ಕ್ಷೀರೋತ್ಪನ್ನ
From Wikipedia, the free encyclopedia
ಕ್ಷೀರೋತ್ಪನ್ನಗಳು (ಹೈನೋತ್ಪನ್ನಗಳು, ಹೈನು) ಎಂದರೆ ಮುಖ್ಯವಾಗಿ ದನಗಳು, ಎಮ್ಮೆಗಳು, ಮೇಕೆಗಳು, ಕುರಿಗಳು, ಒಂಟೆಗಳು, ಮತ್ತು ಮಾನವರಂತಹ ಸಸ್ತನಿಗಳ ಹಾಲಿನಿಂದ ಉತ್ಪಾದಿಸಲಾದ ಅಥವಾ ಅದನ್ನು ಹೊಂದಿರುವ ಒಂದು ಬಗೆಯ ಆಹಾರ. ಕ್ಷೀರೋತ್ಪನ್ನಗಳಲ್ಲಿ ಮೊಸರು, ಗಿಣ್ಣು, ಮತ್ತು ಬೆಣ್ಣೆಯಂತಹ ಆಹಾರ ಪದಾರ್ಥಗಳು ಸೇರಿವೆ.[1] ಕ್ಷೀರೋತ್ಪನ್ನಗಳನ್ನು ಉತ್ಪಾದಿಸುವ ಸ್ಥಳವನ್ನು ಡೈರಿ ಅಥವಾ ಡೈರಿ ಕಾರ್ಖಾನೆ ಎಂದು ಕರೆಯಲಾಗುತ್ತದೆ. ಕ್ಷೀರೋತ್ಪನ್ನಗಳನ್ನು ವಿಶ್ವದಾದ್ಯಂತ ಸೇವಿಸಲಾಗುತ್ತದೆ.