Remove ads
From Wikipedia, the free encyclopedia
Belfast | |
ಐರಿಷ್:Béal Feirste | |
Top: Belfast from Cavehill, Middle: Obel Tower, Albert Clock, Waterfont Financial Centre, Victoria Square shopping complex, Bottom Belfast City Hall, Waterfront Hall |
|
Belfast shown within Northern Ireland | |
Area | ಟೆಂಪ್ಲೇಟು:Infobox UK place/area |
---|---|
Population | City of Belfast: 267,500[೧] Urban area: 483,418[೨] Metropolitan area: 579,276[೩] |
Irish grid reference | J338740 |
- Dublin | ಟೆಂಪ್ಲೇಟು:Infobox UK place/dist S |
District | City of Belfast |
County | County Antrim County Down |
Country | Northern Ireland |
Sovereign state | United Kingdom |
Post town | BELFAST |
Postcode district | BT1–BT17, BT29 (part), BT36 (part), BT58 |
Dialling code | 028 |
Police | Northern Ireland |
Fire | Northern Ireland |
Ambulance | Northern Ireland |
EU Parliament | Northern Ireland |
UK Parliament | Belfast North Belfast South Belfast East Belfast West |
NI Assembly | Belfast North Belfast South Belfast East Belfast West |
Website | www.belfastcity.gov.uk |
|
ಬೆಲ್ಫಾಸ್ಟ್ (from Irish: Béal Feirste meaning "mouth of the sandbars") ನಾರ್ದರ್ನ್ ಐರ್ಲೆಂಡ್ ನ ರಾಜಧಾನಿ ಹಾಗೂ ಅತ್ಯಂತ ದೊಡ್ಡದಾದ ಪಟ್ಟಣವಾಗಿದೆ. ಅದು ಪ್ರಗತಿ ಹೊಂದಿದ ಸರಕಾರ ಹಾಗೂ ಶಾಸನಾಧಿಕಾರ ಪಡೆದ ನಾರ್ದರ್ನ್ ಐರ್ಲೆಂಡ್ ಅಸೆಂಬ್ಲಿಯನ್ನು ಹೊಂದಿದೆ.[೪] ಇದು ನಾರ್ದರ್ನ್ ಐರ್ಲೆಂಡ್ನಲ್ಲಿ ಅತ್ಯಂತ ವಿಶಾಲವಾದ ಪಟ್ಟಣ ಪ್ರದೇಶವಾಗಿದೆ, ಮತ್ತು ಐರ್ಲೆಂಡ್ನಲ್ಲಿ ಎರಡನೇ-ವಿಶಾಲವಾದ ಪಟ್ಟಣ ಮತ್ತು ಯುನೈಟೆಡ್ ಕಿಂಗ್ಡಮ್ನಲ್ಲಿ 15ನೇ-ವಿಶಾಲವಾದ ಪಟ್ಟಣ. ಇದು ಅಲ್ಸ್ಟರ್ ಪ್ರಾಂತದಲ್ಲಿ ಮುಖ್ಯವಾದ ವಾಸಸ್ಥಳ. ಬೆಲ್ಫಾಸ್ಟ್ ಪಟ್ಟಣದ ಜನಸಂಖ್ಯೆ 267,500[೧] ಮತ್ತು ಬೆಲ್ಫಾಸ್ಟ್ ಪಟ್ಟಣ ಪ್ರದೇಶದ ಹೃದಯ ಭಾಗದಲ್ಲಿ ಇದೆ. ಅದರ ಜನಸಂಖ್ಯೆ 483,418.[೫] ಬೆಲ್ಫಾಸ್ಟ್ ಮಹಾಪಟ್ಟಣವಾಸಿ ಪ್ರದೇಶದ ಒಟ್ಟು ಜನಸಂಖ್ಯೆ 579,276 ಇದೆ.[೩] ಯೂರೋಪಿಯನ್ ಯೂನಿಯನ್ನಲ್ಲಿ, ಬೆಲ್ಫಾಸ್ಟ್ 100ನೇ-ವಿಶಾಲವಾದ ಪಟ್ಟಣ ಪ್ರದೇಶದ ಕ್ಷೇತ್ರವಾಗಿದೆ. ಬೆಲ್ಫಾಸ್ಟ್ಗೆ 1888ರಲ್ಲಿ ಪಟ್ಟಣ ಪ್ರಾಮುಖ್ಯತೆಯನ್ನು ಕೊಡಲಾಯಿತು.
ಚಾರಿತ್ರಿಕವಾಗಿ, ಬೆಲ್ಫಾಸ್ಟ್ ಐರಿಷ್ ನಾರುಬಟ್ಟೆ ಕೈಗಾರಿಕೆಯ ಕೇಂದ್ರವಾಗಿದೆ (ಅದಕ್ಕಾಗಿ "ಲೈನೆನೊಪೊಲಿಸ್" ಎಂಬ ಹೆಸರು ಗಳಿಸಿತು), ತಂಬಾಕು ಉತ್ಪಾದನೆ, ಹಗ್ಗ-ತಯಾರಿಕೆ ಮತ್ತು ಹಡಗು ನಿರ್ಮಾಣ: ಪಟ್ಟಣದ ಮುಖ್ಯ ಹಡಗು ನಿರ್ಮಾಣ, ಹಾರ್ಲೇಂಡ್ ಮತ್ತು ವೊಲ್ಫ್ , ಇದು ಆಪತ್ತಿನ-ವಿಧಿ RMS ಟೈಟೇನಿಕ್ ಕಟ್ಟಿಸಿತು, ಮತ್ತು 20ನೇ ಶತಮಾನದ ಆರಂಭದಲ್ಲಿ ಬೆಲ್ಫಾಸ್ಟ್ ವಿಶ್ವವ್ಯಾಪಿಯಾದ ವೇದಿಕೆಯನ್ನು ಪ್ರಪಂಚದಲ್ಲೇ ವಿಶಾಲವಾದ ಹಾಗೂ ತುಂಬ ನೌಕಾಂಗಣ ತಯಾರಿಸಬಲ್ಲ ಪಟ್ಟಣವಾಗಿ ಬೆಳೆಯಿತು. 20ನೇ ಶತಮಾನ ನಂತರದ ಅರ್ಧದವರೆಗೆ ವಿಶ್ವವ್ಯಾಪಿ ಕೈಗಾರಿಕೆಯ ಕೇಂದ್ರವಾಗಿ ಅದರ ಸ್ಥಳವನ್ನು ನೆಲೆಗೊಳಿಸುವ ಮೂಲಕ ಬೆಲ್ಫಾಸ್ಟ್ ಕೈಗಾರಿಕೆಯ ಕ್ರಾಂತಿಯಲ್ಲಿ ಮುಖ್ಯ ಪಾತ್ರ ವಹಿಸಿತು.
ಕೈಗಾರಿಕೀಕರಣ ಮತ್ತು ಆಂತರಿಕ ವಲಸೆಯಿಂದ ಬೆಲ್ಫಾಸ್ಟ್ ಅಲ್ಪಕಾಲದಲ್ಲೇ 20ನೇ ಶತಮಾನದ ಸರದಿಯಲ್ಲಿ ಐರ್ಲೆಂಡ್ನ ವಿಶಾಲವಾದ ಪಟ್ಟಣವಾಗಿ ಪರಿವರ್ತನೆಗೊಂಡಿತು ಮತ್ತು ಪಟ್ಟಣದ ಕೈಗಾರಿಕೆ ಮತ್ತು ಆರ್ಥಿಕ ಯಶಸ್ಸಿನ ಕುರಿತ ಹೇಳಿದ ಎದುರಾಳಿ ಹೊಮ್ ರೂಲ್ ನ ಅಲ್ಸ್ಟರ್ ಒಕ್ಕೂಟದ ಸದಸ್ಯರು ಆ ಕಾರಣಕ್ಕಾಗಿ ಐರ್ಲೆಂಡ್ ಖಾಸಗೀಕರಣವನ್ನು ದೂರವಿಡಬೇಕು ಮತ್ತು ಅಲ್ಸ್ಟರ್ ಅದನ್ನು ಆ ಕಾರಣಕ್ಕಾಗಿ ವಿರೋಧಿಸುತ್ತಾರೆ ಎಂದು ಹೇಳಿದರು.
ಇವತ್ತು, ಬೆಲ್ಫಾಸ್ಟ್ ಕೈಗಾರಿಕೆಯ ಕೇಂದ್ರವಾಗಿ ಉಳಿದಿದೆ, ಅದು ಮಾತ್ರವಲ್ಲ ಕಲೆಗಳಲ್ಲಿ, ಮೇಲ್ಮಟ್ಟದ ಶಿಕ್ಷಣದಲ್ಲಿ ಹಾಗೂ ವ್ಯಾಪಾರದಲ್ಲಿ, ಒಂದು ಕಾನೂನುಬದ್ಧ ಕೇಂದ್ರ, ಮತ್ತು ನಾರ್ತೆರ್ನ್ ಐರ್ಲೆಂಡ್ನ ಆರ್ಥಿಕ ಯಂತ್ರವಾಗಿದೆ. ತಡೆಯೊಡ್ಡುವ, ತೊಂದರೆಯ, ಮತ್ತು ವಿನಾಶ ಎಂದು ಕರೆಯಲ್ಪಡುವ ದಿ ಟ್ರಬಲ್ಸ್ ಕಾಲದ ನಡುವೆ ಅಧಿಕವಾಗಿ ಈ ಪಟ್ಟಣವು ಕಷ್ಟಪಟ್ಟಿತು, ಆದರೆ ನಂತರ ಶಾಂತವಾದ, ಕಳೆದ ವರ್ಷಗಳ ತೀವ್ರ ರಾಜಕೀಯ ಹಿಂಸಾಚಾರದಿಂದ ಬಿಡುಗಡೆಯ, ಮತ್ತು ವ್ಯಾಪಾರದ ಬೆಳವಣಿಗೆಯ ಕಾಲವನ್ನು ಹೊಂದಿತು. ಬೆಲ್ಫಾಸ್ಟ್ ಪಟ್ಟಣದ ಕೇಂದ್ರ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವಿಸ್ತರಣಕ್ಕೊಳಗಾಗಿದೆ ಹಾಗೂ ಪುನಃ ರೂಪುಗೊಂಡಿದೆ, ಅದಲ್ಲೂ ಮುಖ್ಯವಾಗಿ ವಿಕ್ಟೋರಿಯಾ ಸ್ಕ್ವೇರ್ ಸುತ್ತಲಿನ ಪ್ರದೇಶದಲ್ಲಿ.
ಬೆಲ್ಫಾಸ್ಟ್ ಎರಡು ವಿಮಾನ ನಿಲ್ದಾಣಗಳನ್ನು ಹೊಂದಿದೆ: ಜೊರ್ಜ್ ಬೆಸ್ಟ್ ಬೆಲ್ಫಾಸ್ಟ್ ಸಿಟಿ ಏರ್ಪೊರ್ಟ್ ಪಟ್ಟಣದಲ್ಲಿದೆ, ಮತ್ತು ಬೆಲ್ಫಾಸ್ಟ್ ಇಂಟರ್ನ್ಯಾಶನಲ್ ಏರ್ಪೊರ್ಟ್ 15 miles (24 km) ಪಟ್ಟಣದ ಪಶ್ಚಿಮದಲ್ಲಿದೆ.
ಬೆಲ್ಫಾಸ್ಟ್ ಪ್ರಮುಖವಾದ ಬಂದರು(ರೇವು ಪಟ್ಟಣ), ವ್ಯಾಪಾರದ ಹಾಗೂ ಬೆಲ್ಫಾಸ್ಟ್ ಲೊಗ್ ತೀರದ ಹಡಗುಕಟ್ಟೆಗಳ ಕೈಗಾರಿಕೆಗೆ ಪ್ರಧಾನವಾಗಿದೆ, ಅದರೊಡನೆ ಪ್ರಸಿದ್ಧವಾದ ಹರ್ಲೇಂಡ್ ಮತ್ತು ವೊಲ್ಫ್ ನೌಕಾನೆಲೆಯನ್ನು ಹೊಂದಿದೆ. ಬೆಲ್ಫಾಸ್ಟ್ ಡಬ್ಲಿನ್-ಬೆಲ್ಫಾಸ್ಟ್ ವಾಯುಮಾರ್ಗದ ಮತದಾರ ಪಟ್ಟಣವಾಗಿದೆ, 3 ಮಿಲಿಯ ಜನಸಂಖ್ಯೆಯನ್ನು ಒಳಗೊಂಡಿದೆ, ಅಥವಾ ಐರ್ಲೆಂಡ್ ದ್ವೀಪದ ಮೊತ್ತ ಜನಸಂಖ್ಯೆಯಲ್ಲಿ ಅರ್ಧದಷ್ಟು.
Year | Pop. | ±% |
---|---|---|
1821 | ೩೭,೨೭೭ | — |
1831 | ೫೩,೨೮೭ | +42.9% |
1841 | ೭೫,೩೦೮ | +41.3% |
1851 | ೯೭,೭೮೪ | +29.8% |
1861 | ೧,೧೯,೩೯೩ | +22.1% |
1871 | ೧,೭೪,೪೧೨ | +46.1% |
1881 | ೨,೦೮,೧೨೨ | +19.3% |
1891 | ೨,೫೫,೯೫೦ | +23.0% |
1901 | ೩,೪೯,೧೮೦ | +36.4% |
1911 | ೩,೮೬,೯೪೭ | +10.8% |
1926 | ೪,೧೫,೧೫೧ | +7.3% |
1937 | ೪,೩೮,೦೮೬ | +5.5% |
1951 | ೪,೪೩,೬೭೧ | +1.3% |
1961 | ೪,೧೫,೮೫೬ | −6.3% |
1966 | ೩,೯೮,೪೦೫ | −4.2% |
1971 | ೩,೬೨,೦೮೨ | −9.1% |
1981 | ೩,೧೪,೨೭೦ | −13.2% |
1991 | ೨,೭೯,೨೩೭ | −11.1% |
2001 | ೨,೭೭,೩೯೧ | −0.7% |
2006 | ೨,೬೭,೩೭೪ | −3.6% |
[೬][೭][೮][೯][೧೦][೧೧] |
ಬೆಲ್ಫಾಸ್ಟ್ ಹೆಸರು ಐರಿಶ್ ಶಬ್ದವಾದ Béal Feirsde ದಿಂದ ಪಡೆಯಲಾಗಿದ್ದು, ನಂತರ ಅದನ್ನು Béal Feirste ಎಂದು ಕರೆಯಲಾಯಿತು.[೧೨] béal ಶಬ್ದಕ್ಕೆ ಅರ್ಥ "ಬಾಯಿ" ಮತ್ತು feirsde/feirste ಎಂಬುದು fearsaid ಶಬ್ದದ ಏಕವಚನವಾಗಿದೆ ಮತ್ತು ನದಿಯ ಬಳಿಯಿರುವ ಮರಳುದಡ ಅಥವಾ ಅಲೆ ನಿರ್ಮಿತ ದಿಬ್ಬವನ್ನು ಸೂಚಿಸುತ್ತದೆ.[೧೩][೧೪] ಅಂದರೆ ಈ ಹೆಸರು "ಮರಳುದಡದ ಬಾಯಿ" ಅಥವಾ "ಅಲೆನಿರ್ಮಿತ ದಿಬ್ಬದ ಬಾಯಿ" ಎಂದು ಅರ್ಥ ಕೊಡುತ್ತದೆ.[೧೩] ಈ ಮರಳುದಿಬ್ಬ ಡೊನೆಗಲ್ ಕ್ವೆಯ್: ಲಗನ್ ಬಳಿ ಎರಡು ನದಿಗಳ ಸಂಗಮದಿಂದ ಉಂಟಾಗಿದ್ದು, ಅದು ಬೆಲ್ಫಾಸ್ಟ್ ಲೊಗೆ ಹರಿಯುತ್ತದೆ ಮತ್ತು ಅದರ ಉಪನದಿ ಫಾರ್ಸೆಟ್. ಈ ಪ್ರದೇಶದ ಸುತ್ತಲು ಮೂಲ ವಾಸಸ್ಥಳ ಅಭಿವೃದ್ಧಿಗೊಂಡಿತು.[೧೫] ಐರಿಶ್ ಹೆಸರಾದ Béal Feirste ವನ್ನು ಕೌಂಟಿ ಮಯೊವಿನ ಒಂದು ನಗರಪ್ರದೇಶವೂ ಹೊಂದಿದೆ, ಅದರ ಹೆಸರು Belfarsad ಎಂದು ಆಂಗ್ಲೀಕರಿಸಲಾಗಿದೆ.[೧೬]
ಮರಳುದಿಬ್ಬಕ್ಕೆ ಬಾಯಿಯಿಲ್ಲದ ಕಾರಣ, ಆ ಹೆಸರಿನ ಒಂದು ಬದಲಾದ ವ್ಯಾಖ್ಯಾನ "[ನದಿಯ] ಮರಳುದಿಬ್ಬದ ಬಾಯಿ" ಎಂದು ಕರೆಯಲಾಗುತ್ತಿದ್ದು, ಅದು ನದಿ ಫಾರ್ಸೆಟ್ ಲಾಗಾನ್ ನದಿಯನ್ನು ಸೇರುವಲ್ಲಿ ಮರಳುದಿಬ್ಬ ಇರುವುದರಿಂದಾಗಿ ಹಾಗೆ ಕರೆಯಲಾಗುತ್ತದೆ. ಈ ವ್ಯಾಖ್ಯಾನವನ್ನು ಎಡ್ಮಂಡ್ ಹೊಗನ್ ಹಾಗೂ ಜೊನ್ ಒ ಡೊನೊವನ್ ಬೆಂಬಲಿಸಿದ್ದಾರೆ.[೧೭] ನದಿಯ ಉಬ್ಬರವಿಳಿತದ ಕಾರಣಕ್ಕಾಗಿಯೂ ನದಿಗೆ ಆ ಹೆಸರನ್ನು ಇಡಲಾಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.[೧೩]
1888ರಲ್ಲಿ ರಾಣಿ ವಿಕ್ಟೋರಿಯಾ ಬೆಲ್ಫಾಸ್ಟ್ಗೆ ಪಟ್ಟಣ ಪ್ರಾಮುಖ್ಯತೆ ಕೊಟ್ಟಾಗ ಕೌಂಟಿ ಬೊರೊ ರಚನೆಗೊಂಡರೂ,[೧೮] ಇದನ್ನು ಕೌಂಟಿ ಅಂಟ್ರಿಮ್ ಹಾಗೂ ಕೌಂಟಿ ಡೌನ್ ಪ್ರದೇಶಗಳನ್ನು ಬೇರ್ಪಡಿಸಿದ ಪಟ್ಟಣ ಎಂದು ಕರೆಯಲಾಗುತ್ತದೆ.[೧೯]
ಬೆಲ್ಫಾಸ್ಟ್ನ ಸ್ಥಳದಲ್ಲಿ ಕಂಚಿನ ಯುಗದಿಂದ ವಸತಿಯಿದೆ. ದ ಜೇಂಟ್ಸ್ ರಿಂಗ್ ಎಂಬ ಒಂದು 5,000-ವರ್ಷ-ಹಳೆಯ ಹೆನ್ಜ್ ಕಟ್ಟಡವು ಪಟ್ಟಣದ ಸಮೀಪದಲ್ಲಿ ನೆಲೆಗೊಂಡಿದೆ, ಮತ್ತು ಕಬ್ಬಿಣದ ಯುಗದ ಉಳಿದಿರುವ ಬೆಟ್ಟದ ಕೋಟೆಗಳು, ಸುತ್ತಲು ಇರುವ ಬೆಟ್ಟಗಳಿಂದ ಕಾಣಬಹುದು. ಬೆಲ್ಫಾಸ್ಟ್ ಒಂದು ಸಣ್ಣ ವಾಸಸ್ಥಳವಾಗಿ ಮಧ್ಯ ಕಾಲಾವಧಿಯ ನಡುವೆ ಕಡಿಮೆ ಪ್ರಮುಖ್ಯತೆಯಾಗಿ ಉಳಿದಿತು. 12ನೇ ಶತಮಾನದಲ್ಲಿ ಜೊನ್ ಡಿ ಕೊರ್ಸಿ ಒಂದು ಕೋಟೆ ಕಟ್ಟಿಸಿರುವುದು ಈಗ ಪಟ್ಟಣದ ಕೇಂದ್ರದಲ್ಲಿ ಕೆಸಲ್ ಸ್ಟ್ರೀಟ್ನಲ್ಲಿದೆ ಇದೆ, ಆದರೆ ಇದು ಕಡಿಮೆ ಪ್ರಮಾಣದಲ್ಲಿ ಮತ್ತು 1177ರಲ್ಲಿ ಡಿ ಕೊರ್ಸಿ ಕಟ್ಟಿದ ಉತ್ತರದಿಕ್ಕಿನಲ್ಲಿರುವ ಕರ್ರಿಕ್ಫೆರ್ಗುಸ್ ಕೆಸಲ್ ರೀತಿಯಲ್ಲಿ ಇರಲಿಲ್ಲ. ಒ ನೀಲ್ ಜನಾಂಗ ಈ ಪ್ರದೇಶದಲ್ಲಿತ್ತು. 14ನೇ ಶತಮಾನದಲ್ಲಿ, ಕೆಸಲ್ರಿಗ್ ನಲ್ಲಿರುವ ಗ್ರೆಯ್ ಕೆಸಲ್ ಅನ್ನು ಹಗ್ ಒ ನೀಲ್ ಸಂತತಿಯವರಾದ ಕ್ಲನ್ ಐದ್ ಬುಯ್ದ್ ಕಟ್ಟಿಸಿದನು, ಈಗ ಪಟ್ಟಣದ ಪೂರ್ವದಿಕ್ಕಿನಲ್ಲಿದೆ.[೨೦] ಕೊನ್ ಒ ನೀಲ್ ಕೂಡ ಈ ಪ್ರದೇಶದಲ್ಲಿ ಹಿಡಿತವನ್ನು ಹೊಂದಿದ್ದನು. ಪೂರ್ವದಿಕ್ಕಿನ ಬೆಲ್ಫಾಸ್ಟ್ನಡುವೆ ಹರಿಯುವ ಕೊನ್ ಸ್ ವಾಟರ್ ನದಿಯು ಒಂದು ಉಳಿದಿರುವ ಇದನ್ನು ತಿಳಿಸುವ ಕೊಂಡಿಯಾಗಿದೆ.[೨೧]
ಬೆಲ್ಫಾಸ್ಟ್ ಸರ್ ಅರ್ಥರ್ ಚಿಚೆಸ್ಟೆರ್ ರಿಂದ ಒಂದು ಪಟ್ಟಣವಾಗಿ ಸ್ಥಾಪಿಸಲ್ಪಟ್ಟ ನಂತರ, 17ನೇ ಶತಮಾನದಲ್ಲಿ ಒಂದು ಬೃಹತ್ ಪ್ರಮಾಣದ ಆವಾಸ ಸ್ಥಾನವಾಗಿತ್ತು, ಅದು ಆರಂಭದಲ್ಲಿ ಪ್ರೊಟೆಸ್ಟೆಂಟ್ ಇಂಗ್ಲೀಷ್ ಮತ್ತು ಅಲ್ಸ್ಟೆರ್ನ ವಸಾಹತು ಸಮಯದಲ್ಲಿ ಸ್ಕಾಟಿಷ್ ವಲಸೆಗಾರರಿಂದ ನೆಲೆಗೊಂಡಿತ್ತು. (ಆದಾಗ್ಯೂ, ಬೆಲ್ಫಾಸ್ಟ್ ಮತ್ತು ಕೌಂಟಿ ಅಂಟ್ರಿಮ್ ಇವರುಗಳು ಖಾಸಗಿಯಾಗಿ ವಸಾಗತುಗಳನ್ನು ಸ್ಥಾಪಿಸಿಕೊಂಡಿದ್ದ ಕಾರಣದಿಂದಾಗಿ, ಈ ನಿರ್ದಿಷ್ಟವಾದ ವಸಾಹತು ವ್ಯವಸ್ಥೆಯ ಭಾಗವಾಗಿರಲಿಲ್ಲ.) 1791ರಲ್ಲಿ, ಬೆಲ್ಫಾಸ್ಟ್ನಲ್ಲಿ ಸೊಸೈಟಿ ಆಫ್ ಯುನೈಟೆಡ್ ಐರಿಷ್ಮೆನ್ ಇದು ಹೆನ್ರಿ ಜಾಯ್ ಮ್ಯಾಕ್ಕ್ರ್ಯಾಕನ್ ಮತ್ತು ನಗರದ ಇತರ ಪ್ರಮುಖ ಪ್ರೆಸ್ಬಿಟೇರಿಯನ್ರು ಥಿಯೋಬಾಲ್ಡ್ ವೊಲ್ಫ್ ಟೋನ್ ಮತ್ತು ಥಾಮಸ್ ರಸೆಲ್ರನ್ನು ಆಮಂತ್ರಿಸಿದ ನಂತರದಲ್ಲಿ ಸ್ಥಾಪಿತವಾಗಲ್ಪಟ್ಟಿತು. ಈ ಕಾಲದ ಬೆಲ್ಫಾಸ್ಟ್ನ ಬೆಳವಣಿಗೆಯ ಗುರುತುಗಳು ಈಗಲೂ ಕೂಡ ನಗರದ ಅತ್ಯಂತ ಹಳೆಯ ಪ್ರದೇಶಗಳಾದ ಎಂಟ್ರೀಸ್ ಎಂದು ಕರೆಯಲ್ಪಡುವ ಪ್ರದೇಶಗಳಲ್ಲಿ ಕಾಣಬಹುದಾಗಿದೆ.
ಬೆಲ್ಫಾಸ್ಟ್ ವ್ಯಾಪಾರದ ಹಾಗೂ ಕೈಗಾರಿಕೆಯ ಕೇಂದ್ರವಾಗಿ 18ನೇ ಹಾಗೂ 19ನೇ ಶತಮಾನಗಳಲ್ಲಿ ವಿಕಸನಗೊಂಡಿತು ಮತ್ತು ಐರ್ಲೇಂಡಿನ ಅತ್ಯಂತ-ಪ್ರಮುಖವಾದ ಕೈಗಾರಿಕೆಯ ಪಟ್ಟಣವಾಯಿತು. ಲಿನೆನ್ (ನಾರುಬಟ್ಟೆ), ಹಗ್ಗ-ತಯಾರಿಕೆ, ತಂಬಾಕು, ಭಾರಿ ಎಂಜಿನಿಯರಿಂಗ್ ಮತ್ತು ಹಡಗು ನಿರ್ಮಾಣ ಮುಂತಾದವುಗಳನ್ನು ಒಳಗೊಂಡಂತೆ ಕೈಗಾರಿಕೆಯು ಅಭಿವೃದ್ಧಿಹೊಂದಿತು ಮತ್ತು ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಬೆಲ್ಫಾಸ್ಟ್ ಡಬ್ಲಿನ್ ಅನ್ನು ಹಿಮ್ಮೆಟ್ಟಿಸಿ ಐರ್ಲೆಂಡ್ನ ಅತ್ಯಂತ ದೊಡ್ಡ ಪಟ್ಟಣವಾಗಿ ಬದಲಾಯಿತು. ಹರ್ಲೇಂಡ್ ಮತ್ತು ವೊಲ್ಫ್ ನೌಕಾಂಗಣಗಳು ಜಗತ್ತಿನಲ್ಲಿನ ಅತ್ಯಂತ ದೊಡ್ಡ ಹಡಗು ನಿರ್ಮಾಣ ತಾಣಗಳಾದವು ಅವು ಸರಿಸುಮಾರು 35,000 ಕೆಲಸಗಾರರನ್ನು ಕೆಲಸದಲ್ಲಿ ತೊಡಗಿಸಿಕೊಂಡಿದ್ದವು.[೨೨]
1920-22ರಲ್ಲಿ, ಐರ್ಲೆಂಡಿನ ವಿಭಜನೆ ಹೊಂದಿದ ಕಾರಣದಿಂದ ಬೆಲ್ಫಾಸ್ಟ್ ಉತ್ತರ ಭಾಗದ ಐರ್ಲೆಂಡ್ನ ಹೊಸ ವಿಭಾಗದ ರಾಜಧಾನಿಯಾಯಿತು. ಬೆಲ್ಫಾಸ್ಟ್ನಲ್ಲಿ ಅದಕ್ಕೆ ಸಂಬಂಧಿತವಾದ ತೊಂದರೆಗಳು (ಐರಿಷ್ನ ಸ್ವತಂತ್ರತೆಯ ಯುದ್ಧ) 500 ಜನರನ್ನು ಬಲಿತೆಗೆದುಕೊಂಡಿತು, 1960 ರ ದಶಕದ ಕೊನೆಯ ನಂತರದಿಂದ "ತೊಂದರೆಗಳು" ಕೊನೆಗೊಳ್ಳುವ ತನಕ ನಗರದಲ್ಲಿ ರಕ್ತ ಪಂಥೀಯ ಹೋರಾಟವು ಅಸ್ತಿತ್ವದಲ್ಲಿತ್ತು.[೨೩]
II ನೆಯ ಜಾಗತಿಕ ಯುದ್ಧದ ಸಮಯದಲ್ಲಿ ಬೆಲ್ಫಾಸ್ಟ್ ದಾರುಣವಾದ ಬಾಂಬ್ ಧಾಳಿಗಳಿಂದ ತತ್ತರಿಸಿತು. 1941 ರಲ್ಲಿ ಒಂದು ಧಾಳಿಯಲ್ಲಿ, ಜರ್ಮನ್ ಬಾಂಬುಗಾರರು ಸಾವಿರಾರು ಜನರ ಜೀವಹರಣ ಮಾಡಿದರು ಮತ್ತು ಹತ್ತಾರು ಸಾವಿರ ಜನರನ್ನು ನೆಲೆರಹಿತರನ್ನಾಗಿಸಿದರು. ಇದು ಲಂಡನ್ ಹೊರಗಡೆಯಲ್ಲಿ ನಡೆದ ಮಿಂಚುಧಾಳಿಯ ಸಂದರ್ಭದ ರಾತ್ರಿ ಧಾಳಿಯಲ್ಲಿನ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಡೆದ ಮಾರಣಹೋಮ ಎನ್ನಬಹುದು.[೨೪]
ಬೆಲ್ಫಾಸ್ಟ್ ಇದು 1921 ರಲ್ಲಿ ತನ್ನ ಸ್ಥಾಪನೆಯಾಗುವ ತನಕ ಐರ್ಲೆಂಡ್ ಶಾಸನ 1920 ರ ಸರ್ಕಾರವನ್ನು ಅನುಸರಿಸುವ ಉತ್ತರ ಭಾಗದ ಐರ್ಲೆಂಡ್ನ ರಾಜಧಾನಿಯಾಗಿತ್ತು. ಪ್ರಮುಖವಾದ ಪಟ್ಟಣವಾಗಿ ಸ್ಥಾಪಿತವಾಗಲ್ಪಟ್ಟ ದಿನದಿಂದ ಅದು ರೋಮನ್ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಜನರ ನಡುವಣ ಪಂಥೀಯ ವಿರೋಧಾಭಾಸಗಳ ಹಲವಾರು ಉಪಾಖ್ಯಾನಗಳ ದೃಶ್ಯವಾಗಿತ್ತು. ಈ ವಿರೋಧಾಭಾಸದಲ್ಲಿನ ವ್ಯತಿರಿಕ್ತವಾದ ಗುಂಪುಗಳು ಪ್ರಸ್ತುತದಲ್ಲಿ ಅನೇಕ ವೇಳೆ ಅನುಕ್ರಮವಾಗಿ ಪ್ರಜಾಪ್ರಭುತ್ವವಾದಿ ಮತ್ತು ನಿಷ್ಠಾವಂತವಾದಿ ಎಂದು ಕರೆಯಲ್ಪಡುತ್ತವೆ, ಆದಾಗ್ಯೂ ಆ ಗುಂಪುಗಳು ’ರಾಷ್ಟ್ರೀಯತಾವಾದಿ’ ಮತ್ತು ’ವೃತ್ತಿಸಂಘವಾದಿ’ ಗುಂಪುಗಳು ಎಂದೂ ಕರೆಯಲ್ಪಡುತ್ತವೆ. ಈ ಸಮಸ್ಯೆಗಳ ಇತ್ತೀಚಿನ ಉದಾಹರಣೆಯು ದ ಟ್ರಬಲ್ಸ್ (ತೊಂದರೆಗಳು) ಎಂದು ಕರೆಯಲ್ಪಟ್ಟಿತು - ಇದು ಸರಿಸುಮಾರು 1969 ರಿಂದ 1990 ರ ಕೊನೆಯವರೆಗೆ ವಿಷಮಾವಸ್ಥೆಗೆ ಏರಲ್ಪಟ್ಟ ಒಂದು ಪ್ರಜಾಸಮುದಾಯದ ಸಮಸ್ಯೆಯಾಗಿತ್ತು. ಬೆಲ್ಫಾಸ್ಟ್ ನಿರ್ದಿಷ್ಟವಾಗಿ 1970 ರ ದಶಕದ ಸಮಯದಲ್ಲಿ ಎರಡು ಕಡೆಗಳಲ್ಲಿ ಶತ್ರುತ್ವದ ಅರೆಸೈನಿಕ ಗುಂಪುಗಳು ನಿರ್ಮಣವಾಗುವುದರ ಜೊತೆಗೆ ಉತ್ತರ ಭಾಗದ ಐರ್ಲೆಂಡ್ನಲ್ಲಿ ಟ್ರಬಲ್ಗಳ ವಿಷಮಸ್ಥಿತಿಯನ್ನು ಅನುಭವಿಸಿತು. ಟ್ರಬಲ್ಗಳ ಪೂರ್ತಿ ಜೀವನದುದ್ದಕ್ಕೂ ಸಿಡಿಗುಂಡುಗಳ ಎಸೆಯುವಿಕೆ, ಕೊಲ್ಲುವಿಕೆ, ಮತ್ತು ಬೀದಿ ಹಿಂಸಾಚಾರಗಳು ಒಂದು ಹಿನ್ನೆಲೆಯನ್ನು ನಿರ್ಮಿಸಿದವು. 1972ರಲ್ಲಿ ಪ್ರೊವಿಜನಲ್ IRA ಇದು ಬೆಲ್ಫಾಸ್ಟ್ ಪಟ್ಟಣದ ಕೇಂದ್ರದ ಮಿತಿಯಲ್ಲಿ 22 ಗುಂಡುಗಳನ್ನು ಸ್ಫೋಟಮಾಡಿಸಿತು, ಒಂಭತ್ತು ಜನರನ್ನು ಕೊಲ್ಲಲ್ಪಟ್ಟ ಆ ದಿನವು "ಬ್ಲಡಿ ಫ್ರೈಡೆ" ಎಂದು ಕರೆಯಲ್ಪಟ್ಟಿತು. ಅಲ್ಸ್ಟರ್ ವಾಲಂಟಿಯರ್ ಫೋರ್ಸ್ (ಅಲ್ಸ್ಟರ್ ಸ್ವಯಂಸೇವಕ ಬಲ,ಯುವಿಎಫ್) ಮತ್ತು ದ ಅಲ್ಸ್ಟರ್ ಡಿಫೆನ್ಸ್ ಅಸೋಸಿಯೇಷನ್ (ಅಲ್ಸ್ಟರ್ ರಕ್ಷಣಾ ಸಂಘ,ಯುಡಿಎ)ಗಳನ್ನು ಒಳಗೊಂಡಂತೆ ನಿಷ್ಠಾವಂತವಾದಿ ಅರೆಸೈನಿಕ ಗುಂಪುಗಳು ಅವುಗಳು ನಡೆಸಿದ ಕೊಲೆಗಳು ಐಆರ್ಎ ಶಿಬಿರಕ್ಕೆ ಸಂಬಂಧಿಸಿದವು ಎಂಬುದಾಗಿ ವಾದಿಸಿದವು. ಇದರ ಧಾಳಿಗೆ ಹೆಚ್ಚಾಗಿ ತುತ್ತಾದವರೆಂದರೆ ಪ್ರೊವಿಷನಲ್ ಐಆರ್ಎ ಯ ಜೊತೆಗೆ ಯಾವುದೇ ಸಂಬಂಧವನ್ನು ಹೊಂದಿಲ್ಲದ ರೋಮನ್ ಕ್ಯಾಥೋಲಿಕ್ ನಾಗರೀಕರಾಗಿದ್ದರು. 1970 ರ ದಶಕದ ಮಧ್ಯದ ಸಮಯದಲ್ಲಿ ಶಾಂಕಿಲ್ ರೋಡ್ ಮೇಲೆ ಅವಲಂಬಿತವಾದ ಒಂದು ನಿರ್ದಿಷ್ಟವಾದ ಕುಖ್ಯಾತ ಗುಂಪು ಶಾಂಕಿಲ್ ಬುಚರ್ಸ್ ಎಂದು ಹೆಸರನ್ನು ಪಡೆದುಕೊಂಡಿತು. 1969ರಿಂದ 2001ರವರೆಗೆ ನಗರದಲ್ಲಿನ ರಾಜಕೀಯ ಹಿಂಸಾಚಾರದಲ್ಲಿ ಒಟ್ಟಾರೆ, 1,500 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು.[೨೫] ಟ್ರಬಲ್ಸ್ ನ ಪೂರ್ವಾರ್ಜಿತ ಸ್ವತ್ತಿನ ಭಾಗವೆಂದರೆ ಬೆಲ್ಫಾಸ್ಟ್ನಲ್ಲಿನ ಪ್ರಜಾಪ್ರಭುತ್ವದ ಮತ್ತು ನಿಷ್ಠಾವಂತ ಅರೆಸೈನಿಕ ಗುಂಪುಗಳು ಸಂಘಟಿತ ಹಿಂಸಾಚಾರ ಮತ್ತು ಮೋಸದ ವ್ಯಾಪಾರಗಳಲ್ಲಿ ತೊಡಗಿಕೊಂಡವು.
ಬೆಲ್ಫಾಸ್ಟ್ 1613ರಲ್ಲಿ ಜೇಮ್ಸ್ I ರಿಂದ ಬೊರೊ ಪ್ರಾಮುಖ್ಯತೆಯನ್ನು ಮತ್ತು 1888ರಲ್ಲಿ ರಾಣಿ ವಿಕ್ಟೋರಿಯಾರಿಂದ ಉದ್ಯೋಗಸ್ಥ ಪಟ್ಟಣ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು.[೨೬] 1973ರಿಂದ ಅದು ಬೆಲ್ಫಾಸ್ಟ್ ಸಿಟಿ ಕೌನ್ಸಿಲ್ (ಬೆಲ್ಫಾಸ್ಟ್ ನಗರ ಮಂಡಳಿ) ಮೂಲಕ ಸ್ಥಳೀಯ ಕಾರ್ಯನಿರ್ವಹಣೆಯ ಅಡಿಯಲ್ಲಿ ಒಂದು ಸ್ಥಳೀಯ ಸರ್ಕಾರ ಜಿಲ್ಲೆಯಾಗಿತ್ತು.[೨೭] ಬೆಲ್ಫಾಸ್ಟ್ ಬ್ರಿಟೀಷ್ ಹೌಸ್ ಆಫ್ ಕೊಮನ್ಸ್ ಹಾಗೂ ಉತ್ತರ ಭಾಗದ ಐರ್ಲೆಂಡ್ ಅಸೆಂಬ್ಲಿ ಎರಡರಲ್ಲೂ ಪ್ರತಿನಿಧಿಸಲ್ಪಟ್ಟಿತು. ಯುರೋಪ್ ಸಂಸತ್ತಿನ(ಪಾರ್ಲಿಮೆಂಟ್) ಚುನಾವಣೆಗೆ, ಬೆಲ್ಫಾಸ್ಟ್ ಉತ್ತರ ಭಾಗದ ಐರ್ಲೆಂಡ್ನ ಚುನಾವಣಾ ಕ್ಷೇತ್ರದ ಅಡಿಯಲ್ಲಿ ಬರುತ್ತಿತ್ತು.
ಬೆಲ್ಫಾಸ್ಟ್ ಪಟ್ಟಣವು ಮುನ್ಸಿಪಾಲ್ ಸರಕಾರದ ಒಂದು ಪುರಸಭಾಧ್ಯಕ್ಷ ಪದವಿಯ ಒಂದು ವಿಧವನ್ನು ಹೊಂದಿದೆ. 51 ಪುರಸಭಾ ಸದಸ್ಯರುಗಳಿಂದ ಆಯ್ಕೆಯಾಗಲ್ಪಟ್ಟ ಲಾರ್ಡ್ ಮೇಯರ್, ಡೆಪ್ಯುಟಿ ಲಾರ್ಡ್ ಮೇಯರ್ ಮತ್ತು ಹೈ ಶೆರಿಫ್ ಇವರುಗಳು ನಗರದ ಅಧಿಕಾರಿಗಳಾಗಿದ್ದರು. ಡೇನಿಯಲ್ ಡಿಕ್ಸನ್ ಇವರು 1892ರಲ್ಲಿ ಆಯ್ಕೆ ಹೊಂದಿದ ಬೆಲ್ಫಾಸ್ಟ್ನ ಮೊದಲ ಲೋರ್ಡ್ ಮೆಯರ್ ಆಗಿದ್ದರು.[೨೮] ಜೂನ್ 2009ರ ವರೆಗೆ, ಬೆಲ್ಫಾಸ್ಟ್ನ ಲಾರ್ಡ್ ಮೆಯರ್ ಅಲೈಯನ್ಸ್ ರಾಜಕಾರಣಿ, ನಯೋಮಿ ಲೊಂಗ್ ಆಗಿದ್ದರು, ಅವರು ಪಟ್ಟಣದ ಏಕಮಾತ್ರ ಎರಡನೆಯ ಮಹಿಳಾ ಲಾರ್ಡ್ ಮೆಯರ್ ಆಗಿದ್ದರು. ಅವರ ಕರ್ತವ್ಯವು ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸುವುದು, ನಗರಕ್ಕೆ ಬರುವ ಪ್ರಮುಖ ಸಂದರ್ಶಕರನ್ನು ಆದರಿಸುವುದು, ಮತ್ತು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ನಗರವನ್ನು ಪ್ರತಿನಿಧಿಸುವುದು ಹಾಗೂ ಅದನ್ನು ಬೆಂಬಲಿಸುವುದು ಮುಂತಾದವುಗಳನ್ನು ಒಳಗೊಂಡಿತ್ತು.[೨೮] ಲೊಂಗ್ ಸಿನ್ ಫಿನ್ ಲಾರ್ಡ್ ಮೇಯರ್, ಟಾಮ್ ಹಾರ್ಟ್ಲಿಗೆ ಪರ್ಯಾಯವಾಗಿ ಆ ಸ್ಥಾನವನ್ನು ಆಕ್ರಮಿಸಿದರು.
1997ರಲ್ಲಿ, ಒಕ್ಕೂಟದ ಸದಸ್ಯರು ಅದರ ಚರಿತ್ರೆಯಲ್ಲಿ ಮೊದಲ ಬಾರಿಗೆ ಬೆಲ್ಫಾಸ್ಟ್ ಸಿಟಿ ಕೌನ್ಸಿಲ್ನ (ಬೆಲ್ಫಾಸ್ಟ್ ನಗರ ಮಂಡಳಿ) ಪರಿಪೂರ್ಣ ಹತೋಟಿಯನ್ನು ಕಳೆದುಕೊಂಡರು, ಅದರೊಡನೆ ಉತ್ತರ ಭಾಗದ ಐರ್ಲೆಂಡ್ನ ಒಕ್ಕೂಟ ಪಾರ್ಟಿಯು ರಾಷ್ಟ್ರೀಯತಾವಾದಿಗಳು ಮತ್ತು ವೃತ್ತಿಸಂಘವಾದಿಗಳ ನಡುವೆ ಅಧಿಕಾರದ ಸಮತೋಲನವನ್ನು ಪಡೆದುಕೊಂಡರು. ಈ ಸ್ಥಾನವು 2001 ಮತ್ತು 2005ರ ಮಂಡಳಿ ಚುನಾವಣೆಯಲ್ಲಿ ಧೃಢಪಡಿಸಲ್ಪಟ್ಟಿತು. ಅದರ ನಂತರ ಅದು ನಾಲ್ಕು ರಾಷ್ಟ್ರೀಯತಾವಾದಿ ಪುರಸಭಾಧ್ಯಕ್ಷರನ್ನು ಹೊಂದಿತ್ತು, ಇಬ್ಬರು ಅಧ್ಯಕ್ಷರು ಸಾಮಾಜಿಕ ಪ್ರಜಾಪ್ರಭುತ್ವ ಮತ್ತು ಕಾರ್ಮಿಕ ಪಕ್ಷ (ಎಸ್ಡಿಎಲ್ಪಿ) ಮತ್ತು ಇಬ್ಬರು ಅಧ್ಯಕ್ಷರು ಸಿನ್ ಫಿನ್ ಪಕ್ಷದವರಾಗಿದ್ದರು. 1996ರಲ್ಲಿ, ಆಯ್ಕೆಯಾಗಲ್ಪಟ್ಟ ಅಲ್ಬನ್ ಮ್ಯಾಗಿನ್ನೆಸ್ ಇವರು ಬೆಲ್ಫಾಸ್ಟ್ನ ಮೊದಲ ರಾಷ್ಟ್ರೀಯತಾವಾದಿ ಲಾರ್ಡ್ ಮೆಯರ್ ಆಗಿದ್ದರು.
2005ರ ಸ್ಥಳೀಯ ಸರಕಾರದ ಚುನಾವಣೆಯಲ್ಲಿ, ಬೆಲ್ಫಾಸ್ಟ್ ಮತದಾರರು 51 ಪುರಸಭಾ ಸದಸ್ಯರನ್ನು ಬೆಲ್ಫಾಸ್ಟ್ ಸಿಟಿ ಕೌನ್ಸಿಲ್ಗೆ ಈ ಕೆಳಗೆ ನಮೂದಿಸಲ್ಪಟ್ಟ ರಾಜಕೀಯ ಪಕ್ಷಗಳಿಂದ ಆಯ್ಕೆ ಮಾಡಿದರು: 15 ಡೆಮೊಕ್ರೆಟಿಕ್ ಯುನಿಯನಿಸ್ಟ್ ಪಾರ್ಟಿ (ಪ್ರಜಾಪ್ರಭುತ್ವ ವೃತ್ತಿಸಂಘವಾದಿ ಪಕ್ಷ, ಯುಡಿಪಿ), 14 ಸಿನ್ ಫೀನ್, 8 ಎಸ್ಡಿಎಲ್ಪಿ, 7 ಅಲ್ಸ್ಟರ್ ವೃತ್ತಿಸಂಘವಾದಿ ಪಕ್ಷ (ಯುಯುಪಿ), 4 ಸಂಯುಕ್ತ ಒಕ್ಕೂಟ, 2 ಪ್ರೊಗ್ರೆಸೀವ್ ವೃತ್ತಿಸಂಘವಾದಿ ಪಕ್ಷ (ಪಿಯುಪಿ), ಮತ್ತು 1 ಸ್ವತಂತ್ರ ಪಕ್ಷ (ಯುಯುಪಿ ಅಧಿಕಾರವನ್ನು ಪಡೆದುಕೊಳ್ಳುವ ಒಬ್ಬ ಮೊದಲಿನ ಡೆಪ್ಯುಟಿ ಮೇಯರ್ನು ಪ್ರಸ್ತುತದಲ್ಲಿಲ್ಲದ ನಿಷ್ಠಾವಂತ ಅರೆಸೈನಿಕ ಸಂಬಂಧಿತ-ಅಲ್ಸ್ಟರ್ ಪ್ರಜಾಪ್ರಭುತ್ವ ಪಕ್ಷದ ಸದಸ್ಯನಾಗಿದ್ದನು).[೨೯]
ಉತ್ತರ ಭಾಗದ ಐರ್ಲೆಂಡ್ನ ರಾಜಧಾನಿ ನಗರವಾಗಿ ಬೆಲ್ಫಾಸ್ಟ್ ಉತ್ತರ ಐರ್ಲೆಂಡ್ಗೆ ಅಧಿಕಾರ ವಹಿಸಲ್ಪಟ್ಟ ಶಾಸಕಾಂಗ ಸ್ಟೊರ್ಮೊಂಟ್ನಲ್ಲಿ ಉತ್ತರ ಐರ್ಲೆಂಡ್ ಸಂಸತ್ತಿನ ಆಶ್ರಯ ತಾಣವಾಗಿತ್ತು. ಬೆಲ್ಫಾಸ್ಟ್ ನಾಲ್ಕು ಉತ್ತರ ಭಾಗದ ಐರ್ಲೆಂಡ್ ಸಂಸತ್ತು ಹಾಗೂ ಯುಕೆ ಸಂಸದೀಯ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸಲ್ಪಟ್ಟಿದೆ: ಉತ್ತರ ಬೆಲ್ಫಾಸ್ಟ್, ಪಶ್ಚಿಮ ಬೆಲ್ಫಾಸ್ಟ್, ದಕ್ಷಿಣ ಬೆಲ್ಫಾಸ್ಟ್ ಮತ್ತು ಪೂರ್ವ ಬೆಲ್ಫಾಸ್ಟ್. ಎಲ್ಲಾ ನಾಲ್ಕು ಕ್ಷೇತ್ರಗಳು ಕೆಸಲ್ರೀಗ್, ಲಿಸ್ಬರ್ನ್ ಮತ್ತು ನ್ಯೂಟೌನ್ಅಬೇ ಜಿಲ್ಲೆಗಳ ಭಾಗಗಳನ್ನು ಒಳಗೊಳ್ಳುವುದಕ್ಕೆ ನಗರದ ಮಿತಿಯ ಹೊರಗಡೆ ವಿಸ್ತರಿಸಲ್ಪಟ್ಟಿವೆ. 2007ರಲ್ಲಿ ಉತ್ತರ ಐರ್ಲೆಂಡ್ ಸಂಸತ್ತಿನ ಚುನಾವಣೆಯಲ್ಲಿ, ಬೆಲ್ಫಾಸ್ಟ್ ಶಾಸಕಾಂಗ ಸಂಸತ್ತಿನ ಸದಸ್ಯರುಗಳಲ್ಲಿ (ಎಮ್ಎಲ್ಎ ಗಳು) 24 ಸದಸ್ಯರುಗಳನ್ನು ಆಯ್ಕೆ ಮಾಡಿತು, ಅದರಲ್ಲಿ ಪ್ರತಿ ಚುನಾವಣಾ ಕ್ಷೇತ್ರದಿಂದ 6 ಸದಸ್ಯರುಗಳಿದ್ದರು. ಎಮ್ಎಲ್ಎ ಬ್ರೇಕ್ಡೌನ್ 8 ಸಿನ್ ಫಿನ್, 6 ಡಿಯುಪಿ, 4 ಎಸ್ಡಿಎಲ್ಪಿ, 3 ಯುಯುಪಿ, 2 ಒಕ್ಕೂಟ ಸಂಘ, ಮತ್ತು 1 ಪಿಯುಪಿ ಗಳನ್ನು ಒಳಗೊಂಡಿತ್ತು.[೩೦] 2005ರ ಯುಕೆ ಸಾಮಾನ್ಯ ಚುನಾವಣೆಯಲ್ಲಿ, ಬೆಲ್ಫಾಸ್ಟ್ ಲಂಡನ್ನ ವೆಸ್ಟ್ಮಿನಿಸ್ಟರ್ನಲ್ಲಿ ಹೌಸ್ ಆಫ್ ಕಾಮನ್ಸ್ಗೆ ಪ್ರತಿಯೊಂದು ಚುನಾವಣಾ ಕ್ಷೇತ್ರದಿಂದ ಒಂದು ಎಮ್ಪಿಯನ್ನು (ಪಾರ್ಲಿಮೆಂಟ್ ಸದಸ್ಯ) ಆಯ್ಕೆ ಮಾಡಿತು. ಇದು 1 ಡಿಯುಪಿ, 1 ಎಸ್ಡಿಎಲ್ಪಿ, 1 ಒಕ್ಕೂಟ ಮತ್ತು 1 ಸಿನ್ ಫೀನ್ಗಳನ್ನು ಒಳಗೊಂಡಿತ್ತು.[೩೧]
ಬೆಲ್ಫಾಸ್ಟ್ ಪಟ್ಟಣಕ್ಕೆ ಲ್ಯಾಟಿನ್ ಸೂಕ್ತಿ ಇದೆ "[Pro tanto quid retribuamus] Error: {{Lang}}: text has italic markup (help)". ಇದು ಲ್ಯಾಟಿನ್ ವಲ್ಗೇಟ್ ಬೈಬಲ್ನಲ್ಲಿನ ಪವಿತ್ರಗೀತೆ 116 ಚರಣ 12 ದಿಂದ ತೆಗೆದುಕೊಳ್ಳಲ್ಪಟ್ಟಿದೆ ಮತ್ತು ಇದು ಶಾಬ್ದಿಕ ವ್ಯಾಖ್ಯಾನವಾಗಿ ಈ ರೀತಿಯಾಗಿ ಹೇಳಲ್ಪಡುತ್ತದೆ "ಈ (ಪ್ರೋ ) ಎಲ್ಲದಕ್ಕೆ(ಟ್ಯಾಂಟೊ ) ನಾವು ಯಾವ ರೀತಿ (ಕ್ವಿಡ್ ) ಪ್ರತಿಕ್ರಿಯಿಸಬಹುದು (ರೆಟ್ರಿಬುಮಸ್ )" ಈ ಚರಣವು (ಪದ್ಯವು) ಭಿನ್ನ ಬೈಬಲ್ಗಳಲ್ಲಿ ಭಿನ್ನವಾಗಿ ಭಾಷಾಂತರಿಸಲ್ಪಟ್ಟಿದೆ (ಅನುವಾದಿಸಲ್ಪಟ್ಟೀದೆ) - ಉದಾಹರಣೆಗೆ "ಭಗವಂತನು ನನಗೆ ನೀಡಿದ ಎಲ್ಲಾ ಅನುಕೂಲಗಳಿಗೆ ಬದಲಾಗಿ ನಾನು ಅವನಿಗೆ ಏನನ್ನು ನೀಡಲಿ?" ಎಂಬುದಾಗಿ ಅನುವಾದಿಸಲ್ಪಟ್ಟಿದೆ.[೩೨] ಅದು "ಆ ಎಲ್ಲಾ ಹೆಚ್ಚಿನ ಅನುಕೂಲತೆಗಳ ಬದಲಾಗಿ, ನಾವು ಏನನ್ನು ವಾಪಸು ನೀಡಬಹುದು?" ಎಂಬುದಾಗಿಯೂ ಕೂಡ ಅನುವಾದಿಸಲ್ಪಟ್ಟಿದೆ.[೩೩] ಕ್ವೀನ್ಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಯೂನಿಯನ್ ರಾಗ್ ವೀಕ್ ಪ್ರಕಟಣೆ ಪಿಟಿಕ್ಯೂ ಇದು ಈ ಸೂಕ್ತಿಯ ಮೊದಲ ಮೂರು ಶಬ್ದಗಳಿಂದ ತನ್ನ ಹೆಸರನ್ನು ತೆಗೆದುಕೊಂಡಿದೆ.
ಪಟ್ಟಣದ ಗೌರವ ಲಾಂಛನಗಳು ಈ ರೀತಿಯಲ್ಲಿ ಪ್ರಕಾಶಮಾನವಾಗಿತ್ತು ಪಾರ್ಟಿ ಪೆರ್ ಫೆಸ್ಸೆ ಅರ್ಗೆಂಟ್ ಅಂಡ್ ಅಝುರಿ, ಇನ್ ಚೀಫ್ ಎ ಪೈಲ್ ವೇರ್ ಅಂಡ್ ಒನ್ ಎ ಕಂಟನ್ ಗೂಲ್ಸ್ ಎ ಬೆಲ್ ಅರ್ಗೆಂಟ್, ಬೇಸ್ ಎ ಶಿಪ್ ವಿದ್ ಸೈಲ್ಸ್ ಸೆಟ್ ಅರ್ಗೆಂಟ್ ಒನ್ ವೇವ್ಸ್ ಆಫ್ ದಿ ಸೀ ಪ್ರೊಪೆ ರ್. ಈ ಕುಲಚಿಹ್ನೆಗಳ ಭಾಷೆಯು ಒಂದು ರಕ್ಷಾಕವಚವು ಎರಡು ಸಮತಲವಾಗಿ ವಿಭಾಗವಾಗಿದೆ ಎಂಬುದಾಗಿ ವರ್ಣಿಸುತ್ತದೆ (ಪಾರ್ಟಿ ಪೆರ್ ಫೆಸ್ಸೆ ). ರಕ್ಷಾಕವಚದ ಮೇಲ್ಭಾಗವು (ಚೀಫ್ ) ಬೆಳ್ಳಿಯದಾಗಿದೆ (ಆರ್ಗೆಂಟ್ ), ಮತ್ತು ಮೃದು ರೋಮವನ್ನು (ವೇರ್ ) ಪ್ರತಿನಿಧಿಸುವ ಒಂದು ಪುನರಾವರ್ತಿತವಾದ ನೀಲಿ-ಮತ್ತು-ಬಿಳಿ ಬಣ್ಣಗಳ ಮಾದರಿಯ ಜೊತೆಗೆ ಕೆಳಕ್ಕೆ-ಮುಖಮಾಡಿರುವ ತ್ರಿಕೋನಾಕೃತಿಯನ್ನು ಹೊಂದಿದೆ (ಎ ಪೈಲ್ ). ಮೇಲ್ಭಾಗದ ಮೂಲೆಯಲ್ಲಿ ಒಂದು ಕೆಂಪು ಚೌಕವೂ ಕೂಡ ಇದೆ (ಎ ಕ್ಯಾಂಟನ್ ಗ್ಯೂಲ್ಸ್ ) ಅದರ ಮೇಲೆ ಒಂದು ಬೆಳ್ಳಿಯ ಘಂಟೆಯಿದೆ. ಘಂಟೆಯು ಇಲ್ಲಿ ಬೆಲ್ಫಾಸ್ಟ್ನ ಮೊದಲ ಉಲಿಕಂತೆಯನ್ನು ಪ್ರತಿನಿಧಿಸುವ "ಕ್ಯಾಂಟಿಂಗ್" (ಅಥವಾ ಪನ್ನಿಂಗ್) ಹೆರಾಲ್ಡಿಯ ಒಂದು ಉದಾಹರಣೆಯಾಗಿದೆ. ರಕ್ಷಾಕವಚದ ಕೆಳಗಿನ ಭಾಗದಲ್ಲಿ (ಇನ್ ಬೇಸ್ ) ಬೆಳ್ಳಿಯ ನೌಕಾಯಾನ ಹಡಗು ಸಮುದ್ರದ (ಪ್ರಾಪರ್ ) ವಾಸ್ತವಿಕ ಬಣ್ಣಗಳಲ್ಲಿ ಚಿತ್ರಿಸಲ್ಪಟ್ಟ ತರಂಗಗಳ ಮೇಲೆ ತೇಲುತ್ತಿರುವಂತೆ ತೋರಿಸಲಾಗಿದೆ. ಬಲಗಡೆಯ ಸಹಾಯಕವೆಂದರೆ (ಅಂದರೆ, ನೋಡುಗನ ಎಡಭಾಗ) ಒಂದು ಸಂಕೋಲೆ ಹಾಕಿದ ತೋಳವಾಗಿದೆ, ಹಾಗೆಯೇ ಎಡಪಾರ್ಶ್ವದ ಬದಿಯ ಸಹಾಯಕವೆಂದರೆ ಒಂದು ಸಮುದ್ರ-ಕುದುರೆಯಾಗಿದೆ. ರಕ್ಷಾಕವಚದ ಮೇಲಿನ ಜುಟ್ಟು ಕೂಡ ಒಂದು ಸಮುದ್ರ-ಕುದುರೆಯಾಗಿದೆ. ಈ ಲಾಂಛನಗಳು ರಾಜ ಜೇಮ್ಸ್ I ನು ಬೆಲ್ಫಾಸ್ಟ್ ನಗರ ಪ್ರಾಮುಖ್ಯತೆಯನ್ನು ನೀಡಲ್ಪಟ್ಟ ಸಂದರ್ಭದಲ್ಲಿ ಅಂದರೆ 1613ಕ್ಕೂ ಹಿಂದಿನ ದಿನಾಂಕಕ್ಕೆ ಸಂಬಂಧಿಸಿದವಾಗಿವೆ. ಮುದ್ರೆಯು ಬೆಲ್ಫಾಸ್ಟ್ ವ್ಯಾಪಾರಿಗಳಿಂದ ಅವರ ಚಿಹ್ನೆಗಳಲ್ಲಿ ಮತ್ತು ವ್ಯಾಪಾರಿ-ನಾಣ್ಯಗಳಲ್ಲಿ ಹದಿನೇಳನೆಯ ಶತಮಾನದುದ್ದಕ್ಕೂ ಬಳಸಲ್ಪಟ್ಟವು.[೩೪] ಸಿಟಿ ಹಾಲ್ನಲ್ಲಿನ ಒಂದು ದೊಡ್ಡ ಬಣ್ಣ ಹಚ್ಚಿದ ಗಾಜು ಕಿಟಕಿ ಲಾಂಛನವನ್ನು ಪ್ರದರ್ಶಿಸುತ್ತದೆ, ಅಲ್ಲಿ ಒಂದು ವಿವರಣೆಯು ಸಮುದ್ರಕುದುರೆ ಮತ್ತು ಹಡಗುಗಳು ಬೆಲ್ಫಾಸ್ಟ್ನ ಮಹತ್ವವುಳ್ಳ ಸಮುದ್ರತೀರದ ಚರಿತ್ರೆಯನ್ನು ಉಲ್ಲೇಖಿಸುತ್ತದೆ ಎಂಬುದಾಗಿ ಸೂಚಿಸುವುತ್ತವೆ. ತೋಳವು ನಗರದ ನಿರ್ಮಾಪಕ, ಸರ್ ಆರ್ಥರ್ ಚೆಚಿಸ್ಟರ್ಗೆ ಗೌರವ ಸಲ್ಲಿಸುವ ಒಂದು ಸಂಕೇತವಾಗಿದೆ, ಮತ್ತು ಅವರ ಸ್ವಂತ ಗೌರವ ಲಾಂಛನವನ್ನು ಉಲ್ಲೇಖಿಸುತ್ತದೆ.[೩೪]
ಬೆಲ್ಫಾಸ್ಟ್ ಐರ್ಲೆಂಡ್ನ ಪೂರ್ವದಿಕ್ಕಿನ ಸಮುದ್ರತೀರದಲ್ಲಿ ನೆಲೆಗೊಂಡಿದೆ 54°35′49″N 05°55′45″W. ನಗರವು ಕೇವ್ ಹಿಲ್ ಅನ್ನು ಒಳಗೊಂಡಂತೆ ಬೆಟ್ಟಗಳ ಸಾಲುಗಳ ಮೂಲಕ ನಾರ್ತ್ವೆಸ್ಟ್ ದಿಕ್ಕಿನ ಕಡೆಗೆ ಬಾಗಲ್ಪಟ್ಟಿದೆ. ಬೆಲ್ಫಾಸ್ಟ್ ನಗರವು ಬೆಲ್ಫಾಸ್ಟ್ ಲೊಗ್ನ ಪಶ್ಚಿಮ ದಿಕ್ಕಿನ ತುದಿಯಲ್ಲಿ ಹಾಗೂ ಲ್ಯೆಗನ್ ನದಿಯ ಕೇಂದ್ರಭಾಗದಲ್ಲಿ ಅದನ್ನು ಒಂದು ಕಾಲಕ್ಕೆ ಜನಪ್ರಿಯವನ್ನಾಗಿ ಮಾಡಿದ ಹಡಗು ನಿರ್ಮಾಣ ಉದ್ದಿಮೆಗೆ ಸರಿಯಾದ ತಾಣವಾಗಿ ನಿರ್ಮಾಣ ಮಾಡಲ್ಪಟ್ಟಿದೆ. 1911/1912ರಲ್ಲಿ ಬೆಲ್ಫಾಸ್ಟ್ನಲ್ಲಿ ಟೈಟಾನಿಕ್ ನಿರ್ಮಾಣವಾಗಲ್ಪಟ್ಟ ಸಂದರ್ಭದಲ್ಲಿ, ಹೆರ್ಲಾಂಡ್ ಮತ್ತು ವೋಲ್ಫ್ ಜಗತ್ತಿನಲ್ಲಿನ ಅತ್ಯಂತ ದೊಡ್ದದಾದ ನೌಕಾಂಗಣವನ್ನು ಹೊಂದಿದ್ದವು.[೩೫] ಬೆಲ್ಫಾಸ್ಟ್ ಉತ್ತರ ಐರ್ಲೆಂಡ್ನ ಪೂರ್ವಭಾಗದ ಕಡಲತೀರಗಳ ಮೇಲೆ ಸ್ಥಾಪಿತವಾಗಿದೆ. ಈ ಉತ್ತರ ಭಾಗದ ಅಕ್ಷಾಂಶದ ಒಂದು ಪರಿಣಾಮವಾಗಿ ಇದು ಕಡಿಮೆ ಚಳಿಗಾಲದ ದಿನಗಳು ಮತ್ತು ದೀರ್ಘ ಅವಧಿಯ ಬೇಸಗೆ ಸಾಯಂಕಾಲಗಳ ಸಂಭ್ರಮವನ್ನು ತನ್ನದಾಗಿಸಿಕೊಂಡಿದೆ. ಚಳಿಗಾಲದ ಅಯನ ಸಂಕ್ರಾಂತಿಯ ಸಮಯದಲ್ಲಿ, ವರ್ಷದ ಅತ್ಯಂತ ಕಡಿಮೆ ಹಗಲಿನ ಅವಧಿಯ ದಿನ, ಸ್ಥಳೀಯ ಸೂರ್ಯಾಸ್ತ 16:00 ಕ್ಕಿಂತ ಮುಂಚೆ ಸಮಾಪ್ತಿಯಾಗುತ್ತದೆ ಹಾಗೆಯೇ ಸೂರ್ಯೋದಯವು ಸರಿಸುಮಾರು 08:45 ಸಮಯಕ್ಕೆ ಆಗಲ್ಪಡುತ್ತದೆ. ಇದು ಜೂನ್ನಲ್ಲಿ ಬೇಸಗೆಯ ಅಯನ ಸಂಕ್ರಾಂತಿಯ ಮೂಲ ಸರಿಹೊಂದಿಸಲ್ಪಡುತ್ತದೆ, ಅ ಸಮಯದಲ್ಲಿ ಸೂರ್ಯನು 22:00 ಸಮಯದ ನಂತರ ಮುಳುಗುತ್ತಾನೆ ಮತ್ತು 05:00 ಕ್ಕೂ ಮುಂಚೆ ಉದಯಿಸುತ್ತಾನೆ.[೩೬]
1994ರಲ್ಲಿ, ಲ್ಯೇಗನ್ಸೈಡ್ ಕಾರ್ಪೋರೇಷನ್ನಿಂದ ಸರಾಸರಿ ನೀರಿನ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಒಂದು ಅಣೆಕಟ್ಟು ನಿರ್ಮಿಸಲ್ಪಟ್ಟಿತು ಆ ಮೂಲಕ ಅಲ್ಲಿ ಶೇಖರಗೊಂಡ ಕೆಸರು ರಾಡಿಯ ನೀರಿನಿಂದಾಗಿ ಆ ನಗರಕ್ಕೆ ಲಬೆಲ್ಫಾಸ್ಟ್ ಎಂಬ ಹೆಸರು ಬಂದಿತು ಎನ್ನಲಾಗಿದೆ. (from Irish: Béal Feirste meaning "The sandy ford at the river mouth").[೧೪] ಬೆಲ್ಫಾಸ್ಟ್ನ ಸ್ಥಳೀಯ ಸರಕಾರದ ಪ್ರಾಂತದ ವ್ಯಾಪ್ತಿಯುಟೆಂಪ್ಲೇಟು:Sq mi to km2 ಆಗಿತ್ತು.[೩೭]
ಫಾರ್ಸೆಟ್ ನದಿಯ ಹೆಸರೂ ಕೂಡ ಈ ಕೆಸರಿನ ಶೇಖರಣೆಗಳ ನಂತರದಲ್ಲಿ ನೀಡಲ್ಪಟ್ಟಿತು (ಐರಿಷ್ ಫೀರ್ಸ್ಟ್ ನಿಂದ ಇದರ ಅರ್ಥವೇನೆಂದರೆ "ಮರಳಿನ ಸ್ಪಿಟ್). ಮೂಲತಃ ಅದು ಈ ದಿನಗಳಿಗಿಂತ ಅತ್ಯಂತ ಪ್ರಮುಖವಾದ ನದಿಯಾಗಿತ್ತು, ಫಾರ್ಸೆಟ್ ನದಿಯು 19 ನೆಯ ಶತಮಾನದ ಮಧ್ಯದ ಅವಧಿಯವರೆಗೆ ಹೈ ಸ್ಟ್ರೀಟ್ನಲ್ಲಿ ಒಂದು ಹಡಗುಕಟ್ಟೆಯನ್ನು ನಿರ್ಮಿಸಿತ್ತು. ನಗರದ ಕೇಂದ್ರ ಭಾಗದಲ್ಲಿನ ಬ್ಯಾಂಕ್ ಸ್ಟ್ರೀಟ್ ಇದು ಬ್ಯಾಂಕ್ ನದಿಗೆ ಉಲ್ಲೇಖಿಸಲ್ಪಡುತ್ತದೆ ಮತ್ತು ಬ್ರಿಜ್ ಸ್ಟ್ರೀಟ್ ಇದು ಮೊದಲಿನ ಫಾರ್ಸೆಟ್ ಬ್ರಿಜ್ಗನ ಒಂದು ತಾಣಕ್ಕೆ ನೀಡಲ್ಪಟ್ಟ ಹೆಸರಾಗಿತ್ತು.[೩೮] ಆದಾಗ್ಯೂ, ಲ್ಯಾಗನ್ ನದಿಯು ನಗರದಲ್ಲಿನ ಅತ್ಯಂತ ಪ್ರಮುಖ ನದಿಯಾಗಿ ಫಾರ್ಸೆಟ್ ನದಿಯನ್ನು ಹಿಂದೆಹಕಿದ್ದರೂ ಕೂಡ, ಫಾರ್ಸೆಟ್ ಪ್ರಸ್ತುತದಲ್ಲಿ ಹೈ ಸ್ಟ್ರೀಟ್ನಡಿಯಲ್ಲಿ ಅಜ್ಞಾತ ಸ್ಥಿತಿಯಲ್ಲಿ ಕ್ಷೀಣಿಸುತ್ತ ಬಂದಿದೆ.
ನಗರವು ಉತ್ತರ ಮತ್ತು ನಾರ್ತ್ವೆಸ್ಟ್ ಭಾಗಗಳ ಮೇಲೆ ಡಿವಿಸ್ ಪರ್ವತ, ಬ್ಲ್ಯಾಕ್ ಪರ್ವತ ಮತ್ತು ಕೇವ್ಹಿಲ್ಗಳನ್ನು ಒಳಗೊಂಡಂತೆ ಒಂದು ಸಾಲು ಬೆಟ್ಟಗಳ ಮೂಲಕ ಪಾರ್ಶ್ವಕ್ಕೆ ವ್ಯಾಪಿಸಲ್ಪಟ್ಟಿದೆ, ಇದು ಜೋನಾಥನ್ ಸ್ವಿಫ್ಟ್ರ ಗುಲಿವರ್ಸ್ ಟ್ರಾವೆಲ್ ಗೆ ಸ್ಪೂರ್ತಿ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ಬೆಲ್ಫಾಸ್ಟ್ನಲ್ಲಿ ಸ್ವಿಫ್ಟ್ ಲೈಮ್ಸ್ಟೋನ್ ಮಾರ್ಗದ ಕೆಳಭಾಗದ ಸಮಿಪದ ಲಿಲ್ಲಿಪುಟ್ ಕಾಟೇಜ್ನಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ, ಅವರು ಕೇವ್ಹಿಲ್ ನಗರವನ್ನು ಸಂರಕ್ಷಿಸುವ ಒಂದು ನಿದ್ರಿಸುತ್ತಿರುವ ರಾಕ್ಷಸ ಎಂಬಂತೆ ಕಂಡುಬರುತ್ತದೆ ಎಂಬುದಾಗಿ ಕಲ್ಪಿಸಿಕೊಂಡರು.[೩೯] ಸ್ಥಳೀಯ ಭಾಷೆಯಲ್ಲಿ ನೆಪೋಲಿಯನ್ನ ಮೂಗು ಎಂದು ಕರೆಯಲ್ಪಡುವ ರಾಕ್ಷಸನ ಮೂಗಿನ ಆಕಾರವು ಅಧಿಕೃತವಾಗಿ ಮ್ಯಾಕ್ಆರ್ಟ್ಸ್ ಫೋರ್ಟ್ ಎಂದು ಕರೆಯಲ್ಪಡುತ್ತದೆ, ಈ ಹೆಸರು ಸಂಭಾವ್ಯವಾಗಿ 16 ನೆಯ ಶತಮಾನದಲ್ಲಿ ಆ ಪ್ರದೇಶವನ್ನು ನಿಯಂತ್ರಿಸುತ್ತಿದ್ದ ನಾಯಕ ಆರ್ಟ್ ಓ-ನೈಲ್ನ ನಂತರದಲ್ಲಿ ನೀಡಲ್ಪಟ್ಟಿತು.[೪೦] ಕೆಸಲ್ರೀಗ್ ಬೆಟ್ಟಗಳು ನಗರದ ಆಗ್ನೇಯ ದಿಕ್ಕಿನಲ್ಲಿ ಕಂಡುಬರುತ್ತವೆ.
ಕವಿ ಹಾಗೂ ಡೌನ್ ಮತ್ತು ಕೊನ್ನೊರ್ನ ಬಿಷಪ್ ಆಗಿದ್ದ ಡಾ. ವಿಲಿಯಮ್ ಫಿಲ್ಬಿನ್ ಬೆಲ್ಫಾಸ್ಟ್ ಬಗ್ಗೆ ಈ ರೀತಿಯಾಗಿ ಬರೆದಿದ್ದಾರೆ: "ಬೆಲ್ಫಾಸ್ಟ್ ನಗರವು ಪರ್ವತಗಳನ್ನು ಗೋಡೆಯಾಗಿಸಿಕೊಂಡ, ಸಮುದ್ರಗಳನ್ನು ಕಂದಕವನ್ನಾಗಿಸಿಕೊಂಡ, ಮತ್ತು ಇತಿಹಾಸದ ನಿಕ್ಷೇಪಗಳ ಬುನಾದಿ ಹೊಂದಿದ ನಗರವಾಗಿದೆ".
ಬೆಲ್ಫಾಸ್ಟ್ ವೈಪರೀತ್ಯಗಳಿಲ್ಲದ ಹವಾಗುಣವನ್ನು ಹೊಂದಿದೆ. ಜುಲೈನಲ್ಲಿ ದಿನನಿತ್ಯದ ಸರಾಸರಿ ಅಧಿಕ ಉಷ್ಣಾಂಶಗಳು 18 °C (64 °F) ಮತ್ತು ಜನವರಿಯಲ್ಲಿ 6 °C (43 °F) ಆಗಿರುತ್ತದೆ. ಬೆಲ್ಫಾಸ್ಟ್ನಲ್ಲಿ ಅಧಿಕ ತಾಪಮಾನದ ದಾಖಲೆಯು 1983 ಜುಲೈ 12ರಂದು 30.8 °C (87.4 °F) ಆಗಿತ್ತು.[೪೧][೪೨] ನಗರವು ಲೇಕ್ ಡಿಸ್ಟ್ರಿಕ್ಟ್ ಅಥವಾ ಸ್ಕಾಟಿಷ್ ಹೈಲ್ಯಾಂಡ್ಗಳಿಗಿಂತ ಕಡಿಮೆ ಪ್ರಮಾಣದಲ್ಲಿ,ಟೆಂಪ್ಲೇಟು:Mm to in ಆದರೆ ಡಬ್ಲಿನ್ ಅಥವಾ ಐರ್ಲೆಂಡ್ನ ಆಗ್ನೇಯ ಸಮುದ್ರತೀರಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಒಂದು ಸರಾಸರಿ ವಾರ್ಷಿಕ ಮಳೆ ಸುರಿತದ ಜೊತೆಗೆ ದಿನಗಳಲ್ಲಿ ಗಣನೀಯ ಪ್ರಮಾಣದ ಅವಕ್ಷೇಪನವನ್ನು ಪಡೆದುಕೊಳ್ಳುತ್ತದೆ (0.01 in/0.25 ಎಮ್ಎಮ್ ಗಿಂತ ಹೆಚ್ಚು).[೪೩] ನಗರ ಹಾಗೂ ಸಮುದ್ರತೀರದ ಪ್ರದೇಶವಾದ ಬೆಲ್ಫಾಸ್ಟ್ ವಿಶಿಷ್ಟವಾಗಿ 10 ದಿನಗಳಿಗಿಂತ ಕಡಿಮೆ ಮಂಜಿನಿಂದ ಆವೃತವಾಗಿರುತ್ತದೆ.[೪೧] ನಗರವು ಚಳಿಗಾಲದ ತಿಂಗಳುಗಳಲ್ಲಿ ಅದರ ಉನ್ನತ ಮಟ್ಟದ ಅಕ್ಷಾಂಶ ರೇಖೆಯಾಗಿ ಎಷ್ಟು ಪ್ರಮಾಣದ ಉಷ್ಣಾಂಶವನ್ನು ಪಡೆದುಕೊಳ್ಳುತ್ತದೆ ಎಂಬುದಕ್ಕೂ ಕೂಡ ಹೆಸರುವಾಸಿಯಾಗಲ್ಪಟ್ಟಿದೆ. ಫೆಬ್ರವರಿಯಲ್ಲಿ, ಉಷ್ಣಾಂಶಗಳು 17 °C ತಲುಪುತ್ತವೆ, ಅದೇ ಸಮಯದಲ್ಲಿ ರಷಿಯಾ ಮತ್ತು ಕೆನಡಾದಲ್ಲಿ ಇದು ~-45 °C ಇರುತ್ತದೆ. ಬೇಸಿಗೆ ಕಾಲದಲ್ಲಿ ಹೆಚ್ಚಿನ ದಿನಗಳಲ್ಲಿ ಉಷ್ಣಾಂಶಗಳು 27 °C (80 °F) ಹಂತಕ್ಕೆ ತಲುಪುವುದು ಅಸಾಮಾನ್ಯವೇನಲ್ಲ.[೪೪] ಐರ್ಲೆಂಡ್ನಲ್ಲಿ ಪ್ರಚಲಿತದಲ್ಲಿರುವ ಸ್ಥಿರವಾದ ತೇವಾಂಶವನ್ನೊಳಗೊಂಡ ಹವಾಮಾನವು ಅದು ಹೆಚ್ಚಿನ 20s (80–85 °F)ದಲ್ಲಿದ್ದಾಗ ಅಹಿತವಾಗಿ ತೋರುತ್ತದೆ, ಅದಕ್ಕೂ ಹೆಚ್ಚಾಗಿ ಯುರೋಪ್ನ ಇತರ ಭಾಗಗಳಲ್ಲಿನ ಅಧಿಕ ಉಷ್ಣಾಂಶದಲ್ಲಿನ ಅದೇ ರೀತಿಯಾದ ತಾಪಮಾನಗಳು ಅಹಿತವಾಗಿ ಕಂಡುಬರುತ್ತವೆ.
Belfastದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
Record high °C (°F) | 13 (55) |
14 (57) |
19 (66) |
21 (70) |
26 (79) |
28 (82) |
31 (88) |
28 (82) |
26 (79) |
21 (70) |
16 (61) |
14 (57) |
31 (88) |
ಅಧಿಕ ಸರಾಸರಿ °C (°F) | 6 (43) |
7 (45) |
9 (48) |
12 (54) |
15 (59) |
18 (64) |
18 (64) |
18 (64) |
16 (61) |
13 (55) |
9 (48) |
7 (45) |
12 (54) |
ಕಡಮೆ ಸರಾಸರಿ °C (°F) | 2 (36) |
2 (36) |
3 (37) |
4 (39) |
6 (43) |
9 (48) |
11 (52) |
11 (52) |
9 (48) |
7 (45) |
4 (39) |
3 (37) |
6 (43) |
Record low °C (°F) | −13 (9) |
−12 (10) |
−12 (10) |
−4 (25) |
−3 (27) |
−1 (30) |
4 (39) |
1 (34) |
−2 (28) |
−4 (25) |
−6 (21) |
−11 (12) |
−13 (9) |
Average precipitation mm (inches) | 80 (3.15) |
52 (2.05) |
50 (1.97) |
48 (1.89) |
52 (2.05) |
68 (2.68) |
94 (3.7) |
77 (3.03) |
80 (3.15) |
83 (3.27) |
72 (2.83) |
90 (3.54) |
846 (33.31) |
Source: [೪೨] |
ಬೆಲ್ಫಾಸ್ಟ್ 19 ನೆಯ ಶತಮಾನದ ಸಮಯದಲ್ಲಿ ಒಂದು ಮಾರುಕಟ್ಟೆ ನಗರದಿಂದ ಒಂದು ಔದ್ಯಮಿಕ ನಗರವಾಗಿ (ಕೈಗಾರಿಕಾ ಪಟ್ಟಣ) ತ್ವರಿತವಾಗಿ ಬೆಳವಣಿಗೆ ಹೊಂದಿತು. ಈ ಕಾರಣದಿಂದ, ಇದು ಮ್ಯಾಂಚೆಸ್ಟರ್ ಅಥವಾ ಬರ್ಮಿಂಗ್ಹ್ಯಾಮ್ಗಳಂತಹ ಇತರ ತುಲನಾತ್ಮಕ ನಗರಗಳಿಗಿಂತ ಹೆಚ್ಚಾಗಿ ತಮ್ಮ ತಮ್ಮಲ್ಲೇ ಹೆಚ್ಚಿನ ಅನುಭವವನ್ನು ಪಡೆದುಕೊಂಡ ಹಳ್ಳಿಗಳ ಮತ್ತು ನಗರಗಳ ಕಡಿಮೆ ಪ್ರಮಾಣದ ಸಂಯೋಜನವಾಗಿದೆ. ನಗರವು ಇತರ ಅಡಚಣೆಗಳನ್ನು ಕೊನೆಗೊಳಿಸುತ್ತ, ತನ್ನನ್ನು ಆವರಿಸಿಕೊಂಡಿರುವ ಬೆಟ್ಟಗಳ ಸ್ವಾಭಾವಿಕ ಅಡಚಣೆಗೆ ಹೊರತಾಗಿಯೂ ನಗರವನ್ನು ವಿಸ್ತರಿಸಿದೆ. ಆನಂತರದಲ್ಲಿ, ಈ ವಿಸ್ತರಣೆಗಳು ಕಾರ್ಯರೂಪಕ್ಕೆ ಬಂದ ಹೆದ್ದಾರಿಯ ರಸ್ತೆಗಳು (ಫಾಲ್ಸ್ ರಸ್ತೆ ಅಥವಾ ನ್ಯೂಟೌನರ್ಡ್ಸ್ ರಸ್ತೆಗಳಂತಹ) ನ್ಯೂಕ್ಲಿಯೇಟೆಡ್ ನೆಲೆಸುವಿಕೆಗಳಿಗಿಂತ ಹೆಚ್ಚಾಗಿ ನಗರದ ಪ್ರಾಂತಗಳನ್ನು ವ್ಯಾಖ್ಯಾನಿಸುವಲ್ಲಿ ಪ್ರಮುಖವಾಗಲ್ಪಟ್ಟವು. ನಗರದ ಕೇಂದ್ರ ಭಾಗವನ್ನು ಒಳಗೊಂಡಂತೆ, ನಗರವು ಉತ್ತರ ಬೆಲ್ಫಾಸ್ಟ್, ಪೂರ್ವ ಬೆಲ್ಫಾಸ್ಟ್, ದಕ್ಷಿಣ ಬೆಲ್ಫಾಸ್ಟ್ ಮತ್ತು ಪಶ್ಚಿಮ ಬೆಲ್ಫಾಸ್ಟ್ ಎಂಬುದಾಗಿ ಐದು ವಿಭಾಗಗಳಾಗಿ ವಿಂಗಡಿಸಲ್ಪಡುತ್ತದೆ. ಇವುಗಳಲ್ಲಿ ಪ್ರತಿಯೊಂದು ವಿಭಾಗವೂ ಕೂಡ ಒಂದು ಸಂಸದೀಯ ಚುನಾವಣಾ ಕ್ಷೇತ್ರವಾಗಿದೆ . ಬೆಲ್ಫಾಸ್ಟ್ ಗೋಡೆಗಳ ಮೂಲಕ ವಿಂಗಡಿಸಲ್ಪಟ್ಟಿದೆ, ಅದು ಸಾಮಾನ್ಯವಾಗಿ "ಪೀಸ್ ಲೈನ್ಸ್" (ಶಾಂತಿಯ ಗೆರೆಗಳು) ಎಂದು ಕರೆಯಲ್ಪಡುತ್ತದೆ, ಇದು ಆಗಸ್ಟ್ 1969 ರ ನಂತರ ಬ್ರಿಟೀಷ್ ಸೈನ್ಯದಿಂದ ನಿರ್ಮಿಸಲ್ಪಟ್ಟಿತು ಮತ್ತು ಅದು ಈಗಲೂ ಕೂಡ ನಗರದ ಒಳಭಾಗದಲ್ಲಿ ಹದಿನಾಲ್ಕು ಪ್ರಾಂತಗಳನ್ನು ವಿಂಗಡಿಸುತ್ತದೆ. [೪೫] 2008ರಲ್ಲಿ ಶಾಂತಿ ಗೋಡೆಗಳ ತೆಗೆದುಹಾಕುವಿಕೆಗೆ ಒಂದು ಯೋಜನೆಯು ಮಂಡಿಸಲ್ಪಟ್ಟಿತು.[೪೬] ಜೂನ್ 2007ರಲ್ಲಿ, ಒಂದು ಯುಕೆ£16 ಮಿಲಿಯನ್ ಯೋಜನೆಯು ಪ್ರಕಟಪಡಿಸಲ್ಪಟ್ಟಿತು, ಅದು ನಗರದ ಕೇಂದ್ರಭಾಗದಲ್ಲಿ ಬೀದಿಗಳನ್ನು ಮತ್ತು ಸಾರ್ವಜನಿಕ ಪ್ರದೇಶಗಳನ್ನು ಮಾರ್ಪಡಿಸುವ ಮತ್ತು ಪುನರಭಿವೃದ್ಧಿಗೊಳಿಸುವ ಕಾರ್ಯವನ್ನು ಕೈಗೊಂಡಿತು.[೪೭] ನಗರದೊಳಗಿನ ಹೆಚ್ಚಿನ ಹೆದ್ದಾರಿಗಳು (ಗುಣಮಟ್ಟದ ಬಸ್ ಕ್ಯಾರಿಡಾರ್) ಆನ್ಟ್ರಿಮ್ ರಸ್ತೆ, ಶೋರ್ ರಸ್ತೆ, ಹಾಲಿವುಡ್ ರಸ್ತೆ, ನ್ಯೂಟೌನರ್ಡ್ಸ್ ರಸ್ತೆ, ಕ್ಯಾಸಲ್ರೀಗ್ ರಸ್ತೆ, ಕ್ರೀಗಗ್ ರಸ್ತೆ, ಒರ್ಮೆಯೂ ರಸ್ತೆ, ಮ್ಯಾಲೋನ್ ರಸ್ತೆ, ಲಿಸ್ಬರ್ನ್ ರಸ್ತೆ, ಫಾಲ್ಸ್ ರಸ್ತೆ, ಸ್ಪ್ರಿಂಗ್ಫೀಲ್ಡ್ ರಸ್ತೆ, ಶಾಂಕಿಲ್ ರಸ್ತೆ, ಮತ್ತು ಕ್ರುಮ್ಲಿನ್ ರಸ್ತೆಗಳನ್ನು ಒಳಗೊಳ್ಳುತ್ತವೆ.[೪೮]
ಬೆಲ್ಫಾಸ್ಟ್ ನಗರದ ಕೇಂದ್ರ ಭಾಗವು ಎರಡು ಅಂಚೆಸಂಕೇತಗಳಿಂದ ವಿಭಾಗಿಸಲ್ಪಟ್ಟಿದೆ, ಸಿಟಿ ಹಾಲ್ನ ಉತ್ತರಕ್ಕೆ ಇರುವ ಪ್ರದೇಶಕ್ಕೆ BT1 , ಮತ್ತು ಅದರ ದಕ್ಷಿಣದ ಕಡೆಗಿರುವ ಪ್ರದೇಶಕ್ಕೆ BT2 ಎಂಬ ಅಂಚೆಸಂಕೇತಗಳನ್ನು ನೀಡಲಾಗಿದೆ. ಕೈಗಾರಿಕಾ ಪ್ರದೇಶಗಳು ಮತ್ತು ಹಡಗುಕಟ್ಟೆಯ ಪ್ರದೇಶಗಳು BT3 ಅಂಚೆ ಸಂಕೇತವನ್ನು ಪಡೆದುಕೊಳ್ಳುತ್ತವೆ. ಇತರ ವಿಶಾಲವಾದ ಬೆಲ್ಫಾಸ್ಟ್ ಅಂಚೆಸಂಕೇತಗಳು ಗಡಿಯಾರದ ತಿರುಗುವಿಕೆಯ ಕ್ರಮದಲ್ಲಿ ನಿಗದಿಪಡಿಸಲ್ಪಟ್ಟಿವೆ. ಬಿಟಿ ಬೆಲ್ಫಾಸ್ಟ್ ಅನ್ನು ಸೂಚಿಸಿದರೂ ಕೂಡ, ಅದು ಉತ್ತರ ಐರ್ಲೆಂಡ್ನ ಪ್ರದೇಶದುದ್ದಕ್ಕೂ ಬಳಸಲ್ಪಡುತ್ತದೆ.[೪೯]
2001ರಿಂದ, ಪ್ರವಾಸಿಗರ ಹೆಚ್ಚುತ್ತಿರುವ ಸಂಖ್ಯೆಗಳಿಂದ ವರ್ಧಿಸಲ್ಪಟ ನಗರದ ಮಂಡಳಿಯು ಅನೇಕ ಸಂಖ್ಯೆಯಲ್ಲಿ ಸಾಂಸ್ಕೃತಿಕ ವಿಭಾಗಗಳನ್ನು ಅಭಿವೃದ್ಧಿಗೊಳಿಸಿದೆ. ಕ್ಯಾಥಡ್ರಲ್ ವಿಭಾಗ ವು ಸೇಂಟ್ ಆನ್ನೆಸ್ ಕ್ಯಾಥಡ್ರಲ್ (ಐರ್ಲೆಂಡ್ನ ಚರ್ಚ್)ನಿಂದ ತನ್ನ ಹೆಸರನ್ನು ಪಡೆದುಕೊಂಡಿದೆ ಮತ್ತು ನಗರದ ಪ್ರಮುಖ ಸಾಂಸ್ಕೃತಿಕ ಪ್ರದೇಶದ ಅಧಿಕಾರವನ್ನು ತೆಗೆದುಕೊಂಡಿದೆ.[೫೦] ಅದು ವಾರ್ಷಿಕ ಗೋಚರ ಮತ್ತು ಕಲೆಯ ಹಬ್ಬಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ.
ಕಸ್ಟಮ್ ಹೌಸ್ ಸ್ಕ್ವೇರ್ ಇದು ಉಚಿತ ಸಂಗೀತ ಕಚೇರಿಗಳಿಗೆ ಹಾಗೂ ಬೀದಿ ಮನೋರಂಜನೆಗಳಿಗೆ ನಗರದ ಪ್ರಮುಖ ಹೊರಾಂಗಣದ ಸ್ಥಳವಾಗಿದೆ. ಗೀಲ್ಟಾಚ್ಟ್ ವಿಭಾಗ ಇದು ಪಶ್ಚಿಮ ಬೆಲ್ಫಾಸ್ಟ್ನಲ್ಲಿನ ಫಾಲ್ಸ್ ರಸ್ತೆಯ ಸುತ್ತಮುತ್ತಲಿನಲ್ಲಿರುವ ಒಂದು ಪ್ರದೇಶವಾಗಿದೆ, ಅದು ಐರ್ಲೆಂಡ್ ದೇಶದ ಭಾಷೆಯ ಬಳಕೆಯನ್ನು ಪ್ರಚೋದಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ.[೫೧] ದಕ್ಷಿಣ ಬೆಲ್ಫಾಸ್ಟ್ನ ಕ್ವೀನ್ಸ್ ಕ್ವಾರ್ಟರ್ ಕ್ವೀನ್ಸ್ ವಿಶ್ವವಿದ್ಯಾಲಯದ ನಂತರದಲ್ಲಿ ನೀಡಲ್ಪಟ್ಟ ಹೆಸರಾಗಿದೆ. ಆ ಪ್ರದೇಶವು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿದೆ ಮತ್ತು ಅದು ಕ್ವೀನ್ಸ್ನ ಪ್ರತಿ ಶರತ್ಕಾಲದ ಸಮಯದಲ್ಲಿ ವಾರ್ಷಿಕ ಬೆಲ್ಫಾಸ್ಟ್ ಹಬ್ಬವನ್ನು ನಡೆಸುತ್ತದೆ. ಅದು ಸಸ್ಯವಿಜ್ಞಾನದ ಉದ್ಯಾನವನಗಳ ಮತ್ತು ಅಲ್ಸ್ಟರ್ ಮ್ಯೂಸಿಯಮ್ಗಳ ಆವಾಸ ಸ್ಥಾನವಾಗಿದೆ, ಅದು ಪ್ರಮುಖ ಪುನರ್ಬೆಳವಣಿಗೆಯ ನಂತರದಲ್ಲಿ 2009 ರಲ್ಲಿ ಪುನಃ ತೆರೆಯಲ್ಪಟ್ಟಿತು.[೫೨] ದ ಗೊಲ್ಡೆನ್ ಮೈಲ್ ಇದು ಬೆಲ್ಫಾಸ್ಟ್ ಸಿಟಿ ಹಾಲ್ ಮತ್ತು ಕ್ವೀನ್ಸ್ ವಿಶ್ವವಿದ್ಯಾಲಯದ ನಡುವಣ ಮೈಲ್ಗೆ ನೀಡಲ್ಪಟ್ಟ ಹೆಸರಾಗಿದೆ. ಡಬ್ಲಿನ್ ರೋಡ್, ಗ್ರೇಟ್ ವಿಕ್ಟೋರಿಯಾ ಸ್ಟ್ರೀಟ್, ಶಾಫ್ಟ್ಸ್ಬರಿ ಸ್ಕ್ವೇರ್ ಮತ್ತು ಬ್ರಾಡ್ಬರಿ ಪ್ಲೇಸ್ ಇವುಗಳನ್ನು ಒಳಗೊಂಡ ಇದು ನಗರದಲ್ಲಿನ ಅತ್ಯಂತ ಒಳ್ಳೆಯ ಬಾರ್ ಮತ್ತು ಉಪಹಾರ ಗೃಹಗಳನ್ನು ಒಳಗೊಂಡಿದೆ.[೫೩] 1998ರಲ್ಲಿನ ಗುಡ್ ಫ್ರೈಡೆ ಒಪ್ಪಂದದ ನಂತರದಿಂದ, ಹತ್ತಿರದಲ್ಲಿನ ಲಿಸ್ಬರ್ನ್ ರಸ್ತೆಯು ನಗರದ ಅತ್ಯಂತ ಉತ್ಕೃಷ್ಟವಾದ ವ್ಯಾಪಾರಿ ಬೀದಿಯಾಗಿ ಅಭಿವೃದ್ಧಿ ಹೊಂದಲ್ಪಟ್ಟಿತು.[೫೪][೫೫] ಅಂತಿಮವಾಗಿ, ಟೈಟಾನಿಕ್ ಕ್ವಾರ್ಟರ್ ಇದು ಮುಂಚೆ ಕ್ವೀನ್ಸ್ ಐಲ್ಯಾಂಡ್ ಎಂದು ಕರೆಯಲ್ಪಡುತ್ತಿದ್ದ ಬೆಲ್ಫಾಸ್ಟ್ ಬಂದರಿನ ಪಾರ್ಶ್ವದಲ್ಲಿರುವ 0.75 km2 (0 sq mi) ಸುಧಾರಿತ ಭೂಮಿಯನ್ನು ಒಳಗೊಳ್ಳುತ್ತದೆ. ಅದು ಇಲ್ಲಿ 1912 ರಲ್ಲಿ ನಿರ್ಮಿಸಲ್ಪಟ್ಟ ಟೈಟಾನಿಕ್ ಹಡಗಿನ ನಂತರ ನೀಡಲ್ಪಟ್ಟ ಹೆಸರಾಗಿತ್ತು,[೩೫] ಮುಂಚಿನ ಕೆಲವು ನೌಕಾಂಗಣ ಪ್ರದೇಶಗಳನ್ನು "ಯುರೋಪ್ನಲ್ಲಿನ ಒಂದು ಅತ್ಯಂತ ದೊಡ್ಡದಾದ ನದೀತೀರಪ್ರದೇಶವಾಗಿ ಅಭಿವೃದ್ಧಿಗೊಳಿಸುವ" ಕಾರ್ಯಗಳು ಪ್ರಾರಂಭವಾಗಲ್ಪಟ್ಟವು.[೫೬] ಈ ಯೋಜನೆಗಳು ವಸತಿಗೃಹಗಳ ನಿರ್ಮಾಣ, ಒಂದು ನದಿಯಬದಿಗಿನ ಮನೋರಂಜನ ಪ್ರಾಂತ, ಮತ್ತು ಒಂದು ಪ್ರಮುಖ ಟೈಟಾನಿಕ್-ಕಲ್ಪನೆಯ ಮ್ಯೂಸಿಯಮ್ (ಸಂಗ್ರಹಾಲಯ) ಮುಂತಾದವುಗಳನ್ನು ಒಳಗೊಂಡಿದ್ದವು.[೫೬]
ಬೆಲ್ಫಾಸ್ಟ್ ನಗರದಲ್ಲಿರುವ ಕಟ್ಟಡಗಳ ವಾಸ್ತು ಶೈಲಿಯು ಎಡ್ವರ್ಡಿಯನ್ ಶೈಲಿಯಲ್ಲಿರುವ ಸಿಟಿ ಹಾಲ್ ಮತ್ತು ಆಧುನಿಕ ಶೈಲಿಯ ವಾಟರ್ಫ್ರಂಟ್ ಹಾಲ್ ರೀತಿಯ ಕಟ್ಟಡಗಳನ್ನೂ ಹೊಂದಿದೆ. ನಗರದಲ್ಲಿರುವ ಲ್ಯಾಂಡ್ಮಾರ್ಕ್ ಕಟ್ಟಡಗಳೆಂದು ಪರಿಚಿತವಾಗಿರುವ ವಿಕ್ಟೋರಿಯನ್ ಕಾಲದ ಕಟ್ಟಡಗಳಾದ ಬೆಲ್ಫಾಸ್ಟ್ನ ಕ್ವೀನ್ಸ್ ವಿಶ್ವವಿದ್ಯಾಲಯದಲ್ಲಿರುವ ಲಾನ್ಯನ್ ಬಿಲ್ಡಿಂಗ್ ಮತ್ತು ಲಿನೆನ್ ಹಾಲ್ ಲೈಬ್ರರಿಗಳು ಸರ್ ಚಾರ್ಲ್ಸ್ ಲಾನ್ಯನ್ ಅವರಿಂದ ವಿನ್ಯಾಸಮಾಡಲ್ಪಟ್ಟವುಗಳಾಗಿವೆ.
1888ರಲ್ಲಿ ರಾಣಿ ವಿಕ್ಟೋರಿಯಾ ಅವರಿಂದ ಅಂಗೀಕೃತವಾದ ಸಿಟಿಹಾಲ್ ನಿರ್ಮಾಣ 1906ರಲ್ಲಿ ಪೂರ್ಣಗೊಂಡಿತು. ಇದನ್ನು ಬೆಲ್ಫಾಟ್ ನಗರದ ಪ್ರತಿಷ್ಠೆಯನ್ನು ತೋರ್ಪಡಿಸುವ ಸಲುವಾಗಿ ನಿರ್ಮಾಣ ಮಾಡಲಾಯಿತು. ಭಾರತದ ಕಲ್ಕತ್ತಾದಲ್ಲಿರುವ ವಿಕ್ಟೊರಿಯಾ ಮೆಮೊರಿಯಲ್ ಹಾಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿಯ ಡರ್ಬನ್ ಸಿಟಿಹಾಲ್ ಇವು ಎಡ್ವರ್ಡೇರಿಯನ್ ವಾಸ್ತುವಿನ್ಯಾಸದ ಪ್ರಭಾವಕ್ಕೊಳಗಾದ ಕಟ್ಟಡಗಳಾಗಿವೆ.[೫೭][೫೮] ಡರ್ಬನ್ ಸಿಟಿ ಹಾಲ್ನ ಗುಮ್ಮಟವು 173 ಪೂಟ್ (53 m) ಎತ್ತರವಿದ್ದು ಈ ಕಟ್ಟದದ ಬಾಗಿಲ ಮೇಲೆ " ಹಿಬರ್ನಿಯಾ ಪಟ್ಟಣವು ನಗರದ ಕಲೆ ಮತ್ತು ವಾಣಿಜ್ಯ ವ್ಯವಹಾರಕ್ಕೆ ಪ್ರೋತ್ಸಾಹ ನೀಡುತ್ತದೆ" ಎಂದು ಬರೆಯಲಾಗಿದೆ.[೫೯] ಈ ಹಿಂದೆ ಬ್ಯಾಂಕುಗಳೆಂದು ಪರಿಚಿತವಾಗಿದ್ದ ನಗರದಲ್ಲಿರುವ ವೈಭವೋಪೇತ ಎರಡು ಕಟ್ಟಡಗಳಲ್ಲಿ 1860ರಲ್ಲಿ ನಿರ್ಮಾಣವಾದ ಉಲ್ಸ್ಟರ್ ಬ್ಯಾಂಕ್ (ವಾರ್ನಿಂಗ್ ಸ್ಟ್ರೀಟ್) ಮತ್ತು 1769ರಲ್ಲಿ ನಿರ್ಮಾಣವಾದ ನಾರ್ಥನ್ ಬ್ಯಾಂಕ್ (ಡೊನ್ಗಾಲ್ ಸ್ಟ್ರೀಟ್) ಮುಖ್ಯವಾದವುಗಳಾಗಿವೆ. ಚಿಚೆಸ್ಟರ್ ಸ್ಟ್ರೀಟ್ನಲ್ಲಿರುವ ದಿ ರಾಯಲ್ ಕೋರ್ಟ್ಸ್ ಆಫ್ ಜಸ್ಟಿಸ್ ಕಟ್ಟಡವು ಉತ್ತರ ಐರ್ಲ್ಯಾಂಡ್ನ ಸುಪ್ರಿಮ್ ಕೊರ್ಟ್ನ ಮುಖ್ಯ ಕಟ್ಟಡವಾಗಿತ್ತು. ಬೆಲ್ಫಾಸ್ಟ್ನ ಅತ್ಯಂತ ಹಳೆಯ ಕಟ್ಟಡಗಳು ಕೆಥೆಡ್ರಲ್ ಕ್ವಾರ್ಟರ್ ಏರಿಯಾದಲ್ಲಿ ಕಂಡುಬರುತ್ತವೆ. ಈಗ ಇದನ್ನು ನಗರದ ಅತ್ಯಂತ ಪ್ರಸಿದ್ಧಿಯ ಸಾಂಸ್ಕೃತಿಕ ಪ್ರದೇಶವಾಗಿ ಬೆಳವಣಿಗೆಯಾಗಿದೆ ಹಾಗೂ ಪ್ರವಾಸಿ ಆಕರ್ಷಣೆಯ ಪ್ರಮುಖ ಪ್ರದೇಶವಾಗಿ ಗುರುತಿಸಿಕೊಂಡಿದೆ.[೫೦] 262 ft (80 m) ಎತ್ತರ ಹಾಗೂ ಸುಮಾರು 23 ಅಂತಸ್ತುಗಳಿರುವ ವಿಂಡ್ಸರ್ ಹೌಸ್ (ವಿಶಿಷ್ಠವಾದ ವಿನ್ಯಾಸವುಳ್ಳದ್ದು) ಐರ್ಲ್ಯಾಂಡ್ನಲ್ಲಿಯ ಅತ್ಯಂತ ಎತ್ತರದ ಕಟ್ಟಡಗಳಲ್ಲಿ ಎರಡನೆಯದಾಗಿದೆ.[೬೦] ಹೆಚ್ಚಿನ ಎತ್ತರದ ಒಬೆಲ್ ಟವರ್ನ ನಿರ್ಮಾಣ ಕಾರ್ಯವು ಈಗಾಗಲೇ ಪ್ರಾರಂಭಗೊಂಡಿದ್ದು, ನಿರ್ಮಾಣ ಕಾರ್ಯ ನಡೆಯುತ್ತಿರುವ ಈ ಹಂತದಲ್ಲಿಯೇ ಅದು ವಿಂಡ್ಸರ್ ಹೌಸ್ನ ಎತ್ತರವನ್ನು ಮೀರಿಸಿದೆ. 2007ರಲ್ಲಿ, ಔರೊರ ಕಟ್ಟಡ ನಿರ್ಮಾಣದ ಯೋಜನೆಯನ್ನು ಅನುಮೋದಿಸಲಾಯಿತು. 37 ಮಹಡಿ ಹಾಗೂ 358 ft (109 m) ಎತ್ತರವಿರುವ ಈ ಕಟ್ಟಡವು ಈ ಹಿಂದಿನ ಎರಡೂ ಕಟ್ಟಡಗಳ ಎತ್ತರವನ್ನು ಮೀರಿಸುವಂತಹದ್ದಾಗಿದೆ.[೬೧]
ಗ್ರೇಟ್ ವಿಕ್ಟೋರಿಯಾ ಸ್ಟ್ರೀಟ್ನಲ್ಲಿರುವ 1876ರಲ್ಲಿ ಜೊಸೆಫ್ ಆಂಡರ್ಸನ್ ಅವರಿಂದ ವಿನ್ಯಾಸಗೊಳಿಸಲ್ಪಟ್ಟ ಸುಂದರವಾಗಿ ಅಲಂಕಾರಗೊಂಡಿರುವ ಕ್ರೌನ್ ಲಿಕ್ಕರ್ ಸೆಲೂನ್, ನ್ಯಾಶನಲ್ ಟ್ರಸ್ಟ್ ಒಡೆತನಕ್ಕೊಳಪಟ್ಟ ಯುಕೆಯಲ್ಲಿರುವ ಏಕೈಕ ಬಾರ್ ಆಗಿದೆ. ಜೇಮ್ಸ್ ಮ್ಯಾಸನ್ ಮುಖ್ಯ ಪಾತ್ರದಲ್ಲಿದ್ದ ಅತ್ಯುತ್ತಮ ಚಲನಸಿತ್ರ ಒಡ್ ಮ್ಯಾನ್ ಔಟ್ (Odd Man Out) ಚಲನಚಿತ್ರವನ್ನು ಚಿತ್ರೀಕರಿಸಿದ ಮುಖ್ಯ ಸ್ಥಳವಾದ ನಂತರದಲ್ಲಿ ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಖ್ಯಾತಿಯನ್ನು ಪಡೆದುಕೊಂಡಿತು.[೬೨] ಕ್ರೌನ್ ಬಾರ್ನಲ್ಲಿಯ ಉಪಹಾರ ಗೃಹದ ವಿನ್ಯಾಸವು ಮೊದಲು ಬೆಲ್ಫಾಸ್ಟ್ನಲ್ಲಿ ನಿರ್ಮಾಣ ಮಾಡಲಾದ ಟೈಟಾನಿಕ್ ರೀತಿಯದ್ದೇ ವೈಭವೋಪೇತ ಹಡಗಾಗಿದ್ದ ಬ್ರಿಟಾನಿಕಾಕ್ಕಾಗಿ ಮಾಡಿದ ವಿನ್ಯಾಸವಾಗಿತ್ತು.[೫೯] ಹರ್ಲ್ಯಾಂಡ್ ಮತ್ತು ವುಲ್ಫ್ ಶಿಫ್ಯಾರ್ಡ್ಗಳು ಈಗ ಪ್ರಪಂಚದ ಅತಿದೊಡ್ಡ ಸ್ಥಬ್ಧ ಹಡಗುಕಟ್ಟೆಗಳಾಗಿವೆ.[೬೩] ಇಲ್ಲಿ ಅತಿ ದೊಡ್ಡ ಕ್ರೇನ್ಗಳು, ಸ್ಯಾಮ್ಸನ್ ಮತ್ತು ಗೋಲಿಯಾತ್ಗಳು ಬೆಲ್ಫಾಸ್ಟ್ನ ಆಕಾಶಕ್ಕೆ ಮುಖಮಾಡಿ ಸ್ಥಬ್ಧವಾಗಿ ನಿಂತಿರುವುದು ಕಾಣುತ್ತದೆ.
ಪ್ರದರ್ಶನ ಕಲೆಗೆ ಸಂಬಂಧಿಸಿದಂತೆ ವಾಟರ್ ಫ್ರಂಟ್ ಹಾಲ್ ಹಾಗೂ ಒಡಿಸ್ಸಿ ಅರೇನಾ ಒಳಗೊಂಡಂತೆ ಇನ್ನೂ ಅನೇಕ ಸ್ಥಳಗಳನ್ನು ಬೆಲ್ಫಾಸ್ಟ್ ಹೊಂದಿದೆ. ಗ್ರ್ಯಾಂಡ್ ಒಪೆರಾ ಹೌಸ್ ಇದು ವಿಶಿಷ್ಠವಾದ ವಿನ್ಯಾಸ ಹೊಂದಿರುವ ಕಟ್ಟಡವಾಗಿದ್ದು ಇದರ ನಿರ್ಮಾಣ ಕಾರ್ಯವನ್ನು 1985ರಲ್ಲಿ ಮುಕ್ತಾಯಗೊಳಿಸಲಾಯಿತು. ಯುದ್ಧದ ಸಮಯದಲ್ಲಿ ಈ ಕಟ್ಟಡಕ್ಕೆ ಅನೇಕ ಬಾರಿ ಬಾಂಬ್ ದಾಳಿ ಮಾಡಲಾಯಿತು. ಆದರೆ ಈಗ ಅದರ ಹಿಂದಿನ ವೈಭವದ ಸ್ಥಿತಿಗೆ ಅದನ್ನು ಮರಳಿಸಲಾಗಿದೆ.[೬೪] ಖ್ಯಾತ ನಟ ಲಿಯಾಮ್ ನೀಸನ್ ತನ್ನ ವೃತ್ತಿಯನ್ನು ಪ್ರಾರಂಭಿಸಿದ ಲಿರಿಕ್ ಥಿಯೇಟರ್ (ಈಗ ಪುನರ್ ನಿರ್ಮಾಣಗೊಳ್ಳುತ್ತಿದೆ) ದೇಶದಲ್ಲಿ ಯಾವತ್ತೂ ಸಕ್ರೀಯವಾಗಿದ್ದ ಥಿಯೇಟರ್ ಆಗಿದೆ.[೬೫] ಅಲ್ಸ್ಟರ್ ಹಾಲ್ (1859–1862) ಮೊದಲು ವೈಭವೋಪೇತ ನೃತ್ಯಕ್ಕಾಗಿ ನಿರ್ಮಾಣ ಮಾಡಲಾದ ಕಟ್ಟಡವಾಗಿತ್ತು. ಈಗ ಅದನ್ನು ಮುಖ್ಯವಾಗಿ ಸಂಗೀತ ಕಛೇರಿ ಹಾಗೂ ಆಟದ ಸ್ಥಳವಾಗಿ ಬಳಸಲಾಗುತ್ತದೆ. ಲಾಯ್ಡ್ ಜಾರ್ಜ್, ಪರ್ನೆಲ್ ಮತ್ತು ಪ್ಯಾಟ್ರಿಕ್ ಪೀಯರ್ಸ್ ಮುಂತಾದವರೆಲ್ಲರೂ ಇಲ್ಲಿ ರಾಜಕೀಯ ರಾಲಿಗಳಲ್ಲಿ ಭಾಗವಹಿಸಿದ್ದರು.[೫೯]
ಲಗನ್ ನದಿಯ ಹುಟ್ಟಿನ ಪ್ರದೇಶದಲ್ಲಿರುವ ಬೆಲ್ಫಾಸ್ಟ್ ಸುತ್ತಲೂ ವಿಶೇಷವಾದ ಸೂಕ್ಷ್ಮ ವಾತಾವರಣ ನಿರ್ಮಾಣವಾಗಿದೆ. ಇದು ಉತ್ತಮವಾದ ತೋಟಗಾರಿಕಾ ವ್ಯವಸಾಯಕ್ಕೆ ಸಹಾಯಕವಾದುದಾಗಿದೆ.
ವಿಕ್ಟೋರಿಯನ್ ಜನಪದ ಕಥೆಗಳಲ್ಲಿ ಬಿಂಬಿತವಾಗಿರುವ ಸಸ್ಯಶಾಸ್ತ್ರೀಯ ಉದ್ಯಾನವನ ಸೇರಿದಂತೆ, ಕೇವ್ ಹಿಲ್, ಕಂಟ್ರಿ ಪಾರ್ಕ್, ಲಗನ್ ವ್ಯಾಲಿ ರಿಜನಲ್ ಪಾರ್ಕ್ ಜೊತೆಗೆ ಕಾಲಿನ್ ಗ್ಲೆನ್ ನಗರದ ಸೌಂಧರ್ಯವನ್ನು ಹೆಚ್ಚಿಸಿದೆ. ಬೆಲ್ಫಾಸ್ಟ್ ಅತ್ಯುತ್ತಮ ಪಾರ್ಕ್ ಪ್ರದೇಶಗಳು ಮತ್ತು ಅರಣ್ಯ ಪ್ರದೇಶವನ್ನು ಹೊಂದಿದೆ. ಇದು ನಗರ ಪ್ರದೇಶಕ್ಕೆ ಉತ್ತಮ ಸೌಂದರ್ಯವನ್ನು ಒದಗಿಸುತ್ತದೆ.[೬೬]
ಪಾರ್ಕ್ಗಳು ಮತ್ತು ಗಾರ್ಡನ್ಗಳು ಬೆಲ್ಫಾಸ್ಟ್ ಪರಂಪರೆಯ ಮುಖ್ಯವಾದ ಭಾಗವಾಗಿದೆ. ಅಲ್ಲದೆ ಇಲ್ಲಿ ಸ್ಥಳೀಯ ವನ್ಯಮೃಗಗಳು ಮತ್ತು ಪ್ರಸಿದ್ಧ ಪ್ರದೇಶಗಳು ಇಲ್ಲಿ ಪ್ರವಾಸಿಗಳಿಗೆ ಮುಖ್ಯವಾದ ಪ್ರದೇಶಗಳಾಗಿವೆ. ರೋಸ್ ವೀಕ್ ಹಬ್ಬ, ಪಕ್ಷಿ ವೀಕ್ಷಣೆ, ದೊಡ್ಡ ಮೃಗಗಳ ಭೇಟೆ ಮುಂತಾದ ಅನೇಕ ಸಂಭ್ರಮದ ಹಬ್ಬಗಳು ಇಲ್ಲಿ ನಡೆಯುತ್ತವೆ.[೬೬]
ಬೆಲ್ಫಾಸ್ಟ್ನಲ್ಲಿ ನಲವತ್ತಕ್ಕಿಂತ ಹೆಚ್ಚಿನ ಉದ್ಯಾನವನಗಳು ಇವೆ. ಬೆಲ್ಫಾಸ್ಟ್ನ ಕಾಡು ಸರಕಾರದ ಹಾಗೂ ಸ್ಥಳೀಯ ಪಂಗಡಗಳ ಪಾಲುದಾರಿಕೆಯಲ್ಲಿ ಬೆಳೆಸಲಾದುದಾಗಿದೆ. 1992ರಲ್ಲಿ ಸ್ಥಳಿಯವಾಗಿ ನಗರದಲ್ಲಿರುವ ಕಾಲಿ ಜಾಗ ಹಾಗೂ ಪಾರ್ಕ್ಗಳನ್ನು ನಿರ್ವಹಣೆ ಮಾಡುವ ಸಲುವಾಗಿ ಒಂದು ಸ್ಥಳಿಯ ಸಂಘವನ್ನು ಕಟ್ಟಲಾಯಿತು. ಅವರು 1993ರಿಂದ ಸುಮಾನಿಲ್ಲರು 30ಕ್ಕೂ ಹೆಚ್ಚು ಸಾರ್ವಜನಿಕ ಶಿಲ್ಪಗಳನ್ನು ಇವರು ನಿಲ್ಲಿಸಿದ್ದಾರೆ.[೬೭] 2006ರಲ್ಲಿ, ಸಿಟಿ ಕೌನ್ಸಿಲ್ ಯುಕೆ£8 ಮಿಲಿಯನ್ ಹಣವನ್ನು ಈ ಕೆಲಸಕ್ಕಾಗಿ ಎತ್ತಿಟ್ಟಿದೆ.[೬೮] ಬೆಲ್ಫಾಸ್ಟ್ ನ್ಯಾಚುರಾಲಿಸ್ಟ್ ಫೀಲ್ಡ್ ಕ್ಲಬ್ ಅನ್ನು 1863ರಲ್ಲಿ ಸ್ಥಾಪಿಸಲಾಯಿತು. ಇದನ್ನು ನ್ಯಾಷನಲ್ ಮ್ಯೂಸಿಯಮ್ಸ್ ಮತ್ತು ನಾರ್ಥನ್ ಐರ್ಲ್ಯಾಂಡ್ನ ಗ್ಯಾಲರಿಗಳಿಂದ ನಿರ್ವಹಿಸಲ್ಪಡುತ್ತಿದೆ.[೬೯]
2005ರಲ್ಲಿ 700,000 ಸಂದರ್ಶಕರು[೭೦] ಪ್ರಸಿದ್ಧ ಕ್ವೀನ್ಸ್ ಕ್ವಾರ್ಟರ್ನ ಸಸ್ಯಶಾಸ್ತ್ರೀಯ ಉದ್ಯಾನವನಕ್ಕೆ[೭೧] ಭೇಟಿ ನೀಡಿದ್ದರು.
1830ರಲ್ಲಿ ಸರ್ ಚಾರ್ಲ್ಸ್ ಲೇನ್ಯನ್ರಿಂದ ವಿನ್ಯಾಸಗೊಳಿಸಲಾದ ಬೊಟಾನಿಕ್ ಗಾರ್ಡನ್ ಪಾಮ್ ಹೌಸ್ ಇದು ಕಬ್ಬಿಣ ಮತ್ತು ಗ್ಲಾಸ್ನ ಎರಕದ ಗ್ಲಾಸ್ ಹೌಸ್ಗೆ ಮೊಟ್ಟಮೊದಲ ಉದಾಹರಣೆಯಾಗಿದೆ.[೭೨] ಇಲ್ಲಿರುವ ಪಾರ್ಕ್ನಲ್ಲಿಯ ಇನ್ನೀತರ ಆಕರ್ಷಣೆಯ ಕೇಂದ್ರಗಳೆಂದರೆ ಟ್ರಾಫಿಕಲ್ ರಾವೈನ್ (1889ರಲ್ಲಿ ನಿರ್ಮಿತವಾದ ಅರಣ್ಯ ಪ್ರದೇಶ), ಇಲ್ಲಿ ಸಂಗೀತ ಕಛೇರಿಗಳು ಮತ್ತು ಪಾಪ್ ಕಛೇರಿಗಳೂ ಕೂಡ ನಡೆಯುತ್ತಿದ್ದವು.[೭೩] 1997ರಲ್ಲಿ U2 ತಂಡವು ಇಲ್ಲಿ ಕಛೇರಿಯನ್ನು ನೀಡಿತ್ತು. ನಗರದ ಸಿಟಿ ಮಧ್ಯದಲ್ಲಿರುವ ಸರ್ ಥಾಮಸ್ ಮತ್ತು ಲೇಡಿ ಡಿಕ್ಸನ್ ಪಾರ್ಕ್ ಪ್ರತಿ ವರ್ಷವೂ ಅಂತರಾಷ್ಟ್ರೀಯ ರೋಸ್ ಗಾರ್ಡನ್ಗೆ ಸಾವಿರಾರು ಪ್ರವಾಸಿಗಳನ್ನು ಆಕರ್ಷಿಸುತ್ತದೆ.[೭೪] ಪ್ರತೀ ವರ್ಷ ಜುಲೈನಲ್ಲಿ ನಡೆಯುವ ರೋಸ್ ವೀಕ್ ಸುಮಾರು 20,000ಕ್ಕಿಂತ ಹೆಚ್ಚಿನ ಹೂಗಳ ಅರಳುವಿಕೆಯನ್ನು ಭಾಗವಾಗಿರಿಸಿಕೊಂಡಿರುತ್ತದೆ.[೭೫] ಇದು 128 acres (0.52 km2)ಹುಲ್ಲುಗಾವಲುಗಳಿರುವ, ಕಾಡು ಮತ್ತು ಉದ್ಯಾನವನವನ್ನು ಹೊಂದಿರುವ ಮತ್ತು ಪ್ರಿನ್ಸೆಸ್ ಡಯಾನಾ ಮೆಮೊರಿಯಲ್ ಗಾರ್ಡನ್, ಜಪಾನ್ ಗಾರ್ಡನ್, ವಾಲ್ ಗಾರ್ಡನ್ ಮತ್ತು ಗೋಲ್ಡನ್ ಕ್ರೌನ್ ಕಾರಂಜಿಗಳನ್ನು 2002ರ ಕ್ವೀನ್ಸ್ ಗೋಲ್ಡನ್ ಜುಬಿಲಿ ಆಚರಣೆಯ ಸಲುವಾಗಿ ಆರಂಭಿಸಲಾಯಿತು.[೭೪]
2008ರಲ್ಲಿ, ಕ್ರೊಯ್ಡನ್ ನ ಲಂಡನ್ ಬೊರೊಗ್ ಹಾಗೂ ಶೆಫೀಲ್ಡ್ ಒಳಗೊಂಡು RHS ಬ್ರಿಟನ್ ಇನ್ ಬ್ಲೂಮ್ ಪೈಪೋಟಿಯಲ್ಲಿ ಬೆಲ್ಫಾಸ್ಟ್ ಅತಿ ದೊಡ್ಡ ನಗರಗಳ (200,001 ಮತ್ತು ಹೆಚ್ಚು) ಪಟ್ಟಿಯಲ್ಲಿ ಅಂತಿಮ ಹಂತಕ್ಕೆ ನಾಮನಿರ್ದೇಶಿತವಾಗಿತ್ತು.
ಬೆಲ್ಫಾಸ್ಟ್ ಜೂ ಬೆಲ್ಫಾಸ್ಟ್ ಸಿಟಿ ಕೌನ್ಸಿಲ್ರಿಂದ ಕೊಂಡುಕೊಳ್ಳಲಾಗಿದೆ. ಪ್ರಾಣಿ ಸಂಗ್ರಹಾಲಯವನ್ನು ನೋಡಿಕೊಳ್ಳಲು ಹಾಗೂ ಅದನ್ನು ಪ್ರಚಾರಗೊಳಿಸುವ ಉದ್ದೇಶದಿಂದ ಮಂಡಳಿ £1.5 ಮಿಲಿಯನ್ ಹಣವನ್ನು ಪ್ರತೀ ವರ್ಷ ವೆಚ್ಚಮಾಡುತ್ತಿತ್ತು. ಅದು ಯುಕೆ ಹಾಗೂ ಐರ್ಲೇಂಡಿನಲ್ಲಿ ಸ್ಥಳೀಯ ಸರಕಾರ ಸಹಾಯ ನಿಧಿ ಒದಗಿಸುವ ಕೆಲವೇ ಕೆಲವು ಪ್ರಾಣಿ ಸಂಗ್ರಹಾಲಯಗಳಲ್ಲಿ ಒಂದಾಗಿದೆ. ಈ ಪ್ರಾಣಿ ಸಂಗ್ರಹಾಲಯವು ನಾರ್ಥನ್ ಐರ್ಲೇಂಡ್ನಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರಗಳಲ್ಲಿ ಒಂದಾಗಿದೆ. ಪ್ರತೀ ವರ್ಷ 295,000 ಸಂದರ್ಶಕರಿಗಿಂತ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುತ್ತಾರೆ. ಬಹುಸಂಖ್ಯಾತ ಪ್ರಾಣಿಗಳು ಅದರ ನೈಸರ್ಗಿಕ ಣಿಗಳ ಸಹಜ ವಾಸಸ್ಥಾನ ಅಪಾಯದಲ್ಲಿದೆ. ಪ್ರಾಣಿಸಂಗ್ರಹಾಲಯವು 140 ಬಗೆಯ 1,200 ಪ್ರಾಣಿಗಳನ್ನು ಒಳಗೊಂಡಿದ್ದು ಏಶಿಯದ ಆನೆಗಳು, ಬಾರ್ಬರಿ ಸಿಂಹಗಳು, ಬಿಳಿ ಹುಲಿಗಳು (ಯುನೈಟೆಡ್ ಕಿಂಗ್ಡಮ್ನಲ್ಲಿ ಕಡಿಮೆ ಇರುವುದರಲ್ಲಿ ಒಂದು), ಪೆಂಗ್ವಿನ್ ನ ಮೂರು ಬಗೆಗಳು, ವೆಸ್ಟೆರ್ನ್ ಲೊಲೇಂಡ್ ಗೊರಿಲ್ಲಾದ ಒಂದು ಕುಟುಂಬ, ಕೊಮನ್ ಚಿಂಪಾನ್ಝೀಸ್ ನ ಒಂದು ಗುಂಪು, ಒಂದು ಕೆಂಪು ಪಾಂಡ ಮತ್ತು ಲಂಗುರ್ ನ ವಿವಿಧ ಬಗೆಯ ಪ್ರಾಣಿಗಳು ಅಲ್ಲಿವೆ. ಪ್ರಾಣಿಸಂಗ್ರಹಾಲಯವು ಮುಖ್ಯ ಸಂರಕ್ಷಿಸುವ ಕೆಲಸವನ್ನೂ ಮುಂದುವರಿಸುತ್ತಿದೆ ಮತ್ತು ಬೆದರಿಕೆಯಲ್ಲಿರುವ ಅನೇಕ ಬಗೆಗಳ ಉಳಿಯುವಿಕೆಯನ್ನು ಖಚಿತಪಡಿಸುವ ಸಹಾಯಕ್ಕೆ ಯುರೋಪ್ದ ಹಾಗೂ ಅಂತರಾಷ್ಟ್ರೀಯ ತಳಿ- ಬೆಳೆಸುವಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತದೆ.[೭೬]
2001ರ ಜನಗಣತಿ ಪ್ರಕಾರ, ಪಟ್ಟಣದ ಎಲ್ಲೆಯೊಳಗಿನ (ಬೆಲ್ಫಾಸ್ಟ್ನಗರ ಪ್ರದೇಶ) ಜನಸಂಖ್ಯೆ 276,459 ಆಗಿತ್ತು,[೭೭] ಆದರೆ ವಿಸ್ತಾರವಾದ ಬೆಲ್ಫಾಸ್ಟ್ ಮಹಾನಗರವಾಸಿ ಪ್ರದೇಶದಲ್ಲಿ 579,554 ಜನರು ಇದ್ದರು.[೭೮] ಇದರ ಪರಿಣಾಮವಾಗಿ ಯುನೈಟೆಡ್ ಕಿಂಗ್ಡಮ್ನಲ್ಲಿ ಇದು ಹದಿನೈದನೇ-ವಿಶಾಲವಾದ ಪಟ್ಟಣವಾಗಿ ರೂಪುಗೊಂಡಿತ್ತು. ಆದರೆ ಇದು ಹನ್ನೊಂದನೆಯ-ವಿಶಾಲವಾದ ಪಟ್ಟಣಗಳ ಕೂಟ ವಾಗಿದೆ.[೭೯] ಬೆಲ್ಫಾಸ್ಟ್ ಇಪ್ಪತ್ತನೇಯ ಶತಮಾನದ ಮಧ್ಯಭಾಗದಲ್ಲಿ ಅಗಾಧವಾದ ಬೆಳವಣಿಗೆಯನ್ನು ಜನಸಂಖ್ಯೆಯಲ್ಲಿ ಕಂಡಿತು. ಈ ಏರಿಕೆಯ ಪ್ರಮಾಣವು ಯುದ್ಧದ ಸಂದರ್ಭದಲ್ಲಿ ಇಳಿಕೆಯನ್ನು ಕಾಣುವ ಮೂಲಕ ಬೆಲ್ಫಾಸ್ಟ್ನಗರ ದ ಜನಸಂಖ್ಯೆಯು 600,000 ಆಗಿತ್ತು.[೮೦] ಅದರ ನಂತರ, ನಗರದೊಳಗಿನ ಜನಸಂಖ್ಯೆಯು ನಾಟಕೀಯವಾಗಿ ಕಡಿಮೆಯಾಗಿ ಗ್ರೇಟರ್ ಬೆಲ್ಫಾಸ್ಟ್ ಜನಸಂಖ್ಯೆಯು ಗಣನೀಯವಾಗಿ ಹೆಚ್ಚಾಯಿತು. ಅದೇ ನಗರ ಪ್ರದೇಶದಲ್ಲಿನ 2001ರ ಜನಗಣತಿ ಜನಸಂಖ್ಯೆ, 277,391[೭೭] ರಷ್ಟಿದ್ದು ಕಡಿಮೆಯಾಯಿತು. ಅದರಲ್ಲಿ 579,554 ಜನರು ವಿಸ್ತಾರವಾದ ಬೆಲ್ಫಾಸ್ಟ್ ಮಹಾನಗರವಾಸಿ ಪ್ರದೇಶದಲ್ಲಿ ಜೀವಿಸುತಿದ್ದರು.[೭೮] ಅದೇ ವರ್ಷದಲ್ಲಿ ಜನಸಂಖ್ಯೆ ಸಾಂದ್ರತೆಯು 2,415 ಜನರು/ಕಿಮೀ²ಗೆ ಇತ್ತು (119 ಉಳಿದ ನಾರ್ತೆರ್ನ್ ಐರ್ಲೆಂಡ್ ಹೋಲಿಸುವುದಾದರೆ).[೮೧] ಅನೇಕ ಪಟ್ಟಣಗಳಲ್ಲಿ, ಬೆಲ್ಫಾಸ್ಟ್ನ ನಗರದೊಳಗಿನ ಪ್ರದೇಶವು ಈಗ ಹಿರಿಯರ, ವಿದ್ಯಾರ್ಥಿ, ಹಾಗೂ ಒಬ್ಬಂಟಿಕ ಯುವಕ ಜನರನ್ನು ಹೊಂದಿದೆ. ಹೆಚ್ಚಿನ ಕುಟುಂಬಗಳು ನಗರದ ಹೊರಗೆ ಜೀವನ ನಡೆಸಲು ಪ್ರಾಮುಖ್ಯತೆಯನ್ನು ಕೊಡುತ್ತಲಿವೆ. ಸಮಾಜ-ಆರ್ಥಿಕ ಪ್ರದೇಶಗಳು ಸೆಂಟ್ರಲ್ ಬಿಸ್ನೆಸ್ ಡಿಸ್ಟ್ರಿಕ್ಟ್ ಇಂದ ಹೊರಕ್ಕೆ ಹರಡಿದೆ. ಮೆಲೊನೊ ರಸ್ತೆಯು ದಕ್ಷಿಣಕ್ಕೆ ವಿಸ್ತರಿಸಿದೆ.[೮೦] ಪಶ್ಚಿಮ ದಿಕ್ಕಿನಲ್ಲಿ ನಗರ ಪ್ರದೇಶದ ವಿಸ್ತಾರವು ಹೆಚ್ಚಾಗಿದೆ. ಫಾಲ್ಸ್ ಹಾಗೂ ಶಂಕಿಲ್ ರೋಡ್ ಗಳ ಸುತ್ತಲು ಪ್ರದೇಶವು ನಾರ್ತೆರ್ನ್ ಐರ್ಲೇಂಡಿನಲ್ಲಿನ ಹೆಚ್ಚುವರಿ ವಾರ್ಡ್ಗಳಾಗಿವೆ.[೮೨]
ನಗರದಲ್ಲಿ ಶಾಂತಿ ನೆಲೆಸಿರುವ ಸ್ಥಿತಿ ಕಂಡುಬಂದರೂ ಕೂಡ ಬೆಲ್ಫಾಸ್ಟ್ನ ಅನೇಕ ಪ್ರದೇಶಗಳು ಮತ್ತು ಪ್ರಾಂತಗಳು ಇನ್ನೂ ಸಂಪೂರ್ಣ ನಾರ್ತೆರ್ನ್ ಐರ್ಲೆಂಡ್ ಬೇರ್ಪಡಿಸಿದ ಸ್ವರೂಪವನ್ನು ಪ್ರತಿಬಿಂಬಿಸುತ್ತಿದೆ. ಅನೇಕ ಪ್ರದೇಶಗಳು ಜನಾಂಗೀಯ, ರಾಜಕೀಯ ಹಾಗೂ ಧಾರ್ಮಿಕತೆಯಲ್ಲಿ ಹಾಗೂ ವಿಶೇಷವಾಗಿ ನೆರೆಹೊರೆಯ ಕೆಲಸದ ವರ್ಗದಲ್ಲಿ, ಇವುಗಳಲ್ಲಿ ಇನ್ನೂ ಅಧಿಕವಾಗಿ ಪ್ರತ್ಯೇಕಿಸಿದೆ.[೮೩] ಈ ವಲಯದಲ್ಲಿ – ಕಥೊಲಿಕ್ ಅಥವಾ ಒಂದು ಕಡೆ ಪ್ರಜಾಪ್ರಭುತ್ವವಾದಿ ಮತ್ತು ಪ್ರೊಟೆಸ್ಟಂಟ್ ಅಥವಾ ಇನ್ನೊಂದಡೆ ನಿಷ್ಠಾವಂತವಾದಿ – ಇವು ತಪ್ಪದೇ ಬಾವುಟಗಳು ಇಂದ, ಗೀರುಚಿತ್ರ ಹಾಗೂ ಭಿತ್ತಿಚಿತ್ರಗಳು ಇಂದ ಗುರುತಿಸಲಾಗಿದೆ. ಬೇರ್ಪಡಿಸುವಿಕೆಯು ಬೆಲ್ಫಾಸ್ಟ್ ಚರಿತ್ರೆಯ ಪೂರ್ತಿ ಕಾಣಿಸಿ ಕೊಂಡಿದೆ. ಇದು ಪ್ರತಿಯೊಂದು ಘಟನೆ ನಡೆದಾಗಲೂ ಸೂಕ್ಷ್ಮತೆಯಿಂದ ನಿರ್ವಹಿಸಲಾಗಿದೆ ಮತ್ತು ನಗರ ಪ್ರದೇಶದಿಂದ ವಲಸೆಯು ಹೆಚ್ಚಾಗಿದೆ. ಬೇರ್ಪಡಿಸುವಿಕೆಯಲ್ಲಿಯ ಈ ತೀಕ್ಷ್ಣತೆಯನ್ನು "ತಡೆಹಲ್ಲು ಸಾಲು ಪರಿಣಾಮ" ಎಂದು ವಿವರಿಸಲಾಗಿದೆ. ಇದು ಸಮಾಧಾನದ ಸಮಯದಲ್ಲಿ ಈ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವುದನ್ನು ತೋರಿಸುತ್ತದೆ.[೮೪] ಯಾವಾಗ ಹಿಂಸಾಚಾರ ಧಗಧಗಿಸುತ್ತದೆಯೋ ಆ ಸಮಯದಲ್ಲಿ ಅದು ಅಂತರ ಸಂಪರ್ಕ ಸಾಧನ(ಗಣಕಯಂತ್ರದ) ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪಟ್ಟಣದಲ್ಲಿ ಬೇರ್ಪಡಿಸುವಿಕೆಯ ಅಧಿಕ ಹಂತಗಳು 90% ಕ್ಯಾಥೊಲಿಕ್ಗಿಂತ ಹೆಚ್ಚಿನ ಪ್ರದೇಶದಲ್ಲಿ ವೆಸ್ಟ್ ಬೆಲ್ಫಾಸ್ಟ್ನಲ್ಲಿ ಇದೆ. ವಿರುದ್ಧವಾಗಿ ಆದರೆ ಹೋಲಿಕೆಯಲ್ಲಿ ಅಧಿಕ ಹಂತಗಳು ಪ್ರಧಾನವಾಗಿರುವ ಪ್ರೊಟೆಸ್ಟೆಂಟ್ ಪೂರ್ವ ಬೆಲ್ಫಾಸ್ಟ್ನಲ್ಲಿ ಕಾಣುತ್ತದೆ.[೮೫] ಬೇರೆ ಬೇರೆ ರೀತಿಯ ಕಾರ್ಯ ನಿರ್ವಹಿಸುವ ವರ್ಗದ ಜನರು ಸಂಧಿಸುವ ಪ್ರದೇಶಗಳನ್ನು ಸಂಪರ್ಕ ಸಾಧನ ಪ್ರದೇಶಗಳೆಂದು ಕರೆಯಲಾಗುತ್ತದೆ.
ಜನಾಂಗೀಯ ಅಲ್ಪಸಂಖ್ಯಾತ ಸಮುದಾಯಗಳು ಬೆಲ್ಫಾಸ್ಟ್ನಲ್ಲಿ 1930ರಿಂದ ಇವೆ.[೮೬] ಚೀನಾ ದೇಶದವರು ಹಾಗೂ ಐರಿಶ್ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವಂತರಾಗಿದ್ದಾರೆ. ಯುರೋಪ್ ಯುನಿಯನ್ ವಿಸ್ತರಣೆಯ ಕಾರಣದಿಂದಾಗಿ ಪೂರ್ವ ಯುರೋಪಿಯನ್ ವಲಸೆಗಾರರ ಒಳಹರಿವು ಹೆಚ್ಚಿದೆ. ಜನಗಣತಿಯ (2001) ಪ್ರಕಾರ ಬೆಲ್ಫಾಸ್ಟ್ನಲ್ಲಿ ಜನಾಂಗೀಯ ಅಲ್ಪಸಂಖ್ಯಾತ ಜನಸಂಖ್ಯೆ 4,584 ಅಥವಾ ಜನಸಂಖ್ಯೆಯ 1.3% ಇದೆ ಎಂಬುದು ತಿಳಿದುಕೊಂಡಿದೆ. ಇದರಲ್ಲಿ ಅರ್ಧದಷ್ಟು ಜನತೆ ದಕ್ಷಿಣ ಬೆಲ್ಫಾಸ್ಟ್ನಲ್ಲಿ ಜೀವಿಸುತ್ತಿದ್ದಾರೆ. ಅವರ ಜನಸಂಖ್ಯೆಯು 2.63%ರಷ್ಟಿದೆ.[೮೬] ಗ್ರೇಟರ್ ಬೆಲ್ಫಾಸ್ಟ್ ಪ್ರದೇಶದಲ್ಲಿ ನಾರ್ತೆರ್ನ್ ಐರ್ಲೇಂಡಿನಲ್ಲಿ ಕೆಲಸ ಮಾಡುವ ಅಂದಾಜು 5,000 ಮುಸುಲ್ಮಾನರು[೮೭] ಮತ್ತು 200 ಹಿಂದು ಕುಟುಂಬಗಳು[೮೮] ಜೀವಿಸುತಿದ್ದಾರೆ.
1994ರ IRA ಕದನ ವಿರಾಮದ ಒಪ್ಪಂದ ಮತ್ತು ಗುಡ್ ಫ್ರೈಡೆ ಅಗ್ರೀಮೆಂಟ್ನ 1998ರ ಹಸ್ತಾಕ್ಷರದಿಂದ ಬೆಲ್ಫಾಸ್ಟ್ಗೆ ಹೂಡಿಕೆ ಮಾಡಲು ಹೆಚ್ಚಾದ ವಿಶ್ವಾಸ ಕೊಡಲಾಯಿತು.[೮೯][೯೦] ಇದು ಈವರೆಗೆ ತಡೆಹಿಡಿಯಲಾಗಿದ್ದ ಆರ್ಥಿಕ ಬೆಳವಣಿಗೆಯನ್ನು ಬೆಲ್ಫಾಸ್ಟ್ ಕಾಣಲು ಸಹಾಯಕವಾಯಿತು. ವಿಕ್ಟೋರಿಯಾ ಸ್ಕ್ವೇರ್, ದಿ ಕೆತೆಡ್ರಲ್ ಕ್ವಾರ್ಟರ್ ಮತ್ತು ಲಾಂಗ್ಸೈಡ್ ಜೊತೆಗಿನ ಒಡಿಸ್ಸಿಯ ಸಂಕೀರ್ಣ ಮತ್ತು ನೆಲಗುರುತು ವಾಟರ್ ರ್ಫ್ರಂಟ್ ಹಾಲ್ಗಳಲ್ಲಿ ಅಭಿವೃದ್ಧಿ ಕಂಡಿತು.
ಟೈಟಾನಿಕ್ ಕ್ವಾರ್ಟರ್ನ ಪುನರುಜ್ಜೀವನ ಮತ್ತು ಈ ದ್ವೀಪದಲ್ಲೇ ಅತ್ಯಂತ ಎತ್ತರವಾದ ಒಬೇಲ್ ಟವರ್ ಅನ್ನು ಕಟ್ಟುವ ಕಾರ್ಯ ಆರಂಭವಾಯಿತು.[೯೧] ಇವತ್ತು, ಬೆಲ್ಫಾಸ್ಟ್, ನಾರ್ಥನ್ ಐರ್ಲೆಂಡ್ ಶೈಕ್ಷಣಿಕ ಮತ್ತು ವಾಣಿಜ್ಯ ಚಟುವಟಿಕೆಯ ಪ್ರಮುಖ ಕೇಂದ್ರವಾಗಿ ಬೆಳವಣಿಗೆ ಹೊಂದಿದೆ. ಫೆಬ್ರವರಿ 2006ರಲ್ಲಿ, ಬೆಲ್ಫಾಸ್ಟ್ನ ನಿರುದ್ಯೋಗದ ಪ್ರಮಾಣ 4.2% ಇತ್ತು. ಇದು ನಾರ್ಥನ್ ಐರ್ಲೆಂಡ್ ಗಿಂತ ಕಡೆಮೆ[೯೨] ಮತ್ತು ಯುಕೆಯ 5.5% ಸರಾಸರಿ ಪ್ರಮಾಣದಲ್ಲಿತ್ತು.[೯೩] ಕಳೆದ ೧೦ ವರ್ಷದಿಂದ ಉದ್ಯೋಗ 16.4 ಶೇಕಡವಾಗಿ ಅಭಿವೃದ್ಧಿಯಾಗಿದೆ. ಒಟ್ಟಾಗಿ ಹೋಲಿಸಿದರೆ ಇದು ಯುಕೆಯ 9.2 ಶೇಕಡ ಆಗಿದೆ.[೯೪]
ನಾರ್ಥನ್ ಐರ್ಲೆಂಡ್ನಲ್ಲಿ ಶಾಂತಿ ನೆಲೆಸಿರುವ ಕಾರಣ ಆಸ್ತಿಯ ಬೆಲೆ ನಗರದಲ್ಲಿ ಮೇಲಕ್ಕೇರಿದೆ. ಇದನ್ನು ಶಾಂತಿಯ ಲಾಭಾಂಶ ಎಂದು ಕರೆಯಲಾಗುತ್ತದೆ. 2007ರಲ್ಲಿ, ಬೆಲ್ಫಾಸ್ಟ್ನಲ್ಲಿ ಮನೆಯ ಬೆಲೆ 50%ರಷ್ಟು ಏರಿದೆ. ಇದು ನಾರ್ಥನ್ ಐರ್ಲ್ಯಾಂಡ್ನಲ್ಲಿ ಈವರೆಗಿನ ಅತ್ಯಂತ ವೇಗವಾಗಿ ಬೆಲೆ ಏರಿಕೆ ಕಂಡ ಅಂಕಿ ಅಂಶಗಳಲ್ಲಿ ಒಂದಾಗಿದೆ.[೯೫] ಮಾರ್ಚ್ 2007ರಲ್ಲಿ, ಸರಾಸರಿಯಾಗಿ ಬೆಲ್ಫಾಸ್ಟ್ನಲ್ಲಿ ಮನೆಯ ಬೆಲೆ £91,819, ಮತ್ತು ಸೌತ್ ಬೆಲ್ಫಾಸ್ಟ್ನಲ್ಲಿ £141,000 ಸರಾಸರಿಯಾಗಿತ್ತು.[೯೬] 2004ರಲ್ಲಿ, ಬೆಲ್ಫಾಸ್ಟ್ ಕನಿಷ್ಠ ಮಾಲೀಕರ ಕಸುಬು 54% ಶೇಕಡಾ ನಾರ್ಥನ್ ಐರ್ಲೆಂಡ್ನಲ್ಲಿ ಇತ್ತು.[೯೭]
ಬೆಲ್ಪಾಸ್ಟ್ನಲ್ಲಿ ಶಾಂತಿ ನೆಲೆಸಿರುವ ಕಾರಣ ಪ್ರವಾಸಿಗರ ಸಂಖ್ಯೆ ಕೂಡಾ ಹೆಚ್ಚಾಗಿದೆ. 2005ರಲ್ಲಿ 6.4 ಮಿಲಿಯ ಪ್ರವಾಸಿಗರು ಇದ್ದರು, ಅದು 2004 ರಿಂದ 8.5% ಬೆಳವಣಿಗೆಯಾಗಿದೆ. ಪ್ರವಾಸಿಗರು £285.2 ಮಿಲಿಯ ಹಣವನ್ನು ಬೆಲ್ಫಾಸ್ಟ್ನಲ್ಲಿ ವ್ಯಯ ಮಾಡಿದ್ದಾರೆ. ಅಲ್ಲದೆ 15,600ರಷ್ಟು ಕೆಲಸವನ್ನು ಹುಟ್ಟುಹಾಕಿದ್ದಾರೆ.[೯೮] ಪ್ರವಾಸಿಗರ ಎಣಿಕೆ 6% ಏರಿತು ಅದ್ದರಿಂದ 2006 ರಲ್ಲಿ 6.8 ಮಿಲಿಯ ಮುಟ್ಟಿತು. ಇದರಿಂದ ಪ್ರವಾಸಿಗರು ಬೆಲ್ಫಾಸ್ಟ್ನಲ್ಲಿ ಮಾಡಿದ ವೆಚ್ಚ ಕೂಡಾ ಹೆಚ್ಚಾಯಿತು. ಇದು £324 ಮಿಲಿಯದಷ್ಟು. ಅದು 2005 ರಲ್ಲಿ 15%ರಷ್ಟು ಹೆಚ್ಚಾಯಿತು.[೯೯] ನಗರದಲ್ಲಿಯ ಎರಡು ವಿಮಾನ ನಿಲ್ದಾಣಗಳು ನಗರವನ್ನು ಯುರೋಪ್ನ ವಾರಾಂತ್ಯದ ಭೇಟಿಯ ಒಂದು ತಾಣವಾಗಿ ಮಾಡಿತು.[೧೦೦]
ಕಳೆದ ದಶಮಾನದ ಮೂವತ್ತು ದೊಡ್ಡ ಬ್ರಿಟೀಷ್ ನಗರಗಳಲ್ಲಿ ಅತ್ಯಂತ ವೇಗವಾಗಿ ಬೆಳಣಿಗೆ ಕಂಡ ನಗರಗಳಲ್ಲಿ ಬೆಲ್ಫಾಸ್ಟ್ ಮುಖ್ಯವಾದುದಾಗಿದೆ. ಇದನ್ನು ಹೊವರ್ಡ್ ಸ್ಪೆನ್ಸೆರ್ ಅವರ ವರದಿಯು ತಿಳಿಸುತ್ತದೆ. "ಇದಕ್ಕೆ ಕಾರಣ ಯುಕೆಯ ಮೂಲಭೂತ ಆರ್ಥಿಕ ಸೌಲಭ್ಯದ ಕಾರಣ ಜನರು ಯುಕೆಯಲ್ಲಿ ಬಂಡವಾಳ ಹೂಡಲು ಉತ್ಸುಕರಾಗಿದ್ದಾರೆ."[೧೦೧]
ಬಿಬಿಸಿ ರೆಡಿಯೋ 4ರ ವರದಿಯ ಪ್ರಕಾರ ಯುಕೆಯಲ್ಲಿಯ ಕಾರ್ಪೋರೇಷನ್ ತೆರಿಗೆಯು ಗಣರಾಜ್ಯಗಳಲ್ಲಿಯ ತೆರಿಗೆಗಿಂತ ಹೆಚ್ಚಾಗಿರುವುದು ಕಂಡುಬರುತ್ತದೆ. "ಅಗಾಧವಾದ ಮೊತ್ತದ" ವಿದೇಶೀಯ ಹೂಡಿಕೆ ದೇಶಕ್ಕೆ ಬರುತ್ತಿದೆ.[೧೦೨]
ದಿ ಟೈಮ್ಸ್ ಬೆಲ್ಫಾಸ್ಟ್ ಉನ್ನತ ಮಟ್ಟಕ್ಕೇರುತ್ತಿರುವ ಅರ್ಥಿಕ ಸ್ಥಿತಿಯ ಬಗ್ಗೆ ಬರೆಯಿತು: "ಪ್ರಾದೇಶಿಕ ಬೆಳವಣಿಗೆ ಸಂಸ್ಥೆಯ ಪ್ರಕಾರ 1990ರ ದಶಕದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಪ್ರಾದೇಶಿಕ ಆರ್ಥಿಕತೆ ಯುಕೆಯ ನಾರ್ಥನ್ ಐರ್ಲೆಂಡ್ನದಾಗಿತ್ತು. ಆದುದರಿಂದ ಬೇರೆ ದೇಶಕ್ಕಿಂತ ಇದರ GDP 1 ಶೇಕಡ ಪ್ರತಿ ವರ್ಷಕ್ಕೆ ಬೆಳೆಯಿತು. ಆಧುನಿಕ ಆರ್ಥಿಕ ಬೆಳವಣಿಗೆಯಲ್ಲಿದ್ದಂತೆ ಸೇವಾ ಕ್ಷೇತ್ರವೇ ನಾರ್ಥನ್ ಐರ್ಲೆಂಡ್ ಆರ್ಥಿಕ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖವಾದುದಾಗಿದೆ. ಈ ಕ್ಷೇತ್ರದಲ್ಲಿ ಇದು ಅತ್ಯಂತ ಉತ್ತಮ ಬೆಳವಣಿಗೆಯನ್ನು ಕೂಡಾ ಕಾಣುತ್ತಿದೆ. ಮುಖ್ಯವಾಗಿ ಈ ಪ್ರದೇಶದಲ್ಲಿ ಪ್ರವಾಸಿ ಉದ್ಯಮವು ಅತ್ಯಂತ ಉತ್ತಮ ಅಭಿವೃದ್ಧಿ ಹೊಂದಿದ ಉಧ್ಯಮವಾಗಿದೆ. ಅದುದರಿಂದ ದಾಖಲೆ ಮಟ್ಟದ ಪ್ರವಾಸಿಗಳಿಂದ ಮತ್ತು ಪ್ರವಾಸಿಗಳ ಆದಾಯ ಮತ್ತು ಕಾಲ್ ಸೆಂಟರ್ಗಳಿಗೆ ಪ್ರಮುಖ ಪ್ರದೇಶವಾಗಿ ಕಂಡುಬರುತ್ತಿದೆ.[೧೦೩] ಸ್ಥಳಿಯ ಪ್ರದೇಶದ ಕುರಿತಾಗಿ ಇದ್ದ ವಿರೋಧಗಳು ಕೊನೆಯಾದ ನಂತರದಲ್ಲಿ ನಾರ್ಥನ್ ಐರ್ಲೆಂಡ್ ಪ್ರವಾಸೋದ್ಯಮ ಅಭಿವೃದ್ಧಿ ಹೊಂದಿದೆ. ಮುಖ್ಯವಾಗಿ ಕಡಿಮೆ ಬೆಲೆ ಇಲ್ಲಿಯ ಅಭಿವೃದ್ಧಿ.[೧೦೩]
ರಾಜಕೀಯ ಮತ್ತು ಆರ್ಥಿಕತೆಯ ಕುರಿತಾದ ಜರ್ಮನ್ನ ವಾರಪತ್ರಿಕೆ ಡೇರ್ ಸ್ಪಿಗೆಲ್ ಬೆಲ್ಫಾಸ್ಟ್ ಅನ್ನು ವಿವಿಧ ವ್ಯವಹಾರಗಳಿಗೆ ಮುಕ್ತವಾಗಿರುವ ದಿ ನ್ಯೂ ಸೆಲ್ಟಿಕ್ ಟೈಗರ್ ಎಂದು ಕರೆಯಿತು.[೧೦೪]
ಹದಿನೇಳನೇ ಶತಮಾನದಲ್ಲಿ ಬೆಲ್ಪಾಸ್ಟ್ನಲ್ಲಿ ಜನಸಂಖ್ಯೆ ಹೆಚ್ಚಳ ಕಂಡುಬಂದಾಗ ಇಲ್ಲಿಯ ಆರ್ಥಿಕತೆಯು ಮುಖ್ಯವಾಗಿ ವ್ಯಾಪಾರದ ಆಧಾರದ ಮೇಲೆ ನಿಂತಿತ್ತು.[೧೦೫] ಅದು ಸುತ್ತುಮುತ್ತಲಿನ ಪ್ರದೇಶಗಳಿಗೆ ಮಾರುಕಟ್ಟೆಯನ್ನು ಒದಗಿಸಿತು ಮತ್ತು ನೈಸರ್ಗಿಕ ಪ್ರವೇಶದ್ವಾರವಾದ ಬೆಲ್ಫಾಸ್ಟ್ ಲೊಗ್ ನಿಂದ ಪಟ್ಟಣಕ್ಕೆ ಅದರದೇ ಆದ ಬಂದರು ದೊರಕಿತು.
ಈ ಬಂದರಿನ ಕಾರಣದಿಂದಾಗಿ ಗ್ರೇಟ್ ಬ್ರಿಟನ್ ಮತ್ತು ಯುರೋಪ್, ಉತ್ತರ ಅಮೇರಿಕಾ ದೇಶಗಳಿಗೆ ಒಂದು ಉತ್ತಮ ಜಲಮಾರ್ಗವನ್ನು ಒದಗಿಸಿಕೊಟ್ಟಿತ್ತು. ಹದಿನೇಳನೇ ಶತಮಾನದ ಮಧ್ಯದಲ್ಲಿ, ಬೆಲ್ಫಾಸ್ಟ್ ಗೋಮಾಂಸ, ಬೆಣ್ಣೆ, ತೊಗಲು, ಕೊಬ್ಬು ಮತ್ತು ಧಾನ್ಯವನ್ನು ರಫ್ತು ಮಾಡುತ್ತಿತ್ತು. ಇದ್ದಲು, ಬಟ್ಟೆ, ದ್ರಾಕ್ಷಾರಸ, ಬ್ರಾಂದಿ, ಕಾಗದ, ಮರಮುಟ್ಟು ಮತ್ತು ತಂಬಾಕನ್ನು ಆಮದು ಮಾಡಿಕೊಳ್ಳುತ್ತಿದ್ದರು.[೧೦೫] ಆ ಸಮಯದಲ್ಲಿ, ನರ್ದರ್ನ್ ಐರ್ಲೆಂಡ್ನಲ್ಲಿ ನಾರುಬಟ್ಟೆಯ ವ್ಯಾಪಾರ ವಿಕಾಸವಾಗಿತ್ತು ಮತ್ತು ಹದಿನೆಂಟನೇ ಶತಮಾನದ ಮಧ್ಯದಲ್ಲಿ ಐದರಲ್ಲಿ ಒಂದು ಭಾಗ ನಾರುಬಟ್ಟೆಯ ರಫ್ತು ಬೆಲ್ಫಾಸ್ಟ್ನಿಂದ ರವಾನೆ ಮಾಡಲಾಗುತ್ತಿತ್ತು.[೧೦೫] ಈಗಿರುವ ಪಟ್ಟಣ ಕೈಗಾರಿಕೆಯ ಕ್ರಾಂತಿಯ ಪರಿಣಾಮವಾಗಿ ಬೆಳವಣಿಗೆ ಕಂಡದ್ದಾಗಿದೆ.[೧೦೬] ನಾರುಬಟ್ಟೆಯ ಮತ್ತು ಹಡಗು ನಿರ್ಮಾಣದ ವ್ಯಾಪಾರದ ಕೈಗಾರಿಕ ಬದಲಾವಣೆ ತನಕ ಮಾತ್ರವಲ್ಲ ಆದರೆ ಆರ್ಥಿಕ ಮತ್ತು ಜನಸಂಖ್ಯೆಯ ಅಭಿವೃದ್ಧಿ ಕಂಡಿತು. ಹತ್ತೊಂಬತ್ತನೇ ಶತಮಾನದಲ್ಲಿ, ಬೆಲ್ಫಾಸ್ಟ್ ನಾರುಬಟ್ಟೆ ತಯಾರಿ ಮಾಡುವುದರಲ್ಲಿ ವಿಶ್ವದಲ್ಲೇ ದೊಡ್ಡದಾದ ಪ್ರದೇಶವಾಯಿತು, "ಲಿನೇನೋಪೋಲಿಸ್" ಎಂಬ ಅಡ್ಡಹೆಸರು ಸಂಪಾದಿಸಿತು.[೧೦೭]
ದೊಡ್ಡ ಹಡಗುಗಳು ನಿಲ್ಲಲು ಅಗತ್ಯವಾದಂತಹ ಆಳವಾದ ಜಾಗ ಕೊಡಲು 1845ರಲ್ಲಿ ಬೆಲ್ಫಾಸ್ಟ್ ನೌಕಾ ನಿಲ್ದಾಣವನ್ನು ಹೂಳೆತ್ತುವ ಯಂತ್ರದಿಂದ ಹೂಳೆತ್ತಲಾಯಿತು. ಡೊನೆಗಲ್ ಕ್ವೆಯ್ ನದಿಯಲ್ಲಿ ನೌಕಾ ನಿಲ್ದಾಣ ವೃದ್ಧಿಪಡಿಸಲಾಯಿತು ಮತ್ತು ವಾಣಿಜ್ಯ ಅಭಿವೃದ್ಧಿ ಪಡೆಯಿತು.[೧೦೮] 1861ರಲ್ಲಿ ಹರ್ಲೇಂಡ್ ಮತ್ತು ವುಲ್ಫ್ ಹಡಗು ಕಟ್ಟುವ ಸಂಸ್ಥೆಯು ನಿರ್ಮಿಸಲಾಯಿತು. ಆ ಸಮಯದಲ್ಲಿ ಟೈಟಾನಿಕ್ ಅನ್ನು ಬೆಲ್ಫಾಸ್ಟ್ನಲ್ಲಿ 1912ರಲ್ಲಿ ಕಟ್ಟಲಾಯಿತು. ಅದು ವಿಶ್ವದಲ್ಲಿ ಅತೀ ದೊಡ್ಡದಾದ ನೌಕಾಂಗಣವಾಯಿತು.[೩೫]
ಶಾರ್ಟ್ ಬ್ರೋಥೆರ್ಸ್ plc ಒಂದು ಬ್ರಿಟೀಷ್ ಆಕಾಶ ಪ್ರದೇಶದ ಸಂಸ್ಥೆ ಬೆಲ್ಫಾಸ್ಟ್ನಲ್ಲಿ ನೆಲೆಸಿದೆ. ಅದು ವಿಶ್ವದಲ್ಲೇ ಮೊಟ್ಟಮೊದಲ ವಿಮಾನ ತಯಾರಿಸುವ ಸಂಸ್ಥೆಯಾಗಿತ್ತು. ಸಂಸ್ಥೆಯು ಬೆಲ್ಫಾಸ್ಟ್ ಜೊತೆಗಿನ ಒಡನಾಟವನ್ನು 1936ರಲ್ಲಿ ಶಾರ್ಟ್ & ಹರ್ಲೇಂಡ್ Ltd ಜೊತೆ ಆರಂಭಿಸಿತು. ಶಾರ್ಟ್ಸ್ ಮತ್ತು ಹರ್ಲೇಂಡ್ ಮತ್ತು ವೊಲ್ಫ್ನ ಜಂಟಿ ಹೂಡಿಕೆಯಾಗಿತ್ತು. ಈಗ ಶಾರ್ಟ್ಸ್ ಬೊಂಬಾರ್ಡೀಯರ್ ಎಂದು ಹೇಳಲಾಗುತ್ತದೆ. ಅದು ಅಂತರರಾಷ್ಟ್ರೀಯ ವಿಮಾನ ತಯಾರಿಸುವ ಸ್ಥಳವಾಗಿದೆ ಮತ್ತು ಪೋರ್ಟ್ ಆಫ್ ಬೆಲ್ಫಾಸ್ಟ್ನ ಪಕ್ಕದಲ್ಲಿ ಸ್ಥಾಪಿಸಲಾಗಿದೆ.[೧೦೯] ದೊಡ್ಡ ಪ್ರಮಾಣದಲ್ಲಿ ಉತ್ಪತ್ತಿ ಮಾಡಲಾಗುತ್ತಿದ್ದ ಹತ್ತಿಯ ಉಡಿಗೆಯ ಒಂದನೇಯ ಮಹಾಯುದ್ದದ ಕಾರಣ ಬೆಲ್ಫಾಸ್ಟ್ ಪ್ರಪಂಚದ ಇತರೆಡೆಗೆ ಇದ್ದ ನಾರುಬಟ್ಟೆಯ ವ್ಯಾಪಾರದ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿತು.[೧೦೭] ಬ್ರಿಟೀಷ್ನ ಅನೇಕ ಪಟ್ಟಣಗಳು ಸಾಂಪ್ರದಾಯಿಕ ಶ್ರಮದ ಕೈಗಾರಿಕೆಯನ್ನು ಅವಲಂಬಿಸಿದ್ದವಾಗಿದ್ದವು. ಬೆಲ್ಫಾಸ್ಟ್ 1960ರ ತರುವಾಯ ಅಪಾಯಕರ ಇಳಿತವನ್ನು ಅನುಭವಿಸಿತು. 1970ರ ಮತ್ತು 1980ರ ದಿ ಟ್ರಬಲ್ಸ್ನಿಂದಾಗಿ ಹೆಚ್ಚಿನ ತೊಂದರೆ ಅನುಭವಿಸಿತು. 100,000ಗಿಂತ ಹೆಚ್ಚಿನ ಕೆಲಸವನ್ನು 1970ರಿಂದ ಇಲ್ಲಿಯವರೆಗೆ ಕಳೆದುಕೊಂಡಿದೆ.[೧೧೦] ಕೆಲವು ದಶಮಾನಕ್ಕೆ, ನಾರ್ಥನ್ ಐರ್ಲೆಂಡ್ನ ಆರ್ಥಿಕತೆಯು ಸಾರ್ವಜನಿಕ ಬೆಂಬಲ ಬ್ರಿಟಿಷ್ ಬೊಕ್ಕಸದಿಂದ ಯುಕೆ£4 ಮಿಲಿಯ ಪ್ರತಿ ವರ್ಷಕ್ಕೆ ಬೇಕಾಗಿತ್ತು.[೧೧೦] ನಡೆಯುತ್ತಿರುವ ಪಂಥೀಯ ಹಿಂಸಾಚಾರದಿಂದ ಬೆಲ್ಫಾಸ್ಟ್ಗೆ ಡಬ್ಲಿನ್ ಸೆಲ್ಟಿಕ್ ಟೈಗರ್ ಜೊತೆ ಸ್ಪರ್ಧಿಸಲು ಕಷ್ಟವಾಯಿತು.[೧೧೦] ಈ ಪರಿಣಾಮವಾಗಿ ರಿಪಬ್ಲಿಕ್ ಆಫ್ ಐರ್ಲೆಂಡ್ಗಿಂತ ಬೆಲ್ಫಾಸ್ಟ್ ಮತ್ತು ನರ್ದರ್ನ್ ಐರ್ಲೆಂಡ್ನಲ್ಲಿ ವೇತನ ದರವು ಕಡಿಮೆಯಾಗಿತ್ತು. ಐರಿಶ್ ರಿಪಬ್ಲಿಕ್ನ ಆರ್ಥಿಕ ಕುಸಿತದ ಪರಿಣಾಮದಿಂದ ವೇತನ ಮಟ್ಟವು ತುಂಬ ಸ್ಪಷ್ಟವಾಗಿಲ್ಲ. ನಾರ್ಥನ್ ಐರ್ಲೆಂಡ್ನ ಜೀವನ ವೆಚ್ಚ ಗಣರಾಜ್ಯಕ್ಕಿಂತ ಸಾರ್ಥಕವಾಗಿ ಕಡಿಮೆ ಇದೆ ಮತ್ತು ಇದರಿಂದ ಗಡಿ ನಗರದಲ್ಲಿ ಮತ್ತು ಪಟ್ಟಣದಲ್ಲಿ ಬಿಡಿ ಮಾರಾಟದಲ್ಲಿ ಹೆಚ್ಚಳ ಕಂಡು ಬರಲು ಕಾರಣವಾಯಿತು.
ನಾರ್ದರ್ನ್ ಐರ್ಲೆಂಡ್ ಕೆಟ್ಟದಾದ ದಿ ಟ್ರಬಲ್ಸ್ಗಳನ್ನು ಕಂಡಿತು, ಸಂಘರ್ಷಣೆ ಸಂಭವಿಸಿದರಿಂದ ಸುಮಾರು ಅರ್ಧದಷ್ಟು ಮರಣವು ನಗರದಲ್ಲಿ ಉಂಟಾಯಿತು. ಆದರೂ, 1998ರ ಗುಡ್ ಫ್ರೈಡೆ ಅಗ್ರೀಮೆಂಟ್ ತರುವಾಯ ನಗರದ ಕೇಂದ್ರಭಾಗಗನ್ನೊಳಗೊಂಡಂತೆ, ವಿಕ್ಟೋರಿಯಾ ಸ್ಕ್ವೇರ್, ಕ್ವೀನ್ಸ್ ದ್ವೀಪ, ಮತ್ತು ಲಗಾನ್ಸೈಡ್ ಅದರ ಜೊತೆಗೆ ಒಡಿಸ್ಸೀ ಸಂಕೀರ್ಣ ಮತ್ತು ನೆಲಗುರುತು ವಾಟರ್ಫ್ರಂಟ್ ಹಾಲ್ಗಳು ಪ್ರಮುಖವಾದ ನಗರ ಪುನರುಜ್ಜೀವನಕ್ಕೊಳಗಾಯಿತು. ಪಟ್ಟಣದಲ್ಲಿ ಎರಡು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದೆ: ಬೆಲ್ಫಾಸ್ಟ್ ಲಾಗ್ನ ಪಕ್ಕದಲ್ಲಿರುವ ಜಾರ್ಜ್ ಬೆಸ್ಟ್ ಬೆಲ್ಫಾಸ್ಟ್ ಸಿಟಿ ಏರ್ಪೋರ್ಟ್ ಮತ್ತು ಲಾಗ್ ನೀಗ್ ಪಕ್ಕದ ಬೆಲ್ಫಾಸ್ಟ್ ಇಂಟರ್ನ್ಯಾಶನಲ್ ಏರ್ಪೋರ್ಟ್. ಬೆಲ್ಫಾಸ್ಟ್ನ ಕ್ವೀನ್ಸ್ ವಿಶ್ವವಿದ್ಯಾಲಯವು ಪಟ್ಟಣದ ಮುಖ್ಯ ವಿಶ್ವವಿದ್ಯಾಲಯವಾಗಿದೆ. ಅಲ್ಸ್ಟರ್ ವಿಶ್ವವಿದ್ಯಾಲಯ ನಗರದಲ್ಲಿ ಕಾಲೆಜು ಆವರಣವನ್ನು ನಿರ್ವಹಿಸುತ್ತದೆ, ಅದು ವರ್ಣಚಿತ್ರ, ವಿನ್ಯಾಸ ಮತ್ತು ವಾಸ್ತುಶಾಸ್ತ್ರದೆಡೆಗೆ ಕೇಂದ್ರೀಕರಿಸುತ್ತದೆ.
ಬೆಲ್ಫಾಸ್ಟ್ ಡಬ್ಲಿನ್-ಬೆಲ್ಫಾಸ್ಟ್ ಮಾರ್ಗದ ಪ್ರದೇಶವನ್ನೊಳಗೊಂಡಿದ್ದು 3 ಮಿಲಿಯನ್ಗಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ.
ಬೆಲ್ಫಾಸ್ಟ್ಗೆ ಬಹುಪಾಲು ನೀರನ್ನು ಮೌರ್ನೆ ಬೆಟ್ಟಗಳಿಂದ ನೀರನ್ನು ಸಂಗ್ರಹಿಸಲು ನಿರ್ಮಿಸಿದ ಕೌಂಟಿ ಡೌನ್ನ ಸೈಲೆಂಟ್ ವ್ಯಾಲೀ ರಿಸರ್ವಯರ್ ಪೂರೈಕೆಮಾಡುತ್ತದೆ.[೧೧೧] ಉಳಿದ ಪಟ್ಟಣದ ನೀರಿನ ವ್ಯವಸ್ಥೆಯು ಕೌಂಟಿ ಆಯ್ಟ್ರೀಮ್ನಲ್ಲಿನ ಡುನೋರೆ ವಾಟರ್ ಟ್ರೀಟ್ಮೆಂಟ್ ವರ್ಕ್ಸ್ ನ ಮೂಲಕ ಬರುವ ಲೊಗ್ ನೀಗ್ನಿಂದ ಪೂರೈಕೆಯಾಗುತ್ತದೆ.[೧೧೨] ಬೆಲ್ಫಾಸ್ಟ್ನ ಪ್ರಜೆಗಳು ನೀರಿನ ಬಿಲ್ಲನ್ನು ದರದ ಬಿಲ್ಲಿನ ಮೂಲಕ ಪಾವತಿ ಮಾಡುತ್ತಾರೆ. ಹೆಚ್ಚುವರಿ ನೀರಿನ ಸುಂಕದ ಯೋಜನೆಯನ್ನು ಮೇ 2007ರಲ್ಲಿ ಖಾಸಗೀಕರಣ ಮಾಡಲಾಗಿದೆ.[೧೧೩] ಬೆಲ್ಫಾಸ್ಟ್ಗೆ ಸುಮಾರು 1,300 km (808 mi)ಒಳಚರಂಡಿ ವ್ಯವಸ್ಥೆಯಿದ್ದು , ಅದು ಈಗ ಯುಕೆ£100 ಮಿಲಿಯ ಬೆಲೆಯ ಯೋಜನೆಯಿಂದ ಬದಲಿಸಲಾಗಿದೆ ಮತ್ತು ಅದು 2009ರಲ್ಲಿ ಮುಕ್ತಾಯವಾಗುವ ನಿರೀಕ್ಷೆ ಇದೆ.[೧೧೪]
ನಾರ್ದರ್ನ್ ಐರ್ಲೆಂಡ್ ಎಲೆಕ್ಟ್ರಿಸಿಟಿಯು ನಾರ್ದರ್ನ್ ಐರ್ಲೆಂಡ್ಗೆ ವಿದ್ಯುಚ್ಛಕ್ತಿ ಪೂರೈಸುತ್ತದೆ. ಬೆಲ್ಫಾಸ್ಟ್ಗೆ ವಿದ್ಯುಚ್ಛಕ್ತಿ ಕಿಲ್ರೂಟ್ ಪವರ್ ಸ್ಟೇಷನಿನಿಂದ ಬರುತ್ತದೆ, ಅದು 520 ಮೆಗಾವ್ಯಾಟ್ ಇಬ್ಬಗೆಯ ಇದ್ದಲು ಮತ್ತು ತೈಲ ಜ್ವಾಲೆಯ ಕಾರ್ಖಾನೆ, ಕಾರ್ರಿಕ್ಫೆರ್ಗುಸ್ನ ಸಮೀಪದಲ್ಲಿ ಈ ಕಾರ್ಖಾನೆ ಇದೆ.[೧೧೨] ಸಿರಿಫೆರ್ಗಸ್ ಸಮೀಪದ ಸ್ಟೇಷನ್ನಿಂದ ಗ್ರೇಟರ್ ಬೆಲ್ಫಾಸ್ಟ್ಗೆ ನೈಸರ್ಗಿಕ ಅನಿಲವನ್ನು ಐರಿಶ್ ಸಮುದ್ರದ ಮುಖಾಂತರ ಸ್ಟನ್ರಾರ್ ಮೂಲಕ ಸಾಗಿಸಲು ಫಿನಿಕ್ಸ್ ನ್ಯಾಚುರಲ್ ಗ್ಯಾಸ್ ಲಿಮಿಟೆಡ್ ಪರವಾನಿಗೆ ನೀಡಿದೆ.[೧೧೨] ಏಪ್ರಿಲ್ 2007ರಲ್ಲಿ ಬೆಲ್ಫಾಸ್ಟ್ನ (ಮತ್ತು ಉಳಿದ ನಾರ್ದರ್ನ್ ಐರ್ಲೆಂಡ್ ಪ್ರದೇಶಗಳಲ್ಲಿ) ಅನಿಲದರವನ್ನು ಪರಿಷ್ಕರಿಸಲಾಯಿತು. ವ್ಯಾಲ್ಯೂಯೆಶನ್ ಆಯ್೦ಡ್ ಲ್ಯಾಂಡ್ಸ್ ಏಜನ್ಸಿ ಯು ಪ್ರತಿಯೊಂದು ಮನೆಯ ಆಸ್ತಿಯ ಮೌಲ್ಯ ನಿರ್ಧರಿಸಿ ಪ್ರತಿಯೊಂದು ಮನೆಗೂ ಪ್ರತ್ಯೇಕವಾದ ಬಂಡವಾಳ ಮೌಲ್ಯ ವ್ಯವಸ್ಥೆ ಅಂದರೆ ದರ ನಿಗದಿ ಮಾಡುತ್ತದೆ.[೧೧೫] ಇತ್ತೀಚಿನ ಮನೆಯ ಬೆಲೆ ಏರಿಕೆಯಿಂದಾಗಿ ಈ ವ್ಯವಸ್ಥಯು ಪ್ರಸಿದ್ಧವಾಗಿಲ್ಲ.[೧೧೬]
ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಅವರಿಂದ ಏಪ್ರಿಲ್ 1 2007ರಲ್ಲಿ ರಚಿಸಲಾದ ಐದು ಸಂಸ್ಥೆಯಲ್ಲಿ ಬೆಲ್ಫಾಸ್ಟ್ ಹೆಲ್ತ್ & ಸೋಶಿಯಲ್ ಕೇರ್ ಟ್ರಸ್ಟ್ ಕೂಡ ಒಂದಾಗಿದೆ. ಬೆಲ್ಫಾಸ್ಟ್ ನಾರ್ದರ್ನ್ ಐರ್ಲೆಂಡ್ನ ಅನೇಕ ಪ್ರಾದೇಶಿಕ ತಜ್ಞ ಕೇಂದ್ರವನ್ನು ಒಳಗೊಂಡಿದೆ.[೧೧೭] ನಾರ್ದರ್ನ್ ಐರ್ಲ್ಯಾಂಡ್ನ ರಾಯಲ್ ವಿಕ್ಟೋರಿಯಾ ಹಾಸ್ಪಿಟಲ್ ಮಾನಸಿಕ ಸುರಕ್ಷತೆಗೆ ಮತ್ತು ತಜ್ಞ ಮಾನಸಿಕ ಸುರಕ್ಷತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ-ಹೆಸರಾದ ಕೇಂದ್ರಗಳಾಗಿವೆ.[೧೧೮] ಅದರ ಜೊತೆಗೆ ಸಿಟಿಯು ನರಶಸ್ತ್ರಚಿಕಿತ್ಸೆಗೆ, ನೇತ್ರವಿಜ್ಞಾನ, ಇಎನ್ಟಿ, ಮತ್ತು ದಂತ ವಿಜ್ಞಾನ ಸೇವೆಯನ್ನು ಒದಗಿಸುತ್ತದೆ. ಬೆಲ್ಫಾಸ್ಟ್ ಸಿಟಿ ಹಾಸ್ಪಿಟಲ್ ರಕ್ತವಿಜ್ಞಾನಕ್ಕೆ ಪ್ರಾದೇಶಿಕ ತಜ್ಞ ಕೇಂದ್ರವಾಗಿದೆ ಮತ್ತು ಅರ್ಬುದ ರೋಗದ ಕೇಂದ್ರವು ಜಗತ್ತಿನಲ್ಲಿ ಅತ್ಯುತ್ತಮ ಸೇವೆ ನೀಡುತ್ತಿದೆ.[೧೧೯] ಸಿಟಿ ಹಾಸ್ಪಿಟಲ್ ನ ಮೇರಿ ಜಿ ಮಕ್ಗೆವನ್ ಪ್ರಾದೇಶಿಕ ಮೂತ್ರಪಿಂಡ ಶಾಸ್ತ್ರ ಘಟಕವು ಒಂದು ಮೂತ್ರಪಿಂಡ ವರ್ಗಾಯಿಸುವ ಕೇಂದ್ರವಾಗಿದೆ ಮತ್ತು ನಾರ್ದರ್ನ್ ಐರ್ಲೆಂಡ್ ಗೆ ಪ್ರಾದೇಶಿಕ ಮೂತ್ರಪಿಂಡಗಳ ಯಾ ಅದಕ್ಕೆ ಸಂಬಂಧಿಸಿದ ಸೇವೆಯನ್ನು ಒದಗಿಸುತ್ತದೆ.[೧೨೦] ದಕ್ಷಿಣ ಬೆಲ್ಫಾಸ್ಟ್ನ ಮಸ್ಗ್ರೇವ್ ಪಾರ್ಕ್ ಹಾಸ್ಪಿಟಲ್ ಮೂಳೆಚಿಕಿತ್ಸೆ, ಸಂಧಿವಾತ ರೋಗ, ಕ್ರೀಡೆಯ ಔಷಧ ಮತ್ತು ಪುನಶ್ಚೈತನ್ಯಗೊಳಿಸುವಿಕೆಯಲ್ಲಿ ತಜ್ಞವಾದ ಆಸ್ಪತ್ರೆಯಾಗಿದೆ. ಮೇ 2006ರಲ್ಲಿ ನಾರ್ದರ್ನ್ ಐರ್ಲೆಂಡ್ನ ಮೊದಲ ಎಕ್ಯೈರ್ಡ್ ಬ್ರೇನ್ ಇನ್ಜುರಿ ಯುನಿಟ್ ಪ್ರಾರಂಭವಾಯಿತು, ಇದನ್ನು ಪ್ರಿನ್ಸೆ ಆಫ್ ವೆಲೆಸ್ ಮತ್ತು ಡುಚೆಸ್ಸ್ ಆಫ್ ಕಾರ್ನ್ವಾಲ್ ಉದ್ಘಾಟಿಸಿದರು. ಇದನ್ನು ನಿರ್ಮಿಸಲು ಸುಮಾರು GB£9 ಮಿಲಿಯ ವೆಚ್ಚ ತಗಲಿದೆ.[೧೨೧] ಬೆಲ್ಫಾಸ್ಟ್ನಲ್ಲಿರುವ ಇತರೆ ಆಸ್ಪತ್ರೆಗಳು ಉತ್ತರ ಬೆಲ್ಫಾಸ್ಟ್ನಲ್ಲಿ ಮೇಟರ್ ಹಾಸ್ಪಿಟಲ್ ಮತ್ತು ಚಿಲ್ಡ್ರನ್ಸ್ ಹಾಸ್ಪಿಟಲ್.
ಬೆಲ್ಫಾಸ್ಟ್ ಯುರೋಪ್ ದರ್ಜೆಯ ಕಾರು ಹೊಂದುರುವ ಪಟ್ಟಣವಾಗಿದೆ, 22.5 miles (36 km) M2 ಮತ್ತು M22 ಒಳಗೊಂಡಂತೆ ದೊಡ್ಡ ಪ್ರಮಾಣದ ರಸ್ತೆ ಮಾರ್ಗವನ್ನು ಹೊಂದಿದೆ.[೧೨೨] ನಾರ್ದರ್ನ್ ಐರ್ಲೆಂಡ್ನ ಇತ್ತೀಚಿನ ಪರಿಶೀಲನೆಯ ಪ್ರಕಾರ ಬೆಲ್ಫಾಸ್ಟ್ನ 77%ರಷ್ಟು ಜನರು ಕಾರಿನಿಂದ, 11% ಸಾರ್ವಜನಿಕ ಸಾರಿಗೆಯಿಂದ ಮತ್ತು 6% ಕಾಲ್ನಡಿಗೆಯಿಂದ ಪ್ರಯಾಣವನ್ನು ಮಾಡುತ್ತಾರೆ.[೧೨೩] ಜೊತೆಗೆ ನಾರ್ದರ್ನ್ ಐರ್ಲೆಂಡ್ನ 1.18 ಪೂರ್ವ ಮತ್ತು 1.14 ಪಶ್ಚಿಮದ ಅಂಕಿ ಅಂಶಕ್ಕೆ ಹೋಲಿಸಿದಾಗ ಪ್ರತಿ ಮನೆಗೆ 0.70 ಕಾರುಗಳನ್ನು ಹೊಂದಿದೆ.[೧೨೩] 2006ರಲ್ಲಿ ಒಂದು ಮಹತ್ವವಾದ ರಸ್ತೆ ಅಭಿವೃದ್ಧಿ-ಕಾರ್ಯಯೋಜನೆ ಬೆಲ್ಫಾಸ್ಟ್ನಲ್ಲಿ ಶುರುವಾಯಿತು, ವೆಸ್ಟ್ಲಿಂಕ್ ಉದ್ದಕ್ಕೂ ಎರಡು ಜಂಕ್ಷನ್ಗಳನ್ನು ದ್ವಿ- ರಸ್ತೆಗಳನ್ನಾಗಿ ದರ್ಜೆ ಆಧಾರದ ಮೇಲೆ ವಿಭಜಿಸಲಾಯಿತು. ಅಭಿವೃದ್ಧಿಯ ಕಾರ್ಯಯೋಜನೆಯು ಐದು ತಿಂಗಳು ತಡವಾಗಿ ಫೆಬ್ರವರಿ 2009ರಲ್ಲಿ ಮುಗಿಯಿತು, ಮತ್ತು ಮಾರ್ಚ್ 4 2009ರಂದು ಅಧಿಕೃತವಾಗಿ ಓಡಾಟಕ್ಕೆ ಮುಕ್ತವಾಯಿತು.[೧೨೪] ಈ ವಿಭಾಜಕವು ಯಾರ್ಕ್ ಸ್ಟ್ರೀಟ್ನಲ್ಲಿ ತೊಂದರೆಯನ್ನುಂಟು ಮಾಡಬಹುದು ಎಂದು ವ್ಯಾಖ್ಯಾನಕಾರ ವಾದಮಾಡಿದ್ದರು Commentators have argued that this may simply create a bottleneck at York Street, the next at-grade intersection, until that too is upgraded. ಯಾರ್ಕ್ ಸ್ಟ್ರೀಟ್ ಈಗ ಪುನರ್ಪರಿಶೀಲನಾ ಹಂತದಲ್ಲಿದೆ ಮತ್ತು ಶಾಸನಬದ್ಧ ಕ್ರಮವನ್ನು ಪೂರ್ಣಗೊಳಿಸಿದರೇ, ಗ್ರೇಡ್ ವಿಭಜಿಸುವ ಜಂಕ್ಷನ್ನಿಂದ ವೆಸ್ಟ್ಲಿಂಕ್ಗೆ ಜೋಡಿಸುವ M2/M3 ರಸ್ತೆ 2013/14 ರಿಂದ 2017/2018ರೊಳಗೆ ಸಂಚರಿಸಬಹುದಗಿದೆ,[೧೨೫] ಅದು M1 ಮತ್ತು M2 ಎಂಬ ಎರಡು ಮುಖ್ಯ ರಸ್ತೆಯು ನಾರ್ದರ್ನ್ ಐರ್ಲೆಂಡ್ಗೆ ನಿರಂತರ ಸಂಪರ್ಕವನ್ನು ಕಲ್ಪಿಸುತ್ತದೆ.
ಬ್ಲಾಕ್ ಟ್ಯಾಕ್ಸಿಗಳು ಪಟ್ಟಣದಲ್ಲಿ ಸಾಮಾನ್ಯವಾಗಿದೆ, ಕೆಲವು ಕಡೆಯಲ್ಲಿ ಹಂಚಿಕೆ ಪ್ರಕಾರದಲ್ಲಿ ಹಲವಾರು ಪ್ರಯಾಣಿಕರು ತಮ್ಮ ತಮ್ಮ ಸ್ಥಳಗಳಿಗೆ ತೆರಳಬಹುದು. ಆದರೂ, ಇವುಗಳು ಖಾಸಗಿ ವಾಹನಗಳ ದರಗಳಿಗಿಂತ ಹೆಚ್ಚಾಗಿದೆ. ನಾರ್ದರ್ನ್ ಐರ್ಲೆಂಡ್ನಲ್ಲಿ ಬಸ್ ಮತ್ತು ರೈಲಿನ ಸಾರ್ವಜನಿಕ ಸಾರಿಗೆಯನ್ನು ಟ್ರಾನ್ಸ್ಲಿಂಕ್ ಎಂಬ ಅಧೀನ ಸಂಸ್ಥೆಯು ನಡೆಸುತ್ತಿದೆ. ಬಸ್ ಸೇವೆಗಳು ನಗರದಲ್ಲಿ ಮತ್ತು ಉಪನಗರದಲ್ಲಿ ಟ್ರಾನ್ಸ್ಲಿಂಕ್ ಮೆಟ್ರೋ ಮೂಲಕ ನಿರ್ವಹಿಸಲಾಗುತ್ತಿದೆ, ನಗರದ ಕೇಂದ್ರಭಾಗದಿಂದ ಹನ್ನೆರಡನೆಯ ದರ್ಜೆಯ ಬಸ್ ಕಾರಿಡಾರ್ ಮೂಲಕ ಹೊರಪ್ರದೇಶಗಳತ್ತ ಹೊರಡುವ ಮುಖ್ಯವಾದ ರೇಡಿಯಲ್ ರಸ್ತೆಗಳ ಮೂಲಕ ವಸತಿ ಪ್ರದೇಶಗಗಳಿಗೆ ಸಂಪರ್ಕ ಕಲ್ಪಿಸುವತ್ತ ಇವುಗಳು ಸೇವೆ ನೀಡುತ್ತಿವೆ, ಕೆಲವು ಉಪ ನಗರಗಳ ಮಧ್ಯೆ ಸಂಪರ್ಕ ಕಡಿಮೆ ಇದೆ.[ಸೂಕ್ತ ಉಲ್ಲೇಖನ ಬೇಕು] ಅನೇಕ ದೂರದ ಉಪನಗರಗಳಿಗೆ ಉಲ್ಸ್ಸ್ಟೆರ್ ಬಸ್ ಸೇವೆ ಒದಗಿಸಲಾಗಿದೆ. ನಾರ್ದರ್ನ್ ಐರ್ಲೆಂಡ್ ರೈಲ್ವೆ ಮೂರು ಮಾರ್ಗದ ಮೂಲಕ ಬೆಲ್ಫಾಸ್ಟ್ನ ನಾರ್ದರ್ನ್ ಉಪನಗರಗಳಾದ ಕಾರ್ರಿಕ್ಫೆರ್ಗುಸ್ ಮತ್ತು ಲರ್ನೆಗೆ ಮತ್ತು ಪೂರ್ವದ ಕಡೆಯಿಂದ ಬಂಗೊರ್ಗೆ ಮತ್ತು ನೈಋತ್ಯ-ಭಾಗದಿಂದ ಲಿಸ್ಬುರ್ನ್ ಮತ್ತು ಪೋರ್ಟಡೌನ್ ಕಡೆಗೆ ಸೇವೆಯನ್ನು ಸಲ್ಲಿಸುತ್ತದೆ. ಈ ಸೇವೆ ಬೆಲ್ಫಾಸ್ಟ್ ಉಪನಗರ ರೇಲ್ವೆ ಪದ್ಧತಿ ಎಂದು ಕರೆಯಲ್ಪಡುತ್ತದೆ. ಬೆಲ್ಫಾಸ್ಟ್ಗೆ ಡಬ್ಲಿನ್ನಿಂದ ನೇರ ರೈಲು ಸಂಪರ್ಕ ಇದೆ, ಅದನ್ನು ಎಂಟರ್ಪ್ರೈಸ್ ಎಂದು ಕರೆಯುತ್ತಾರೆ ಅದನ್ನು ಎನ್ಐಆರ್ ಮತ್ತು ಲಾರ್ನೋಡ್ ಇರೆಯನ್ ಜಂಟಿಯಾಗಿ ನಿರ್ವಹಿಸುತ್ತಿವೆ, ಇದು ರಿಪಬ್ಲಿಕ್ ಆಫ್ ಐರ್ಲೆಂಡ್ನ ಸರ್ಕಾರಿ ರೈಲ್ವೆ ಇಲಾಖೆಯ ಸಂಸ್ಥೆಯಾಗಿದೆ.
ಏಪ್ರಿಲ್ 2008ರಲ್ಲಿ, ಡಬ್ಲಿನ್ ನಲ್ಲಿರುವಂತೆ, ಡಿಆರ್ಡಿ ಲಘು-ರೈಲ್ ವ್ಯವಸ್ಥೆಯ ಯೋಜನೆಯನ್ನು ತರುವ ಬಗ್ಗೆ ವರದಿ ಸಲ್ಲಿಸಿದರು. ಬೆಲ್ಫಾಸ್ಟ್ಗೆ ಲಘು ರೈಲ್ ವ್ಯವಸ್ಥೆಗೆ ಬೇಕಾಗುವಷ್ಟು ಜನಸಂಖ್ಯೆ ಇಲ್ಲ, ಬಸ್-ಮಾದರಿಯ ತ್ವರಿತ ಸಾಗಣೆಗೆ ಹೂಡಿಕೆ ಮಾಡಬಹುದೆಂದು ಸಲಹಾಕಾರರು ತಿಳಿಸಿದರು.ಒಂದು ಅಧ್ಯಯನದ ಪ್ರಕಾರ ಬಸ್-ಮಾದರಿಯ ತ್ವರಿತ ಸಾಗಣೆ ಸಕಾರಾತ್ಮಕ ಆರ್ಥಿಕ ಫಲಿತಾಂಶ ಉಂಟುಮಾಡುತ್ತದೆ, ಆದರೆ ಲಘು ರೈಲ್ ವ್ಯವಸ್ಥೆ ಮಾಡುವುದಿಲ್ಲ. ಲಘು ರೈಲ್ ವ್ಯವಸ್ಥೆಗೆ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಬಹುದು ಎಂದು ಅಟ್ಕಿನ್ಸ್ ಮತ್ತು ಕೆಪಿಎಂಜಿ ವರದಿ ತಿಳಿಸಿದೆ.[೧೨೬]
ನಗರವು ಎರಡು ವಿಮಾನ ನಿಲ್ದಾಣಗಳನ್ನು ಹೊಂದಿದೆ : ಬೆಲ್ಫಾಸ್ಟ್ ಅಂತರಾಷ್ಟ್ರೀಯ ವಿಮಾನನಿಲ್ದಾಣವು ಸ್ಥಳೀಯ ವಾಯುಯಾನ, ಯುರೋಪ್ ರಾಷ್ಟ್ರಗಳಿಗೆ ಮತ್ತು ಅಟ್ಲಾಂಟಿಕ್ ಸಾಗರದಾಚೆಗೆ ಮಾತ್ರ ವಾಯುಯಾನ ಸೇವೆ ನೀಡುತ್ತದೆ ಮತ್ತು ನಗರದ ವಾಯುವ್ಯ ಭಾಗದ ಲೊಗ್ ನೀಗ್ ಸಮೀಪ ಜೊರ್ಜ್ ಬೆಸ್ಟ್ ಬೆಲ್ಫಾಸ್ಟ್ ಸಿಟಿ ಏರ್ಪೋರ್ಟ್ ಸ್ಥಾಪಿಸಲಾಗಿದೆ, ಇದು ನಗರದ ಕೇಂದ್ರಭಾಗಕ್ಕೆ ಸಮೀಪದಲ್ಲಿದ್ದು, ಬೆಲ್ಫಾಸ್ಟ್ ಲೊಗ್ನ ಪಕ್ಕದಲ್ಲಿದೆ, ಇಲ್ಲಿಂದ ಇಂಗ್ಲೇಂಡ್ನ ಸ್ಥಳೀಯ ವಿಮಾನಗಳು ಮತ್ತು ಕೆಲವು ಯೂರೋಪಿನ ವಿಮಾನಗಳು ಮಾತ್ರ ಹಾರಾಟ ನಡೆಸುತ್ತವೆ. 2005ರಲ್ಲಿ ಬೆಲ್ಫಾಸ್ಟ್ ಅಂತರಾಷ್ಟ್ರೀಯ ವಿಮಾನನಿಲ್ದಾಣವು ಯುಕೆಯಲ್ಲಿನ 11ನೇ ಬಿಡುವಿಲ್ಲದ ವಾಣಿಜ್ಯ ವಿಮಾನ ನಿಲ್ದಾಣವಗಿತ್ತು,ಜಾರ್ಜ್ ಬೆಸ್ಟ್ ಬೆಲ್ಫಾಸ್ಟ್ ಸಿಟಿ ಏರ್ಫೋರ್ಟ್ನಿಂದ 2% ಪ್ರಯಾಣಿಕರು ಪ್ರಯಾಣಿಸಿ 11ನೇ ಬಿಡುವಿಲ್ಲದ ವಿಮಾನ ನಿಲ್ದಾಣವಾಯಿತು, 1% ಪ್ರಯಾಣಿಕರು ಪ್ರಯಾಣಿಸಿ 16ನೇ ಬಿಡುವಿಲ್ಲದ ವಿಮಾನ ನಿಲ್ದಾಣವಾಯಿತು.[೧೨೮]
ಬೆಲ್ಫಾಸ್ಟ್ ಒಂದು ದೊಡ್ಡ ಬಂದರು ಹೊಂದಿದೆ ಅದನ್ನು ಸರಕುಗಳ ರಫ್ತು ಮಾಡುವಿಕೆಗೆ ಮತ್ತು ಆಮದು ಮಾಡುವಿಕೆಗೆ, ಮತ್ತು ಪ್ರಯಾಣಿಕರನ್ನು ದೋಣಿಯಲ್ಲಿ ಸಾಗಿಸುವ ಸೇವೆಗೆ ಉಪಯೋಗಿಸುತ್ತಾರೆ. ಸ್ಕಾಟ್ಲ್ಯಾಂಡ್ನ ಸ್ಟನ್ರಾರ್ಗೆ ಎಚ್ಎಸ್ಎಸ್ (ತ್ವರಿತ ಸೇವೆ) ದೋಣಿಯು ಸ್ಟೇನಾ ಲೈನ್ ಮೂಲಕ ಸೇವೆ ನೀಡುತ್ತದೆ ಇದು ಒಂದು ಕ್ರಮಬದ್ಧವಾದ ಮಾರ್ಗದಲ್ಲಿ ಸಂಚರಿಸುತ್ತದೆ, ಇದರಲ್ಲಿ ದಾಟಲು ಕೇವಲ 90 ನಿಮಿಷ ಸಾಕಾಗುತ್ತದೆ- ಮತ್ತು ಸಾಂಪ್ರದಾಯಿಕ ದೋಣಿಯಲ್ಲಿ ದಾಟುವುದಾದರೇ 3 ಗಂಟೆ 45 ನಿಮಿಷ ಬೇಕಾಗುತ್ತದೆ. ನೋರ್ಫಾಲ್ಕ್ಲೈನ್ - ನೋರ್ಸೆ ಮೆರ್ಚಂಟ್ ಫೆರ್ರಿಸ್ ಆಗಿದ್ದು - ಲಿವೆರ್ಪೂಲ್ ನಿಂದ ಮತ್ತು ಲಿವೆರ್ಪೂಲ್ ಗೆ ಪ್ರಯಾಣಿಕ/ಸರಕು ಸಾಗಣೆ ಮಾಡುತ್ತದೆ, ಅದರಲ್ಲಿ ದಾಟುವ ಸಮಯ ಹೆಚ್ಚುಕಡಿಮೆ 8 ಗಂಟೆಗಳು ಮತ್ತು ದೌಗ್ಲಾಸ್ನ ಐಲ್ ಆಫ್ ಮ್ಯಾನ್ ಪ್ರದೇಶಕ್ಕೆ ಋತುಕಾಲಿಕ ನೌಕಾಯಾನ ಏರ್ಪಡಿಸುತ್ತದೆ, ಇದನ್ನು ಐಲ್ ಆಫ್ ಮ್ಯಾನ್ ಸ್ಟ್ರೇಂ ಪ್ಯಾಕೆಟ್ ಕಂಪನಿಯು ನಿರ್ವಹಿಸುತ್ತದೆ.
ಬೆಲ್ಫಾಸ್ಟ್ನ ಜನಸಂಖ್ಯೆಯನ್ನು ಸಾಮಾನ್ಯವಾಗಿ ಪ್ರೋಟೆಸ್ಟಂಟ್ ಮತ್ತು ಕಥೊಲಿಕ್ ನಿವಾಸಿಗಳೆಂದು ವಿಭಜಿಸಲಾಗಿದೆ.[೭೭] ಈ ಎರಡು ಭಿನ್ನವಾದ ಸಂಸ್ಕೃತಿಯ ಸಮುದಾಯದವರು ಪಟ್ಟಣದ ಸಂಸ್ಕೃತಿಯ ಬೆಳವಣಿಗೆಗೆ ನೆರವಾಗಿದ್ದಾರೆ. ಟ್ರಬಲ್ಸ್ ನಾದ್ಯಂತ, ಬೆಲ್ಫಾಸ್ಟ್ನ ಕಲಾವಿದರು ಕವನ, ಕಲೆ ಮತ್ತು ಸಂಗೀತ ಮೂಲಕ ತಮ್ಮನ್ನು ತಾವು ತೆರೆದುಕೊಂಡರು. 1998 ಗುಡ್ ಫ್ರೈಡೆ ಅಗ್ರೀಮೆಂಟ್ ತರುವಾಯ, ಬೆಲ್ಫಾಸ್ಟ್ನ ಸಾಮಾಜಿಕ, ಆರ್ಥಿಕ ಮತ್ತು ಸಂಸ್ಕೃತಿಯ ಪರಿವರ್ತನೆಯಿಂದ ಅಂತರರಾಷ್ಟ್ರೀಯ ಸಾಂಸ್ಕೃತಿಕ ಮನ್ನಣೆಯನ್ನು ಪಡೆಯಿತು.[೧೨೯] 2003ರಲ್ಲಿ, 2008ರ ಯೂರೋಪಿಯನ್ ಕ್ಯಾಪಿಟಲ್ ಆಫ್ ಕಲ್ಚರ್ ಪಡೆಯಲು ನಡೆದ ಹರಾಜು ಪ್ರಕ್ರಿಯೆಯಲ್ಲಿ ಬೆಲ್ಫಾಸ್ಟ್ ವಿಫಲವಾಯಿತು. ಇಮಾಜಿನ್ ಬೆಲ್ಫಾಸ್ಟ್ , ಎಂಬ ಸ್ವಯಮಾಡಳಿತದ ಸಂಸ್ಥೆಯು ಹರಾಜನ್ನು ನಡೆಸಿತು, ಈ ಹರಾಜಿನಿಂದ "ಬೆಲ್ಫಾಸ್ಟ್ ಯುರೋಪ್ದ ಅತಿ ಪ್ರಸಿದ್ಧವಾದ ವ್ಯಕ್ತಿಗಳು ಸೇರುವ ಸ್ಥಳವಾಗುತ್ತದೆ, ಚರಿತ್ರೆ ಮತ್ತು ನಂಬಿಕೆಗೆ ಒಂದು ನೆಲೆ ಬೀಡಾಗುತ್ತದೆ ಹಾಗೂ ವ್ಯಂಗ್ಯ, ಅಣಕ ಬರಹ ಮತ್ತು ವಿಸ್ಮರಣೆಗಳಿಗೆ ಒಂದು ವೇದಿಯಾಗುತ್ತದೆ" ಎಂದು ಪ್ರಚಾರ ಮಾಡಿತು.[೧೩೦] ಪಟ್ಟಣದ ಚರಿತ್ರೆ ಮತ್ತು ಬಹುಬೇಗ ಬದಲಾಗಬಹುದಾದ ರಾಜಕಾರಣವು ಹರಾಜಿಗೆ ತೊಂದರೆಯುಂಟುಮಾಡಬಹುದು ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.[೧೩೧]
2004-05ರಲ್ಲಿನ, ಬೆಲ್ಫಾಸ್ಟ್ನ ಸಾಂಸ್ಕೃತಿಕ ಮತ್ತು ಕಲೆಯ ಸಮಾರಂಭಗಳಲ್ಲಿ 1.8 ಮಿಲಿಯ ಜನರು ಹಾಜರಿದ್ದರು (400,000 ಜನ ಹಿಂದಿನ ವರ್ಷಕಿಂತ ಹೆಚ್ಚು). ಅದೇ ವರ್ಷದಲ್ಲಿ, 80,000 ಜನ ಸಂಸ್ಕೃತಿಕ ಮತ್ತು ಕಲೆಯ ಚಟುವಟಿಕೆಯಲ್ಲಿ ಭಾಗವಹಿಸಿದರು, 2003–04 ಗಿಂತ ಎರಡುಪಟ್ಟು ಜಾಸ್ತಿ.[೧೩೨] ಈ ಪ್ರದೇಶದಲ್ಲಿರುವ ಶಾಂತಿ, ಅಂತರರಾಷ್ಟ್ರೀಯ ಹೂಡಿಕೆ ಮತ್ತು ಕಲೆಯ ಮತ್ತು ಸಂಸ್ಕೃತಿಗೆ ನೀಡಿದ ಸಕ್ರಿಯ ಪ್ರೋತ್ಸಾಹದಿಂದ ಬೆಲ್ಫಾಸ್ಟ್ ಪ್ರವಾಸಿಗರನ್ನು ಮೊದಲಿಗಿಂತ ಹೆಚ್ಚು ಸೆಳೆಯುತ್ತಿದೆ. 2004–05ರಲ್ಲಿ, 5.9 ಮಿಲಿಯ ಜನರು ಬೆಲ್ಫಾಸ್ಟ್ಗೆ ಭೇಟಿನೀಡಿದ್ದಾರೆ, ಹಿಂದಿನ ವರ್ಷಗಿಂತ ಸುಮಾರು 10%ರಷ್ಟು ಹೆಚ್ಚು, ಮತ್ತು ಯುಕೆ£262.5 ಮಿಲಿಯ ವೆಚ್ಚ ಮಾಡಿದ್ದಾರೆ.[೧೩೨]
ಬೆಲ್ಫಾಸ್ಟ್ನ, ಅಲ್ಸ್ಟರ್ ಆರ್ಕೆಸ್ಟ್ರ, ಒಂದೇ ನಾರ್ದರ್ನ್ ಐರ್ಲೆಂಡ್ನ ಪೂರ್ಣಾವಧಿಯ ಸ್ವರಮೇಳ ಆರ್ಕೆಸ್ಟ್ರಾ ವಾಗಿದೆ ಮತ್ತು ಅದು ಯುನೈಟೆಡ್ ಕಿಂಗ್ಡಮ್ನಲ್ಲಿ ಪ್ರಖ್ಯಾತವಾಗಿದೆ. ಇದು 1966ರಲ್ಲಿ ಸ್ಥಾಪನೆಯಾಯಿತು, ಬಿಬಿಸಿ ನಾರ್ದರ್ನ್ ಐರ್ಲೆಂಡ್ ಒರ್ಕೆಸ್ಟ್ರದಿಂದ ಒಡೆದು ಹೋಗುವವರೆಗೂ 1981ರ ರೂಪದಲ್ಲಿಯೇ ಇಂದಿಗೂ ಮುಂದುವರೆದಿದೆ.[೧೩೩] ಕ್ವೀನ್ಸ್ ಯುನಿವರ್ಸಿಟಿಯ ಸಂಗೀತ ಶಾಲೆಯು ಹೆಸರುವಾಸಿಯಾದ ಸಂಗೀತಗಾರರಿಂದ ಗಮನ ಸೆಳೆಯುವಂತಹ ಸಂಗೀತ ಕಚೇರಿಯನ್ನು ವಿಶ್ವವಿದ್ಯಾಲಯದ(ಯುನಿವರ್ಸಿಟಿ ಸ್ಕ್ವೇರ್) ದ ಹಾರ್ಟಿ ರೂಂನಲ್ಲಿ ಮಧ್ಯಾಹ್ನದ-ಊಟದ ಮತ್ತು ಸಂಜೆಯ ವೇಳೆ ನಡೆಸುತ್ತದೆ.
ಸಾಂಪ್ರದಾಯಿಕವಾದ ಕೆಲವು ಐರಿಶ್ ವಾದ್ಯಗೋಷ್ಠಿ ತಂಡಗಳು ಪಟ್ಟಣದ ಎಲ್ಲಾ ಕಡೆಯು ನುಡಿಸುತ್ತಾರೆ ಮತ್ತು ಇವುಗಳಲ್ಲಿ ಕೆಲವು ಸಂಗೀತ ಶಾಲೆಗಳು ಮಾತ್ರ ಸಾಂಪ್ರದಾಯಿಕ ಸಂಗೀತ ಕಲಿಸುವತ್ತ ಗಮನಹರಿಸಿವೆ. ಕೆಲ್ಲಿ ಸ್ ಸೆಲ್ಲರ್ಸ್, ಮಾಡೆನ್ಸ್ ಮತ್ತು ಹೆರ್ಕುಲೆಸ್ ಬಾರ್ನಂತಹ ಪಟ್ಟಣದ ಹೆಸರಾಂತ ನಿರ್ದಿಷ್ಟ ಸ್ಥಳಗಗಳಲ್ಲಿ ನುಡಿಸಲಾಗುತ್ತದೆ. ಮ್ಯಾಕ್ಪೀಕ್ಸ್, ಬ್ರಿಯಾನ್ ಕೆನೆಡಿ ಮತ್ತು ಬ್ಯಾಂಡ್ 9 ಲೈಸ್, ಇವರು ಹೆಸರಾಂತ ಕಲಾವಿದರು.
ಬೆಲ್ಫಾಸ್ಟ್ ಬಗ್ಗೆ ಸಂಗೀತ ಬರೆದು ಅಥವಾ ಸಮರ್ಪಿಸಿದ ಸಂಗೀತಗಾರರು ಮತ್ತು ವಾದ್ಯಗೋಷ್ಠಿಗಳು: ಯು2, ವ್ಯಾನ್ ಮೊರ್ರಿಸೋನ್, ಸ್ನೋ ಪೇಟ್ರೋಲ್, ಸಿಂಪಲ್ ಮೈಂಡ್ಸ್, ಎಲ್ಟನ್ ಜಾನ್, ಕೇಟಿ ಮೆಲುಅ, ಬೋನಿ ಎಂ, ಪೌಲ್ ಮುಲ್ಡೂನ್, ಸ್ಟಿಫ್ ಲಿಟಲ್ ಫಿಂಗರ್ಸ್, ನ್ಯಾನ್ಸಿ ಗ್ರಿಫಿತ್, ಗ್ಲೆನ್ ಪ್ಯಾಟರ್ರ್ಸನ್, ಒರ್ಬಿಟಲ್, ಜೇಮ್ಸ್ ಟೇಲರ್, ಸ್ಪ್ಯಾಂಡವ್ ಬ್ಯಾಲೆಟ್, ದಿ ಪೋಲಿಸ್, ಬಾರ್ನ್ಬ್ರ್ಯಾಕ್, ಗ್ಯಾರಿ ಮೂರ್.
ಬೆಲ್ಫಾಸ್ಟ್ನಲ್ಲಿ ಒಹ್ ಏಯ್ ಮ್ಯೂಸಿಕ್ ಸೆಂಟರ್ ಕೂಡ ಇದೆ(ಕೆಥೆಡ್ರಲ್ ಕ್ವಾರ್ಟರ್), ಇಲ್ಲಿ ಯುವ ವಯಸ್ಸಿನ ಸಂಗೀತಗಾರರು ಮತ್ತು ಕಲಾವಿದರಿಗೆ ಅವರ ಕಲ್ಪನೆಯನ್ನು ಹಂಚಿಕೊಳ್ಳಲು ಮತ್ತು ಅವರ ಸಂಗೀತ ವೃತ್ತಿಜೀವನವನ್ನು ಶುರುಮಾಡುವ ಯೋಜನೆಯನ್ನು ರೂಪಿಸಿಕೊಳ್ಳಲು ನಾರ್ದರ್ನ್ ಐರ್ಲೆಂಡ್ನ ವೃತ್ತಿನಿರತ ಸಂಗೀತಗಾರರಿಂದ ಬೆಂಬಲ ಮತ್ತು ಪ್ರೋತ್ಸಾಹ ದೊರೆಯುತ್ತದೆ.
ಉಳಿದ ನಾರ್ದರ್ನ್ ಐರ್ಲ್ಯಾಂಡ್ ಪಟ್ಟಣವು ಐರಿಶ್ ಮಾತೃಭಾಷೆ ಮಾತನಾಡುವ ಸಮುದಾಯವನ್ನು ಹೊಂದಿಲ್ಲ , ಅದಾಗ್ಯೂ ಪಟ್ಟಣದಲ್ಲಿ ಈ ಭಾಷೆಯನ್ನು ಮಾತನಾಡುವಂತೆ ಪ್ರೋತ್ಸಾಹ ನೀಡಲಾಗಿದೆ ಮತ್ತು ಬೆಲ್ಫಾಸ್ಟ್ ಉತ್ತರಕ್ಕೆ ಅನೇಕ ಐರಿಶ್ ಮಾತನಾಡುವವರು ಇದ್ದಾರೆ. ನಗರದಲ್ಲಿ ಭಾಷೆಯನ್ನು ಪ್ರೋತ್ಸಾಹಿಸಲು ನಾನಾ ರೀತಿಯ ಮೂಲಗಳಿಂದ ನಿಧಿ ಸಂಗ್ರಹಿಸಲಾಗಿದೆ, ಹೆಸರಾಂತ ಫೋರ್ಸ್ ನ ಗೇಲ್ಲ್ಗೆ, ಎಲ್ಲಾ-ಐರ್ಲೆಂಡ್ ಸಂಸ್ಥೆಗಳಿಂದ ಮತ್ತು ಐರಿಶ್ ಹಾಗೂ ಬ್ರಿಟಿಶ್ ಸರಕಾರದಿಂದ ನಿಧಿ ಕೊಡಲಾಗಿದೆ. ಬೆಲ್ಫಾಸ್ಟ್ನಲ್ಲಿ ಕೆಲವೇ ಐರಿಶ್ ಭಾಷೆಯ ಪ್ರಾಥಮಿಕ ಶಾಲೆ ಇದೆ ಮತ್ತು ಒಂದು ಪ್ರೌಢ ಶಾಲೆ ಇದೆ, ಆದರೂ ಅದಕ್ಕೆ ಬ್ರಿಟಿಶ್ ರಾಜ್ಯದ ಖಜಾನೆಯಿಂದ ನಿಧಿ ಕೊಡಲಾಗುತಿಲ್ಲ ಆದರೆ ವೈಯಕ್ತಿಕ ಸಂಗ್ರಹದಿಂದ ಮತ್ತು TACA ಔದಾರ್ಯದಿಂದ ಕೊಡಲಾಗುತ್ತಿದೆ.
ಬೆಲ್ಫಾಸ್ಟ್, ಜಗತ್ತಿನ ಹಳೆಯ, ಇನ್ನೂ ಮುದ್ರಣಗೊಳ್ಳುತ್ತಿರುವ ಇಂಗ್ಲೀಷ್ ವೃತ್ತ ಪತ್ರಿಕೆ ದ ನ್ಯೂಸ್ ಲೆಟರ್ ’ನ ತವರು.[೧೩೪][೧೩೫] ಇತರ ಪತ್ರಿಕೆಗಳು ಐರಿಷ್ ನ್ಯೂಸ್ ಹಾಗೂ ಬೆಲ್ಫಾಸ್ಟ್ ಟೆಲೆಗ್ರಾಫ್ - ಮತ್ತು ಸರ್ಕಾರಿ ಅನುದಾನಿತ ಐರಿಷ್ ಭಾಷೆಯ ದಿನಪತ್ರಿಕೆ ಲಾ ನ್ವಾ ಇದರ ಕಡಿಮೆ ಮಾರಾಟದಿಂದ ಇತ್ತೀಚಿಗೆ ಮುಚ್ಚಲಾಗಿದೆ.(from Irish: Lá Nua meaning "New Day") ಇವುಗಳಲ್ಲದೆ ನಗರದಲ್ಲಿ ಅನೇಕ ಉಚಿತವಾಗಿ ಮುದ್ರಣವಾಗುತ್ತಿರುವ ಪತ್ರಿಕೆಗಳಾದ ಗೊ ಬೆಲ್ಫಾಸ್ಟ್, ಫೇಟ್ ಮ್ಯಾಗ್ಜಿನ್ ಹಾಗೂ ವ್ಯಾಕ್ಯುಮ್ ಪತ್ರಿಕೆಗಳನ್ನು ಕಾಫಿ ಕೇಂದ್ರ, ಬಾರ್ ಹಾಗೂ ಇತರ ಸಾರ್ವಜನಿಕ ಸ್ಥಳಗಳ ಮೂಲಕ ಹಂಚಲಾಗುತ್ತದೆ.
ಈ ನಗರದಲ್ಲಿ ನಾರ್ದರ್ನ್ ಐರ್ಲೆಂಡ್ನ ಬಿಬಿಸಿಯು ತನ್ನ ಮುಖ್ಯ ಕಛೇರಿ ಹೊಂದಿದೆ. ಅಲ್ಲದೆ ಐಟಿವಿ ಸ್ಟೇಷನ್ನ ಯುಟಿವಿ ಮತ್ತು ವಾಣಿಜ್ಯ ರೇಡಿಯೋ ಕೇಂದ್ರಗಳಾದ ಬೆಲ್ಫಾಸ್ಟ್ ಸಿಟಿ ಬೀಟ್ ಮತ್ತು U105 ಎರಡು ಸಮುದಾಯ ರೇಡಿಯೋ ಸ್ಟೇಷನ್ಗಳಾದ ಫೇಯಿಲೆ ಎಫ್ಎಂ ಮತ್ತು ಐರಿಷ್ ಭಾಷೆಯ ಸ್ಟೇಷನ್ ರೇಡಿಯೋ ಫೇಯಿಲ್ಟ್ ತನ್ನ ಪ್ರಸಾರವನ್ನು ಪಶ್ಚಿಮ ಬೆಲ್ಫಾಸ್ಟ್ನಿಂದ ಮಾಡುತ್ತಿದೆ, ಕ್ವೀನ್ಸ್ ರೇಡಿಯೋವನ್ನು ಕ್ವೀನ್ಸ್ ಯುನಿವರ್ಸಿಟಿ ಸ್ಟುಡೆನ್ಟ್ಸ್ ಯುನಿಯನ್ ವಿದ್ಯಾರ್ಥಿಗಳು ನಡೆಸುತ್ತಿದ್ಧಾರೆ. ಉತ್ತರ ಐರ್ಲೆಂಡ್ನ ಎರಡು ಸಮುದಾಯಗಳ ಟಿವಿ ಸ್ಟೇಷನ್ಗಳಾದ ಎನ್ವಿ ನಗರದ ಕ್ಯಾಥೆಡ್ರಾಲ್ ಕ್ವಾರ್ಟ್ಗೆ ಸಂಬಂದಪಟ್ಟದ್ದು. ಬೆಲ್ಫಾಸ್ಟ್ ನಲ್ಲಿ ಎರಡು ಸ್ವತಂತ್ರ ಸಿನಿಮಾ ಹಾಲ್ಗಳಿವೆ, ಕ್ವೀನ್ಸ್ ಫಿಲ್ಮ್ ಥೀಯೆಟರ್ ಮತ್ತು ಸ್ಟ್ರಾಂಡ್ ಸಿನಿಮಾ, ಇವೆರಡು ಬೆಲ್ಫಾಸ್ಟ್ ಫಿಲ್ಮ್ ಫೇಸ್ಟಿವಲ್ ಮತ್ತು ಬೆಲ್ಫಾಸ್ಟ್ ಫೇಸ್ಟಿವಲ್ ಎಟ್ ಕ್ವೀನ್ಸ್ ಸಮಾರಂಭದ ಸಮಯದಲ್ಲಿ ಆತಿಥೇಯರಾಗಿ ಕೆಲಸ ನಿರ್ವಹಿಸುತ್ತವೆ. ಅಲ್ಲದೆ ಅಂತರ್ಜಾಲದ ಮುಖಾಂತರ ಪ್ರಸಾರವಾಗುವ ಏಕೈಕ ಉತ್ತರ ಐರ್ಲೆಂಡ್ನ ರೇಡಿಯೋ ಕಲ್ಚರಲ್ ರೇಡಿಯೋ ಸ್ಟೇಷನ್ ಹೋಮ್ಲಿ ಪ್ಲಾನೆಟ್, ಇದು ಸಮುದಾಯದ ಸಂಬಂಧಗಳನ್ನು ಬೆಂಬಲಿಸುತ್ತದೆ.[೧೩೬]
ನಗರವು ಚಲನಚಿತ್ರ ಚಿತ್ರೀಕರಣ ತಾಣಕ್ಕೆ ಪ್ರಸಿದ್ಧವಾಗಿದೆ. ಇಲ್ಲಿನ ಹರ್ಲ್ಯಾಂಡ್ನ ಪೇಯಿಂಟ್ ಹಾಲ್ ಮತ್ತು ವಲ್ಫ ಇಂಗ್ಲಾಂಡ್ ಫಿಲ್ಮ ಕೌನ್ಸಿಲ್ನ ಪ್ರಮುಖ ತಾಣವಾಗಿದೆ. ಇಲ್ಲಿ ಮುಖ್ಯವಾಗಿ ನಾಲ್ಕು ಹಂತದ ಸೇವೆಗಳಿವೆ 16,000 square feet (1,000 m2). ಇಲ್ಲಿ ತೆಗೆದ ಚಲನಚಿತ್ರಗಳು ಸಿಟಿ ಆಫ್ ಎಂಬರ್ ರನ್ನು ಹೊಂದಿರುತ್ತದೆ ಎಚ್ಬಿಒ ಚಾನಲ್ನ ಗೆಮ್ ಆಫ್ ಥ್ರೊನ್ಸ್ 2009ರ ನಂತರ ಇಲ್ಲಿಂದಲೇ ಶುರುವಾಯಿತು.
ಕ್ರೀಡೆಯನ್ನು ನೋಡುವುದು ಮತ್ತು ಆಡುವುದು ಬೆಲ್ಫಾಸ್ಟ್ ಸಂಸ್ಕೃತಿಯ ಮುಖ್ಯಭಾಗವಾಗಿದೆ. ಉತ್ತರ ಐರ್ಲೆಂಡ್ ಹತ್ತರಲ್ಲಿ ಆರು ಭಾಗದಷ್ಟು (59%) ಯುವಜನ ಯಾವಾಗಲೂ ಒಂದಲ್ಲ ಒಂದು ಕ್ರೀಡೆಯಲ್ಲಿ ಪಾಲ್ಗೊಳುತ್ತಾರೆ.[೧೩೭] ಬೆಲ್ಫಾಸ್ಟ್ನಲ್ಲಿ ಗುರುತಿಸುವಂತಹ ಹಲವಾರು ಕ್ರೀಡಾಗುಂಪುಗಳು ತರತರಹದ ಕ್ರೀಡೆಗಳನ್ನು ಅಂದರೆ ಕ್ರಿಕೆಟ್, ಫುಟ್ಬಾಲ್, ರಗ್ಬೀ, ಗೆಯಿಲಿಕ್ ಆಟ ಮತ್ತು ಐಸ್ ಹಾಕಿ ಅಲ್ಲದೆ ನಗರಪ್ರದೇಶದ ಕ್ರೀಡೆಗಳಾದ ಸ್ಕೇಟ್ಬೋರ್ಡಿಂಗ್, ಬಿಎಮ್ಎಕ್ಸ್ ಮತ್ತು ಪಾರ್ಕರ್ ಆಟಗಳನ್ನು ಆಡುತ್ತಾರೆ. ಬೆಲ್ಫಾಸ್ಟ್ ಮ್ಯಾರಥಾನ್ ಪ್ರತಿ ವರ್ಷ ಮೇ ತಿಂಗಳಿನಲ್ಲಿ ನಡೆಯುತ್ತದೆ, 2007ರ ಇಸವಿಯಲ್ಲಿ 14,300 ಜನರನ್ನು ಆಕರ್ಷಿಸಿತ್ತು.[೧೩೮] ಉತ್ತರ ಐರ್ಲೆಂಡ್ ನ್ಯಾಷನಲ್ ಫುಟ್ಬಾಲ್ ತಂಡ ಸೆಪ್ಟಂಬರ್ FIFA ವರ್ಲ್ಡ್ ರಾಂಕಿಂಗ್ನಲ್ಲಿ 27ನೇ ಸ್ಥಾನ ಗಳಿಸಿತು,[೧೩೯] ಹಾಗೂ ಎಪ್ರಿಲ್ FIFA ಪರ್ ಕ್ಯಾಪಿಟದಲ್ಲಿ 1ನೇ ಸ್ಥಾನವನ್ನು ಗಳಿಸಿ[೧೪೦] ವಿನ್ಸರ್ ಪಾರ್ಕ್ನ ಪಂದ್ಯಾವಳಿಯಲ್ಲಿ ಭಾಗವಹಿಸಿತು. 2009-10ನೇ ಐರಿಷ್ ಲೀಗ್ ಚೇಂಪಿಯನ್ಸ್ ಲೀನ್ಫೀಲ್ಡ್ ಕೂಡ ಪಟ್ಟಣದ ದಕ್ಷಿಣದಲ್ಲಿರುವ ವಿನ್ಸರ್ ಪಾರ್ಕ್ ನೆಲೆಗೊಂಡಿದೆ. ಇತರ ತಂಡಗಳು ಯಾವುದೆಂದರೆ 2008/09 ಪೂರ್ವ ಬೆಲ್ಫಾಸ್ಟ್ನ ಚೇಂಪಿಯನ್ಸ್ ಗ್ಲೆಂಟಾರನ್, ಉತ್ತರ ಬೆಲ್ಫಾಸ್ಟ್ನ ಕ್ಲಿಫ್ಟಾನ್ವಿಲ್ಲೆ ಮತ್ತು ಉತ್ತರ ಬೆಲ್ಫಾಸ್ಟ್ನ ಕ್ರುಸೇಡರ್ಸ್, ಪಶ್ಚಿಮ ಬೆಲ್ಫಾಸ್ಟ್ನ ಡೊನೆಗಲ್ ಸೆಲ್ಟಿಕ್. ಬೆಲ್ಫಾಸ್ಟ್ನವಂಬರ್ 2005ರಲ್ಲಿ ಮರಣ ಹೊಂದಿದ ಪ್ರಸಿದ್ಧ ಆಟಗಾರ ಜಾರ್ಜ್ ಬೆಸ್ಟ್ನ ತವರೂರು. ಅವನ ಅಂತ್ಯಕ್ರಿಯೆಯ ದಿನದಂದು ಪಟ್ಟಣದಲ್ಲಿ 100,000 ಜನ ಸೇರಿದ್ದು, ಅವನ ಮನೆ ಕ್ರೆಗಾಗ್ ರಸ್ತೆಯಿಂದ ರೊಸ್ಲಾನ್ ಸ್ಮಶಾನದ ತನಕ ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿದರು.[೧೪೧] ಅವನ ಮರಣದ ನಂತರ ಅಲ್ಲಿಯ ಸಿಟಿ ಎರ್ಪೋರ್ಟ್ಗೆ ಅವನ ಹೆಸರನ್ನು ಇಡಲಾಯಿತು ಮತ್ತು ಪಟ್ಟಣ ಕೇಂದ್ರದಲ್ಲಿ ಅವನ ಸ್ಮಾರಕಕ್ಕಾಗಿ ನಿಧಿ ಸಂಗ್ರಹಿಸುವ ಟ್ರಸ್ಟೊಂದನ್ನು ತೆರೆಯಲಾಯಿತು.[೧೪೨]
ಗೆಯಿಲಿಕ್ ಫುಟ್ಬಾಲ್ ಐರ್ಲೆಂಡ್ನ ಪ್ರಸಿದ್ಧ ವಿಕ್ಷಣೀಯ ಕ್ರೀಡೆ,[೧೪೩] ಮತ್ತು ಬೆಲ್ಫಾಸ್ಟ್ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಫುಟ್ಬಾಲ್ ಮತ್ತು ಹರ್ಲಿಂಗ್ ಕ್ಲಬ್ಗಳಿವೆ.[೧೪೪] ಆಂಟ್ರಿಮ್ ಕೌಂಟಿ ತಂಡಗಳ ತವರಾದ ಪಶ್ಚಿಮ ಬೆಲ್ಫಾಸ್ಟ್ನಲ್ಲಿರವ ಕೇಸ್ಮೆಂಟ್ ಪಾರ್ಕ್, ಅಲ್ಸ್ಟರ್ನಲ್ಲಿ ಎರಡನೇ ಅತೀದೊಡ್ಡ 32,000 ಸಾಮರ್ಥ್ಯ ಹೊಂದಿರುವ ಗೆಯಿಲಿಕ್ ಆಥ್ಲಟಿಕ್ ಆಸೋಸಿಯೆಶನ್ ಮೈದಾನಾವಾಗಿದೆ.[೧೪೫] 2006ರ ಸೆಲ್ಟಿಕ್ ಲೀಗ್ ಚೇಂಪಿಯನ್ಸ್ ಮತ್ತು 1999ರ ಯುರೋಪಿಯನ್ ರಗ್ಬೀ ಚೇಂಪಿಯನ್ಸ್ನ್ನು, ಅಲ್ಸ್ಟರ್ ದಕ್ಷಿಣದ ಬೆಲ್ಫಾಸ್ಟ್ನ ರವೆನ್ ಹಿಲ್ನಲ್ಲಿ ಆಡುತ್ತಾರೆ. ರಗ್ಬೀ ಯ ಆಲ್-ಐರ್ಲೆಂಡ್ ಲೀಗ್ನಲ್ಲಿ ಬೆಲ್ಫಾಸ್ಟ್ ನಾಲ್ಕು ತಂಡಗಳನ್ನು ಹೊಂದಿದೆ: ಬೆಲ್ಫಾಸ್ಟ್ ಹಾರ್ಲೆಕ್ವೀನ್ಸ್ (ಇವರು ದಕ್ಷಿಣ ಬೆಲ್ಫಾಸ್ಟ್ನ ಡೆರಮೋರ್ ಪಾರ್ಕ್ನಲ್ಲಿ ಆಡುತ್ತಾರೆ) ಮತ್ತು ಮೆಲೋನ್ (ಇವರು ಆಗ್ನೇಯ ಬೆಲ್ಫಾಸ್ಟ್ನ ಗಿಬ್ಸನ್ ಪಾರ್ಕ್ನಲ್ಲಿ ಆಡುತ್ತಾರೆ) ದ್ವಿತೀಯ ವಿಭಾಗದಲ್ಲಿದ್ದಾರೆ; ಮತ್ತು ಇನ್ಸ್ಟೋನಿಯನ್ಸ್ (ಶಾಸ್ ಬ್ರಿಜ್, ದಕ್ಷಿಣ ಬೆಲ್ಫಾಸ್ಟ್) ಮತ್ತು ಕ್ವೀನ್ಸ್ ಯುನಿವರ್ಸಿಟಿ ಆರ್ಎಫ್ಸಿ (ದಕ್ಷಿಣ ಬೆಲ್ಫಾಸ್ಟ್) ತಂಡಗಳು ತೃತೀಯ ವಿಭಾಗದಲ್ಲಿದ್ದಾರೆ. ಅದೇ ರೀತಿ ರಗ್ಬೀ ಒಕ್ಕೂಟ, ಬೆಲ್ಫಾಸ್ಟ್ ಯೀಸ್ಟ್ ಬೆಲ್ಫಾಸ್ಟ್ ಬುಲ್ಡಾಗ್ಸ್ ರಗ್ಬೀ ಲೀಗ್ ತಂಡದ ತವರಾಗಿದೆ, ಅವರು ಹೊಸ ಎನ್ಐ ರಗ್ಬೀ ಲೀಗ್ ಸಮ್ಮೇಳನದಲ್ಲಿ ಕೂಡ ಭಾಗವಹಿಸುತ್ತಿದ್ದಾರೆ.
ಸ್ಟೋರ್ಮಾಂಟ್ನಲ್ಲಿರುವ ಐರ್ಲೆಂಡ್ ಪ್ರೀಮಿಯರ್ ಕ್ರಿಕೆಟ್ ಸ್ಥಳವನ್ನು ಬೆಲ್ಫಾಸ್ಟ್ ಹೊಗಳಿಕೊಳ್ಳುತ್ತದೆ. 2006ರಲ್ಲಿ ಐರ್ಲೆಂಡ್ ಕ್ರಿಕೆಟ್ ತಂಡ ಅದರ ಪ್ರಥಮ ಅಂತರಾಷ್ಟ್ರೀಯ ಏಕದಿನ ಪಂದ್ಯವಾದ ಐರ್ಲೆಂಡ್ ಮತ್ತು ಇಂಗ್ಲೇಂಡ್ ನಡುವಿನ ಪಂದ್ಯವನ್ನೂ ಮತ್ತು ಅನೇಕ ತವರು ಪಂದ್ಯಗಳನ್ನು ಈ ಸ್ಥಳದಲ್ಲಿ ಆಡಲಾಗುತ್ತದೆ. 2007ರಲ್ಲಿ ಐರ್ಲೆಂಡ್, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ತ್ರಿಕೋನ ಸರಣಿ ಸ್ಟೋರ್ಮಾಂಟ್ನಲ್ಲಿ ನಡೆಯಿತು ಮತ್ತು 2008ರಲ್ಲಿ ಐಸಿಸಿ ವರ್ಲ್ಡ್ ಟ್ವೆಂಟಿ-20 ಅರ್ಹತಾ ಪಂದ್ಯವು ಇಲ್ಲಿ ನಡೆಯಿತು. ಕ್ಲಬ್ ಲೆವೆಲ್ನಲ್ಲಿ ಬೆಲ್ಫಾಸ್ಟ್ ಏಳು ಹಿರಿಯ ತಂಡಗಳನ್ನು ಹೊಂದಿದೆ:ಇನ್ಸ್ಟೋನಿಯನ್ಸ್ (ಶಾಸ್ ಬ್ರಿಜ್, ದಕ್ಷಿಣ ಬೆಲ್ಫಾಸ್ಟ್) ಮತ್ತು ಸಿವಿಲ್ ಸರ್ವೀಸ್ ನಾರ್ತ್ (ಸ್ಟೋರ್ಮಾಂಟ್, ಪೂರ್ವ ಬೆಲ್ಫಾಸ್ಟ್) ತಂಡಗಳು ಉತ್ತರ ಕ್ರಿಕೆಟ್ ಯುನಿಯನ್ ಲೀಗ್ನ 1ನೇ ಶಾಖೆಯಲ್ಲಿವೆ; ಸಿಐವೈಎಮ್ಎಸ್(ವೃತ್ತ ರಸ್ತೆ, ಪೂರ್ವ ಬೆಲ್ಫಾಸ್ಟ್), ಕೂಕ್ ಕೊಲೆಜಿಯನ್ಸ್ (ಶಾಸ್ಬ್ರಿಜ್) ಮತ್ತು ವುಡ್ವಾಲೆ (ಬ್ಯಾಲಿಗೊಮಾರ್ಟಿನ್ ರಸ್ತೆ, ಪಶ್ಚಿಮ ಬೆಲ್ಫಾಸ್ಟ್) ತಂಡಗಳು 2ನೇ ಶಾಖೆಯಲ್ಲಿವೆ; ಮತ್ತು ಕ್ರೆಗಾಗ್ (ಗಿಬ್ಸನ್ ಪಾರ್ಕ್, ಆಗ್ನೇಯ ಬೆಲ್ಫಾಸ್ಟ್) ಮತ್ತು ಉತ್ತರ ಐರ್ಲೆಂಡ್ನ ಪೊಲೀಸ್ ಸರ್ವೀಸ್ (ನ್ಯೂಫೊರ್ಜ್ಲೆನ್, ದಕ್ಷಿಣ ಬೆಲ್ಫಾಸ್ಟ್) ತಂಡಗಳು 4ನೇ ಶಾಖೆಯಲ್ಲಿದೆ.
ಐರ್ಲೆಂಡ್ನ ಮೊದಲ ಪ್ರೊಫೆಷನಲ್ ಐಸ್ಹಾಕಿ ತಂಡ, ಬೆಲ್ಫಾಸ್ಟ್ಗೆಯಿಂಟ್ಸ್ ಅವರ ತವರಿನ ಪಂದ್ಯಗಳನ್ನು ಒಡಿಸ್ಸಿಯ್ ಅರೇನಾ ಮೈದಾನದಲ್ಲಿ ಆಡುತ್ತಾರೆ, ಈ ಮೈದಾನವು ಏಳು ಸಾವಿರ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ.[೧೪೬] ಶಂರಾಕ್ ಬೌಲ್ಗಾಗಿ, ದಿ ಬೆಲ್ಫಾಸ್ಟ್ ಬುಲ್ಸ್ ಮತ್ತು ಬೆಲ್ಫಾಸ್ಟ್ ಟ್ರೊಜನ್ಸ್ ಅಮೆರಿಕನ್ ಫುಟ್ಬಾಲ್ ತಂಡಗಳು ಐಎಎಫ್ಎಲ್ನಲ್ಲಿ ಬೆಲ್ಫಾಸ್ಟ್ನ್ನು ಪ್ರತಿನಿಧಿಸುತ್ತದೆ. ಬೆಲ್ಫಾಸ್ಟ್ನ ಇತರ ಮಹತ್ವವುಳ್ಳ ಕ್ರೀಡಾಪಟುಗಳೆಂದರೆ ಡಬಲ್ ವರ್ಲ್ಡ್ ಸ್ನೂಕರ್ ಅಲೆಕ್ಸ್ “ಹರಿಕೇನ್” ಹಿಗಿನ್ಸ್[೧೪೭] ಮತ್ತು ವರ್ಲ್ಡ್ ಚಾಂಪಿಯನ್ ಬಾಕ್ಸರ್ ವಯಿನೆ ಮ್ಯಾಕ್ಕಲಫ್ ಮತ್ತು ರಿಂಟಿ ಮೊನಾಗನ್.[೧೪೮] ಲೆಂಡರ್ ಎ.ಎಸ್.ಸಿ ಬೆಲ್ಫಾಸ್ಟ್ನ ಪ್ರಖ್ಯಾತ ಸ್ವಿಮಿಂಗ್ ಕ್ಲಬ್ ಆಗಿದೆ.
ಬೆಲ್ಫಾಸ್ಟ್ ಯುರೋಪ್ನ ಪುರಾತನ ಆಸಿ ರೂಲ್ಸ್ ಕ್ಲಬ್ಸ್ ಬೆಲ್ಫಾಸ್ಟ್ ರೆಡ್ಬೇಕ್ಸ್ನ ತವರಾಗಿದೆ. ಈ ಕ್ಲಬ್ ಐರ್ಲೆಂಡ್ನ ಆಸ್ಟೇಲಿಯನ್ ರೂಲ್ಸ್ ಫುಟ್ಬಾಲ್ ಲೀಗ್ನಲ್ಲಿ ಆಸಿಪಾರ್ಟಿ.ಕಾಂ ಪ್ರೀಮಿಯರ್ ಶಿಪ್ನಲ್ಲಿ ಆಡುತ್ತದೆ ಮತ್ತು ಅನೇಕ ಆಟಗಾರರನ್ನು ಐರ್ಲೆಂಡ್ ನ್ಯಾಷನಲ್ ಆಸಿ ರೂಲ್ಸ್ ತಂಡ ದ ಐರಿಷ್ ವಾರಿಯರ್ಗೆ ಕೊಟ್ಟಿದೆ.
ಸಮಸ್ಯೆಗಳು ಕೊನೆಗೊಂಡಿರುವುದರಿಂದ ಬೆಲ್ಫಾಸ್ಟ್ನ ರಾತ್ರಿ ವೇಳೆಯ ಮನರಂಜನೆಯು ರೋಮಾಂಚಕವಾಗಿದೆ. ಸಿಟಿ ಸೆಂಟರ್ನಲ್ಲಿ ಈಗ ಅನೇಕ ಪಬ್ಗಳು, ಮದ್ಯದಂಗಡಿಗಳು ಮತ್ತು ಕ್ಲಬ್ಗಳು ನೆಲೆಸಿದೆ.
ಬೆಲ್ಫಾಸ್ಟ್ನಲ್ಲಿ ಎರಡು ವಿಶ್ವವಿದ್ಯಾಲಯಗಳಿವೆ. 1845ರಲ್ಲಿ ಸ್ಥಾಪಿಸಲಾದ ಕ್ವೀನ್ಸ್ ಯುನಿವರ್ಸಿಟಿ ಬೆಲ್ಫಾಸ್ಟ್ ಯುಕೆಯ 20 ಅಗ್ರ ಸಂಶೋಧನೆ-ಪ್ರಧಾನ ವಿಶ್ವವಿದ್ಯಾಲಯದ ಸಂಘವಾದ ರುಸೆಲ್ ಗ್ರೂಪ್ನ ಸದಸ್ಯತ್ವ ಪಡೆದಿದೆ.[೧೪೯] ಅದು ಯುಕೆಯಲ್ಲಿರುವ ದೊಡ್ಡದಾದ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ, ಮತ್ತು 25,231 ಪದವಿ ಪಡೆಯದ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು 250 ಕಟ್ಟಡದಲ್ಲಿದ್ದಾರೆ, ಅದರಲ್ಲಿ 120 ಕಟ್ಟಡಗಳ ವಾಸ್ತುಶಾಸ್ತ್ರವನ್ನು ಅರ್ಹ ಪಟ್ಟಿಯಲ್ಲಿ ಪರಿಗಣಿಸಲಾಗಿದೆ.[೧೫೦] 1984ರಲ್ಲಿ ಅಲ್ಸ್ಟರ್ ವಿದ್ಯಾಲಯವನ್ನು ಪ್ರಚಲಿತ ಆಕೃತಿಯಲ್ಲಿ ಸೃಷ್ಟಿಸಲಾಯಿತು, ಅದು ಬಹು-ಹೆಚ್ಚು ಚಟುವಟಿಕೆಯ ವಿಶ್ವವಿದ್ಯಾನಿಲಯ ಮತ್ತು ಬೆಲ್ಫಾಸ್ಟ್ನ ಕೆಥಡ್ರಲ್ ಕ್ವಾರ್ಟರ್ನಲ್ಲಿ ಅದರ ಆವರಣವಿದೆ. ಬೆಲ್ಫಾಸ್ಟ್ ಆವರಣವು ಕಲೆ ಮತ್ತು ವಿನ್ಯಾಸ ಮತ್ತು ವಾಸ್ತುಶಾಸ್ತ್ರದೆಡೆಗೆ ವಿಶೇಷ ಗಮನ ಹರಿಸಿದೆ, ಮತ್ತು ಈಗ ಪುನರಭಿವರ್ಧನೆಗೆ ಈಡಾಗಿದೆ. ಬೆಲ್ಫಾಸ್ಟ್ ಸಿಟಿ ಸೆಂಟರ್ನಿಂದ ಕೇವಲ ಏಳು ಮೈಲಿ(11 ಕಿಮೀ)ಯಿರುವ ಜೋರ್ಡನ್ಸ್ಟೌನ್ ಆವರಣವು ಶಿಲ್ಪಶಾಸ್ತ್ರ, ಆರೋಗ್ಯ ಮತ್ತು ಸಮಾಜಶಾಸ್ತ್ರದ ಬಗೆಗೆ ಹೆಚ್ಚು ಕೇಂದ್ರೀಕರಿಸುತ್ತದೆ. ಕಾನ್ಫ್ಲಿಕ್ಟ್ ಅರ್ಚಿವ್ ಆನ್ ದಿ ಇಂಟರ್ನೆಟ್ (CAIN) ವೆಬ್ ಸೇವೆಗೆ ಎರಡು ವಿಶ್ವವಿದ್ಯಾಲಯಗಳು ಹಣ ಒದಗಿಸಿದೆ ಮತ್ತು ಅದು ಮಾಹಿತಿಗೆ ಅಮೂಲ್ಯವಾದ ಮೂಲ ಮತ್ತು ಟ್ರಬಲ್ಸ್ಗಳಿಗೆ ಮೂಲದ್ರವ್ಯವಾಗಿದೆ ಅದಲ್ಲದೆ ಸಮಾಜಕ್ಕೆ ಮತ್ತು ನಾರ್ದರ್ನ್ ಐಯರ್ಲ್ಯಾಂಡ್ನ ರಾಜಕೀಯಕ್ಕೆ ಮೂಲವಾಗಿದೆ.[೧೫೧]
ಬೆಲ್ಫಾಸ್ಟ್ ಮೆಟ್ರೋಪೋಲಿಟನ್ ಕಾಲೇಜ್ ಒಂದು ದೊಡ್ಡ ಮುಂದುವರಿದ ಶಿಕ್ಷಣ ಸಂಸ್ಥೆಯಾಗಿದ್ದು ಸಿಟಿಯ ಸುತ್ತಮುತ್ತಲು ಅನೇಕ ಆವರಣಗಳನ್ನು ಹೊಂದಿದೆ. ಆರಂಭದಲ್ಲಿ ಬೆಲ್ಫಾಸ್ಟ್ ಇನ್ಸ್ಟಿಟ್ಯೂಟ್ ಆಫ್ ಫರ್ದರ್ ಅಂಡ್ ಹೈಯರ್ ಎಜುಕೇಶನ್ ಎಂದು ಕರೆಯಲಾಗುತ್ತಿತ್ತು, ಅದು ವೃತ್ತಿಪರ ಶಿಕ್ಷಣದಲ್ಲಿ ವಿಶಿಷ್ಟವಾಗಿದೆ. ಪೂರ್ಣಕಾಲದ ಮತ್ತು ಅಂಶಕಾಲಿಕ ಕೋರ್ಸ್ನಲ್ಲಿ 53,000 ವಿದ್ಯಾರ್ಥಿಗಳು ದಾಖಲಾಗಿದ್ದಾರೆ, ಬಹುಮಟ್ಟಿಗೆ ಅದು ಯುಕೆಯಲ್ಲಿ ಒಂದು ದೊಡ್ಡ ಮುಂದುವರೆದ ಶಿಕ್ಷಣದ ಕಾಲೇಜಾಗಿದೆ.[೧೫೨]
1973ರಲ್ಲಿ ಬೆಲ್ಫಾಸ್ಟ್ ಎಜುಕೇಶನ್ ಅಂಡ್ ಲೈಬ್ರರಿ ಬೋರ್ಡ್ ಪ್ರತಿಷ್ಠಾಪಿಸಲಾಯಿತು ಯಾಕೆಂದರೆ ಪಟ್ಟಣದಲ್ಲಿ ಶಿಕ್ಷಣದ, ಯುವಕರ, ಗ್ರಂಥಾಲಯದ ಸೇವೆಗಳಿಗೆ ಸ್ಥಳೀಯ ಅಧಿಕಾರಿಗಳು ಹೊಣೆಯಾಗಿದ್ದರು.[೧೫೩] 184 ಪ್ರಾಥಮಿಕ, ಪ್ರೌಢ ಮತ್ತು ವ್ಯಾಕರಣ ಗ್ರಂಥ ಶಾಲೆಗಳು ಪಟ್ಟಣದಲ್ಲಿದೆ.[೧೫೪] ಅಲ್ಸ್ಟರ್ ಮ್ಯೂಸಿಯಮ್ ಕೂಡ ಬೆಲ್ಫಾಸ್ಟ್ನಲ್ಲಿ ನೆಲೆಗೊಂಡಿದೆ.
ಫ್ರೋಮ್ಮೆರ್ನ, ಅಮೇರಿಕದ ಪ್ರವಾಸ ಕೈಪಿಡಿಯಲ್ಲಿ, 2009ರಲ್ಲಿ ಪ್ರವಾಸ ಮಾಡುವ ಟಾಪ್ 12 ಗಮ್ಯಸ್ಥಾನದಲ್ಲಿ ಯುನೈಟೆಡ್ ಕಿಂಗ್ಡಮ್ ಬೆಲ್ಫಾಸ್ಟ್ ಮಾತ್ರ ಅದರ ಪಟ್ಟಿಯಲ್ಲಿ ಸೇರಿದೆ. ಪಟ್ಟಿಯಲ್ಲಿದ್ದ ಇತರ ಗಮ್ಯಸ್ಥಾನಗಳು ಇಸ್ತಾನ್ಬುಲ್, ಬರ್ಲಿನ್, ಕೇಪ್ಟೌನ್, ಸಕ್ವಾರಾ, ವಾಶಿಂಗ್ಟನ್ ಡಿಸಿ, ಕಾಂಬೋಡಿಯ, ವಯ್ಯೇಕೆ ಇಸ್ಲ್ಯಾಂಡ್, ಕಾರ್ಟಗೆನ, ವಾಟರ್ಟನ್ ಲೇಕ್ಸ್ ನ್ಯಾಷನಲ್ ಪಾರ್ಕ್, ದಿ ಸೆಳ್ಮ ಟು ಮೊಂಟ್ಗೊಮೆರಿ ನ್ಯಾಷನಲ್ ಹಿಸ್ಟಾರಿಕ್ ಟ್ರೈಲ್, ಅಲಬಾಮ ಮತ್ತು ಲಸ್ಸೇನ್ ವೋಲ್ಕಾನಿಕ್ ನ್ಯಾಷನಲ್ ಪಾರ್ಕ್[೧೫೫]
ನಾರ್ದರ್ನ್ ಐರ್ಲೆಂಡ್ನಲ್ಲಿ ಪ್ರಚಾಸೋದ್ಯಮವನ್ನು ಇನ್ನೂ ವರ್ಧಿಸಲು, ಇತ್ತಿಚೀಗೆ ಬೆಲ್ಫಾಸ್ಟ್ನ ಸಿಟಿ ಕೌನ್ಸಿಲ್ ಟೈಟೇನಿಕ್ ಕ್ವೇಟರನ್ನು ಸಂಪೂರ್ಣವಾಗಿ ಪುನಃ ಪುನರ್ನಿರ್ಮಾಣ ಮಾಡಲು ಕಾರ್ಯಕ್ರಮವನ್ನು ಯೋಜಿಸಿದೆ, ಅದರಲ್ಲಿ ಬಹು ಮಹಡಿ ಮನೆ, ಉಪಹಾರಗೃಹ, ನದಿತೀರದ ಮನೋರಂಜನೆ ತಾಣ, ಮತ್ತು ಪ್ರಧಾನವಾಗಿ ಟೈಟೇನಿಕ್-ಥೀಮ್ ಆಕರ್ಷಣೆ ಕೂಡ ಒಳಗೊಂಡಿದೆ. ಬೆಲ್ಫಾಸ್ಟ್ಗೆ ಆಧುನಿಕ ಸಾರಿಗೆಯ ವ್ಯವಸ್ಥೆಗಳಿಗೆ (ಅತ್ಯಂತ-ವೇಗದ ರೈಲು ಮತ್ತು ಬೇರೆ) ಸುಮಾರು £250 ಮಿಲಿಯನ್ ಬಂಡವಾಳ ಹಾಕಲು ಆಶಿಸಿದ್ದಾರೆ.[೧೫೬]
ಬೆಲ್ಫಾಸ್ಟ್ನ್ನು ಈ ಅವಳಿ ನಗರಗಳಿಗೆ ಹೋಲಿಸಲಾಗಿದೆ:[೧೫೭]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.