ಭಾರತೀಯ ಕ್ರಿಕೆಟಿಗ From Wikipedia, the free encyclopedia
ಮಹೇಂದ್ರ ಸಿಂಗ್ ಧೋನಿಯವರನ್ನು ಎಮ್ ಎಸ್ ಧೋನಿ ಎಂದೂ ಸಂಕ್ಷ್ತಿಪ್ತ ರೂಪದಲ್ಲಿ ಕರೆಯಲಾಗುತ್ತದೆ. pronunciation (ಸಹಾಯ·ಮಾಹಿತಿ) ಜನನ ಬಿಹಾರದ ರಾಂಚಿಯಲ್ಲಿ ೭ ಜುಲೈ ೧೯೮೧ರಂದು (ಈಗಿನ ಜಾರ್ಖಂಡ್) ಇವರು ಭಾರತದ ಕ್ರಿಕೆಟಿಗ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರು[೧]. ಆರಂಭದಲ್ಲಿ ಅತಿ ಅಬ್ಬರದ ಮತ್ತು ಆಕ್ರಮಣಕಾರಿ ಬ್ಯಾಟ್ಸ್ಮ್ಯಾನ್ ಎಂದು ಗುರುತಿಸಿಕೊಂಡರೂ, ನಂತರ ಧೋನಿಯವರು ಭಾರತದ ಏಕದಿನ (ODI) ತಂಡದ ಶಾಂತ ಸ್ವಭಾವದ ನಾಯಕರಲ್ಲಿ ಒಬ್ಬರಂತೆ ಗುರ್ತಿಸಲ್ಪಡುತ್ತಾರೆ. ಅವರ ನಾಯಕತ್ವದಲ್ಲಿ ಭಾರತವು 2007 ICC ವಿಶ್ವ ಟ್ವೆಂಟಿ20, ೨೦೦೭-೦೮ರ CB ಸರಣಿ ಮತ್ತು 2008ರಲ್ಲಿ ಆಸ್ಟ್ರೇಲಿಯಾವನ್ನು 2-0 ಅಂತರದಲ್ಲಿ ಸೋಲಿಸಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದಿತ್ತು. ಅವರು ಶ್ರೀಲಂಕಾ ಮತ್ತು ನ್ಯೂಜಿಲೆಂಡ್ನಲ್ಲಿ ನಡೆದ ಉಭಯ ODI ಸರಣಿಯನ್ನು ಮೊದಲ ಬಾರಿಗೆ ಗೆದ್ದ ತಂಡದ ನಾಯಕರಾಗಿದ್ದರು. ಧೋನಿಯು ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ೨೦೦೮ ಮತ್ತು ೨೦೦೯ರಲ್ಲಿ ವರ್ಷದ ICC ODI ಉತ್ತಮ ಆಟಗಾರ ಪ್ರಶಸ್ತಿ (ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ), ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಮತ್ತು ಪದ್ಮ ಶ್ರೀ, 2009ರಲ್ಲಿ ಭಾರತದ ನಾಲ್ಕನೇ ಅತಿ ದೊಡ್ಡ ನಾಗರಿಕ ಸೇವಾ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಧೋನಿಯವರು, ನವೆಂಬರ್ ೨೦೦೯ರ ICC ಶ್ರೇಯಾಂಕ ಪಟ್ಟಿಯ ಪ್ರಕಾರ ಅತ್ಯುತ್ತಮ ಏಕದಿನ ಪಂದ್ಯದ (ODI) ಬ್ಯಾಟ್ಸ್ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ. ೨೦೦೯ರಲ್ಲಿ ವಿಸ್ಡನ್ರ ಮೊದಲ ಡ್ರೀಮ್ ಟೆಸ್ಟ್ XI ತಂಡದ ನಾಯಕರಾಗಿ ಧೋನಿ ಆಯ್ಕೆಯಾದರು. ಫೋರ್ಬ್ಸ ಸಂಗ್ರಹಿಸಿದ ಮಾಹಿತಿಯ ಪ್ರಕಾರ ವಿಶ್ವದ ೧೦ ಅತಿ ಹೆಚ್ಚು ಆದಾಯ ಪಡೆಯುವ ಕ್ರಿಕೆಟಿಗರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಒಬ್ಬರಾಗಿದ್ದಾರೆ.[೨]
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಮಹೇಂದ್ರ ಸಿಂಘ್ ಧೋನಿ | |||||||||||||||||||||||||||||||||||||||||||||||||||||||||||||||||
ಅಡ್ಡಹೆಸರು | ಮಾಹಿ, ಕ್ಯಾಪ್ಟನ್ ಕೂಲ್, ಥಾಲ | |||||||||||||||||||||||||||||||||||||||||||||||||||||||||||||||||
ಎತ್ತರ | 5 ft 7 in (1.70 m) | |||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ batsman | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ | |||||||||||||||||||||||||||||||||||||||||||||||||||||||||||||||||
ಪಾತ್ರ | ವಿಕೆಟ್-ಕೀಪರ್, ಭಾರತದ ಮಾಜಿ ನಾಯಕ | |||||||||||||||||||||||||||||||||||||||||||||||||||||||||||||||||
ಸಂಬಂಧಗಳು | ಪಾನ್ ಸಿಂಗ್ ಧೋನಿ (ತಂದೆ) ದೇವಕಿ ದೇವಿ (ತಾಯಿ) ಸಾಕ್ಷಿ ಸಿಂಗ್ ಧೋನಿ (ಪತ್ನಿ) | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ | ||||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ 251) | 2 ಡಿಸಂಬರ್ 2005 v ಶ್ರೀಲಂಕ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ 157) | 23 ಡಿಸಂಬರ್ 2004 v ಬಾಂಗ್ಲಾದೇಶ | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | 26 ಫೆಬ್ರವರಿ 2011 v ಇಂಗ್ಲಂಡ್ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | 2 | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
1999/00 - 2004/05 | ಬಿಹಾರ | |||||||||||||||||||||||||||||||||||||||||||||||||||||||||||||||||
2004/05- | ಜಾರ್ಖಂಡ್ | |||||||||||||||||||||||||||||||||||||||||||||||||||||||||||||||||
2008- | ಚೆನ್ನೈ ಸೂಪರ್ ಕಿಂಗ್ಸ್ | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: CricketArchive, 31 October 2009 |
ಮಹೇಂದ್ರ ಸಿಂಗ್ ಧೋನಿ ಬಿಹಾರದ ರಾಂಚಿಯಲ್ಲಿ (ಈಗಿನ ಜಾರ್ಖಂಡ್) ಪಾನ್ ಸಿಂಗ್ ಮತ್ತು ದೇವಕಿ ದೇವಿ ಅವರ ಮಗನಾಗಿ ಜನಿಸಿದನು.[೩] ಪೂರ್ವಿಕರು ಉತ್ತರಾಖಂಡದ ಅಲ್ಮೊರಾ ಜಿಲ್ಲೆಯ ಲಾಮ್ಗಢ್ ಪ್ರದೇಶದ ಲ್ವಾಲಿ ಗ್ರಾಮದವರು. ಧೋನಿಯ ತಂದೆ ಪಾನಸಿಂಗ್ ತಮ್ಮ ಕುಟುಂಬದೊಂದಿಗೆ ಉತ್ತರಾಖಂಡದಿಂದ ರಾಂಚಿಗೆ ಬಂದು, ಅಲ್ಲಿನ ಮೆಕಾನ್ ಕಂಪೆನಿಯ ಆಡಳಿತದಲ್ಲಿ ಕಿರಿಯ ಸಹಾಯಕರಾಗಿದ್ದರು. ಧೋನಿಯ ಸಹೋದರಿ ಜಯಂತಿ ಮತ್ತು ಸಹೋದರ ನರೇಂದ್ರ ಅವರ ಪುಟ್ಟ ಕುಟುಂಬದ ಸದಸ್ಯರು. ಧೋನಿ ತನ್ನ ನೆಚ್ಚಿನ ನಟ ಜಾನ್ ಅಬ್ರಾಹಂರವರ ಕೇಶ ವಿನ್ಯಾಸವನ್ನು ಅನುಕರಿಸುವುದಕ್ಕಾಗಿ ಇತ್ತೀಚೆಗೆ ತನ್ನ ನೀಳ ಕೇಶಕ್ಕೆ ಕತ್ತರಿ ಹಾಕಿದರು.[೪] ಧೋನಿ, ಸುಪರ್ಸ್ಟಾರ್ ರಜನೀಕಾಂತ್, ಆಡಮ್ ಗಿಲ್ಕ್ರಿಸ್ಟ್ರ ಅಭಿಮಾನಿ., ಸಹ ಆಟಗಾರ ಸಚಿನ್ ತೆಂಡೂಲ್ಕರ್, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತು ಗಾಯಕಿ ಲತಾ ಮಂಗೇಶ್ಕರ್ ಅವರ ಸಾಧನೆಗಳು ಕೂಡಾ ಧೋನಿ ಮೇಲೆ ಬಾಲ್ಯದಲ್ಲೇ ಪ್ರಭಾವ ಬೀರಿದವು.[೫][೬]
ಜಾರ್ಖಂಡನ ರಾಂಚಿಯ ಶ್ಯಾಮ್ಲಿಯಲ್ಲಿರುವ DAV ಜವಾಹರ ವಿದ್ಯಾಮಂದಿರದಲ್ಲಿ (ಈಗ ಈ ಶಾಲೆಯು JVM, ಶ್ಯಾಮ್ಲಿ, ರಾಂಚಿ ಎಂದು ಪರಿಚಿತವಾಗಿದೆ) ಧೋನಿ ವಿದ್ಯಾಭ್ಯಾಸ ನಡೆಯಿತು. ಆರಂಭದಲ್ಲಿ ಧೋನಿ ಬ್ಯಾಡ್ಮಿಂಟನ್ ಮತ್ತು ಫುಟ್ಬಾಲ್ನ್ನು ಉತ್ತಮವಾಗಿ ಆಡಿ, ಜಿಲ್ಲಾ ಮತ್ತು ಕ್ಲಬ್ ಮಟ್ಟದಲ್ಲಿ ಉತ್ತಮ ಆಟಗಾರರಾಗಿ ಹೆಸರು ಮಾಡಿದ್ದರು. ಧೋನಿಯು ವಿಧ್ಯಾರ್ಥಿ ದೆಸೆಯಲ್ಲಿ ಫುಟ್ಬಾಲ್ ತಂಡಕ್ಕೆ ಉತ್ತಮ ಗೋಲ್ಕೀಪರ್ ಆಗಿದ್ದರು. ಆದರೆ ಫುಟ್ಬಾಲ್ ತಂಡದ ತರಬೇತುದಾರರು ಧೋನಿ ಸಾಮರ್ಥ್ಯ ಅರಿತು ಸ್ಥಳೀಯ ಕ್ರಿಕೆಟ್ ಕ್ಲಬ್ ಪರ ಕ್ರಿಕೆಟ್ ಆಡುವುದಕ್ಕಾಗಿ ಕಳುಹಿಸಿದರು. ಧೋನಿಯು ಆವರೆಗೆ ಕ್ರಿಕೆಟ್ ಆಡದಿದ್ದರೂ, ಉತ್ತಮವಾದ ವಿಕೆಟ್-ಕೀಪಿಂಗ್ ಕೌಶಲ್ಯದೊಂದಿಗೆ ಭರವಸೆ ಮೂಡಿಸಿದನು. ನಂತರ ಕಮಾಂಡೊ ಕ್ರಿಕೆಟ್ ಕ್ಲಬ್ನ ( ೧೯೯೫ - ೧೯೯೮) ಪೂರ್ಣಾವಧಿಯ ವಿಕೆಟ್ ಕೀಪರ್ ಜವಾಬ್ದಾರಿ ಧೋನಿ ಹೆಗಲಿಗೆ ಬಂತು. ಕ್ಲಬ್ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನದ ಆಧಾರದ ಮೇಲೆ ೧೬ ವರ್ಷದೊಳಗಿನವರ ಚ್ಯಾಂಪಿಯನ್ಷಿಪ್ ೧೯೯೭/೯೮ರ ವಿನೂ ಮಂಕಡ್ ಟ್ರೋಫಿಗೆ ಧೋನಿ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದರು.[೪] ಧೋನಿ ತನ್ನ 10ನೇ ತರಗತಿಯ ನಂತರ ಕ್ರಿಕೆಟ್ಗೆ ಹೆಚ್ಚು ಗಮನ ನೀಡಿದನು.[೭]
ಧೋನಿ ಒಬ್ಬ ಬಲಗೈ ಬ್ಯಾಟ್ಸ್ಮನ್ ಮತ್ತು ವಿಕೆಟ್-ಕೀಪರ್. ಪಾರ್ಥಿವ್ ಪಟೇಲ್, ಅಜೇಯ್ ರಾತ್ರಾ ಮತ್ತು ದಿನೇಶ್ ಕಾರ್ತಿಕ್ರಂತೆ ಎಳೆವಯಸ್ಸಿನಲ್ಲೇ ಭಾರತ ಎ ಕ್ರಿಕೆಟ್ ತಂಡಗಳಲ್ಲಿನ ಉತ್ತಮ ಪ್ರದರ್ಶನದ ಮೂಲಕ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಹಲವು ವಿಕೆಟ್-ಕೀಪರ್ಗಳಲ್ಲಿ ಧೋನಿ ಸಹ ಒಬ್ಬರಾಗಿದ್ದಾರೆ. ಧೋನಿಯ ಸ್ನೇಹಿತರು ಅವನನ್ನು 'ಮಾಹಿ' ಎಂದು ಕರೆಯುತ್ತಾರೆ. ೧೯೯೮/೯೯ ಕ್ರಿಕೆಟ್ ವಸಂತದ ಸಮಯದಲ್ಲಿ ಬಿಹಾರ ಕ್ರಿಕೆಟ್ ತಂಡದ ಪರ ಮೊದಲ ಪಂದ್ಯವನ್ನು ಆಡಿದ. ೨೦೦೪ರಲ್ಲಿ ಕೆನ್ಯಾ ಪ್ರವಾಸಕ್ಕಾಗಿ ಭಾರತ-Aವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದ. ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ-A ತಂಡದ ವಿರುದ್ಧ ಗೌತಮ್ ಗಂಭೀರ್ಜೊತೆಯಾಟದಲ್ಲಿ ಧೋನಿ ಹಲವು ಶತಕಗಳನ್ನು ಸಿಡಿಸಿದ್ದನು. ನಂತರದ ವರ್ಷದಲ್ಲಿ ಭಾರತದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದನು.[ಸೂಕ್ತ ಉಲ್ಲೇಖನ ಬೇಕು]
ಬ್ಯಾಟ್ ಹಿಡಿಕೆಯನ್ನು ನಿಯಂತ್ರಿಸುವಲ್ಲಿ ಹಾಗು ಬಲವಾದ ಬ್ಯಾಕ್ ಫೂಟ್ ಮೂಲಕ ಧೋನಿ ಶೈಲಿಯ ಬ್ಯ್ಯಾಟಿಂಗ್ ನೋಡುಗರ ಕಣ್ಮನ ಸೆಳೆಯುತ್ತದೆ. ಬಲವಾದ ಕೈಗಳಲ್ಲಿ ಹೆಚ್ಚಿನ ಚತುರತೆ ಮತ್ತು ಚಾಕಚಕ್ಯತೆ ಇರುವುದರಿಂದ ಹೆಚ್ಚಾಗಿ ಅವನು ಹೊಡೆದ ಚೆಂಡು ಮೈದಾನದಲ್ಲಿ ರಭಸದಿಂದ ಓಡುವುದು ವಿಶೇಷ. ಈ ತೆರನಾದ ಆರಂಭ ಇರುವುದರಿಂದ ಕೆಲವೊಮ್ಮೆ ಚೆಂಡಿನ ವೇಗವನ್ನು ಗುರ್ತಿಸಲು ಸಾಧ್ಯವಾಗುವದಿಲ್ಲ. ಪಿಚ್ ಮೇಲಿನ ಅಚಲತೆ ಒಮ್ಮೊಮ್ಮೆ ಚೆಂಡು ಬ್ಯಾಟಿನ ಅಂಚಿಗೆ ನಿಲುಕುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಚೆಂಡನ್ನು ಬೆನ್ನಟ್ಟುವುದು ಪ್ರಯಾಸದಾಯಕವಾಗಬಹುದು.
ಪಾಕಿಸ್ತಾನದ ವಿರುದ್ಧ ೨೦೦೫ರಲ್ಲಿ ಏಕದಿನ ಪಂದ್ಯದಲ್ಲಿ ೧೪೮ ರನ್ ಗಳಿಸಿದ ಏಕೈಕ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾಗಿದ್ದಾರೆ. ನಂತರ ಅದೇ ವರ್ಷದಲ್ಲಿ ಶ್ರೀಲಂಕಾ ವಿರುದ್ಧ ೧೮೩* ರನ್ ಗಳಿಸಿ ತಮ್ಮದೇ ದಾಖಲೆ ಮುರಿದ ಅವರು ODI ಪಂದ್ಯಗಳಲ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ರನ್ಗಳನ್ನು ಪೇರಿಸಿ ವಿಶ್ವ ದಾಖಲೆ ಸ್ಥಾಪಿಸಿದರು. ಮಿತ ಒವರ್ಗಳ ಕ್ರಿಕೆಟ್ನಲ್ಲಿನ ಧೋನಿಯ ಯಶಸ್ಸು, ಟೆಸ್ಟ್ ತಂಡದ ಸ್ಥಾನವನ್ನು ಭದ್ರಪಡಿಸಿತು. ೨೦೦೫/೦೬ ಕೊನೆಯವರೆಗಿನ ODI ಕ್ರಿಕೆಟ್ನಲ್ಲಿನ ಆಕರ್ಷಕ ಸುಸ್ಥಿರ ಪ್ರದರ್ಶನದಿಂದಾಗಿ ಧೋನಿಯು ICC ODI ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಬ್ಯಾಟ್ಸ್ಮ್ಯಾನ್ ಆಗಿ ಹೊರಹೊಮ್ಮಿದರು.[೪]
ಭಾರತ ತಂಡವು ICC ಚ್ಯಾಂಪಿಯನ್ಸ್ ಟ್ರೋಫಿ, DLF ಕಪ್ನಲ್ಲಿನ ಮತ್ತು ವೆಸ್ಟ್ ಇಂಡೀಸ್ ಹಾಗು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದ ಸೋಲಿನೊಂದಿಗೆ 2006ರಲ್ಲಿ ಧೋನಿಯ ಆಟಗಾರಿಕೆಯಲ್ಲಿ ಹಿನ್ನಡೆ ಉಂಟಾಯಿತು. 2007ರ ಪೂರ್ವಾರ್ಧದಲ್ಲಿ ಸ್ವದೇಶದಲ್ಲಿ ನಡೆದ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಧೋನಿ ಮತ್ತೆ ಲಯ ಕಂಡುಕೊಂಡಿದ್ದರೂ, 2007 ಕ್ರಿಕೆಟ್ ವಿಶ್ವ ಕಪ್ನಲ್ಲಿ ಮೊದಲ ಸುತ್ತಿನಲ್ಲಿಯೆ ತಂಡವು ಸರಣಿಯಿಂದ ಹೊರಬಿದ್ದದ್ದು, ಧೋನಿಯ ಅಸಮರ್ಪಕ ಆಟಗಾರಿಕೆಯ ಸೂಚಕವಾಗಿತ್ತು. ಭಾರತದ ಎರಡೂ ಸೋಲಿನಲ್ಲಿ ಧೋನಿ ಸೊನ್ನೆ ರನ್ನಿಗೆ ಔಟ್ ಆಗಿದ್ದನು. ವಿಶ್ವ ಕಪ್ನ ನಂತರ ಧೋನಿ ಬಾಂಗ್ಲಾದೇಶ ವಿರುದ್ಧ ODI ಪಂದ್ಯದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದರು. ಇಂಗ್ಲೆಂಡ್ ಪ್ರವಾಸಕ್ಕಾಗಿ ಧೋನಿಯನ್ನು ODI ತಂಡದ ಉಪ ನಾಯಕನಾಗಿ ಹೆಸರಿಸಲಾಗಿತ್ತು.[೮]
ಒಬ್ಬ ಬ್ಯಾಟ್ಸ್ಮನ್ ಆಗಿ ಧೋನಿ ಆಕ್ರಮಣಕಾರಿ ಬ್ಯಾಟಿಂಗ್ನ್ನು ಮೈಗೂಡಿಸಿಕೊಂಡು ಪಕ್ವ ಆಟಗಾರನಾಗಿ, ಅಗತ್ಯ ಸಂದರ್ಭಗಳಲ್ಲಿ ಜವಬ್ದಾರಿಯುತ ಇನ್ನಿಂಗ್ಸ್ನ್ನು ಆಡುತ್ತಿದ್ದರು.[೮] ಸಾಂಪ್ರದಾಯಿಕ ಹೊಡೆತಗಳಲ್ಲದೆ ಧೋನಿ ಎರಡು ಅಸಂಪ್ರದಾಯಿಕ, ಆದರೆ ಪರಿಣಾಮಕಾರಿ ಹೊಡೆತಗಳನ್ನು ಪ್ರದರ್ಶಿಸುತ್ತಿದ್ದರು.ಇದು ಬ್ಯಾಟ್ ಬೀಸುವ ಶೈಲಿಯೆಂದೇ ಹೇಳಬೇಕಾಗುತ್ತದೆ. ಭಾರತದ ಕ್ರಿಕೆಟ್ ತಂಡಕ್ಕೆ ಪ್ರವೇಶ ಪಡೆದಾಗಿನಿಂದ ಧೋನಿ ತನ್ನ ಆಕ್ರಮಣಕಾರಿ ಬ್ಯಾಟಿಂಗ್, ಆಟದ ಮೈದಾನದಲ್ಲಿನ ಯಶಸ್ಸು, ವ್ಯಕ್ತಿತ್ವ ಮತ್ತು ನೀಳ ಕೇಶದ ಶೈಲಿ ಧೋನಿಯನ್ನು ಭಾರತದ ಜಾಹೀರಾತು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವ ಕ್ರಿಕೆಟಿಗರಲ್ಲಿ ಒಬ್ಬನನ್ನಾಗಿ ಮಾಡಿತು.[೯][೧೦]
ಧೋನಿಯು ೧೯೯೮ - ೯೯ ಬಿಹಾರ ಕ್ರಿಕೆಟ್ U-೧೯ ತಂಡದಲ್ಲಿದ್ದನು. ಮತ್ತು ೫ ಪಂದ್ಯಗಳಲ್ಲಿ (7 ಇನ್ನಿಂಗ್ಸ್) ೧೭೬ ರನ್ ಗಳಿಸಿ ಉತ್ತಮ ಆಟ ಪ್ರದರ್ಶನ ನೀಡಿದ್ದರೂ ಆರು ತಂಡಗಳು ಭಾಗವಹಿಸಿದ ಈ ಸರಣಿಯಲ್ಲಿ ತಂಡವು ನಾಲ್ಕನೇ ಸ್ಥಾನವನ್ನು ಗಳಿಸಲಷ್ಟೆ ಸಫಲವಾಯಿತು. ಇದರಿಂದಾಗಿ ತಂಡವು ಕ್ವಾಟರ್ ಫೈನಲ್ ಸುತ್ತನ್ನು ತಲುಪಲು ಸಾಧ್ಯವಾಗಲಿಲ್ಲ. ಇದೇ ಕಾರಣದಿಂದಾಗಿ ಬಹುತೇಕ ಧೋನಿಯನ್ನು ಪೂರ್ವ ವಲಯದ U-19 ತಂಡ (CK ನಾಯುಡು ಟ್ರೋಫಿ) ಮತ್ತು ಭಾರತ ತಂಡದ ಉಳಿದವರು (MA ಚಿದಂಬರಂ ಟ್ರೋಫಿ ಮತ್ತು ವಿನೂ ಮಂಕದ್ ಟ್ರೋಫಿ) ತಂಡಕ್ಕಗಾಗಿ ಆಯ್ಕೆ ಮಾಡಲಿಲ್ಲ. ಬಿಹಾರ U-೧೯ ಕ್ರಿಕೆಟ್ ತಂಡವು ೧೯೯೯-೨೦೦೦ ಕೂಚ್ ಬೆಹಾರ್ ಟ್ರೋಫಿಯಲ್ಲಿ ಧೋನಿ ಗಳಿಸಿದ ೮೪ ರನ್ಗಳ ನೆರವಿನಿಂದ, ಬಿಹಾರ ತಂಡವು ಒಟ್ಟು 357 ರನ್ಗಳೊಂದಿಗೆ ಮುನ್ನಡೆ ಸಾಧಿಸಲು ಸಹಾಯವಾಯಿತು. ಭವಿಷ್ಯದ ರಾಷ್ಟ್ರೀಯ ತಂಡದ ಸಹ ಆಟಗಾರ ಯುವರಾಜ್ ಸಿಂಗ್ನ ೩೫೮ ರನ್ಗಳ ಸಹಾಯದಿಂದ ಪಂಜಾಬ್ U-19 ತಂಡವು 839 ರನ್ ಗಳಿಸಿತು. ಇದರಿಂದಾಗಿ ಬಿಹಾರ ತಂಡದ ಪರಿಶ್ರಮ ಕಳೆಗುಂದಿತು.[೧೧] ಈ ಪಂದ್ಯದಲ್ಲಿ ಧೋನಿಯು ೪೮೮ ರನ್ಗಳು (9 ಪಂದ್ಯಗಳು, 12 ಇನ್ನಿಂಗ್ಸ್), ೫ ಅರ್ಧ ಶತಕಗಳು, ೧೭ ಕ್ಯಾಚ್ಗಳು ಮತ್ತು ೭ ಸ್ಟಂಪಿಂಗ್ಗಳ ದಾಖಲೆ ಮಾಡಿದ್ದರು.[೧೨] MS ಧೋನಿಯು CK ನಾಯುಡು ಟ್ರೋಫಿಗೆ ಪೂರ್ವ ವಲಯದ U-೧೯ತಂಡದಲ್ಲಿ ಸ್ಥಾನ ಪಡೆದು, ನಾಲ್ಕು ಪಂದ್ಯಗಳಲ್ಲಿ ಕೇವಲ ೯೭ ರನ್ ಮಾಡಿದ್ದರು. ಇದರಿಂದಾಗಿ ಪೂರ್ವ ವಲಯವು ಎಲ್ಲಾ ನಾಲ್ಕು ಪಂದ್ಯಗಳನ್ನು ಸೋತು, ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.
ಧೋನಿಗೆ ಹದಿನೆಂಟನೇ ವಯಸ್ಸಿನಲ್ಲಿದ್ದಾಗ ೧೯೯೯-೨೦೦೦ರಲ್ಲಿ ಮೊದಲ ರಣಜಿ ಟ್ರೋಫಿ ಪಂದ್ಯವನ್ನು ಬಿಹಾರ ಪರವಾಗಿ ಆಡುವ ಅವಕಾಶ ದೊರಕಿತು. ಧೋನಿ ಅಸ್ಸಾಮ್ ಕ್ರಿಕೆಟ್ ತಂಡದ ವಿರುದ್ಧ ಎರಡನೇ ಇನ್ನಿಂಗ್ಸ್ನಲ್ಲಿ ೬೮* ರನ್ ಗಳಿಸುವುದರ ಮೂಲಕ ತನ್ನ ಮೊದಲ ಪಂದ್ಯದಲ್ಲಿ ಅರ್ಧಶತಕಕ್ಕೆ ನಾಂದಿ ಹಾಡಿದ್ದ[೧೩] ಆ ಕ್ರಿಕೆಟ್ ಪಂದ್ಯಾವಳಿಗಳ ೫ ಪಂದ್ಯಗಳಲ್ಲಿ ೨೮೩ ರನ್ ಬಾರಿಸಿದ್ದ. ೨೦೦೦/೦೧ ಕ್ರಿಕೆಟ್ ಋತುವಿನಲ್ಲಿ ಬಂಗಾಳ ವಿರುದ್ಧ ಮೊದಲ ಪ್ರಥಮ-ದರ್ಜೆಯ ಶತಕವನ್ನು ಹೊಡೆಯುವುದರ ಮೂಲಕ ಸೋಲಿನಂಚಿನಲ್ಲಿದ್ದ ತಂಡವನ್ನು ಪಾರುಮಾಡಿದರು.[೧೪] ಈ ಶತಕವನ್ನು ಹೊರತುಪಡಿಸಿ, 2000/01[೧೫] ರಲ್ಲಿ ಐವತ್ತು ರನ್ಗಳಿಗಿಂತ ಹೆಚ್ಚು ಯಾವುದೇ ಇನ್ನಿಂಗ್ಸ್ನಲ್ಲಿ ಗಳಿಸಲಿಲ್ಲ. ೨೦೦೧/೦೨ರ ಕ್ರಿಕೆಟ್ ಋತುವಿನಲ್ಲಿ ನಡೆದ ನಾಲ್ಕು ರಣಜಿ ಪಂದ್ಯಗಳಲ್ಲಿ ಕೇವಲ ಐದು ಅರ್ಧಶತಕಗಳನ್ನು ಗಳಿಸಿದ್ದರು.[೧೬] 2002/03ರ ರಣಜಿ ಟ್ರೋಫಿಯಲ್ಲಿ ಮೂರು ಅರ್ಧಶತಕಗಳು ಹಾಗೂ ದಿಯೋಧರ ಟ್ರೋಫಿಯಲ್ಲಿ ಎರಡು ಅರ್ಧಶತಕಗಳನ್ನು ಸಿಡಿಸುವುದರೊಂದಿಗೆ ಕೆಳಕ್ರಮಾಂಕದಲ್ಲಿ ಬಿರುಸಿನ ಹೊಡೆತದ ಬ್ಯಾಟಿಂಗ್ ಶೈಲಿಯಿಂದ ಆಟವಾಡಿ ತಂಡದ ವಿಜಯಕ್ಕೆ ಕಾರಣವಾದರು.
೨೦೦೩/೦೪ ಕ್ರಿಕೆಟ್ ಋತುವಿನಲ್ಲಿ ರಣಜಿ ODI ಟ್ರೋಫಿಯ ಮೊದಲ ಪಂದ್ಯದಲ್ಲಿ ಅಸ್ಸಾಮ್ ವಿರುದ್ಧ ಧೋನಿಯ ಶತಕದ (೧೨೮*) ದಾಖಲೆ. ಪೂರ್ವ ವಲಯ ತಂಡದಲ್ಲಿರುವಾಗ, ಆ ವರ್ಷ ದಿಯೋಧರ ಟ್ರೋಫಿಯನ್ನು ತಂಡವು ಗೆದ್ದಿತ್ತು. ಅದೇ ಸರಣಿಯಲ್ಲಿ ತಂಡಕ್ಕಾಗಿ 4 ಪಂದ್ಯಗಳಲ್ಲಿ 244 ರನ್ಗಳನ್ನು ಗಳಿಸಿದ್ದರು. ದಿಲೀಪ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪೂರ್ವ ವಲಯವನ್ನು ಪ್ರತಿನಿಧಿನಿಸುವಂತೆ ಧೋನಿಯನ್ನು ಅಂತರರಾಷ್ಟ್ರೀಯ ಕ್ರಿಕೆಟಿಗ ದೀಪ್ ದಾಸ್ಗುಪ್ತಾ ಆಯ್ಕೆಮಾಡಿದ್ದರು.[೧೭] ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸುವುದರ ಮೂಲಕ ತಂಡವನ್ನು ಸೋಲಿನ ದವಡೆಯಿಂದ ಪಾರುಮಾಡಿದರು.[೧೮]
೨೦೦೩/೦೪ ರಲ್ಲಿ( ODI) ಏಕದಿನಗಳ ಪ್ರದರ್ಶನವನ್ನು ಪರಿಗಣಿಸಿ, ಜಿಂಬಾಬ್ವೆ ಮತ್ತು ಕಿನ್ಯಾದೇಶಗಳ ಪ್ರವಾಸಕ್ಕಾಗಿ ಭಾರತ ಎ ತಂಡಕ್ಕಾಗಿ ಆಯ್ಕೆಮಾಡಲಾಯಿತು.[೧೯] ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಜಿಂಬಾಬ್ವೆ XI ವಿರುದ್ಧದ ಪಂದ್ಯದಲ್ಲಿ ಧೋನಿ 7 ಕ್ಯಾಚ್ಗಳು ಮತ್ತು 4 ಸ್ಟಂಪಿಂಗ್ಗಳನ್ನು ಮಾಡುವುದರೊಂದಿಗೆ ತನ್ನ ಅತ್ಯತ್ತಮವಾದ ವಿಕೆಟ್-ಕೀಪಿಂಗ್ನ್ನು ಪ್ರದರ್ಶಿಸಿದರು.[೨೦] ಕಿನ್ಯಾ, ಭಾರತ 'ಎ' ಮತ್ತು ಪಾಕಿಸ್ತಾನ 'ಎ' ತಂಡಗಳು ಒಳಗೊಂಡಿರುವ ತ್ರಿಕೋನ ಸರಣಿಯಲ್ಲಿ ಧೋನಿ ತನ್ನ ಅರ್ಧ-ಶತಕದೊಂದಿಗೆ ಭಾರತ 'ಎ'ಕ್ಕೆ ಪಾಕಿಸ್ತಾನ 'ಎ' ವಿರುದ್ಧ 223 ರನ್ಗಳ ಗುರಿ ತಲುಪಲು ನೆರವಾದರು.[೨೧] ಪಾಕಿಸ್ತಾನ 'ಎ' ಎದುರು 120[೨೨] ಮತ್ತು 119*[೨೩] ರನ್ಗಳನ್ನು ಬಾರಿಸುವುದರೊಂದಿಗೆ ಎರಡು ಶತಕಗಳನ್ನು ದಾಖಲಿಸಿದರು. ಧೋನಿ 7 ಪಂದ್ಯಗಳಲ್ಲಿ 362 ರನ್ಗಳನ್ನು (6 ಇನ್ನಿಂಗ್ಸ್, ಸರಾಸರಿ:72.40) ದಾಖಲಿಸಿ, ಉತ್ತಮ ಪ್ರದರ್ಶನದ ಮೂಲಕ ಆಗಿನ ನಾಯಕ - ಸೌರವ ಗಂಗೂಲಿ[೨೪] ಯ ಗಮನ ಸೆಳೆಯಲು ಯಶಸ್ವಿಯಾಗಿದ್ದರು. ಆದರೆ ಭಾರತ 'ಎ' ತಂಡ ತರಬೇತುದಾರ ಸಂದೀಪ್ ಪಾಟೀಲ್ ಭಾರತ ತಂಡಕ್ಕೆ ವಿಕೆಟ್-ಕೀಪರ್/ಬ್ಯಾಟ್ಸ್ಮನ್ ಆಗಿ ಕಾರ್ತಿಕ್ನನ್ನು ಶಿಫಾರಸು ಮಾಡಿದರು.[೨೫]
ಎಮ್. ಎಸ್. ಧೋನಿ ೧.೫ ದಶಲಕ್ಷ(ಅಮೆರಿಕ ಡಾಲರ) USD ಮೊತ್ತಕ್ಕೆ ಚೆನ್ನೈ ಸುಪರ್ ಕಿಂಗ್ಸ್ಯೊಂದಿಗೆ ಕರಾರು ಮಾಡಿಕೊಂಡು ಮೊದಲ IPL ಕ್ರಿಕೆಟ್ ಪಂದ್ಯಾವಳಿಗಳ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರನಾದ. ನಂತರ ಸ್ಥಾನ ಅಂಡ್ರೊ ಸೈಮಂಡ್ಸ್ಗೆ ದೊರೆಯುತ್ತದೆ. ಸದ್ಯ ಧೋನಿ Chennai super kings ತಂಡದ ಪ್ರಸ್ತುತ ನಾಯಕ.
೨೦೦೦ರಲ್ಲಿ ಭಾರತ ತಂಡವು ರಾಹುಲ್ ದ್ರಾವಿಡ್ನಲ್ಲಿ ವಿಕೆಟ್-ಕೀಪಿಂಗ್ ಪ್ರತಿಭೆಯನ್ನು ಕಂಡಿತು. ಇದರಿಂದಾಗಿ ವಿಕೆಟ್-ಕೀಪರ್ ಸ್ಥಾನಕ್ಕಾಗಿ ಯಾವುದೇ ಇತರ ಬ್ಯಾಟಿಂಗ್ ಸ್ಥಾನವನ್ನು ಬಲಿಕೊಡುವ ಪ್ರಮೇಯ ಇಲ್ಲವಾಯಿತು.[೨೪] ಭಾರತೀಯ ಕ್ರಿಕೆಟ್ ಮಂಡಳಿಯು ಟೆಸ್ಟ್ ತಂಡದಲ್ಲಿ ಭಾರತ U-19 ನಾಯಕರಾದ ಪಾರ್ಥಿವ್ ಪಟೇಲ್ ಮತ್ತು ದಿನೇಶ್ ಕಾರ್ತಿಕ್ರಂತಹ ಪ್ರತಿಭೆಗಳೊಂದಿಗೆ ಕಿರಿಯ ಶ್ರೇಣಿಯಿಂದ ವಿಕೆಟ್-ಕೀಪರ್/ಬ್ಯಾಟ್ಸ್ಮನ್ರ ಪ್ರವೇಶವನ್ನು ತಂಡದಲ್ಲಿ ಕಂಡಿತು.[೨೪] ಭಾರತ-ಎ ತಂಡದಲ್ಲಿ ಧೋನಿ ಗುರುತಿಸಿಕೊಂಡಿದ್ದರಿಂದ, 2004/05ರಲ್ಲಿ ಬಾಂಗ್ಲಾದೇಶ ಪ್ರವಾಸದ ODI ತಂಡಕ್ಕೆ ಆಯ್ಕೆಯಾಯಿತು..[೨೬] ಧೋನಿ ಮೊದಲ ಪಂದ್ಯದಲ್ಲಿ ರನ್ ಔಟ್ ದಿಂದಾಗಿ ಕ್ರಿಕೆಟ್ ಒಪ್ಪಿಸಿ ಸೊನ್ನೆಗೆ ಔಟ್ ಆಗುವುದರೊಂದಿಗೆ ಏಕದಿನ ಪಂದ್ಯದ ( ODI) ವೃತ್ತಿಜೀವನಕ್ಕೆ ಉತ್ತಮ ಆರಂಭವನ್ನು ನೀಡಲಿಲ್ಲ.[೨೭] ಬಾಂಗ್ಲಾದೇಶ ವಿರುದ್ಧದ ಸರಣಿಯ ಸಾಮಾನ್ಯ ಮಟ್ಟದ ರನ್ ಗತಿಯಿದ್ದರೂ, ಪಾಕಿಸ್ತಾನ ODI ಸರಣಿಗೆ ಧೋನಿ ಆಯ್ಕೆಯಾಯಿತು.[೨೮] ವಿಶಾಖಪಟ್ಟಣಂದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಧೋನಿ ಐದನೇ ಏಕ ದಿನ ಪಂದ್ಯದಲ್ಲಿ 123 ಎಸೆತಗಳಿಗೆ 148 ರನ್ಗಳನ್ನು ದಾಖಲಿಸಿದರು. ಧೋನಿಯ ಈ ೧೪೮ ರನ್ಗಳ ಮೊತ್ತವು ಹಿಂದೆ ಭಾರತದ ವಿಕೆಟ್ ಕೀಪರ್ ದಾಖಲಿಸಿದ ಅತಿ ಹೆಚ್ಚು ರನ್ಗಳ ದಾಖಲೆಯನ್ನು ಮೀರಿಸಿತು.[೨೯]. ನಂತರ ಅದೇ ವರ್ಷದ ಕೊನೆಯಲ್ಲಿ ಈ ದಾಖಲೆಯಲ್ಲಿ ಮತ್ತಷ್ಟು ಹೆಚ್ಚಿನ ಸಾಧನೆಯಾಯಿತು.
ಶ್ರೀಲಂಕಾ ವಿರುದ್ಧದ ODI ಸರಣಿಯಲ್ಲಿ (ಅಕ್ಟೋಬರ್-ನವೆಂಬರ್ 2005) ಮೊದಲ ಎರಡು ಪಂದ್ಯದಲ್ಲಿ ಧೋನಿಗೆ ಕೆಲವು ಬ್ಯಾಟಿಂಗ್ ಅವಕಾಶಗಳನ್ನು ನೀಡಲಾಯಿತು. ಸಾವೈ ಮಾನ್ಸಿಂಗ್ ಕ್ರೀಡಾಂಗಣದಲ್ಲಿ (ಜೈಪುರ) ನಡೆದ ಮೂರನೇ ODI ಪಂದ್ಯದಲ್ಲಿ 3ನೇ ಕ್ರಮಾಂಕಕ್ಕೆ ಬಡ್ತಿ ನೀಡಲಾಯಿತು. ಶ್ರೀಲಂಕಾದ ಕುಮಾರ ಸಂಗಾಕ್ಕಾರ ಶತಕದೊಂದಿಗೆ ಭಾರತಕ್ಕೆ 299 ರನ್ಗಳ ಗುರಿಯನ್ನು ನಿಗದಿಪಡಿಸಿತು. ಆರಂಭದಲ್ಲಿಯೇ ಭಾರತ ತಂಡವು ತೆಂಡುಲ್ಕರ್ ವಿಕೆಟ್ ಕಳೆದುಕೊಂಡಿತು [೩೦] ಈ ತನಕ ಯಾರೂ ಇಂತಹ ಪ್ರದರ್ಶನ ನೀಡಿರಲಿಲ್ಲ. ಧೋನಿಯ ಅಜೇಯ ಆಟ ಅಪರೂಪದ ಪ್ರದರ್ಶನವಾಗಿತ್ತು. ತಂಡದ ವಿಜಯ ಧೋನಿಯನ್ನು ಆಪತ್ಪಾಂಧವ ಎನ್ನುವಂತೆ ಕ್ರಮಾಂಕವನ್ನೂ ಹೆಚ್ಚಿಸಿತು. 145 ಎಸೆತಗಳಲ್ಲಿ 183 ರನ್ ಗಳಿಕೆ ಆ ಸಂದರ್ಭದ ವಿಶಿಷ್ಟ ಪ್ರೋತ್ಸಾಹಕ್ಕೂ ಕಾರಣವಾಯಿತು. ಈ ಇನ್ನಿಂಗ್ಸ್ದಲ್ಲಿ ಈಗಲೂ ಅಸ್ತಿತ್ವದಲ್ಲಿರುವ ಏಕದಿನ (ODI) ಕ್ರಿಕೆಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ರನ್ ಸೇರಿದಂತೆ ಹಲವು ದಾಖಲೆಗಳನ್ನು ಕಾಣಬಹುದಾಗಿದೆ[೩೧]. ಧೋನಿ ಒಟ್ಟು ಸರಣಿಯಲ್ಲಿ ಅತಿ ಹೆಚ್ಚು ಅಂದರೆ (346)[೩೨] ರನ್ ಗಳಿಸಿದ್ದಕ್ಕಾಗಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. 2005ರ ಡಿಸೆಂಬರ್ನಲ್ಲಿ ಉತ್ತಮ ಕ್ರಿಕೆಟ್ ಪ್ರದರ್ಶನದಿಂದಾಗಿ C-ವರ್ಗದಿಂದ B-ವರ್ಗಕ್ಕೆ ಬಡ್ತಿ ನೀಡಿದ BCCI ಧೋನಿಯೊಂದಿಗೆ ಒಪ್ಪಂದ ಮಾಡಿಕೊಂಡಿತು.[೩೩]
2006ರಲ್ಲಿ ಭಾರತ ಆಡಿದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರು ಧೋನಿಯ 68 ರನ್ಗಳೊಂದಿಗೆ 50 ಒವರ್ಗಳಲ್ಲಿ 328 ರನ್ಗಳನ್ನು ಕಲೆಹಾಕಿತು. ತಂಡ ಪಂದ್ಯದ ಕೊನೆಯ ಎಂಟು ಒವರ್ಗಳಲ್ಲಿ ಕೇವಲ 43 ರನ್ಗಳನ್ನು ಕಲೆಹಾಕುವುದರೊಂದಿಗೆ ತೀರಾ ಕಳಪೆ ಪ್ರದರ್ಶನ ನೀಡಿತು. ಆ ಪಂದ್ಯವನ್ನು ಡಕ್ವರ್ತ್-ಲೆವಿಸ್ ನಿಯಮದ ಅನುಸಾರ ಸೋತಿತು.[೩೪] ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಸೋಲಿನಂಚಿನಲ್ಲಿರುವಾಗ ಧೋನಿ 46 ಎಸೆತಗಳಲ್ಲಿ 13 ಬೌಂಡರಿಗಳು ಸೇರಿದಂತೆ 72 ರನ್ಗಳನ್ನು ಗಳಿಸುವುದರ ಮೂಲಕ ಸರಣಿಯಲ್ಲಿ ಭಾರತ 2-1 ಅಂತರದ ಮುನ್ನಡೆ ಸಾಧಿಸಲು ಕಾರಣರಾದರು.[೩೫][೩೬] ಅಂತಿಮ ಪಂದ್ಯದಲ್ಲಿ ಧೋನಿ 56 ಎಸೆತಗಳಲ್ಲಿ 77 ರನ್ಗಳನ್ನು ಗಳಿಸುವ ಮೂಲಕ, ಭಾರತವು ಸರಣಿಯಲ್ಲಿ 4-1 ಅಂತರದ ಮುನ್ನಡೆ ಸಾಧಿಸುವಂತಾಯಿತು.[೩೭] ಸುಸ್ಥಿರ ODI ಪ್ರದರ್ಶನದಿಂದಾಗಿ, 2006ರ ಎಪ್ರಿಲ್ 20ರಲ್ಲಿ ಬ್ಯಾಟ್ಸ್ಮೆನ್ರ ICC ODI ಶ್ರೇಯಾಂಕ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ರನ್ನು ಹಿಂದಿಕ್ಕಿ ಧೋನಿ ಪ್ರಥಮ ಸ್ಥಾನವನ್ನು ಅಲಂಕರಿಸಿದರು.[೩೮] ಬಾಂಗ್ಲಾದೇಶ ವಿರುದ್ಧ ಆಡಮ್ ಗಿಲ್ಕ್ರಿಸ್ಟ್ ಉತ್ತಮ ಪ್ರದರ್ಶನದಿಂದಾಗಿ ಪ್ರಥಮ ಸ್ಥಾನಕ್ಕೆ ಮನ್ನಡೆ ಸಾಧಿಸಿದ್ದರಿಂದ ವಾರದೊಳಗೆ ಧೋನಿ ದಾಖಲೆ ಅಧಿಪತ್ಯ ಕೊನೆಗೊಂಡಿತು.[೩೯]
ಭದ್ರತಾ ಕಾರಣಗಳಿಂದ ಯುನಿಟೆಕ್ ಕಪ್ ಸ್ಪರ್ಧೆಯಿಂದ ದಕ್ಷಿಣ ಆಫ್ರಿಕಾ ಸರಣಿಯಿಂದ ಹಿಂದೆ ಸರಿಯಿತು. ಶ್ರೀಲಂಕಾದಲ್ಲಿನ ಎರಡು ಪಂದ್ಯಗಳು ರದ್ಧಾಗಿ,[೪೦] ಶ್ರೀಲಂಕಾ ವಿರುದ್ಧದ 2006-07ರ DLF ಕಪ್ನಲ್ಲಿ [೪೧] ಮಳೆಯಿಂದಾಗಿ ಪಂದ್ಯಕ್ಕೆ ಅಡ್ದಿಯಾಯಿತು. ಭಾರತದ ಪ್ರಾರಂಭಕ್ಕೆ ಇನ್ನೊಂದು ವಿಘ್ನ ಎದುರಾಗಿತ್ತು. ಧೋನಿ 43 ರನ್ಗಳನ್ನು ಮಾಡಿದ ಈ ಮೂರು ಪಂದ್ಯಗಳಲ್ಲಿ ಭಾರತ ಎರಡನ್ನು ಸೋತು ಅಂತಿಮ ಹಣಾಹಣಿಗೆ ಅನರ್ಹಗೊಂಡಿತು. 2006 ICC ಚಾಂಪಿಯನ್ಸ್ ಟ್ರೋಫಿನಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಎದುರು ಅಭ್ಯಾಸದ ಕೊರತೆಯಿಂದ ಸೋತಿದ್ದರೂ ಸಹ ಧೋನಿ ವೆಸ್ಟ್ ಇಂಡೀಸ್ ತಂಡದ ಎದುರು ಅರ್ಧಶತಕವನ್ನು ಗಳಿಸಿದ್ದರು. ದಕ್ಷಿಣ ಆಫ್ರಿಕಾ ತಂಡದ ವಿರುಧ್ಧದ ODI ಸರಣಿಯಲ್ಲಿ ಧೋನಿ ಮತ್ತು ಒಟ್ಟು ಭಾರತ ತಂಡದ ಪ್ರದರ್ಶನ ನೀರಸವಾಗಿತ್ತು. ಧೋನಿ 4 ಪಂದ್ಯಗಳಲ್ಲಿ ಕೇವಲ 139 ರನ್ಗಳನ್ನು ಮಾತ್ರ ಗಳಿಸಿದ್ದು, ಭಾರತ 4-0 ಅಂತರದಲ್ಲಿ ಸರಣಿಯನ್ನು ಸೋತಿತು. WI ODI ಸರಣಿಯ ಆರಂಭ ಹೊತ್ತಿಗೆ ಧೋನಿ 16 ಪಂದ್ಯಗಳನ್ನು ಆಡಿ, ಅವುಗಳಲ್ಲಿ 25.93ರ ಸರಾಸರಿಯೊಂದಿಗೆ ಕೇವಲ ಎರಡು ಅರ್ಧಶತಕಗಳನ್ನು ಗಳಿಸಿದ್ದರು. ಭಾರತ ತಂಡದ ಹಿರಿಯ ವಿಕೆಟ್ ಕೀಪರ್ ಸಯ್ಯದ್ ಕೀರ್ಮಾನಿಯವರ ಟೀಕೆಗಳಿಗೂ ಧೋನಿ ಗುರಿಯಾಗಬೇಕಾಯಿತು. ಧೋನಿ ವಿಕೆಟ್ ಕೀಪಿಂಗ್[೪೨] ತಂತ್ರಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.
ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳ 3-1 ಅಂತರದ ಗೆಲುವು, ಭಾರತಕ್ಕೆ 2007 ಕ್ರಿಕೆಟ್ ವಿಶ್ವ ಕಪ್ಗಾಗಿ ಉತ್ತಮ ಪೂರ್ವಸಿಧ್ಧತಾ ಅಭ್ಯಾಸವಾಗಿತ್ತು. ಎರಡು ಸರಣಿಯಲ್ಲಿ ಧೋನಿಯ ರನ್ ಗಳ ಸರಾಸರಿ 100ಕ್ಕಿಂತ ಹೆಚ್ಚಿತ್ತು. ಆದಾಗ್ಯೂ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಎದುರು ಸೋತ ಭಾರತ ತಂಡವು ಅನಿರೀಕ್ಷಿತವಾಗಿ ವಿಶ್ವ ಕಪ್ನಿಂದ ಹೊರಬಿದ್ದಿತು. ಧೋನಿ ಈ ಎರಡೂ ಪಂದ್ಯಗಳಲ್ಲಿ ಸೊನ್ನೆಗೆ ಔಟ್ ಆಗಿದ್ದರು. ಇಡೀ ಪಂದ್ಯಾವಳಿಯಲ್ಲಿ ಗಳಿಸಿದ ಒಟ್ಟು ರನ್ ಕೇವಲ 29 ಮಾತ್ರ. 2007 ಕ್ರಿಕೆಟ್ ವಿಶ್ವ ಕಪ್ನಲ್ಲಿ ಬಾಂಗ್ಲಾದೇಶ ಎದುರು ಸೋತ ಹಿನ್ನಲೆಯಲ್ಲಿ JMM[೪೩] ರಾಜಕೀಯ ಕಾರ್ಯಕರ್ತರು ರಾಂಚಿಯಲ್ಲಿ ಧೋನಿ ನಿರ್ಮಿಸುತ್ತಿದ್ದ ನೂತನ ಮನೆಯ ಮೇಲೆ ದಾಳಿ ನಡೆಸಿ ದಾಂದಲೆ, ದೊಂಬಿ ನಡೆಸಿ ಅಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿದರು. ಭಾರತ ತಂಡವು ವಿಶ್ವ ಕಪ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿಯೆ ಸೋತು ಹೊರಬಂದಿರುವುದರಿಂದ ಧೋನಿ ಕುಟುಂಬಕ್ಕೆ ಸ್ಥಳೀಯ ಪೋಲಿಸರು ಭದ್ರತಾ ವ್ಯವಸ್ಥೆಯನ್ನು ಮಾಡಿದ್ದರು.[೪೪]
ವಿಶ್ವ ಕಪ್ನಲ್ಲಿ ಬಾಂಗ್ಲಾದೇಶ ಎದುರು ಧೋನಿ 91* ರನ್ ಗಳಿಸಿದ್ದರೂ, ತಂಡವು ಪಂದ್ಯದಲ್ಲಿ ರನಗಳ ಮೊತ್ತದ ಬೆನ್ನಟ್ಟಲು ಪ್ರಯಾಸಪಡಬೇಕಾಯಿತು. ಧೋನಿಯ ನಾಲ್ಕನೇ ODI ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿತ್ತು. ಸರಣಿಯ ಮೂರನೇ ಪಂದ್ಯವು ಕೈಬಿಟ್ಟರೂ ನಂತರ ಧೋನಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು. ಧೋನಿ ಆಫ್ರೋ-ಏಷಿಯಾ ಕಪ್ನ 3ನೇ ODIದಲ್ಲಿ 97 ಎಸೆತಗಳಲ್ಲಿ 139 ರನ್ಗಳನ್ನು ಸಿಡಿಸುವುದರೊಂದಿಗೆ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರವಾಗಿರುವುದಲ್ಲದೆ, 3 ಪಂದ್ಯಗಳಲ್ಲಿ 87.00 ಸರಾಸರಿಯೊಂದಿಗೆ 174 ರನ್ಗಳನ್ನು ಗಳಿಸಿ, ಉತ್ತಮ ಪ್ರದರ್ಶನವನ್ನು ನೀಡಿದನು.
ಐರ್ಲೆಂಡ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮತ್ತು ಭಾರತ-ಇಂಗ್ಲೆಂಡ್ 7-ಪಂದ್ಯಗಳ ODI ಸರಣಿಗೆ ಧೋನಿಯನ್ನು ಉಪನಾಯಕನಾಗಿ ಆಯ್ಕೆಮಾಡಲಾಯಿತು.[೮] ಧೋನಿಯು 2005ರ ಡಿಸೆಂಬರ್ನಲ್ಲಿ ಒಪ್ಪಂದದ 'ಬಿ' ವರ್ಗದ ಪಟ್ಟಿಯಲ್ಲಿದ್ದರೂ 2007ರ ಜೂನ್ನಲ್ಲಿ 'ಎ' ವರ್ಗದ ಶ್ರೇಣಿಗೆ ಬಡ್ತಿ ಪಡೆದುಕೊಂಡರು. 2007ರ ಸಪ್ಟೆಂಬರ್ನಲ್ಲಿ ನಡೆದ ವಿಶ್ವ ಟ್ವೆಂಟಿ20 ಪಂದ್ಯಾವಳಿಗೆ ಭಾರತ ಟ್ವೆಂಟಿ-20 ತಂಡದ ನಾಯಕನಾಗಿ ಧೋನಿಯ ಆಯ್ಕೆಯಾಯಿತು. 2007ರ ಸಪ್ಟೆಂಬರ್ 2ರಂದು ಮಹೇಂದ್ರ ಸಿಂಗ್ ಧೋನಿ ಇಂಗ್ಲೆಂಡ್ ವಿರುದ್ಧದ ODI ಪಂದ್ಯದಲ್ಲಿ 5 ಕ್ಯಾಚ್ಗಳು ಮತ್ತು ಒಂದು ಸ್ಟಂಪಿಂಗ್ ಮಾಡಿ, ತಮ್ಮ ಆದರ್ಶ ವ್ಯಕ್ತಿ ಆಡಮ್ ಗಿಲ್ಕ್ರಿಸ್ಟ್ರ ಅಂತರರಾಷ್ಟ್ರೀಯ ದಾಖಲೆಯಾದ ಒಂದು ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಔಟ್ ಮಾಡಿದ ದಾಖಲೆಯನ್ನು ಸರಿಗಟ್ಟಿದರು.[೪೫] ಧೋನಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ICC ವಿಶ್ವ ಟ್ವೆಂಟಿ 20 ಟ್ರೋಫಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದರು. 2007ರ ಸಪ್ಟೆಂಬರ್ 24ರ ಫೈನಲ್ಸ್ ನಲ್ಲಿ ಪಾಕಿಸ್ತಾನದ ವಿರುದ್ದದ ಪಂದ್ಯವನ್ನು ತಂಡ ಗೆದ್ದಿತು. ಇದರಿಂದಾಗಿ ಧೋನಿ, ಕಪಿಲ್ ದೇವ್ ನಂತರ ವಿಶ್ವ ಕಪ್ನ್ನು ಗೆದ್ದ ಎರಡನೇ ಭಾರತೀಯ ನಾಯಕ. 2009ರ ಸಪ್ಟೆಂಬರ್ 30ರಂದು ಧೋನಿ ತನ್ನ ಮೊದಲ ವಿಕೆಟ್ ಮತ್ತು ODI ವಿಕೆಟ್ನ್ನು ಪಡೆದರು. ವೆಸ್ಟ್ ಇಂಡೀಸ್ನ ಬೌಲರ್ ಟ್ರಾವಿಸ್ ಡೌಲಿವ್ ಎಸೆತಕ್ಕೆ ಔಟ್ ಆದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇತ್ತೀಚೆಗೆ ನಡೆದ ಎರಡನೇ ODIನಲ್ಲಿ ಧೋನಿ ಕೇವಲ 107 ಎಸೆತಗಳಲ್ಲಿ 124 ರನ್ಗಳನ್ನು ಸಿಡಿಸಿದ್ದು, ಮೂರನೇ ODI ಪಂದ್ಯದಲ್ಲಿ ಯುವರಾಜ್ ಸಿಂಗ್ 95 ಎಸೆತಗಳಲ್ಲಿ 71 ರನ್ಗಳನ್ನು ಗಳಿಸಿದ್ದರಿಂದ ಭಾರತ ತಾಯ್ನೆಲದಲ್ಲಿ 6 ವಿಕೆಟ್ಗಳ ವಿಜಯ ದಾಖಲಿಸಿತು.
2005ರ ಡಿಸೆಂಬರ್ನಲ್ಲಿ ದಿನೇಶ್ ಕಾರ್ತಿಕ್ ಬದಲು ಶ್ರೀಲಂಕಾ ತಂಡದ ಎದುರಿನ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನದಿಂದಾಗಿ ಧೋನಿಯನ್ನು ಭಾರತ ತಂಡದ ಟೆಸ್ಟ್ ವಿಕೆಟ್-ಕೀಪರ್ ಆಗಿ ಆಯ್ಕೆ ಮಾಡಲಾಯಿತು.[೪೬] ಮಳೆಗೆ ಆಹುತಿಯಾದ ಧೋನಿಯ ಮೊದಲ ಟೆಸ್ಟ್ ಪಂದ್ಯದಲ್ಲಿ 30 ರನ್ಗಳನ್ನು ಗಳಿಸಿದ್ದನು. ಧೋನಿ ಕ್ರೀಸ್ಗೆ ಬರುವಾಗ ತಂಡವು 109/5ಗಳೊಂದಿಗೆ ಸಂಕಷ್ಟದ ಪರಿಸ್ಥಿತಿಯಲ್ಲಿತ್ತು. ಇನ್ನೊಂದು ಕಡೆಯಿಂದ ವಿಕೆಟ್ ಪತನಗೊಳ್ಳುತ್ತಿದ್ದರೂ, ಧೋನಿ ಕೊನೆಯ ಬ್ಯಾಟ್ಸ್ಮ್ಯಾನ್ ಔಟ್ ಆಗುವವರೆಗೆ ಆಕ್ರಮಣಕಾರಿಯಾಗಿ ಆಡಿದ್ದ.[೪೭] ಧೋನಿ ಎರಡನೇ ಟೆಸ್ಟ್ನಲ್ಲಿ ಮೊದಲ ಅರ್ಧಶತಕವನ್ನು ದಾಖಲಿಸಿದನು. ಅವನ ತೀವ್ರಗತಿಯ ರನ್ ಗಳಿಸುವಿಕೆಯಿಂದ (51 ಎಸೆತಗಳಲ್ಲಿ ಅರ್ಧ-ಶತಕ) ಭಾರತಕ್ಕೆ 436 ರನ್ಗಳ ಗುರಿಯನ್ನು ದಾಖಲಿಸಲು ಮತ್ತು ಶ್ರೀಲಂಕಾವನ್ನು 247ಕ್ಕೆ ಆಲ್ಔಟ್ ಮಾಡಲು ಸಾಧ್ಯವಾಯಿತು.[೪೮]
2006ರ ಜನವರಿ/ಫೆಬ್ರವರಿಯಲ್ಲಿ ಭಾರತ ತಂಡದ ಪಾಕಿಸ್ತಾನ ಪ್ರವಾಸದ ಫೈಸಲಾಬಾದ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಧೋನಿ ತನ್ನ ಮೊದಲ ಟೆಸ್ಟ್ ಶತಕವನ್ನು ದಾಖಲಿಸಿದರು. ಭಾರತ ತಂಡಕ್ಕೆ ಫಾಲ್-ಆನ್ ತಪ್ಪಿಸಿಕೊಳ್ಳಲು ಇನ್ನೂ 107 ರನ್ಗಳ ಅಗತ್ಯವಿರುವಾಗ ಧೋನಿ ಇರ್ಫಾನ್ ಫಠಾಣ್ರೊಂದಿಗೆ ಸೇರಿ ಅಂತಹ ಕಠಿಣ ಪರಿಸ್ಥಿತಿಯಲ್ಲಿ ಧೈರ್ಯದಿಂದ ಆಟ ನಿಭಾಯಿಸಿದರು. ಧೋನಿ ಆ ಇನ್ನಿಂಗ್ಸ್ನಲ್ಲಿ 34 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ನಂತರ ಕೇವಲ 93 ಎಸೆತಗಳಲ್ಲಿ ಶತಕವನ್ನು ಬಾರಿಸಿ, ತನ್ನ ಅಪ್ಪಟ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು.[೪೯]
]] ಮೊದಲ ಟೆಸ್ಟ್ ಶತಕದ ನಂತರ ಮೂರು ಪಂದ್ಯಗಳಲ್ಲಿ ನೀರಸ ಬ್ಯಾಟಿಂಗ್ ತೋರಿದ್ದರು. ಅವುಗಳಲ್ಲಿ ಒಂದು ಪಂದ್ಯದಲ್ಲಿ ಭಾರತ ಪಾಕಿಸ್ತಾನದೆದುರು ಸೋತಿತ್ತು, ಇನ್ನೆರಡು ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಭಾರತ 1-0 ಅಂತರದ ಮುನ್ನಡೆಯನ್ನು ಪಡೆದುಕೊಂಡಿತ್ತು. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ನ 400 ರನ್ಗಳಿಗೆ ಉತ್ತರವಾಗಿ ಭಾರತದ ಮೊದಲ ಇನ್ನಿಂಗ್ಸ್ನಲ್ಲಿ 279 ರನ್ಗಳನ್ನು ಮಾಡಿದ್ದು, ಅದರಲ್ಲಿ ಧೋನಿ ತಮ್ಮ 64 ರನ್ಗಳೊಂದಿಗೆ ಭಾರತದ ಪರ ಅತಿ ಹೆಚ್ಚು ರನ್ ಮಾಡಿದ್ದರು. ಆದಾಗ್ಯೂ ಧೋನಿ ಮತ್ತು ಭಾರತ ತಂಡದ ಕ್ಷೇತ್ರ ರಕ್ಷಕರು ಹಲವು ಕ್ಯಾಚ್ಗಳು ಮತ್ತು ಆಂಡ್ರೋ ಫ್ಲಿಂಟಾಫ್ನ ಪ್ರಮುಖ ಸ್ಟಂಪಿಂಗ್ ಅವಕಾಶ ಸೇರಿದಂತೆ ಔಟ್ ಮಾಡಬಹುದಾದ ಅವಕಾಶಗಳನ್ನು ತಪ್ಪಿಸಿಕೊಂಡು ಪರಿತಪಿಸಿದರು(14).[೫೦] ಹರ್ಭಜನ್ ಸಿಂಗ್ರವರ ಎಸೆತದಲ್ಲಿದಲ್ಲಿ ಫ್ಲಿಂಟಾಫ್ನ ಕ್ಯಾಚ್ನ್ನು ಹಿಡಿಯಲು ಧೋನಿ ವಿಫಲರಾದರು. ನಂತರ ಫ್ಲಿಂಟಾಫ್ 36 ರನ್ಗಳನ್ನು ಮಾಡಿ, ಭಾರತಕ್ಕೆ ಈವರೆಗೆ ಬೆನ್ನಟ್ಟದ 313 ರನ್ಗಳ ಗುರಿಯನ್ನು ಒಡ್ಡುವಲ್ಲಿ ಇಂಗ್ಲೆಂಡ್ಗೆ ಸಹಾಯವಾಡಿದರು. ತಂಡವು ಬ್ಯಾಟಿಂಗ್ ಕುಸಿತದಿಂದಾಗಿ 100 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ಅದರಲ್ಲಿ ಧೋನಿ ಕೇವಲ 5 ರನ್ಗಳನ್ನು ಗಳಿಸಿ, ವಿಕೆಟ್-ಕೀಪಿಂಗ್ ಮತ್ತು ಹೊಡೆತದ ತಪ್ಪು ನಿರ್ಣಯಗಳ ಬಗ್ಗೆ ವ್ಯಾಪಕ ಟೀಕೆಗೆ ಗುರಿಯಾಗಬೇಕಾಯಿತು.
2006ರ ವೆಸ್ಟ್ ಇಂಡೀಸ್ ಪ್ರವಾಸನ ಅಂಟಿಗುವಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಧೋನಿ ವೇಗದ ಗತಿ ಮತ್ತು ಆಕ್ರಮಣಶೀಲವಾಗಿ ಆಡಿ 69 ರನ್ಗಳನ್ನು ಗಳಿಸಲು ಸಫಲರಾದರು. ಸರಣಿ ಉಳಿದ ಭಾಗದಲ್ಲಿ 6 ಇನ್ನಿಂಗ್ಸ್ನಲ್ಲಿ 99 ರನ್ಗಳನ್ನು ಗಳಿಸಿದ್ದರೂ ಸಹ ತನ್ನ ವಿಕೆಟ್-ಕೀಪಿಂಗ್ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು, ಸರಣಿಯ ಅಂತ್ಯದ ಹೊತ್ತಿಗೆ 13 ಕ್ಯಾಚ್ಗಳು ಮತ್ತು 4 ಸ್ಟಂಪಿಂಗ್ಗಳ ಮೂಲಕ ಧೋನಿ ಗಮನ ಸೆಳೆದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಧೋನಿ ಎರಡೂ ಇನ್ನಿಂಗ್ಸ್ನಲ್ಲಿ 34 ಮತ್ತು 47 ರನ್ಗಳನ್ನು ಗಳಿಸಿದ್ದರೂ ಸಹ, ಭಾರತವನ್ನು 2-1 ಅಂತರದ ಸರಣಿ ಸೋಲಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. ಮೊದಲ ಟೆಸ್ಟ್ ಪಂದ್ಯದ ವಿಜಯ, ಸರಣಿ ವಿಜಯವಾಗಿ ಪರಿವರ್ತಿಸಲಾಗಲಿಲ್ಲ (ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು). ಧೋನಿಯು ಕೈ ಗಾಯದಿಂದಾಗಿ ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಬೇಕಾದ ಪ್ರಸಂಗ ಎದುರಾಯಿತು.[೫೧]
2006ರ ಭಾರತದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅಂಟಿಗೊವಾದ St ಜಾನ್ಸ್ನಲ್ಲಿರುವ ಅಂಟಿಗೊವಾ ಕ್ರೀಡಾ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ ದೇವ್ ಮಹಮದ್ ಎಸೆದ ಚೆಂಡಗೆ ಧೋನಿ ಫ್ಲಿಕ್ ಆಫ್ ಮಾಡಿದಾಗ ಮಿಡ್ ವಿಕೆಟ್ ವಲಯದಲ್ಲಿದ್ದ ಡೇರನ್ ಗಂಗಾ ಗೆ ಕ್ಯಾಚ್ ನೀಡಬೇಕಾಯಿತು. ಧೋನಿ ಔಟಾಗುತ್ತಿದ್ದಂತೆ ನಾಯಕ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಕ್ಷೇತ್ರ ರಕ್ಷಕರು ಹೊರಡಲು ಪ್ರಾರಂಭಿಸಿದರೂ ಸಹ ತೀರ್ಪುಗಾರರಲ್ಲಿ ಗೊಂದಲವಿರುವುದರಿಂದ ಧೋನಿ ತೀರ್ಪುಗಾರರ ನಿರ್ಣಯಕ್ಕಾಗಿ ಕಾಯುತ್ತಿದ್ದರು. ಔಟ್ ಪ್ರಕರಣದ ಮರುಪ್ರಸಾರ ಗೊಂದಲಮಯವಾದಾಗ ಕ್ಷೇತ್ರ ರಕ್ಷಕರ ವಾಪಸಾತಿ ಕಂಡು ವೆಸ್ಟ್ ಇಂಡೀಸ್ ತಂಡದ ನಾಯಕ ಬ್ರೈನ್ ಲಾರಾ ಕ್ಯಾಚ್ ಹಿಡಿದ ಕ್ಷೇತ್ರರಕ್ಷಕನ ಸಮರ್ಥನೆಯ ಮೇರೆಗೆ ಧೋನಿಗೆ ಹೊರನಡೆಯುವಂತೆ ಸೂಚಿಸಿದನು. ಪರಿಸ್ಥಿತಿ ಹಾಗೆಯೇ 15 ನಿಮಷಗಳ ಕಾಲ ಮುಂದುವರಿದಾಗ, ಲಾರಾ ತೀರ್ಪುಗಾರರಿಗೆ ತೋರು ಬೆರಳನ್ನು ತೋರಿಸುತ್ತಾ, ಅಂಪೈರ್ಅಸಾದ್ ರೌಫ್ ಬಳಿಯಿದ್ದ ಚೆಂಡನ್ನು ಕಸಿದುಕೊಳ್ಳುವುದರೊಂದಿಗೆ ತನ್ನ ಸಿಟ್ಟನ್ನು ಪ್ರದರ್ಶಿಸಿದರು. ಕೊನೆಗೆ, ಧೋನಿ ಮೈದಾನದಿಂದ ಹೊರನಡೆದರು. ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಘೋಷಣೆ ಮಾಡಿದ್ದರೂ, ಆಟ ಪ್ರಾರಂಭವಾದದ್ದು ತಡವಾಯಿತು. ಪಂದ್ಯದಲ್ಲಿ ಲಾರಾ ಪ್ರದರ್ಶಿಸಿದ ನಡವಳಿಕೆಯು ವಿಮರ್ಶಕರು ಮತ್ತು ಹಿರಿಯ ಕ್ರಿಕೆಟಿಗರಿಂದ ತೀವ್ರ ಟೀಕೆಗೆ ಗುರಿಯಾಯಿತು. ಲಾರಾನನ್ನು ಪಂದ್ಯದ ತೀರ್ಪುಗಾರರು ಕರೆದು, ಅವನ ನಡವಳಿಕೆಯ ಬಗ್ಗೆ ವಿವರಣೆಯನ್ನು ಕೇಳಿದರು. ಆದರೆ ಯಾವುದೇ ದಂಡವನ್ನು ವಿಧಿಸಲಿಲ್ಲ.[೫೨]
ಎದುರಾಳಿಗಳ ಎದುರು ODI ವೃತ್ತಿಜೀವನದ ದಾಖಲೆಗಳು | |||||||||
# | ಎದುರಾಳಿ | ಪಂದ್ಯಗಳು | ರನ್ಗಳು | ಸರಾಸರಿ | ಉನ್ನತ ಸ್ಕೋರ್ | 100ಗಳು | 50ಗಳು | ಕ್ಯಾಚ್ಗಳು | ಸ್ಟಂಪಿಂಗ್ |
---|---|---|---|---|---|---|---|---|---|
1 | ಆಫ್ರಿಕಾ XI[೫೩] | 3 | 174 | 87.00 | 139* | 1 | 0 | 3 | 3 |
2 | ಆಸ್ಟ್ರೇಲಿಯಾ | 16 | 405 | 36.81 | 124 | 1 | 3 | 23 | 7 |
3 | ಬಾಂಗ್ಲಾದೇಶ | 8 | 146 | 36.50 | 91* | 0 | 1 | 9 | 6 |
4 | ಬರ್ಮುಡಾ | 1 | 29 | 29.00 | 29 | 0 | 0 | 1 | 0 |
5 | ಇಂಗ್ಲೆಂಡ್ | 18 | 501 | 33.40 | 96 | 0 | 3 | 19 | 7 |
6 | ಹಾಂಗ್ ಕಾಂಗ್ | 1 | 109 | - | 109* | 1 | 0 | 1 | 3 |
7 | ನ್ಯೂಜಿಲೆಂಡ್ | 9 | 269 | 67.25 | 84* | 0 | 2 | 7 | 2 |
8 | ಪಾಕಿಸ್ತಾನ | 22 | 917 | 57.31 | 148 | 1 | 7 | 19 | 6 |
9 | ಸ್ಕಾಟ್ಲೆಂಡ್ | 1 | - | - | - | - | - | 2 | - |
10 | ದಕ್ಷಿಣ ಆಫ್ರಿಕಾ | 10 | 196 | 24.50 | 55 | 0 | 1 | 7 | 1 |
11 | ಶ್ರೀಲಂಕಾ | 34 | 1298 | 61.80 | 183* | 1 | 11 | 36 | 7 |
12 | ವೆಸ್ಟ್ ಇಂಡೀಸ್ | 17 | 499 | 49.90 | 95 | 0 | 3 | 13 | 4 |
13 | ಯಾಕ್ | 2 | 123 | 123.00 | 67* | 0 | 2 | 0 | 1 |
ಒಟ್ಟು | 142 | 4666 | 50.17 | 183* | 5 | 33 | 141 | 47 |
ODI ಶತಕಗಳು :
ODI ಶತಕಗಳು | ||||||
# | ರನ್ಗಳು | ಪಂದ್ಯ | ವಿರುದ್ಧ | ಕ್ರೀಡಾಂಗಣ | ನಗರ/ದೇಶ | ವರ್ಷ |
---|---|---|---|---|---|---|
1 | 148 | 5 | ಪಾಕಿಸ್ತಾನ | ACA-VDCA ಕ್ರೀಡಾಂಗಣ | ವಿಶಾಖಪಟ್ಟಣಂ, ಆಂಧ್ರ ಪ್ರದೇಶ, ಭಾರತ | 2005 |
2 | 183* | 22 | ಶ್ರೀಲಂಕಾ | ಸಾವೈ ಮಾನ್ಸಿಂಗ್ ಕ್ರೀಡಾಂಗಣ | ಜೈಪುರ, ರಾಜಸ್ಥಾನ, ಭಾರತ | 2005 |
3 | 139* | 74 | ಆಫ್ರಿಕಾ XI[೫೩] | MA ಚಿದಂಬರಂ ಕ್ರೀಡಾಂಗಣ | ಚೆನ್ನೈ, ತಮಿಳುನಾಡು, ಭಾರತ | 2007 |
4 | 109* | 109* | ಹಾಂಗ್ ಕಾಂಗ್ | ರಾಷ್ಟ್ರೀಯ ಕ್ರೀಡಾಂಗಣ | ಕರಾಚಿ, ಪಾಕಿಸ್ತಾನ | 2008 |
5 | 124 | 143 | ಆಸ್ಟ್ರೇಲಿಯಾ | VCA ಕ್ರೀಡಾಂಗಣ, ಜಂತಾ | ನಾಗ್ಪುರ, ಭಾರತ | 2009 |
ಕ್ರ ಸಂ | ಸರಣಿ (ಎದುರಾಳಿಗಳು) | ಭಾಗ | ಸರಣಿಗಳಲ್ಲಿ ಪ್ರದರ್ಶನ |
---|---|---|---|
ಭಾರತ ODI ಸರಣಿಯಲ್ಲಿ ಶ್ರೀಲಂಕಾ | 2005/06 | 346 ರನ್ಗಳು (7 ಪಂದ್ಯಗಳು & 5 ಇನ್ನಿಂಗ್ಸ್, 1x100, 1x50); 6 ಕ್ಯಾಚ್ಗಳು & 3 ಸ್ಟಂಪಿಂಗ್ಗಳು | |
2[೫೭] | ಬಾಂಗ್ಲಾದೇಶ ODI ಸರಣಿಯಲ್ಲಿ ಭಾರತ | 2007 | 127 ರನ್ಗಳು (2 ಪಂದ್ಯಗಳು & 2 ಇನ್ನಿಂಗ್ಸ್, 1x50); 1 ಕ್ಯಾಚ್ಗಳು & 2 ಸ್ಟಂಪಿಂಗ್ಗಳು |
ಶ್ರೀಲಂಕಾ ODI ಸರಣಿಯಲ್ಲಿ ಭಾರತ | 2008 | 193 ರನ್ಗಳು (5 ಪಂದ್ಯಗಳು & 5 ಇನ್ನಿಂಗ್ಸ್, 2x50); 3 ಕ್ಯಾಚ್ಗಳು & 1 ಸ್ಟಂಪಿಂಗ್ | |
4 | ವೆಸ್ಟ್ ಇಂಡೀಸ್ ODI ಸರಣಿಯಲ್ಲಿ ಭಾರತ | ಜುಲೈ 16, 2009. | 182 ರನ್ಗಳು (4 ಪಂದ್ಯಗಳು & 91 ಸರಾಸರಿಯೊಂದಿಗೆ 3 ಇನ್ನಿಂಗ್ಸ್); 4 ಕ್ಯಾಚ್ಗಳು & 1 ಸ್ಟಂಪಿಂಗ್ |
ಪಂದ್ಯ ಶ್ರೇಷ್ಠ ಪ್ರಶಸ್ತಿಗಳು :
ಕ್ರ ಸಂ | ಎದುರಾಳಿ | ಸ್ಥಳ | ಕ್ರಿಕೆಟ್ ಪಂದ್ಯಪಂದ್ಯ | ಪಂದ್ಯ ಪ್ರದರ್ಶನ |
---|---|---|---|---|
1 | ಪಾಕಿಸ್ತಾನ | ವಿಶಾಖಪಟ್ಟಣಂ | 2004/05 | 148 (123b, 15x4, 4x6); 2 ಕ್ಯಾಚ್ಗಳು |
2 | ಶ್ರೀಲಂಕಾ | ಜೈಪುರ | 2005/06 | 183* (145b, 15x4, 10x6); 1 ಕ್ಯಾಚ್ |
3 | ಪಾಕಿಸ್ತಾನ | ಲಾಹೋರ್ | ಇಂಗ್ಲಿಷ್ ಫುಟ್ಬಾಲ್ನ 2005–06ರ ಕಾಲಾವಧಿ | 72 (46b, 12x4); 3 ಕ್ಯಾಚ್ಗಳು |
4 | ಬಾಂಗ್ಲಾದೇಶ | ಮೀರ್ಪುರ | 2007 | 91* (106b, 7x4); 1 ಸ್ಟಂಪಿಂಗ್ |
5 | ಆಫ್ರಿಕಾ XI[೫೩] | ಚೆನ್ನೈ | 2007 | 139* (97b, 15x4, 5x6); 3 ಸ್ಟಂಪಿಂಗ್ಗಳು |
6 | ಆಸ್ಟ್ರೇಲಿಯಾ | ಚಂಡಿಗರ್ | 2007 | 50* ( 35 b, 5x4 1x6); 2 ಸ್ಟಂಪಿಂಗ್ಗಳು |
7 | ಪಾಕಿಸ್ತಾನ | ಗುವಹಾಟಿ | 2007 | 63, 1 ಸ್ಟಂಪಿಂಗ್ |
8 | ಶ್ರೀಲಂಕಾ | ಕರಾಚಿ | 2008 | 67, 2 ಕ್ಯಾಚ್ಗಳು |
9 | ಶ್ರೀಲಂಕಾ | ಕೊಲಂಬೊ (RPS) | 2008 | 76, 2 ಕ್ಯಾಚ್ಗಳು |
10 | ನ್ಯೂ ಜೀಲ್ಯಾಂಡ್ | ಮ್ಯಾಕ್ಲರ್ನ್ ಪಾರ್ಕ್, ನಪಿಯರ್ | 2009 | 84*, 1 ಕ್ಯಾಚ್ & 1 ಸ್ಟಂಪಿಂಗ್ |
11 | ವೆಸ್ಟ್ ಇಂಡೀಸ್ | ಬೀಯಾವ್ಸೆಜೋರ್ ಕ್ರೀಡಾಂಗಣ, St. ಲುಸಿಯಾ | 2009 | 46*, 2 ಕ್ಯಾಚ್ಗಳು & 1 ಸ್ಟಂಪಿಂಗ್ |
12 | ಆಸ್ಟ್ರೇಲಿಯಾ | ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ, ನಾಗ್ಪುರ | 2009 | 124, 1 ಕ್ಯಾಚ್ಗಳು, 1 ಸ್ಟಂಪಿಂಗ್ & 1 ರನೌಟ್ |
ಟೆಸ್ಟ್ ಪ್ರದರ್ಶನ :
ಎದುರಾಳಿಗಳೆದುರು ಟೆಸ್ಟ್ ವೃತ್ತಿಜೀವನದ ದಾಖಲೆಗಳು | |||||||||
# | ಎದುರಾಳಿಗಳು | ಪಂದ್ಯಗಳು | ರನ್ಗಳು | ಸರಾಸರಿ | ಉನ್ನತ ಸ್ಕೋರ್ | 100ಗಳು | 50ಗಳು | ಕ್ಯಾಚ್ಗಳು | ಸ್ಟಂಪಿಂಗ್ಗಳು |
---|---|---|---|---|---|---|---|---|---|
1 | ಆಸ್ಟ್ರೇಲಿಯಾ | 8 | 448 | 34.46 | 92 | 0 | 4 | 18 | 6 |
2 | ಬಾಂಗ್ಲಾದೇಶ | 2 | 104 | 104.00 | 51* | 0 | 1 | 6 | 1 |
3 | ಇಂಗ್ಲೆಂಡ್ | 8 | 397 | 33.08 | 92 | 0 | 4 | 24 | 3 |
4 | ನ್ಯೂಜಿಲೆಂಡ್ | 2 | 155 | 77.50 | 56* | 0 | 2 | 11 | 1 |
5 | ಪಾಕಿಸ್ತಾನ | 5 | 323 | 64.60 | 148 | 1 | 2 | 9 | 1 |
6 | ದಕ್ಷಿಣ ಆಫ್ರಿಕಾ | 5 | 218 | 27.25 | 52 | 0 | 1 | 6 | 1 |
7 | ಶ್ರೀಲಂಕಾ | 3 | 149 | 37.25 | 51* | 0 | 1 | 5 | 1 |
8 | ವೆಸ್ಟ್ ಇಂಡೀಸ್ | 4 | 168 | 24.00 | 69 | 0 | 1 | 13 | 4 |
ಒಟ್ಟು | 37 | 1962 | 37.73 | 148 | 1 | 16 | 92 | 18 |
ಟೆಸ್ಟ್ ಶತಕಗಳು :
ಟೆಸ್ಟ್ ಶತಕಗಳು | ||||||
# | ರನ್ಗಳು | ಪಂದ್ಯ | ಎದುರಾಳಿ | ಕ್ರೀಡಾಂಗಣ | ನಗರ/ದೇಶ | ವರ್ಷ |
---|---|---|---|---|---|---|
1 | 148 | 5 | ಪಾಕಿಸ್ತಾನ | ಇಕ್ಬಾಲ್ ಕ್ರೀಡಾಂಗಣ | ಫೈಸಲಾಬಾದ್, ಪಾಕಿಸ್ತಾನ | ನವೆಂಬರ್ 4, 2006 |
ಪಂದ್ಯ ಶ್ರೇಷ್ಠ ಪ್ರಶಸ್ತಿಗಳು :
ಕ್ರ ಸಂ | ಎದುರಾಳಿ | ಸ್ಥಳ | ಭಾಗ | ಪಂದ್ಯ ಪ್ರದರ್ಶನ |
---|---|---|---|---|
1 | ಆಸ್ಟ್ರೇಲಿಯಾ | ಮೊಹಾಲಿ | 2008 | 92 & 68* |
೨೦೦೫ರ ಎಪ್ರಿಲ್ನಲ್ಲಿ ಧೋನಿ ಕೋಲ್ಕತ್ತಾ ಮೂಲದ ಹೆಸರಾಂತ ಸಂಸ್ಥೆ ಗೇಮ್ಪ್ಲ್ಯಾನ್ ಸ್ಪೋರ್ಟ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡರು.[೧೦][೬೦] ಪ್ರಸ್ತುತ ಧೋನಿ ೨೦ ಜಾಹಿರಾತು ಸಂಬಂಧಿಸಿದ ಕರಾರುಗಳಿಗೆ ಒಪ್ಪಿಕೊಂಡಿದ್ದಾರೆ ಶಾರುಖ್ ಖಾನ್ನ (21) ನಂತರದ ಸ್ಥಾನವನ್ನು ಪಡೆದಿದ್ದಾರೆ.[೬೧] ೨೦೦೭ರಲ್ಲಿ ಧೋನಿ ೧೭ ಒಡಂಬಡಿಕೆಗಳನ್ನು ಹೊಂದಿದ್ದರು.[೬೨] ಧೋನಿ ಸಹಿ ಹಾಕಿದ ಒಡಂಬಡಿಕೆಗಳ ಪಟ್ಟಿ ಈ ಕೆಳಗಿನಂತಿವೆ.
ನೋವಾ ಸ್ಕೋಟಿಯಾ ಪ್ರೀಮಿಯಂ ಅಂಗಿಗಳು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.