ನ್ಯೂಕ್ಲಿಯಿಕ್ ಆಮ್ಲ
From Wikipedia, the free encyclopedia
ನ್ಯೂಕ್ಲಿಯಿಕ್ ಆಮ್ಲಗಳು[ಟಿಪ್ಪಣಿ 1] ಜೈವಿಕಪಾಲಿಮರ್ಗಳು ಅಥವಾ ದೊಡ್ಡ ಜೈವಿಕಅಣುಗಳು ಮತ್ತು ಇಂದು ತಿಳಿದ ಎಲ್ಲಾ ಜೀವಿಗಳಿಗೂ ಅಗತ್ಯವಾದವು. ನ್ಯೂಕ್ಲಿಯಿಕ್ ಆಮ್ಲಗಳು ಡಿಆಕ್ಸಿರೈಬೊ ನ್ಯೂಕ್ಲಿಯಿಕ್ ಆಮ್ಲ ಅಥವಾ ಡಿಎನ್ಎ ಮತ್ತು ರೈಬೊನ್ಯೂಕ್ಲಿಯಿಕ್ ಆಮ್ಲ ಅಥವಾ ಆರ್ಎನ್ಎಗಳನ್ನು ಒಳಗೊಂಡಿದ್ದು ನ್ಯೂಕ್ಲಿಯೊಟೈಡ್ ಎಂದು ಕರೆಯಲಾದ ಮೊನೊಮರ್ಗಳಿಂದ [ಟಿಪ್ಪಣಿ 2] ತಯಾರಾಗಿವೆ. ಪ್ರತಿ ನ್ಯೂಕ್ಲಿಯೋಟೈಡ್ ಮೂರು ಭಾಗಗಳನ್ನು ಒಳಗೊಂಡಿದ್ದು ಅವು ಒಂದು ೫-ಇಂಗಾಲ ಸಕ್ಕರೆ, ಒಂದು ಪಾಸ್ಪೇಟ್ ಗುಂಪು ಮತ್ತು ಒಂದು ಸಾರಜನಕದ ಬೇಸ್ ಅಥವಾ ಪ್ರತ್ಯಾಮ್ಲ. ಸಕ್ಕರೆಯು ಡಿಆಕ್ಸಿರೈಬೊಸ್ ಆದರೆ ಪಾಲಿಮರ್ನ್ನು ಡಿಎನ್ಎ ಎಂದು ಮತ್ತು ಸಕ್ಕರೆ ರೈಬೊಸ್ ಆದರೆ ಪಾಲಿಮರ್ನ್ನು ಆರ್ಎನ್ಎ ಎಂದು ಕರೆಯಲಾಗುತ್ತದೆ. ಈ ಮೂರು ಗುಂಪುಗಳು ಜೊತೆಗೂಡಿದಾಗ ನ್ಯೂಕ್ಲಿಯೊಟೈಡ್ ಆಗುತ್ತದೆ. ನ್ಯೂಕ್ಲಿಯಿಕ್ ಆಮ್ಲ ಈ ನ್ಯೂಕ್ಲಿಯೊಟೈಡ್ಗಳ ಸರಣಿ. ನ್ಯೂಕ್ಲಿಯೊಟೈಡ್ಗಳನ್ನು ಪಾಸ್ಟೇಟ್ ನ್ಯೂಕ್ಲಿಯೊಟೈಡ್ಗಳು ಎಂದು ಸಹ ಕರೆಯಲಾಗುತ್ತದೆ.
ನ್ಯೂಕ್ಲಿಯಿಕ್ ಆಮ್ಲಗಳು ಬಹಳ ಮುಖ್ಯವಾದ ಜೈವಿಕ ಬೃಹತ್ಅಣುಗಳಲ್ಲಿ ಒಂದು ಮತ್ತು ಎಲ್ಲಾ ಜೀವವುಳ್ಳ ಪದಾರ್ಥಗಳಲ್ಲಿ ದೊಡ್ಡ ಪ್ರಮಾಣದಲ್ಲಿ ದೊರಕುತ್ತವೆ. ಅಲ್ಲಿ ಅವು ಅನುವಂಶಿಕ ಮಾಹಿತಿಯನ್ನು ಸಂಕೇತಿಸುವ, ವರ್ಗಾಯಿಸುವ ಮತ್ತು ಅಭಿವ್ಯಕ್ತಿಸುವ ಕೆಲಸ ಮಾಡುತ್ತವೆ. ಮಾಹಿತಿಯನ್ನು ಡಿಎನ್ಎ ಅಥವಾ ಆರ್ಎನ್ಎ ಅಣುಗಳಲ್ಲಿ ನ್ಯೂಕ್ಲಿಯೊಟೈಡ್ನ ಅನುಕ್ರಮದ ಮೂಲಕ ರವಾನಿಸಲಾಗುತ್ತದೆ. ನಿರ್ದಿಷ್ಟ ಕ್ರಮದಲ್ಲಿ ಜೋಡಿಸಿದ ನ್ಯೂಕ್ಲಿಯೋಟೈಡ್ನ ತಂತುಗಳು ಅನುವಂಶಿಕ ಮಾಹಿತಿಯನ್ನು ಪ್ರೋಟೀನ್ ಸಂಯೋಜನೆಯ ಮೂಲಕ ದಾಸ್ತಾನು ಮಾಡುವ ಮತ್ತು ವರ್ಗಾಯಿಸುವ ಯಂತ್ರಾಂಗ.
ನ್ಯೂಕ್ಲಿಯಿಕ್ ಆಮ್ಲವನ್ನು ಪ್ರಿಢ್ರಿಕ್ ಮೆಸ್ಕರ್ ೧೮೬೯ರಲ್ಲಿ ಕಂಡುಹಿಡಿದ.[3] ನ್ಯೂಕ್ಲಿಯಿಕ್ ಆಮ್ಲದ ಮೇಲಿನ ಅಧ್ಯಯನವು ಜೀವಶಾಸ್ತ್ರ ಮತ್ತು ವೈದ್ಯಕೀಯ ಸಂಶೋದನೆಯ ಪ್ರಮುಖ ಭಾಗ ಮತ್ತು ಜೀನೋಮ್ ವಿಜ್ಞಾನ, ಫೊರ್ಸೆನಿಕ್ ವಿಜ್ಞಾನ, ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಜಿ) ಮತ್ತು ಔಷದ ಕೈಗಾರಿಕೆಗಳಿಗೆ ಆಧಾರವಾಗಿದೆ.[4][5][6]