From Wikipedia, the free encyclopedia
ರಾಸಾಯನಿಕ ಗೊಬ್ಬರ, ಪ್ರಾಣಿ ಅಥವಾ ಪಕ್ಷಿಗಳ ಮಲದಿಂದ ತಯಾರಿಸಲಾಗುತ್ತದೆ. ಇದನ್ನು ವ್ಯವಸಾಯದಲ್ಲಿ, ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಉಪಯೋಗಿಸುತ್ತಾರೆ. ರಾಸಾಯನಿಕ ಗೊಬ್ಬರದಲ್ಲಿ ಸಾರಜನಕ ಹಾಗು ಇನ್ನಿತರ ಪೋಷಕವಾದ ಅಂಶಗಳಿವೆ. ಇದರಿಂದ ಮಣ್ಣಿನಲ್ಲಿರುವ ಗೊಬ್ಬರದ ಕೊಳೆತ ಸೇಂದ್ರಿಯ ವಸ್ತುಗಳು ಹೆಚ್ಚುತ್ತವೆ.
ಮಿಶ್ರ ಗೊಬ್ಬರ: ಇದು ರಾಸಾಯನಿಕ ವಸ್ತುಗಳು ಕೊಳೆತ ನಂತರ ಬರುವ ಉಳಿಕೆವಸ್ತು. ಇದು ಮುಖ್ಯವಾಗಿ ಗಿಡದಿಂದ ಸಂಗ್ರಹಿಸಲ್ಪಡುತ್ತದೆ. ಆದರೆ ಕೆಲವೊಮ್ಮೆ ಪ್ರಾಣಿಗಳ ಸಗಣಿ ಸಹ ಸೇರಿಕೊಳ್ಳುತ್ತದೆ.
ಪ್ರಾಣಿಗಳ ಗೊಬ್ಬರ: ಕೋಳಿ ಹಾಗೂ ಹಸು ಸಗಣಿಯನ್ನು ನಮ್ಮ ಕೃಷಿ ಕ್ಷೇತ್ರದಲ್ಲಿ ಬಹಳ ವರ್ಷಗಳಿಂದ ಉಪಯೋಗಿಸುತ್ತಿದ್ದಾರೆ. ಇದರಿಂದ ನಮ್ಮ ಮಣ್ಣಿನ ರಚನೆಯು ಹೆಚ್ಚು ನೀರು ಹಾಗು ಪೌಷ್ಟಿಕಗಳನ್ನು ಹಿಡಿಯುವ ಹಾಗೆ ವಿನ್ಯಾಸಗೊಳ್ಳುತ್ತದೆ. ಇದರಿಂದಾಗಿ ನಮ್ಮ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಇತರ ಪ್ರಾಣಿಗಳ ಗೊಬ್ಬರವು ಸಹ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಇದರಿಂದ ನಮ್ಮ ಗಿಡಗಳ ಪೌಷ್ಟಿಕಾಂಶಗಳು ಸಹ ಹೆಚ್ಚುತ್ತದೆ. ಇಂಪಿಲ್ಲದ ವಾಸನೆ ಬರುವಂತಹ ಗೊಬ್ಬರಗಳನ್ನು ಮಣ್ಣಿನೊಳಗೆ ಹಾಕುತ್ತಾರೆ. ಇದರಿಂದಾಗಿ ಅದರ ವಾಸನೆ ಕಡಿಮೆಯಾಗುತ್ತದೆ. ತರಕಾರಿಗಳಲ್ಲಿ ಕಡಿಮೆ ಮಟ್ಟದ ಸಸಾರಜನಕ ಇರುವುದರಿಂದ ಸಸ್ಯಹಾರಿಗಳಿಂದ ಬರುವ ವಾಸನೆ, ಮಾಂಸಹಾರಿ ಹಾಗು ಸರ್ವಭಕ್ಷ್ಯಗಳಿಂದ ಬರುವ ವಾಸನೆಗಿಂತ ಕಡಿಮೆಯಾಗಿರುತ್ತದೆ. ಆದರೂ ಸಹ ಆಮ್ಲಜನಕವಿಲ್ಲದೆ ಹುದುಗುವಿಕೆಯಾದಂತಹ ಸಸ್ಯಾಹಾರಿಗಳ ಗೊಬ್ಬರವು ದುರ್ವಾಸನೆಯನ್ನು ನೀಡುತ್ತದೆ. ಕೋಳಿ ಹಿಕ್ಕೆಗಳನ್ನು ಸಹ ಕೊಳೆತ ನಂತರೆ ಉಪಯೋಗಿಸಬೇಕು. ಹಸಿ ಗೊಬ್ಬರವನ್ನು ಉಪಯೋಗಿಸುವುದರಿಂದ ಗಿಡಗಳಿಗೆ ಹಾನಿಯಾಗುತ್ತದೆ.
ಆಲ್ಬಂ ಗ್ರೇಕಂ/ಸ್ಟರ್ಕಸ್ ಕೆನಿಸ್ ಒಫಿಸಿನಾಲೆ: ಇದು ನಾಯಿ ಅಥವಾ ಕತ್ತೆಕಿರುಬದ ಗೊಬ್ಬರ. ಇದನ್ನು ಗಾಳಿಗೆ ತೆರೆದಿಟ್ಟರೆ ಬಿಳಿಯಾಗುತ್ತದೆ. ಇದನ್ನು ಗಂಟಲಿನ ಉರಿಯುವಿಕೆಯನ್ನು ಕಡಿಮೆ ಮಾಡಲು ಜೇನು ತುಪ್ಪದ ಜೊತೆಗೆ ಉಪಯೋಗಿಸುತ್ತಿದ್ದರು. ಗಾಯಗಳಿಗೆ ಔಷಧಲೇಪವಾಗಿಯೂ ಸಹ ಇದನ್ನು ಉಪಯೋಗಿಸುತ್ತಿದ್ದರು.
ನಾವು ಮುಖ್ಯವಾಗಿ ಬಳಸುವ ಗೊಬ್ಬರ
ಕೋಳಿ ಗೊಬ್ಬರ: ಕೋಳಿ ಗೊಬ್ಬರದಲ್ಲಿ ಸಾರಜನಕ ಹೆಚ್ಚಾಗಿದ್ದು, ಕಡಿಮೆ ಸಾರಜನಕವಿರುವ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಉಪಯೋಗಿಸುತ್ತಾರೆ. ಬೇರೆ ಪ್ರಾಣಿಗಳ ಗೊಬ್ಬರಗಳಿಗೆ ಹೋಲಿಸಿದರೆ ಇದರಲ್ಲಿ ಸಾರಜನಕ, ಪೊಟ್ಯಾಶಿಯಮ್, ರಂಜಕ ಈ ಎಲ್ಲವೂ ಹೆಚ್ಚಿನ ಪ್ರಮಾಣದಲ್ಲಿದೆ. ಈ ಗೊಬ್ಬರವನ್ನು ನಾವು ಮುಚ್ಚಿದ ಸ್ಥಳದಲ್ಲಿ ಇಡಬೇಕು ಹಾಗು ಅದು ತನ್ನ ಧ್ರವ ರೂಪವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು, ಏಕೆಂದರೆ ಅದರ ಮೂತ್ರದಲ್ಲಿಯೇ ಹೆಚ್ಚಿನ ಪ್ರಮಾಣದ ಸಾರಜನಕವಿದೆ. ಕೋಳಿ ಗೊಬ್ಬರದಲ್ಲಿ ಶೇ. ೫ ರಷ್ಟು ಸಾರಜನಕವಿರುತ್ತದೆ. ಒಂದು ಕೋಳಿ ಸುಮಾರು ೮-೧೧ ಪೌಂಡ್ ಗೊಬ್ಬರವನ್ನು ನೀಡುತ್ತದೆ. ಇದನ್ನು ಉಪಯೋಗಿಸಿ ನಾವು ಮನೆಯಲ್ಲಿಯೆ ರಸಗೊಬ್ಬರವನ್ನು ತಯಾರಿಸಬಹುದು.
ಸಗಣಿ: ಇದನ್ನು ಹಸುವಿನ ಗೊಬ್ಬರ ಎಂದೂ ಕರೆಯುತ್ತಾರೆ. ಇದು ಕಪ್ಪು ಅಥವಾ ಹಸಿರು ಬಣ್ಣದಲ್ಲಿರುತ್ತದೆ. ಈ ಗೊಬ್ಬರವು ದನ, ಎಮ್ಮೆ, ಚಮರೀಮೃಗ(ಯಾಕ್) ಎಂಬ ಪ್ರಾಣಿಗಳಿಂದ ಬರುವ ತ್ಯಾಜ್ಯ ಉತ್ಪನ್ನ.[2]ಸಗಣಿಯು ಈ ಪ್ರಾಣಿಗಳು ತಿನ್ನುವಂತಹ ಗಿಡದ ಭಾಗಗಳ ಜೀರ್ಣಗೊಳ್ಳದ ಶೇಷ. ಇದರಲ್ಲಿ ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಸಗಣಿಯನ್ನು ಎರೆಹುಳುಗಳು ಅಥವಾ ಸಗಣಿ ಜೀರುಂಡೆಗಳು ಪುನರುಪಯೋಗಿಸದಿದ್ದರೆ ಅದು ಒಣಗುತ್ತದೆ. ಇದರ ಮೇಲೆ ದನದ ಮೇವು ಒಳ್ಳೆಯ ರೀತಿಯಲ್ಲಿ ಬೆಳೆಯುತ್ತದೆ .ನಮ್ಮ ಪ್ರಪಂಚದ ವಿವಿಧ ಭಾಗಗಳಲ್ಲಿ ಒಣಗಿದ ಸಗಣಿಯನ್ನು ಇಂಧನವನ್ನಾಗಿ ಉಪಯೋಗಿಸುತ್ತಾರೆ. ಸಗಣಿಯನ್ನು ಜೈವಿಕ ಅನಿಲವನ್ನು ಉತ್ಪತ್ತಿ ಮಾಡಲು ಉಪಯೋಗಿಸುತ್ತಾರೆ, ಇದರಿಂದ ನಾವು ವಿದ್ಯುತ್ ತಯಾರಿಸಬಹುದು. ಈ ಜೈವಿಕ ಅನಿಲದಲ್ಲಿ ಮೀಥೇನ್ ಹೆಚ್ಚಾಗಿದ್ದು, ಇದನ್ನು ನಮ್ಮ ದೇಶದ ಗ್ರಾಮೀಣ ಭಾಗಗಳಲ್ಲಿ ನವೀಕರಿಸಬಹುದಾದ ವಿದ್ಯುತ್ ಮೂಲವನ್ನಾಗಿ ಉಪಯೋಗಿಸುತ್ತಾರೆ. ಆಫ್ರಿಕ್ಕಾದ ಕೆಲವು ಭಾಗಗಳಲ್ಲಿ ಸೊಳ್ಳೆಗಳನ್ನು ಹೆಮ್ಮೆಟ್ಟಿಸಲು ಸುಟ್ಟ ಸಗಣಿಯನ್ನು ಉಪಯೋಗಿಸುತ್ತಾರೆ. ನಮ್ಮ ದೇಶದ ಹಳ್ಳಿಗಳಲ್ಲಿ ಸಗಣಿಯನ್ನು ನೀರಿನ ಜೊತೆ ಬೆರೆಸಿ ಮನೆ ಮುಂದೆ ಸಿಂಪಡಿಸುತ್ತಾರೆ, ಇದರಿಂದ ಕೀಟಗಳು ಕಡಿಮೆಯಾಗುತ್ತವೆ. ಒಣಗಿದ ಸಗಣಿಯನ್ನು ಕಟ್ಟಿಗೆಯ ಬದಲಾಗಿ ಉಪಯೋಗಿಸುತ್ತಾರೆ. ಸಗಣಿಯು ಅನೇಕ ಪ್ರಾಣಿಗಳ ಹಾಗು ಶಿಲೀಂಧ್ರಗಳ ವರ್ಗಗಳಿಗೆ ಆಹಾರವಾಗುತ್ತದೆ. ಈ ಮೂಲಕ ಅದು ಮುರಿದು ಪುನರುಪಯೋಗಿಸುವ ರೀತಿಯಲ್ಲಿ ನಮ್ಮ ಆಹಾರಚಕ್ರ ಹಾಗು ಮಣ್ಣಿನಲ್ಲಿ ಸೇರಿಕೊಳ್ಳುತ್ತದೆ.
ದ್ರವ ಗೊಬ್ಬರ: ಇದು ದ್ರವದ ರೂಪದಲ್ಲಿರುವ ಗೊಬ್ಬರ. ಗೊಬ್ಬರವನ್ನು ನೀರಿನ ಜೊತೆಗೆ ಬೆರೆಸಿದಾಗ ಅದು ದ್ರವ ಗೊಬ್ಬರವಾಗಿ ಬದಲಾಗುತ್ತದೆ. ಇದನ್ನು ಗೊಬ್ಬರದ ಬದಲಾಗಿ ಉಪಯೋಗಿಸುತ್ತಾರೆ. ಆದರೆ ನಾವು ಇದನ್ನು ಸಮವಾಗಿ ಸಿಂಪಡಿಸಲು ಸಾಧ್ಯವಿಲ್ಲ. ಇದು ಸಹ ಗಿಡದ ಪೋಷಕಾಂಶಗಳನ್ನು ಹೆಚ್ಚಿಸುತ್ತದೆ.
ಒಣ ಗೊಬ್ಬರ: ತೇವವಾದ ಗೊಬ್ಬರಕ್ಕಿಂತ ಒಣ ಗೊಬ್ಬರವು ಹೆಚ್ಚು ಉಪಯುಕ್ತ. ಏಕೆಂದರೆ ಅದನ್ನು ಸುಲಭವಾಗಿ ಸುಡಬಹುದು. ಒಣ ಗೊಬ್ಬರದಲ್ಲಿ ಶೇಕಡವಾರು ೩೦ಕ್ಕಿಂತ ಕಡಿಮೆ ತೇವಾಂಶ ಭಾಗವಿರುತ್ತದೆ.
ಒಣ ಗೊಬ್ಬರದ ಪ್ರಯೋಜನಗಳು:-
ಒಣ ಗೊಬ್ಬರ ಇಂಧನ: ಒಣಗಿದ ಪ್ರಾಣಿಗಳ ಕಲ್ಮಶಗಳನ್ನು ಇಂಧನದ ಮೂಲವನ್ನಾಗಿ ಉಪಯೋಗಿಸುವುದರಿಂದ ಬರುವ ಇಂಧನವನ್ನು ಒಣ ಗೊಬ್ಬರ ಇಂಧನ ಎನ್ನುತ್ತಾರೆ. ಪ್ರಪಂಚದ ಅನೇಕ ಭಾಗಗಳಲ್ಲಿ ಇದನ್ನು ಇಂಧನವನ್ನಾಗಿ ಉಪಯೋಗಿಸುತ್ತಾರೆ. ಈ ರೀತಿಯಾಗಿ ಮಲವು ಉಪಯೋಗಕರ ರೀತಿಯಲ್ಲಿ ಮರುಬಳಕೆಯಾಗುತ್ತದೆ.
ರಾಸಾಯನಿಕ ಗೊಬ್ಬರದ ಇತರ ಉಪಯೋಗಗಳು:-
ಗೊಬ್ಬರವು ಕೊಳೆಯುವ ಸಂಧರ್ಭದಲ್ಲಿ ತಾಪವನ್ನು ಹೊರಹಾಕುತ್ತದೆ. ಇದರಿಂದಾಗಿ ರಾಶಿಯಾಗಿ ಇಟ್ಟಂತಹ ಗೊಬ್ಬರವು ಕೆಲವೊಮ್ಮೆ ಬೆಂಕಿಹತ್ತಿಕೊಳ್ಳುವ ಸಾಧ್ಯತೆಗಳಿವೆ. ಇದರಿಂದ ಸುತ್ತಮುತ್ತಲಿನ ಗಾಳಿಯೂ ಸಹ ಮಲಿನವಾಗುತ್ತದೆ ಹಾಗು ಬೆಂಕಿಯನ್ನು ನಂದಿಸುವುದು ಬಹಳ ಕಷ್ಟ. ಆದ್ದರಿಂದ ನಾವು ಹಸಿಗೊಬ್ಬರವನ್ನು ಸಂಗ್ರಹಿಸುವಾಗ ಅದರ ಪ್ರಮಾಣವನ್ನು ಸರಿಯಾಗಿ ನೋಡಿಕೊಳ್ಳಬೇಕು. ಕ್ರಿಮಿ ಕೀಟಗಳು ಮಲವನ್ನು ನೀರು ಹಾಗು ಆಹಾರಕ್ಕೆ ಸಾಗಿಸುವ ಸಾಧ್ಯತೆ ಇದೆ. ಇದರಿಂದಾಗಿ ನಮಗೆ ರೋಗಗಳು ಸಹ ಬರುತ್ತವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.