From Wikipedia, the free encyclopedia
ಜೇನು ಹುಳುಗಳು ಅಥವಾ ಜೇನು ನೊಣಗಳು ಅಪೀಸ್ ಕೀಟ ಗಳ ವಂಶಕ್ಕೆ ಸೇರಿದ ಪ್ರಾಥಮಿಕವಾಗಿ ಒಂದು ಜೇನು ಹುಳುವಿನ ಉಪಪಂಗಡಕ್ಕೆ ಸೇರಿದ ಕೀಟ ಪ್ರಭೇದವಾಗಿವೆ. ಇದನ್ನು ಜೇನು ಕೊಡುವ ಕೀಟದ ತಳಿಯಿಂದಾಗಿ ಬೇರೆ ಹುಳುಗಳಿಂದ ಪ್ರತ್ಯೇಕವಾಗಿ ನೋಡಬಹುದಾಗಿದೆ. ಇದು ಎಲ್ಲಾ ಋತುವಿನಲ್ಲೂ ಜೇನು ಉತ್ಪಾದನೆ ಹಾಗು ಸಂಗ್ರಹವನ್ನು ತನ್ನ ವಿಶಿಷ್ಟ ಗೂಡುಗಳಲ್ಲಿ ಮಾಡುತ್ತದೆ.ಮೇಣದ ಮೂಲಕ ವಸಾಹತುವಿನಂತಹ ವಾಸದ ಜಾಗೆ ಜೇನುಗೂಡನ್ನು ಅವು ರಚಿಸಿಕೊಳ್ಳುತ್ತವೆ. ಜೇನು ಹುಳುಗಳು ಸದ್ಯ ಪ್ರಚಲಿತ ಅಪಿನಿ ತಳಿ-ವರ್ಗಕ್ಕೆ ಸೇರಿದ ಪ್ರಕಾರಗಳಾಗಿವೆ. ಇವುಗಳ ವಂಶವಾಹಿನಿಯು ಅಪಿಸ್ ತಳಿಗಳಲ್ಲಿದೆ.ಈ ವರ್ಗಗಗಳನ್ನು ವಿಶಿಷ್ಟ ಬುಡಕಟ್ಟಿನ ಹುಳು ಎನ್ನಲಾಗಿದೆ. ಸದ್ಯ ಇವುಗಳಲ್ಲಿ ಕೇವಲ ಏಳು ಜೇನು ಹುಳುಗಳ ಕೀಟದ ಜೀವಿವರ್ಗವನ್ನು ಗುರುತಿಸಲಾಗಿದೆ. ಹಾಗೆ ನೋಡಿದರೆ ಒಟ್ಟಾರೆ ೪೪ ಉಪಜೀವಿವರ್ಗಗಳಿವೆ.[1] ಐತಿಹಾಸಿಕವಾಗಿ ಕೂಡಾ ಕೇವಲ ಆರರಿಂದ ಹನ್ನೊಂದು ತಳಿವರ್ಗಗಳನ್ನು ಗುರುತಿಸಲಾಗಿದೆ. ಜೇನು ಜಾತಿಯ ಕೀಟಗಳ ಸುಮಾರು 20,000 ಪ್ರವರ್ಗಗಳಲ್ಲಿ ಈ ಜೇನು ಹುಳುಗಳು ಸಣ್ಣ ಮಟ್ಟದ ಪಾಲನ್ನು ಪಡೆದಿವೆ. ಹಲವಾರು ಇದಕ್ಕೆ ಸಂಬಂಧಿಸಿದ ಕೀಟ ಜಾತಿಗಳು ಜೇನನ್ನು ಸಂಗ್ರಹಿಸಿದರೂ ಸಹ ನಿಜವಾದ ಜೇನಿನ ಜಾತಿಗೆ ಸೇರದ ಅಥವಾ ಅದು ನೈಜ ಜೇನುತುಪ್ಪವಲ್ಲ.ಆದ್ದರಿಂದ ಅಪಿಸ್ ವರ್ಗದ ಜೇನುಹುಳುಗಳು ಮಾತ್ರ ಜೇನನ್ನು ನೀಡುತ್ತವೆ.
ಜೇನುಹುಳುಗಳು ತಮ್ಮ ಸಮೂಹದ ಹುಟ್ಟಿನ ಮೂಲ ಕೇಂದ್ರವನ್ನು ದಕ್ಷಿಣ ಮತ್ತು ಆಗ್ನೇಯ ಏಶಿಯಾದಲ್ಲಿ ಹೊಂದಿವೆ.(ಇದರಲ್ಲಿ ಫಿಲಿಪೈನ್ಸ್ ಯೂ ಒಳಗೊಂಡಿದೆ.)ಆದರೆ ಈ ಪ್ರದೇಶದಲ್ಲಿ ಒಂದೇ ಒಂದು ಪ್ರಚಲಿತ ಪ್ರವರ್ಗ ಮಾತ್ರ ತನ್ನ ಹುಟ್ಟು ಪಡೆದಿದೆ ಎನ್ನಲಾಗಿದೆ.ಈ ತಳಿಗಳಲ್ಲಿ ಹೆಚ್ಚು ಪ್ರಸಕ್ತವಾಗಿರುವವುಗಳೆಂದರೆ ಪ್ಲೆಸಿವೊಮೊರ್ಫ್ ಜಾತಿ ಕೀಟಗಳಿವೆ,(ಅಪಿಸ್ ಫ್ಲೊರಿಯಾ (ಜಾತಿ) ಮತ್ತು ಒಂದು ಆಂಡ್ರಿನಿಫೊರ್ಮಿಸ್ ಕೂಡಾ ವಿಚಿತ್ರ ಹುಳುವಾಗಿದೆ.[2] ಮೊದಲ ಜಾತಿಯ ಹುಳುಗಳು ಅಪಿಸ್ ಜೇನುಗಳು ಯುರೊಪಿಯನ್ ದಿಬ್ಬಗಳಲ್ಲಿ ದೊರೆತ ೫೦ ದಶಲಕ್ಷವರ್ಷಗಳ ಹಿಂದಿನ -ಸುಮಾರು ೪೦ ದಶಲಕ್ಷ ವರ್ಷಗಳ ಹಿಂದಿನ ಬೆಕ್ಕಿನ ಪಳೆಯುಳಿಕೆ ದಾಖಲೆಗಳಲ್ಲಿ ಉಲ್ಲೇಖಿಸಲಾಗಿವೆ.
ಆದರೆ ಈ ಇತಿಹಾಸ ಪೂರ್ವದ ಯುರೊಪ್ ನಲ್ಲಿಯೇ ತಮ್ಮ ಮೂಲವನ್ನು ಕಂಡುಕೊಂಡವು ಎನ್ನುವುದು ಕೂಡ ಸಮಂಜಸವಲ್ಲ.ಇದೇ ಅವುಗಳ ಹುಟ್ಟಿನ ಕೇಂದ್ರಸ್ಥಾನವಲ್ಲ ಆದರೆ ಆ ವೇಳೆಗೆ ಅವು ಅಲ್ಲಿ ಅಸ್ತಿತ್ವ ಪಡೆದವು ಎನ್ನಬಹುದು. ಈ ಪಳೆಯುಳಿಕೆಗಳ ಗುಂಪಿನಲ್ಲಿ ದೊರೆತ ಅನುಮಾನಾಸ್ಪದ ಜೇನುಕೀಟಗಳ ಬಗೆಗಲ್ಲದೇ ಇನ್ನೂ ಹಲವು ಅಲ್ಲಿ ದೊರೆಯಬೇಕಿದೆ. ಅವುಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳು ಆಗಬೇಕಿದೆ. ಅದರಲ್ಲಿ ಕೇವಲ ಒಂದೇ ಒಂದು ಪಳೆಯುಳಿಕೆಯನ್ನು ಹೊಸ ವಿಶ್ವದಿಂದ ದಾಖಲಿಸಲಾಗಿದೆ. ಅದನ್ನೇ ಅಪಿಸ್ ನಿಯಕ್ಟಾಟಿಕಾ ಎಂದು ಹೇಳಲಾಗಿದೆ. ಇದು ೧೪ ದಶಲಕ್ಷ ವರ್ಷಗಳ ಹಳೆಯದಾದ ನೆವೆಡಾ ಮಾದರಿಯನ್ನು ಹೋಲುವ ಕೀಟವಾಗಿದೆ.[3]
ಆಧುನಿಕ ಜೇನುಹುಳುಗಳ ಜಾತಿಗೆ ಸಂಬಂಧಿಸಿದ-ಉದಾಹರಣೆಗೆ ದಟ್ಟ ರೋಮಗಳುಳ್ಳ ಕೀಟಗಳು ಮತ್ತು ಕಚ್ಚುವ ಕೊಂಡಿರಹಿತ ಜೇನು ಹುಳುಗಳು-ಕೂಡಾ ಕೆಲ ಪ್ರಮಾಣದಲ್ಲಿ ಸಾಮಾಜಿಕವಾಗಿ ಉಪಯುಕ್ತವಾಗಿವೆ. ಇವುಗಳ ಪ್ಲೆಸಿಯೊಮೊರ್ಫಿಕ್ ಗುಣಲಕ್ಷಣವು ವಿಶಿಷ್ಟ ಮೂಲದ ಅಂಶವನ್ನು ತೋರುತ್ತದೆ. ಹೆಚ್ಚಿನ ಪ್ರಮಾಣದ ಹುಳುಗಳು ಅಪಿಸ್ ಪಂಗಡಕ್ಕೇ ಸೇರಿವೆ.ಅವುಗಳ ಮೂಲದ ಕೀಟ ಜಾತಿಗಳು ಸಾಮಾನ್ಯವಾಗಿ ಒಂಟಿಯಾಗಿರುತ್ತವೆ, ಹೊರಭಾಗಕ್ಕೆ ತಮ್ಮ ಜೇನುಹುಟ್ಟನ್ನು ಗೋಚರಿಸುವಂತೆ ಮಾಡುತ್ತಿವೆ. ಇತ್ತೀಚಿಗೆ ಬೆಳಕಿಗೆ ಬಂದ ಹುಳುಗಳಲ್ಲಿ ಅವು ಸಂದು-ಗೊಂದುಗಳಲ್ಲಿ ತಮ್ಮ ಜೇನು ಹುಟ್ಟುಗಳ ಮಾಡಿ ಗೂಡನ್ನು ನಿರ್ಮಿಸಿರುತ್ತವೆ, ಇವುಗಳು ತಮ್ಮ ಗೂಡುಗಳನ್ನು ಗಟ್ಟಿ ವಾಸದ ನೆಲೆಯಾಗಿಸಿರುತ್ತವೆ.
ಐತಿಹಾಸಿಕವಾಗಿ ನಡೆದು ಬಂದದೆಂದರೆ ಬಹಳಷ್ಟು ಹುಳುಗಳನ್ನು ಸಾಕಿ ಸಂಸ್ಕರಿಸಿ ಅಥವಾ ಅವುಗಳ ಜೇನುತುಪ್ಪ ಅಥವಾ ಜೇನುಮೇಣಕ್ಕಾಗಿ ಸ್ಥಳೀಯ ಜನರು, ಒಂದು ತೆರನಾದ ಶೋಷಣೆ ಮಾಡುತ್ತಿರುವುದು ಸಹಜವಾಗಿದೆ. ಈ ಸಾಕಣೆ ಜಾತಿಯಲ್ಲಿ ಎರಡು ಮಾತ್ರ ಜನವಸತಿ ಅಥವಾ ಮನೆಗಳ ಪರಿಸರದಲ್ಲಿ ಸಾಕಲಾಗುತ್ತದೆ. ಅದರಲ್ಲಿ ಒಂದು (ಅಪಿಸ್ ಮೆಲ್ಲಿಫೆರಾ ) ಕೊನೆಯ ಪಕ್ಷ ಇದನ್ನು ಈಜಿಪ್ತಿಯನ್ನರು ಪಿರಾಮಿಡ್ ಗಳ ಕಟ್ಟಡಗಳ ನಿರ್ಮಿಸುವ ಕಾಲದಿಂದ ಈ ಸಾಕಾಣಿಗೆ ಅಥವಾ ಕಲ್ಚರಿಂಗ್ ಕಾಣಬಹುದಾಗಿದೆ.
ಇಂದು ಜೇನುಹುಳುಗಳು ಮೂರು ತರಹದ ಮೂಲಗಳಿಂದ ಬಂದಿರುವುದನ್ನು ಅದರ ಕೀಟ ವರ್ಗ ತೋರಿಸುತ್ತದೆ.[1][4]
ಅಪಿಸ್ ಫ್ಲೊರಿಯಾ ಮತ್ತು ಅಪಿಸ್ ಅಂಡ್ರೆನಿಫಾರ್ಮಿಸ್ ಜಾತಿಗಳು ದಕ್ಷಿಣ ಮತ್ತು ಆಗ್ನೇಯ ಏಶಿಯಾದಲ್ಲಿ ದೊರೆಯುವ ಸಣ್ಣ ಗಾತ್ರದ ಜೇನುಹುಳುಗಳಾಗಿವೆ. ಅವು ಗಿಡಕಂಟಿಗಳಲ್ಲಿ ಮತ್ತು ಪೊದೆಗಳಲ್ಲಿ ಗೋಚರಿಸುವ ಸಣ್ಣ ಜೇನುಹುಟ್ಟನ್ನು ನಿರ್ಮಿಸುತ್ತವೆ. ಅವುಗಳ ಕೊಂಡಿಗಳು ಮಾನವನ ಚರ್ಮವನ್ನು ಭೇದಿಸಿಕೊಂಡು ಹೋಗುವಷ್ಟು ಸಮರ್ಥವಾಗಿರುವುದಿಲ್ಲ. ಹೀಗಾಗಿ ಅವುಗಳ ಗೂಡು ಮತ್ತು ಹಿಂಡುಗಳನ್ನು ಸಣ್ಣದೊಂದು ರಕ್ಷಣೆಯೊಂದಿಗೆ ಹಿಡಿದಿಡಬಹುದು. ಅವುಗಳ ವಾಸಸ್ಥಾನವು ಸಹಜವಾಗಿ ವಿಶಾಲವಾಗಿ ಪಸರಿಸಿ ಅದು ಎಲ್ಲೆಡೆಯೂ ತುಂಬಿದೆ ಎಂದು ಭಾಸವಾಗುತ್ತದೆ.
ಅವುಗಳು ಶೀಘ್ರ ಬದಲಾವಣೆಗೊಳ್ಳುವ ಸ್ವಭಾವ ಹೊಂದಿದ್ದರಿಂದ ಅವುಗಳನ್ನು ತಕ್ಷಣದಲ್ಲೇ ಗುರುತಿಸಬಹುದು.ಇದಕ್ಕೆ ಕಾರಣವೆಂದರೆ ಸಂಚಿತವಾಗಿ ಹಂಚಿರುವ ಜೀವಿವರ್ಗ ಎನ್ನಲಾಗಿದೆ. ಆದರೆ ಎ.ಫ್ಲೊರಿಯಾ ಜಾತಿ ಕೀಟವು ಎಲ್ಲೆಡೆಯೂ ಹಬ್ಬಿದೆ ಮತ್ತು ಹಂಚಿಕೆಯಾಗಿವೆ.ಅಲ್ಲದೇ ಎ.ಅಂಡ್ರಿನಿಫಾರ್ಮಿಸ್ ಕೀಟವು ತೀವ್ರ ಚಟುವಟಿಕೆ ತೋರುತ್ತದೆ-ಆದರೂ ಕೂಡಾ ಸಾಮಾನ್ಯವಾಗಿ ಮೊದಲನೆಯದರಿಂದಲೇ ಮಾತ್ರ ಜೇನನ್ನು ಪಡೆಯಲಾಗುತ್ತದೆ. ಅವುಗಳು ಪ್ರಚಲಿತ ಜೇನುಹುಳುಗಳ ಅತ್ಯಂತ ಪುರಾತನ ವಂಶಾವಳಿ ಎನಿಸಿವೆ. ಅಂದರೆ ಬಾರ್ಟೊನಿಯನ್ ಕಾಲದ (ಸುಮಾರು 40 mya ದಶಲಕ್ಷ ವರ್ಷಗಳ ಹಿಂದೆ ಅಥವಾ ನಂತರದ ಅವಧಿ) ಇನ್ನುಳಿದ ವಂಶದ ತಳಿಗಳಂತೆ ಅದು ಹೊಸತಳಿ ಉತ್ಪನ್ನದ ಕಾಲದಲ್ಲಿ ಇತ್ತೆಂದು ಹೇಳಲಾಗುವುದಿಲ್ಲ.[4]
ಉಪವರ್ಗದ ಜಾತಿ ಹುಳುಗಳಲ್ಲಿ ಮೆಗಾಪಿಸ್ ಎಂದು ಕರೆಯಲಾಗುವ ತಳಿಯೊಂದಿದೆ. ಇದು ಸಾಮಾನ್ಯವಾಗಿ ಏಕೈಕ ಅಥವಾ ಕೆಲವು ಗೋಚರಿಸುವ ಹುಟ್ಟುಗಳನ್ನು ಗಿಡದ ದೊಡ್ಡ ಟೊಂಗೆಗಳು,ನೀರಿನದಂಡೆಗಳು ನದಿ ತೀರಗಳು, ಅಲ್ಲದೇ ಕೆಲವೆಡೆಗಳಲ್ಲಿ ಕಟ್ಟಡಗಳ ಮೇಲ್ತುದಿಯಲ್ಲೂ ಗೂಡು ನಿರ್ಮಿಸುತ್ತವೆ. ಅವು ಸಾಮಾನ್ಯವಾಗಿ ಪ್ರಚಂಡ ಉಗ್ರ ಸ್ವಭಾವದ್ದಾಗಿರುತ್ತವೆ. ಸಾಮಾನ್ಯವಾಗಿ ಮಾನವರು ಅದರ ಜೇನನ್ನು ದರೋಡೆ ಮಾಡಿ ಪಡೆಯುತ್ತಾರೆ.ಇಂತಹ "ಹನಿ ಹಂಟರ್ಸ್ "ಜೇನು ಬೇಟೆಗಾರರು ತಮ್ಮನ್ನು ಸತಾಯಿಸಿದಾಗ,ಹಿಂಸಿಸಿದಾಗ ಅವು ಘೋರ ರೀತಿಯಲ್ಲಿ ವಿಷ ಕೊಂಡಿಯಿಂದ ಕಚ್ಚಿ ಮರಣಾಂತಿಕವಾಗಿ ಪೆಟ್ಟು ನೀಡಬಹುದು.
ಇವು ೩ ಅಥವಾ ೪ ಪ್ರಭೇದಗಳು ಕೆಂಪು ವರ್ಣದ ಕೊಸ್ಚೆನ್ವಿಕೊವ್ ದ ಜೇನುಹುಳು ಅಪಿಸ್ ಕೊಸ್ಚೆನ್ವಿಕೊವ್ ತಳಿಯು ಬೊರ್ನಿಯೊ ದ್ವೀಪ ಪ್ರದೇಶದಿಂದ ಗುರುತಿಸಲಾಗಿದೆ.ಗವಿಗಳಲ್ಲಿ ತನ್ನ ಗೂಡನ್ನು-ಕಟ್ಟುವ ಪರಿಪಾಠವನ್ನು ಅದು ಬೆಳೆಸಿಕೊಂಡಿದೆ. ಅಪಿಸ್ ಸೆರೆನಾ ತಳಿಯು ಪೂರ್ವಾತ್ಯದ ಮೂಲವಾಗಿದ್ದು, ಇದು ದಕ್ಷಿಣ ಮತ್ತು ಪೂರ್ವ ಏಶಿಯಾದ ಸಾಂಪ್ರದಾಯಿಕ ಮೂಲದ್ದಾಗಿದೆ. ಇದನ್ನು ಅಪಿಸ್ ಮೆಲ್ಲಿಫೆರಾ ದಂತೆಯೇ ಗೂಡುಗಳಲ್ಲಿ ಸಾಕಲಾಗುತ್ತದೆ, ಇದು ಸಣ್ಣ ಗಾತ್ರದ್ದಾದರೂ ಸ್ಥಳೀಯ ಪ್ರದೇಶಕ್ಕೆ ಹೊಂದಿಕೊಳ್ಳುವಂತಿದೆ. ಇದರ ಸಂಬಂಧವು ಫಿಲಿಫೈನ್ಸ್ ಮೂಲದ ಬೊರಿಯನ್ ಅಪಿಸ್ ಸೆರೆನಾ ನುಲುಎನ್ಸಿಸ್ ಮತ್ತು ಅಪಿಸ್ ನೈಗ್ರೊಸಿಂಕ್ಟಾ ಗೆ ಹೋಲಿಸಬಹುದೇ ಎಂಬುದನ್ನು ನೋಡಬೇಕಾಗಿದೆ. ಅದರ ತಳಿ ಹೋಲಿಕೆಯ ತೃಪ್ತಿಗೆ ಇನ್ನಷ್ಟು ಅಧ್ಯಯನಗಳ ಅಗತ್ಯವಿದೆ.ಆದರೆ ಇತ್ತೀಚಿನ ತೀಕ್ಷ್ಣ ಅಭ್ಯಾಸಗಳು ಇದರ ಪರೀಕ್ಷೆಯನ್ನು ಎ.ಸೆರೆನಾ ಅದೇ ಪ್ಯಾರಾಫಿಲೆಟಿಕ್ (ಸಣ್ಣ ಗಾತ್ರದ ಹುಳು)ಜಾತಿಗೆ ಸೇರಿದೆ ಎಂದೂ ಹೇಳಲಾಗಿದೆ.[4]
ಅಪಿಸ್ ಮೆಲ್ಲೆಫೆರಾ ಅತ್ಯಂತ ಸಾಮಾನ್ಯವದ ಸಾಕಣೆ ಮಾಡುವ ಗೃಹಕೈಗಾರಿಕೆಯ ಗುರುತಾಗಿದೆ. ಇದು ಇಂತಹದ್ದೇ ವಂಶದ ವಾಹಿನಿಯ ಮೂರನೆಯ ವರ್ಗಕ್ಕೆ ಸೇರಿದೆ. ಇದು ಪೂರ್ವ ಆಫ್ರಿಕಾದ ಉಷ್ಣಪ್ರದೇಶದ ಮೂಲದಲ್ಲಿದ್ದು ಅಲ್ಲಿಂದ ನಾರ್ದರ್ನ್ ಯುರೊಪ್ ವರೆಗೂ ಹರಡಿದೆ.ಪೂರ್ವದಲ್ಲಿ ಏಶಿಯಾ ಮತ್ತು ಟಿಯನ್ ಶಾನ್ ಶ್ರೇಣಿಗಳ ವರೆಗೆ ಹಬ್ಬಿದೆ, ಇದನ್ನು ವಿಭಿನ್ನವಾಗಿ ಯುರೊಪಿಯನ್ ,ಪಾಶ್ಚ್ಯಾತ್ಯ ಅಥವಾ ಸಾಮಾನ್ಯ ಜೇನು ಹುಳು ಎಂದೂ ಹೇಳಲಾಗುತ್ತದೆ. ಜಗತ್ತಿನ ವಿವಿಧ ಭಾಗದಲ್ಲಿ ಅದು ನೈಸರ್ಗಿಕ ಜೇನುಹುಳುವಾಗಿ ಗುರುತಿಸಲ್ಪಡುತ್ತದೆ.
ಹಲವಾರು ಉಪಜೀವಿವರ್ಗಗಳ ಕೀಟಗಳನ್ನು ಆಯಾ ಸ್ಥಳೀಯ ಭೌಗೋಳಿಕ ಮತ್ತು ಹವಾಮಾನದ ಪರಿಸರಕ್ಕೆ ತಕ್ಕಂತೆ ಪಳಗಿಸಲಾಗುತ್ತದೆ. ಅದಲ್ಲದೇ ಹೈಬ್ರೀಡ್ ತಳಿಗಳಾದ ಬಕ್ ಫಾಸ್ಟ್ ಬೀ ಎಂದು ಬೆಳೆಸಲಾಗುತ್ತದೆ. ಸ್ವಭಾವ,ನಡವಳಿಕೆ,ಬಣ್ಣ ಮತ್ತು ಶರೀರ ರಚನೆಯು ಒಂದು ವರ್ಗದಿಂದ ಇನ್ನೊಂದಕ್ಕೆ ವಿಭಿನ್ನವಾಗಿರುತ್ತದೆ.ಅದೂ ಒಂದಕೊಂದು ನಿಕಟವಾಗಿದ್ದರೂ ಈ ವ್ಯತ್ಯಾಸ ಇದ್ದೇ ಇರುತ್ತದೆ. ಫಿಲೊಜೆನಿ ಎಂಬ ಜಾತಿಯ ಜೇನುಹುಳವು ಇನ್ನುಳಿದ ಜಾತಿಗಳಿಗಿಂತ ಬಹಳಷ್ಟು ನಿಗೂಢತೆಯುಳ್ಳ ಕೀಟವಾಗಿದೆ.
ಅದು ಬಹುಶಃ ಪೌರಾತ್ಯದ ಸಂಬಂಧಿಗಳಿಂದ ಹಿಂದಿನ ಮೈಸಿನ್ ಕಾಲಾಂನಂತರದಲ್ಲಿ ಚದುರಿ ಬಂದಿರಬಹುದೆನ್ನಲಾಗಿದೆ. ಇದರ ಬದುಕಿನ ಚಕ್ರದ ಕಲ್ಪನೆ ಪ್ರಕಾರ ಪುರಾತನ ಕಾಲದಲ್ಲಿ ಗವಿ-ಗುಹೆಗಳಲ್ಲಿ ತಮ್ಮ ಗೂಡನ್ನು ಕಟ್ಟುತ್ತಿದ್ದವು. ಇವು ಪಾಶ್ಚಿಮಾತ್ಯ ಗುಂಪಿನ ಇ ಆಫ್ರಿಕಾ ಮತ್ತು ಪೂರ್ವ ಗುಂಪಿನ ಏಷಿಯಾದಲ್ಲಿ ಕಂಡು ಬಂದವು. ಮಧ್ಯಪೂರ್ವದ ಉಷ್ಣ ಪ್ರದೇಶದಲ್ಲಿನ ಮರುಭೂಮಿಕರಣದ ನಂತರ ಇವುಗಳ ತಳಿಜಾತಿಗಳು ಕಾಲಾನುಕ್ರಮವಾಗಿ ತಮ್ಮ ತಳಿ ಅಭಿವೃದ್ಧಿಯನ್ನು ನಿಲ್ಲಿಸಿದವೆಂದು ಊಹಿಸಲಾಗುತ್ತಿದೆ.
ಈ ಉಪವರ್ಗದ ಕೀಟಗಳ ಜಾತಿಯು ಬಹುಶಃ (ಹೆಚ್ಚಾಗಿ)ಆರಂಭಿಕ ಪ್ಲೆಸ್ಟೊಸೆನೆ ದ ವಿದ್ಯುತ್ಕಾಂತೀಯ ಅಲೆಗಳಂತೆ ಪ್ರಸರಣ ಪಡೆದವು.ಕಳೆದ ಹಿಮಯುಗದ ವಾತಾವರಣ ಮತ್ತು ನೆಲೆವಾಸದ ಬದಲಾವಣೆಗೆ ಒಳಗಾದ ಇದು ನಂತರ ತನ್ನ ಪ್ರಸರಣ ಹೆಚ್ಚು ಮಾಡಿಕೊಂಡಿತು. ಪಾಶ್ಚಿಮಾತ್ಯ ಜೇನುಹುಳುವನ್ನು ಹಲವಾರು ಸಹಸ್ರಮಾನಗಳಿಂದ ಮಾನವರು ನಿರಂತರವಾಗಿ ಬೆಳೆಸುತ್ತಾ ಬಂದಿದ್ದಾರೆ. ಇದರ ಹುಟ್ಟು ಬೆಳವಣಿಗೆಗೆ ಮತ್ತು ಪ್ರವರ್ಧಮಾನತೆ ಹಾಗು ಅದರ DNA ವಂಶೀಯ ಅಭಿವೃದ್ಧಿ ಪಡೆದುಕೊಂಡಿತು. ಇದನ್ನು ಸಂಶೋಧನೆಗೆ ಒಳಪಡಿಸಿದಾಗ ಇವೆಲ್ಲಾ ಎ.ಮೆಲ್ಲೆಫೆರಾ ಉಪವರ್ಗಕ್ಕೆ ಸೇರಿದವಗಳಾಗಿವೆ.[4]
ದಿ ಅಮೆರಿಕಾಸ್ ಮೂಲಕ್ಕೆ ಸೇರಿದ ಯಾವುದೇ ಜೇನುಹುಳದ ಜಾತಿ ಇಲ್ಲ. ಆಗ೧೬೨೨ ರಲ್ಲಿ ಯುರೊಪಿಯನ್ ಕಾಲೊನಿಗಳು ಕಪ್ಪು ಕೀಟ ಎ.ಎಂ.ಮೆಲ್ಲೆಫೆರಾ ವನ್ನು ದಿ ಅಮೆರಿಕಾಸ್ ಗೆ ತಂದರೆ ನಂತರ ಎ.ಎಂ ಲಿಗುಸ್ಟಿಕಾ ಜಾತಿಯ ಇಟಾಲಿಯನ್ ಕೀಟವನ್ನು ತರಲಾಯಿತು. ಜೇನುಹುಳಗಳ ಮೂಲಕ ಪರಾಗಸ್ಪರ್ಶ ಪಡೆಯುವ ಹಲವರು ಸಸ್ಯ ಪ್ರಭೇದಗಳನ್ನು ಆಮದು ಮಾಡಿಕೊಂಡು ಅದನ್ನು ವಸಾಹತು ಶಾಹಿ ಕಾಲದಲ್ಲಿ ಅಭಿವೃದ್ಧಿಪಡಿಸಲಾಯಿತು.
ಅಲ್ಲಿಂದ ಪರಾರಿಯಾದ ಕೀಟಗಳು (ಅವುಗಳನ್ನು "ವನ್ಯ"ಮೂಲದ ಜೇನುಹುಳುಗಳು,ಅಥವಾ ನಿಜಾರ್ಥದಲ್ಲಿ ಪಳಗದ ಜೇನುಹುಳು ಎನ್ನಬಹುದು.)ಇವು ಗ್ರೇಟ್ ಪ್ಲೇನ್ಸ್ ಅಂದರೆ ಬೃಹತ್ ಪ್ರಸ್ಥಭೂಮಿಗಳಲ್ಲಿ,ಕಾಲೊನಿಗಳಲ್ಲಿ ವ್ಯಾಪಕವಾಗಿ ಬೆಳೆದವು. ಜೇನುಹುಳುಗಳು ತಾವೇ ತಾವಾಗಿ ನೈಸರ್ಗಿಕವಾಗಿ ರಾಕಿ ಮೌಂಟೇನ್ಸ್ ನ್ನು ದಾಟಿ ಹೋಗಲಾರವು.ಆದರೆ ಅವುಗಳನ್ನು ಹಡಗಿನ ಮೂಲಕ 1850 ರಲ್ಲಿ ಕ್ಯಾಲಿಫೊರ್ನಿಯಾಕ್ಕೆ ತರಲಾಯಿತು.
ಇವುಗಳನ್ನು ವನ್ಯಜೀವಿ ವರ್ಗದ "ಕಿಲ್ಲರ್ ಬೀ" ಅಂದರೆ ಮಾರಣಾಂತಿಕ ಕೀಟಗಳೆಂದೇ ಕರೆಯಲಾಗುತ್ತದೆ. ಯುರೊಪಿಯನ್ ಸ್ಟಾಕ್ ಮತ್ತು ಆಫ್ರಿಕಾದ ಒಂದು ಉಪವರ್ಗದ ಕೀಟವಾಗಿರುವ ಎ.ಎಂ. ಸ್ಕುಟೆಲ್ಲಾಟ ಜಾತಿಗೆ ಸೇರುತ್ತವೆ. ಇವು ಯುರೊಪಿಯನ್ ಜೇನುಹುಳುಗಳಿಗಿಂತ ಹೆಚ್ಚು ಚಟುವಟಿಕೆಯುಳ್ಳ ಜೇನು ಹುಳುಗಳಾಗಿವೆ. ಇವುಗಳಿಗೆ ಉತ್ತಮ ರೋಗ ನಿರೋಧಕ ಶಕ್ತಿ ಇದೆ.ಆದರೆ ಯುರೊಪಿಯನ್ ಜೇನುಹುಳುಗಳಂತೆ ಅಧಿಕ ಇಳುವರಿಗೆ ಪೂರಕವಾಗಿಲ್ಲ ಎನ್ನಲಾಗುತ್ತದೆ. ಬ್ರೆಜಿಲ್ ನಲ್ಲಿ ಆಕಸ್ಮಿಕವೆನ್ನುವಂತೆ ಅವು ತಮ್ಮ ಮೂಲ ಕಂಡುಕೊಂಡಿವೆ.
ಅದರ ಮೂಲದಿಂದಲೇ ಉತ್ತರ ಅಮೆರಿಕಾಕ್ಕೆ ಹರಡಿ ಕೆಲವು ಪ್ರದೇಶಗಳಲ್ಲಿ ಪಿಡುಗು ಕೀಟಗಳೆಂದೇ ಹೆಸರಾಗಿವೆ. ಇವುಗಳು ಒಟ್ಟೊಟ್ಟಿಗೆ ಇದ್ದರೂ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಸಿಗುವುದಿಲ್ಲ.ಉತ್ತರ ಅಮೆರಿಕಾದ ಅತ್ಯಧಿಕ ಚಳಿ ಪ್ರದೇಶದಲ್ಲಿ ಇವುಗಳ ಬದುಕು ವಿರಳವಾಗಿದೆ. ಆಫ್ರಿಕಾದ ಹೈಬ್ರೀಡ್ ತಳಿಗಳನ್ನು ಬ್ರೆಜಿಲ್ ಗೆ ತರಲಾಯಿತು.ಇದೇ ಸ್ಥಳಗಳಲ್ಲಿ ಅವುಗಳನ್ನು ಅಭಿವೃದ್ಧಿಪಡಿಸಲಾಯಿತು.(ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿಲ್ಲ):ಹೈಬ್ರೀಡ್ ತಳಿಗಳನ್ನು ಒಟ್ಟು ಸೇರಿಸಿ ಬಿಗಿಗೊಳಿಸಿದ ಒಂದು ತೆರನಾದ ತಳಿಯನ್ನು ಆಫ್ರಿಕನ್ ತಳಿಗಳಂತೆ ಬೆಳೆಸಲಾಯಿತು.ಇವು ಮುಂದೆ ಉತ್ತಮ ಬೆಳವಣಿಗೆ ಮತ್ತು ಆದಾಯಕ್ಕೆ ಕಾರಣವಾದವು.
ಜೇನುಹುಳುಗಳ ಎರಡು ತಳಿಗಳು,ಎ.ಮೆಲ್ಲೆಫೆರಾ ಮತ್ತು ಎ.ಸೆರೆನಾ ಜಾತಿಯ ಜೇನುಹುಳುಗಳನ್ನು ಸಾಮಾನ್ಯವಾಗಿ ಬೆಳೆಸಿ ಅರೈಕೆಯೊಂದಿಗೆ ಸಾಕಾಣಿಕೆಗೆ ಬೇರೆ ಬೇರೆ ಕಡೆ ಸಾಗಿಸಲಾಗುತ್ತದೆ. ಆಧುನಿಕ ಜೇನುಹುಳುಗಳ ಗೂಡುಗಳನ್ನು ಕೃತಕವಾಗಿ ತಯಾರಿಸಲಾಗುತ್ತದೆ. ಆಹಾರ ಬೆಳೆಗಳ ಪರಾಗಸ್ಪರ್ಶ ಗಳಿಗಾಗಿ ಅವುಗಳನ್ನು ಒಂದು ಕೃಷಿ ಭೂಮಿಯಿಂದ ಇನ್ನೊಂದೆಡೆಗೆ ಕೊಂಡೊಯ್ಯಲಾಗುತ್ತದೆ. ಸ್ವತಂತ್ರ ಜೇನುಹುಳು ಸಾಕಾಣಿಕೆದಾರರಿಗೆ ಇದೊಂದು ಉತ್ತಮ ಆದಾಯ ತರುವ ಸ್ವಯಂ ಉದ್ಯೋಗವೆನಿಸಿದೆ. ಇದರಿಂದಾಗಿ ದೊಡ್ಡ -ಪ್ರಮಾಣದಲ್ಲಿ ಜೇನುಹುಳುಗಳ ಸಾಕುವವರು ವಾಣಿಜ್ಯೀಕರಣ ಮಾಡುತ್ತಾರೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಈ ಜೇನುಹುಳು ಸಾಕಣೆಗಾರರು ಬರಬರುತ್ತಾ ತಮ್ಮ ಜೇನುಹುಳುಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದನ್ನು ಹಲವು ವರ್ಷಗಳ ಬಳಿಕ ಮನಗಂಡರು,ಹೊಂದಿಕೆಯಾಗದ ಪ್ರೊಟೀನ್ ಬೆಳವಣಿಗೆ ಮತ್ತು ಕೃಷಿ ಪದ್ದತಿಯಲ್ಲಿನ ಬದಲಾದ ವ್ಯವಸ್ಥೆಗಳು ಮತ್ತು ಹವಾಮಾನದ ವೈಪರಿತ್ಯ ಗಳು ಇವುಗಳ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾದವು. ಆದರೆ ಆರಂಭಿಕ 2007 ರಲ್ಲಿ ದೊಡ್ಡ ಪ್ರಮಾಣದಲ್ಲಿ ಅತಿರೇಕವೆನ್ನುವಷ್ಟು ಜೇನುಹುಟ್ಟುಗಳ ಕಣ್ಮರೆ ಕಾಣಿಸಿತು.(30-70% ರಷ್ಟು ಜೇನುಹುಟ್ಟುಗಳ ವಿನಾಶ)ಇದು ಯುರೊಪಿಯನ್ ಜೇನುಹುಳುಗಳ ನೆಲೆವಾಸಗಳಲ್ಲಿ ಸಾಮಾನ್ಯವಾಗತೊಡಗಿತು.
U.S. ಮತ್ತು ಕ್ವೆಬೆಕ್ ನಲ್ಲಿ ಇವುಗಳ ಕಣ್ಮರೆ ಕಾಣಿಸಿತು;ಆದರೆ ಇಂತಹ ಕಣ್ಮರೆಯು ಇತಿಹಾಸದಲ್ಲೇ ಊಹಿಸಲಾಗದಷ್ಟು ಸಂಭವಿಸಿತು. ಇದನ್ನು "ಕಾಲೊನಿ ಕೊಲ್ಯಾಪ್ಸ್ಡ್ ಡಿಸ್ ಆರ್ಡರ್ " (CCD)ಎಂದು ಕರೆಯಲಾಯಿತು.ಆದರೆ ಯಾತಕ್ಕಾಗಿ ಹೀಗಾಯಿತು ಎಂಬುದು ಇನ್ನೂ ಸರಿಯಾಗಿ ಪತ್ತೆಯಾಗಿಲ್ಲ. ಯಾಕೆಂದರೆ ಇದು 2006 ರಲ್ಲಿನ ಸಂಭವನೀಯ ವಾತಾವರಣ ವೈಪರಿತ್ಯವೇ ಅಥವಾ ಸಾಮಾನ್ಯವಾಗಿ ಅದರ ಇಳಿಮುಖದ ನೈಸರ್ಗಿಕ ಪರಿಣಾಮವೇ ಅಥವಾ ಹೊಸ ತೆರನಾದ ಪರಿಸ್ಥಿತಿಯೋ ಎನ್ನಬಹುದು.
ಆದರೆ ಇದುವರೆಗಿನ ಸಂಶೋಧನೆಗಳು ಇದರ ನಿಖರ ಕಾರಣ ಪತ್ತೆಗೆ ವಿಫಲವಾಗಿವೆ.ಈ CCD ಯು ಒಂದು ಸಹಜ ಲಕ್ಷಣವೇ ಎಂಬ ಬಗ್ಗೆ ವಿವಾದವೂ ಇದೆ.ಆದರಿಂದ ಈ ತೆರನಾದ ಜೇನು ಹುಟ್ಟುಗಳ ಕಣ್ಮರೆಯು ರೋಗವಲ್ಲ.ಆದರೆ ವಿವಿಧ ತಳಿಗಳ ಒಟ್ಟು ಸೇರುವುದು ಇದಕ್ಕೆ ಕಾರಣವೇ ಎನ್ನುವುದನ್ನು ತಿಳಿಯ ಬೇಕಾಗಿದೆ.ರೋಗಕಾರಕವೆನ್ನುವ ಸಣ್ಣ ಅಂಶವೂ ಕಾರಣ.ಇಲ್ಲವೆ ವಿಷಕಾರಿ ಅಥವಾ ಇತ್ತೀಚೆಗೆ ಕಾಣಿಸಿದ ಅತಿ ಮಹತ್ವದೆನ್ನಲಾದ ಇಸ್ರೇಲ್ ತೀವ್ರತರ ವಿಕಲತೆಗೆ ಕಾರಣವಾಗುವ ವೈರಸ್ ಎಂಬುದು ತಿಳಿದಿದೆ.[6]
ಇತ್ತೀಚಿನ ಸಂಶೋಧನೆ (2009)ರಲ್ಲಿ ಕಂಡುಕೊಂಡುಕೊಂಡದ್ದೇನೆಂದರೆ CCD ಸ್ಥಿತಿಗೆ ಒಳಗಾದ ಈ ಜೇನುಹುಳುಗಳಲ್ಲಿ ಅದರ ಪ್ರೊಟೀನ್ ಉತ್ಪಾದನೆಯ ಇಳಿಮುಖವೇ ಕಾರಣವೆನ್ನಲಾಗಿದೆ.ಈ ಸ್ಥಿತಿಗೆ ಡಿಸಿಸ್ಟ್ರೊವೆರೈಡ್ಜೆ ಅಂದರೆ IAPVರೋಗಕಾರಕ ದೌರ್ಬಲ್ಯ ಎಂದೂ ಊಹಿಸಲಾಗಿದೆ.ಹೀಗೆ ಜೇನುಹುಳುಗಳಲ್ಲಿನ ಜೀವಕೋಶ ದ್ರವಗಳು ಅಂಗಾಂಶಗಳಲ್ಲಿ ಪ್ರೊಟೀನ್ ಉತ್ಪಾದನೆಗೆ ಕಾರಣವೆನ್ನಲಾಗಿದೆ.[7][8] ೦೦
ಇನ್ನು ಕೆಲವು ಇವೊಸೊಸಿಯಲ್ ಜೇನುಹುಳುಗಳಲ್ಲಿನ ವಾಸಸ್ಥಾನದಲ್ಲಿ ಸಾಮಾನ್ಯವಾಗಿ ರಾಣಿ ಜೇನುಹುಳು,ಇದೊಂದು ಫಲಕಾರಿ ಕೀಟ;ಋತುಮಾನಕ್ಕನುಗುಣವಾಗಿ ಕೆಲವು ಸಾವಿರ ಸೋಮಾರಿ ಜೇನುಹುಳುಗಳು ಅಥವಾ ಫಲಕಾರಿ ಗಂಡು ಹುಳುಗಳು[9] ಇರುತ್ತವೆ. ಅದಲ್ಲದೇ ದೊಡ್ಡ ಪ್ರಮಾಣದ ದುಡಿಮೆಯ ಜೇನುಹುಳುಗಳ ಸಮೂಹ ಹೆಣ್ಣುಹುಳುಗಳದ್ದು ನಿರಂತರವಾಗಿರುತ್ತದೆ. ಆದರೆ ವಿಭಿನ್ನ ತಳಿಗಳಲ್ಲಿ ವಿವಿಧ ಅಂಶಗಳು ಸಾಮಾನ್ಯವಾಗಿವೆ. ಈ ಜೇನುಹುಳುಗಳ ಲಕ್ಷಣಗಳು:
ಮೇಣದ ಕೋಶವೊಂದರಲ್ಲಿ ಏಕರೀತಿಯಾದ ಮೊಟ್ಟೆಗಳನ್ನು ಜೇನುಹುಟ್ಟಿನಲ್ಲಿ ಶೇಖರಿಸುತ್ತವೆ. ಇದನ್ನು ಉತ್ಪಾದಿಸಿ ಆಕಾರ ನೀಡುವವೆಂದರೆ ಕೆಲಸಗಾರ ಹುಳುಗಳು. ಹೆಣ್ಣು ಜೇನುಹುಳು ತನ್ನ ವಂಶವಾಹಿನಿಯ ಸ್ಪೆರ್ಮಾಥಿಕಾ ಅಂಶಗಳನ್ನು ಬಳಸಿ ತನಗೆ ಬೇಕಾದ ಗಂಡನ್ನು ಆಯ್ಕೆ ಮಾಡಿಕೊಳ್ಳುತ್ತದೆ.ಅದು ಯಾವ ಕೋಶದ ಮೇಲೆ ಮೊಟ್ಟೆ ಇಡಬೇಕೆಂಬುದನ್ನು ನಿರ್ಧರಿಸುತ್ತವೆ.ಗಂಡು ಹುಳುಗಳು ಫಲಿತವಲ್ಲದ ಮೊಟ್ಟೆಗಳಿಂದ ಹೊರಬರುತ್ತವೆ.ಇವು ಅಗಣಿತ ಕ್ರೋಮೊಸೊಮ್ ಗಳಿರುವ ಜಾತಿಗಳಾಗಿವೆ.
ಆದರೆ ಹೆಣ್ಣು (ರಾಣಿಗಳು ಮತ್ತು ದುಡಿಮೆಗಾರ ಹುಳುಗಳು)ಇವು ಫಲಿತಗೊಳ್ಳುವ ಮೊಟ್ಟೆಯಿಂದ ಹುಟ್ಟಿ ಬಂದು ಕ್ರೋಮೊಸೊಮ್ ಗಳ ಸಣ್ಣ ಸಂಖ್ಯೆಯ ಭಾಗ ತೋರುತ್ತದೆ. ಮರಿ ಲಾರ್ವಾ ಹಂತದಲ್ಲಿ ಗಟ್ಟಿಯಾದ ಲೋಳೆ ಪದಾರ್ಥವನ್ನು ಆಹಾರವಾಗಿ ಪಡೆಯುತ್ತವೆ. ಇದನ್ನು ದುಡಿಮೆಗಾರ ಜೇನುಹುಳುಗಳಿಂದ ಪಡೆಯುತ್ತವೆ. ನಂತರ ಇವುಗಳು ಜೇನು ಮತ್ತು ಪರಾಗ ಧೂಳಿಯ ಮೇಲೆ ಬದುಕುತ್ತದೆ. ಕೇವಲ ಜೆಲ್ಲಿ ಆಹಾರವಾಗಿ ಸೇವಿಸಿದ ಈ ಭ್ರೂಣದಂತಹ ಮರಿಯು ಮುಂದೆ ರಾಣಿ ಜೇನುಹುಳುವಾಗಿ ಬೆಳೆಯುತ್ತದೆ.
ಈ ಲಾರ್ವಾವು ಹಲವಾರು ರೂಪಾಂತರ ಪಡೆಯುವ ಮುಂಚೆ ಈ ಪೊರೆಹುಳು ನ ಕೆಲಸವಾದ ಒಂದು ರೇಷ್ಮೆ ಗೂಡನ್ನು ತನ್ನ ಕೋಶದಲ್ಲಿ ಹೆಣೆದುಕೊಳ್ಳುತ್ತದೆ. ಯುವ ದುಡಿಮೆಗಾರ ಜೇನುಹುಳುಗಳು ಗೂಡನ್ನು ಸ್ವಚ್ಛಗೊಳಿಸುವ ಕೆಲಸವನ್ನಲ್ಲದೇ ಲಾರ್ವಾಗಳಿಗೆ ಆಹಾರ ನೀಡುತ್ತವೆ. ಯಾವಾಗ ಘನರೂಪದ ಜೆಲ್ಲಿ ಅಥವಾ ಲೋಳೆಯು ಗ್ರಂಥಿಗಳನ್ನು ಉತ್ಪತ್ತಿ ಮಾಡುತ್ತದೆಯೋ ಆಗ ಅವು ಸಣ್ಣ ಕಣಗಳ ಕೋಶಗಳನ್ನು ನಿರ್ಮಿಸುತ್ತವೆ. ಅವುಗಳು ಬೆಳೆದಂತೆ ಮತ್ತು ವಯಸ್ಸಾದಂತೆ ಪರಾಗ ದ್ರವವನ್ನು ಅನ್ವೇಷಕ ಹುಳುಗಳಿಂದ ಸ್ವೀಕರಿಸಿ ಸಂಗ್ರಹಿಸುವುದು ಮತ್ತು ಗೂಡನ್ನು ಕಾಯುವ ಕೆಲಸ ಮಾಡುತ್ತವೆ.
ನಂತರವೂ ಈ ದುಡಿಮೆಗಾರ ಹುಳು ತನ್ನ ಮೊದಲ ಕೆಲಸವನ್ನು ಸ್ವಯಂ ಸ್ಪೂರ್ತಿಯಿಂದ ಮಾಡುವುದಲ್ಲದೇ ಕೊನೆಯಲ್ಲಿ ಗೂಡು ಬಿಟ್ಟು ಹೋದರೂ ತನ್ನ ಅನ್ವೇಷಕ ವೃತ್ತಿಯನ್ನು ತೊರೆಯುವುದಿಲ್ಲ. ಈ ದುಡಿಮೆಗಾರ ಜೇನುಹುಳುಗಳು ಬೇಕಾದ ಆಹಾರ ಪೂರೈಕೆ ಮಾಡುವುದಲ್ಲದೇ ಒಂದು ವಿಚಿತ್ರ "ನೃತ್ಯ" ಮಾಡುತ್ತವೆ. (ಇದನ್ನು ಜೇನುಹುಳುದ ನೃತ್ಯ ಎನ್ನಲಾಗುತ್ತದೆ .ಇದು ತನ್ನ ಹಿಂಭಾಗದ ಶರೀರ ಅಲ್ಲಾಡಿಸುತ್ತದೆ.) ಒಂದು ಹುಳದೊಂದಿಗೆ ಆಹಾರ ಕಣಜ ಎಲ್ಲಿದೆ ಎಂದು ಸಂಕೇತಿಸಲು, ಸಂಪನ್ಮೂಲದ ಮಾಹಿತಿ ತಿಳಿಸಲು ಈ ನಡವಳಿಕೆ ಸಹಕಾರಿ.
ಆದರೆ ಅಪಿಸ್ ತಳಿಯ ಎಲ್ಲಾ ಹುಳುಗಳು ಒಂದಿಲ್ಲೊಂದು ನಡವಳಿಕೆಯನ್ನು ತೋರಿಸಿಯೇ ತೋರುತ್ತವೆ. ಈಗಿರುವ ಜೇನುಗೂಡಿಗೆ ಈ ಆಹಾರ ಸಂಪನ್ಮೂಲಗಳು ಹತ್ತಿರದಲ್ಲಿದ್ದರೆ ಅವುಗಳು ಬೇರೆಯೇ ರೀತಿಯ ನೃತ್ಯ ಪ್ರದರ್ಶಿಸುತ್ತವೆ.ಅದನ್ನು ಸಾಮಾನ್ಯವಾಗಿ "ರೌಂಡ್ ಡಾನ್ಸ್ "ಅಥವಾ ಪ್ರದಕ್ಷಿಣೆ ರೂಪದಲ್ಲಿ ಕುಣಿಯುವ ನಡವಳಿಕೆ ಎನ್ನುತ್ತಾರೆ. ಈ ಜೇನು ಹುಳುಗಳು ದೇಹ ಕಂಪಿಸುವ ನೃತ್ಯಗಳನ್ನು ಪ್ರದರ್ಶಿಸುತ್ತವೆ.ಅನ್ವೇಷಕ ಹುಳುಗಳು ಹೂಪರಾಗವನ್ನು ತಂದಾಗ ಅವು ಈ ನಡವಳಿಕೆಯೊಂದಿಗೆ ಸ್ವೀಕರಿಸುತ್ತವೆ.
ರಾಣಿ ಹುಳುಗಳು ತಮ್ಮ ವಾಸಸ್ಥಾನದಿಂದ ಹೊರಗಡೆ ಹಾರಿ ಹೋಗಿ ಸೋಮಾರಿ ಗಂಡು ಹುಳುಗಳೊಂದಿಗೆ ಸಮಾಗಮ ಮಾಡಿ ಮತ್ತೆ ಸ್ವಸ್ಥಾನಕ್ಕೆ ಮರಳುತ್ತವೆ. ಸಮಾಗಮ ಹೊಂದಿದ ನಂತರ ಈ ಸೋಮಾರಿ ಗಂಡು ಹುಳುಗಳು ಕೊನೆಗೆ ಮರಣವನ್ನಪ್ಪುವವು. ಈ ಜೇನುಹುಟ್ಟು-ಗೂಡುಗಳು ಏಕಾಂಗಿ ತಿರುಗುವ ರಾಣಿ ಹುಳಗಳಿಂದ ನಿರ್ಮಾಣವಾಗಲಾರವು. ಆದರೆ ಇನ್ನುಳಿದ ಜೇನುಹುಳುಗಳ ಹಿಂಡುಗಳಿಂದ ಅಂದರೆ ಸಮಾಗಮ ಹೊಂದಿದ ಹೆಣ್ಣು ಹುಳುಗಳಿಂದ ಮತ್ತು ದೊಡ್ಡ ಪ್ರಮಾಣದ ದುಡಿಯುವ ಜೇನುಹುಳುಗಳ ಮೂಲಕ ಹೈವ್ ರಚಿತವಾಗುತ್ತದೆ.
ಈ ಇಡೀ ಗುಂಪು ಬೃಹತ್ ಪ್ರಮಾಣ ದಲ್ಲಿ, ದುಡಿಮೆಗಾರ ಹುಳುಗಳು ಪತ್ತೆ ಹಚ್ಚಿದ ಜೇನುಹುಳುಗಳ ವಾಸಸ್ಥಾನಕ್ಕೆ ವರ್ಗಾವಣೆಗೊಳುತ್ತವೆ. ಹೊಸ ವಾಸಸ್ಥಾನಕ್ಕೆ ಬಂದ ಕ್ಷಣದಲ್ಲಿಯೇ ಅವು ಹೊಸ ಮೇಣದಿಂದ ಜೇನುಹುಟ್ಟನ್ನು ಕಟ್ಟಿಕೊಂಡು ಕೆಲಸದಲ್ಲಿ ತೊಡಗುವ ದುಡಿಮೆಯ ಹಿಂಡಿನೊಂದಿಗೆ ಕಾರ್ಯಪ್ರವೃತ್ತ ವಾಗುತ್ತವೆ. ಈ ತೆರನಾದ ಜೇನುಹುಟ್ಟು ನಿರ್ಮಾಣವು ಇನ್ನಿತರ ಯಾವುದೇ ಜೇನುತಳಿಗಳಲ್ಲಿ ಕಂಡು ಬರುವುದಿಲ್ಲ. ಎಷ್ಟೇ ದೊಡ್ಡ ಪ್ರಮಾಣದಲ್ಲಿ ದುಡಿಯುವ ಮೇಣ ನಿರ್ಮಿಸುವ ಜೇನುಹುಳುಗಳ ಹಿಂಡು ಇದ್ದರೂ ಇಂತಹ ಹುಟ್ಟು ನಿರ್ಮಾಣ ಸಾಧ್ಯವಿಲ್ಲ.(ಇದು ಬಹುಸಂಖ್ಯಾತ ರಾಣಿ ಹುಳುಗಳಿದ್ದರೂ ಇದು ಸಾಧ್ಯವಾಗದು)
ಅದಲ್ಲದೇ, ಕೊಂಡಿ ರಹಿತ ಜೇನುಹುಳುಗಳು ಹೊಸ ಜೇನುಹುಟ್ಟನ್ನು ಹೊಸ ಕೆಲಸಗಾರ ದುಡಿಮೆ ಹುಳುಗಳಿಂದ ಜೇನುಹುಟ್ಟು ನಿರ್ಮಾಣದಲ್ಲಿ ತೊಡುಗುತ್ತವೆ.ರಾಣಿ ಹುಳು ತನ್ನ ರಕ್ಷಣಾ ಪಡೆಯೊಂದಿಗೆ ಇಲ್ಲಿ ಆಗಮಿಸುವ ಮುಂಚೆಯೇ ಈ ನಿಜವಾಗಿಯೂ "ಹಿಂಡು" ಎಂದು ಕರೆಯಲಾಗದ ಈ ಪಡೆ ಅಲ್ಲಿಂದ ಜಾಗ ಖಾಲಿ ಮಾಡುತ್ತದೆ. ಜೇನುಹುಳುಗಳು ಆಕರ್ಷಣೆಯ ಕಾಂತತ್ವದ ಸ್ಥಾನವನ್ನು ಪತ್ತೆ ಹಚ್ಚಿ ಅಲ್ಲಿಗೆ ಕೂಡಲೇ ರವಾನೆಯಾಗುತ್ತವೆ.
ಅಪಿಸ್ ತಳಿಯ ವಿವಿಧ ಜೇನುಹುಳುಗಳು ಸಾಮಾನ್ಯವಾಗಿ ಪುಷ್ಪಭೇಟಿಗಾರರಾಗಿರುತ್ತವೆ,ದೊಡ್ಡ ಪ್ರಮಾಣದ ಸಸ್ಯಸಂಕುಲವನ್ನು ಪರಾಗಸ್ಪರ್ಶದ ಮೂಲಕ ಅದರ ತಳಿ-ಸಂಕುಲದ ಅಭಿವೃದ್ಧಿಗೆ ನೆರವಾಗುತ್ತವೆ.ಎಲ್ಲಾ ಸಸ್ಯಗಳಲ್ಲದಿದ್ದರೂ ಬಹುತೇಕ ಹೂಸ್ಪರ್ಶದಿಂದ ತಮ್ಮ ಕೆಲಸ ಮಾಡುತ್ತವೆ. ಉಳಿದೆಲ್ಲ ಜೇನುಹುಳುವಿನ ತಳಿಗಳಿಗಿಂತ ಅಪಿಸ್ ಮೆಲ್ಲಿಫೆರಾ ವರ್ಗವನ್ನು ಮಾತ್ರ ವಾಣಿಜ್ಯಕವಾದ ಬೆಳೆಗಳ ಮತ್ತು ಇನ್ನಿತರ ಸಸ್ಯಗಳ ಪರಾಗಸ್ಪರ್ಶಕ್ಕೆ ಬಳಸಲಾಗುತ್ತದೆ ಇಂತಹ ಪರಾಗಸ್ಪರ್ಶದ ಮೌಲ್ಯವು ಸಾಮಾನ್ಯವಾಗಿ ಬಿಲಿಯನ್ ಡಾಲರಗಳಾಗುವ ಸಾಧ್ಯತೆ ಇರುತ್ತದೆ.
ಈ ಜೇನುತುಪ್ಪ ಎನ್ನುವುದು ಒಂದು ಸಂಕೀರ್ಣ ವಸ್ತು ಎನಿಸಿದೆ. ಪುಷ್ಪಪರಾಗ ಹಾಗು ಗಿಡಗಳಲ್ಲಿನ ಸಿಹಿ ರಾಸಾಯನಿಕವನ್ನು ತಂದು ಸಂಗ್ರಹಿಸಿಡುತ್ತವೆ. ಇದನ್ನು ನಂತರ ವಾಸಸ್ಥಾನದಲ್ಲಿರುವ ಹುಳುಗಳಿಗೆ ಆಹಾರವನ್ನಾಗಿ ಬಳಸಲು ಮೇಣದಲ್ಲಿ ಶೇಖರಿಸಿಡುತ್ತವೆ. ಬದುಕಿರುವ ಅಪಿಸ್ ತಳಿಯ ಎಲ್ಲಾ ಜೇನುಹುಳು ಗಳ ಸಂಗ್ರಹಿತ ಜೇನುತುಪ್ಪವನ್ನು ಸ್ಥಳೀಯರು ತಿನ್ನಲು ಹಾಗು ವಾಣಿಜ್ಯೋದ್ದೇಶಕ್ಕಾಗಿ ಬಳಸುತ್ತಾರೆ.ಅಪಿಸ್ ಮೆಲ್ಲಿಫೆರಾ ಮತ್ತು ಅಪಿಸ್ ಸೆರೆನಾ ವರ್ಗಗಳ ಹುಳುಗಳು ಮಾತ್ರ ಜೇನು ಸಂಗ್ರಹಿಸುತ್ತವೆ. ಹಲವಾರು ಕೊಂಡಿರಹಿತ ಜೇನುಹುಳುಗಳ ಜೇನುಹುಟ್ಟಿನಿಂದ ಜೇನುತುಪ್ಪವನ್ನು ಸಂಗ್ರಹಿಸಲಾಗುತ್ತದೆ.
ಕೆಲಸಗಾರ ದುಡಿಮೆಯ ಹುಳುಗಳು ತಮ್ಮ ಉದರಗಳ ಕೆಳಭಾಗದಲ್ಲಿನ ಗ್ರಂಥಿಗಳಿಂದ bbಜೇನುಮೇಣವನ್ನು ಒಸರುತ್ತವೆ. ಅವುಗಳು ಮೇಣವನ್ನು ಗೋಡೆ ಮತ್ತು ಜೇನುಹುಟ್ಟಿನ ಮೇಲ್ಭಾಗದ ನಿರ್ಮಾಣಕ್ಕೆ ಬಳಸಲಾಗುತ್ತದೆ. ಜೇನುತುಪ್ಪದೊಂದಿಗೆ ಜೇನುಮೇಣವನ್ನೂ ಸಹ ತೆಗೆದು ಜೊತೆಯಲ್ಲಿ ವಿವಿಧ ಉದ್ದೇಶ ಗಳಿಗಾಗಿ ಬಳಸಲಾಗುತ್ತದೆ.
ಜೇನುಹುಳುಗಳು ಪರಾಗ ಚೀಲದಲ್ಲಿ ಈ ಪುಷ್ಪಧೂಳಿ ಸಂಗ್ರಹಿಸಿ ತಮ್ಮ ಗೂಡುಗಳಿಗೆ ಕೊಂಡೊಯುತ್ತವೆ. ಜೇನುಹುಟ್ಟುಗಳಲ್ಲಿರುವ ಪುಟ್ಟ ಮರಿಗಳಿಗೆ ಈ ಪುಷ್ಪಧೂಳಿಯನ್ನು ಪ್ರೊಟೀನ್ ಮೂಲವಾಗಿ ಬಳಸಲಾಗುತ್ತದೆ. ಕೆಲವೊಂದು ವಾತಾವಾರಣದ ಕಾರಣದಿಂದ ಹೆಚ್ಚಿನ ಪ್ರಮಾಣದ ಪರಾಗವನ್ನು ಸಂಗ್ರಹಿಸಿಡಬೇಕಾಗುತ್ತದೆ. ಇದು ಎ.ಮೆಲ್ಲಿಫೆರಾ ಮತ್ತು ಎ.ಸೆರೆನಾ ಜೇನುಹುಟ್ಟುಗಳಿಂದಲೂ ಸಂಗ್ರಹಿಸಲಾಗುತ್ತದೆ ಇದನ್ನು ಸಾಮಾನ್ಯವಾಗಿ ಆರೋಗ್ಯದ ಪೂರಕ ಆಹಾರವಾಗಿ ಅವು ಸೇವಿಸುತ್ತವೆ.
ಈ ಜೇನಿನಂಟು (ಅಥವಾ ಜೇನುಹುಳದ ಅಂಟುಅಂಟಾದ ಲೋಳೆ ಗೋಂದು)ಇದನ್ನು ಗಿಡದ ತೊಗಟೆಗಳು, ಮುಲಾಮಿನಂತಹ ಕೃತಕ ಪದಾರ್ಥಗಳು ಮತ್ತು ಮರದ ಗೋಂದುಗಳಿಂದ ತಯಾರಾಗಿರುತ್ತದೆ. ಈ ಜೇನುಹುಳುಗಳು ಹುಟ್ಟಿನಲ್ಲಿನ ಗೋಡೆಯಲ್ಲಿರುವ ಕುಳಿಗಳಿಗಳಲ್ಲಿನ ತೂತುಗಳ ಗಟ್ಟಿಗೊಳಿಸಲು ಇದನ್ನು ಅಂಟಿಸುತ್ತವೆ. ಸಣ್ಣ ಗಿಡ್ಡ ತಳಿಯ ಜೇನುಹುಳುಗಳು ತಮ್ಮ ಗೂಡುಗಳಿಗೆ ಇರುವೆ ಮತ್ತು ಇನ್ನಿತರ ಕೀಟಗಳ ಪ್ರವೇಶ ತಡೆಯಲು ಈ ಜೇನಂಟನ್ನು ತಮ್ಮ ಸುತ್ತಲೂ ಪಸರಿಸುತ್ತವೆ. ಈ ಜೇನಂಟನ್ನು ಮಾನವರು ಹಲವಾರು ಕಾರಣಗಳಿಗಾಗಿ ಮತ್ತು ಆರೋಗ್ಯದ ಸಮಸ್ಯೆಗಳಿಗಾಗಿ ಸೇವಿಸುತ್ತಾರೆ.ಇದನ್ನು ಕೆಲವು ಪ್ರಸಾಧನ ಗಳಲ್ಲೂ ಬಳಸಲಾಗುತ್ತದೆ.
ಜೇನು ವಾಸಸ್ಥಾನದಲ್ಲಿ ಬೇರಾವುದೇ ಕೀಟಗಳು ಅಕ್ರಮ ಪ್ರವೇಶ ಪಡೆಯದಂತೆ ಕೆಲಸಗಾರ ಹುಳುಗಳು ತಮ್ಮ ಕೊಂಡಿಗಳಿಂದ ಕಚ್ಚುತ್ತವೆ. ಇದಲ್ಲದೇ ಫೆರೊಮೊನೆ ಎಂಬ ರಾಸಾಯನಿಕವನ್ನು ತಮ್ಮ ದೇಹದಿಂದ ವಿಸರ್ಜಿಸುವ ಮೂಲಕ ಉಳಿದ ಹುಳುಗಳಿಗೆ ದಾಳಿಗೆ ಸಿದ್ದವಾಗುವಂತೆ ಎಚ್ಚರಿಸಿ ರಕ್ಷಣಾ ಸೂತ್ರ ಹೆಣೆಯುತ್ತವೆ. ಜೇನುಹುಳುಗಳ ವಿವಿಧ ಜಾತಿಗಳಲ್ಲಿ ಅವುಗಳ ಪ್ರಭೇಧಗಳನ್ನು ಗುರುತಿಸಬಹುದಾಗಿದೆ. (ಉದಾಹರಣೆಗೆ ಎಲ್ಲಾ ರೆಕ್ಕೆ-ಕೇಶಯುಳ್ಳ ಹುಳುಗಳು)ಸಣ್ಣಕೊಕ್ಕೆಯೊಂದನ್ನು ತಮ್ಮ ಕೊಂಡಿಭಾಗದಲ್ಲಿ ಹೊಂದಿರುತ್ತವೆ.
ಈ ಸಣ್ಣ ಕೊಕ್ಕೆಗಳು ಕೇವಲ ದುಡಿಯುವ ಕೆಲಸಗಾರ ಹುಳುಗಳಿಗೆ ಮಾತ್ರ ಇರುತ್ತವೆ. ಈ ಬಾಲದಂತಹ ಕೊಂಡಿಯು ಸಾಕಷ್ಟು ವಿಷದ ಭಾಗವುಳ್ಳದ್ದಾಗಿರುತ್ತದೆ.ಅದಕ್ಕೆ ತನ್ನ ಹೋರಾಟ ಮೀರಿದರೆ ತನ್ನ ಕಚ್ಚಿದ ಅಂಗವನ್ನು ಕಳಚಿ ಸ್ವಛೇದನ ಮಾಡಿ ಅಲ್ಲಿಂದ ನಿರ್ಗಮಿಸುತ್ತದೆ.ಹೀಗೆ ತನ್ನ ಅಂಗ ಹೋದರೂ ತನ್ನ ವಿಷದ ಪ್ರಮಾಣವನ್ನು ಅದು ಹಾಗೆಯೇ ಉಳಿಸಿಕೊಂಡು ತನ್ನ ಸ್ನಾಯುಗಳು ಮತ್ತು ನರಗ್ರಂಥಿಗಳ ಮೂಲಕ ಬಿಟ್ಟುಹೋದ ಭಾಗಕ್ಕೆ ಮರುಜೀವ ಕೊಡುತ್ತದೆ. ಆದರೆ ಕೆಲಸಗಾರ ಜೇನುಹುಳುವು ತನ್ನ ದೇಹದಿಂದ ಕೊಂಡಿ ಕಳಚಿದ ಅನಂತರ ಸಾಮಾನ್ಯವಾಗಿ ಸಾವನ್ನಪ್ಪುತ್ತದೆ.
ಈ ಕಳಚುವಿಕೆಯು ಒಂದು ಸಂಕೀರ್ಣ ಕಾರ್ಯವೆನಿಸಿದೆ.ಕಚ್ಚುವ ಕೊಂಡಿಯ ಕೊಕ್ಕೆಯು ಅದರ ಬೆನ್ನುಮೂಳೆಗೆ ಅಂಟಿಕೊಂಡಿದ್ದು ಅದರ ಕೊಕ್ಕೆಯು ಇಂತಹ ಸಂದರ್ಭದಲ್ಲಿ ಕಾರ್ಯೋನ್ಮುಖವಾಗುತ್ತದೆ.(ಆಗ ಕೊಂಡಿಯ ಕಶೇರುಕ ಭಾಗವು ಕಳಚಿಕೊಳ್ಳುವುದಿಲ್ಲ)ಈ ಕೊಂಡಿಯು ಅದರ ಮಾಂಸದ ಭಾಗದಲ್ಲಿ ಹುದುಗಿದ್ದರೆ ಮಾತ್ರ ಕೊಕ್ಕೆಯು ಹೊರಬರುವ ಸಾಧ್ಯತೆ ಇದೆ. ಇದರ ಕೊಂಡಿಯ ಕೊಕ್ಕೆಯು ಎದುರಾಳಿಯ ತಲೆಭಾಗದ ಸ್ನಾಯುಗಳಲ್ಲಿ ಜೋರಾಗಿ ಚುಚ್ಚಲ್ಪಡುತ್ತದೆ.(ಇದು ಬಹುತೇಕ ರಾಣಿ ಜೇನುಹುಳುಗಳ ನಡುವಿನ ಕಾದಾಟದಲ್ಲೂ ಬಳಸುವ ತಂತ್ರವೆನಿಸಿದೆ.)
ಅಪಿಸ್ ಸೆರೆನಾ ಜೇನುಹುಳುಗಳಲ್ಲಿ ಎದುರಾಳಿಯನ್ನು ಎದುರಿಸಲು ಅದು ತನ್ನ ಸುತ್ತಲೂ ಕೆಲಸಗಾರ ಹುಳುಗಳ ರಕ್ಷಣಾ ಪಡೆಯ ದಂಡನ್ನೇ ರಕ್ಷಣೆಗೆ ಬಳಸುತ್ತದೆ.ಎದುರಿಗಿರುವ ಹುಳು ತನ್ನ ದೇಹದ ಉಷ್ಣತೆ ಹೆಚ್ಚಿಸಿಕೊಳ್ಳುವಂತೆ ಇವು ತಮ್ಮ ದೇಹವನ್ನು ಕಂಪಿಸುತ್ತವೆ,ಇದು ಅಕ್ರಮ ಪ್ರವೇಶದ ಹುಳುವನ್ನು ಕಂಗೆಡಿಸಬಹುದಾದ ಉಪಾಯವಾಗಿದೆ.[10] ಈ ಮೊದಲು ಅತಿ ಹೆಚ್ಚಿನ ಉಷ್ಣತೆಯು ಈ ಅಕ್ರಮ ಪ್ರವೇಶದ ಹುಳುವನ್ನು ಕೊಲ್ಲಲು ಅದರ ದೇಹದ ಉಷ್ಣತೆ ಹೆಚ್ಚಿಸುವುದೆಂದಾಗಿತ್ತು;ಆದರೆ ಇತ್ತೀಚಿನ ವರದಿಗಳ ಪ್ರಕಾರ ಜೇನುಗೂಡಿನಲ್ಲಿ ಅಕ್ರಮವಾಗಿ ಪ್ರವೇಶ ಪಡೆದ ಪರಕೀಯ ಕೀಟವು ಅಲ್ಲಿನ ಒಳ ವಾತಾವರಣದಲ್ಲಿ ಉಂಟಾಗುವ ಅತಿಯಾದ ಇಂಗಾಲದ ಡೈಆಕ್ಸೈಡ್ ನಿಂದ ಸಾಯುತ್ತವೆ ಎನ್ನಲಾಗಿದೆ.[11][12] ಇದೇ ವಿದ್ಯಮಾನವನ್ನು ರಾಣಿ ಹುಳುವು ತನ್ನ ಗೂಡಿನಲ್ಲಿ ಪರಕೀಯ ಕೀಟ ಪ್ರವೇಶಿಸಿದೆ ಎಂದು ಗ್ರಹಿಸುತ್ತಲೇ ತನ್ನ ಕಾವಲುಪಡೆಯ ಜೇನುಹುಳುಗಳ ಕೆಲಸಗಾರರು ಕೂಡಲೇ ರಾಣಿ ಹುಳುವನ್ನು ಚೆಂಡಿನಾಕಾರದಲ್ಲಿ ಸುತ್ತುವರೆದು ರಕ್ಷಿಸುತ್ತವೆ.
ಜೇನುಹುಳುಗಳು ಸಾಮಾನ್ಯವಾಗಿ ತಮ್ಮ ತಂಡದೊಂದಿಗಿನ ಸಂಪರ್ಕ-ಸಂವಹನಕ್ಕೆ ವಿವಿಧ ರಾಸಾಯನಿಕಗಳನ್ನು ಮತ್ತು ದೇಹದ ವಾಸನೆ ಬಳಸಿಕೊಳ್ಳುತ್ತವೆ.ಸಾಮಾನ್ಯ ವರ್ಗದ ಜೇನು ಹುಳುಗಳ ದೇಹದಿಂದ ಹೊರಹೊಮ್ಮುವ ಈ ರಾಸಾಯನಿಕ ದ್ರವವು ವಾತಾವರಣದಲ್ಲಿ ತಮಗೆ ದೊರೆಯುವ ವಾಸಸ್ಥಾನ ಮತ್ತು ಆಹಾರದ ಗುಣಮಟ್ಟದ ಬಗ್ಗೆ ಅದರ ಸ್ಥಾನದ ಬಗ್ಗೆ ಕೂಡಲೇ ಮಾಹಿತಿ ರವಾನಿಸುತ್ತವೆ.
ಯಾವ ಯಾವ ಮಾಹಿತಿಗೆ ಹೇಗೆ ಸ್ಪಂದಿಸಬೇಕೆನ್ನುವುದು ವಿವಿಧ ಹುಳುಗಳಲ್ಲಿ ವಿವಿಧ ಪ್ರಕಾರದ ಮಾಹಿತಿ ರವಾನಾ ವಿಧಾನಗಳಿವೆ.ಅಪಿಸ್ ಅಂಡ್ರೆನಿಫಾರ್ಮಿಸ್ ಮತ್ತು ಅಪಿಸ್ ಫ್ಲೊರಿಯಾ ಗಳು ತಮ್ಮ ಜೇನುಹುಟ್ಟಿನ ಮೇಲ್ಭಾಗದಲ್ಲಿ ನೃತ್ಯ ಮಾಡುವ ಮೂಲಕ (ಇದು ಇನ್ನಿತರ ಕೀಟಗಳು ನೃತ್ಯ ಮಾಡುವಂತೆ ಲಂಬವಾಗಿರುವ ಭಾಗವಾಗಿರುವುದಿಲ್ಲ)ತಮ್ಮ ಆಹಾರದ ಮೂಲಸ್ಥಾನ ಎಲ್ಲಿದೆ ಎಂಬುದನ್ನು ಕೆಲಸಗಾರ ಹುಳುಗಳು ಕಂಡುಕೊಂಡು ತಮ್ಮ ಹಿಂಡನ್ನು ಅಲ್ಲಿಗೆ ಸಾಗುವಂತೆ ಸಂಕೇತಿಸುತ್ತವೆ.
ನಮ್ಮ ಅಥರ್ವಣ ವೇದ ಮತ್ತು ಪುರಾತನ ಗ್ರೀಕ್ ಕಥೆಗಳಲ್ಲಿ ತುಟಿಗೆ ಜೇನುಸವರಿದರೆ ಆ ವ್ಯಕ್ತಿಯ ಉಚ್ಚಾರ ಸ್ಪಷ್ಟವಾಗುತ್ತದೆ ಎಂಬ ವಿಚಾರವು ವಿಜ್ಞಾನ ಪೂರ್ವದ ಕಾಲದಲ್ಲೇ ಸಿದ್ದವಾಗಿತ್ತು.[13] ಡೆಲ್ಫಿಯಲ್ಲಿರುವ ಪೂಜಾರಿಣಿಯು "ಡೆಲ್ಫಿಕ್ ಬೀ" ಎಂದರೆ ಜೇನುಜಾತಿಗೇ ಹೋಲಿಸಲಾಗಿದೆ.
ಐತಿಹಾಸಿಕ ವ್ಯಾಖ್ಯಾನಕಾರರು ಯಾವಾಗಲೂ ಜೇನುಹುಳುಗಳನ್ನು ಮಾನವ ಸಮಾಜದ ಒಂದು ಕಾರ್ಯ ವೈಖರಿಗೆ ಹೋಲಿಸುವ ಪರಿಪಾಠವಿದೆ:
"ಈ ತೆರನಾದ ಉಪಮೆಯ ಉದಾಹರಣೆಯು ಅರಿಸ್ಟಾಟಲ್ ಮತ್ತು ಪ್ಲೆಟೊ; ವೆರ್ಜಿಲ್ನಲ್ಲಿ,[14] ಮತ್ತು ಸೆನೆಕಾ;ಎರಾಸ್ಮುಸಾ ದಲ್ಲಿ ಮತ್ತು ಶೇಕ್ಸ್ ಪಿಯರ್; ನಮಾರ್ಕ್ ಮತ್ತು ಟೊಲ್ಸ್ಟಾಯ್."[15] ಇತ್ಯಾದಿ ತತ್ವಜ್ಞಾನಿಗಳ ಐತಿಹಾಸಿಕ ಕಲ್ಪನೆಯಲ್ಲಿ ಇದು ಉದ್ಭವಿಸಿದೆ.
ಈ ಜೇನುಹುಳುಗಳು ಚಿರಂಜೀವಿತನ ಮತ್ತು ಮರುಜನ್ಮದ ಸಂಕೇತವಾಗಿವೆ.ಈ ಹಿಂದಿನ ಮೆರೊವಿಂಜಿಯನ್ಸ್ ನ ಜರ್ಮನಿ ಸಾಮ್ರಾಜ್ಯದಲ್ಲಿ ನೆಪೊಲಿಯನ್ ನಿಂದ ಈ ಪರಿಕಲ್ಪನೆ ಪರಿಷ್ಕರಿಸಲ್ಪಟ್ಟಿತ್ತು.[16] ಬಾರ್ಬೆರೆನೀ ಸಾಮ್ರಾಜ್ಯದ ಆಡಳಿತಾವಧಿಯಲ್ಲೂ ಜೇನುಹುಳು ಅದರ ಸಂದೇಶದ ರಾಜಧೂತನಾಗಿರುವ ಸಂಕೇತವಾಗಿತ್ತು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.