ಸರಳಾ ದೇವಿ ಚೌಧುರಾಣಿ ಅವರು ೯ ಸೆಪ್ಟೆಂಬರ್ ೧೮೭೨ ರಂದು ಸರಳಾ ಘೋಸಲ್ ಎನ್ನುವಲ್ಲಿ ಜನಿಸಿದರು. [1] ಅವರು ಭಾರತೀಯ ಶಿಕ್ಷಣತಜ್ಞ ಹಾಗೂ ರಾಜಕೀಯ ಕಾರ್ಯಕರ್ತೆ ಆಗಿದ್ದರು. ಅವರು ೧೯೧೦ ರಲ್ಲಿ ಅಲಹಾಬಾದ್‌ನಲ್ಲಿ ಭಾರತ ಸ್ತ್ರೀ ಮಹಾಮಂಡಲವನ್ನು ಸ್ಥಾಪಿಸಿದ್ದರು. ಇದು ಭಾರತದ ಮೊದಲ ಮಹಿಳಾ ಸಂಘಟನೆಯಾಗಿದೆ. ಮಹಿಳಾ ಶಿಕ್ಷಣವನ್ನು ಉತ್ತೇಜಿಸುವುದು ಸಂಸ್ಥೆಯ ಪ್ರಾಥಮಿಕ ಗುರಿಗಳಲ್ಲಿ ಒಂದಾಗಿದೆ. ಭಾರತದಾದ್ಯಂತ ಮಹಿಳೆಯರ ಪರಿಸ್ಥಿತಿಯನ್ನು ಸುಧಾರಿಸಲು ಸಂಸ್ಥೆಯು ಲಾಹೋರ್ (ಆಗ ಅವಿಭಜಿತ ಭಾರತದ ಭಾಗ), ಅಲಹಾಬಾದ್, ದೆಹಲಿ, ಕರಾಚಿ, ಅಮೃತಸರ, ಹೈದರಾಬಾದ್, ಕಾನ್ಪುರ, ಬಂಕುರಾ, ಹಜಾರಿಬಾಗ್, ಮಿಡ್ನಾಪುರ ಮತ್ತು ಕೋಲ್ಕತ್ತಾದಲ್ಲಿ ಹಲವಾರು ಕಚೇರಿಗಳನ್ನು ತೆರೆಯಿತು.

ಜೀವನಚರಿತ್ರೆ

ಆರಂಭಿಕ ಜೀವನ

ಸರಳಾ ಅವರು ೯ ಸೆಪ್ಟೆಂಬರ್ ೧೮೭೨ ರಂದು ಕೋಲ್ಕತ್ತಾದ ಜೋರಾಸಾಂಕೊದಲ್ಲಿ ಪ್ರಸಿದ್ಧ ಬಂಗಾಳಿ ಕುಟುಂಬದಲ್ಲಿ ಜನಿಸಿದ್ದರು. ಆಕೆಯ ತಂದೆ ಜಾನಕಿನಾಥ್ ಘೋಸಲ್ ಬಂಗಾಳ ಕಾಂಗ್ರೆಸ್‌ನ ಮೊದಲ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದರು. ಅವರ ತಾಯಿ ಸ್ವರ್ಣಕುಮಾರಿ ದೇವಿ, ಪ್ರಸಿದ್ಧ ಲೇಖಕಿ, ಪ್ರಖ್ಯಾತ ಬ್ರಹ್ಮ ನಾಯಕ ಮತ್ತು ಕವಿ ರವೀಂದ್ರನಾಥ ಟ್ಯಾಗೋರ್ ಅವರ ತಂದೆ ದೇಬೇಂದ್ರನಾಥ ಟ್ಯಾಗೋರ್ ಅವರ ಮಗಳು. ಆಕೆಯ ಅಕ್ಕ, ಹಿರೋನ್ಮೋಯಿ, ಲೇಖಕಿ ಮತ್ತು ವಿಧವೆಯರ ಮನೆಯ ಸಂಸ್ಥಾಪಕಿಯಾಗಿದ್ದರು. ಸರಳಾ ದೇವಿಯ ಕುಟುಂಬವು ರಾಮ್ ಮೋಹನ್ ರಾಯ್ ಅವರು ನೋಡಿಕೊಳುತಿದ್ದರು. ಮತ್ತು ಸರಳಾ ಅವರ ಅಜ್ಜ ದೇಬೇಂದ್ರನಾಥ ಟ್ಯಾಗೋರ್ ಅವರಿಂದ ಅಭಿವೃದ್ಧಿಪಡಿಸಲ್ಪಟ್ಟ ಬ್ರಹ್ಮವಾದದ ಅನುಯಾಯಿಯಾಗಿತ್ತು.

Thumb
ಸರಳಾ ಮತ್ತು ಆಕೆಯ ಸಹೋದರಿ ಹಿರೋನ್ಮೋಯಿ

೧೮೯೦ ರಲ್ಲಿ, ಅವರು ಬೆಥೂನ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಬಿಎ ಗಳಿಸಿದರು. ತಮ್ಮ ಬಿಎ ಪರೀಕ್ಷೆಗಳಲ್ಲಿ ಉನ್ನತ ಮಹಿಳಾ ಅಭ್ಯರ್ಥಿಯಾಗಿದ್ದಕ್ಕಾಗಿ ಕಾಲೇಜಿನ ಮೊದಲ ಪದ್ಮಾವತಿ ಚಿನ್ನದ ಪದಕವನ್ನು [2] ಪಡೆದ್ದಿದ್ದರು. ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಕೆಲವೇ ಕೆಲವು ಮಹಿಳೆಯರಲ್ಲಿ ಅವರು ಒಬ್ಬರು. ವಿಭಜನೆಯ ವಿರೋಧಿ ಆಂದೋಲನದ ಸಮಯದಲ್ಲಿ ಅವರು ಪಂಜಾಬ್‌ನಲ್ಲಿ ರಾಷ್ಟ್ರೀಯತೆಯ ಸುವಾರ್ತೆಯನ್ನು ಹರಡಿದರು ಮತ್ತು ರಹಸ್ಯ ಕ್ರಾಂತಿಕಾರಿ ಸಮಾಜವನ್ನು ನಿರ್ವಹಿಸಿದರು.[ಸಾಕ್ಷ್ಯಾಧಾರ ಬೇಕಾಗಿದೆ]

ವೃತ್ತಿ

ವಿದ್ಯಾಭ್ಯಾಸ ಮುಗಿದ ಮೇಲೆ ಸರಳಾ ಮೈಸೂರು ರಾಜ್ಯಕ್ಕೆ ಹೋಗಿ ಮಹಾರಾಣಿ ಬಾಲಕಿಯರ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿದರು. ಒಂದು ವರ್ಷದ ನಂತರ, ಅವರು ಮನೆಗೆ ವಾಪಸ್ಸು ಮರಳಿದರು ಮತ್ತು ಬಂಗಾಳಿ ಜರ್ನಲ್ ಭಾರತಿಗೆ ಬರೆಯಲು ಪ್ರಾರಂಭಿಸಿದರು, ಅದೇ ಸಮಯದಲ್ಲಿ ತಮ್ಮ ರಾಜಕೀಯ ಚಟುವಟಿಕೆಗಳನ್ನು ಪ್ರಾರಂಭಿಸಿದರು. [3]

೧೮೯೫ ರಿಂದ ೧೮೯೯ ರವರೆಗೆ, ಅವರು ತಮ್ಮ ತಾಯಿ ಮತ್ತು ಸಹೋದರಿಯೊಂದಿಗೆ ಜಂಟಿಯಾಗಿ ಭಾರತಿಯನ್ನು ಸಂಪಾದಿಸಿದರು, ನಂತರ ೧೮೯೯ ರಿಂದ ೧೯೦೭ ರವರೆಗೆ ಸ್ವಂತವಾಗಿ, ದೇಶಭಕ್ತಿಯನ್ನು ಪ್ರಚಾರ ಮಾಡುವ ಮತ್ತು ಪತ್ರಿಕೆಯ ಸಾಹಿತ್ಯಿಕ ಗುಣಮಟ್ಟವನ್ನು ಹೆಚ್ಚಿಸುವ ಗುರಿಯೊಂದಿಗೆ. 1904 ರಲ್ಲಿ, ಅವರು ಮಹಿಳೆಯರು ಉತ್ಪಾದಿಸುವ ಸ್ಥಳೀಯ ಕರಕುಶಲ ವಸ್ತುಗಳನ್ನು ಜನಪ್ರಿಯಗೊಳಿಸಲು ಕೋಲ್ಕತ್ತಾದಲ್ಲಿ ಲಕ್ಷ್ಮಿ ಭಂಡಾರ್ (ಮಹಿಳೆಯರ ಅಂಗಡಿ) ಅನ್ನು ಪ್ರಾರಂಭಿಸಿದರು. ೧೯೧೦ ರಲ್ಲಿ, ಅವರು ಭಾರತ ಸ್ತ್ರೀ ಮಹಾಮಂಡಲವನ್ನು (ಅಖಿಲ ಭಾರತ ಮಹಿಳಾ ಸಂಸ್ಥೆ) ಸ್ಥಾಪಿಸಿದರು, ಇದನ್ನು ಅನೇಕ ಇತಿಹಾಸಕಾರರು ಮಹಿಳೆಯರಿಗಾಗಿ ಮೊದಲ ಅಖಿಲ ಭಾರತೀಯ ಸಂಸ್ಥೆ ಎಂದು ಪರಿಗಣಿಸಿದ್ದಾರೆ. [4] ದೇಶಾದ್ಯಂತ ಹಲವಾರು ಶಾಖೆಗಳನ್ನು ಹೊಂದಿರುವ ಇದು ವರ್ಗ, ಜಾತಿ ಮತ್ತು ಧರ್ಮವನ್ನು ಪರಿಗಣಿಸದೆ ಮಹಿಳೆಯರಿಗೆ ಶಿಕ್ಷಣ ಮತ್ತು ವೃತ್ತಿಪರ ತರಬೇತಿಯನ್ನು ಉತ್ತೇಜಿಸಿತು.

ವೈಯಕ್ತಿಕ ಜೀವನ

೧೯೦೫ ರಲ್ಲಿ, ಸರಳಾ ದೇವಿಯು ಸ್ವಾಮಿ ದಯಾನಂದ ಸರಸ್ವತಿ ಸ್ಥಾಪಿಸಿದ ಹಿಂದೂ ಸುಧಾರಣಾ ಚಳುವಳಿಯಾದ ಆರ್ಯ ಸಮಾಜದ ವಕೀಲ, ಪತ್ರಕರ್ತ, ರಾಷ್ಟ್ರೀಯವಾದಿ ನಾಯಕ ಮತ್ತು ಅನುಯಾಯಿಯಾಗಿದ್ದ ರಾಮಭುಜ್ ದತ್ ಚೌಧರಿ (೧೮೬೬-೧೯೨೩) ಅವರನ್ನು ವಿವಾಹವಾದರು.

ಮದುವೆಯ ನಂತರ, ಅವರು ಪಂಜಾಬ್‌ಗೆ ಹೋದರು. ಅಲ್ಲಿ ಅವರು ತಮ್ಮ ಪತಿಗೆ ರಾಷ್ಟ್ರೀಯವಾದಿ ಉರ್ದು ಸಾಪ್ತಾಹಿಕ ಹಿಂದೂಸ್ಥಾನವನ್ನು ಸಂಪಾದಿಸಲು ಸಹಾಯ ಮಾಡಿದರು. ಅದನ್ನು ಇಂಗ್ಲಿಷ್ ನಿಯತಕಾಲಿಕವಾಗಿ ಪರಿವರ್ತಿಸಲಾಯಿತು. ಅಸಹಕಾರ ಚಳವಳಿಯಲ್ಲಿ ತೊಡಗಿದ್ದಕ್ಕಾಗಿ ಆಕೆಯ ಪತಿಯನ್ನು ಬಂಧಿಸಿದಾಗ, ಮಹಾತ್ಮ ಗಾಂಧಿಯವರು ಲಾಹೋರ್‌ನಲ್ಲಿರುವ ಅವರ ಮನೆಗೆ ಅತಿಥಿಯಾಗಿ ಭೇಟಿ ನೀಡಿದರು. ಹಾಗೂ ಗಾಂಧಿ ಅವಳಿಗೆ ಗೌರವಿಸಿದರು. ಗಾಂಧಿ-ಸರಲಾದೇಬಿ ಅವರ ನಿಕಟತೆಯ ಕಾರಣದಿಂದಾಗಿ ಲಾಹೋರ್‌ನಲ್ಲಿ ಟಾಕ್ ಆಫ್ ದಿ ಟೌನ್ ಆದರು. ಗಾಂಧಿಯವರು ಆಕೆಯ ಕವನಗಳು ಮತ್ತು ಬರಹಗಳನ್ನು ಲೇಪಿಸಿದರು ಮತ್ತು ಅವುಗಳನ್ನು ತಮ್ಮ ಭಾಷಣಗಳಲ್ಲಿ ಮತ್ತು ಯಂಗ್ ಇಂಡಿಯಾ ಮತ್ತು ಇತರ ನಿಯತಕಾಲಿಕಗಳಲ್ಲಿ ಬಳಸಿದರು. ಅವರು ಅವನೊಂದಿಗೆ ಭಾರತದಾದ್ಯಂತ ಪ್ರಯಾಣಿಸಿದಳು. ಬೇರೆಯಾಗಿದ್ದಾಗ ಅವರು ಆಗಾಗ್ಗೆ ಪತ್ರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ರವೀಂದ್ರ ಭಾರತಿ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊಫೆಸರ್ ಸಬ್ಯಸಾಚಿ ಬಸು ರೇ ಚೌಧರಿ ಅವರ ಪ್ರಕಾರ, ಇಬ್ಬರ ನಡುವಿನ ಸಂಬಂಧವು ನಿಕಟವಾಗಿದ್ದರೂ, ಪರಸ್ಪರ ಅಭಿಮಾನಕ್ಕಿಂತ ಹೆಚ್ಚೇನೂ ಅಲ್ಲ. [5] ಅವರ ಏಕೈಕ ಪುತ್ರ ದೀಪಕ್ ಗಾಂಧಿಯವರ ಮೊಮ್ಮಗಳು ರಾಧಾ ಅವರನ್ನು ವಿವಾಹವಾದರು.

ನಂತರದ ಜೀವನ

೧೯೨೩ ರಲ್ಲಿ ಅವರ ಪತಿಯ ಮರಣದ ನಂತರ, ಸರಳಾ ದೇವಿ ಅವರು ಕೋಲ್ಕತ್ತಾಗೆ ಹಿಂದಿರುಗಿದರು ಮತ್ತು ೧೯೨೪ ರಿಂದ ೧೯೨೬ರ ರವರೆಗೆ ಭಾರತಿಯ ಸಂಪಾದನೆಯ ಜವಾಬ್ದಾರಿಗಳನ್ನು ಪುನರಾರಂಭಿಸಿದರು. ೧೯೩೦ ರಲ್ಲಿ ಕೋಲ್ಕತ್ತಾದಲ್ಲಿ ಶಿಕ್ಷಾ ಸದನ್ ಎಂಬ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದರು. ಅವರು ೧೯೩೫ ರಲ್ಲಿ ಸಾರ್ವಜನಿಕ ಜೀವನದಿಂದ ನಿವೃತ್ತರಾದರು ಮತ್ತು ಧರ್ಮದಲ್ಲಿ ಅವರನ್ನು ತೊಡಗಿಸಿಕೊಂಡರು, ಗೌಡೀಯ ವೈಷ್ಣವರಾದ ಬಿಜೋಯ್ ಕೃಷ್ಣ ಗೋಸ್ವಾಮಿಯನ್ನು ತಮ್ಮ ಆಧ್ಯಾತ್ಮಿಕ ಶಿಕ್ಷಕರಾಗಿ ಸ್ವೀಕರಿಸಿದರು.

೧೮ ಆಗಸ್ಟ್ ೧೯೪೫ ರಂದು ಕೋಲ್ಕತ್ತಾದಲ್ಲಿ ನಿಧನರಾದರು.

ಆಕೆಯ ಆತ್ಮಚರಿತ್ರೆ ಜೀವನೆರ್ ಝರಾ ಪಟವನ್ನು ೧೯೪೨-೧೯೪೩ರಲ್ಲಿ ಆಕೆಯ ಜೀವನದ ನಂತರದ ಅವಧಿಯಲ್ಲಿ ಬಂಗಾಳಿ ಸಾಹಿತ್ಯ ಪತ್ರಿಕೆಯಾದ ದೇಶ್‌ ನಲ್ಲಿ ಧಾರಾವಾಹಿಯಾಗಿ ಪ್ರಕಟಿಸಲಾಯಿತು. ಇದನ್ನು ನಂತರ ಸಿಕತಾ ಬ್ಯಾನರ್ಜಿ ಅವರು ದಿ ಸ್ಕ್ಯಾಟರ್ಡ್ ಲೀವ್ಸ್ ಆಫ್ ಮೈ ಲೈಫ್ (೨೦೧೧) ಎಂದು ಇಂಗ್ಲಿಷ್‌ಗೆ ಅನುವಾದಿಸಿದರು. [6] [7]

ಉಲ್ಲೇಖಗಳು

ಹೆಚ್ಚಿನ ಓದುವಿಕೆ

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.