ".[110] ಈ ವಾದಸರಣಿಯಲ್ಲಿನ ತೊಂದರೆಯೆಂದರೆ ಸಜೀವ ಹೂಳುವಿಕೆಗೆ ಒಳಗಾದವರು ಇನ್ನೂ ಹೆಚ್ಚಿನ ಕಾಲ ಆಹಾರ, ನೀರು ಅಥವಾ ಶುದ್ಧ ಗಾಳಿಯ ಸೇವನೆ ಇಲ್ಲದೆ ಹೇಗೆ ಬದುಕಿದ್ದರು ಎಂಬ ಪ್ರಶ್ನೆ. ಧ್ವನಿಯ ವಿಚಾರಕ್ಕೆ ನೀಡಬಹುದಾದ ಇನ್ನೊಂದು ವಿವರಣೆಯೆಂದರೆ ನೈಸರ್ಗಿಕ ಕೊಳೆಯುವಿಕೆಯಿಂದ ದೇಹದಿಂದ ಹೊರಹೊಮ್ಮುವ ಅನಿಲಗಳ ಬೊಬ್ಬಳದಿಂದಾಗುತ್ತದೆ ಎಂಬುದು.[111] ಅಸ್ತವ್ಯಸ್ತವಾದ ಸಮಾಧಿಗಳ ಬಗೆಗಿನ ಮತ್ತೊಂದು ಸಾಧ್ಯ ವಿವರಣೆಯೆಂದರೆ ಸಮಾಧಿ ದರೋಡೆ.[112]
ದಂತಕಥೆಯಲ್ಲಿನ ರಕ್ತಪಿಶಾಚಿ ಕುರಿತ ನಂಬಿಕೆಯನ್ನು ಗುರುತಿಸಲಾಗದೇ ಹೋದ ಹಾಗೂ ನಿಗೂಢ ರೀತಿಯ ರೋಗಗಳಿಂದಾದ ಒಂದೇ ಕುಟುಂಬದ ಅಥವಾ ಒಂದೇ ಸಣ್ಣ ಸಮುದಾಯದ ಜನರ ಸಾವಿನ ಸರಣಿಗಳೊಂದಿಗೆ ತಳಕು ಹಾಕಲಾಗುತ್ತದೆ.[80] ಸಾಂಕ್ರಾಮಿಕದ ಪ್ರಸ್ತಾಪವು ನಿದರ್ಶನಯೋಗ್ಯವಾದ ಸಂಗತಿಗಳಾದ ಪೀಟರ್ ಪ್ಲೋಗೋವಿಟ್ಜ್ ಮತ್ತು ಅರ್ನಾಲ್ಡ್ ಪೌಲೆ ಸಂದರ್ಭಗಳಲ್ಲಿ ಹಾಗೂ ಇನ್ನಷ್ಟು ಸ್ಪಷ್ಟವಾಗಿ ಮರ್ಸಿ ಬ್ರೌನ್ ದೃಷ್ಟಾಂತಗಳಲ್ಲಿದೆ. ನ್ಯೂ ಇಂಗ್ಲೆಂಡ್ನಲ್ಲಿನ ರಕ್ತಪಿಶಾಚಿ ನಂಬಿಕೆಗಳಲ್ಲಿ ಸಾಮಾನ್ಯವಾಗಿ, ನಿರ್ದಿಷ್ಟ ರೋಗವಾದ ಕ್ಷಯರೋಗವು ರಕ್ತಪಿಶಾಚಿ ಕುರಿತಾದ ವಿಕೋಪಗಳಿಗೆ ಕಾರಣವಾಗಿತ್ತೆಂಬ ಭಾವವಿದೆ. ಗೆಡ್ಡೆ ಜ್ವರದ ನ್ಯುಮೋನಿಯಾ ಮಾದರಿಯ ಈ ರೋಗವು ಶ್ವಾಸಕೋಶದ ಅಂಗಾಂಶದ ಅನಾರೋಗ್ಯವು ಬಾಯಿಯ ತುದಿಯಲ್ಲಿ ರಕ್ತ ಒಸರಲು ಕಾರಣವಾಗುತ್ತಿತ್ತು.[113]
1985ರಲ್ಲಿ ಜೀವರಸಾಯನ ವಿಜ್ಞಾನಿ ಡೇವಿಡ್ ಡಾಲ್ಫಿನ್ ರಕ್ತಪಿಶಾಚಿ ದಂತಕಥೆಗೂ ಪ್ರೋಫೇರಿಯಾ ಎಂಬ ವಿರಳ ರಕ್ತವ್ಯಾಧಿಗೂ ಸಂಬಂಧವಿದೆ ಎಂಬ ಆಲೋಚನೆಯನ್ನು ಮುಂದಿಟ್ಟರು. ಅಭಿಧಮನಿಯೊಳಗಿನ ಹೇಮ್ನ ಮೂಲಕ ಚಿಕಿತ್ಸೆ ಮಾಡಬೇಕಾದ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಪ್ರಮಾಣದ ರಕ್ತ ಕುಡಿಯುವಿಕೆಯು ಜಠರದ ಮೂಲಕ ಹೇಗಾದರೂ ರಕ್ತ ಪರಿಚಲನೆಯೊಳಗೆ ಹೀಮ ಸೇರಿಕೊಳ್ಳುವ ಸಾಧ್ಯತೆಯನ್ನು ತೋರಿಸಿದರು. ಆದ್ದರಿಂದ ರಕ್ತಪಿಶಾಚಿಗಳು ಕೇವಲ ಪ್ರೋಫೇರಿಯಾ ಪೀಡಿತರಾಗಿದ್ದು ಹೀಮನ್ನು ಬದಲಾಯಿಸಿ ತಮ್ಮ ಗುಣಲಕ್ಷಣಗಳಿಂದ ಬಿಡುಗಡೆ ಹೊಂದಬೇಕಿರುತ್ತದೆ.[114] ಆದರೆ ಈ ಸಿದ್ಧಾಂತವನ್ನು ವೈದ್ಯಕೀಯವಾಗಿ ತಿರಸ್ಲರಿಸಲಾಯಿತು. ಪ್ರೋಫೇರಿಯಾ ಪೀಡಿತರು ಹೀಮಕ್ಕೆಂದು ಹಂಬಲಿಸುತ್ತಿರುತ್ತಾರೆ ಅಥವಾ ರಕ್ತ ಕುಡಿಯುವಿಕೆಯು ಪ್ರೋಫೇರಿಯಾದಿಂದ ಬಿಡುಗಡೆ ಹೊಂದಲು ನೆರವಾಗುತ್ತದೆ ಎಂಬುದು ರೋಗದ ಬಗೆಗಿನ ಅಜ್ಞಾನದಿಂದ ಬಂದಿರುವ ನಂಬಿಕೆ ಎನ್ನಲಾಯಿತು. ಇದಲ್ಲದೇ, ಕಾಲ್ಪನಿಕ (ರಕ್ತಹೀರುವ) ರಕ್ತಪಿಶಾಚಿಗಳನ್ನು ದಂತಕಥೆಗಳಲ್ಲಿ ಬರುವ ರಕ್ತಹೀರದ ಪಿಶಾಚಿಗಳೆಂದು ಡಾಲ್ಫಿನ್ ಗೊಂದಲಕ್ಕೊಳಗಾಗಿದ್ದರೆಂದು ಹೇಳಲಾಗಿದೆ.[115] ಇದೇ ರೀತಿಯಲ್ಲಿ ಸೂರ್ಯನ ಬೆಳಕಿನ ಬಗೆಗಿನ ಸೂಕ್ಷ್ಮತೆಯನ್ನು ಸಹಾ ಭಾವಿಸಲಾಯಿತು, ಆದರೆ ಇದೂ ಸಹಾ ಕೇವಲ ಕಾಲ್ಪನಿಕ ರಕ್ತಪಿಶಾಚಿಗಳ ವಿಚಾರಕ್ಕೆ ಮಾತ್ರ ಸಂಬಂಧಿಸಿತ್ತೆಂದು ಭಾವಿಸಲಾಯಿತು. ಇದೇನೇ ಆದರೂ ಡಾಲ್ಫಿನ್ ತನ್ನ ಅಧ್ಯಯನಗಳನ್ನು ವ್ಯಾಪಕವಾಗಿ ಪ್ರಚುರಪಡಿಸಲು ಹೋಗಲಿಲ್ಲ.[116] ತಜ್ಞರಿಂದ ನಿರಾಕರಣೆಯಾಗಿದ್ದರೂ ಈ ಸಂಪರ್ಕವು ಮಾಧ್ಯಮದ[117] ಗಮನ ಸೆಳೆದು ಜನಪ್ರಿಯ ಆಧುನಿಕ ದಂತಕಥೆಯಾಯಿತು.[118]
ರಕ್ತಪಿಶಾಚಿ ದಂತಕಥೆಯೊಂದಿಗೆ ರೇಬೀಸ್ ಅನ್ನು ಸೇರಿಸಲಾಗಿದೆ. ಸ್ಪೇನ್ನ ವಿಗೊ ನಗರದ ಕ್ಸೆರಲ್ ಆಸ್ಪತ್ರೆಯ ನರವಿಜ್ಞಾನಿ ಡಾ|| ಜುಆನ್ ಗೋಮೆಜ್-ಆಲೊನ್ಸೊ, ಎಂಬುವವರು ನರವಿಜ್ಞಾನ ದ ವರದಿಯೊಂದರಲ್ಲಿ ಈ ಸಾಧ್ಯತೆಯನ್ನು ಪರಿಶೀಲಿಸಿದ್ದಾರೆ. ಬೆಳ್ಳುಳ್ಳಿ ಹಾಗೂ ಬೆಳಕಿನ ಬಗೆಗಿನ ಸಂವೇದನೆಯು ರೇಬೀಸ್ನ ಲಕ್ಷಣವಾದ ಅತಿಸೂಕ್ಷ್ಮತೆಯಿಂದಾಗಿರಬಹುದಾಗಿದೆ. ರೋಗವು ಮಿದುಳಿನ ಕೆಲಭಾಗಗಳಲ್ಲಿ ಪರಿಣಾಮ ಬೀರಿ ನಿದ್ರಾವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಹಾಗೆ (ನಿಶಾಚರರಾಗುವಂತೆ) ಅಲ್ಲದೇ ವಿಪರೀತ ಲೈಂಗಿಕತೆಗೊಳಪಡುವಂತೆ ಮಾಡುತ್ತದೆ. ಒಂದು ದಂತಕಥೆಯ ಪ್ರಕಾರ ವ್ಯಕ್ತಿಯು ತನ್ನ ಸ್ವಂತ ಪ್ರತಿಬಿಂಬವನ್ನು ನೋಡಲು ಶಕ್ತನಾದರೆ ಉನ್ಮತ್ತನಲ್ಲ (ದಂತಕಥೆಗಳ ಪ್ರಕಾರ ರಕ್ತಪಿಶಾಚಿಗಳಿಗೆ ಪ್ರತಿಬಿಂಬವಿರುವುದಿಲ್ಲ). ರಕ್ತಪಿಶಾಚಿಗಳ ಕಥೆಗಳಲ್ಲಿ ಸಾಮಾನ್ಯವಾಗಿರುವ ತೋಳಗಳು ಹಾಗೂ ಬಾವಲಿಗಳು ರೇಬೀಸ್ ವಾಹಕಗಳಾಗಿರುವ ಸಾಧ್ಯತೆ ಇದೆ. ಈ ರೋಗವು ಉಳಿದವರನ್ನು ಕಚ್ಚುವ ಭಾವನೆ ಬರುವಂತೆ ಹಾಗೂ ಬಾಯಿಂದ ರಕ್ತದ ಬುರುಗು ಬರುವಂತೆ ಮಾಡುವ ಸಾಧ್ಯತೆ ಇದೆ.[119][120]
ತನ್ನ 1931ರ ದುಃಸ್ವಪ್ನದ ಬಗೆಗಿನ ಗ್ರಂಥ ದಲ್ಲಿ, ವೆಲ್ಶ್ನ ಮನೋವಿಶ್ಲೇಷಕ ಅರ್ನೆಸ್ಟ್ ಜೋನ್ಸ್ ಎಂಬಾತ ರಕ್ತಪಿಶಾಚಿಗಳು ಅನೇಕ ಪ್ರಜ್ಞೆಯಿಲ್ಲದ ಪ್ರೇರಣೆ ಹಾಗೂ ಸ್ವರಕ್ಷಣಾ ವ್ಯವಸ್ಥೆಗಳ ಸಂಜ್ಞೆಗಳು ಎಂದಿದ್ದಾರೆ. ಪ್ರೀತಿ, ಅಪರಾಧಿ ಭಾವ ಅಥವಾ ದ್ವೇಷಗಳು ಸಮಾಧಿಗೆ ಸತ್ತವರ ಪುನರಾಗಮನದ ಬಗೆಗೆ ಆಲೋಚನೆ ಮೂಡುವ ಹಾಗೆ ಮಾಡುತ್ತವೆ. ಪ್ರೀತಿಪಾತ್ರರ ಜೊತೆಗೂಡಬೇಕೆಂದಿರುವವರು ಹಾಗೂ ದುಃಖಿತರಾದವರು ಇತ್ತೀಚೆಗೆ ಸತ್ತವರು ಸಹಾ ತಮ್ಮ ಹಾಗೆಯೇ ಹಾತೊರೆಯುತ್ತಿರುತ್ತಾರೆ ಎಂಬ ಭಾವನೆ ಹೊಂದಿರುತ್ತಾರೆ. ಇದರಿಂದಾಗಿಯೇ ದಂತಕಥೆಯ ರಕ್ತಪಿಶಾಚಿಗಳು ಮತ್ತು ದೆವ್ವಗಳು ಸಂಬಂಧಿಕರನ್ನು ಭೇಟಿ ಮಾಡುತ್ತಿರುತ್ತವೆ, ಅದರಲ್ಲೂ ತಮ್ಮ ಸಂಗಾತಿಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತವೆ.[121] ಆದರೆ ಅಪ್ರಜ್ಞಾಪೂರ್ವಕ ಅಪರಾಧಿಭಾವವು ಜೊತೆಗೂಡುವಿಕೆಯ ಆಸೆಯನ್ನು ಆತಂಕಕ್ಕೆ ಮಾರ್ಪಡಿಸುತ್ತದೆ. ಇದು ಫ್ರೂಡ್ ಹೇಳಿದ ಸಂಬಂಧದಂತೆ ದಮನ ಮನೋಭಾವನೆಗೆ ಎಡೆ ಮಾಡಿ ದಿಗಿಲಿನ ಅನಾರೋಗ್ಯಕ್ಕೆಡೆ ಮಾಡುತ್ತದೆ.[122] ಜೋನ್ಸ್ ಕಲ್ಪನೆಯ ಪ್ರಕಾರ ಇಂತಹಾ ಸಂದರ್ಭದಲ್ಲಿ ಮೂಲ (ಲೈಂಗಿಕ) ಜೊತೆಗೂಡುವಿಕೆಯ ಆಸೆಯು ತೀವ್ರವಾಗಿ ಬದಲಾಗಿ ಆಸೆಯು ಭಯವನ್ನುಂಟು ಮಾಡಿ; ಪ್ರೀತಿಯು ವಿಕೃತತೆಗೆ ತಿರುಗಿ ಆ ವಸ್ತು ಅಥವಾ ಪ್ರೀತಿಪಾತ್ರರು ಅಜ್ಞಾತ ವಸ್ತುವಾಗಿಬಿಡುತ್ತಾರೆ. ಲೈಂಗಿಕ ಭಾವನೆಯು ಇರಬಹುದು ಅಥವಾ ಇಲ್ಲದಿರಬಹುದು.[123] ಕೆಲ ಆಧುನಿಕ ವಿಮರ್ಶಕರು ಸರಳ ಸಿದ್ಧಾಂತವೊಂದನ್ನು ಮುಂದಿಡುತ್ತಾರೆ : ಜನರು ಸಾವಿಲ್ಲದ ರಕ್ತಪಿಶಾಚಿಗಳೊಂದಿಗೆ ಗುರುತಿಸಿಕೊಂಡು, ಸಾವಿನ ಬಗೆಗಿನ ಭಯವನ್ನು ಹೋಗಲಾಡಿಸಲು ಅಥವಾ ಕನಿಷ್ಟ ತಾತ್ಕಾಲಿಕವಾಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ.[124]
ರಕ್ತ ಹೀರುವಿಕೆಯಲ್ಲಿನ ಸ್ವಾಭಾವಿಕ ಲೈಂಗಿಕತೆಗೆ ನರಭಕ್ಷಕತ್ವ ಮತ್ತು ದಂತಕಥೆಗಳಲ್ಲಿಯಂತೆ ಸ್ವಪ್ನಪಿಶಾಚಿ ತರಹದ ನಡತೆಯ ಪರಸ್ಪರ ಸಂಬಂಧವನ್ನು ಗಮನಿಸಬಹುದು. ಅನೇಕ ದಂತಕಥೆಗಳಲ್ಲಿ ಅನೇಕ ಜೀವಿಗಳು ಇನ್ನಿತರ ದ್ರವಗಳನ್ನು ತಮ್ಮ ಬಲಿಪಶುವಿನಿಂದ ಹೀರುವುದನ್ನು ಹೇಳುತ್ತವೆ, ಇದು ಅಪ್ರಜ್ಞಾಪೂರ್ವಕವಾಗಿ ವೀರ್ಯಕ್ಕೆ ಸಂಬಂಧಿಸಿರುವ ಸಾಧ್ಯತೆ ಹೆಚ್ಚಿದೆ. ಅಂತಿಮವಾಗಿ ಜೋನ್ಸ್ ಲೈಂಗಿಕತೆಯ ಸಾಮಾನ್ಯ ಆಕರ್ಷಣೆಯನ್ನು ಹತ್ತಿಕ್ಕಿದರೆ, ಹಿಮ್ಮೆಟ್ಟುವಿಕೆ ಆರಂಭವಾಗಬಹುದು, ಅದು ವಿಶೇಷವಾಗಿ ವಿಕೃತತೆಗೆ ತಿರುಗಿ ಬಾಯಿಯ ವಿಕೃತ ಬಳಕೆಯು ರಕ್ತಪಿಶಾಚಿಯ ನಡತೆಯಲ್ಲೇ ಅಂತರ್ಗತವಾಗಿರುತ್ತದೆ.[125]
ಆಧುನಿಕ ಯುಗದಲ್ಲಿ ರಕ್ತಪಿಶಾಚಿ ದಂತಕಥೆಯ ಮರುಅನ್ವೇಷಣೆಯು ರಾಜಕೀಯ ಪ್ರಭಾವವಿಲ್ಲದೇ ನಡೆದಿಲ್ಲ.[126] ಶ್ರೀಮಂತ ಕೌಂಟಿಯ ಅಧಿಪತಿ ಡ್ರಾಕುಲಾ ಕೆಲ ಉನ್ಮತ್ತ ಸೇವಕರಿಂದ ಪ್ರತ್ಯೇಕವಾಗಿ ಏಕಾಂಗಿಯಾಗಿ ತನ್ನ ಕೋಟೆಯಲ್ಲಿರುತ್ತಿದ್ದು, ಕೇವಲ ರಾತ್ರಿಯಲ್ಲಿ ಕಾಣಿಸಿಕೊಂಡು ಪ್ರಾಚೀನ ಪರೋಪಜೀವಿ ಪ್ರಭುತ್ವ ಗಳ ಸಂಕೇತವಾಗಿ ತನ್ನ ರೈತರ ರಕ್ತ ಹೀರುತ್ತಿದ್ದ. ವರ್ನರ್ ಹರ್ಜೋಗ್ ತನ್ನ ನೊಸ್ಫೆರಟು ದ ವ್ಯಾಂಪೈರ್ ಎಂಬ ಪುಸ್ತಕದಲ್ಲಿ ಆತನ ಯುವ ದಳ್ಳಾಳಿ ರಕ್ತಪಿಶಾಚಿಯಾಗಿ ಬದಲಾದಾಗ ಈ ರಾಜಕೀಯ ವ್ಯಾಖ್ಯಾನದ ವಿಚಿತ್ರ ತಿರುವನ್ನು ನೀಡುತ್ತಾನೆ; ಈ ರೀತಿಯಲ್ಲಿ ಬಂಡವಾಳಶಾಹಿ ಬೂರ್ಜ್ವಾ ಯೊಬ್ಬ ಮುಂದಿನ ಪರೋಪಜೀವಿ ಪ್ರಭುತ್ವವಾಗಿ ಬದಲಾಗುತ್ತಾನೆ.[127]
ಅನೇಕ ಕೊಲೆಗಾರರು ತಮ್ಮ ಬಲಿಗಳ ಮೇಲೆ ರಕ್ತಪಿಶಾಚಿ ತರಹದ ಆಚರಣೆಗಳನ್ನು ನಡೆಸಿದ್ದಾರೆ. ಸರಣಿ ಹಂತಕರಾದ ಪೀಟರ್ ಕುರ್ಟೆನ್ ಮತ್ತು ರಿಚರ್ಡ್ ಟ್ರೆಂಟನ್ ಚೇಸ್ರು ತಾವು ಕೊಲೆ ಮಾಡಿದವರ ರಕ್ತ ಕುಡಿಯುತ್ತಾರೆ ಎಂಬ ವಿಚಾರ ತಿಳಿದ ಮೇಲೆ ಪೀತಪತ್ರಿಕೆಗಳಲ್ಲಿ ಅವರಿಬ್ಬರನ್ನು "ರಕ್ತಪಿಶಾಚಿಗಳು" ಎಂದೇ ಕರೆಯಲಾಗುತ್ತಿತ್ತು. ಅದೇ ರೀತಿಯಲ್ಲಿ, 1932ರಲ್ಲಿ, ಸ್ವೀಡನ್ನ ಸ್ಟಾಕ್ಹೋಮ್ನಲ್ಲಿ ಪರಿಹಾರವಾಗದ ಕೊಲೆ ಮೊಕದ್ದಮೆಯೊಂದರಲ್ಲಿ ವ್ಯಕ್ತಿಯ ಸಾವಿನ ಸನ್ನಿವೇಶವನ್ನು ಗಮನಿಸಿ "ರಕ್ತಪಿಶಾಚಿ ಕೊಲೆಗಾರ" ಎಂಬ ಉಪನಾಮವನ್ನಿಡಲಾಗಿತ್ತು.[128] 16ನೇ ಶತಮಾನದ ಅಂತಿಮಭಾಗದಲ್ಲಿ ಹಂಗೆರಿಯ ಕೌಂಟೆಸ್ ಮತ್ತು ಸಾಮೂಹಿಕ ಕೊಲೆಗಾರ್ತಿ ಎಲಿಜಬೆತ್ ಬಥೊರಿ ಎಂಬಾಕೆ ಶತಮಾನದ ಅಂತ್ಯದ ಬರಹಗಳಲ್ಲಿ ತನ್ನ ಸೌಂದರ್ಯ ಇಲ್ಲವೇ ಯೌವನವನ್ನು ಉಳಿಸಿಕೊಳ್ಳಲು ತನ್ನಿಂದ ಕೊಲೆಯಾದವರ ರಕ್ತದಲ್ಲಿ ಸ್ನಾನ ಮಾಡುತ್ತಿದ್ದುದಕ್ಕಾಗಿ ಕುಖ್ಯಾತಳಾಗಿದ್ದಳು.[129]
ರಕ್ತಪಿಶಾಚಿ ಜೀವನಶೈಲಿ ಎಂಬುದು ಗೋಥ್ ಜನರ ಉಪಸಂಸ್ಕೃತಿಯಲ್ಲೇ ಸಮಕಾಲೀನ ಉಪಸಂಸ್ಕೃತಿಯಾಗಿದೆ. ಕುಮತ ಪ್ರತಿಮಾಪಂಥಕ್ಕೆ ಸಂಬಂಧಿಸಿದ ಜನಪ್ರಿಯ ಸಂಸ್ಕೃತಿ, ಭಯಾನಕ ಚಿತ್ರಗಳು, ಆನ್ನೆ ರೈಸ್ರ ಕಥೆಗಳು, ಮತ್ತು ವಿಕ್ಟೋರಿಯಾ ಕಾಲದ ಇಂಗ್ಲೆಂಡ್ನ ಶ್ರೀಮಂತ ಇತಿಹಾಸದಿಂದ ಪ್ರಭಾವಿತರಾಗಿ ಇವರು ಇತರರ ರಕ್ತವನ್ನು ಸಮಯ ಕಳೆಯುವುದಕ್ಕಾಗಿ ಹೀರುತ್ತಿದ್ದರು.[130] ರಕ್ತಪಿಶಾಚಿ ಉಪಸಂಸ್ಕೃತಿಯಲ್ಲಿನ ರಕ್ತಪಿಶಾಚಿ ನಂಬಿಕೆಯು ಉತ್ಸಾಹಿ ರಕ್ತಪಿಶಾಚಿ ಎಂದು ಸಾಮಾನ್ಯವಾಗಿ ಕರೆಯಲಾಗುವ ರಕ್ತ-ಸಂಬಂಧಿತ ರಕ್ತಪಿಶಾಚಿ ನಂಬಿಕೆಯನ್ನು ಮತ್ತು ಪ್ರಾಣಿಕ್ ಶಕ್ತಿಯ ಮೂಲಕ ಆಹಾರ ಪಡೆಯುವ ಮಾನಸಿಕ ರಕ್ತಪಿಶಾಚಿತನ ಎರಡನ್ನೂ ಹೊಂದಿದೆ.[131]
ಅನೇಕ ಸಂಸ್ಕೃತಿಗಳು, ರಕ್ತಪಿಶಾಚಿ ಬಾವಲಿಗಳ ಬಗೆಗೆ ಕಥೆಗಳನ್ನು ಹೊಂದಿದ್ದಾಗ್ಯೂ ಅವು ಇತ್ತೀಚೆಗಷ್ಟೇ ಸಾಂಪ್ರದಾಯಿಕ ರಕ್ತಪಿಶಾಚಿ ಸಿದ್ಧಾಂತದ ಅಖಂಡ ಭಾಗವಾಗಿವೆ. ವಾಸ್ತವಿಕವಾಗಿ, ರಕ್ತಪಿಶಾಚಿ ಬಾವಲಿಗಳು ರಕ್ತಪಿಶಾಚಿ ದಂತಕಥೆಗಳಲ್ಲಿ ಕಾಣಿಸಿಕೊಂಡದ್ದು 16ನೇ ಶತಮಾನದಲ್ಲಿ ದಕ್ಷಿಣ ಅಮೇರಿಕಾದ ಪ್ರಮುಖ ಭೂಭಾಗದಲ್ಲಿ ಅವು ಕಾಣಿಸಿಕೊಂಡಾಗ.[132] ಯೂರೋಪ್ನಲ್ಲಿ ರಕ್ತಪಿಶಾಚಿ ಬಾವಲಿಗಳು ಇರಲಿಲ್ಲವಾದರೂ ಬಾವಲಿಗಳು ಹಾಗೂ ಗೂಬೆಗಳನ್ನು ಪ್ರಮುಖವಾಗಿ ಅವುಗಳ ನಿಶಾಚರ,[132][133] ಆಚರಣೆಗಳಿಂದಾಗಿ ಅಲೌಕಿಕ ಹಾಗೂ ಶಕುನಗಳ ವಿಚಾರದಲ್ಲಿ ನಂಬಲಾಗುತ್ತದೆ, ಆಧುನಿಕ ಆಂಗ್ಲ ಹೆರಾಲ್ಡಿಕ್ ಸಂಸ್ಕೃತಿಯಲ್ಲಿ ಬಾವಲಿ ಎಂದರೆ "ಅಂಧಕಾರ ಮತ್ತು ಗಲಿಬಿಲಿಗಳ ಶಕ್ತಿಯ ಬಗೆಗಿನ ಜ್ಞಾನ".[134]
ನಿಜವಾದ ರಕ್ತಪಿಶಾಚಿ ಬಾವಲಿಗಳ ಮೂರು ತಳಿಗಳು ಲ್ಯಾಟಿನ್ ಅಮೇರಿಕಾದ ಸ್ಥಳೀಯ ತಳಿಗಳಾಗಿದ್ದು ಅವು ಮನುಷ್ಯ ಸ್ಮೃತಿಗೆ ಒಳಪಟ್ಟಂತೆ ಯಾವುದೇ ಹಳೆಕಾಲದ ಸಂಬಂಧಿತ ತಳಿಗಳನ್ನು ಹೊಂದಿವೆಯೆಂಬುದಕ್ಕೆ ಯಾವುದೇ ಆಧಾರವಿಲ್ಲ. ಆದ್ದರಿಂದ ದಂತಕಥೆಯಲ್ಲಿನ ರಕ್ತಪಿಶಾಚಿಯು ರಕ್ತಪಿಶಾಚಿ ಬಾವಲಿಯ ಅಸ್ಪಷ್ಟ ಪ್ರತಿಬಿಂಬ ಇಲ್ಲವೇ ನೆನಪನ್ನು ತರುತ್ತದೆ ಎಂಬುದು ಅಸಾಧ್ಯ. ಬಾವಲಿಗಳಿಗೆ ಆ ಹೆಸರು ದೊರಕಿದ್ದು ಈ ದಂತಕಥೆಗಳಿಂದಾಗಿಯೇ ಹೊರತು ಬೇರೆ ವಿಧದಲ್ಲಲ್ಲ; ಆಕ್ಸ್ಫರ್ಡ್ ಆಂಗ್ಲ ಪದಕೋಶ ವು ದಂತಕಥೆಯಲ್ಲಿನ ಬಳಕೆಯನ್ನು 1734ರಿಂದಲೇ ದಾಖಲಿಸಿದ್ದರೂ ಅದು ಪ್ರಾಣಿಶಾಸ್ತ್ರದಲ್ಲಿ ಕಾಣಿಸಿಕೊಂಡದ್ದು 1774ರಲ್ಲಿ. ರಕ್ತಪಿಶಾಚಿ ಬಾವಲಿಯ ಕಡಿತವು ವ್ಯಕ್ತಿಗೆ ಹಾನಿಕರವಲ್ಲದೇ ಹೋದರೂ, ಅದು ದೊಡ್ಡದಾದ ಬಲಿಗಳಾದ ಮನುಷ್ಯರ ಹಾಗೂ ಆಕಳ ರಕ್ತ ಹೀರುತ್ತದಲ್ಲದೇ ತನ್ನ ಬಲಿಪಶುವಿನ ಎರಡು ತ್ರಿಶೂಲಗಳ ಗುರುತನ್ನು ತನ್ನ ಕಡಿತದ ಕುರುಹಾಗಿ ಬಿಟ್ಟಿರುತ್ತದೆ.[132]
ಸಾಹಿತ್ಯದ ಡ್ರಾಕುಲಾ ಕಥೆಯಲ್ಲಿ ಅನೇಕ ಬಾರಿ ಬಾವಲಿಯಾಗಿ ಬದಲಾಗುತ್ತಾನಲ್ಲದೇ, ರಕ್ತಪಿಶಾಚಿ ಬಾವಲಿಗಳೇ ಅದರಲ್ಲಿ ಎರಡು ಬಾರಿ ಪ್ರಸ್ತಾಪವಾಗಿವೆ. 1927ರಲ್ಲಿ ಡ್ರಾಕುಲಾ ದ ರಂಗಭೂಮಿಯ ಪ್ರದರ್ಶನವು ಡ್ರಾಕುಲಾ ಬಾವಲಿಯಾಗಿ ಬದಲಾಗುವುದರಲ್ಲಿ ಕಾದಂಬರಿಯನ್ನೇ ಅನುಸರಿಸುತ್ತದೆ, ಅದೇ ರೀತಿ ಚಿತ್ರದಲ್ಲಿ ಕೂಡಾ ಬೆಲಾ ಲುಗೋಸಿ ಬಾವಲಿಯಾಗಿ ಬದಲಾಗುತ್ತಾನೆ.[132] ಬಾವಲಿಯಾಗಿ ಬದಲಾಗುವ ದೃಶ್ಯವನ್ನು 1943ರ ಸನ್ ಆಫ್ ಡ್ರಾಕುಲಾ ಚಿತ್ರದಲ್ಲಿ ಲಾನ್ ಚ್ಯಾನಿ Jr. ಬಳಸಿದ್ದಾರೆ.[135]
ರಕ್ತಪಿಶಾಚಿಯು ಈಗ ಜನಪ್ರಿಯ ಕಥೆಗಳಲ್ಲಿ ನಿಶ್ಚಿತ ಪಾತ್ರ. ಈ ತರಹದ ಕಥೆಗಳು ಹದಿನೆಂಟನೇ ಶತಮಾನದ ಕಾವ್ಯದಲ್ಲಿ ಆರಂಭವಾಗಿ ಹತ್ತೊಂಭತ್ತನೇ ಶತಮಾನದಲ್ಲಿ ಸಣ್ಣಕತೆಗಳ ರೂಪದಲ್ಲಿ ಮುಂದುವರೆಯಿತು. ಅದರಲ್ಲಿ ಪ್ರಥಮ ಹಾಗೂ ಹೆಚ್ಚು ಪ್ರಭಾವ ಬೀರಿದ್ದು ಎಂದರೆ ಲಾರ್ಡ್ ರುತ್ವೆನ್ ರಕ್ತಪಿಶಾಚಿಯ ಮೇಲೆ ಚಿತ್ರಿಸಿದ ಜಾನ್ ಪೊಲಿಡೊರಿಯ ದ ವ್ಯಾಂಪೈರ್ (1819). ಲಾರ್ಡ್ ರುತ್ವೆನ್ನ ಶೋಷಣೆಗಳನ್ನು ಮತ್ತಷ್ಟು ವಿವರವಾಗಿ ಆತ ಪ್ರತಿ ನಾಯಕನಾಗಿದ್ದ ರಕ್ತಪಿಶಾಚಿ ನಾಟಕಗಳ ಸರಣಿಯಲ್ಲಿ ಚಿತ್ರಿಸಲಾಯಿತು. ರಕ್ತಪಿಶಾಚಿ ವಿಷಯವು ಅತಿಭಯಾನಕ ಸರಣಿ ಕಿರುಪುಸ್ತಕಗಳಾದ ವಾರ್ನಿ ದ ವ್ಯಾಂಪೈರ್ (1847)ಗಳಲ್ಲಿ ಮುಂದುವರೆದು 1897ರಲ್ಲಿ ಪ್ರಕಟವಾದ ಬ್ರಾಮ್ ಸ್ಟೋಕರ್ರ ಸರ್ವೋತ್ತಮ ರಕ್ತಪಿಶಾಚಿ ಕಾದಂಬರಿಯೆನಿಸಿದ ಡ್ರಾಕುಲಾ ದಲ್ಲಿ ಪರಾಕಾಷ್ಠೆ ತಲುಪಿತು.[136] ಕಾಲಾಂತರದಲ್ಲಿ ಈಗ ಅವಿಭಾಜ್ಯವೆನಿಸಿದ ಗುಣಲಕ್ಷಣಗಳನ್ನು ರಕ್ತಪಿಶಾಚಿಗೆ ನೀಡಲಾಯಿತು: ಕೋರೆಹಲ್ಲು ಹಾಗೂ ಸೂರ್ಯನ ಬೆಳಕಿನ ಬಗೆಗಿನ ಭಯವು 19ನೇ ಶತಮಾನದ ಅವಧಿಯಲ್ಲಿ ವಾರ್ನಿ ದ ವ್ಯಾಂಪೈರ್ ಮತ್ತು ಕೌಂಟ್ ಡ್ರಾಕುಲಾಗಳಿಬ್ಬರೂ ಹೊರಬಂದಿರುವ ಕೋರೆ ಹಲ್ಲು[137] ಗಳಿರುವ ಹಾಗೆ ಕಾಣಿಸಿಕೊಂಡರೆ ಮುರ್ನೌ'ನ ನೊಸ್ಫೆರಟು (1922) ಸೂರ್ಯನ ಬೆಳಕಿಗೆ ಹೆದರುವ ಲಕ್ಷಣ ತೋರಿತು.[138] 1920ರ ದಶಕದ ರಂಗಭೂಮಿಯ ನಾಟಕಗಳಲ್ಲಿ ನಾಟಕಕಾರ ಹ್ಯಾಮಿಲ್ಟನ್ ಡೀನ್ ಪರಿಚಯಿಸಿದ ಎತ್ತರದ ಕತ್ತುಪಟ್ಟಿಯ ದೊಗಲೆ ಪೋಷಾಕು ರಂಗದ ಮೇಲೆ ಡ್ರಾಕುಲಾ ಅದೃಶ್ಯನಾಗಲು ಅನುಕೂಲ ಮಾಡಿತು.[139] ಲಾರ್ಡ್ ರುತ್ವೆನ್ ಮತ್ತು ವಾರ್ನೆಗಳು ಚಂದ್ರನ ಬೆಳಕಿಂದ ಶಮನಗೊಳ್ಳುವ ಸಾಮರ್ಥ್ಯ ಪಡೆದಿದ್ದರು. ಇದರ ಬಗ್ಗೆ ಸಾಂಪ್ರದಾಯಿಕ ದಂತಕಥೆಗಳಲ್ಲಿ ಯಾವುದೇ ಪ್ರಸ್ತಾಪವಿಲ್ಲ.[140] ದಂತಕಥೆಗಳಲ್ಲಿ ಅಧಿಕೃತವಾಗಿ ದಾಖಲಾಗದೇ ಹೋದರೂ ರಕ್ತಪಿಶಾಚಿ ಚಿತ್ರಗಳು ಮತ್ತು ಸಾಹಿತ್ಯದಲ್ಲಿ ಅಮರತ್ವ ಎಂಬುದು ಹೆಚ್ಚಿನ ಮಹತ್ವ ಪಡೆದುಕೊಂಡಿರುತ್ತದೆ. ಆತನ ಶಾಶ್ವತ ಬದುಕಿಗೆ ನೀಡಬೇಕಾದ ಬೆಲೆ ವಿಪರೀತವಾದದ್ದು, ಅದು ರೈತರ ರಕ್ತದ ನಿರಂತರ ಅಗತ್ಯ.[141]
ರಕ್ತಪಿಶಾಚಿ ಅಥವಾ ಪ್ರೇತವು ಹೇನ್ರಿಚ್ ಆಗಸ್ಟ್ ಆಸ್ಸೆನ್ಫೆಲ್ಡರ್ರ ದ ವ್ಯಾಂಪೈರ್ (1748), ಗಾಟ್ಫ್ರೀಡ್ ಆಗಸ್ಟ್ ಬರ್ಗರ್ರ ಲೆನೋರ್ (1773) ಜೋಹಾನ್ ವೋಲ್ಫ್ಗ್ಯಾಂಗ್ ವಾನ್ ಗೊಯೆಥೆರ ಡೈ ಬ್ರಾಟ್ ವಾನ್ ಕೋರಿಂತ್ (ಕೋರಿಂತ್ನ ವಧು )(1797), ಸ್ಯಾಮುಯೆಲ್ ಟೇಲರ್ ಕೊಲೆರಿಡ್ಜ್ರ ಅಪೂರ್ಣ ಕಾವ್ಯ ಕ್ರಿಸ್ತಾಬೆಲ್ ಮತ್ತು ಲಾರ್ಡ್ ಬೈರನ್ರ ದ ಗಿಯಾಓರ್ (1813)ದಂತಹಾ ಕಾವ್ಯಗಳಲ್ಲಿ ಮೊದಲಿಗೆ ಕಾಣಿಸಿಕೊಂಡಿತು.[142] ರಕ್ತಪಿಶಾಚಿಗಳಿಗೆ ಸಂಬಂಧಿಸಿದ ದ ವ್ಯಾಂಪೈರ್ (1819) ಎಂಬ ಗದ್ಯ ಕಥನಾ ವಸ್ತುವನ್ನು ಪ್ರಥಮಬಾರಿಗೆ ರಚಿಸಿದ ಗೌರವವು ಬೈರನ್ಗೆ ಸಲ್ಲುತ್ತದೆ. ವಸ್ತುತಃ ಇದನ್ನು ಬೈರನ್ನ ಖಾಸಗಿ ವೈದ್ಯ, ಜಾನ್ ಪೊಲಿಡೊರಿ ತನ್ನ ಸುಪ್ರಸಿದ್ಧ ರೋಗಿಯ ತುಣುಕು ತುಣುಕಾದ ಕಥೆಯನ್ನು ಅಳವಡಿಸಿ ರಚಿಸಿದ್ದನು.[28][136] ಬೈರನ್ನದೇ ಆದ ಪ್ರಭಾವಿ ವ್ಯಕ್ತಿತ್ವ ಆತನ ನಲ್ಲೆ ಲೇಡಿ ಕ್ಯಾರೊಲಿನ್ ಲ್ಯಾಂಬ್ಳ ಹೊಗಳಿಕೆಯಿಲ್ಲದ ಸತ್ಯಕಥೆ ಯ, ಗ್ಲೆನಾರ್ವನ್( ಬೈರನ್ನ ನಿರಂಕುಶ ಜೀವನವನ್ನು ಆಧರಿಸಿದ ಗೋತಿಕ್ ಕಲ್ಪನಾ ಪ್ರಧಾನ ಕಥೆ) ಅನ್ನು ಮಾದರಿಯಾಗಿರಿಸಿಕೊಂಡು ಪಾಲಿಡೊರಿ ತನ್ನ ಲಾರ್ಡ್ ರುತ್ವೆನ್ನನ್ನು ರೂಪಿಸಿದ್ದನು. ರಕ್ತಪಿಶಾಚಿ ಕುರಿತ ದ ವ್ಯಾಂಪೈರ್ 19ನೇ ಶತಮಾನದ ಮೊದಲ ಭಾಗದ ಒಂದು ಅತ್ಯಂತ ಯಶಸ್ವಿ ಹಾಗೂ ಪ್ರಭಾವೀ ಕೃತಿ.[9]
ಜೇಮ್ಸ್ ಮಾಲ್ಕಾಲ್ಮ್ ರೈಮರ್(ನಂತರ ಸರದಿಯಲ್ಲಿ ಥಾಮಸ್ ಪ್ರೆಸ್ಕೆಟ್ ಪ್ರೆಸ್ಟ್ರನ್ನು ಹೆಸರಿಸಲಾಗಿತ್ತು) ವಿರಚಿತ ವಾರ್ನೆ ದ ವ್ಯಾಂಪೈರ್ ಮಧ್ಯಂತರ ವಿಕ್ಟೋರಿಯನ್ ಯುಗದ ಯುಗಪ್ರವರ್ತಕ ಗೋತಿಕ್ ಭಯಾನಕ ಕಥೆಯಾಗಿತ್ತು. ಇದು ಮೊದಲಿಗೆ 1845ರಿಂದ 1847ರವರೆಗೆ ಸಾಮಾನ್ಯವಾಗಿ ತಮ್ಮ ಅಗ್ಗದ ಬೆಲೆ ಹಾಗೂ ಭಯಾನಕ ಕಥೆಗಳಿಂದಾಗಿ ಪೈಸೆ ಬೀಭತ್ಸ ಎನ್ನಲಾಗುವ ಕಿರುಕಥಾಪುಸ್ತಕದ ಸರಣಿ ಯ ರೂಪದಲ್ಲಿ ಕಾಣಿಸಿಕೊಂಡಿತು. 1847ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಗೊಂಡ ಇದು ಎರಡು ಅಂಕಣಗಳಿರುವ 868 ಪುಟಗಳನ್ನು ಹೊಂದಿತ್ತು. ಈ ಕಥೆಯು ಪ್ರತ್ಯೇಕ ರಹಸ್ಯಕಥನಾ ಶೈಲಿಯಲ್ಲಿದ್ದು ವಾರ್ನೆಯ ಭಯಾನಕ ಶೋಷಣೆಗಳನ್ನು ವಿವರಿಸುವ ಚಿತ್ರಣಗಳನ್ನು ಕೊಡುತ್ತಿತ್ತು.[140] ಈ ಪ್ರಭೇದಕ್ಕೆ ಮತ್ತೊಂದು ಪ್ರಮುಖ ಸೇರ್ಪಡೆಯೆಂದರೆ ಷೆರಿಡನ್ ಲೆ ಫಾನುರ ಸಲಿಂಗಕಾಮಿನಿ ರಕ್ತಪಿಶಾಚಿ ಕಥೆಯಾದ ಕಾರ್ಮಿಲ್ಲಾ (1871). ಕಾರ್ಮಿಲ್ಲಾ ರಕ್ತಪಿಶಾಚಿಯ ಪರಿಸ್ಥಿತಿಯನ್ನು ಎತ್ತಿ ತೋರಿಸಿ ವಾರ್ನೆಗೆ ಹೋಲಿಸಿದರೆ ಕಾರ್ಮಿಲ್ಲಾ ರಕ್ತಪಿಶಾಚಿಯನ್ನು ಸಹಾನುಭೂತಿಯಿಂದ ಚಿತ್ರಿಸಲಾಗಿದೆ.[143]
ಜನಪ್ರಿಯ ಕಾಲ್ಪನಿಕ ಕಥಾಪ್ರಕಾರದಲ್ಲಿ ರಕ್ತಪಿಶಾಚಿಗಳ ಕುರಿತ ಯಾವುದೇ ಕಥೆಯೂ ಬ್ರಾಮ್ ಸ್ಟೋಕರ್ರ ಡ್ರಾಕುಲಾ (1897)ದಷ್ಟು ಪ್ರಭಾವೀ ಹಾಗೂ ಪ್ರಮಾಣೀಭೂತವಾಗಿರಲಿಲ್ಲ.[144] ಅದರಲ್ಲಿನ ರಕ್ತಪಿಶಾಚಿಗಳ ಬಗ್ಗೆ ಪ್ರೇತಗಳ ವಶಪಡಿಕೆಯಿಂದ ಹರಡುವ ಸಾಂಕ್ರಾಮಿಕವೆಂಬಂತೆ ಲೈಂಗಿಕ, ರಕ್ತ ಹಾಗೂ ಸಾವಿನ ಅಂತರ್ಭಾವದೊಂದಿಗೆ ಚಿತ್ರಿಸಿದ ರೀತಿಯು ವಿಕ್ಟೋರಿಯನ್ ಯೂರೋಪ್ನಲ್ಲಿ ಸಾಮಾನ್ಯವಾಗಿದ್ದ ಕ್ಷಯ ರೋಗ ಹಾಗೂ ಉಪದಂಶ ರೋಗಗಳ ಹಾವಳಿಯನ್ನು ನೆನಪಿಗೆ ತರಿಸಿತ್ತು. ಸ್ಟೋಕರ್ಸ್ನ ಕೃತಿಯಲ್ಲಿನ ರಕ್ತಪಿಶಾಚಿಯ ಲಕ್ಷಣಗಳು ದಂತಕಥೆಯಲ್ಲಿನ ಲಕ್ಷಣದೊಳಗೆ ಸಮ್ಮಿಳಿತಗೊಂಡು ಆಧುನಿಕ ಕಾಲ್ಪನಿಕ ರಕ್ತಪಿಶಾಚಿಯ ರೂಪ ತಳೆಯಿತು. 1800ರ ದಶಕದ ಕೊನೆಯಲ್ಲಿ ದ ವ್ಯಾಂಪೈರ್ ಮತ್ತು "ಕಾರ್ಮಿಲ್ಲಾ"ಗಳಂಥ ಹಿಂದಿನ ಕಥೆಗಳ ಆಧಾರ ಮತ್ತು ಎಮಿಲಿ ಗೆರಾರ್ಡ್ರ ದ ಲ್ಯಾಂಡ್ ಬಿಹೈಂಡ್ ದ ಫಾರೆಸ್ಟ್ (1888) ಮತ್ತು ಟ್ರಾನ್ಸಿಲ್ವೇನಿಯಾ ಮತ್ತು ರಕ್ತಪಿಶಾಚಿಗಳ ಬಗೆಗಿನ ಇನ್ನಿತರ ಪುಸ್ತಕಗಳನ್ನು ಓದುತ್ತಾ ತನ್ನ ಹೊಸ ಪುಸ್ತಕಕ್ಕೆಂದು ಅಧ್ಯಯನ ಕೈಗೊಂಡರು. ಲಂಡನ್ನಲ್ಲಿ ಸಹೋದ್ಯೋಗಿಯೊಬ್ಬರು "ನಿಜ ಜೀವನದ ಡ್ರಾಕುಲಾ," ಎಂದು ಹೆಸರಾದ ವ್ಲಾಡ್ ಟೆಪೆಸ್ ಬಗ್ಗೆ ಹೇಳಿದಾಗ ಸ್ಟೋಕರ್ ಅದನ್ನು ತಕ್ಷಣ ತನ್ನ ಪುಸ್ತಕದಲ್ಲಿ ಸೇರಿಸಿದರು. 1897ರಲ್ಲಿ ಪ್ರಕಟಗೊಂಡಾಗ ಇದರ ಮೊದಲ ಅಧ್ಯಾಯವನ್ನು ಬಿಡಲಾಗಿತ್ತು, ಆದರೆ 1914ರಲ್ಲಿ ಇದನ್ನು ಡ್ರಾಕುಲಾದ ಅತಿಥಿ ಯ ಕಥೆಯಾಗಿ ಸೇರಿಸಲಾಯಿತು.[145]
ರಿಚರ್ಡ್ ಮ್ಯಾಥೆಸನ್ರ 1954 ಐ ಯಾಮ್ ಲೆಜೆಂಡ್ ಎಂಬುದು ಪ್ರಥಮ "ವೈಜ್ಞಾನಿಕ" ರಕ್ತಪಿಶಾಚಿ ಕಾದಂಬರಿಗಳಲ್ಲೊಂದಾಗಿತ್ತಲ್ಲದೇ, ದ ಲಾಸ್ಟ್ ಮ್ಯಾನ್ ಆನ್ ಅರ್ಥ್(1964), ದ ಒಮೆಗಾ ಮ್ಯಾನ್(1971) ಮತ್ತು ಐ ಯಾಮ್ ಲೆಜೆಂಡ್(2007) ಚಿತ್ರಗಳ ಮೂಲಕಥೆಯೂ ಆಗಿದೆ.
ಇಪ್ಪತ್ತೊಂದನೇ ಶತಮಾನವು ರಕ್ತಪಿಶಾಚಿ ಕಥೆಗಳ ಹೆಚ್ಚು ಉದಾಹರಣೆಗಳನ್ನು ತಂದಿದೆ ಉದಾಹರಣೆಗೆ ಜೆ.ಆರ್. ವಾರ್ಡ್ರ ಬ್ಲ್ಯಾಕ್ ಡಾಗ್ಗರ್ ಬ್ರದರ್ಹುಡ್ ಸರಣಿ ಮತ್ತು ಇತರ ಹದಿಹರೆಯದವರನ್ನು ಹಾಗೂ ಯುವಜನತೆಯನ್ನು ಸೆಳೆವ ಅತ್ಯಂತ ಜನಪ್ರಿಯ ರಕ್ತಪಿಶಾಚಿ ಕಥಾಪುಸ್ತಕಗಳು. ಆ ತರಹದ ಅತಿಸಾಮಾನ್ಯ ಪ್ರಣಯ ಕಾದಂಬರಿಗಳು ಮತ್ತು ಸಂಬಂಧಿತ ರಕ್ತಪಿಶಾಚಿಯಂತೆ ವರ್ತಿಸುವ ಲಲನೆಯರ ಮತ್ತು ನಿಗೂಢ ರಕ್ತಪಿಶಾಚಿ ಪತ್ತೇದಾರಿ ಕಥೆಗಳು ಗಮನಾರ್ಹವಾಗಿ ಜನಪ್ರಿಯ ಮತ್ತು ವಿಕಸಿಸುತ್ತಿರುವ ಸಮಕಾಲೀನ ಪ್ರಕಟಣಾ ವಿಶೇಷವಾಗಿವೆ.[146] ಎಲ್.ಎ. ಬ್ಯಾಂಕ್ಸ್ರ ದ ವ್ಯಾಂಪೈರ್ ಹಂಟ್ರೆಸ್ ಲೆಜೆಂಡ್ ಸರಣಿ, ಲಾರೆಲ್ ಕೆ. ಹ್ಯಾಮಿಲ್ಟನ್ರ ಶೃಂಗಾರಾತ್ಮಕAnita Blake: Vampire Hunter ಸರಣಿ, ಮತ್ತು ಕಿಂ ಹ್ಯಾರಿಸ್ಸನ್ರ ದ ಹಾಲೋಸ್ ಸರಣಿಗಳು ರಕ್ತಪಿಶಾಚಿಯನ್ನು ವಿವಿಧ ದೃಷ್ಟಿಕೋನಗಳಲ್ಲಿ ಚಿತ್ರಿಸುತ್ತವೆ, ಅವುಗಳಲ್ಲಿ ಕೆಲವು ಮೂಲ ದಂತಕಥೆಗಳಿಗೆ ಸಂಬಂಧವಿಲ್ಲದವು.
ಇಪ್ಪತ್ತನೇ ಶತಮಾನದ ಉತ್ತರಾರ್ಧವು ಬಹು-ಸಂಪುಟ ರಕ್ತಪಿಶಾಚಿ ಗ್ರಂಥಗಳನ್ನು ಕಂಡಿತು. ಇವುಗಳಲ್ಲಿ ಪ್ರಥಮವಾದುದು ಅಲ್ಪ ಪ್ರಮಾಣದಲ್ಲಿ ಸಮಕಾಲೀನ ಅಮೇರಿಕದ ಕಿರುತೆರೆ ಸರಣಿ ಡಾರ್ಕ್ ಷಾಡೋಸ್ ಆಧಾರಿತ ಗೋತಿಕ್ ಪ್ರಣಯ ಲೇಖಕಿ ಮರಿಲಿನ್ ರಾಸ್ ಬರ್ನಬಾರ ಕಾಲಿನ್ಸ್ ಸರಣಿ(1966-71). ಇದು ರಕ್ತಪಿಶಾಚಿಗಳನ್ನು ಸಾಂಪ್ರದಾಯಿಕ ದುಷ್ಟಶಕ್ತಿಯಾಗಲ್ಲದೇ ಕಾವ್ಯಮಯವಾಗಿ ದುರಂತ ನಾಯಕರಾಗಿ ಕಾಣುವ ಹೊಸ ಒಲವನ್ನು ರೂಪಿಸಿತು. ಈ ನಿಯಮವನ್ನು ಕಾದಂಬರಿಕಾರ್ತಿ ಅನ್ನೆ ರೈಸ್ರ ಬಹುಜನಪ್ರಿಯ ಮತ್ತು ಪ್ರಭಾವೀ ಕೃತಿ ವ್ಯಾಂಪೈರ್ ಕ್ರಾನಿಕಲ್ಸ್ (1976–2003).[147] ಸ್ಟಿಫನಿ ಮೇಯರ್ರ ವ್ಯಾಂಪೈರ್ಸ್ ಇನ್ ಟ್ವಿಲೈಟ್ (2005-2008) ಸರಣಿಯು ಬೆಳ್ಳುಳ್ಳಿ ಹಾಗೂ ಶಿಲುಬೆಯ ಪ್ರಭಾವಕ್ಕೊಳಗಾಗದ ಹಾಗೂ ಬೆಳಕಿಂದ ಅಪಾಯ ಇಲ್ಲದ ರಕ್ತಪಿಶಾಚಿಗಳನ್ನೊಳಗೊಂಡಿತ್ತು (ಇದು ಅವುಗಳ ಅಲೌಕಿಕ ಶಕ್ತಿಯನ್ನು ತೋರುತ್ತಿತ್ತು).[148]
ಅಭಿಜಾತ ಭಯಾನಕ ಚಿತ್ರಗಳ ಸರ್ವೋತ್ಕೃಷ್ಟ ಪಾತ್ರವಾಗಿ ಪರಿಗಣಿಸಲಾದ ರಕ್ತಪಿಶಾಚಿಯು ಚಿತ್ರ ಹಾಗೂ ಆಟಗಳ ಉದ್ಯಮಕ್ಕೆ ಶ್ರೀಮಂತ ವಿಷಯವಾಗಿದೆ. ಷರ್ಲಾಕ್ ಹೋಮ್ಸ್ನ್ನು ಬಿಟ್ಟರೆ ಡ್ರಾಕುಲಾವೇ ಅತಿ ಹೆಚ್ಚು ಚಿತ್ರಗಳಲ್ಲಿನ ಪ್ರಮುಖ ಪಾತ್ರವಾಗಿದ್ದು, ಮೊದಲಿನ ಅನೇಕ ಚಿತ್ರಗಳು ಡ್ರಾಕುಲಾ ಕಾದಂಬರಿ ಆಧಾರಿತವಾಗಿರುತ್ತಿದ್ದವು ಇಲ್ಲವೇ ಅತ್ಯಂತ ಸಮೀಪ ರೂಪವಾಗಿರುತ್ತಿದ್ದವು. ಇದರಲ್ಲಿ ಡ್ರಾಕುಲಾವನ್ನು ಚಿತ್ರೀಕರಿಸಿದ ಪ್ರಥಮ ಚಿತ್ರ ಹೆಗ್ಗುರುತಿನ ಎಫ್.ಡಬ್ಲ್ಯೂ. ಮುರ್ನಾವುರಿಂದ ನಿರ್ದೇಶಿತ 1922ರ ಜರ್ಮನ್ ಮೂಕಿ ಚಿತ್ರ ನೊಸ್ಫೆರಟು ಸೇರಿದೆ. ಹೆಸರುಗಳು ಹಾಗೂ ಪಾತ್ರಗಳು ಡ್ರಾಕುಲಾ ವನ್ನು ಅನುಕರಿಸುವಂತೆ ಉದ್ದೇಶಿಸಲಾಗಿದ್ದರೂ ಮುರ್ನಾವು ಸ್ಟೋಕರ್ರ ವಿಧವೆ ಪತ್ನಿಯಿಂದ ಹಾಗೆ ಮಾಡಲು ಅನುಮತಿ ಪಡೆಯಲಾಗದ್ದರಿಂದ ಅನೇಕ ವಿವರಗಳನ್ನು ಬದಲಾಯಿಸಬೇಕಾಯಿತು. ಇದರೊಂದಿಗೆ ಕೌಂಟ್ ಆಗಿ ಬೆಲಾ ಲುಗೊಸಿ ನಟಿಸಿದ್ದ ಯೂನಿವರ್ಸಲ್ನ ಡ್ರಾಕುಲಾ(1931) ಚಿತ್ರವೂ ಇದೆ. ಇದು ಡ್ರಾಕುಲಾವನ್ನು ಆಧರಿಸಿದ ಪ್ರಥಮ ಧ್ವನಿಸಮೇತ ಚಿತ್ರವೂ ಹೌದು. ಈ ದಶಕವು ಇನ್ನೂ ಅನೇಕ ಡ್ರಾಕುಲಾ ಚಿತ್ರಗಳನ್ನು ಕಂಡಿತು, ಪ್ರಮುಖವಾಗಿ 1936ರ[149] ಡ್ರಾಕುಲಾ'ಸ್ ಡಾಟರ್.
ಡ್ರಾಕುಲಾವು ಕೌಂಟ್ ಪಾತ್ರದಲ್ಲಿ ಕ್ರಿಸ್ಟೋಫರ್ ಲೀ ನಟಿಸಿದ ವಿಖ್ಯಾತ ಹ್ಯಾಮರ್ ಭಯಾನಕ ಸರಣಿ ಚಿತ್ರಗಳಲ್ಲಿ ಹೊಸ ಪೀಳಿಗೆಗಾಗಿ ಮರುಜನ್ಮ ಪಡೆದ ರಕ್ತಪಿಶಾಚಿಯ ದಂತಕಥೆಯು ಚಲನಚಿತ್ರೋದ್ಯಮದಲ್ಲಿ ಭದ್ರವಾಗಿ ಬೇರೂರಿತು. ಲೀ ನಟಿಸಿದ್ದ 1958ರ ಯಶಸ್ವಿ ಡ್ರಾಕುಲಾ ಚಿತ್ರವು ಏಳು ಅನುಕ್ರಮ ಚಿತ್ರಗಳಾಗಿ ಮುಂದುವರೆಯಿತು. ಕೇವಲ ಎರಡರಲ್ಲಿ ಮಾತ್ರವೇ ಡ್ರಾಕುಲಾ ಪಾತ್ರ ವಹಿಸದೇ ಉಳಿದೆಲ್ಲಾ ಚಿತ್ರಗಳಲ್ಲಿ ಡ್ರಾಕುಲಾ ಆಗಿ ಮರಳಿದ ಲೀ ಆ ಪಾತ್ರದಲ್ಲಿ ಹೆಸರುವಾಸಿಯಾದರು.[150] 1970ರ ದಶಕದ ಹೊತ್ತಿಗೆ, ಕೌಂಟ್ ಯೋರ್ಗಾ, ವ್ಯಾಂಪೈರ್ (1970), 1972ರ ಬ್ಲಾಕುಲಾ ದಲ್ಲಿ ಆಫ್ರಿಕಾದ ಕೌಂಟ್ ಆಗಿ ಚಿತ್ರಗಳಲ್ಲಿ ರಕ್ತಪಿಶಾಚಿಗಳು ವಿವಿಧ ಅಸದೃಶ ರೀತಿಯಲ್ಲಿ ಕಾಣಿಸಿಕೊಂಡವು. 1979ರ ಸೇಲಮ್ಸ್ ಲಾಟ್ ಮತ್ತು ಕ್ಲಾಸ್ ಕಿನ್ಸ್ಕಿಯೊಂದಿಗೆ ನಟಿಸಿದ ನೊಸ್ಫೆರಟು ದ ವ್ಯಾಂಪೈರ್ ಎಂಬ ಹೆಸರಿನ ಚಿತ್ರಗಳಲ್ಲಿ ನೊಸ್ಫೆರಟು ಮಾದರಿಯ ರಕ್ತಪಿಶಾಚಿಯು ಇತ್ತು. ಅನೇಕ ಚಿತ್ರಗಳು ಕಾರ್ಮಿಲ್ಲಾ ಆಧಾರಿತ ಹ್ಯಾಮರ್ ಹಾರರ್ನ ದ ವ್ಯಾಂಪೈರ್ ಲವರ್ಸ್ (1970) ತರಹದ ಸ್ತ್ರೀ ರಕ್ತಪಿಶಾಚಿಗಳನ್ನು ಅದರಲ್ಲೂ ಸಲಿಂಗಕಾಮಿ ರಕ್ತಪಿಶಾಚಿ ಪ್ರತಿಸ್ಪರ್ಧಿಗಳನ್ನು ಚಿತ್ರಿಸಿದರೂ ಮೂಲ ಹಂದರವು ದುಷ್ಟ ರಕ್ತಪಿಶಾಚಿ ಪಾತ್ರವೇ ಸುತ್ತುತಲಿತ್ತು.[150]
1972ರ ಕಿರುತೆರೆ ಸರಣಿKolchak: The Night Stalker ಡಾನ್ ಕುರ್ಟಿಸ್ನ ಮಾರ್ಗದರ್ಶಿ ಕಥೆಯು ಲಾಸ್ ವೇಗಾಸ್ ಪಟ್ಟಿಯಲ್ಲಿ ಕಾರ್ಲ್ ಕೊಲ್ಚಾಲ್ಕ್ ಎಂಬ ವರದಿಗಾರ್ತಿ ರಕ್ತಪಿಶಾಚಿಯ ಹಿಂದೆ ಬೀಳುವುದರ ಸುತ್ತ ಸುತ್ತುತ್ತದೆ. ನಂತರದ ಚಿತ್ರಗಳು ಕಥಾಹಂದರದಲ್ಲಿ ವೈವಿಧ್ಯತೆಯನ್ನು ತೋರಿದವು, ಉದಾಹರಣೆಗೆ ಕೆಲವು ಮಾರ್ವೆಲ್ ಕಾಮಿಕ್ಸ್ನ ಬ್ಲೇಡ್ ಚಿತ್ರಗಳಲ್ಲಿ ಮತ್ತು ಬಫ್ಫಿ ದ ವ್ಯಾಂಪೈರ್ ಸ್ಲೇಯರ್ ಎಂಬ ಚಿತ್ರಗಳಲ್ಲಿ ಬ್ಲೇಡ್ ನಂತಹಾ ರಕ್ತಪಿಶಾಚಿ-ಬೇಟೆಗಾರರ ಮೇಲೆ ಕೇಂದ್ರೀಕೃತವಾದ ಕಥೆ ಹೊಂದಿವೆ. 1992ರಲ್ಲಿ ಬಿಡುಗಡೆಯಾದ ಬಫ್ಫಿ , ಅದೇ ಹೆಸರಿನ ದೀರ್ಘ ಕಾಲದಿಂದ ಪ್ರಸಾರವಾಗುತ್ತಿದ್ದ ಜನಪ್ರಿಯ TV ಸರಣಿ ಹಾಗೂ ಅದರ ಉಪಸರಣಿ ಏಂಜೆಲ್ ಗಳು ಕಿರುತೆರೆಯಲ್ಲಿ ರಕ್ತಪಿಶಾಚಿಯ ಆಗಮನದ ಪೂರ್ವಛಾಯೆ ನೀಡಿದವು. 1983ರ ದ ಹಂಗರ್ , 1994ರ Interview with the Vampire: The Vampire Chronicles ಮತ್ತು ಅದರ ಪರೋಕ್ಷ ಉತ್ತರಭಾಗವಾದ ಕ್ವೀನ್ ಆಫ್ ಡಾಮ್ನೆಡ್ ನಂತಹಾ ಇನ್ನೂ ಅನೇಕ ಚಿತ್ರಗಳು ರಕ್ತಪಿಶಾಚಿಯನ್ನು ನಾಯಕನನ್ನಾಗಿ ತೋರಿದವು. ಬ್ರಾಮ್ ಸ್ಟೋಕರ್ರ ಡ್ರಾಕುಲಾ ವು 1992ರ ಆ ಕಾಲದ ಗಮನಾರ್ಹ ಚಿತ್ರವಾಗಿ ಸಾರ್ವಕಾಲಿಕ ಅತಿಹೆಚ್ಚು ಗಳಿಕೆಯ ರಕ್ತಪಿಶಾಚಿ ಚಿತ್ರ ಎನಿಸಿತು.[151] ರಕ್ತಪಿಶಾಚಿಗೆ ಸಂಬಂಧಿಸಿದ ಕಥಾಹಂದರದಲ್ಲಿ ಹೆಚ್ಚಿನ ಆಸಕ್ತಿಯು 2004ರಲ್ಲಿನ ಅಂಡರ್ವರ್ಲ್ಡ್ ಮತ್ತು ವಾನ್ ಹೆಲ್ಸಿಂಗ್ , ರಷ್ಯನ್ ನೈಟ್ ವಾಚ್ ಮತ್ತು 'ಸೇಲಮ್ಸ್ ಲಾಟ್ 'ನ TV ಕಿರುಸರಣಿಯಂತಹಾ ಚಿತ್ರಗಳಲ್ಲಿ ರಕ್ತಪಿಶಾಚಿ ಚಿತ್ರಣಕ್ಕೆ ಕಾರಣವಾಯಿತು. ಆಧುನಿಕ ಟೊರೊಂಟೋದ ಮಾಜಿ ಪತ್ತೆದಾರಿಣಿ ಹಾಗೂ ರಕ್ತಪಿಶಾಚಿಯಾಗಿ ಬದಲಾದ ಇಂಗ್ಲೆಂಡ್ನ ಹೆನ್ರಿ VIIIನ ಅಕ್ರಮಸಂತಾನ ಹೆನ್ರಿ ಫಿಟ್ಜ್ರಾಯ್ ಎಂಬ ಪಾತ್ರವನ್ನು ನಾಯಕನಾಗಿಸಿದ ಬ್ಲಡ್ ಟೈಸ್ ಸರಣಿಯು 2007ರಲ್ಲಿ ಲೈಫ್ಟೈಮ್ ಟೆಲಿವಿಷನ್ನಲ್ಲಿ ಪ್ರಸಾರವಾಯಿತು. ಟ್ರೂಬ್ಲಡ್ ಎಂಬ ಶೀರ್ಷಿಕೆಯ 2008ರ HBOನ ಸರಣಿಯು ರಕ್ತಪಿಶಾಚಿ ವಸ್ತುವಿಗೆ ದಕ್ಷಿಣದ ಚಹರೆ ಮೂಡಿಸುತ್ತದೆ.[148] ರಕ್ತಪಿಶಾಚಿ ವಿಷಯದ ಮೇಲಿನ ಹೆಚ್ಚುತ್ತಿರುವ ಆಸಕ್ತಿಯನ್ನು, ಅದರಲ್ಲಿ ತೋರಿಸಲಾಗುವ ಲೈಂಗಿಕತೆ ಹಾಗೂ ಸಾವಿನ ನಿರಂತರ ಅಂಜಿಕೆಗಳ ಸಂಯೋಜನೆಯಾಗಿ ಪರಿಗಣಿಸಲಾಗಿದೆ.[152]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.