ಮಾಧ್ಯಮಿಕ ಶಾಲೆ From Wikipedia, the free encyclopedia
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಏಕೈಕ ಕನ್ನಡದ ಶಾಲೆ ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆ. ಇದು ರಾಷ್ಡ್ರೀಯ ಭಾಷಾ ನೀತಿ ಅನುಸರಿಸಿ ತ್ರಿಭಾಷಾ ಸೂತ್ರವನ್ನು ಕಲಿಸುವ ಉದ್ದೇಶದಿಂದ ದೆಹಲಿ ಸರಕಾರದ ಸ್ವಾಮ್ಯ ಮತ್ತು ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಸಹಯೋಗದಿಂದ ನಡೆಸಲ್ಪಡುವ ಶಾಲೆ.
ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆ | |
---|---|
Location | |
ಲೋಧಿ ಎಸ್ಟೇಟ್, ನವ ದೆಹಲಿ ನವ ದೆಹಲಿ, ಕರ್ನಾಟಕ, ಭಾರತ | |
Coordinates | 28.593097°N 77.223526°E |
Information | |
ಬಗೆ | ದೆಹಲಿ ಸರಕಾರದ ಅನುದಾನಿತ ಸಂಸ್ಥೆ |
ಧ್ಯೇಯ | ಸತ್ಯಂ ಶಿವಂ ಸುಂದರಂ |
ಸ್ಥಾಪನೆ | ೧೯೬೧ |
Principal | ಪ್ರಶಾಂತ ಕುಮಾರ್ |
Campus | ಲೋಧಿ ಎಸ್ಟೇಟ್ |
Information | 011-24633391,011-24611360, dksdelhi@rediffmail.com |
Website | http://dkes.in/ |
ಈ ಶಾಲೆಯು ೧೯೬೧ರ[1] ವಿಜಯದಶಮಿಯಂದು ೧೭ ವಿದ್ಯಾಥಿಗಳು ಮತ್ತು ನಾಲ್ವರು ಶಿಕ್ಷಕರೊಂದಿಗೆ ಪ್ರಾರಂಭವಾಯಿತು. ಅಂದಿನ ಪ್ರಮುಖರಾದ ಬಿ. ಎನ್. ದಾತರ್, ಡಿ. ಪಿ. ಕರ್ಮರ್ಕರ್, ಕೆ. ಸಿ. ರೆಡ್ಡಿ ಹಾಗೂ ಎಸ್. ನಿಜಲಿಂಗಪ್ಪ ಅವರ ಮುಂದಾಲೋಚನೆಯಲ್ಲಿ ಎಸ್. ವಿ. ಕೃಷ್ಣಮೂರ್ತಿ ರಾವ್ ಅವರು ಸ್ಥಾಪಿಸಿದರು. ಅಂದಿನ ಮೈಸೂರು ಮಹಾರಾಜರ ದೇಣಿಗೆಯಿಂದ ಹಾಗೂ ಅಭಿಮಾನಿ ಕನ್ನಡಿಗರ ಸಹಕಾರದಿಂದ ದೆಹಲಿ ಕನ್ನಡ ಶಾಲೆಗೆ ಸ್ಥಳ ದೊರಕಿಸಿ ಶಾಲಾ ಕಟ್ಟಡ ನಿರ್ಮಿಸಲಾಯಿತು.
ರಾಷ್ಟ್ರೀಯ ಭಾಷಾ ನೀತಿ ಅನುಸರಿಸಿ ತ್ರಿಭಾಷಾ[2] ನೀತಿಯನ್ನು ಕನ್ನಡೇತರರಿಗೆ ಕಲಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಇದು ದೆಹಲಿ ಕನ್ನಡಿಗರ ಸಾಮಾಜಿಕ, ಸಾಂಸ್ಕೃತಿಕ ನೆಲೆಗಟ್ಟು ಭದ್ರಪಡಿಸಲು ಸಹಕಾರಿಯಾಗಿದೆ.
ಪ್ರಸ್ತುತ ಸಂಸ್ಥೆಯ ಪ್ರಾಂಶುಪಾಲರಾಗಿ ಶ್ರೀ ಪ್ರಶಾಂತ ಕುಮಾರ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ೫೫ ಬೋಧಕ-ಬೋಧಕೇತರ ಸಿಬ್ಬಂದಿಗಳಿದ್ದಾರೆ ಮತ್ತು ಈ ಸಂಸ್ಥೆಯಲ್ಲಿ ೧೦೬೫ ವಿದ್ಯಾರ್ಥಿಗಳಿದ್ದಾರೆ. ಅಂದಾಜು ಶೇಕಡ ೨೦ರಷ್ಟು ಕನ್ನಡದ ವಿದ್ಯಾರ್ಥಿಗಳಿದ್ದಾರೆ.
ಸಂಸ್ಥೆಯಲ್ಲಿ ಒಟ್ಟು ಮೂರು ವಿಭಾಗಗಳಿವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.