ಮರುಬಳಕೆ
From Wikipedia, the free encyclopedia
ಮರುಬಳಕೆ ಯು ಉಪಯೋಗಿಸಿದ ವಸ್ತುಗಳನ್ನು ಹೊಸ ಉತ್ಪನ್ನಗಳಾಗಿ ತಯಾರಿಸುವುದನ್ನು ಒಳಗೊಳ್ಳುತ್ತದೆ. ಆದ ಕಾರಣ ಉಪಯುಕ್ತ ವಸ್ತುಗಳು ವ್ಯರ್ಥವಾಗಿ ಹೋಗದಂತೆ ತಡೆಯಲು, ತಾಜಾ ಕಚ್ಚಾ ವಸ್ತುಗಳ ಅಪವ್ಯಯ ಮಾಡುವುದನ್ನು ಕಡಿಮೆ ಮಾಡಲು, ಇಂಧನಗಳ ಬಳಕೆ ಕಡಿಮೆ ಮಾಡಲು, ವಾಯು ಮಾಲಿನ್ಯ (ದಹನದ ಪ್ರಕ್ರಿಯೆ ಮಾಡುವುದರಿಂದ ಆಗುವ) ಮತ್ತು ಜಲಮಾಲಿನ್ಯವನ್ನು (ಭೂಮಿಯೊಳಗೆ ಬೇಡದ ವಸ್ತುಗಳನ್ನು ಹೂತುಹಾಕುವುದರಿಂದ ಆಗುವ) ಕಡಿಮೆ ಮಾಡಲು ನಡೆಸಲಾಗುತ್ತದೆ. ಇದು "ಸಾಂಪ್ರದಾಯಿಕ" ತ್ಯಾಜ್ಯ ವಿಸರ್ಜನೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಕಚ್ಚಾ ವಸ್ತುಗಳಿಂದ ತಯಾರಿಸುವುದಕ್ಕಿಂತ ಕಡಿಮೆ ಮಟ್ಟದ ಹಸಿರುಮನೆ ಅನಿಲ ಹೊರಸೂಸುವಿಕೆಗಳನ್ನು ಹೊಂದಿರುತ್ತದೆ.[1][2] ಮರುಬಳಕೆಯು ಆಧುನಿಕ ತ್ಯಾಜ್ಯ ಕಡಿಮೆ ಮಾಡುವುದರ ಒಂದು ಪ್ರಮುಖ ವಿಷಯವಾಗಿದೆ, ಅದಲ್ಲದೇ"ಕಡಿಮೆ ಮಾಡು, ಪುನಃಬಳಸು, ಮರುಬಳಕೆ" ಇತ್ಯಾದಿ ತ್ಯಾಜ್ಯ ಶ್ರೇಣಿ ವ್ಯವಸ್ಥೆಯ ಮೂರನೇ ಅಂಶ.
ಪುನಃ ಬಳಸಬಹುದಾದ ವಸ್ತುಗಳು ಅನೇಕ ರೀತಿಯನ್ನು ಒಳಗೊಳ್ಳುತ್ತವೆ - ಗಾಜು, ಕಾಗದ, ಲೋಹ, ಪ್ಲ್ಯಾಸ್ಟಿಕ್, ಬಟ್ಟೆ ಮತ್ತು ಇಲೆಕ್ಟ್ರಾನಿಕ್ ಸಂಬಂಧಿತ ವಸ್ತುಗಳು. ಪರಿಣಾಮದಲ್ಲಿ ಸಮಾನವಾಗಿದ್ದರೂ, ಆಹಾರ ಅಥವಾ ತೋಟದ ತ್ಯಾಜ್ಯದಂತಹ ಜೈವಿಕ ವಿಘಟನೀಯ ತ್ಯಾಜ್ಯಗಳ ಮರುಬಳಕೆಯನ್ನು ಅಥವಾ ಮಿಶ್ರ ಗೊಬ್ಬರ ತಯಾರಿಸುವುದನ್ನು ಮರುಬಳಕೆ ಎಂದು ಪರಿಗಣಿಸಲಾಗುವುದಿಲ್ಲ.[2] ಮರುಬಳಕೆ ಕ್ರಿಯೆಗೆ ಒಳಪಡಿಸುವ ವಸ್ತುಗಳನ್ನು ಸಂಗ್ರಹ ಕೇಂದ್ರಕ್ಕೆ ತರಲಾಗುತ್ತದೆ, ಅಥವಾ ರಸ್ತೆ ಬದಿಯಿಂದ ಆರಿಸಲಾಗುತ್ತದೆ. ಅದನ್ನು ನಂತರ ವಿಂಗಡಿಸಿ, ಶುದ್ಧಗೊಳಿಸಿ, ಹೊಸ ವಸ್ತುಗಳಾಗಿ ಪುನಃಸಂಸ್ಕರಿಸಲಾಗುತ್ತದೆ.
ವಸ್ತುಗಳ ಮರುಬಳಕೆಯು ಅದೇ ವಸ್ತುವಿನ ತಾಜಾ ಪೂರೈಕೆಯನ್ನು ಉತ್ಪತ್ತಿ ಮಾಡುತ್ತದೆ. ಉದಾಹರಣೆಗಾಗಿ ಬಳಕೆ ಮಾಡಿದ ಕಛೇರಿ ಕಾಗದವು ಇನ್ನಷ್ಟು ಕಛೇರಿ ಕಾಗದವನ್ನು ಅಥವಾ ಉಪಯೋಗಿಸಿದ ನೊರೆ ಪಾಲಿಸ್ಟೈರೀನ್ ಮತ್ತಷ್ಟು ಪಾಲಿಸ್ಟೈರೀನ್ಅನ್ನು ನೀಡುತ್ತದೆ. ಆದರೆ ಇದು ತುಂಬಾ ಕಷ್ಟಕರವಾದುದು, ಅಥವಾ ತೀರ ದುಬಾರಿಯಾದುದು (ಅದೇ ಉತ್ಪನ್ನವನ್ನು ಕಚ್ಚಾ ವಸ್ತುಗಳಿಂದ ಅಥವಾ ಇತರ ಮೂಲಗಳಿಂದ ಉತ್ಪತ್ತಿ ಮಾಡುವುದಕ್ಕೆ ಹೋಲಿಸಿದರೆ). ಆದ್ದರಿಂದ ಇದರ ಬದಲಿಗೆ ಹೆಚ್ಚಿನ ಉತ್ಪನ್ನಗಳ ಅಥವಾ ವಸ್ತುಗಳ "ಪುನಃ ಉಪಯೋಗಿಸುವಿಕೆ" ಕ್ರಿಯೆಯಿಂದ ಬೇರೆಯೇ ವಸ್ತುಗಳನ್ನು (ಉದಾ. ಕಾಗದ ಹಲಗೆ) ಉತ್ಪಾದಿಸಿ, ಅವುಗಳನ್ನು ಮರುಬಳಕೆ ಮಾಡಲಾಗುತ್ತದೆ. ಮತ್ತೊಂದು ರೀತಿಯ ಮರುಬಳಕೆಯೆಂದರೆ ಪುನರ್ಬಳಕೆ ಎನ್ನುವುದು ವಸ್ತುಗಳನ್ನು ಉಳಿಸುವುದು(ರಕ್ಷಿಸುವುದು) , ಅವುಗಳ ನೈಜ ಮೌಲ್ಯದಿಂದ (ಉದಾ. ಕಾರು ಬ್ಯಾಟರಿಗಳಿಂದ ಸತುವನ್ನು ಅಥವಾ ಕಂಪ್ಯೂಟರ್ ಭಾಗಗಳಿಂದ ಚಿನ್ನವನ್ನು) ಅಥವಾ ಅವುಗಳ ಅಪಾಯಕರ ಗುಣದಿಂದ (ಉದಾ. ಅನೇಕ ವಸ್ತುಗಳಿಂದ ಪಾದರಸದ ತೆಗೆಯುವಿಕೆ ಮತ್ತು ಮರುಬಳಕೆ).
ವಿಮರ್ಶಕರು ಮರುಬಳಕೆಯಿಂದಾಗುವ ಒಟ್ಟು ಆರ್ಥಿಕ ಮತ್ತು ನೈಸರ್ಗಿಕ ಪ್ರಯೋಜನಗಳನ್ನು ಅದಕ್ಕೆ ವ್ಯಯವಾಗುವ ವೆಚ್ಚ್ಕಕ್ಕೆ ಹೋಲಿಸಿ ಖಂಡಿಸುತ್ತಾರೆ. ಅದಲ್ಲದೇ ಮರುಬಳಕೆ ಕ್ರಿಯೆಯು ಹೆಚ್ಚಾಗಿ ಉತ್ಪನ್ನಗಳನ್ನು ಕೆಲವೊಮ್ಮೆ ಕಳಪೆಯಾಗಿ ಉತ್ಪತ್ತಿ ಮಾಡುತ್ತದೆ. ಇದರಿಂದಾಗಿ ಗುಣಮಟ್ಟ ಅಥವಾ ದೃಢೀಕರಣ ಫಲಪ್ರಮಾದಕ್ಕೆ ಗುರಿಯಾಗುತ್ತದೆ. ನಿರ್ದಿಷ್ಟವಾಗಿ ವಿಮರ್ಶಕರು, ಸಂಗ್ರಹ ಮತ್ತು ಸಾಗಣೆಗೆ ಖರ್ಚಾದ ಹಣ ಮತ್ತು ಇಂಧನವು ಉತ್ಪನ್ನ ಕ್ರಿಯೆಯಲ್ಲಿ ಉಳಿತಾಯ ಮಾಡಿದ ಬೆಲೆ ಮತ್ತು ಇಂಧನವನ್ನು ಕಡಿಮೆ ಮಾಡುತ್ತದೆ;(ಮೀರಿಸುತ್ತದೆ) ಎಂದು ವಾದಿಸುತ್ತಾರೆ; ಮರುಬಳಕೆ ಉದ್ಯಮದಿಂದ ಒದಗಿಸಲ್ಪಟ್ಟ ಉದ್ಯೋಗಗಳು ಕಾಡಿನಿಂದ ತಂದ ಮರಗಳನ್ನು ಕತ್ತರಿಸಿ ಬಳಕೆಗೆ ತರುವುದು(ಲಾಗಿಂಗ್), ಗಣಿಗಾರಿಕೆ ಮತ್ತು ಕಚ್ಚಾ ಉತ್ಪಾದನೆಗೆ ಸಂಬಂಧಿತ ಇತರ ಉದ್ಯಮಗಳಿಂದ ಕಳೆದುಕೊಂಡ ಉದ್ಯೋಗಳಿಗಿಂತ ಕಡಿಮೆ ಮಟ್ಟದ್ದಾಗಿದೆ; ಕಾಗದದಂತಹ ವಸ್ತುಗಳನ್ನು ಕೆಲವು ಬಾರಿ, ಆ ವಸ್ತುವಿನ ಸರಳ ಸಂಯುಕ್ತಗಳಾಗಿ ಒಡೆಯುವ ಕ್ರಿಯೆಯು ಮುಂದಿನ ಮರುಬಳಕೆ ಮಾಡುವುದನ್ನು ತಡೆಯುವವರೆಗೆ ಮಾತ್ರ ಮರುಬಳಕೆ ಮಾಡಬಹುದು. ಮರುಬಳಕೆಯ ಸೂಚನೆಯು ಈ ದೂರುಗಳನ್ನು ಅಲ್ಲಗಳೆಯುತ್ತದೆ. ಈ ವಾದಗಳ ಅಂಗೀಕಾರಾರ್ಹತೆಯು ಎರಡೂ ಕಡೆಗಳಿಂದಲೂ ವಿವಾದವನ್ನು ಮುಂದುವರೆಸುವಂತೆ ಮಾಡಿದೆ.
ಈ ಪುಟ ಓದಬೇಡಿ