ದುಬೈ
From Wikipedia, the free encyclopedia
ದುಬೈ (ಅರೇಬಿಕ್: دبيّ,Dubayyಗಳಲ್ಲಿ) ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನ ಏಳು ಎಮಿರೇಟ್ಗಳಲ್ಲಿ ಒಂದಾಗಿದ್ದು, ಅವುಗಳಲ್ಲೇ ಅತ್ಯಂತ ಜನನಿಬಿಡ ರಾಜ್ಯವಾಗಿದೆ. ಇದು ಅರೇಬಿಯನ್ ದ್ವೀಪಕಲ್ಪದಲ್ಲಿರುವ ಪರ್ಷಿಯನ್ ಕೊಲ್ಲಿಯ ದಕ್ಷಿಣ ಕರಾವಳಿಯುದ್ದಕ್ಕೂ ಹರಡಿದೆ. ಎಮಿರೇಟ್ನಿಂದ ದುಬೈ ಮುನಿಸಿಪಾಲಿಟಿ/ಪೌರಸಂಸ್ಥೆಯನ್ನು ಪ್ರತ್ಯೇಕಿಸಲು ಕೆಲವು ಬಾರಿ ದುಬೈ ರಾಜ್ಯ ಎಂದೂ ಕರೆಯಲಾಗುತ್ತದೆ.
Dubai
إمارة دبيّ | |
---|---|
Emirate | |
Emirate of Dubai | |
![]() | |
Country | United Arab Emirates |
Emirate | Dubai |
Incorporated (town) | 9 June 1833 |
Founded by | Maktoum bin Bati bin Suhail (1833) |
Seat | Dubai |
Subdivisions | Towns and villages
|
Government | |
• Type | Constitutional monarchy[1] |
• Emir | Mohammed bin Rashid Al Maktoum |
• Crown Prince | Hamdan bin Mohammed bin Rashid Al Maktoum |
Area | |
• Emirate | ೪,೧೧೪ km೨ (೧,೫೮೮ sq mi) |
• Metro | ೧,೨೮೭.೪ km೨ (೪೯೭.೧ sq mi) |
Population (2008)[3] | |
• Emirate | ೨೨,೬೨,೦೦೦ |
• Density | ೪೦೮.೧೮/km೨ (೯೭/sq mi) |
• Metro | ೨೨,೬೨,೦೦೦ |
• Nationality (2005)[4] | ೨೬.೧% Arab (of whom ೧೭% are Emirati) ೪೨.೩% ಭಾರತn ೧೩.೩% Pakistani ೭.೫% Bangladeshi ೨.೫% Filipino ೧.೫% Sri Lankan ೦.೯% European ೦.೩% American ೫.೭% other countries |
Time zone | UTC+4 (UAE standard time) |
Website | Dubai Emirate Dubai Municipality |
UAE ರಚನೆಯ ೧೫೦ ವರ್ಷಗಳ ಮುಂಚೆಯೇ ನಗರವು ಅಸ್ತಿತ್ವದಲ್ಲಿತ್ತು ಎಂದು ಲಿಖಿತ ದಾಖಲೆಗಳು ಉಲ್ಲೇಖಿಸುತ್ತವೆ. ಕಾನೂನು, ರಾಜಕೀಯ, ಸೈನ್ಯ ಹಾಗೂ ಆರ್ಥಿಕ ಚಟುವಟಿಕೆಗಳು ಇತರೆ ಎಮಿರೇಟ್ಗಳೊಡನೆ ಒಕ್ಕೂಟ ಸಂರಚನೆಯಂತೆಯೇ ನಡೆದರೂ, ಪ್ರತಿ ಎಮಿರೇಟ್ ತನ್ನದೇ ಆದ ಪ್ರತ್ಯೇಕ ವ್ಯಾಪ್ತಿಯನ್ನು ಹೊಂದಿದೆ. ಅಂದರೆ ಸ್ಥಳೀಯ ನಾಗರಿಕ ಸೌಲಭ್ಯಗಳು ಹಾಗೂ ಮತ್ತದರ ಉಸ್ತುವಾರಿಗಳು ಹಾಗೂ ನಾಗರಿಕ ಕಾನೂನುಗಳ ಜಾರಿ ಕ್ರಿಯೆ ಆಯಾ ಪ್ರದೇಶಗಳಿಗೆ ಅನುಗುಣವಾಗಿರುತ್ತವೆ. ದುಬೈ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವುದಲ್ಲದೇ, ವಿಸ್ತೀರ್ಣದಲ್ಲಿ ಎರಡನೆಯ ಅತಿ ದೊಡ್ಡ ಪ್ರದೇಶವಾಗಿದ್ದು ಅಬುಧಾಬಿ [5] ಯ ನಂತರದ ಸ್ಥಾನ ಹೊಂದಿದೆ. ಅಬುದಾಭಿ-ದುಬೈಗಳಿಗೆ ಮಾತ್ರ ರಾಷ್ಟ್ರದ ಶಾಸನಸಭೆಯಲ್ಲಿ ರಾಷ್ಟ್ರೀಯ ಮಹತ್ವದ ವಿಚಾರಗಳಲ್ಲಿ ವಿಟೊ/ನಿರಾಕರಣಾ ಅಧಿಕಾರವಿದೆ.[6] ದುಬೈ ನಗರವು ಅಲ್ ಮಕ್ತೂಮ್ ಸಾಮ್ರಾಜ್ಯದ ಆಳ್ವಿಕೆಯನ್ನು ೧೮೩೩ರ ಕಾಲದಿಂದಲೇ ಹೊಂದಿದೆ. ದುಬೈನ ಸದ್ಯದ ದೊರೆ ಮೊಹಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು UAEಯ ಪ್ರಧಾನಿ ಮತ್ತು ಉಪಾಧ್ಯಕ್ಷರೂ ಹೌದು.
ಎಮಿರೇಟ್ನ ಪ್ರಮುಖ ಆದಾಯದ ಮೂಲಗಳೆಂದರೆ ಪ್ರವಾಸೋದ್ಯಮ, ಸ್ಥಿರಾಸ್ತಿ ಮಾರಾಟ ಉದ್ಯಮ ಮತ್ತು ಹಣಕಾಸು ಸೇವೆಗಳು.[7] ದುಬೈನ ಆರ್ಥಿಕತೆಯು ಬಹುಮುಖ್ಯವಾಗಿ ತೈಲೋದ್ಯಮವನ್ನು ಅವಲಂಬಿಸಿದ್ದರೂ,[8] ಪ್ರಸ್ತುತ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಪೂರೈಕೆಯ ಆದಾಯವು ಒಟ್ಟು ಆರ್ಥಿಕತೆಯಾದ US$ ೩೭(೨೦೦೫) ಶತಕೋಟಿಗಳ ಮೊತ್ತದ ೬%{2006){2/}ಕ್ಕಿಂತ ಕಡಿಮೆ ಇದೆ.[9] ಬದಲಿಗೆ ಸ್ಥಿರಾಸ್ತಿ ಮಾರಾಟ ಹಾಗೂ ನಿರ್ಮಾಣ ಕ್ಷೇತ್ರಗಳು, ಈಗಿನ ಬೃಹತ್ ಪ್ರಮಾಣದ ನಿರ್ಮಾಣ ಬೆಳವಣಿಗೆಯ ಮುನ್ನವೇ ೨೦೦೫ರಲ್ಲಿ ಆರ್ಥಿಕತೆಗೆ ೨೨.೬%ರಷ್ಟು ಕೊಡುಗೆ ನೀಡಿದ್ದವು.[10] ದುಬೈ ತನ್ನ ಸ್ಥಿರಾಸ್ತಿ ನಿರ್ಮಾಣ ಯೋಜನೆಗಳು [11] ಮತ್ತು ಕ್ರೀಡಾಕೂಟಗಳ ಆಯೋಜನೆಯಿಂದ ಗಮನ ಸೆಳೆಯಿತು. ಈ ಹೆಚ್ಚಿದ ಗಮನ ಸೆಳೆಯುವಿಕೆಯು ಜಾಗತಿಕ ನಗರ[12] ಹಾಗೂ ವಾಣಿಜ್ಯ ಕೇಂದ್ರವಾಗಿ ಹೊರಹೊಮ್ಮುವಿಕೆಯೊಂದಿಗೆ ಸೇರಿಕೊಂಡು ಇಲ್ಲಿನ ದಕ್ಷಿಣ ಏಷ್ಯಾದ ಕಾರ್ಮಿಕಶಕ್ತಿಗೆ ಸಂಬಂಧಿಸಿದಂತೆ ಕಾರ್ಮಿಕ ಮತ್ತು ಮಾನವ ಹಕ್ಕುಗಳ ಪ್ರತಿಪಾದನೆ[13] ಯೆಡೆ ಬೆಳಕು ಚೆಲ್ಲಿದೆ. ೨೦೦೪ರಲ್ಲಿ ಸ್ಥಾಪಿತವಾದ ದುಬೈ ಇಂಟರ್ನ್ಯಾಷನಲ್ ಫೈನಾನ್ಸ್ ಸೆಂಟರ್ ಸಂಸ್ಥೆಯು ಬ್ಯಾಂಕುಗಳು ಹಾಗೂ ಹಣಕಾಸು ವ್ಯವಸ್ಥೆಗಳ ಅಂತರರಾಷ್ಟ್ರೀಯ ಕೇಂದ್ರವಾಗಿ ನ್ಯೂಯಾರ್ಕ್, ಲಂಡನ್ ಮತ್ತು ಹಾಂಗ್ಕಾಂಗ್ಗಳಿಗೆ ಪ್ರತಿಸ್ಪರ್ಧಿಯಾಗುವ ಉದ್ದೇಶದಿಂದ ಆರಂಭಿಸಿದ ಹೆಗ್ಗುರುತಿನ ಯೋಜನೆಯಾಗಿತ್ತು.[14]