ಭಾರತೀಯ ಚಲನಚಿತ್ರ ನಟಿ From Wikipedia, the free encyclopedia
ಮೀರಾ ನಾಯರ್ (ಜನನ ಅಕ್ಟೋಬರ್ 15, 1957) ಇವರು ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರಾಗಿದ್ದು ನ್ಯುಯಾರ್ಕ್ ದಲ್ಲಿ ನೆಲೆಯಾಗಿದ್ದಾರೆ.[1] ಅವರ ನಿರ್ಮಾಣ ಸಂಸ್ಥೆ ಹೆಸರು ಮೀರಾಬಾಯಿ ಫಿಲಮ್ಸ್ ಎಂದಿದೆ.
ಅವರು ದೆಹಲಿ ಯುನ್ವರ್ಸಿಟಿ ಮತ್ತು ಹಾರ್ವರ್ಡ್ ಯುನ್ವರ್ಸಿಟಿಗಳಲ್ಲಿ ತಮ್ಮ ಶಿಕ್ಷಣ ಪೂರೈಸಿದ್ದಾರೆ. ಅವರ ಚೊಚ್ಚಲ ಚಿತ್ರ, ಸಲಾಮ್ ಮುಂಬಯಿ! (1988),ರಲ್ಲಿ ಅದುಕೇಯನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಗೊಲ್ಡನ್ ಕ್ಯಾಮೆರಾ ಪ್ರಶಸ್ತಿ ಗಿಟ್ಟಿಸಿಕೊಂಡಿತು.ಅದಲ್ಲದೇ ಅಕಾಡಮಿ ಅವಾರ್ಡ್ ಫಾರ್ ಬೆಸ್ಟ್ ಫಾರೆನ್ ಲ್ಯಾಂಗ್ವೇಜ್ ಫಿಲ್ಮ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಚಿತ್ರವೆನಿಸಿದೆ. ಈ ಚಿತ್ರದ ಮೂಲಕ ಅವರು ಬೀದಿ ಮಕ್ಕಳ ಸಲುವಾಗಿ ಸಂಘಟನೆಯೊಂದನ್ನು ಹುಟ್ಟುಹಾಕಿದರು.ಅದನ್ನು ಸಲಾಮ್ ಬಾಲಕ್ ಟ್ರಸ್ಟ್ ಎಂದು ಭಾರತದಲ್ಲಿ ಅಸ್ತಿತ್ವಕ್ಕೆ ತಂದರು.[2] ಅವರು ಸಾಮಾನ್ಯವಾಗಿ ಸುದೀರ್ಘ ಕಾಲದಿಂದಲೂ ಸೃಜನಾತ್ಮಕ ಸಹಭಾಗಿ,ಚಿತ್ರಕಥೆ ಬರೆಹಗಾರ ಸೋನಿ ತಾರಾಪೊರೆವಾಲಾ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ.ಆಕೆ ಅವರನ್ನು ಹಾರ್ವರ್ಡ್ ನಲ್ಲಿ ಭೇಟಿಯಾಗಿದ್ದರು.
ಅವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.ಅದರಲ್ಲಿಯೂ ನ್ಯಾಶನಲ್ ಫಿಲ್ಮ್ ಅವಾರ್ಡ್ ಮತ್ತು ವಿವಿಧ ಅಂತರರಾಷ್ತ್ರೀಯ ಚಲನಚಿತ್ರ ಉತ್ಸವ ಪ್ರಶಸ್ತಿಗಳು,ಅಲ್ಲದೇ ಅಕಾಡೆಮಿ ಅವಾರ್ಡ್ ಗಳಿಗೆ ಅವರು ನಾಮನಿರ್ದೇಶನಗೊಂಡಿದ್ದಾರೆ,ಪ್ರಮುಖವಾಗಿ ಗೊಲ್ಡನ್ ಗ್ಲೋಬ್ಸ್ BAFTA ಅವಾರ್ಡ್ಸ್ ಮತ್ತು ಫಿಲ್ಮ್ ಫೇರ್ ಅವಾರ್ಡ್ಸ್ ಇತ್ಯಾದಿಗಳಿಗೆ ಅವರ ಚಿತ್ರಗಳು ಪರಿಗಣನೆಗೆ ಬಂದಿವೆ. ಅವರು ಇಂಡಿಯಾ ಅಬ್ರಾಡ್ ಪರ್ಸನ್ ಎಂಬ 2007 ರ ವಾರ್ಷಿಕ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದಾರೆ.ಇದನ್ನು ಪೆಪ್ಸಿಕೊ ಇಂಕಾದ ಅಧ್ಯಕ್ಷ ಮತ್ತು ಸಿಇಒ ಇಂದ್ರ ನೂಯಿ ಅವರು ಪ್ರದಾನ ಮಾಡಿದ್ದಾರೆ.ಅದಲ್ಲದೇ ಇಂಡಿಯಾ ಅಬ್ರಾಡ್ ಪರ್ಸನ್ ಎಂದು 2006 ರ ವಾರ್ಷಿಕ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡಿದ್ದಾರೆ.[3]
ಅವರ ಇತ್ತೀಚಿನ ಚಲನಚಿತ್ರಗಳೆಂದರೆ ವ್ಯಾನಿಟಿ ಫೇರ್ ಇದನ್ನು ರೀಸೆ ಉಯಿದರ್ ಸ್ಪೂನ್ ಜೊತೆ,ದಿ ನೇಮ್ಸೇಕ್ ಮತ್ತು ಅಮೆಲಿಯಾ ಸೇರಿವೆ.[1]
ಮೀರಾ ನಾಯರ್ ಅವರು ಭಾರತದ ರಾಜ್ಯ ಒಡಿಸ್ಸಾದ ರೂರ್ಕೆಲಾದಲ್ಲಿ ಒಂದು ಪಂಜಾಬಿ ಖತ್ರಿ ಕುಟುಂಬದಲ್ಲಿ ಜನಿಸಿದ್ದಾರೆ,ಒಡಿಸ್ಸಾದಲ್ಲಿ ಅವರ ತಂದೆ ಕೆಲಸ ಮಾಡುತ್ತಿದ್ದರು.[4] ಮಧ್ಯಮ ವರ್ಗದ ಕುಟುಂಬವೊಂದರಲ್ಲಿನ ಮೂರನೆಯ ಕಿರಿಯ ಮಗುವಾಗಿ ಅವರು ಜನಿಸಿದ್ದಾರೆ. ಅವರ ತಂದೆ ನಾಗರಿಕ ಸೇವಾ ವಿಭಾಗದಲ್ಲಿ ಕಾರ್ಯ ನಿರ್ವಸುತ್ತಿದ್ದರೆ ತಾಯಿ ಸಾಮಾಜಿಕ ಕಾರ್ಯಕರ್ತೆಯಾಗಿದ್ದರು.
ಮೀರಾ ತಮ್ಮ ಆರಂಭಿಕ ಶಾಲಾಶಿಕ್ಷಣವನ್ನು ಹಿಮಾಚಲ ರಾಜ್ಯದ ಶಿಮ್ಲಾದಲ್ಲಿನ ಬೋರ್ಡಿಂಗ್ ಸ್ಕೂಲ್ ಲೊರೆಟೊ ಕಾನ್ವೆಂಟ್ ತಾರಾ ಹಾಲ್ ನಲ್ಲಿ ಮುಗಿಸಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್ ನಲ್ಲಿ ಸಮಾಜಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ.ಅಲ್ಲಿ ಅವರು ರಾಜಕೀಯ ಕುರಿತಾದ ಬೀದಿ ನಾಟಕ ಮತ್ತು ಸುಮಾರು ಮೂರು ವರ್ಷಗಳ ಕಾಲ ಹವ್ಯಾಸಿ ರಂಗಕಲಾವಿದೆಯಾಗಿಯೂ ನಾಟಕ ಕಂಪನಿಗಳಲ್ಲಿ ಪ್ರದರ್ಶನ ನೀಡಿದ್ದಾರೆ. ನಂತರ 1976 ರಲ್ಲಿ ಅವರು ವಿದ್ಯಾರ್ಥಿ ವೇತನ ಪಡೆದು US[5] ಗೆ ತೆರಳಿ ಹಾರ್ವರ್ಡ್ ನಲ್ಲಿ ತಮ್ಮ ಸಮಾಜಶಾಸ್ತ್ರದಲ್ಲಿನ ಉನ್ನತ ಶಿಕ್ಷಣ ಮುಂದುವರೆಸಿದರು.[6] ಆಕೆ ಹಾರ್ವರ್ಡ್ ನಲ್ಲಿ ತಮ್ಮ ಪತಿ ಛಾಯಾಗ್ರಾಹಕ ಮಿಚ್ ಎಪ್ಸ್ಟಿನ್ ಹಾಗು ಚಿತ್ರಕಥೆ ಬರೆಹಗಾರ ಸೂನಿ ತಾರಾಪೊರೆವಾಲಾ ಅವರನ್ನು ಭೇಟಿಯಾದರು.ಹೀಗೆ ನಿಧಾನವಾಗಿ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುವ ಮೂಲಕ ಪ್ರವರ್ಧನಮಾನಕ್ಕೆ ಬಂದರು.
ಆರಂಭದಲ್ಲಿ ಅವರ ವೃತ್ತಿ ಜೀವನವು ಚಲನಚಿತ್ರದ ಕಲಾವಿದರಾಗಿ ಸುರುವಾದರೂ,ನಾಯರ್ ನಾಲ್ಕು ಟೆಲೆವಿಜನ್ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದರು. ಇಂಡಿಯಾ ಕ್ಯಾಬರೆ ಎಂಬ ಚಲನಚಿತ್ರವು ಮುಂಬಯಿ ನೈಟ್ ಕ್ಲಬ್ ಗಳಲ್ಲಿ ನಗ್ನವಾಗುವ ಸತ್ಯಗಳನ್ನು ಬಿಚ್ಚಿಟ್ಟ ಕಥಾನಕ, ಬ್ಲ್ಯು ರಿಬ್ಬನ್ ಪ್ರಶಸ್ತಿ ಪಡೆದುಕೊಂಡಿತು.ಅಮೆರಿಕನ್ ಫಿಲ್ಮ್ ಫೆಸ್ಟಿವಲ್ ನ 1986 ರ ಚಲನಚಿತ್ರೋತ್ಸವದಲ್ಲಿ ಈ ಪ್ರಶಸ್ತಿ ನೀಡಲಾಯಿತು. ಸಲಾಮ್ ಮುಂಬಯಿ! (1988)ಇದರ ಚಿತ್ರಕಥೆ ಸೂನಿ ತಾರಾಪೊರೆವಾಲಾ,ಬರೆದಿದ್ದಾರೆ,ಈ ಚಿತ್ರವು ಅಕಾಡೆಮಿ ಅವಾರ್ಡ್ ಫಾರ್ ಬೆಸ್ಟ್ ಫಾರೆನ್ ಲ್ಯಾಂಗ್ವೇಜ್ ಫಿಲ್ಮ್ ಪ್ರಶಸ್ತಿಗೆ ನಾಮನಿರ್ದೇಶನ ಪಡೆಯಿತು.ಇದರೊಂದಿಗೆ ಹಲವು ಪ್ರಶಸ್ತಿಗಳನ್ನೂ ಪಡೆಯಿತು. ಇಂದು ಈ ಚಲನಚಿತ್ರವು ಅಭೂತಪೂರ್ವ ಶ್ರೇಷ್ಠ ಮಟ್ಟದ ಚಿತ್ರವೆನಿಸಿದ್ದು, ಚಲನಚಿತ್ರ ವಿದ್ಯಾರ್ಥಿಗಳಿಗೆ ಇದು ಮಾದರಿ ಪಾಠವೆನಿಸಿದೆ.
ಆಗ 1991 ರಲ್ಲಿ ಮಿಸ್ಸಿಸ್ಸಿಪಿ ಮಸಾಲಾ ಚಿತ್ರವು ಡೆಂಜೆಲ್ ವಾಶಿಂಗ್ಟನ್ ಮತ್ತು ಸರಿತಾ ಚೌಧರಿ ಅವರ ಅಭಿನಯದ ಇದು ಉಗಾಂಡಾದಲ್ಲಿನ-ಭಾರತೀಯರು ಮಿಸ್ಸಿಸ್ಸಿಪ್ಪಿಯಲ್ಲಿ ಹೇಗೆ ಬದುಕುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆಂಬುದರ ಚಿತ್ರಣವಾಗಿತ್ತು. ಇದರ ಚಲನಚಿತ್ರ ಕಥೆ-ಸಂಭಾಷಣೆಯನ್ನು ಮತ್ತೆ ಅವರೇ ಸೂನಿ ತಾರಾಪೊರೆವಾಲಾರೆ ಬರೆದಿದ್ದರೆ,ಮೈಕೆಲ್ ನೊಜಿಕ್ ಅದರ ನಿರ್ಮಾಪಕರಾಗಿದ್ದರು. ಅವರು 1995 ರಲ್ಲಿ ದಿ ಪೆರೆಜ್ ಫ್ಯಾಮಿಲಿ ಕೃತಿ ಆಧರಿಸಿದ ಕಥೆಯನ್ನುಚಲನಚಿತ್ರ ನಿರ್ಮಾಣಕ್ಕೆ ಅಳವಡಿಸಿ ಕೊಂಡಿದ್ದರು.ಕ್ರಿಸ್ಟೈನ್ ಬೆಲ್ ಈ ಕೃತಿ ರಚನೆಕಾರರಾಗಿದ್ದಾರೆ. ಈ ಚಲನಚಿತ್ರದಲ್ಲಿ ಮರಿಸಾ ಟೊಮಿಯ್,ಅಲ್ಫ್ರೈಡ್ ಮೊಲಿನಾ, ಮತ್ತು ಎಂಜಿಲಿಕಾ ಹುಸ್ಟನ್,ಅಭಿನಯಿಸಿದ್ದರು, ಅಲ್ಲದೇ ಮೈಕೆಲ್ ನೊಜಿಕ್ ಅವರೇ ಮತ್ತೆ ಇದಕ್ಕೆ ನಿರ್ಮಾಪಕರಾಗಿದ್ದರು.
ಆಕೆ ಅದರ ನಿರ್ದೇಶಕರಾಗಿದ್ದರಲ್ಲದೇ ಈ ಚಿತ್ರವುKama Sutra: A Tale of Love 16 ನೆಯ ಶತಮಾನದಲ್ಲಿನ ಭಾರತದ ಕಥಾನಕದ ಚಿತ್ರಣವಾಗಿತ್ತು. ಮೈ ಓನ್ ಕಂಟ್ರಿ ಇದರಲ್ಲಿ ನವೀನ್ ಅಂಡ್ರಿವ್ಸ್ ನಟಿಸಿದ್ದನ್ನು HBO ಫಿಲ್ಮ್ಸ್ ಗಾಗಿ ನಿರ್ಮಿಸಲಾಗಿತ್ತು.ಇದನ್ನು ಅಬ್ರಾಹ್ಮ್ ವರ್ಗೀಸ್ ಅವರ ನೆನಪುಗಳನ್ನು ಸೂನೊ ತಾರಾಪೊರೆವಾಲಾ ಅವರು ಚಿತ್ರಕಥೆಗೆ ಭಟ್ಟಿ ಇಳಿಸಿದ್ದರು.
ನಾಯರ್ ಅವರ ಅತ್ಯಂತ ಜನಪ್ರಿಯ ಮಾನ್ಸೂನ್ ವೆಡ್ಡಿಂಗ್ (2001)ರ ಚಲನಚಿತ್ರ,ಇದು ಭಾರತೀಯ ಪಂಜಾಬೀ ಕುಟುಂಬವೊಂದರ ಮದುವೆ ಬಗೆಗಿನ ವ್ಯವಸ್ಥೆಗಳ ಬಗ್ಗೆ ವಿವರ ನೀಡುತ್ತಿತ್ತು.ಇದಕ್ಕಾಗಿ ಸಬ್ರಿನಾ ಧವನ್ ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ.ಇದಕ್ಕೆ ಪ್ರತಿಷ್ಠಿತ ಗೊಲ್ಡನ್ ಲೈಯಿನ್ ಅವಾರ್ಡ್ ನ್ನು ವೆನೀಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನೀಡಲಾಯಿತು. ನಾಯರ್ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.[7] ಅವರ 2004 ರ ಆವೃತ್ತಿ ಠ್ಯಾಕರೆ ಅವರ ಕಾದಂಬರಿ ವ್ಯಾನಿಟಿ ಫೇರ್ ಆಧರಿತ ಚಿತ್ರದಲ್ಲಿರೀಸೆ ಉಯಿತ್ ಸ್ಪೂನ್ ನಟಿಸಿದ್ದಾರೆ.
ಅವರ ಚಲನಚಿತ್ರ ದಿ ನೇಮ್ಸೇಕ್ 2006 ರಲ್ಲಿ ಪ್ರಥಮ ಪ್ರಯೋಗದಲ್ಲಿ ಡಾರ್ಟ್ ಮೌತ್ ಕಾಲೇಜ್ ನಲ್ಲಿ ನಡೆಯಿತು.ನಾಯರ್ ಅವರಿಗೆ ಇದು ಡಾರ್ಟ್ ಮೌತ್ ಫಿಲ್ಮ್ ಪ್ರಶಸ್ತಿ ತಂದುಕೊಟ್ಟಿತು. ಮತ್ತೊಂದು ಪ್ರಯೋಗ 2006 ರ ಹೊತ್ತಿಗೆ ನ್ಯುಯಾರ್ಕ್ ನಲ್ಲಿನ ಇಂಡೊ-ಅಮೆರಿಕನ್ ಕಲ್ಚರಲ್ ಕೌನ್ಸಿಲ್ ನಲ್ಲಿ ಏರ್ಪಾಡಾಗಿತ್ತು. ದಿ ನೇಮ್ಸೇಕ್ ಚಿತ್ರಕ್ಕಾಗಿ ಪುಲ್ಟಿಜರ್ ಪ್ರಶಸ್ತಿ ವಿಜೇತ ಝುಂಪಾ ಲಾಹಿರಿ ಅವರ ಕಾದಂಬರಿಯನ್ನು ಸೂನಿ ತಾರಾಪೊರೆವಾಲಾ ಅವರು ಇದಕ್ಕೆ ಅಳವಡಿಸಿದ್ದರು.ಇದು ಮಾರ್ಚ್ 2007 ರಲ್ಲಿ ಬಿಡುಗಡೆಯಾಗಿತ್ತು.
ಅವರ ಅತ್ಯಂತ ಇತ್ತೀಚಿನ ಯೋಜನೆಯೆಂದರೆ ಮೈಶಾ,ಈ ಚಲನಚಿತ್ರ ಪ್ರಯೋಗಾಲಯವು ಪೂರ್ವ ಆಫ್ರಿಕನ್ ರು ಮತ್ತು ಸೌತ್ ಏಷಿಯನ್ ರಿಗೆ ಚಲನಚಿತ್ರ ನಿರ್ಮಾಣದ ಕುರಿತ ಶಿಕ್ಷಣವಾಗಿತ್ತು.[8] ಮೈಶಾದ ಪ್ರಧಾನ ಕಚೇರಿಯು ಉಗಾಂಡಾದಲ್ಲಿ ನಾಯರ್ ಅವರು ದತ್ತು ಪಡೆದ ಕಂಪಾಲಾದಲ್ಲಿದೆ.
ಅವರು ನ್ಯುಯಾರ್ಕ್,ಐ ಲೌ ಯು ಒಂದು ರೋಮಾಂಚಕ ಪ್ರೇಮ ಕಥೆಯನ್ನು ಬಳಸಿ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ.ನ್ಯುಯಾರ್ಕ್ ನಲ್ಲಿ ನಡೆದ ಸಣ್ಣ ಪ್ರಮಾಣದ ಪ್ರೇಮ ಕಥೆಗಳ ಸರಣಿಯನ್ನೇ ಅವರು ಚಿತ್ರಕಥೆಯಾಗಿಸಿದ್ದಾರೆ.ಅದಲ್ಲದೇ AIDSಏಡ್ಸ್ ಕುರಿತಾದ ಜಾಗೃತಿ ಕುರಿತಾದ ಚಿತ್ರ ನಿರ್ಮಾಣಕ್ಕಾಗಿ ಮೈಗ್ರೇಶನ್ ಎಂಬ ಹೆಸರಿನಲ್ಲಿ ಗೇಟ್ಸ್ ಫೌಂಡೇಶನ್ ಧನಸಹಾಯದೊ6ದಿಗೆ 12 ನಿಮಿಷಗಳ ಕಿರುಚಿತ್ರ ನಿರ್ಮಿಸಿದರು.[9][10]
ಅವರ ಚಲನಚಿತ್ರೋದ್ಯಮದಲ್ಲಿನ ಕೊಡುಗೆಗಾಗಿ 2007 ರಲ್ಲಿ 9ನೆಯ ಬಾಲಿಯುಡ್ ಫಿಲ್ಸ್ ಅವಾರ್ಡ್ಸ್ ನಲ್ಲಿ ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿ ನೀಡಲಾಯಿತು.[11][12]
ಅವರ ಜೀವನ ಚರಿತ್ರೆ ಆಧಾರಿತ ಅಮೆಲಿಯಾ ಚಿತ್ರವು ಅಕ್ಟೋಬರ್ 2009 ರಲ್ಲಿ ಪ್ರಥಮ ಪ್ರದರ್ಶನ ಕಂಡಿತು.[13][14]
ಹಲವು ವರ್ಷಗಳ ಕಾಲ ಸುದೀರ್ಘ ಕಾಲದ ದೊಡ್ಡ ಬಜೆಟ್ ನ ಚಿತ್ರದ ಬಗ್ಗೆ ಅವರು ಮಗ್ನರಾಗಿದ್ದರು.ಆದರೆ ಶಾಂತಾರಾಮ್ ಕಾದಂಬರಿ ಆಧಾರಿತ ಇದರ ಯೋಜನೆ ಇನ್ನೂ ಅಲ್ಲಿಯೇ ಉಳಿದಿದೆ. ಅವರ ಮುಂಬರುವ ಚಿತ್ರ ಇಂಪ್ರೆಸ್ಸೆನಿಷ್ಟ್ ಭವಿಷ್ಯತ್ತಿನ ಕಾಲದ ಕಥೆ 1920 ರಲ್ಲಿನ ರಾಜ್ ನಲ್ಲಿ ಸೆಟ್ಟೇರಲಿದೆ. ನಾಯರ್ ಅವರು ಮೊಹ್ಸಿನ್ ಹಮೀದ್ ಅವರ 2007 ರ ಕಾದಂಬರಿ ದಿ ರಿಲೆಕ್ಟಂಟ್ ಫಂಡಾಮೆಂಟಲಿಸ್ಟ್ ನ ಹಕ್ಕುಗಳನ್ನೂ ಪಡೆದಿದ್ದಾರೆ.[15] ಪ್ರತೀಕ್ ಬಬ್ಬರ್,ಅಲಿ ಝಾಫರ್ ಮತ್ತು ರೆಹಾನ್ ಖಾನ್ ಇವರೆಲ್ಲರೂ ನಾಯಕ ಪಾತ್ರಕ್ಕಾಗಿ ಈಗಾಗಲೇ ಧ್ವನಿ ಪರೀಕ್ಷೆಗೆ ಒಳಗಾಗಿದ್ದಾರೆ.[16] ಸದ್ಯ ಅವರು ಸಾಕ್ಷ್ಯ ಚಿತ್ರ ದಿ ಬೀಟಲ್ಸ್ ಅಟ್ ಋಷಿಕೇಶ ಕುರಿತಾಗಿ ಕೆಲಸ ಮಾಡುತ್ತಿದ್ದಾರೆ,ಆದರೆ ಈ ಚಿತ್ರ ಬಿಡುಗಡೆ ಬಗ್ಗೆ ಯಾವುದೇ ದಿನಾಂಕ ನಿಗದಿಯಾಗಿಲ್ಲ.[17]
ನಾಯರ್ ಅವರು ನ್ಯುಯಾರ್ಕ್ ಸಿಟಿಯಲ್ಲಿನ ಕೊಲಂಬಿಯಾ ಯುನ್ವರ್ಸಿಟಿ ಹತ್ತಿರ ವಾಸವಾಗಿದ್ದಾರೆ.ಅಲ್ಲಿನ ಸ್ಕೂಲ್ ಆಫ್ ಆರ್ಟ್ಸ್ ನಲ್ಲಿನ ಚಲನಚಿತ್ರ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ.ಅಲ್ಲಿಯೇ ಅವರ ಪತಿ ಮಹ್ಮೂದ್ ಮಮ್ದಿನ್ ಕೂಡಾ ಅಲ್ಲಿಯೇ ಅಧ್ಯಾಪಕರಾಗಿದ್ದಾರೆ.[18][19] ನಾಯರ್ ತಮ್ಮ ಪತಿಯನ್ನು 1988 ರಲ್ಲಿ, ಅವರು ಉಗಾಂಡಾಕ್ಕೆ ಮಿಸ್ಸಿಸ್ಸಿಪ್ಪಿ ಮಸಾಲಾ ಚಿತ್ರದ ಅಧ್ಯಯನಕ್ಕೆ ಹೋದಾಗ ಮೊದಲ ಬಾರಿಗೆ ಭೇಟಿಯಾದರು.[5] ನಾಯರ್ ಅವರು ದಶಕಗಳಿಂದಲೂ ಯೋಗ ಅಭ್ಯಾಸ ಮಾಡುವಲ್ಲಿ ಅತ್ಯಾಸಕ್ತಿ ಹೊಂದಿದವರಾಗಿದ್ದಾರೆ.ಅವರು ತಮ್ಮ ಯಾವುದೇ ಚಿತ್ರ ನಿರ್ಮಿಸುವುದಕ್ಕೆ ಮುಂಚೆ ತಮ್ಮ ತಂಡದೊಂದಿಗೆ ಯೋಗಾಭ್ಯಾಸ ನಡೆಸಿಯೇ ಅಂದಿನ ಕಾರ್ಯಕ್ಕೆ ಮುಂದುವರೆಯುತ್ತಾರೆ.[20] ನಾಯರ್ ಅವರಿಗೆ ಝೊಹ್ರನ್ ಮಮ್ದಿನ್[21] ಎಂಬ ಪುತ್ರನಿದ್ದಾನೆ,1991 ರಲ್ಲಿ ಜನಿಸಿದ ಆತ 2010 ರಲ್ಲಿ ಬ್ರಾಂಕ್ಸ್ ಹೈಸ್ಕೂಲ್ ಆಫ್ ಸೈನ್ಸ್ ನಿಂದ ಪದವಿ ಪಡೆದಿದ್ದಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.