From Wikipedia, the free encyclopedia
ಹಿಂದೂ ತತ್ತ್ವಶಾಸ್ತ್ರ ಸರಣಿಯ ಲೇಖನ | |
ಪಂಥಗಳು | |
---|---|
ಸಾಂಖ್ಯ · ನ್ಯಾಯ | |
ವೈಶೇಷಿಕ · ಯೋಗ | |
ಪೂರ್ವ ಮೀಮಾಂಸಾ · ವೇದಾಂತ | |
ವೇದಾಂತ ಪಂಥಗಳು | |
ಅದ್ವೈತ · ವಿಶಿಷ್ಟಾದ್ವೈತ | |
ದ್ವೈತ | |
ಪ್ರಮುಖ ವ್ಯಕ್ತಿಗಳು | |
ಕಪಿಲ · ಗೋತಮ | |
ಕಣಾದ · ಪತಂಜಲಿ | |
ಜೈಮಿನಿ · ವ್ಯಾಸ | |
ಮಧ್ಯಕಾಲೀನ | |
ಆದಿಶಂಕರ · ರಾಮಾನುಜ | |
ಮಧ್ವ · ಮಧುಸೂದನ | |
ವೇದಾಂತ ದೇಶಿಕ · ಜಯತೀರ್ಥ | |
ಆಧುನಿಕ | |
ರಾಮಕೃಷ್ಣ · ರಮಣ | |
ವಿವೇಕಾನಂದ · ನಾರಾಯಣ ಗುರು | |
ಅರವಿಂದ ·ಶಿವಾನಂದ | |
ದ್ವೈತ ಸಿದ್ಧಾಂತ ವೆಂದು ಪ್ರಸಿದ್ಧವಾಗಿರುವ ಮದ್ಧ್ವಾಚಾರ್ಯರಿಂದ ಪ್ರಚಾರಕ್ಕೆ ಬಂದ ಮಾಧ್ವ ಸಿದ್ಧಾಂತದ ಹೆಸರು, ಬ್ರಹ್ಮ ಮೀಮಾಂಸಾಶಾಸ್ತ್ರ, ಅಥವಾ ತತ್ವವಾದ. ಮಧ್ವಾಚಾರ್ಯರ ಇತರ ಹೆಸರುಗಳು ಆನಂದ ತೀರ್ಥ, ಪೂರ್ಣಪ್ರಜ್ಞ, ಪೂರ್ಣಬೋಧ. ಕ್ರಿ. ಶ. ೧೧೯೭ರಲ್ಲಿ [ಕ್ರಿಶ ೧೨೩೮ - ೧೩೧೭ ನಿಜವಾದ ಹೆಸರು ವಾಸುದೇವ ನಡ್ಡಿಲ್ಲಾಯ] ಉಡುಪಿಯ ಹತ್ತಿರ ಪಾಜಕದಲ್ಲಿ ಜನಿಸಿದ ಅವರು ೮೦ ವರ್ಷ ಬದುಕಿದ್ದರು. ಉಡುಪಿಯಲ್ಲಿ ೭೯ನೇ ವಯಸ್ಸಿನಲ್ಲಿ ಅದೃಶ್ಯರಾದರು. ಅವರು ತಮ್ಮ ಅಸಾಧಾರಣ ವಿದ್ವತ್ತಿನಿಂದ ದ್ವೈತ ಸಿದ್ದಾಂತವನ್ನು ಪ್ರಚುರ ಪಡಿಸಿದ್ದಾರೆ. ತಮ್ಮ ಸಿದ್ದಾಂತದ ಸಮರ್ಥನೆಗಾಗಿ ಉಪನಿಷತ್ತಿನ ಭಾಷ್ಯಗಳು, ಮಹಾಭಾರತ ತಾತ್ಪರ್ಯನಿರ್ಣಯ ಮೊದಲಾದ ೩೭ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಅನುಯಾಯಿಗಳು ಅವರನ್ನು ವಾಯುದೇವರ ಅವತಾರವೆಂದು ನಂಬಿದ್ದಾರೆ; ಹಾಗೆಂದು ಅವರೂ ಹೇಳಿಕೊಂಡಿದ್ದಾರೆ.
ವೇದಾಂತ ದರ್ಶನದಲ್ಲಿ ಜೀವ -ಜಗತ್ - ಬ್ರಹ್ಮದಲ್ಲಿ ಅಬೇಧವೇ ಅಂತಿಮ ಸತ್ಯವೆಂದು ಹೇಳುವ ಅದ್ವೈತ ಒಂದು ತುದಿಯಾದರೆ - ಅವುಗಳಲ್ಲಿ ಆತ್ಯಂತಿಕ ಬೇಧವೇ ಇರುವುದೆನ್ನುವುದು ಇನ್ನೊಂದು ತುದಿ . ಬ್ರಹ್ಮವನ್ನು - ದೇವರನ್ನು ವೇದಾಂತ ಭಕ್ತಿಗಳಿಂದ ಸಮನ್ವಯಗೊಳಿಸಿದ ಮಧ್ವರ ಸಿದ್ಧಾಂತದ ಹೆಸರು ಬ್ರಹ್ಮ ಮೀಮಾಂಸಾ ಶಾಸ್ತ್ರ , ಅಥವಾ ತತ್ವವಾದ ; ಆದರೆ ಅದು ದ್ವೈತವೆಂದೇ ಪ್ರಸಿದ್ಧವಾಗಿದೆ. ಮಧ್ವರು ದೇಶಾದ್ಯಂತ ಸಂಚರಿಸಿ ತಮ್ಮ ಅಸಾಧಾರಣ ವಿದ್ವತ್ತಿನಿಂದ ದ್ವೈತ ಸಿದ್ಧಾಂತವನ್ನು ಪ್ರಚುರ ಪಡಿಸಿದರು. ಪಾಂಡಿತ್ಯ, ದೇಹಬಲ, ತರ್ಕಶಕ್ತಿಗಳಲ್ಲಿ ಅಸಮಾನ್ಯರಾದ ಅವರನ್ನು ವಾಯುದೇವರ ಅವತಾರವೆನ್ನುವರು. ಆನಂದ ತೀರ್ಥ , ಪೂರ್ಣ ಬೋಧ, ಪೂರ್ಣಪ್ರಜ್ಞ, ಎಂಬುವು ಅವರ ಇತರ ಹೆಸರುಗಳು . ಅವರು ಉಪನಿಷತ್ತು, ಬ್ರಹ್ಮ ಸೂತ್ರ, ಗೀತೆ, ಋಗ್ವೇದದ ನಲವತ್ತು ಸೂಕ್ತಗಳ ಮೇಲೆ ಭಾಷ್ಯಗಳನ್ನು ಬರೆದಿದ್ದಾರೆ. , ಮಹಾಭಾರತ ತಾತ್ಪರ್ಯನಿರ್ಣಯ , ವಿಷ್ಣುತತ್ವ ನಿರ್ಣಯ, ಮೊದಲಾದ ೩೭ ಗ್ರಂಥಗಳನ್ನು ಅವರ ಸರ್ವಮೂಲ ಗ್ರಂಥಗಳೆನ್ನುತ್ತಾರೆ. ಜಯತೀರ್ಥರು ಮಧ್ವರ ಭಾಷ್ಯಗಳಿಗೆ ಪಾಂಡಿತ್ಯ ಪೂರ್ಣ ಟೀಕೆಗಳನ್ನು ಬರೆದು ಸ್ವಮತ ಸ್ಥಾಪನೆ, ಪರಮತ ಖಂಡನೆ ಮಾಡಿದ್ದಾರೆ.
ದ್ವೈತವು ಹರಿಸರ್ವೋತ್ತಮವನ್ನು ಪ್ರತಿಪಾದಿಸುವುದರಿಂದ , ಶೈವ , ಶಾಕ್ತ (ಶಕ್ತಿ-ಅಂಬಿಕೆ), ಇತ್ಯಾದಿ ಪಂಥಗಳಿಗೂ ಜೀವ -ಬ್ರಹ್ಮ ರಿಗೆ ಬೇಧವನ್ನು ಒತ್ತಿ ಹೇಳುವುದರಿಂದ ಅದ್ವೈತಕ್ಕೂ , ಪ್ರತಿ ಪಕ್ಷವಾಗಿದೆ. ಮದ್ವರು ಅದ್ವೈತವನ್ನು ಉಗ್ರವಾಗಿ ಖಂಡಿಸಿದ್ದಾರೆ. ಈವರಗೂ ದ್ವೈತ ಮಂಡನೆಗಿಂತ ಹೆಚ್ಚಾಗಿ ಖಂಡನೆಯೇ ನೆಡೆದಿದೆ.
ತತ್ವ ಸಂಗ್ರಹ
:ಸಾರಾಂಶ:ಹರಿಯು ಸರ್ವೋತ್ತಮನು; ಜಗತ್ತು ಸತ್ಯ ; ಬೇಧವು ಪರಮಾರ್ಥಿಕವಾದದ್ದು ; ಜೀವಿಗಳಲ್ಲಿ ಉಚ್ಚರು ನೀಚರು ಎಂಬ ಬೇಧವಿದೆ ; ಮುಕ್ತಿ ಎಂದರೆ ನೈಜ ಸುಖ ; ಶುದ್ಧ ಭಕ್ತಿಯು ಮುಕ್ತಿಸಾಧನ ; ಪ್ರಮಾಣಗಳು ಮೂರು : ಪ್ರತ್ಯಕ್ಷ, ಅನುಮಾನ , ಆಗಮ. ನಿಗಮಗಳು [ವೇದಗಳು]-- ಶ್ರೀಹರಿಯನ್ನು ತಿಳಿಸುವುದಕ್ಕಾಗಿ ಇದೆ.
ನಾನಾರೂಪ :- ವಿಷ್ಣು ಮಾಯಿ - ಲಕ್ಷ್ಮಿ ಮಾಯೆ; ಪ್ರಕೃತಿ ; ಹಾಗೆಯೇ ಅವರ ಬೇರೆ ರೂಪದ ಜೋಡಿ; ಸಂಕರ್ಷಣ-ಜಯಾ ; ಪ್ರದ್ಯುಮ್ನ - ಕೃತಿ [ಪ್ರದ್ಯುಮ್ನ ರೂಪ, ಸೃಷ್ಟಿಕರ್ತ]; ಅನಿರುದ್ಧ [ಪಾಲನೆಗಾಗಿ]- ಶಾಂತಿ ; ಲಕ್ಷ್ಮಿ ನಾಶವಿಲ್ಲದ ಅಕ್ಷರಾಳು ; ಸರ್ವವ್ಯಾಪಕಳು; ಅದೇ ಬ್ರಹ್ಮ ರುದ್ರಾದಿಗಳ ಶರೀರಕ್ಕೆ ನಾಶ ಉಂಟು. |
ಹರಿ ಸರ್ವೋತ್ತಮ
ವಿಷ್ಣುವು ಸೃಷ್ಟಿಗೆ ಕಾರಣನೂ ಹೌದು - ಉಪಾದಾನ ಕಾರಣ -ಪ್ರತ್ಯೇಕತೆ ಉಳಿಯುವುದಿಲ್ಲ. ಪ್ರಕೃತಿಯೇ ಲಕ್ಷಿ - ಉಪಾಧಾನ . ಹರಿಯು ವೇದಗಳ ಕರ್ತೃವಲ್ಲ ಉಪದೇಶಕ ; ಅವು ಅಪೌರುಷೇಯ ; ಅವನು ಮಹೋಪಾಧ್ಯಾಯ.
|
ಜೀವನು ಈಶನ ಅಧೀನ. ಅವರಿಬ್ಬರೂ ಒಂದೇ ಎಂಬುದು ಅಸಂಬದ್ಧ -ಎಂದು ದ್ವೈತಿಗಳ ಮತ . ತತ್ವ ಮಸಿ ವಾಕ್ಯದ ಪೂರ್ಣರೂಪ , ಸ ಆತ್ಮಾ ತತ್ವಮಸಿ - ಅದ್ವೈತಿಗಳೆಂದಂತೆ ಅದು ನೀನೇ ಎಂದಲ್ಲ.
ಜೀವನಿಗೆ ಕರ್ತೃತ್ವ ಭೋಕ್ತೃತ್ವ ಎರಡೂ ಇವೆ. ಆದರೆ ಜೀವನು ಪರಮಾತ್ಮನ ಅಧೀನ . ಅಸ್ವತಂತ್ರನಾದರೂ ಅವನ ಅನುಗ್ರಹದಿಂದ ಕರ್ತೃತ್ವ ಭೋಕ್ತೃತ್ವ ಎರಡೂ ಇವೆ . ಹಸುವಿನ ಕೆಚ್ಚಲಲ್ಲಿ ಹಾಲಿದ್ದರೂ, ಪ್ರೇರಣೆಯಿಂದ ಮಾತ್ರಾ ಬರುವಂತೆ , ತಂದೆಯು ಮಗನ ಹಿತಕ್ಕಾಗಿ ತನಗೆ ನಮಸ್ಕಾರ ಮಾಡಿಸಿಕೊಂಡಂತೆ , ದೇವರ ಪ್ರೇರಣೆ ಕೆಲಸ ಮಾಡುತ್ತದೆ.
ದೋಷ ರಹಿತ ತರ್ಕವೇ ಅನುಮಾನ ಪ್ರಮಾಣ .(• inference=The reasoning involved in drawing a conclusion or making a logical judgment on the basis of circumstantial evidence and prior conclusions rather than on the basis of direct observation)
ಕರ್ಮ :-ಇದು ಫಲಕಾರಕ ; ವಿಶೇಷಣವಿರುವುದು (ಗುಣ) ; ಈಶನ ಶಕ್ತಿ ಅಚಿಂತ್ಯ ; ಸಹಜ ; ಆಧೇಯ (ಅವಲಂಬಿತ)
ಇತರ ದ್ವೈತ ಪಂಥಗಳಲ್ಲಿ ನಿಂರ್ಬಾಕ ರ ಬೇಧಾಬೇಧ , ವಲ್ಲಭಾಚಾರ್ಯ ರ (೧೫ನೇ ಶ.ದ) ಪುಷ್ಟಿಮಾರ್ಗ / ಶುದ್ಧಾದ್ವೈತ ; ಚೈತನ್ಯ ರ (೧೪೮೫-೧೫೩೩) ಮಾಧ್ವಮತದ ಗೌಡೀಯ ಶಾಖೆ - ಅಚಿಂತ್ಯ ಬೇಧಾಬೇಧ ಇವು ಮುಖ್ಯವಾದುವು .
ನಿಂಬಾರ್ಕ : ತೆಲಗು ಬ್ರಾಹ್ಮಣ , ಶ್ರೇಷ್ಠ ಸಂತರೆಂದು ತಿಳಿದುಬಂದಿದೆ ; ಕಾಲ ಸುಮಾರು ೧೪ನೆಯ ಶತಮಾನ . ಮಧ್ವಮುಖಮರ್ದನವೆಂಬ ಗ್ರಂಥ ಅವರದ್ದೆಂದು ಹೇಳುತ್ತಾರೆ . ಪರಮತ ಖಂಡನೆ ಇಲ್ಲದ , ಬ್ರಹ್ಮ ಸೂತ್ರ ಭಾಷ್ಯ,, ದಶ ಶ್ಲೋಕೀ , ಶ್ರೀ ಕೃಷ್ಟಸ್ತವರಾಜ , ಅವರು ಸಂಕ್ಷಿಪ್ತವಾಗಿ ಬರೆದ ಗ್ರಂಥಗಳು . ವ್ಯಾಖ್ಯಾನದಿಂದಲೇ ಅದರ ಅರ್ಥ ತಿಳಿಯಬೇಕು . ಅವರ ವೇದಾಂತಕ್ಕೆ ಬೇಧಾಬೇಧ - ದ್ವೈತಾದ್ವೈತ ಎಂದು ಕರೆಯುತ್ತಾರೆ. ರಾಮಾನುಜರ ಸಿದ್ಧಾಂತಗಳನ್ನು ಬಹಳವಾಗಿ ಹೋಲುತ್ತದೆ .
(ಮಧ್ವರ ಪ್ರಕಾರ ಈ ಕೆಳಗಿನ ತತ್ವಗಳನ್ನು ಅನುಸರಿಸುವವರು ಮೋಕ್ಷಕ್ಕೆ ಅಥವಾ ಸ್ವರ್ಗಕ್ಕೆ ಅರ್ಹರಲ್ಲ-ಅವರು ಅಧಮರು.)
ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.