ಮುಸ್ಲಿಮ್
From Wikipedia, the free encyclopedia
ಮುಸ್ಲಿಮ್ ಅಥವಾ ಮುಸಲ್ಮಾನ ಅಥವಾ ಮಹಮದೀಯ (ಅರಬ್ಬಿ: المسلم - ಅಲ್-ಮುಸ್ಲಿಮ್) ಐಬ್ರಹೀಮಿಕ ಧರ್ಮಗಳಲ್ಲಿ ಒಂದಾದ ಇಸ್ಲಾಮ್ ಧರ್ಮದ ಅನುಯಾಯಿಯ ಹೆಸರು. ಮುಸ್ಲಿಮರು ಏಕೈಕ ದೇವರನ್ನು ಮಾತ್ರ ನಂಬುತ್ತಾರೆ ಮತ್ತು ಪೂಜಿಸುತ್ತಾರೆ. ಮುಹಮ್ಮದ್ರನ್ನು ಅಂತಿಮ ಪ್ರವಾದಿಯೆಂದು ಮತ್ತು ಕುರ್ಆನನ್ನು ಅಂತಿಮ ದೇವಗ್ರಂಥವೆಂದು ನಂಬುತ್ತಾರೆ.
Total population | |
---|---|
190 ಕೋಟಿ | |
Founder | |
ಮುಹಮ್ಮದ್ | |
Regions with significant populations | |
ಇಂಡೋನೇಷ್ಯಾ | 229,620,000 |
ಭಾರತ | 213,340,000 |
ಪಾಕಿಸ್ತಾನ | 200,490,000 |
ಬಾಂಗ್ಲಾದೇಶ | 153,010,000 |
ನೈಜೀರಿಯ | 104,650,000 |
ಈಜಿಪ್ಟ್ | 90,420,000 |
ಇರಾನ್ | 80,880,000 |
ಟರ್ಕಿ | 79,090,000 |
ಇರಾಕ್ | 41,430,000 |
ಅಫ್ಘಾನಿಸ್ತಾನ | 40,610,000 |
Religions | |
ಸುನ್ನಿ 75% - 90% ಶಿಯಾ 10% - 20% |
ಮುಸ್ಲಿಮರು ಜಾಗತಿಕವಾಗಿ 190 ಕೋಟಿಗಿಂತಲೂ (2020ರ ಅಂದಾಜಿನ ಪ್ರಕಾರ) ಹೆಚ್ಚು ಜನಸಂಖ್ಯೆ ಹೊಂದಿದ್ದು, ಜಗತ್ತಿನ ಒಟ್ಟು ಜನಸಂಖ್ಯೆಯ ಕಾಲು ಭಾಗವನ್ನು (25%) ಒಳಗೊಳ್ಳುತ್ತಾರೆ.[1] ಮುಸ್ಲಿಮರ ಅತಿಹೆಚ್ಚು ಜನಸಂಖ್ಯೆಯಿರುವುದು ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕದಲ್ಲಿ (93%) ಮತ್ತು ಅತಿಕಡಿಮೆ ಜನಸಂಖ್ಯೆಯಿರುವುದು ಲ್ಯಾಟಿನ್ ಅಮೆರಿಕ-ಕೆರಿಬ್ಬಿಯನ್ನಲ್ಲಿ (1% ಕ್ಕಿಂತಲೂ ಕಡಿಮೆ).[1] ದೇಶವಾರು ಲೆಕ್ಕದಲ್ಲಿ ಇಂಡೋನೇಷಿಯಾ ಮೊದಲ ಸ್ಥಾನದಲ್ಲಿದ್ದರೆ (22.9 ಕೋಟಿ), ಭಾರತವು ಎರಡನೇ ಸ್ಥಾನದಲ್ಲಿ (21.3 ಕೋಟಿ) ಮತ್ತು ಪಾಕಿಸ್ಥಾನ ಮೂರನೇ ಸ್ಥಾನದಲ್ಲಿದೆ (20 ಕೋಟಿ).[1] ಮುಸ್ಲಿಮರಲ್ಲಿ ಅನೇಕ ಪಂಗಡಗಳು ಮತ್ತು ವಿಚಾರಧಾರೆಗಳಿದ್ದು ಸುನ್ನಿ ಮತ್ತು ಶಿಯಾಗಳು ಪ್ರಮುಖ ಪಂಗಡಗಳಾಗಿದ್ದಾರೆ. ಒಟ್ಟು ಮುಸ್ಲಿಮ್ ಜನಸಂಖ್ಯೆಯಲ್ಲಿ 75-90% ಸುನ್ನಿ ಮುಸ್ಲಿಮರು ಮತ್ತು 10-20% ಶಿಯಾ ಮುಸ್ಲಿಮರಿದ್ದಾರೆ.