ಅಲಬಾಮ (ಅಮೇರಿಕ ಸಂಯುಕ್ತ ಸಂಸ್ಥನದ ದಕ್ಷಿಣ ಭಾಗದಲ್ಲಿರುವ ಒಂದು ರಾಜ್ಯ. ಇದರ ಉತ್ತರಕ್ಕೆ ಟೆನ್ನೆಸಿ, ಪೂರ್ವಕ್ಕೆ ಜಾರ್ಜಿಯ, ದಕ್ಷಿಣಕ್ಕೆ ಫ್ಲಾರಿಡ ಹಾಗು ಮೆಕ್ಸಿಕೊ ಕೊಲ್ಲಿ ಮತ್ತು ಪಶ್ಚಿಮಕ್ಕೆ ಮಿಸ್ಸಿಸಿಪ್ಪಿಗಳಿವೆ. ವಿಸ್ತೀರ್ಣ 13,3950. ಚ.ಕಿಮೀ. ಜನಸಂಖ್ಯೆ. 4,369,862 (1999). ರಾಜಧಾನಿ ಮಾಂಟ್ಗೊಮರಿ. ಸಂಯುಕ್ತಸಂಸ್ಥಾನಕ್ಕೆ ಸ್ಪೇನ್ ದೇಶದಿಂದ 1795 ಮತ್ತು 1813ರಲ್ಲಿ ಒಪ್ಪಿಸಲ್ಪಟ್ಟು, 1817ರಲ್ಲಿ ಒಂದು ಸೀಮೆಯಾಗಿ 1819ರಲ್ಲಿ ಪ್ರಾಂತ್ಯವಾಗಿ ಕೇಂದ್ರಕ್ಕೆ ಸೇರಿಸಲ್ಪಟ್ಟಿತು. ಒಳಯುದ್ಧದ ಕಾಲದಲ್ಲಿ (1861) ದಕ್ಷಿಣದ ಪಕ್ಷಕ್ಕೆ ಸೇರಿ ಪ್ರತ್ಯೇಕಗೊಂಡು, ಯುದ್ಧ ಮುಗಿದ ಅನಂತರ 1865ರಲ್ಲಿ ಮತ್ತೆ ಕೇಂದ್ರಕ್ಕೆ ಸೇರಿತು. ಮೆಕ್ಸಿಕೊ ಖಾರಿಯ 80 ಕಿಮೀ ಉದ್ದನೆಯ ತೀರ ಪ್ರದೇಶವಲ್ಲದೆ ಅಪಲೇಷಿಯನ್ ಪರ್ವತಗಳ ದಕ್ಷಿಣದ ತುದಿಯವರೆಗಿರುವ ತೀರದ ಮೈದಾನದವರೆಗೂ 213 ಕಿಮೀ ವಿಸ್ತರಿಸಿದೆ. ದಕ್ಷಿಣಭಾಗದಲ್ಲಿ ಇರುವುದರಿಂದ, ಮೇಲ್ಮೈ ಲಕ್ಷಣದ ಪರಿಣಾಮವಾಗಿ ಹಿತಕರವಾದ ಉಷ್ಣವಲಯದ ವಾಯುಗುಣವನ್ನು ಹೊಂದಿದೆ; ಬೇಸಗೆ ದೀರ್ಘವಾದರೂ ಉಷ್ಣ ಹೆಚ್ಚಿರುವುದಿಲ್ಲ. ಗಾಳಿ ತೇವವಾಗಿರುತ್ತದೆ. ಚಳಿಗಾಲ ಹ್ರಸ್ವವಲ್ಲದೆ ಹಿತಕರವಾಗಿರುತ್ತದೆ. ಉತ್ತರದ ಪರ್ವತ ಪ್ರದೇಶದಲ್ಲಿ ಸ್ವಲ್ಪ ಹಿಮ ಬೀಳುತ್ತದೆ. ಜನವಸತಿ ಪ್ರಾರಂಭವಾದುದು ಬಹು ಹಿಂದೆಯೇ; ಚಾರಿತ್ರಿಕ ಮತ್ತು ಆರ್ಥಿಕ ತೊಂದರೆಗಳು ಆಗಾಗ್ಯೆ ಬಂದರೂ ಬೆಳವಣಿಗೆ ಒಂದೇ ಸಮನಾಗಿ ಮುಂದುವರಿದಿದೆ. ಹತ್ತೊಂಬತ್ತನೆಯ ಶತಮಾನ ಕಳೆಯುವವರೆಗೂ ಅದರ ಪ್ರಗತಿ ವಿಶೇಷವಾಗಿ ಕೃಷಿರಂಗದಲ್ಲಿತ್ತು; ಹತ್ತಿ ಅದರ ಸಂಪತ್ತಿನ ಬಹುಭಾಗವನ್ನೊದಗಿಸಿತು. ಈಗ ಧಾನ್ಯ, ನೆಲಗಡಲೆ, ಹಣ್ಣುಗಳು, ಕಾಯಿಪಲ್ಯಗಳಲ್ಲದೆ ಹತ್ತಿಯನ್ನೂ ಬೆಳೆಸುತ್ತಾರೆ; ಪಶುಪಾಲನೆಯೂ ಬಹಳ ಹೆಚ್ಚಿದೆ. ಇತ್ತೀಚಿನ ದಶಕಗಳಲ್ಲಿ ಕಲ್ಲಿದ್ದಲು, ಕಬ್ಬಿಣಗಳ ಉತ್ಪಾದನೆ ಹೆಚ್ಚಿದೆ. ಆಲಬ್ಯಾಮದ ಕೈಗಾರಿಕಾ ಪ್ರಗತಿ, ಅದರ ಖನಿಜೋತ್ಪನ್ನಗಳ ಪ್ರಮಾಣಕ್ಕನುಸಾರವಾಗಿ ಮುಂದುವರಿದಿದೆ; ಈ ಉತ್ಪನ್ನವೇ ಇಡೀ ದೇಶದ ಉತ್ಪನ್ನದ ಮೂರನೆಯ ಎರಡರಷ್ಟಿದೆ; ಕಬ್ಬಿಣ, ಉಕ್ಕು, ನೇಯ್ಗೆ ಪದಾರ್ಥಗಳು, ಕಲ್ಲೆಣ್ಣೆ, ರಾಸಾಯನಿಕಗಳು, ಮರಮುಟ್ಟುಗಳು, ಕಾಗದ, ಸಂಸ್ಕರಿಸಿದ ಮಾಂಸದ `ಪ್ಯಾಕ್' ಮಾಡುವುದು ಮತ್ತು ಯಂತ್ರೋಪಕರಣಗಳು-ಇವು ಮುಖ್ಯವಾದುವು. ಶೇ.30 ಜನ ನೀಗ್ರೋಗಳು. ಮುಖ್ಯ ಪಟ್ಟಣಗಳು, ಬರ್ಮಿಂಗ್ ಹ್ಯಾಂ, ಮೊಬೈಲ್ ಮತ್ತು ಮಾಂಟ್ಗೊಮರಿ. ದಕ್ಷಿಣ ಪ್ರದೇಶದಲ್ಲಿನ ಗತವೈಭವವನ್ನು ಜ್ಞಾಪಕಕ್ಕೆ ತರುವಂಥ ರಾಜ್ಯದ ಚರಿತ್ರಾರ್ಹವಾದ, ಹಿಂದಿನ ಯುದ್ಧಪುರ್ವ ಸ್ಥಳಗಳು ಮತ್ತು ಹಳೆಯ ದೊಡ್ಡ ಮರದ ತೋಪುಗಳನ್ನು ನೋಡಲು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
)State of Alabama | |||||||||||
| |||||||||||
ಅಧಿಕೃತ ಭಾಷೆ(ಗಳು) | English | ||||||||||
ಭಾಷೆಗಳು | English (96.17%) Spanish (2.12%) | ||||||||||
ರಾಜಧಾನಿ | ಮಾಂಟ್ಗಾಮರಿ | ||||||||||
ಅತಿ ದೊಡ್ಡ ನಗರ | ಬರ್ಮಿಂಗ್ಯಾಮ್ 229,800 (2007 estimate)[೧] | ||||||||||
ಅತಿ ದೊಡ್ಡ ನಗರ ಪ್ರದೇಶ | ಬರ್ಮಿಂಗ್ಯಾಮ್ | ||||||||||
ವಿಸ್ತಾರ | Ranked 30th in the US | ||||||||||
- ಒಟ್ಟು | 52,419 sq mi (135,765 km²) | ||||||||||
- ಅಗಲ | 190 miles (306 km) | ||||||||||
- ಉದ್ದ | 330 miles (531 km) | ||||||||||
- % ನೀರು | 3.20 | ||||||||||
- Latitude | 30° 11′ N to 35° N | ||||||||||
- Longitude | 84° 53′ W to 88° 28′ W | ||||||||||
ಜನಸಂಖ್ಯೆ | 23rdನೆಯ ಅತಿ ಹೆಚ್ಚು | ||||||||||
- ಒಟ್ಟು | 4,661,900 (2008 est.)[೨] 4,447,100 (2000) | ||||||||||
- ಜನಸಂಖ್ಯಾ ಸಾಂದ್ರತೆ | 84.83/sq mi (33.84/km²) 27thನೆಯ ಸ್ಥಾನ | ||||||||||
ಎತ್ತರ | |||||||||||
- ಅತಿ ಎತ್ತರದ ಭಾಗ | Mount Cheaha[೩] 2,413 ft (734 m) | ||||||||||
- ಸರಾಸರಿ | 499 ft (152 m) | ||||||||||
- ಅತಿ ಕೆಳಗಿನ ಭಾಗ | Gulf of Mexico[೩] 0 ft (0 m) | ||||||||||
ಸಂಸ್ಥಾನವನ್ನು ಸೇರಿದ್ದು | December 14, 1819 (22nd) | ||||||||||
Governor | Robert R. Riley (R) | ||||||||||
Lieutenant Governor | Jim Folsom, Jr. (D) | ||||||||||
U.S. Senators | Richard Shelby (R) Jeff Sessions (R) | ||||||||||
Congressional Delegation | 4 Republicans, 3 Democrats (list) | ||||||||||
Time zone | Central: UTC-6/DST-5 | ||||||||||
Abbreviations | AL Ala. US-AL | ||||||||||
Website | www.alabama.gov | ||||||||||
ಉಲ್ಲೇಖಗಳು
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.