From Wikipedia, the free encyclopedia
ಭಾರತೀಯ ಕ್ರಿಕೆಟ್ ತ೦ಡ ಭಾರತ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ಭಾರತ ತ೦ಡ ಮೊದಲ ಟೆಸ್ಟ್ ಪ೦ದ್ಯವನ್ನು ಜೂನ್ ೨೫, ೧೯೩೨ ರಲ್ಲಿ ಇ೦ಗ್ಲೆ೦ಡಿನ ಲಾರ್ಡ್ಸ್ ಮೈದಾನದಲ್ಲಿ ಆಡಿತು.
ಸಿಬ್ಬಂದಿ | |||||||||||||
---|---|---|---|---|---|---|---|---|---|---|---|---|---|
ನಾಯಕ | ರೋಹಿತ್ ಶರ್ಮಾ | ||||||||||||
ತರಬೇತುದಾರರು | ರಾಹುಲ್ ದ್ರಾವಿಡ್ | ||||||||||||
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ | |||||||||||||
ICC ದರ್ಜೆ | ಪೂರ್ಣ ಸದಸ್ಯ (೧೯೨೬) | ||||||||||||
ICC ಪ್ರದೇಶ | ಏಷ್ಯಾ | ||||||||||||
| |||||||||||||
ಟೆಸ್ಟ್ ಪಂದ್ಯಗಳು | |||||||||||||
ಮೊದಲ ಟೆಸ್ಟ್ | v. ಇಂಗ್ಲೆಂಡ್ at ಲಾರ್ಡ್ಸ್, ಲಂಡನ್; 25–28 June 1932 | ||||||||||||
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರದರ್ಶನಗಳು | ೨ (೨೦೧೯-೨೦೨೧ರಲ್ಲಿ ಮೊದಲು) | ||||||||||||
ಅತ್ಯುತ್ತಮ ಫಲಿತಾಂಶ | ರನ್ನರ್ ಅಪ್ (೨೦೧೯-೨೧, ೨೦೨೧-೨೩) | ||||||||||||
ಏಕದಿನ ಅಂತಾರಾಷ್ಟ್ರೀಯ | |||||||||||||
ಮೊದಲ ODI | v. ಇಂಗ್ಲೆಂಡ್ at ಹೆಡಿಂಗ್ಲೀ, ಲೀಡ್ಸ್; 13 July 1974 | ||||||||||||
ವಿಶ್ವಕಪ್ ಪ್ರದರ್ಶನಗಳು | ೧೩ (೧೯೭೫ರಲ್ಲಿ ಮೊದಲು) | ||||||||||||
ಅತ್ಯುತ್ತಮ ಫಲಿತಾಂಶ | ಚಾಂಪಿಯನ್ (೧೯೮೩, ೨೦೧೧) | ||||||||||||
ಟಿ20 ಅಂತಾರಾಷ್ಟ್ರೀಯ | |||||||||||||
ಮೊದಲ T20I | v. ದಕ್ಷಿಣ ಆಫ್ರಿಕಾ at ವಾಂಡರರ್ಸ್ ಸ್ಟೇಡಿಯಂ, ಜೋಹಾನ್ಸ್ಬರ್ಗ್; 1 December 2006 | ||||||||||||
ಟಿ20 ವಿಶ್ವಕಪ್ ಪ್ರದರ್ಶನಗಳು | ೮ (೨೦೦೭ರಲ್ಲಿ ಮೊದಲು) | ||||||||||||
ಅತ್ಯುತ್ತಮ ಫಲಿತಾಂಶ | ಚಾಂಪಿಯನ್ (೨೦೦೭) | ||||||||||||
೧೧ ಮಾರ್ಚ್ ೨೦೨೪ರ ಪ್ರಕಾರ |
ಭಾರತದ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡವು 25 ಜೂನ್ 1932 ರಂದು ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಟೆಸ್ಟ್ನಲ್ಲಿ ತನ್ನ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿತು, ಟೆಸ್ಟ್ ಕ್ರಿಕೆಟ್ ಸ್ಥಾನಮಾನವನ್ನು ಪಡೆದ ಆರನೇ ತಂಡವಾಯಿತು. ಭಾರತ ತನ್ನ ಮೊದಲ ಟೆಸ್ಟ್ ಗೆಲುವಿಗೆ ಸುಮಾರು ಇಪ್ಪತ್ತು ವರ್ಷಗಳ ಕಾಲ 1952 ರವರೆಗೆ ಕಾಯಬೇಕಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್ನ ಮೊದಲ ಐವತ್ತು ವರ್ಷಗಳಲ್ಲಿ, 196 ಟೆಸ್ಟ್ಗಳಲ್ಲಿ ಕೇವಲ 35 ಗೆಲುವುಗಳೊಂದಿಗೆ ಯಶಸ್ಸು ಸೀಮಿತವಾಗಿತ್ತು.[2]
ಭಾರತೀಯ ಕ್ರಿಕೆಟ್ ತಂಡವು ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಐ.ಸಿ.ಸಿ. ಸ್ಥಾನ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ.
ಭಾರತೀಯ ತ೦ಡದ ಆರ೦ಭಿಕ ವರ್ಷಗಳ ಕೆಲ ಪ್ರಸಿದ್ಧ ಆಟಗಾರರೆ೦ದರೆ ಸಿ ಕೆ ನಾಯುಡು, ಲಾಲಾ ಅಮರ್ನಾಥ್, ಮೊಹಮ್ಮದ್ ನಿಸಾರ್ ಮೊದಲಾದವರು. ಸ್ವಾತ೦ತ್ರ್ಯಾನ೦ತರ ಭಾರತ ಆಡಿದ ಮೊದಲ ಪ೦ದ್ಯ ೧೯೪೮ ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ಬ್ರಿಸ್ಬೇನ್ ನಲ್ಲಿ. ಭಾರತದ ನಾಯಕತ್ವವನ್ನು ಲಾಲಾ ಅಮರ್ನಾಥ್ ವಹಿಸಿದ್ದರೆ ಆಸ್ಟ್ರೇಲಿಯಾದ ನಾಯಕತ್ವವನ್ನು ಡಾನ್ ಬ್ರಾಡ್ಮನ್ ವಹಿಸಿದ್ದರು. ಭಾರತದ ಮೊದಲ ಟೆಸ್ಟ್ ವಿಜಯ ಬ೦ದದ್ದು ಇ೦ಗ್ಲೆ೦ಡಿನ ವಿರುದ್ಧ ಮದರಾಸಿನಲ್ಲಿ ೧೯೫೨ ರಲ್ಲಿ.[3] ಮೊದಲ ಸರಣಿ ಗೆಲುವು ಬ೦ದಿದ್ದು ಅದೇ ವರ್ಷ ಪಾಕಿಸ್ತಾನದ ವಿರುದ್ಧ.
೫೦ ಮತ್ತು ೬೦ ರ ದಶಕದ ಕೆಲವು ಪ್ರಸಿದ್ಧ ಆಟಗಾರರಲ್ಲಿ ವಿನೂ ಮ೦ಕಡ್, ಹೇಮು ಅಧಿಕಾರಿ, ಮನ್ಸೂರ್ ಅಲಿ ಖಾನ್ ಪಟೌಡಿ, ಚ೦ದೂ ಬೋರ್ಡೆ ಮೊದಲಾದವರನ್ನು ಹೆಸರಿಸಬಹುದು. ಭಾರತದ ಹೊರಗೆ ಮೊದಲ ಟೆಸ್ಟ್ ವಿಜಯ ಬ೦ದದ್ದು ನ್ಯೂಜೀಲೆ೦ಡ್ ನ ವಿರುದ್ಧ ೧೯೬೮ ರಲ್ಲಿ.[4]
೭೦ ರ ದಶಕದಲ್ಲಿ ಭಾರತೀಯ ಕ್ರಿಕೆಟ್ ನ ನಾಲ್ಕು ಮುಖ್ಯ ಬೌಲರ್ ಗಳು ಬಿಷನ್ ಸಿ೦ಗ್ ಬೇಡಿ, ಎರಾಪಳ್ಳಿ ಪ್ರಸನ್ನ, ಬಿ ಎಸ್ ಚ೦ದ್ರಶೇಖರ್ ಮತ್ತು ಶ್ರೀನಿವಾಸ್ ವೆ೦ಕಟರಾಘವನ್. ಇದೇ ಕಾಲದಲ್ಲಿಯೇ ಪ್ರಸಿದ್ಧ ಬ್ಯಾಟುಗರರಾದ ಸುನಿಲ್ ಗವಾಸ್ಕರ್ ಮತ್ತು ಗು೦ಡಪ್ಪ ವಿಶ್ವನಾಥ್ ಬೆಳಕಿಗೆ ಬ೦ದರು. ಈ ದಶಕದ ಕೊನೆಗೆ ಕಪಿಲ್ ದೇವ್ ಉತ್ತಮ ಆಲ್ರೌ೦ಡರ್ ಆಗಿ ಬೆಳೆದರು.[5]
೮೦ ರ ದಶಕದಲ್ಲಿ ಮಹಮದ್ ಅಜರುದ್ದೀನ್, ರವಿ ಶಾಸ್ತ್ರಿ, ಸಂಜಯ್ ಮಾಂಜ್ರೇಕರ್, ಕ್ರಷ್ಣಮಾಚಾರಿ ಶ್ರೀಕಾಂತ್, ಮದನ್ ಲಾಲ್, ಮಣಿ೦ದರ್ ಸಿ೦ಗ್ ಮೊದಲಾದವರು ಪ್ರಸಿದ್ಧರಾದರು. ೧೯೮೩ ರಲ್ಲಿ ಭಾರತ ವಿಶ್ವ ಕಪ್ ಅನ್ನು ಗೆದ್ದಿತು. ಮತ್ತೆ ೧೯೮೫ ರಲ್ಲಿ ಆ೦ತಾರಾಷ್ಟ್ರೀಯ ಚಾ೦ಪಿಯನ್ ಶಿಪ್ ಅನ್ನು ಆಸ್ಟ್ರೇಲಿಯಾದಲ್ಲಿ ಗೆದ್ದಿತು. ೧೯೮೬ ರಲ್ಲಿ ಇ೦ಗ್ಲೆ೦ಡಿನಲ್ಲಿ ಗೆದ್ದ ಟೆಸ್ಟ್ ಸರಣಿ ಇದುವರೆಗೆ ಭಾರತದ ಹೊರಗೆ ಭಾರತದ ಕೊನೆಯ ಟೆಸ್ಟ್ ಸರಣಿ ವಿಜಯವಾಗಿದೆ. ಇದೇ ದಶಕದಲ್ಲಿ ಗವಾಸ್ಕರ್ ೧೦,೦೦೦ ರನ್ನುಗಳನ್ನು ದಾಟಿದ ಮೊದಲ ಬ್ಯಾಟುಗಾರರಾದರು. ೩೪ ಶತಕಗಳನ್ನು ಸಹ ದಾಖಲಿಸಿದರು.
೯೦ ರ ದಶಕದ ಆರ೦ಭದಲ್ಲಿ ತೆ೦ಡೂಲ್ಕರ್ ಮತ್ತು ಅನಿಲ್ ಕು೦ಬ್ಳೆ ಪ್ರಸಿದ್ಧರಾದರು. ೧೯೯೯ ರಲ್ಲಿ ಅನಿಲ್ ಕು೦ಬ್ಳೆ ಒ೦ದೇ ಇನಿ೦ಗ್ಸಿನಲ್ಲಿ ಹತ್ತೂ ವಿಕೆಟ್ ಗಳನ್ನು (ಪಾಕಿಸ್ತಾನ) ಪಡೆದ ಎರಡನೆಯ ಬೌಲರ್ ಆದರು. ಸಚಿನ ತೆ೦ಡೂಲ್ಕರ್ ಅನೇಕ ದಾಖಲೆಗಳನ್ನು ನಿರ್ಮಿಸುತ್ತಿದ್ದ೦ತೆ (ಏಕದಿನ ಪ೦ದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು ಮತ್ತು ಅತಿ ಹೆಚ್ಚು ಶತಕಗಳು, ಇತ್ಯಾದಿ), ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮೊದಲಾದವರು ಅ೦ತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೆಜ್ಜೆಯೂರತೊಡಗಿದರು.
ತಂಡವು ಐದು ಪ್ರಮುಖ ICC ಪಂದ್ಯಾವಳಿಗಳನ್ನು ಗೆದ್ದಿದೆ, ಎರಡು ಬಾರಿ ಕ್ರಿಕೆಟ್ ವಿಶ್ವಕಪ್ (1983 ಮತ್ತು 2011), ICC T20 ವಿಶ್ವಕಪ್ ಒಮ್ಮೆ (2007) ಮತ್ತು ICC ಚಾಂಪಿಯನ್ಸ್ ಟ್ರೋಫಿಯನ್ನು ಎರಡು ಬಾರಿ (2002 ಮತ್ತು 2013) ಗೆದ್ದಿದೆ. ಅವರು ವಿಶ್ವಕಪ್ನಲ್ಲಿ ಎರಡು ಬಾರಿ (2003 ಮತ್ತು 2023), T20 ವಿಶ್ವಕಪ್ನಲ್ಲಿ ಒಮ್ಮೆ (2014), ಚಾಂಪಿಯನ್ಸ್ ಟ್ರೋಫಿ ಎರಡು ಬಾರಿ (2000 ಮತ್ತು 2017) ಮತ್ತು ICC ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಳಲ್ಲಿ ಮೊದಲ ಎರಡು ಆವೃತ್ತಿಗಳಲ್ಲಿ ರನ್ನರ್-ಅಪ್ ಆಗಿ ಮುಗಿಸಿದ್ದಾರೆ ( 2021, 2023). ವೆಸ್ಟ್ ಇಂಡೀಸ್ ನಂತರ ವಿಶ್ವಕಪ್ ಗೆದ್ದ ಎರಡನೇ ತಂಡ ಮತ್ತು 2011 ರ ಕ್ರಿಕೆಟ್ ವಿಶ್ವಕಪ್ ಗೆದ್ದ ನಂತರ ತವರು ನೆಲದಲ್ಲಿ ವಿಶ್ವಕಪ್ ಗೆದ್ದ ಮೊದಲ ತಂಡವಾಗಿದೆ.
ಅವರು 1984, 1988, 1990-91, 1995, 2010, 2016, 2018, 2023 ರಲ್ಲಿ ಎಂಟು ಬಾರಿ ಏಷ್ಯಾ ಕಪ್ ಗೆದ್ದಿದ್ದಾರೆ ಮತ್ತು ಮೂರು ಬಾರಿ ರನ್ನರ್ ಅಪ್ (1997, 2004, 2008) ಗಳಿಸಿದ್ದಾರೆ. 2022ರ ಏಷ್ಯನ್ ಗೇಮ್ಸ್ನಲ್ಲಿ ಭಾರತವೂ ಚಿನ್ನದ ಪದಕ ಗೆದ್ದಿತ್ತು. ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಮೇಸ್ ಅನ್ನು ಐದು ಬಾರಿ ಗೆದ್ದಿರುವುದು ಇತರ ಸಾಧನೆಗಳು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ | ||||||||||||||||||
---|---|---|---|---|---|---|---|---|---|---|---|---|---|---|---|---|---|---|
ವರ್ಷ | ಲೀಗ್ ಹಂತ | ಫೈನಲ್ ಹೋಸ್ಟ್ | ಫೈನಲ್ | ಅಂತಿಮ ಸ್ಥಾನ | ||||||||||||||
ಸ್ಥಾನ | ಪಂದ್ಯ | ಕಡಿತ | ಅಂ.ಸ್ಪ | ಅಂ. | PCT | |||||||||||||
ಆ | ಗೆ | ಸೋ | ಡ್ರಾ | ಟೈ | ||||||||||||||
೨೦೧೯-೨೦೨೧[6] | ೧/೯ | ೧೭ | ೧೨ | ೪ | ೧ | ೦ | ೦ | ೭೨೦ | ೫೨೦ | ೭೨.೨ | ರೋಸ್ ಬೌಲ್, ಇಂಗ್ಲೆಂಡ್ | ನ್ಯೂ ಜೀಲ್ಯಾಂಡ್ ಗೆ ೮ ವಿಕೆಟ್ಗಳಿಂದ ಸೋತಿತು | ರನ್ನರ್ ಅಪ್ | |||||
೨೦೨೧-೨೦೨೩[7] | ೨/೯ | ೧೮ | ೧೦ | ೫ | ೩ | ೦ | ೫ | ೨೧೬ | ೧೨೭ | ೫೮.೮ | ದಿ ಓವಲ್, ಇಂಗ್ಲೆಂಡ್ | ಆಸ್ಟ್ರೇಲಿಯಾ ಗೆ 209 ರನ್ಗಳಿಂದ ಸೋತಿತು | ರನ್ನರ್ ಅಪ್ |
ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ.
ಹೆಸರು | ವಯಸ್ಸು | ಬ್ಯಾಟಿಂಗ್ ಶೈಲಿ | ಬೌಲಿಂಗ್ ಶೈಲಿ | ಟಿಪ್ಪಣಿ | ||||||
---|---|---|---|---|---|---|---|---|---|---|
ಬ್ಯಾಟರ್ಸ್ | ||||||||||
ರುತುರಾಜ್ ಗಾಯಕ್ವಾಡ್ | 27 | Right-handed | — | |||||||
ಶುಭಮನ್ ಗಿಲ್ | 25 | Right-handed | Right-arm off spin | |||||||
ಶ್ರೇಯಸ್ ಅಯ್ಯರ್ | 29 | Right-handed | Right-arm leg spin | |||||||
ಯಶಸ್ವಿ ಜೈಸ್ವಾಲ್ | 22 | Left-handed | Right-arm leg spin | |||||||
ಸರ್ಫರಾಜ್ ಖಾನ್ | 27 | Right-handed | Right-arm leg break | |||||||
ವಿರಾಟ್ ಕೊಹ್ಲಿ | 35 | Right-handed | Right-arm medium | |||||||
ರಜತ್ ಪಾಟಿದಾರ್ | 31 | Right-handed | — | |||||||
ದೇವದತ್ ಪಡಿಕ್ಕಲ್ | 24 | Left-handed | — | |||||||
ರೋಹಿತ್ ಶರ್ಮಾ | 37 | Right-handed | Right-arm off break | ನಾಯಕ | ||||||
ರಿಂಕು ಸಿಂಗ್ | 27 | Left-handed | Right-arm off break | |||||||
ಸೂರ್ಯಕುಮಾರ್ ಯಾದವ್ | 34 | Right-handed | Right-arm off spin | |||||||
ವಿಕೆಟ್ ಕೀಪರ್ | ||||||||||
ಶ್ರೀಕರ್ ಭಾರತ್ | 31 | Right-handed | — | |||||||
ಇಶಾನ್ ಕಿಶನ್ | 26 | Left-handed | — | |||||||
ಕೆ.ಎಲ್.ರಾಹುಲ್ | 32 | Right-handed | — | |||||||
ಸಂಜು ಸ್ಯಾಮ್ಸನ್ | 29 | Right-handed | — | |||||||
ರಿಷಭ್ ಪಂತ್ | 27 | Left-handed | — | |||||||
ಆಲ್ ರೌಂಡರ್ | ||||||||||
ರವಿಚಂದ್ರನ್ ಅಶ್ವಿನ್ | 38 | Right-handed | Right-arm off spin | |||||||
ಶಿವಂ ದುಬೆ | 31 | Left-handed | Right-arm medium | |||||||
ರವೀಂದ್ರ ಜಡೇಜಾ | 35 | Left-handed | Slow left-arm orthodox | |||||||
ಹಾರ್ದಿಕ್ ಪಾಂಡ್ಯ | 31 | Right-handed | Right-arm medium-fast | ODI, T20I ಉಪನಾಯಕ | ||||||
ಅಕ್ಷರ್ ಪಟೇಲ್ | 30 | Left-handed | Slow left-arm orthodox | |||||||
ವಾಷಿಂಗ್ಟನ್ ಸುಂದರ್ | 25 | Left-handed | Right-arm off spin | |||||||
ಪೇಸ್ ಬೌಲರ್ | ||||||||||
ಜಸ್ಪ್ರೀತ್ ಬುಮ್ರಾ | 30 | Right-handed | Right-arm fast | ಟೆಸ್ಟ್ ಉಪನಾಯಕ | ||||||
ದೀಪಕ್ ಚಹಾರ್ | 32 | Right-handed | Right-arm medium | |||||||
ಅವೇಶ್ ಖಾನ್ | 27 | Right-handed | Right arm fast-medium | |||||||
ಮುಖೇಶ್ ಕುಮಾರ್ | 31 | Right-handed | Right arm medium | |||||||
ಪ್ರಸಿದ್ಧ್ ಕೃಷ್ಣ | 31 | Right-handed | Right arm medium | |||||||
ಉಮ್ರಾನ್ ಮಲಿಕ್ | 24 | Right-handed | Right-arm fast | |||||||
ಮೊಹಮ್ಮದ್ ಶಮಿ | 34 | Right-handed | Right-arm fast | |||||||
ಅರ್ಷದೀಪ್ ಸಿಂಗ್ | 25 | Left-handed | Left-arm medium-fast | |||||||
ಮೊಹಮ್ಮದ್ ಸಿರಾಜ್ | 30 | Right-handed | Right-arm fast | |||||||
ಶಾರ್ದೂಲ್ ಠಾಕೂರ್ | 33 | Right-handed | Right-arm medium | |||||||
ಸ್ಪಿನ್ ಬೌಲರ್ | ||||||||||
ರವಿ ಬಿಷ್ಣೋಯ್ | 34 | Right-handed | Right-arm leg spin | |||||||
ಯುಜ್ವೇಂದ್ರ ಚಹಾಲ್ | 31 | Left-handed | Right-arm off-break | |||||||
ಕುಲದೀಪ್ ಯಾದವ್ | 29 | Left-handed | Left-arm wrist spin |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.