From Wikipedia, the free encyclopedia
ತೆಂಗಿನಕಾಯಿ ಮರ ಪಾಮೇ/ಅರೆಕೆಸಿಯಾ ಸಸ್ಯ ಕುಟುಂಬಕ್ಕೆ ಸೇರಿದ ಮರ. ಕೊಂಬೆಗಳು ಇರುವುದಿಲ್ಲ. ಗರಿಗಳು ಹಸ್ತಾಕಾರದಲ್ಲಿರುತ್ತವೆ. ಪಾಮೇಸಸ್ಯ ಕುಟುಂಬದಲ್ಲಿ ಈ ಮರ ಕೊಕಸ್ ಜಾತಿಗೆ ಸೇರಿದ ಮರ.[1] . ಈ ಜಾತಿಯಲ್ಲಿ ಇರುವ ಒಂದೇ ಮರ ತೆಂಗಿನಮರ.ಗರಿಗಳು ಹರಿತವಾಗಿ ಹಚ್ಚ ಹಸಿರಾಗಿರುತ್ತವೆ. ಈ ಮರದ ಸಸ್ಯ ಶಾಸ್ತ್ರ ಹೆಸರು ಕೊಕಸ್ ನ್ಯುಸಿಫೆರಾ(cocos nucifera). ಮರದ ಮೇಲಿನ ಭಾಗದಲ್ಲಿ ವೃತ್ತಾಕಾರ ರೂಪದಲ್ಲಿ ಗರಿಗಳು ವ್ಯಾಪ್ತಿಸಿರುತ್ತವೆ. ತೆಂಗಿನ ಕಾಯಿಗಳು ದೊಡ್ಡದಾಗಿರುತ್ತವೆ. ಕಾಯಿಯ ಹೊರಭಾಗದಲ್ಲಿ ದಪ್ಪವಾಗಿ ಕತ್ತ/ನಾರು ಇರುತ್ತದೆ. ಕತ್ತದ ಒಳಗೆ ದಪ್ಪವಾದ, ಗಟ್ಟಿಯಾದ ಸಿಪ್ಪೆ ಇರುತ್ತದೆ. ಈ ಸಿಪ್ಪೆ ಒಳಗೆ ತಿರುಳು ಕಂಡು ಬರುತ್ತದೆ. ತಿರುಳು ಬೆಳ್ಳಗೆ ಇರುತ್ತದೆ.
ತೆಂಗಿನ ಮರ ಜನ್ಮದ ಬಗ್ಗೆ ಒಂದೇ ಅಭಿಪ್ರಾಯ ಇಲ್ಲ. ಬೇರೇ ಬೇರೇ ಅಭಿಪ್ರಾಯಗಳಿವೆ.[3][4][5]. ಕೆಲವರು ಇಂಡೋ-ಪೆಸಿಫಿಕ್ ಸಮುದ್ರ ಪ್ರಾಂತವೆಂದು ಅಭಿಪ್ರಾಯ ವ್ಯಕ್ತಪಡಿಸಿದರೆ, ಕೆಲವರು ಮೆಲನೆಸಿಯ (melanesia) ಅಥವಾ ಮಲೇಷಿಯಾ (malesia)ಆಗಿರಬಹುದು ಎಂದಿದ್ದಾರೆ .ಇನ್ನು ಬೇರೆಯವರು ಆಗ್ನೇಯ ದಿಶೆಯಲ್ಲಿದ್ದ ದಕ್ಷಿಣ ಅಮೆರಿಕಾ ಎಂದು ಭಾವಿಸಿದ್ದಾರೆ[4][5][6]. ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳಿಂದ ಶೇಖರಣೆ ಮಾಡಿದ ೩೭-೫೫ ಮಿಲಿಯನ್ ವರ್ಷದ ಪಳೆಯುಳಿಕೆ(fossil) ಆಧಾರದಿಂದ ಇದರ ಮೂಲ ಸ್ಥಾನ ಈ ಎರಡು ದೇಶಗಳು ಎಂದು ಭಾವಿಸಲಾಗಿದೆ.
ನೇರವಾಗಿ ಎತ್ತರಕ್ಕೆ ಬೆಳೆಯುವ ಮರ. ಕೊಂಬೆಗಳಿರುವುದಿಲ್ಲ, ಗರಿಗಳಿರುತ್ತವೆ. ದೇಶವಾಳಿ ಮರ ೨೫-೩೦ ಮೀ. ಎತ್ತರ ಬೆಳೆಯುತ್ತದೆ. ಎಲೆಗಳು ಹಸ್ತ ರೂಪದಲ್ಲಿರುತ್ತವೆ. ಹಸ್ತಾಕಾರ ದಲ್ಲಿ ಪತ್ರಗಳು/ಎಲೆ/ಗರಿಗಳಿರುವ ಮರ, ಗಿಡಗಳನ್ನು ಪಾಮೇಸಸ್ಯ ಕುಟುಂಬಕ್ಕೆ ಸೇರಿಸಲಾಗಿದೆ. ತೆಂಗಿನಮರದ ಜೀವನ/ಕಾಲ ೮೦-೧೦೦ ವರ್ಷಗಳು. ಮರ ಹೂವುಗಳನ್ನು ೭-೧೦ ವರ್ಷದೊಳಗೆ ಬಿಡುತ್ತದೆ. ಮರದ ಕಾಂಡದ ಮೇಲಿನ ಕಡೆ ಭಾಗದಲ್ಲಿ ಗರಿಗಳನ್ನು ಬಿಡುತ್ತದೆ. ಮೇಲಿನ ಕಡೆ ಭಾಗದಲ್ಲಿ ೩೦ ಗರಿಗಳಿರುತ್ತವೆ. ಗರಿಗಳು ದೊಡ್ಡವಾಗಿ ೧೫-೨೦ ಅಡಿಗಳ ಉದ್ದ ಇರುತ್ತವೆ. ಮರದಲ್ಲಿ ೩೦ ಗರಿಗಳಿರುತ್ತವೆ. ತಿಂಗಳಿಗೊಂದು ಹೊಸ ಗರಿಯನ್ನು ಬಿಡುತ್ತದೆ. ಗರಿಯ ಜೀವನ ಕಾಲ ೩೦ ತಿಂಗಳುಗಳು, ಆಮೇಲೆ ಮರದಿಂದ ಗರಿ ಬೀಳುತ್ತದೆ. ಒಂದು ಮರದಿಂದ ೬೦ ಕಾಯಿಗಳು ಒಂದು ವರ್ಷಕ್ಕೆ ಬರುತ್ತವೆ. ಗಂಡು ಮತ್ತು ಹೆಣ್ಣು ಹೂವುಗಳು ಒಂದೇ ಮರದಲ್ಲಿ ಒಂದೇ ಕಡೆ ಇರುತ್ತವೆ. ಹೂವುಗಳು ಜೊಂಪಾಗಿ ಬಿಡುತ್ತವೆ. ಅವನ್ನು ಹೊಂಬಾಳೆಯೆಂದು ಕರೆಯುತ್ತಾರೆ. ಒಂದು ಮರದಲ್ಲಿ ೩೦ರ ತನಕ ಹೂ ಜೊಂಪೇ/ಗೊಂಚಲು (bunch) ಇರುತ್ತವೆ. ತಿಂಗಳಿಗೊಂದು ಹೂ ಗೊಂಚಲು ಹುಟ್ಟುತ್ತದೆ. ಒಂದು ಮರದಿಂದ ಒಂದು ಸಂವತ್ಸರ ಕಾಲದಲ್ಲಿ ೩೦-೬೦ ಕಾಯಿಗಳು ಉತ್ಪತ್ತಿಯಾಗುತ್ತವೆ. ಹೆಣ್ಣು ಹೂವು ಹುಟ್ಟಿದ ಮೇಲೆ ಕಾಯಿ ಆಗುವುದಕ್ಕೆ ಒಂದು ಸಂವತ್ಸರ ಕಾಲಬೇಕು.
ತೆಂಗು 70 - 80 ವರ್ಷಗಳ ಕಾಲ ಬದುಕಿ ಫಲಕೊಡುವ ಒಂಟಿ ಕಾಂಡದ ವೃಕ್ಷ. ಮರದ ಬುಡದಲ್ಲಿ ಭದ್ರವಾದ ಬೇರುಗಳುಂಟು. ಕಾಂಡ ಕೊಂಬೆರಹಿತವಾಗಿದ್ದು ಬಿದ್ದ ಗರಿಗಳ ಗುರುತಿನಿಂದ ಕೂಡಿ ಸ್ತಂಭಾಕೃತಿಯಿಂದ 20 – 25 m. ಗೂ ಹೆಚ್ಚು ಎತ್ತರವಾಗಿ ಬೆಳೆಯುವುದು. ಮರದ ತುದಿಯಲ್ಲಿ ದಟ್ಟವಾಗಿ ಬೆಳೆದ ಬೇರೆ ಬೇರೆ ವಯಸ್ಸಿನ ಸುಮಾರು 30 - 40 ಗರಿಗಳಿರುತ್ತವೆ.
ಗಿಡದ ತುದಿಯ ಕೇಂದ್ರದಲ್ಲಿ ಸುಳಿಯಿದೆ. ಗರಿಗಳ ಉದ್ದ ಸುಮಾರು 4-6m. ಮಧ್ಯದ ದಿಂಡಿನ ಎರಡು ಕಡೆಯೂ ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿರುವ 200 ರಿಂದ 300 ಕಿರುಪತ್ರಗಳುಂಟು. ಒಂದು ಸಿಂಗಾರದಲ್ಲ (ಹೊಂಬಾಳೆಯಲ್ಲಿ) ಗಂಡು ಮತ್ತು ಹೆಣ್ಣು ಹೂಗಳಿರುತ್ತವೆ. ಪ್ರತಿ ಎಲೆಯ ಕಂಕುಳಲ್ಲೂ ಒಂದು ಸಿಂಗಾರ ಬರುವುದು. ಸಿಂಗಾರ ಉದ್ದನೆಯ ಕವಚದಿಂದ ಮುಚ್ಚಿರುವುದು. ಕವಚ ಒಡೆದು ಸಿಂಗಾರ ಅರಳಿದಾಗ ಅದರ ನಡುದಿಂಡಿನ ಎರಡು ಭಾಗದಲ್ಲೂ ಜೋಡಣೆಗೊಂಡಿರುವ ಉಪಕವಲುಗಳ ಮೇಲೆ ಹೂಗಳು ಗೋಚರವಾಗುವುವು. ತುದಿಯಲ್ಲಿ ಗಂಡು ಹೂಗಳೂ, ಬುಡದಲ್ಲಿ ಹೆಣ್ಣು ಹೂಗಳೂ ಇವೆ. ಮೊದಲು ಗಂಡು ಹೂಗಳು ಅನಂತರ ಹೆಣ್ಣು ಹೂಗಳು ಅರಳುತ್ತವೆ. ಉತ್ತಮವಾಗಿ ಕೃಷಿಮಾಡಿದ ಮರದಿಂದ 100 - 200 ಕಾಯಿಗಳು ದೊರೆಯುವುವು. ಕಾಯಿಗಳ ಬಣ್ಣ ಹಳದಿ, ಕೆಂಪು, ಕಿತ್ತಳೆ, ಕಂದು, ಹಸಿರು - ಹೀಗೆ ವೈವಿಧ್ಯಮಯ. ಕಾಯಿ ಡ್ರೂಪ್ ಮಾದರಿಯದು.
ಮರಗಳಲ್ಲಿ ಎರಡು ವಿಧಗಳಿವೆ. ಒಂದು ಎತ್ತರ/ಉದ್ದ ಪ್ರಭೇದ, ಎರಡನೆಯದು ಕುಳ್ಳ/ಗುಜ್ಜಾರಿ(dwarf)ತರಹದ್ದು. ಭಾರತ ದೇಶದಲ್ಲಿ ಬೆಳೆಸುವ ತೆಂಗಿನ ಮರಗಳಲ್ಲಿ ದೇಶವಾಳಿ ಜೊತೆಗೆ ಸಂಕರ ತಳಿ/ಮಿಶ್ರ ತಳಿ(hybrid)ಮರಗಳೂ ಇವೆ.
ಕೆಲವು ತೆಂಗಿನ ಮರಗಳು-ಕಾಯಿ ಇಳುವರಿ ಪಟ್ಟಿಕೆ[7]
ಪ್ರಭೇದ | ಕಾಯಿ/ಒಂದು ವರ್ಷ/ಒಂದು ಮರ | ಕೊಬ್ಬರಿ,ಗ್ರಾಂ/ಕಾಯಿ | ಎಣ್ಣೆ (ಟನ್ನುಗಳು/ಹೆಕ್ಟೇರಿಗೆ |
ದೇಶವಾಳಿ | ೩೦ | ೧೫೦ | ೦.೫೦ |
ಲಕ್ಷ ದೀವಿ, ಸಾಧಾರಣ | ೧೨೭ | ೧೬೯ | ೨.೪೪ |
ಕಪ್ಪಡಂ | ೯೦ | ೨೯೯ | ೩.೦೬ |
ಅಂಡಮಾನ್ ಝೈಂಟ್ | ೧೧೦ | ೧೮೧ | ೨.೨೬ |
ಎಸ್.ಎಸ್.ಗ್ರೇನ್ | ೯೭ | ೧೮೯ | ೨.೦೯ |
ಫಿಲಿಪ್ಪಿನ್ಸ್, ಸಾಧಾರಣ | ೧೧೧ | ೧೯೮ | ೨.೪೮ |
CDO XWCT | 130 | 215 | 3.18 |
WCTX ಗಂಗಬೊಣ್ಡಂ | ೮೬ | ೧೯೧ | ೧.೮೭ |
ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಒಡಿಶಾ, ಗೋವಾರಾಜ್ಯಗಳ ಕರಾವಳಿ ಪ್ರಾಂತಗಳಲ್ಲಿ ಹೆಚ್ಚಾಗಿ ಸಾಗುವಳಿ ಮಾಡುತ್ತಾರೆ. ಅಂಡಮಾನ್-ನಿಕೋಬಾರ್ ದ್ವೀಪಗಳ ಸಮುದ್ರ ತೀರ ಪ್ರಾಂತದಲ್ಲೂ ಇದೆ. ಅಸ್ಸಾಂ, ಗುಜರಾತ್, ಮಹಾರಾಷ್ಟ್ರ, ನಾಗಲ್ಯಾಂಡ್, ತ್ರಿಪುರ, ಪಶ್ಚಿಮ ಬಂಗಾಳ, ಲಕ್ಷದ್ವೀಪ, ಪಾಂಡಿಚೆರಿ ರಾಜ್ಯಗಳಲ್ಲಿಯೂ ಸಾಗುವಳಿ ನಡೆಯುತ್ತಿದೆ.
ಈ ಕೆಳಗಿನ ದೇಶಗಳಲ್ಲಿ ತೆಂಗಿನಕಾಯಿ ತೋಟಗಳನ್ನು ಹೆಚ್ಚಾಗಿ ಸಾಗುವಳಿ ಮಾಡುತಾರೆ. ೧.ಫಿಲಿಫ್ಪಿನ್ಸು, ೨.ಇಂಡೋನೇಷಿಯಾ, ೩.ಬ್ರೆಜಿಲ್, ೪.ಶ್ರೀಲಂಕ, ೫.ಥಾಯ್ ಲಾಂಡ್, ೬.ಮೆಕ್ಸಿಕೋ, ೭.ವಿಯಾಟ್ನಾಂ, ೮.ಪಾಪ್ಯೂ ನ್ಯೂಗಿನಿಯಾ, ೯.ಮಲೇಸಿಯಾ, ೧೦.ಟಾಂಜಾನಿಯಾ. ೧೧.ಆಸ್ಟ್ರೇಲಿಯಾ, ೧೨.ಬರ್ಮುಡಾ, ೧೩.ಮಾಲ್ಡೀವ್ಸ್ ನಲ್ಲಿ, ೧೪.ಪರ್ಷಿಯನ್ ಗಲ್ಫ್, ೧೫.ಅರೇಬಿ ಸಮುದ್ರ, ೧೬. ಕೆಂಪು ಸಮುದ್ರ ಕರಾವಳಿ ಪ್ರಾಂತದಲ್ಲಿಯೂ ಸಾಗುವಳಿ ಮಾಡುತ್ತಾರೆ.
ಕೀ.ಶ. 2010ರಲ್ಲಿ ತೆಂಗಿನಕಾಯಿ ಉತ್ಪತ್ತಿಯಲ್ಲಿ ಮೊದಲಿನ ಹತ್ತು ಸ್ಥಾನದಲ್ಲಿದ್ದ ದೇಶಗಳು | ||||
---|---|---|---|---|
ದೇಶ | ಉತ್ಪಾದನೆ (ಟನ್ನುಗಳು) | ಪಾದಸೂಚಿಕೆ | ||
ಫಿಲಿಫಿನ್ಸು | 19,500,000 | |||
ಇಂಡೋನೇಶಿಯಾ | 15,540,000 | |||
ಇಂಡಿಯಾ | 10,824,100 | |||
ಬ್ರೆಜಿಲ್ | 2,759,044 | |||
ಶ್ರೀಲಂಕ | 2,200,000 | F | ||
ಥಾಯ್ ಲಾಂಡ್ | 1,721,640 | F | ||
ಮೆಕ್ಸಿಕೋ | 1,246,400 | F | ||
ವಿಯಾಟ್ನಾಂ | 1,086,000 | A | ||
ಪಾಪೂನ್ಯೂ ಗಿನಿಯಾ | 677,000 | F | ||
ಮಲೇಸಿಯಾ | 555,120 | |||
ಟಾಂಜಾನಿಯಾ | 370,000 | F | ||
ಒಟ್ಟಿಗೆ | 54,716,444 | A | ||
No symbol = official figure, P = official figure, F = FAO estimate, * = Unofficial/Semi-official/mirror data, C = Calculated figure, A = Aggregate (may include official, semi-official or estimates); Source: Food And Agriculture Organization of the United Nations: |
ತೆಂಗಿನಮರವನ್ನು ಕಲ್ಪವೃಕ್ಷಎನ್ನುತಾರೆ. ಏಕೆಂದರೆ ತೆಂಗಿನಮರ ಕೊಡುವ ತೆಂಗಿನ ಕಾಯಿ, ಇದರ ಎಲೆ/ಗರಿ, ಕತ್ತ, ಕಾಂಡ ಎಲ್ಲ ಉಪಯೋಗಕಾರಿಯಾಗಿವೆ.
೧.ಎಲೆ/ಗರಿ
೨.ಮರದಕಾಂಡ
೩.ಕಾಯಿ
ಹೆಚ್ಚಿನ ವಿವರಗಳಿಗಾಗಿ ಪ್ರಧಾನ ಲೇಖನ ಕೊಬ್ಬರಿ ಎಣ್ಣೆನೋಡಿರಿ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.