ಜೋಧಾ ಅಕ್ಬರ್
From Wikipedia, the free encyclopedia
ಜೋಧಾ-ಅಕ್ಬರ್ (ಹಿಂದಿ: जोधा-अकबर, ಉರ್ದು: جودھا اکبر) ಫೆಬ್ರವರಿ 15, 2008ರಂದು ಬಿಡುಗಡೆಯಾದ ಐತಿಹಾಸಿಕ ಪ್ರೇಮ ಕಥಾನಕವುಳ್ಳ ಭಾರತದ ಮಹೋನ್ನತ ಚಿತ್ರ[4].
This article has an unclear citation style. (September 2009) |
Jodhaa Akbar | |
---|---|
ಚಿತ್ರ:Jodhaaakbar poster.jpg | |
ನಿರ್ದೇಶನ | Ashutosh Gowariker |
ನಿರ್ಮಾಪಕ | Ronnie Screwvala Ashutosh Gowariker |
ಲೇಖಕ | Haidar Ali Ashutosh Gowariker |
ಪಾತ್ರವರ್ಗ | Hrithik Roshan Aishwarya Rai-Bachchan Kulbhushan Kharbanda Sonu Sood Ila Arun |
ಸಂಗೀತ | A. R. Rahman |
ಛಾಯಾಗ್ರಹಣ | Kiran Deohans |
ಸಂಕಲನ | Ballu Saluja |
ವಿತರಕರು | UTV Motion Pictures |
ಬಿಡುಗಡೆಯಾಗಿದ್ದು | February 15, 2008 |
ಅವಧಿ | 213 minutes |
ದೇಶ | India |
ಭಾಷೆ | ಹಿಂದಿ / Urdu |
ಬಂಡವಾಳ | Rs 400,000,000 (estimated)[1] |
ಬಾಕ್ಸ್ ಆಫೀಸ್ | Rs 590,300,000 (estimated)[2] $ 26,845,090 (worldwide)[3] |
ಅಕ್ಯಾಡೆಮಿ ಪ್ರಶಸ್ತಿ(ಆಸ್ಕರ್ ಪ್ರಶಸ್ತಿ)ಗೆ ನಾಮನಿರ್ದೇಶನಗೊಂಡಿದ್ದ ಲಗಾನ್ (2001) ಚಿತ್ರದ ನಿರ್ದೇಶಕರಾದ ಭಾರತದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ ಆಶುತೋಷ್ ಗೋವಾರಿಕರ್ ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ತಾರೆಯರಾದ ಹೃತಿಕ್ ರೋಷನ್ ಮತ್ತು ಐಶ್ವರ್ಯರೈ ಬಚ್ಚನ್ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅಬೀರ್ ಅಬ್ರಾರ್ ಎಂಬ ಹೊಸಮುಖದ ಪರಿಚಯವಿದೆ. ವ್ಯಾಪಕ ಸಂಶೋಧನೆ ಮಾಡಿ ಈ ಚಿತ್ರದ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರ ಮೊದಲ ಚಿತ್ರೀಕರಣ ಆರಂಭವಾಗಿದ್ದು, ಕರ್ಜಾತ್ ನಗರದಲ್ಲಿ.[5]
ಮೊಘಲ್ ಸಾಮ್ರಾಜ್ಯದ ಮುಸ್ಲಿಂ ಮಹಾ ಚಕ್ರವರ್ತಿ ಅಕ್ಬರ್ ಮತ್ತು ಇವನ ಹಿಂದೂ ಪತ್ನಿ ಜೋಧಾಬಾಯಿ ಇವರ ನಡುವಿನ ಪ್ರಣಯದ ಸುತ್ತ ಈ ಚಿತ್ರ ಕೇಂದ್ರೀಕೃತವಾಗಿದೆ. ಇದರಲ್ಲಿ ಚಕ್ರವರ್ತಿ ಅಕ್ಬರನ ಪಾತ್ರವನ್ನು ಹೃತಿಕ್ ರೋಷನ್ ಹಾಗೂ ಜೋಧಾಬಾಯಿ ಪಾತ್ರವನ್ನು ಐಶ್ವರ್ಯರೈ ಬಚ್ಚನ್ ನಿರ್ವಹಿಸಿದ್ದಾರೆ. ಈ ಚಿತ್ರದ ಸಂಗೀತವನ್ನು ಶ್ರೇಷ್ಠ ಸಂಗೀತ ನಿರ್ದೇಶಕ A. R. ರೆಹಮಾನ್ ಸಂಯೋಜಿಸಿದ್ದಾರೆ. ಚಿತ್ರದ ಧ್ವನಿಸುರುಳಿ ಜನವರಿ 19, 2008ರಂದು ಬಿಡುಗಡೆಯಾಯಿತು.[6] ಈ ಚಿತ್ರ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಬಾಚಿಕೊಂಡಿದೆ. ಸಾವೋ ಪೌಲೋ ಅಂತರರಾಷ್ಟ್ರೀಯ ಚಿತ್ರೋತ್ಸವ[7] ದಲ್ಲಿ ಶ್ರೇಷ್ಠ ವಿದೇಶಿ ಚಿತ್ರಕ್ಕೆ ನೀಡಲಾಗುವ ಆಡಿಯನ್ಸ್ ಪ್ರಶಸ್ತಿ (=ವೀಕ್ಷಕ ಪ್ರಶಸ್ತಿ) ದೊರೆತಿದೆ; ಗೋಲ್ಡನ್ ಮಿನ್ಬಾರ್ ಅಂತರರಾಷ್ಟ್ರೀಯ ಚಿತ್ರೋತ್ಸವ[8] ದಲ್ಲಿ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ; ಏಳು ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳುಗಳು ಇದರ ಮಡಿಲಿಗೆ ಬಿದ್ದಿವೆ; ಐದು ಫಿಲ್ಮ್ಫೇರ್ ಪ್ರಶಸ್ತಿಸ್ ಇದರ ಪಾಲಾಗಿವೆ; ಇವುಗಳ ಜೊತೆಗೆ 3ನೇ ಏಷಿಯನ್ ಫಿಲ್ಮ್ ಅವಾರ್ಡ್ಸ್[9] ಗೆ ಇದು ಎರಡು ಬಾರಿ ನಾಮನಿರ್ದೇಶನಗೊಂಡಿದೆ. ದಿ ಚಾರ್ಲೋಟ್ ಅಬ್ಸರ್ವರ್ ಎಂಬ ಪತ್ರಿಕೆ 2008ರಲ್ಲಿ ವಿಶ್ವದಾದ್ಯಂತ ಬಿಡುಗಡೆ ಮಾಡಿದ ಟಾಪ್ ಟೆನ್ ಚಿತ್ರಗಳ ಪಟ್ಟಿಯಲ್ಲಿ ಜೋಧಾ ಅಕ್ಬರ್ 2ನೇ ಸ್ಥಾನದಲ್ಲಿದೆ.[10]