Remove ads
From Wikipedia, the free encyclopedia
ಐರ್ಲೆಂಡ್ (pronounced /ˈaɪrlənd/ ( listen), ಟೆಂಪ್ಲೇಟು:IPA2; ಐರಿಷ್:Éire, pronounced [ˈeːɾʲə] ( ); ಅಲ್ ಸ್ಟರ್ ಸ್ಕಾಟ್ಸ್ ಏರ್ಲಾನ್ ಯುರೋಪನಲ್ಲಿರುವ ಮೂರನೆಯ ಅತಿ ದೊಡ್ಡ ದ್ವೀಪವೆನಿಸಿದೆ.ವಿಶ್ವದಲ್ಲೇ ಇಪ್ಪತ್ತನೆಯ ವಿಶಾಲ ದ್ವೀಪವಾಗಿದೆ. ಇದು ಯುರೋಪ್ ಖಂಡದ ವಾಯುವ್ಯ ಭಾಗದಲ್ಲಿ ವಿಸ್ತರಿಸಿ ತನ್ನ ಸುತ್ತಲೂ ನೂರಾರು ಸಣ್ಣ ಮತ್ತು ಪುಟ್ಟ ದ್ವೀಪಗಳನ್ನು ಒಳಗೊಂಡಿದೆ. ಐರ್ಲೆಂಡಿನ ಪೂರ್ವಭಾಗದಲ್ಲಿ ಐರಿಶ್ ಸಮುದ್ರದಿಂದ ಪ್ರತ್ಯೇಕಗೊಂಡ ಗ್ರೇಟ್ ಬ್ರಿಟನ್ ದ್ವೀಪವಿದೆ. ಒಂದು ಸಾರ್ವಭೌಮ ರಾಜ್ಯವೆನಿಸಿರುವ ಐರ್ಲೆಂಡ್ ಹೆಸರಿನ ಇದು ಇಡೀ ದ್ವೀಪ ಪ್ರದೇಶದ ಆರನೆಯ ಐದು ಭಾಗದ ಪ್ರದೇಶ ಆಕ್ರಮಿಸಿದೆ ಉತ್ತರ ಐರ್ಲೆಂಡ್ ಯುನೈಟೆಡ್ ಕಿಂಗಡಮ್ ನ ಒಂದು ಭಾಗವಾಗಿದ್ದು,ಇನ್ನುಳಿದ ವಾಯುವ್ಯ ಭಾಗವು ಬೃಹತ ದ್ವೀಪಪ್ರದೇಶವನ್ನು ಒಳಗೊಂಡಿದೆ.
Native name: Éire / Ireland | |
---|---|
Geography | |
Location | Northern Europe or Western Europe[೧] |
ವಿಸ್ತೀರ್ಣ | ಟೆಂಪ್ಲೇಟು:Km2 to mi2[೨] |
Area rank | 20th |
ಕಡಲ ತೀರ | 3,700 km (2,300 mi) |
ಸಮುದ್ರ ಮಟ್ಟದಿಂದ ಎತ್ತರ | 1,041 m (3,415 ft) |
ಸಮುದ್ರ ಮಟ್ಟದಿಂದ ಎತ್ತರದ ಸ್ಥಳ | Carrauntoohil |
Country | |
ಐರ್ಲೆಂಡ್ ಗಣರಾಜ್ಯ | |
Largest city | Dublin |
ಯುನೈಟೆಡ್ ಕಿಂಗ್ಡಂ | |
Constituent country | Northern Ireland |
Largest city | Belfast |
Demographics | |
Population | 6,300,000 (as of 2009) |
ಸಾಂದ್ರತೆ | 71 |
Ethnic groups | Irish, Ulster Scots, Irish Travellers |
ಐರ್ಲೆಂಡಿನ ಜನಸಂಖ್ಯೆಯು ಹೆಚ್ಚು ಕಡಿಮೆ ಆರು ದಶಲಕ್ಷಗಳೆಂದು ಅಂದಾಜಿಸಲಾಗಿದೆ.[೩][೪] ಸುಮಾರು ೪.೫ ದಶಲಕ್ಷ ಜನರು ಐರ್ಲೆಂಡ್ ಗಣರಾಜ್ಯದಲ್ಲಿ ವಾಸವಾಗಿದ್ದರೆ ಇನ್ನುಳಿದ ೧.೭೫ ದಶಲಕ್ಷ ಜನರು [೩][೪][೫] ಉತ್ತರ ಐರ್ಲೆಂಡಿನಲ್ಲಿದ್ದಾರೆ ಈ ಜನಸಂಖ್ಯೆಯು ಐತಿಹಾಸಿಕ ಏರಿಕೆ ಎಂದೇ ಹೇಳಲಾಗುತ್ತದೆ ಯಾಕೆಂದರೆ ೧೯೬೦ರ ದಶಕದಲ್ಲಿ ಕೇವಲ ೪.೨ ದಶಲಕ್ಷದ ಜನಸಂಖ್ಯೆ ಕಡಿಮೆ ಪ್ರಮಾಣದ ಏರಿಕೆ ಕಂಡಿತ್ತು. ಹೇಗೆ ಆದರೂ ಈಗಿನ ಜನವಸತಿ ಕೂಡಾ ೧೯ನೆಯ ಶತಮಾನದಲ್ಲಿನ ಪೂರ್ವದ ಭೀಕರ ಬರಗಾಲದ ಪರಿಸ್ಥಿತಿಯಲ್ಲೂ ೮ ದಶಲಕ್ಷದಷ್ಟಿದ್ದ ಜನನಿಬಿಡತೆಗೆ ಹೋಲಿಸಿದರೆ ಇದು ಕಡಿಮೆ ಪ್ರಮಾಣದ ಹೆಚ್ಚಳ ಎಂದೇ [೬] ಹೇಳಲಾಗುತ್ತದೆ.
ಐರ್ಲೆಂಡಿನಲ್ಲಿ ಮೊದಲ ಜನವಸತಿಗೆ ೮೦೦೦BC ಅಷ್ಟು ಹಳೆಯ ಇತಿಹಾಸಾವಿದೆ.ಅಲ್ಲಿ ಸೆಲ್ಟಿಕ್ ಅಂದರೆ ಇಂಡೋ-ಯುರೋಪಿಯನ್ ಮೂಲದ ಭಾಷೆ ಮಾತನಾಡುವ ಜನಾಂಗ ವಾಸವಾಗಿತ್ತೆಂದು ಹೇಳಲಾಗುತ್ತದೆ.ಇದೇ ಐರ್ಲೆಂಡಿನಲ್ಲಿ ೨೦೦BC ಅವಧಿಗೆ ಈ ಜನಾಂಗದ ಪ್ರಾಬಲ್ಯ ಹೆಚ್ಚಾಯಿತು.ಅದಕ್ಕೆ ಪೂರಕವಾಗಿ ವಿಕಿಂಗ್ಸ್ (ಸ್ಕ್ಯಾಂಡೇನಿಯನ್ ಜನಾಂಗ ಇವರು ಯುರೋಪ್ ಕರಾವಳಿ ಪ್ರದೇಶದ ಮೇಲೆ ದಾಳಿ ನಡೆಸಿದ್ದರು) ಮತ್ತು ನಾರ್ಮನ್ಸ್ ಜನಾಂಗದವರು ಮಧ್ಯಯುಗೀನದ 1600s ರ ದಶಕದ ಹೊತ್ತಿಗೆ ಇಂಗ್ಲೀಷರ ಪ್ರಾಬಲ್ಯಕ್ಕೆ ಕಾರಣರಾದರು. ಬಹು ಸಂಖ್ಯಾತ ಕ್ಯಾಥೊಲಿಕ್ ಸಮಾಜದಲ್ಲಿ ಪ್ರೊಟೆಸ್ಟಂಟ್ ಇಂಗ್ಲೀಷ್ ರ ಆಡಳಿತ ಕ್ಯಾಥೊಲಿಕ್ ರನ್ನು ಹೆಮ್ಮೆಟ್ಟಿಸಿತು.ಅಲ್ ಸ್ಟರ್ ಪ್ಲಾಂಟೇಶನ್ (ಐರ್ಲೆಡಿನ ವಿಭಜಿತ ದ್ವೀಪ ಭಾಗ)ನಲ್ಲಿನ ಪ್ಲಾಂಟೇಶನ್ ಗಳ ಒಡೆತನದಿಂದಾಗಿ ವಾಯುವ್ಯ ಭಾಗದಲ್ಲಿ ಪ್ರೊಟೆಸ್ಟಂಟ್ ರು ಬಹುಸಂಖ್ಯೆಯಲ್ಲಿದ್ದರು.
ಐರ್ಲೆಂಡ್ ೧೮೦೧ರಲ್ಲಿ ಯುನೈಟೆಡ್ ಕಿಂಗಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡಾಗಿ ಮಾರ್ಪಟ್ಟಿತು. ಮಧ್ಯಭಾಗದ ೧೮೦೦ರ ಸುಮಾರಿಗೆಸಂಭವಿಸಿದ ಒಂದು ಭೀಕರ ಬರಗಾಲವು ದೊಡ್ದ ಪ್ರಮಾಣದ ಸಾವು-ನೋವು ಮತ್ತು ವಲಸೆಗೆ ಕಾರಣವಾಯಿತು. ಐರಿಶ್ ಸ್ವಾತಂತ್ರ್ಯ ಸಮರ ೧೯೨೧ರಲ್ಲಿ ಕೊನೆಗೊಂಡ ನಂತರ ಬ್ರಿಟಿಷ್ ಸರ್ಕಾರದೊಂದಿಗೆ ಆಂಗ್ಲೊ-ಐರಿಶ್ ಶಾಂತಿ ಒಪ್ಪಂದವೊಂದಕ್ಕೆ ಸಹಿ ಹಾಕುವ ಮೂಲಕ ಐರಿಶ್ ಮುಕ್ತ ರಾಜ್ಯ ನಿರ್ಮಾಣಕ್ಕೆ ದಾರಿಯಾಯಿತು. ಇದು ಬ್ರಿಟಿಶ್ ಸಾಮ್ರಾಜ್ಯದ ಸ್ವತಂತ್ರ ಆಂತರಿಕ ಪರಿಣಾಮಕಾರಿ ಆಡಳಿತ ರಾಜ್ಯವೆನಿಸಿದ್ದರೂ ಸಾಂವಿಧಾನಿಕವಾಗಿ ಬ್ರಿಟಿಶ್ ರಾಜ ಪ್ರಭುತ್ವಕ್ಕೆ ಆಧೀನವಾಗಿತ್ತು. ಉತ್ತರ ಐರ್ಲೆಂಡ್ ೩೨ಐರ್ಲೆಂಡ್ ನ ಪುಟ್ಟ ಸ್ವತಂತ್ರ ಸ್ಥಳೀಯ ಐರ್ಲೆಂಡ್ ಸರ್ಕಾರದ ಆಡಳಿತದಲ್ಲಿನ ಆರು ಭಾಗಗಳನ್ನು ಒಳಗೊಂಡಿದೆ.ಇದು 1921ರಲ್ಲಿ ಸ್ಥಾಪಿತ ಶಾಂತಿ ಒಪ್ಪಂದದ ತತ್ ಕ್ಷಣವೇ ಕಾರ್ಯಪ್ರವೃತ್ತವಾಗಿ ಯುನೈಟೆದ್ ಕಿಂಗಡಮ್ ನೊಂದಿಗೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಫಲವಾಯಿತು ಇಸವಿ ೧೯೩೭ರಲ್ಲಿ ಹೊಸ ಸಂವಿಧಾನವೊಂದು ಐರಿಶ್ ಮುಕ್ತ ರಾಜ್ಯಕ್ಕೆ ವಿದಾಯ ಹೇಳಿ ಸಂಪೂರ್ಣ ಸ್ವತಂತ್ರ ರಾಜ್ಯ ಐರ್ಲೆಂಡಾಗಿ ಹೊರಹೊಮ್ಮಿತು.ನಂತರ ಕಾಮನ್ ವೆಲ್ಥ್ ನಿಂದ ಬೇರ್ಪಟ್ಟು 1949 ರಲ್ಲಿ ಗಣರಾಜ್ಯವಾಗಿ ಐರ್ಲೆಂಡ್ ಆಗಿ ಮಾರ್ಪಟ್ಟಿತು. ಇಸವಿ೧೯೭೩ ರಲ್ಲಿ ಐರ್ಲೆಂಡಿನ ಎರಡೂ ಭಾಗಗಳು ಯುರೋಪಿಯನ್ ಕಮುನಿಟಿಗೆ ಸೇರಿದವು ಉತ್ತರ ಐರ್ಲೆಂಡಿನಲ್ಲಿ ನ ಸಂಘರ್ಷದ ೧೯೬೦ರ ಘಟನೆಗಳು ಸುಮಾರು ೧೯೯೦ರ ತನಕ ಅಶಾಂತಿಯನ್ನು ಉಂಟು ಮಾಡಿದವು.ಆದರೆ ೧೯೯೮ರ ರಾಜಕೀಯ ಒಪ್ಪಂದದ ನಂತರ ಇವು ತಹಬದಿಗೆ ಬಂದವು.
ಐರ್ಲೆಂಡ್ ಎಂಬ ಹೆಸರು (ಆಧುನಿಕ ಕಾಲದಲಿ ಐರಿಶ್ ಈರೆ ) ಸೆಲ್ಟಿಕ್ ದೇವತೆ ಈರೆ ಗೆ ಸಂಬಂಧಿಸಿದ್ದಾಗಿದೆ.ಹೆಚ್ಚಾಗಿ ಜರ್ಮನಿ ಶಬ್ದ ಭೂಪ್ರದೇಶ ಎಂದೂ ಕರೆಯಲಾಗುತ್ತದೆ
ಐರ್ಲೆಂದ್ ಎರಡು ತನ್ನದೇ ಆದ ರಾಜಕೀಯ ವಿಂಗಡಿತ ಭೂಭಾಗಗಳನ್ನು ಆವರಿಸಿಕೊಂಡಿದೆ:
ಸಾಂಪ್ರದಾಯಿಕವಾಗಿ ಐರ್ಲೆಂಡ್ ನಾಲ್ಕು ಪ್ರಾಂತಗಳಾಗಿ ಉಪವಿಭಾಗಗಳಲ್ಲಿ ವಿಭಜಿಸಲ್ಪಟ್ಟಿದೆ.ಕೊನಾಕ್ಟ್ (ಪಶ್ಚಿಮ),ಲೀನ್ ಸ್ಟರ(ಪೂರ್ವ),ಮುನಸ್ಟರ್ (ದಕ್ಷಿಣ),ಮತ್ತು ಅಲ್ ಸ್ಟರ್ (ಉತ್ತರ). ಶತಮಾನ ೧೩ ಮತು ೧೭ರ ನಡುವೆ ಅಭಿವೃದ್ಧಿ ಕಂಡ ಐರ್ಲೆಂಡ್ ಮೂವತ್ತೆರಡು ಸಾಂಪ್ರದಾಯಿಕ ಸಣ್ಣ ದ್ವೀಪ ಪ್ರದೇಶಗಳನ್ನು [೭] ಹೊಂದಿದೆ. ಸಣ್ಣ ದ್ವೀಪ ಪ್ರದೇಶಗಳ ಪೈಕಿ ಇಪ್ಪತ್ತಾರು ಐರ್ಲೆಂಡ್ ಗಣರಾಜ್ಯಕ್ಕೆ ಸೇರಿವೆ.ಅದರಲ್ಲಿ ಆರು ಸಣ್ಣ ದ್ವೀಪ ಪ್ರದೇಶಗಳು ಉತ್ತರ ಐರ್ಲೆಂಡಿಗೆ ಸೇರಿವೆ.
ಅಲ್ ಸ್ಟರ್ ನ ಒಂಭತ್ತು ಸಣ್ಣ ದ್ವೀಪ ಪ್ರದೇಶಗಳಲ್ಲಿ ಆರು ಉತ್ತರ ಐರ್ಲೆಂಡನ್ನು ರಚಿಸಿದರೆ ಉಳಿದವು ಅಲ್ ಸ್ಟರ್ ನ ಲ್ಲಿವೆ.(ಒಟ್ಟು ಒಂಭತ್ತು ಸಣ್ಣ ದ್ವೀಪಗಳನ್ನು ಇದು ಹೊಂದಿದೆ) ಆದರೆ"ಅಲ್ ಸ್ಟರ್ "ನ್ನು ಉತ್ತರ ಐರ್ಲೆಂಡಿಗೆ ಸಮಾನರ್ಥಕವಾಗಿ ಬಳುಸುತ್ತಾರೆ.ಇಲ್ಲಿ ಮಾತ್ರ ಅಲ್ ಸ್ಟರ್ ಮತ್ತು ಉತ್ತರ ಐರ್ಲೆಂಡ್ ಸಮಾನವೂ ಇಲ್ಲ ಅಥವಾ ಸಹವರ್ತಿ-ಪ್ರದೇಶಗಳಾಗಿಲ್ಲ. ಸಣ್ಣ ದ್ವೀಪಗಳಾಗಿರುವ ಡಬ್ಲಿನ,ಕ್ವಾರ್ಕ,ಲಿಮರಿಕ,ಗಾಲ್ವೆ,ವಾಟರ್ ಫೊರ್ಡ್ ಮತ್ತು ಟಿಪ್ಪರರಿ ಇವು ಸಣ್ಣ ಆಡಳಿತಾತ್ಮಕ ಪ್ರದೇಶಗಳಾಗಿ ಒಡೆದು ಹೋಗಿವೆ. ಆದಾಗ್ಯೂ ಇವೆಲ್ಲ ಸದ್ಯ ಐರ್ಲೆಂಡಿನ ಸರ್ವೇಕ್ಷಣಾ ವ್ಯಾಪ್ತಿಗೆ ಒಳಪಟ್ಟ ಅಧಿಕೃತ ಸಣ್ಣ ದ್ವೀಪ ಸಮೂಹಗಳಾಗಿವೆ. ಉತ್ತರ ಐರ್ಲೆಂಡಿನ ಸಣ್ಣ ದ್ವೀಪಗಳನ್ನು ಸ್ಥಳೀಯ ಸರ್ಕಾರೀ ಆಡಳಿತ ಉದ್ದೇಶಗಳಿಗಾಗಿ ಬಳಸಲಾಗುತ್ತಿಲ್ಲ.ಆದರೆ ಸಾಂಪ್ರದಾಯಕ ವಾಡಿಕೆಗೆ ಅನುಗುಣವಾಗಿ ಲೀಗ್ ಕ್ರೀಡಾ ಕೂಟಗಳು ಮತ್ತು ಕೆಲವು ಸಾಂಸ್ಕೃತಿಕ,ಸಮಾರಂಭ ಅಥವಾ ಸಡಗರಗಳ ಆಚರಣೆ ಅಥವಾ ಪ್ರವಾಸೋದ್ಯಮದ ಸಂದರ್ಭದಲ್ಲಿ ಒಟ್ಟಾಗಿ [೮] ಉಪಯೋಗಿಸಲಾಗುತ್ತದೆ.
ಪ್ರಾಂತ | ಜನಸಂಖ್ಯೆ[೯] | ಪ್ರದೇಶ (ಕಿ.ಮೀ) | ಪ್ರದೇಶ (ಚದರು ಕಿ.ಮೀ) | ಅತಿ ದೊಡ್ಡ ನಗರ |
---|---|---|---|---|
ಕೊನಾಕ್ಟ್ | ೫೦೪,೧೨೧ | ೧೭,೭೧೩ | ೬,೮೩೯ | ಗಾಲ್ವೆ |
ಲೀನ್ ಸ್ಟರ್ | ೨,೨೯೫,೧೨೩ | ೧೯,೭೭೪ | ೭,೬೩೫ | ಡಬ್ಲಿನ್ |
ಮುನ್ ಸ್ಟರ್ | ೧,೧೭೩,೩೪೦ | ೨೪,೬೦೮ | ೯,೫೦೧ | ಕ್ವಾರ್ಕ್ |
ಅಲ್ ಸ್ಟರ್ | ೧,೯೯೩,೯೧೮ | ೨೪,೪೮೧ | ೯,೪೫೨ | ಬೆಲ್ಫಾಸ್ಟ್ |
ರಾಜಕೀಯ ವಿಭಜನೆ ಇದ್ದರೂ ಸಹ ಐರ್ಲೆಂಡಿನ ನಡುಗಡ್ದೆ ಪ್ರದೇಶಗಳು ಹೆದ್ದಾರಿ ಮತ್ತು ರೈಲ್ವೆ ಸೌಲಭ್ಯ,ವಿದ್ಯುತ್ ಮತ್ತು ನೀರು ಸರಬರಾಜು ವ್ಯವಸ್ಥೆಗಳು,ರೇಡಿಯೋ ಮತ್ತು ಟೆಲೆವಿಜನ್ ಪ್ರಸಾರ ಸೌಕರ್ಯಗಳು ಹಾಗು ದೂರವಾಣಿ ಸಂಪರ್ಕ ಮತ್ತು ಇಂಟರ್ ನೆಟ್ ವ್ಯವಸ್ಥೆಗಳಲ್ಲಿ ಪಾಲು ಪಡೆದಿವೆ. Satellite communications and the Internet serve all parts of Ireland and interconnect them with each other, as well as with the rest of the world. ಐರ್ಲೆಂಡ್ ಒಂದು ಏಕೈಕ ಪರಮಾಧಿಕಾರ ಹೊಂದಿರುವ ರಾಜ್ಯದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.ಸರ್ಕಾರದ ಅಧಿಕಾರ ಚಲಾವಣೆಯಲ್ಲಿ ಸಹ ಅದು ಏಕ ಸ್ವಾಮ್ಯತೆ ಹೊಂದಿದೆ ಎಂದು ಹೇಳಬಹುದು. ಕೆಲವು ಅಪವಾದಗಳೆಂಬಂತೆ ಈ ದ್ವೀಪ ಏಕೈಕ ಪರ್ಮಾಧಿಕಾರವನ್ನು ಚಲಾಯಿಸುತ್ತದೆ.ಬಹು ಮುಖ್ಯವಾಗಿ ಧಾರ್ಮಿಕ ಕ್ಸೇತ್ರದ ಪ್ರದರ್ಶನಗಳು,ಹಲವು ಆರ್ಥಿಕ ಕ್ಷೇತ್ರಗಳಲ್ಲಿ ಎರಡು ವಿಭಿನ್ನ ಕರೆನ್ಸಿ ಬಳಸಿದರೂ ಸಮಗ್ರತೆ ಕಾಯ್ದುಕೊಳ್ಳುತ್ತದೆ.ಹಾಗೆಯೇ ಕ್ರೀಡೆಗಳಾದ ಗೇಲಿಕ್ ಕ್ರೀಡೆಗಳು,ರಗ್ ಬೈ,ಗಾಲ್ಫ,ಟೆನ್ನಿಸ,ಬಾಕ್ಸಿಂಗ,ಕ್ರಿಕೆಟ,ಮತ್ತು ಫೀಲ್ದ್ ಹಾಕ್ಕಿ ಮುಂತಾದವುಗಳಲ್ಲಿ ಒಂದೇ ಘಟಕವಾಗಿ ಕಾರ್ಯ ನಿರ್ವಹಿಸುತ್ತದೆ. ಎಲ್ಲ ಪ್ರಮುಖ ಧಾರ್ಮಿಕ ಸಂಸ್ಥೆಗಳು ಅಖಿಲ ಐರ್ಲೆಂಡ್ ನ ತಳಹದಿಯ ಮೇಲೆ ಸಂಘಟಿಸಲ್ಪಡುತ್ತವೆ.ಸದ್ಯ ಗ್ರಾಂಡ್ ಆರೇಂಜ್ ಲಾಜ್ ಆಫ್ ಐರ್ಲೆಂಡ್ ಅಂದರೆ ಐರ್ಲೆಂಡಿಗೆ ತನ್ನದೇ ಆದ ಧಾರ್ಮಿಕ ಸಂಘಟನೆಗಳಿಗೆ ನೆಲೆ ಮತ್ತು ಆಶ್ರಯ ಒದಗಿಸುವ ಎಲ್ಲ ಪ್ರಕಾರದ ನೀತಿ-ನಿಯಮಗಳಿವೆ. ಕೆಲವು ಟ್ರೇಡ್ ಯುನಿಯನ್ ಗಳು ಸಹ ಸಮಗ್ರ ದ್ವೀಪ ಸಮೂಹದ ತಳಹದಿ ಮೇಲೆ ಜೊತೆಗೆ ಡಬ್ಲಿನ್ ನಲ್ಲಿರುವ ಐರಿಶ್ ಕಾಂಗ್ರೆಸ್ ಆಫ್ ಟ್ರೇಡ್ ಯುನಿಯನ್ ನ ಸಹಯೋಗವನ್ನೂ ಹೊಂದಿವೆ.ಉಳಿದವು ಉತ್ತರ ಐರ್ಲೆಂಡಿನಲ್ಲಿರುವವುಗಳು ಯುನೈಟೆಡ್ ಕಿಂಗಡಮ್ ನಲ್ಲಿರುವ ಟ್ರೇಡ್ಸ್ ಯುನಿಯನ್ ಕಾಂಗ್ರೆಸ್ ಅಡಿಯಲ್ಲಿ ಅಧೀನ ಕಾರ್ಯ ನಿರ್ವಹಿಸುತ್ತವೆ. ಕೆಲವು ಎರಡೂ ಕಡೆಗಳ ಅಧೀನಕ್ಕೆ ಒಳಪಟ್ಟು ದ್ವೀಪ ಮತ್ತು ಗ್ರೇಟ್ ಬ್ರಿಟನ್ ನೊಂದಿಗೆ ಸೇರಿ ಎರಡೂ ಕಡೆಯಿಂದ ಕಾರ್ಯಪ್ರವೃತ್ತವಾಗಿವೆ.ಐರ್ಲೆಂಡಿನ ಉತ್ತರೈರ್ಲೆಂಡಿನ ಯುನಿಯನ್ ಆಫ್ ಸ್ಟುಡೆಂಟ್ಸ್ ಇನ್ ಐರ್ಲೆಂಡ್(USI) ಜಂಟಿಯಾಗಿ ನ್ಯಾಶನಲ್ ಯುನಿಯನ್ ಆಫ್ ಸ್ಟುಡೆಂಟ್ಸ್ ಆಫ್ ದಿ ಯುನೈಟೆಡ್ ಕಿಂಗಡಮ್(NUS),ಇದು NUS-USIಯೊಂದಿಗೆ ಸೇರಿ ಕಾರ್ಯ ನಿರ್ವಹಿಸುತ್ತದೆ.ಮಾರ್ಚ್ ೧೭ ಸೇಂಟ್ ಪ್ಯಾಟ್ರಿಕ್ ದಿನಾಚರಣೆಯು ರಾಜ್ಯಾಂದ್ಯಂತೆ ಐರಿಶ್ ರಜಾದಿನವಾಗಿದೆ.
ಇದಕ್ಕೆ ಒಂದು ಅಪವಾದಕ್ಕೆ ಅಸೋಶಿಯೇಶನ್ ಫೂಟ್ ಬಾಲ್ ಸಂಸ್ಥೆ ಇದರಲ್ಲಿದೆ. ಭಿನ್ನಾಭಿಪ್ರಾಯದಿಂದಾಗಿ ಈ ಹಿಂದೆ ಸಮಗ್ರ ದ್ವೀಪದ ಐರಿಶ್ ಫೂಟ್ ಬಾಲ್ ಅಸೋಶಿಯೇಶನ್ ಯ ಡಬ್ಲಿನ್ ಮತ್ತು ಬೆಲ್ ಫೆಸ್ಟ್ ನ ಫೂಟ್ ಬಾಲ್ ಅಸೋಶಿಯೇಶನ್ನಿನಲ್ಲಿ ವಿವಾದ ಉಂಟಾಗಿ ಅವು ಪ್ರತ್ಯೇಕ ಅಸ್ತಿತ್ವಕ್ಕೆಮುಂದಾದವು.ಇದರಿಂದಾಗಿ ಪ್ರತ್ಯೇಕ ಫೂಟ್ ಬಾಲ್ ಅಸೋಶಿಸಿಯೇಶನ್ ಐರ್ಲೆಂಡ್ ಐರಿಶ್ ಮುಕ್ತ ರಾಜ್ಯದಲ್ಲಿ ರಚನೆಯಾಯಿತು.ಆದರೂ ೧೯೫೦ರ ವರೆಗೆ "ಐರ್ಲೆಂಡ" ಹೆಸರಿನ ಮೇಲೆಯೇ ತಂಡಗಳು ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದವು. .ಒಂದು ಸಮಗ್ರ-ಐರ್ಲೆಂಡ್ ಕ್ಲಬ್ ಕಾಂಪಿಟಿಶನ,ಸೆಟಾಂಟಾ ಕಪ್ ಪ್ರಶಸ್ತಿಯನ್ನು ೨೦೦೫ರಲ್ಲಿ ರಚನೆ ಮಾಡಲಾಯಿತು.
ಬೆಲ್ ಫಾಸ್ಟ್ ನ ಒಪ್ಪಂದದ ಸ್ಟ್ರೆಂಡ್ ೨ ಸಮಗ್ರ ಐರ್ಲೆಂಡಿನ ಸಹಕಾರವನ್ನು ವಿವಿಧ ರೂಪಗಳಲ್ಲಿ ವ್ಯಾಖ್ಯಾನಿಸುತ್ತದೆ. ಉದಾಹರಣೆಗಾಗಿ ವಾಯವ್ಯ ಮಂತ್ರಿಗಳ ಪರಿಷತ್ ವೊಂದನ್ನು ಅಸ್ತಿತ್ವಕ್ಕೆ ತಂದು ಅಲ್ಲಿ ಐರಿಶ್ ಸರ್ಕಾರ ಮತ್ತು ಉತ್ತರ ಐರ್ಲೆಂಡಿನ ಕಾರ್ಯಕಾರಿಯು ಸಮಗ್ರ ಅಭಿವೃದ್ಧಿಪರ ವಲಯಗಳಲ್ಲಿ ಪರಸ್ಪರ ಸಹಕಾರಕ್ಕೆ ವೇದಿಕೆಯೊಂದನ್ನು ರಚಿಸಲಾಯಿತು.ಸುಮಾರು ಹನ್ನೆರೆಡು ಕ್ಷೇತ್ರಗಳಲ್ಲಿ "ಸಹಕಾರದ ಕ್ಷೇತ್ರದ ಪ್ರದೇಶಗಳೆಂದು"ಆಯ್ಕೆ ಮಾಡಿಕೊಳ್ಳಲಾಯಿತು.ಅಂದರೆ ಕೃಷಿ,ಪರಿಸರ ಮತ್ತು ಸಾರಿಗೆಯಂತಹ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಮುಂದಾಗಲಾಯಿತು. ಇಂತಹ ಆರು ಸೂತ್ರಗಳಿಗೆ ಜಾರಿಗೊಳಿಸುವ ತಂಡವನ್ನು ಒದಗಿಸಲಾಗಿದೆ.ಉದಾಹರಣೆಗಾಗಿ ಆಹಾರ ಸುರಕ್ಷತೆ ಉತ್ತೇಜನಾ ಮಂಡಳಿ ಇಲ್ಲಿ ಜಾರಿ ನಿರ್ದೇಶನಾಲಯದ ಕೆಲಸ ಮಾದುತ್ತದೆ. ಪ್ರವಾಸೋದ್ಯಮ ಮಾರುಕಟ್ಟೆ ಕೂಡ ಪ್ರವಾಸೋದ್ಯಮದ ಐರ್ಲೆಂಡ್ ಹೆಸರಲ್ಲಿ ಸಮಗ್ರ ಐರ್ಲೆಂಡ್ ತಳಹದಿ ಮೇಲೆ ಕಾರ್ಯಭಾರ ನಿರ್ವಹಿಸುತ್ತದೆ. ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಸಿನ್ ಫೇಯಿನ್ ,ಐರಿಶ್ ಗ್ರೀನ್ ಪಾರ್ಟಿ,ಮತ್ತು ಇತ್ತೀಚಿನ ಫೇಯಿನ್ನಾ ಫಾಯೇಲ್ ಗಳು ಸಮಗ್ರ ದ್ವೀಪದ ತಳಹದಿ ಮೇಲೆ ಕಾರ್ಯನಿರ್ವಹಿಸುತ್ತವೆ. ಆದಾಗ್ಯೂ ಮೊದಲ ಎರಡು ಪಕ್ಷಗಳು ಮಾತ್ರ ಇದುವರೆಗೆ ಚುನಾವಣೆಯಲ್ಲಿ ಸ್ಫರ್ಧಿಸಿ ಶಾಸಕತ್ವದ ಸೀಟುಗಳನ್ನುಗಳಿಸಿವೆ.
ಬಹುತೇಕ ದೊಡ್ಡ ಪ್ರಮಾಣದ ವಾಣಿಜ್ಯಿಕ ಚಟುವಟಿಕೆಗಳನ್ನು ಸಮಗ್ರ-ಐರ್ಲೆಂಡ್ ತಳಹದಿ ಮೇಲೆ ಕೈಗೊಳ್ಳುತ್ತಿರುವುದರಿಂದ ಎರಡೂ ವ್ಯಾಪ್ತಿ ಪ್ರದೇಶಗಳು ಯುರೋಪಿಯನ್ ಯುನಿಯನ್ ನ ಸದಸ್ಯತ್ವಕ್ಕೆ ಭಾಜನವಾಗಿವೆ. "ಸಮಗ್ರ-ದ್ವೀಪದ ಆರ್ಥಿಕತೆ"ಯನ್ನು ರಚಿಸುವಂತೆ ಎರಡೂ ಕಡೆಯ ವ್ಯಾಪಾರಿ ವಲಯ ಮತ್ತು ಸೂತ್ರ-ನೀತಿ ನಿರೂಪಕರಿಂದ ಒತ್ತಾಯದ ಕೂಗು ಕೇಳಿ ಬರುತ್ತಿದೆ.ಇದರಿಂದ ಆರ್ಥಿಕತೆಯ ಮಟ್ಟವನ್ನು ಶ್ರೇಣಿಕರಿಸಿ ಎರಡೂ ಆಡಳಿತ ಕ್ಷೇತ್ರ ವ್ಯಾಪ್ತಿಯಲ್ಲಿ ಪೈಪೋಟಿಗೆ ಇನ್ನಷ್ಟು ಬಲ [೧೦] ನೀಡಬಹುದಾಗಿದೆ. ಇಂತಹ ಗುರಿ ತಲುಪುವ ಆರಂಭಿಕಮೊದಲ ಹೆಜ್ಜೆಗೆ ಉತ್ತರ ಐರ್ಲೆಂಡಿನ ರಾಷ್ಟ್ರವಾದಿ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಐರಿಶ್ ಸರ್ಕಾರಕ್ಕೆ ತಮ್ಮ ಬೆಂಬಲ [೧೧] ವ್ಯಕ್ತಪಡಿಸಿವೆ. ಈಗಾಗಲೇ ಒಂದು ವಾಣಿಜ್ಯ ವಲಯದ ಮಹತ್ವದ ವಿದ್ಯುತ್ ಮಾರುಕಟ್ಟೆ ವಿಭಾಗದಲ್ಲಿ ಈ ದ್ವೀಪವು ದೊಡ್ದ ಪ್ರಮಾಣದಲ್ಲಿ ಏಕಾಂಗಿಯಾಗಿ ಕಾರ್ಯ ನಿರ್ವಹಿಸುತ್ತದೆ.ಅಲ್ಲದೇ ಮುಂಬರುವ ದಿನಗಳಲ್ಲಿ ಸಮಗ್ರ-ದ್ವೀಪದ ತಳಹದಿ ಮೇಲೆ(ಗ್ಯಾಸ) ಅನಿಲಕ್ಕಾಗಿ ಮಾರುಕಟ್ಟೆ ಕುರಿತಂತೆ ಒಟ್ಟಾರೆ ಕಾರ್ಯಕ್ಕೆ ಅಣಿಯಾಗುವ {1){2/}/}ಯೋಜನೆಗಳಿವೆ.
ಡಬ್ಲಿನ್ ನಂತರ ಗ್ರೇಟರ್ ಡಬ್ಲಿನ್ ಏರಿಯಾ ಪರಿಗಣಿಸಿದರೆ ಅತ್ಯಧಿಕ ಅಂದರೆ ೧.೭ ದಶಲಕ್ಷ,ಐರ್ಲೆಂಡಿನ ದೊಡ್ದ ನಗರಗಳೆಂದರೆ:
ಹಲವು,ವಿಭಿನ್ನ ಐರಿಶ್ ಪಟ್ಟಣಗಳು ಇವುಗಳಿಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿದ್ದರೂ ಸಹ ಅವುಗಳಿಗೆ ಐತಿಹಾಸಿಕ ಗುಣಲಕ್ಷಣಗಳ ಕೊರತೆಯಿಂದ ನರಳುತ್ತಿವೆ.
ಈ ದ್ವೀಪದ ಮೇಲೆ ಮೂರು ವಿಶ್ವ ಪರಾಂಪರೆಯ ಪಟ್ಟಿಯಲ್ಲಿರುವ ತಾಣಗಳಿವೆ.ಅವುಗಳೆಂದರೆ,ಬೆಂಡ್ ಆಫ್ ದಿ ಬೊಯ್ನೆ, ಸ್ಕೆಲ್ಲಿಂಗ್ ಮೈಕೆಲ್ ಮತ್ತು [೧೨]ಜೇಂಟ್ಸ್ ಕಾಜ್ ವೇ. ಹಲವಾರು ಪ್ರದೇಶಗಳು ಪಟ್ಟಿಗೆ ಸೇರಲು ತಾತ್ಕಾಲಿಅವಾಗಿ ಎನ್ನುವಂತೆ ಕಾಯುತ್ತಿವೆ.ಉದಾಹರಣೆಗಾಗಿ ದಿ ಬರ್ರೇನ್ ಮತ್ತು[೧೩] ಮೌಂಟ್ ಸ್ಟೆವರ್ಟ.
ಐರ್ಲೆಂಡಿನಲ್ಲಿ ಅಗತ್ಯ ಸಂದರ್ಶಿಸಬೇಕಾದ ಸ್ಥಳಗಳೆಂದರೆ,ಬನ್ರಾಟ್ಟಿ ಕ್ಯಾಸ್ಟಲ,ದಿ ರಾಕ್ ಆಫ್ ಕ್ಯಾಶೆಲ,ದಿ ಕ್ಲಿಫ್ಸ್ ಆಫ್ ಮೊಹೆರ,ಹೋಲಿ ಕ್ರಾಸ್ ಅಬ್ಬಿ ಮತ್ತು [೧೪]ಬ್ಲೇರ್ನಿ ಕ್ಯಾಸ್ಟಲ್ ಐತಿಹಾಸಿಕವಾಗಿ ಮಹತ್ವ ಪಡೆದ ಕ್ರೈಸ್ತ ಸನ್ಯಾಸಿಗಳು ವಾಸಸ್ಥಾನಗಳು,ಗ್ಲೆಂಡಾಲೋಘ್ ಮತ್ತು ಕ್ಲೊಮ್ಯಾಕ್ ನೊಯಿಸ,ಇವುಗಾಳನ್ನು ರಾಷ್ಟ್ರೀಯ ಸ್ಮಾರಕಗಳಂತೆ [೧೫] ಸಂರಕ್ಷಿಸಲಾಗಿದೆ. ಡಬ್ಲಿನ್ ನಗರವು ಅತಿ ಹೆಚ್ಚು ಪ್ರವಾಸಿಗಳನು ಆಕರ್ಷಿಸುವ ಪ್ರದೇಶ,ಮತ್ತು ಬಹುಜನಪ್ರಿಯ ಆಕರ್ಷಣೆಗಳಾದ ಗಿನ್ನೀಸ್ ಸ್ಟೋರ್ ಹೌಸ್ ಮತ್ತು ಬುಕ್ ಆಫ್ ಕೆಲ್ಸ್ [೧೪][೧೪] ಸೇರಿವೆ. ಪಶ್ಚಿಮ ಮತ್ತು ವಾಯವ್ಯ ಭಾಗದಲ್ಲಿ ಕಿಲ್ಲರ್ನಿಯ ಸರೋವರಗಳು ಮತ್ತು ಡಿಂಗ್ಲೆ ನಡುಗಡ್ದೆಗಳು ಕೌಂಟಿ ಕೆರ್ರಿ ಮತ್ತು ಕೊನ್ನೆಮರಾ ಹಾಗು ಅರನ್ ದ್ವೀಪಗಳು {{1/}0}ಕೌಂಟಿ ಗಾಲ್ವೇನಲ್ಲಿವೆ.
ಸ್ಟೇಟ್ಲಿ ಹೋಮ್ಸ್ ಗಳನ್ನು 17,18 ಮತ್ತು 19ನೆಯ ಶತಮಾನದಲ್ಲಿ ವಿವಿಧ ಶೈಲಿಗಳಲ್ಲಿ ನಿರ್ಮಿಸಲಾಯಿತು.ಪಲ್ಲಡಿಯನ್,ಶಿಲಾಯುಗದ ನೂತನ ಆವಿಷ್ಕಾರ,ಮತ್ತು ಗೊಥಿಕ್ ನ ನವೀನ ವಿನ್ಯಾಸಗಳಲ್ಲಿ ವಸತಿ ಸಮುಚ್ಛಯಗಳು ನಿರ್ಮಾಣಗೊಂಡವು.ಅವುಗಳಲ್ಲಿ,ಕ್ಯಾಸ್ಟಲ್ ವಾರ್ಡ,ಕ್ಯಾಸ್ಟಲ್ ಟೌನ್ ಹೌಸ್ ,ಬಂಟ್ರಿ ಹೌಸ್ ಇವೂ ಸಹ ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರಗಳಾಗಿವೆ ಕೆಲವು ಸ್ಮಾರಕಗಳನ್ನು ಹೊಟೇಲ್ ಗಳನ್ನಾಗಿ ಮಾರ್ಪಡಿಸಲಾಗಿದೆ.ಅವುಗಳಲ್ಲಿ ಆಶ್ ಫೋರ್ಡ್ ಕ್ಯಾಸ್ಟಲ,ಕ್ಯಾಸ್ಟಲ್ ಲೇಸ್ಲಿ ಮತ್ತು ಡ್ರೊಮೊಲ್ಯಾಂಡ್ ಕ್ಯಾಸ್ಟಲ್
84,421 km2 (32,595 sq mi)[೨] ಐರ್ಲೆಂಡಿನ ಭೂಪ್ರದೇಶ ದ್ವೀಪವನ್ನು ಕರಾವಳಿಯ ವೃತ್ತಾಕಾರದ ಬೆಟ್ಟಗಳು ಸುತ್ತುವರಿದಿದ್ದು ಮಧ್ಯಭಾಗದಲ್ಲಿ ಸಮತಟ್ಟಾದ ಭೂಪ್ರದೇಶವನ್ನು ಕಾಣಬಹುದು. [[}ಕೌಂಟಿ ಕೆರ್ರಿ|}ಕೌಂಟಿ ಕೆರ್ರಿಯಲ್ಲಿರುವ]] ಕ್ಯಾರಂಟೋ ಹಿಲ್ ಅತ್ಯಂತ ಎತ್ತರವಾಗಿದ್ದು ಸಮುದ್ರ ಮಟ್ಟಕ್ಕಿಂತ ಮೇಲೆ {1/{2/{3/}}}ಬೃಹದಾಕಾರವಾಗಿದೆ.[೧೬] ಲೀನಸ್ಟರ್ ನಲ್ಲಿ ಬೇಸಾಯಕ್ಕೆ ಅತ್ಯಂತ ಯೋಗ್ಯವಾದ ಬಹಳಷ್ಟು ಭೂಪ್ರದೇಶವಿದೆ. ಪಶ್ಚಿಮ ಭಾಗವು ಗುಡ್ದ-ಬೆಟ್ಟ ಮತ್ತು ಬಂಡೆಗಲ್ಲುಗಳಿಂದ ತುಂಬಿದೆಯಾದರೂ,ಅಲ್ಲಿನ ದಟ್ಟ ಹಸಿರು ಮತ್ತು ಕಣ್ಮನ ಸೆಳೆವ ಸಾಲು ಸಾಲು ಮರಗಳ ದೃಶ್ಯ ಪ್ರಕೃತಿಯ ಸೊಬಗನ್ನು ಮೆರೆಯುತ್ತದೆ. ದ್ವೀಪದ ಅತಿ ದೊಡ್ದ ನದಿ ರಿವರ್ ಶಾನ್ನೊನ್ ವಾಯುವ್ಯದ ಕೌಂಟಿ ಕೇವನ್ ನಲ್ಲಿ ಹುಟ್ಟಿ ಲಿಮ್ರಿಕ್ ನಗರದ ಮಧ್ಯಪಶ್ಚಿಮ ಭಾಗಕ್ಕೆ 386 km (240 mi)113 kilometres (70 mi)[೧೭] ಹರಿಯುತ್ತದೆ.
ದ್ವೀಪದ ದಟ್ಟ ಹಸಿರಿನ ವಾತಾವರಣ ಅದರ ಸೌಮ್ಯ ಹವಾಗುಣ ಮತ್ತು ನಿರಂತರ ಮಳೆಯ ಪರಿಣಾಮವಾಗಿದೆ.ಹೀಗಾಗಿಯೇ ಈ ಪ್ರದೇಶವು ಐರ್ಲೆಂಡಿನಎಮರಾಲ್ಡ್ ಐಸ್ಲೆಯ ಲಾಂಛನವಾಗಿದೆ. ಒಟ್ಟಾಗಿ ಐರ್ಲೆಂಡ್ ಸೌಮ್ಯ ಆದರೆ ಬದಲಾಗಬಲ್ಲ ವಾತಾವರಣಕ್ಕೆ ತಕ್ಕಂತೆ ಅಲ್ಲಿನ ಸಮುದ್ರದ ಹವಾಮಾನ ಕೆಲವು ಅತಿರೇಕಗಳಿಗೂ ಎಡೆ ಮಾಡಿಕೊಟ್ಟಿದೆ. ಈ ಹವಾಗುಣ ಸಾಮಾನ್ಯವಾಗಿ ದ್ವೀಪದ ವಾಡಿಕೆಯ ಪರಿಸರದ ಜೊತೆಗೆ ಸಂಯಮ ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ.ಇದೇ ತೆರನಾದ ಹವಾಗುಣ ವಿಶ್ವದ ಅಕ್ಷಾಂಶಗಳ ಮೇಲಿನ ದ್ವೀಪಗಳಿಗೂ [೧೮] ಸಾಮಾನ್ಯವಾಗಿದೆ. ಈಶಾನ್ಯದಿಂದ ಅಟ್ಲಾಂಟಿಕದಿಂದ ಬೀಸುವ ಆರ್ದ್ರಗಾಳಿಯಿಂದಾಗಿ ದ್ವೀಪ ಇಂತಹ ವಾತಾವರಣೆಗೆ ಎಡೆ ಮಾಡಿಕೊಟ್ಟಿದೆ.
ವರ್ಷವಿಡೀ ಹಿಮಪಾತವಾದರೂ ಇದು ಅತ್ಯಂತ ಹಗುರಾಗಿರುತ್ತದೆ.ಇದು ಪೂರ್ವ ಭಾಗದಲ್ಲಿ ವಿಶೇಷವಾಗಿ ಕಾಣಬರುತ್ತದೆ. ಪಶ್ಚಿಮ ಭಾಗವು ಕೊಂಚ ತೇವದ ವಾತಾವರಣ ಹೊಂದಿರುವದರಿಂದ ಅಟ್ಲಾಂಟಿಕ್ ಬಿರುಗಾಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು.ವಿಶೇಷವಾಗಿ ವಸಂತ ಮತ್ತು ಚಳಿಗಾಲದ ಸಮಯದಲ್ಲಿ ಎಂದು ಹೇಳಬಹುದು. ಇಂತಹ ಸಂದರ್ಭಗಳು ಆಗಾಗ ವಿನಾಶಕಾರಿ ಬಿರುಗಾಳಿಯನ್ನು ತರುತ್ತವಲ್ಲದೇ ಈ ಭಾಗದಲ್ಲಿ ಭಾರಿ ಮಳೆ,ಕೆಲವೊಮ್ಮೆ ಹಿಮಪಾತ ಮತ್ತು ಆಲಿಕಲ್ಲುಗಳು ಬೀಳುತ್ತವೆ. ಉತ್ತರ ಭಾಗದ ಕೌಂಟಿ ಗಾಲ್ವೆ ಮತ್ತ್ರು ಪೂರ್ವದ ಕೌಂಟಿ ಮಾಯೊ ಪ್ರದೇಶಗಳನ್ನು ಅತಿ ಹೆಚ್ಚು ವಾರ್ಷಿಕ ಸಿಡಿಲು ಬೀಳುವ ಪ್ರದೇಶಗಳೆಂದು ಗುರ್ತಿಸಲಾಗಿದೆ.ಪ್ರತಿವರ್ಷ ಇಲ್ಲಿ ಐದರಿಂದ ಹತ್ತುದಿನಗಳ ಕಾಲ ಸಿಡಿಲು ಮಿಂಚುಗಳ [೧೯] ಅಬ್ಬರವಿರುತ್ತದೆ. ದಕ್ಷಿಣದಲ್ಲಿರುವ ಮುನಸ್ಟರ್ ಅತಿ ಕಡಿಮೆ ಹಿಮಪಾತದ ದಾಖಲೆ ಹೊಂದಿದ್ದರೆ ಉತ್ತರದಲ್ಲಿ ಅಲ್ ಸ್ಟರ್ ಅತಿ ಹೆಚ್ಚು ಹಿಮಪಾತವನ್ನು ದಾಖಲಿಸುತ್ತದೆ.
ಒಳನಾಡಿನ ಪ್ರದೇಶಗಳು ಬೇಸಿಗೆಯಲ್ಲಿ ಬೆಚ್ಚಗೆ ಮತ್ತು ಚಳಿಗಾಲದಲ್ಲಿ ತಂಪು ಹವಾಮಾನದಿಂದ ಕೂಡಿರುತ್ತವೆ. ಸಾಮಾನ್ಯವಾಗಿ ಒಳನಾಡಿನಲ್ಲಿ ವಾರ್ಷಿಕ ೪೦ದಿನಗಳ ವರೆಗೆ ಕೆಳಮಟ್ಟದ 0 °C (32 °F)*ಹೆಪ್ಪುಗಟ್ಟುವ ವಾತಾವರಣವನ್ನು ಅನುಭವಿಸಿದರೆ ಕರಾವಳಿ ಹವಾಮಾನ ಕೇಂದ್ರಗಳಲ್ಲಿ ಇದು ಕೇವಲ ಹತ್ತು ದಿನಗಳಿಗೆ ಮಾತ್ರ ಸೀಮಿತಗೊಂಡಿರುತ್ತದೆ. ಐರ್ಲೆಂಡ್ ಸಾಕಷ್ಟು ಬಾರಿ ಬಿಸಿಗಾಳಿಯ ಬಿರು ಅಲೆಗಳ ದುಷ್ಪರಿಣಾಮವನ್ನು ಅನುಭವಿಸಿದೆ.ಇತ್ತೀಚಿಗೆ ೧೯೯೫,2003 ಮತ್ತು 2006ರಲ್ಲಿ ಇದು ವರದಿಯಾಗಿದೆ. ಇಸವಿ ೨೦೦೯ರಲ್ಲಿ ಉಷ್ಣಾಂಶ−7 °C (19 °F) ಗಿಂತ ಕೆಳಕ್ಕೆ ದಾಖಲಾಗಿ,ಇದು ಅತ್ಯಂತ ಶೀತದ ಅನೈಸರ್ಗಿಕ ಪರಿಣಾಮವನ್ನು ಐರ್ಲೆಂಡ್ ಅನುಭವಿಸಿತು.ಇದು ಸುಮಾರು1⁄2 m (1.64 ft)ರಷ್ಟು ಹಿಮಪಾತಕ್ಕೂ ಕಾರಣವಾಯಿತು. ಡಬ್ಲಿನ್ ನಲ್ಲಿ10 cm (3.9 in) ನ ಪ್ರಮಾಣದಲ್ಲಿಹಿಮದ ಮಳೆ ಕೆಲವೆಡೆ ಕಂಡು ಬಂತು.
ಅತ್ಯಧಿಕ ಉಷ್ಣಾಂಶದ ಗಾಳಿ (ಕಿಲ್ಲೆನಿ ಕ್ಯಾಸ್ಟಲ್ ,ನಲ್ಲಿಕೌಂಟಿ ಕಿಲ್ಕೆನಿ,ಜೂನ್ ೧೮೮೭)ಮತ್ತು ಅತ್ಯಂತ ಕಡಿಮೆ ಎಂದರೆ−19.1 °C (−2.4 °F)(ಮರ್ಕ್ರೀ ಕ್ಯಾಸ್ಟಲ್, ಕೌಂಟಿ ಸ್ಲಿಗೊ, ಜನವರಿ [೨೦] ೧೮೮೧) ಅತ್ಯಧಿಕ ವಾರ್ಷಿಕ ಮಳೆ ಪ್ರಮಾಣ3,964.9 mm (156.1 in)(ಬಲ್ಲಾಘಬೀಮಾ ಗ್ಯಾಪ್ , ಕೌಂಟಿ ಕೆರ್ರಿ, ೧೯೬೦). ಅತ್ಯಂತ ಒಣ ಅಂದರೆ ಮಳೆರಹಿತ ವರ್ಷ೧೮೮೭ ಕೇವಲ356.6 mm (14.0 in) ಮಳೆ ಗ್ಲಾಸ್ನ್ವಿನ್ ನಲ್ಲಿ.ದಾಖಲಾಗಿದೆ.ಅದೇ ಲಿಮ್ರಿಕ್ ನಲ್ಲಿ ಏಪ್ರಿಲ್ ಮತ್ತು ಮೇ೧೯೩೮ರಲ್ಲಿ ೩೮ ದಿನಗಳ ಕಾಲ ಸಂಪೂರ್ಣ ಮಳೆ ರಹಿತ ಬರಗಾಲದ ಸ್ಥಿತಿ ಈ ಅವಧಿಯಲ್ಲಿ ಮಳೆ ದಾಖಲೆಯೇ [೧೯] ಇಲ್ಲ.
ದ್ವೀಪವು ವಿವಿಧ ಮಾದರಿಯ ಭೌಗೋಳಿಕ ಪ್ರಾಂತ್ಯಗಳನ್ನು ಹೊಂದಿದೆ. ಪಶ್ಚಿಮ ದೂರದ ಕೌಂಟಿ ಗಾಲ್ವೆಸುತ್ತಮುತ್ತ ಮತ್ತುಕೌಂಟಿ ಡೊನೆಗಲ್ ಪ್ರದೇಶದಲ್ಲಿ ಅಗ್ನಿಶಿಲೆಯ ರೂಪಾಂತರಗಳು ಕಾಣಸಿಗುತ್ತವೆ.ಕ್ಯಾಲೆದೊನೈಡ್ ಸುತ್ತಮುತ್ತಲಿನ ಪ್ರದೇಶ ಸ್ಕಾಟಿಸ್ ಹೈಲೆಂಡ್ ಗೆ ಸಮರೂಪದ ಇಂತಹ ಘಟನೆಗಳು ಸಂಭವಿಸಿವೆ. ಅಲ್ ಸ್ಟರ್ ನ ಆಗ್ನೆಯ ಮತ್ತು ವಾಯವ್ಯ ಪ್ರದೇಶದ ವಿಸ್ತಾರದಂತೆ ಲಾಂಗ್ ಫೋರ್ಡ್ ಮತ್ತು ದಕ್ಷಿಣದ ನವನ್ ಪ್ರಾಂತ್ಯಗಳಲ್ಲಿರುವ ಆರ್ಡೊವಿಸಿಯನ್ ಮತ್ತುಸಿಲುರಿಯನ್ ಬಂಡೆಗಳು ಸುಮಾರು ೪೫೦ ದಶಲಕ್ಷ ವರ್ಷದ ಹಿಂದಿನ ಸಸ್ಯರಾಶಿ ಹಾಗು ಜೀವರಾಶಿಗಳ ಪಳೆಯುಳಿಕೆಗಳು ಇಂದು ಸಮಾನರೂಪತೆಯನ್ನು ಹೊಂದಿವೆ. ಸ್ಕಾಟ್ ಲ್ಯಾಂಡನ ದಕ್ಷಿಣದ ಅಪ್ ಲ್ಯಾಂಡ್ಸ್ ಬಂಡೆಗಳು ಸಮಾನ ರೂಪಾಂತರಗಳನ್ನು ಹೊಂದಿದೆ. ಮುಂದುವರೆದ ದಕ್ಷಿಣದಲ್ಲಿ ಕೌಂಟಿ ವೆಕ್ಸ್ ಫೊರ್ಡ್ ಕರಾವಳಿ ಪ್ರದೇಶವು ಗ್ರಾನೈಟ್ ಬಂಡೆಗಳಿಂದ ಇಂಟ್ರುಸಿವ್ಸ್ ಗಣಿಗಾರಿಕೆಯು ಆರ್ಡೊವಿಸಿಯನ್ ಮತ್ತು ಸಿಲುರಿಯನ್ ನಲ್ಲಿ ನಡೆಯುತ್ತದೆ.ಇದು ವೇಲ್ಸನಲ್ಲಿನ ಗಣಿ ಪ್ರದೇಶದಂತೆ [೨೧][೨೨] ಇರುವುದು ವಾಯವ್ಯದಲ್ಲಿ ಬಂಟ್ರಿ ಬೇ(ಕೊಲ್ಲಿ)ಮತ್ತು ಮ್ಯಾಕ್ ಗಿಲ್ಲಿಕಡ್ಡಿಯ ರೀಕ್ಸ್ ಪ್ರದೇಶದಲ್ಲಿನ ಗುಡ್ಡ ಬೆಟ್ಟಗಳು ಈಗಾಗಲೇ ತಮ್ಮ ಮೊಲರಚನೆಗಳನ್ನು ಕಳೆದುಕೊಂಡಿವೆ.ಸಣ್ಣ ಪ್ರಮಾಣದಲ್ಲಿ ಆಕಾರ ಕಳೆದುಕೊಂಡ ಹಳೆದಾದ ಡೆವೊನಿಯನ್ ಬಂಡೆಗಳು ಕಂಡು [೨೩] ಬರುತ್ತವೆ. ಭಾಗಶ:ಬಿರುಬಂಡೆಗಳ ವಲಯದಿಂದ ಕೂಡಿದ ಭೌಗೋಳಿಕ ಪ್ರದೇಶವು ಕಾರ್ಬೋನಿಫೆರಸ್ ಸುಣ್ಣದ ಕಲ್ಲಿನಿಂದ ಆವರಿಸಿಕೊಂಡಿದೆ.ದೇಶದ ಕೇಂದ್ರ ಭಾಗದಲ್ಲಿ ಉತ್ತಮ ಫಲವತ್ತಾದ ಮಣ್ಣು ಮತ್ತು ಹಚ್ಚ ಹಸಿರಿನ ಭೂತಾಣಕ್ಕೆ ಕಾರಣವಾಗಿದೆ. ಲಿಸ್ಡೊನ್ವರ್ನಾ ಸುತ್ತಮುತ್ತಲಿನ ಬರೆನ್ ಜಿಲ್ಲೆಯ ಕರಾವಳಿ ಪ್ರದೇಶವು ಕರಸ್ಟ್ ಸುಣ್ಣದ ಪದರಿನ ಗುಣಲಕ್ಷಣಗಳನ್ನು [೨೪] ಹೊಂದಿದೆ. ಸುಣ್ಣದ ಕಲ್ಲಿನ ಪ್ರದೇಶದಲ್ಲಿ ಸೀಸ-ಸತುವಿನ ಖನಿಜಗಳು ದೊರೆಯುತ್ತಿದ್ದು ಹೆಚ್ಚಾಗಿ ಸಿಲ್ವರ್ ಮೈನ್ಸ್ ಮತ್ತು ತ್ಯಾನಘ್ ವ್ಯಾಪ್ತಿಯಲ್ಲಿ ಸಿಗುತ್ತದೆ.
ಕಾರ್ಕ್ ನ ಆಚೆ ಬದಿಯಲ್ಲಿರುವ ಪ್ರದೇಶದಲ್ಲಿ ಹೈಡ್ರೊಕಾರ್ಬನ್ ಹೊರತೆಗೆಯುವ ಕಾರ್ಯ ನಡೆಯುತ್ತಿದೆ.ಇದು ಕಿನ್ಸಲೆ ಹೆಡ್ ಅನಿಲ ದೊರೆವ ಪ್ರದೇಶದಲ್ಲಿಆರಂಭವಾಗಿದ್ದು ಇದರ ಸುಳಿಯು ದೊರೆತ ನಂತರ ಈ ಕಾರ್ಯವನ್ನು ೧೯೭೦ರಿಂದ [೨೫][೨೬] ಕೈಗೆತ್ತಿಕೊಳ್ಳಲಾಗಿದೆ. .ಇತ್ತೀಚಿಗೆ ೧೯೯೯ರಲ್ಲಿ ಕೌಂಟಿ ಮೇಯೊ ಕರಾವಳಿ ಬಳಿಯ ಕಾರಿಬ್ ಗ್ಯಾಸ್ ಫೀಲ್ಡ್ ನಲ್ಲಿ ದೊರೆತ ನೈಸರ್ಗಿಕ ಅನಿಲ ಆರ್ಥಿಕ ವಲಯದಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಪಶ್ಚಿಮ ಕರಾವಳಿಯಲ್ಲಿ ಇದರ ಚಟುವಟಿಕೆ ತೀವ್ರಗೊಂಡ ನಂತರ "ವೆಸ್ಟ್ ಆಫ್ ಶೆಟ್ ಲ್ಯಾಂಡ"ನಾರ್ಥ್ ಸೀ ಹೈಡ್ರೊಕಾರ್ಬನ್ ಪ್ರಾಂತ್ಯದಿಂದ ಅಭಿವೃದ್ಧಿ ಕಾರ್ಯ ಸ್ವಲ್ಪ ಮಟ್ಟಿಗೆ ಹಿಂದೆ ಬಿದ್ದಿತು.ಅಂದರೆ ಗಣಿಗಾರಿಕೆಯ ಕೆಲಸಗಳು ಕರಾವಳಿ ಪ್ರದೇಶದಿಂದ ಹೆಚ್ಚು ವೇಗಪಡೆದುಕೊಂಡವು. ಹೆಲ್ವಿಕ್ ತೈಲ ದೊರೆಯುವ ಪ್ರದೇಶವು 28 million barrels (4,500,000 m3)ಅತಿ ದೊಡ್ಡ ಪ್ರಮಾಣದ ನೈಸರ್ಗಿಕ ತೈಲ ದಾಸ್ತಾನನ್ನು ಹೊಂದಿದೆ ಎಂಬುದು ಇತ್ತೀಚಿಗೆ ಕಂಡುಬಂದ [೨೭] ಸಂಗತಿ.
ಸಮುದ್ರ ಮಟ್ಟದಿಂದ ಹೆಚ್ಚು ಎತ್ತರದಲ್ಲಿರುವ ಐರ್ಲೆಂಡ್ ಹಿಮಯುಗದ ನಂತರ ಯುರೋಪ್ ಖಂಡದಿಂದ ದೂರ ಉಳಿದಂತಾಗಿದೆ.ಹೀಗಾಗಿ ಗ್ರೇಟ್ ಬ್ರಿಟನ್ ಇಲ್ಲವೇ ಯುರೊಪಿನ ಪ್ರಮುಖ ಭಾಗಗಳಂತೆ ಇದು ದೊಡ್ಡ ಪ್ರಮಾಣದ ವನ್ಯಜೀವಿ ಮತ್ತು ವಿಭಿನ್ನ ಸಸ್ಯಪ್ರಭೇದವನ್ನುಒಳಗೊಂಡಿಲ್ಲ . ಭೂಮಿ ಮೇಲೆ ವಾಸಿಸುವ ಕೇವಲ ೨೬ ಸಸ್ತನಿಗಳು ಮಾತ್ರ ಐರ್ಲೆಂಡ್ ಮೂಲದ ವನ್ಯಜೀವಿಯ ಪ್ರಭೇದಗಳನ್ನುಕಾಣಬಹುದು. ಕೆಂಪು ನರಿ,ಮುಳ್ಳುಹಂದಿ,ನೆಲಕರಡಿ ಪ್ರಾಣಿಗಳು ಸಾಮಾನ್ಯವಾಗಿವೆ.ಐರಿಶ್ ಮೊಲ,ಕೆಂಪುಜಿಂಕೆ ಮತ್ತು ಪೈನ್ ಮಾರ್ಟಿನ(ತುಪ್ಪಳಗಳುಳ್ಳ ಸಸ್ತನಿ)ಕಡಿಮೆ ಪ್ರಮಾಣದಲ್ಲಿ ಕಾಣಬರುತ್ತವೆ. ಜಲಚರಗಳಲ್ಲಿ ಆಮೆ,ಶಾರ್ಕ,ದೊಡ್ಡ ಮೊಸಳೆ ಮತ್ತು ಡಾಲ್ಫಿನ್ ಗಳು ಅಲ್ಲಿನ ಕರಾವಳಿಯ ಆಸುಪಾಸು ದೊರೆಯುವ ಪ್ರಮುಖ ಜಲಚರಗಳಿವೆ. ಐರ್ಲೆಂಡಿನಲ್ಲಿಸುಮಾರು ೪೦೦ ಪಕ್ಷಿಗಳ ಪ್ರಭೇದಗಳಿವೆ. ಇದರಲ್ಲಿ ಬಹುತೇಕ ವಲಸೆ ಪಕ್ಷಿಗಳು ಇದರಲ್ಲಿ ಬಾರ್ನ್ ಸ್ವಾಲೊ ಕೂಡಾ ಸೇರಿದೆ. ಬಹಳಷ್ಟು ಪಕ್ಷಿ ಪ್ರಭೇದಗಳು ಐಸ್ ಲ್ಯಾಂಡ,ಗ್ರೀನ್ ಲ್ಯಾಂಡ್ ಮತ್ತು ಆಫ್ರಿಕಾಗಳಿಂದ ಬರುತ್ತವೆ.
ಹಲವು ವಿಭಿನ್ನ ವಾಸಸ್ಥಾನಗಳು ಐರ್ಲೆಂಡಿನಲ್ಲಿ ದೊರೆಯುತ್ತವೆ.ಬೇಸಾಯದ ಭೂಪ್ರದೇಶವನ್ನೊಳಗೊಂಡತೆ,ತೆರೆದ ಕಾಡು ಪ್ರದೇಶ,ಸಮಶೀತೋಷ್ಣ ದೊಡ್ಡಎಲೆಯ ಮರಗಳ ಕಾಡು ಮತ್ತುಮಿಶ್ರಿತ ಅರಣ್ಯಗಳು,ನಿತ್ಯ ಹರಿದ್ವರ್ಣ ಕಾಡುಗಳು,ದೊಡ್ಡ ಸಸ್ಯ ಜಾತಿ ಹಸಿರು ಮರಗಳ ತಾಣ ಮತ್ತು ವಿವಿಧ ಸಸ್ಯಗಳು ಕರಾವಳಿಯ ಮೂಲಸಂಪತ್ತುಗಳಾಗಿವೆ. ಹೇಗೇ ಆದರೂ ಐರ್ಲೆಂಡಿನಲ್ಲಿ ಬೇಸಾಯವು ತನ್ನ ಭೂಬಳಕೆಯನ್ನು ಸಸ್ತನಿಗಳ ವಾಸಸ್ತಾನಗಳು ನಶಿಸಿಹೋಗದಂತೆ ವಿಧ ವಿಧದ ಮಾದರಿಗಳನ್ನು ಅನುಸರಿಸುತ್ತದೆ.ಬಹುಮುಖ್ಯವಾಗಿ ದೊಡ್ಡ ಸಸ್ತನಿಗಳಿಗೆ ವಿಶಾಲವಾದ ಜಾಗೆ ಬೇಕು ಎಂಬುದನ್ನುವಿಶೇಷವಾಗಿ [೨೮] ಗಮನಿಸಲಾಗುತ್ತದೆ. ಐರ್ಲೆಂಡಿನಲ್ಲಿ ದೊಡ್ಡ ಪ್ರಮಾಣದ ಪ್ರಾಣಿ ಭಕ್ಷಕಗಳು ಇಲ್ಲದ್ದರಿಂದ ಸಸ್ತನಿಗಳ ಸಂಖ್ಯೆ ಅಷ್ಟಾಗಿ ಕ್ಷೀಣಿಸಿಲ್ಲ.ಉದಾಹರಣೆಗೆ ಅರೆ-ಕಾಡುಜಿಂಕೆ,ಇದನ್ನು ಸಣ್ಣ ಪ್ರಮಾಣದ ಪ್ರಾಣಿ ಭಕ್ಷಗಳಾದ ನರಿ ಮುಂತಾದವುಗಳನ್ನು ವಾರ್ಷಿಕ ಕೊಲ್ಲುವ ಕಾರ್ಯಕ್ರಮಗಳ ಮೂಲಕ ನಿಯಂತ್ರಿಸಲಾಗುತ್ತದೆ.
ಪ್ರಮುಖವಾಗಿ ಐರ್ಲೆಂಡಿನಲ್ಲಿಹಾವುಗಳಿಲ್ಲ.ಕೇವಲ ಒಂದೇ ಒಂದು ಸರಿಸೃಪ ಅಂದರೆ (ಸಾಮಾನ್ಯವಾಗಿ ಹಲ್ಲಿ) ಜಾತಿಯ ಪ್ರಾಣಿಯು ಇಲ್ಲಿನ ಮೂಲವಾಸಿಯೆನಿಸಿದೆ. ಸದ್ಯ ನಶಿಸಿ ಹೋಗುತ್ತಿರುವುಗಳಲ್ಲಿಗ್ರೇಟ್ ಐರಿಶ್ ಕಡವೆ(ಸಾರಂಗ),ತೋಳ ಮತ್ತುಗ್ರೇಟ್ ಕಡಲ ಬಾತುಗೋಳಿ ಸೇರಿವೆ. ಈ ಹಿಂದೆ ನಶಿಸಿ ಹೋದ ಪಕ್ಷಿಗಳನ್ನು ಮತ್ತೆ ಪರಿಚಯಿಸಿ ದಶಕಗಳ ಹಿಂದೆ ಬೇರು ಸಮೇತ ಹೋಗಿದ್ದ ಅವುಗಳಿಗೆ ಮರುಜೀವತುಂಬಲಾಗಿದೆ.ಇವುಗಳಲ್ಲಿ ಗೋಲ್ಡನ್ ಈಗಲ್ ಪ್ರಮುಖವಾಗಿದೆ.
ಮಧ್ಯಯುಗೀನ ಕಾಲದ ವರೆಗಿನ ಅವಧಿಯಲ್ಲಿಐರ್ಲೆಂಡ್ ದೊಡ್ಡ ಪ್ರಮಾಣದಲ್ಲಿ ದಟ್ಟ ಕಾಡುಗಳಿಗೆ ಹೆಸರಾಗಿತ್ತು.ಈ ಕಾಡುಗಳಲ್ಲಿ ಓಕ,ಪೈನ,ಮತ್ತು ಬರ್ಚ್ (ದೊಡ್ಡತೊಗಟೆಗಳುಳ್ಳ ಮರ) ಹೆಚ್ಚಾಗಿವೆ. ಇಂದು ಐರ್ಲೆಂಡಿನಲ್ಲಿಕೇವಲ ೯%ರಷ್ಟು(೪,೪೫೦ಕಿ.ಮೀ ಅಥವಾ ಒಂದು ದಶಲಕ್ಷ ಎಕರೆ)ಅರಣ್ಯಪ್ರದೇಶವಿದೆ.ಯುರೋಪಿನಲ್ಲೇ ಅತಿ ಹೆಚ್ಚು ಅರಣ್ಯಪ್ರದೇಶ ನಾಶಗೊಂಡಿರುವ [೨೯] ಪ್ರದೇಶವಾಗಿದೆ. ಈಗ ಬಹಳಷ್ಟು ಭೂಪ್ರದೇಶ ಹಸಿರು ಹುಲ್ಲುಗಾವಲಿನಿಂದ ಆವರಿಸಿದೆ.ಇಲ್ಲಿ ಹಲವಾರು ಕಾಡುಪುಷ್ಪಗಳ ಹೇರಳ ಜಾತಿಯೂ ದೊರಕುತ್ತದೆ. ಗೋರ್ಸ್ ಉಲೆಕ್ಸ್ ಯುರೊಪಿಯಾ ಎಂಬ ಹಳದಿ ಹೂ ಬಿಡುವ ಪೊದೆ ಜಾತಿಯ ಸಸ್ಯವು ಐರ್ಲೆಂಡಿನಲ್ಲಿ ಸಾಮಾನ್ಯ ಕಾಡು ಸಸ್ಯವಾಗಿದೆ.ಕಾಡಿನಲ್ಲಿ ಬೆಳೆಯುವ ಮುಳ್ಳುಕಂಟಿ ಗಿಡ ಕೂಡ ಅಪ್ ಲ್ಯಾಂಡಿನಲ್ಲಿಮುಳ್ಳು-ಬೀಜರಹಿತ ಸಸ್ಯಗಳೊಂದಿಗೆ ಸ್ವಾಭಾವಿಕವಾಗಿ ಬೆಳೆಯುತ್ತದೆ.[೩೦] ಇದು ನೂರಾರು ಸಸ್ಯ ಪ್ರಭೇದಗಳಿಗೆ ಆಶ್ರಯತಾಣವೆನಿಸಿದೆಯಾದರೂ ಸ್ಪಾರ್ಟಿನಾ ಅಂಗ್ಲಿಕಾ ದಂತಹ ಜಾತಿಯ ಹುಲ್ಲುಉಳಿದ ಸಸ್ಯಗಳ ಮೇಲೆ ಆಕ್ರಮಣಕಾರಿಯಾಗಿದೆ ತಾನೇ ಬೆಳೆದು ಇತರ ಸಸ್ಯವರ್ಗಕ್ಕೆ [೩೦] ಕಂಟಕವಾಗುತ್ತಿದೆ.
ಪಾಚಿ ಮೂಲದ ಸಸ್ಯ ಮತ್ತು ಸಮುದ್ರದ ಕಸದ ಹುಲ್ಲು ತಂಪು ಹವಾಮಾನದಿಂದಾಗಿ ಹುಲಸಾಗಿ ಬೆಳೆಯುತ್ತದೆ. ಒಟ್ಟು೫೭೪ ಪ್ರಭೇದಗಳಿವೆ ಅವುಗಳನ್ನು ಹೀಗೆ ವಿಂಗಡಿಸಲಾಗಿದೆ:
[೩೧] ಅಪರೂಪದ ಸಸ್ಯಜಾತಿಗಳು:
ಈ ನಡುಗಡ್ಡೆಯು ಕೆಲವು ಪಾಚಿ ಪ್ರಭೇದಗಳಿಂದ ಆಕ್ರಮಣಕ್ಕೆ ಒಳಗಾಗಿವೆ.ಸದ್ಯ ಅವುಗಳು ಸರಿಯಾಗಿವೆ.[೩೨]}ಉದಾಹರಣೆಗಾಗಿ:
ಕೊಡಿಯಮ್ ಫ್ರಾಗೈಲ್ ssp.ಅಟ್ಲಾಂಟಿಕಮ್ ಈಗ ಇಲ್ಲಿನ ಮೂಲ ಸಸ್ಯಗಳಾಗಿ ಮಾರ್ಪಟ್ಟಿವೆ.ಹಲವಾರು ವರ್ಷಗಳ ಹಿಂದೆ ಇದು ವಲಸೆ ಸಸ್ಯ ಜಾತಿ ಎಂದು ಪರಿಗಣಿತವಾಗಿತ್ತು.
ಇದರ ಸೌಮ್ಯ ಹವಾಮಾನ ಗುಣಲಕ್ಷಣಗಳಿಂದಾಗಿ ಹಲವಾರು ಪ್ರಭೇದಗಳು,ಉಪಭೌಗೋಳಿಕ ಜಾತಿಗಳಾದ ಪಾಮ್ ಮರಗಳು ಐರ್ಲೆಂಡಿನಲ್ಲಿ ಬೆಳೆಯುತ್ತಿವೆ. ಜಾಗತಿಕ ಭೌಗೋಳಿಕ ರೇಖಾಚಿತ್ರಣದಂತೆ ಬೊರಿಯಲ್ ಕಿಂಗಡಮ(ರಾಜ್ಯ)ದೊಳಗೆ ಬರುವ ಸರ್ಕಂಬೊರಿಯಲ್ ಪ್ರದೇಶಕ್ಕೆ ಐರ್ಲೆಂಡ್ ಸೇರುತ್ತದೆ.ಇದು ಅಟ್ಲಾಂಟಿಕ್ ಯುರೊಪಿಯನ್ ಪ್ರಾಂತ್ಯಕ್ಕೆ ಒಳಪಡುತ್ತದೆ. ಈ ದ್ವೀಪವು ತನ್ನೊಳಗಿನ ಪರಿಸರ ಪ್ರದೇಶಗಳಿಗೆ ಅನುಗುಣವಾಗಿ ಎರಡು ವಿಭಾಗಗಳಾಗಿ ವಿಭಜಿಸಲ್ಪಟ್ಟಿದೆ:ಸೆಲ್ಟಿಕ್ ಅಗಲ ಎಲೆಗಳ ಕಾಡುಗಳು ಮತ್ತುಉತ್ತರ ಅಟ್ಲಾಂಟಿಕ್ ನ ಅರ್ದ್ರ ಅಥವಾ ತೇವ ಮಿಶ್ರಿತ ಕಾಡುಗಳು.
ಕೃಷಿ ಉತ್ಪಾದನೆಯ ಸುದೀರ್ಘ ಇತಿಹಾಸ ಗಮನಿಸಿದರೆ,ಇದು ಎರಡು ಪದ್ಧತಿಗಳ ಬಗ್ಗೆಮಾಹಿತಿ ನೀಡುತ್ತದೆ.ಒಂದು ಆಧುನಿಕ ತೀವ್ರ ಪರಿಣಾಮಕಾರಿ ಕೃಷಿ ಪದ್ಧತಿಗಳು ಅಂದರೆ ಕೀಟನಾಶಕಗಳು ಮತ್ತು ರಸಗೊಬ್ಬರ ಬಳಕೆಯು ಇಂದು ಐರ್ಲೆಂಡನ್ನು ಜೈವಿಕ ವೈವಿಧ್ಯತೆ ಮೇಲೆ ಹೆಚ್ಚು ಒತ್ತಡವನ್ನು ಹಾಕುವಂತೆ [೩೩][೩೪] ಮಾಡಿದೆ. ಹೊಳೆ-ಹಳ್ಳ-ಕೊಳ್ಳಗಳು,ನದಿಗಳು ಮತ್ತು ಸಾಗರಗಳಲ್ಲಿನ ಅಶುದ್ಧ ನೀರಿನ ಪ್ರಮಾಣದಿಂದಾಗಿ ಸಾಮಾನ್ಯವಾಗಿ ಪರಿಸರಸ್ನೇಹಿ ಪದ್ದತಿಗಳಿಗೆ ಹಿನ್ನಡೆಯುಂಟಾಗುತ್ತದೆ.
ಹಸಿರು ತುಂಬಿದ ತಾಣಗಳನ್ನು ಆಹಾರ ಬೆಳೆ ಬೆಳೆಸಲು ಮತ್ತುಪಶು ಮೇವಿಗಾಗಿ ಉಪಯೋಗಿಸುತ್ತಿರುವದರಿಂದ ಸ್ಥಳೀಯ ವನ್ಯಜೀವಿಗಳಿಗೆ ವಾಸಸ್ಥಾನ ಕಲ್ಪಿಸಲು ಜಾಗದ ಲಭ್ಯತೆಗೆ ಅವಕಾಶವೇ ಇಲ್ಲದಂತಾಗಿದೆ. ಸ್ಥಳೀಯ ವನ್ಯಜೀವಿ ಹಾಗು ಸಸ್ಯವರ್ಗವನ್ನು ರಕ್ಷಿಸಲು ಸಾಂಪ್ರದಾಯಿಕವಾದ ಪೊದೆ-ಕಂಟಿಗಳುಳ್ಳ ಭೂಗಡಿಗಳನ್ನು ನಿರ್ಮಿಸಿ ಅವುಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳಲಾಗುತ್ತದೆ ಇಂತಹ ಪರಿಸರ ಸಂರಕ್ಷಣಾ ಪದ್ಧತಿಯು ದ್ವೀಪದ ಹೊರಭಾಗಕ್ಕೂ ವಿಸ್ತರಿಸಲಾಗಿದ್ದು ಇದರಿಂದ ಉಳಿದಿರುವ ಪರಿಸರದ ಜೀವಸಂಕುಲ ಕಾಯ್ದುಕೊಳ್ಳುವ ಉದ್ದೇಶ ಹೊಂದಲಾಗಿದೆ.ಈ ಹಿಂದೆ ದ್ವೀಪದ ಆಸ್ತಿಯೆನಿಸಿದ್ದ ಇವುಗಳನ್ನುಉಳಿಸಲು ನೂತನ ಪರಿಸರ ರಕ್ಷಣಾ ಜಾಲ ಅಸ್ತಿತ್ವದಲ್ಲಿದೆ. ಸಾಮಾನ್ಯ ಕೃಷಿ ಸೂತ್ರಗಳನ್ನು ರಿಯಾತಿಗಳ ಮೂಲಕ ಜಾರಿಗೊಳಿಸಿ ಪೊದೆ-ಗಿಡಗಂಟಿಗಳ ಕಾಡನ್ನು ಉಳಿಸುವ ಕೃಷಿ ಪದ್ಧತಿಗಳಿಗೆ ಉತ್ತೇಜನ ನೀಡಲಾಗುತ್ತದೆ.ಇವುಗಳು ಕೂಡಾ ಈಗ ಪರಿಷ್ಕರಣೆಯೊಂದಿಗೆ ಸುಧಾರಣೆ [೩೫] ಕಾಣುತ್ತಿವೆ. ಸಾಮಾನ್ಯ ಕೃಷಿ ಸೂತ್ರವು ಕಾಡುನಾಶಕ್ಕೆ ಕಾರಣವಾಗಿವ ಕೃಷಿ ಪ್ರಯೋಗಳನ್ನು ಕೈಬಿಡುವಂತೆ ಸೂಚಿಸುತ್ತದೆ. ಇತ್ತೀಚಿನ ಸುಧಾರಣೆಗಳು ಕೃಷಿ ಇಳುವರಿ ಮಟ್ಟಗಳು ಮತ್ತುಪರಿಸರ ಸಂರಕ್ಷಣೆ ಹಾಗು ಇನ್ನಿತರ ಸಹಜ ನೈಸರ್ಗಿಕ ಸಂಪತ್ತುಗಳನ್ನು ಕಾಯುವವರಿಗೂ ರಿಯಾಯತಿಗಳನ್ನು [೩೫] ವಿಸ್ತರಿಸಲಾಗುತ್ತಿದೆ.
ಅರಣ್ಯ ಪ್ರದೇಶವು ದೇಶದ ಸುಮಾರು೧೦% ರಷ್ಟುಭಾಗವನ್ನುಆವರಿಸಿದ್ದು ಬಹುತೇಕ ವಾಣಿಜ್ಯ ಬೆಳೆಗಳಿಗೆ ಅನುಕೂಲವಾಗುವಂತೆ [೨೮] ವಿನ್ಯಾಸಗೊಳಿಸಲಾಗಿದೆ. ಅರಣ್ಯ ಪ್ರದೇಶಗಳಲ್ಲಿ ಒಂದೇ ರೀತಿಯ ಫಸಲುಗಳನ್ನು ಬೆಳೆಸಲು ಉಪಯೋಗಿಸಲಾಗುತ್ತದೆ.ದೇಶೀಯ ಅಲ್ಲದ ಏಕ ಜೀವಿಗಳಿಗೆ ಆಶ್ರಯ ಕೊಡುವುದು ಕೂಡಾ ಸ್ಥಳೀಯ ಸಂಕುಲಗಳ ವಾಸಸ್ಥಾನಕ್ಕೆ ಅಡ್ಡಿಯನ್ನುಂಟು ಮಾಡಿದಂತಾಗುತ್ತದೆ. ದ್ವೀಪದ ಅಲ್ಪಾವಶೇಷ ಅರಣ್ಯವು ಮುಖ್ಯವಾಗಿ ಕಿಲ್ಲರ್ನಿ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತ ಹರಡಿಕೊಂಡಿದೆ. ನೈಸರ್ಗಿಕ ಪ್ರದೇಶಗಳಲ್ಲಿನ ಕೃಷಿಯೇತರ ಜಾಗೆಯಲ್ಲಿ ಜಿಂಕೆ ಮತ್ತು ಕುರಿಗಳು ವಿಪರೀತ ಪ್ರಮಾಣದಲ್ಲಿ ಮೇಯುವುದು ಮನಬಂದಂತೆ ಅಲೆದಾಡುವುದನ್ನು ನಿಯಂತ್ರಿಸಲು ಬೇಲಿ ಹಾಕುವುದು ಅಗತ್ಯವಿದೆ. ಈ ಪ್ರಮಾಣದ ಮೇಯುವಿಕೆಯು ದೇಶದ ಹಲವೆಡೆ ಅರಣ್ಯ ಬೆಳಸಲು ನಿರ್ಬಂಧ [೩೬] ಹಾಕುತ್ತಿದೆ.
ಕಳೆದ ೯೦೦೦ವರ್ಷಗಳ ಹಿಂದಿನ ವರೆಗಿದ್ದ ಹಿಮಯುಗದ ಹಿಮಾಚ್ಛಾದಿತ ಪರಿಸರವು ಐರ್ಲೆಂಡನ್ನು ಆವರಿಸಿತ್ತು ಸಮುದ್ರ ಮಟ್ಟವು ಕಡಿಮೆ ಮಟ್ಟದಲ್ಲಿದೆ.ಐರ್ಲೆಂಡ್ ಮತ್ತು ತನ್ನ ನೆರೆ ಬ್ರಿಟನ್ ಗಳು ಯುರೊಪ್ ಖಂಡದ ಭಾಗಗಳು. ಮೆಸೊಲಿಥಿಕ್ (ಮಧ್ಯಶಿಲಾಯುಗ) ಶಿಲಾಯುಗದ ನಿವಾಸಿಗಳು ಸುಮಾರು೮೦೦೦BC ನಂತರ ಇಲ್ಲಿಗೆ ತಲುಪಿದರು.
ನ್ಯೂಯೊಲಿಥಿಕ್ (ಹೊಸ ಶಿಲಾಯುಗದ ಪೀಳಿಗೆ)ಸುಮಾರು ೪,೫೦೦ರಿಂದ ೪,೦೦೦ BC ಯಲ್ಲಿ ಕೃಷಿಯೊಂದಿಗೆ ಬಂದಿತು.ಇದೇ ವೇಳೆಗೆ ಕುರಿ,ಆಡು,ದನಕರು ಮತ್ತು ಆಹಾರ ಧಾನ್ಯಗಳನ್ನು ಯುರೊಪ್ ಖಂಡದ ವಾಯುವ್ಯ ಭಾಗದಿಂದ ಆಮದು ಮಾಡಿಕೊಳ್ಳಲಾಯಿತು. ನ್ಯೂಲಿಥಿಕ್ ಪರಿಸರ ಪದ್ಧತಿಯನ್ನು,ಒಂದು ಮೂಲದ ಪ್ರಕಾರ ಇದು [೩೭] ಜಗತ್ತಿನಲ್ಲೇ ಅತ್ಯಂತ ಪುರಾತನವಾದುದು ಇದರ ಅವಶೇಷಗಳನ್ನು ಮಣ್ಣುಹೆಂಟೆ ಅಥವಾ ಮರದ ಪೊದೆಗಳಲ್ಲಿ ಸಂರಕ್ಷಿಸಿದ ಪುರಾವೆಗಳು ದೊರೆಯುತ್ತವೆ.ಇಂದು ಕೌಂಟಿ ಮೇಯೊದ ಸೀಡೆ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಹಲವಾರು ಶತಮಾನ ಅಂದರೆ ಸುಮಾರು ೩,೫೦೦ ಮತ್ತು ೩,೦೦೦BC ಮಧ್ಯದ ಅವಧಿಗಳಿಂದ ನಿರ್ಮಿಸಲ್ಪಟ್ಟ ಹೊಲಗದ್ದೆಗಳು ಒಣ-ಕಲ್ಲುಗಳಿಂದ ಪ್ರತ್ಯೇಕಿಸಿದಂತೆ ಗೋಚರಿಸುತ್ತವೆ.ಗೋಧಿ ಮತ್ತು ಬಾರ್ಲಿ ಇಲ್ಲಿನ ಪ್ರಮುಖ ಆಹಾರ ಬೆಳೆಗಳೆನಿಸಿವೆ. ಕಂಚಿನ ಯುಗವು ೨,೫೦೦ BC ಹೊತ್ತಿಗೆ ಪ್ರವರ್ಧಮಾನಕ್ಕೆ ಬಂತು.ದೊಡ್ಡ ಪ್ರಮಾಣದಲ್ಲಿಚಿನ್ನ ಮತ್ತು ಕಂಚಿನ ಆಭರಣ,ಆಯುಧ ಮತ್ತು ಸಲಕರಣೆಗಳ ಉತ್ಪಾದನೆಗೆ ನಾಂದಿ ಹಾಡಿತು. ಐರ್ಲೆಂಡಿನಲ್ಲಿ ಕಬ್ಬಿಣ ಯುಗ ವು ಸೆಲ್ಟ್ಸ್ ಎಂಬ ಜನಾಂಗದೊಂದಿಗೆ ಗುರುತಿಸಿಕೊಂಡು ಬೆಳವಣಿಗೆ ಕಂಡಿತು. ಅವರು ಐರ್ಲೆಂಡನ್ನು ೮ನೆಯಮತ್ತು ೧ನೆಯ ಶತಮಾನದಲ್ಲಿ ಸರಣಿ ವಸಾಹತುವನ್ನಾಗಿ ವಿಭಜಿಸಿದರೆಂದು ಹೇಳಲಾಗುತ್ತದೆ.ಸೆಲ್ಟ್ಸ ಜನಾಂಗದ ಕೊನೆಯ ಪೀಳಿಗೆ ಎಂದು ಹೇಳಲಾದ ಗೇಲ್ಸ್ ಈ ದ್ವೀಪವನ್ನು ಗೆದ್ದು ಸ್ವಾಧೀನ ಪಡಿಸಿಕೊಂಡ ಬಳಿಕ ಐದು ಅಥವಾ ಅದಕ್ಕಿಂತ ಹೆಚ್ಚು ಭಾಗಗಳನ್ನಾಗಿ ವಿಭಜಿಸಿದರು ಹಲವಾರು ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಸಾಗರೋತ್ತರದ ಈ ವಸಾಹತಿಕರಣ ಸಾಂಸ್ಕ್ರತಿಕ ಭೇದವನ್ನು ಹುಟ್ಟು ಹಾಕದಿದ್ದರೆ ಸಾಕು ಎಂಬ ಅಭಿಪ್ರಾಯ ಹೊಂದಿದವರಾಗಿದ್ದಾರೆ.ಈ ಹಿಂದೆ ಕ್ಲೊನಿಕೇವನ್ ಮ್ಯಾನ್ ಇದರ ಪ್ರತಿನಿಧಿಯಾಗಿದ್ದನ್ನು ಅವರು [೩೮][೩೯] ಜ್ಞಾಪಿಸುತ್ತಾರೆ.
ರೋಮನ್ ರು ಐರ್ಲೆಂಡನ್ನು ಹಿಬೈರ್ನಿಯಾ ಅಥವಾ ಸ್ಕೊಟಿಯಾ[೪೦](ಉತ್ತರಭಾಗ ಮತ್ತು ಇನ್ನಿತರ ನಡುಗಡ್ದೆಪ್ರದೇಶ)ಕ್ಕೆ ಹೋಲಿಸುತ್ತಾರೆ.ರೊಮ್ಯಾನೊ-ಗ್ರೀಕ್ ಭೂಗೋಳ ಶಾಸ್ತ್ರಜ್ಞ ಟೊಲೆಮಿ [೪೧]೧೦೦AD ಯಲ್ಲಿ ಐರ್ಲೆಂಡಿನ ಭೂಗೋಳ ಮತ್ತು ಗುಡ್ಡಗಾಡು ಜನಾಂಗದ ಬಗ್ಗೆ [೪೨][೪೩] ದಾಖಲಿಸಿದ್ದಾನೆ. ರೊಮನ್ ಸಾಮ್ರಾಜ್ಯ ಮತ್ತು ಪುರಾತನ ಐರ್ಲೆಂಡಿನ ಗುಡ್ದಗಾಡಿನ ಜನಾಂಗದ ನಡುವಿನ ನಿಖರ ಸಂಭಂದದ ಬಗ್ಗೆ ವಿವರ ಅಸ್ಪಷ್ಟವಾಗಿದೆ. ಕೆಲವೇ ಕೆಲವು ರೊಮನ್ ಬರಹಗಳಲ್ಲಿಕೇವಲ ಐರಿಶ್ ಕಾವ್ಯ,ಪುರಾಣಕತೆ ಮತ್ತುಕಟ್ಟಡ ನಿರ್ಮಾಣದ ವಾಸ್ತು ಕಲೆಗಳ ಮಾಹಿತಿ ದೊರೆಯುತ್ತದೆ.
ಆರಂಭಿಕ ಮಧ್ಯಯುಗದಲ್ಲಿ ಒಬ್ಬ ಹೈ ಕಿಂಗ್ ನ ಅಧ್ಯಕ್ಷತೆಯಲ್ಲಿ ಸಮಗ್ರ ಐರ್ಲೆಂಡ್ ನಿರ್ಮಾಣಕ್ಕಾಗಿ ಸಣ್ಣ ಪುಟ್ಟ ಭಾಗಗಳನ್ನು ಒಟ್ಟುಗೂಡಿಸಲಾಯಿತು.ಹೀಗೆ ಇದು ಕಿಂಗಡಮ್ ಆಫ್ ಐರ್ಲೆಂಡ್ ಆಗಿ ಮಾರ್ಪಟ್ಟಿತು. ಪ್ರತಿಯೊಂದೂ ಇಲ್ಲಿನ ರಾಜ್ಯಗಳು ತಮ್ಮವನೇ ರಾಜನನ್ನು ಹೊಂದಿದ್ದರೂ ಸಾಮಾನ್ಯವಾಗಿ ಹೆ ಕಿಂಗ್ ನ ಪರಿಧಿಗೆ ಒಳಪಟ್ಟಿರಬೇಕಾಗುತಿತ್ತು. ಹೈ ಕಿಂಗ್ ನನ್ನು ಪ್ರಾಂತ್ಯದ ರಾಜರ ಶ್ರೇಣಿ ಪರಿಗಣಿಸಿ ಆಯ್ಕೆ ಮಾಡಲಾಗುತಿತ್ತು.ಈತ ರಾಯಲ್ ಕಿಂಗ್ ಡಮ್ ಆಫ್ ಮೀಥ್ ನ್ನು ಹೀಥ್ ಆಫ್ ತಾರಾ ರಾಜಧಾನಿಯಲ್ಲಿ ರಾಜ ವೆಭವದೊಂದಿಗೆ ಆಡಳಿತ ನಡೆಸಬೇಕಾಗುತಿತ್ತು. ಈ ರಾಷ್ಟ್ರೀಯ ರಾಜಪ್ರಭುತ್ವದ ಪರಿಕಲ್ಪನೆಯು ೭ನೆಯ ಶತಮಾನದಲ್ಲಿ ಮೊದಲಬಾರಿಗೆ ಸಮಗ್ರ ದಾಖಲೆಗೆ ಸಂದಿತು ಆದರೆ ವಿಕಿಂಗ್ ಯುಗ(ಸ್ಕ್ಯಾಂಡೇನಿಯನರು ಯುರೋಪಿನ ಕರಾವಳಿ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ) ಮಾತ್ರ ಇದಕ್ಕೆ ರಾಜಕೀಯತೆಯ ವಾಸ್ತವ ದೊರಕಿತು. ಆವಾಗಲೂ ಕೂಡಾ ಇದು [೪೪][೪೫][೪೬] ಸ್ಥಿರವಾಗಿರಲಿಲ್ಲ. ಮೊದಲಬಾರಿಗೆ ಬರಹದ ರೂಪದ ನ್ಯಾಯಾಂಗ ಪದ್ದತಿಯು ಬ್ರೆಹಾನ್ ಕಾನೂನುಗಳನ್ನು ಆಡಳಿತಕ್ಕೆ ತಂತು.ಇದನ್ನು ಬ್ರೆಹಾನ್ಸ್ ಎಂಬ ವೃತ್ತಿಪರ ನ್ಯಾಯಾಧೀಶರ ವರ್ಗ ಜಾರಿಗೊಳಿಸಿತು. ದಿ ಕ್ರೊನಿಕಲ್ ಆಫ್ ಐರ್ಲೆಂಡ್(ಐರ್ಲೆಂಡಿನ ಚರಿತ್ರಾ ಕ್ರಮ) ೪೩೧ರಲ್ಲಿ ಬಿಷಪ್ ಪಲ್ಲಡಿಯಸ್ ಪೋಪ್ ಸೆಲೆಸ್ಟಿಯನ್ ರ ಮಿಶನ್ ನೊಂದಿಗೆ ಐರ್ಲೆಂಡಿಗೆ ಬಂದರು."ಈಗಾಗಲೇ ಕ್ರೈಸ್ತ ಧರ್ಮದಲ್ಲಿ ನಂಬಿಕೆ" ಇದ್ದ ಎರ್ಲೆಂಡ್ ಇದನ್ನು ಸ್ವಾಗತಿಸಿತು. ಇದೇ ದಾಖಲೆಯಲ್ಲಿ ಐರ್ಲೆಂಡಿನ ಮಹಾಪೋಷಕ ಸೇಂಟ್ ಪಾಟ್ರಿಕ್ ಅದೇ ವರ್ಷ ಅಲ್ಲಿಗೆ ಆಗಮಿಸಿದರು. ಪಲ್ಲಡಿಯಸ್ ಮತ್ತು ಪಾಟ್ರಿಕ್ ಅವರುಗಳ ಕ್ರೈಸ್ತ ಧರ್ಮ ಪ್ರಚಾರದ ಮಿಶನ್ ಗಳ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿವೆ ಆದರೆ ಇಬ್ಬರೂ ಅಲ್ಲಿಯೇ ಸ್ಥಾನ ಪಡೆದಿರುವದರಿಂದ ಒಟ್ಟಾಭಿಪ್ರಾಯ ಇದೆ [೪೭] ಹೇಳಬಹುದು. ಹೊಸ ಧರ್ಮದ ಭರಾಟೆಯಲ್ಲಿ ಡ್ರುಯಿಡ್ ಸಂಪ್ರದಾಯಿಕ ಪದ್ದತಿ ಕುಸಿಯಿತು.ಐರಿಶ್ ಕ್ರಿಶ್ಚಿಯನ್ ವಿದ್ವಾಂಸರು ಲ್ಯಾಟಿನ್ ಮತ್ತು ಗ್ರೀಕ್ ಹಾಗು ಕ್ರಿಶ್ಚಿಯನ್ ಧರ್ಮಶಾಸ್ತ್ರ ಕಲಿಕೆಯನ್ನು ಪ್ರೋತ್ಸಾಹಿಸಿದರು. ಯುರೊಪಿನ ಎಲ್ಲೆಡೆಯು ಕರಾಳ ಯುಗ,ಡಾರ್ಕ್ ಏಜಿಸ್ ಇರುವಾಗ ಐರ್ಲೆಂಡಿನಲ್ಲಿ ಕ್ರಿಶ್ಚಿಯನ ಧರ್ಮದ ಉತ್ಕರ್ಷದ ಸ್ಥಿತಿ ಮತ್ತು ಲ್ಯಾಟಿನ್ ಗ್ರೀಕ್ ಕಲಿಕೆ ಆರಂಭಿಕ ಮಧ್ಯಯುಗದಲ್ಲಿ [೪೮][೪೯] ಸಂರಕ್ಷಿಸಲ್ಪಟ್ಟಿತು ವಿಕಿಂಗ್ ಆಕ್ರಮಣಕಾರರ ಅಲೆಗಳು ಐರಿಶ್ ನ ಮಠ-ಮಾನ್ಯಗಳು ಹಾಗು ಪಟ್ಟಣಗಳಲ್ಲಿವ್ಯಾಪಕವಾಗಿ ವ್ಯಾಪಿಸಿತು.ಈಗಾಗಲೇ ದೇಶದಲ್ಲಿ ಸಮರದ ಬೀಜಗಳು ಬಿತ್ತನೆಯಾಗಿ ಇಂತಹ ಆಕ್ರಮಣಗಳು ೯ನೆಯ ಶತಮಾನದಲ್ಲಿ ಕೊನೆ ಹಂತಕ್ಕೆ ಬಂದರೂ ವಿಕಿಂಗ್ ದುರಾಕ್ರಮಣಗಳು ಸದ್ದಿಲ್ಲದೇ ದ್ವೀಪದ ಒಳಭಾಗದಲ್ಲಿ ಒಂದು ಅಲೆಯನ್ನು ಸೃಷ್ಟಿಸುವಲ್ಲಿಸಫಲವಾದವು. ಬರಬರುತ್ತಾ ವಿಕಿಂಗ್ ಜನಾಂಗವು ಐರ್ಲೆಂಡ್ ನಲ್ಲಿತಮ್ಮ ವಾಸಸ್ಥಾನವನ್ನು ಮಾಡಿಕೊಂಡು ಅಲ್ಲಿಯೇ ನೆಲಿಸಿದರು.ಸದ್ಯದ ಆಧುನಿಕ ನಗರಗಳಾದ ಡಬ್ಲಿನ,ಕಾರ್ಕ,ಲಿಮ್ರಿಕ್ ಮತ್ತು ವಾಟರ್ ಫೋರ್ಡ್ ಗಳ ಅಸ್ತಿತ್ವಕ್ಕೆ ಕಾರಣರಾದರು.
ಮೇ೧,೧೧೬೯ರಲ್ಲಿ ಐರ್ಲೆಂಡಿನಲ್ಲಿ ನಾರ್ಮನ್ ರು ದಾಳಿ ಆರಂಭಗೊಂಡಿತು. ವೆಕ್ಸ್ಫೊರ್ಡಿನ ಬನ್ನೊ ಸ್ಟ್ರಾಂಡನಲ್ಲಿ ಕಾಂಬ್ರೊ ನಾರ್ಮನ್ ಸಾಮಂತರು ತಮ್ಮ ಆರುನೂರು ಪರಿಚಾರಕರ್ ತಂಡದೊಂದಿಗೆ ಬಂದಿಳಿದರು. ತನ್ನ ಕಲಿತನ ಹಾಗು ಪರಾಕ್ರಮಗಳಿಂದ ಪ್ರಸಿದ್ದವಾಗಿದ್ದ ಪೆಂಬ್ರೊಕನ ಅರ್ಲ ರಿಚರ್ಡ್ ದೆ ಕ್ಲೇರ್ ನೇತೃತ್ವದಲ್ಲಿ ಈ ದಾಳಿ [೫೦] ನಡೆಯಿತು. ಈ ದಾಳಿಯ ಜೊತೆಜೊತೆಯಲ್ಲಿಯೇ ನೂತನ ನಾರ್ಮನ್ ವಿಸ್ತರಣಾ ಕಾರ್ಯವೂ ನಡೆದಿತ್ತು. ರಿ ಆಫ್ ಲೀನ ಸ್ಟರ್ ನ ಡೆರ್ಮೊಟ್ ಮ್ಯಾಕ್ ಮುರೊ ನ ಆವ್ಹಾನದ ಮೇರೆಗೆ ಈ ದಾಳಿ ಇನ್ನಷ್ಟು ತೀವ್ರಗೊಂಡಿತು. ಬ್ರೆಫ್ನೆಯ ತಿಘೇರ್ನಾನ್ ಉಆ ರುರಿಕ್ ಮತ್ತು ರೊರಿ ಓ ಕೊನರ್ ಸಾಮಂತರೊಂದಿಗೆ ಮ್ಯಾಕ್ ಮುರೊ ಸಂಘರ್ಷಕ್ಕಿಳಿದ. ಫ್ರೆಂಚ್ ಭಾಗದ ಸವಾಲುಗಳನ್ನು ಎದುರಿಸಿದ ನಂತರ ಇಂಗ್ಲೆಂಡಿನ ಕಿಂಗ್ ಹೆನ್ರಿII ಅಂಗೆವಿನ್ ಐರ್ಲೆಂಡಿನ ನಡೆಯುತ್ತಿರುವ ಪ್ರಗತಿಗಳನ್ನು ಪರಿಶೀಲಿಸಲು ೧೧೭೧ರಲ್ಲಿ ಅಲ್ಲಿಗೆ ಆಗಮಿಸಿದ. ಐರಿಶ್ ನ ಮುಖ್ಯಸ್ಥರನ್ನು ರಾಜಪ್ರಭುತ್ವದ ನಿಯಂತ್ರಣಕ್ಕೆ ತರಲು ಆತ ಪೂರ್ವ ಭಾಗದಲ್ಲಿನ ನಾಯಕರೊಂದಿಗೆ ಸಂಧಾನಕ್ಕಿಳಿದ. ರೊಮನ್ ಮಾದರಿಯಲ್ಲಿಯೇ ಐರಿಶ್ ಚರ್ಚ ಕೂಡಾ ಆರ್ಥಿಕ ಮತ್ತು ಆಡಳಿತಾತ್ಮಕ ಕ್ಷೇತ್ರದಲ್ಲಿ ಪ್ರಗತಿ ಹೊಂದಬೇಕೆಂಬ ಉದ್ದೇಶ ಅವನದಾಗಿತ್ತು. ಇಂತಹ ಮರುರಚನಾಕ್ರಿಯೆಯು ಕೆಲ್ಲಸ್ ನ ಸಿನೊಡ್ ನ ಕಾಲದಲ್ಲೇ ಮೊದಲ ಹಂತದ ಪ್ರಗತಿ ಕಾರ್ಯಗಳಿಗೆ ಚಾಲನೆ ನೀಡಲಾಗಿತ್ತು. ಸ್ಟ್ರಾಂಗ್ ಬೊ ಮತ್ತು ಕಾಂಬ್ರೊ ನಾರ್ಮನ್ ದಾಳಿಕೋರರ ಮೇಲೆ ಹೆನ್ರಿ ಯಶಸ್ವಿಯಾಗಿ ತನ್ನ ಅಧಿಕಾರ ಸ್ಥಾಪಿಸಿದ. ಇದೂ ಅಲ್ಲದೇ ಹಲವಾರು ಐರಿಶ್ ರಿ ಗಳು ಅಂದರೆ ಸಣ್ಣ ಪುಟ್ಟ ಸಾಮಂತರು ತನ್ನ ಅಧಿಕಾರವನ್ನು ಒಪ್ಪಿಕೊಳ್ಳುವಂತೆ ಮನವೊಲಿಸಿದ. ನಂತರ ೧೧೭೫ರ ವಿಂಡಸರ್ ಒಪ್ಪಂದದಲ್ಲಿ ಈ ವ್ಯವವಸ್ಥೆ ಸಮ್ಮತಿ ಪಡೆಯಿತು. ಹಲವಾರು ಶತಮಾನಗಳ ನಂತರ ಸ್ಥಳೀಯ ಬ್ರೆಹನ್ ಕಾನೂನು ನಾರ್ಮನ್ ಊಳಿಗಮಾನ್ಯ ಕಾನೂನು ಪ್ರಭಾವವು ಕ್ರಮೇಣ ಹಿನ್ನಡೆ ಪಡೆಯಿತು. ಐರ್ಲೆಂಡಿನ ಕೆಳಭಾಗದಲ್ಲಿ ನಾರ್ಮನ-ಐರಿಶ್ ನವರ ಊಳಿಗಮಾನ್ಯ ಪದ್ದತಿ ೧೩ನೆಯ ಶತಮಾನದಲ್ಲಿಇಡೀ ದೇಶಾದ್ಯಂತ ಪಸರಿಸಿತು. ಅವರ ಈ ನೆಲೆವಾಸವು ಹಲವಾರು ಸ್ವಾಭಾವಿಕ ಲಕ್ಷಣಗಳಾದ ಬಾರೊನಿಗಳು(ಜಮೀನುದಾರರು),ಅಧಿಕಾರಿಶಾಹಿಗಳು,ಮತ್ತು ಪಟ್ಟಣಗಳ ರಚನೆಗೆ ಕಾರಣವಾಯಿತು.ಇದೇ ವೇಳೆಗೆ ಆಧುನಿಕ-ದಿನಗಳ ಸಣ್ಣ ಸಣ್ಣ ದ್ವೀಪಗಳ(ಕೌಂಟಿ) ಅಸ್ತಿತ್ವ ಕಂಡು ಬಂತು.
ಲವೊಡಾಬಿಲಿಟರ ,ಪಪಾಲ್ ಬುಲ್ ನಿಯಮಾನುಸಾರ ಈ ದಾಳಿಯನ್ನು ಅಧಿಕೃತಗೊಳಿಸಲು ೧೧೫೫ರಲ್ಲಿ ಅಡ್ರಿಯನ್ ಅವರು ಆದೇಶ ನೀಡಿದರು. ಹರ್ಟ್ ಫೊರ್ಡ್ ಶೆಯರ್ನಲ್ಲಿ ಬೊರ್ನ್ ನಿಕೊಲಸ್ ಬ್ರೆಕ್ ಸ್ಪೆಯರ್ ಪೋಪ್ ಆಗಿ ಆಯ್ಕೆಯಾದ ಮೊದಲ ಇಂಗ್ಲೀಷ್ ವ್ಯಕ್ತಿ. ಇದರ ನಿಖರತೆ ಬಗ್ಗೆ ಕೆಲವು ವಿವಾದಗಳು ಎದ್ದವು:ಧರ್ಮ ಗುರುವಿನ ಹೆಸರಿನ ಮೇಲೆ ಆಡಳಿತ ವಹಿಸುವ ಕುರಿತು ಸತ್ಯಾಸತ್ಯತೆ ಬಗ್ಗೆ ಐರ್ಲೆಂಡಿನ ಅಧಿಕಾರವನ್ನು ಕಿಂಗ್ ಹೆನ್ರಿII ಅವರಿಗೆ ವಹಿಸಲಾದ ಬಗ್ಗೆ ಹಲವು ವಿವಾದಗಳು [೫೧] ಎದ್ದವು. .ಪೋಪ್ ಅಲೆಕ್ಸಾಂಡರ್III ಅವರು ಹೆನ್ರಿ ಅವರನ್ನು ೧೧೭೨ರ ಸುಮಾರಿಗೆ ಐರ್ಲೆಂಡಿನಲ್ಲಿ ಪ್ರೋತ್ಸಾಹಿಸಿ, ರೊಮ್ ಮಾದರಿಯಲ್ಲಿ ಐರಿಶ್ ಚರ್ಚ್ ಕೂಡಾ ಒಟ್ಟಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದರು ವಾರ್ಷಿಕ ತಲಾ ಆದಾಯದ ಮೇಲೆ ಒಂದು ಪೆನ್ನಿಯಂತೆ ಹೆನ್ರಿ ಕರ ವಿಧಿಸಲು ಅಧಿಕಾರ ಪಡೆದುಕೊಂಡನು. ಇಂತಹ ಚರ್ಚಿನ ಕರವನ್ನು ಪೀಟರ್ಸ್ ಪೆನ್ಸ್ ಎಂದು ಕರೆಯಲಾಗುತ್ತದೆ.ಇನ್ನೂ ಕೂಡಾ ಇದನ್ನು ಸ್ವಯಂ ಕೊಡುಗೆ ಎಂದು ಪರಿಗಣಿಸಲಾಗುತ್ತದೆ. ಡೊಮಿನಸ್ ಹಿಬೆರ್ನೇ ಎಂಬ ಬಿರುದನ್ನು ಹೆನ್ರಿ ಸಮ್ಮತಿಸಿ ಅಂದರೆ ಲಾರ್ಡ್ ಆಫ್ ಐರ್ಲೆಂಡ್ ಬಿರುದಾಂಕಿತನಾದನು.ನಂತರ ಆತನ ಪುತ್ರ ಯುವರಾಜ ಪ್ರಿನ್ಸ್ ಜಾನ್ ಲ್ಯಾಕ್ ಲ್ಯಾಂಡ್ ೧೧೮೫ರಲ್ಲಿ ಇದೇ ಬಿರುದಿನಿಂದ ಹೆಸರಾದನು.ಪೋಪ್ ಲುಸಿಯಸ್III ಇದನ್ನು ಅನುಮೋದಿಸಿದರು.ಇದು ೧೫೪೨ರಲ್ಲಿ ಕಿಂಗಡಮ್ ಆಫ್ ಐರ್ಲೆಂಡ್ ಆಗುವವರೆಗೂ ಐರಿಶ್ ರಾಜ್ಯವನ್ನು ಲಾರ್ಡ್ ಶಿಪ್ ಆಫ್ ಐರ್ಲೆಂಡ್ ಎಂದು ಕರೆಯಲಾಗುತಿತ್ತು.
ಹದಿನಾಲ್ಕನೆಯ ಶತಮಾನದ ಸಂದರ್ಭದಲ್ಲಿ,ಅಂದರೆ ಪ್ಲೇಗ್ ಕಾಯಿಲೆಯ ತೀವ್ರತೆಯಿಂದಾಗಿ ನಾರ್ಮನ್ ನೆಲೆವಾಸಗಳು ಇಳಿಕೆ ಪಡೆದ ಕಾಲಾವಧಿ ಅದಾಗಿತ್ತು. ನಾರ್ಮನ್ ಆಡಳಿತಗಾರರು ಮತ್ತುಸ್ಥಳೀಯ ಉನ್ನತ ವರ್ಗದ ನಡುವೆ ಅಂತರ-ವಿವಾಹದ ಸಂಬಂಧಗಳು ಏರ್ಪಟ್ಟವು. ನಾರ್ಮನ್ ಆಡಳಿತವಿರುವ ಪ್ರದೇಶಗಳು ಬಹುತೇಕ ಸಂಸ್ಕೃತಿಯ ಮಿಶ್ರಣ ಪಡೆದು ಒಂದು ಹೈಬ್ರೀಡ್ ಹಿಬೆರ್ನೊ ನಾರ್ಮನ್ ಎಂಬ ಸಂಸ್ಕೃತಿ ಹುಟ್ಟಿಗೆ ಕಾರಣವಾಯಿತು. ಸುಮಾರು ೧೩೬೬ರಲ್ಲಿ ಸ್ಟಾಟ್ಯೂಟ್ಸ್ ಆಫ್ ಕಿಲ್ ಕೆನಿ ಎಂಬ ಹಲವು ಕಾನೂನುಗಳ ಒಂದು ಸಮಗ್ರ ಕಾನೂನನ್ನುನಾರ್ಮನ್ ಸಂಸತ್ತು ಮೂಲಕ ಜಾರಿಗೊಳಿಸಿ ನಾರ್ಮನ್ ರು ಐರಿಶ್ ಸಮಾಜದೊಂದಿಗೆ ಸೇರಿಕೊಳ್ಳುವುದನ್ನು [೫೨] ನಿಷೇಧಿಸಲಾಯಿತು. ಐರ್ಲೆಂಡಿನಲ್ಲಿ ೧೫ನೆಯ ಶತಮಾನದ ಅಂತ್ಯಕ್ಕೆ ಇಂಗ್ಲಿಷ್ ಕ್ರೌನ್ ಪ್ರಭುತ್ವ ಐರ್ಲೆಂಡಿನಲ್ಲಿ ಕೊನೆಗೊಂಡು ನಾರ್ಮನ್ ಪ್ರಭಾವದ ಐರಿಶ್ ಸಂಸ್ಕೃತಿ ಮತ್ತು ಭಾಷೆಗಳು ಮತ್ತೆ ಪ್ರಾಬಲ್ಯಕ್ಕೆ ಬಂದವು.
ಆದರೆ ಡಬ್ಲಿನ್ ಸುತ್ತಮುತ್ತಲೂ ಇಂಗ್ಲೀಷ್ ಕ್ರೌನ್ ತನ್ನ ನಿಯಂತ್ರಣವನ್ನು ಅಚಲವಾಗಿಸಿತ್ತು.ಇದನ್ನು ದಿ ಪೇಲ್ ಎಂದು ಕರೆಯಲಾಗುತಿತ್ತು. ಹೇಗೇ ಆದರೂ ಹದಿನಾರನೆಯ ಶತಮಾನದಲ್ಲಿ ಇಂಗ್ಲೀಷ್ ಆಡಳಿತದ ಕಾನೂನು ಮತ್ತೆ ಮರುಜಾರಿಗೊಳಿಸಿ ಅದನ್ನು ವಿಸ್ತರಿಸಲಾಯಿತು.ಇದನ್ನು ತುಡೂರ್ ಐರ್ಲೆಂಡನ ಮರು ವಿಜಯ ಎಂದು ಹೇಳಲಾಗುತ್ತದೆ. ಹದಿನೇಳನೆಯ ಶತಮಾನದಲ್ಲಿ ನಡೆದ ಒಂಭತ್ತು ವರ್ಷಗಳ ಯುದ್ಧ ಮತ್ತು ಅರ್ಲ್ಸ್ ಅವರು ನಡೆದು ಬಂದ ದಾರಿ ಇದನ್ನು ಬಹುತೇಕ ಸಂಪೂರ್ಣ ಸ್ವಾಧೀನದ ಕಾಲ ಎನ್ನಬಹುದು. ಈ ನಿಯಂತ್ರಣವು ಮತ್ತೆ ಹದಿನೇಳನೆಯ ಶತಮಾನದಲ್ಲಿ ಮತ್ತಷ್ಟು ಏಕತ್ರಗೊಳಿಸಲಾಯಿತು ಈ ಶತಮಾನವು ಇಂಗ್ಲೀಷ್ ಮತ್ತು ಸ್ಕಾಟಿಸ್ ಅವರುಗಳ ವಸಾಹತು ಶಾಹಿಯು ಐರ್ಲೆಂಡಿನ ಪ್ಲಾಂಟೇಶನ್ ಗಳು,ಮೂರು ರಾಜ್ಯಗಳ ಯುದ್ಧ ಮತ್ತು ವಿಲಿಯಮೈಟ್ ಯುದ್ಧಗಳಿಗೆ ಸಾಕ್ಷಿಯಾಯಿತು. ಮೂರು ರಾಜ್ಯಗಳ ಯುದ್ಧದ ಸಂದರ್ಭದಲ್ಲಿ ಐರಿಶ್ ಅಪಾರ ಪ್ರಮಾಣದ ಹಾನಿ ಅನುಭವಿಸಿತು.(ಮೂರು ಐರ್ಲೆಂಡಿನ ಯುದ್ಧಗಳಲ್ಲಿ ಮುಖ್ಯವಾಗಿ,ಐರಿಶ್ ಕಾನ್ ಫೆಡರಸಿ ಮತ್ತು ಐರ್ಲೆಂಡಿನ ಕ್ರೊಮ್ ವೆಲಿಯನ್ ವಿಜಯ).ಇದರಲ್ಲಿ ಅಂದಾಜು ೨೦,೦೦೦ ಜನರು ಸಮರದಲ್ಲೇ ಸಾವನ್ನಪ್ಪಿದ್ದರೆ,೨೦,೦೦೦ ನಾಗರಿಕರು ಯುದ್ಧಾನಂತರದ ಬರಗಾಲದಿಂದಾಗಿ ಮೃತರಾಗಿದ್ದಾರೆ.ಈ ಸಂದರ್ಭದಲ್ಲಿನ ಒತ್ತಾಯಪೂರ್ವಕವಾದ ಸ್ಥಳಾಂತರ,ಗೆರಿಲ್ಲಾ ಚಟುವಟಿಕೆಗಳು ಮತ್ತು ಯುದ್ಧಾನಂತರದ ಸಾಂಕ್ರಾಮಿಕ ರೋಗಗಳಿಗೆ ಜನ ಬಲಿಯಾದರು. ಮುಂದೆ ೧೬,೦೦೦ ಜನರನ್ನು ವಿಚಾರಣೆಗೆ ಗುರಿಪಡಿಸಿ ಗುಲಾಮಗಿರಿ ಮೇಲೆ ವೆಸ್ಟ್ ಇಂಡೀಸ್ ಗೆ ಕಳಿಸಲಾಯಿತು.ಕೆಲವು ಇತಿಹಾಸ ತಜ್ಞರ ಅಂದಾಜಿನಂತೆ ಐರ್ಲೆಂಡಿನ ಯುದ್ಧಪೂರ್ವದ ಜನಸಂಖ್ಯೆಯ ಅರ್ಧದಷ್ಟು ಜನರು ಘರ್ಷಣೆಗಳಿಂದಾಗಿ [೫೩] ಮೃತಪಟ್ಟಿದ್ದಾರೆ.
ಹದಿನೇಳನೆಯ ಶತಮಾನದ ಧಾರ್ಮಿಕ ಹೋರಾಟಗಳು ಐರ್ಲೆಂಡಿನ ಸಮಾಜ ಮತ್ತು ವರ್ಗದಲ್ಲಿನ ಆಳವಾದ ವಿಭಜನೆಗೆ ಕಾರಣವಾದವು ಧಾರ್ಮಿಕ ಶ್ರದ್ಧೆ ಇಂದು ಐರಿಶ್ ರಾಜ ಮತ್ತು ಸಂಸತ್ತಿನ ಮೂಲಕ ಹಲವು ಕಾಯ್ದೆಗಳಿಗೆ ದಾರಿ ಮಾಡಿದ್ದು ಇದರ ನೆರವಿನಿಂದ ರಾಜನಿಷ್ಠೆಯನ್ನು ಒಡಮೂಡಿಸಬಹುದಾಗಿದೆ. ಜಾಕೊಬೈಟ್ಸ್ ಗಳ ಮೇಲೆ ೧೬೭೩ರಲ್ಲಿವಿಜಯ ಸಾಧಿಸಿದ ಉಭಯ ರಾಜಪ್ರಭುತ್ವಗಳಾದ ವಿಲಿಯಮ್ ಮತ್ತು ಮೇರಿ ಅವರುಗಳ ಅವಧಿಯಲ್ಲಿ ದಿ ಟೆಸ್ಟ್ ಆಕ್ಟ್ ಕಾನೂನನ್ನು ಜಾರಿಗೊಳಿಸಲಾಯಿತು.ರೊಮನ್ ಕ್ಯಾಥೊಲಿಕ್ಸ್ ಮತ್ತು ನಿಷ್ಠರಲ್ಲದ ಪ್ರೊಟೆಸ್ಟಂಟ್ ಗಳನ್ನು ಐರಿಶ್ ಸಂಸತ್ತಿನಲ್ಲಿ ಕುಳಿತುಕೊಂಡು ಪಾಲ್ಗೊಳ್ಳಲು ನಿಷೇಧ ಹೇರಲಾಯಿತು. ಇಸವಿ ೧೪೯೪ರ ಪೊಯ್ನಿಂಗ್ಸ ಲಾ ದ ನೀತಿ-ನಿಯಮಗಳಂತೆ ಐರಿಶ್ ನ ಸಂಸತ್ತಿನ ಶಾಸನವು ಇಂಗ್ಲೀಷ್ ಸಂಸತ್ತಿನ ಅನುಮೋದನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರವರ್ಧನಮಾನಕ್ಕೆ ಬರುತ್ತಿರುವ ಪೆನಲ್ ಲಾಗಳು ನಿಷ್ಠರಲ್ಲದ ಐರಿಶ್ ರೊಮನ್ ಕ್ಯಾಥೊಲಿಕ್ಸ್ ಮತ್ತು ಕೆಲವು ಧರ್ಮಪಾಲನೆಗೆ ಹಿಂದೇಟು ಹಾಕುವ ನಿರೀಶ್ವರಿಗಳನ್ನು ಹಲವಾರು ನಾಗರಿಕ ಹಕ್ಕುಗಳಿಂದ ವಂಚಿತರಾಗುವಂತೆ ಮಾಡಲಾಯಿತು.ಇನ್ನೂ ಮುಂದೆ ಹೋಗಿ ಉತ್ತರಾಧಿಕಾರದ ಆಸ್ತಿ ಒಡೆತನಕ್ಕೂ ಅವರು ಹಕ್ಕಿನಿಂದ ವಂಚಿತರಾಗಬೇಕಾಯಿತು. ಹೆಚ್ಚಾಗಿ ಮತ್ತಷ್ಟು ಕಠಿಣ ಕಾನೂನುಗಳನ್ನು೧೭೦೩, ೧೭೦೯ ಮತ್ತು೧೭೨೮ ಇಸವಿಗಳಲ್ಲಿ ರೂಪಿಸಲಾಯಿತು. ಆಂಗ್ಲಿಕನ್ ನ ಹೊಸ ನಿಷ್ಠರ ವರ್ಗಕ್ಕೆ ಸೇರಲು ರೊಮನ್ ಕ್ಯಾಥೊಲಿಕ್ಸ್ ಮತ್ತುಪ್ರೊಟೆಸ್ಟಂಟ್ ನಿರೀಶ್ವರವಾದಿಗಳಿಗೆ ಅವಕಾಶ ದೊರೆಯದ ರೀತಿಯಲ್ಲಿ ಸಮಗ್ರ ಮತ್ತು ಶಿಸ್ತಿನ ಕಾನೂನುಗಳನ್ನು [೫೪] ಜಾರಿಗೊಳಿಸಲಾಯಿತು. ನೂತನ ಆಂಗ್ಲೊ-ಐರಿಶ್ ಆಡಳಿತ ವರ್ಗವು ಪ್ರೊಟೆಸ್ಟಂಟ್ ಅಸೆಂಡನ್ಸಿ ಎಂದು ಹೆಸರಾಯಿತು.
ಸರ್ವತ್ರ ಮತ್ತು ಎಲ್ಲೆಡೆಗೂ ಬೆಳೆಯುತ್ತಿದ್ದ ಆಲೂಗಡ್ಡೆ ಬೆಳೆಯ ವಿಫಲತೆಯಿಂದ ೧೭೪೦-೪೧ರಲ್ಲಿನ ಭೀಕರ ಐರಿಶ್ ಬರಗಾಲವು ವಿವಿಧ ರೋಗ ಮತ್ತು ಸಾಂಕ್ರಾಮಿಕಗಳಿಗೆ ಕಾರಣವಾಗಿ ೪೦೦,೦೦೦ಜನರನ್ನು ಬಲಿ ತೆಗೆದುಕೊಂಡಿತು. ಆಗಿನ ಸಂದರ್ಭದಲ್ಲಿ ಐರಿಶ್ ಸರ್ಕಾರವು ಸಾಕಷ್ಟು ಮುತವರ್ಜಿ ವಹಿಸಿ ಪರಿಹಾರ ನೀಡಿ ಸಾಧ್ಯವಿರುವ ಮಟ್ಟಿಗೆ ಹಾನಿ ತಡೆಗೆ ಕ್ರಮ ಕೈಗೊಂಡಿತು.ನಂತರದ ಈ ಶತಮಾನದ ಭಾಗದಲ್ಲಿ ಜನಸಂಖ್ಯೆ ಮತ್ತು ಆರ್ಥಿಕ ಚೇತರಿಕೆ ಇದರಲ್ಲಿ ಕಂಡು ಬಂದಿತು. ಮೊದಲ ಬಾರಿಗೆ ೧೭೮೨ರಲ್ಲಿ ಪೊಯ್ನಿಂಗ್ಸ್ ಲಾ ವನ್ನು ಹಿಂತೆಗೆದುಕೊಂಡ ಐರ್ಲೆಂಡಿಗೆ ನಾರ್ಮನ್ ದಾಳಿಯ ನಂತರದಲ್ಲಿ(ಕೊನೆಯ ಪಕ್ಷ ಕಾನೂನಿನಲ್ಲಿ) ಇಂಗ್ಲೆಂಡಿನಿಂದ ನಿಜವಾದ ಸಾರ್ವಭೌಮತ್ವ ದೊರಕಿತು.
ಆದರೂ ಐರಿಶ್ ಸಂಸತ್ತಿನ ಮೇಲ್ಮಟ್ಟದ ಆಯ್ಕೆಯ ಅಧಿಕಾರ ಮಾತ್ರ ಬ್ರಿಟೀಷ್ ಸರ್ಕಾರದೊಂದಿಗಿತ್ತು ಇಂತಹ ಮೂಗು ತೂರಿಸುವಿಕೆಯನ್ನು ೧೭೯೮ರ ಸುಮಾರಿಗೆ ಸೊಸೈಟಿ ಆಫ್ ಯುನೈಟೈಡ್ ಐರಿಶ್ ಮೆನ್ ಪ್ರತಿಭಟಿಸಿತು.ಹಲವಾರು ಪ್ರೊಟೆಸ್ಟಂಟರ ಸಂಪ್ರದಾಯವು ರೊಮನ್ ಕ್ಯಾಥೊಲಿಕ್ ರೊಂದಿಗೆ ಬಂಡೆದ್ದಿತು.ಈ ಬಂಡಾಯಕ್ಕೆ ಇಂತಹ ಸೊಸೈಟಿ ಸ್ಫೂರ್ತಿಯಾಯಿತು. ಗಣತಂತ್ರದ ಸಂವಿಧಾನ ರಚನೆಯ ಐರೆಂಡಿನ ನಿರ್ಮಾಣದ ಗುರಿಯಿಂದಾಗಿ ಪೂರ್ಣ ಸ್ವತಂತ್ರ ರಾಜ್ಯಕ್ಕಾಗಿ ಹೋರಾಟ ನಡೆಯಿತು. ಇಸವಿ 1798ರ ಐರಿಶ್ ಬಂಡಾಯವೂ ಫ್ರಾನ್ಸ್ ನಿಂದ ಸಹಾಯ ಪಡೆದಿದ್ದರೂ ಅದು ಬ್ರಿಟೀಶ್ ಮತ್ತು ಐರಿಶ್ ಸರ್ಕಾರಗಳಿಂದ ಹತ್ತಿಕ್ಕಲ್ಪಟ್ಟಿತು. ಬ್ರಿಟೀಶ್ ಮತ್ತು ಐರಿಶ್ ಸಂಸತ್ತುಗಳು ೧೮೦೦ರಲ್ಲಿ ಆಕ್ಟ್ ಅಫ್ ಯುನಿಯನ್ ಎಂಬ ಕಾನೂನನ್ನು ಜಾರಿ ಮಾಡಿದವು.ಇದು ೧೮೦೧ರ ಜನವರಿಯಲ್ಲಿ ಅನುಷ್ಠಾನಕ್ಕೆ ಬಂತು.ಕಿಂಗಡಮ್ ಆಫ್ ಐರ್ಲೆಂಡ್ ಮತ್ತು ಕಿಂಗಡಮ್ ಆಫ್ ಗ್ರೇಟ್ ಬ್ರಿಟನ್ ಗಳನ್ನು ಸೇರ್ಪಡೆಗೊಳಿಸಿದ ಯುನೈಟೆಡ್ ಕಿಂಗಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ಗಳ ಸೃಷ್ಟಿಗೆ ಕಾರಣವಾಯಿತು. ಐರಿಶ್ ಸಂಸತ್ತಿನಲ್ಲಿ ಈ ಕಾಯ್ದೆಯ ಜಾರಿಗೆ ಕೊನೆಗೆ ಬೇಕಾದಷ್ಟು ಬಹುಮತಕ್ಕೆ ಸಿದ್ದತೆ ಇದ್ದರೂ ಮೊದಲ ಬಾರಿಯ ೧೭೯೯ರಲ್ಲಿನ ಪ್ರಯತ್ನ ವಿಫಲವಾಯಿತು. ಸಮಕಾಲೀನ ಕಾಗದಪತ್ರಗಳು ಮತ್ತು ವಿಶ್ಲೇಷಣೆಗಳ ಪ್ರಕಾರ ಇದನ್ನು ಸಾಧಿಸಿಕೊಳ್ಳಲು ಬ್ರಿಟೀಷರು ಕೆಲಮಟ್ಟಿಗೆ ಲಂಚ ನೀಡಲು ಬ್ರಿಟೀಶನ ಗೌಪ್ಯ ನಿಧಿನೆರವಿನ ಕಚೇರಿವನ್ನೂ ಬಳಸಿಕೊಂಡರೆಂದೂ ಹೇಳಲಾಗುತ್ತದೆ.ಇದಕ್ಕಾಗಿ ಉನ್ನತವರ್ಗದ ಓಲೈಕೆ,ಸ್ಥಳಗಳ ಹಾಗು ಅವರ ಒಪ್ಪಿಗೆ ಪಡೆಯಲು ಬ್ರಿಟೀಷ್ ಸರ್ಕಾರ ಶತಪ್ರಯತ್ನ [೫೫] ನಡೆಸಿತು. .ಹೀಗೆ ಐರ್ಲೆಂಡ್ ಯುನೈಟೈಡ್ ಕಿಂಗಡಮ್ ನ ಒಂದು ಭಾಗವಾಗಿ ಲಂಡನ್ ನಲ್ಲಿರುವ UK ಸಂಸತ್ತಿನ ನೇರ ಆಳ್ವಿಕೆಗೆ ಒಳಪಟ್ಟಿತು. ವ್ಹಾಯಿಸರ್ ಗಲ್ ಆಡಳಿತವು ಸ್ಥಾಪಿಸಲ್ಪಟ್ಟು ಡಬ್ಲಿನ್ ಕ್ಯಾಸ್ಟಲ್ ನಲ್ಲಿ ಸರ್ಕಾರದ ಮೂಲಕ್ ಮುಖ್ಯ ಕಾರ್ಯದರ್ಶಿಯನ್ನು ನೇಮಿಸಲಾಯಿತು.
ಇಸವಿ ೧೮೪೦ರ ಭೀಕರ ಬರಗಾಲವು ಸುಮಾರು ಒಂದು ಇಲಿಯನ್ ಐರಿಶ್ ಜನರ ಸಾವಿಗೆ ಕಾರಣವಾಯಿತು. ದಶಲಕ್ಷಕ್ಕೂ ಹೆಚ್ಚು ಜನರು ಇದರಿಂದ ತಪ್ಪಿಸಿಕೊಳ್ಳಲು ವಲಸೆ [೫೬] ಹೋದರು. ಆ ದಶಕದ ಅಂತ್ಯಕ್ಕೆ ಯುನೈಟೈಡ್ ಸ್ಟೇಟ್ಸ್ ಗೆ ವಲಸೆ ಹೋದವರಲ್ಲಿ ಅರ್ಧದಷ್ಟು ಜನರು ಐರ್ಲೆಂಡಿಗೆ ಸೇರಿದವರಾಗಿದ್ದರು. ಬೃಹತ್ ಪ್ರಮಾಣದ ವಲಸೆಯು ಜನಸಂಖ್ಯೆಯ ಗಾತ್ರದಲ್ಲಿ ಆಳವಾದ ಕಂದಕ ನಿರ್ಮಾಣಕ್ಕೆ ಕಾರಣವಾಗಿ ೨೦ನೆಯ ಮಧ್ಯಭಾಗದವರೆಗೂ ಈ ಇಳಿಕೆ ಮುಂದುವರೆದಿತ್ತು. ಬರಗಾಲಕ್ಕಿಂತ ಮುಂಚಿತವಾಗಿ ತತ್ ಕ್ಷಣವೇ 1841ರಲ್ಲಿ ಜನಗಣತಿ ನಡೆಸಿ ೮.೨ ಮಿಲಿಯನ್ ಜನಸಂಖ್ಯೆ ಪ್ರಮಾಣವನ್ನು [೫೭] ದಾಖಲಿಸಲಾಯಿತು.[೫೮] ಆವಾಗಿನಿಂದ ಜನಸಂಖ್ಯೆಯು ಆ ಮಟ್ಟಕ್ಕೆ ಮರಳಲೇ [೫೮] ಇಲ್ಲ. ಜನಸಂಖ್ಯೆಯು ೧೯೬೧ರ ವರೆಗೆ ಇಳಿಕೆಯಲ್ಲೇ ಮುಂದುವರಿದಿತ್ತು.ಆದರೆ ಲಿಟ್ರಿಮ್ ಸಣ್ಣ ದ್ವೀಪಗಳ ಜನಸಂಖ್ಯೆಯು ಕಳೆದ ೨೦೦೬ರ ವರೆಗಿನ ಜನಗಣತಿವರೆಗೆ ಕೊಂಚ ಹೆಚ್ಚಳ ಕಂಡುಬಂದಿದ್ದು ಈ ಪ್ರದೇಶಗಳಲ್ಲಿನ ಸಾಮಾನ್ಯ ಜನವಸತಿಯು ಐರ್ಲೆಂಡಿನ ಎಲ್ಲಾ ಚಿಕ್ಕ-ಪುಟ್ಟ ದ್ವೀಪಗಳಿಗೆ ಹೋಲಿಸಿದರೆ ಏರಿಕೆಯಾಗಿದೆ ಎನ್ನಬಹುದು.
ಅಂದರೆ ೧೯ ಮತ್ತು ಆರಂಭಿಕ ೨೦ನೆಯ ಶತಮಾನದಲ್ಲಿ ಆಧುನಿಕ ಐರಿಶ್ ರಾಷ್ಟ್ರೀಯತೆ ಜನ್ಮ ತಾಳಿ,ಪ್ರಮುಖವಾಗಿ ಇದು ರೊಮನ್ ಕ್ಯಾಥೊಲಿಕ್ ಜನಸಂಖ್ಯೆಯಲ್ಲಿ ಹುಟ್ಟು ಕಂಡಿತು. ಇದರ ಆದ್ಯ ಪ್ರವರ್ತಕರೆಂದರೆ ಡ್ಯಾನಿಯಲ್ ಓ'ಕೊನೆಲ್ ಇವರಲ್ಲಿ ಮೊದಲಿಗರಾಗಿದ್ದಾರೆ. ಎನ್ನಿಸ್ ನಲ್ಲಿ ಆಶ್ಚರ್ಯಕರ ರೀತಿಯ ಫಲಿತಾಂಶದಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾದರೂ ರೊಮನ್ ಕ್ಯಾಥೊಲಿಕ್ ಆಗಿ ಅವರು ಸಂಸತ್ತನ್ನು ಪ್ರವೇಶಿಸಲು ಅಸಮರ್ಥರಾದರು. ಐರಿಶ್ ನಲ್ಲಿ ಜನಿಸಿದ ಸೈನಿಕ ಮತ್ತು ರಾಜನೀತಿಜ್ಞ ಪ್ರಧಾನ ಮಂತ್ರಿ ಡ್ಯೂಕ್ ಆಫ್ ವೆಲ್ಲಿಂಗಟನ್ ಅವರ ಬಿರುಸಿನ ಪ್ರಚಾರದಲ್ಲಿ ಆತ ಸಕ್ರಿಯನಾಗಿದ್ದ. ಭಾವಿ ಪ್ರಧಾನಿ ರಾಬರ್ಟ್ ಪೀಲ್ ಅವರು ಬೆಂಬಲಿಸಿ ವೆಸ್ಟ್ ಮಿನಿಸ್ಟರ್ ಸಂಸತ್ತಿನಲ್ಲಿ ಪಾಸಾದ ಕಾನೂನನ್ನು ಜಾರಿಗೊಳಿಸಲು ನಿರಾಕರಿಸಿದ್ದ ಜಾರ್ಜ್IV ಅವರ ಮನವೊಲಿಸಲು ವೆಲ್ಲಿಂಗಟನ್ ಸಫಲರಾಗಿ ಈ ಮಸೂದೆಗೆ ಅಂಕಿತ ಬೀಳುವಂತೆ ನೋಡಿಕೊಂಡರು. ಜಾರ್ಜ್ ಅವರ ತಂದೆಯು ಪ್ರಧಾನಿ ಪಿಟ್ಸ್ ಅವರು ಇಂತಹ ಮಸೂದೆಯನ್ನು ಮಂಡಿಸುವದಕ್ಕೆ ವಿರೋಧಿಸಿದ್ದರು.ಏಕೆಂದರೆ ೧೮೦೧ ರ ಯುನಿಯನ್ ಘರ್ಷಣೆಯ ಬಗ್ಗೆ ಆತಂಕಿತರಾಗಿದ್ದ ಅವರು ಕ್ಯಾಥೊಲಿಕ್ ರ ವಿಮೋಚನೆಯ ೧೭೦೧ರಲ್ಲಿನ ವಸಾಹತು ಕಾಯ್ದೆಯ ಘರ್ಷಣೆಯ ಬಗ್ಗೆಯೂ ಅವರು ಹೆದರಿದ್ದರು.
ತರುವಾಯ ಓ'ಕೊನೆಲ್ ಅವರ ನೇತೃತ್ವದಲ್ಲಿ ಆಕ್ಟ್ ಅಫ್ ಯುನಿಯನ್ ಹಿಂಪಡೆಯುವ ಆಗ್ರಹದ ಹೋರಾಟ ವಿಫಲಗೊಂಡಿತು. ಶತಮಾನದ ನಂತರದ ಅವಧಿಯಲ್ಲಿಚಾರ್ಲ್ಸ್ ಸ್ಟೆವರ್ಟ್ ಪರ್ನೆಲ್ ಮತ್ತುಇತರರು ಯುನಿಯನೊಳಗಡೆಯೇ"(ಹೋಮ್ ರೂಲ್ )" ಸ್ವಾಯತ್ತತೆಗಾಗಿ ಪ್ರಚಾರ ಮಾಡಿದರು. ಪ್ರಮುಖವಾಗಿ ದ್ವೀಪ ಉತ್ತರ ಭಾಗದ ಯುನಿಯನಿಷ್ಟ್ ಗಳು ಹೋಮ್ ರೂಲನ್ನು ವಿರೋಧಿಸಿ ಇದು ನ್ ಕ್ಯಾಥೊಲಿಕ್ ರ ಹಿತಾಸಕ್ತಿಯೇ ಆಧೀನಕ್ಕೆ ಒಳಪದಬಹುದೆಂದು ಅವರು ಆತಂಕ [೫೯] ವ್ಯಕ್ತಪಡಿಸಿದರು. ಹೋಮ್ ರೂಲ್ ಮಸೂದೆ ಪಾಸ್ ಮಾಡಲು ಹಲವಾರು ಸಾರಿ ಪ್ರಯತ್ನಗಳು ನಡೆದರೂ ಅದು ಕೊನೆಗೆ ೧೯೧೪ರಲ್ಲಿ ಅನುಮೋದನೆ ಪಡೆಯಿತು. ಇದಕ್ಕೆ ತಡೆಯೊಡ್ಡಿ ವಿರೋಧಿಸಬೇಕೆನ್ನುವ ಕಾರಣಕ್ಕೆ ೧೯೧೩ರಲ್ಲಿ ಅಲ್ ಸ್ಟರ್ ವಾಲಂಟಿಯರ್ಸ್ ಎಂಬ ಸಂಘಟನೆಯೊಂದು ಲಾರ್ಡ್ ಕ್ಯಾರ್ಸನ್ ಅವರ ನೇತೃತ್ವದಲ್ಲಿ ರಚನೆಗೊಂಡಿತು. ಈ ಸಂಘಟನೆಯು ಮುಂದೆ ೧೯೧೪ರಲ್ಲಿಐರಿಶ್ ವಾಲಂಟಿಯರ್ಸ್ ಆಗಿ ಮಾರ್ಪಟ್ಟುಹೋಮ್ ರೂಲ್ ಮಸೂದೆ ಪಾಸು ಮಾಡಿಸುವುದೇ ಇದರ ಗುರಿಯಾಗಿತ್ತು. ಈ ಕಾನೂನು ಜಾರಿಯಾಯಿತಾದರೂ ಅಲ್ ಸ್ಟರ್ ನ ಆರು ಚಿಕ್ಕ ದ್ವೀಪಗಳನ್ನು ಹೊರತುಪಡಿಸಲಾಗಿತ್ತಲ್ಲದೇ ಅವು ಉತ್ತರ ಐರ್ಲೆಂಡಾಗಿ ಮಾರ್ಪಟ್ಟವು. ಆದಾಗ್ಯೂ ಇದರ ಜಾರಿಗೆ ಮುಂಚೆ ಮಹಾಯುದ್ಧದ(ಮೊದಲ ಮಹಾಯುದ್ಧ I)ಅವಧಿ ವರೆಗೆ ಇದು ಅಮಾನತಾಗಿತ್ತು. ದಿ ಐರಿಶ್ ವಾಲಂಟಿಯರ್ಸ್ ಎರಡು ಗುಂಪುಗಳಾಗಿ ಒಡೆದು ಹೋಯಿತು.ಬಹು ಸಂಖ್ಯಾತ ಸದಸ್ಯರ ಗುಂಪು ಜಾನ್ ರೆಡ್ ಮಂಡ್ ಅವರ ನೇತೃತ್ವದಲ್ಲಿ ನ್ಯಾಶನಲ್ ವಾಲಂಟಿಯರ್ಸ್ ಆಗಿ ಮಾರ್ಪಟ್ಟು ಮಹಾಯುದ್ಧದಲ್ಲಿನ ಐರಿಶ್ ಪಾತ್ರವನ್ನು ಬೆಂಬಲಿಸಿತು. ಅಲ್ಪಸಂಖ್ಯಾತರ ಗುಂಪು ಐರಿಶ್ ವಾಲಂಟಿಯರ್ಸ್ ಹೆಸರನ್ನು ಉಳಿಸಿಕೊಂಡು ಮಹಾಯುದ್ಧದಲ್ಲಿ ಐರಿಶ್ ನ ಪಾತ್ರವನ್ನು [೬೦] ವಿರೋಧಿಸಿತು.
ಎರಡನೆಯ ಗುಂಪು ೧೯೧೬ರಲ್ಲಿ ಈಸ್ಟರ್ ರೈಜಿಂಗ್ ಮತ್ತು ಬ್ರಿಟಿಶ್ ಅವರ ಪ್ರತಿಕ್ರಿಯೆಗಳು ರೈಜಿಂಗ್ ನಾಯಕರನ್ನು ಏಳು ವಾರಗಳಲ್ಲಿ ಒಬ್ಬೊಬ್ಬರನ್ನಾಗಿ ಮುಗಿಸಿದ್ದರಿಂದ ಹೋಮ್ ರೂಲ್ ಬಗೆಗಿನ ರಾಷ್ಟ್ರೀಯ ಭಾವನೆಯೇ ಬದಲಾಗಿ ೧೯೧೮ರಲ್ಲಿ ಸ್ವಟಂತ್ರ ಪಂಗಡವು ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬಂದಿತ್ತು. ಇಸವಿ ೧೯೧೯ರಲ್ಲಿ ಗೆರಿಲ್ಲಾಸ್ವಾತಂತ್ರ್ಯ ಸಮರ ಮೊದಲ ಮಹಾಯುದ್ಧದೊಂದಿಗೆ ಅಂತ್ಯಗೊಂಡಿತು ಬ್ರಿಟಿಶ್ ಸರ್ಕಾರ ಮತ್ತು ಐರಿಶ್ ಗಣತಂತ್ರದ ನಾಯಕರೊಂದಿಗಿನ ಆಂಗ್ಲೊ-ಐರಿಶ್ ಶಾಂತಿ ಒಪ್ಪಂದ ೧೯೨೧ರಲ್ಲಿ ಅಂತ್ಯಗೊಂಡಿತು. ಉತ್ತರ ಐರ್ಲೆಂಡ್ ಮಾತ್ರ ಐರಿಶ್ ಮುಕ್ತ ರಾಜ್ಯದಲ್ಲಿ ಹೋಮ್ ರೂಲ್ ರಾಜ್ಯವಾಗಿ ರಚನೆಯಾಯಿತು.ಆದರೆ ತನಗೆ ಬಯಸಿದಾಗ ಒಂದು ಮುಕ್ತ ನಿಯಮದೊಂದಿಗೆ ಅದು ಪರಿವರ್ತನೆಗೆ ಅವಕಾಶವನ್ನು ಉಳಿಸಿಕೊಂಡಿತು.ಇದರ ಬೆನ್ನಲ್ಲೇ ತನ್ನ ಸ್ವಾಯತ್ತದ ಅಧಿಕಾರವನ್ನು ಚಲಾಯಿಸಿ [೬೧] ಬಿಟ್ಟಿತು. ಶಾಂತಿ ಒಪ್ಪಂದದ ಕೆಲವು ವಿಷಯಗಳ ಬಗ್ಗೆ ಅಸಮ್ಮತಿ ಹುಟ್ಟಿಕೊಂಡು ರಾಷ್ಟ್ರೀಯ ಚಳವಳಿಯಲ್ಲಿ ಒಡಕು ಉಂಟಾಗಿ ಅದು ಮುಂದೆ ಜನಾಂಗೀಯ ಆಂತರಿಕ ಯುದ್ಧಕ್ಕೆ ಕಾರಣವಾಯಿತು. ಶಾಂತಿ ಒಪ್ಪಂದದ ವಿರೋಧಿ ಗುಂಪುಗಳ ಸೋಲಿನೊಂದಿಗೆ ೧೯೨೩ರಲ್ಲಿ ಜನಾಂಗೀಯ ಯುದ್ಧ ನಿಂತಿತಾದರೂ ಅದು ಅತ್ಯಂತ ಆಳದ ಮಾತಿನಿಂದ ಹೇಳಲಾಗದ ವಿಭಜನೆಯನ್ನುಂಟು ಮಾಡಿತು.
ಹೊಸದಾಗಿ ರಚನೆಗೊಂಡ ಐರಿಶ್ ಮುಕ್ತ ರಾಜ್ಯವು ಮೊದಲ ದಶಕದಲ್ಲಿ ಜನಾಂಗೀಯ ಕದನದಲ್ಲಿ ಗೆದ್ದವರ ಆಳ್ವಿಕೆಗೆ ಒಳಪಟ್ಟಿತ್ತು. ಶಾಂತಿ ಒಪ್ಪಂದದ ವಿರೋಧಿಗಳ ಫೈಯಾನ್ನಾ ಫಾಯಿಲ್ ಪಕ್ಷ ೧೯೩೦ರಲ್ಲಿ ಚುನಾವಣೆಯಲ್ಲಿ ಗೆದ್ದು ಸರ್ಕಾರದಲ್ಲಿ ಪಾಲ್ಗೊಂಡಿತು. ಪಕ್ಷದ ಪ್ರಸ್ತಾಪಕ್ಕೆ ಮತದಾರರು ಸಮ್ಮತಿಸಿ ೧೯೩೭ರಲ್ಲಿ ನಡೆದ ಜನಮತಗಣನೆಯಲ್ಲಿ ಹೊಸ ಸಂವಿಧಾನಕ್ಕೆ ಮುಂದಾಗಿ ಇಡೀ ಐರ್ಲೆಂಡನ್ನು ಸಮಗ್ರ ಸಾರ್ವಭೌಮ ರಾಜ್ಯವೆಂದು ಪರಿಗಣಿಸಲಾಯಿತು. ಪೂರ್ಣಗೊಂಡ ಈ ಕಾರ್ಯದಿಂದಾಗಿ ಸ್ವತಂತ್ರ ಐರಿಶ್, ಬ್ರಿಟಿಶ್ ಸಾಮ್ರಾಜ್ಯದ ಆಳ್ವಿಕೆಯ ಸೆರಗಿನಿಂದ ಹೊರಬಂದಿತು. ಆದರೂ ೧೯೪೯ರಲ್ಲಿ ಅಧಿಕೃತವಾಗಿ ಗಣರಾಜ್ಯವಾಗಿ ಘೋಷಿಸುವವರೆಗೂ ಇದು ಸ್ವತಂತ್ರವಾಗಿರಲಿಲ್ಲ.
ಎರಡನೆ ಮಹಾಯುದ್ಧದಲ್ಲಿ ಬಹುತೇಕ ಈ ರಾಜ್ಯವು ತಟಸ್ಥ ನೀತಿಯನ್ನು ಅನುಸರಿಸಿತ್ತು.ಆದರೆ ತನ್ನ ಉತ್ತರ ಭಾಗದ ಐರ್ಲೆಂಡ್ ನ ರಕ್ಷಣೆಗಾಗಿ ತನ್ನ ಸಹಚರರಿಗೆ ಬೇಷರತ್ತಾಗಿ ಬೆಂಬಲ ನೀಡಿತು. ತಟಸ್ಥ ನೀತಿ ಅನುಸರಿಸಿದ್ದರೂ ಸ್ವತಂತ್ರ ಐರ್ಲೆಂಡಿನ ಸುಮಾರು ೫೦,೦೦೦[೬೨] ಸ್ವಯಂಸೇವಕರು ಮಹಾಯುದ್ಧದಲ್ಲಿ ಬ್ರಿಟೀಶ್ ಪಡೆಯೊಂದಿಗೆ ಸೇರಿಕೊಂಡರು.ಅದರಲ್ಲಿ ನಾಲ್ವರಿಗೆ ವಿಕ್ಟೊರಿಯಾ ಕ್ರಾಸಸ್ ಪ್ರಶಸ್ತಿ ನೀಡಿ [೬೨] ಗೌರವಿಸಲಾಯಿತು.
ಬೃಹತ್ ಪ್ರಮಾಣದ ವಲಸೆ ೧೯೫೦ ಮತ್ತು ೧೯೮೦ರ ಮಧ್ಯೆ ಕಂಡು ಬಂತು ಆದರೆ ೧೯೮೭ರ ಆರಂಭದಿಂದ ಐರ್ಲೆಂಡ್ ೧೯೯೦ರ ವರೆಗೆ ಆರ್ಥಿಕ ವಲಯದಲ್ಲಿ ಅಭೂತಪೂರ್ವ ಯಶಸ್ಸು ಕಂಡಿತು. ಈ ವಿದ್ಯಮಾನವು ಸೆಲ್ಟಿಕ್ ಟೈಗರ್ ಎಂದು [೬೩] ಕರೆಸಿಕೊಂಡಿತು. ಇಸವಿ ೨೦೦೭ರ ಹೊತ್ತಿಗೆ ಐರ್ಲೆಂಡ್ ಜಗತ್ತಿನ ಹೆಚ್ಚು ತಲಾ ಆದಾಯದ GDP ಅತ್ಯಂತ ಸಿರಿವಂತ ರಾಷ್ಟ್ರಗಳಲ್ಲಿ ಐದನೆಯದಾಗಿ ಹೊರಹೊಮ್ಮಿತು.
ಐರ್ಲೆಂಡ್ ಸರ್ಕಾರದ 1920ರ ಕಾನೂನು ಯುನೈಟೈಡ್ ಕಿಂಗಡಮ್ ನ ಭಾಗವಾಗಿ ಅದರ ಆಡಳಿತ ಹೊಂದಿದ್ದ ಉತ್ತರ ಐರ್ಲೆಂಡ್ ೧೯೭೨ರ ವರೆಗೆ ಯುನೈಟೈಡ್ ಸರ್ಕಾರದೊಳಗೇ ತನ್ನದೇ ಆದ ಸ್ವಯಂ ಆಡಳಿತ ಹೊಂದಿತ್ತು. ಉತ್ತರ ಐರ್ಲೆಂಡ್ ಜನಾಂಗೀಯ ಸಂಘರ್ಷದಿಂದಾಗಿ ಅತೀ ಹೆಚ್ಚು ತೊಂದರೆ ಅನುಭವಿಸಿತು. ಇಬ್ಭಾಗವಾದ ದಶ್ಕಗಳ ತರುವಾಯ ರಾಷ್ಟ್ರೀಯವಾದಿಗಳು ಮತ್ತು ಯುನಿಯನ್ನಿಷ್ಟರ ನಡುವಿನಆಂತರಿಕ-ಜಾತಿ ಹಿಂಸಾಚಾರ ಮತ್ತು ಕಲಹದ ವಿರಳ ಘಟನೆಗಳು ಕಾಣಿಸಿಕೊಂಡವು. ಯುನೈಟೆಡ್ ಕಿಂಗಡಮ್ ನ ಭಾಗವಾಗಿದ್ದ ಉತ್ತರ ಐರ್ಲೆಂಡ್ ಎರಡನೆಯ ಮಹಾಯುದ್ಧದಲ್ಲಿ ತಟಸ್ಥವಾಗಿರದೇ ಇದ್ದರೂ ಯಾವುದೇ ಮಿಲಿಟರಿ ಒತ್ತಾಯದ ಪ್ರಚೋದನೆ ಇಲ್ಲದೇ ೧೯೪೧ರಲ್ಲಿ ಬೆಲ್ ಫಾಸ್ಟ್ ಬಾಂಬ್ ದಾಳಿಯನ್ನು ಅನುಭವಿಸಬೇಕಾಯಿತು.
ಪ್ರೊಟೆಸ್ಟಂಟ್ ಮತ್ತು ಕ್ಯಾಥೊಲಿಕ್ ಜನಾಂಗಗಳು ಉತ್ತರ ಐರ್ಲೆಂಡಿನಲ್ಲಿ ಜನಾಂಗೀಯ ವರ್ಗದ ಆಧಾರದ ಮೇಲೆ ಚುನಾವಣೆಗಳಲ್ಲಿ ಮತಚಲಾಯಿಸಿದರು.(ಅಂದರೆ ಫಸ್ಟ್ ಪಾಸ್ಟ್ ದಿ ಪೊಸ್ಟ್ ನಿಂದ ೧೯೨೯ರಲ್ಲಿ ಚುನಾಯಿತವಾಯಿತು)ಇದು ಅಲ್ ಸ್ಟರ್ ಯುನಿಯನಿಷ್ಟ್ ಪಕ್ಷದಿಂದ ಆಡಳಿತಕ್ಕೆ ಒಳಪಟ್ಟಿತು. ಅಲ್ಪ ಸಂಖ್ಯಾತ ಕ್ಯಾಥೊಲಿಕ್ ರು ಬರ ಬರುತ್ತಾ ತಮ್ಮನ್ನು ಅಸಮಾನತೆಯಿಂದ ಕಾಣುವ ದೃಷ್ಟಿಗಳು ಹೆಚ್ಚಾದಾಗ ಅವರಲ್ಲಿ ಮತ್ತೆ ಅತೃಪ್ತಿ ಹುಟ್ಟಿತು.ಮತ ಗಳಿಕೆ ಮತ್ತು ಜಿಲ್ಲಾವಾರು ಅಸಮರ್ಪಕ ವಿಂಗಡಣೆ ಹಾಗು ಭೇದ ಭಾವದ ಕಲ್ಪನೆಯಗಳು ಅವರನ್ನು ವಸತಿ ಹಾಗು ಉದ್ಯೋಗದ ವಲಯದಲ್ಲಿ ಆದ್ಯತೆ [೬೪][೬೫][೬೬]ದೊರೆಯಲಿಲ್ಲ. ಸುಮಾರು ೧೯೬೦ರಲ್ಲಿ ರಾಷ್ಟ್ರೀಯ ಕುಂದುಕೊರತೆಗಳು ಸಾರ್ವಜನಿಕವಾಗಿ ಹೊರಬಂದು ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಾಯಿತು.ಇದಕ್ಕೆ ಪ್ರತಿರೋಧವಾಗಿ ನಿಷ್ಠರು ಪ್ರತಿಭಟನೆಗೆ ಇಳಿದು ತಮ್ಮ ಪ್ರತಿ ಹೋರಾಟವನ್ನು [೬೭] ಕೈಗೆತ್ತಿಕೊಂಡರು. ಸರಕಾರದ ಪ್ರತಿಕ್ರಿಯೆಯು ಈ ವಿಷಯದಲ್ಲಿ ಒಂದೇ ಕಡೆಗೆ ವಾಲಿತ್ತಲ್ಲದೇ ಇದು ಬಲಿಷ್ಠವೂ ಆಗಿತ್ತು. ಅಂತರ ಜನಾಂಗೀಯ ಹಿಂಸಾಚಾರಗಳು ಹೆಚ್ಚಾದಂತೆ ಕಾನೂನು ಸುವ್ಯವಸ್ಥೆ ಸ್ಥಿತಿ ಹದಗೆಟ್ಟಿತಲ್ಲದೇ ಎಲ್ಲೆಡೆಯೂ ಅಶಾಂತಿ ವಾತಾವರಣ [೬೮] ನಿರ್ಮಾಣಗೊಂಡಿತು. ಈ ಸಂದರ್ಭದಲ್ಲಿ ಹಲವಾರು ರಾತ್ರಿಗಳ ವರೆಗೆ ನಡೆದ ಹಿಂಸಾಚಾರಗಳಲ್ಲಿ ಪಾಲ್ಗೊಂಡು ಸೋತು ಕೈ ಚಿಲ್ಲಿರುವ ಪೋಲಿಸರಿಗೆ ನೆರವಾಗುವಂತೆ ಉತ್ತರ ಐರ್ಲೆಂಡ್ ಸರ್ಕಾರ ಬ್ರಿಟಿಶ್ ಸೈನ್ಯ ಪಡೆಯನ್ನು ಮನವಿ ಮಾಡಿಕೊಳ್ಳುವ ಪರಿಸ್ಥಿತಿ ಉದ್ಭವಿಸಿತು. ಸುಮಾರು೧೯೬೯ರಲ್ಲಿ ಯುನೈಟೆಡ್ ಐರ್ಲೆಂಡಿಗಾಗಿ ಹೋರಾಡಿದ ಅರೆಸೈನಿಕ ಕಾನೂನುಗಳುIRA ಬೆಂಬಲಿಗರು ಇದನ್ನು ರಚಿಸಿ ಆರು ಸಣ್ಣ ದ್ವೀಪಗಳನ್ನು ವಶಪಡಿಸಿಕೊಂಡಿರುವ ಬ್ರಿಟಿಶ್ ಕ್ರಮವನ್ನು ವಿರೋಧಿಸಿ ಎಲ್ಲೆಡೆಗೂ ಪ್ರಚಾರ ಆರಂಭಿಸಿತು. ಇನ್ನುಳಿದ ಗುಂಪು ಅಂದರೆ ಯುನಿಯನ್ನಿಷ್ಟ್ ಮತ್ತು ರಾಷ್ಟ್ರೀಯವಾದಿಗಳ ಉಭಯ ಪಂಗಡಗಳು ಈ ಹಿಂಸಾಚಾರಗಳಲ್ಲಿ ಪಾಲ್ಗೊಂಡ ಅವಧಿಯನ್ನು ಮತ್ತೆ ತೊಂದರೆಗಳ ಆರಂಭ ಎಂದು ಕರೆಯಲಾಯಿತು. ಸುಮಾರು ಮೂರು ದಶಕಗಳ ಕಾಲ ನಡೆದ ಈ ಸಂಘರ್ಷದಿಂದಾಗಿ ೩,೬೦೦ ಸಾವುಗಳು [೬೯] ಸಂಭವಿಸಿದವು. ಇಂತಹ ತೊಂದರೆಗಳ ಸಂದರ್ಭದಲ್ಲಿನ ನಾಗರಿಕ ಅಶಾಂತಿಯನ್ನು ಪರಿಗಣಿಸಿದ ಬ್ರಿಟಿಶ್ ಸರ್ಕಾರ ೧೯೭೨ರಲ್ಲಿ ಹೋಮ್ ರೂಲ್ ನ್ನು ಅಮಾನತುಗೊಳಿಸಿ "ನೇರ ಆಡಳಿತ"ವನ್ನು ಯುನೈಟೆಡ್ ಕಿಂಗಡಮ್ ನ ಸಂಸತ್ತಿನ ಮೂಲಕ ನಡೆಸುವಂತೆ ಕಡ್ಡಾಯಗೊಳಿಸಿತು.
ಈ ತೆರನಾದ ರಾಜಕೀಯ ತೊಂದರೆ ಹೋಗಲಾಡಿಸುವ ಎಲ್ಲ ಕ್ರಮಗಳ ಅಪಯಶಸ್ವಿಯು ಸರ್ಕಾರಕ್ಕೆ ಬಂತು,೧೯೭೩ರ ಸನ್ನಿಂಗ್ಡೇಲ್ ಒಪ್ಪಂದ ಕೂಡಾ ಏನೂ ಮಾಡಲಾಗಲಿಲ್ಲ. IRA ಕಾನೂನುಗಳ ಬೆಂಬಲಿಗರಿಂದ ಕದನ ವಿರಾಮ ಮತ್ತು ಬಹು ಪಕ್ಷಗಳೊಂದಿಗಿನ ಮಾತುಕತೆಯಿಂದಾಗಿ ಬೆಲ್ ಫಾಸ್ಟ್ ಒಪ್ಪಂದವನ್ನು ಅಂತಿಮಗೊಳಿಸಲಾಯಿತು.ಇದನ್ನು ಸಮಗ್ರ ಐರ್ಲೆಂಡಿನಾದ್ಯಂತದ ಜನಮತಗಣನೆಯ ಮೂಲಕ ಸರಿಪಡಿಸಲಾಯಿತು. ಈ ಒಪ್ಪಂದಂತೆ ಉತ್ತರ ಐರ್ಲೆಂಡ್ ಎರಡೂ ಸಮುದಾಯಗಳಿಂದ ಅಧಿಕಾರ ಹಂಚಿಕೆ ತಳಹದಿಯ ಸ್ವಯಂ ಆಡಳಿತ ನಡೆಸಲು ಅನುಮತಿ ನೀಡಲಾಯಿತು. ಕರಾರು ಒಪ್ಪಂದದ ಸಹಿ ನಂತರ ಬಹಳಷ್ಟುಹಿಂಸಾಚಾರ ಕಡಿಮೆಯಾಯಿತಲ್ಲದೇ IRA ಕಾನೂನು ಬೆಂಬಲಿಗರ ತಂಡ ಸ್ವತಂತ್ರ ಆಯೋಗದ ಸಲಹೆ ಮೂಲಕ ತನ್ನಸಶಸ್ತ್ರ ಹೋರಾಟಕ್ಕೆ ತದೆಯೊಡ್ಡಿತು.ನೇಮಕಗೊಂಡ ಈ ಆಯೋಗದ ಮೇಲ್ವಿಚಾರಣೆಯಲ್ಲಿ ಶಸ್ತ್ರ ಸಂಘರ್ಷವನ್ನು [೭೦] ಕೈಬಿಡಲಾಯಿತು. ಅಧಿಕಾರ ಹಂಚಿಕೆಯ ಅಸೆಂಬ್ಲಿ(ವಿಧಾನ ಮಂಡಲ)ಹಲವಾರು ಬಾರಿ ಅಮಾನತುಗೊಂಡರೂ ೨೦೦೭ರಲ್ಲಿ ಮತ್ತೆ ಯಥಾಸ್ಥಿತಿಗೆ ತಲುಪಿತು. ಆ ವರ್ಷದಲ್ಲಿ ಬ್ರಿಟಿಶ ರು ಉತ್ತರ ಐರ್ಲೆಂಡಿನ ಪೋಲಿಸರಿಗೆ ನೀಡಿದ್ದ ಸೈನ್ಯದ(ಮಿಲಿಟರಿ) ನೆರವನ್ನು ಬ್ತಿಟಿಶ್ ಸರ್ಕಾರ ಅಧಿಕೃತವಾಗಿ ಹಿಂಪಡೆದು ತನ್ನಸೈನಿಕರನ್ನು ಹಿಂದಕ್ಕೆ ಕರಿಸಿಕೊಳ್ಳಲು ಆರಂಭಿಸಿತು.
ಐರ್ಲೆಂಡ,ಉತ್ತರ ಮತ್ತು ದಕ್ಷಿಣ,ಮುಖ್ಯವಾಗಿ ಅಭಿವೃದ್ಧಿಹೊಂದಿರದ ಆರ್ಥಿಕ ವಲಯದಲ್ಲಿದ್ದವು ೧೯೮೦ರವರೆಗೆ ದೊಡ್ಡ ಪ್ರಮಾಣದ ವಲಸೆಗಳು ಐರ್ಲೆಂಡನ್ನು ಹಿಂದೆ ಉಳಿಯುವಂತೆ [೭೧] ಮಾಡಿದ್ದವು. ಈ ಸಮಸ್ಯೆಗಳು ದಿನಗಳೆದಂತೆ ೧೯೯೦ರಷ್ಟರಲ್ಲಿ ಬಹುತೇಕ ಕಾಣೆಯಾಗಿದ್ದವು.ಇದೇ ಸಮಯದಲ್ಲಿ ಐರ್ಲೆಂಡ್ ಗಣರಾಜ್ಯದ ದ್ವೀಪ ಅಭೂತಪೂರ್ವ ಆರ್ಥಿಕ ಬೆಳವಣಿಗೆಯನ್ನು ಕಂಡಿತು.ಈ ಸಂದರ್ಭದಲ್ಲಿನ "ಸೆಲ್ಟಿಕ್ ಟೈಗರ್" ಮತ್ತು ಉತ್ತರ ಐರ್ಲೆಂಡನಲ್ಲಿ ಮತ್ತೆ ಶಾಂತಿ [೭೨] ನೆಲೆಸಿತು. ಜಗತ್ತಿನಲ್ಲೇ ಅತ್ಯುತ್ತಮ ವಾಸಸ್ಥಳ ಮತ್ತು ಉತ್ತಮ ಗುಣಮಟ್ಟದ ಜೀವನ ಮಟ್ಟ ಹೊಂದಿರುವ ಎಂದು ೨೦೦೫ರಲ್ಲಿ ದಿ ಎಕನಾಮಿಸ್ಟ್ ಪತ್ರಿಕೆ ನಡೆಸಿದ ವಿಶ್ಲೇಷಣೆಯಂಟೆ ಐರ್ಲೆಂಡ್ ಗಣರಾಜ್ಯವನ್ನು (ರಿಪಬ್ಲಿಕ್ ಆಫ್ ಐರ್ಲೆಂಡ್ )[೭೩] ಹೆಸರಿಸಲಾಯಿತು.
ಎರಡೂ (ಐರ್ಲೆಂಡ್ ಗಣರಾಜ್ಯ(ರಿಪಬ್ಲಿಕ್ ಆಫ್ ಐರ್ಲೆಂಡ್) ಮತ್ತು ಉತ್ತರ ಐರ್ಲೆಂಡ್ [೭೪][೭೫] ೨೦೦೮ರ ಆರ್ಥಿಕ ಕುಸಿತಕ್ಕೆ ಈಡಾದವು.೨೦೦೯ರ ಹೊತ್ತಿಗೆ ಐರ್ಲೆಂಡ್ ಗಣರಾಜ್ಯದಲ್ಲಿನ ನಿರುದ್ಯೋಗ ದರ[೭೬] ೧೨.೫%ರಷ್ಟಾಗಿತ್ತು.
ಐರ್ಲೆಂಡಿನಲ್ಲಿ ಐದು ಪ್ರಮುಖ ವಿಮಾನ ನಿಲ್ದಾಣಗಳಿವೆ: ಡಬ್ಲಿನ್ ವಿಮಾನ ನಿಲ್ದಾಣ,ಬೆಲ್ ಫಾಸ್ಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ,(ಅಲ್ಡರ್ ಗ್ರೊ)ಕ್ವಾರ್ಕ್ ವಿಮಾನ ನಿಲ್ದಾಣ ,ಶನ್ನೊನ್ ವಿಮಾನ ನಿಲ್ದಾಣ ಮತ್ತು ಐರ್ಲೆಂಡ್ ವೆಸ್ಟ್ ವಿಮಾನನಿಲ್ದಾಣ(ನಾಕ್) ಇವುಗಳಲ್ಲಿ ಡಬ್ಲಿನ್ ವಿಮಾನ ನಿಲ್ದಾಣ ಅತ್ಯಂತ ಚಟುವಟಿಕೆಯ ವಿಮಾನ ನಿಲ್ದಾಣವಾಗಿದೆ.[೭೭] ಪ್ರತಿವರ್ಷ ಸುಮಾರು ೨೨ ದಶಕಲಕ್ಷದಷ್ಟು ಪ್ರಯಾಣಿಕರನ್ನು ಸಾಗಿಸುವ ವಹಿವಾಟು ಹೊಂದಿದೆ.ಸದ್ಯ ಹೊಸ ನಿಲ್ದಾಣ ಮತ್ತು ರನ್ ವೇ ಗಳ ನಿರ್ಮಾಣ ಕಾರ್ಯ [೭೮] ಪ್ರಗತಿಯಲ್ಲಿದೆ. ಇವೆಲ್ಲವೂ ಬ್ರಿಟೇನ್ ಮತ್ತು ಯುರೊಪ್ ಖಂಡದಾದ್ಯಂತ ಸೇವೆಯನ್ನು ಒದಗಿಸುತ್ತವೆ.ಅದೂ ಅಲ್ಲದೇ ಬೆಲ್ ಫಾಸ್ಟ್ ಇಂಟರ್ ನ್ಯಾಶನಲ,ಡಬ್ಲಿನ,ಶನ್ನೊನ್ ಮತ್ತು ಐರ್ಲೆಂಡ್ ವೆಸ್ಟ್ (ನಾಕ್);ಇವು ಅಟ್ಲಾಂಟಿಕ್ ನ ಸಾಗರೋತ್ತರ ಸೇವೆಯನ್ನೂ ಒದಗಿಸುತ್ತವೆ. ಹಲವಾರು ದಶಕಗಳಿಂದ ಶೆನ್ನೊನ್ ವಿಮಾನ ನಿಲ್ದಾಣವು ಇಂಧನ ತುಂಬಿಸಿಕೊಳ್ಳುವ ಮಹತ್ವದ [೭೯] ಕೇಂದ್ರವಾಗಿದೆ. ಇತ್ತೀಚಿಗೆ ಕೆಲವು ವರ್ಷಗಳಿಂದ ಆರಂಭಿಕ ಕಟ್ಟುನಿಟ್ಟಿನ ತಪಾಸಣೆ ವ್ಯವಸ್ಥೆಯನ್ನು ಜಾರಿಗೊಳಿದೆ.ಪ್ರಯಾಣಿಕರು ಐರ್ಲೆಂಡ್ ಬಿಡುವ ಮುಂಚೆ US ನ ವಲಸೆ ನಿಯಮಗಳಿಗೆ ಬದ್ದವಾಗಿರುವಂತೆ ಎಚ್ಚರಿಕೆ ವಹಿಸಲಾಗುತ್ತದೆ
ಕೆಲವು ಪ್ರಾದೇಶಿಕ ಸಣ್ಣ ಪ್ರಮಾಣದ ವಿಮಾನ ನಿಲ್ದಾಣಗಳಿವೆ:ಜಾರ್ಜ್ ಬೆಸ್ಟ್ ಬೆಲ್ ಫಾಸ್ಟ್ ಸಿಟಿ ಏರ್ ಪೋರ್ಟ,ಸಿಟಿ ಆಫ್ ಡೆರ್ರಿ ಏರ್ ಪೋರ್ಟ,ಗಾಲ್ವೇ ಏರ್ ಪೋರ್ಟ,ಕೆರ್ರಿ ಏರ್ ಪೋರ್ಟ,(ಫರಾನ್ ಫೊರ)ಸ್ಲಿಗೊ ಏರ್ ಪೋರ್ಟ,(ಸ್ಟ್ರಾಂಡ್ ಹಿಲ್)ವಾಟರ್ ಫೊರ್ಡ್ ಏರ್ ಪೋರ್ಟ್ ಮತ್ತು ಡೊನೆಗಲ್ ಏರ್ ಪೋರ್ಟ(ಕ್ಯಾರಿಕ್ ಫಿನ್ ). ಇವುಗಳ ನಿಗದಿತ ಪ್ರಾದೇಶಿಕ ವಿಮಾನಯಾನ ಸೌಲಭ್ಯವು ಐರ್ಲೆಂಡಿನ ಸ್ಥಳೀಯ ಪ್ರದೇಶಗಳು ಮತ್ತುಗ್ರೇಟ್ ಬ್ರಿಟನ್ ಗೆ ಪ್ರಯಾಣದ ಸೇವಾ ಪಟ್ಟಿತೊಂದಿಗೆ ಅವುಗಳು ಕಾರ್ಯನಿರತವಾಗಿರುತ್ತವೆ.
ಐರ್ಲೆಂಡಿನಲ್ಲಿ ಏರ್ ಲೈನ್ ಆಧಾರಿತ ವಿಮಾನ ಸೇವೆಗಳು,ಏಯರ್ ಲಿಂಗಸ್ (ಈ ಮೊದಲು ರಿಪಬ್ಲಿಕ್ ಐರ್ಲೆಂಡಿನ ರಾಷ್ಟ್ರೀಯ ಏರ್ ಲೈನ್ ಆಗಿತ್ತು)ರಾಯ್ ನೇರ, ಏಯರ್ ಅರನ್ನ್ ಮತ್ತು ಸಿಟಿಜೆಟ್ ಇವುಗಳಲ್ಲಿ ಪ್ರಮುಖವಾದವುಗಳು.
ಐರ್ಲೆಂಡಿನಲ್ಲಿ ಬೃಹತ್ ಬಂದರುಗಳಿವೆ.ಡಬ್ಲಿನ,ಬೆಲ್ ಫಾಸ್ಟ್ , ಕಾರ್ಕ್, ರೊಸ್ಲೇರ್ ಡೆರ್ರಿ ಮತ್ತು ವಾಟರ್ ಫೊರ್ಡ್ ಗಳಲ್ಲಿದೊಡ್ಡ ಬಂದರುಗಳಿವೆ. ಸಣ್ಣ ಪ್ರಮಾಣದ ರೇವು ಪ್ರದೇಶಗಳು ಅರ್ಕ್ಲೊವ,ಬಲ್ಲಿನಾ,ಡ್ರೊಘೆಡಾ,ದಂಡಾಲ್ಕ,ಡನ್ ಲಾವೊಗೇರ,ಫೊಯೆನ್ಸ,ಗಾಲ್ವೇ,ಲಿಮ್ರಿಕ,ನ್ಯೂರಾಸ್,ಸ್ಲಿಗೊ,ವಾರಂಟ್ ಪಾಯಿಂಟ ಮತ್ತು ವಿಕ್ಲೊಗಳಲ್ಲಿ ತಮ್ಮ ಅಸ್ತಿತ್ವ್ ಹೊಂದಿವೆ. ಐರ್ಲೆಂಡ್-ಐರಿಶ್ ಸಮುದ್ರ ಮತ್ತು ಬ್ರಿಟೇನ್ ಮಧ್ಯೆ ಪ್ರಯಾಣಿಸುವ ವಾರ್ಷಿಕ ಸುಮಾರು ೩.೬ ದಶಲಕ್ಷ ಪ್ರವಾಸಿಗರನ್ನು ರಿಪಬ್ಲಿಕ್ ಬಂದರುಗಳು ಸಾಗಾಟ ಮಾಡುವ ಸಾಮರ್ಥ್ಯ [೮೦] ಹೊಂದಿವೆ. ದೊಡ್ಡ ಪ್ರಮಾಣದ ಭಾರದ ವಸ್ತುಗಳ ವ್ಯಾಪಾರವು ಬಹುತೇಕ ಸಮುದ್ರದ ಮೂಲಕವೇ ನಡೆಯುತ್ತಿದೆ. ಉತ್ತರ ಐರ್ಲೆಂಡಿನಲ್ಲಿರುವ ೧೦ ಮೆಗಾಟನ್ ಗಳು(ಪ್ರತಿ ವರ್ಷ ೧೧ದಶಲಕ್ಷ ಶಾರ್ಟ್ ಟನ್ ಗಳಷ್ಟು ಸಾಮಾನು-ಸಾಮಗ್ರಿ-ವಸ್ತುಗಳನ್ನು ಬ್ರಿಟೇನ್ ನೊಂದಿಗೆ ವಹಿವಾಟು ನಡೆಸುತ್ತವೆ,ಇನ್ನು(ಐರ್ಲೆಂಡ್ ಗಣರಾಜ್ಯ) ರಿಪಬ್ಲಿಕ್ ಐರ್ಲೆಂಡಿನಲ್ಲಿರುವ ಬಂದರುಗಳು ೭.೬ Mt(ಅಂದರೆ ೮.೪ ದಶಲಕ್ಷ ಶಾರ್ಟ್ ಟನ್ಸ್‌ಗಳಷ್ಟು ವಸ್ತುಗಳನ್ನು ಸಾಗಿಸುವ ಕಾರ್ಯ ನಿರ್ವಹಿಸುತ್ತವೆ.)
ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ಮಧ್ಯದ ಐರಿಶ್ ಸಮುದ್ರದ ಮೂಲಕ ನಡೆಯುವ ಜಲಸಾರಿಗೆಯ ಮಾರ್ಗವು,ಸ್ವಾನ್ ಸಿ ಯಿಂದ ಕಾರ್ಕ,ಫಿಶ್ ಗಾರ್ಡ್ ಅಂಡ್ ಪೆಂಬ್ರೊಕ್ ನಿಂದ ರೊಸ್ಲೇರ,ಹೋಲಿಹೆಡ್ ನಿಂದ ಡನ್ ಲಾಘೇರ,ಸ್ಟ್ರೇನ್ ರಿಯರ್ ನಿಂದ ಬೆಲ್ ಫಾಸ್ಟ್ ಮತ್ತು ಲಾರ್ನೆ ಮತ್ತು ಕೇರ್ನ್ ರಾನ್ ನಿಂದ ಲಾರ್ನೆ ವರೆಗೂ ವ್ಯಾಪಿಸಿದೆ. ಅದೂ ಅಲ್ಲದೇ ಐಸ್ಲೆ ಆಫ್ ಮ್ಯಾನ್ ಮೂಲಕ ಲೈವ್ ಪೂಲ್ ಮತ್ತು ಬೆಲ್ ಫಾಸ್ಟ್ ನಡುವೆ ಕೂಡಾ ಜಲಸಾರಿಗೆಯ ಕೊಂಡಿ ಇದೆ.. ಡಬ್ಲಿನ್ -ಹಾಲಿಹೆಡ್ ನಡುವಿನ MV ಯುಲಿಸೆಸ್ ಹಡಗು ವಿಶ್ವದಲ್ಲೇ ಅತಿ ದೊಡ್ಡ ಜಲಸಾರಿಗೆಯ ಹಡಗು ಎಂದು ಹೆಸರಾಗಿದ್ದು ಇದು ಐರಿಶ್ ಫೆರೀಸ್ ವತಿಯಿಂದ ಕಾರ್ಯನಿರ್ವಹಿಸುತ್ತದೆ. ಇನ್ನೂ ಅಲ್ಲದೇ ರೊಸ್ಲೇರ್ ಮತ್ತು ಕಾರ್ಕ್ ಗಳು ಫ್ರಾನ್ಸ್ ವರೆಗೆ ಜಲಸಾರಿಗೆಯ ಅನುಕೂಲ ಒದಗಿಸುತ್ತವೆ. ಆದರೆ ಹಲವಾರು ವರ್ಷಗಳಿಂದ ಈ ಜಲಸಾರಿಗೆ ಪ್ರಯಾಣವು ಇಳಿಮುಖವಾಗುತ್ತಿರುವುದು ಬಹುಶ: ಕಡಿಮೆ ವಿಮಾನಯಾನದ ದರ ಎಂದು ಅಂದಾಜಿಸಲಾಗಿದೆ.
ಹಲವಾರು (ಪ್ರಮುಖವಾಗಿ ಪ್ರಸ್ತಾಪಿಸಲ್ಪಟ್ಟ) "ಐರಿಶ್ ಸಮುದ್ರದಲ್ಲಿ ಸುರಂಗ ಮಾರ್ಗ" ನಿರ್ಮಿಸುವ ಯೋಜನೆ ಜಾರಿಯಲ್ಲಿದೆ. ಮೊದಲ ಬಾರಿಗೆ ೧೮೯೭ರಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ ಲೆಂಡ್ ನಡುವೆ ನಾರ್ಥ್ ಕ್ಯಾನಲ್ (ಉತ್ತರ ಕಾಲುವೆ)ದಾಟುವ ಸುರಂಗ ಮಾರ್ಗ ನಿರ್ಮಿಸುವ ಬಗ್ಗೆ ಗಂಭೀರ ಯೋಚನೆ ಮಾಡಲಾಯಿತು. ಇತ್ತೀಚಿಗಷ್ಟೇ ೨೦೦೪ರಲ್ಲಿ ಇನ್ಸಿಸ್ಟಿಟ್ಯೂಶನ್ ಆಫ್ ಎಂಜನೀಯರ್ಸ್ ಆಫ್ ಐರ್ಲೆಂಡ್ ,ರೊಸ್ಲೇನ್ ಮತ್ತು ಫಿಶ್ ಗಾರ್ಡ್ ನಡುವೆ "ಟಸ್ಕರ್ ಟನೆಲ್" ನಿರ್ಮಿಸುವ ಪ್ರಸ್ತಾವವನ್ನು [೮೧][೮೨] ಇಟ್ಟಿದೆ. ಸಿಮೆಂಡ್ಸ್ ಎಂಬ ಒಂದು ಬ್ರಿಟೀಶ್ ಎಂಜನೀಯರಿಂಗ್ ಸಂಸ್ಥೆಯು ೧೯೯೭ರಲ್ಲಿ ಡಬ್ಲಿನ್ ನಿಂದ ಹೋಲಿಹೆಡ್ ವರೆಗೆ ರೈಲ್ವೆ ಸುರಂಗ ಮಾರ್ಗ ನಿರ್ಮಿಸುವ ಪ್ರಸ್ತಾಪವನ್ನು ಇಟ್ಟಿತ್ತು. ಇವೆರಡರ ಪ್ರಸ್ತಾಪಗಳು ತೀರ ಇತ್ತೀಚನವು ಅಲ್ಲದೇ ವಿಶ್ವದಲ್ಲೇ ಅತ್ಯಂತ ಉದ್ದದ ಮತ್ತು ವೆಚ್ಚದಾಯಕ ಯೋಜನೆಗಳಾಗಿವೆ, ಇದರ ಅಂದಾಜು ವೆಚ್ಚ€೨೦ ಬಿಲಿಯನ್ 80 km (50 mi)ಆಗಿದೆ.
ಐರ್ಲೆಂಡಿನಲ್ಲಿ ೧೯ನೆಯ ಶತಮಾನದಲ್ಲಿ ರೈಲ್ವೆ ಸಾರಿಗೆ ಜಾಲವು ಹಲವಾರು ಖಾಸಗಿ ಕಂಪೆನಿಗಳ ಮೊಲಕ ಅಭಿವೃದ್ಧಿ ಕಂಡಿತು.೧೯ನೆಯ ಶತಮಾನದ ಅಂತ್ಯಕ್ಕೆ ಸರ್ಕಾರ ಕೂಡಾ ಈ ಯೋಜನೆಗೆ ಹಣ ಸಹಾಯ ಮಾಡಲು ಮುಂದಾಯಿತು. ಈ ವ್ಯವಸ್ಥೆಯ ಜಾಲ ೧೯೨೦ರಲ್ಲಿ ಉಚ್ರಾಯ ಸ್ಥಿತಿಯನ್ನು ಕಂಡುಕೊಂಡಿತು. ಐರ್ಲೆಂಡಿನ ಗುಣಮಟ್ಟಕ್ಕೆ ತಕ್ಕಂತೆ ಒಂದು ೧,೬೦೦mm (೫ft ೩in )ನ ಬ್ರಾಡ್ ಗೇಜ್ ನ ಮಾರ್ಗ ನಿರ್ಮಿಸುವ ಒಪ್ಪಂದ ಮಾಡಲಾಯಿತು.ಈಗಾಗಲೇ ನೂರಾರು ಕಿಲೊಮೀಟರ್ ನಷ್ಟು ನ್ಯಾರೊ ಗೇಜ್ ಮಾರ್ಗ೯೧೪mm (೩ ft)ಇದೆಯಾದರೂ ದ್ವೀಪ ರಾಷ್ಟ್ರದ ಬೇಡಿಕೆಗಳಿಗೆ ತಕ್ಕಂತೆ ರೈಲ್ವೆ ಯೋಜನೆಗಳನ್ನು [೮೩][೮೩] ರೂಪಿಸಲಾಗಿದೆ.
ಐಎಲೆಂಡಿನಲ್ಲಿರುವ ಅತಿ ಉದ್ದದ ರೈಲ್ವೆ ಸಾರಿಗೆಯನ್ನು ಐರ್ನೊರ್ಡ್ ಈರೆನ್ ಸಂಸ್ಥೆಯು ಉಸ್ತುವಾರಿ ನಿರ್ವಹಿಸುತ್ತಿದ್ದು ಬಹುತೇಕ ಎಲ್ಲಾ ಪ್ರಮುಖ ನಗರಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಉತ್ತರ ಐರ್ಲೆಂಡಿನಲ್ಲಿ ಎಲ್ಲಾ ರೈಲ್ವೆ ಸೇವೆಗಳನ್ನು ನಾರ್ದರ್ನ್ ಐರ್ಲೆಂಡ್ ರೈಲ್ವೇಸ್ ನಿರ್ವಹಿಸುತ್ತಿದೆ. ಅಧಿಕವೆಂದರೆ ಇಡೀ ಯುರೊಪಿನಲ್ಲೇ ಅತಿ ಹೆಚ್ಚು ರೈಲ್ವೆಗಳ ಮೂಲಕ ಸಾಮಗ್ರಿಗಳನ್ನು ಸಾಗಿಸುವಲ್ಲಿ ಐರ್ಲೆಂಡ್ ಮೊದಲ ಸ್ಥಾನದಲ್ಲಿದೆ.ಇದನ್ನು ಬಾರ್ಡ್ ನಾ ಮೋನಾ ಕಂಪೆನಿಯು ನಿರ್ವಹಿಸುತ್ತದೆ. ಇದು ಪ್ರತಿವರ್ಷ ಸರಾಸರಿ ಅತಿ ಹೆಚ್ಚು ಸಾಗಾಟದ ದಾಖಲೆ 1,400 kilometres (870 mi)ಮಾಡಿದೆ.
ಡಬ್ಲಿನ್ ನಲ್ಲಿ ಎರಡು ಸ್ಥಳೀಯ ರೈಲ್ವೆ ಜಾಲಗಳು ನಗರದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ರೈಲ್ವೆ ಸೇವೆಯನ್ನು ಒದಗಿಸುತ್ತಿದೆ. ಡಬ್ಲಿನ್ ಏರಿಯಾ ರಾಪಿಡ್ ಟ್ರಾನ್ಜಿಟ್(DART) ಸಂಸ್ಥೆಯು ನಗರ ಕೇಂದ್ರ ಪ್ರದೇಶವನ್ನು ಕರಾವಳಿಯ ಉಪನಗರಗಳವರೆಗೆ ವ್ಯಾಪಿಸಿ ರೈಲ್ವೆ ಸಂಪರ್ಕ ಒದಗಿಸುತ್ತದೆ. ನೂತನ ಲೈಟ್ ರೈಲ್ವೆ(ಹಗುರ ರೈಲ್ವೆ)ಲೌಸ್ ವ್ಯವಸ್ಥೆಯನ್ನು೨೦೦೪ರಲ್ಲಿ ಪ್ರಾರಂಭಿಸಿ ಕೇಂದ್ರ ಸ್ಥಳದಿಂದ ಮತ್ತು ಪಶ್ಚಿಮ ಭಾಗದಲ್ಲಿನ ಪ್ರಯಾಣಿಕರಿಗೆ ಇದು ಸಾರಿಗೆ ಸೌಲಭ್ಯವನ್ನು ಒದಗಿಸುತ್ತದೆ. ಇನ್ನೂ ಹಲವಾರು ಲೌಸ್ ರೈಲ್ವೆ ಲೈನಗಳನ್ನು ಡಬ್ಲಿನ್ ಮೆಟ್ರೊ ಮಾದರಿಯಲ್ಲಿ ಮಾಡಬೇಕೆಂಬ ಯೋಜನೆಗಳಿವೆ. ಐರ್ನೊಡ ಈರೆನ್ ಯಿಂದ DART ಮತ್ತು ವಿವೊಲಿಯಾದಿಂದ ಲೌಸ್ ವ್ಯವಸ್ಥೆಗಳ ಸೇವೆಯನ್ನು ರೈಲ್ವೆ ಪ್ರೊಕ್ಯುರ್ ಮೆಂಟ್ ಏಜೆನ್ಸಿಯ ಅಡಿಯಲ್ಲಿ ನಡೆಸಲಾಗುತ್ತದೆ. ಐರಿಶ್ ಸರ್ಕಾರದ ಟ್ರಾನ್ಸ್ ಪೋರ್ಟ್ 21 ಯೋಜನೆಯನ್ನು ಕಾರ್ಕ್ ನಿಂದ ಮಿಡ್ಲ್ ಟನ್ ವರೆಗಿನ ರೈಲ್ವೆ ಸಂಪರ್ಕ ಸೇವೆಯನ್ನು ೨೦೦೯ ರಲ್ಲಿ ಪುನ:ಆರಂಭಿಸಲಾಯಿತು. ಪುನರಾರಂಭವಾದ ನವಾನ್ -ಕ್ಲೊನ್ಸಿಲ್ಲಾ ರೈಲ್ವೆ ಸಂಪರ್ಕ ಮತ್ತು ವೆಸ್ಟರ್ನ್ ರೈಲ್ವೆ ಕಾರಿಡಾರ್ ಕಾರ್ಯಗಳು ಇದೇ ಯೋಜನೆಯ ಭವಿಷ್ಯದ [೮೪] ಕಾರ್ಯಕ್ರಮಗಳಾಗಿವೆ.
ಉತ್ತರ ಐರ್ಲೆಂಡಿನಲ್ಲಿನ ಸೇವೆಗಳು ಉಳಿದ ಐರ್ಲೆಂಡ್ ಮತ್ತು ಬ್ರಿಟೇನ್ ಗಳಿಗೆ ಹೋಲಿಸಿದರೆ ತೀರ ವಿರಳ ಮತ್ತು ಅಲ್ಲಲ್ಲಿ ಚದುರಿದಂತಿವೆ.ಒಂದು ದೊಡ್ಡ ಪ್ರಮಾಣದ ರೈಲ್ವೆ ಸಂಪರ್ಕ ಜಾಲ್ವು ೧೯೫೦-೬೦ರ ದಶಕದಲ್ಲಿ ಕತ್ತರಿಸಿ ಹೋದ ವಿಷಯ ಮಾತ್ರ ಗಂಭೀರವಾದುದು. ಸದ್ಯದ ಸೇವೆಗಳು ಉಪನಗರದ ಮಾರ್ಗಗಳಾದ ಲಾರ್ನೆ,ನಿವ್ರಿ ಮತ್ತು ಬ್ಯಾಂಗರ,ಅದಲ್ಲದೇ ಡೆರಿಗೂ ಈ ಸೌಲಭ್ಯ ವಿಸ್ತರಿಸಲಾಗಿದೆ. ಅದರಲ್ಲಿ ಕೊಲೆರೇನ್ ನಿನ ಶಾಖೆಯಿಂದ ಪೊರ್ಟ್ರುಶ್ ವರೆಗಿನ ಸಂಪರ್ಕವೂ ಸೇರಿದೆ.
ಐರ್ಲೆಂಡಿನಲ್ಲಿ ವಾಹನ ಚಾಲಕರು ಎಡಭಾಗದಲ್ಲೇ ಚಲಿಸುತ್ತಾರೆ.ಇಲ್ಲಿ ವಿಸ್ತೃತ ರಸ್ತೆ ಸಂಪರ್ಕ ಜಾಲವಿದೆ.ಪ್ರಮುಖವಾಗಿ ಡಬ್ಲಿನ್ ಮತ್ತು ಬೆಲ್ ಫಾಸ್ಟ್ ನಿಂದ ಅತ್ಯುತ್ತಮ ವಾಹನ ಚಲಾಯಿಸಲು ಅನುಕೂಲವಾಗುವ ಅಭಿವೃದ್ಧಿಪಡಿಸಿದ ರಸ್ತೆ ಸಂಪರ್ಕ ಜಾಲ ಸಿದ್ದವಿದೆ. ಐತಿಹಾಸಿಕವಾಗಿ ಭೂಮಾಲಿಕರು ಬಹಳಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ.ನಂತರ್ ಟರ್ನ್ ಪೈಕ್ ಟ್ರಸ್ಟ್ಸ್ ನವರು ೧೮೦೦ರಲ್ಲಿನ 16,100 kilometres (10,000 mi)ಐರ್ಲೆಂಡಿನ ರಸ್ತೆ ಜಾಲದಂತೆ ಶುಲ್ಕ ವಸೂಲಿ [೮೫] ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಐರಿಶ್ ಸರ್ಕಾರವು ನೂತನ ಸಾರಿಗೆ ಯೋಜನೆಯನ್ನು ಕೈಗೊಂಡಿದೆ.ಇದು ಐರ್ಲೆಂಡಿನ ಸಾರಿಗೆ ಯೋಜನೆಗಳಲ್ಲಿ ಅತ್ಯಂತ ಹೆಚ್ಚು ದೂರದ ಮತ್ತು ದುಬಾರಿ ಸಾರಿಗೆ ಪದ್ದತಿಯ ವ್ಯವಸ್ಥೆ:೨೦೦೬ರಿಂದ ೨೦೧೫ರ ವರೆಗಿನ ಈ ಯೋಜನೆಗೆ €೩೪ ಬಿಲಿಯನ್ ವೆಚ್ಚ ನಿಗದಿಯಾಗಿದೆ. ಈಗಾಗಲೇ ಕೆಲವು ಯೋಜನೆಗಳಲ್ಲಿ ಪ್ರಗತಿಯಲ್ಲಿದ್ದು ಹಲವಾರು ಯೋಜನೆಗಳನ್ನು ಕೂಡಾ [೮೬] ಪೂರ್ಣಗೊಳಿಸಲಾಗಿದೆ.
ಐರ್ಲೆಂಡಿನಲ್ಲಿ ಮೊದಲ ಬಾರಿಗೆ ಕುದರೆ ಮೂಲಕ ಓಡುವ ಟ್ರಾಮಗಳನ್ನು ೧೮೧೫ರಲ್ಲಿ ಚಾರ್ಲ್ಸ್ ಬೈಂಕೊನಿ ಪರಿಚಯಿಸಿದ.ಇದು ಕ್ಲೊನ್ಮೆಲ್ ನಿಂದ ಥರ್ಲ್ಸ್ ಮತ್ತು ಲಿಮ್ರಿಕ್ ನಡುವೆ ಸಂಚಾರ [೮೭] ಆರಂಭಿಸಿತು. ಇಂದು ಮುಖ್ಯ ಬಸ್ ಕಂಪೆನೆಗಳೆಂದರೆ ರಿಪಬ್ಲಿನಲ್ಲಿರುವ ಬಸ್ ಈರೆನ್ ಮತ್ತು ಉತ್ತರ ಐರ್ಲೆಂಡಿನಲ್ಲಿರುವ ಅಲ್ ಸ್ಟರ್ ಬಸ್ ಸಂಸ್ಥೆಗಳು ದ್ವೀಪದ ಎಲ್ಲಾ ಭಾಗಗಳಲ್ಲಿ ಬಸ್ ಸೇವೆಯನ್ನು ಒದಗಿಸುತ್ತವೆ. ಡಬ್ಲಿನ್ ಬಸ್ ಸಂಚಾರ ಸೇವೆಯು ಬೃಹತ್ ಡಬ್ಲಿನ್ ಪ್ರದೇಶ ಮತ್ತು ಮೆಟ್ರೊ ವ್ಯವಸ್ಥೆಯು ಬೃಹತ್ ಬೆಲ್ ಫಾಸ್ಟ್ ಭಾಗಗಳಿಗೆ ಬಸ್ ಸೇವೆಯನ್ನು ಒದಗಿಸುತ್ತದೆ.
ರಿಪಬ್ಲಿಕ ಆಫ್ ಐರ್ಲೆಂಡನಲ್ಲಿ ರಸ್ತೆ ಫಲಕಗಳು ಮತ್ತು ಪ್ರತಿಗಂಟೆಗೆ ಇಷ್ಟೇ ಕೀ.ಮೀ ವೇಗದಲ್ಲಿ ಓಡಿಸಬೇಕೆಂಬ ನಿಯಮವಿದೆ.೨೦೦೫ರಲ್ಲಿ ವೇಗದ ಮಿತಿ ಕುರಿತಂತೆ ಹೊಸ ಶಿಸ್ತು-ನಿಯಮಗಳನ್ನೂ ಜಾರಿಗೊಳಿಸಲಾಗಿದೆ. ಉತ್ತರ ಐರ್ಲೆಂಡಿನಲ್ಲಿ ದೂರ ಮತ್ತು ವೇಗದ ಮಿತಿ ಕುರಿತಂತೆ ಇರುವ ನಿಯಮಗಳು ಯುನೈಟೆಡ್ ಕಿಂಗಡಮ್ ನ ಸಾಮ್ರಾಜ್ಯದ ಆಡಳಿತದ ಘಟಕಗಳಿಗೆ ಅನ್ವಯಿಸುವಂತೆ ಇಲ್ಲಿಯೂ ಅಳವಡಿಸಲಾಗುತ್ತದೆ.
ರಿಪಬ್ಲಿಕ್ ಆಫ್ ಐರ್ಲೆಂಡ್ ಮತ್ತು ಉತ್ತರ ಐರ್ಲೆಂಡ್ ಗಳು ತಮ್ಮ ಪ್ರತ್ಯೇಕ ಅಸ್ತಿತ್ವ ಕಾಯ್ದುಕೊಳ್ಳುವಂತೆ ವಿದ್ಯುಚ್ಛಕ್ತಿ ಪೂರೈಕೆ ಜಾಲಗಳನ್ನು ಪ್ರತ್ಯೇಕವಾಗಿಯೇ ಉಳಿಸಿಕೊಂಡಿವೆ. ಉಭಯ ಜಾಲಗಳು ಇಬ್ಭಾಗದ ನಂತರ ಸ್ವತಂತ್ರವಾಗಿಯೇ ವಿನ್ಯಾಸಗೊಂಡು ಮತ್ತು ನಿರ್ಮಾಣಗೊಂಡಿವೆ ಎಂದು ಹೇಳಬಹುದು. ಹೇಗೆಯಾದರೂ ಕಳೆದ ಕೆಲವುದಿನಗಳ ಬದಲಾವಣೆಗಳಿಂದಾಗಿ ಇವೆರಡು ಜಾಲಗಳು ಮೂರು ಅಂತರ-ಸಂಪರ್ಕಗಳನ್ನು ಹೊಂದಿವೆ.ಅಲ್ಲದೇ ಗ್ರೇಟ್ ಬ್ರಿಟನ್ನಿನ ಮೂಲಕ ಯುರೊಪಿನ ಮುಖ್ಯ ತಾಣಗಳಿಗೆ ಜೋಡಣೆ ಸಾಧಿಸಿದೆ. ಉತ್ತರ ಐರ್ಲೆಂಡಿನಲ್ಲಿ ಖಾಸಗಿ ಕಂಪೆನಿಗಳು ನಾರ್ದರ್ನ್ ಐರ್ಲೆಂಡ್ ಎಲೆಕ್ಟ್ರಿಸಿಟಿ(NIE)ಗೆ ಸರಿಯಾಗಿ ವಿದ್ಯುತ್ತ ಪೂರೈಕೆ ಮಾಡುತ್ತಿಲ್ಲ ಎಂಬ ವಿಷಯ ಕುರಿತಂತೆ ಅದು ಗೊಂದಲವನ್ನು ಅನುಭವಿಸುತ್ತಿದೆ. .ರಿಪಬ್ಲಿಕ್ ಆಫ್ ಐರ್ಲೆಂಡಿನಲ್ಲಿ ESB ಪೂರೈಕೆ ಕೇಂದ್ರವು ಅದರ ಸ್ಥಾವರಗಳನ್ನು ಇದುವರೆಗೆ ಆಧಿನೀಕರಣಗೊಳಿಸಿಲ್ಲವಾದ್ದರಿಂದ ಉತ್ಪಾದನಾ ಸ್ಥಾವರಗಳ ಸಾಮರ್ಥ್ಯವು ಸರಾಸರಿ ೬೬%ಕ್ಕಿಳಿದಿದೆ.ಪಶ್ಚಿಮ ಯುರೊಪ್ ನಲ್ಲಿ ಇದು ಅತ್ಯಂತ ಕಳಪೆ ಮಟ್ಟದ್ದಾಗಿದೆ. ಐರ್ಲೆಂಡ್ ಮತ್ತು ಬ್ರಿಟನ್ ನಡುವೆ ೫೦೦MW ಸಾಮರ್ಥ್ಯದHVDC ವನ್ನು ಈರ್ ಗ್ರಿಡ್ ನಿರ್ಮಿಸಲಾಗುತ್ತದೆ.ಇದು ಐರ್ಲೆಂಡಿನ ಅತ್ಯಂತ ಬೇಡಿಕೆ ಸಮಯದ ೧೦% ರಷ್ಟನ್ನು ಪೂರೈಕೆ [೮೮] ಮಾಡುತ್ತದೆ.
ವಿದ್ಯುಚ್ಛಕ್ತಿಯಂತೆಯೇ ನೈಸರ್ಗಿಕ ಅನಿಲ ಪೂರೈಕೆಯು ಇಂದು ದ್ವೀಪದಲ್ಲಿ ಸರ್ವತ್ರಗೊಂಡಿದೆ.ಇದರಿಂದ ಗೊರ್ ಮ್ಯಾನ್ ಸ್ಟನ,ಕೌಂಟಿ ಮೀಥ್ ಮತ್ತು ಬಾಲ್ಲಿಕೇರ,ಕೌಂಟಿ ಆಂಟ್ರಿಮ್ ಗಳ ಜೋಡಣೆಗಾಗಿ ಕೊಳವೆ ಮಾರ್ಗದ ಸಂಪರ್ಕವನ್ನು [೮೯] ಅಳವಡಿಸಲಾಗಿದೆ. ಬಹಳಷ್ಟು ಅನಿಲವು ದ್ವೀಪದ ಆಂತರಿಕ-ಸಂಪರ್ಕದ ಮೂಲಕ ಹಂಚಿಕೆಯಾಗುತ್ತದೆ.ಇದು ಸ್ಕಾಟಲೆಂಡ್ ನ ಟ್ವಿನ್ ಹೊಲ್ಮ್ ಮತ್ತು ಬಾಲ್ಯಿಲುಮ್ ಫೊರ್ಡ್ ,ಕೌಂಟಿ ಆಂಟ್ರಿಮ್ ಮತ್ತು ಲೌಘೊಸಿನಿ,ಕೌಂಟಿ ಡಬ್ಲಿನ್ ನಲ್ಲಿ ತನ್ನ ಜೋಡಣೆಯನ್ನು ಹೊಂದಿದೆ.ಕೌಂಟಿ ಕಾರ್ಕ್ ಕರಾವಳಿಯ ಕಿನ್ಸ್ಲೆ ಅನಿಲ ಸ್ಥಾವರ ಮತ್ತುಕೌಂಟಿ ಮೇವೊದ ಕರಾವಳಿಯ ಕೊರಿಬ್ ಅನಿಲ ಕ್ಷೇತ್ರಗಳಲ್ಲಿ ಅನಿಲ ಪೂರೈಕೆ ಇಳಿಮುಖಗೊಂಡಿದೆ.ಆದರೆ ಕೌಂಟಿ ಮೇವೊದ ಕರಾವಳಿಯಲ್ಲಿ ಉತ್ಪಾದನೆಗಾಗಿ ಇನ್ನೂ ಹೆಚ್ಚು ಪ್ರಯತ್ನಗಳು [೯೦][೯೧] ನಡೆದಿವೆ. ಕೌಂಟಿ ಮೇವೊ ಕ್ಷೇತ್ರದ ಕರಾವಳಿಯಲ್ಲಿ ಅನಿಲ ಸಂಸ್ಕರಣೆ ಕುರಿತಂತೆ ಸ್ಥಳೀಯರ ವಿರೋಧದಿಂದಾಗಿ ಇದು ವಿವಾದಾತ್ಮಕ ನಿರ್ಧಾರವಾಗಿ ಪರಿಣಮಿಸಿದೆ.
ಐರ್ಲೆಂಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಪವನ ಶಕ್ತಿಯಂತಹ ಪುನರ್ನವೀಕರಣದ ಇಂಧನ ಮೂಲಗಳ ವಿನಿಯೋಗಕ್ಕಾಗಿ ಪ್ರಯತ್ನಗಳು ನಡೆಯುತ್ತಿದೆ. ಕರಾವಳಿ ಪ್ರದೇಶದ ವಿಶಾಲ ಪ್ರದೇಶಗಳಲ್ಲಿ ಪವನ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ.ಕರಾವಳಿ ಕೌಂಟಿಗಳಾದ ಡೊನೆಗಲ್,ಮೇಯೊ ಮತ್ತು ಅಂಟ್ರಿಮ್ ಗಳು ಮೊದಲಾಗಿವೆ. ಕೌಂಟಿ ವಿಕ್ಲೊ ಕರಾವಳಿಯಲ್ಲಿನ ಅರ್ಕೊ ಬ್ಯಾಂಕ್ ವಿಂಡ್ ಪಾರ್ಕ್ ಇತ್ತೀಚೆಗೆ ಅಬಿವೃದ್ಧಿಪಡಿಸಿದ ಮತ್ತು ವಿಶ್ವದಲ್ಲೇ ಅತಿ ದೊಡ್ಡ ಪವನಶಕ್ತಿಯಿಂದ ಇಂಧನ ಉತ್ಪಾದನಾ ಸ್ಥಾವರವೆನಿಸಿದೆ. ಈ ಕೇಂದ್ರದ ಕಾರ್ಯ ಪೂರ್ಣಗೊಂಡರೆ ಐರ್ಲೆಂಡಿನ ೧೦% ರಷ್ಟು ಬೇಡಿಕೆಯನ್ನು ಇದು ಪೂರೈಸುತ್ತದೆ. ಪವನಶಕ್ತಿ ಸ್ಥಾವರಗಳ ಕೆಲವು ಪ್ರಕರಣಗಳಲ್ಲಿ ಸ್ಥಳೀಯ ವಿರೋಧದಿಂದಾಗಿ ಇವುಗಳು ವಿಳಂಬಗೊಂಡವು.ಇಲ್ಲಿ ಬಳಸುವ ವಿಂಡ್ ಟರ್ಬೈನ್ ಗಳು ಅಸಹ್ಯಕರ ವಾತಾವರಣ ನಿರ್ಮಿಸುತ್ತವೆ ಎಂದು ಹಲವರ ವಾದ. ಪವನ ಶಕ್ತಿಯಿಂದ ದೊರೆಯುವ ವಿದ್ಯುತಚ್ಛಕ್ತಿಯು ತುಂಬಾ ಹಳೆಯ ಕಾಲದ ಪದ್ದತಿಗಳನ್ನು ಹೊಂದಿದ್ದು ಅದನ್ನು ರಿಪಬ್ಲಿಕನ್ ಆಫ್ ಐರ್ಲೆಂಡಿನ ಅವಶ್ಯಕತೆಯಂತೆ ರೂಪಿಸಲಾಗಿಲ್ಲ.ಇದರಿಂದಾಗಿ ಈ ವಲಯದಲ್ಲಿ ಐರ್ಲೆಂಡ್ ಹಿನ್ನಡೆಯನ್ನು ಅನುಭವಿಸಲಾಯಿತು. ESB ಯ ಟರ್ಲೊ ಹಿಲ್ ಮಾತ್ರ ರಾಜ್ಯದಲ್ಲಿ ಏಕೈಕ ಸಂಗ್ರಹಣಾ [೯೨] ಕೇಂದ್ರವಾಗಿದೆ.
ಸುಮಾರು ೯,೦೦೦ ವರ್ಷಗಳಿಂದ ಐರ್ಲೆಂಡಿನಲ್ಲಿ ಜನವಸತಿಯ ಕುರುಹುಗಳಿವೆ.ಪಾಲೊಲಿಥಿಕ್(ಶಿಲಾಯುಗದ ನಂತರದ ಎರಡನೆಯ ಅವಧಿ)ಮತ್ತು ನ್ಯೂಲಿಥಿಕ್ (ನವಶಿಲಾಯುಗದ ಕಾಲ)ದಲ್ಲಿ ದ್ವೀಪದಲ್ಲಿದ್ದ ಜನವಸತಿ ಬಗ್ಗೆ ಅಷ್ಟಾಗಿ ಮಾಹಿತಿ ದೊರೆಯುತ್ತಿಲ್ಲ. ಪೀಳಿಗೆಯ ಕುರಿತಾದ ೨೦೦೪ರ ಸಂಶೋಧನೆಯಲ್ಲಿ ಇವರೆಲ್ಲರೂ ಸ್ಪೇನ್ ನ ಅಟ್ಲಾಂಟಿಕ್ ಕರಾವಳಿಯಿಂದ ಬಂದು ತಮ್ಮ ವಂಶವಾಹಿನಿಗೆ ಕಾರಣರಾದರು ಎಂದು [೩೮] ಹೇಳಲಾಗುತ್ತದೆ. ಆರಂಭಿಕವಾಗಿ ಮಂಡಿಸಿದ ವಾದದ ಪ್ರಕಾರ ಇವರೆಲ್ಲ ಮಧ್ಯ ಯುರೊಪನಿಂದ ವಲಸೆ ಬಂದರು ಎನ್ನಲಾಗಿದೆ. ಮೊದಲ ಐತಿಹಾಸಿಕ ಮತ್ತು ವಂಶವಾಹಿನಗಳ ದಾಖಲೆ ಪ್ರಕಾರ ಡಜನ್ನಗಟ್ಟಲೆ ವಿಭಿನ್ನ ಜನಾಂಗಗಳಿವೆ;ಅವುಗಳು ಪೌರಾಣಿಕವಾಗಿ ಈ ಭೂಇತಿಹಾಸಕ್ಕೆ ಸಂಬಂದಿಸಿರಬಹುದು ಅಥವಾ ಸಂಭಂದವಿಲ್ಲದೇ ಇರಬಹುದಾಗಿದೆ. ಉದಾಹರಣೆಗಾಗಿ;ಕ್ರುಥ್ನೆ,ಅಟ್ಟಾಕೊಟ್ಟಿ,ಕೊನ್ ಮೇಕ್ನೆ,ಈಗನಾಕ್ಟಾ, ಈರೆನ್ ಮತ್ತು ಸೊಘೇನ್ ಇತ್ಯಾದಿಗಳು ಆದರೆ ಇನ್ನು ಕೆಲವಿದ್ದರೂ ಅಲ್ಪಪ್ರಮಾಣದಲ್ಲಿವೆ. ಸುಮಾರು ೧೦೦೦ ವರ್ಷಗಳಿಂದ ಅಥವಾ ಅದರ ಹಿಂದೆ ಮುಂದೆ ಎನ್ನಬಹುದಾದ ಸಮಯದಲ್ಲಿಬಂದ,ವಿಕಿಂಗ್ಸ,ನಾರ್ಮನ್ಸ,ಸ್ಕಾಟ್ಸ ಮತ್ತು ಇಂಗ್ಲೀಷರು ಸ್ಥಳೀಯ ಜನಸಂಖ್ಯೆಯೊಂದಿಗೆ ಬೆರೆತು ದೇಶೀಯರಾಗಿ ಹೋದರು.
ಐರ್ಲೆಂಡಿನ ಅತ್ಯಂತ ದೊಡ್ಡ ಧಾರ್ಮಿಕ ಗುಂಪೆಂದರೆ ಕ್ರಿಶ್ಚಿಯಾನಿಟಿ ಅಥವಾ ಕ್ರೈಸ್ತ ಧರ್ಮ. ದೊಡ್ಡ ಪ್ರಾಬಲ್ಯದ ಗುಂಪು ರೊಮನ್ ಕ್ಯಾಥೊಲಿಸಮ್ ಅಂದರೆ ೭೩%ರಷ್ಟರ ಒಟ್ಟು [೯೩] ಜನಸಂಖ್ಯೆಯಷ್ಟಿದೆ.(ಸುಮಾರು ೮೭%ರ ರಿಪಬ್ಲಿಕ್ ಆಫ್ ಐರ್ಲೆಂಡಿನ ಜನಸಂಖ್ಯೆ ಇದೆ.) ಇನ್ನುಳಿದ ಬಹುತೇಕ ಜನಸಂಖ್ಯೆಯು ಪ್ರೊಟೆಸ್ಟಂಟ್ಸ್ ಪಂಥಕ್ಕೆ [೯೪] ಸೇರಿದವರು.(ಉತ್ತರ ಐರ್ಲೆಂಡಿನ ೫೩%ರಷ್ಟು) ಅತಿ ದೊಡ್ಡದೆಂದರೆ ದಿ ಆಂಗ್ಲಿಕನ್ ಚರ್ಚ್ ಆಫ್ ಐರ್ಲೆಂಡ್ ಹೆಚ್ಚಿದ ವಲಸೆಯಿಂದಾಗಿ ಮುಸ್ಲಿಮ್ ಸಮುದಾಯ ಕೂಡಾ ಐರ್ಲೆಂಡಿನಲ್ಲಿ ಬೆಳೆಯುತ್ತಿದೆ ದ್ವೀಪದಲ್ಲಿ ಸಣ್ಣ ಸಂಖ್ಯೆಯ ಜೆವಿಶ್ ಸಮೂದಾಯವೂ ಇದೆ. ರಿಪಬ್ಲಿಕ್ ನ ೪%ರಷ್ಟು ಜನಸಂಖ್ಯೆ ತಾವು ಯಾವ ಧರ್ಮಕ್ಕೂ ಅಂಟಿಕೊಂಡಿಲ್ಲ ಎಂದು ತಮ್ಮನ್ನು ತಾವೇ [೯೩] ಕರೆದುಕೊಳ್ಳುತ್ತಾರೆ. ಉತ್ತರ ಐರ್ಲೆಂಡಿನ ಸುಮಾರು೧೪%ರಷ್ಟು ಜನರು ತಮ್ಮನ್ನು ಇದೇ ರೀತಿ [೯೪] ಕರೆಯಿಸಿಕೊಳ್ಳುತ್ತಾರೆ.
ಮಧ್ಯಭಾಗದ ೧೯ನೆಯ ಶತಮಾನದವರೆಗೆ ಐರ್ಲೆಂಡಿನ ಜನಸಂಖ್ಯೆ ಹೆಚ್ಚಳ ಕಂಡಿತು.ಈ ಹೆಚ್ಚಳ ೧೬ನೆಯ ಶತಮಾನದಿಂದ ಆರಂಭಗೊಂಡಿತು. ಇಸವಿ ೧೮೪೦ ರಲ್ಲಿ ಸಂಭವಿಸಿದ ಭೀಕರ ಕ್ಷಾಮದಿಂದಾಗಿ ಸುಮಾರು ಒಂದು ದಶಲಕ್ಷ ಜನರ ಸಾವು ಮತ್ತು ಒಂದು ದಶಲಕ್ಷ ಜನರ ವಲಸೆ ಸಂಭವಿಸಿತು. ಕಳೆದ ಶತಮಾನದಿಂದ ಜನಸಂಖ್ಯೆಯ ವಿನಾಶದ ಪ್ರಮಾಣ ಸಾಕಷ್ಟುಇಳಿಕೆ ಕಂಡಿದೆ.ಈ ಮೊದಲು ಇಳಿಮುಖಗೊಂಡ ದರಕ್ಕಿಂತ ಅರ್ಧದಷ್ಟು ಹೆಚ್ಚಳ ಸಾಧಿಸಿದೆ.ಆದರೆ ಯುರೊಪಿಯನ್ ದೇಶಗಳಲ್ಲಿ ಜನಸಂಖ್ಯೆ ಹೆಚ್ಚಳವು ಮೂರುಪಟ್ಟ ಏರಿಕೆ ಕಂಡಿದೆ. ಇಂದು ಐರ್ಲೆಂಡಿನಿಂದ ಕಾಲಾಂತರದಲ್ಲಿ ವಲಸೆ ಹೋದವರು ಇಂಗ್ಲೆಂಡ,ಯುನೈಟೆಡ್ ಸ್ಟೇಟ್ಸ,ಕೆನಡಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಆ ದೇಶದವರೊಂದಿಗೆ ಐರಿಶ್ ರು ದೇಶೀಯರಂತೆ ಗುರುತಿಸಿಕೊಂಡಿದ್ದಾರೆ. ಈ ಅವಧಿಯಲ್ಲಿನ ವಲಸೆಗಳ ವಿವಿಧ ಪ್ರಕಾರಗಳು ಪಶ್ಚಿಮ ಮತ್ತು ದಕ್ಷಿಣ ಭಾಗದ ಸಮುದ್ರ ಕಿನಾರೆ ಭಾಗವನ್ನು ಜರ್ಜಿತಗೊಳಿಸಿದವು. ದೊಡ್ಡ ಕ್ಷಾಮದ ನಂತರ ಕೊನಾಕ್ಟ್ ನ ಪ್ರಾಂತ್ಯಗಳಾದ ಮುನ್ ಸ್ಟರ್ ಮತ್ತು ಲಿನ್ ಸ್ಟರ್ ಗಳಲ್ಲಿ ಹೆಚ್ಚು ಕಡಿಮೆ ಜನಸಂಖ್ಯೆ ವಿರಳವಾಗಿತ್ತು.ಆದರೆ ಅಲ್ ಸ್ಟರ್ ನಲ್ಲಿ ಈ ಮೂರೂ ಪ್ರದೇಶಗಳಿಗಿಂತ ಚದುರಿದಂತೆ ಜನಸಂಖ್ಯೆ ಇತ್ತು. ಇಂದು ಅಲ್ ಸ್ಟರ್ ಮತ್ತು ಲಿನ್ ಸ್ಟರ್ ಮತ್ತು ಪ್ರಮುಖವಾಗಿ ಡಬ್ಲಿನ್ ಗಳು ಮುನ್ ಸ್ಟರ್ ಹಾಗು ಕೊನಾಕ್ಟ್ ಗಳಿಗಿಂತಲೂ ಹೆಚ್ಚಿನ ಜನಸಾಂದ್ರತೆ ಹೊಂದಿವೆ.
ಕಳೆದ ದಶಕದಿಂದ ೨೦ನೆಯ ಶತಮಾನದಿಂದ ಉತ್ತಮ ಅಭಿವೃದ್ಧಿಯಿಂದಾಗಿ ಇಲ್ಲಿನ ವಲಸೆ ಪ್ರಮಾಣದಲ್ಲೂ ಐರ್ಲೆಂಡ್ ಹೆಚ್ಚಳ ಕಂಡಿದೆ. ಯುರೊಪಿಯನ್ ಯುನಿಯನ್ ಗೆ ಸೇರಿಕೊಂಡ ನಂತರ ೨೦೦೪ರಲ್ಲಿ ಪೊಲಂಡ್ ನ ಪೊಲಿಶ್ ಜನಾಂಗದ ವಲಸೆ ಅತಿ ಹೆಚ್ಚಿನ(ಸುಮಾರು ೧೫೦,೦೦೦) ಪ್ರಮಾಣದಲ್ಲಿ ಆಯಿತು.ಇದು ಮಧ್ಯ ಯುರೊಪದ್ದಾದರೆ ಲಿಥುನಿಯಾ,ದಿ ಝೆಕ್ ರಿಪಬ್ಲಿಕ್ ಮತ್ತು ಲ್ಯಾಟಿವಾಗಳು ಇದರ ನಂತರದ [೯೫][೯೬] ಸ್ಥಾನದಲ್ಲಿವೆ. ಬಹುಮುಖ್ಯವಾಗಿ ರಿಪಬ್ಲಿಕ್ ಆಫ್ ಐರ್ಲೆಂಡ್ ದೊಡ್ಡ ಪ್ರಮಾಣದ ವಲಸೆಯನ್ನು ಕಂಡಿತು. ಇಸವಿ ೨೦೦೬ರ ಜನಗಣತಿಯಂತೆ ೪೨೦,೦೦೦ ವಿದೇಶಿ ರಾಷ್ಟ್ರೀಯರು,ಅಂದರೆ ರಿಪಬ್ಲಿಕ್ ಆಫ್ ಐರ್ಲೆಂಡಿನ ಒಟ್ಟು ಜನಸಂಖ್ಯೆಯಲ್ಲಿ ೧೦%ರಷ್ಟು ಸಂಖ್ಯೆಯಲ್ಲಿದ್ದಾರೆ. ಯುರೊಪಿನ್ ಯುನಿಯನ್ ಅಲ್ಲದ ರಾಷ್ಟ್ರಗಳಾದ ಚೀನಾ ಮತ್ತು ನೈಜೆರಿಯನ್ ಇನ್ನುಳಿದ ಆಫ್ರಿಕನ್ ರಾಷ್ಟ್ರಗಳ ಜನರು ಐರ್ಲೆಂಡಿಗೆ ಅಧಿಕ ಪ್ರಮಾಣದಲ್ಲಿ ವಲಸೆ ಬರುವವರಲ್ಲಿ ಪ್ರಮುಖರಾಗಿದ್ದಾರೆ. ಪೂರ್ವ ಯುರೊಪಿಯನ್ ನ ಮೂಲದ ಸುಮಾರು ೫೦,೦೦೦ ವಲಸೆ ಕಾರ್ಮಿಕರು 2008ರ ಅಂತ್ಯಕ್ಕೆ ಐರ್ಲೆಂಡ್ ಬಿಟ್ಟು [೯೭] ತೆರಳಿದ್ದಾರೆ.
ಮಧ್ಯ ಯುಗದ ಕಾಲದಿಂದಲೂ ಐರ್ಲೆಂಡಿನಲ್ಲಿ ಇಂಗ್ಲೀಷ್ ಭಾಷೆಯನ್ನು ಜನರು ಹೆಚ್ಚಾಗಿ ಮಾತನಾಡುತ್ತಾರೆ,ಹತ್ತೊಂಬತ್ತನೆಯ ಶತಮಾನದ ನಂತರ ಬಹು ಸಂಖ್ಯಾತರ ಪ್ರಥಮ ಭಾಷೆಯಾಗಿದ್ದ ಐರಿಶ್ ನ್ನು ಹಿಂದೆ [೯೮] ಹಾಕಿತು. ಸುಮಾರು ೧೦%ರಷ್ಟಕ್ಕಿಂತ ಕಡಿಮೆ ಐರ್ಲೆಂಡಿನ ಜನರು ಶಿಕ್ಷಣದ ವಲಯದ ಆಚೆ ನಿಯಮಿತವಾಗಿ ಐರಿಶ್ ಭಾಷೆ ಮಾತನಾಡುತ್ತಾರೆ.ಸುಮಾರು ೧೫ ವರ್ಷಗಳಿಂದ ಇವರಲ್ಲಿನ೩೮%ರಷ್ಟು ಜನರನ್ನು"ಐರಿಶ್ ಭಾಷಿಕರು"ಎಂದು [೯೯] ಕರೆಯುತ್ತಾರೆ. ಆದರೆ ಉತ್ತರ ಐರ್ಲೆಂಡಿನಲ್ಲಿ ಇಂಗ್ಲೀಷ್ ಅಧಿಕೃತ ಭಾಷೆಯಾಗಿದೆ.ಆದರೆ ಐರಿಶ್ ಮತ್ತು ಅಲ್ ಸ್ಟರ್ - ಸ್ಕೊಟ್ಸ್ ಎರಡನ್ನೂ ಅಧಿಕೃತ ಭಾಷೆಯನ್ನಾಗಿ ಗುರುತಿಸಲಾಗಿದ್ದು,ದಕ್ಷಿಣದ ದಂಡೆಯಲ್ಲಿ ವಾಸವಿರುವ ಜನರ ಆಡು ಭಾಷೆಯೂ ಇದಾಗಿದೆ. ಇತ್ತೀಚಿನ ದಶಕಗಳಲ್ಲಿ ಹೆಚ್ಚಿದ ವಲಸೆಯಿಂದಾಗಿ ಇತರ ಭಾಷೆಗಳಲ್ಲದೇ ಪ್ರಮುಖವಾಗಿ ಏಷಿಯಾ ಮತ್ತು ಉತ್ತರ ಯುರೊಪ್ ಭಾಷೆಗಳೂ ದ್ವೀಪ ಪ್ರದೇಶದಲ್ಲಿ ಪರಿಚಿತವಾಗಿವೆ.
ಹಲವಾರು ಭಾಷೆಗಳು ಐರ್ಲೆಂಡಿನಲ್ಲಿ ಪ್ರಸ್ತುತ ಚಾಲ್ತಿಯಲ್ಲಿವೆ. ದ್ವೀಪದಲ್ಲೇ ಹುಟ್ಟಿದ ಪ್ರಮುಖ ಮತ್ತು ಮೂಲ ಭಾಷೆಯೆಂದರೆ ಐರಿಶ. ಹತ್ತೊಂಭತ್ತನೆಯ ಶತಮಾನದ ಅಂತ್ಯದಲ್ಲಿ ಇಂಗ್ಲೀಷ್ ಭಾಷೆಯು ಮಧ್ಯ ಯುಗದಿಂದಲೂ ಪ್ರಾಮುಖ್ಯತೆ ಪಡೆದ ಮಾತನಾಡುವ ಅಧಿಕೃತ ಭಾಷೆಯೆನಿಸಿದೆ.ಇದು ಪ್ರಥಮ ಭಾಷಾ ಮಾಧ್ಯಮವಾಗಿಯೂ ಬೆಳೆದಿದೆ. ದೊಡ್ಡ ಪ್ರಮಾಣದ ಅಲ್ಪಸಂಖ್ಯಾತರು ಇಂದು ಐರಿಶ್ ಮಾತನಾಡುವ ಸಾಮರ್ಥ್ಯ ತಮಗಿದೆ ಎಂದು ಹೇಳಿಕೊಳ್ಳುತ್ತಾರೆ.ಆದರೂ ಇದು ಸಣ್ಣ ಶೇಕಡಾವಾರು ಜನಸಂಖ್ಯೆಯು ಇದನ್ನು ಪ್ರಥಮ ಭಾಷೆಯನ್ನಾಗಿ ಸ್ವೀಕರಿಸಿದ್ದಾರೆ. ರಿಪಬ್ಲಿಕ್ ಆಫ್ ಐರ್ಲೆಂಡಿನ ಸಂವಿಧಾನದ ಪ್ರಕಾರ ಎರಡೂ ಭಾಷೆಗಳು ಕಚೇರಿ-ಕಡತದ ಭಾಷೆಗಳಾಗಿದ್ದು ಐರಿಶ್ ಮಾತ್ರ ರಾಷ್ಟ್ರೀಯ ಮತ್ತು ಪ್ರಥಮ ಅಧಿಕೃತ ಭಾಷೆಯೆನಿಸಿದೆ. ಉತ್ತರ ಐರ್ಲೆಂಡಿನಲ್ಲಿ ಇಂಗ್ಲೀಷ್ ಪ್ರಬಲ ರಾಜ್ಯ ಭಾಷೆಯಾಗಿದ್ದುಐರಿಶ್ ಮತ್ತು ಅಲ್ ಸ್ಟರ್ ಸ್ಕಾಟ್ಸ್ ಗಳು ಅಲ್ಪಸಂಖ್ಯಾತ ಭಾಷೆಗಳಾಗಿವೆ.
ಇಂತಹ ಸಣ್ಣ ದ್ವೀಪದ ಸಣ್ಣ ಪ್ರಮಾಣದ ಜನಸಂಖ್ಯೆ ಇದ್ದರೂ ಐರ್ಲೆಂಡ್ ವಿಶ್ವದ ಸಾಹಿತ್ಯಕ್ಕೆ ಅದರಲೂ ಇಂಗ್ಲೀಷ್ ಸಾಹಿತ್ಯಕ್ಕೆ ಅಪಾರ ಕೊಡುಗೆ [೧೦೦] ನೀಡಿದೆ. ಐರಿಶ್ ಕಾವ್ಯವು ಯುರೊಪಿನಲ್ಲಿ ಅತ್ಯಂತ ಹಳೆಯದಾದ ದೇಶೀಯ ಜನಪದದ ಕಾವ್ಯ ಕಲೆಯನ್ನು ಪ್ರತಿನಿಧಿಸುತ್ತದೆ.೬ನೆಯ ಶತಮಾನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಐರ್ಲೆಂಡಿನ ಸಾಧನೆ ಕೂಡಾ ದಾಖಲಾಗಿದೆ. ಇಂಗ್ಲೀಷ್ ಭಾಷೆನಲ್ಲಿ ಅತ್ಯುತ್ತಮ ಅಂಕಣಕಾರವೆಂದು ಹೆಸರಾಗಿರುವ ಜೊನಾಥನ್ ಸ್ವಿಫ್ಟ್,ಇಂದಿಗೂ ತಮ್ಮ ವಿಡಂಬನಾತ್ಮಕ ಬರಹಗಳಿಂದ ಗಮನ ಸೆಳೆದಿದ್ದಾರೆ.ಗಲಿವರ್ ನ ಟ್ರಾವೆಲ್ಸ್ ಮತ್ತು ಎ ಮೊಡೆಸ್ಟ್ ಪ್ರೊಪೊಸಲ್ ಆತನ ಕೃತಿಗಳು ತುಂಬಾ ಹೆಸರು ತಂದುಕೊಟ್ಟಿವೆ. ಪ್ರಸಿದ್ದ ವಿಡಂಬನಕಾರ ಎಂದು ಹೆಸರಾದ ಆಸ್ಕರ್ ವೈಲ್ಡೆ ಅವರನ್ನು ವಿಡಂಬನಾ ತತ್ವ ಸಿದ್ದಾಂತದವರೆಂದು ಹೇಳಲಾಗುತ್ತದೆ. ಐರ್ಲೆಂಡನಲ್ಲಿ ೨೦ನೆಯ ಶತಮಾನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ನಾಲ್ವರು ನೋಬಲ್ ಪ್ರಶಸ್ತಿ ವಿಜೇತರಿದ್ದಾರೆ:ಜಾರ್ಜ್ ಬೆರ್ನಾರ್ಡ್ ಷಾ,ವಿಲಿಯಮ್ ಬಟ್ಲರ್ ಈಟ್ಸ್, ಸ್ಯಾಮ್ಯುವಲ್ ಬೆಕೆಟ್ ಮತ್ತು ಸೀಮಸ್ ಹೀನೆಯ. ನೋಬೆಲ್ ಪ್ರಶಸ್ತಿ ವಿಜೇತನಲ್ಲದಿದ್ದರೂ ಜೇಮ್ಸ್ ಜಾಯ್ಸ್ ಕೂಡಾ ೨೦ನೆಯ ಶತಮಾನದಲ್ಲಿನ ಅತ್ಯುತ್ತಮ ಬರಹಗಾರ ಎಂಬ ಖ್ಯಾತಿ ಇದೆ.[೧೦೧] ಜೊಯ್ಸ್ ನ ೧೯೨೨ರ ಕಾದಂಬರಿ ಯುಲೆಸಿಸ್ ನ್ನು ಆಧುನಿಕ ಸಾಹಿತ್ಯವೆಂದೂ ಕರೆಯಲಾಗುತ್ತದೆ.ಅದೂ ಅಲ್ಲದೇ ಪ್ರತಿವರ್ಷ ಜೂನ್ ೧೬ರಂದು ಆತನ ಜನ್ಮದಿನವನ್ನು ಡಬ್ಲಿನ್ ನಲ್ಲಿ "ಬ್ಲೂಮ್ಸ್ ಡೇ" ಎಂದು [೧೦೨] ಆಚರಿಸಲಾಗುತ್ತದೆ. ಆಧುನಿಕ ಐರಿಶ್ ಸಾಹಿತ್ಯ ಇವತ್ತಿಗೂ ತನ್ನ [೧೦೩] ಗ್ರಾಮೀಣ ಪರಂಪರೆಯನ್ನು ಹೊಂದಿದೆ,ಸಾಹಿತಿಗಳಾದ ಜಾನ್ ಮೆಕ್ ಗೆಹ್ರೆನ್ ಮತ್ತು ಕವಿಗಳಲ್ಲಿ ಪ್ರಮುಖರಾದ ಸೀಮಸ್ ಹೀನಿಯ್ ಇವರ ಸಾಹಿತ್ಯ ಇವತ್ತಿಗೂ ಜನಪದದ ಬೇರುಗಳನ್ನು ಹೊಂದಿದೆ.
ಐರಿಶ್ ನಾಟಕಗಳು ಅತ್ಯುತ್ತಮ ಪ್ರತಿಕ್ರಿಯೆಗೆ ಒಳಗಾಗುತ್ತವೆ.ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ನಾಟಕಗಳು ಯಶಸ್ವಿಯಾಗಿ ಪ್ರದರ್ಶನ ಕಂಡಿವೆಯಲ್ಲದೇ ಜನಪ್ರಿಯತೆಯನ್ನು ಗಳಿಸಿವೆ. ರಾಷ್ಟ್ರೀಯ ನಾಟಕಶಾಲೆ ಅಬ್ಬೆ ಥಿಯೆಟರ್ ೧೯೦೪ರಲ್ಲಿ ಸ್ಥಾಪನೆಗೊಂಡಿದೆ. ರಾಷ್ಟ್ರೀಯ ಐರಿಶ್ ಭಾಷೆಯ ಆನ್ ತೈಭೆರೆಕ್ ನಾಟಕಶಾಲೆ ೧೯೨೮ರಲ್ಲಿ ಗಾಲ್ವೇನಲ್ಲಿ [೧೦೪][೧೦೫] ಆರಂಭಗೊಂಡಿದೆ. ಸಿಯೆನ್ ಓ'ಕ್ಯಾಸಿ,ಬ್ರೇನ್ ಫ್ರೇಲ,ಸೆಬ್ಯಾಸ್ಟಿಯನ್ ಬ್ಯಾರಿ,ಕೊನೊರ್ ಮೆಕ್ ಫೆರ್ಸ್ ನ ಮತ್ತು ಬಿಲ್ಲಿ ರೊಚೆ ನಾಟಕಗಳು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಕಂಡು ಖ್ಯಾತಿ [೧೦೬] ಗಳಿಸಿವೆ.
ಐರಿಶ್ ನ ಸಾಂಪ್ರದಾಯಿಕ ಸಂಗೀತ ಮತ್ತು ನೃತ್ಯ [೧೦೭] ವಿಶ್ವಾದ್ಯಂತ ಹೆಸರುವಾಸಿಯಾಗಿವೆ. ಇತ್ತೀಚಿನ ರಿವರ್ ಡಾನ್ಸ್ ಅದರೊಳಗೊಂದು ಎಲ್ಲರಿಗೂ ತಿಳಿದ [೧೦೮] ವಿದ್ಯಮಾನವೆನಿಸಿದೆ. ಐರಿಶ್ ಸಮಾಜವು ಸಾಂಪ್ರದಾಯಿಕದಿಂದ ಹೊರಬರಲು ಆಧುನಿಕಗೊಳ್ಳುತ್ತಿದೆ,ಇದರಿಂದಾಗಿ ಹಳೆಯ ಶೈಲಿಗಳು ನಗರ ಪ್ರದೇಶಗಳಿಗೆ ವಿಸ್ತರಿಸುವ ತವಕದಲ್ಲಿ ತಮ್ಮ ಬೆಡಗನ್ನು ಕಳೆದುಕೊಳ್ಳುವ [೧೦೯] ಭೀತಿಯಲ್ಲಿವೆ. ಅಮೆರಿಕದ ಜನಪದ ಸಂಗೀತದ ೧೯೬೦ರ ದಶಕದ ಚಳವಳಿಯು ಐರಿಶ್ ನ ಸಾಂಪ್ರಾದಾಯಿಕ ಸಂಗೀತದಲ್ಲಿ ಆಸಕ್ತಿ ಮೂಡುವಂತೆ ಪ್ರೇರಿಪಿಸಿತು.ಇದರ ಆಂದೋಲನ ಮಾದರಿಯನ್ನು ಹಲವಾರು ಸಂಗೀತ ತಂಡಗಳು ಮುಂದುವರೆಸುವಲ್ಲಿ ಸಫಲವಾದವು.ಉದಾಹರಣೆಗೆ:ದಿ ಡಬ್ಲಿನರ್ಸ,ದಿ ಚೀಫ್ಟನ್ಸ್ ,ಈಮ್ಮೆಟ್ ಸ್ಪೈಸ್ ಲ್ಯಾಂಡ್ ,ದಿ ಊಲ್ಫ್ ಟೋನ್ಸ್ ,ದಿ ಕ್ಲಾನ್ಸಿ ಬ್ರದರ್ಸ,ಸ್ವೀನೀಸ್ ಮೆನ್ ,ಮತ್ತು ವ್ಯಕ್ತಿಗತವಾಗಿ ಸಿಯನ್ ಓ'ರೈಡಾ,ಮತ್ತು ಕ್ರಿಸ್ಟಿ ಮೊರೆ [೧೧೦] ಇತ್ಯಾದಿ.
ಕೆಲ ಸಮಯಕ್ಕೆ ಮುಂಚೆಯೇ ಹಾರ್ಸ್ ಲಿಪ್ಸ,ವ್ಯಾನ್ ಮೊರಿಸನ, ಮತ್ತು ಥಿನ್ ಲಿಜ್ಜಿಯಂತಹ ಸಂಗೀತಗಾರರು ಮತ್ತು ಸಂಗೀತಗಾರರ ತಂಡಗಳು ಹಳೆಯ ಶೈಲಿಯ ಮತ್ತು ಸಾಂಪ್ರದಾಯಿಕ ಶೈಲಿಯ ಜನಪದ ಸಂಗೀತವನ್ನು ಸಮಕಾಲೀನ ರಾಕ್ ಸಂಗೀತದೊಂದಿಗೆ ಸಮ್ಮಿಳಿತಗೊಳಿಸಿ ಅದಕ್ಕೊಂದು ವಿಶೇಷ ಮೆರಗನ್ನು ನೀಡಿದರು. ಸುಮಾರು ೧೯೭೦ ಮತ್ತು ೧೯೮೦ರ ಕಾಲಾವಧಿಯಲ್ಲಿ ಸಾಂಪ್ರದಾಯಿಕ ಮತ್ತು ರಾಕ್ ಸಂಗೀತದ ನಡುವಿನ ಅಂತರ ತೀರ ತೆಳುವಾಗಿ ಮಸಕು ಮಸಕು ಕಾಣಿಸತೊಡಗಿ ಜನರು ಇದರ ವ್ಯತ್ಯಾಸಗಳ ಅಂತರವನ್ನು ತಿಳಿಯಲಾಗದೇ ಎರಡನ್ನೂ ಆಸ್ವಾದಿಸಲು ಆರಂಭಿಸಿದರು. ಈ ತೆರನಾದ ಪ್ರವೃತ್ತಿಯು ಇತ್ತೀಚಿನ ಕಲಾವಿದರೆನಿಸಿಕೊಂಡವರಲ್ಲಿ ಸ್ಫಷ್ಟವಾಗಿ ಕಾಣಿಸಿಕೊಂಡಿತು,ಅವರಲ್ಲಿ ಪ್ರುಮುಖರೆಂದರೆ.ಯು2,[[ಈನ್ಯಾ{/0),{0}ಫ್ಲಾಗಿಂಗ್ ಮೊಲ್ಲಿ]],ಮೊಯಾ ಬ್ರೆನ್ನನ್,ದಿ ಸಾ ಡಾಕ್ಟರ್ಸ್,ಬೆಲ್ X1,ಡ್ಯಾಮಿಯನ್ ರೈಸ್,ದಿ ಕೊರ್ಸ್,ಅಸ್ಲಾನ್,ಸ್ನೇಡ್ ಓ'ಕೊನೊರ್,ಕ್ಲಾನ್ನಡ್,ದಿ ಕ್ಯಾನ್ ಬೆರೀಸ್,ರೊರಿ ಗಲ್ಲಾಘೇರ್,ವೆಸ್ಟ್ ಲೈಫ್,ದಿ ಸ್ಕ್ರಿಪ್ಟ್,ದಿ ಕೊರೊನಾಸ್,ಬಿ*ವಿಚ್ಡ್,ಬಾಯ್ ಜೋನ್,ಗಿಲ್ ಬೆರ್ಟ ಓ'ಸಲ್ಲಿವನ್,{0ಬ್ಲಾಕ್47{/0},ಸ್ಟಿಫ್ ಲಿಟಲ್ ಫಿಂಗರ್ಸ್,ಮಾಯ್ ಬ್ಲಡಿ ವೇಲೈಂಟೆನ್,{0ಆಶ್{/0},ದಿ ಥ್ರಿಲ್ಸ್ ,ಸಮ್ ಥಿಂಗ್ ಹ್ಯಾಪಾನ್ಸ್, [[ಎ ಹೌಸ್, ಶರೊನ್ ಶನ್ನೊನ್,ಡೇಮಿಯನ್ ಡೆಂಪ್ಸಿ, ಡಿಕ್ಲಾನ್ ಓ' ರೂರ್ಕೆ, ದಿ ಫ್ರೇಮ್ಸ್ಮತ್ತುದಿ ಪೊಗೂಸ್|ಎ ಹೌಸ್, ಶರೊನ್ ಶನ್ನೊನ್,ಡೇಮಿಯನ್ ಡೆಂಪ್ಸಿ, ಡಿಕ್ಲಾನ್ ಓ' ರೂರ್ಕೆ, [[[[ದಿ ಫ್ರೇಮ್ಸ್|ದಿ ಫ್ರೇಮ್ಸ್ಮತ್ತುದಿ ಪೊಗೂಸ್]]]]. ಪ್ರಮುಖವಾಗಿವೆ. ಇಸವಿ ೧೯೯೦ರಲ್ಲಿ ಬೆಳೆಯುತ್ತಿರುವ ಪೀಳಿಗೆಯು ಜನಪದದ ಲೋಹದ ಸಂಗೀತ ವಾದ್ಯಗಳನ್ನು ಬಳಕೆಗೆ ತಂದಿತು.ಐರಿಶ್ ಮತ್ತು ಸೆಲ್ಟಿಕ್ ಸಂಗೀತ ಸಂಪ್ರದಾಯಗಳಲ್ಲಿ ಭಾರದ ಲೋಹದ ಸಂಗೀತ ವಾದ್ಯಗಳು ಮನೆಮಾತಾದವು. ಇಂತಹ ಆಧುನಿಕ ಶೈಲಿಯ ಪ್ರರ್ತಕರೆಂದರೆ ಕ್ರುಚಾನ,ಪ್ರಿಮೊರ್ಡಿಯಲ್ ಮತ್ತು ವೇ ಲ್ಯಾಂಡರ್ ಎನ್ನಲಾಗಿದೆ. ಕೆಲವು ಸಮಕಾಲೀನ ಸಂಗೀತ ಗುಂಪುಗಳು "ಸಾಂಪ್ರದಾಯಿಕ" ಶೈಲಿಯ ಶೃತ ನಾದಕ್ಕೆ ಅತ್ಯಂತ ನಿಕಟವಾಗಿವೆ.ಅಂದರೆ ಅಲ್ಟಾನ್,ಟೇಡಾ,ಡಾನು, ಡೆರ್ವಿಶ್,ಲೂನಾಸಾ,ಮತ್ತು ಸೊಲಾಸ್.ಎಂಬವು ಹೆಸರಾಗಿವೆ. ಉಳಿದವರು ವಿವಿಧ ಮತ್ತು ವಿಭಿನ್ನ ಸಂಸ್ಕೃತಿಗಳನ್ನು ಒಟ್ಟುಗೂಡಿಸಿ ಹೊಸ ಶೈಲಿಯನ್ನು ಪ್ರಚಾರ ಮಾಡುತ್ತಾರೆ.ಅಫ್ರೊ ಸೆಲ್ಟ್ ಸೌಂಡ್ ಸಿಸ್ಟೆಮ್ ಮತ್ತು ಕಿಲಾ ಇದರಲ್ಲಿವೆ.
ಯುರೊವಿಜನ್ ಸಾಂಗ್ ಕಾಂಟೆಸ್ಟ್ ನಲ್ಲಿ ಐರ್ಲೆಂಡ್ ಅದ್ಭುತ ಸಾಧನೆ ಮಾಡಿ ಯಶಸ್ವಿಯಾಗಿ ಏಳು ಬಹುಮಾನಗಳನ್ನು ಬಾಚಿಕೊಂಡು ಸ್ಫರ್ಧೆಯಲ್ಲಿ ಸೈ ಎನಿಸಿಕೊಂಡಿದೆ.[೧೧೧] ಐರ್ಲೆಂಡ್ ೧೯೭೦ರಲ್ಲಿಡಾನಾದೊಂದಿಗೆ,೧೯೮೦ ಮತ್ತು೧೯೮೭ರಲ್ಲಿ ಜಾನಿ ಲೊಗಾನ,೧೯೯೨ರಲ್ಲಿಲಿಂಡಾ ಮಾರ್ಟಿನ್,೧೯೯೩ ನೈಮ್ಹಾಕಾವನಾಘ್,೧೯೯೪ರಲ್ಲಿ ಪೌಲ್ ಹ್ಯಾರಿಂಗ್ಟನ್ ಮತ್ತು ಚಾರ್ಲಿ ಮೆಕ್ ಗೆಟ್ಟಿಗ್ಯಾನ್ ಮತ್ತು ೧೯೯೬ರಲ್ಲಿ ಐಮೇರ್ ಕ್ವಿನ್ ಇವರೆಲ್ಲರೊಂದಿಗೆ ಬಹುಮಾನಕ್ಕೆ [೧೧೧] ಪಾತ್ರವಾಗಿದೆ.
ಐರಿಶ್ ನ ವರ್ಣಚಿತ್ರ ಕಲೆ ಮತ್ತು ಶಿಲ್ಪಕಲಾಶಾಸ್ತ್ರದ ಗುರುತುಗಳು ನ್ಯೂಲೆಥಿಕ್ ಕಾಲದಿಂದ ಕೆತ್ತಿದ ಬರಹ ಚಿತ್ರಗಳು ಇಂದು ಹಲವೆಡೆ ದೊರೆಯುತ್ತಿವೆ,ಇವು ಆ ಕಾಲದ ಆರಂಭದ ಕಲಾಪ್ರಕಾರಗಳು ಎನ್ನಲಾಗಿದೆ.ನ್ಯೂಗ್ಯಂಗ್ರೇಜ್ ನಲ್ಲಿ ಕಂಚಿನ ಯುಗದ ಶಿಲ್ಪ ಕಲೆಗಳನ್ನು ಪ್ರತಿನಿಧಿಸಿದರೆ ಮಧ್ಯಯುಗೀನ ಧಾರ್ಮಿಕ ಕೆತ್ತನೆಯ ಶಿಲ್ಪಗಳು ಥಳುಕಿನ ಬೆರಗಿನ ವರ್ಣಚಿತ್ರಲೋಕವನ್ನೇ ತೆರೆದಿಡುತ್ತದೆ. ಸುಮಾರು ೧೯ ಮತ್ತು ೨೦ನೆಯ ಶತಮಾನದಲ್ಲಿಅತ್ಯಂತ ಪ್ರಬಲವಾದ ಸಾಂಪ್ರದಾಯಿಕ ದೇಶೀಯ ಪೇಂಟಿಂಗ್ ಗಳು ಪ್ರವರ್ಧಮಾನಕ್ಕೆ ಬಂದವು.ಅವುಗಳಲ್ಲಿಪ್ರಮುಖ ರೇಖಾಕೃತಿಗಳೆಂದರೆ,ಜಾನ್ ಬಟ್ಲರ್ ಈಟ್ಸ,ವಿಲಿಯಮ್ ಆರ್ಪನ್ ,ಜಾಕ್ ಈಟ್ಸ್,ಲೂಯಿಸ್ ಲೆ ಬ್ರೊಕಿ ಇತ್ಯಾದಿ.
ಐರಿಶ್ ನ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ ಜೊಹಾನ್ನೇಸ್ ಸ್ಕಾಟ್ಸ್ ಇರುಜಿನಾ ಆರಂಭಿಕ ಮಧ್ಯಯುಗದ ಅತ್ಯಂತ ಪ್ರಭಾವಶಾಲಿ ಬುದ್ದಿಜೀವಿಗಳಲ್ಲೊಬ್ಬ ಎಂದು ಪರಿಗಣಿತನಾಗಿದ್ದಾನೆ. ಸರ್ ಎರ್ನೆಸ್ಟ್ ಹೆನ್ರಿ ಶಾಕ್ಲೆಟನ್ ಒಬ್ಬ ಆಂಗ್ಲೊ-ಐರಿಶ್ ಸಂಶೋಧನಕಾರ ಅಂಟಾರಕ್ಟಿಕ್ ಸಂಶೋಧನೆಯ ಪ್ರಮುಖರಲ್ಲಿ ಒಬ್ಬರೆನಿಸಿದ್ದಾರೆ. ಆತ ತನ್ನ ಈ ಸಂಶೋಧನೆಯ ಪಯಣದಲ್ಲಿ ಮೌಂಟ್ ಎರೆಬಸ್ ಮತ್ತು ದಕ್ಷಿಣ ಮ್ಯಾಗ್ನೆಟಿಕ್ ಪೋಲ್ ಪತ್ತೆಹಚ್ಚುವಲ್ಲಿ ಆತ ಉತ್ತಮ ಸಾಧನೆಯಾಗಿದೆ. ರಾಬರ್ಟ್ ಬಾಯಲ್ ೧೭ನೆಯ ಶತಮಾನದ ನಿಸರ್ಗದತ್ತ ತತ್ವಜ್ಞಾನಿ,ರಾಸಾಯನಿಕ ತಜ್ಞ,ಭೌತವಿಜ್ಞಾನಿ,ಸಂಶೋಧಕ ಮತ್ತುಆರಂಭಿಕ ಅತ್ಯಂತ ಸಭ್ಯ ವಿಜ್ಞಾನಿ ಎನಿಸಿದ್ದ. ಆಧುನಿಕ ರಾಸಾಯನಿಕಶಾಸ್ತ್ರದ ಸಂಸ್ಥಾಪಕರಲ್ಲಿ ಆತನೂ ಒಬ್ಬ,ಬಾಯಲ್ಸ್ ನ ನಿಯಮ ಕಂಡು ಹಿಡಿದ ಆತನ ಸಂಶೋಧನಾ ಕೊಡಗೆಯಾಗಿದೆ.೧೯ನೆಯ ಶತಮಾನದಲ್ಲಿನ ಭೌತಶಾಸ್ತ್ರಜ್ಞ ಜಾನ್ ಟೈಂಡಲ್ ಟೈಂಡಲ್ ಪರಿಣಾಮವನ್ನು ಕಂಡು ಹಿಡಿದ ಇದು ಆಕಾಶ ನೀಲಿಯಾಗಿದೆ ಎಂಬುದನ್ನು [೧೧೨] ವಿವರಿಸುತ್ತದೆ. ಮಯನೂಥ್ ಕಾಲೇಜಿನಲ್ಲಿ ನೈಸರ್ಗಿಕ ತತ್ವಶಾಸ್ತ್ರದ ಪ್ರೊಫೆಸರ್ ಆಗಿದ್ದ ಫಾದರ್ ನಿಕೊಲಸ್ ಜೊಸೆಫ್ ಕಾಲನ್ ನನ್ನು ಆತ ಸಂಶೋಧಿಸಿದ ಕೊಯಿಲ್ ಅಳವಡಿಕೆ,ಟ್ರಾನ್ಸ್ ಫಾರ್ಮರ್ ಮತ್ತುಆರಂಭಿಕ ೧೯ನೆಯ ಶತಮಾನದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ವಿದ್ಯುತ ಕೋಶಗಳ ಬಳಕೆಯ ಬಗ್ಗೆ ವಿವರಿಸಿದ್ದಾನೆ.
ಇನ್ನುಳಿದ ಐರಿಶ್ ಭೌತ ವಿಜ್ಞಾನಿಗಳಲ್ಲಿಅರ್ನೆಸ್ಟ್ ವಾಲ್ಟನ,ಈತನಿಗೆ ೧೯೫೧ರಲ್ಲಿ ಭೌತಶಾಸ್ತ್ರದಲ್ಲಿ ನೋಬಲ್ ಬಹುಮಾನ ಬಂದಿದೆ. ಸರ್ ಜಾನ್ ಡೌಗ್ಲಾಸ್ ಕಾಕ್ರೊಫ್ಟ್ ಅವರ ಜೊತೆಯಾಗಿ ಪರಮಾಣುವಿನ ಅಣು ಅಂಶವನ್ನು ಕೃತಕ ವಿಧಾನದಿಂದ ಹೊರತೆಗೆದ ಮೊದಲಿಗ.ಅದೂ ಅಲ್ಲದೇ ತೆರೆಗಳ ಸಮೀಕರಣದ (ವೇವ್ ಇಕ್ವೇಶನ್ )ಹೊಸ ತತ್ವ ಸಿದ್ದಾಂತವನ್ನುಆತ ಅಭಿವೃದ್ಧಿಪಡಿಸಿ ದೊಡ್ಡ ಕೊಡುಗೆಗೆ [೧೧೩] ಕಾರಣನಾಗಿದ್ದಾನೆ. ವಿಲಿಯಮ್ ಥಾಮ್ಸನ್ ಅಥವಾ ಲಾರ್ಡ್ ಕೆಲ್ವಿನ್ ಎಂಬಾತನು ಉಷ್ಣತೆಯ ಅಳತೆಗಾಗಿ ಆವಿಷ್ಕಾರ ಮಾಡಿದ್ದು ಇಂದಿಗೂ ಕೆಲ್ವಿನ್ ಗಳಲ್ಲಿ ತಾಪಮಾನವನ್ನು ಅಳೆಯಲಾಗುತ್ತದೆ. ಸರ್ ಜೊಸೆಫ್ ಲಾರ್ಮರ,ಓರ್ವ ಭೌತಶಾಸ್ತ್ರಜ್ಞ ಮತ್ತು ಗಣಿತಜ್ಞ ವಿದ್ಯುಚ್ಛಕ್ತಿಯ ಅಳತೆ,ಅದರ ಕ್ರಿಯಾಶೀಲತೆ,ಉಷ್ಣಮಾಪಕತ್ವ ಮತ್ತು ವಸ್ತುವಿನ ಎಲೆಕ್ಟ್ರಾನ್ ತತ್ವ ಸಿದ್ದಾಂತವನ್ನು ಆತ ಪ್ರತಿಪಾದಿಸಿದೆ. ಆತನ ಅತ್ಯಂತ ಪ್ರಭಾವೀ ಮತ್ತು ಉಲ್ಲೇಖನೀಯ ಗ್ರಂಥವೆಂದರೆ ಏಥರ್ ಮತ್ತು ಮ್ಯಾಟರ್ ೧೯೦೦ರಲ್ಲಿ ಪ್ರಕಟಗೊಂಡ ಇದು ಭೌತಶಾಸ್ತ್ರದ ಸಿದ್ದಾಂತಗಳ ಬಗ್ಗೆ ವಿಷದವಾಗಿ [೧೧೪] ವಿವರಿಸುತ್ತದೆ. ಜಾರ್ಜ್ ಜಾನ್ ಸ್ಟೋನಿ ೧೮೯೧ರಲ್ಲಿ ಎಲೆಕ್ಟ್ರಾನ್ ಎಂಬ ಪದವನ್ನು ಪರಿಚಯಿಸಿದ. ಜಾನ್ ಸ್ಟೀವರ್ಡ್ಸ್ ಬೆಲ್ಲ್ ಬೆಲ್ಲ್ ಥೆಯರಮ್ ಬೆಲ್ ಸಿದ್ದಾಂತದ ಮೂಲಪುರುಷನೆನಿಸಿದ್ದಾನೆ.ಬೆಲ್ಲ್ -ಜಾಕಿವ್ -ಅಡ್ಲರ್ ಅಸಂಗತ ವಿಷಯಗಳ ಕುರಿತು ಆತ ಮಂಡಿಸಿದ ಸಿದ್ದಾಂತದ ಪ್ರತಿಗಳು ಆತನ ಸಂಶೋಧನೆಯಂತೆ ನೋಬಲ್ ಪ್ರಶಸ್ತಿಗೆ [೧೧೨] ಹೆಸರಿಸಲ್ಪಟ್ಟವು. ಅತ್ಯಂತ ಪ್ರಸಿದ್ದ ಗಣಿತಜ್ಞರಲ್ಲಿ ಗಣಿತದ ಸಂಕೀರ್ಣ ಮತ್ತು ಸಮೀಕರಣದ ರೂಪಕ ಸೂತ್ರಗಳನ್ನುಕ್ವೊಟ್ರೇನಿಯನ್ಸ್ ಕಂಡು ಹಿಡಿದ ಸರ್ ವಿಲಿಯಮ್ ಹ್ಯಾಮಿಲ್ಟನ್ ಇಂದು ಗಣಿತ ಲೋಕದ ಬಹುದೊಡ್ಡ ಕೊಡುಗೆಯಾಗಿದ್ದಾನೆ. ನವೀನ ಶ್ರೇಣಿಕೃತ ಆರ್ಥಿಕ ಶಾಸ್ತ್ರದಲ್ಲಿ ಎಜ್ ವರ್ಥ್ ಬಾಕ್ಸ್ ಅಭಿವೃದ್ಧಿ ಪಡಿಸಿದ ಫ್ರಾನ್ಸಿಸ್ ಯೆಸ್ಡ್ರೊ ಎಜ್ ವರ್ಥ್ ಆರ್ಥಿಕ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎನಿಸಿದ್ದಾನೆ. ಜಾನ್ ಬಿ.ಕ್ವಾಸ್ ಗ್ರೇವ್ ಸಂಖ್ಯಾ ಸಿದ್ದಾಂತದಲ್ಲಿ ವಿಶೇಷ ಪರಣಿತನಾಗಿದ್ದ ಆತ ೧೯೯೯ರಲ್ಲಿ ೨೦೦೦ ಸಂಖ್ಯಾ ಸೂತ್ರಗಳ ಸಾಮಾನ್ಯ ಅಪವರ್ತನವಿಲ್ಲದ ಸಂಖ್ಯೆಯನ್ನು ಪ್ರಚುರಪಡಿಸಿದ.ಇದೂ ಅಲ್ಲದೇ ಪಾಸ್ಕಲ್ ನ ಸಂಖ್ಯಾಶಾಸ್ತ್ರಕ್ಕೆ ಪೂರಕವಾಗಿ ೨೦೦೩ರಲ್ಲಿ ಸಂಭಾವ್ಯ ಸಂಖ್ಯೆಗಳನ್ನುಗುರುತಿಸುವ ಗಣಿತಕ್ಕೆ ಹೊಸ ನಿಯಮ ರೂಪಿಸಿದ ಕೀರ್ತಿ ಅವನಿಗಿದೆ. ಜಾನ್ ಲೈಟನ್ ಸಿಂಜೆ ಕೂಡಾ ವಿಜ್ಞಾನದ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದ.ಯಾಂತ್ರಿಕ ಮತ್ತು ರೇಖಾಗಣಿತಕ್ಕೆ ಸಂಭಂದಿಸಿದ ವಿಷಯಗಳಲ್ಲಿ ಸಾಮಾನ್ಯ ಸಂಭಂದದ ಕುರಿತು ವಿವರ ತಿಳಿಸಿದ. ಗಣಿತಜ್ಞ ಜಾನ್ ನ್ಯಾಶ್ ಎಂಬಾತನನ್ನು ತನ್ನ ಶಿಷ್ಯನಾಗಿ ಪಡೆದಿದ್ದ.
ಐರ್ಲೆಂಡಿನಲ್ಲಿ ಎಂಟು ವಿಶ್ವವಿದ್ಯಾಲಯಗಳು ಮತ್ತು ಅಸಂಖ್ಯಾತ ತಂತ್ರಜ್ಞಾನದ ಶಿಕ್ಷಣ ಸಂಸ್ಥೆಗಳಿವೆ.ಉದಾಹರಣೆಗೆ ಡಬ್ಲಿನ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನಸ್ಡ್ ಸ್ಟಡೀಸ,೧೯೪೦ರಲ್ಲಿ ಭೌತಶಾಸ್ತ್ರಜ್ಞ ಇರ್ವಿನ್ ಶೊರ್ ಡಿಂಗರ್ ಎಂಬಾತನನ್ನು ನಿರ್ದೇಶಕನಾಗಿ ಈ ಸಂಸ್ಥೆ [೧೧೫] ಪಡೆದಿತ್ತು.
ಗೇಲಿಕ್ ಫೂಟ್ ಬಾಲ್ ಅತ್ಯಂತ ಜನಪ್ರಿಯ ಮತು ಇಡೀ ಸಮುದಾಯವನ್ನು ಇದರಲ್ಲಿ ಒಳಗೊಳ್ಳುವಂತೆ ಮಾದುತ್ತದೆ.ಇಂತಹ ಕ್ರೀಡೆಗಳನ್ನುಇಡೀ ಜನಸಂಖ್ಯೆಯ ೩೪%ರಷ್ಟು ಐರ್ಲೆಂಡಿಗರುಈ ಕ್ರೀಡೆಯನ್ನು ತಮ್ಮಲ್ಲಿ ಮತ್ತು ವಿದೇಶಗಳಲ್ಲಿ ವೀಕ್ಷಿಸುತ್ತಾರೆ.ಇನ್ನುಳಿದಂತೆ ಹರ್ಲಿಂಗ್ ೨೩%,ಸಾಕರ್ ೧೬% ಮತ್ತು ರಗ್ ಬೈ೮%.ಆಲ್ -ಐರ್ಲೆಂಡ್ ಫೂಟ್ ಬಾಲ್ ಅಂತಿಮ ಪಂದ್ಯವನ್ನು ಅತ್ಯಧಿಕ ಐರ್ಲೆಂಡಿಗರು ವೀಕ್ಷಿಸಿ [೧೧೬][೧೧೭] ಆನಂದಿಸುತ್ತಾರೆ. ಈಜು,ಗಾಲ್ಫ,ಏರೊಬಿಕ್ಸ,ಸಾಕರ,ಸೈಕ್ಲಿಂಗ,ಗೇಲಿಕ್ ಫೂಟ್ ಬಾಲ್ ಮತ್ತುಬಿಲ್ಲಿಯರ್ಡ್ಸ/ಸ್ನೂಕರ್ಸ್ ಇವುಗಳು ಅತಿ ಹೆಚ್ಚು ಜನಪ್ರಿಯವಾಗುತ್ತಿವೆ.ಇದರಲ್ಲಿ ಜನರ ಭಾಗವಹಿಸುವಿಕೆಯೂ [೧೧೮] ಹೆಚ್ಚಾಗಿದೆ. ಸಾಕರ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು ಇದರಲ್ಲಿ ರಾಷ್ಟ್ರೀಯ ತಂಡಗಳು ಪಾಲ್ಗೊಳ್ಳುತ್ತಿವೆ.
ಇನ್ನೂ ಹಲವಾರು ಕ್ರೀಡೆಗಳು ಇಲ್ಲಿ ಜನಜನಿತವಾಗಿವೆ.ಬಾಸ್ಕೆಟ್ ಬಾಲ,ಬಾಕ್ಸಿಂಗ,ಕ್ರಿಕೆಟ್ ,ಫಿಶಿಂಗ್ ,ಗಾಲ್ಫ್ ,ಗ್ರೆಹಾಂಡ್ ರೇಸಿಂಗ್,ಹ್ಯಾಂಡ್ ಬಾಲ್ ,ಹಾಕಿ,ಹಾರ್ಸ್ ರೇಸಿಂಗ್ ,ಮೋಟಾರ್ ಸ್ಪೋರ್ಟ್ಸ್ ,ಶೊ ಜಂಪಿಂಗ್ ಮತ್ತು ಟೆನ್ನಿಸ್ ಮುಂತಾದವುಗಳು.
ಹರ್ಲಿಂಗ್ ಮತ್ತು ಗೇಲಿಕ್ ಫೂಟ್ ಬಾಲ್ ,ಹ್ಯಾಂಡ್ ಬಾಲ್ ಮತ್ತು ರೌಂಡರ್ಸ್ ಇವುಗಳು ಐರ್ಲೆಂಡಿನ ರಾಷ್ಟ್ರ್ರೀಯ ಕ್ರೀಡೆಗಳಾಗಿವೆ,ಇವುಗಳೆಲ್ಲವನ್ನು ಗೇಲಿಕ್ ಕ್ರೀಡೆಗಳು ಎನ್ನುತ್ತಾರೆ. .ಗೇಲಿಕ್ ಅಥ್ಲೆಟಿಕ್ ಅಸೊಶಿಯೇಶನ್ (GAA),ನಿಂದ ರಾಷ್ಟ್ರದ ಎಲ್ಲಾ ಕ್ರೀಡೆಗಳೋ ನಿಯಂತ್ರಿಸಲ್ಪಡುತ್ತವೆ.ಮಹಿಳೆಯರ ಗೇಲಿಕ್ ಫೂಟ್ ಬಾಲ್ ಮತ್ತುಕೆಮೊಜಿ (ಮಹಿಳೆಯರ ಹರ್ಲಿಂಗ್ ಕ್ರೀಡೆ) ಇವುಗಳು ಮಾತ್ರ ಪ್ರತ್ಯೇಕ ಸಂಘಟನೆಗಾಳಿಂದ ನಿಯಂತ್ರಿಸಲ್ಪಡುತ್ತವೆ.[೧೧೯] ಉತ್ತರ ಡಬ್ಲಿನ್ ನಲ್ಲಿರುವ ಕ್ರೋಕ್ ಪಾರ್ಕ್ ನಲ್ಲಿರುವ ಆಟದ ಮೈದಾನದ ಅತಿ ವಿಸ್ತೀರ್ಣ ಹೊಂದಿರುವ ಇದುGAA ನ ಮುಖ್ಯ ಕಚೇರಿಯಾಗಿದೆ.ಈ ಕ್ರೀಡಾ ಮೈದಾನದ ಆಸನದ ವ್ಯವಸ್ಥೆಯು ೮೨,೫೦೦ ಜನರಿಗೆ ಅವಕಾಶ ಕಲ್ಪಿಸುತ್ತದೆ.GAA ನ ಪ್ರಮುಖ ಕ್ರೀಡೆಗಳು ಇದೇ ಮೈದಾನದಲ್ಲೇ ನಡೆಯುತ್ತಿವೆ.ಆಲ್ -ಐರ್ಲೆಂಡ್ ಸೀನರ್ ಫೂಟ್ ಬಾಲ್ ಚಾಂಪಿಯನ್ ಶಿಪ್ ಮತ್ತು ಆಲ್ - ಐರ್ಲೆಂಡ್ ಸೀನಿಯರ್ ಹರ್ಲಿಂಗ್ ಚಾಂಪಿಯನ್ ಶಿಪ್ ದೊಡ್ಡ ಕ್ರೀಡೆಗಳು ಇಲ್ಲಿ ಏರ್ಪಟ್ಟಿದ್ದವು. ಲ್ಯಾಂಡ್ಸ್ ಡೈನ್ ರೋಡ್ ಸ್ಟೇಡಿಯಮ್ ನ ಮರುಅಭಿವೃದ್ಧಿಪಡಿಸುವ ಸಂದರ್ಭದಲ್ಲಿಅಂತಾರಾಷ್ಟ್ರೀಯ ರಗ್ ಬಾಯ್ ಮತ್ತು ಸಾಕರ್ ಗಳು ಇಲ್ಲಿಯೇ [೧೨೦] ಏರ್ಪಾಡಾಗಿದ್ದವು. ಎಲ್ಲಾ GAA ಆಟಗಾರರು ಉನ್ನತ ಮಟ್ಟದ ಆಟದಲ್ಲಿ ಭಾಗವಹಿಸುವವರು ಬಹುತೇಕ ಹವ್ಯಾಸಿ ಕ್ರೀಡಾಳುಗಳೇ ಹೆಚ್ಚಾಗಿದ್ದಾರೆ.ಇವರೆಲ್ಲರೂ ಯಾವುದೇ ಸಂಭಾವನೆಯಿಲ್ಲದೇ ತಂಡಗಳಲ್ಲಿ ಸ್ಫೂರ್ತಿಯಿಂದ ಪಾಲ್ಗೊಳ್ಳುತ್ತಾರೆ.ಆದರೂ ಇವರು ವಾಣಿಜ್ಯೋದ್ದೇಶದ ಕ್ರೀಡೆಗಳಲ್ಲಿ ಅತ್ಯಲ್ಪ ಪ್ರಮಾಣದ ಕ್ರೀಡೆಗೆ ಸಂಭಂದಿಸಿದ ಆದಾಯವನ್ನು ಪಡೆದುಕೊಳ್ಳುತ್ತಾರೆ.
ದಿ ಐರಿಶ್ ಫೂಟ್ ಬಾಲ್ ಅಸೊಶಿಯೇಶನ್(IFA) ಮೂಲಭೂತವಾಗಿ ದ್ವೀಪದ ಎಲ್ಲಾ ಸಾಕರ್ ಕ್ರೀಡೆಗಳನ್ನುಉಸ್ತುವಾರಿ ವಹಿಸುತ್ತದೆ. ಸುಮಾರು ೧೮೭೦ರಿಂದಲೂ ಈ ಕ್ರೀಡೆಯು ಐರ್ಲೆಂಡ್ ನಲ್ಲಿ ಒಂದು ಸಂಘಟಿತ ಮಾದರಿಯಲ್ಲಿ ಆಡಲಾಗುತ್ತದೆ.ಇಲ್ಲಿ ಕ್ಲಿಫ್ಟೋನ್ ವಿಲ್ಲೆF.C.ಬೆಲ್ ಫಾಸ್ಟ್ ನಲ್ಲಿನ ಅತ್ಯಂತ ಹಳೆಯದಾದ ಫೂಟ್ ಬಾಲ್ ಕ್ಲಬ್ ಎನಿಸಿದೆ. ಇದು ಬಹಳ ಜನಪ್ರಿಯವಾಗಿದ್ದು ಅದರಲ್ಲೂ ಮೊದಲ ದಶಕದಲ್ಲಿ ಬೆಲ್ ಫಾಸ್ಟ್ ಮತ್ತುಅಲ್ ಸ್ಟರ್ ಸುತ್ತಮುತ್ತ ಹೆಸರುವಾಸಿಯೆಂದೇ ಹೇಳಲಾಗುತ್ತದೆ. ಹೇಗೇ ಆದರೂ IFA ನ ರಾಷ್ತ್ರೀಯ ಮಟ್ಟದ ತಂಡಗಳ ಆಯ್ಕೆಯಲ್ಲಿ ಬಹುತೇಕ ಅಲ್ ಸ್ಟರ್ ಮೂಲದ ಪ್ರೊಟೆಸ್ಟಂಟ್ ಕ್ಲಬ್ಬ್ ಗಳಿಗೆ ಆದ್ಯತೆ ಇದೆ ಎಂದು ಬೆಲ್ ಫಾಸ್ಟ್ ನ ಹೊರಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. State.ಸುಮಾರು೧೯೨೧ರಲ್ಲಿ ನಡೆದ ಘಟನೆಯು ಡಬ್ಲಿನ್ ಮೂಲದ ಕ್ಲಬ್ ಗಳು ಒಡೆದು ಹೋಳಾದ ಘಟನೆ ಇನ್ನೂ ಜನಮಾನಸದಿಂದ ಮಾಸಿಲ್ಲ.IFA ಯು ಐರಿಶ್ ಕಪ್ ಸೆಮಿ ಫೈನಲ್ ನ ಮರುಕ್ರೀಡಾ ಟೂರ್ನಾಮೆಂಟನ್ನು ಡಬ್ಲಿನ್ ನಿಂದ ಬೆಲ್ ಫಾಸ್ಟ್ ಗೆ ವರ್ಗಾಯಿಸಿದ್ದರಿಂದ ಫೂಟ್ ಬಾಲ್ ಅಸೊಶಿಯೇಶನ್ ಆಫ್ ದಿ ಐರಿಶ್ ಫ್ರೀ ಸ್ಟೇಟ್ ರಚನೆಗೆ [೧೨೧] ಕಾರಣವಾಯಿತು. ಇಂದು ದಕ್ಷಿಣ ಸಂಸ್ಥೆ(ಅಸೊಶಿಯೇಶನ್ )(FAI)ಯನ್ನು ಫೂಟ್ ಬಾಲ್ ಅಸೊಶಿಯೇಶನ್ ಆಫ್ ಐರ್ಲೆಂಡ್ ಎಂದು ಗುರುತಿಸಲಾಗುತ್ತದೆ. ಆರಂಭದಲ್ಲಿ ಕೆಲವು ಅಸೊಶಿಯೇಶನ್ ಗಳನ್ನು ಹೋಮ್ ನೇಶನ್ಸ್ ನಿಂದ ಕಪ್ಪು ಪಟ್ಟಿಗೆ ಸೇರಿಸಿದ್ದರೂ FAI ಯನ್ನು೧೯೨೩ರಲ್ಲಿ FIFA ದಿಂದ ಅದು ಗುರುತಿಸಲ್ಪಟ್ಟಿತು.ಅಲ್ಲದೇ ತನ್ನ ಮೊದಲ ಅಂತಾರಾಷ್ಟೀಯ ಫಿಕ್ಚರ್ (ಸೆಣಸಾಟ)ನ್ನು ೧೯೨೬ರಲ್ಲಿ (ಇಟಲಿ ವಿರುದ್ಧ)ಪ್ರಾಯೋಜಿಸಿತು. ಹೇಗೆ ಆದರೂIFA ಮತ್ತುFAI ಗಳು ಸಮಗ್ರ ಐರ್ಲೆಂಡಿಗಾಗಿ ತಂಡದ ಆಯ್ಕೆಯನ್ನು ಮುಂದುವರೆಸಿವೆ.ಇದರಿಂದ ಕೆಲವು ಆಟಗಾರರು ಎರಡೂ ತಂಡಗಳಲ್ಲಿ ಪ್ರದರ್ಶನ ನೀಡಿ ಅಂತಾರಾಷ್ಟ್ರೀಯ ಗರಿಗೆ ಪಾತ್ರರಾಗಿದ್ದಾರೆ. ಎರಡೂ ತಂಡಗಳೂ ತಮ್ಮನ್ನು ಐರ್ಲೆಂಡಿಗೆ ಸಂಭಂದಿಸಿದವರೆಂದು ಹೇಳಿಕೊಳ್ಳುತ್ತವೆ. FIFA ಯು ೧೯೫೦ರಲ್ಲಿ ಎಲ್ಲ ಅಸೊಶಿಯೇಶನ್ನಿನವರು ತಮ್ಮ ತಮ್ಮಪ್ರದೇಶ ವ್ಯಾಪ್ತಿಯಲ್ಲಿಕ್ರೀಡಾ ಪಟುಗಳನ್ನು ಆಯ್ಕೆ ಮಾಡಬೇಕೆಂದು ನಿರ್ದೇಶಿಸಿತು. FAI ನ ತಂಡವು"ರಿಪಬ್ಲಿಕ್ ಆಫ್ ಐರ್ಲೆಂಡ" ಮತ್ತು IFAನ ತಂಡವನ್ನು "ನಾರ್ದರ್ನ್ ಐರ್ಲೆಂಡ್ "ತಂಡವೆಂದು ಗುರುತಿಸುವಂತೆ ೧೯೫೩ರಲ್ಲಿ ನಿರ್ದೇಶನ ನೀಡಿತು. ನಾರ್ದರ್ನ್ ಐರ್ಲೆಂಡ್ ತಂಡವು 1958ರಲ್ಲಿ ವಿಶ್ವ ಕಪ್ ಫೈನಲ್ ಗೆ ಅಹರತೆ ಪಡೆಯಿತು (ಕ್ವಾರ್ಟರ್ ಫೈನಲಗಳನ್ನು ತಲುಪಿದ ನಂತರ)1982ಮತ್ತು1986ರ ಅವಧಿಯಲ್ಲಿ. ರಿಪಬ್ಲಿಕ್ ವಿಶ್ವ ಕಪ್ ಫೈನಲ್ ಗೆ 1990(ಕ್ವಾರ್ಟರ್ ಫೈನಲ್ ಗಳ ತಲುಪಿದ ನಂತರ),1994,2002 ಮತ್ತು ಯುರೊಪಿಯನ್ ಚಾಂಪಿಯನ್ ಶಿಪ್ ಗಳು 1988ರ ಅವಧಿಯಲ್ಲಿ. ಇಂಗ್ಲೀಷ್ ರಲ್ಲಿ ಐರಿಶ್ ತಂಡಗಳ ಬಗ್ಗೆ ಹೆಚ್ಚು ಆಸಕ್ತಿ ಕಂಡುಬಂದರೆ ಸ್ಕಾಟಿಶ್ ಸಾಕರ್ ಲೀಗ್ ಗಳಲ್ಲಿ ಅಷ್ಟಾಗಿ ಕಾಣಬರುವದಿಲ್ಲ.
ಸಾಕರ್ ಕ್ರೀಡೆಯಂತೆಯೇ ಏಕೈಕ ರಾಷ್ಟ್ರೀಯ ತಂಡವನ್ನು ರಾಷ್ಟ್ರೀಯ ರಗ್ ಬಾಯ್ ತಂಡಕ್ಕೆ ಐರ್ಲೆಂಡ್ ಆಯ್ಕೆ ಮಾಡುವುದನ್ನು ಮುಂದುವರೆಸಿದೆ.ದ್ವೀಪದಲ್ಲಿನ ಎಲ್ಲಾ ಕ್ರೀಡೆಗಳನ್ನು ಐರಿಶ್ ರಗ್ ಬಾಯ್ ಫೂಟ್ ಬಾಲ್ ಯುನಿಯನ್.(IRFU),ಎಂಬ ಒಂದೇ ಅಸೊಶಿಯೇಶನ್ ಎಲ್ಲಾ ಕ್ರೀಡೆಗಳನ್ನು ಪ್ರಾಯೋಜಿಸಿ ಆಡಳಿತವನ್ನೂ ನಿರ್ವಹಿಸುತ್ತದೆ. ದಿ ರಗ್ ಬಾಯ್ ತಂಡವು ರಗ್ ಬಾಯ್ ವಿಶ್ವ ಕಪ್ ನ ಎಲ್ಲಾ ಸ್ಪರ್ಧೆಯಲ್ಲಿ ಭಾಗವಿಸಿದರೂ ನಾಲ್ಕು ಕ್ವಾರ್ಟರ್ ಫೈನಲ್ ಗಳನ್ನು ಗೆದ್ದಿದೆ. ಐರ್ಲೆಂಡ್ 1991 ಮತ್ತು 1999 ರ ರಗ್ ಬಾಯ್ ವಿಶ್ವ ಕಪ್ ಗಳನ್ನು ಸಹ ಆತಿಥೇಯವಾಗಿ ಆಯೋಜಿಸಿತು.(ಕ್ವಾರ್ಟರ್ ಫೈನಲ್ ಒಳಗೊಂಡಂತೆ) ಒಟ್ಟು ನಾಲ್ಕು ಐರಿಶ್ ವೃತ್ತಿ ಪರ ತಂಡಗಳಿವೆ,ಎಲ್ಲಾ ನಾಲ್ಕು ತಂಡಗಳು ಮ್ಯಾಗ್ನರ್ಸ್ ಲೀಗನಲ್ಲಿ ಭಾಗವಹಿಸುತ್ತವೆ.ಮೂರು ತಂದಗಳು ಹೇನ್ ಕೇನ್ ಕಪ್ ಗಾಗಿ ಪೈಪೋಟಿ ನಡೆಸುತ್ತವೆ. ಐರಿಶ್ ರಗ್ ಬಾಯ್ ಅಂತಾರಾಷ್ಟ್ರೀಯ ಮತ್ತು ಪ್ರಾಂತ್ಯವಾರುಗಳಲ್ಲಿ ಅತಿ ಹೆಚ್ಚು ಸ್ಪರ್ಧಾತ್ಮಕವಾಗಿದೆ.ಈ ಕ್ರೀಡೆಯು೧೯೯೪ರಲ್ಲಿ ವೃತ್ತಿಪರ ಕ್ರೀಡೆಯಾಗಿ ಮಾರ್ಪಟ್ಟಾಗಿನಿಂದ ಇದರ ಸ್ಪರ್ಧಾ ಮಟ್ಟ ಏರಿಕೆಯಾಗಿದೆ. ಆ ಸಮಯದಲ್ಲಿಅಲ್ ಸ್ಟರ್(1999[೧೨೨]),ಮುನ್ ಸ್ಟರ್(2006[೧೨೩] and ೨೦೦೮[೧೨೪]) ಮತ್ತುಲೀನ್ ಸ್ಟರ್ (2009[೧೨೫])ಇವುಗಳು ಹೇನ್ ಕೇನ್ ಕಪ್ ನ್ನು ಗೆದ್ದುಕೊಂಡವು. ಇದಕ್ಕೂ ಹೆಚ್ಚಿಗೆಂದರೆ ಐರಿಶ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರು ರಾಷ್ಟ್ರಗಳ ಪಂದ್ಯಾವಳಿಯಲ್ಲಿ ಯುರೊಪಿಯನ್ ಎಲೈಟ್ ನೊಂದಿಗೆ ಸೆಣಸಾಟ ನಡೆಸಿದೆ. ಈ ಯಶಸ್ಸು,ಟ್ರಿಪಲ್ ಕ್ರೌನ್( ಗ್ರೇಟ್ ಬ್ರಿಟನ್ನಿನೊಳಗೊಂಡಂತೆ ಹೋಮ್ ನೇಶನ್ಸ್)೨೦೦೬ ಮತ್ತು೨೦೦೭ ರಲ್ಲಿನ ವಿಜಯ ಮುಂದಿನ ೨೦೦೯ರ ಗ್ರಾಂಡ್ [೧೨೬] ಸ್ಲಾಮ್)
ದಿ ಎರ್ಲೆಂಡ್ ಕ್ರಿಕೆಟ್ ತಂಡವು 2007ರ ಕ್ರಿಕೆಟ್ ವರ್ಲ್ಡ್ ಕಪ್ ನಲ್ಲಿ ಅಹರತೆ ಪಡೆದಿತ್ತು. ಅದು ಪಾಕಿಸ್ತಾನವನ್ನು ಸೋಲಿಸಿ ತನ್ನ ಬಾರಿಯಲ್ಲಿ ದ್ವಿತೀಯ ಸ್ಥಾನದಲ್ಲಿತ್ತು.ಸ್ಪರ್ಧೆಯ ಸೂಪರ್ 8 ರ ಹಂತದಲ್ಲಿ ಸ್ಥಾನ ಗಿಟ್ಟಿಸಿತ್ತು. ಈ ತಂಡವು 2009 ICC ವಿಶ್ವ ಟ್ವೆಂಟಿ20ನಲ್ಲಿ ಕ್ವಾಲಿಫೈಯರ್ಸ್ ನ್ನು ಜಂಟಿಯಾಗಿ ಗೆದ್ದು ಸೂಪರ್ ೮ ಹಂತ ತಲುಪಿತು.
ದಿ ಐರಿಶ್ ರಗ್ ಬಾಯ್ ಲೀಗ್ ತಂಡವು ಐರಿಶ್ ಪರಿವಾರದ ಹಿನ್ನೆಲೆಯಿರುವ ಇಂಗ್ಲೀಷ್ ಆಟಗಾರರನ್ನೇ ಆಯ್ಕೆ ಮಾಡಿಕೊಳ್ಳುತ್ತದೆ.ಇನ್ನುಳಿದವರನ್ನು ಸ್ಥಳೀಯ ಸ್ಪರ್ಧೆಗಳಲ್ಲಿರುವವರು ಮತ್ತು ಆಸ್ಟ್ರೇಲಿಯಾದವರನ್ನು ಆಯ್ಕೆ ಮಾಡುತ್ತದೆ. ಐರ್ಲೆಂಡ್ 2000ರಲ್ಲಿ ರಗ್ ಬಾಯ್ ಲೀಗ್ ವಿಶ್ವ ಕಪ್ ತಂಡವು ಕ್ವಾರ್ಟರ್ ಫೈನಲ್ಸನ್ನು ತಲುಪಿತು
ಗ್ರೇ ಹಾಂಡ್ ರೇಸಿಂಗ್(ಬೇಟೆ ನಾಯಿಗಳ ಸ್ಪರ್ಧೆ) ಮತ್ತು ಹಾರ್ಸ್ ರೇಸಿಂಗ್ (ಕುದುರೆ ಜೂಜು)ಎರಡೂ ಐರ್ಲೆಂಡಿನಲ್ಲಿ ಜನಪ್ರಿಯ ಕ್ರೀಡೆಗಳಾಗಿವೆ. ಗ್ರೇ ಹೌಂಡ್ ಮೈದಾನಗಳು ಬಹಳಷ್ಟು ಜನರನ್ನು ಆಕರ್ಷಿಸುತ್ತವೆ.ಇಲ್ಲಿ ಮೇಲಿಂದ ಮೇಲೆ ಹಾರ್ಸ್ ರೇಸಿಂಗ್ ಸಭೆಗಳು ನಡೆಯುತ್ತಿವೆ. ಈ ದ್ವೀಪವು ಜೂಜು ಕುದರೆಗಳ ತಳಿ ಅಭಿವೃದ್ಧಿ ಮತ್ತು ತರಬೇತಿಗೆ ಹೆಸರಾಗಿದೆ.ಅದೂ ಅಲ್ಲದೇ ಜೂಜು ನಾಯಿಗಳನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುತ್ತದೆ. ಕೌಂಟಿ ಕಿಲ್ಡರ್ ನಲ್ಲಿ ಈ ಜೂಜು ಕುದುರೆಗಳ ವಲಯ ಅತಿ ಹೆಚ್ಚು ಕೇಂದ್ರೀಕೃತವಾಗಿದೆ.
ಐರಿಶ್ ಅಥ್ಲೀಟಿಗಳು ಇತ್ತೀಚಿಗೆ ಬಹಳಷ್ಟು ಅಭಿವೃದ್ಧಿ ಹೊಂದಿದ್ದಾರೆ.ಸೊನಿಯಾ ಒ'ಸಲ್ಲಿವ್ಯಾನ್ ೫,೦೦೦ ಮೀಟರ್ ಓಟದಲ್ಲಿ ಎರಡು ಪದಕ ಗಳಿಸಿದಳಲ್ಲದೇ ೧೯೯೫ರವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕಕ್ಕೂ ಪಾತ್ರಳಾದಳು.ಇನ್ನೂ 2000ರ ಸಿಡ್ನಿ ಓಲಂಪಿಕ್ಸ್ ನಲ್ಲಿ ರಜತ ಪದಕ ಗಳಿಸಲು ಸಮರ್ಥಳಾದಳು. ಗಿಲ್ಲಿಯನ್ ಒ'ಸಲ್ಲಿವ್ಯಾನ್ ೨೦೦೩ರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ೨೦ಕಿ.ಮೀ ನಡಿಗೆಯಲ್ಲಿ ಬೆಳ್ಳಿ ಪದಕ,ಮಾಸ್ಕೊದಲ್ಲಿ ನಡೆದ ೨೦೦೬ರ ವಿಶ್ವ ಇಂಡೋರ್ ಚಾಂಪಿಯನ್ ಶಿಪ್ ನಲ್ಲಿ ನಡೆದ ವೇಗದ ಓಟದಲ್ಲಿ ಡೆರ್ರ್ವಲ್ ಒ'ರೂರ್ಕೆ ಚಿನ್ನದ ಪದಕವನ್ನು ತನ್ನ ಮುಡಿಗೇರಿಸಿಕೊಂಡ. ಬರ್ಲಿನ್ ನಲ್ಲಿ ನಡೆದ ೨೦೦೯ರ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ಸ್ ನ ೨೦ಕಿ.ಮೀ ನಡಿಗೆಯ ಸ್ಪರ್ಧೆಯಲ್ಲಿ ಆಲಿವ್ ಲೊಘಾನೆ ಬೆಳ್ಳಿ ಪದಕ ಗಳಿಸಿದರು,
.ಐರಿಶ್ ಹವ್ಯಾಸಿ ಬಾಕ್ಸಿಂಗ್ ಅಸೊಶಿಯೇಶನ್ ಮೂಲಕ ಬಾಕ್ಸಿಂಗ್ ಕ್ರೀಡಾಳಿತವನ್ನು ನಿರ್ವಹಿಸುತ್ತದೆ. ಮೈಕೆಲ್ ಕರ್ರಥ್ ೧೯೯೨ರ ಬಾರ್ಸಿಲೋನಾದ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ನ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡನು.ಕೆನ್ನಿ ಈಗನ್ ಬೀಜಿಂಗನಲ್ಲಿ ನಡೆದ ೨೦೦೮ರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದುಕೊಂಡನು.
ಗಾಲ್ಫ್ ಕ್ರೀಡೆಯು ಬಹಳ ಜನಪ್ರಿಯವಾದುದು.ಗಾಲ್ಫ್ ಪ್ರವಾಸೋದ್ಯಮ ಇಲ್ಲಿನ ಪ್ರಮುಖ ಉದ್ದಿಮೆ ಎನಿಸಿಕೊಂಡಿದೆ. [[}ಕೌಂಟಿ ಕಿಲ್ಡೇರ್]] ನಲ್ಲಿ 2006ರಲ್ಲಿ ರೈಡರ್ ಕಪ್ ಪಂದ್ಯಾವಳಿಯನ್ನು ದಿ ಕೆ ಕ್ಲಬ್ ನಲ್ಲಿ [೧೨೭] ಆಯೋಜಿಸಲಾಗಿತ್ತು. ಪಾಡ್ರೇಗ್ ಹ್ಯಾರಿಂಗ್ಟನ್ ೧೯೪೭ರಲ್ಲಿ ಫ್ರೆಡ್ ಡಾಲೆ ನಂತರ ಕಾರ್ನೊಸ್ಟಿಯಲ್ಲಿ ನಡೆದ ಬ್ರಿಟಿಶ್ ಮುಕ್ತ ಪಂದ್ಯಾವಳಿಗಳನ್ನು ಗೆದ್ದ ಏಕೈಕ ಐರಿಶ್ [೧೨೮] ವ್ಯಕ್ತಿಯಾಗಿದ್ದಾರೆ. ಆತ ಜುಲೈನ [೧೨೯] ೨೦೦೮ರಲ್ಲಿ ಸಹ ತನ್ನ ಪ್ರಶಸ್ತಿಯನ್ನು ಉಳಿಸ್ಕೊಂಡನಲ್ಲದೇ ಆಗಸ್ಟ್ ನಲ್ಲಿ ನಡೆದ PGA ಚಾಂಪಿಯನ್ ಶಿಪ್‌ನ್ನು ಅದಕ್ಕಿಂತ ಮೊದಲೇ [೧೩೦] ಉಳಿಸಿಕೊಂಡ. ಹ್ಯಾರಿಂಗ್ಟನ್ ೭೮ವರ್ಷಗಳ ನಂತರ ಐರ್ಲೆಂಡಿನಿಂದ PGA ಚಾಂಪಿಯನ್ ಶಿಪ್ ಗೆದ್ದ ಏಕೈಕ ಯುರೊಪಿಯನ್ ಎನಿಸಿದ್ದಾನೆ.
ಐರ್ಲೆಂಡಿನ ಪಶ್ಚಿಮ ಕರಾವಳಿಯ ಲಾಹಿಂಚ್ ಮತ್ತು ಡೊನೆಗಲ್ ಬೇ ಬಹುಮುಖ್ಯ ಸರ್ಫಿಂಗ್ ಬೀಚಗಳಾಗಿ ಹೆಸರಾಗಿವೆ.ಇವು ಅಟಾಂಟಿಕ್ ಸಮುದ್ರಕ್ಕೆ ತೆರೆದುಕಂಡಿವೆ. ಡೊನೆಗಲ್ ಬೀಚ್ ಕೊಲ್ಲಿಯು ಒಂದು ಲಾಳಿಕೆಯ ಆಕಾರದಲ್ಲಿದೆ.ಪಶ್ಚಿಮ/ದಕ್ಷಿಣ-ಪಶ್ಚಿಮ ಅಟ್ಲಾಂಟಿಕ್ ನ ಮಾರುತವು ಸರ್ಫಿಂಗ್ ಗೆ ಅದೂ ಚಳಿಗಾಲದಲ್ಲಿ ಹೇಳಿ ಮಾಡಿಸಿದ ತಾಣವೆನಿಸಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಬಂಡ್ರಾನ್ ನಲ್ಲಿ ಯುರೊಪಿಯನ್ ಚಾಂಪಿಯನ್ ಶಿಪ್ ಸರ್ಫಿಂಗ್ ನ್ನು ಏರ್ಪಡಿಸಲಾಗಿತ್ತು. ಐರ್ಲೆಂಡಿನಲ್ಲಿ ಸ್ಕುಬಾ ಡೈವಿಂಗ್ ಜನಪ್ರಿಯಗೊಳ್ಳುತ್ತಿದ್ದು ಇಲ್ಲಿನ ಸ್ವಚ್ಛ ಮತ್ತು ಸಮುದ್ರ ಜೀವನದ ಅತಿ ಜನಸಂಖ್ಯೆ ಇದಕ್ಕೆ ಕಾರಣ.ಬಹುಮುಖ್ಯವಾಗಿ ಪಶ್ಚಿಮ ಸಮುದ್ರ ತಟ ಕೂಡಾ ಇದಕ್ಕೆ ಮೂಲವಾಗಿದೆ. ಐರ್ಲೆಂಡಿನ ಕರಾವಳಿಯಲ್ಲಿ ಹಲವಾರು ಹಡಗು ಒಡೆವ ಸ್ಥಳಗಳಿವೆ.ಅದರಲ್ಲಿ ಅತ್ಯುತ್ತಮ ಎಂದರೆ ಮಾಲಿನ್ ಹೆಡ್ ನಲ್ಲಿರುವ ರೆಕ್ ಡೈವ್ಸ್ ಮತ್ತು ಕೌಂಟಿ ಕಾರ್ಕ್ ಕರಾವಳಿಯ ಪ್ರಮುಖವಾಗಿವೆ. 14,000 kilometres (8,700 mi)ಸಾವಿರಾರು 3,700 kilometres (2,300 mi)ಸರೋವರಗಳು, ಮೀನಿನಿಂದ ಸಮೃದ್ಧವಾಗಿರುವ ನದಿಗಳು ಐರ್ಲೆಂಡಿನ ಕರಾವಳಿಯಲ್ಲಿ ಅತ್ಯುತ್ತಮ ಮೀನುಗಾರಿಕೆಯ ಜನಪ್ರಿಯ ತಾಣಗಳೆನಿಸಿವೆ. ಸಮಶೀತೋಷ್ಣದ ಐರಿಶ್ ವಾಯುಗುಣ ಸಮುದ್ರದಲ್ಲಿನ ಮೀನುಗಾರಿಕೆ ಹಾಗು ಜಲಕ್ರೀಡೆಗಳಿಗೆ ಪ್ರಸಿದ್ದವಾಗಿದೆ. ಸಲ್ಮೊನ್ ಮತ್ತು ಟ್ರೌಟ್ ಮೀನುಗಾರಿಕಾ ಪ್ರದೇಶಗಳು ಮೀನುಗಾರರ ವಿಶೇಷ ಸ್ಥಳಗಳಾಗಿವೆ.೨೦೦೬ರಲ್ಲಿ ತೂಗು ಸೇತುವೆ ಮೇಲಣದಂತಹ ಮೀನುಗಾರಿಕೆ ಕ್ರೀಡೆಯನ್ನು ಮುಚ್ಚಲಾಗಿದ್ದು ಇದರಿಂದಾಗಿ ಜನರ ಆಕರ್ಷಣೀಯ ಕೆಂದ್ರವಾಗಿದೆ. ಸಾಮಾನ್ಯ ಮಟ್ಟದ ಮೀನುಗಾರಿಕೆ ತನ್ನ ಸೌಂದರ್ಯವನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತ ನಡೆದಿದೆ. ಸಮುದ್ರ ಮೀನುಗಾರಿಕೆಯು ಬೀಚ್ ಗಳನ್ನು ಸರಿಯಾಗಿ ಗುರುತಿಸಿ ಅವುಗಳಿಗೆ ತಮ್ಮದೇ ಆದ ಸ್ವರೂಪ ನೀಡಲಾಗಿದೆ.ಸಮುದ್ರದ ಮೀನು ಹಿಡಿಯುವುದು ಮತ್ತು ಜಲಕ್ರೀಡಾಗಳ ದಟ್ತಣೆಯು [೧೩೧] ಹೆಚ್ಚಾಗಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.