From Wikipedia, the free encyclopedia
ಶೈಕ್ಷಣಿಕ ಹಂತಗಳು ಎಂದರೆ ವಿಧ್ಯುಕ್ತ ಕಲಿಕೆಯ ಉಪವಿಭಾಗಗಳು ಮತ್ತು ಸಾಮಾನ್ಯವಾಗಿ ಮುಂಚಿನ ಬಾಲ್ಯದ ಶಿಕ್ಷಣ, ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಮತ್ತು ತೃತೀಯಕ (ಅಥವಾ ಉನ್ನತ) ಶಿಕ್ಷಣವನ್ನು ಒಳಗೊಳ್ಳುತ್ತವೆ. ತನ್ನ ಅಂತರರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯ ಪ್ರಮಾಣಕ ವರ್ಗೀಕರಣದಲ್ಲಿ (ಐಎಸ್ಸಿಇಡಿ) ಯುನೆಸ್ಕೊ ಏಳು ಸ್ತರಗಳ ಶಿಕ್ಷಣವನ್ನು ಗುರುತಿಸುತ್ತದೆ, ಸ್ತರ ೦ (ಪ್ರಾಥಮಿಕಪೂರ್ವ ಶಿಕ್ಷಣ) ಇಂದ ಸ್ತರ ೬ ರವರೆಗೆ (ಉನ್ನತ ಶಿಕ್ಷಣದ ಎರಡನೇ ಹಂತ). ಯುನೆಸ್ಕೊದ ಅಂತರರಾಷ್ಟ್ರೀಯ ಶಿಕ್ಷಣ ವಿಭಾಗವು ದೇಶ-ನಿರ್ದಿಷ್ಟ ಶಿಕ್ಷಣ ವ್ಯವಸ್ಥೆಗಳು ಮತ್ತು ಅವುಗಳ ಹಂತಗಳ ದತ್ತಸಂಚಯವನ್ನು ನಿರ್ವಹಿಸುತ್ತದೆ.
ಬಾಲ್ಯ ಮತ್ತು ಮುಂಚಿನ ಪ್ರೌಢಾವಸ್ಥೆಯ ಅವಧಿಯಲ್ಲಿನ ಶಿಕ್ಷಣವನ್ನು ಸಾಮಾನ್ಯವಾಗಿ ಬಾಲ್ಯ ವಿದ್ಯಾಭ್ಯಾಸದ ಎರಡು ಅಥವಾ ಮೂರು ಹಂತದ ವ್ಯವಸ್ಥೆ, ನಂತರ ತಮ್ಮ ವಿಧ್ಯುಕ್ತ ಶಿಕ್ಷಣವನ್ನು ಮುಂದುವರಿಸುವವರಿಗೆ ಇದನ್ನು ಅನುಸರಿಸುವ ಹೆಚ್ಚುವರಿ ಹಂತಗಳ ಉನ್ನತ ಶಿಕ್ಷಣ ಅಥವಾ ವೃತ್ತಿಪರ ಶಿಕ್ಷಣದ ಮೂಲಕ ಒದಗಿಸಲಾಗುತ್ತದೆ:
ಸಡ್ಬೆರಿ ಶಾಲೆಗಳು ವಿದ್ಯುಕ್ತ ತರಗತಿ ಮಟ್ಟಗಳು ಅಥವಾ ಶೈಕ್ಷಣಿಕ ಹಂತಗಳನ್ನು ಬಳಸುವುದಿಲ್ಲ. ಬದಲಾಗಿ, ಒಂದು ಪ್ರಜಾಸತ್ತೀಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ೪ ರಿಂದ ೧೮ ವರ್ಷದ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಲಾಗುತ್ತದೆ, ಮತ್ತು ವಿಶೇಷ ಜ್ಞಾನ ಅಥವಾ ಸುರಕ್ಷತಾ ವಿಧಾನಗಳು ಅಗತ್ಯವಾದ ಉಪಕರಣವನ್ನು ಬಳಸಲು ಪ್ರಮಾಣೀಕರಣಗಳ ಸರಣಿಯ ಮೇಲೆ ಅವಲಂಬಿಸಲಾಗುತ್ತದೆ. ಈ ಪ್ರಮಾಣೀಕರಣಗಳು ಸಾಮಾನ್ಯವಾಗಿ ವಯಸ್ಸಿನಿಂದ ನಿರ್ಬಂಧಿತವಾಗಿರುವುದಿಲ್ಲ, ಬದಲಾಗಿ ತೋರಿಸಲಾದ ಸಾಮರ್ಥ್ಯದಿಂದ ನಿರ್ಬಂಧಿತವಾಗಿರುತ್ತವೆ.[೧]
ಭಾರತದಲ್ಲಿ, ಕೇಂದ್ರ ಮತ್ತು ಬಹುತೇಕ ರಾಜ್ಯ ಮಂಡಳಿಗಳು ಏಕಪ್ರಕಾರವಾಗಿ ಶಿಕ್ಷಣದ "೧೦+೨+೩" ಮಾದರಿಯನ್ನು ಅನುಸರಿಸುತ್ತವೆ. ಈ ಮಾದರಿಯಲ್ಲಿ, ೧೦ ವರ್ಷಗಳ ಅಧ್ಯಯನವನ್ನು ಶಾಲೆಗಳಲ್ಲಿ ಮಾಡಲಾಗುತ್ತದೆ, ಮತ್ತು ೨ ವರ್ಷದ ಅಧ್ಯಯನ ಪದವಿಪೂರ್ವ ಕಾಲೇಜುಗಳಲ್ಲಿ, ಮತ್ತು ನಂತರ ಸ್ನಾತಕ ಪದವಿಗಾಗಿ ೩ ವರ್ಷದ ಅಧ್ಯಯನ ಮಾಡಲಾಗುತ್ತದೆ. ಇಷ್ಟೇ ಅಲ್ಲದೆ ಮೊದಲ ೧೦ ವರ್ಷವನ್ನು ೪ ವರ್ಷದ ಪ್ರಾಥಮಿಕ ಶಿಕ್ಷಣ, ೬ ವರ್ಷದ ಪ್ರೌಢ ಶಾಲೆ ಮತ್ತು ೨ ವರ್ಷದ ಪದವಿಪೂರ್ವ ಕಾಲೇಜು ಶಿಕ್ಷಣವಾಗಿ ಉಪವಿಭಾಗಿಸಲಾಗುತ್ತದೆ.
Seamless Wikipedia browsing. On steroids.