ಬ್ಯಾಸ್ಕೆಟ್ಬಾಲ್
From Wikipedia, the free encyclopedia
ಬ್ಯಾಸ್ಕೆಟ್ಬಾಲ್ ಒಂದು ಸಾಂಘಿಕ ಆಟವಾಗಿದ್ದು, ೫ ಆಟಗಾರರ ಎರಡು ತಂಡಗಳು ಸಂಘಟಿತ ನಿಯಮದಡಿ ೧೦ ಅಡಿ (೩.೦೪೮ ಮೀ) ಎತ್ತರದ ಹೂಪ್ನಲ್ಲಿ (ಗೋಲ್ ) ಚೆಂಡನ್ನು ಹಾಕುವ ಮೂಲಕ ಹೆಚ್ಚು ಅಂಕಗಳಿಸಲು ಪರಸ್ಪರ ಸೆಣಸಾಡುತ್ತವೆ. ಬ್ಯಾಸ್ಕೆಟ್ಬಾಲ್ ಒಂದು ಸುಪ್ರಸಿದ್ಧ ಹಾಗೂ ಪ್ರಪಂಚದಾದ್ಯಂತ ವ್ಯಾಪಕವಾಗಿ ವೀಕ್ಷಿಸುವ ಆಟ.[1]
ಚೆಂಡನ್ನು ಮೇಲಿಂದ ಬ್ಯಾಸ್ಕೆಟ್ನೊಳಗೆ ಎಸೆಯುವುದು, ಗೋಲು ಉಂಗುರಕ್ಕೆ ಚೆಂಡನ್ನು ಹಾಕುವುದು ಮತ್ತು ಹೊಡೆಯುವುದು, ಅಥವಾ ಯಾವುದೇ ದೂರದಿಂದ ಚೆಂಡನ್ನು ಬ್ಯಾಸ್ಕೆಟ್ನೊಳಗೆ ಹಾಕುವುದು ಇತ್ಯಾದಿ ಇತರಾವುದೇ ಚಮತ್ಕಾರಗಳ ಮೂಲಕ ಅಂಕಗಳನ್ನು ಗಳಿಸಬಹುದು. ಆಟದ ಕೊನೆಯಲ್ಲಿ ಹೆಚ್ಚು ಅಂಕಗಳಿಸುವ ತಂಡ ಜಯಶೀಲವಾಗುತ್ತದೆ, ಆದರೆ ಉಭಯ ತಂಡಗಳು ಸಮಾನ ಅಂಕಗಳನ್ನು ಪಡೆದಾಗ ಹೆಚ್ಚುವರಿ ಸಮಯವನ್ನು (ಅಧಿಕಾವಧಿ) ನೀಡಲಾಗುತ್ತದೆ. ತಂಡದ ಆಟಗಾರರು ತಮ್ಮೊಳಗೆ ಚೆಂಡನ್ನು ಪುಟಿಸುತ್ತಾ ಅಥವಾ ಒಬ್ಬರಿಗೊಬ್ಬರು ಕಳಿಸುತ್ತಾ(ಸ್ವಲ್ಪ ಸ್ವಲ್ಪವೇ ಮುಂದಕ್ಕೆ ತೆಗೆದುಕೊಂಡು ಹೋಗು ) ಮುಂದೆ ತೆಗೆದುಕೊಂಡು ಹೋಗುತ್ತಾರೆ. ಆಟದ ವೇಳೆ ಅಡ್ಡಿಪಡಿಸುವ ರೀತಿಯ ಶಾರೀರಿಕವಾಗಿ ತಾಗುವುದು (ಫೌಲ್ ) ದಂಡನೀಯವಾದುದು ಮತ್ತು ಚೆಂಡನ್ನು ಎಸೆಯುವಾಗ ಆಟಗಾರ ಫೌಲ್ ಆದರೆ ಫ್ರೀ-ಥ್ರೋ (ಫ್ರೀ-ಥ್ರೋ=ಚೆಂಡನ್ನು ಅವಿರೋಧವಾಗಿ ಗೋಲಿನತ್ತ ಎಸೆಯುವ ಅವಕಾಶ)ಗಳನ್ನು ನೀಡಲಾಗುತ್ತದೆ, ಅಲ್ಲದೆ ಚೆಂಡನ್ನು ಯಾವ ರೀತಿಯಲ್ಲಿ ಹಿಡಿಯಬೇಕು ಎಂಬುದಕ್ಕೆ ನಿರ್ಬಂಧಗಳಿವೆ (ಉಲ್ಲಂಘನೆಗಳು ).
ಚೆಂಡು ಎಸೆಯುವಿಕೆ, ಚೆಂಡನ್ನು ಒಬ್ಬರಿಂದೊಬ್ಬರಿಗೆ ಮತ್ತು ಮುಂದಕ್ಕೆ ಸಾಗಿಸುವ ಕ್ರಮ, ಆಟಗಾರರ ಸ್ಥಾನಗಳು, ಆಕ್ರಮಣಕಾರಿ ಹಾಗೂ ರಕ್ಷಣಾ ವ್ಯೂಹಗಳು ಹಲವು ಸಾಮಾನ್ಯ ತಂತ್ರಗಳನ್ನು ಒಳಗೊಂಡು ಬ್ಯಾಸ್ಕೆಟ್ಬಾಲ್ ಕಾಲಕ್ರಮೇಣದಲ್ಲಿ ಅಭಿವೃದ್ಧಿಗೊಂಡಿದೆ. ತಂಡದಲ್ಲಿನ ಎತ್ತರದ ಆಟಗಾರರು ಮಧ್ಯ (ಸೆಂಟರ್) ದಲ್ಲಿ ಅಥವಾ ಎರಡು ಮುಂಚೂಣಿ (ಫಾರ್ವರ್ಡ್) ಯ ಸ್ಥಾನಗಳ ಪೈಕಿ ಒಂದರಲ್ಲಿ ಆಡುತ್ತಾರೆ. ಕುಳ್ಳ ಆಟಗಾರರು ಅಥವಾ ಚೆಂಡು ನಿರ್ವಹಣೆ ಕೌಶಲ್ಯ ಮತ್ತು ವೇಗವನ್ನು ಹೊಂದಿರುವ ಆಟಗಾರರು ರಕ್ಷಕ (ಗಾರ್ಡ್) ಸ್ಥಾನಗಳಲ್ಲಿ ಆಡುತ್ತಾರೆ. ಸ್ಪರ್ಧಾತ್ಮಕ ಬ್ಯಾಸ್ಕೆಟ್ಬಾಲ್ ಆಟವನ್ನು ಜಾಗರೂಕತೆಯಿಂದ ನಿಯಂತ್ರಿಸಲಾಗುತ್ತದೆ, ಆದರೆ ಸಾಮಾನ್ಯ ಆಟಗಳಿಗೋಸ್ಕರ ಬ್ಯಾಸ್ಕೆಟ್ಬಾಲ್ನಲ್ಲಿ ಹಲವು ಮಾರ್ಪಾಡುಗಳಾಗಿವೆ. ಕೆಲವು ದೇಶಗಳಲ್ಲಿ ಬ್ಯಾಸ್ಕೆಟ್ಬಾಲ್ ಜನಪ್ರಿಯ ಪ್ರದರ್ಶನ ಆಟವೂ ಹೌದು.
ಸ್ಪರ್ಧಾತ್ಮಕ ಬ್ಯಾಸ್ಕೆಟ್ಬಾಲ್ ಪ್ರಧಾನವಾಗಿ ಬ್ಯಾಸ್ಕೆಟ್ಬಾಲ್ ಅಂಕಣದಲ್ಲಿ ಆಡುವ ಒಂದು ಒಳಾಂಗಣ ಆಟ. ವಿಶೇಷ ನಿಯಮಗಳೇನೂ ಇಲ್ಲದ ಹೊರಾಂಗಣದ ಬ್ಯಾಸ್ಕೆಟ್ಬಾಲ್ ನಗರದ ಒಳಭಾಗಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ.