ಗಾಸಿಪಿಯಮ್
From Wikipedia, the free encyclopedia
ಗಾಸಿಪಿಯಮ್ ಮಾಲ್ವೇಸೆ ಕುಟುಂಬದ ಒಂದು ಸಸ್ಯ ಪ್ರಜಾತಿ. ಹತ್ತಿ ಗಿಡಗಳು ಈ ಪ್ರಜಾತಿಯ ಪ್ರಮುಖ [1]ಸದಸ್ಯರು. ಗಾಸಿಪಿಯಮ್ ಮಾಲ್ವೇಸೆ ಕುಟುಂಬದ ಒಂದು ಸಸ್ಯ ಪ್ರಜಾತಿ.[2] ಹತ್ತಿ ಗಿಡಗಳು ಸಹ ಈ ಪ್ರಜಾತಿಗೆ ಸೇರಿವೆ.ಇವು ಈ ಪ್ರಜಾತಿಯ ಪ್ರಮುಖ ಸದಸ್ಯರು. ಇದು ಉಷ್ಣವಲಯ ಮತ್ತು ಮಧ್ಯಮ ಉಷ್ಣವಲಯದಲ್ಲಿ ಬೆಳೆಯ ಬಹುದಾದ ಬೆಳೆಯಾಗಿದೆ.ಗಾಸಿಪಿಯಮ್ ನಲ್ಲಿ ಸರಿ ಸುಮಾರು ಐವತ್ತು ಬಗೆಗಳನ್ನು ಒಳಗೊಂಡಿದೆ. ಇನ್ನೂ ಹಲವು ಬಗೆಗಳನ್ನು ಆವಿಷ್ಕರಣ ದೂಡಲಾಗುತ್ತಿದೆ. ಈ ವರ್ಗದ ಹೆಸರನ್ನು ಆರೇಬಿಕ್ ಪದ ಗೋವಾ, ಅಂದರೆ ತುಂಬಾ ಮೃದು ಎಂಬ ಪದದಿಂದ ಆವಿಷ್ಕರಿಸಿದ್ದಾರೆ. ಹತ್ತಿ ತುಂಬಾ ಮುಖ್ಯವಾಗಿ ಉಪಯೋಗಿಸುತ್ತಿರುವ ನೈಸರ್ಗಿಕ ನಾರು. ಇತ್ತೀಚೆಗೆ ಕೃಷಿಯ ಮೂಲಕ ಬೆಳೆಯುವ ಹತ್ತಿಯನ್ನು ಮುಖ್ಯವಾಗಿ ಎಣ್ಣೆ ಉತ್ಪಾದನೆ ಮತ್ತು ಪಶುಗಳ ಪ್ರೋಟೀನ್ ಆಹಾರ ಉತ್ಪಾದನೆಯಲ್ಲಿ ಬಳಸಲಾಗುತ್ತಿದೆ. ಹತ್ತಿ ಗಿಡಗಳು ಪ್ರಮುಖವಾಗಿ ದೇಶದ ಆರ್ಥಿಕತೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಿವೆ. ಹಾಗೂ ಪ್ರಮುಖವಾಗಿ ಉಷ್ಣವಲಯ ಮತ್ತು ಮಧ್ಯಮ ಉಷ್ಣವಲಯಗಳಾದ ಆಫ್ರಿಕಾ, ದಕ್ಷಿಣ ಅಮೇರಿಕಾ ಹಾಗೂ ಏಷ್ಯಾಗಳಲ್ಲಿ ಕೃಷಿ ಉತ್ಪಾದನೆ ಹಾಗೂ ಕಾರ್ಖಾನೆಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಹಾಗಾಗಿ ಗಾಸಿಪಿಯಮ್ ವರ್ಗವು ವಿಜ್ಞಾನಿಗಳ ಗಮನವನ್ನು ಸೆಳೆಯುತ್ತಿದೆ. ಗಾಸಿಪಿಯಮ್ ವರ್ಗದ ಹುಟ್ಟು ಸರಿಸುಮಾರು ಐದರಿಂದ ಹತ್ತು ದಶಲಕ್ಷ ವರ್ಷಗಳ ಹಿಂದಿನದ್ದು. ಸಾಮಾನ್ಯವಾಗಿ ಇವು ಪೊದರೆಗಳಾಗಿದ್ದು ಈ ವರ್ಗದ ಗಿಡಗಳು ಕೃಷಿಯಲ್ಲಿ ಬೆಳೆಯುವ ಹತ್ತಿಯು ಸರ್ವಕಾಲಿಕವಾಗಿದ್ದು, ವರ್ಷಗಟ್ಟಲೇ ಬೆಳೆಯಬಹುದಾಗಿದೆ. ಗಿಡಗಳು ಒಂದ ರಿಂದ ಎರಡು ಮೀಟರ್ ಉದ್ದವಾಗಿರುತ್ತವೆ. ಎಲೆಗಳು ಹಗಲ ಹಾಗೂ ಪಟಲವಾಗಿರುತ್ತವೆ. ಮೂರರಿಂದ ಐದು ಅಥವಾ ಏಳು ಪಟಲಗಳಿರುತ್ತವೆ. ಬೀಜಗಳು ಬೀಜಕೋಶದಲ್ಲಿ ಬಂಧಿಸಲ್ಪಟ್ಟದ್ದು. ಪ್ರತಿಯೊಂದು ಬೀಜವೂ ಎರಡು ರೀತಿಯ ನಾರುಗಳಿಂದ ಸುತ್ತುವರಿದಿರುತ್ತದೆ. ಈ ನಾರುಗಳು ತುಂಬಾ ವ್ಯಾಪಾರಿಕ ಆಸಕ್ತಿಯ ಅಂಗವಾಗಿವೆ.ಇವುಗಳನ್ನು ಹತ್ತಿ ಹಿಂಜುಗೆ ಎಂಬ ವಿಧಾನದಿಂದ ಬೇರ್ಪಡಿಸಲಾಗುತ್ತದೆ. ಮೊದಲ ಹಂತದಲ್ಲಿ, ಉದ್ದನೆಯ ನಾರುಗಳನ್ನು ತೆಗೆಯಲಾಗುತ್ತದೆ. ಹಾಗೂ ಇವುಗಳನ್ನು ತಿರುಚಿ ನೂಲಿನ ಎಳೆಗಳಂತೆ ಮಾಡಲಾಗುತ್ತದ್ದೆ. ಎರಡನೆ ಹಂತದಲ್ಲಿ ತುಂಡಾದ ಅಥವಾ ಚಿಕ್ಕದಾದ ನಾರುಗಳನ್ನು ಕುದಿಸಿ ತೆಗೆದು ಕಡಿಮೆ ಗುಣಮಟ್ಟದ ಬಟ್ಟೆಗಳನ್ನು ತಯಾರಿಸಲಾಗುತ್ತದೆ. ಸ್ವಾಭಾವಿಕವಾಗಿ ಹತ್ತಿಯೂ ಹಲವು ಬಣ್ಣಗಳಲ್ಲಿ ಬಿಳಿ, ಕಂದು, ಹಸಿರು ಹೀಗೆ ಹಲವಾರು ಬಣ್ಣಗಳಲ್ಲಿ ಲಭ್ಯವಾಗುತ್ತವೆ. ವಿಶಿಷ್ಟ ರೀತಿಯಾದ, ಅತೀ ಗುಣಮಟ್ಟದ ಹತ್ತಿ ಉತ್ಪಾದನೆಯಲ್ಲಿ ತುಂಬಾ ರೀತಿಯಾದ ಅನ್ವೇಷಣೆಗಳು ನಡೆಯುತ್ತಿವೆ. ೨೦೧೦ ರಲ್ಲಿ ಎರಡು ಕಂಪನಿಗಳಾದ ಮೊನಾಸ್ಟೋ ಮತ್ತು ಇಲ್ಲುಮಿನ ಹತ್ತಿ ಉತ್ಪಾದನೆಯತ್ತ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗಿದೆ.
ಗಾಸಿಪಿಯಮ್ | |
---|---|
ಗಾಸಿಪಿಯಮ್ ಬಾರ್ಬಡೆನ್ಸ್ | |
Scientific classification | |
ಸಾಮ್ರಾಜ್ಯ: | |
Division: | ಮ್ಯಾಗ್ನೊಲಿಯೊಫೈಟ |
ವರ್ಗ: | ಮ್ಯಾಗ್ನೊಲಿಯೊಪ್ಸಿಡ |
ಗಣ: | ಮಾಲ್ವೇಲ್ಸ್ |
ಕುಟುಂಬ: | ಮಾಲ್ವೇಸೆ |
ಕುಲ: | ಗಾಸಿಪಿಯಮ್ L. |
Species | |
ಲೇಖನ ನೋಡಿ |