ರ್ಯುಗ್ಯಾಂಗ್ ಹೋಟೆಲ್
From Wikipedia, the free encyclopedia
ರ್ಯುಗ್ಯಾಂಗ್ ಹೋಟೆಲ್ ( Korean :류경호텔; ಕೆಲವೊಮ್ಮೆ ರ್ಯು-ಗ್ಯಾಂಗ್ ಹೋಟೆಲ್ ಅಥವಾ ಯು-ಕ್ಯುಂಗ್ ಹೋಟೆಲ್ ಎಂದು ಉಚ್ಚರಿಸಲಾಗುತ್ತದೆ.) [4] ಇದು ೧೦೫ ಅಂತಸ್ತುಗಳನ್ನು ಹೊಂದಿದ ಅಪೂರ್ಣವಾದ, ೩೩೦ ಮೀಟರ್ ಎತ್ತರದ ಕಟ್ಟಡವಾಗಿದೆ. ಇದು ಉತ್ತರ ಕೊರಿಯಾದ ಪ್ಯೊಂಗ್ಯಾಂಗ್ನಲ್ಲಿರುವ ಪಿರಮಿಡ್ ಆಕಾರದ ಗಗನಚುಂಬಿ ಕಟ್ಟಡವಾಗಿದೆ. ಇದರ ಹೆಸರು (ವಿಲೋಗಳ ರಾಜಧಾನಿ) ಪಯೋಂಗ್ಯಾಂಗ್ನ ಐತಿಹಾಸಿಕ ಹೆಸರುಗಳಲ್ಲಿ ಒಂದಾಗಿದೆ. [5] ಕಟ್ಟಡವನ್ನು ೧೦೫ ಕಟ್ಟಡ ಎಂದೂ ಕರೆಯುತ್ತಾರೆ. ಇದು ಅದರ ಮಹಡಿಗಳ ಸಂಖ್ಯೆಯನ್ನು ಉಲ್ಲೇಖಿಸುತ್ತದೆ. [3]
ರ್ಯುಗ್ಯಾಂಗ್ ಹೋಟೆಲ್ | |
---|---|
류경호텔 | |
ಸಾಮಾನ್ಯ ಮಾಹಿತಿ | |
ಸ್ಥಿತಿ | ತಡೆಹಿಡಿಯಲಾಗಿದೆ |
ವಾಸ್ತುಶಾಸ್ತ್ರ ಶೈಲಿ | ನವ-ಭವಿಷ್ಯವಾದ |
ಸ್ಥಳ | ರ್ಯುಗ್ಯಾಂಗ್-ಡಾಂಗ್, ಪೊಟೊಂಗಂಗ್-ಗುಯೋಕ್, ಪ್ಯೊಂಗ್ಯಾಂಗ್, ಉತ್ತರ ಕೊರಿಯಾ |
ನಿರ್ದೇಶಾಂಕ | 39°02′12″N 125°43′51″E |
ನಿರ್ಮಾಣ ಪ್ರಾರಂಭವಾದ ದಿನಾಂಕ | ೨೮ ಆಗಸ್ಟ್ ೧೯೮೭[1][2] |
Height | |
ಚಾವಡಿ | 330.02 metres (1,082.7 ft)[3] |
Technical details | |
ಮಹಡಿ ಸಂಖ್ಯೆ | ನೆಲದ ಮೇಲೆ ೧೦೫, ಭೂಗತ ೩[2][3] |
ಮಹಡಿಯ ಜಾಗ | 360,000 m2 (3,900,000 sq ft)[3] |
Design and construction | |
ವಾಸ್ತುಶಿಲ್ಪಿ | ಬೈಕ್ದೂಸನ್ ಆರ್ಕಿಟೆಕ್ಟ್ಸ್ & ಇಂಜಿನಿಯರ್ಸ್[1] |
೧೯೮೭ ರಲ್ಲಿ ಇದರ ನಿರ್ಮಾಣ ಪ್ರಾರಂಭವಾಯಿತು. ಆದರೆ ಸೋವಿಯತ್ ಒಕ್ಕೂಟದ ವಿಸರ್ಜನೆಯ ನಂತರ ಉತ್ತರ ಕೊರಿಯಾ ಆರ್ಥಿಕ ಬಿಕ್ಕಟ್ಟಿನ ಅವಧಿಯನ್ನು ಪ್ರವೇಶಿಸಿದ ಕಾರಣ ೧೯೯೨ ರಲ್ಲಿ ನಿಲ್ಲಿಸಲಾಯಿತು. ೧೯೯೨ ರ ನಂತರ,ಈ ಕಟ್ಟಡವು ಅಗ್ರಸ್ಥಾನದಲ್ಲಿದೆ. ಆದರೆ ಇದು ಯಾವುದೇ ಕಿಟಕಿಗಳು ಅಥವಾ ಆಂತರಿಕ ಫ಼ಿಟ್ಟಿಂಗ್ಸ್ ಗಳನ್ನು ಹೊಂದಿರುವುದಿಲ್ಲ. ೨೦೦೮ ರಲ್ಲಿ ಈ ಕಟ್ಟಡದ ನಿರ್ಮಾಣ ಪುನರಾರಂಭವಾಯಿತು ಮತ್ತು ಹೊರಭಾಗವು ೨೦೧೧ ರಲ್ಲಿ ಪೂರ್ಣಗೊಂಡಿತು. ಸ್ಥಾಪಕ ನಾಯಕ ಕಿಮ್ ಇಲ್-ಸುಂಗ್ ಅವರ ಜನ್ಮ ಶತಮಾನೋತ್ಸವದಂದು ೨೦೧೨ ರಲ್ಲಿ ಹೋಟೆಲ್ ತೆರೆಯಲು ಯೋಜಿಸಲಾಗಿತ್ತು. ೨೦೧೩ ಕ್ಕೆ ಭಾಗಶಃ ತೆರೆಯುವಿಕೆಯನ್ನು ಘೋಷಿಸಲಾಯಿತು. ಆದರೆ ಇದನ್ನು ರದ್ದುಗೊಳಿಸಲಾಯಿತು. [6] ೨೦೧೮ ರಲ್ಲಿ, ಎಲ್ಇಡಿ ಡಿಸ್ಪ್ಲೇ ಅನ್ನು ಒಂದು ಬದಿಯಲ್ಲಿ ಅಳವಡಿಸಿದರು. ಇದನ್ನು ಪ್ರಚಾರದ ಅನಿಮೇಷನ್ ಗಳು ಮತ್ತು ಚಲನಚಿತ್ರ ದೃಶ್ಯಗಳನ್ನು ತೋರಿಸಲು ಬಳಸಲಾಗುತ್ತದೆ. [7]