From Wikipedia, the free encyclopedia
ಪಿಲಿಕುಳ ಮಂಗಳೂರು ಮೂಡುಬಿದಿರೆ ರಸ್ತೆಯಲ್ಲಿ ೦೧-೧೨ಕಿಲೋ ಮೀಟರ್ ಹೋಗುವಾಗ ವಾಮಂಜೂರು ಎಂಬ ಸ್ಥಳ ಸಿಗುತ್ತದೆ. ಇಲ್ಲಿಂದ ಎರಡು ಕಿಲೋ ಮೀಟರ್ ಎಡಕ್ಕೆ ಹೋದರೆ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಪ್ರದೇಶ ಸಿಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಶ್ರೀಯುತ ಭರತ್ಲಾಲ್ ಮೀನ ಮತ್ತು ಮಂಗಳೂರಿನ ಈಗಿನ ಶಾಸಕರಾದ ಜೆ.ಆರ್.ಲೋಬೊ, ಜೈವಿಕ ಉದ್ಯಾನವನದ ನಿರ್ದೇಶಕ ಶ್ರೀ ಎಚ್ ಜಯಪ್ರಕಾಶ್ ಭಂಡಾರಿ, ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ.ಕೆ.ವಿ ರಾವ್ ಇವರ ಮುಖಂಡತ್ವದಲ್ಲಿ ಆಗ ಪಿಲಿಕುಳ ಎಂಬ ಹೆಸರನ್ನು ಈ ಸ್ಥಳಕ್ಕೆ ಇಟ್ಟರು.[1]
ಪಿಲಿಕುಳ ನಿಸರ್ಗಧಾಮ | |
---|---|
ಮೂಡುಶೆಡ್ಡೆ ಗ್ರಾಮ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ ಕನ್ನಡ |
ತಾಲೂಕು | ಮಂಗಳೂರು |
ಗ್ರಾಮ | ಮೂಡುಶೆಡ್ಡೆ |
ಪ್ರದೇಶ- | ಪಿಲಿಕುಳ ನಿಸರ್ಗಧಾಮ |
ತುಳು ಸಂಸ್ಕೃತಿಯನ್ನು ಬೆಳೆಸುವ ಉಳಿಸುವ ನೆಲೆಯಲ್ಲಿ ಮಂಗಳೂರು ನಗರದಿಂದ ಹೊರವಲಯದಲ್ಲಿ ವಿಸ್ತಾರವಾದ ಪ್ರದೇಶವಾದ ವಾಮಂಜೂರಿನಲ್ಲಿ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗದಾಮ ನಿಂತಿದೆ.
ಪಿಲಿಕುಳ ಎನ್ನುವುದು ತುಳುವಿನ ಪದ (ಪಿಲಿ+ಕುಳ).ಪಿಲಿ ಎಂದರೆ ಕನ್ನಡದಲ್ಲಿ ಹುಲಿ ಎಂದು,ಕುಳ ಎಂದರೆ ಕೊಳ ಎಂಬ ಅರ್ಥವನ್ನು ನೀಡುತ್ತದೆ "ಹುಲಿಗಳ ಕೊಳ".ಅಂದರೆ ಹಿಂದಿನ ಕಾಲದಲ್ಲಿ ಪಿಲಿಕುಳ ಎಂಬ ಸ್ಥಳವು ದಟ್ಟಾರಣ್ಯದಿಂದ ಕೂಡಿತ್ತು.ಅಲ್ಲಿ ಹುಲಿಗಳು ಯತೇಚ್ಚವಾಗಿ ಇದ್ದವು.ಹಾಗಾಗಿ ಹುಲಿಗಳು ಅಯಾಸವನ್ನು ಪರಿಹರಿಸಿಕೊಳ್ಳಲು ಆ ಕೆರೆಗೆ ಬರುತ್ತಿದ್ದವು.ಹಾಗಾಗಿ ಪಿಲಿಕುಳ ಎಂಬ ಹೆಸರು ಬಂತು.
ಕುಶಲಕರ್ಮಿ ಗ್ರಾಮ ಪಿಲಿಕುಳ ನಿಸರ್ಗಧಾಮ ದ ಒಂದು ಪ್ರಮುಖ ಅಂಗ. ಇಲ್ಲಿ ಅಳಿದು ಹೋಗುವ ತುಳುನಾಡಿನ ಕೃಷಿ ಪರಂಪರೆಯ ಮೂಲ ಕೆಲಸಗಳನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ನೋಡಲು ಸಾಧ್ಯ. ಈ ಗ್ರಾಮದಲ್ಲಿ ಮಡಿಕೆ ಮಾಡುವವ ಮನೆ(ಕುಂಬಾರ), ಅವಲಕ್ಕಿ ಗುದ್ದುವವರ ಮನೆ, ಮರದ ಕೆಲಸ ಮಾಡುವವರ ಮನೆ(ಬಡಗಿ), ಗಾಣದವರ ಮನೆ(ಗಾಣಿಗ), ಬೆತ್ತ ನೇಯುವವರ ಮನೆ, ಬಟ್ಟೆ ನೇಯುವವರ ಮನೆ(ನೇಕಾರ), ಕಬ್ಬಿಣದ ಆಚಾರಿಗಳ ಮನೆ(ಕಮ್ಮಾರ), ಕಲ್ಲುಕುಟ್ಟಿಗಳ ಮನೆ ಹೀಗೆ ಹಲವು ಮನೆಗಳವರು ಸಂಸಾರ ಸಮೇತ ಬದುಕುತ್ತಿದ್ದಾರೆ.
ಅಪೂರ್ವ ಸಸ್ಯಗಳ ಸಂಗ್ರಹ ಇಲ್ಲಿದೆ.ಇಂಡೊ-ಸ್ಪೇನ್ ಸರಕಾರದ ಜಂಟಿ ಅಶ್ರಯದಲ್ಲಿ ಅಭಿವೃದ್ಧಿ ಮಾಡಲಾಯಿತು.ಪಶ್ಚಿಮ ಘಟ್ಟದಲ್ಲಿ ಅಳಿವನ ಆಂಚಿನಲ್ಲಿ ಇರುವ ಸಸ್ಯಗಳನ್ನು ಬೇಳೆಸಲಾಗುತ್ತದೆ.ಹೆಬ್ಬಲಸು,ರಾಮಪತ್ರೆ,ಜಾಯಿಕಾಯಿ,ಪುರ್ನಪುಳಿ,ಮಾವಿನ ಸ್ಥಳಿಯ ತಳಿಗಳು,ಬಾಗೆ,ಹೊನ್ನೆ,ಅಂಟುವಾಳ,ಕಾಡು ಮಡ್ಡಿ(ದೂಪ),ಕಿಲಾರ್ ಬೋಗಿ,ದರ್ಬೆ,ಕಾಡುಬಾಳೆ,ಇನ್ನು ಹಲವಾರು ಸಸ್ಯಗಳು ಇವೆ.
ಪಿಲಿಕುಳ ನಿಸರ್ಗಧಾಮದಲ್ಲಿರುವ[2] ೮೨ ಎಕರೆಗಳಷ್ಟು ವಿಸ್ತಾರವಾಗಿದೆ. ಮಲೆನಾಡು ಮತ್ತು ಸಹ್ಯಾದ್ರಿ ಬೆಟ್ಟಗಳಲ್ಲಿ ಜೀವಿಸುವ ಹಲವಾರು ಪ್ರಾಣಿಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. ಇದರ ಸಂದರ್ಶನ ಸಮಯ:ಬೆಳಗ್ಗೆ ೯:೩೦ ಇಂದ ಸಂಜೆ ೫:೩೦ರ ತನಕ. ವಾರದ ರಜೆ:ಸೋಮವಾರ
ಪಿಲಿಕುಳಕ್ಕೆ ಈ ಕೊಳದಿಂದಲೇ ಈಗಿನ ಹೆಸರು ಬಂದಿತು ಎಂದು ಜನರು ನಂಬುತ್ತಾರೆ. ಇಲ್ಲಿಗೆ ಮುಂಚೆ ಹುಲಿಗಳು ಭೇಟಿ ನೀಡುತ್ತಿದ್ದವಂತೆ. ಹಾಗಾಗಿ ಹುಲಿಗಳು(ಪಿಲಿ) ಭೇಟಿ ನೀಡುವ ಕೊಳ(ಕುಳ), ಪಿಲಿಕುಳ ಆಯಿತು ಎನ್ನುತ್ತಾರೆ. ಪಿಲಿಕುಳ ನಿಸರ್ಗಧಾಮದ ಅಭಿವೃದ್ಧಿಯ ಸಮಯದಲ್ಲಿ ಈ ಕೆರೆಯ [3]ಹೂಳೆತ್ತಿ ಈಗಿನಂತೆ ಅಭಿವೃದ್ಧಿಪಡಿಸಲಾಗಿದೆ. ಈ ದೋಣಿವಿಹಾರ ಕೇಂದ್ರವಿರುವ ಕೆರೆ ೩೦ ಅಡಿ ಆಳವೂ, ೫ ಎಕರೆಯಷ್ಟು ವಿಸ್ತಾರವೂ ಇದೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸುತ್ತಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.