From Wikipedia, the free encyclopedia
ಸಾಮಾನ್ಯವಾಗಿ ಬ್ರೆಡ್ ಶಬ್ದವು ರೊಟ್ಟಿ ಎಂಬ ಅರ್ಥಕ್ಕಿಂತ ಹೆಚ್ಚಾಗಿ ಇಂಗ್ಲಿಷ ಉಚ್ಚಾರಣೆಯನ್ನೇ ಎಲ್ಲೆಡೆ ಪ್ರಚಲಿತಗೊಳಿಸಿದೆ.ಬ್ರೆಡ್ ಒಂದು ವ್ಯಾಪಾರಿ ಆಹಾರದ ಸರಕು ಎನ್ನುವಂತೆ ಮಾರಲಾಗುತ್ತದೆ.ಇದನ್ನು ಹಿಟ್ಟಿನಲ್ಲಿ ಮಾಡಿದ ಕಣಕವನ್ನು ನಿರಂತರವಾಗಿ ನಾದಿ ಅದನ್ನು ನೀರು ಬೆರೆಸಿದ ವಿವಿಧ ಮಸಾಲೆ ಪದಾರ್ಥಗಳ ಮಿಶ್ರಣದೊಂದಿಗೆ ಬೇಯಿಸುವುದರ ಮೂಲಕ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಈ ನಾದಿದ ಕಣಕವನ್ನು ಕಾವಲಿಯಲ್ಲಿಟ್ಟು ಸುಡುವ ಅಥವಾ ಬೇಯಿಸುವ ಪ್ರಕ್ರಿಯೆ ನಡೆಯುತ್ತದೆ.ಇನ್ನು ಕೆಲವು ಅಡುಗೆ ಮನೆಗಳಲ್ಲಿ ಬ್ರೆಡ್ ಗಳನ್ನು ಹಬೆ ಮೇಲೆ,ಕೆಂಡದ ಮೇಲೆ ಸುಡಲಾಗುತ್ತದೆ.ಇಲ್ಲವೆ ತೈಲ ರಹಿತ ಬಾಣಲೆ ಅಥವಾ ತವೆ ಮೇಲೆ ಸಿದ್ದಗೊಳಿಸಲಾಗುತ್ತದೆ. ಇದರ ತಯಾರಿಕೆಯಲ್ಲಿ ಹುಳಿ ಪದಾರ್ಥವನ್ನು ಸೇರಿಸಬಹುದು ಅಥವಾ ಸೇರಿಸದೇ ಇರಬಹುದು. ಉಪ್ಪು, ಕೊಬ್ಬಿನಾಂಶ ಮತ್ತುಹುಳಿಯಾಗುವ ಪದಾರ್ಥ ಗಳು ಉದಾಹರಣೆಗೆ ಈಸ್ಟ್ ಮತ್ತುಅಡುಗೆ ಸೋಡಾ ಇವು ಸಾಮಾನ್ಯ ಘಟಕಾಂಶಗಳೆನಿಸಿವೆ.ಆದರೂ ಬ್ರೆಡ್ ಇನ್ನಿತರ ಪದಾರ್ಥ ಅಂಶಗಳನ್ನೂ ಒಳಗೊಂಡಿರುತ್ತದೆ.ಉದಾಹರಣೆಗೆ ಹಾಲು, ಮೊಟ್ಟೆ, ಸಕ್ಕರೆ, ಮಸಾಲೆ, ಹಣ್ಣು (ಉದಾಹರಣೆಗಾಗಿ ಒಣದ್ರಾಕ್ಷಿ ಗಳು), ತರಕಾರಿಗಳು (ಉದಾಹರಣೆಗೆ ಈರುಳ್ಳಿ), ನೆಲಗಡಲೆ (ಉದಾಹರಣೆಗೆ ಸುವಾಸನಾ ಗೆರಟು) ಅಥವಾ ದ್ವಿದಳ ಬೀಜಗಳು (ಉದಾಹರಣೆಗೆ ಗಸಗಸೆ ಬೀಜಗಳು ). ಬ್ರೆಡ್ ಅತ್ಯಂತ ಹಳೆಯದಾದ ಬೇಯಿಸಿದ ಆಹಾರಗಳಲ್ಲಿ ಒಂದಾಗಿದೆ.ಇದನ್ನು ನವಶಿಲಾಯುಗದ ಹಿಂದೆಯೂ ಗುರುತಿಸಲಾಗಿದೆ.ಇದನ್ನು ಆಡು ಮಾತಿನಲ್ಲಿ "ದಿನ ನಿತ್ಯದ ಬದುಕಿನ ಬುತ್ತಿ" ಎಂದೂ ಹೇಳುವ ವಾಡಿಕೆ ಇದೆ. ಬ್ರೆಡ್ ತಯಾರಿಕೆಯಲ್ಲಿ ಹುಳಿ ಬೆರಸುವಿಕೆಯು ಅರ್ವಾಚೀನ ಇತಿಹಾಸದ ವೇಳೆಗೆ ಪ್ರಚಲಿತದಲ್ಲಿತ್ತು. ತಾಜಾ ಬ್ರೆಡ್ ಅದರ ರುಚಿ,ಸುವಾಸನೆ,ಗುಣಮಟ್ಟ,ಅದರ ಗೋಚರತೆ ಮತ್ತು ಅದರ ಮೃದು ಎಳೆಯ ರಚನೆಯ ಮೇಲೆ ಅದರ ಜನಪ್ರಿಯತೆ ಪಡೆಯುತ್ತದೆ. ಅದರ ತಾಜಾತನವನ್ನು ಕಾಯ್ದುಕೊಳ್ಳುವಲ್ಲಿ ಅದರ ರುಚಿ ಮತ್ತು ಮಹತ್ವ ಅಡಗಿದೆ. ಗಟ್ಟಿಯಾದ ಅಥವಾ ಒಣಗಿ ಹೋದ ಅದನ್ನು ತಂಗಳು ಎನ್ನಲಾಗುತ್ತದೆ. ಆಧುನಿಕ ಬ್ರೆಡ್ ನ್ನು ಹಲವು ಬಾರಿ ವಿಶೇಷ ಕಾಗದ ಅಥವಾ ಪ್ಲ್ಯಾಸ್ಟಿಕ್ ತೆಳು ಹಾಳೆಯಂತಹ ಅಥವಾ ಬ್ರೆಡ್ ಬಾಕ್ಸ್ ನಲ್ಲಿಟ್ಟು ಅದನ್ನು ಒಣಗದಂತೆ ತಡೆಯಲಾಗುತ್ತದೆ. ಬೆಚ್ಚಗಿನ,ಆರ್ದ್ರ ವಾತಾವರಣದಲ್ಲಿಟ್ಟ ಬ್ರೆಡ್ ಸಾಮಾನ್ಯವಾಗಿ ಫಂಗಸ್ ಅಥವಾ ಬೂಸ್ಟ್ ನಂತಹ ಎಳೆಯನ್ನು ಅದರ ಮೇಲೆ ಬೆಳೆಯುವಂತೆ ಮಾಡುವುದು ಸಹಜ. ಶೀತ ಪೆಟ್ಟಿಗೆಯ ಕಡಿಮೆ ಉಷ್ಣತೆಯಲ್ಲಿಟ್ಟ ಬ್ರೆಡ್ ,ಕೊಠಡಿಯ ಉಷ್ಣತೆಯಲ್ಲಿಟ್ಟ ಬ್ರೆಡ್ ಗಿಂತ ಕಡಿಮೆ ವೇಗದಲ್ಲಿ ಹಾಳಾಗುತ್ತದೆ.ಇಲ್ಲಿ ಅದರ ಬೇಗ ಹಾಳಾಗುವ ಗುಣದಿಂದಾಗಿ ಅದು ನಿರುಪಯುಕ್ತವಾಗುತ್ತದೆ. ಬ್ರೆಡ್ ಒಳಗಿನ ಭಾಗವನ್ನು ಬೇಯಿಸಿದ ಮತ್ತು ಇನ್ನುಳಿದ ಪಾಕ ಪ್ರವೀಣ ವೃತ್ತಿಪರರು ಎಂದು ಅದರ ಪುಟ್ಟ ಭಾಗ ವನ್ನು ಮೆದುಗೊಳಿಸಿರುತ್ತಾರೆ.ಆದರೆ ಇದನ್ನು ಸಣ್ಣ ಹೋಳುಗಳು ಎಂದು ಗೊಂದಲಕ್ಕೀಡಾಗಬಾರದು ಅದು ಫಳಕುಗಳಿಗಿಂತ ಮೆದು ಎಳೆಯಂತಹದ್ದು. ಹೊರಗಿನ ಗಟ್ಟಿ ಪೊರೆಭಾಗವನ್ನು ಕ್ರಸ್ಟ್ ಅಥವಾ ಗಟ್ಟಿ ಪೊರೆ ಎನ್ನಲಾಗುತ್ತದೆ.
ಈ ಶಬ್ದಕ್ಕೆ ತನ್ನದೇ ಆದ ಅರ್ಥಗಳಿವೆ, ಹಳೆ ಇಂಗ್ಲಿಷ್ ಪದ ಬ್ರೆಡ್ ,ಸಾಮಾನ್ಯವಾಗಿ ವಿವಿಧ ಪ್ರಕಾರಗಳಲ್ಲಿ ಅಂದರೆ ಜರ್ಮನಿಯ ಭಾಷೆಗಳಲ್ಲಿ ; ಉದಾಹರಣೆಗೆ ಫ್ರಿಸಿಯನ್ ಬ್ರೆಯಾ , ಡಚ್ ಬ್ರೂಡ್ , ಜರ್ಮನ್ ಬ್ರಾಟ್ , ಸ್ವಿಡಿಶ್ ಬ್ರೊಡ್ , ನಾರ್ವೆಯೆನ್ ಮತ್ತುಡ್ಯಾನಿಶ್ ಬ್ರೊಡ್ ; ಇದನ್ನು ವಿಶೇಷವಾಗಿ ಬ್ರೆವ್ ಎನ್ನುವ ಪದಮೂಲದಿಂದ ಪಡೆಯಲಾಗಿದೆ ಎಂದು ಹೇಳಲಾಗುತ್ತದೆ. ಹೇಗೆಯಾದರೂ,ಇದು ಇನ್ನಿತರ ಶಬ್ದಗಳಿಗೆ ಹೋಲಿಕೆಯಾಗುತ್ತದೆ,ಇದರ ಮೂಲ ಬೇರು (ಬಿರುಕು) ಬ್ರೇಕ್ , ಅಂದರೆ ಇದನ್ನು ಆರಂಭದಲ್ಲಿ ಮುರಿದ ತುಣುಕು, ತುಕುಡಿಗಳು , ಅಥವಾ ಬ್ರೆಡ್ತುಣುಕುಗಳು ಬಿಟ್ಸ್ , ಲ್ಯಾಟಿನ್ ಕ್ರಸ್ಟುಮ್ ,ಅಂದರೆ ಜೋಡಣಾ ತುಕುಡಿ ಎಳೆಗಳು ಎನ್ನಬಹುದು.ಆದರೆ ಇದು 12 ನೆಯ ಶತಮಾನದ ವರೆಗೂ ಇದಕ್ಕೆ ಸಾಮಾನ್ಯವೆನ್ನುವ ಸಾರ್ವತ್ರಿಕ ಹೆಸರೆಂದರೆ ಬ್ರೆಡ್ ಆಫ್ ಹಾಫ್ (𐌷𐌻𐌰𐌹𐍆𐍃 [hlaifs] ಗೊಥಿಕ್ಸ್ನಲ್ಲಿ: ಆಧುನಿಕ ಇಂಗ್ಲಿಷ್ ನಲ್ಲಿಬ್ರೆಡ್ ತುಂಡು ಭಾಗ ಲೋಫ್ ), ಇದು ಜರ್ಮನಿಯ ಅತ್ಯಂತ ಹಳೆಯದಾದಟೆಟೊನಿಕ್ ಎಂಬ ಹೆಸರನ್ನು ಬ್ರೆಡ್ ಗೆ ಪರ್ಯಾಯವಾಗಿ ಪಡೆದಿದೆ. ಹಳೆಯ ಉನ್ನತ ಮಟ್ಟದ ಜರ್ಮನ್ ಹ್ಲೇಬ್ ಮತ್ತು ಆಧುನಿಕ ಜರ್ಮನ್ ಲೈಬ್ , ಪೊಲಿಶ್ ಕ್ಲೆಬ್, ರಶಿಯನ್ хлеб (khleb) ಇವೆಲ್ಲವುಗಳನ್ನು ಇಂಡೊ-ಯುರೊಪಿಯನ್ಶಬ್ದವಾದ "ಲೋಫ್" ಅಥವಾ ಬ್ರೆಡ್ ತುಕುಡಿ ಎಂಬುದರಿಂದ ತೆಗೆದುಕೊಳ್ಳಲಾಗಿದೆ. ಫಿನ್ನಿಶ್ ಲೆಯಿಪಾ , ಎಸ್ಟೊನಿಯನ್ ಲೆಯಿಬ್ ,ಇವುಗಳನ್ನು ಇಂಡೊ-ಯುರೊಪಿಯನ್ ಅಲ್ಲದ ಆದರೆ ಅದೇ ಮೂಲದಿಂದ ಎರವಲಾಗಿ ಪಡೆಯಲಾಗಿದೆ.
ಬ್ರೆಡ್ ಅತ್ಯಂತ ಪುರಾತನವೆನ್ನಲಾದ ನವಶಿಲಾಯುಗದ ಆಹಾರದ ಚಕ್ರದಲ್ಲಿ ಕಾಣ ಸಿಗುತ್ತದೆ. ಮೊದಲ ಬಾರಿಗೆ ಬ್ರೆಡ್ ನ ಬೇಯಿಸಿದ ಅವತರಣಿಕೆಯು ಬಹುಶಃ ಧಾನ್ಯದ-ಕಲಸಿದ ಹಿಟ್ಟು ಇದನ್ನು ನೆಲಗಡಲೆಯಂಥ ಕಾಳುಗಳ ಹಿಟ್ಟಿನಿಂದ ಪ್ರಯೋಗ ಮಾಡಲಾಗಿತ್ತು.ಆದರೆ ಇದು ಆಕಸ್ಮಿಕ ಎನ್ನುವಂತೆ ಅಥವಾ ಉದ್ದೇಶಪೂರ್ವಕವಾಗಿ ನೀರು ಮತ್ತು ಇತರ ಧಾನ್ಯಹಿಟ್ಟುಗಳೊಂದಿಗೆ ಬೇಯಿಸಿದಾಗ ಇದು ಬ್ರೆಡ್ ರೂಪ ಪಡೆದಿರಬೇಕು. ಹೀಗೆ ಈಸ್ಟ್ ಎಲ್ಲೆಡೆಗೂ ಸರ್ವಾಂತರಯಾಮಿಯಾಗಿರುತ್ತದೆ.ದ್ವಿದಳ ಧಾನ್ಯದ ಕಾಳುಗಳ ಕಲಸಿದ ಹಿಟ್ಟು ನೈಸರ್ಗಿಕವಾಗಿ ಹುಳಿಯನ್ನು [೧] ತಡೆಯುತ್ತದೆ. ಆರಂಭಿಕ ಬ್ರೆಡ್ ತಯಾರಿಕೆಯಲ್ಲಿ ಬಹುಮೂಲದ ಹುಳಿ ಪದಾರ್ಥಗಳ ವಿಭಿನ್ನ ಪ್ರಕಾರಗಳು ಲಭ್ಯವಿದ್ದವು. ಗಾಳಿ ತುಂಬಿದ ಅಥವಾ ಅಮ್ಲಜನಕ ಮೂಲದ ಈಸ್ಟ್ ಗಳನ್ನು ಕೆಲ ಕಾಲ ಗಾಳಿಗೆ ಒಡ್ಡಿದ ಕಲಸಿದ ಹಿಟ್ಟಿನ ಕಣಕದಿಂದಲೂ ಪಡೆಯಬಹುದು. ಪ್ಲಿನಿ ದಿ ಎಲ್ಡರ್ ವರದಿ ಮಾಡಿದ ಪ್ರಕಾರ ಗಾಲ್ಸ್ (ರೊಮನ್ ರು) ಮತ್ತು ಇಬೆರಿಯನ್ಸ್ (ರೊಮನ್ ಸಂಸ್ಕೃತಿಯ ಗುಂಪು) ಬೀರ್ ನಿಂದ ತೆಗೆದ ನೊರೆಯನ್ನು ಹಿಟ್ಟು ಮಾಡಿ ಅದರ ಮೂಲಕ "ಇನ್ನಿತರಿಗಿಂತ ಅತ್ಯಂತ ಹಗುರಾದ ಬ್ರೆಡ್ ತಯಾರಿಸಲು ಸಮರ್ಥರಾದರು. ಪುರಾತನ ಜಗತ್ತಿನಲ್ಲಿ ಬೀರ್ ಗಿಂತ ದ್ರಾಕ್ಷಿರಸ ಮತ್ತು ಹಿಟ್ಟಿನಿಂದ ತಯಾರಿಸಿ ಅದನ್ನು ಕಳೆತುಹೋಗುವಂತೆ ಇಲ್ಲವೆ ಎಂಜೈಮ್ ಗಳ ಕಿಣ್ವಗಳನ್ನು ಉದ್ದೀಪನಗೊಳಿಸಲಾಗುತಿತ್ತು.ಅದಲ್ಲದೇ ಗೋದಿ ಹೊಟ್ಟನ್ನು ವೈನ್ ನಲ್ಲಿ ಕಿಣ್ವಗಳಾಗಿಸಿದಾಗ ಅದು ಈಸ್ಟ್ ಆಗಿ ಪರಿವರ್ತಿತವಾಗುತ್ತಿತ್ತು. ಈಸ್ಟ್ ಅಥವಾ ಹುಳಿಯನ್ನು ಬ್ರೆಡ್ ಗೆ ಸೇರಿಸಲು ಕಣಕದ ಒಂದು ಭಾಗವನ್ನು ಅಥವಾ ಸಣ್ಣ ತುಣುಕನ್ನು ರಾತ್ರಿ ಗಾಳಿಗೆ ತೆರೆದಿಡಲಾಗುತಿತ್ತು.ಅದು ಬೆರೆಸುವ ಹುಳಿಗೆ ಆರಂಭಿಕ ವಾಗಿ ಕೆಲಸ ಮಾಡುವ [೨] ಮೂಲವಾಗುತ್ತಿತ್ತು. ಅತ್ಯಂತ ಪ್ರಮುಖ ಘಟನೆಯೆನ್ನುವಂತೆ 1961 ರಲ್ಲಿ ಕೊರ್ಲೆವುಡ್ ಫ್ರೆಡ್ ಪ್ರೊಸೆಸ್ ಎಂಬುದನ್ನು ಅಭಿವೃದ್ಧಿಪಡಿಸಲಾಯಿತು.ಇದು ಕಿಣ್ವಗೊಳ್ಳುವ ಅಥವಾ ಫರ್ಮೆಂಟೇಶನ್ ನ ಸಮಯವನ್ನು ಉಳಿಸಿ ಶೀಘ್ರದಲ್ಲಿಯೇ ಯಾಂತ್ರೀಕತ ವಿಧಾನವನ್ನು ಕಣಕದ ಬ್ರೆಡ್ ತಯಾರಿಕೆಯಲ್ಲಿ ಪರಿಚಯಿಸಿತು. ಈ ಸಂಸ್ಕರಣೆಯಲ್ಲಿ ಅತಿ-ಹೆಚ್ಚಿನ ಶಕ್ತಿ ಮಿಶ್ರಣಕ್ಕೆ ಕಳಪೆ ಧಾನ್ಯಗಳ ಬಳಕೆ ಇಂದು ವಿಶ್ವಾದ್ಯಂತ ಕಾರ್ಖಾನೆಗಳಲ್ಲಿ ವ್ಯಾಪಕವಾಗಿದೆ. ಇತ್ತೀಚೆಗೆ ಸ್ಥಳೀಯ ಬ್ರೆಡ್ ತಯಾರಕರು ತಮ್ಮ ಪ್ರದೇಶ ವ್ಯಾಪ್ತಿಯಲ್ಲಿಯೇ ಜನಪ್ರಿಯತೆ ಗಳಿಸಿದ್ದಾರೆ.
ಇದೊಂದು ಆಹಾರ ಕ್ರಮದ ಚಕ್ರವಾಗಿ ಇತಿಹಾಸ ಪೂರ್ವ ಮತ್ತು ಪ್ರಸಕ್ತ ಕಾಲದಲ್ಲಿ ಪಾಶ್ಚಿಮಾತ್ಯ ದ ಹತ್ತಿರ ಮತ್ತು ಮಧ್ಯ ಪೂರ್ವ ಪ್ರಾಂತ್ಯಗಳಲ್ಲಿ ರೂಢಿಗತವಾಗಿದೆ.ಹೀಗೆ ಬ್ರೆಡ್ ಪೌಷ್ಟಿಕ ಆಹಾರಕ್ಕಿಂತ ಹೆಚ್ಚಿನ ಸ್ಥಾನ ಗಳಿಸಿದೆ. ದೇವರ ಪ್ರಾರ್ಥನೆ ಸಹ "ದೇವರೇ ನನಗಿಂದು ಇಂದಿನ ರೊಟ್ಟಿಯನ್ನು ಕರುಣಿಸು."ಎಂಬುದನ್ನು ನಾವು ಕೇಳಿದ್ದೇವೆ.ಇಲ್ಲಿ "ಬ್ರೆಡ್ " ಅಂದರೆ ಸಾಮಾನ್ಯವಾಗಿ ಅಗತ್ಯತೆ ಎಂದಾಯಿತು. ಕ್ರಿಶ್ಚಿಯನ್ ಧರ್ಮದಲ್ಲಿ ಬ್ರೆಡ್ ಬಹಳಷ್ಟು ಮಹತ್ವ ಪಡೆದಿದೆ.ಇದನ್ನು(ವೈನ್ ಜೊತೆ ಜೊತೆಗಿಡುವಪ್ರಭುವಿನ ಆಹಾರ ಎಂದೂ ಹೇಳಲಾಗಿದೆ; ನೋಡಿ ಪವಿತ್ರ ಧಾರ್ಮಿಕತೆಯ ಬ್ರೆಡ್ ಕೃತಿ). ಈ ಕಂಪ್ಯಾನಿಯನ್ (ಸಹವರ್ತಿ) ಎ6ಬ ಶಬ್ದವು ಲ್ಯಾಟಿನ್ ನ ಕಮ್- "ಜೊತೆ" + ಪ್ಯಾನಿಸ್ ಅಂದರೆ "ಬ್ರೆಡ್" ಎಂದೂ ಅರ್ಥೈಸಲಾಗುತ್ತದೆ. ರೊಮನ್ ಕವಿ ಜುವೆನಾಲ್ ತನ್ನ ಕವನದಲ್ಲಿ ರಾಜಕಾರಣಿಗಳು ಮತ್ತು ಸಾರ್ವಜನಿಕರನ್ನು ವಿಡಂಬನಾ ರೀತಿಯಲ್ಲಿ ಚಿತ್ರಿಸಿದ್ದಾನೆ.ಇವರೆಲ್ಲ ಕೇವಲ "ಪ್ಯಾನೆಮ್ ಎಟ್ ಸರ್ಸೆನ್ಸೆಸ್ " (ಬ್ರೆಡ್ ಮತ್ತು ಸರ್ಕಸ್ ಗಳಿಗಾಗಿ ಪಾಡು ಪಡುವವರು ಎಂದಿದ್ದಾನೆ.) ಇಸ್ರೇಲ್ ನಲ್ಲಿ ಕಾರ್ಮಿಕರು ತಮ್ಮ ಪ್ರತಿಭಟನೆಗಳನ್ನು "ಲೆಖೆಮ್ ,ಅವೊಡಾ"[ಬ್ರೆಡ್ ,ವರ್ಕ್ ಅನ್ನ-ಕೆಲಸ]ಎಂಬ ಘೋಷಣೆ ಕೂಗುವುದು ಸಹಜವಾಗಿದೆ.ಸುಮಾರು 1950 ರಿಂದಲೂ ಬೆಟ್ನಿಕ್ ಸಮುದಾಯದ ಜನರು ಹಣಕ್ಕೆ ಸೌಮ್ಯೋಕ್ತಿಯಾಗಿ ಬ್ರೆಡ್ ಶಬ್ದವನ್ನು ಬಳಸುತ್ತಾರೆ. ಲಂಡನ್ ನ ಕಾರ್ಮಿಕರು ಕೊಕ್ನಿ ರೈಮ್ಹಿಂಗ್ ಸ್ಲ್ಯಾಂಗ್ , ಎಂಬ ಹಾಡಿನೊಂದಿಗೆ ಪ್ರತಿಭಟನೆ ಮಾಡಿ ತಮ್ಮ ಬ್ರೆಡ್ ಮತ್ತು ಅನ್ನದ ಬಗ್ಗೆ ಅದನ್ನು ಹಣ ಎನ್ನುವಂತೆ ಚಿತ್ರಿಸುತ್ತಾರೆ.ಇದನ್ನು ಬ್ರೆಡ್ ಮತ್ತು ಜೋನುತುಪ್ಪದಿಂದ ಮಿಶ್ರಣ ಮಾಡಿದ್ದು ಎಂದು [೩] ಹೇಳಲಾಗುತ್ತದೆ. ಸದ್ಯ ಬ್ರೆಡ್ ಎಂಬ ಶಬ್ದವು ಸಾಮಾನ್ಯವಾಗಿ ವಿಶ್ವಾದ್ಯಂತ ಇಂಗ್ಲಿಷ್ ಮಾತನಾಡುವ ಎಲ್ಲಾ ದೇಶಗಳಲ್ಲಿ ಇದನ್ನು ಹಣಕ್ಕೆ ಸಮಾನರೂಪದಲ್ಲಿ ಕಾಣಲಾಗುತ್ತದೆ.(ಇದನ್ನು ನಾದಿದ ಕಣಕ ಎಂದೂ ಹೇಳಲಾಗುತ್ತದೆ,) ಸಾಂಸ್ಕೃತಿಕ ಮಹತ್ವ ಪರಿಗಣಿಸಿದರೆ "ಬ್ರೆಡ್ " ಆಡು ಮಾತು ಅಥವಾ ಗ್ರಾಮ್ಯ ಶಬ್ದಗಳಿಗಿಂತ ಹಿಂದೆ ಹೋಗುತ್ತದೆ.ಅಂದರೆ ಇದನ್ನು ಬದುಕಿನ ಮೂಲಭೂತ ಅಗತ್ಯಗಳಿಗಾಗಿ ರೂಪಕವಾಗಿಯೂ ಬಳಸಲಾಗುತ್ತದೆ. ಓರ್ವ " ಬ್ರೆಡ್ ವಿನ್ನರ್ " ಅಂದರೆ ಆ ಮನೆಗೆ ಮೂಲಭೂತವಾಗಿ ಆದಾಯ ತರುವವ ಎಂದು ಹೇಳಲಾಗುತ್ತದೆ.ಆದರೆ ಈತ ಮನೆಗೆ ತರುವ ಬ್ರೆಡ್ ಅಥವಾ ಅಡುಗೆ ಸಾಮಾನುಗಳ ತರುವವ ಕೆಲಸದ ಜೊತೆಗೆ ಅರ್ಥೈಸಿ ಹೋಲಿಸಲಾಗುವುದಿಲ್ಲ. ಇದರಲ್ಲಿ ಪದ ಗುಚ್ಛ "ಪುಟಿಂಗ್ ಬ್ರೆಡ್ ಆನ್ ದಿ ಟೇಬಲ್ "ಇದರರ್ಥ ಟೇಬಲ್ ಮೇಲೆ ಬ್ರೆಡ್ ತಂದಿಡುವವನಲ್ಲ. ಆದರೆ ಈತ ಕುಟುಂಬದ ಬದುಕಿಗೆ ಬೇಕಾಗುವ ಆದಾಯವನ್ನು ಗಳಿಸುವವ ಎಂದೇ ಪರಿಗಣಿಸಲಾಗುತ್ತದೆ. ಅತ್ಯಂತ ಜನಪ್ರಿಯ ಮತ್ತು ಕ್ರಾಂತಿಕಾರಿ ಆವಿಷ್ಕಾರದಲ್ಲಿ ಕೂಡಾ ಇದನ್ನು "ದಿ ಗ್ರೇಟೆಸ್ಟ್ ಥಿಂಗ್ ಸಿನ್ಸ್ ಸ್ಲೈಸ್ಡ್ ಬ್ರೆಡ್ "ಇದನ್ನು ಅಭಿವೃದ್ಧಿಪರ ಸಂಶೋಧನೆಗಳಿಗೆ ಪರ್ಯಾಯವಾಗಿ ಬಳಸಲಾಗುತ್ತದೆ. ಅದೇ ತೆರನಾಗಿ USSR ನಲ್ಲಿ 1917,ರ ಸುಮಾರಿಗೆ ಲೆನಿನ್ ಮತ್ತು ಆತನ ಹಿಂಬಾಲಕರಾಗಿದ್ದ ಬೊಲ್ಶೆವಿಕ್ಸ್ ಅವರೆಲ್ಲಾ ಸೇರಿ "ಶಾಂತಿ, ಭೂಮಿ, ಮತ್ತು ಬ್ರೆಡ್."ನೀಡುವುದಾಗಿ ಆಶ್ವಾಶನೆ ನೀಡುವ ಮೂಲಕ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದರು.[೪][೫] ಇಲ್ಲಿ "ಬ್ರೆಡ್ ಬಾಸ್ಕೆಟ್" ಎಂಬ ಶಬ್ದವನ್ನು ಕೃಷಿಯಲ್ಲಿ ಅತ್ಯುತ್ತಮ ಇಳುವರಿ ತರುವ ಭೂಪ್ರದೇಶಕ್ಕೆ ಹೋಲಿಸಲಾಗುತ್ತದೆ. ಸ್ಲ್ಯಾವಿಕ್ ಸಂಸ್ಕೃತಿಯಲ್ಲಿಬ್ರೆಡ್ ಅಂಡ್ ಸಾಲ್ಟ್ ಇದನ್ನು ಅತಿಥಿಗಳ ಸ್ವಾಗತಕ್ಕೆ ಬಳಸಲಾಗುತ್ತದೆ. ಈಜಿಪ್ತಿಯನ್ ಅರೆಬಿಕ್ ,ನಲ್ಲಿ ಈ ಶಬ್ದವನ್ನು ಬದುಕು ಎಂಬರ್ಥದಲ್ಲಿ ಬಳಸಲಾಗುತ್ತದೆ. ಐಯಿಶ್, ಅಂದರೆ ಸಂಪತ್ತು ಎಂದೂ ಸಹ ಬ್ರೆಡ್ ಗೆ ಸಮನಾಗಿ ಪರ್ಯಾಯ ಪದವಾಗಿ ಬಳಸಲಾಗುತ್ತದೆ.(ಇದನ್ನು ಔಪಚಾರಿಕವಾಗಿ [ಬ್ರೆಡ್ ನ ತುಣುಕು] 'ಖೌಬ್ಜ್')ಎನ್ನಲಾಗುತ್ತದೆ. ಇಂಡಿಯಾ, ಭಾರತದಲ್ಲಿ ಬದುಕಿನ ಮೂಲಭೂತ ಅಗತ್ಯಗಳಲ್ಲಿ ಇದನ್ನು "ರೋಟಿ" ಕಪಡಾ ಔರ್ ಮಕಾನ್ " [ಬ್ರೆಡ್, ಬಟ್ಟೆ ಮತ್ತೆ ಮನೆ]ಎಂದು ವ್ಯಾಖ್ಯಾನಿಸಲಾಗುತ್ತದೆ. ರಾಜಕೀಯವಾಗಿಯೂ ಬ್ರೆಡ್ ಅತ್ಯಂತ ಪರಿಕಲ್ಪಿತ ಉದಾಹರಣೆಯಾಗಿದೆ. ಹತ್ತೊಂಬತ್ತನೆಯ ಶತಮಾನದಲ್ಲಿ ಬ್ರಿಟೇನ್ ನಲ್ಲಿ ಮುಸುಕಿನ ಜೋಳದ ಕಾನೂನು ಕ್ರಮದಿಂದಾಗಿ ಬ್ರೆಡ್ ನ ಬೆಲೆ ಗಗನಕ್ಕೇರಿದಾಗ ಅತ್ಯಧಿಕ ರಾಜಕೀಯ ಮತ್ತು ಸಾಮಾಜಿಕ ಬಿಕ್ಕಟ್ಟುಗಳನ್ನು ಸೃಷ್ಟಿಸಿತು.ಇದೇ ವಿಷಯಕ್ಕೆ ಬಿಸಿ ಚರ್ಚೆ ಗಳು ನಡೆದು ಮುಕ್ತ ವ್ಯಾಪಾರ ಮತ್ತು ಆಹಾರ ಭದ್ರತಾ-ರಕ್ಷಣಾ ವಿಷಯದ ಬಗ್ಗೆ ತೀವ್ರ ಚರ್ಚೆಗಳಾದವು. ಹದಿಮೂರನೆಯ ಶತಮಾನದಲ್ಲಿದ್ದ ಅಸೈಜ್ ಆಫ್ ಬ್ರೆಡ್ ಅಂಡ್ ಅಲೆ ಕಾನೂನು ಪುಸ್ತಕಗಳು ಬ್ರೆಡ್ ನ ಮಹತ್ವವನ್ನು ಲಿಖಿತ ರೂಪದಲ್ಲಿ ದಾಖಲಿಸಿ ಇದರ ಉತ್ಪಾದನೆಯಲ್ಲಾಗುವ ಲೋಪಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕ್ರಮವನ್ನು ಉಲ್ಲೇಖಿಸಿವೆ.ಅದಲ್ಲದೇ ಇದರ ತಯಾರಕರು ಯಾವುದೇ ನಿಯಮ ಮೀರಬಾರದೆಂಬ ಬಗ್ಗೆ ಇಂಗ್ಲಿಷ್ ಕಾನೂನು ಪುಸ್ತಕ ಮ್ಯಾಗ್ನಾ ಕಾರ್ಟಾ ದಲ್ಲಿಯೂ ದಾಖಲಿಸಲಾಗಿದೆ.
ಬ್ರೆಡ್ ಒಂದು ವ್ಯಾಪಾರೀ ಆಹಾರ ಸರಕಾಗಿ ಯುರೊಪ್ ನಲ್ಲಿ,ಜನಪ್ರಿಯವಾಗಿದೆ. ಯುರೊಪಿಯನ್ ಮೂಲದ ಸಂಸ್ಕೃತಿಗಳಾದ- ಅಮೆರಿಕಾಸ್, ಮತ್ತು ದಿಮಿಡ್ಲ್ ಈಸ್ಟ್ /ನಾರ್ತ್ ಆಫ್ರಿಕಾ, ಆದರೆ ಈಸ್ಟ್ ಆಫ್ರಿಕಾದಲ್ಲಿ ಇದಕ್ಕೆ ವಿರೋಧವಿದ್ದು ಅಲ್ಲಿ ಅಕ್ಕಿ ಯನ್ನು ಮಾರಾಟ ಆಹಾರ ಸರಕಾಗಿ ಪರಿಗಣಿಸಲಾಗುತ್ತದೆ. ಬ್ರೆಡ್ ನ್ನು ಸಾಮಾನ್ಯವಾಗಿಗೋದಿ-ಹಿಟ್ಟು ಗೋದಿ ಕಣಕ ಇತ್ಯಾದಿಗಳಲ್ಲಿ ಯುಕ್ತ ಪ್ರಮಾಣದ ಈಸ್ಟ್ ಬೆರಸಿ ತಯಾರಿಸಲಾಗುತ್ತದೆ.ಈಸ್ಟ್ ನೊಂದಿಗೆ ಮಿಶ್ರಣವಾದ ಇದನ್ನು ನಾದಿದ ನಂತರ ಕಾವಲಿಒಲೆಯಲ್ಲಿ ಬೇಯಿಸಲಾಗುತ್ತದೆ. ಅದರಲ್ಲಿರುವ ವ್ಯಾಪಕ ಪ್ರಮಾಣದ ಗೋದಿ ಅಂಟು-ಜಿಗಿ (ಇದು ನಾದಿದ ಕಣಕಕ್ಕೆ ಸ್ಪಾಂಜ್ ನಂತಹ ಗುಣ ಮತ್ತು ಸ್ಥಿತಿಸ್ಥಾಪಕತ್ವ ನೀಡುತ್ತದೆ.), ಸಾಮಾನ್ಯ ಗೋದಿ (ಇದನ್ನು ಬ್ರೆಡ್ ನ ಗೋದಿ ಎನ್ನಲಾಗುತ್ತದೆ.)ಯಾಕೆಂದರೆ ಬ್ರೆಡ್ ತಯಾರಿಕೆಯಲ್ಲಿ ಅತ್ಯಂತ ಸಾಮಾನ್ಯ ಧಾನ್ಯ ಎಂದರೆ ಗೋದಿ. ಇದನ್ನು ಇನ್ನುಳಿದ ಗೋದಿ ಹಿಟ್ಟು ಮೂಲದಿಂದಲೂ ತಯಾರಿಸಲಾಗುತ್ತದೆ.(ಉದಾಹರಣೆಗೆಗಟ್ಟಿ ಕಾಳಿನ ಶೇವಿಗೆ ಗೋದಿ, ಒಂದು ಬಗೆಯ ಗೋದಿ ಜಾತಿ ಮತ್ತು ಮೇವಿಗಾಗಿ ಬೆಳೆಸುವ ಗೋದಿ), ಚಿಕ್ಕ ಗೋದಿ, ಬಾರ್ಲಿ, ಮೆಕ್ಕೆ ಜೋಳ (ಅಥವಾ ಜೋಳ ), ಮತ್ತು ಓಟ್ಗಳು, ಆದರೆ ಇಲ್ಲಿ ಒಂದೊಕ್ಕೊಂದು ಜೋಡಿ ಮಿಶ್ರಣದಲ್ಲಿ ಬಳಸುವುದು ಕಡಿಮೆ. ಯಾವಾಗಲೂ ಸಾಮಾನ್ಯ ಗೋದಿಯು ಅತ್ಯುತ್ತಮ ಬ್ರೆಡ್ ತಯಾರಿಕೆಗೆ ಅಗತ್ಯವಿದೆ,ಇನ್ನುಳಿದ ಗೋದಿ ತಳಿಗಳು ಒಳ್ಳೆಯ ಬ್ರೆಡ್ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತವೆ. ಸ್ಪೆಲ್ಟ್ ಎಂಬ ಜಾತಿಯ ಗೋದಿ ಬಳಸಿ ತಯಾರಿಸಿದ ಬ್ರೆಡ್ (ಡಿಂಕೆಲ್ಬೊರ್ಟ್ )ನ್ನು ಜರ್ಮನಿಯಲ್ಲಿ ಬಳಸಲಾಗುತ್ತದೆ.ಎಮ್ಮಾರ್ ಜಾತಿಯ ಗೋದಿ ತಳಿಯ ಗಟ್ಟಿ ಕಾಳಿನಿಂದಾದ ಬ್ರೆಡ್ ನ್ನು ಮಾರಾಟವಾಗುತಿದ್ದ ಆಹಾರ ಸರಕನ್ನು ಪುರಾತನ ಈಜಿಪ್ತ್ ನಲ್ಲಿ ಬಳಸಲಾಗಿತ್ತು. ಕೆನಡಿಯನ್ ಬ್ರೆಡ್ ಅದರ ಹೃದಯಕ್ಕೆ ಸಹಾಯವಾಗುವ ವಿಟಾಮಿನ್ ಗಳಿವೆ,ಕೆನಡಾ ದೇಶದಲ್ಲಿ ಬೆಳೆಯುವ ಗೋದಿಯಲ್ಲಿ ಅತ್ಯಂತ ಹೆಚ್ಚು ಪ್ರೊಟೀನ್ ಮಟ್ಟವಿದೆ.
ಶೀಘ್ರದಲ್ಲಿ ತಯಾರಾಗುವ ಬ್ರೆಡ್ ಗಳು ಸಾಮಾನ್ಯವಾಗಿ ರಾಸಾಯನಿಕವಾಗಿ ಹುಳಿಯನ್ನು ಮಿಶ್ರಣಗೊಳಿಸಿ ಮಾಡಲಾಗುತ್ತದೆ.ಇವುಗಳಲ್ಲಿ ಎರಡನ್ನೂ ಬೇಕಿಂಗ್ ಪಾವ್ಡರ್ ಮತ್ತು ಬೇಕಿಂಗ್ ಸೋಡಾ ಅಲ್ಲದೇ ಇನ್ನುಳಿದ ಆಮ್ಲೀಯ ಪದಾರ್ಥಗಳನ್ನು ಕ್ಷಾರೀಯ ರೂಪದಲ್ಲಿ ಬೆರಸಿ ಅದನ್ನು ಕೂಡಲೇ ಮಾಡಲಾಗುತ್ತದೆ. ಇದಕ್ಕೆ ಉದಾಹರಣೆಗಳೆಂದರೆ: ಪ್ಯಾನ್ ಕೇಕ್ಸ್ ಮತ್ತು ತೆಳುವಾದ ಬ್ರೆಡ್ ಗಳು, ಮೆದುವಾದ ಬ್ರೆಡ್ ಗಳು ಮತ್ತುಗಜ್ಜರಿ ಕೇಕ್ , ಬಾಸ್ಟನ್ ಕಂದು ಬ್ರೆಡ್ , ಮತ್ತುದುಂಡನೆಆಕಾರದ ಮತ್ತುಬಾಳೆಹಣ್ಣಿನ ಬ್ರೆಡ್ .
ಬ್ರೆಡ್ ತಯಾರಿಕೆಯಲ್ಲಿ ನಾದಿದ ಹಿಟ್ಟಿನ ಕಣಕದ ಪ್ರಮಾಣವು ಇದರ ಮಿಶ್ರಣದಲ್ಲಿ ಮಹತ್ವದ್ದಾಗಿದೆ.ಯಾಕೆಂದರೆ ಇದು ಬ್ರೆಡ್ ನ ಒಟ್ಟು ರಚನೆ ಮತ್ತು ಅದರ ತುಣುಕಗಳ ಪ್ರಮಾಣ ಇಲ್ಲಿ ಇದನ್ನು ಅವಲಂಬಿಸಿದೆ. ಆದರೆ ವೃತ್ತಿಪರ ಬೇಕರ್ ಗಳು ಅದಕ್ಕೆ ಅದರ ಪ್ರಮಾಣವನ್ನು ನಿಗದಿ ಪಡಿಸಿರುತ್ತಾರೆ.ಇದನ್ನು ಬೇಕರರ್ಸ್ ಪರ್ಸೆಂಟೇಜ್ ಎನ್ನುತ್ತಾರೆ.ಇದನ್ನು ಎಷ್ಟು ಪ್ರಮಾಣದ ಹಿಟ್ಟಿಗೆ ಯಾವ ಪ್ರಮಾಣದ ಮಿಶ್ರಣಗಳನ್ನು ಹಾಕಬೇಕೆಂಬ ಸಮೀಕರಣ ಸಿದ್ದವಿರುತ್ತದೆ. ಹಿಟ್ಟಿನ ತೂಕದ ಪ್ರಮಾಣದ ಮೇಲೆ ಇದನ್ನು ನಿಖರಗೊಳಿಸುವುದಕ್ಕಿಂತ ಅದರಲ್ಲಿ ಬಳಸುವ ಕ್ಷಾರಗಳ ಶೇಕಡಾವಾರಿನ ಪ್ರಮಾಣ ಅತ್ಯಂತ ಮಹತ್ವದ್ದಾಗಿರುತ್ತದೆ. ಹಿಟ್ಟನ್ನು 100% ಎಂದು ಹೇಳಿದರೆ ಅದರಲ್ಲಿನ ಘಟಕಾಂಶಗಳು ತಮ್ಮ ತೂಕದ ಮೇಲೆ ಅದರಲ್ಲಿ ಸೇರಿಕೊಳ್ಳುತ್ತವೆ. ಆದರೆ U.S.ನಲ್ಲಿ ಸಾಮಾನ್ಯವಾಗಿರುವ ಟೇಬಲ್ ಬ್ರೆಡ್ ನಲ್ಲಿ 50% ರಷ್ಟು ನೀರುಬಳಸುತ್ತಾರೆ,ಅಂತಿಮವಾಗಿ ಹಿಟ್ಟು ಸಂಯೋಜನೆಯ ಅಂಶದಿಂದ ಅದರ ತೂಕ ಅಳೆಯಲಾಗುತ್ತದೆ. ಆದರೆ ಬಹಳಷ್ಟು ಕಲಾವಂತಿಕೆಯಿಂದ ಮಾಡಿದ ಬ್ರೆಡ್ ನಲ್ಲಿ 60 ರಿಂದ 70% ರಷ್ಟು ನೀರು ಬೆರೆಸಲಾಗುತ್ತದೆ. ಈಸ್ಟ್ ಬ್ರೆಡ್ ಗಳಲ್ಲಿ ಹೆಚ್ಚು ನೀರು ಬಳಸುವುದರಿಂದ ಹೆಚ್ಚು ಕಾರ್ಬನ್ ಡೈ ಆಕ್ಸೈಡ್ CO2ಗಳ ಗುಳ್ಳೆಗಳು ಬಿಡುಗಡೆಯಾಗುತ್ತದೆ.ಇದರಿಂದಾಗಿ ಬ್ರೆಡ್ ನ ಫಳಕುಗಳು ಗಡುಸಾಗಿರುತ್ತವೆ. ಒಂದು ಪೌಂಡ್ (~ 450 g)ಹಿಟ್ಟಿನ ಬ್ರೆಡ್ ಒಂದು ನಿಗದಿತ ಪ್ರಮಾಣದ ಗಾತ್ರ ಹೊಂದಿರುತ್ತದೆ.ಅದಲ್ಲದೇ ಫ್ರೆಂಚ್ ನ ಎರಡು ತುಂಡುಗಳಾಗಿ ಮಾಡಬಹುದು. ಕ್ಯಾಲ್ಸಿಯಮ್ ಮೇಧಾಮ್ಲವು ಸಾಮಾನ್ಯವಾಗಿ ವಾಣಿಜ್ಯಿಕವಾಗಿ ಬಳಸುವ ಬ್ರೆಡ್ ನಲ್ಲಿ ಉಪಯೋಗಿಸುವ ಮೂಲಕ ಅದರ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗುತ್ತದೆ.
ಹಿಟ್ಟು ಎಂಬ ಪ್ರಮುಖ ಪದಾರ್ಥವನ್ನು ಧಾನ್ಯದ ಪುಡಿ ಮಾಡಿದ ರೂಪದಲ್ಲಿರುತ್ತದೆ. ಇದೇ ಹಿಟ್ಟು ಅಂತಿಮವಾಗಿ ಬ್ರೆಡ್ ಗೆ ರಚನಾ ಸ್ಥಿತಿಯನ್ನು ಬೇಯಿಸಿದ ನಂತರ ತಂದುಕೊಡುತ್ತದೆ. ಸಾಮಾನ್ಯವಾಗಿ ಬ್ರೆಡ್ ಗಾಗಿ ಹಿಟ್ಟನ್ನು ಗಿಡ್ಡ ಗೋದಿ,ಬಾರ್ಲಿ,ಗೋವಿನ ಜೋಳ ಮತ್ತು ಇನ್ನಿತರ ಧಾನ್ಯ ಅಥವಾ ಕಾಳನ್ನು ಬಳಸಲಾಗುತ್ತದೆ.ಆದರೆ ಗೋದಿ ಮಾತ್ರ ಬ್ರೆಡ್ ತಯಾರಿಕೆಯಲ್ಲಿ ಬಹು ಪ್ರಮುಖ ಪಾತ್ರವಹಿಸುತ್ತದೆ. ಈ ಎಲ್ಲಾ ದವಸ ಧಾನ್ಯಗಳು ಬ್ರೆಡ್ ತಯಾರಿಕೆಗೆ ಬೇಕಾಗುವ ಎಲ್ಲಾ ಅಗತ್ಯ ಪ್ರೊಟೀನ್ ಮತ್ತು ಸ್ಟಾರ್ಚ್ ನ್ನು ಒದಗಿಸ ುತ್ತವೆ. ಹಿಟ್ಟಿನಲ್ಲಿರುವ ಪ್ರೊಟೀನ್ ಪ್ರಮಾಣದ ಶೇಕಡಾವಾರನ್ನು ಆಧರಿಸಿ ಬ್ರೆಡ್ ನ ನಾದಿದRamakrishna ಕಣಕದ ಗುಣಮಟ್ಟವನ್ನು ಅಥವಾ ರುಚಿಯನ್ನು ಪರಿಗಣಿಸಲಾಗುತ್ತದೆ. ಬ್ರೆಡ್ ತಯಾರಿಸುವಾಗ ಅದರಲ್ಲಿ ವಿಶೇಷತೆ ಸೇರಿಸಲು ಅಥವಾ ಅದರ ಗುಣಮಟ್ತ ಹೆಚ್ಚಿಸಲು ಯಾವಾಗಲೂ ಹೆಚ್ಚು ಪ್ರೊಟೀನ್ ಯುಕ್ತ ಹಿಟ್ಟನ್ನು ಬಳಸಲು ಶಿಫಾರಸು ಮಾಡಲಾಗುತ್ತದೆ. ಒಂದು ವೇಳೆ ಕಡಿಮೆ ಅಂದರೆ (9-11%) ಪ್ರಮಾಣದ ಕಡಿಮೆ ಪ್ರೊಟೀನ್ ಬಳಸಿ ಮಾಡಿದ ಬ್ರೆಡ್ ಬಹಳಷ್ಟು ಶಕ್ತಿ ಪಡೆಯಲು ಅದು ಹೆಚ್ಚಿನ ವೇಳೆಯನ್ನು ತೆಗೆದುಕೊಳ್ಳುತ್ತದೆ. ಹೀಗೆ ಘಟಾಕಾಂಶಗಳ ಮಿಶ್ರಣ ಹೆಚ್ಚು ವೇಳೆ ತೆಗೆದುಕೊಂಡರೆ ಅದು ಕಣಕವನ್ನು [ಸೂಕ್ತ ಉಲ್ಲೇಖನ ಬೇಕು]ಕ್ಷಾರೀಯಗೊಳಿಸುತ್ತದೆ.ಇದು ಬಿಳಿ ಬಣ್ಣದ ಬ್ರೆಡ್ ಸಿದ್ದಗೊಳ್ಳಲು ಅನುಕೂಲವಾಗುತ್ತದೆ,ಆದರೆ ವ್ಯಾಪಾರಿ ದೃಷ್ಟಿಯಿಂದ ಹಾಲಿನ ಕೆನೆ ಬಣ್ಣದ ಫಳಕುಗಳನ್ನು ಮಾಡಲು ಬೇಕರಿಯವರು ಇಷ್ಟಪಡುತ್ತಾರೆ. ಗೋಧಿಹಿಟ್ಟು ಅದರ ಸ್ಟಾರ್ಚ್ ಗುಣವನ್ನಲ್ಲದೇ ಮೂರು ನೀರಿನ ಕರಗುವ ಪ್ರಮಾಣಿಕರಣ ಹೊಂದಿರುತ್ತದೆ.ಆ ಸ್ಟಾರ್ಚ್ ನಲ್ಲಿ ಮೂರು ತರಹದ ಪ್ರೊಟೀನ್ ಗುಂಪುಗಳಿವೆ, ಬಿಳಿ ಲೋಳೆ, ಗಟ್ಟಿ ಲವಣಾಂಶದ ಸಾರ, ಪ್ರೊಟೀನ್ ಯುಕ್ತ ಸಾರಗಳು, ಮತ್ತು ಎರಡು ನೀರು-ರಹಿತ ಕರಗಬಲ್ಲ ಪ್ರೊಟೀನ್ ಗಳ ಗುಂಪುಗಳು, ಗ್ಲಟೆನನ್ ಮತ್ತುಗ್ಲೆಡಿಯನ್.ಹಿಟ್ಟು ನೀರಿನೊಂದಿಗೆ ಮಿಶ್ರಣವಾದಾಗ ಅದರ ಜೊತೆಗಿರುವ ಕರಗಿದ ಪದಾರ್ಥಗಳು ಪ್ರೊಟೀನ್ ಸೇರ್ಪಡೆಗೆ ನೆರವಾಗುತ್ತವೆ.ಇದು ನಂತರ ಬೇಯಿಸಿದ ನಂತರ ಬ್ರೆಡ್ ನ ಆಕಾರ ಹಾಗು ಗಾತ್ರದ ಪ್ರಮಾಣವನ್ನು ನಿರ್ಧರಿಸುತ್ತದೆ. ಯಾವಾಗ ಹಿಟ್ಟನ್ನು ಬ್ರೆಡ್ ಗಾಗಿ ಹದವಾಗಿ ನಾದಲಾಗುತ್ತದೆಯೋ ಆಗ ಅದು ಗ್ಲಟೆನಿನ್ ಆಗಿ ಮಾರ್ಪಾಡಾಗುತ್ತದೆ.ಇದರ್ಥ ಉದ್ದದ ಎಳೆಗಳು ಬಹಳಷ್ಟು ಕಾಲದ ಹದದಿಂದ ಬಿಡಿಬಿಡಿಯಾದ ಕೋಶಗಳ ಆಕಾರ ತಾಳಿದರೆ ಸಣ್ಣ ಪ್ರಮಾಣದ ಗ್ಲಾಡಿಯೆನ್ ಬ್ರೆಡ್ ನ ಒಳಭಾಗದ ಸ್ಪಂಜನಂತಹ ಆಕಾರ ಪಡೆಯುತ್ತದೆ.ಹೀಗೆ ಅವೆರಡರ ನೂಲಿನಂತಹ ಎಳೆಗಳು ಎರಡು ಪ್ರೊಟೀನ್ ಗಳಿದ್ದ ಗ್ಲಟೆನ್ ನನ್ನು ಉತ್ಪತ್ತಿ ಮಾಡುತ್ತವೆ. ಗ್ಲಟನ್ ನ ಈ ಬೆಳವಣಿಗೆಯು ಕಣಕವನ್ನು ಹಾಗೆಯೇ ಕೆಲ ಹೊತ್ತು ಬಿಟ್ಟಾಗ ಅದು ತನ್ನಿಂದ ತಾನೆ ನೊರೆಗಳೊಂದಿಗೆ ಬ್ರೆಡ್ ಆಕಾರಕ್ಕೆ ಬರುತ್ತದೆ.
ನೀರು ಅಥವಾ ಬೇರೆ ದ್ರವ ವಸ್ತುವನ್ನು ಬಳಸಿ ಹಿಟ್ಟಿನ ಪೇಸ್ಟ್ ಅಥವಾ ಅದರ ಹದಳನ್ನು ತಯಾರಿಸಲಾಗುತ್ತದೆ ಆದರೆ ದ್ರವ ಪದಾರ್ಥಗಳ ಉಪಯೋಗವು ಅದರ ಸಿದ್ದಗೊಳಿಸುವ ಪ್ರಮಾಣವನ್ನು ಅವಲಂಬಿಸಿದೆ.ಒಂದು ಭಾಗ ಹಿಟ್ಟಿದ್ದರೆ ಸಾಮಾನ್ಯವಾಗಿ ಮೂರು ಭಾಗ ನೀರನ್ನು ಮಿಶ್ರಣ ಮಾಡಿ ಕಲಸುವುದು ಪದ್ದತಿಯಾಗಿದೆ.ಆದರೆ ಹಬೆ ಮುಖಾಂತರ ಹುಳಿ ಮಿಶ್ರಣವನ್ನು ಮಾಡುವಾಗ ಅದರ ಒಟ್ಟಾರೆ ತಯಾರಿಕೆ ಮೇಲೆ ಯಾವುದೇ ಪರಿಣಾಮ ಬೀಳದಂತೆ ಎಚ್ಚರಿಕೆ ವಹಿಸಬೇಕು.ದ್ರವ ಪದಾರ್ಥಗಳ ಸೇರಿಸುವಿಕೆ ಅದರ ಕಣಕದ ಹದ ಒಟ್ಟಾರೆ ಭಾಗದ ಪ್ರಮಾಣಿಕೃತ ಅಳತೆಯಾಗಿರುತ್ತದೆ. ಇದಲ್ಲದೇ ನೀರಲ್ಲದೇಯೂ ಇನ್ನೂ ಹಲವಾರು ದ್ರವ ಪದಾರ್ಥಗಳನ್ನು ಮಿಶ್ರಣ ಮಾಡಲಾಗುತ್ತದೆ.ಉದಾಹರಣೆಗಾಗಿ,ಡೇರಿ ಉತ್ಪನ್ನಗಳು,ಹಣ್ಣಿನ ರಸಗಳು ಅಥವಾ ಬೀರ್ ನ್ನು ಬಳಸಲಾಗುತ್ತದೆ. ಇನ್ನೂ ಹೆಚ್ಚೆಂದರೆ ಈ ದ್ರವ ಪದಾರ್ಥಗಳಲ್ಲದೇ ಬ್ರೆಡ್ ಗೆ ಹೆಚ್ಚಿನ ಸಿಹಿಗಳನ್ನು ನೀಡುವ ವಸ್ತುಗಳು,ಕೊಬ್ಬಿನಾಂಶಗಳು ಮತ್ತು/ಅಥವಾ ಹುಳಿಯಾಗುವ ಘಟಕಾಂಶಗಳು ಸೇರಿವೆ.
ಹುಳಿ ಬರಿಸುವಿಕೆಯ ಸಂಸ್ಕರಣದಲ್ಲಿ ಅದರೊಳಗೆ ಅನಿಲದ ಉತ್ಪತ್ತಿಯು ಕಣಕಕ್ಕೆ ಮೊದಲು ಅಥವಾ ನಂತರ ಬ್ರೆಡ್ ನ್ನು ಹಗುರ ಮತ್ತು ನುರಿಸಲು ಸುಲಭ ಮಾಡುತ್ತದೆ. ಪಾಶ್ಚಿಮಾತ್ಯ ಭಾಗದಲ್ಲಿ ಉಪಯೋಗಿಸುವ ಹೆಚ್ಚಿನ ಪ್ರಮಾಣದ ಬ್ರೆಡ್ ನಲ್ಲಿ ಹುಳಿ ಮಿಶ್ರಣ ಪ್ರಧಾನವಾಗಿರುತ್ತದೆ. ಹೇಗೆಯಾದರೂ,ಹುಳಿ ಬೆರೆಸದ ಬ್ರೆಡ್ ಗಳು ಜುಡಾಯಿಸಮ್ ಮತ್ತು ಕ್ರಿಶ್ಚಿಯನ್ ಧರ್ಮಗಳಲ್ಲಿ ಸಾಂಕೇತಿಕವಾದ ಮಹತ್ವದ ಸ್ಥಾನ ಪಡೆದಿವೆ. ಯಹೂದ್ಯರು ಅಥವಾ ಜಿವ್ ಗಳು ಹುಳಿರಹಿತ ಬ್ರೆಡ್ಮ್ಯಾಟ್ಜೊ ಎನ್ನುವ ಬ್ರೆಡ್ ನ್ನು ತಮ್ಮ ವಿಮೋಚನಾ ದಿನಾಚರಣೆಯಂದು ಸೇವಿಸುತ್ತಾರೆ. ಇದನ್ನು ರೊಮನ್ ಕ್ಯಾಥೊಲಿಕ್ ಕ್ರಿಶ್ಚಿಯನ್ ಭೋಜನ ವಿಧಾನದಲ್ಲಿಯೂ ಬಳಸಲಾಗುತ್ತದೆ.ಇಲ್ಲಿ ಏಸುವಿನ ಆರಾಧನೆಯ ಮತ್ತು ಜೀಸಸ್ ನ ಅಂತಿಮ ಭೋಜನದಲ್ಲಿಯೂ ಇದನ್ನು ಬಳಸಲಾಗಿದೆ ಎಂದು ನಂಬಲಾಗಿದೆ.ಯಾವಾಗ ಏಸು ತನ್ನ ಪಾಲಿನ ಬ್ರೆಡ್ ನ್ನು ತನ್ನ ಶಿಷ್ಯರಲ್ಲಿ ಹಂಚಿದ ಎಂಬ ಪ್ರತೀತಿಯೂ ಇದೆ.ಬಹುಶಃ ಇದನ್ನು ವಿಮೋಚನಾ ಆಚರಣೆ ಸಂದರ್ಭದಲ್ಲಿ ಉಪಯೋಗಿಸಿದ ಉದಾಹರಣೆ ಇದೆ.
ಇನ್ನೊಂದೆಡೆ ಸಾಂಪ್ರದಾಯಿಕ ಚರ್ಚ್ ಯಾವಾಗಲೂ ಹುಳಿ ಮಿಶ್ರಿತ ಬ್ರೆಡ್ ನ್ನೇ ಬಳಸುತ್ತವೆ.
ಬ್ರೆಡ್ ನ್ನು ಹುಲಿ ಮಾಡಲು ಸರಳ ವಿಧಾನವೆಂದರೆ ಅದನ್ನು ಅನಿಲ ಉತ್ಪತ್ತಿಯ ರಾಸಾಯನಿಕಗಳ ಬಳಕೆ ಮಾಡುವುದು. ಇದರಲ್ಲ್ಲಿ ಸಾಮಾನ್ಯ ಎರಡು ವಿಧಾನಗಳಿವೆ. ಮೊದಲ ಉಪಯೋಗವೆಂದರೆ ಬೇಕಿಂಗ್ ಪಾವ್ಡರ್ ಬಳಕೆ ಅಥವಾ ಬೇಕಿಂಗ್ ಪಾವ್ಡರ್ ಯುಳ್ಳಸ್ವಯಂ-ಉತ್ಪತಿಯ ಹಿಟ್ಟು ನ್ನು ಬಳಕೆ ಮಾಡುವುದು. ಎರಡನೆಯದೆಂದರೆ ಆಮ್ಲೀಯು ಮಿಶ್ರಣ ಪದಾರ್ಥವಾದಂತಹ ಮಜ್ಜಿಗೆ ಮತ್ತು ಜೊತೆಗೆ ಬೇಕಿಂಗ್ ಸೋಡಾ ವನ್ನು ಸೇರಿಸಲಾಗುತ್ತದೆ. ಆಮ್ಲ ಪದಾರ್ಥದ ಸೋಡಾದೊಂದಿಗಿನ ಪ್ರತಿಕ್ರಿಯೆಯು ಅನಿಲವನ್ನು ಉತ್ಪತಿ ಮಾಡುತ್ತದೆ. ರಾಸಾಯನಿಕವಾಗಿ ಹುಳಿ ಮಿಶ್ರಣ ಮಾಡಿದವುಗಳನ್ನು ಶೀಘ್ರ ತಯಾರಾದ ಬ್ರೆಡ್ಸ್ ಮತ್ತುಸೋಡಾ ಬ್ರೆಡ್ ಗಳು ಎಂದು ಕರೆಯುತ್ತಾರೆ . ಈ ತಂತ್ರಜ್ಞಾನವನ್ನು ಸಾಮಾನ್ಯವಾಗಿ ಮೆತು ಕೇಕ್ ಗಳು, ಪ್ಯಾನ್ ಕೇಕ್ಗಳು, ಅಮೆರಿಕನ್-ಶೈಲಿಯಬಿಸ್ಕಟ್ಸ್, ಮತ್ತು ಸ್ವೀಟ್ಸ್ ಬ್ರೆಡ್ಸ್ ಗಳಾದ ಬನಾನಾ ಬ್ರೆಡ್ ಗಳ ತಯಾರಿಕೆ ಮಾಡಲಾಗುತ್ತದೆ.
ಹಲವಾರು ಬ್ರೆಡ್ ಗಳನ್ನು ಈಸ್ಟ್ ಮೂಲಕ ಹುಳಿ ಮಾಡಲಾಗುತ್ತದೆ. ಈಸ್ಟ್ ಬಳಸಿ ಹುಳಿ ಮಿಶ್ರಣ ಮಾಡುವ ಬ್ರೆಡ್ ನ್ನು ಸ್ಯಾಕ್ರೊಮೈಸಿಸ್ ಸೆರಿವೆಸೈ ಎನ್ನಲಾಗುತ್ತದೆ.ಇದಕ್ಕೆ ಬೇಕಾದ ರಾಸಾಯನಿಕವನ್ನೇ ಮದ್ಯಸಾರ ಉತ್ಪನ್ನದಲ್ಲಿ ಉಪಯೋಗಿಸುತ್ತಾರೆ. ಈ ಈಸ್ಟನಿಂದ ಹಿಟ್ಟಿನಲ್ಲಿರುವ ಕಾರ್ಬೊಹೈಡ್ರೇಟ್ ಗಳು ಕಿಣ್ವಿಕರಣಗೊಳ್ಳುತ್ತವೆ. ಅದರ ಜೊತೆಯಲ್ಲಿ ಒಳಗೊಂಡ ಸಕ್ಕರೆಕೂಡಾ, ಇಂಗಾಲದ ಡೈಆಕ್ಸೈಡ್ ನ್ನು ಹೊರಹಾಕುತ್ತದೆ. U.S. ನಲ್ಲಿರುವ ಬಹುತೇಕ ಎಲ್ಲಾ ಕಣಕಗಳಲ್ಲಿ ವಾಣಿಜ್ಯಕವಾಗಿ ಉತ್ಪತ್ತಿಯಾದ ಬೇಕರ್ಸ್ ಈಸ್ಟ್ ನ್ನು ಬಳಸಿ ಹುಳಿ ಮಾಡಲಾಗುತ್ತದೆ. ಬೇಕರ್ ಈಸ್ಟ್ ನಿಂದ ಒಂದು ಪ್ರಯೋಜನವೆಂದರೆ ಉತ್ಪಾನದನೆಯಲ್ಲಿ ಸಮತೆ, ಶೀಘ್ರ ಮತ್ತು ಉತ್ತಮ ಗುಣಮಟ್ಟ ಕಾಪಾಡಲು ಸಾಧ್ಯವಾಗುತ್ತದೆ.ಯಾಕೆಂದರೆ ಇದನ್ನು ಶುದ್ದ ಸಂಸ್ಕರಣೆ ವಿಧಾನದಿಂದ ಮಾಡಲಾಗುತ್ತದೆ. ಹಲವಾರು ವೃತ್ತಿಪರ ಬ್ರೆಡ್ ತಯಾರಕರು ತಮ್ಮದೇ ಈಸ್ಟ್ ನ್ನು 'ಗ್ರೊತ್ ಕಲ್ಚರ್ 'ಅಂದರೆ ಅದನ್ನು ಸ್ಥಾನಿಕವಾಗಿ ಸಿದ್ದಪಡಿಸಿ ಬ್ರೆಡ್ ನಲ್ಲಿ ಹುಳಿಗಾಗಿ ಉಪಯೋಗಿಸುತ್ತಾರೆ. ಈ ಸಂಸ್ಕರಣಾ ವಿಧಾನವು ಉತ್ತಮ ವಾತಾವರಣದಲ್ಲಿ ತಯಾರಾಗುವುದರಿಂದ ಇದು ವೃದ್ಧಿಯಾಗುವುದಲ್ಲದೇ ಹಲವಾರು ವರ್ಷಗಳ ವರೆಗೆ ಹುಳಿಯನ್ನು ಬಳಸಲು ನೆರವಾಗುತ್ತದೆ. ಬೇಕರ್ಸ್ ಈಸ್ಟ್ ಮತ್ತು ಹುಳಿ ಕಣಕದ ವಿಧಾನಗಳನ್ನು ಬ್ರೆಡ್ ತಯಾರಿಕೆಯಲ್ಲಿ ಒಂದೇ ರೀತಿಯಲ್ಲಿ ಬಳಸಲಾಗುತ್ತದೆ. ಹಿಟ್ಟಿನೊಂದಿಗೆ ನೀರು,ಉಪ್ಪು ಮತ್ತು ಹುಳಿ ಮಾಡುವ ಪದಾರ್ಥವನ್ನು ಉಪಯೋಗಿಸಲಾಗುತ್ತದೆ.(ಇಲ್ಲಿ ಬೇಕರ್ಸ್ ಈಸ್ಟ್'ಅಥವಾ ಹುಳಿಯುಳ್ಳ ಕಣಕ ಇವು ಆರಂಭಿಕ ಮೂಲವಸ್ತುಗಳಾಗಿವೆ.) ಇನ್ನುಳಿದವು, (ಮಸಾಲೆಗಳು, ರುಚಿ ಪದಾರ್ಥಗಳು, ಕೊಬ್ಬಿನಂಶಗಳು, ಬೀಜಗಳು, ಹಣ್ಣು, ಇತ್ಯಾದಿ.) ಇವುಗಳನ್ನೆಲ್ಲಾ ಬೇಕೆ ಬ್ರೆಡ್ ನಲ್ಲಿ ಬಳಸದಿದ್ದರೂ ಆಗಾಗ ಬಳಸುವುದು ಸರ್ವೆ ಸಾಮಾನ್ಯವಾಗಿದೆ. ನಂತರ ಮಿಶ್ರಣದ ನಾದಿದ ಕಣಕದ ಹಿಟ್ಟು ಒಂದು ಅಥವಾ ಎರಡಕ್ಕಿಂತ ಹೆಚ್ಚು ಬಾರಿ ಆಮ್ಲೀಯ ಸ್ಥಿತಿಯಲ್ಲಿ ಏರಿಕೆಯಾಗುತ್ತದೆ(ಹೆಚ್ಚು ಕಾಲದ ಈ ಹುಳಿಯನ್ನು ನೆನೆಯಲು ಬಿಟ್ಟರೆ ಅದು ಹೆಚ್ಚು ಸುವಾಸನೆ ನೀಡುತ್ತದೆ ಆಗ ಬೇಕರ್ ಗಳುನಾದುವ ಮೂಲಕ ಕೆಳಮಟ್ಟಕ್ಕೆ ತರುತ್ತಾರೆ.ಹೀಗಾಗಿ ಆ ನಾದಿದ ಹಿಟ್ಟು ಮತ್ತೆ ಹುಳಿ ಹೆಚ್ಚಾಗಲು ಬಿಡುತ್ತಾರೆ.), ನಂತರ ಬ್ರೆಡ್ ನ್ನು ತುಣುಕು ಅಥವಾ ಫಳಕಗಳನ್ನು ಮಾಡುತ್ತಾರೆ.(ಇದು ಕಿಣ್ವಗೊಳಿಸುವ ಅಂತಿಮ ವೇಳೆಗೆ ಅವರ ವಿವೇಚನೆಗೆ ಬಿಟ್ಟು ಮಿಶ್ರಣದ ನಿರ್ಧಾರ ಅವರಿಗೇ ಬಿಡಲಾಗುತ್ತದೆ. ಹೀಗೆ ಬ್ರೆಡ್ ಕಾವಲಿ ಒಲೆ ಮೇಲಿಟ್ಟು ಸುಡಲಾಗುತ್ತದೆ. ಹಲವಾರು ಬ್ರೆಡ್ ಗಳನ್ನು ನೇರವಾಗಿ ನಾದಿದ ಕಣಕ ದ ಹಿಟ್ಟಿನಂದಲೇ ಅಂದರೆ ಅದರ ಎಲ್ಲಾ ಮೂಲವಸ್ತುಗಳು ಒಂದೇ ವೇಳೆಗೆ ಬೇಯಿಸಲ್ಪಟ್ಟು ಅದರ ಏರಿಕೆ ವೇಳೆಯನ್ನೂ ಇಲ್ಲಿ ಹೆಚ್ಚಿಸಿ ತಯಾರಿಕೆಗೆ ಸಹಾಯವಾಗುತ್ತವೆ. ಪರ್ಯಾಯವಾಗಿ ಈ ನಾದಿದ ಕಣಕನ್ನು ಪೂರ್ವ ಕಿಣ್ವೀಕರಣ ಅಥವಾ ಫರ್ಮೆಂಟೇಶನ್ ಪೂರ್ವ ವೇ ಬಳಸಿ ನಂತರದ ಅವಧಿಯಲ್ಲಿ ಒಂದು ದಿನದ ನಂತರ ಅದಕ್ಕೆ ಬೇಕಾದ ಹುಳಿ ಮತ್ತು ಇತರೆ ಸಾಮಗ್ರಿಗಳ ಬಳಸಿ ಬ್ರೆಡ್ ತಯಾರಿಸಲಾಗುತ್ತದೆ. ಬೇಯಿಸುವ ದಿನದಂದು ಇನ್ನುಳಿದ ಮಿಶ್ರಣಗಳನ್ನು ಬೆರೆಸಲಾಗುತ್ತದೆ.ಇನ್ನಿತರ ನೇರ ಕಣಕ ಬಳಸಿ ತಯಾರಿಸುವ ಬ್ರೆಡ್ ವಿಧಾನದಂತಯೇ ಇದನ್ನೂ ಮಾಡಲಾಗುತ್ತದೆ. ಇಂತಹ ಬ್ರೆಡ್ ಅತಿ ಹೆಚ್ಚು ಸುವಾಸನೆ ಮತ್ತು ಉತ್ತಮ ಗಾತ್ರದ ಸಾಂದ್ರತೆ ಹೊಂದಿರುತ್ತದೆ. ಹಲವಾರು ಬೇಕರ್ ಗಳ ಪ್ರಕಾರ ಈ ಆರಂಭಿಕ ಪ್ರಕ್ರಿಯೆಯು ನೂತನ ಸಂಸ್ಕರಣದ ವಿಧಾನವನ್ನು ತಿಳಿಸುತ್ತದೆ.ಇದು ಬೇಕರ್ ನ ಈಸ್ಟ್ ಮತ್ತು ಅದರ ಸುವಾಸನೆ/ರುಚಿ ಅಥವಾ ಅದರಲ್ಲಿನ ಮಿಶ್ರಣಗಳು ಸುದೀರ್ಘ ಫರೆಮೆಂಟೇಶನ್ ಗೆ ಒಳಗಾಗುತ್ತದೆ. ಮೊದಲ ಬಾರಿಗೆ ಬೇಕರ್ ನ ಈಸ್ಟ್ ಮಾರುಕಟ್ಟೆಗೆ ಬಂದಾಗ ಅದು ಕೊರತೆ ಮತ್ತು ದುಬಾರಿ ಎನಿಸಿದ್ದೂ ಈಗಲೂ ಕೂಡಾ ಬೇಕರ್ ಗಳು ಇದನ್ನು ಮಿತವ್ಯಯದಿಂದ ಬಳಸಲು ಇಷ್ಟಪಡುತ್ತಾರೆ. ಬಹಳಷ್ಟು ಈಸ್ಟ್ ಸಹಿತ ಪೂರ್ವ-ಫರ್ಮೆಂಟೆಡ್ ವಸ್ತುಗಳು ಮೂರು ವರ್ಗದಲ್ಲಿ ವಿಭಾಗಿಸಲ್ಪಡುತ್ತವೆ: ಪೂಲಿಶ್ ಅಥವಾಪೌಲಿಚೆ , ಇಲ್ಲಿ ಬಿಡಿಯಾದ ರೂಪದ ಮಿಶ್ರಣವು ಸಾಮಾನ್ಯವಾಗಿ ಹಿಟ್ಟು ಮತ್ತು ನೀರನ್ನು ಸಮಪ್ರಮಾಣದಲ್ಲಿ ಪಡೆಯುತ್ತದೆ.(ತೂಕದ ಮೂಲಕ); ಬಿಗಾ ,ಅಂದರೆ ಬಿರುಸಾದ ಹಿಟ್ಟಿನ ಹೆಚ್ಚು ಪ್ರಮಾಣ ಒಳಗೊಂಡ ಕಣಕ ನೀರಿಗೆ ಅನುಪಾತದಲ್ಲಿರುತ್ತದೆ; ಅಲ್ಲದೇ ಪೇಟೆ ಫರ್ಮೆಂಟೀ ,ಅಂದರೆ ಬ್ರೆಡ್ ತಯಾರಿಸಿದ ಹಿಟ್ಟಿನ ಕೆಲ ಭಾಗವನ್ನು ಮುಂದಿನ ತಯಾರಿಕೆಗಾಗಿ ಕಾಯ್ದಿಡಲಾಗುತ್ತದೆ. ಹುಳಿ ಹಿಟ್ಟು ಕಣಕ (ಇದನ್ನು ಸಾಮಾನ್ಯವಾಗಿ ಲೆವೇನ್ ಅಥವಾ"ನೈಸರ್ಗಿಕ ಲೇವನ್") ಎನ್ನುತ್ತಾರೆ.ಇದು ಕೃತಕ ಹುಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಹಿಟ್ಟು ಮತ್ತು ನೀರಿನೊಂದಿಗೆ ಈಸ್ಟ್ ಬೆರೆತ ಸ್ವಾಭಾವಿಕ ಪ್ರಕ್ರಿಯೆಯಾಗಿ ಪೂರ್ವ ಕಿಣ್ವವಾಗಿ ಮಾರ್ಪಾಡಾಗಿ ಉಪಕಾರಿ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅವಕಾಶ ಮಾಡುತ್ತದೆ.(ಸಾಮಾನ್ಯವಾಗಿ ಸ್ಯಾಕ್ರೊಮೈಸಿಸ್ ಎಕ್ಸಿಗ್ಯುಯಸ್ ,ಎಂಬ ರಾಸಾಯನಿಕ ತಯಾರಿಕೆಗೆ ಅನುವಾಗುತ್ತದೆ. ಇದು ಮುಂದೆ ಆಮ್ಲಗಳಿಗೆ ಹೆಚ್ಚು ನಿರೋಧಕವಾಗಿ ಕೆಲಸ ಮಾಡುತ್ತದೆ. ಇದು ಎಸ್. ಸೆರೆವೆಸಿಕ್ , ಮತ್ತು ವಿವಿಧ ಲ್ಯಾಕ್ಟೊಬ್ಯಾಸಿಲಸ್ .)ಗಳಿಗಿಂತ ಇದು ಹೆಚ್ಚು ಆಮ್ಲನಿರೋಧಕವಾಗಿದೆ.
ಹುಳಿ ಹಿಟ್ಟಿನಲ್ಲಿರುವ ಈಸ್ಟ್ ಹುಳಿ ಈಸ್ಟ್ ನಿಂದ ಬರುವುದಿಲ್ಲ ಆದರೆ ಇದು ಲ್ಯಾಕ್ಟೊಬ್ಯಾಸಿಲ್ಲಸ್ ನಿಂದ ಅದಕ್ಕೆ ಸೇರಿಕೊಳ್ಳುತ್ತದೆ.ಈಸ್ಟ್ ಇಲ್ಲಿನ ಸಿಂಬೊಸಿಸ್ ನಲ್ಲಿ ಈಸ್ಟ್ ಅಸ್ತಿತ್ವ ಪಡೆದಿರುತ್ತದೆ. ಹೀಗೆ ಲ್ಯಾಕ್ಟೊಬ್ಯಾಸಿಲ್ಲಸ್ ಈಸ್ಟ್ ನ ಮರುಉತ್ಪನ್ನಗಳಿಗೆ ಕಾರಣವಾಗುತ್ತದೆ.ಈಸ್ಟ್ ನ ಫರ್ಮೆಂಟೇಶನ್ ಇಲ್ಲಿ ಕೃತಕವಾಗಿ ಆಗುತ್ತದೆ.ಹುಳಿ ಮಾಡುವ ಪ್ರಕ್ರಿಯೆಯು ಲ್ಯಾಕ್ಟಿಕ್ ಆಮ್ಲವನ್ನು ಹೊರಗೆಡುವುತ್ತದೆ.ಇದು ಬ್ರೆಡ್ ಹಾಳಾಗದಂತೆ ತಡೆಯಲು ಕಾರಣವಾಗುತ್ತದೆ.(ಹಲವಾರು ರೋಗ ಕಾರಕ ಸೂಕ್ಷ್ಮ ಬ್ಯಾಕ್ಟೀರಿಯಾಗಳು ಇದರಲ್ಲಿ ಬದುಕುಳಿಯಲಾರವು). ಎಲ್ಲಾ ಬ್ರೆಡ್ ಗಳಲ್ಲಿ ಹುಳಿ ಬರಿಸಿದ ಈಸ್ಟ್ ಬಳಸಲಾಗುತ್ತದೆ.19 ನೆಯ ಶತಮಾನದ ವರೆಗೂ ಹುಳಿ ಸಂಸ್ಕರಣದ ಬಗ್ಗೆ ಗೊತ್ತಿರಲಿಲ್ಲ.ಆದರೆ ಸೂಕ್ಷ್ಮದರ್ಶಕಗಳ ಆವಿಷ್ಕಾರದಿಂದ ಹೊಸ-ಹೊಸ ಉತ್ಪನ್ನಗಳು ಹೊರ ಬಂದವು.ಕಣಕದ ಪ್ರಮಾಣವನ್ನು ಸಹ ಅಧಿಕಗೊಳಿಸುವ ಘಟಕಾಂಶಗಳನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆವಾಗಿಂದ ಈಸ್ಟ್ ನ್ನು ಆಯ್ಕೆ ಮಾಡಿ ಅದರ ಎಳೆಗಳನ್ನು ಬೇರ್ಪಡಿಸಿ ಫರ್ಮೆಂಟೇಶನ್ ಗಾಗಿ ಅದನ್ನು ಶೀಘ್ರ,ಯೋಗ್ಯ ಬ್ರೆಡನ್ನು ಮಾಡಲಾಗುತ್ತದೆ. ಈ ಎಳೆಗಳಲ್ಲಿನ ಬಿಲ್ಯನ್ ನಷ್ಟು ಕೋಶಗಳು ಇರುತ್ತವೆ.ಇವುಗಳನ್ನು ಪ್ಯಾಕೇಟ್ ಗಳನ್ನಾಗಿಸಿ ಇದನ್ನು "ಬೇಕರ್ಸ್ ಈಸ್ಟ್ " ಎಂಬ ಹೆಸರಿನಲ್ಲಿ ಮಾರಾಟಕ್ಕೆ ಕಳಿಸಲಾಗುತ್ತದೆ. ಬೇಕರ್ಸ್ ಈಸ್ಟ್ ನಿಂದ ಮಾಡಿದ ಬ್ರೆಡ್ ಹುಳಿಯಾಗಿರುವುದಿಲ್ಲ ಯಾಕೆಂದರೆ ಅಲ್ಲಿ ಲ್ಯಾಕ್ಟೊಬ್ಯಾಸಿಲ್ಲಸ್ ಇರುವುದಿಲ್ಲ. ವಿಶ್ವಾದಾದ್ಯಂತದ ಬೇಕರ್ ಗಳು ಈ ಬೇಕರ್ ಈಸ್ಟ್ ನ್ನು ಯಾವುದೇ ಅನುಮಾನವಿಲ್ಲದೇ ಒಪ್ಪಿಕೊಂಡರು.ಇದರಿಂದ ಬ್ರೆಡ್ ಗೆ ಹೆಚ್ಚು ಸ್ಥಿತಿಸ್ಥಾಪಕತ್ವ ಮತ್ತು ಸರಳ ವಿಧಾನದಲ್ಲಿ ಮಾಡಬಲ್ಲ ಅಂಶಗಳು ಎಲ್ಲರನ್ನೂ ಆಕರ್ಷಿಸಿದವು. ಇದು ಬೇಕಿಂಗ್ ಅವಧಿಯನ್ನು ಕಡಿಮೆ ಮಾಡಿದ್ದಲ್ಲದೇ ಬ್ರೆಡ್ ನ್ನು ತಾಜಾ ಆಗಿ ಇಡುತ್ತದೆ.ದಿನಕ್ಕೆ ಮೂರು ಬಾರಿ ಇದನ್ನು ಸ್ಕ್ರಾಚ್ ನಿಂದ ಪಡೆದು ತಾಜಾತನದ ಅಂಶ ಒದಗಿಸಲಾಗುತ್ತದೆ. ಯುರೊಪಿನಲ್ಲಿ ಹುಳಿ ಬ್ರೆಡ್ ತಯಾರಿಕೆಯು ಜನಪ್ರಿಯವಾಗಿದೆ.ಆದರೆ U.S. ನಲ್ಲಿ ಬೇಕರ್ಸ್ ಈಸ್ಟ್ ಬಂದ ನಂತರ ಹುಳಿ ಬ್ರೆಡ್ ತಯಾರಿಕೆ ಸ್ಥಗಿತಗೊಂಡಿದೆ.(ಭಾಗಶಃವಾದರೂ ಕಡಿಮೆಮ್ ಪ್ರಮಾಣದಲ್ಲಿ ಇದು ಕಂಡುಬರುತ್ತದೆ.)ವೃತ್ತಿಪರ ಬೇಕರಿಗಳಲ್ಲಿ ಹುಳಿ ಬ್ರೆಡ್ ಹಿಟ್ಟಿನ ಮರುಹುಟ್ಟು ಬರಬೇಕಿದೆ. ಫುಡ್ ನೆಟ್ವರ್ಕ್ 'ನ ಅಲಟನ್ ಬ್ರೌನ್ ಅವರ ಪ್ರಕಾರ ತಮ್ಮಗುಡ್ ಈಟ್ಸ್ ಟೆಲೆವಿಜನ್ ಶೊದಲ್ಲಿ ಅವರು ಹೇಳಿದ್ದೆಂದರೆ ವಿಶ್ವದ ಹಲವೆಡೆ ಹಲವಾರು ಬಗೆಯ ಬ್ರೆಡ್ ಗಳು ವಿವಿಧ ರುಚಿ ಹಾಗು ಹುಳಿಯಿಂದ ಮಾಡಿ ಅದನ್ನು ಈಸ್ಟ್ ಅಂಗಾಂಶದ ಲ್ಯಾಕ್ಟೊಬ್ಯಾಸಿಲ್ಲಸ್ ನ್ನು ಅಲ್ಲಿನ ಕೆಲವು ಆರಂಭಿಕ ಬೇಕ್ರಿಯವರು ಅಪರೂಪದ ಬ್ರೆಡ್ ನ್ನುಮಾರಾಟ ಮಾಡುತ್ತಾರೆ. ಸ್ಯಾನ್ ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶವು ಅದರ ಹುಳಿ ಬ್ರೆಡ್ ಗಳಿಗೆ ಪ್ರಸಿದಿಯಾಗಿದೆ. ಹುಳಿ ಹಿಟ್ಟಿನ ಬ್ರೆಡನ್ನು ಹುಳಿಹಿಟ್ಟಿನ ಕಣಕದ ಆರಂಭ ದೊಂದಿಗೆ ಮಾಡಲಾಗುತ್ತದೆ. (ಆದರೆ ಮೇಲೆ ಹೇಳಿದ ವಿಧಾನಗಳ ಬಗ್ಗೆ ಗೊಂದಲಕ್ಕೀಡಾಗಬಾರದು) ಹುಳಿಹಿಟ್ಟಿನ ಕಣಕದೊಂದಿಗೆ ಮಾಡುವ ಸಂಸ್ಕರಣವು ಈಸ್ಟ್ ನ ತಯಾರಿಸಲು ಮತ್ತು ಲ್ಯಾಕ್ಟೊಬ್ಯಾಸಿಲ್ಲಸ್ ಉತ್ಪಾದನೆಗೆ ಪೂರಕವಾಗಿದೆ. ಇದು ಅಗತ್ಯವಾಗಿ ಕಣಕದ ಹಿಟ್ಟು ಅರಂತಹ ಇಲ್ಲವೆ ಪ್ಯಾನ್ ಕೇಕ್ -ನಂತಹ ಸುವಾಸನೆ /ನೀರು ಬೆರೆಸಲಾಗುತ್ತದೆ.ಇದರಲ್ಲಿ ಈಸ್ಟ್ ಮತ್ತು ಲ್ಯಾಕ್ಟೊಬ್ಯಾಸಿಲ್ಲಸ್ ಸೇರಿರುತ್ತವೆ. ಮೊದಲು ನಾದಿದ ಕಣಕವನ್ನು ಆಗಾಗ ಬೇಕಾಗುವ ಸಮಯಕ್ಕೆ ಬಳಸಿ ಅದರ ಕೆಲಭಾಗವನ್ನು ಮತ್ತೆ ಬದಿರಿಸಿ ಅದನ್ನು ತಾಜಾಗೊಳಿಸು ತ್ತದೆ.ಇದರಲ್ಲಿ ತಾಜಾ ಹಿಟ್ಟು ಮತ್ತು ನೀರನ್ನೋ ಉಪಯೋಗಿಸಲಾಗುತ್ತದೆ. (ಆದರೆ ಈ ಆರಂಭಿಕವನ್ನು ಶೀತ ಪೆಟ್ಟಿಗೆಯಲ್ಲಿಟ್ಟರೆ ಅದರಲ್ಲಿ ಏನೂ ಬೆರೆಸದೇ ಬ್ರೆಡ್ ತಯಾರಿಕೆಗೆ ವಾರಗಟ್ಟಲೇ ಬಳಸಬಹುದು.ಇದಕ್ಕೆ ಬೇರೆ( ಮಿಶ್ರಣ )ದ ಅಗತ್ಯವಿಲ್ಲ. ಈ ಆರಂಭಿಕ ಸಂಸ್ಕರಣಾ ಪದ್ದತಿಯನ್ನು ನೂರಾರು ವರ್ಷಗಳಿಂದ ಆಯಾ ಮನೆತನಗಳೂ ನಡೆಸಿಕೊಂಡು ಬರುತ್ತಿವೆ.ಬಹುದಿನದ ಈ ಸಂಸ್ಕರಣಾ ವಿಧಾನವು ವಿಶೇಷ ರುಚಿ ಮತ್ತು ಎಳೆಯನ್ನು ತರುತ್ತದೆ. ಈ ಅಂಗಾಂಶದ ಆರಂಭಿಕ ತಯಾರಿಕೆ ಹಿಟ್ಟನ್ನು ಇನ್ನೊಂದರ ತುಣುಕನ್ನು ಪಡೆದು ಅದನ್ನು ಅಧಿಕಗೊಳಿಸಬಹುದಾಗಿದೆ.ಇಲ್ಲವೇ ಅವು ಸ್ಕ್ರಾಚ್ ನಿಂದ ಮಾಡಲೂಬಹುದಾಗಿದೆ. ಇಂತಹ ಆರಂಭಿಕ ಬ್ರೆಡ್ ತಯಾರಿಕಾ ಘಟಕಾಂಶಗಳ ಮಾರುವ ಅದರ ವಹಿವಾಟು ಮಾಡುವ ಜಗತ್ತಿನಾದ್ಯಂತ ಒಂದುನ್ ಗುಂಪು ಕಾರ್ಯ ನಿರ್ವಹಿಸುತ್ತದೆ.ಒಂದು ಸ್ವವಿಳಾಸ ಲಗತ್ತಿಸಿದ ಅಂಚೆ ಚೀಟಿ ಹಚ್ಚಿದ ಲಕೋಟೆಯಲ್ಲಿ ಇದನ್ನು ಬೇರೆಡೆಗೆ ಸರಾಗವಾಗಿ ಸಾಗಿಸಬಹುದು.ಹೀಗಾಗಿ ವಿಶ್ವಾದಾದ್ಯಂತದ ಎಲ್ಲೆಡೆಗೂ ಇದು ದೊರೆಯುವ ಅನುಕೂಲಗಳಿವೆ. ತಾವೇ ತಯಾರಿಸಿದ ಆರಂಭಿಕ ಘಟಕಾಂಶಗಳನ್ನು ಉತ್ತಮಪಡಿಸಲಾಗಿರುತ್ತದೆ ಎಂಬುದು ನಿಜಸಂಗತಿಯಾಗಿದ್ದರಿಂದ ಇದನ್ನು ಒಂದು ಸಂಸ್ಥಾಪಿತ ಮಿಶ್ರಣ ಅಂಶ ಹೇಳಬಹುದು.(ಸ್ಥಿರ,ಪ್ರಸ್ತುತ,ಕೊಳೆಯದಂತೆ ಇರುವ ಮತ್ತು ಆಯಾ ಸಂದರ್ಭದಲ್ಲಿ ಉಪಯೋಗವಾಗುವಂತಹದ್ದಾಗಿರುತ್ತದೆ.)ಇವು ಸ್ಕ್ರಾಚ್ ಆರಂಭಿಕ ಮಿಶ್ರಣಗಳಿಗಿಂತ ಉತ್ತಮವಾಗಿರುಗಿರುತ್ತವೆ. ಹುಳಿ ಹಿಟ್ಟನ್ನು ಬೇಯಿಸಲು ಮತ್ತು ಸಂಸ್ಕರಣಾ ವಿಧಾನ ಕಾಯ್ದುಕೊಳ್ಳಲು ಇನ್ನೂ ಹಲವಾರು ಮಾರ್ಗಗಳಿವೆ. ಅತ್ಯಂತ ಸಾಂಪ್ರದಾಯಿಕ ಪದ್ದತಿ ಎಂದರೆ ಕಳೆದ ಶತಮಾನದಲ್ಲಿ ಯುರೊಪ್ ನಲ್ಲಿ ರೈತ ಕುಟುಂಬಗಳು ಈ ಸಂಸ್ಕರಣಾ ವಿಧಾನ ಅನುಸರಿಸಿವೆ. ಈ ಕುಟುಂಬದ ಪದ್ದತಿಯೆಂದ್ರೆ ಸಾಮಾನ್ಯವಾಗಿ ಆ (ಕುಟುಂಬದ ಮಹಿಳೆಯೇ ಈ ಬ್ರೆಡ್ ತಯಾರಿಕೆಯಲ್ಲಿ ತೊಡಗಿಕೊಂಡಿರುತ್ತಾಳೆ.)ಅದಕ್ಕಾಗಿ ಒಂದು ದಿನ ಅಥವಾ ವಾರಕ್ಕೊಮ್ಮೆ ಎಂಬ ನಿಗದಿ ಅವಧಿಯನ್ನು ಮಾಡಲಾಗಿರುತ್ತದೆ. ಇದರ ಆರಂಭಿಕ ಮಿಶ್ರಣದ ಅಂಶವು ಆಯಾ ವಾರದ ಹಿಟ್ಟಿನೊಂದಿಗೆ ಉಳಿದಿರುತ್ತದೆ ಈ ಆರಂಭಿಕ ಮಿಶ್ರಣಾಂಶವನ್ನು ಹೊಸ ಘಟಕಾಂಶಗಳೊಂದಿಗೆ ಸೇರಿಸಲಾಗುತ್ತದೆ.ಹೀಗೆ ಹಿಟ್ಟನ್ನು ಅಧಿಕಗೊಳ್ಳುವ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ.(ಆರಂಭಿಕ ಅಂಶವು ಮುಂದಿನವಾರದ ಬ್ರೆಡ್ ಗೆ ತೆಗೆದಿರಿಸಲಾಗುತ್ತದೆ.) ಇನ್ನುಳಿದುದನ್ನು ಕುಂಟುಂಬದ ಚಿನ್ಹೆ ಬಳಸಿ ತುಂಡುಗಳನ್ನಾಗಿ ಮಾಡಲಾಗುತ್ತದೆ.(ಇಂದು ಇದನ್ನೇ ಒಂದು ಅಲಂಕಾರಿಕ ಕತ್ತರಿಸಿದ ಚಿನ್ಹೆ ಎಂದು ಹೇಳಲಾಗುತ್ತದೆ.ಇದು ಮೂಲ ಆ ಮನೆತನದ ಗುರುತಾಗಿ ಎಣೆಸಲ್ಪಡುತ್ತದೆ.)ಹೀಗೆ ಅದನ್ನು ನಿಗದಿತ ಕಾವಲಿಗೇ ಕೊಂಡೊಯ್ಯಲಾಗುತ್ತದೆ. ಹೀಗೆ ಸಾಂಪ್ರದಾಯಿಕ ಶೈಲಿಯ ವಾಡಿಕೆಯ ಒಲೆಗಳನ್ನು ಬಳಸಲಾಗುತಿತ್ತು ಆದರೆ ಈಗ ಅವುಗಳ ಬದಲಾವಣೆಗೆ ಇಂದು ಸಾಕಷ್ಟು ಶ್ರಮವಹಿಸಲಾಗಿದೆ.ಇಂದಿನ ಬೇಕರಿಗಳಲ್ಲಿ ಬ್ರೆಡ್ ಸಂಸ್ಕರಣೆ ನಡೆಯುತ್ತದೆ.ವಿಶ್ವದಲ್ಲಿ ಎಲ್ಲರಿಗೂ ಲಭ್ಯವಾಗುವ ದುಬಾರಿಯಲ್ಲದ ಬ್ರೆಡ್ ತಯಾರಿಸಲು ಎಲ್ಲ ಬೇಕರಿ ವೃತ್ತಿಪರರು ಸಫಲರಾಗಿದ್ದಾರೆ.
ಹಬೆಯ ಸಾಕಷ್ಟು ವಿಸ್ತರಣೆಯ ಸಂದರ್ಭದಲ್ಲಿ ಬ್ರೆಡ್ ಹಿಟ್ಟಿಗೆ ಹುಳಿ ಒದಗುತ್ತದೆ.ಇದು ನಿರೀಕ್ಷಿತ ಮತ್ತು ಸರಳ ವಿಧಾನವಾಗಿದೆ. ಅತ್ಯುತ್ತಮ ಹಬೆ ಮೂಲಕ ಬೇಯಿಸಿದ ಹುಳಿ ಬ್ರೆಡ್ ಎಂದರೆ ಪೊಪೊವರ್ಎನ್ನಲಾಗಿದೆ. ಹಬೆ-ಮೂಲದ ಹುಳಿ ಬೆರೆಸುವಿಕೆಯು ಬ್ರೆಡ್ ನ್ನು ಬೇಯಿಸುವವರೆಗೂ ಅದರ ಹಬೆ ಬರಲಾರದು.ಅದಕ್ಕಾಗಿ ಕೆಲಕ್ಷಣ ಕಾಯಬೇಕಾಗುತ್ತದೆ. ಈ ಹಬೆ ಹುಳಿ ಬೆರೆಸುವಿಕೆಯು ಅದರಲ್ಲಿನ ಮಿಶ್ರಣ ವಸ್ತುಗಳ ಪ್ರಮಾಣ ಲೆಕ್ಕಿಸದೇ (ಅಡುಗೆ ಸೋಡಾ,ಈಸ್ಟ್ ,ಬೇಕಿಂಗ್ ಪಾವ್ಡರ್ ,ಹುಳಿ ಹಿಟ್ಟು.ಒಡೆದ ಮೊಟ್ಟೆಗಳು ಇತ್ಯಾದಿ.)ಅದು ಹುಳಿ ಪ್ರಮಾಣ ಪಡೆಯುತ್ತದೆ.
ಕಾವಲಿಯಲ್ಲಿ ಒಮ್ಮೆ ಇಟ್ಟ ಈ ಬ್ರೆಡ್ ನ ಹಿಟ್ಟಿನ ಮುಖ್ಯ ಲಕ್ಷಣವೇ ಇದಾಗಿದೆ. CO2 ಇಲ್ಲಿ ಇಂಗಾಲದ ಡೈಆಕ್ಸೈಡ್ ಉತ್ಪಾದನೆಯು ಅದರಷ್ಟಕ್ಕೇ ಅದೇ ಆಗಿ ಅದರ ಪ್ರಮಾಣ ಏರುವಿಕೆಯಾಗುವುದಿಲ್ಲ. ತಾಪಮಾನವು ಬ್ಯಾಕ್ಟೀರಿಯಾ ಅಥವಾ ಈಸ್ಟ್ ನ್ನು ಆರಂಭದಲ್ಲೇ ಕೊಲ್ಲುತ್ತದೆ.ಹೀಗಾಗಿ CO2 ದ ಉತ್ಪಾದನೆ ಸ್ಥಗಿತಗೊಳ್ಳುತ್ತದೆ.
ಉಪ್ಪು ಏರಿಕೆಯಾಗುವ ಬ್ರೆಡ್ ನ ಲಕ್ಷಣವೆಂದರೆ ಇದು ಬ್ಯಾಕ್ಟೀರಿಯಾ ಮೂಲಕ ಹುಳಿಯಾಗಿಸುವುದರಿಂದ ಇಲ್ಲಿ ಈಸ್ಟ್ ಅಗತ್ಯವಿಲ್ಲ. ಆದರೆ ಹುಳಿ ಬರಿಸುವಿಕೆಯು ಯಾವಾಗಲೂ ಸ್ಥಿರವಾಗಿರುವುದಿಲ್ಲ,ಅದು ಕಾವಲಿಗೆ ಹಾಕುವ ಜೊತೆಗಿನ ವಾತಾವರಣವನ್ನು ಗಮನಿಸಿ ಬ್ರೆಡ್ ಮಾಡುವುದು ಇಂದು ಮರುಹುಟ್ಟು ಪಡೆದು ಬೆಣ್ಣೆ ಸುವಾಸನೆಯ ಅಥವಾ ಉತ್ತಮ ಮೆತು ಎಳೆಯನ್ನು ಪಡೆಯುತ್ತದೆ.[೮]
ಶುದ್ದ ಗಾಳಿಗೆ ಇಟ್ಟ ಬ್ರೆಡ್ ಇಂಗಾಲ ಡೈಆಕ್ಸೈಡ್ ನಿಂದ ಹುಳಿ ಪಡೆಯುತ್ತದೆ.ಇಲ್ಲಿ ನಾದಿದ ಹಿಟ್ಟು ಒತ್ತಾಯಪೂರ್ವಕವಾಗಿ ಹುಳಿಯಾಗುತ್ತದೆ. ಈ ತಂತ್ರಜ್ಞಾನವು ಬಹುಕಾಲದ ವರೆಗೆ ಸಾಮಾನ್ಯರಿಗೆ ಬಲಸಲು ಅನುಕೂಲಕರವಾಗಿರಲಿಲ್ಲ,ಆದರೆ 19 ನೆಯ ಶತಮಾನದಿಂದ 20 ನೆಯ ಶತಮಾನದ ಮಧ್ಯದಲ್ಲಿ ಈ ತೆರನಾಗಿ ಮಾಡುವ ಬ್ರೆಡ್ ಯುನೈಟೆಡ್ ಕಿಂಗ್ಡಮ್ ನಲ್ಲಿ ಜನಪ್ರಿಯವಾಗಿತ್ತು.ಏರಿಯೇಟೆಡ್ ಬ್ರೆಡ್ ಕಂಪನಿಯಿಂದ ತಯಾರಾದ ಇಂತಹ ಬ್ರೆಡ್ ನ್ನು ದೊಡ್ಡ ಬೀದಿಗಳಲ್ಲಿನ ಸಣ್ಣ ಚಹಾದಂಗಡಿಗಳಲ್ಲಿ ಮಾರಲಾಗುತಿತ್ತು.
ಕೊಬ್ಬಿನಾಂಶಗಳಾದ ಬೆಣ್ಣೆ,ತರಕಾರಿ ಎಣ್ಣೆಗಳು(ವನಸ್ಪತಿ),ಹಂದಿಯ ಕೊಬ್ಬು ಅಥವಾ ಮೊಟ್ಟೆಯೊಳಗಣದ ಕೊಬ್ಬು ಗಳ ಬಳಕೆ ಮಾಡಲಾಗುತ್ತದೆ.ಬ್ರೆಡ್ ಗಳಲ್ಲಿನ ಲೇಪನದ ಮೇಲೆ ಅದರ ತಯಾರಿಕೆಯು ಅವಲಂಬಿಸಿದೆ.ಅದರಲ್ಲಿನ ಪ್ರೊಟೀನ್ ಪ್ರಮಾಣ ಮತ್ತು ಬ್ರೆಡ್ ನ ಗಾತ್ರಕ್ಕನುಗುಣವಾಗಿ ಅದನ್ನು ಸಂಸ್ಕರಿಸಲಾಗುತ್ತದೆ. ಬ್ರೆಡ್ ನಲ್ಲಿ ಬಹಳಷ್ಟು ಕೊಬ್ಬು ಬೆರೆಸುವ ಬ್ರೆಡ್ ಹಿಟ್ಟಿನಲ್ಲಿ ಅದರಲ್ಲಿನ ಸಂಚಲಿತ ಎಣ್ನೆಯು ಪ್ರೊಟೀನ್ ಅಕಾರವನ್ನು ವಿಭಜಿಸುತ್ತದೆ. ಸುಮಾರು 3% ರಷ್ಟು ಕೊಬ್ಬು ಇರುವ ಗರಿಷ್ಟ ತೂಕದ ಬ್ರೆಡ್ ಸಾಕಷ್ಟು ಹುಳಿಯಾಗುವ ಕ್ರಿಯೆಗೆ ಒಳಗಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಇದಲ್ಲದೇ ಹುಳಿ ಮಿಶ್ರಣಕ್ಕೆ ನೆರವಾಗುವ ಕೊಬ್ಬು ಬ್ರೆಡ್ ನ್ನು ಮೃದುಗೊಳಿಸಿ ಬಹುಕಾಲದ ವರೆಗೆ ತಾಜಾತನ ಕಾಪಾಡುತ್ತವೆ.
ಬ್ರೆಡ್ ಗೆ ರುಚಿ ನೀಡುವ ಅಥವಾ ಅವುಗಳ ಗಾತ್ರ ಸಿಹಿ,ಹುಳಿಯ ಪ್ರಮಾಣ ಕಾಯುವ ಘಟಕಾಂಶಗಳು ವಾಣಿಜ್ಯಕ ಉದ್ದೇಶಕ್ಕೆ ತಯಾರಾಗುವ ಬ್ರೆಡ್ ಗೆ ಅನುಕೂಲವಾಗಿವೆ. ಸಾಮಾನ್ಯವಾಗಿ ರಾಸಾಯನಿಕ ವಸ್ತುಗಳು ಬ್ರೆಡ್ ಇಂಪ್ರುವರ್ ಗೆ ಸೇರಿಸಲ್ಪಡುತ್ತವೆ;ಅವುಗಳೆಂದರೆ ಸ್ಕರ್ವಿ ರೋಗ ನಿರೋಧಕ ಆಮ್ಲ , ಹೈಡ್ರೊಕ್ಲೊರೈಡ್, ಸೊಡಿಯಮ್ ಮೆಟಾಬಿಸಲ್ಫೇಟ್ , ಅಮೊನಿಯಮ್ ಕ್ಲೊರೈಡ್ , ಹಲವಾರು ಫಾಸ್ಪೇಟ್ಗಳು, ಎಮಿಲೇಸ್, ಮತ್ತು ಪ್ರೊಟೀಸ್ಇತ್ಯಾದಿ. ಸೊಡಿಯಮ್/ಉಪ್ಪು ಇದು ಬ್ರೆಡ್ ತಯಾರಿಕೆಯಲ್ಲಿ ಸರ್ವೆ ಸಾಮಾನ್ಯವಾಗಿ ಬಳಸುವ ದ್ರವ್ಯವಾಗಿದೆ. ಇದು ಸುವಾಸನೆ ಹೆಚ್ಚಿಸುವುದಲ್ಲದೇ ಈಸ್ಟ್ ನ ಕಾರ್ಯಚಟುವಟಿಕೆಯನ್ನು ನಿರ್ಭಂಧಿಸುತ್ತದೆ.ಬ್ರೆಡ್ ಅಂಟಿಕೊಳ್ಳಲು ಮತ್ತು ಬಲಗೊಳ್ಳಲು ತುಣುಕು ಅಥವಾ ತುಂಡುಗಳು ಮೆತ್ತಗೆ ಮತ್ತು ಎಳೆಗಳಾಗಿ ಸಿದ್ದಗೊಳ್ಳಲು ಇದು ಬೇಕು.[೯] ಕೆಲವು ವೃತ್ತಿಪರರು ನಾದಿದ ಹಿಟ್ಟಿಗೆ ಆರಂಭಿಕದಲ್ಲೇ ಉಪ್ಪುನ್ ಹಾಕುವುದಿಲ್ಲ,ನಂತರ 20 ನಿಮಿಷಗಳ "ವಿಶ್ರಾಂತಿ" ನೀಡಿ ನಂತರ ಬೆರೆಸುತ್ತಾರೆ. ಇದನ್ನು ಅಟೊಲೈಸ್,[೧೦] ಎಂದು ಕರೆಯಲಾಗುತ್ತದೆ.ಶುದ್ದೀಕರಣಗೊಂಡ ಮತ್ತು ಸಂಪೂರ್ಣ ಧಾನ್ಯದ ಹಿಟ್ಟನ್ನು ಬಳಸಿ ಮಾಡಲಾಗುತ್ತದೆ.
ಬ್ರೆಡ್ ಬೇಯಿಸುವಿಕೆ | ||
---|---|---|
ಬ್ರೆಡ್ ನ್ನು ಯಾವುದೇ ತಾಪಮಾನದಲ್ಲಿ ಒದಗಿಸಿ ಪೂರೈಸಬಹುದಾಗಿದೆ. ಒಮ್ಮೆ ಅದನ್ನು ಸೂಕ್ತವಾಗಿ ಬೇಯಿಸಿದರೆ ಅದನ್ನು ಸರಿಯಾಗಿ ಬಿಲ್ಲೆ ಯಂತೆ ಮಾರ್ಪಡಿಸಬಹುದು. ಇದನ್ನು ಸಾಮಾನ್ಯವಾಗಿ ಕೈಯಿಂದಲೇ ಅಥವಾ ಕೆಲವು ವೇಳೆ ಚೂರಿ ಮತ್ತು ಫೊರ್ಕ್ ಮೂಲಕ ಸೇವಿಸಬಹುದು. ಅದನ್ನು ಹಾಗೆಯೇ ತಿನ್ನಬಹುದು ಇಲ್ಲವೆ ಇನ್ನಾವದಾದರೂ ಜೊತೆಯ ವ್ಯಂಜನದೊಂದಿಗೆ ತಿನ್ನಬಹುದು.ಇದು ಘನೀಕರಿಸಿದ ಆಹಾರವಾಗಿದೆ. ಬ್ರೆಡ್ ನ್ನು ದ್ರವ ಪದಾರ್ಥಗಳಲ್ಲಿ ಅದ್ದಿಕೊಂಡು ತಿಂದರೆ ಇನ್ನೂ ರುಚಿಕಟ್ಟಾಗಿರುತ್ತದೆ,(ಉದಾಹರಣೆಗೆ ಗ್ರೆವಿ, ಆಲಿವ್ ಎಣ್ಣೆ , ಅಥವಾ ಮೀನು ಸಾರು ಪ್ಯಾಟೆ), ಹೀಗೆ ಅದು ಹಲವಾರು ರುಚಿಗಳೊಂದಿಗೆ ಅಂದರೆ ಸಿಹಿ ಮತ್ತು ಹುಳಿಯೊಂದಿಗೆ ತಿನ್ನಬಹುದು.ಇದು ಎಲ್ಲಾ ಕಾಲಮಾನಕ್ಕೂ ಸಿಗುವುದರಿಂದ ಸರ್ವತ್ರ ಪೂರೈಸಬಹುದು.ಸ್ಯಾಂಡ್ ವಿಚ್ ಎಲ್ಲಾ ತರಹದ ಮಾಂಸ, ಬೆಣ್ಣೆ, ತರಕಾರಿಗಳು ಅಥವಾ ಕಾಂಡಿಮೆಂಟ್ಸ್ಗಳನ್ನು ಬ್ರೆಡ್ ನೊಳಗೆ ಮಿಶ್ರಣ ಮಾಡಿ ಸೇವಿಸಬಹುದಾಗಿದೆ.
ಬ್ರೆಡ್ ಖಂಡ ಭಾಗವನ್ನು ಬ್ರೆಡ್ ಹಿಟ್ಟನ್ನು ಕಾವಲಿನಲ್ಲಿ ಬೇಯಿಸುವಾಗ ಮಾಡಬಹುದಾಗಿದೆ. ಇದನ್ನು ದಿ ಮೆಲ್ಲಿರಡ್ ಪ್ರತಿಕ್ರಿಯೆ ಮೂಲಕ ಬಿರುಸಾಗಿಸುವುದು ಮತ್ತು ಕಂದು ಬಣ್ಣಕ್ಕೆ ತಿರಿಗಿಸಬಹುದು.ಇದಕ್ಕಾಗಿ ಸಕ್ಕರೆ ಮತ್ತು ಅಮಿನೊ ಅಮ್ಲಗಳ ಮಿಶ್ರಣವನ್ನು ಸೂಕ್ತ ತಾಪಮಾನದಲ್ಲಿ ಅದರ ಮುಂಭಾಗವನ್ನು ಬೇಯಿಸಬೇಕಾಗುತ್ತದೆ. ಬ್ರೆಡ್ ನ ತುಂಡು ಅಥವಾ ಖಂಡಗಳು ಬ್ರೆಡ್ ನ ಗುಣ ಮತ್ತು ಅದನ್ನು ಬೇಯಿಸುವ ವಿಧಾನ ಅವಲಂಬಿಸಿದೆ. ವಾಣಿಜ್ಯಕವಾಗಿ ಅಥವಾ ವ್ಯಾಪಾರಿ ಗುಣದ ಬ್ರೆಡ್ ನ್ನು ಜೆಟ್ಸ್ ಬಳಕೆ ಮಾಡಿ ಹಬೆ ಮೂಲಕ ಬೇಯಿಸಿ ಅಗತ್ಯ ತುಂಡುಗಳನ್ನಾಗಿಸಲಾಗುತ್ತದೆ. ಬ್ರೆಡ್ ಮೇಲ್ಪದರದ ತುಂಡು ಭಾಗ ಅಥವಾ ದಪ್ಪನೆಯ ಭಾಗವನ್ನು ಮಕ್ಕಳು ಆಟವಾಡುತ್ತಾ ಎಸೆದು ಬಿಡಬಹುದು.ಹೀಗಾಗಿ ಇವು ಕೆಲವು ವೇಳೆ ಸಮಂಜಸವೆನಿಸಲಾರರು. ಕೆಲವು ಬ್ರೆಡ್ ತಯಾರಿಕಾ ಕಂಪನಿಗಳಾದಸಾರಾ ಲೀ ,ಯಂತಹವು ಅಖಂಡ ಬ್ರೆಡ್ ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ.ಇವುಗಳನ್ನು ಕ್ರಸ್ಟ್ -ಲೆಸ್ ಬ್ರೆಡ್ ಎನ್ನುತ್ತಾರೆ. ಆದರೆ ಬಹಳಷ್ಟು ಜನರಿಗೆ ಈ ಬ್ರೆಡ್ ತುಂಡುಗಳು ಹೊಸ ರುಚಿಯನ್ನು, ಸ್ವಾದಿಷ್ಟತೆಯನ್ನು ಮೂಡಿಸುವಲ್ಲಿ ಸಫಲವಾಗಿವೆ.
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. (June 2006) |
ಅತ್ಯಂತ ಸರಳ,ಸುಲಭ ರೂಪದ ಆಹಾರ ಮತ್ತು ಮೂಲಭೂತ ಆಹಾರವಾಗಿರುವ ಈ ಬ್ರೆಡ್ ;ಇದನ್ನು ಭಾಗಶಃ ಆಹಾರದ ಪೂರ್ಣಾಂಶ ಎಂದು "ಆಹಾರ" ಎಂಬ ಪದಕ್ಕೆ ಸಮನಾಗಿ ಬಳಸುತ್ತಾರೆ.ಇನ್ನು ಕೆಲವು ಭಾಷೆಗಳಲ್ಲಿ ಉದಾಹರಣೆಗೆ ಗ್ರೀಕ್ ಮತ್ತು ಪಂಜಾಬಿಯಲ್ಲಿ ಇದಕ್ಕೆ ಸಂಪೂರ್ಣತೆಯ ಸಾಕಾರವಿದೆ. ವಿಶ್ವದಾದ್ಯಂತ ಬ್ರೆಡ್ ತಯಾರಿಕೆಯ ಮೂಲದಲ್ಲಿ ಹಲವಾರು ವ್ಯತ್ಯಾಸಗಳಿವೆ,ಅವೆಂದರೆ;ಪಿಜ್ಜಾ, ಚಪಾತಿಗಳು, ಬಿಸಿಯಾದ ಬ್ರೆಡ್ಗಳು, ಆಯತಾಕಾರದ ಫ್ರೆಂಚ್ ಬ್ರೆಡ್ಗಳು, ಚಿಕ್ಕ ಬನ್ನುಗಳು, ಹಣ್ಣಿನಿಂದ ಮಾಡಿದ ಬ್ರೆಡ್ಗಳು, ಲಾವಾಶ್, ಬಿಸ್ಕಟ್ಗಳು, ಗರಿಗರಿ ಉಪ್ಪಿನ ಬ್ರೆಡ್ಗಳು, ನಾನ್, ಉರುಳೆ ಬ್ರೆಡ್ಗಳು, ಪೂರಿಗಳು, ಮತ್ತು ಇನ್ನಿತರ ಆಕಾರಗಳು
|
|
|
Seamless Wikipedia browsing. On steroids.