From Wikipedia, the free encyclopedia
ಜಗತ್ತಿನ ಹೊಸ ಏಳು ಅದ್ಭುತಗಳು ಎಂಬುದು ಆಧುನಿಕ ಅದ್ಭುತಗಳ ಪಟ್ಟಿಯೊಂದಿಗೆ ಪ್ರಾಚೀನ ಜಗತ್ತಿನ ಏಳು ಅದ್ಭುತಗಳ ಪರಿಕಲ್ಪನೆಯ ಪುನರುಜ್ಜೀವನಗೊಳಿಸುವ ಪ್ರಯತ್ನದ ಒಂದು ಯೋಜನೆಯಾಗಿದೆ. ಕೆನಡಾದ ಸ್ವಿಸ್ ಬರ್ನಾರ್ಡ್ ವೆಬರ್ [1] ನೇತೃತ್ವದಲ್ಲಿ ಜನಾಭಿಪ್ರಾಯ ಸಂಗ್ರಹಣೆ ಕಾರ್ಯವನ್ನು ನಡೆಸಲಾಯಿತು. ಇದನ್ನು ಸ್ವಿಸ್ ಮೂಲದ, ಸರ್ಕಾರಿ ನಿಯಂತ್ರಿತ ಹೊಸ ೭ ಅದ್ಭುತಗಳ ಪ್ರತಿಷ್ಠಾನವು [2] ಪೋರ್ಚುಗಲ್ ನ ಲಿಸ್ಬನ್ ನಲ್ಲಿ ಜುಲೈ 7, 2007 ರಂದು ವಿಜೇತರನ್ನು ಪ್ರಕಟಿಸುವುದರೊಂದಿಗೆ ಆಯೋಜಿಸಿತ್ತು.[4]
ಜಗತ್ತಿನ ಏಳು ಅದ್ಭುತಗಳ ಉಗಮವು ಹೆರೋಡೋಟಸ್ (೪೮೪ ಕ್ರಿ.ಪೂ – ೪೨೫ ಕ್ರಿ.ಪೂ.) ಮತ್ತು ಕ್ಯಾಲಿಮ್ಯಾಕಸ್ (೩೦೫ ಕ್ರಿ.ಪೂ – ೨೪೦ ಕ್ರಿ.ಪೂ) ರಿಂದ ಪ್ರಾರಂಭಗೊಳ್ಳುತ್ತದೆ. ಇವರು ರಚಿಸಿದ್ದ ಪಟ್ಟಿಗಳಲ್ಲಿ ಗೀಝಾದ ಪಿರಮಿಡ್, ಬ್ಯಾಬಿಲೋನ್ನ ತೂಗು ಉದ್ಯಾನಗಳು, ಒಲಂಪಿಯಾದಲ್ಲಿನ ಝ್ಯೂಯಸ್ನ ಪ್ರತಿಮೆ, ಎಫೆಸೂಸ್ ನಲ್ಲಿನ ಆರ್ಟೆಮಿಸ್ನ ದೇವಾಲಯ, ಹ್ಯಾಲಿಕಾರ್ನಸಸ್ ನಲ್ಲಿನ ಮೌಸೋಲಸ್ನ ಮೌಸೋಲಮ್, ರೋಡ್ಸ್ನ ಕೊಲೋಸಸ್ ಮತ್ತು ಅಲೆಕ್ಸಾಂಡ್ರಿಯಾದ ಲೈಟ್ಹೌಸ್ಗಳನ್ನು ಒಳಗೊಂಡಿದೆ.ಮಹತ್ವದ ಗೀಝಾದ ಪಿರಮಿಡ್ ಮಾತ್ರ ಇನ್ನೂ ಉಳಿದಿದೆ. ಉಳಿದ ಆರು ಭೂಕಂಪ, ಅಗ್ನಿದುರಂತ, ಅಥವಾ ಇತರ ಕಾರಣಗಳಿಂದ ನಾಶವಾಗಿವೆ.[1]
ಅಕಾರಾದಿಯಲ್ಲಿ:
ಅದ್ಭುತ | ಸ್ಥಳ | ಇಮೇಜ್ |
---|---|---|
ಗೀಝಾ ಪಿರಮಿಡ್ ಪ್ರಾಂಗಣ (ಪ್ರಪಂಚದ ಪ್ರಾಚೀನ ಅದ್ಭುತಗಳಲ್ಲಿ ಉಳಿದಿರುವ ಕಟ್ಟಕಡೆಯದು) |
ಕೈರೋ, ಈಜಿಪ್ಟ್ | |
ಚಿಚಿನ್ ಇಟ್ಜಾ | ಯುಕಾಟಾನ್, ಮೆಕ್ಸಿಕೊ | |
ಕ್ರಿಸ್ಟ್ ದಿ ರಿಡೀಮರ್ | ರಿಯೊ ಡಿ ಜನೇರೋ, ಬ್ರೆಜಿಲ್ | |
ಬಯಲುಕುಸ್ತಿ ಪ್ರಾಂಗಣ | ರೋಮ್, ಇಟಲಿ | |
ಚೀನಾದ ಬೃಹತ್ ಗೋಡೆ | ಚೀನಾ | |
ಮಾಚಿ ಪಿಚ್ಚು | ಕುಜ್ಕೋ, ಪೆರು | |
ಪೆಟ್ರಾ | ಜೋರ್ಡಾನ್ | |
ತಾಜ್ ಮಹಲ್ | ಆಗ್ರಾ, ಭಾರತ | |
೨೦೦೭ರಲ್ಲಿ ವಿಶ್ವಸಂಸ್ಥೆಯೊಂದಿಗೆ ಪಾಲುದಾರಿಕೆಗಾಗಿ ಹೊಸ ೭ ಅದ್ಭುತಗಳ ಪ್ರತಿಷ್ಠಾನವು ಯುಎನ್ನ ಸ್ವರ್ಣಯುಗದ ಅಭಿವೃದ್ಧಿ ಗುರಿಗಳನ್ನು ಗುರುತಿಸುವಲ್ಲಿನ ಪ್ರಯತ್ನವನ್ನು ಶಿಫಾರಸು ಮಾಡಲು ಗುತ್ತಿಗೆಯನ್ನು ಪಡೆದುಕೊಂಡಿತು.ವಿಶ್ವಸಂಸ್ಥೆಯು ಹೀಗೆ ಹೇಳಿತು:
“ | The New7Wonders campaigns aim to contribute to the process of uplifting the well being and mutual respect of citizens around the world, through encouraging interaction, expression of opinion and direct participation by voting and polling on popular themes and global issues which are understandable to everyone.[8] | ” |
ಯುನೆಸ್ಕೋ (UNESCO) ದ ಜೂನ್ ೨೦, ೨೦೦೭ ರ ಪತ್ರಿಕಾ ಪ್ರಕಟಣೆಯಲ್ಲಿ, "ಖಾಸಗಿ ತೊಡಗುವಿಕೆ" ಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿತು, ಅದರ ಪ್ರಕಾರ "ಇದು ಕೇವಲ ಅಂತರಜಾಲ ಪ್ರವೇಶ ಹೊಂದಿರುವವರ ಅಭಿಪ್ರಾಯಗಳಾಗಿವೆ " ಎಂದು ಹೇಳುತ್ತದೆ. ಪತ್ರಿಕಾ ಪ್ರಕಟಣೆ ಹೀಗೆಂದು ಮುಕ್ತಾಯಗೊಳ್ಳುತ್ತದೆ:
“ | There is no comparison between Mr. Weber’s mediatised campaign and the scientific and educational work resulting from the inscription of sites on UNESCO’s World Heritage List. The list of the 7 New Wonders of the World will be the result of a private undertaking, reflecting only the opinions of those with access to the Internet and not the entire world. This initiative cannot, in any significant and sustainable manner, contribute to the preservation of sites elected by this public.[9] | ” |
ಬ್ರೆಜಿಲ್ನಲ್ಲಿ ವೋಟ್ ನೊ ಕ್ರಿಸ್ಟೋ (ಕ್ರಿಸ್ತನಿಗೆ ಮತ ಹಾಕಿ) ಎಂಬ ಕಾರ್ಯಾಚರಣೆಗೆ ಖಾಸಗಿ ಕಂಪನಿಗಳ ಮನ್ನಣೆ ಲಭಿಸಿತ್ತು, ಅವುಗಳಲ್ಲಿ ದೂರಸಂಪರ್ಕ ಆಪರೇಟರ್ಗಳು ಮತದಾರರಿಗೆ ಮತ ಚಲಾಯಿಸಲು ದೂರವಾಣಿ ಕರೆಗಳನ್ನು ಮಾಡಲು ಶುಲ್ಕ ವಿಧಿಸುವುದನ್ನು ನಿಲ್ಲಿಸಿದರು.[10] ಹೆಚ್ಚುವರಿಯಾಗಿ, ಉನ್ನತ ಕಾರ್ಪೊರೇಟ್ ಪ್ರಾಯೋಜಕರಾದ ಬ್ಯಾನ್ಕೊ ಬ್ರೆಡೆಸ್ಕೋ ಮತ್ತು ರೆಡೊ ಗ್ಲೋಬೊ ಅವರನ್ನು ಒಳಗೊಂಡಿತ್ತು. ಇವರು ಪ್ರತಿಮೆಯನ್ನು ಉನ್ನತ ಏಳು ಪಟ್ಟಿಯಲ್ಲಿ ಮತ ಚಲಾಯಿಸಲು ಸುಮಾರು ಮಿಲಿಯನ್ಗಟ್ಟಲೆ ರಿಯಲ್ಗಳನ್ನು ಖರ್ಚು ಮಾಡಿದರು.[48] ಕಾರ್ಯಾಚರಣೆಯು ಎಷ್ಟು ವ್ಯಾಪಕವಾಗಿತ್ತು ಎಂಬುದನ್ನು ನ್ಯೂಸ್ವೀಕ್ ವರದಿಗಳು ಈ ರೀತಿ ಹೇಳುತ್ತದೆ:
“ | One morning in June, Rio de Janeiro residents awoke to a beeping text message on their cell phones: “Press 4916 and vote for Christ. It’s free!” The same pitch had been popping up all over the city since late January—flashing across an electronic screen every time city-dwellers swiped their transit cards on city buses and echoing on TV infomercials that featured a reality-show celebrity posing next to the city’s trademark Christ the Redeemer statue.[7] | ” |
ಪೆರುವಿಯನ್ನ ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಚಿವಾಲಯದ ನೇತೃತ್ವದಲ್ಲಿ ಹಮ್ಮಿಕೊಂಡ ಒಂದು ಉತ್ಸಾಹಿ ಕಾರ್ಯಾಚರಣೆಯು ಮಾಧ್ಯಮದಲ್ಲಿ ಮತ್ತು ಪರೋಕ್ಷವಾಗಿ ಪೆರುವಿಯನ್ನ ಜನರಲ್ಲಿ ಅದ್ಭುತ ಪರಿಣಾಮವನ್ನುಂಟು ಮಾಡಿತ್ತು. ಇದು ಎಷ್ಟು ಪರಿಣಾಮವನ್ನುಂಟು ಮಾಡಿತ್ತೆಂದರೆ ಪೆರುವಿಯನ್ ಜನತೆಯು ತಮ್ಮ ಮನೆಗಳಲ್ಲಿ ಅಂತರಜಾಲ ಸಂಪರ್ಕ ಇಲ್ಲದೆಯೇ ಅವರ ರಾಷ್ಟ್ರದ ಅದ್ಭುತಕ್ಕಾಗಿ ಬೃಹತ್ ಪ್ರಮಾಣದಲ್ಲಿ ಮತ ಚಲಾಯಿಸಿದ್ದರು.ಹೊಸ ಜಗತ್ತಿನ ಅದ್ಭುತಗಳ ಘೋಷಣೆಯು ಉತ್ತಮ ನಿರೀಕ್ಷೆಯನ್ನುಂಟು ಮಾಡಿತ್ತು ಮತ್ತು ಮೆಚೂ ಪಿಚೂ ದ ಚುನಾವಣೆಯು ರಾಷ್ಟ್ರಾದ್ಯಂತ ಆಚರಿಸಲಾಯಿತು, ವಿಶೇಷವಾಗಿ ಕ್ಯೂಸ್ಕೋದ ಮುಖ್ಯ ಚೌಕದಲ್ಲಿ ಮತ್ತು ಲಿಮಾದಲ್ಲಿ ಅಧ್ಯಕ್ಷ ಅಲನ್ ಗಾರ್ಸಿಯಾ ಅವರು ಸಮಾರಂಭವನ್ನು ಆಯೋಜಿಸಿದ್ದರು.
ಈಸ್ಟರ್ ದ್ವೀಪ ಮೋಯಸ್ ನ ಚಿಲಿಯ ಪ್ರತಿನಿಧಿ ಅಲ್ಬೆರ್ಟೋ ಹೊಟಸ್ ಅವರ ಪ್ರಕಾರ ಬೆರ್ನಾರ್ಡ್ ವೆಬರ್ ಅವರು ಮೋಯಸ್ ಎಂಟನೇ ಸ್ಥಾನದಲ್ಲಿ ಇತ್ಯರ್ಥಗೊಂಡಿದೆ ಮತ್ತು ನೈತಿಕವಾಗಿ ಏಳು ಅದ್ಭುತಗಳಲ್ಲಿ ಒಂದು ಎಂಬುದಾಗಿ ಪತ್ರವನ್ನು ನೀಡಿದ್ದಾರೆ ಎಂದು ಹೇಳುತ್ತಾರೆ. ಆ ರೀತಿಯ ಒಂದು ಕ್ಷಮಾಯಾಚನೆ ಸ್ವೀಕರಿಸಿದ ಪ್ರತಿನಿಧಿ ನಾನೊಬ್ಬನೆ ಎಂದು ಹೊಟಸ್ ಅವರು ಹೇಳುತ್ತಾರೆ.[11]
ಜೋರ್ಡಾನ್ನ ರನೀಯಾ ಅಲ್-ಅಬ್ದುಲ್ಲಾ ರಾಣಿ ಅವರು ಜೋರ್ಡಾನ್ನ ರಾಷ್ಟ್ರೀಯ ಸಂಪತ್ತು ಪೆಟ್ರಾ ಅನ್ನು ವಶಪಡಿಸಿಕೊಳ್ಳಲು ಕಾರ್ಯಾಚರಣೆಯಲ್ಲಿ ಭಾಗಿಯಾದರು.[52] ೭ ಮಿಲಿಯನ್ ಜನರಿಗೂ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಜೋರ್ಡಾನ್, ರಾಷ್ಟ್ರದಿಂದ ಸುಮಾರು ೧೪ ಮಿಲಿಯನ್ ಮತಗಳನ್ನು ಹಾಕಲಾಗಿದೆ ಎಂದು ವಾದಿಸುತ್ತದೆ.[7] ಹೊಸ೭ಅದ್ಭುತಗಳ ಪ್ರತಿಷ್ಠಾನವು ಕಾರ್ಯಾಚರಣೆಯ ಕುರಿತು ಯಾವುದೇ ರೀತಿಯ ವಿವರಗಳನ್ನು ಬಿಡಗಡೆ ಮಾಡದಿರುವ ಕಾರಣ ಈ ಸಂಖ್ಯೆಯನ್ನು ಸಹ ಕೇವಲ ಅಂದಾಜು ಮಾಡಲಾಗಿದೆ.
ಭಾರತದಲ್ಲಿನ ತಾಜ್ ಮಹಲ್ಗೆ ಮತ ಚಲಾಯಿಸುವ ಕಾರ್ಯಾಚರಣೆಯನ್ನು ಪ್ರಚಾರ ಪಡಿಸಲು ಪ್ರಚಾರ ಕಾರ್ಯ ವೇಗವಾಗಿ ಸಾಗಿತು ಹಾಗೂ ವಾರ್ತಾ ಚಾನಲ್ಗಳು, ರೇಡಿಯೊ ಸ್ಟೇಷನ್ಗಳು ಮತ್ತು ಹಲವಾರು ಪ್ರಖ್ಯಾತರು ಜನರನ್ನು ಮತ ಚಲಾಯಿಸುವಂತೆ ಕೇಳುವುದರೊಂದಿಗೆ ಜುಲೈ ೨೦೦೭ ರಲ್ಲಿ ಇದು ಪರಾಕಾಷ್ಠೆಯನ್ನು ತಲುಪಿತು. ಮತ ಚಲಾಯಿಸುವ ಕೊನೆಯ ಕೆಲವು ದಿನಗಳ ಕಾಲ ಮೆಸೇಜಿಂಗ್ ಅನ್ನು ಕೆಲವು ಮೊಬೈಲ್ ಕಂಪನಿಗಳು ಉಚಿತಗೊಳಿಸಿತ್ತು.
ಚಿಚನ್ ಇಟ್ಜಾಗೆ ಮತ ಚಲಾಯಿಸುವಲ್ಲಿ ಜನರನ್ನು ಪ್ರೋತ್ಸಾಹಿಸಲು ವಾರ್ತೆ ಕಾರ್ಯಕ್ರಮಗಳಲ್ಲಿ ಒಂದು ಪ್ರಚಾರ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಇತರ ೧೩ ಅಂತಿಮ ಸ್ಪರ್ಧಿಗಳನ್ನು,[12] ಇಂಗ್ಲೀಷ್ ಅಕ್ಷರಗಳ ಅಕಾರಾದಿಯಲ್ಲಿ ಪಟ್ಟಿ ಮಾಡಲಾಗಿದೆ, ಅವುಗಳೆಂದರೆ:
ಅದ್ಭುತ | ಸ್ಥಳ |
---|---|
ಅಥೆನ್ಸ್ನ ಆರ್ಕೊಪೊಲಿಸ್ | [55] ಅಥೆನ್ಸ್, ಗ್ರೀಸ್ |
ಅಲ್ಹಾಂಬ್ರಾ | [56] ಗ್ರನಾಡಾ, ಸ್ಪೇನ್ |
ಅಂಕೊರ್ ವಾಟ್ | [57] ಅಂಕೊರ್, ಕಾಂಬೋಡಿಯಾ |
ಈಫೆಲ್ ಗೋಪುರ | [58] ಪ್ಯಾರೀಸ್, ಫ್ರಾನ್ಸ್ |
ಹಗಿಯಾ ಸೋಫಿಯಾ | [59] ಇಸ್ತಾನ್ಬುಲ್, ಟರ್ಕಿ |
ಕಿಯೋಮಿಜು-ಡೆರು | [60] ಕ್ಯೋಟೊ, ಜಪಾನ್ |
ಮೋಯ್ | [61] ಈಸ್ಟರ್ ಐಲ್ಯಾಂಡ್, ಚಿಲಿ |
ರೆಡ್ ಸ್ಕ್ವೇರ್ | [62] ಮಾಸ್ಕೋ, ರಷ್ಯಾ |
ನ್ಯೂಸ್ಚ್ವನ್ಸ್ಟೇನ್ | [63] ಫುಸನ್, ಜರ್ಮನಿ |
ಲಿಬರ್ಟಿಯ ಪ್ರತಿಮೆ | [64] ನ್ಯೂ ಯಾರ್ಕ್, ಯುನೈಟೆಡ್ ಸ್ಟೇಟ್ಸ್ |
ಸ್ಟೋನ್ಹೆಂಜ್ | [65] ಏಮ್ಸ್ಬರಿ, ಯುನೈಟೆಡ್ ಕಿಂಗ್ಡಮ್ |
ಸಿಡ್ನಿ ಒಪೇರಾ ಹೌಸ್ | [66] ಸಿಡ್ನಿ, ಆಸ್ಟ್ರೇಲಿಯಾ |
ತಿಂಬುಕ್ತು | [67] ಮಾಲಿ |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.