ನ್ಯೂಕ್ಲಿಯೊಟೈಡ್
From Wikipedia, the free encyclopedia
ನ್ಯೂಕ್ಲಿಯೊಟೈಡ್ಗಳು[ಟಿಪ್ಪಣಿ 1] ಮಾನೊಮರ್ಗಳಾಗುವ[ಟಿಪ್ಪಣಿ 2] ಅಥವಾ ಡಿಎನ್ಎ (ಡಿಆಕ್ಸಿರೈಬೊನ್ಯೂಕ್ಲಿಯಿಕ್ ಆಮ್ಲ) ಮತ್ತು ಆರ್ಎನ್ಎ (ರೈಬೊನ್ಯೂಕ್ಲಿಯಿಕ್ ಆಮ್ಲ)ಗಳಂತಹ ನ್ಯೂಕ್ಲಿಯಿಕ್ ಆಮ್ಲಗಳ ಉಪಘಟಕಗಳು. ನ್ಯೂಕ್ಲಿಯಿಕ್ ಆಮ್ಲದ ಕಟ್ಟದ ಇಟ್ಟಿಗೆಗಳಾದ ನ್ಯೂಕ್ಲಿಯೊಟೈಡ್ ಸಾರಜನಕ ಪ್ರತ್ಯಾಮ್ಲ, ಐದು ಕಾರ್ಬನ್ ಸಕ್ಕರೆ (ರೈಬೊಸ್ ಅಥವಾ ಡಿಆಕ್ಸಿರೈಬೊಸ್) ಮತ್ತು ಕನಿಷ್ಠ ಒಂದು ಫಾಸ್ಪೇಟ್ ಗುಂಪನ್ನು ಹೊಂದಿದೆ. ಹೀಗಾಗಿ, ನ್ಯೂಕ್ಲಿಯೊಸೈಡ್ ಮತ್ತು ಫಾಸ್ಪೇಟ್ ಗುಂಪು ಸೇರಿದರೆ ನ್ಯೂಕ್ಲಿಯೊಟೈಡ್ ಆಗುತ್ತದೆ.
ನ್ಯೂಕ್ಲಿಯೊಟೈಡ್ಗಳು ಜೀವಕೋಶದೊಳಗೆ ನ್ಯೂಕ್ಲಿಯೊಸೈಡ್ ಟ್ರೈಫಾಸ್ಪೇಟ್ (ಎಟಿಪಿ, ಜಿಟಿಪಿ, ಸಿಟಿಪಿ ಮತ್ತು ಯುಟಿಪಿ) ರೂಪದಲ್ಲಿ ಶಕ್ತಿಯ ಪೊಟ್ಟಣಗಳ ಸಾಗಾಣಿಕೆಯ ಕೆಲಸವನ್ನು ಸಹ ಮಾಡುತ್ತವೆ ಮತ್ತು ಈ ಮೂಲಕ ಚಯಾಪಚಯದಲ್ಲಿ (ಮೆಟಬಾಲಿಸಂ) ಪ್ರಮುಖ ಪಾತ್ರವಹಿಸುತ್ತವೆ.[1] ಇದರ ಜೊತೆಗೆ ನ್ಯೂಕ್ಲಿಯೊಟೈಡ್ಗಳು ಜೀವಕೋಶದ ಸಂಕೇತಿಸುವಿಕೆಯಲ್ಲಿ (ಸಿಜಿಎಂಪಿ ಅಥವಾ ಸೈಕ್ಲಿಕ್ ಗ್ವಾನೊಸಿನ್ ಮೋನೊಫಾಸ್ಫೇಟ್, ಸಿಎಎಂಪಿ ಅಥವಾ ಸೈಕ್ಲಿಕ್ ಅಡೆನೊಸಿನ್ ಮೋನೊಫಾಸ್ಪೇಟ್) ಭಾಗವಹಿಸುತ್ತವೆ ಮತ್ತು ಪ್ರಮುಖ ಕಿಣ್ವಗಳ ಕ್ರಿಯೆಯಲ್ಲಿ ಸಹಏಜೆಂಟುಗಳಾಗಿ (ಸಹಕಿಣ್ವ ಎ, ಎಫ್ಎಡಿ, ಎಫ್ಎಮ್ಎನ್, ಎನ್ಎಡಿ ಮತ್ತು ಎನ್ಎಡಿಪಿ+) ಸೇರಿವೆ.
ಪ್ರಾಯೋಗಿಕ ಜೈವರಸಾಯನ ಶಾಸ್ತ್ರದಲ್ಲಿ ನ್ಯೂಕ್ಲಿಯೊಟೈಡ್ಗಳನ್ನು ವಿಕಿರಣಪಟ್ಟಿಯ[ಟಿಪ್ಪಣಿ 3] ವಿಕಿರಣ ನ್ಯೂಕ್ಲಿಯೊಸೈಡ್ಗಳು ಇರುವ ವಿಕಿರಣ ನ್ಯೂಕ್ಲಿಯೊಟೈಡ್ಗಳನ್ನು ಪಡೆಯಬಹುದು.