From Wikipedia, the free encyclopedia
ಚಾರ್ವಾಕ ಭಾರತದಲ್ಲಿ ಬೆಳೆದು ಬಂದ ಸಿದ್ಧಾಂತಗಳಲ್ಲೊಂದು.ಕ್ರಿ.ಪೂ ೬೦೦ಕ್ಕಿಂತಲೂ ಹಿಂದಿನಿಂದಲೇ ಈ ಪರಂಪರೆ ಬೆಳೆದು ಬಂದಿದೆ ಎಂದು ನಂಬಲಾಗಿದೆ.ಚಾರ್ವಾಕ ಮತದ ಮೂಲಗ್ರಂಥಗಳು ಇಂದು ದೊರೆಯದ ಕಾರಣ ೧೩-೧೪ನೇ ಶತಮಾನದಲ್ಲಿದ್ದ ವಿಜಯನಗರ ಸಾಮ್ರಾಜ್ಯ ಸ್ಥಾಪನಾಚಾರ್ಯರೆಂದೇ ಪ್ರಸಿದ್ಧರಾದ ಶೃಂಗೇರಿ ಮಠದ ಶ್ರೀ ವಿದ್ಯಾರಣ್ಯ ಮಾಹಾಸ್ವಾಮಿಗಳ 'ಸರ್ವ ದರ್ಶನ ಸಂಗ್ರಹ'ಎಂಬ ಗ್ರಂಥದಲ್ಲಿರುವ ಚಾರ್ವಾಕ ದರ್ಶನ ಎಂಬ ಅಧ್ಯಾಯವೇ ಆಧಾರವಾಗಿದೆ.ಹಿಂದೂ ಧರ್ಮ ಗ್ರಂಥಗಳಲ್ಲಿ ಹೇಳಲ್ಪಟ್ಟ 'ಪ್ರತ್ಯಕ್ಷ ಪ್ರಮಾಣ' ಒಂದನ್ನು ಮಾತ್ರಾ ಚಾರ್ವಾಕಮತ ಅಂಗೀಕರಿಸಿದೆ.ಚಾರ್ವಾಕ ದರ್ಶನವನ್ನು ಕೆಲವೊಮ್ಮೆ 'ಲೋಕಾಯತ'ದರ್ಶನ ಎಂದೂ ಕರೆಯುತ್ತಾರೆ.
ಹಿಂದೂ ತತ್ತ್ವಶಾಸ್ತ್ರ ಸರಣಿಯ ಲೇಖನ | |
ಪಂಥಗಳು | |
---|---|
ಸಾಂಖ್ಯ · ನ್ಯಾಯ | |
ವೈಶೇಷಿಕ · ಯೋಗ | |
ಪೂರ್ವ ಮೀಮಾಂಸಾ · ವೇದಾಂತ | |
ವೇದಾಂತ ಪಂಥಗಳು | |
ಅದ್ವೈತ · ವಿಶಿಷ್ಟಾದ್ವೈತ | |
ದ್ವೈತ | |
ಪ್ರಮುಖ ವ್ಯಕ್ತಿಗಳು | |
ಕಪಿಲ · ಗೋತಮ | |
ಕಣಾದ · ಪತಂಜಲಿ | |
ಜೈಮಿನಿ · ವ್ಯಾಸ | |
ಮಧ್ಯಕಾಲೀನ | |
ಆದಿಶಂಕರ · ರಾಮಾನುಜ | |
ಮಧ್ವ · ಮಧುಸೂದನ | |
ವೇದಾಂತ ದೇಶಿಕ · ಜಯತೀರ್ಥ | |
ಆಧುನಿಕ | |
ರಾಮಕೃಷ್ಣ · ರಮಣ | |
ವಿವೇಕಾನಂದ · ನಾರಾಯಣ ಗುರು | |
ಅರವಿಂದ ·ಶಿವಾನಂದ | |
'ಸರ್ವ ದರ್ಶನ ಸಂಗ್ರಹ'ದಲ್ಲಿ ಉದ್ದರಿಸಿದಂತೆ ಚಾರ್ವಾಕ ಮತದ ಮುಖ್ಯ ತತ್ವಗಳು ಇಂತಿವೆ.ಸಂತೋಷವೇ ಬದುಕಿನ ಮುಖ್ಯ ಗುರಿ.ಈ ಪ್ರಪಂಚದ ನಂತರ ಇನ್ನೊಂದು ಪ್ರಪಂಚ (ಸ್ವರ್ಗ ಯಾ ನರಕ)ಎಂದು ಏನೂ ಇಲ್ಲ.ಸ್ವರ್ಗ ಹಾಗೂ 'ಹುಟ್ಟು ಸಾವುಗಳಿಂದ ಬಿಡುಗಡೆ' ಎಂದು ಹೇಳಲ್ಪಟ್ಟವುಗಳೆಲ್ಲವೂ ಕೇವಲ ಭ್ರಮಾಧೀನ ಆದರ್ಶಗಳೆಷ್ಟೆ.ಸಾವು ಎಲ್ಲರಿಗೂ ನಿಶ್ಚಿತ.ಮರುಜನ್ಮ ಎಂಬುದಿಲ್ಲ.ಆದುದರಿಂದ ಎಲ್ಲರೂ ಬದುಕಿರುವಷ್ಟು ದಿನ ಸುಖವಾಗಿರಲು ಪ್ರಯತ್ನಿಸಬೇಕು. ಬದುಕಿನಲ್ಲಿ ದುಖ ಇದೆ ಎಂದು ಸುಖವನ್ನು ತ್ಯಜಿಸುವುದು ಸರಿಯಲ್ಲ. ಅಕ್ಕಿಯನ್ನು ಪಡೆಯುವಾಗ ಭತ್ತದ ಹೊಟ್ಟು ಮತ್ತು ದೂಳು ದೊರೆಯುತ್ತದೆ ಎಂದು ಅಕ್ಕಿಯನ್ನು ತ್ಯಜಿಸಲು ಸಾದ್ಯವೇ? ಅಂತೆಯೇ ದುಖಕ್ಕಾಗಿ ಸುಖ ತ್ಯಜಿಸುವುದು ಯುಕ್ತವಲ್ಲ. ಭೂಮಿ,ವಾಯು,ನೀರು ಹಾಗೂ ಬೆಂಕಿ ಮೂಲಭೂತ ವಸ್ತುಗಳು.ಪ್ರಜ್ಞೆಯು ಈ ನಾಲ್ಕು ಮೂಲಭೂತ ವಸ್ತುಗಳಿಂದಲೇ ಪ್ರಾಪ್ತಿಯಾಗುತ್ತದೆ.ಹೇಗೆ ಕೆಲವು ಅಮಲೇರಿಸುವ ಗುಣಗಳಿಲ್ಲದ ವಸ್ತುಗಳನ್ನು ಬೆರೆಸಿದಾಗ ಅಮೆಲೇರಿಸುವ ಗುಣವುಳ್ಳ ವಸ್ತುವಾಗುವುದೋ ಅಂತೆಯೇ ಪ್ರಜ್ಞೆಯು ಈ ನಾಲ್ಕು ವಸ್ತುಗಳಿಂದಾಗುತ್ತದೆ. ದೇಹವಿಲ್ಲದೆ ಆತ್ಮಎಂಬುದು ಇಲ್ಲ.'ನಾನು ತೆಳ್ಳಗಿದ್ದೇನೆ' 'ನಾನು ದಪ್ಪಗಿದ್ದೇನೆ' ಎಂದು ಮುಂತಾಗಿ ನಾವು ಹೇಳುವುದೆಲ್ಲವೂ ಈ ದೇಹಕ್ಕೇನೆ ಹೊರತು ಆತ್ಮಕ್ಕಲ್ಲ. ಬೆಂಕಿಯ ಬಿಸಿ,ಗಾಳಿಯ ತಂಪು ಎಲ್ಲವೂ ಪ್ರಕೃತಿದತ್ತವಾದವುಗಳೇ.ಎಲ್ಲಾ ವೈವಿದ್ಯಮಯ ವಸ್ತುಗಳೂ ಈ ಪ್ರಕೃತಿಯಿಂದಲೇ ಉಂಟಾಗಿದೆ ಮತ್ತು ಪ್ರಕೃತಿ ನಿಯಮದಂತೆಯೇ ನಡೆಯುತ್ತದೆ. ವೇದಗಳು ಹಾಗೂ ಅವುಗಳಲ್ಲಿ ಹೇಳಲಾದ ಯಾಗ,ಯಜ್ಞಾದಿಗಳು ಕೇವಲ ಕೆಲವು ಜನರ ಹೊಟ್ಟೆಪಾಡಿಗಾಗಿವೆಯಲ್ಲದೆ ಅವುಗಳಿಂದ ಪ್ರಯೋಜನವೇನೂ ಇಲ್ಲ.ವೇದಗಳಲ್ಲಿ ವಿವೇಕವಾಗಲೀ ಪ್ರಾಮಾಣಿಕತೆಯಾಗಲೀ ಇಲ್ಲವಾದುದರಿಂದ ಅವುಗಳು ಸ್ವೀಕಾರಾರ್ಹವಲ್ಲ. ೧
ಚಾರ್ವಾಕ ದರ್ಶನ-ವಿವರ 2
ತತ್ಸಮುದಾಯೋ ಶರೀರೇಂದ್ರಿಯ ವಿಷಯ ಸಂಜ್ಞಾ ಇವುಗಳ ಸಂಯೋಗದಿಂದ ಮಾತ್ರಾ ಶರೀರ ಇಂದ್ರಿಯಗಳು. ಪ್ರತ್ಯೇಕ ಚೇತನದ ಅವಶ್ಯಕತೆ ಇಲ್ಲ. ಅದು ತನ್ನ ಸ್ವಭಾವದಿಂದ ಹುಟ್ಟುತ್ತದೆ. ಜಗತ್ತು ತಾನಾಗಿ ಹುಟ್ಟಿದೆ. ಶರೀರಕ್ಕಿಂತ ಬೇರೆಯಾದ ಆತ್ಮನಿಲ್ಲ. ; ಶರೀರವೇ ಆತ್ಮ ; ಉದಾಹರಣೆಗೆ -ನಾನು ದಪ್ಪಗಿದ್ದೇನೆ -(ಶರೀರವನ್ನೇ ನಾನು ಎಂದು ಭಾವಿಸಿ ಹೇಳುತ್ತಾರೆ ,)
೧. ಚಾರ್ವಾಕರಿಗೆ ಪ್ರತ್ಯಕ್ಷವೇ ಪ್ರಮಾಣ. ಏಕೆಂದರೆ ಇಂದ್ರಿಯಗಳಿಗೆ , ಅನುಭವಕ್ಕೆ ನಿಲುಕುವ ಸಂಗತಿಗಳಷ್ಟೇ ಪ್ರಧಾನ ಪ್ರಮಾಣ ಅಥವಾ ಆಧಾರ. ಅನುಮಾನ (Inference ) ಶಾಸ್ತ್ರ, ಶಬ್ದ (ಅನುಭವಿಗಳಮಾತು), ನಮಗೆ ಸ್ವತಂತ್ರವಾಗಿ ಜ್ಞಾನವನ್ನು ಕೊಡಲಾರವು. ಅನುಮಾನಕ್ಕೆ ಉದಾಹರಣೆ : ದೂರದಲ್ಲಿ ಹೊಗೆಯನ್ನು ಅಲ್ಲಿ ಬೆಂಕಿ ಇದೆ ಎಂದು ಊಹಿಸುವುದು. ಒಂದು ಅಗಳು ಅನ್ನವನ್ನು ಹಿಚುಕಿ ನೋಡಿ ಬೆಂದಿದ್ದರೆ , ಎಲ್ಲವೂಬೆಂದಿದೆ ಎಂದು ತಿಳಿಯುವುದು. ಚವಾಕರು ಇದನ್ನು ಲೋಕ ವ್ಯವಹಾರಕ್ಕೆ ಸೀಮಿತ ಎನ್ನುತ್ತಾರೆ. ತತ್ವ ನಿರ್ಣಯಕ್ಕೆ ಪ್ರಯೋಜನವಿಲ್ಲವೆನ್ನುತ್ತಾರೆ. ಏಕೆಂದರೆ ಇದು ಸಂಭಾವನಾರೂಪದ್ದು (ಊಹೆ). ನಿಜವಾದರೂ ಆಗಬಹುದು ಅಥವಾ ಆಗದಿರಬಹುದು
ಅವರ ತತ್ವ : ಸುಖಕ್ಕೆ ಧರ್ಮವೇ ಕಾರಣವೆಂದಾಗಲೀ ದುಃಖಕ್ಕೆ ಅಧರ್ಮವೇ ಕಾರಣವೆಂದಾಗಲೀ ಹೇಳುವಂತಿಲ್ಲ. ಸುಖ ದುಃಖಗಳಿಗೆ ಸ್ವಭಾವವೇ ಕಾರಣ, ಕೋಗಿಲೆಯ ಮಧುರ ಸ್ವರಕ್ಕೆ : ನವಿಲಿನ ಚೆಂದಕ್ಕೆ ; ಹೂವಿನ ಸುವಾಸನೆಗೆ - ಸ್ವಭಾವವೇ ಕಾರಣ .
ಪ್ರಸಿದ್ಧ ಶ್ಲೋಕ :
ಶರೀರವು ಭೋಗಾಯತನ. ಸುಖವನ್ನು ಬಯಸುವುದು. ಆದರೆ ದುಃಖ - ಕ್ಲೇಶವು ಈ ಜೀವನದಲ್ಲಿ ಆಗುವುದು. ಈ ದುಃಖಕ್ಕೆಲ್ಲಾ ಕೊನೆ - ಸಾವು. ಮರಣವೇ ಮೋಕ್ಷ. ಮರಣಮೇವಾಪರ್ಗ. ಕಾರಣ ಮರಣದ ನಂತರ ಆತ್ಮ ಇರುವುದೆಂಬುದನ್ನು ಅವರು ಒಪ್ಪುವುದಿಲ್ಲ.
ಓಂ ತತ್ ಸತ್
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.