![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/c/c7/Palau_pitcher_plant.jpg/640px-Palau_pitcher_plant.jpg&w=640&q=50)
ಮಾಂಸಾಹಾರಿ ಸಸ್ಯ
From Wikipedia, the free encyclopedia
ಮಾಂಸಾಹಾರಿ ಸಸ್ಯಗಳು ಸಸ್ಯಗಳ ಒಂದು ವಿಶಿಷ್ಟ ಬಗೆಯಾಗಿದ್ದು, ಪ್ರಾಣಿಗಳು ಅಥವಾ ಪ್ರೋಟೋಜೋವಾ ವಿಭಾಗಕ್ಕೆ ಸೇರಿದ ಪ್ರಾಣಿಗಳನ್ನು, ಅದರಲ್ಲೂ ವಿಶೇಷವಾಗಿ ಕೀಟಗಳು, ವಿವಿಧ ಬಗೆಯ ಡಿಂಭಗಳು, ಕ್ರಿಮಿಗಳು ಮತ್ತು ಇತರ ಸಂಧಿಪದಿಗಳನ್ನು ಬಲೆಗೆ ಬೀಳಿಸಿಕೊಂಡು ಸೇವಿಸುವ ಮೂಲಕ, ತಮ್ಮ ಕೆಲವೊಂದು ಅಥವಾ ಬಹುಭಾಗದ ಪೌಷ್ಟಿಕ ದ್ರವ್ಯಗಳನ್ನು (ಆದರೆ ಶಕ್ತಿಯನ್ನಲ್ಲ) ಪಡೆದುಕೊಳ್ಳುತ್ತವೆ. ಮಣ್ಣು ತುಂಬಾ ನಿಸ್ಸಾರವಾಗಿರುವ ಅಥವಾ ಪೌಷ್ಟಿಕ ದ್ರವ್ಯಗಳಿಲ್ಲದೆ ದುರ್ಬಲವಾಗಿರುವ, ಅದರಲ್ಲೂ ವಿಶಿಷ್ಟವಾಗಿ ಸಾರಜನಕದ ಅಂಶವಿಲ್ಲದಿರುವ ಆಮ್ಲೀಯ ಜೌಗು ಪ್ರದೇಶಗಳು ಮತ್ತು ಬಂಡೆಯ ಹೊರಚಾಚುವಿಕೆಗಳಂಥ ಪ್ರದೇಶಗಳಲ್ಲಿ ಬೆಳೆಯಲು ಮಾಂಸಾಹಾರಿ ಸಸ್ಯಗಳು ಹೊಂದಾಣಿಕೆ ಮಾಡಿಕೊಂಡಿರುವುದು ಕಂಡುಬರುತ್ತದೆ. ಮಾಂಸಾಹಾರಿ ಸಸ್ಯಗಳ ಕುರಿತಾದ ಮೊದಲ ಸುಪ್ರಸಿದ್ಧ ಪ್ರಕರಣ ಗ್ರಂಥವನ್ನು ಚಾರ್ಲ್ಸ್ ಡಾರ್ವಿನ್ 1875ರಲ್ಲಿ ಬರೆದ.[1]
![Thumb image](http://upload.wikimedia.org/wikipedia/commons/thumb/c/c7/Palau_pitcher_plant.jpg/640px-Palau_pitcher_plant.jpg)
ನಿಜವಾದ ಮಾಂಸಹಾರಿತನವು ಹೂಬಿಡುವ ಸಸ್ಯಗಳ[2][3] ಐದು ವಿಭಿನ್ನ ಗಣಗಳಲ್ಲಿ ಆರು ಬಾರಿ ಸ್ವತಂತ್ರವಾಗಿ ವಿಕಸನಗೊಂಡಿದೆ ಎಂದು ಹೇಳಲಾಗುತ್ತದೆ ಮತ್ತು ಈಗ ಇವು ಒಂದು ಡಜನ್ಗಿಂತಲೂ ಹೆಚ್ಚಿನ ಸಂಖ್ಯೆಯ ಕುಲಗಳಿಂದ ಪ್ರತಿನಿಧಿಸಲ್ಪಡುತ್ತಿವೆ. ಇವುಗಳು ಸುಮಾರು 630 ಜಾತಿಗಳನ್ನು ಒಳಗೊಂಡಿದ್ದು, ಅವು ಬೇಟೆಗಳನ್ನು ಆಕರ್ಷಿಸಿ ಬಲೆಗೆ ಬೀಳಿಸುತ್ತವೆ. ನಂತರ ಜೀರ್ಣಕಾರಿ ಕಿಣ್ವಗಳನ್ನು ಉತ್ಪತ್ತಿ ಮಾಡುತ್ತವೆ, ಹಾಗೂ ತತ್ಪರಿಣಾಮವಾಗಿ ಲಭ್ಯವಾಗುವ ಪೌಷ್ಟಿಕ ದ್ರವ್ಯಗಳನ್ನು ಹೀರಿಕೊಳ್ಳುತ್ತವೆ.[4] ಹೆಚ್ಚುವರಿಯಾಗಿ, ಹಲವಾರು ಕುಲಗಳಲ್ಲಿನ 300ಕ್ಕೂ ಹೆಚ್ಚಿನ ಮೊದಲ-ಮಾಂಸಾಹಾರಿ ಸಸ್ಯ ಜಾತಿಗಳು ಇವುಗಳ ಪೈಕಿಯ ಕೆಲವೇ ಕೆಲವು ಗುಣಲಕ್ಷಣಗಳನ್ನು ತೋರಿಸುತ್ತವೆ.