From Wikipedia, the free encyclopedia
ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇಲ್ಲಿಂದ ಚಿತ್ರದುರ್ಗಕ್ಕೆ 32 ಮೈಲಿ, ದಾವಣಗೆರೆಗೆ 60 ಕಿ. ಮೀ.ದೂರದಲ್ಲಿದೆ.
ಹೊಳಲ್ಕೆರೆ
ಹೊಳಲ್ಕೆರೆ | |
---|---|
city | |
Population (2001) | |
• Total | ೧೪,೫೭೪ |
ಹೊಳಲ್ಕೆರೆ,ಯ,[1] ಭಾರಿ ಗಣಪತಿಯ ದೇವಾಲಯವನ್ನು ಚಿತ್ರದುರ್ಗದ ಪಾಳೆಯಗಾರ ಗುತ್ಯೆಪ್ಪನಾಯಕನು[2] ೧೭೭೫ ರಲ್ಲಿ, ಕಟ್ಟಿಸಿದನೆಂದು ಶಾಸನಗಳು ತಿಳಿಸುತ್ತವೆ.[3] ಕುಳಿತಿರುವ ಭಂಗಿಯಲ್ಲಿರುವ ಗಣಪತಿ,೨೦ ಅಡಿ [೬ಮಿ] ಎತ್ತರವಿದೆ. ಹಿಂದೆ ಬಯಲು ಪ್ರದೇಶದಲ್ಲಿ ಸ್ಥಾಪಿಸಲ್ಪಟ್ಟ ಈ ಗಣಪತಿಯನ್ನು, ,ಸುಮಾರು ೪೫ ವರ್ಷಗಳ ಹಿಂದೆ, ಸಿಡಿಲುಹೊಡೆದುಗಣಪತಿಯ ಹಿಂದಿದ್ದ ಬೃಹದಾಕಾರದ ಬೇವಿನಮರ ನಾಶಗೊಂಡನಂತರ , ಹೊಸದಾಗಿ ನಿರ್ಮಿಸಿದ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಲಾಯಿತು. ಈ ಗಣಪತಿಗೆ ತೂಗುತಲೆ ಗಣಪ ಎಂದೂ ಕರೆಯಲಾಗುತ್ತಿತ್ತು. ಭಕ್ತರ ಆಣತಿಗೆ ಓಗೊಟ್ಟು, ತಲೆತೂಗುತ್ತಿದ್ದ ಎಂಬ ನಂಬಿಕೆಯಿಂದ ಈ ಹೆಸರು ಬಂದಿದೆ.ಗಣಪತಿಯ ತಲೆಯ ಹಿಂಭಾಗದಲ್ಲಿ ಉದ್ದವಾದ ಜಡೆಯಿದ್ದು, ಅದಕ್ಕೆ ಭಕ್ತರು ಬೆಣ್ಣೆ ಹಚ್ಚುತ್ತಾರೆ. ಆ ಬೆಣ್ಣೆಯನ್ನು ಪ್ರಸಾದವಾಗಿ ತಲೆಗೆ ಸವರಿಕೊಂಡರೆ, ಕೂದಲು ಚೆನ್ನಾಗಿ ಬೆಳೆಯುವುದೆಂಬ ನಂಬಿಕೆಯಿದೆ.
ಇಲ್ಲಿಯ ಮುಖ್ಯ ಬೆಳೆ ರಾಗಿ. ಮಳೆ ಇಲ್ಲಿ ಬಹಳ ಕಡಿಮೆ. ೧೨ ವರ್ಷಕ್ಕೊಮ್ಮೆ ಮಳೆ ಆದದ್ದುಂಟು. ಆದಕಾರಣ ನೀರಿನ ಅಭಾವ ಹೆಚ್ಚು. ಮುಖ್ಯ ನೀರಿನ ಮೂಲವಾಗಿ ೩ ಕೆರೆಗಳಿವೆ.
ಹಿರಿಕೆರೆ ಹೆಸರಿಗೆ ತಕ್ಕಹಾಗೆ, ದೊಡ್ಡಕೆರೆ. ಸುಮಾರು ಒಂದೂವರೆ ಮೈಲಿಗಿಂತ ಹೆಚ್ಚು ವಿಸ್ತೀರ್ಣವಿದೆ. ಒಮ್ಮೆ ತುಂಬಿದರೆ, ಸುಮಾರು ವರ್ಷವೆಲ್ಲಾ ತೊಂದರೆ ಇಲ್ಲ. ಹೊನ್ನೆಕೆರೆ,ಚಿಕ್ಕದು.ಮರಳಿನಿಂದ ಆವ್ರುತವಾದ್ದ್ದರಿಂದ ನೀರು ಇಂಗಿಹೋಗುತ್ತದೆ. ಕೆಸರು ಕಟ್ಟೆ, ಹೆಸರಿಗೆ ತಕ್ಕಂತೆ ಚಿಕ್ಕ ಕೆಸರು ತುಂಬಿದ ಕೆರೆ. ಆಳವಿಲ್ಲ. ಯಾವಕೆರೆಯ ನೀರೂ ಕುಡಿಯಲು ಯೋಗ್ಯವಿಲ್ಲ. ಕೇವಲ ಕುಡಿಯುವ ನೀರಿನ ಅಭಾವಕ್ಕಾಗಿಯೇ ಊರನ್ನು ಬಿಟ್ಟು, ವಲಸೆ ಹೋದವರು ಹಲವು ಮಂದಿ.
ಹೊಳಲ್ಕೆರೆಯಲ್ಲಿ ಯಾವ ದೊಡ್ಡ ಉದ್ಯಮಗಳಿಲ್ಲ. ರೈಲ್ವೆ ಸ್ಟೇಷನ್ ೫ ಕಿ.ಮಿ.ದೂರದಲ್ಲಿದೆ. ಪ್ರತಿ ಭಾನುವಾರ ಸಂತೆ ನಡೆಯುತ್ತದೆ.[6]
ಆಡನೂರು, ಹೊದಿಗ್ಗೆರೆ, ಚಿಕ್ಜಾಜೂರು, ಹೊಸದುರ್ಗ, ಹತ್ತಿರದ ಪಟ್ಟಣಗಳು. ಹನುಮನಕಟ್ಟೆ, ಮೇಗಳ ಕೊಟ್ಟಿಗೆ, ಕೆಳಗಿನ ಕೊಟ್ಟಿಗೆ, ಕಬ್ಬಲು, ನುಲೇನೂರು, ನಾಗರಕಟ್ಟೆ, ತೂಬಿನಗೆರೆ, ಬೀಸನಹಳ್ಳಿ, ವಡ್ರಹಟ್ಟಿ, ಆರ್. ನುಲೆನೂರು, ಬಸಾಪುರ, ರಂಗಾಪುರ, ತಾಳಕಟ್ಟ ,ತಾಲ್ಲೂಕಿನ ಹಳ್ಳಿಗಳು .
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.