ಲಂಗ್ ಫಿಶ್
From Wikipedia, the free encyclopedia
ಲಂಗ್ ಫಿಶ್ ಎಂದರೆ ಡಿಪ್ನಾಯ್ ಕುಟುಂಬಕ್ಕೆ ಸೇರಿರುವ ಮೀನುಗಳ ಸಾಮಾನ್ಯ ನಾಮ.[1] ಫುಪ್ಫಸ ಮೀನು ಎಂದೂ ಕರೆಯಲ್ಪಡುತ್ತದೆ. ಕಿವಿರುಗಳ ಜೊತೆಗೆ ಶ್ವಾಸಕೋಶಗಳೂ ಇರುವುದು ಈ ಮೀನುಗಳ ವೈಶಿಷ್ಟ್ಯ. ಕೆಲವು ಲಕ್ಷಣಗಳಲ್ಲಿ ಇವು ಉಭಯ ಜೀವಿಗಳನ್ನು ಹೋಲುತ್ತವೆ. ಹಲವಾರು ಕಾರಣಗಳಿಂದ ಇವು ಇತರ ಮೀನುಗಳಿಗಿಂತ ಭಿನ್ನ. ಶ್ವಾಸಕೋಶಗಳು, ಮರಿಗಳಲ್ಲಿರುವ ಹೊರಕಿವಿರುಗಳು, ಶ್ವಾಸಾಪಧಮನಿ ಹಾಗೂ ಅಭಿಧಮನಿಗಳು, ಬಹುಕಣ ಚರ್ಮಗ್ರಂಥಿಗಳು, ಗರ್ಭಕಟ್ಟಿದ ಅಂಡದ ರೂಪ ಹಾಗೂ ಅದರ ಬೆಳೆವಣಿಗೆ, ಇವೆಲ್ಲವೂ ಉಭಯ ಜೀವಿಗಳಲ್ಲಿ ಕಾಣುವ ಲಕ್ಷಣಗಳು. ಹಾಗೆಯೇ ಬೇರೆ ಮೀನುಗಳಲ್ಲಿರುವ ಈಜುರೆಕ್ಕೆಗಳು, ಹುರುಪೆಗಳು, ಕಿವಿರುಗಳು, ಪಾರ್ಶ್ವ ಸಂವೇದನಾ ರೇಖೆಗಳು ಇವುಗಳಲ್ಲೂ ಇವೆ.
ಲಂಗ್ ಫಿಶ್ Temporal range: Early Devonian–Recent PreꞒ
Ꞓ
O
S
D
C
P
T
J
K
Pg
N
| |
---|---|
Queensland lungfish | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ಏಕಮೂಲ ವರ್ಗ: | ಸಾರ್ಕೊಟೆರಿಜೀ |
ಏಕಮೂಲ ವರ್ಗ: | ರೈಪಿಡಿಸ್ಟಿಯಾ |
ಏಕಮೂಲ ವರ್ಗ: | ಡಿಪ್ನೋಮೊರ್ಫಾ Ahlberg, 1991 |
ವರ್ಗ: | ಡಿಪ್ನಾಯ್ J. P. Müller, 1844 |
Living families | |
Fossil taxa, see text |
ಈ ಮೀನುಗಳು ಡಿವೋನಿಯನ್ನ ಕೊನೆಯ ಭಾಗದಲ್ಲಿ ಕಾಣಿಸಿಕೊಂಡುವು. ಪರ್ಮಿಯನ್ ಹಾಗೂ ಟ್ರಯಾಸ್ಸಿಕ್ನಲ್ಲಿ (ಸು.19,00,00,000 –22,50,00,000 ವರ್ಷಗಳ ಹಿಂದೆ) ಅಸಂಖ್ಯವಾಗಿದ್ದುವು. ಕ್ರಮೇಣ ಇವುಗಳ ಸಂಖ್ಯೆ ಇಳಿಯಿತು. ಈಗ ಭೂಮಿಯಲ್ಲಿ ಇವುಗಳ ಆರು ಪ್ರಭೇದಗಳು ಮಾತ್ರ ಇವೆ. ಇವು ಸಾಮಾನ್ಯವಾಗಿ ನದೀ ವಾಸಿಗಳು.[2]