From Wikipedia, the free encyclopedia
ನಯನ್ ರಾಮ್ ಲಾಲ್ ಮೊಂಗಿಯಾ (೧೯ ಡಿಸೆಂಬರ್ ೧೯೬೯) ಭಾರತದ ಮಾಜಿ ಕ್ರೀಕೆಟ್ ಆಟಗಾರ.ಅವರು ಬಲಗೈ ಬ್ಯಾಟ್ಸ್ಮನ್ ಮತ್ತು ವಿಕೆಟ್ಕೀಪರ್ ಆಗಿದ್ದರು.
ವಯಕ್ತಿಕ ಮಾಹಿತಿ | ||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಹುಟ್ಟು | ಬರೋಡಾ, ಗುಜರಾತ್, ಭಾರತ | ೧೯ ಡಿಸೆಂಬರ್ ೧೯೬೯|||||||||||||||||||||||||||||||||||||||
ಬ್ಯಾಟಿಂಗ್ | ರೈಟ್-ಹ್ಯಾಂಡ್ ಬ್ಯಾಟ್ | |||||||||||||||||||||||||||||||||||||||
ಬೌಲಿಂಗ್ | – | |||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||
| ||||||||||||||||||||||||||||||||||||||||
ಮೂಲ: espncricinfo, ೪ ಫೆಬ್ರುವರಿ ೨೦೦೬ |
ನಯನ್ ಮೊಂಗಿಯಾ ಅವರು ೧೯ ಡಿಸೆಂಬರ್ ೧೯೬೯ ಅಂದು ಗುಜರಾತ್ನ ಬರೋಡಾದಲ್ಲಿ ಜನಿಸಿದರು. ಇವರ ಪೂರ್ತಿ ಹೆಸರು ನಯನ್ ರಾಮ್ ಲಾಲ್ ಮೊಂಗಿಯಾ.
ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಅಂಡರ್ ೧೯ ರಿಂದ ಆಯ್ಕೆಯಾದರು. ಅವರು ಭಾರತ ಕ್ರಿಕೆಟ್ ತಂಡದ ಉತ್ತಮ ಆಟಗಾರ. ಅವರ ಮೊದಲನೆಯ ಪಂದ್ಯ ಶ್ರೀಲಂಕದ ವಿರುದ್ದವಿತ್ತು, ಅವರು ೧೯೯೦ರಲ್ಲಿ ಇಂಗ್ಲೆಂಡ್ಗೆ ಮೊದಲ ಬಾರಿಗೆ ಭೇಟಿ ನೀಡಿದಾಗ ಅಲಾನ್ ನಾಟ್ ಅವರು ಮೊಂಗಿಯಾರನ್ನು ಸಹಜ ಆಟಗಾರ ಎಂದು ಹೇಳಿದರು. ಕಿರಣ್ ಮೊರ್ ನಂತರ ಮೊಂಗಿಯಾ ಅವರು ಭಾರತದ ಎರಡನೇ ವಿಕೆಟ್ ಕೀಪರ್ ಆಗಿ ಉಳಿದರು.೧೯೯೬-೯೭ರಲ್ಲಿ ದೆಹಲಿಯ ಭಾರತ ಪ್ರವಾಸದ ನಂತರದ ಏಕದಿನ ಟೆಸ್ಟ್ನಲ್ಲಿ ಮೊಂಗಿಯಾ ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್ ಶತಕವನ್ನು ಗಳಿಸಿದರು. ಭಿನ್ನಾಭಿಪ್ರಾಯ ಮತ್ತು ಮ್ಯಾಚ್-ಫಿಕ್ಸಿಂಗ್ ಆರೋಪಗಳ ನಂತರ ಮೊಂಗಿಯಾ ತಂಡದಿಂದ ಕೈಬಿಡಲಾಯಿತು.೧೯೮೩ನಲ್ಲಿ ಬರೋಡಾ ಕ್ರೀಕೆಟ್ ತಂಡಕ್ಕೆ ಪ್ರಥಮ ದರ್ಜೆಯ ಪಂದ್ಯಗಳು ಮತ್ತು ವೆಸ್ಟ್ ಝೋನ್ ಕ್ರೀಕೆಟ್ ತಂಡವು ನವೆಂಬರ್ ೧೯೮೯ರಲ್ಲಿ ಪ್ರಥಮ ಪ್ರವೇಶವನ್ನು ನೀಡಿದರು.ಅವರ ೩೫೩ ಕ್ಯಾಚ್ಗಳು ಮತ್ತು ೪೩ ಸ್ಟಂಪಿಂಗ್ಗಳನ್ನು ಪಡೆದರು ಮತ್ತು ೭೦೦೦ಕ್ಕೂ ಅಧಿಕ ರನ್ ಗಳನ್ನು ಗಳಿಸಿದರು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ, ಮೊಂಗಿಯಾ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ಧ ಮಾರ್ಚ್ ೨೦೦೧ ರಲ್ಲಿ ಒಂದು ಮಹಾಕಾವ್ಯದ ಕೋಲ್ಕತಾ ಟೆಸ್ಟ್ನಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಕೊನೆಗೊಳಿಸಿದ ೪೪ ಟೆಸ್ಟ್ಗಳನ್ನು ಆಡಿದರು.[1]ಡಿಸೆಂಬರ್ ೨೦೦೪ ರಲ್ಲಿ ಮೊಂಗಿಯಾ ಮೊದಲ ದರ್ಜೆ ಕ್ರಿಕೆಟ್ನಿಂದ ನಿವೃತ್ತರಾದರು.[2] ನಯನ್ ಅವರು ಬಹಳ ಲವಲವಿಕೆಯ ಮನುಶ್ಯರು. ಮೈದಾನದಲ್ಲಿ ಎಲ್ಲಾ ಆಟಗಾರರನ್ನು ಹುರಿದುಂಬಿಸುತ್ತಿದ್ದರು.ಅಕ್ಟೋಬರ್ ೩೦,೧೯೯೪ ರಂದು ಅವರು ಮ್ಯಾಚ್ ಫಿಕ್ಸಿಂಗ್ನಲ್ಲಿ ತೊಡಗಿದ್ದರು.[3]
೨೦೦೪ ರಲ್ಲಿ ಅವರು ಥೈಲ್ಯಾಂಡ್ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಕೊಚ್ ಆಗಿದ್ದರು.ಅವರು ಮಲೇಶಿಯಾದ ೨೦೦೪ ಎಸಿಸಿ ಟ್ರೊಫಿಗಾಗಿ ತರಬೇತುದಾರರಾಗಿದ್ದರು.ಇವರನ್ನು ಥೈಲ್ಯಾಂಡ್ ರಾಷ್ಟ್ರೀಯ ಅಂಡರ್ -19 ಕ್ರಿಕೆಟ್ ತಂಡವನ್ನು ಸಹ ಹೆಸರಿಸಿದೆ. ಅವರು ವಿಝಾಕ್ ವಿಕ್ಟರ್ಸ್ಗಾಗಿ ವಿಕೆಟ್ ಕೀಪಿಂಗ್ ಕೋಚ್ ಆಗಿ ನೇಮಕಗೊಂಡರು.[4]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.